Niruta Publications
  • Home
  • About Us
    • Ramesha's Profile
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
  • Home
  • About Us
    • Ramesha's Profile
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
Niruta Publications

ಲಂಬಾಣಿ ಸಮುದಾಯದಲ್ಲಿ ಬದಲಾವಣೆ ಮತ್ತು ಅಭಿವೃದ್ಧಿ

6/21/2017

0 Comments

 
Picture
ತಮ್ಮದೇ ಆದ ಭಾಷೆ ಮತ್ತು ಸಂಸ್ಕೃತಿಯನ್ನು ಹೊಂದಿರುವ ಸ್ಥಳೀಯ ಸಮುದಾಯಗಳ ಸಮೂಹವನ್ನು ಬುಡಕಟ್ಟು ಜನಾಂಗ, ಆದಿವಾಸಿ ಸಮಾಜ ಎಂದು ಕರೆಯುತ್ತಾರೆ. ಈ ಸಮುದಾಯಗಳ ಜನರು ತಮ್ಮದೇ ಆದ ಆಚಾರ, ವಿಚಾರ, ಪರಂಪರೆ, ನಂಬಿಕೆಗಳು, ಪದ್ಧತಿಗಳು, ಸಂಪ್ರದಾಯಗಳು, ಸಾಹಿತ್ಯ, ಸಂಗೀತ, ನೃತ್ಯಕಲೆ, ಕುಶಲಕಲೆ ಮುಂತಾದ ಹಲವಾರು ಅಂಶಗಳಿಂದ ಮುಖ್ಯ ಸಾಂಸ್ಕೃತಿಕ ವಾಹಿನಿಯಿಂದ ಭಿನ್ನವಾಗಿರುತ್ತಾರೆ. ಅವರು ಈ ಬುಡಕಟ್ಟು ಜನಾಂಗಗಳಿಗೆ ಅಳವಡಿಸಿಕೊಳ್ಳುವಂತಹ ಅಂತರ ಸಮುದಾಯ ರಚನೆ, ಸಂಸ್ಕಾರಗಳು, ರೀತಿ-ರಿವಾಜು, ವೇಷ-ಭೂಷಣ, ಆಹಾರ-ಪಾನೀಯ ಪದ್ಧತಿಗಳು, ಹವ್ಯಾಸಗಳು, ಅಭ್ಯಾಸಗಳನ್ನು ಹೊಂದಿರುತ್ತಾರೆ. ಈ ಕಾರಣಗಳಿಗಾಗಿ ಅವರು ಇತರೆ ಸಾಂಸ್ಕೃತಿಕ ಸಮುದಾಯಗಳಿಂದ, ಸಮಾಜಗಳಿಂದ ಬೇರೆಯದೇ ಆದ ಜೀವನ ಪದ್ಧತಿಯನ್ನು ಅನುಸರಿಸುತ್ತಾರೆ. ಕರ್ನಾಟಕದಲ್ಲಿ ಇಂತಹ ಅನೇಕ ಸಮುದಾಯಗಳು, ಸಮಾಜಗಳು ಅಲ್ಲಲ್ಲಿ ಕಾಣಸಿಗುತ್ತವೆ. ಅವುಗಳಲ್ಲಿ ಕಾಡುಗೊಲ್ಲರು, ಕೊರಗರು, ಕುರುಬರು, ಜೇನುಕುರುಬರು, ವಡ್ಡರು, ಮ್ಯಾಸನಾಯಕರು ಹೀಗೆ ಅನೇಕ ಬುಡಕಟ್ಟು ಜನಾಂಗಗಳನ್ನು ಗುರುತಿಸಬಹುದಾಗಿದೆ. ಇಂತಹ ಬುಡಕಟ್ಟು ಜನಾಂಗಗಳಲ್ಲಿ ಲಂಬಾಣಿ ಬುಡಕಟ್ಟು ಜನಾಂಗವೂ ಒಂದು.

