Niruta Publications
  • Home
  • About Us
    • Ramesha's Profile
  • List Your Book for Free
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
  • Home
  • About Us
    • Ramesha's Profile
  • List Your Book for Free
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
Niruta Publications

ಕರ್ನಾಟಕದಲ್ಲಿ ಪಂಚಾಯತಿರಾಜ್ ಮತ್ತು ದಲಿತರ ಸಬಲೀಕರಣ

9/26/2018

1 Comment

 
ದಲಿತರ ಸಬಲೀಕರಣಕ್ಕೆ ಪ್ರಸ್ತುತ ಮುಖ್ಯವಾಗಿ ಗುಣಮಟ್ಟದ ಶಿಕ್ಷಣ, ಉತ್ತಮ ಆರೋಗ್ಯ, ಆರ್ಥಿಕ ಭದ್ರತೆ, ರಾಜಕೀಯ ಭದ್ರತೆ, ಉದ್ಯೋಗ ಭದ್ರತೆಗಳನ್ನು ಒದಗಿಸುವುದು ಅತ್ಯಂತ ಅಗತ್ಯವಾಗಿದೆ.
 
ಪೀಠಿಕೆ
ಪ್ರಜಾಪ್ರಭುತ್ವದ ಮೂಲ ಬೇರುಗಳಾದ ಪಂಚಾಯತಿರಾಜ್ ಸಂಸ್ಥೆಗಳು ಸ್ಥಳೀಯ ಜನರಿಗೆ ಒಂದು ವ್ಯವಸ್ಥೆಯಾಗಿದ್ದು, ಸ್ಥಳೀಯ ಜನರಿಗೆ ತಮ್ಮದೇ ಆದ ಹೊಣೆಗಾರಿಕೆಯನ್ನು ನಿರ್ವಹಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಇದರಿಂದ ಸ್ಥಳೀಯ ಜನರು ಕೂಡಾ ರಾಷ್ಟ್ರ-ರಾಜ್ಯದ ಆಗು-ಹೋಗುಗಳು, ಆಡಳಿತದ ರೀತಿ-ನೀತಿಗಳು, ಸರ್ಕಾರದ ರೀತಿ-ನೀತಿಗಳು ಹಾಗೂ ರಾಜಕೀಯ ಪ್ರಜ್ಞೆಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿದೆ. ಈ ಪಂಚಾಯತಿರಾಜ್‍ನ ಮುಖ್ಯ ಉದ್ದೇಶವು ಕೇವಲ ಕೆಲವೇ ವ್ಯಕ್ತಿಗಳಿಗೆ ಅಧಿಕಾರ ನೀಡುವುದಲ್ಲ. ಬದಲಿಗೆ ಸಮಾಜದ ಎಲ್ಲಾ ವರ್ಗದವರಿಗೆ ಅಧಿಕಾರವನ್ನು ನೀಡುವುದೇ ಆಗಿದೆ. ಇದರಿಂದ ಸಮಾಜದಲ್ಲಿ ಎಲ್ಲರಿಗೂ ಸಾಮಾಜಿಕ ನ್ಯಾಯವನ್ನು ಒದಗಿಸುವಂತೆ ಆಗುತ್ತದೆ. 


Read More
1 Comment

ಅತ್ಯಾಚಾರ - ಒಂದು ವಿಶ್ಲೇಷಣೆ

7/6/2017

0 Comments

 
Picture
ಡಿಸೆಂಬರ್ 16, 2012 ರಂದು ರಾತ್ರಿ ರಾಜಧಾನಿ ದೆಹಲಿಯಲ್ಲಿ ನಡೆದ ಒಂದು ಲೈಂಗಿಕ ಅತ್ಯಾಚಾರ ಭಾರತದ ಇತಿಹಾಸದಲ್ಲಿ ಒಂದು ದುರ್ಭರ ಘಟನೆ. ಅಂದು, 23 ವರ್ಷದ ಮೆಡಿಕಲ್ ಕಾಲೇಜ್ ಫಿಜಿಯೊತೆರಪಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಆರು ಜನ ದುರುಳರು ಚಲಿಸುತ್ತಿರುವ ಬಸ್ಸಿನಲ್ಲಿ ಅತ್ಯಾಚಾರವೆಸಗಿದರು, ಬರೆಯಬಾರದಷ್ಟು ಅಸಹ್ಯವಾಗಿ ಅವಳನ್ನು ಗಾಯಗೊಳಿಸಿದರು, ಸಹಾಯಕ್ಕೆ ಬಂದ ಅವಳ ಮಿತ್ರನನ್ನು ಗಾಯಗೊಳಿಸಿದರು. ನಂತರ ಯುವತಿ ಮತ್ತು ಅವಳ ಮಿತ್ರನನ್ನು ನಗ್ನಗೋಳಿಸಿ ರಸ್ತೆಯಲ್ಲಿ ಎಸೆದು ಪರಾರಿಯಾದರು. ಯುವತಿಯ ಮಿತ್ರನ ಹೇಳಿಕೆಯ ಪ್ರಕಾರ, ಅಲ್ಲಿದ್ದ ಯಾರೂ ಅವರಿಗೆ ಸಹಾಯ ಮಾಡಲು ಮುಂದೆ ಬರಲಿಲ್ಲ. ಸುಮಾರು ಎರಡು ಗಂಟೆಗಳ ನಂತರ ಪೋಲೀಸರು ಬಂದರು, ಬಂದವರು ಈ ಕೇಸ್ ಯಾರ ವ್ಯಾಪ್ತಿಗೆ ಸೇರುತ್ತದೆಂಬುದನ್ನು ತೀರ್ಮಾನಿಸಲು ಕಾಲ ತೆಗೆದುಕೊಂಡರೇ ಹೊರತು ನೊಂದವರಿಗೆ ಸಹಾಯ ಮಾಡಲು ಮುಂದಾಗಲಿಲ್ಲ.  ಅವಳ ಮಿತ್ರನ ಹೇಳಿಕೆಗಳು ಮತ್ತು ಮಾಧ್ಯಮಗಳು ಘಟನೆಗೆ ಕೊಟ್ಟ ಪ್ರಾಮುಖ್ಯತೆ, ದೆಹಲಿಯ ನಾಗರಿಕರ ಮನಸಿನ ಮೇಲೆ ಬಹಳ ಪರಿಣಾಮ ಬೀರಿತು. ಜನರು, ಪ್ರಮುಖವಾಗಿ ಯುವಜನರು, ಬೀದಿಗಿಳಿದು ಪ್ರತಿಭಟಿಸಿದರು. ಪ್ರತಿಭಟನೆ ದೇಶದ ಉದ್ದಗಲಕ್ಕೂ ಹರಡಿತು. ಇರುಕಲಿಗೆ ಸಿಕ್ಕಿದ ದೇಶದ ಆಡಳಿತ ಕಾರ್ಯೋನ್ಮುಖವಾಗಬೇಕಾಯಿತು. ನಿಧಾನವಾಗಿ ವಿಚಾರಣೆ ಆರಂಭವಾಗಿದೆ. ಅದು ಎಲ್ಲಿಗೆ ಹೋಗುವುದೋ ತಿಳಿಯದು. ಇದೆಲ್ಲ ನಡೆಯುತ್ತಿರುವಾಗಲೇ ಆ ಯುವತಿಯನ್ನು ವಿಶೇಷ ಚಿಕಿತ್ಸೆಗೆಂದು ಸಿಂಗಪುರಕ್ಕೆ ಕಳಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಅಲ್ಲಿ ಅವಳು ಮರಣ ಹೊಂದಿದಳು. ಇಂಥ ಘಟನೆ ಇದೇ ಮೊದಲನೆಯದೇನಲ್ಲ. ಇಂಥವು ಹಲವಾರು ಜರುಗಿವೆ. ಏನು ಕಾರಣವೋ ಅವೆಲ್ಲಕ್ಕೂ ಜನ ಈ ಮಟ್ಟದಲ್ಲಿ ಪ್ರತಿಭಟಿಸಿರಲಿಲ್ಲ. ಅದೃಷ್ಟವಶಾತ್ ಡಿಸೆಂಬರ್ ಘಟನೆ ನಿಧಾನವಾಗಿಯಾದರೂ ಜನರ ಕಣ್ಣು ತೆರಸಿತು. ಆಡಳಿತಗಾರರನ್ನು ಎಚ್ಚರಿಸಿತು.

