After going through your reply, I would like to bring the following for your notice with recent developments of KAPSW association.
You have been President of the organization from last 5 years. Just in few months back only you took the action w.r.t. re-register the Association. With this it is very clear that the association was defunct all these years in your leadership and none of the members were appraised about this. Only, when the questions were asked you become active in this regard. How do you substantiate this delay? Who is responsible for this delay? Is it wrong from members side to raise a voice in this regard?
18 Comments
ಪ್ರೊಫೆಸರ್ ಶಂಕರ್ ಪಾಠಕ್ ರವರು ಸಮಾಜಕಾರ್ಯದ ಹೆಜ್ಜೆಗಳು ಪತ್ರಿಕೆಯ ಆರಂಭದ ದಿನಗಳಿಂದಲೂ ನಿರಾತಂಕ ಸಂಸ್ಥೆಯೊಂದಿಗೆ ಒಡನಾಟ ಹೊಂದಿದ್ದರು. ಆರಂಭದ ದಿನಗಳಲ್ಲಿ ಪಾಠಕ್‍ರವರ ಕುರಿತು ಪತ್ರಿಕೆಯಲ್ಲಿ ಲೇಖನ ಪ್ರಕಟಿಸಲು ನಿರ್ಧರಿಸಿದಾಗ ಅವರ ಮೊದಲ ಭೇಟಿಯಾಯಿತು. ಪತ್ರಿಕೆಯ 2ನೇ ಸಂಚಿಕೆ ಜನವರಿ 2011 ರಲ್ಲಿ ಇವರ ಕುರಿತು ಮುಖಪುಟ ಲೇಖನ ಪ್ರಕಟಿಸಲಾಗಿತ್ತು. ಈ ಸಂದರ್ಭದಲ್ಲಿ ಪಾಠಕ್‍ರವರ ಜೊತೆಯಲ್ಲಿ ಅತ್ಯಂತ ಆತ್ಮೀಯ ಕ್ಷಣಗಳನ್ನು ಕಳೆಯುವ ಸಂದರ್ಭ ಒದಗಿ ಬಂದಿತ್ತು.
ತಮ್ಮ ಜೀವನವನ್ನು ತಾವೇ ಕೊನೆಗೊಳಿಸುವಂತಹ ಕಾರ್ಯವನ್ನು ಆತ್ಮಹತ್ಯೆ ಎಂದು ಗುರುತಿಸಲಾಗುವುದು. ಆತ್ಮಹತ್ಯೆ ಎಂಬ ಪದವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಈ ಪದದಲ್ಲಿ ಅಡಗಿರುವಂತಹ ಒಂದು ಕೊರತೆ ಗೋಚರವಾಗುವುದು. ಆತ್ಮಹತ್ಯೆ ಎಂದರೆ ಆತ್ಮವನ್ನು ಕೊಲೆ ಮಾಡುವುದು ಎಂದರ್ಥ. ನಮಗೆಲ್ಲರಿಗೂ ಗೊತ್ತಿರುವಂತಹ ವಿಷಯ ಏನೆಂದರೆ, ಆತ್ಮವನ್ನು ಕೊಲೆ ಮಾಡಲು ಸಾಧ್ಯವಿಲ್ಲ. ಆದರೆ ದೇಹವನ್ನು ಕೊಲೆ ಮಾಡಲು ಸಾಧ್ಯ. ಆದುದರಿಂದ ಆತ್ಮಹತ್ಯೆ ಎನ್ನುವ ಬದಲು, ಆತ್ಮದ ಬಿಡುಗಡೆ ಮತ್ತು ದೇಹದ ಅಂತ್ಯ ಇಲ್ಲವೆ ತನ್ನ ಕೊಲೆ ಎಂದು ಕರೆದರೆ ತಪ್ಪಾಗಲಾರದು.
ಭಾರತದ ಗ್ರಾಮೀಣ ಪ್ರದೇಶಗಳು ವೈವಿಧ್ಯಮಯವಾದ ಸವಾಲುಗಳು, ಸಮಸ್ಯೆಗಳನ್ನು ಬಹಳ ಹಿಂದಿನಿಂದಲೂ ಎದುರಿಸುತ್ತಿವೆ. ಗ್ರಾಮೀಣರ ಸಮಸ್ಯೆ ಎಂದ ಕೂಡಲೇ ಬಹುತೇಕರು ಹೇಳುವುದು ಬಡತನ, ಅನಕ್ಷರತೆ, ಹೆಚ್ಚು ಮಕ್ಕಳಿರುವ ದೊಡ್ಡ ಕುಟುಂಬಗಳು ಮತ್ತು ಆವಶ್ಯಕ ಸೌಲಭ್ಯಗಳಿಲ್ಲದಿರುವುದು.