Read More
0 Comments

ಭಾರತದ ಉನ್ನತ ಶಿಕ್ಷಣದ ಪ್ರಗತಿ: ಒಂದು ಅವಲೋಕನ

6/21/2017

0 Comments

 
Picture
ಸಾರಾಂಶ
ಪ್ರತಿಯೊಂದು ರಾಷ್ಟ್ರ, ಸಮಾಜ, ವ್ಯಕ್ತಿಗಳ ಸಮಗ್ರ ಅಭಿವೃದ್ಧಿಯಲ್ಲಿ ಶಿಕ್ಷಣವು ಒಂದು ಪ್ರಮುಖ ಸಾಧನವಾಗಿದೆ. ಶಿಕ್ಷಣದ ಹಂತಗಳಲ್ಲಿ ಪದವಿ-ಪೂರ್ವ ಶಿಕ್ಷಣ ಹಂತದ ನಂತರ ಬರುವ ಶಿಕ್ಷಣವೇ ಉನ್ನತ ಶಿಕ್ಷಣ ಅಥವಾ ವಿಶ್ವವಿದ್ಯಾಲಯ ಶಿಕ್ಷಣವೆನ್ನುತ್ತೇವೆ. ಈ ಉನ್ನತ ಶಿಕ್ಷಣವು ಮಾನವ ಜನಾಂಗ ಇಂದು ಎದುರಿಸುತ್ತಿರುವ ಸಂದಿಗ್ಧವಾದ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ನೈತಿಕ ಹಾಗು ಆಧ್ಯಾತ್ಮಿಕ ಸಮಸ್ಯೆಗಳ ಬಗ್ಗೆ ಚಿಂತನ-ಮಂಥನ ಮಾಡುವುದರ  ಜೊತೆಗೆ ಸೃಜನಾತ್ಮಕ ಜ್ಞಾನ ಮತ್ತು ಕೌಶಲ್ಯಗಳನ್ನು ಬೆಳೆಸುವುದರ ಮೂಲಕ ರಾಷ್ಟ್ರೀಯ ಅಭಿವೃದ್ಧಿಗೆ ತನ್ನ ಕೊಡುಗೆಯನ್ನು ನೀಡಬೇಕು. ಈ ನಿಟ್ಟಿನಲ್ಲಿ ಯೋಚಿಸಿದಾಗ ನಮ್ಮ ಭಾರತ ದೇಶದ ಉನ್ನತ ಶಿಕ್ಷಣವು ಇಂದು ಬಹುತೇಕವಾಗಿ ನಿರುದ್ಯೋಗಿ ಪದವೀಧರರನ್ನು ಸೃಷ್ಟಿಸಿ ಆ ಅಭ್ಯರ್ಥಿಗಳು ಕೇವಲ  ಪರೀಕ್ಷೆಗೆ ಸಂಬಂಧಪಟ್ಟ ಜ್ಞಾನವನ್ನು ಮಾತ್ರ ಪಡೆಯುವಂತೆ ಮಾಡುತ್ತಿದೆ. ಇದಕ್ಕೆ ಕಾರಣ  ನಮ್ಮ ದೇಶದ ಕೆಲವು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಅತ್ಯಾಧುನಿಕ ಎಲ್ಲಾ ಸೌಲಭ್ಯಗಳನ್ನು ಪಡೆದಿದ್ದರೆ,  ಇನ್ನೂ ಕೆಲವು ವಿಶ್ವವಿದ್ಯಾಲಯಗಳು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವುದು ಒಂದು ದೊಡ್ಡ ವೈಪರೀತ್ಯವಾಗಿದೆ. ಇನ್ನೂ ಈ ಉನ್ನತ ಶಿಕ್ಷಣದ ಒಟ್ಟು ದಾಖಲಾತಿ ಅನುಪಾತವು ಪ್ರಪಂಚದ ಕೆಲವು ರಾಷ್ಟ್ರಗಳಿಗೆ ಹೋಲಿಸಿದಾಗ ನಮ್ಮ ಒಟ್ಟು ದಾಖಲಾತಿಯ ಅನುಪಾತ ತುಂಬಾ ಕಡಿಮೆಯಿದೆ ಹಾಗೂ ಕ್ಯೂ ಎಸ್ ನ ಶ್ರೇಷ್ಠ ಮಟ್ಟದ ವಿಶ್ವವಿದ್ಯಾಲಯದ ರ್ಯಾಂಕ್ನಲ್ಲಿ ನಮ್ಮ ದೇಶದ  ವಿಶ್ವವಿದ್ಯಾಲಯಗಳು ತುಂಬಾ ಕೆಳಮಟ್ಟದಲ್ಲಿವೆ ಹಾಗೂ ಗುಣಾತ್ಮಕ ಶಿಕ್ಷಣ ಸಂಸ್ಥೆಗಳು ರ್ಯಾಂಕ್ಗೆ ಹೋಲಿಕೆ ಮಾಡಿದಾಗ ಭಾರತ ಕೆಳಮಟ್ಟದ ರ್ಯಾಂಕ್ನಲ್ಲಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ಲೇಖನವು ನಮ್ಮ ಭಾರತದ ಶಿಕ್ಷಣದ ರಚನೆ, ದಾಖಲಾತಿ, ಸಮತೆ, ಗುಣಾತ್ಮಕತೆ, ವಿದ್ಯಾರ್ಥಿ ಮತ್ತು ಶಿಕ್ಷಕರ ಅನುಪಾತ, ಸಂಶೋಧನೆಗಳ ಅಭಿವೃದ್ಧಿ ವಿಶ್ಲೇಷಣೆ ಮತ್ತು ಉನ್ನತ ಶಿಕ್ಷಣದ ಪ್ರಮುಖ ಸಮಸ್ಯೆಗಳಿಗೆ ಪರಿಹಾರಗಳ ಪೂರಕವಾದ ಅಂಶಗಳನ್ನು  ಇಲ್ಲಿ ಅವಲೋಕಿಸಲಾಗಿದೆ.

Read More
0 Comments

ಸಮಾಜಕಾರ್ಯ ಚಿಂತನೆಗಳಿಗೊಂದು ಸ್ಥಳೀಯ ದೃಷ್ಟಿಕೋನ

6/21/2017

0 Comments

 
Picture
Picture
ಕೃತಿ :  ಸಮಾಜಕಾರ್ಯದ ತಾತ್ತ್ವಿಕ ಸಿದ್ಧಾಂತ, ಶರಣರ ಮತ್ತು ದಾಸರ ಜೀವನ ದೃಷ್ಟಿ
ಲೇಖಕರು : ಡಾ. ಸಿ.ಆರ್. ಗೋಪಾಲ
ಪ್ರಕಾಶಕರು : ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಮೈಸೂರು
ವರ್ಷ  : 2014
ಪುಟಗಳು : 84
ಬೆಲೆ : ರೂ. 60/
ತಿರುಳು
ಸಮಾಜಕಾರ್ಯ ಸ್ನಾತಕೋತ್ತರ ಪದವಿ ಮತ್ತು ಸಂಶೋಧನೆಯ ಹಿನ್ನೆಲೆ ಇರುವ ಡಾ.ಸಿ.ಆರ್.ಗೋಪಾಲ ಸಮಾಜಕಾರ್ಯದ ತಾತ್ತ್ವಿಕ ಸಿದ್ಧಾಂತ-ಶರಣರ ಮತ್ತು ದಾಸರ ಜೀವನ ದೃಷ್ಟಿ ಎಂಬ ಸಂಶೋಧನಾತ್ಮಕ ಕೃತಿಯನ್ನು ರಚಿಸಿದ್ದಾರೆ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಮೈಸೂರು ಪ್ರಕಟಿಸಿರುವ ಈ ಕೃತಿಗೆ ಡಾ. ಎಚ್.ಎಂ. ಮರುಳಸಿದ್ಧಯ್ಯನವರು ಸಮಾಜಕಾರ್ಯದ ತಾತ್ತ್ವಿಕ ಸಿದ್ಧಾಂತಕ್ಕೊಂದು ತಿದ್ದುಪಡಿ ಎಂಬ ತಲೆಬರಹದಡಿ ಮುನ್ನುಡಿಯನ್ನು ನೀಡಿದ್ದಾರೆ.

