ಜಗತ್ತನ್ನು ನೋಡಿಸುವ ಕಣ್ಣಿನದೂ ಒಂದು ಗೋಲಾಕಾರ. ಈ ಆಕಾರವನ್ನು ಸ್ಥಿರವಾಗಿ ಕಾಪಾಡಲು ಕಣ್ಣಿನಲ್ಲಿ ಒಂದು ನಿರ್ದಿಷ್ಟವಾದ ಒತ್ತಡವಿರುತ್ತದೆ. ಈ ಒಳ ಒತ್ತಡವು ಕಣ್ಣನ್ನು ವಾತಾವರಣದ ಒತ್ತಡಕ್ಕೆ ಕುಸಿಯದಂತೆ ನೋಡಿಕೊಳ್ಳುತ್ತದೆ. ಬಗೆ ಬಗೆಯ ಕಾರಣಗಳಿಂದ, ಈ ಒತ್ತಡವು ಹೆಚ್ಚಿದಾಗ ಅದರಿಂದ ಕಣ್ಣಿನ ನರಕ್ಕೆ ಮತ್ತು ಇತರ ಅಂಗರಚನೆಗೆ ತೊಂದರೆಯಾಗಿ ದೃಷ್ಟಿಮಾಂದ್ಯತೆ ಹಾಗೂ ಕುರುಡುತನ ಉಂಟಾಗುತ್ತದೆ. ಈ ಕಾಯಿಲೆಗೆ ಗ್ಲಾಕೋಮ ಎಂದು ಹೆಸರು.
0 Comments
ಈ ದೇಶದಲ್ಲಿ ಹಸಿರು ಕ್ರಾಂತಿಯಾಗಬೇಕು ಎಂಬ
ಆಂದೋಲನ ಪ್ರಾರಂಭಿಸಿದಂತೆ ಅಕ್ಷರ ಕ್ರಾಂತಿಯ ಆಂದೋಲನವನ್ನು ಪ್ರಾರಂಭಿಸಬೇಕು. - ಜಯದೇವಿ ತಾಯಿ ಲಿಗಾಡೆ. ಭಾರತಕ್ಕೆ ಸ್ವತಂತ್ರ ಬಂದ ಹೊಸತರಲ್ಲಿ ಈ ದೇಶದ ಜನತೆಯನ್ನು ನೂರಾರು ಸಮಸ್ಯೆಗಳು ಕಾಡಿದವು. ಮೂಲಭೂತ ಅವಶ್ಯಕತೆಗಳಾದ ಅನ್ನ, ಅರಿವೆ, ಆಸರೆ, ಶಿಕ್ಷಣ ಮುಂತಾದವುಗಳನ್ನು ಒದಗಿಸುವುದೇ ದುಸ್ತರವಾಗಿತ್ತು. ಸ್ವತಂತ್ರ ಬಂದ ಆರಂಭದದ ದಶಕದಲ್ಲಿ ಪರಕೀಯರು ಬಿಟ್ಟು ಹೋದ ಪಳಯುಳಿಕೆಗಳೇ ನಮ್ಮನ್ನು ಆಳುತ್ತಿದ್ದವು. ನಮ್ಮದೇ ಆದ ನೆಲೆಯಲ್ಲಿ ನಮಗೆ ಸರಿ ಹೊಂದುವಂತಹ ಸಾಮಾಜಿಕ ಬದುಕನ್ನು ರೂಪಿಸಿಕೊಳ್ಳುವುದು ಅಷ್ಟು ಸುಲಭದ ಸಂಗತಿಯಾಗಿರಲಿಲ್ಲ. ಫ್ರಭುತ್ವ ಮತ್ತು ಸಂಸ್ಕೃತಿ ಒಟ್ಟಿಗೇ ನಡೆಯಲಾರವು. ಪ್ರಭುತ್ವ ಬಲಿಷ್ಟವಾದಂತೆ ಸಂಸ್ಕೃತಿ ಬರಡಾಗುತ್ತದೆ. ಸಂಸ್ಕೃತಿ ಬರಡಾದಂತೆ ಒಂದು ನಾಡಿನ ಭಾಷೆ, ಜರ ಬದುಕು ಸೊರಗುತ್ತದೆ. ಎಂದು ಜರ್ಮನ್ ದಾರ್ಶನಿಕ ನೀಷೆ ಅಭಿಪ್ರಾಯಪಡುತ್ತಾನೆ. ಒಂದು ನಾಡಿನ ಸಂಸ್ಕೃತಿ ಬಲಿಷ್ಟವಾಗಬೇಕಾದರೆ, ಅಲ್ಲಿ ಅಕ್ಷರಾಂದೋಲನ ಆಗಬೇಕು. ಇಂಥದೊಂದು ಆಂದೋಲನದ ಹವಣಿಕೆಯಲ್ಲಿದ್ದ ಸ್ವತಂತ್ರ ಭಾರತದ ನೇತಾರರಿಗೆ, ತಳ ಮಟ್ಟದಿಂದ ಮೌಲ್ಯಾಧಾರಿತವಾದ ಉತ್ತಮ ಶಿಕ್ಷಣ ಬುನಾದಿ ಹಾಕುವುದು ದೊಡ್ಡ ಸವಾಲಾಗಿ ಪರಣಮಿಸಿತು. ಈ ಕಟು ಸತ್ಯವನ್ನು ಅರಿತ ಅಸಂಖ್ಯಾತ ಶಿಕ್ಷಣ ಪ್ರೇಮಿಗಳು ಅಕ್ಷರ ಕ್ರಾಂತಿಯ ಆಂದೋಲನಕ್ಕೆ ಕಂಕಣ ತೊಟ್ಟು ನಿಲ್ಲುತ್ತಾರೆ. ಇದರ ಫಲವಾಗಿಯೇ ಈ ನಾಡಿನ ಮಠಮಾನ್ಯಗಳು, ಶಿಕ್ಷಣ ಪ್ರೇಮಿಗಳು ಸರ್ಕಾರಕ್ಕೆ ಹೆಗಲೆಣೆಯಾಗಿ ನಿಂತು ಅಸಂಖ್ಯಾತ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಅಕ್ಷರ ಬೀಜವನ್ನು ಬಿತ್ತಿ ಉತ್ತಮ ಫಸಲನ್ನು ಈ ನಾಡಿಗೆ ನಿರಂತರವಾಗಿ ಧಾರೆ ಎರೆಯುತ್ತಾ ಬರುತ್ತಿದ್ದಾರೆ. ಡಾ|| ತಿಪ್ಪೇಸ್ವಾಮಿಯವರಿಗೆ ಎಪ್ಪತ್ತು ಸಂವತ್ಸರಗಳು ತುಂಬುತ್ತಿವೆ, ಎಂದು ತಿಳಿದೇ ಅಚ್ಛರಿಯಾಯಿತು. ಅಗಾಧವನ್ನು ಆಗುವುದು ಅಸಾಧ್ಯವೆಂಬುದನ್ನು, ಸಾಧಿಸಿರುವ, ಇನ್ನೂ ಎತ್ತರಕ್ಕೆ ಏರುವ ಹುಮ್ಮಸ್ಸಿನಲ್ಲಿರುವ ಸಾತ್ವಿಕ ತಿಪ್ಪೇಸ್ವಾಮಿ ಅವರಿಗೆ ಸದ್ದಿಲ್ಲದೇ ಎಪ್ಪತ್ತು ಅಗುತ್ತಿದೆ ಎಂದರೆ ನನಗಂತೂ ಅಚ್ಚರಿಯಾಗುತ್ತಿದೆ.
ಆರ್ಥಿಕವಾಗಿ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಜಗಳೂರು ತಾಲ್ಲೂಕಿಗೆ ಹರಿಕಾರರಾಗಿ ಬಂದ ವಿದ್ಯಾರತ್ನ ಡಾ. ಟಿ. ತಿಪ್ಪೇಸ್ವಾಮಿಯವರು ಬಹುಮುಖಿ ವ್ಯಕ್ತ್ತಿತ್ವ, ಸುಸಂಸ್ಕೃತ ಕುಟುಂಬವೆಂದೇ ಹೆಸರು ಪಡೆದ ಮನೆತನದ ಗುರುಭಕ್ತಿ, ಜನಪ್ರೀತಿಗೆ ಹೆಸರಾದ ದಿವಂಗತ ಟಿ. ಕಲ್ಲಪ್ಪ ಮತ್ತು ದಿವಂಗತ ಟಿ. ಶಾರದಮ್ಮ ಇವರ ಪುಣ್ಯಗರ್ಭದಲ್ಲಿ ಶ್ರೀ ಟಿ. ತಿಪ್ಪೇಸ್ವಾಮಿಯವರು ದಿನಾಂಕ: 23-09-1938 ರಂದು ಜನಿಸುತ್ತಾರೆ.
ಹಲವು ಸಿನೆಮಾಗಳಲ್ಲಿ ಕಂಡ ದೃಶ್ಯಗಳು.
