|
ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳ ನಿಧಿ ಬಳಕೆ ಮಾಡಿಕೊಂಡು ಎನ್‍ಜಿಒ (ಸರ್ಕಾರೇತರ ಸಂಸ್ಥೆಗಳು) ಕಾರ್ಯಾಚರಿಸುತ್ತಿವೆ. ಆ ಮೂಲಕ ಆ ದೇಶದ ನೀತಿ ನಿಯಮಗಳ ಮೇಲೆ ಪ್ರಭಾವ ಬೀರುವುದು ಒಂದೆಡೆಯಾದರೆ ಇನ್ನೊಂದೆಡೆ ಅಲ್ಲಿನ ಮೂಲ ಸಂಸ್ಥೆಗಳನ್ನು ನಾಶಪಡಿಸುವ ಕೆಲಸ ಕೂಡಾ ನಡೆಯುತ್ತಿದೆ.
ಎನ್‍ಜಿಒ ಎಂದರೆ ಆಯಾ ದೇಶದಲ್ಲಿ, ಪ್ರಾದೇಶಿಕವಾಗಿ ಮಾನವೀಯ ಸೇವೆಗಳನ್ನು ಒದಗಿಸುವ ಸಂಸ್ಥೆ ಎಂಬ ಭಾವನೆ ಪಾಶ್ಚಿಮಾತ್ಯ ದೇಶಗಳನ್ನು ಹೊರತುಪಡಿಸಿ ಉಳಿದ ದೇಶಗಳಲ್ಲಿ ಇದೆ. ಯಾಕೆಂದರೆ, ಪೊಲೀಸ್ ದೌರ್ಜನ್ಯ ಅಥವಾ ಅಧಿಕಾರಿಗಳ ದೌರ್ಜನ್ಯದ ವಿರುದ್ಧ ಹೋರಾಟ, ಬಡತನದ ವಿರುದ್ಧ ಹೋರಾಟ, ಪರಿಸರ ಸ್ನೇಹಿ ಚಟುವಟಿಕೆಗಳು ಮೊದಲಾದವುಗಳು ಎನ್‍ಜಿಒ ಗಳ ಕಾರ್ಯವ್ಯಾಪ್ತಿ. ಈ ಎಲ್ಲ ಚಟುವಟಿಕೆಗಳಿಗೆ ಹಣ ಒದಗಿಸುವುದು ವಿದೇಶಿ ಮೂಲ. ಈ ವಿದೇಶಿ ಮೂಲಗಳಿಗೆ ತಮ್ಮ ಕಾರ್ಯಸೂಚಿಯನ್ನು ಆಯಾ ದೇಶಗಳಲ್ಲಿ ಸ್ಥಾಪಿಸಬೇಕಾಗಿರುತ್ತದೆ. ಹಾಗಾಗಿ, ವಿದೇಶಿ ಮೂಲಗಳು ತಮ್ಮ ರಾಜತಾಂತ್ರಿಕ ತಂತ್ರದ ಮೂಲಕ ಅದನ್ನು ಸಾಧಿಸಲು ಪ್ರಯತ್ನಿಸುತ್ತವೆ. ಇದೊಂದು ರೀತಿಯಲ್ಲಿ ಪರೋಕ್ಷ ಯುದ್ಧವೇ ಸರಿ.
0 Comments
ಸ್ವಯಂಸೇವಾಸಂಸ್ಥೆಗಳು ಸಾಮಾಜಿಕ ಅಭ್ಯುದಯದಲ್ಲಿ ತನ್ನದೆ ಆದ ಪರಿಣಾಮಕಾರಿ ಪಾತ್ರವನ್ನು ವಹಿಸುತ್ತಿವೆ. ಜನಸಂಖ್ಯಾಸ್ಫೋಟದ ಜೊತೆಯಲ್ಲೇ ಹೆಚ್ಚುತ್ತಿರುವ ಸಮಸ್ಯೆಗಳನ್ನು ಪರಿಹರಿಸುವುದು ಸುಲಭಸಾಧ್ಯವಲ್ಲ. ಸರ್ಕಾರವೊಂದನ್ನೇ ನಂಬಿಕೊಂಡು ಕೂರುವುದು ಕೂಡಾ ಸಾಧುವಲ್ಲ. ಈ ನಿಟ್ಟಿನಲ್ಲಿ ಸರ್ಕಾರದ ಜೊತೆಜೊತೆಯಲ್ಲಿ ಜನರ ಬಾಧೆಗಳನ್ನು ನಿವಾರಿಸಲು, ಸಾಮಾಜಿಕ ಕಳಕಳಿಯಿರುವ ಮಂದಿ ಒಗ್ಗೂಡಿ ರಚಿಸಿಕೊಂಡಿರುವ ಸಂಘಟನೆಯೇ ಸ್ವಯಂಸೇವಾಸಂಸ್ಥೆ.