ಜೀವ ಸಂಕುಲದಲ್ಲಿ ಗಿಡ, ಮರ, ಪ್ರಾಣಿ, ಪಕ್ಷಿ, ಕ್ರಿಮಿ, ಕೀಟಾದಿಗಳಲ್ಲಿನ ಪ್ರಭೇದ, ವಿಭೇದಾದಿಗಳಲ್ಲಿನ ವಿವಿಧತೆ ಮಾತ್ರವಲ್ಲ ಈ ವಿವಿಧತೆ ಸದಾ ಏರಿಳಿತಗೊಳ್ಳುವ ವ್ಯವಸ್ಥೆಗೆ ಜೀವ ವೈವಿಧ್ಯವೆಂದು ಸರಳವಾಗಿ ವ್ಯಾಖ್ಯಾನಿಸಲಾಗುತ್ತದೆ.
ಹುಟ್ಟು, ಬದುಕು, ಸಾವು ಈ ಜೀವಯಾತ್ರೆ ಎಲ್ಲೆಡೆ ಇದ್ದಿದ್ದೆ. ಈ ಯಾತ್ರೆಯ ಅತ್ಯಂತ ಪ್ರಮುಖ ಘಟ್ಟವಾದ ಬದುಕೆಂಬುದು ನೈಜವಾಗಿ ಅರಳುವುದಾದರೂ ಕೌಟುಂಬಿಕ ಪರಿಸ್ಥಿತಿಗೂ ಮಿಗಿಲಾಗಿ ಅದರ ಸುತ್ತಲಿನ ಸಾಮಾಜಿಕ, ಸಾಂಸ್ಕೃತಿಕ, ಭೌಗೋಳಿಕ ಪರಿಸರಗಳ ಪ್ರಭಾವದಿಂದ. ಮಲೆನಾಡೆಂಬುದು ಪಶ್ಚಿಮಘಟ್ಟ, ನಿತ್ಯ ಹರಿದ್ವರ್ಣ ಕಾಡು, ಬೆಟ್ಟ ಗುಡ್ಡ, ಕೆರೆ, ಝರಿ, ಹಳ್ಳ ಕೊಳ್ಳಗಳಿಂದ ಕೂಡಿದ್ದು ದೇಶದಲ್ಲೇ ವಿಶಿಷ್ಟ ಪರಿಸರ ವ್ಯವಸ್ಥೆಯಾಗಿದೆ. ಇದು ಇಲ್ಲಿನ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತದೆ. ಇಲ್ಲಿನ ವಿಶಿಷ್ಟ ಪರಿಸರ ವ್ಯವಸ್ಥೆಯ ಅತ್ಯಂತ ಮೂರ್ತಸ್ವರೂಪವೇ `ಜೀವ ವೈವಿಧ್ಯ' (Biological Diversity) ವಾಗಿದೆ. ಈ ಪಶ್ಚಿಮಘಟ್ಟ ಪ್ರದೇಶ ಜಗತ್ತಿನ ಹತ್ತು ದಟ್ಟ ಜೀವ ವೈವಿಧ್ಯ ತಾಣಗಳಲ್ಲೊಂದು ಎಂಬ ಖ್ಯಾತಿ ಪಡೆದಿದೆ. ಇದಕ್ಕೆ ಹೊಂದಿಕೊಂಡೇ ಮಲೆನಾಡ ಹಿತ್ತಲು, ತೋಟ, ಹೊಲಗಳಲ್ಲೂ ನಾಟಿ ತಳಿಗಳು, ಹಣ್ಣು ತರಕಾರಿ, ಸಸ್ಯ, ಗಿಡ, ಮರಗಳ ಜೀವ ವೈವಿಧ್ಯ ಕೂಡ ಅಷ್ಟೇ ದಟ್ಟವಾಗಿರುತ್ತದೆ. ಅಂದಮೇಲೆ, ಮಲೆನಾಡ ಬದುಕುಗಳು ಅರಳುವುದಾದರೂ ಈ ದಟ್ಟ ಜೀವ ವೈವಿಧ್ಯದೊಳಗೇ ಎಂದಾಯ್ತು. ಹೀಗೆ, ಬದುಕನ್ನರಳಿಸಿಕೊಳ್ಳುವ ಅನನ್ಯ ಅವಕಾಶವನ್ನು ಬಾಲ್ಯದಲ್ಲಿ ಪಡೆಯುವಂತಾಗಿ ಈಗ ಬೆಂಗಳೂರಿನಂತಹ ಕಾಂಕ್ರಿಟ್ ಜಂಗಲ್ಗಳಲ್ಲಿ ಸಿಕ್ಕಿ ತೊಳಲಾಡುತ್ತಿರುವ ನನ್ನಂತಹವರಿಗೆ ಆ ಅದ್ಭುತ ಅವಕಾಶದ ಮರುನೆನಪೇ ಅಪಾರ ಸಂತಸ ತರುವಂತಾಗಿದೆ. ಆದರೆ, ಈ ಜನಸಂಖ್ಯೆ ಹೆಚ್ಚಳ, ಅರಣ್ಯನಾಶ, ಪರಿಸರ ವಿನಾಶಗಳಿಂದಾಗಿ ಅಲ್ಲಿನ ಆ ಜೀವ ವೈವಿಧ್ಯ ಕೂಡ ಕ್ಷೀಣಿಸುವಂತಾಗಿದ್ದು, ಇಲ್ಲಿನ ಬದುಕೇ ಈಗ ಕಮರುವಂತಾಗಿದೆ. ಮಿಗಿಲಾಗಿ, ಮುಂಬರುವ ತಲೆಮಾರುಗಳು ಇಂತಹ ಅವಕಾಶದಿಂದ ಪೂರ್ತಿ ವಂಚಿತವಾಗುವ ಅಪಾಯ ಕೂಡ ನಮ್ಮ ಮುಂದಿದೆ. ಈ ಎಲ್ಲಾ ವಿಚಾರಗಳತ್ತ ಕಣ್ಣು ಹಾಯಿಸುವುದು ಈ ಒಂದು ಪುಟ್ಟ ಲೇಖನದ ಪ್ರಯತ್ನವಾಗಿದೆ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ನಿರಾತಂಕ ಬಳಗದ ಸಹಯೋಗದೊಂದಿಗೆ ದಿನಾಂಕ 15ನೆಯ ಏಪ್ರಿಲ್ 2012 ಭಾನುವಾರದಂದು ನಡೆದ ಪರಿಷತ್ತಿನ ಗೌರವ ಸದಸ್ಯತ್ವ ಪ್ರದಾನ ಮತ್ತು ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿತ್ತು. ಈ ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಶ್ರೀ. ಗೊ.ರು. ಚನ್ನಬಸಪ್ಪ, ಅಧ್ಯಕ್ಷರು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ವಹಿಸಿದ್ದರು ಮತ್ತು ಪ್ರಸ್ತಾವನೆ ನುಡಿಗಳನ್ನು ಡಾ.ಎಚ್.ಎಂ. ಮರುಳಸಿದ್ಧಯ್ಯ, ಸಮಾಜಕಾರ್ಯ ತಜ್ಞರು, ಅವರು ಮಂಡಿಸಿದರು. (ಈ ಪ್ರಸ್ತಾವನೆ ನುಡಿಗಳನ್ನು ಈ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ.) ಶ್ರೀ ಗೊ.ರು. ಚನ್ನಬಸಪ್ಪನವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಸಮಾಜದಲ್ಲಿನ ವ್ಯಂಗ್ಯಗಳನ್ನು ಅರ್ಥಪೂರ್ಣವಾಗಿ ದಿನಪತ್ರಿಕೆಗಳಲ್ಲಿನ ಶೀರ್ಷಿಕೆಗಳನ್ನು ಉದಾಹರಿಸುತ್ತ ಸಭಿಕರ ಮನಸ್ಸು ಚಿಂತಿಸುವಂತೆ ಮಾಡಿತು. ಓಶೋನ ಒಂದು ದೃಷ್ಠಾಂತವನ್ನು ನೀಡಿದರು. ಚೀನಾದಲ್ಲಿ ಒಬ್ಬ ವ್ಯಕ್ತಿ ಆಕಸ್ಮಿಕವಾಗಿ ಒಂದು ತೆರೆದ ಬಾವಿಯಲ್ಲಿ ಬಿದ್ದನಂತೆ. ಅವನು ತನ್ನ ಪ್ರಾಣ ಉಳಿಸಿಕೊಳ್ಳಲು ವಿಫಲನಾಗಿ ಯಾರಾದರೂ ನನ್ನನ್ನು ಕಾಪಾಡಿ ಎಂದು ಕೂಗುತ್ತಿರುತ್ತಿದ್ದಾನೆ. ಒಬ್ಬ ಧರ್ಮಪ್ರಚಾರಕ ಅಲ್ಲಿಗೆ ಬಂದು ಇಣುಕಿ ನೋಡಿ ಅಯ್ಯಾ ಏನಾಯಿತು? ಎಂದನಂತೆ. ಬಾವಿಗೆ ಬಿದ್ದವ ನನ್ನನ್ನು ರಕ್ಷಿಸಿ ಎಂದನಂತೆ, ನೀನು ಪ್ರಾಕೃತಿಕವಾಗಿ ಬಾವಿಗೆ ಬಿದ್ದಿರುವೆ ಆದುದರಿಂದ ಪ್ರಕೃತಿ ನಿನ್ನನ್ನು ಶಿಕ್ಷೆಗೆ ಗುರಿಪಡಿಸಿದೆ. ನಿನ್ನನ್ನು ರಕ್ಷಿಸುವುದು ಪ್ರಕೃತಿಗೆ ವಿರುದ್ಧವಾದುದ್ದು ನನಗೆ ಪಾಪ ಬರುತ್ತದೆ ಎಂದು ಹೇಳಿ ಹೋರಟುಹೊದನಂತೆ, ಎಂತಹ ಜ್ಞಾನಿ ಆ ಧರ್ಮ ಪ್ರಚಾರಕ.