Read More
0 Comments

ಕ್ರಾಂತಿಕಾರಿ ಸಮಾಜಕಾರ್ಯ (ಜಯಪ್ರಕಾಶರ ದೃಷ್ಟಿಯಲ್ಲಿ)

7/6/2017

0 Comments

 
ಯಾವಾಗಲಾದರೂ ನಾನು ಅಧಿಕೃತ ಅರ್ಜಿಯನ್ನು ತುಂಬುವಾಗ, ನನ್ನ ಉದ್ಯೋಗವನ್ನು ಅದರಲ್ಲಿ ನಮೂದಿಸುವಾಗ, ನಾನು 'ಸಮಾಜಕಾರ್ಯಕರ್ತ' ಎಂಬ ಶಬ್ದವನ್ನು ಉಪಯೋಗಿಸುತ್ತೇನೆ. ಇಷ್ಟೇ ನನಗಿರುವ ಅಧಿಕಾರ ನಿಮ್ಮ ಮಧ್ಯೆ ನಾನಿರುವುದಕ್ಕೆ. ನಾನು ಸಮಾಜವಿಜ್ಞಾನಿಗಳ ಈ ಶಾಖೆಯ ವಿದ್ಯಾರ್ಥಿಯೂ ಅಲ್ಲ, 'ಸಮಾಜಕಾರ್ಯಕರ್ತ' ಎಂಬ ಶಬ್ದವನ್ನು ನೀವೆಲ್ಲರೂ ಅರ್ಥಮಾಡಿಕೊಂಡಿರುವ ಪ್ರಕಾರ ನಾನು ತಾಂತ್ರಿಕವಾಗಿ ಸಾಮಾಜಕಾರ್ಯಕರ್ತನೂ ಅಲ್ಲ. ಹೆಚ್ಚು ಸೂಕ್ತವಾಗಿ ಹೇಳುವುದಾದರೆ ನನ್ನನ್ನು ನಾನು ರಚನಾತ್ಮಕ ಕಾರ್ಯಕರ್ತನೆಂದು ಕರೆದುಕೊಳ್ಳಬೇಕು.  ಗಾಂಧೀಯುಗದಿಂದಲೂ ಸುಪರಿಚಿತವಾದದ್ದು ಈ ಶಬ್ದ; ಆ ಯುಗದ ಅನೇಕ ಶಬ್ದಗಳಂತೆ ಈ ಶಬ್ದವೂ ಅನುಪಯೋಗಿಯಾಗುತ್ತಿದೆಯೆನ್ನಿ

