ಕಾರ್ಯಕ್ಷೇತ್ರದಲ್ಲಿ ಸಂವಹನ ಎಂಬುದು ನಮ್ಮ ಉತ್ತಮ ಮಿತ್ರನು ಅಥವಾ ವೈರಿಯು ಆಗಬಹುದು ಉತ್ತಮ ರೀತಿಯಿಂದ ನಿರ್ವಹಿಸಿದರೆ ಕಾರ್ಯಕ್ಷೇತ್ರದಲ್ಲಿ ಸಂಸ್ಕೃತಿಯನ್ನು ಬಿಂಬಿಸಬಹುದು. ಆದ್ದರಿಂದ ಉತ್ತಮ ಹಾಗೂ ಬಲವಾದ ಸಂಸ್ಥೆಗಳು ಕೆಲಸದ ಸ್ಥಳದಲ್ಲಿ ಅಡೆತಡೆಗಳನ್ನು ನಿವಾರಿಸಿ ಸಮಸ್ಯೆಗಳನ್ನು ಬಗೆಹರಿಸುತ್ತದೆ, ಕಾರ್ಯಕ್ಷೇತ್ರದ ಉತ್ತಮ ಸಂಬಂಧಗಳು ಒಳ್ಳೆಯ ಉತ್ಪಾದಕತೆಯನ್ನು ನೀಡಬಲ್ಲವು. ಶಬ್ದಗಳಿಗೆ ಅರ್ಥಗಳು ಬೇರೆ ಮತ್ತು ಭಿನ್ನವಾಗಿರುವುದರಿಂದ ಮಹತ್ವ ಹೆಚ್ಚು ಮಾತನಾಡುವಾಗಿನ ಏರಿಳಿತ, ಗಡಸು ಅಥವಾ ಸೌಮ್ಯತನವು ಪ್ರಭಾವ ಬೀರುತ್ತದೆ. ಅಸಮರ್ಪಕ ಸಂವಹನ ಕೌಶಲ್ಯಗಳು ಬಹುರೀತಿಯ ಸಮಸ್ಯೆಗಳನ್ನು ನೀಡಬಲ್ಲವು, ಇದು ನೌಕರರು ಸಂಸ್ಥೆಯನ್ನು ತ್ಯಜಿಸುವುದು, ಕಳಪೆ ಗ್ರಾಹಕರ ಸೇವೆ, ಕೌಶಲ್ಯಗಳ ಅಸಮರ್ಪಕ ನಿರ್ವಹಣೆ ಕೆಲವೊಂದು ಉದಾಹರಣೆಗಳು. ಈ ರೀತಿಯ ಹಾಗೂ ಇತರೆ ಸಮಸ್ಯೆಗಳ ನಿವಾರಣೆಗೆ ಕಾರಣ - ಮಾಹಿತಿಯ ಕೊರತೆ, ನೌಕರರನ್ನು ಸಂಸ್ಥೆಯ ಅನೇಕ ವಿಷಯಗಳಲ್ಲಿ ತೊಡಗಿಸದೇ ಇರುವುದು, ನೌಕರರನ್ನು ಸರಿಯಾದ ದೃಷ್ಟಿಕೋನದಲ್ಲಿ ನೋಡದೇ ಇರುವುದು ಕಾರಣವಾಗುತ್ತದೆ. ನೌಕರರ ಮನಸ್ಸಿನಲ್ಲಿ ನಾವು ಉತ್ತಮವಾಗಿದ್ದೇವೆ ಹಾಗೂ ನಮ್ಮ ಅವಶ್ಯಕತೆ ಇದೆ ಎಂಬ ಮೂಲಕ ನಿಯೋಜಕರ ಮನಸ್ಸಿನಲ್ಲಿ ಅವರು ಮುಖ್ಯ ಎಂದು ಕಾಣುವಂತಿರಬೇಕು. ಕಾರಣ ನೌಕರರೊಡನೆ ನಿರತಂರ ಸಂವಹನೆ, ಅಸಮರ್ಪಕ ಮಿಂಚಂಚೆಯ (Email) ನಡೆ-ನುಡಿಗಳು