ಪ್ರಪಂಚದ ವೃತ್ತಿಗಳಲ್ಲಿ ಅಕ್ಕಸಾಲಿಗ ವೃತ್ತಿಯು ಅತ್ಯಂತ ಪ್ರಾಚೀನವಾದ ವೃತ್ತಿ. ಅದರಲ್ಲೂ ಭಾರತದ ಅಕ್ಕಸಾಲಿಗ ವೈವಿಧ್ಯಮಯವಾದ ಸೃಜನಾತ್ಮಕ ಕುಶಲ ಕಲೆಯಿಂದ ಬಂಗಾರದಲ್ಲಿ ಹಸ್ತಶಿಲ್ಪವನ್ನು ಸೃಷ್ಟಿಸಿ ಸಂಸ್ಕೃತಿಯ ವಿಕಾಸಕ್ಕೆ, ಭವ್ಯತೆಗೆ ತನ್ನದೇ ಆದ ಕೊಡುಗೆಯನ್ನು ನೀಡಿದ್ದಾನೆ. ಅದರಲ್ಲೂ ಕರ್ನಾಟಕ ಶೈಲಿಯ ಆಭರಣ ತಯಾರಿಕೆ ತನ್ನದೇ ಆದ ವಿಶಿಷ್ಟ ಸ್ಥಾನಮಾನವನ್ನು ಆಭರಣ ಕ್ಷೇತ್ರದಲ್ಲಿ ಉಳಿಸಿಕೊಂಡು ಬಂದಿದೆ. ಒಂದು ಕಾಲಕ್ಕೆ ನಮ್ಮ ಸಮಾಜದಲ್ಲಿ ಬಹಳ ಶ್ರೇಷ್ಠ ಮನ್ನಣೆಯನ್ನೂ, ಆಧಾರವನ್ನೂ ಅಕ್ಕಸಾಲಿಗ ಪಡೆಯುತ್ತಿದ್ದ. ತನ್ನ ನಂಬಿಕೆ, ಪ್ರಾಮಾಣಿಕತೆ ಮತ್ತು ಕುಶಲತೆಯಿಂದ ಕರ್ನಾಟಕದ ಅಕ್ಕಸಾಲಿಗನನ್ನು ರಾಜಾಶ್ರಯ ಪಡೆಯುವಂತೆ ಮಾಡಿದ್ದು ಇತಿಹಾಸ.
ಈ ಜೀವ ತುಂಬಿದ ಚೇತನವಿಲ್ಲದ ಜಡ ಪ್ರಪಂಚವನ್ನು ಯಾವುದೋ ಒಂದು ಶಕ್ತಿ ಆವರಿಸಿಕೊಂಡು ಇರುವಂತೆ ಭಾವಕ್ಕೆ ಒಳಪಡದಂತೆ, ಅಳತೆಗೆ ವಶವಾಗದಂತೆ ಇರುವ ಆ ವಿಶೇಷಕ್ಕೆ ನಮಸ್ಕರಿಸುವೆ. ಆ ವಿಶೇಷವೆ ನೆಲ, ಜಲ, ಗಾಳಿ ಎನ್ನುವ ಡಿವಿಜಿಯವರ ಮಂಕುತಿಮ್ಮನ ಕಗ್ಗದ ತಾತ್ಪರ್ಯ ವಿಶೇಷವಾದದ್ದು. ಆಕಾಶದಲ್ಲಿ ತಾರೆಗಳು ನೂರಿದ್ದರೇನು. ಕತ್ತಲೆಯಲ್ಲಿ ನಡೆಯುವ ದಾರಿಗನಿಗೆ ಬೇಕಿರುವುದು ಬೆಳಕ ಕರುಣಿಸುವ ಒಂದು ಚಿಕ್ಕ ಹಣತೆಯೆ ಹೊರತು, ತಾರಾಮಂಡಲದ ತಾರೆಗಳಲ್ಲ. ಕತ್ತಲಲ್ಲಿ ದಾರಿಕಾಣದೆ ನಡೆಯುತ್ತಿರುವ ಮನುಷ್ಯನಿಗೆ ಜೊತೆಗಾರನಾಗಿ ಬೇಕಾಗಿರುವುದು ಮಾನವೀಯ ಮುಖದ ಮನುಷ್ಯನೇ ಹೊರತು ದೂರದ ದೇವರುಗಳಲ್ಲ. ಈ ಪ್ರಪಂಚದಲ್ಲಿ ಮನುಷ್ಯನ ಅಸ್ತಿತ್ವಕ್ಕೆ ಕಾರಣವಾಗಿರುವ ಈ ನೆಲ, ಜಲ, ಮನುಷ್ಯನ ಹಾರಾಟಕ್ಕೆ, ರಂಪಾಟಕ್ಕೆ, ಸಾಧನೆಗೆ, ಏಳಿಗೆಗೆ, ಕಾರಣವಾಗಿದೆ. ಈ ನೆಲ, ಜಲಗಳನ್ನು ಅನುಭವಿಸುವ ಹಕ್ಕು ಪ್ರತಿಯೊಂದು ಜೀವ ಜಂತುಗಳಿಗೂ ಇದೆ. ಅನುಭವಿಸುವಂತೆ ಮಾಡಬೇಕಾದುದ್ದು ನಮ್ಮ ಕರ್ತವ್ಯ ಕೂಡ. ಒಂದು ವಸ್ತುವನ್ನು ಸೃಷ್ಟಿಸುವ ಶಕ್ತಿ ನಮಗಿಲ್ಲ ಎಂದಾದರೆ ಒಂದು ವಸ್ತುವನ್ನು ನಾಶಪಡಿಸುವ ಹಕ್ಕು ನಮಗಿಲ್ಲ.