Read More
0 Comments

ಕರ್ನಾಟಕದಲ್ಲಿ ಸಿದ್ಧಿ ಬುಡಕಟ್ಟು ಮಕ್ಕಳ ಸಾಮಾಜಿಕ ಆರ್ಥಿಕ ಪ್ರಗತಿ

6/21/2017

0 Comments

 
Picture
ಮಾನವನನ್ನು ಪ್ರಗತಿಪಥದೆಡೆಗೆ ಕೊಂಡೊಯ್ಯುವ ಪ್ರಮುಖ ಸಾಧನವೇ ಜ್ಞಾನ. ಇಂತಹ ಜ್ಞಾನವನ್ನು ಮಾನವನು ಹುಟ್ಟಿನಿಂದಲೇ ಹಂತ-ಹಂತವಾಗಿ ಕುಟುಂಬದ ಸದಸ್ಯರೊಂದಿಗೆ ನೆರೆಹೊರೆಯವರೊಂದಿಗೆ ಕಲಿತಿರುತ್ತಾನೆ. ಹೀಗೆ ಸಂಪಾದಿಸಿದ ಜ್ಞಾನವನ್ನು ವ್ಯವಸ್ಥಿತ ರೀತಿಯಲ್ಲಿ ಮಾರ್ಪಡಿಸಿ ಅಡಗಿರುವ ಜ್ಞಾನ ಸಂಪತ್ತಿನ ಪ್ರಭೆಯನ್ನು ಹೊರತಂದು ಪ್ರಜ್ವಲಿಸುವಂತೆ ಮಾಡುವದೇ ಶಿಕ್ಷಣವಾಗಿದೆ. ಶಿಕ್ಷಣ ಎಂಬುದು ಇಂದು ನಿನ್ನೆಯದಲ್ಲ, ಮಾನವನ ಉಗಮದೊಂದಿಗೇನೇ ಹುಟ್ಟಿಕೊಂಡ ವ್ಯವಸ್ಥೆಯಾಗಿದೆ. ಔಪಚಾರಿಕ ಶಿಕ್ಷಣದ ವಿಧಾನವೇ ವ್ಯವಸ್ಥಿತ ಕ್ರಮಬದ್ಧವಾದ ಜ್ಞಾನದ ಜೋಡಣೆಯಾಗಿದೆ. ವ್ಯಕ್ತಿಯ ಚಟುವಟಿಕೆ, ವರ್ತನೆ, ನಡವಳಿಕೆ ಹಾಗೂ ಅವನು ಪಡೆದಿರುವ ಜ್ಞಾನವನ್ನು ಪ್ರತಿನಿಧಿಸುವುದಲ್ಲದೆ, ಸಮಾಜದಲ್ಲಿ ಅವನ ಸ್ಥಾನಮಾನ ಮುಂತಾದ ಅವನ ಸಂಪೂರ್ಣ ವ್ಯಕ್ತಿತ್ವದ ಪ್ರತೀಕವಾಗುತ್ತದೆ. ಆದ್ದರಿಂದ ವ್ಯಕ್ತಿಯು ಮೌಲ್ಯಯುತವಾದ ಸ್ಥಾನಮಾನ ಹೊಂದಬೇಕಾದರೆ, ನಯ, ವಿನಯ, ಗುರು ಹಿರಿಯರನ್ನು ಗೌರವಿಸುವುದು ಮುಂತಾದ ಸದ್ಗುಣಗಳು ವ್ಯಕ್ತಿಯಲ್ಲಿ ನೆಲೆಸುವಂತೆ ಮಾಡುವುದೇ ಶಿಕ್ಷಣವಾಗಿದೆ. ಶಿಕ್ಷಣವು ಅಸತ್ಯದಿಂದ-ಸತ್ಯದೆಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವುದಾಗಿದೆ.

ರವೀಂದ್ರನಾಥ ಚಕ್ರವರ್ತಿ. ಎಸ್.
ಪಿ.ಎಚ್.ಡಿ. ವಿದ್ಯಾರ್ಥಿ, ಸಮಾಜಶಾಸ್ತ್ರ ಮತ್ತು ಸಂಶೋಧನಾ ವಿಭಾಗ, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ-577451
 
ಡಾ. ಚಂದ್ರಶೇಖರ್
ಪ್ರಾಧ್ಯಾಪಕರು, ಸಮಾಜಶಾಸ್ತ್ರ ಮತ್ತು ಸಂಶೋಧನಾ ವಿಭಾಗ, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ-577451
0 Comments