ಕಾರಣವಾಗುತ್ತವೆ. ನೌಕರರ ಒಡನಾಟ ಎಂದರೆ (space) ಅದು ಆತ್ಮೀಯ, ವೈಯಕ್ತಿಕ, ಸಾಮಾಜಿಕ ಮತ್ತು ಸಾರ್ವಜನಿಕ ರೀತಿಯಲ್ಲಿ ಇದ್ದಾಗ ಪ್ರಭಾವ ಅಗಾಧ. ಒಂದೇ ಮಾತಿನಲ್ಲಿ ಹೇಳಬೇಕಾದರೆ ಅದು ಸರಳ ಹಾಗೂ ಸಂಕ್ಷಿಪ್ತವಾಗಿರಬೇಕು.
ಕಾರ್ಯಕ್ಷೇತ್ರದಲ್ಲಿ ವ್ಯವಹಾರಗಳ ನೀತಿ ಮತ್ತು ನಡೆ - ಈ ವಿಷಯಗಳು ಕಾರ್ಯಕ್ಷೇತ್ರದಲ್ಲಿ ಅಸಮರ್ಪಕ ಸಂವಹನೆಯಿಂದ ನೇರವಾಗಿ ಕಾರಣವಾಗುತ್ತವೆ. ನೌಕರನ ಮನಸ್ಸಿನಲ್ಲಿ ಉತ್ತೇಜನವು ಬೇರೂರಬೇಕಾದರೆ ಪರಿಣಾಮಕಾರಿ ಸಂವಹನ ಮತ್ತು ಸುಧಾರಿತ ಸಂಬಂಧಗಳು ಎಂದರೆ ಆಡಳಿತ ಮತ್ತು ಸಿಬ್ಬಂದಿಗಳ ನಡುವೆ ತೀರ ಮುಖ್ಯ ಆದರೆ ಅನೇಕ ಸಲ ಇದನ್ನು ಮನಗಾಣುವುದಿಲ್ಲ. ಯಾವಾಗ ಎಲ್ಲರೂ ಒಂದೇ ತೆರನಾಗಿ ಸಂಸ್ಥೆಯ ಗುರಿಗಳನ್ನು ನಿರ್ದೇಶನಗಳನ್ನು ತಿಳಿದುಕೊಂಡಿರುತ್ತಾರೊ ಆಗ ವಿಷಯ ಸುಲಭ, ಇದನ್ನು ನಾವು ಆಧುನಿಕ ಸಂಸ್ಕೃತಿಯಲ್ಲಿ ಮೌಖಿಕ ಹಾಗೂ ಸಂವಹನೆ ಕ್ರಮಗಳ ಮಿಂಚಂಚೆಯ ವ್ಯವಹಾರಗಳಲ್ಲಿ ನೋಡಬಹುದು. ಸಂಸ್ಥೆಗಳಲ್ಲಿ ಇವು ಆಂತರಿಕ, ಬಾಹ್ಯ, ಮೇಲ್ಮುಖ, ಕೆಳಮುಖ ಅಲ್ಲದೇ ರೀತಿ ನಿಯಮಗಳಲ್ಲಿ ಕಾಣಬಹುದು. ಕಾರ್ಯಕ್ಷೇತ್ರದಲ್ಲಿ ಉತ್ತಮ ಸಂವಹನ ಕಲೆಯು ಎಲ್ಲರಿಗೂ ಅವರ ವೇಳೆಯ ಸದುಪಯೋಗ ನಿಗಧಿ ಪಡಿಸಿದ ಗುರಿಗಳಿಗೆ ಸಹಾಯವಾಗುತ್ತದೆ. ಇದು ಮುಕ್ತವಾಗಿರುವುದರಿಂದ ಪ್ರತಿಯೊಬ್ಬರು ಆತ್ಮ ವಿಶ್ವಾಸದಿಂದ ಮತ್ತು ಕನಿಷ್ಟ ದೂರುಗಳಿಂದ ತಮ್ಮನ್ನು ಗುರುತಿಸಿಕೊಂಡು ಸೂಕ್ಷ್ಮ ವಿಷಯಗಳಲ್ಲಿಯೂ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿ ಅವರವರ ಭಾವನೆಗಳನ್ನು ಗೌರವಿಸಿ ಅವರಿಗೆ ಸೂಕ್ತವಾದ ಮಹತ್ವವನ್ನು ನೀಡಿ ಪರಿಣಾಮಕಾರಿಯಾಗಿಸಬಹುದು. ಸಂವಹನ ಪ್ರಕ್ರಿಯೆಗಳನ್ನು ಇ-ಮೇಲ್ ಗಳಲ್ಲಿ, ಮೆಮೊ, ಬುಲೆಟಿನ್ಸ್, ನ್ಯೂಸ್ ಲೆಟರ್ ಗಳಲ್ಲಿ ಅಲ್ಲದೇ ಮುಖಾಮುಖಿಯಾಗಿ ಕಾಣಬಹುದು. ಜವಬ್ದಾರಿಯುತ ಸ್ಥಾನದಲ್ಲಿರುವ ಮೇಲ್ವಿಚಾರಕರು ಸಂವಹನದಲ್ಲಿರುವ ಈ ಮುಂದಿನ ಕೆಲವೊಂದು ತಡೆಗಳನ್ನು ನಿವಾರಿಸುವ ಮೂಲಕ ಕಾರ್ಯಕ್ಷೇತ್ರವನ್ನು ಆಹ್ಲಾದಕರ ರೀತಿಯಲ್ಲಿ ನಡೆಸಬಹುದು. ಇದು ಪರಿಪೂರ್ಣವಾಗಿರಬೇಕಾದರೆ ವಿಷಯದ ಬಗ್ಗೆ ನಿಖರತೆ, ಹೇಳುವ ರೀತಿ, ವಿಷಯ ಪೂರ್ತಿ ಹೇಳುವುದು, ಕೇಳುಗರ ಭಾವನೆಗಳ ಗ್ರಹಿಕೆ ಹಾಗೂ ಅವರ ಮನಸ್ಸು ಮತ್ತು ಸೌಜನ್ಯತೆ ಕಾರಣವಾಗುತ್ತದೆ.
ಆದ್ದರಿಂದ ಸಂವಹನೆ ಎಂಬುದು ಕಾರ್ಯಕ್ಷೇತ್ರದಲ್ಲಿ ಒಂದು ನಿರಂತರ ಕ್ರಿಯೆ. ಆದರೆ ಅನೇಕ ಸಾರಿ ಬಹು ರೀತಿಯ ಹೊಂದಾಣಿಕೆಗಳು ಪರಿಣಾಮಕತೆಗೆ ಬರುವ ಎಡರು-ತೊಡರುಗಳನ್ನು ನಿವಾರಿಸಿದಾಗ ಅದು ದ್ವಿಮುಖವಾಗಿ, ಉತ್ತೇಜನ ಪೂರ್ವಕವಾಗಿ, ವಿಷಯ ನೇರವಾಗಿ ಹರಿದು ಸುಲಭವಾಗಿ ಪರಿಣಾಮಗಳಿಗೆ ಕಾರಣವಾಗುತ್ತವೆ. ಮುಕ್ತವಾದ ಸಂವಹನ ಹಾಗೂ ನೌಕರರ ಹಿಮ್ಮಾಹಿತಿಗಳು ಸರಾಗವಾದ ಕೆಲಸಕ್ಕೆ ಬುನಾದಿಯಾಗುತ್ತವೆ. ಪರಿಣಾಮಕಾರಿ ಕೌಶಲ್ಯಗಳು ವ್ಯಕ್ತಿಯ ಸಾಮರ್ಥ್ಯಗಳನ್ನು ಒರೆಗೆ ಹಚ್ಚಿ ಉತ್ತಮ ನೌಕರರನ್ನಾಗಿ ಮಾಡಿ ಆ ಮೂಲಕ ದಿನನಿತ್ಯದ ಕೆಲಸಗಳಲ್ಲಿ ಯಶಸ್ಸನ್ನು ಮೂಡಿಸುವುದು ಹಾಗೂ ಆಡಳಿತದ ಇತರ ವಿಷಯಗಳಲ್ಲಿ ಆಡಳಿತಾತ್ಮಕ ಕೌಶಲ್ಯಗಳನ್ನು ನಿರ್ಮಿಸುತ್ತವೆ. ನೀತಿಯುತ ಕಾರ್ಯಕ್ಷೇತ್ರ ನಿರ್ಮಾಣ ಕೆಲಸದ ಸ್ಥಳದಲ್ಲಿ ನೀತಿಗಳು ನಿಯಮಗಳು ಕಾರಣವಾಗುತ್ತವೆ. ನೀತಿ ಎಂದಾಗ ಸಂಸ್ಥೆಯು ತನ್ನ ಗುರಿ ಮತ್ತು ನೀತಿಗಳಲ್ಲಿ ನಡೆಗಳಲ್ಲಿ ಬಿಂಬಿಸುವ ಮೌಲ್ಯಗಳು. ಇದು ನೌಕರ, ಗ್ರಾಹಕ, ಮಾಲೀಕರ ನಡುವೆ ಇರಬಹುದು. ಒಳ್ಳೆಯ ನೀತಿಯಿಂದಾಗಿ ಒಳ್ಳೆಯ ವ್ಯವಹಾರಗಳನ್ನು ನಡೆಸಬಹುದು. ಈ ನೀತಿಗಳಿಂದಾಗಿ ನಿಷ್ಟೆ, ಜವಾಬ್ದಾರಿ, ಪ್ರಾಮಾಣಿಕತೆಗಳನ್ನು ಕೆಲಸದಲ್ಲಿ ಕಂಡು ಕ್ಷಮಾ ಗುಣಗಳ ಮೂಲಕ ಜೀವನದಲ್ಲಿ ಅರ್ಥವನ್ನು ಕಾಣುವುದು. ಇದರಲ್ಲಿ ಎಲ್ಲರೂ ಸಮಾನರೂ, ವಿಶಾಲ ಹೃದಯಿಗಳು. ಸಾಮಾಜಿಕ ನ್ಯಾಯ ಪರಿಸರದ ಸಂರಕ್ಷಣೆಯೂ ಸೇರಿರುತ್ತದೆ. ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳುವಿಕೆ, ನಂಬಿಕೆ ಹಾಗೂ ಕಾನೂನುಗಳ ಅನುಸರಣೆ, ಉತ್ತಮ ನೀತಿಗೆ ಕಾರಣವಾಗುತ್ತವೆ. ಇದರಿಂದ ನೀತಿಯುತ ಕಾರ್ಯಕ್ಷೇತ್ರದಲ್ಲಿ ನೌಕರನು ನಿಜವಾದ ಕಾಳಜಿ ಮತ್ತು ಗೌರವವನ್ನು ಹೊಂದಿರುತ್ತಾನೆ. ಕಾರ್ಯದಲ್ಲಿ ಆಸಕ್ತಿ, ಇತರರಿಗೆ ಸಹಾಯವನ್ನು ಕಾಣಬಹುದು. ಅಲ್ಲದೇ ಇಲ್ಲಿ ನಾಯಕರೂ ಕೂಡ ನಿಗದಿಪಡಿಸಿದ ಮಟ್ಟಗಳಲ್ಲಿ ಕಾರ್ಯನಿರ್ವಹಿಸಿ ಸಂಸ್ಥೆಯ ಉತ್ತಮತೆಯೆಡೆಗೆ ಹೋಗುತ್ತಾರೆ. ನೌಕರನು ಕೂಡ ಉತ್ಸಾಹ ಹಾಗೂ ಸ್ಫೂರ್ತಿ ಹೊಂದಿ ಗ್ರಾಹಕನ ಸೇವೆಗೆ ಕಾರಣವಾಗುತ್ತಾನೆ. ನೈತಿಕತೆಯ ಅಡಿಯಲ್ಲಿ ಅವರೆಲ್ಲರೂ ಉತ್ತರದಾಯಿತ್ವವನ್ನು ಹೊಂದಿ ಸಂಧಾನವಿಲ್ಲದೆ ಮುಂದುವರೆಯುತ್ತಾರೆ. ನೈತಿಕತೆಯ ಆಧಾರದಲ್ಲಿ ನಡೆದಾಗ ಸಂಸ್ಥೆಯು ಕಾಲಕಾಲಕ್ಕೆ ಪಾಠಗಳನ್ನು ಕಲಿತು ನಡೆಗಳನ್ನು ಬದಲಾಯಿಸಿ ಆರೋಗ್ಯಪೂರ್ಣ ಬೆಳವಣಿಗೆಗಳನ್ನು ಪೋಷಿಸಲು ಕಾರಣವಾಗುತ್ತದೆ. ನೀತಿಯುತ ಹಾಗೂ ಸಂಸ್ಕೃತಿಗಳು ಸಂಸ್ಥೆಯ ಮೌಲ್ಯಗಳನ್ನು, ಕಾನೂನಿನ ನಿಯಮಗಳನ್ನು ಪಾಲನೆ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿರಬೇಕು. ಕಾರ್ಯಕ್ಷೇತ್ರದಲ್ಲಿ ಭಿನ್ನ ಹಾಗೂ ವಿಭಿನ್ನ ರೀತಿಯ ಜನಗಳು ಬರುವುದರಿಂದ ಹಾಗೂ ಅವರೂ ಸಂಸ್ಥೆಯ ಗುರಿಗಳನ್ನು ಎಲ್ಲರೊಡನೆ ಸಾಧಿಸಬೇಕಾಗಿರುವುದರಿಂದ ಸಕಾರಾತ್ಮಕ ಸಂವಹನ ಕ್ರಿಯೆಯು ಮುಖ್ಯವಾದ ಪಾತ್ರವನ್ನು ನಿರ್ವಹಿಸುತ್ತದೆ. ಅದಕ್ಕಾಗಿ ಎಲ್ಲರೂ ಬದ್ಧತೆ ಹಾಗೂ ಉತ್ತರದಾಯಿತ್ವವನ್ನು ಪಡೆದು ಸಂವಹನೆಯ ಮೂಲಕ ಆದರ್ಶಪ್ರಾಯರಾಗಿರಬೇಕಾಗುತ್ತದೆ, ಅದಕ್ಕಾಗಿ ಅವರು ಸಂಸ್ಥೆಯಲ್ಲಿ ಸಾಧಕರ ತಂಡಗಳನ್ನು ನಿರ್ಮಿಸಿ, ನೌಕರರಲ್ಲಿ ಸಾಮಥ್ರ್ಯವನ್ನು ಬಿಂಬಿಸಿ ಆ ಮೂಲಕ ಸಂಸ್ಥೆಯನ್ನು ಸ್ಪರ್ಧಾತ್ಮಕವಾಗಿ ಮಾಡಿ ಎಲ್ಲರನ್ನು ಮುಖ್ಯವಾಹಿನಿಯಲ್ಲಿ ತಂದು ಯಶಸ್ಸು ಪಡೆಯಬೇಕು. ಇದಕ್ಕಾಗಿ ನೌಕರರೊಂದಿಗೆ ಪರಿಣಾಮಕಾರಿ ಸಂವಹನ ಹಾಗೂ ಅವರ ತಿಳುವಳಿಕೆಯ ಮಟ್ಟವನ್ನು ಎತ್ತರಿಸಿ ಅವರನ್ನು ಎಲ್ಲರೊಡನೆ ಒಂದಾಗಿ ಬೆರೆಯುವಂತೆ ಮಾಡಿ ಯಶಸ್ವಿಯಾಗಿ ಮಾಡುವುದು