ಕರ್ನಾಟಕ ನಾಗರಿಕ ಸೇವಾ ಖಾತರಿ ಯೋಜನೆ ಅಧಿನಿಯಮ 2011 ಅಥವಾ ಸಕಾಲ ಯೋಜನೆಯು ಏಪ್ರಿಲ್ 2, 2012ರಿಂದ ಕರ್ನಾಟಕದಾದ್ಯಂತ ಜಾರಿಗೆ ಬಂದಿದೆ. ನಾಗರಿಕರಿಗೆ ವಿಳಂಬವಿಲ್ಲದೆ ಸರ್ಕಾರಿ ಸೇವೆಗಳನ್ನು ಒದಗಿಸುವ ದೃಷ್ಟಿಯಿಂದ ಜಾರಿಗೆ ತಂದಂತಹ ಕರ್ನಾಟಕ ಸರ್ಕಾರದ ಮಹತ್ತರ ಯೋಜನೆ ಇದಾಗಿದೆ. ಹೊಸದೊಂದು ವೃತ್ತಿ ಸಂಸ್ಕೃತಿ ರೂಪಿಸಬೇಕೆಂಬುದೇ ಈ ಯೋಜನೆಯ ಉದ್ದೇಶವಾಗಿದೆ.
56ನೆಯ ಕನ್ನಡ ರಾಜ್ಯೋತ್ಸವವನ್ನು ಬಹಳ ವಿಜೃಂಭಣೆಯಿಂದ ಕರ್ನಾಟಕದ ಜನತೆ ಆಚರಣೆ ಮಾಡಿಕೊಂಡಿದ್ದರೆ ಇದರ ಜೊತೆಗೆ ಕನ್ನಡಕ್ಕೆ ಎಂಟನೇ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟ ಕಂಬಾರರಿಗೆ ಸನ್ಮಾನ ಸಮಾರಂಭಗಳು ಆಚರಿಸುತ್ತಿರುವ ಸಂತೋಷದ ಸಮಯದಲ್ಲಿ, ಕರ್ನಾಟಕ ಸರ್ಕಾರವು ಬಹಳ ಮಹತ್ತರವಾದ ಬಹುಮಾನವನ್ನು ಕನ್ನಡ ಜನತೆಗೆ ನೀಡಿದೆ. ಅದೇನೆಂದರೆ 2012ರ ವರ್ಷಾಂತ್ಯಕ್ಕೆ 3178 ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚಲು ಆದೇಶ ಮಾಡಿದೆ. ಇದಕ್ಕೆ ವಿರೋಧವಾಗಿ 56ನೆಯ ಕನ್ನಡ ರಾಜ್ಯೋತ್ಸವದ ಸಮಾರಂಭಗಳಲ್ಲಿ ಸಾಮಾಜಿಕ ಚಿಂತಕರು, ಶಿಕ್ಷಣತಜ್ಞರು, ಕನ್ನಡ ಪರ ಹೋರಾಟಗಾರರು, ಸಮಾಜಕಾರ್ಯಕರ್ತರು ಮುಚ್ಚಲಿರುವ ಶಾಲೆಗಳ ಬಗ್ಗೆ ವಿರೋದ ವ್ಯಕ್ತಪಡಿಸಿದರೆ ವಿನಃ ಏಕೆ ಮುಚ್ಚುತ್ತಿದ್ದಾರೆ? ಅದರ ಪರಿಣಾಮಗಳೇನು? ಯಾರ ಮೇಲೆ ಹೊರೆ ಬೀಳುತ್ತದೆ? ಇದರ ಹಿಂದಿನ ಹುನ್ನಾರವೇನು? ಮಕ್ಕಳ ಹಾಗೂ ಕುಟುಂಬಗಳ ಮೇಲೆ ಆಗುವ ಮನೋ-ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳೇನು? ಎಂಬ ಹಲವಾರು ಪ್ರಶ್ನೆಗಳಿಗೆ ಯಾರೂ ಉತ್ತರ ನೀಡದಿದ್ದುದು ವಿಪರ್ಯಾಸವೇ ಸರಿ.
ಮೂಲ ಸ್ವಭಾವದ ಮಾನವ ಕುಲವೊಂದೆ
ಆತನ ಜೀವನ ಅರಳುವ ನೆಲವೊಂದೆ ; ಪೆಟ್ಟು ತಿಂದಿತೋ ಯಾವುದೆ ಅವಯವವು ಉಳಿದೆಲ್ಲವು ತಕ್ಷಣ ಎಚ್ಚರಗೊಳ್ಳುವವು; ಯಾರ ನೋವಿಗೂ ಸ್ಪಂದಸದಿರುವವರು ಮನುಜನ ಹೆಸರಿಗೇ ಕಳಂಕ ತರುವವರು ! ಇದು ಇರಾಣ ದೇಶದ 12ನೆಯ ಶತಮಾನದ ಜನಪರ ಸೂಫೀ ಕವಿ ಶೇಖ್ ಸಾದಿಯವರ ಗುಲಿಸ್ತಾನ್ (ಹೂದೋಟ) ಎಂಬ ಕಾವ್ಯಸಂಕಲನದಲ್ಲಿಯ ಒಂದು ಮಾರ್ಮಿಕ ಮಾದರಿ. ಕವಿಗೆ ವಿಶ್ವವಿಖ್ಯಾತಿಯನ್ನು ತಂದಿತ್ತ ಸರಳ ಕವಿತೆ. ಮಾನವಕುಲದಲ್ಲಿರುವ ಸಮಾನತೆ ಮತ್ತು ಏಕತೆಯನ್ನೇ ಲೋಕಕ್ಕೆ ನೆನಪಿಸಿಕೊಟ್ಟ ಈ ಸುಧಾರಕ ಮನೋವೃತ್ತಿಯ ಸೂಫಿ ಕವಿ ಭೌಗೋಲಿಕವಾಗಿ ದೂರವಿದ್ದರೂ ನಮ್ಮ ಕರ್ನಾಟಕದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ವಚನ ಸಾಹಿತ್ಯಾಂದೋಲನದ ಸಮಕಾಲೀನನಾಗಿದ್ದನೆನ್ನುವುದು ಒಂದು ಆಕಸ್ಮಿಕ. ಹಾಗೆ ಯೋಚಿಸಿದರೆ ಎತ್ತಣ ಮಾಮರ ಎತ್ತಣ ಕೋಗಿಲೆ, ಎತ್ತಣಿಂದೆತ್ತ ಸಂಬಂಧವಯ್ಯಾ! ಎಂಬ ಅಲ್ಲಮವಾಣಿಯನ್ನೇ ನೆನಪಿಸುವ ಹೋಲಿಕೆಯಿದು. ಎತ್ತಣ ಕರ್ನಾಟಕ ಎತ್ತಣ ಇರಾಣ! ಎತ್ತಣ ಕಲ್ಯಾಣ ಎತ್ತಣ ಶಿರಾಜ್ ಪಟ್ಟಣ! ಶಿರಾಜ್ ಇರಾಣ ದೇಶದಲ್ಲಿ 6ನೆಯ ದೊಡ್ಡ ಪಟ್ಟಣ. ಕವಿಗಳು, ಮದಿರೆ ಮತ್ತು ತರತರದ ಹೂವುಗಳಿಗೆ ಹೆಸರಾದ ಪಟ್ಟಣ. ಪಟ್ಟಣದ ತುಂಬೆಲ್ಲ ಹಸಿರು ಮುರಿಯುವ ತೋಟಗಳು, ಕಣ್ಣು ಕೋರೈಸುವ ರಸಭರಿತ ಹಣ್ಣುಗಳು. ಇಂಥ ಸುಂದರವಾದ ಪಟ್ಟಣದಲ್ಲಿ 1184 ರಲ್ಲಿ ಜನ್ಮವೆತ್ತ್ತಿ ಬದುಕಿನ ಏರು-ಪೇರುಗಳನ್ನೆಲ್ಲ ದಾಟಿ ಸಾವು-ನೋವುಗಳನ್ನೆಲ್ಲ ಮೀಟಿ ಮುಸ್ಲಹುದ್ದೀನ್ (ಧರ್ಮಸುಧಾರಕ) ಎನಿಸಿಕೊಂಡ ಈ ಮಹಾಚಿಂತಕ ಕವಿ ಶೇಖ್ ಸಾದಿಯವರೂ ಸರಿಸುಮಾರು ನಮ್ಮ ನಾಡಿನ ಶರಣರಾಂದೋಲನದ ಕಾಲದಲ್ಲಿಯೇ ಹೆಚ್ಚು-ಕಡಿಮೆ ಅವರಂಥದೇ ಸಂದೇಶವನ್ನು ತಮ್ಮ ಸರಳ ಶೈಲಿಯ ಕಾವ್ಯಮಾಧ್ಯಮದ ಮೂಲಕ ಸಾರಿದ್ದೊಂದು ಯೋಗಾಯೋಗವೆನ್ನಬೇಕು. ವೈಚಾರಿಕ ಹಾಗೂ ಸಾಂಸ್ಕೃತಿಕ ಜಾಗತೀಕರಣಕ್ಕೆ ಯಾವ ದೇಶವೇನು! ಯಾವ ಕಾಲವೇನು! ವೈಚಾರಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ನಡುವೆಯೂ ಸಾಮ್ಯದ ರಸಸ್ಥಾನಗಳು ಬೆಳೆದು ನಿಂತೇ ಇರುತ್ತವೆ ! ಕೂತಲ್ಲೇ ಕೂತು ವೈಚಾರಿಕ ಸ್ವರೂಪದ ವಿಶ್ವವ್ಯಾಪಕ ಪರ್ಯಟನ ಮಾಡುವವರಿಗೆ ಇವೆಲ್ಲ ಕುತೂಹಲದ ಸಂಗತಿಗಳೇ. ಶೇಖ್ ಸಾದಿ ಕನ್ನಾಡಿನ ವಚನಸಾಹಿತ್ಯದ ಗಾಳಿಯುಂಡವರಂತೆ ಹಾಡಿದರೂ, ಅವರು ಬದುಕಿದ್ದು ಹಿಂಡನಗಲಿದ ಗಜವಾಗಿ ಊರೂರಿಗೆ ಅಲೆದ ನಮ್ಮ ಸರ್ವಜ್ಞ ಕವಿಯಂತೆ. ಅವರು ಸದಾ ಸಂಚಾರಿ; ವಿಶ್ವವಿರಾಗಿ! ಫಕೀರ ವ್ರತವನ್ನು ಸ್ವೀಕರಿಸಿ, ಊರೂರು ಸುತ್ತುತ್ತ, ಅವರು ರಚಿಸಿ ಹಾಡಿದ ಪದ್ಯಗಳಲ್ಲಿ ಒಂದು ಮಾದರಿ ಇಲ್ಲಿದೆ: ಪ್ರಪಂಚದ ಎಲ್ಲಾ ಪಿತೃಪ್ರಧಾನ ವ್ಯವಸ್ಥೆಗಳಲ್ಲಿ ಪುರುಷನ ಮೇಲೆ ಸ್ತ್ರೀಯ ಅವಲಂಬನೆಯು ಅನಿವಾರ್ಯವಾಗಿರುತ್ತದೆ. ಗಂಡನಿಲ್ಲದಿದ್ದರೆ ಜೀವನವೇ ಇಲ್ಲವೆಂದು ಸತಿ-ಸಹಗಮನ ಪದ್ಧತಿ ರೂಢಿಗೆ ಬಂದಂತಹ ನಮ್ಮದೇ ದೇಶದಲ್ಲಿ ಈ ಅನಿವಾರ್ಯತೆಯ ಸ್ವರೂಪ ಇನ್ನಷ್ಟು ಗಂಭೀರವಾಗಿದೆ. ಪ್ರತೀ ಕುಟುಂಬದಲ್ಲೂ ಸ್ತ್ರೀಯರ ಪಾತ್ರ ಎಷ್ಟೇ ಪ್ರಾಮುಖ್ಯವಾಗಿದ್ದರೂ ಅವಳ ಅಂತಸ್ತು ಮಾತ್ರ ಪುರುಷನ ಅಂತಸ್ತಿಗಿಂತಲೂ ಕಡಿಮೆಯೇ ಇರುತ್ತದೆ. ಪತಿಯನ್ನು