Read More
0 Comments

ಗಾಂಧೀ ವಿಚಾರ ಪರಂಪರೆಯಲ್ಲಿ ಸಮಾಜಸೇವೆ

7/6/2017

0 Comments

 
ಸಮಾಜಸೇವೆ ಎನ್ನುವ ಶಬ್ದ ಬಹಳ ಕಾಲದಿಂದ ನಮ್ಮ ದೇಶದಲ್ಲಿ ಪ್ರಚಾರದಲ್ಲಿತ್ತು. ಈಗಲೂ ಇದೆ. ಅದು ಪರಂಪರಾಗತವಾಗಿ ಬಂದ ಒಂದು ಕಲ್ಪನೆ.  ಅತಿ ಪ್ರಾಚೀನ ಕಾಲದಲ್ಲಿ, ಸುಮಾರು ನಾಲ್ಕುಸಾವಿರ ವರ್ಷಗಳಿಗಿಂತಲೂ ಹಿಂದೆ, ಅಲೆಮಾರಿ ಜೀವನ ಕ್ರಮೇಣ ಹೈನುಗಾರಿಕೆ, ಕೃಷಿ ಆಧಾರಿತ ಜೀವನಕ್ರಮವಾಗಿ ಬದಲಾವಣೆಗೊಂಡು, ಜನಸಮುದಾಯ ಒಂದು ಕಡೆಗೆ ನಿಲ್ಲುವಂತಾಯಿತು. ಜನಪದಗಳು ಅಸ್ತಿತ್ವಕ್ಕೆ ಬಂದವು, ಈ ಸಂದರ್ಭದಲ್ಲಿ ಸಂಕಟದಲ್ಲಿರುವವರಿಗೆ ಸಹಾಯ ಮಾಡಲು ವೈಯಕ್ತಿಕ ದಾನ, ಕ್ರಮೇಣ ದಾನಧರ್ಮ, ದಾನ ಸಂಹಿತೆಗಳು ನಿರ್ಮಾಣವಾದವು. ಕಾಲಕ್ರಮದಲ್ಲಿ ಆಧುನಿಕಯುಗ ಪ್ರಾರಂಭವಾದಾಗ, ಸಾರ್ವಜನಿಕ ಕಾರ್ಯಕ್ಷೇತ್ರದಲ್ಲಿ ಕೆಲವು ಗಣ್ಯ ವ್ಯಕ್ತಿಗಳಿಂದ  ಆಗ ಪ್ರಚಾರದಲ್ಲಿದ್ದ ಧರ್ಮಪ್ರೇರಿತವೆಂದು ನಂಬಲಾಗಿದ್ದ ಸಾಮಾಜಿಕ ದುಷ್ಟಾಚಾರಗಳನ್ನು, ಪದ್ಧತಿಗಳನ್ನು ನಿವಾರಿಸಿ ಸಂಕಷ್ಟಗೀಡಾಗಿದ್ದ ಜನರನ್ನು, ಮುಖ್ಯವಾಗಿ ಮೇಲ್ಜಾತಿ, ಮೇಲ್ವರ್ಗದ ವಿಧವೆಯರನ್ನು ರಕ್ಷಿಸಲು ಸಮಾಜಸುಧಾರಣಾ ಕಾರ್ಯವನ್ನು ಪ್ರಾರಂಭಿಸಿದರು. ಇವರಲ್ಲಿ ಪ್ರಮುಖರೆಂದರೆ ರಾಮ ಮೋಹನ್‍ರಾಯ, ಈಶ್ವರಚಂದ್ರ ವಿದ್ಯಾಸಾಗರ, ಶಶಿಪಾದ ಬ್ಯಾನರ್ಜಿ ಬಂಗಾಳದಲ್ಲಿ, ಎಂ.ಜಿ. ರಾನಡೆ, ರಾ.ಕೃ. ಭಂಡಾರಕರ, ಜಸ್ಟೀಸ್ ಚಂದಾವರಕರ, ಜ್ಯೋತಿರಾವ್‍ಫುಲೆ, ಪಂಡಿತಾ ರಮಾಬಾಯಿ ಮುಂಬಯಿ ಪ್ರಾಂತದಲ್ಲಿ, ಇದೇ ಸಮಯದಲ್ಲಿ ರಾಷ್ಟ್ರೀಯತಾ ಭಾವನೆ ದೇಶದಲ್ಲಿ ಹರಡತೊಡಗಿತ್ತು. ಸಮಾಜಸುಧಾರಣೆಯಿಂದ ಜನರಲ್ಲಿ ಭಿನ್ನಾಭಿಪ್ರಾಯ, ಒಡಕು ಆಗುವುದರಿಂದ, ರಾಷ್ಟ್ರೀಯತೆಗೆ ಅತ್ಯವಶ್ಯವಾದ ಜನರೆಲ್ಲರ ಒಗ್ಗಟ್ಟಿಗೆ, ಐಕ್ಯತೆಗೆ ಹೆಚ್ಚು ಪ್ರಾಶಸ್ತ್ಯ ನೀಡಬೇಕು. ಸ್ವಾತಂತ್ರ ಬಂದ ನಂತರ ಸಮಾಜಸುಧಾರಣಕಾರ್ಯ ಪ್ರಾರಂಭಿಸಬೇಕು ಎಂದು ಕೆಲವರ ವಾದ. ಈ ಗುಂಪಿನಲ್ಲಿ ಪ್ರಮುಖರೆಂದರೆ ಬಾಲಗಂಗಾಧರ ತಿಲಕ.