ಕಾರ್ಯಕ್ಷೇತ್ರದಲ್ಲಿ ಸಂವಹನ ನೀತಿ ಮತ್ತು ಸಂಸ್ಕೃತಿ ನಿರ್ಮಾಣ

6/21/2017

0 Comments

 
Picture
ಕಾರ್ಯಕ್ಷೇತ್ರದಲ್ಲಿ ಸಂವಹನ ಎಂಬುದು ನಮ್ಮ ಉತ್ತಮ ಮಿತ್ರನು ಅಥವಾ ವೈರಿಯು ಆಗಬಹುದು ಉತ್ತಮ ರೀತಿಯಿಂದ ನಿರ್ವಹಿಸಿದರೆ ಕಾರ್ಯಕ್ಷೇತ್ರದಲ್ಲಿ ಸಂಸ್ಕೃತಿಯನ್ನು ಬಿಂಬಿಸಬಹುದು. ಆದ್ದರಿಂದ ಉತ್ತಮ ಹಾಗೂ ಬಲವಾದ ಸಂಸ್ಥೆಗಳು ಕೆಲಸದ ಸ್ಥಳದಲ್ಲಿ ಅಡೆತಡೆಗಳನ್ನು ನಿವಾರಿಸಿ ಸಮಸ್ಯೆಗಳನ್ನು ಬಗೆಹರಿಸುತ್ತದೆ, ಕಾರ್ಯಕ್ಷೇತ್ರದ ಉತ್ತಮ ಸಂಬಂಧಗಳು ಒಳ್ಳೆಯ ಉತ್ಪಾದಕತೆಯನ್ನು ನೀಡಬಲ್ಲವು.

Read More
0 Comments

ಲೈಂಗಿಕ ಶೋಷಣೆಯ ಸಾಂಪ್ರದಾಯಿಕತೆ ಮತ್ತು ವಾಣಿಜ್ಯೀಕರಣ

6/21/2017

0 Comments

 
Picture
ಸಾರಾಂಶ
ಲೈಂಗಿಕ ಶೋಷಣೆ ಎಂಬ ಸಂದರ್ಭವು ವಿಭಿನ್ನ ರೀತಿಯ ಆಯಾಮಗಳನ್ನು ಹೊಂದಿದ್ದು ಅದರಲ್ಲಿ ವೇಶ್ಯಾವಾಟಿಕೆಯೂ ಒಂದಾಗಿದೆ. ಕಾಲಘಟ್ಟಗಳಲ್ಲಿ ಈ ವಿಷಯವನ್ನು ಅವಲೋಕಿಸಿದರೆ ಒಂದು ಹಂತದಲ್ಲಿ ತುಂಬಾ ಗೌರವದ ಸ್ಥಾನವನ್ನು ಪಡೆದುಕೊಂಡಿದ್ದೂ ಉಂಟು. ಆದರೆ ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳಿಗೆ ಅನುಸರಿಸಿ ಮತ್ತು ದೇಶದಲ್ಲಿ ರಾಜ್ಯದಲ್ಲಿ ಆದಂತಹ ರಾಜಕೀಯ ವ್ಯವಸ್ಥೆಯಿಂದಾಗಿ ಇದು ಸಾಕಷ್ಟು ಸಂದರ್ಭಗಳಲ್ಲಿ ಸ್ಥಿತ್ಯಂತರಕ್ಕೆ ಒಳಪಟ್ಟಿದ್ದೂ ಉಂಟು. ಮೂಲದಲ್ಲಿ ಸಾಂಪ್ರದಾಯಿಕವಾಗಿ ಹುಟ್ಟಿಕೊಂಡ ಒಂದು ವ್ಯವಸ್ಥೆಯು ಪ್ರಸ್ತುತ ಫ್ಲೆಶ್ ಟ್ರೇಡ್ ಎಂಬ ಹೆಸರಿನಿಂದ ಗುರುತಿಸುವ ಮಟ್ಟದವರೆಗೂ ವಾಣಿಜ್ಯೀಕರಣಗೊಂಡಿದೆ. ಇಂಥ ಸಂದರ್ಭದಲ್ಲಿ ಲೈಂಗಿಕ ಶೋಷಣೆಯ ಸಾಂಪ್ರದಾಯಿಕ ಮತ್ತು ವ್ಯವಹಾರಿಕ ಆಯಾಮವನ್ನು ಗುರುತಿಸಲು ಪ್ರಸ್ತುತ ಲೇಖನದಲ್ಲಿ ಪ್ರಯತ್ನಿಸಲಾಗಿದೆ.

Read More
0 Comments

ಭಾರತದ ಸಮಾಜಕಾರ್ಯ ಕ್ಷೇತ್ರದ ನವರತ್ನಗಳು : ಲಕ್ಷಾಂತರ ಮಂದಿಯ ಜೀವನವನ್ನು ಬದಲಾಯಿಸಿದ ಮಹಿಳಾ.....