ಆಕೆಯೊಬ್ಬಳೇ ವ್ಯವಸ್ಥೆ ಸುಧಾರಣೆಗಾಗಿ ಸಿಡಿದೇಳುತ್ತಾಳೆ. ಈ ಸಾಹಸಕ್ಕಾಗಿ ಮಾಫಿಯಾಗಳನ್ನು, ರೌಡಿಗಳನ್ನು, ರಾಜಕಾರಣಿಗಳನ್ನು ಎದುರು ಹಾಕಿಕೊಳ್ಳುತ್ತಾಳೆ. ಹೀಗೆ ಕಾದಾಡುವಾಗ ಕೆಲವೊಮ್ಮೆ ಅಪಮಾನಿತಳಾಗಿ, ಹತಾಶಳಾಗಿ ಒಂದು ಕ್ಷಣ ಮೌನವಾಗಿದ್ದು, ಮತ್ತೆ ರಣಚಂಡಿಯಂತೆ ಆರ್ಭಟಿಸುತ್ತಾಳೆ. ಇವಳನ್ನು ಜರಿಯುತ್ತಿದ್ದ ಜನರೇ ಕಾಲಾಂತರದಲ್ಲಿ ಬೆಂಬಲಕ್ಕೆ ನಿಂತು ಬೇಕೇ ಬೇಕು ನ್ಯಾಯ ಬೇಕು ಎಂದು ಮುಗಿಲು ಮುಟ್ಟುವಂತೆ ಘೋಷಣೆ ಹಾಕುತ್ತಾರೆ. ಅವಳ ನೇತೃತ್ವದಲ್ಲೇ ಬದಲಾವಣೆಗೆ ಮುನ್ನುಡಿ ಬರೆಯುತ್ತಾರೆ. ಆ ಮೇಲೆ ಹೆಣ್ಣಿನ ಯಶೋಗಾಥೆ ಎಂಬ ಪ್ರಶಂಸೆ, ಪುರಸ್ಕಾರ, ಸನ್ಮಾನಗಳೆಲ್ಲ ಆಗಿ ತೆರೆಯಲ್ಲಿ ಶುಭಂ ಎಂದು ಕಾಣುವಾಗ ಪ್ರೇಕ್ಷಕರು ಆ ಹೆಣ್ಣಿನ ಸಾಹಸದ ಪಾತ್ರದಲ್ಲೇ ಮುಳುಗಿರುತ್ತಾರೆ. ಆದರೂ, ಇಂಥ ಚಿತ್ರಗಳನ್ನು ನೋಡಿ ಬಂದ ಮೇಲೆ ಅದೆಲ್ಲ ಸಿನೆಮಾದಲ್ಲಿ ಮಾತ್ರ ಸಾಧ್ಯ ಬಿಡ್ರಿ. ರೀಲಿಗೂ, ರಿಯಲ್ ಲೈಫಿಗೂ ತುಂಬಾ ವ್ಯತ್ಯಾಸವಿದೆ ಎಂದು ಗೊಣಗಿ ದಿನದ ತಾಪತ್ರಯದಲ್ಲಿ ಮುಳುಗುತ್ತಾರೆ. ಮನುಷ್ಯನ ಪುಕ್ಕಲ ಸ್ವಭಾವವೇ ಹಾಗೇ. ಕಣ್ಣಾರೆ ಬದಲಾವಣೆಯ ಮಾದರಿಗಳನ್ನು ಕಂಡರೂ ಅದು ತನಗಲ್ಲ ಎಂದುಕೊಳ್ಳುತ್ತಾನೆ. ಸ್ಥಾಪನೆಯ ಉದ್ದೇಶ- ಡೀಡ್ (Development through Education) ಶಿಕ್ಷಣ ಮುಖೇನ ಪ್ರಗತಿ ಸ್ವಯಂಸೇವಾ ಸಂಸ್ಥೆಯು 1980 ಸೆಪ್ಟಂಬರ್ 1 ರಂದು ಹುಣಸೂರಿನಲ್ಲಿ ಆದಿವಾಸಿ - ಬುಡಕಟ್ಟು ಜನರ ಕ್ಷೇಮಾಭಿವೃದ್ಧಿಗೆ ಜನ್ಮ ತಾಳಿತು. ಡಾ| ಜರ್ರಿಪೈಸ್ ಹಾಗೂ ಎಸ್ ಶ್ರೀಕಾಂತ್ ಇವರ ಮುಂದಾಳತ್ವದಲ್ಲಿ ಸ್ಥಳೀಯ ಆಸಕ್ತರೊಡಗೂಡಿ ಪ್ರಾರಂಭಿಸಲಾದ ಡೀಡ್ ಅತ್ಯಂತ ಕಟ್ಟಕಡೆಯವರಾದ, ಕಡೆಗಣಿಸಲ್ಪಟ್ಟ ಆದಿವಾಸಿ ಬುಡಕಟ್ಟುಗಳಾದ ಜೇನು ಕುರುಬರು, ಸೋಲಿಗರು ಮುಂತಾದ ಅರಣ್ಯವಾಸಿಗಳ ಬಲವರ್ಧನೆಗೆ, ಅಸ್ತಿತ್ವ, ರಕ್ಷಣೆಗೆ ಕ್ಷೇಮಾಭಿವೃದ್ಧಿಗೆ ಕಾರ್ಯ ಮಾಡಲು ಪ್ರಾರಂಭಿಸಿತು. ಶಿಕ್ಷಣದ ಮೂಲಕ ಕಡೆಗಣಿಸಲ್ಪಟ್ಟವರ ಅಭಿವೃದ್ಧಿ ಸಾಧ್ಯ ಎಂಬ ನಂಬಿಕೆ ಈ ಕಾರ್ಯದ ಉಗಮಕ್ಕೆ ಪ್ರೇರಣೆಯಾಯಿತು.
ವಯಸ್ಸಿಗೆ ಬಂದ ಯುವಜನರು ಕುಟುಂಬ ಜೀವನ ಪ್ರಾರಂಭಿಸಲು ವಂಶಾಭಿವೃದ್ದಿ ಮಾಡಿಕೊಳ್ಳಲು ಗಂಡು ಹೆಣ್ಣು ಪ್ರಕೃತಿ ಸಹಜ ಭಾವನೆಗಳಿಗೆ ಆಸೆಆಕಾಂಕ್ಷೆಗಳಿಗೆ ಸ್ಪಂದಿಸಲು ಕುಟುಂಬದ ಹಿರಿಯರ, ಸಮಾಜದ ಒಪ್ಪಿಗೆ ಪಡೆಯುವ ಪ್ರಕ್ರಿಯೆಯೇ ಮದುವೆ ವಿವಾಹ. ಎರಡು ಮಾನವ ಜೀವಿಗಳು ಪ್ರೀತಿ ವಿಶ್ವಾಸದಿಂದ ಪರಸ್ಪರ ಒಪ್ಪಿ ಗೌರವಯುತ ಬಾಳನ್ನು ಹೊಸ ಕನಸುಗಳೊಂದಿಗೆ ಕಟ್ಟಿಕೊಳ್ಳಲು ಮದುವೆ ಸಹಕಾರಿ. ಇದು ವ್ಯಕ್ತಿ ವ್ಯಕ್ತಿ ನಡುವೆ ನಡೆಯುವ ಒಪ್ಪಂದವಷ್ಟೆ. ವ್ಯವಸ್ಥೆ ವ್ಯವಸ್ಥೆಗಳ ನಡುವಿನ ಒಪ್ಪಂದ ಎಂಬುದೂ ಅಷ್ಟೇಸತ್ಯ. ಮದುವೆ ವೈಯಕ್ತಿಕ ಹಾಗೂ ಕೌಟುಂಬಿಕ ವ್ಯವಹಾರ. ಒಂದೊಂದು ಸಮುದಾಯ ಒಂದೊಂದು ರೀತಿ ಆಚರಿಸುತ್ತದೆ. ಆದರೆ ಇತ್ತೀಚೆಗೆ ಮದುವೆಗಳು ದುಬಾರಿಯಾಗುತ್ತಿವೆ. ವ್ಯಾಪಾರಧಂಧೆಗಳಾಗುತ್ತಿವೆ. ನಗರ ಕೇಂದ್ರೀಕೃತವಾಗುತ್ತಿವೆ.
ಎಸ್. ಶ್ರೀಕಾಂತ್ ಆದ ನಾನು ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಗಂಜಲಗೂಡು ಗ್ರಾಮದಲ್ಲಿ ಶಿವನಂಜೇಗೌಡ ಮತ್ತು ತೋಪಮ್ಮ ದಂಪತಿಗೆ 16.09.1951 ರಂದು ಮಗನಾಗಿ ಜನಿಸಿದೆ. ನನ್ನ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಮುಗಿಸಿ, ನಂತರ ಹೊಳೆನರಸಿಪುರದಲ್ಲಿ ಪ್ರೌಢ ಶಿಕ್ಷಣ, ಹಾಸನದಲ್ಲಿ ವಿಜ್ಞಾನ ಪದವಿ ಹಾಗೂ ಮಂಗಳೂರಿನಲ್ಲಿ ಸಮಾಜಕಾರ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದು (1976) ನನ್ನ ವೃತ್ತಿ ಜೀವನವನ್ನು ಬೆಂಗಳೂರಿನ ಕಾರ್ಖಾನೆಯೊಂದರಲ್ಲಿ ಸಿಬ್ಬಂದಿ ಅಧಿಕಾರಿಯಾಗಿ ಮೂರು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದೆ. ಇದರ ಜೊತೆಯಲ್ಲಿಯೇ ಮಹರ್ಷಿ ಮಹೇಶಯೋಗಿಯವರ ಧ್ಯಾನ ತರಬೇತಿ ಪಡೆದು (ಟಿ.ಎಂ) ನೂರಾರು ಜನರಿಗೆ ಧ್ಯಾನ ಬೋಧನೆಯನ್ನು ಮಾಡಿರುವೆನು. ನಾನು ಕೃಷಿಕ ಕುಟುಂಬದಿಂದ ಬಂದವನಾಗಿದ್ದು, ಮಡದಿ ಮತ್ತು ಇಬ್ಬರು ಮಕ್ಕಳೊಡನೆ ಚಿಕ್ಕ ಹುಣಸೂರಿನಲ್ಲಿ ವಾಸವಿದ್ದೇನೆ. ಮಡದಿ ಸಮಾಜ ವಿಜ್ಞಾನದ ಸ್ನಾತಕೋತ್ತರ ಪದವೀಧರೆ. ಮಕ್ಕಳಿಬ್ಬರು ಇಂಜಿನಿಯರ್ ಆಗಿದ್ದಾರೆ.
ಅಂದು ಹೆಣ್ಣು ಶಾಲೆಗೆ ಹೋಗುವುದನ್ನು ಕಂಡರೆ ಮೈಮೇಲೆ ಸೆಗಣಿ ಎಸೆಯುತ್ತಿದ್ದರಂತೆ. ಅಂಥಾ ಹೊತ್ತಲ್ಲಿ, ಅಂದರೆ 200 ವರ್ಷಗಳ ಹಿಂದೆ ಕುದುರೆಮುಖದ ತಪ್ಪಲಿನ ಗಂಗಾಮೂಲದ ಕಾಡ ನಡುವೆ ಅನಂತ ಶಾಸ್ತ್ರಿಗಳು ಆಶ್ರಮ ಕಟ್ಟಿ 50 ವಿದ್ಯಾರ್ಥಿನಿಯರಿಗೆ ವೇದಾಭ್ಯಾಸ ಮಾಡಿಸುತ್ತಿದ್ದರು! ಮುಂದೆ ಆಶ್ರಮ ನಡೆಸಲಾಗದೆ ದೇಶಾಟನೆ ಹೊರಟಾಗ ಶಾಸ್ತ್ರಿಗಳ ಪತ್ನಿ ಲಕ್ಷ್ಮೀಬಾಯಿಯ ಕಂಕುಳಲ್ಲಿ ಜೋತಾಡುತ್ತಿದ್ದದ್ದು ಇದೇ ಪುಟ್ಟ ಹುಡುಗಿ ರಮೆ.
ಹವಾಮಾನದ ಏರುಪೇರಿನಿಂದ ಉಷ್ಣ ಹೆಚ್ಚುತ್ತಿದೆ. ಮಾನವನ ಅದಮ್ಯ ಆಸೆಯಿಂದ ಪ್ರಕೃತಿಯ ಎಲ್ಲ ಪ್ರಕಾರಗಳೂ ವಿನಾಶದ ಕಡೆ ದಾಪುಗಾಲು ಹಾಕುತ್ತಲಿವೆ. ದುರಾಸೆಯು ಘನಿಗೊಂಡಿರುವುದೇ ಭ್ರಷ್ಟಾಚಾರ. ಇದು ಒಂದು ರೀತಿಯ ಮನೋದೌರ್ಬಲ್ಯ, ಮನೋವಿಕಲತೆ. ಇದು ವ್ಯಾಪಕವಾಗುತ್ತಲಿರುವುದರಿಂದ ಜೀವನದ ಎಲ್ಲ ರಂಗಗಳೂ ಸಹಿಸಲಸಾಧ್ಯವಾದ ತಾಪದಿಂದ ಅಗ್ನಿಕುಂಡಗಳಾಗಿವೆ. ಯಾರಾದರೂ ಒಳಿತನ್ನು ಚಿಂತನೆ ಮಾಡುತ್ತಿದ್ದಾರೆ, ನಿರ್ವ್ಯಾಜ ನೆರವು ನೀಡುತ್ತಿದ್ದಾರೆ, ಪ್ರಾಮಾಣಿಕವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಯಾರಾದರೂ ಹೇಳಿದರೆ ನಾವು ನಂಬುವ ಸ್ಥಿತಿಯಲ್ಲಿ ಇಲ್ಲ. ಒಳಿತಿನ ಹಿಂದೆ ಏನೋ ಹುನ್ನಾರವಿದೆ ಎಂದೇ ಭಾವಿಸುತ್ತೇವೆ. ಆದರೂ, ಚಿಕ್ಕ ಪ್ರಮಾಣದಲ್ಲಾದರೂ ಅಲ್ಲಿ ಇಲ್ಲಿ ನೈತಿಕ ನಡವಳಿಕೆಯ, ಪ್ರಾಮಾಣಿಕ ವರ್ತನೆಯ ಉದಾಹರಣೆಗಳು ನಮ್ಮ ಅನುಭವಕ್ಕೆ ಬರುತ್ತವೆ. ಇವು ನಮ್ಮಲ್ಲಿ ಏನೋ ಒಂದು ಭರವಸೆಯನ್ನು ಮೂಡಿಸುತ್ತವೆ. ಆಗೀಗ ಪತ್ರಿಕೆಗಳಲ್ಲಿ ಆಟೋದವರು ಪ್ರಾಮಾಣಿಕವಾಗಿ ನಡೆದುಕೊಂಡಿದ್ದುದನ್ನು ನಾವು ಓದುತ್ತೇವೆ. ಪರೀಕ್ಷೆಯಲ್ಲಿ ನಕಲು ಮಾಡದೆ ಉತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳ ಬಗ್ಗೆ ಸುದ್ದಿ ಕೇಳುತ್ತೇವೆ. ಯಾವ ಆಮಿಷಕ್ಕೂ ಒಳಗಾಗದೆ, ಯಾವ ಬೆದರಿಕೆಗೂ ಹೆದರದೆ, ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಇರುವುದನ್ನು ಕೇಳುತ್ತೇವೆ. ಮನೆಮನೆಗಳಲ್ಲಿ ಕೆಲಸ ಮಾಡುತ್ತಿರುವ ಆಳುಗಳು ನಿಷ್ಠೆಯಿಂದ ಕಾರ್ಯ ಮಾಡುವುದಲ್ಲದೆ. ಪ್ರಾಮಾಣಿಕತೆಯಿಂದಲೂ ವರ್ತಿಸುತ್ತಾರೆ. ಎಂಬುದನ್ನು ನಾವು ಅನುಭವಿಸುತ್ತಲಿದ್ದೇವೆ.
ಭಾಷೆ ಎನ್ನುವುದು ವ್ಯಕ್ತಿಯ ಅಂತರಂಗದ ಅಭಿವ್ಯಕ್ತಿ ಮಾತ್ರ ಆಗಿರದೇ ಆ ನಾಡಿನ ಆತ್ಮವೇ ಆಗಿರುತ್ತದೆ. ನಾಡಿನ ಭಾಷೆ ನಾಡ ಜನರೆಲ್ಲರನ್ನು ಒಂದುಗೂಡಿಸುವ ಅಪಾರ ಶಕ್ತಿಯನ್ನು ಪಡೆದಿರುವಂತೆಯೇ ನಾಡಿನ ಅಂತಃ ಸತ್ವವೂ ಆಗಿರುತ್ತದೆ. ಭಾಷೆಯ ಹಂಗಿಲ್ಲದೇ ಬದುಕುವವರು ನಾಡಿನ ಹಂಗನ್ನೂ ತೊರೆದವರಾಗಿರುತ್ತಾರೆ.
