ಮಹಾತ್ಮ ಗಾಂಧೀಜಿಯವರು ಸದಾ ಕಾಲ ನಮಗೆ ಒಬ್ಬ ರಾಜಕೀಯ ನಾಯಕನಾಗಿ, ಸ್ವತಂತ್ರ ಹೋರಾಟಗಾರನಾಗಿ, ಸಾಮಾಜಿಕ ಸುಧಾರಣೆಯ ಪ್ರವರ್ತಕನಾಗಿ ಹಾಗೂ ತತ್ವಜ್ಞಾನಿ ಸರಳ ಜೀವಿಯಾಗಿ ಕಂಡುಬರುತ್ತಾರೆ. ಗಾಂಧೀಜಿ ಒಬ್ಬ ಪರಿಸರವಾದಿಯೂ ಹೌದೇ? ಎಂಬ ಪ್ರಶ್ನೆಗೆ ಬಹಳಷ್ಟು ಬಾರಿ ನಮಗೆ ಸಿಗುವ ಉತ್ತರ ನಕಾರಾತ್ಮಕವಾದ್ದು, ಇದಕ್ಕೆ ಕಾರಣವೆಂದರೆ ಗಾಂಧೀಜಿ ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯೂ ಪರಸರವನ್ನು ಕುರಿತ ವಿಚಾರಗಳನ್ನು ನೇರವಾಗಿ ವ್ಯಕ್ತಪಡಿಸಿಲ್ಲ. ಭಾರತದಲ್ಲಿ ಪರಿಸರ ಚಳುವಳಿಯ ಪ್ರಾರಂಭಕ್ಕೆ ಕಾರಣವಾದ ಕೆಲವು ಮೂಲ ಪರಿಕಲ್ಪನೆಗಳನ್ನು ಗಮನಿಸಿದಾಗ ಅವುಗಳಲ್ಲಿ ಗಾಂಧೀಜಿಯವರ ಚಿಂತನೆಯ ಪ್ರಭಾವವು ಗಾಢವಾಗಿರುವುದು ಕಂಡುಬರುತ್ತದೆ. ಆದ್ದರಿಂದ ಗಾಂಧೀಜಿಯವರು ಒಬ್ಬ ಪರಿಸರವಾದಿಯಾಗಿದ್ದರೆಂಬುದು ಸ್ಪಷ್ಟವಾಗಿದೆ. ಪರಿಸರ ಪ್ರಜ್ಞೆಯು ಕೇವಲ ಕಳೆದ ನಾಲ್ಕು ದಶಕಗಳಿಂದ ಮಾತ್ರ ಹೆಚ್ಚು ಮಹತ್ವವನ್ನು ಪಡೆದುಕೊಳ್ಳುತ್ತಿರುವ ವಿಷಯವಾಗಿರುವುದರಿಂದ ಪರಿಸರ ಚಳುವಳಿಯಲ್ಲಿ ಗಾಂಧೀಜಿಯವರ ಸ್ಥಾನಮಾನಗಳು ಇತ್ತೀಚೆಗೆ ಗುರುತಿಸಲ್ಪಟ್ಟಿದೆ. 2003ರಲ್ಲಿ ಜುಲಿಯಾ.ಆರ್.ಮಿಲ್ಲರ್‍ರವರು ಸಂಪಾದಕರಾಗಿರುವ Encyclopedia of Human Ecologyಯಲ್ಲಿ ಪರಿಸರವಾದಿಯಾಗಿ ಗಾಂಧೀಜಿಯವರ ಪಾತ್ರವನ್ನು ಗುರುತಿಸಲಾಗಿದೆ.
0 Comments
|
|