6/21/2017

0 Comments

 
Picture
ಶಿಕ್ಷಣ ವಂಚಿತ ಬಡವರಿಗೆ ಶಿಕ್ಷಣ, ಉಪಯುಕ್ತವಾದ ಕೌಶಲ್ಯಗಳು ಮತ್ತು ಸಬಲೀಕರಣವು ಕ್ಯಾಪ್ ಸಂಸ್ಥೆಯ ಸಂಸ್ಥಾಪನ ಅಧ್ಯಕ್ಷೆಯಾದ ಡಾ. ನಳಿನಿ ಗಂಗಾಧರನ್ರ ಬೃಹತ್ ಬಡತನ ನಿರ್ಮೂಲನೆ ಉಪಕ್ರಮದ ಮೂರು ಮೂಲಭೂತ ಅಂಶಗಳು. ಮದ್ರಾಸ್ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ನಿಂದ ಸಮಾಜಕಾರ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ನಳಿನಿಯವರಿಗೆ ಸುಮಾರು ಮೂರುವರೆ ವರ್ಷಕ್ಕಿಂತ ಹೆಚ್ಚಿನ ಕಾಲ ಸೇವಾ ಸಮಾಜಮ್ ಬಾಯ್ಸ್ ಹೋಮ್ ನ ನಿರ್ದೇಶಕರಾದ ಲೇ|| ಎಂ.ಎಸ್.ಎಸ್. ನಂಬೂದಿರಿಯವರೊಂದಿಗೆ ಕಾರ್ಯನಿರ್ವಹಿಸುವ ಅವಕಾಶ ಸಿಕ್ಕಿತು, ಮೊದಲು ಸಾಮಾಜಿಕ ಕಾರ್ಯಕರ್ತರಾಗಿ ನಂತರ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು. ನಂಬೂದಿರಿಯವರು ನಿರ್ಗತಿಕ ಮಕ್ಕಳು ಮತ್ತು ಯುವ ಜನರಿಗೆ ನಾವೀನ್ಯ ಶಿಕ್ಷಣದಿಂದ ಮತ್ತು ಕೌಶಲ್ಯಗಳ ಅಭಿವೃದ್ಧಿಯಿಂದ ಅವರು ಬಡತನದಿಂದ ವಿಮುಕ್ತಿ ಪಡೆಯುವಂತೆ ಮಾಡಿದ ಒಬ್ಬ ಮಹಾನ್ ಸಾಧಕ. ನಳಿನಿಯವರು ತಮ್ಮ ಈ ಆರಂಭಿಕ ಅನುಭವಗಳನ್ನು ನಂತರದ ವರ್ಷಗಳಲ್ಲಿ ಭಾರತ ಮತ್ತು ಇತರೆ ದೇಶಗಳಲ್ಲಿ ಬೃಹತ್ ಸಾಮಾಜಿಕ-ಆರ್ಥಿಕ ಚಳುವಳಿಯಾಗಿ ವಿಸ್ತರಿಸಿದರು. ಎಂ.ಎಸ್.ಎಸ್.ಡಬ್ಲ್ಯೂ.ನ ವಿದ್ಯಾರ್ಥಿಯಾಗಿ ನಾನು ನಳಿನಿಯವರಲ್ಲಿ ಜೀವನದ ಸದುದ್ದೇಶವನ್ನು ಹೊಂದಿದ ಆತ್ಮವಿಶ್ವಾಸವುಳ್ಳ ಒಬ್ಬ ವ್ಯಕ್ತಿಯನ್ನು ಕಂಡಿದ್ದೇನೆ. ತಮ್ಮ ಜೀವನದಲ್ಲಿ ನಳಿನಿಯವರು ಅತ್ಯಂತ ಸೂಕ್ತ ಜೀವನ ಸಂಗಾತಿಯನ್ನು ಆರಿಸಿಕೊಂಡಿದ್ದಾರೆ.

ಎಂ.ಎಚ್. ರಮೇಶ
0 Comments

ಯುಗಾಂತ  ಒಂದು ಅವಲೋಕನ

6/20/2017

0 Comments

 
Picture
ತಿರುಳು
ಡಾ. ಎಂ. ಬಸವಣ್ಣರವರು ನಿವೃತ್ತ ಮನೋವಿಜ್ಞಾನ ಪ್ರಾಧ್ಯಾಪಕರು ಹಾಗೂ ಕನ್ನಡದಲ್ಲಿ ಪ್ರಸಿದ್ಧ ಬರಹಗಾರರು. ಯುಗಾಂತ ಲೇಖನವು ಮಹಾಭಾರತದಲ್ಲಿನ ಸಾಮಾಜಿಕ ಬದುಕನ್ನು ವಿಶ್ಲೇಷಣೆ ಮಾಡುವ ಒಂದು ಪ್ರಯತ್ನವಾಗಿದೆ. ಪಾತ್ರದಲ್ಲಿರುವ ದೈವತ್ವವನ್ನು ಉತ್ಪ್ರೇಕ್ಷಿಸಿಲ್ಲ. ಪಾತ್ರಗಳನ್ನು ಅವರ ಇಷ್ಟ ಹಾಗೂ ಕಷ್ಟ, ಪ್ರೀತಿ, ದ್ವೇಷ ಮತ್ತು ಮಹತ್ವಾಕಾಂಕ್ಷೆಗಳಿಂದ ಸಾಮಾನ್ಯ ಮಾನವರ ರೀತಿ ಚಿತ್ರಿಸಲಾಗಿದೆ.