ತಮ್ಮ ಜೀವನವನ್ನು ತಾವೇ ಕೊನೆಗೊಳಿಸುವಂತಹ ಕಾರ್ಯವನ್ನು ಆತ್ಮಹತ್ಯೆ ಎಂದು ಗುರುತಿಸಲಾಗುವುದು. ಆತ್ಮಹತ್ಯೆ ಎಂಬ ಪದವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಈ ಪದದಲ್ಲಿ ಅಡಗಿರುವಂತಹ ಒಂದು ಕೊರತೆ ಗೋಚರವಾಗುವುದು. ಆತ್ಮಹತ್ಯೆ ಎಂದರೆ ಆತ್ಮವನ್ನು ಕೊಲೆ ಮಾಡುವುದು ಎಂದರ್ಥ. ನಮಗೆಲ್ಲರಿಗೂ ಗೊತ್ತಿರುವಂತಹ ವಿಷಯ ಏನೆಂದರೆ, ಆತ್ಮವನ್ನು ಕೊಲೆ ಮಾಡಲು ಸಾಧ್ಯವಿಲ್ಲ. ಆದರೆ ದೇಹವನ್ನು ಕೊಲೆ ಮಾಡಲು ಸಾಧ್ಯ. ಆದುದರಿಂದ ಆತ್ಮಹತ್ಯೆ ಎನ್ನುವ ಬದಲು, ಆತ್ಮದ ಬಿಡುಗಡೆ ಮತ್ತು ದೇಹದ ಅಂತ್ಯ ಇಲ್ಲವೆ ತನ್ನ ಕೊಲೆ ಎಂದು ಕರೆದರೆ ತಪ್ಪಾಗಲಾರದು.
ಭಾರತದ ಗ್ರಾಮೀಣ ಪ್ರದೇಶಗಳು ವೈವಿಧ್ಯಮಯವಾದ ಸವಾಲುಗಳು, ಸಮಸ್ಯೆಗಳನ್ನು ಬಹಳ ಹಿಂದಿನಿಂದಲೂ ಎದುರಿಸುತ್ತಿವೆ. ಗ್ರಾಮೀಣರ ಸಮಸ್ಯೆ ಎಂದ ಕೂಡಲೇ ಬಹುತೇಕರು ಹೇಳುವುದು ಬಡತನ, ಅನಕ್ಷರತೆ, ಹೆಚ್ಚು ಮಕ್ಕಳಿರುವ ದೊಡ್ಡ ಕುಟುಂಬಗಳು ಮತ್ತು ಆವಶ್ಯಕ ಸೌಲಭ್ಯಗಳಿಲ್ಲದಿರುವುದು.
ಜೀವ ಸಂಕುಲದಲ್ಲಿ ಗಿಡ, ಮರ, ಪ್ರಾಣಿ, ಪಕ್ಷಿ, ಕ್ರಿಮಿ, ಕೀಟಾದಿಗಳಲ್ಲಿನ ಪ್ರಭೇದ, ವಿಭೇದಾದಿಗಳಲ್ಲಿನ ವಿವಿಧತೆ ಮಾತ್ರವಲ್ಲ ಈ ವಿವಿಧತೆ ಸದಾ ಏರಿಳಿತಗೊಳ್ಳುವ ವ್ಯವಸ್ಥೆಗೆ ಜೀವ ವೈವಿಧ್ಯವೆಂದು ಸರಳವಾಗಿ ವ್ಯಾಖ್ಯಾನಿಸಲಾಗುತ್ತದೆ.
ಹುಟ್ಟು, ಬದುಕು, ಸಾವು ಈ ಜೀವಯಾತ್ರೆ ಎಲ್ಲೆಡೆ ಇದ್ದಿದ್ದೆ. ಈ ಯಾತ್ರೆಯ ಅತ್ಯಂತ ಪ್ರಮುಖ ಘಟ್ಟವಾದ ಬದುಕೆಂಬುದು ನೈಜವಾಗಿ ಅರಳುವುದಾದರೂ ಕೌಟುಂಬಿಕ ಪರಿಸ್ಥಿತಿಗೂ ಮಿಗಿಲಾಗಿ ಅದರ ಸುತ್ತಲಿನ ಸಾಮಾಜಿಕ, ಸಾಂಸ್ಕೃತಿಕ, ಭೌಗೋಳಿಕ ಪರಿಸರಗಳ ಪ್ರಭಾವದಿಂದ. ಮಲೆನಾಡೆಂಬುದು ಪಶ್ಚಿಮಘಟ್ಟ, ನಿತ್ಯ ಹರಿದ್ವರ್ಣ ಕಾಡು, ಬೆಟ್ಟ ಗುಡ್ಡ, ಕೆರೆ, ಝರಿ, ಹಳ್ಳ ಕೊಳ್ಳಗಳಿಂದ ಕೂಡಿದ್ದು ದೇಶದಲ್ಲೇ ವಿಶಿಷ್ಟ ಪರಿಸರ ವ್ಯವಸ್ಥೆಯಾಗಿದೆ. ಇದು ಇಲ್ಲಿನ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತದೆ. ಇಲ್ಲಿನ ವಿಶಿಷ್ಟ ಪರಿಸರ ವ್ಯವಸ್ಥೆಯ ಅತ್ಯಂತ ಮೂರ್ತಸ್ವರೂಪವೇ `ಜೀವ ವೈವಿಧ್ಯ' (Biological Diversity) ವಾಗಿದೆ. ಈ ಪಶ್ಚಿಮಘಟ್ಟ ಪ್ರದೇಶ ಜಗತ್ತಿನ ಹತ್ತು ದಟ್ಟ ಜೀವ ವೈವಿಧ್ಯ ತಾಣಗಳಲ್ಲೊಂದು ಎಂಬ ಖ್ಯಾತಿ ಪಡೆದಿದೆ. ಇದಕ್ಕೆ ಹೊಂದಿಕೊಂಡೇ ಮಲೆನಾಡ ಹಿತ್ತಲು, ತೋಟ, ಹೊಲಗಳಲ್ಲೂ ನಾಟಿ ತಳಿಗಳು, ಹಣ್ಣು ತರಕಾರಿ, ಸಸ್ಯ, ಗಿಡ, ಮರಗಳ ಜೀವ ವೈವಿಧ್ಯ ಕೂಡ ಅಷ್ಟೇ ದಟ್ಟವಾಗಿರುತ್ತದೆ. ಅಂದಮೇಲೆ, ಮಲೆನಾಡ ಬದುಕುಗಳು ಅರಳುವುದಾದರೂ ಈ ದಟ್ಟ ಜೀವ ವೈವಿಧ್ಯದೊಳಗೇ ಎಂದಾಯ್ತು. ಹೀಗೆ, ಬದುಕನ್ನರಳಿಸಿಕೊಳ್ಳುವ ಅನನ್ಯ ಅವಕಾಶವನ್ನು ಬಾಲ್ಯದಲ್ಲಿ ಪಡೆಯುವಂತಾಗಿ ಈಗ ಬೆಂಗಳೂರಿನಂತಹ ಕಾಂಕ್ರಿಟ್ ಜಂಗಲ್ಗಳಲ್ಲಿ ಸಿಕ್ಕಿ ತೊಳಲಾಡುತ್ತಿರುವ ನನ್ನಂತಹವರಿಗೆ ಆ ಅದ್ಭುತ ಅವಕಾಶದ ಮರುನೆನಪೇ ಅಪಾರ ಸಂತಸ ತರುವಂತಾಗಿದೆ. ಆದರೆ, ಈ ಜನಸಂಖ್ಯೆ ಹೆಚ್ಚಳ, ಅರಣ್ಯನಾಶ, ಪರಿಸರ ವಿನಾಶಗಳಿಂದಾಗಿ ಅಲ್ಲಿನ ಆ ಜೀವ ವೈವಿಧ್ಯ ಕೂಡ ಕ್ಷೀಣಿಸುವಂತಾಗಿದ್ದು, ಇಲ್ಲಿನ ಬದುಕೇ ಈಗ ಕಮರುವಂತಾಗಿದೆ. ಮಿಗಿಲಾಗಿ, ಮುಂಬರುವ ತಲೆಮಾರುಗಳು ಇಂತಹ ಅವಕಾಶದಿಂದ ಪೂರ್ತಿ ವಂಚಿತವಾಗುವ ಅಪಾಯ ಕೂಡ ನಮ್ಮ ಮುಂದಿದೆ. ಈ ಎಲ್ಲಾ ವಿಚಾರಗಳತ್ತ ಕಣ್ಣು ಹಾಯಿಸುವುದು ಈ ಒಂದು ಪುಟ್ಟ ಲೇಖನದ ಪ್ರಯತ್ನವಾಗಿದೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳ ನಿಧಿ ಬಳಕೆ ಮಾಡಿಕೊಂಡು ಎನ್ಜಿಒ (ಸರ್ಕಾರೇತರ ಸಂಸ್ಥೆಗಳು) ಕಾರ್ಯಾಚರಿಸುತ್ತಿವೆ. ಆ ಮೂಲಕ ಆ ದೇಶದ ನೀತಿ ನಿಯಮಗಳ ಮೇಲೆ ಪ್ರಭಾವ ಬೀರುವುದು ಒಂದೆಡೆಯಾದರೆ ಇನ್ನೊಂದೆಡೆ ಅಲ್ಲಿನ ಮೂಲ ಸಂಸ್ಥೆಗಳನ್ನು ನಾಶಪಡಿಸುವ ಕೆಲಸ ಕೂಡಾ ನಡೆಯುತ್ತಿದೆ.