Read More
0 Comments

ಸರ್ವೋದಯ ಸಮಾಜದ ರೂಪು ರೇಷೆಗಳು

7/6/2017

0 Comments

 
ವಿಶ್ವದಲ್ಲಿ ಪ್ರಚಲಿತವಾಗಿ ಅನೇಕ ಸಿದ್ಧಾಂತಗಳಿವೆ. ಅವೆಂದರೆ, ಬಂಡವಾಳಶಾಹಿ ಪದ್ಧತಿ ಬಹುಜನರ ಹಿತಕಾಯುವ ಪದ್ಧತಿ, ಸರ್ವಾಧಿಕಾರಿ ಪದ್ಧತಿ, ರೈತ, ಕಾರ್ಮಿಕರ ಹಿತಾಸಕ್ತಿಯ ಪದ್ಧತಿ ಮುಂತಾದವು. ಇವುಗಳೆಲ್ಲ ಈಗ Out of Date ಆಗಿರುವ ಪದ್ಧತಿಗಳು. 'ಸರ್ವರಿಗೂ ಸಮಪಾಲು' ಎನ್ನುವ ಸರ್ವೋದಯ ಪದ್ಧತಿ ಜಾರಿಗೆ ತರುವುದು ಗಾಂಧೀಜಿಯ ಗುರಿಯಾಗಿತ್ತು. ಸರ್ವೋದಯ, ಅಂತ್ಯೋದಯದಿಂದ ಆರಂಭವಾಗಬೇಕು. ಕಟ್ಟಕಡೆಯ ಮನುಷ್ಯನ ಅಭ್ಯುದಯಕ್ಕೇ ಆದ್ಯತೆ ಇರಬೇಕು. ಇದು ಸರ್ವೋದಯ ತತ್ತ್ವ.

ಸರ್ವೋದಯ ಸಮಾಜ ರಚನೆ ನಮ್ಮ ಗುರಿಯಾಗಬೇಕು. ಸರ್ವೋದಯ ಸಮಾಜ ರಚನೆಯ ಸೂತ್ರ ಇದಾಗಿದೆ-ಶಾಸನಮುಕ್ತ, ಶೋಷಣ ರಹಿತ, ದಂಡನಿರಪೇಕ್ಷ, ಅಹಿಂಸಕ ಸಮಾಜ ರಚನೆ.

Government is the best that governs the least  ಇದು ಶಾಸನಮುಕ್ತ ಸರ್ವೋದಯ ಸಮಾಜದ ಗುರಿ.


Read More
0 Comments

    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9
    ಸಮಾಜಕಾರ್ಯ
    ಸಮುದಾಯ ಸಂಘಟನೆ


    Picture

    Social Work Learning Academy

    Join WhatsApp Channel

    Niruta Publications

    Social Work Foot Prints

    Leaders Talk

    Ramesha Niratanka

    Picture
    WhatsApp

    Picture

    MHR LEARNING ACADEMY

    Get it on Google Play store
    Download App
    Online Courses

    Picture
    50,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups


    RSS Feed

Niruta Publications Books List
File Size: 672 kb
File Type: pdf
Download File

Social Work Books
File Size: 116 kb
File Type: pdf
Download File

HR Books
File Size: 87 kb
File Type: pdf
Download File

General Books
File Size: 195 kb
File Type: pdf
Download File



SITE MAP


Site

  • HOME
  • ABOUT US
  • BLOG
  • COLLABORATE WITH NIRUTA PUBLICATIONS
  • HR BLOG
  • PUBLICATION WITH US
  • TRANSLATION & TYPING
  • VIDEOS
  • HR & EMPLOYMENT LAW CLASSES - EVERY FORTNIGHT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

NIRATHANKA

  • ​CSR
  • TREE PLANTATION PROJECT

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe


Picture
More Details

Copyright Niruta Publications 2021,    Website Designing & Developed by: www.mhrspl.com