Read More
0 Comments

ಭಾರತದಲ್ಲಿನ ಸಮಾಜಕಾರ್ಯ ವೃತ್ತಿಯ ನವರತ್ನಗಳು

6/20/2017

0 Comments

 
Picture
ಲಕ್ಷಾಂತರ ಮಂದಿಯ ಜೀವನವನ್ನು ಬದಲಾಯಿಸಿದ ಮಹಿಳಾ ಸಾಮಾಜಿಕ ಕಾರ್ಯಕರ್ತರು
ಶಾಂತಿ 
ರಂಗನಾಥನ್
ಶಾಂತಿ ರಂಗನಾಥನ್‍ರವರು ಸಾಮಾಜಿಕ ಕಾರ್ಯಕರ್ತರು ಮತ್ತು ವಿರಳ ವ್ಯಕ್ತಿ. ಅವರು ತಮ್ಮ ಇಳಿವಯಸ್ಸಿನಲ್ಲೇ ತಮ್ಮ ಗಂಡನನ್ನು ಕಳೆದುಕೊಂಡು ತಮ್ಮ ಖಾಸಗಿ ಜೀವನದಲ್ಲಿ ಬಹಳ ನೋವನ್ನುಂಡವರು. ಅವರು ವಿಶ್ವದರ್ಜೆಯ ಸಂಸ್ಥೆಯನ್ನು ಸ್ಥಾಪಿಸಲು ಇದೂ ಒಂದು ಮುಖ್ಯ ಕಾರಣವಾಯಿತು. ಈ ಸಂಸ್ಥೆಯ ಮೂಲಕ ಸಾವಿರಾರು ವ್ಯಕ್ತಿಗಳಿಗೆ ಮತ್ತು ಕುಟುಂಬಕ್ಕೆ ಪರಿವರ್ತನೆಯನ್ನು ತಂದಿದ್ದಾರೆ. ನಾಲ್ಕು ದಶಕಗಳ ಹಿಂದೆ ಮದ್ರಾಸ್ ಸ್ಕೂಲ್ ಆಫ್ ಸೋಶಿಯಲ್ ವರ್ಕ್‍ನಲ್ಲಿ ಆಕೆಯು ನನ್ನ ಸಹ ವಿದ್ಯಾರ್ಥಿಯಾಗಿದ್ದು ತರುವಾಯ ಟಿ.ಟಿ ರಂಗನಾಥನ್ ಕ್ಲಿನಿಕಲ್ ರಿಸರರ್ಚ್‍ ಫೌಂಡೇಷನ್ (ಟಿಟಿಆರ್‍ಸಿಆರ್‍ಎಫ್) ನ ಆರಂಭದ ವರ್ಷಗಳಲ್ಲಿನ ನನ್ನ ಅವರ ಒಡನಾಟವು ನನ್ನ ಒಂದು ಅದೃಷ್ಟವೆಂದೇ ಹೇಳಬಹುದು.

ಡಾ.ಟಿ.ಕೆ. ನೈಯ್ಯರ್
ಸಮಾಜಕಾರ್ಯದ ಪ್ರೊಫೆಸರ್ ಮತ್ತು ಮಾಜಿ ಪ್ರಿನ್ಸಿಪಾಲರು
ಮದ್ರಾಸ್ ಸ್ಕೂಲ್ ಆಫ್ ಸೋಶಿಯಲ್ ವರ್ಕ್‍

Read More
0 Comments

ಹೈನುಗಾರಿಕೆ ಮೂಲಕ ಸಣ್ಣ ರೈತರ ಜೀವನೋಪಾಯ ಸುಧಾರಣೆಯಲ್ಲಿ ಸಂಸ್ಥೆಯ ಪಾತ್ರ.....................

6/20/2017

0 Comments

 
ಸಾರಾಂಶ
ಜನರ ಅದರಲ್ಲೂ ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಅವರ ಆದಾಯದ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಕೃಷಿಯೊಂದಿಗೆ ಪಶು ಸಂಗೋಪಣೆ, ಮೀನು ಸಾಕಾಣಿಕೆ, ಜೇನು ಸಾಕಾಣಿಕೆ, ಕೋಳಿ ಸಾಕಾಣಿಕೆ, ಹೈನುಗಾರಿಕೆಯಂಥ ಕೃಷಿ ಸಂಬಂಧೀ ಚಟುವಟಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಹೈನುಗಾರಿಕೆಯು ಸಣ್ಣ, ಅತೀ ಸಣ್ಣ ರೈತರು ಮತ್ತು ಭೂ ರಹಿತರಿಗೆ ಅದರಲ್ಲೂ ಮಹಿಳೆಯರಿಗೆ ಕಡಿಮೆ ದರದ ಆಹಾರ ಮತ್ತು ಪೋಷಕಾಂಶ ಒದಗಿಸುವುದರ ಜೊತೆಗೆ ಅತೀ ಮುಖ್ಯವಾಗಿ ಸಹಾಯಕಾರಿಯಾಗಿದೆ. ಹೈನುಗಾರಿಕೆಯು ವರ್ಕೋಡು ಗ್ರಾಮದ ಸಣ್ಣ ಮತ್ತು ಅತಿ ಸಣ್ಣ ರೈತರ ಉಪ-ಆದಾಯದ ಮುಖ್ಯವಾದ ಮೂಲವಾಗಿದೆ. `ನಿವೃತ್ತ್ ಹೆಸರಿನ ಸ್ವಯಂ ಸೇವಾ ಸಂಸ್ಥೆಯು ಅಲ್ಲಿಯ ಜನರನ್ನು ಸಬಲೀಕರಿಸಿ, ಸಹಾಯ-ಸಹಕಾರಗಳನ್ನೊದಗಿಸಿ ಹೈನುಗಾರಿಕೆಯನ್ನು ಪ್ರೋತ್ಸಾಹಿಸಲಾಗಿದೆ; ಜನರೂ ಸಂಸ್ಥೆಯನ್ನು ನಂಬಿ, ಅನುಸರಿಸಿದರು, ಹಾಗೂ ಈಗ ಅದರ ಪ್ರತಿಫಲವನ್ನು ಸವಿಯುತ್ತಿದ್ದಾರೆ. ಪ್ರಸಕ್ತ ಲೇಖನದಲ್ಲಿ ಹೈನುಗಾರಿಕೆಯ ಉಪಯೋಗಗಳು ಮತ್ತು ಪರಿಣಾಮಗಳನ್ನು ಹೊರತೆಗೆಯುವುದರೊಂದಿಗೆ ಸಾಮಾಜಿಕ-ಆರ್ಥಿಕ ಪರಿಸ್ಥಿತಿ, ಒಳಗೊಂಡಿರುವ ಸವಾಲುಗಳು ಹಾಗೂ ಸಂಸ್ಥೆಯ ವಹಿಸಿರುವ ಪಾತ್ರಗಳನ್ನು ಕುರಿತು ವಿಶ್ಲೇಷಿಸುವ ಪ್ರಯತ್ನ ಮಾಡಲಾಗಿದೆ. ಅಧ್ಯಯನದ ಸಮಸ್ಯೆಯನ್ನು ಶೋಧಿಸಲು ಸಂಖ್ಯಾತ್ಮಕ ಮತ್ತು ಗುಣಾತ್ಮಕ ದತ್ತಾಂಶಗಳೆರಡನ್ನೂ ಮೇಳೈಸಿಕೊಂಡಿರುವ ಮಾಹಿತಿಯನ್ನು ಬಳಸಲಾಗಿದೆ. ಸಂಖ್ಯಾತ್ಮಕ ಹಾಗೂ ಗುಣಾತ್ಮಕಗಳೆರಡೂ ಪ್ರಕಾರದ ದತ್ತಾಂಶಗಳನ್ನು ಸಂಗ್ರಹಿಸಲು ಮನೆ-ಮನೆ ಸಮೀಕ್ಷೆ ಮತ್ತು ಸಹಭಾಗಿತ್ವದ ಚರ್ಚಾ ಪದ್ಧತಿಗಳನ್ನು ಬಳಸಲಾಗಿತ್ತು. ಸಾಧನೆ ಮತ್ತು ಫಲಿತಗಳನ್ನು ಇಲ್ಲಿ ಶೇಕಡಾವಾರು ತೋರಿಸಲಾಗಿದೆ. `ರೈತರು ತಮಗಿರುವ ಜಮೀನಿನ ಸ್ವಲ್ಪ ಭಾಗವನ್ನು ಮೇವು ಬೆಳೆಯಲು ಬಳಸಿ, ಹೈನುಗಾರಿಕೆಯನ್ನು ಮಾಡಿದರೆ ತಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಬಹುದು ಎಂಬುದನ್ನು ಈ ಅಧ್ಯಯನದಿಂದ ಕಂಡುಕೊಳ್ಳಲಾಗಿದೆ. ಆದರೆ ಸಮಸ್ಯೆಯೆಂದರೆ ಅದರಲ್ಲಿ ಕೆಲವರಿಗೆ ಭೂಮಿಯೇ ಇಲ್ಲಾ, ಆದಾಗ್ಯೂ ಅವರು ಹೈನುಗಾರಿಕೆಯನ್ನು ನಿರ್ವಹಿಸುತ್ತಿರುವುದೇ ವಾಸ್ತವ ಸೌಂದರ್ಯಯುತ ಸತ್ಯ. ಹೈನುಗಾರಿಕೆಯು ವರ್ಕೋಡು ಗ್ರಾಮಸ್ಥರ ಜೀವನವನ್ನು ಉನ್ನತೀಕರಿಸಿದೆ.