ಎನ್ಜಿಒ ಎಂದರೆ ಆಯಾ ದೇಶದಲ್ಲಿ, ಪ್ರಾದೇಶಿಕವಾಗಿ ಮಾನವೀಯ ಸೇವೆಗಳನ್ನು ಒದಗಿಸುವ ಸಂಸ್ಥೆ ಎಂಬ ಭಾವನೆ ಪಾಶ್ಚಿಮಾತ್ಯ ದೇಶಗಳನ್ನು ಹೊರತುಪಡಿಸಿ ಉಳಿದ ದೇಶಗಳಲ್ಲಿ ಇದೆ. ಯಾಕೆಂದರೆ, ಪೊಲೀಸ್ ದೌರ್ಜನ್ಯ ಅಥವಾ ಅಧಿಕಾರಿಗಳ ದೌರ್ಜನ್ಯದ ವಿರುದ್ಧ ಹೋರಾಟ, ಬಡತನದ ವಿರುದ್ಧ ಹೋರಾಟ, ಪರಿಸರ ಸ್ನೇಹಿ ಚಟುವಟಿಕೆಗಳು ಮೊದಲಾದವುಗಳು ಎನ್ಜಿಒ ಗಳ ಕಾರ್ಯವ್ಯಾಪ್ತಿ. ಈ ಎಲ್ಲ ಚಟುವಟಿಕೆಗಳಿಗೆ ಹಣ ಒದಗಿಸುವುದು ವಿದೇಶಿ ಮೂಲ. ಈ ವಿದೇಶಿ ಮೂಲಗಳಿಗೆ ತಮ್ಮ ಕಾರ್ಯಸೂಚಿಯನ್ನು ಆಯಾ ದೇಶಗಳಲ್ಲಿ ಸ್ಥಾಪಿಸಬೇಕಾಗಿರುತ್ತದೆ. ಹಾಗಾಗಿ, ವಿದೇಶಿ ಮೂಲಗಳು ತಮ್ಮ ರಾಜತಾಂತ್ರಿಕ ತಂತ್ರದ ಮೂಲಕ ಅದನ್ನು ಸಾಧಿಸಲು ಪ್ರಯತ್ನಿಸುತ್ತವೆ. ಇದೊಂದು ರೀತಿಯಲ್ಲಿ ಪರೋಕ್ಷ ಯುದ್ಧವೇ ಸರಿ. ಆಡು ಮುಟ್ಟದ ಸೊಪ್ಪಿಲ್ಲ, ಹಾಗೆಯೇ ದೊರೆಸ್ವಾಮಿಗಳು ಹೋರಾಡಲು ಮುನ್ನಡೆಯದಿದ್ದ ರಾಜಕೀಯ, ಸಾಮಾಜಿಕ ಕ್ಷೇತ್ರಗಳಿಲ್ಲ, ಅವರ ನಿಷ್ಠೆ ಅಚಲ, ಸಂಕಲ್ಪದೃಢ, ನಿರ್ಭೀತ ಮನೋನಿಶ್ಚಯ. ತಮ್ಮ ಆದರ್ಶಗಳ ಸಾಧನೆಗಾಗಿ ರಣರಂಗಕ್ಕೆ ಮುನ್ನಗ್ಗಿ ಅವಿರತ ಹೋರಾಟದಲ್ಲಿ ತೊಡಗುವುದು ಅವರ ಜಾಯಮಾನ. ಜಾತೀಯ ಪಿತೂರಿಗಳಿಂದ ಕುಲಷಿತಗೊಂಡಿದ್ದ ಕರ್ನಾಟಕ ಏಕೀಕರಣ ಸಮಸ್ಯೆಯ ಬಗ್ಗೆ ಎಲ್ಲರನ್ನು ಒಂದುಗೂಡಿಸಿ ದಂಡುಕಟ್ಟಿ ದುಡಿದದ್ದೂ, ಸರ್ವೋದಯ ಕಾರ್ಯಗಳಿಗೆ ಟೊಂಕಕಟ್ಟಿ ರಾಜ್ಯದಾದ್ಯಂತ ಅಡ್ಡಾಡಿ ಜಾತೀಯ ದ್ವೇಷಪೂರಿತ ಗುಂಪುಗಳ ನಡುವೆ ಸೌಹಾರ್ದವೇರ್ಪಡಿಸಿದ್ದೂ, ಅವರ ಮಹತ್ವದ ಸಾಧನೆಗಳಲ್ಲಿ ಒಂದು ಹಾಗೂ ಭಾರತ ಸೇವಕ ಸಮಾಜದ ಪ್ರತಿನಿಧಿಯಾಗಿ, ಕೊಳೆಗೇರಿಗಳ ಸುಧಾರಣೆಗೆ ಕಂಕಣ ಕಟ್ಟಿ ದುಡಿದರೂ ಅವರ ಸಾಧನೆಗೆ ಇಟ್ಟ ಮತ್ತೊಂದು ಗರಿ.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ನಿರಾತಂಕ ಬಳಗದ ಸಹಯೋಗದೊಂದಿಗೆ ದಿನಾಂಕ 15ನೆಯ ಏಪ್ರಿಲ್ 2012 ಭಾನುವಾರದಂದು ನಡೆದ ಪರಿಷತ್ತಿನ ಗೌರವ ಸದಸ್ಯತ್ವ ಪ್ರದಾನ ಮತ್ತು ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿತ್ತು. ಈ ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಶ್ರೀ. ಗೊ.ರು. ಚನ್ನಬಸಪ್ಪ, ಅಧ್ಯಕ್ಷರು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ವಹಿಸಿದ್ದರು ಮತ್ತು ಪ್ರಸ್ತಾವನೆ ನುಡಿಗಳನ್ನು ಡಾ.ಎಚ್.ಎಂ. ಮರುಳಸಿದ್ಧಯ್ಯ, ಸಮಾಜಕಾರ್ಯ ತಜ್ಞರು, ಅವರು ಮಂಡಿಸಿದರು. (ಈ ಪ್ರಸ್ತಾವನೆ ನುಡಿಗಳನ್ನು ಈ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ.) ಶ್ರೀ ಗೊ.ರು. ಚನ್ನಬಸಪ್ಪನವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಸಮಾಜದಲ್ಲಿನ ವ್ಯಂಗ್ಯಗಳನ್ನು ಅರ್ಥಪೂರ್ಣವಾಗಿ ದಿನಪತ್ರಿಕೆಗಳಲ್ಲಿನ ಶೀರ್ಷಿಕೆಗಳನ್ನು ಉದಾಹರಿಸುತ್ತ ಸಭಿಕರ ಮನಸ್ಸು ಚಿಂತಿಸುವಂತೆ ಮಾಡಿತು. ಓಶೋನ ಒಂದು ದೃಷ್ಠಾಂತವನ್ನು ನೀಡಿದರು. ಚೀನಾದಲ್ಲಿ ಒಬ್ಬ ವ್ಯಕ್ತಿ ಆಕಸ್ಮಿಕವಾಗಿ ಒಂದು ತೆರೆದ ಬಾವಿಯಲ್ಲಿ ಬಿದ್ದನಂತೆ. ಅವನು ತನ್ನ ಪ್ರಾಣ ಉಳಿಸಿಕೊಳ್ಳಲು ವಿಫಲನಾಗಿ ಯಾರಾದರೂ ನನ್ನನ್ನು ಕಾಪಾಡಿ ಎಂದು ಕೂಗುತ್ತಿರುತ್ತಿದ್ದಾನೆ. ಒಬ್ಬ ಧರ್ಮಪ್ರಚಾರಕ ಅಲ್ಲಿಗೆ ಬಂದು ಇಣುಕಿ ನೋಡಿ ಅಯ್ಯಾ ಏನಾಯಿತು? ಎಂದನಂತೆ. ಬಾವಿಗೆ ಬಿದ್ದವ ನನ್ನನ್ನು ರಕ್ಷಿಸಿ ಎಂದನಂತೆ, ನೀನು ಪ್ರಾಕೃತಿಕವಾಗಿ ಬಾವಿಗೆ ಬಿದ್ದಿರುವೆ ಆದುದರಿಂದ ಪ್ರಕೃತಿ ನಿನ್ನನ್ನು ಶಿಕ್ಷೆಗೆ ಗುರಿಪಡಿಸಿದೆ. ನಿನ್ನನ್ನು ರಕ್ಷಿಸುವುದು ಪ್ರಕೃತಿಗೆ ವಿರುದ್ಧವಾದುದ್ದು ನನಗೆ ಪಾಪ ಬರುತ್ತದೆ ಎಂದು ಹೇಳಿ ಹೋರಟುಹೊದನಂತೆ, ಎಂತಹ ಜ್ಞಾನಿ ಆ ಧರ್ಮ ಪ್ರಚಾರಕ.