ಕಾನೂನು ಆಯೋಗದ ಪರಿಶೀಲನೆಗೆ ವಹಿಸಲು ಸುಪ್ರೀಂಕೋರ್ಟ್ ಚಿಂತನ
ನವದೆಹಲಿ: ದೇಶದಲ್ಲಿ ಕೆಲಸ ಮಾಡುತ್ತಿರುವ ಅಂದಾಜು 30 ಲಕ್ಷ ಸ್ವಯಂಸೇವಾ ಸಂಘಟನೆಗಳಿಗೆ (ಎನ್‌ಜಿಒ) ಬರುತ್ತಿರುವ ಹಣಕಾಸಿನ ಅನುದಾನದ ಮೇಲೆ ನಿಗಾ ಇಡುವ ಬಗ್ಗೆ ಪರಿಶೀಲನೆ ನಡೆಸುವಂತೆ ಕಾನೂನು ಆಯೋಗವನ್ನು ಕೋರಬಹುದು ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ. ಈ ವಿಚಾರದಲ್ಲಿ ತನಗೆ ಸಹಾಯ ಮಾಡುವಂತೆ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ನೇತೃತ್ವದ ವಿಭಾಗೀಯ ಪೀಠವು, ಹಿರಿಯ ವಕೀಲ ರಾಕೇಶ್ ದ್ವಿವೇದಿ ಅವರನ್ನು ಅಮಿಕಸ್ ಕ್ಯೂರಿ (ನ್ಯಾಯಾಲಯದ ಸಹಾಯಕ) ಆಗಿ ನೇಮಿಸಿದೆ. ವಿಶ್ವ ಸಂಸ್ಥೆಯ ಮಾಜಿ ಅಧ್ಯಕ್ಷ ಕೋಫಿ ಅನ್ನಾನ್ 21ನೇ ಶತಮಾನವನ್ನು ಎನ್‍ಜಿಒಗಳ ಯುಗ ಎಂದು ಬಣ್ಣಿಸಿದ್ದಾರೆ.
ಎನ್‍ಜಿಒ ಎಂದರೆ ಸರ್ಕಾರೇತರ ಸಂಸ್ಥೆ. ವಿಶ್ವಬ್ಯಾಂಕ್ ಪ್ರಕಾರ ಎನ್‍ಜಿಒಗಳು ಖಾಸಗಿ ಸಂಸ್ಥೆಗಳು. ಸಂಕಷ್ಟದಲ್ಲಿರುವವರಿಗೆ ಪರಿಹಾರ ದೊರಕಿಸುವ ಚಟುವಟಿಕೆಯಲ್ಲಿ ತೊಡಗಿರುತ್ತವೆ. ಅಲ್ಲದೆ, ಬಡವರ ಹಿತರಕ್ಷಣೆ, ಪರಿಸರ ಕಾಳಜಿ, ಪ್ರಾಥಮಿಕ ಸಾಮಾಜಿಕ ಸೇವೆಗಳನ್ನು ಒದಗಿಸುವುದು, ಇಲ್ಲವೆ ಸಮುದಾಯದ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳುವುದು. ವಾಸ್ತವವಾಗಿ, ಎನ್‍ಜಿಒಗಳು ಕಾನೂನು ಬದ್ಧವಾಗಿ ಸ್ಥಾಪಿತಗೊಂಡ ಸಂಸ್ಥೆಗಳು. ಸರ್ಕಾರದಿಂದ ಪ್ರತ್ಯೇಕಗೊಂಡು ಸ್ವತಂತ್ರವಾಗಿ ಕಾರ್ಯನಿರ್ವಹಿಸುವುವು ಮತ್ತು ಸರಳ ಅರ್ಥದಲ್ಲಿ ಹೇಳುವುದಾದರೆ ಸರ್ಕಾರೇತರ, ಲಾಭರಹಿತ, ಬದ್ಧತೆ ಇರುವ ಸಮೂಹ. ಸಾರ್ವಜನಿಕರ ಹಿತರಕ್ಷಣೆಯೇ ಈ ಸಮೂಹಗಳ ಉದ್ದೇಶ. ಮಾನವ ಹಕ್ಕುಗಳು, ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಡುವುದೇ ಇವುಗಳ ಮೂಲ ಉದ್ದೇಶವಾಗಿದೆ. ಸಾಮಾನ್ಯವಾಗಿ ಎನ್‍ಜಿಒಗಳು ಸರ್ಕಾರದಿಂದ ಪೂರ್ಣ ಪ್ರಮಾಣದಲ್ಲಿ ಅನುದಾನ ಪಡೆದುಕೊಳ್ಳುತ್ತವೆ. ಕೆಲವು ಸಂದರ್ಭಗಳಲ್ಲಿ ಭಾಗಶಃ ದೇಣಿಗೆಯನ್ನು ಪಡೆಯುತ್ತವೆ. ಸರ್ಕಾರೇತರ ಸಂಸ್ಥೆ ಎನ್ನಿಸಿಕೊಳ್ಳಲು ಸರ್ಕಾರಿ ಪ್ರತಿನಿಧಿಗಳನ್ನು ತನ್ನ ಸಂಸ್ಥೆಯ ಪ್ರತಿನಿಧಿತ್ವದಿಂದ ಅಥವಾ ಸದಸ್ಯತ್ವದಿಂದ ಹೊರಗಿರಿಸುತ್ತದೆ. ಹಾಗೆಯೇ ಎನ್‍ಜಿಒಗಳು ಎಂದಾಗ ಅವುಗಳು ಯಾವುದೇ ರಾಷ್ಟ್ರ ಇಲ್ಲವೇ ಅಂತಾರಾಷ್ಟ್ರೀಯ ಕಾನೂನುಗಳಿಗೆ ಅನುಗುಣವಾಗಿ ಕಾನೂನು ಪರಿಹಾರ ದೊರಕಿಸಿಕೊಡುವ ಸಂಸ್ಥೆಗಳಲ್ಲ ಎನ್ನುವುದು ಗಮನದಲ್ಲಿರಬೇಕು. ವಿಶ್ವ ಬ್ಯಾಂಕ್ ಪ್ರಧಾನವಾಗಿ ಎರಡು ರೀತಿಯಲ್ಲಿ ಎನ್‍ಜಿಒಗಳನ್ನು ಗುರುತಿಸಿದೆ. ಕಾರ್ಯಾತ್ಮಕ ಎನ್‍ಜಿಒಗಳು, ಸಲಹಾತ್ಮಕ ಎನ್‍ಜಿಒಗಳೆಂದು ಸ್ಥೂಲವಾಗಿ ಅವುಗಳನ್ನು ವಿಂಗಡಿಸಲಾಗಿದೆ. ಇವೆರಡರ ಪ್ರಮುಖ ಉದ್ದೇಶಗಳು ಅಭಿವೃದ್ಧಿ ಆಧಾರಿತ ಯೋಜನೆಗಳನ್ನು ವಿನ್ಯಾಸಗೊಳಿಸಿ ಅವುಗಳ ಅನುಷ್ಠಾನಗೊಳಿಸುವುದು ಎನ್‍ಜಿಒಗಳ ಪ್ರಮುಖ ಉದ್ದೇಶವಾಗಿದೆ. ಕಾರ್ಯಾತ್ಮಕ ಎನ್‍ಜಿಒಗಳನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮತ್ತು ಸಮುದಾಯ ಆಧಾರಿತ ಸಂಘಟನೆಗಳೆಂದು ವರ್ಗೀಕರಿಸಬಹುದು. ಇನ್ನೊಂದೆಡೆ ಸಲಹಾತ್ಮಕ ಎನ್‍ಜಿಒಗಳನ್ನು ಅಂತರಾಷ್ಟ್ರೀಯ ಸಂಘಟನೆಗಳೆಂದು ವಿಂಗಡಿಸಲಾಗುತ್ತದೆ. ಅವುಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯ ನಿರ್ವಹಿಸುವುದರ ಜೊತೆಗೆ ನೀತಿ ನಿರೂಪಣೆಗಳನ್ನು ರೂಪಿಸುವಲ್ಲಿ ಪ್ರಧಾನ ಪಾತ್ರವಹಿಸುತ್ತವೆ. ಕೃಪೆ : ಯೋಜನಾ, ನವೆಂಬರ್ 2011 ಜೋಮನ್ ಮ್ಯಾಥ್ಯು, ಜೊಬೈ ವರ್ಗೀಸ್ ಕನ್ನಡಕ್ಕೆ : ರಶ್ಮಿ ಎಸ್. |
|
|
|
|
| ||||||||||||||||||||||||
SITE MAP
SiteNIRATHANKA |
POSHOUR OTHER WEBSITESSubscribe |
RSS Feed