Read More
0 Comments

ಒಲಿಂಡಾ ಪೆರೇರಾ ಕರ್ನಾಟಕ ಸಮಾಜಕಾರ್ಯ ಕ್ಷೇತ್ರದ ಪೂಜನೀಯರು

6/20/2017

0 Comments

 
Picture
ಒಲಿಂಡಾ ಪೆರೇರರವರು ಮಂಗಳೂರು ಕ್ಯಾಥೊಲಿಕ್ ಕುಟುಂಬದಲ್ಲಿ ಜನಿಸಿದರು. ಮೂವರು ಸಹೋದರಿಯರಲ್ಲಿ ಒಲಿಂಡಾ ಪೆರೇರರವರು ಕಿರಿಯರು. ಕರ್ನಾಟಕದಲ್ಲಿ ಸಮಾಜಕಾರ್ಯ ಶಿಕ್ಷಣ ಕ್ಷೇತ್ರದಪ್ರವರ್ತಕರಲ್ಲಿ ಪ್ರಮುಖರು. ರೋಶನಿ ನಿಲಯ (School of Social Work) ದ ಸ್ಥಾಪಕ ಪ್ರಾಂಶುಪಾಲರಾಗಿ Dr. OlindaPereira ಮಹೋನ್ನತ ಗುರು ಹಾಗೂ ಆದರ್ಶಪ್ರಾಯರಾಗಿ ಸಂಸ್ಥೆಯನ್ನುಕಟ್ಟುವಲ್ಲಿ ಶ್ರಮ ವಹಿಸಿದ್ದಾರೆ. ಇವರು ನಗರ ಸಮುದಾಯ ಅಭಿವೃದ್ಧಿ ಕೇಂದ್ರ ಸ್ಥಾಪಿಸಿದರು (UCDC), ಹೋಂ ಸೈನ್ಸ್ ಇನ್ಸ್ಟಿಟ್ಯೂಟ್, ಅಂಧರ ಶಾಲೆ (Blind School),  ಸೇವಾ ಏಜೆನ್ಸಿ,  ಮಹಿಳೆಯರವಸತಿ  ನಿಲಯ ಸ್ಥಾಪಿಸಿದರು.  ಶಿಕ್ಷಣ, ಮಹಿಳಾ  ಸಬಲೀಕರಣಕ್ಕೆ ಪ್ರಶಸ್ತಿನೀಡಿದರು. ಪ್ರಸ್ತುತ ವಿಶ್ವಾಸ್ ಟ್ರಸ್ಟ್ ನಿರ್ದೇಶಕರಾಗಿ ವೃದ್ಧರಿಗೆ ಸಮಗ್ರ ಸಮುದಾಯ ಆಧಾರಿತ ಕಾಳಜಿ ನೀಡಿ ಪೋಷಿಸುತ್ತಿದ್ದಾರೆ.
​15ನೇ ಆಗಸ್ಟ್ 2015ಕ್ಕೆ 90 ವರುಷಗಳನ್ನು ದಾಟುತ್ತಿರುವ ಡಾ. ಒಲಿಂಡಾ ಪೆರೇರಾ ತನ್ನ ತೊಂಬತ್ತನೇ ವಯಸ್ಸಿನಲ್ಲಿಯೂ ಇನ್ನೂ ಹದಿಹರೆಯದ ಜೀವನೋತ್ಸಾಹವನ್ನು ಇಟ್ಟುಕೊಂಡಿದ್ದಾರೆ. ಡಾ. ಒಲಿಂಡಾಪೆರೇರಾ ಸಮಾಜಕಾರ್ಯ ಶಿಕ್ಷಣ ಕ್ಷೇತ್ರದಲ್ಲಿ ಒಂದು ನಕ್ಷತ್ರ ಎಂದರೆ ಅತಿಶಯೋಕ್ತಿಯಾಗಲಾರದು.  ಇವರ ಸಂದರ್ಶನ ಮಾಡಿದ ಶ್ರೀ ಎಸ್.ಎನ್. ಗೋಪಿನಾಥ್ ಮತ್ತು ಶ್ರೀ ಭೀಮರಾವ್ ಡಾ. ಒಲಿಂಡಾಪೆರೇರಾ ಅವರ ವಿದ್ಯಾರ್ಥಿಗಳು. ಇವರಿಬ್ಬರಿಗೆ ನಾನು ಕೃತಜ್ಞ.
- 
ಸಂಪಾದಕ