ಪ್ರಪಂಚದ ವೃತ್ತಿಗಳಲ್ಲಿ ಅಕ್ಕಸಾಲಿಗ ವೃತ್ತಿಯು ಅತ್ಯಂತ ಪ್ರಾಚೀನವಾದ ವೃತ್ತಿ. ಅದರಲ್ಲೂ ಭಾರತದ ಅಕ್ಕಸಾಲಿಗ ವೈವಿಧ್ಯಮಯವಾದ ಸೃಜನಾತ್ಮಕ ಕುಶಲ ಕಲೆಯಿಂದ ಬಂಗಾರದಲ್ಲಿ ಹಸ್ತಶಿಲ್ಪವನ್ನು ಸೃಷ್ಟಿಸಿ ಸಂಸ್ಕೃತಿಯ ವಿಕಾಸಕ್ಕೆ, ಭವ್ಯತೆಗೆ ತನ್ನದೇ ಆದ ಕೊಡುಗೆಯನ್ನು ನೀಡಿದ್ದಾನೆ. ಅದರಲ್ಲೂ ಕರ್ನಾಟಕ ಶೈಲಿಯ ಆಭರಣ ತಯಾರಿಕೆ ತನ್ನದೇ ಆದ ವಿಶಿಷ್ಟ ಸ್ಥಾನಮಾನವನ್ನು ಆಭರಣ ಕ್ಷೇತ್ರದಲ್ಲಿ ಉಳಿಸಿಕೊಂಡು ಬಂದಿದೆ. ಒಂದು ಕಾಲಕ್ಕೆ ನಮ್ಮ ಸಮಾಜದಲ್ಲಿ ಬಹಳ ಶ್ರೇಷ್ಠ ಮನ್ನಣೆಯನ್ನೂ, ಆಧಾರವನ್ನೂ ಅಕ್ಕಸಾಲಿಗ ಪಡೆಯುತ್ತಿದ್ದ. ತನ್ನ ನಂಬಿಕೆ, ಪ್ರಾಮಾಣಿಕತೆ ಮತ್ತು ಕುಶಲತೆಯಿಂದ ಕರ್ನಾಟಕದ ಅಕ್ಕಸಾಲಿಗನನ್ನು ರಾಜಾಶ್ರಯ ಪಡೆಯುವಂತೆ ಮಾಡಿದ್ದು ಇತಿಹಾಸ.
ಈ ಜೀವ ತುಂಬಿದ ಚೇತನವಿಲ್ಲದ ಜಡ ಪ್ರಪಂಚವನ್ನು ಯಾವುದೋ ಒಂದು ಶಕ್ತಿ ಆವರಿಸಿಕೊಂಡು ಇರುವಂತೆ ಭಾವಕ್ಕೆ ಒಳಪಡದಂತೆ, ಅಳತೆಗೆ ವಶವಾಗದಂತೆ ಇರುವ ಆ ವಿಶೇಷಕ್ಕೆ ನಮಸ್ಕರಿಸುವೆ. ಆ ವಿಶೇಷವೆ ನೆಲ, ಜಲ, ಗಾಳಿ ಎನ್ನುವ ಡಿವಿಜಿಯವರ ಮಂಕುತಿಮ್ಮನ ಕಗ್ಗದ ತಾತ್ಪರ್ಯ ವಿಶೇಷವಾದದ್ದು. ಆಕಾಶದಲ್ಲಿ ತಾರೆಗಳು ನೂರಿದ್ದರೇನು. ಕತ್ತಲೆಯಲ್ಲಿ ನಡೆಯುವ ದಾರಿಗನಿಗೆ ಬೇಕಿರುವುದು ಬೆಳಕ ಕರುಣಿಸುವ ಒಂದು ಚಿಕ್ಕ ಹಣತೆಯೆ ಹೊರತು, ತಾರಾಮಂಡಲದ ತಾರೆಗಳಲ್ಲ. ಕತ್ತಲಲ್ಲಿ ದಾರಿಕಾಣದೆ ನಡೆಯುತ್ತಿರುವ ಮನುಷ್ಯನಿಗೆ ಜೊತೆಗಾರನಾಗಿ ಬೇಕಾಗಿರುವುದು ಮಾನವೀಯ ಮುಖದ ಮನುಷ್ಯನೇ ಹೊರತು ದೂರದ ದೇವರುಗಳಲ್ಲ. ಈ ಪ್ರಪಂಚದಲ್ಲಿ ಮನುಷ್ಯನ ಅಸ್ತಿತ್ವಕ್ಕೆ ಕಾರಣವಾಗಿರುವ ಈ ನೆಲ, ಜಲ, ಮನುಷ್ಯನ ಹಾರಾಟಕ್ಕೆ, ರಂಪಾಟಕ್ಕೆ, ಸಾಧನೆಗೆ, ಏಳಿಗೆಗೆ, ಕಾರಣವಾಗಿದೆ. ಈ ನೆಲ, ಜಲಗಳನ್ನು ಅನುಭವಿಸುವ ಹಕ್ಕು ಪ್ರತಿಯೊಂದು ಜೀವ ಜಂತುಗಳಿಗೂ ಇದೆ. ಅನುಭವಿಸುವಂತೆ ಮಾಡಬೇಕಾದುದ್ದು ನಮ್ಮ ಕರ್ತವ್ಯ ಕೂಡ. ಒಂದು ವಸ್ತುವನ್ನು ಸೃಷ್ಟಿಸುವ ಶಕ್ತಿ ನಮಗಿಲ್ಲ ಎಂದಾದರೆ ಒಂದು ವಸ್ತುವನ್ನು ನಾಶಪಡಿಸುವ ಹಕ್ಕು ನಮಗಿಲ್ಲ.
ಕರ್ನಾಟಕ ನಾಗರಿಕ ಸೇವಾ ಖಾತರಿ ಯೋಜನೆ ಅಧಿನಿಯಮ 2011 ಅಥವಾ ಸಕಾಲ ಯೋಜನೆಯು ಏಪ್ರಿಲ್ 2, 2012ರಿಂದ ಕರ್ನಾಟಕದಾದ್ಯಂತ ಜಾರಿಗೆ ಬಂದಿದೆ. ನಾಗರಿಕರಿಗೆ ವಿಳಂಬವಿಲ್ಲದೆ ಸರ್ಕಾರಿ ಸೇವೆಗಳನ್ನು ಒದಗಿಸುವ ದೃಷ್ಟಿಯಿಂದ ಜಾರಿಗೆ ತಂದಂತಹ ಕರ್ನಾಟಕ ಸರ್ಕಾರದ ಮಹತ್ತರ ಯೋಜನೆ ಇದಾಗಿದೆ. ಹೊಸದೊಂದು ವೃತ್ತಿ ಸಂಸ್ಕೃತಿ ರೂಪಿಸಬೇಕೆಂಬುದೇ ಈ ಯೋಜನೆಯ ಉದ್ದೇಶವಾಗಿದೆ.
ಜೋಡಿಹಕ್ಕಿಗಳನ್ನು ಒಂದೇ ಲೇಖನದಲ್ಲಿ ಹಿಡಿದಿಡುವ ಸಾಹಸ ಇಲ್ಲಿನ ಆಶಯ. ಮೂಲ ಕರ್ನಾಟಕವಾದರೂ ಐತಿಹಾಸಿಕ ಘಟನೆಯಿಂದ ಕೇರಳಕ್ಕೆ ವಲಸೆ ಹೋದ ಪೈ ವಂಶದ ಕುಡಿ ಡಾ.ಕೆ.ವಿ. ಶ್ರೀಧರನ್ ಆಂಧ್ರದ ಡಾ. ಉಮಾ ಅವರೊಡನೆ ಶ್ರೀಧರನ್ ನಡುವಯಸ್ಸಿನಲ್ಲಿ ಜೊತೆಗೂಡಿ ಕರ್ನಾಟಕದಲ್ಲಿ ಬದುಕಿ, ಇಲ್ಲಿಯೇ ಕೊನೆಯುಸಿರೆಳೆದರು. ಸಮಾಜಕಾರ್ಯದಲ್ಲಿ ತೊಡಗಿಕೊಂಡ ಅವರ ಬದುಕು ಅಪರೂಪದ್ದು. ಹೀಗಾಗಿ ಕರ್ನಾಟಕವು ಕೇರಳ ಆಂಧ್ರಗಳನ್ನು ಬೆಸೆದ ನಾಡಾಯ್ತು. ನಾನು ಅವರಿಬ್ಬರನ್ನು ಸೇರಿಸಿ ಬಳಸಿರುವ ಉಮಾ-ಶ್ರೀ ಸಂಯುಕ್ತ ಪದವನ್ನು ಅವರು ಬದುಕಿದ್ದಿದ್ದರೆ ಒಪ್ಪುತ್ತಿದ್ದರೊ, ಕಾಣೆ. ಯಾಕೆಂದರೆ, ಡಾ. ಉಮಾ ಅವರನ್ನು ಶ್ರೀಮತಿ ಉಮಾ ಎಂದರೆ ಅವರಿಗೆ ಇಷ್ಟವಾಗುತ್ತಿರಲಿಲ್ಲವಂತೆ; ಉಮಾ ಶ್ರೀಧರನ್ ಅಂದರೆ ಅವರಿಬ್ಬರೂ ಒಪ್ಪುತ್ತಿರಲ್ಲಿಲ್ಲವೇನೊ; ಶ್ರೀಧರನ್ ಯಾವಾಗಲೂ ಇವರು ಉಮಾ ಎಂದು ಪರಿಚಯಿಸುತ್ತಿದ್ದರೇ ಹೊರತು ಇವರು ನನ್ನ ಪತ್ನಿ ಉಮಾ ಎಂದು ಪರಿಚಯಿಸುತ್ತಿರಲಿಲ್ಲ. ಆದರೆ ಭಾರತೀಯ ಪರಂಪರೆಯ ಪ್ರಕಾರ ಪ್ರಕೃತಿ-ಪುರುಷ ಮತ್ತು ಅರ್ಧನಾರೀಶ್ವರ ಶಬ್ದಗಳಲ್ಲಿ ಮೊದಲು ಸ್ತ್ರೀ ಆನಂತರ ಪುರುಷ ಬರುತ್ತಾನೆ ಎಂಬುದನ್ನು ಮನದಂದು ಉಮಾ-ಶ್ರೀ ಸರಿಯಾದ ಪ್ರಯೋಗ ಎಂದು ನಾನು ಅಂದುಕೊಳ್ಳುತ್ತೇನೆ.