ಅದಕ್ಕಾಗಿ ಈ ಮುಂದಿನ ವಿಷಯಗಳೆಂದರೆ ಪರಸ್ಪರ ಗೌರವ, ಅರ್ಥರಹಿತ ನಿರ್ಧಾರಕ್ಕೆ ಬರದಿರುವುದು, ಎಲ್ಲರನ್ನೂ ತಿಳಿದುಕೊಳ್ಳುವುದು, ಮಾತನಾಡುವ ಶಬ್ಧಗಳನ್ನು ಗಮನಿಸುವುದು, ಕೇಳುವುದು ಮತ್ತು ವಿವರಗಳನ್ನು ತಿಳಿದುಕೊಳ್ಳುವುದು. ಇವುಗಳನ್ನು ಮಾಡುವ ಮೂಲಕ ಎಲ್ಲರನ್ನೂ ತಮ್ಮ ಜೊತೆಗೆ ಕರೆದೊಯ್ಯುವುದು. ಇಂದಿನ ಸಂವಹನವನ್ನು ವಿಭಿನ್ನ ರೀತಿಯ ಮಾನವ ಸರಪಣಿ ಎಂದರೆ ಜನರೇಶನ್ Y-1980 ನಂತರ ಜನಿಸಿದವರು. ಜನರೇಶನ್ X - 1965-1980 ಮಧ್ಯೆ ಜನಿಸಿದವರು. ಈ ರೀತಿಯ ಸಮುದಾಯಗಳನ್ನು ನಿರ್ದಿಷ್ಟ ಗುರಿಗಳತ್ತ ಸಾಗಿಸಲು ಉತ್ತಮ ರೀತಿಯ ಸಂವಹನ ಎಂದರೆ ಪರಸ್ಪರ ಮಾತುಕತೆ, ಹೊಂದಾಣಿಕೆ ನೀತಿ, ಪರಸ್ಪರ ಸಹಾಯ, ಕಾಳಜಿ ಮತ್ತು ಉತ್ತಮ ತಂಡದ ಮನೋಭಾವನೆ, ಇತರರ ದೃಷ್ಟಿಕೋನವನ್ನು ಗೌರವಿಸುವುದು ಅವಶ್ಯ. ಅಸಹನೀಯ ನಡೆಯನ್ನು ಆಗಲೇ ಚಿವುಟುವುದು, ಪರಸ್ಪರ ತಿಳುವಳಿಕೆಗೆ ಅವಕಾಶ ಮಾಡಿಕೊಡುವ ಮೂಲಕ ಎಲ್ಲಾ ಸಮುದಾಯಗಳ ಮಧ್ಯೆ ಸೌಹಾರ್ದಯುತ ಕಾರ್ಯಕ್ಷೇತ್ರವನ್ನು ವಿಸ್ತರಿಸುವುದು. ಆದಾಗ್ಯೂ ವಿವಿಧ ಸಮುದಾಯಗಳ ಕಾರಣಗಳಿಂದಾಗಿ ಕೆಲವು ಭಾರಿ ಘರ್ಷಣೆಗಳು ಎದುರಾದರೂ ಆಂತರಿಕವಾಗಿ ಅವುಗಳನ್ನು ಈ ಮುಂದಿನಂತೆ ನಿರ್ವಹಿಸುವುದು. ಸಮಸ್ಯೆಯ ಮೂಲ ಕಾರಣವನ್ನು ತಿಳಿದು ಎರಡು ಗುಂಪುಗಳಲ್ಲಿಯ ದ್ವಂದ್ವಗಳನ್ನು ತಪ್ಪಿಸುವುದು. ಇತರ ಗುಂಪುಗಳನ್ನು ಅರ್ಥೈಸಿಕೊಳ್ಳುವುದು. ಮಧ್ಯಸ್ಥಿಕೆಯಿಂದ ಕೆಲಸ ಮಾಡುವುದು. ಪರಿಹಾರಕ್ಕೆ ಬದ್ಧವಾಗಿರುವುದು ಆ ಮೂಲಕ ಘರ್ಷಣೆಯನ್ನು ತಪ್ಪಿಸುವುದು. ಉತ್ತಮ ಸಂವಹನ ಬುನಾದಿಯಿಂದ ಕಾರ್ಯ ಸಂಸ್ಕೃತಿಯಲ್ಲಿ ಸೊನ್ನೆ ರಹಿತ ಅಪಘಾತ, ಸೊನ್ನೆ ರಹಿತ ನೂನ್ಯತೆಗಳು, ಕಾಲದ ಸ್ಥಗಿತತೆ (Downtime), ನಾನು ಎನ್ನುವ ಬದಲು ನಾವು, ಸೊನ್ನೆ ರೀತಿಯ ಅಗೌರವ-ಮಾನವರಿಗೆ, ಪರಿಸರಕ್ಕೆ ಅಗೌರವ ಮಾಡದಿರುವುದರಲ್ಲಿ ಪ್ರತಿಫಲಿಸುತ್ತವೆ. ಕೊನೆಯದಾಗಿ, ಕಾರ್ಯಸ್ಥಳದಲ್ಲಿ ಉತ್ತಮ ಸಂವಹನೆಯ ಮೂಲಕ ಅನೀತಿಯುತ ನಡೆಯನ್ನು ಈ ರೀತಿಯಾಗಿ ತಪ್ಪಿಸಬಹುದು. ನಿರೀಕ್ಷಿತ ನಡೆ-ನುಡಿಗಳನ್ನು ನಿರ್ಮಿಸುವುದು, ಕೆಲಸದಲ್ಲಿ ಮಾದರಿಯಾಗಿರುವುದು, ನೌಕರರನ್ನು ಶ್ಲಾಘಿಸುವುದು, ಉತ್ತಮ ನಡೆಯ ಕೆಲಸಗಾರರನ್ನು ಸ್ವಾಗತಿಸುವುದು, ಕೆಲಸದಲ್ಲಿ ಸಮರ್ಪಕತೆಯನ್ನು ತರಲು ನಿಯಂತ್ರಣ ಮತ್ತು ಪರೀಕ್ಷೆಗಳನ್ನು ನಿರ್ಮಿಸುವುದು, ಮೌಲ್ಯಗಳನ್ನು ಗೌರವಿಸುವ ಹಾಗೂ ಅಳವಡಿಸಿಕೊಳ್ಳುವ ನೌಕರರನ್ನು ನಿರ್ಮಿಸುವುದು ಮತ್ತು ಪ್ರೋತ್ಸಾಹಿಸುವುದು. ಈ ರೀತಿಯ ಅನೇಕ ಕಾರ್ಯಕ್ರಮ, ಯೋಜನೆ, ಪರಿಣಾಮಗಳನ್ನು ನಿರ್ಮಿಸಿ, ಬೆಳೆಸಿ, ಪೋಷಿಸಿ, ಸಾಗುವ ಮೂಲಕ ಕಾರ್ಯಕ್ಷೇತ್ರದಲ್ಲಿ ಸುವ್ಯವಸ್ಥಿತ ಸಂವಹನ ಸಂಸ್ಕೃತಿಯನ್ನು ನಿರ್ಮಾಣ ಮಾಡಿ ನೀತಿಯ ತಳಹದಿಯಲ್ಲಿ ಮುಂದುವರೆಸಿ ನಡೆಸುವುದು. ಆಧಾರ ಗ್ರಂಥಗಳು
ರಾಮ್ ಕೆ. ನವರತ್ನ ನಿರ್ದೇಶಕರು, ಹೆಚ್.ಆರ್. ರಿಸೋನೆನ್ಸ್
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|