Read More
0 Comments

ಸಾಮಾಜಿಕ ಸಮಸ್ಯೆಯಾಗುತ್ತಿರುವ ಲೈಂಗಿಕಾಪರಾಧ........

6/20/2017

0 Comments

 
ಸಾಮಾಜಿಕ ಸಮಸ್ಯೆಯಾಗುತ್ತಿರುವ ಲೈಂಗಿಕಾಪರಾಧ ಮತ್ತು ಏಡ್ಸ್ ರೋಗವನ್ನು ತಡೆಯುವ ಹಿನ್ನೆಲೆಯಲ್ಲಿ  ಶಿಕ್ಷಣ ಕ್ಷೇತ್ರದಲ್ಲಿ ಲೈಂಗಿಕ ಶಿಕ್ಷಣದ ಅವಶ್ಯಕತೆ
Picture
ತಿರುಳು
ಲೈಂಗಿಕಾಪರಾಧ ಮತ್ತು ಏಡ್ಸ್ ರೋಗ ಸಮಾಜವನ್ನು ಆವರಿಸುತ್ತಿದೆ. ಈ ಪಿಡುಗನ್ನು ನಿವಾರಿಸಲು ಸರಕಾರವು ಪೂರ್ಣ ಸಫಲತೆಯನ್ನು ಕಾಣುತ್ತಿಲ್ಲ. ಆ ಹಿನ್ನೆಲೆಯಲ್ಲಿ   ಈ ಸಮಸ್ಯೆಯನ್ನು ನಿವಾರಿಸುವ ಶಿಕ್ಷಣದ ಪದ್ಧತಿಯನ್ನು ಪ್ರಾಚೀನ ಶಾಸ್ತ್ರಗಳು ಕೊಟ್ಟಿವೆ. ಈ ವಿಚಾರಧಾರೆಯನ್ನು ಸಂಶೋಧನಾತ್ಮಕವಾಗಿ ಸರಕಾರಕ್ಕೆ ಮತ್ತು ಶಿಕ್ಷಣತಜ್ಞರಿಗೆ ತಿಳಿಸಿ, ಇಂದಿನ ಶಿಕ್ಷಣದಲ್ಲಿ ಈ ಶಿಕ್ಷಣವನ್ನು ಕೂಡ ಅಳವಡಿಸಿ, ಸಮಾಜದ ಯುವಜನರಿಗೆ ತಿಳಿಸುವ ಯೋಗ್ಯ ಯೋಜನೆ ಕೈಗೊಳ್ಳುವ ಮೂಲಕ ಸಾಮಾಜಿಕ ಸಮಸ್ಯೆಯನ್ನು ಪರಿಹರಿಸಲು ಪೂರಕವಾದ ವಿಶೇಷ ಸಂಶೋಧನಾತ್ಮಕವಾದ ಲೇಖನ.

Read More
0 Comments

    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9
    ಸಮಾಜಕಾರ್ಯ
    ಸಮುದಾಯ ಸಂಘಟನೆ


    Picture

    Social Work Learning Academy

    Join WhatsApp Channel

    Niruta Publications

    Social Work Foot Prints

    Leaders Talk

    Ramesha Niratanka

    Picture
    WhatsApp

    Picture

    MHR LEARNING ACADEMY

    Get it on Google Play store
    Download App
    Online Courses

    Picture
    50,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups


    RSS Feed

Niruta Publications Books List
File Size: 672 kb
File Type: pdf
Download File

Social Work Books
File Size: 116 kb
File Type: pdf
Download File

HR Books
File Size: 87 kb
File Type: pdf
Download File

General Books
File Size: 195 kb
File Type: pdf
Download File



SITE MAP


Site

  • HOME
  • ABOUT US
  • BLOG
  • COLLABORATE WITH NIRUTA PUBLICATIONS
  • HR BLOG
  • PUBLICATION WITH US
  • TRANSLATION & TYPING
  • VIDEOS
  • HR & EMPLOYMENT LAW CLASSES - EVERY FORTNIGHT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

NIRATHANKA

  • ​CSR
  • TREE PLANTATION PROJECT

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe


Picture
More Details

Copyright Niruta Publications 2021,    Website Designing & Developed by: www.mhrspl.com