ಸಮಾಜದಲ್ಲಿ ಮಾನವ ಜನಾಂಗದಷ್ಟೆ ಪುರಾತನವಾಗಿರುವ ಅನೇಕ ಸಮಸ್ಯೆಗಳ ಸುಳಿಯಿಂದ ಸಂಕಷ್ಟದಲ್ಲಿರುವ ಪರಿಸ್ಥಿತಿ ಸುಧಾರಿಸುವ ಮಹದಾಸೆಯೊಂದಿಗೆ ಸುಮಾರು ಶತಮಾನದ ಹಿಂದೆ ಅಮೆರಿಕಾದಿಂದ ಆಮದಾಗಿದೆ. ವೃತ್ತಿಪರ ಸಮಾಜಕಾರ್ಯ ನಮ್ಮ ದೇಶದ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಸಾಂಪ್ರದಾಯಿಕ ನಿಲುವುಗಳಿಂದಾಗಿ ನಮ್ಮಲ್ಲಿನ್ನು ಈ ವೃತ್ತಿಪರ ಸಮಾಜಕಾರ್ಯದ ಪರಿಕಲ್ಪನೆ ನೆನೆಗುದಿಗೆ ಬಿದ್ದಿದೆ. ಅಸ್ಪಷ್ಟ ಕಲ್ಪನೆಯಿಂದ ವೃತ್ತಿಯಾಗಿ ಸಂಪೂರ್ಣ ಬೇರು ಬಿಡಲು ನಾವಿನ್ನು ಅನಿವಾರ್ಯವಾಗಿ ಕಾಯಬೇಕಿದೆ.
ಈಗ್ಗೆ ಹದಿಮೂರು ವರ್ಷಗಳ ಹಿಂದೆ ಕರ್ನಾಟಕ ವಿಶ್ವವಿದ್ಯಾಲಯದ ಅಂತಿಮ ವರ್ಷದ ಸಮಾಜಕಾರ್ಯದ ಸ್ನಾತಕೋತ್ತರ ವಿದ್ಯಾರ್ಥಿನಿ ನಾನು. ವಿಶ್ವವಿದ್ಯಾಲಯದ ಅಣತಿಯಂತೆ ಅಥಣಿಯ ವಿಮೋಚನಾ ಸಂಸ್ಥೆಗೆ Block Placement ಗಾಗಿ ಬಂದಿದ್ದು ನನ್ನ ಅದೃಷ್ಟವೇ ಎನ್ನಬೇಕು. ವರ್ಷದಲ್ಲಿ ನಾಲ್ಕಾರು ಕಡೆ ನೌಕರಿ ಬದಲಿಸುವ ಸಮಾಜಕಾರ್ಯಕರ್ತರನ್ನ ಕಂಡಿದ್ದೇನೆ. ಅದಕ್ಕೆ ಕಾರಣಗಳೇನು ಕಡಿಮೆ ಇಲ್ಲ. ಆದರೆ ವಿದ್ಯಾರ್ಥಿನಿಯಾಗಿ ಬಂದ ನನಗೆ Result ಬರುವ ಮೊದಲೇ ನೌಕರಿಗಾಗಿ ಆಫರ್ ನೀಡಿದ್ದು ವಿಮೋಚನಾ ಸಂಸ್ಥೆ. 2 ವರ್ಷಗಳಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಸಮಾಜಕಾರ್ಯ ವಿಭಾಗದ ಡಾ.ಜಿ.ಎಸ್. ಬಿದರಿಕೊಪ್ಪ, ಡಾ. ಶೇಖರ ಪೂಜಾರ್, ಡಾ.ಜಿ.ಎನ್. ಗನಿಹಾರ, ಡಾ. ವಿನೀತಾ ಪೈ, ಡಾ. ಶೋಭಾದೇವಿ ಮತ್ತು ಡಾ. ಸ್ವಾದಿ ಗುರುವೃಂದದ ಪರಿಣಿತ ಮತ್ತು ಗಟ್ಟಿತನದ ಸಮಾಜಕಾರ್ಯದ ಪ್ರಾಯೋಗಿಕ ಜ್ಞಾನ, ಕೌಶಲ್ಯ, ತಂತ್ರಗಾರಿಕೆ ಕಲಿತು ನನ್ನದೇ ಆದ ವೃತ್ತಿ ಪರತೆಯನ್ನು ಕಟ್ಟಿಕೊಂಡವಳು ನಾನು Block Placement ಅವಧಿಯಲ್ಲಿ ವಿಮೋಚನಾದ ಅಧ್ಯಕ್ಷರಾದ ಶ್ರೀ.ಬಿ.ಎಲ್. ಪಾಟೀಲ ಅವರಿಂದ ಸಹಕಾರ್ಯದರ್ಶಿಗಳಾದ ಶ್ರೀ.ವ್ಹಿ.ಎಸ್. ಮನವಾಡೆಯವರಿಂದ ಗುರುತಿಸಿಕೊಂಡಿದ್ದೆ. ಅಂತೆಯೇ ಅವರು ನೀಡಿದ ಆಫರ್ ಬಗ್ಗೆ ಡಾ. ವಿನೀತಾ ಪೈ ಮ್ಯಾಡಂ ಅವರ ಹತ್ತಿರ ಚರ್ಚಿಸಿದಾಗ, ಒಂದೆರಡು ವರ್ಷ ಕೆಲಸ ಮಾಡುವ Field ನ ಅನುಭವವಾಗುತ್ತದೆ, ನಂತರ ಮುಂದಿನ ವಿದ್ಯಾಭ್ಯಾಸಕ್ಕೆ ತೊಡಗು ಎಂದು ಮಾರ್ಗದರ್ಶನ ನೀಡಿದರು. ಅಂತೆಯೇ ಇಂದೂ ಅಂದರೆ 1999ರ ಅಕ್ಟೋಬರ್ 10 ರಿಂದ ನಿರಂತರವಾಗಿ ವಿಮೋಚನಾ ಬಳಗದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಸಾರ್ಥಕ ಬದುಕು ನನ್ನದು.
56ನೆಯ ಕನ್ನಡ ರಾಜ್ಯೋತ್ಸವವನ್ನು ಬಹಳ ವಿಜೃಂಭಣೆಯಿಂದ ಕರ್ನಾಟಕದ ಜನತೆ ಆಚರಣೆ ಮಾಡಿಕೊಂಡಿದ್ದರೆ ಇದರ ಜೊತೆಗೆ ಕನ್ನಡಕ್ಕೆ ಎಂಟನೇ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟ ಕಂಬಾರರಿಗೆ ಸನ್ಮಾನ ಸಮಾರಂಭಗಳು ಆಚರಿಸುತ್ತಿರುವ ಸಂತೋಷದ ಸಮಯದಲ್ಲಿ, ಕರ್ನಾಟಕ ಸರ್ಕಾರವು ಬಹಳ ಮಹತ್ತರವಾದ ಬಹುಮಾನವನ್ನು ಕನ್ನಡ ಜನತೆಗೆ ನೀಡಿದೆ. ಅದೇನೆಂದರೆ 2012ರ ವರ್ಷಾಂತ್ಯಕ್ಕೆ 3178 ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚಲು ಆದೇಶ ಮಾಡಿದೆ. ಇದಕ್ಕೆ ವಿರೋಧವಾಗಿ 56ನೆಯ ಕನ್ನಡ ರಾಜ್ಯೋತ್ಸವದ ಸಮಾರಂಭಗಳಲ್ಲಿ ಸಾಮಾಜಿಕ ಚಿಂತಕರು, ಶಿಕ್ಷಣತಜ್ಞರು, ಕನ್ನಡ ಪರ ಹೋರಾಟಗಾರರು, ಸಮಾಜಕಾರ್ಯಕರ್ತರು ಮುಚ್ಚಲಿರುವ ಶಾಲೆಗಳ ಬಗ್ಗೆ ವಿರೋದ ವ್ಯಕ್ತಪಡಿಸಿದರೆ ವಿನಃ ಏಕೆ ಮುಚ್ಚುತ್ತಿದ್ದಾರೆ? ಅದರ ಪರಿಣಾಮಗಳೇನು? ಯಾರ ಮೇಲೆ ಹೊರೆ ಬೀಳುತ್ತದೆ? ಇದರ ಹಿಂದಿನ ಹುನ್ನಾರವೇನು? ಮಕ್ಕಳ ಹಾಗೂ ಕುಟುಂಬಗಳ ಮೇಲೆ ಆಗುವ ಮನೋ-ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳೇನು? ಎಂಬ ಹಲವಾರು ಪ್ರಶ್ನೆಗಳಿಗೆ ಯಾರೂ ಉತ್ತರ ನೀಡದಿದ್ದುದು ವಿಪರ್ಯಾಸವೇ ಸರಿ.
ಮೂಲ ಸ್ವಭಾವದ ಮಾನವ ಕುಲವೊಂದೆ
ಆತನ ಜೀವನ ಅರಳುವ ನೆಲವೊಂದೆ ; ಪೆಟ್ಟು ತಿಂದಿತೋ ಯಾವುದೆ ಅವಯವವು ಉಳಿದೆಲ್ಲವು ತಕ್ಷಣ ಎಚ್ಚರಗೊಳ್ಳುವವು; ಯಾರ ನೋವಿಗೂ ಸ್ಪಂದಸದಿರುವವರು ಮನುಜನ ಹೆಸರಿಗೇ ಕಳಂಕ ತರುವವರು ! ಇದು ಇರಾಣ ದೇಶದ 12ನೆಯ ಶತಮಾನದ ಜನಪರ ಸೂಫೀ ಕವಿ ಶೇಖ್ ಸಾದಿಯವರ ಗುಲಿಸ್ತಾನ್ (ಹೂದೋಟ) ಎಂಬ ಕಾವ್ಯಸಂಕಲನದಲ್ಲಿಯ ಒಂದು ಮಾರ್ಮಿಕ ಮಾದರಿ. ಕವಿಗೆ ವಿಶ್ವವಿಖ್ಯಾತಿಯನ್ನು ತಂದಿತ್ತ ಸರಳ ಕವಿತೆ. ಮಾನವಕುಲದಲ್ಲಿರುವ ಸಮಾನತೆ ಮತ್ತು ಏಕತೆಯನ್ನೇ ಲೋಕಕ್ಕೆ ನೆನಪಿಸಿಕೊಟ್ಟ ಈ ಸುಧಾರಕ ಮನೋವೃತ್ತಿಯ ಸೂಫಿ ಕವಿ ಭೌಗೋಲಿಕವಾಗಿ ದೂರವಿದ್ದರೂ ನಮ್ಮ ಕರ್ನಾಟಕದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ವಚನ ಸಾಹಿತ್ಯಾಂದೋಲನದ ಸಮಕಾಲೀನನಾಗಿದ್ದನೆನ್ನುವುದು ಒಂದು ಆಕಸ್ಮಿಕ. ಹಾಗೆ ಯೋಚಿಸಿದರೆ ಎತ್ತಣ ಮಾಮರ ಎತ್ತಣ ಕೋಗಿಲೆ, ಎತ್ತಣಿಂದೆತ್ತ ಸಂಬಂಧವಯ್ಯಾ! ಎಂಬ ಅಲ್ಲಮವಾಣಿಯನ್ನೇ ನೆನಪಿಸುವ ಹೋಲಿಕೆಯಿದು. ಎತ್ತಣ ಕರ್ನಾಟಕ ಎತ್ತಣ ಇರಾಣ! ಎತ್ತಣ ಕಲ್ಯಾಣ ಎತ್ತಣ ಶಿರಾಜ್ ಪಟ್ಟಣ! ಶಿರಾಜ್ ಇರಾಣ ದೇಶದಲ್ಲಿ 6ನೆಯ ದೊಡ್ಡ ಪಟ್ಟಣ. ಕವಿಗಳು, ಮದಿರೆ ಮತ್ತು ತರತರದ ಹೂವುಗಳಿಗೆ ಹೆಸರಾದ ಪಟ್ಟಣ. ಪಟ್ಟಣದ ತುಂಬೆಲ್ಲ ಹಸಿರು ಮುರಿಯುವ ತೋಟಗಳು, ಕಣ್ಣು ಕೋರೈಸುವ ರಸಭರಿತ ಹಣ್ಣುಗಳು. ಇಂಥ ಸುಂದರವಾದ ಪಟ್ಟಣದಲ್ಲಿ 1184 ರಲ್ಲಿ ಜನ್ಮವೆತ್ತ್ತಿ ಬದುಕಿನ ಏರು-ಪೇರುಗಳನ್ನೆಲ್ಲ ದಾಟಿ ಸಾವು-ನೋವುಗಳನ್ನೆಲ್ಲ ಮೀಟಿ ಮುಸ್ಲಹುದ್ದೀನ್ (ಧರ್ಮಸುಧಾರಕ) ಎನಿಸಿಕೊಂಡ ಈ ಮಹಾಚಿಂತಕ ಕವಿ ಶೇಖ್ ಸಾದಿಯವರೂ ಸರಿಸುಮಾರು ನಮ್ಮ ನಾಡಿನ ಶರಣರಾಂದೋಲನದ ಕಾಲದಲ್ಲಿಯೇ ಹೆಚ್ಚು-ಕಡಿಮೆ ಅವರಂಥದೇ ಸಂದೇಶವನ್ನು ತಮ್ಮ ಸರಳ ಶೈಲಿಯ ಕಾವ್ಯಮಾಧ್ಯಮದ ಮೂಲಕ ಸಾರಿದ್ದೊಂದು ಯೋಗಾಯೋಗವೆನ್ನಬೇಕು. ವೈಚಾರಿಕ ಹಾಗೂ ಸಾಂಸ್ಕೃತಿಕ ಜಾಗತೀಕರಣಕ್ಕೆ ಯಾವ ದೇಶವೇನು! ಯಾವ ಕಾಲವೇನು! ವೈಚಾರಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ನಡುವೆಯೂ ಸಾಮ್ಯದ ರಸಸ್ಥಾನಗಳು ಬೆಳೆದು ನಿಂತೇ ಇರುತ್ತವೆ ! ಕೂತಲ್ಲೇ ಕೂತು ವೈಚಾರಿಕ ಸ್ವರೂಪದ ವಿಶ್ವವ್ಯಾಪಕ ಪರ್ಯಟನ ಮಾಡುವವರಿಗೆ ಇವೆಲ್ಲ ಕುತೂಹಲದ ಸಂಗತಿಗಳೇ. ಶೇಖ್ ಸಾದಿ ಕನ್ನಾಡಿನ ವಚನಸಾಹಿತ್ಯದ ಗಾಳಿಯುಂಡವರಂತೆ ಹಾಡಿದರೂ, ಅವರು ಬದುಕಿದ್ದು ಹಿಂಡನಗಲಿದ ಗಜವಾಗಿ ಊರೂರಿಗೆ ಅಲೆದ ನಮ್ಮ ಸರ್ವಜ್ಞ ಕವಿಯಂತೆ. ಅವರು ಸದಾ ಸಂಚಾರಿ; ವಿಶ್ವವಿರಾಗಿ! ಫಕೀರ ವ್ರತವನ್ನು ಸ್ವೀಕರಿಸಿ, ಊರೂರು ಸುತ್ತುತ್ತ, ಅವರು ರಚಿಸಿ ಹಾಡಿದ ಪದ್ಯಗಳಲ್ಲಿ ಒಂದು ಮಾದರಿ ಇಲ್ಲಿದೆ: |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
![]()
|
![]()
|
![]()
|
![]()
|
SITE MAP
SitePOSH |
NIRATHANKAOUR OTHER WEBSITESSubscribe |
HR and Employment Law Classes - Every Fortnight
50,000 HR PROFESSIONALS ARE CONNECTED THROUGH OUR HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
Are you looking to enhance your knowledge of HR and labor laws? Join Nirathanka's HR and Employment Law Classes-Every Fortnight—a one-of-a-kind opportunity to learn from experienced professionals and industry experts.