ಕಳೆದುಕೊಂಡ ಜೀವನ ಸಾಮಾಜಿಕವಾಗಿ ಅವಹೇಳನಕಾರಿಯಲ್ಲದೆ ಆರ್ಥಿಕವಾಗಿ ದುಸ್ತರವೂ ಆಗಿರುವುದರಿಂದ ಸ್ತ್ರೀಯರು ಸಾಮಾನ್ಯವಾಗಿ ಮುತ್ತೈದೆಯ ಸಾವನ್ನು ಬೇಡುತ್ತಾರೆ. ಹೀಗಿದ್ದಾಗಲೂ ಆಕಸ್ಮಿಕವಾಗಿ ಪತಿಯೇ ಮರಣಹೊಂದಿದಾಗ, ಮರುಮದುವೆಗೆ ಅವಕಾಶವಿಲ್ಲದಿದ್ದಾಗ ಎರಡು ಹೊತ್ತು ಊಟಕ್ಕಾದರೂ ತನ್ನ ಕಾಲಮೇಲೆ ತಾನು ನಿಲ್ಲುವ ಅನಿವಾರ್ಯತೆ ಸ್ತ್ರೀಗೆ ಬರುತ್ತದೆ. ಕೆಲವು ಸಲ ಮಕ್ಕಳ ಹಾಗೂ ಇಡೀ ಕುಟುಂಬದ ಭಾರವನ್ನು ಅವರು ಹೊರಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಸಾಮಾನ್ಯವಾಗಿ ಸ್ತ್ರೀಯರು ಮೊರೆಹೋಗುವ ಉದ್ಯೋಗವೆಂದರೆ ತಮ್ಮ ಗಂಡಂದಿರು ಮಾಡುತ್ತಿದ್ದ ಉದ್ಯೋಗ. ಉದಾಹರಣೆಗೆ, ಒಕ್ಕಲುತನ ಮಾಡುತ್ತಿದ್ದವನ ವಿಧವೆ ಒಕ್ಕಲುತನವನ್ನೇ ಮಾಡುತ್ತಾಳೆ. ನೇಕಾರಿಕೆಯನ್ನು ಮಾಡುತ್ತಿದ್ದವನ ವಿಧವೆ ನೇಕಾರಿಕೆಯನ್ನೆ ಮಾಡುತ್ತಾಳೆ. ಈ ಬಗೆಯ ಪರಿಸ್ಥಿತಿ ಕುಶಲಕರ್ಮಿಗಳಿಗೂ ಅನ್ವಯಿಸುತ್ತದೆ. ಇಂತಹ ಕುಶಲಕರ್ಮಿಗಳಲ್ಲಿ ಒಂದು ಅಕ್ಕಸಾಲಿಗ ವೃತ್ತಿ. ಪ್ರಸ್ತುತ ಲೇಖನದಲ್ಲಿ ಅನಿವಾರ್ಯ ಕಾರಣಗಳಿಂದಾಗಿ ಅಕ್ಕಸಾಲಿಗ ಮಹಿಳೆಯರು ಅಕ್ಕಸಾಲಿಗ ವೃತ್ತಿಯನ್ನು ಅವಲಂಬಿಸಿ, ಉದ್ಯಮಶೀಲತೆಯನ್ನು ಬೆಳೆಸಿಕೊಳ್ಳುವ ಸಾಧ್ಯತೆಯನ್ನು ಸಮಾಜಶಾಸ್ತ್ರೀಯ ದೃಷ್ಟಿಕೋನದಿಂದ ವಿಶ್ಲೇಷಿಸಲಾಗಿದೆ.
ಭಾರತದ ಅತ್ಯಂತ ಪ್ರಾಚೀನ ಭಾಷೆಗಳಲ್ಲೊಂದಾದ ಸಂಸ್ಕೃತದಲ್ಲಿ ಬಹಳ ಉತ್ತಮವಾದ ಸಾಹಿತ್ಯ ರಚನೆಯಾಗಿದೆ. ವೇದ ಸಾಹಿತ್ಯದಿಂದ ಆರಂಭವಾಗಿ, ಇತಿಹಾಸ-ಪುರಾಣಗಳು, ಸೂತ್ರಗಳು, ಕೋಶಗಳು, ಸ್ಮೃತಿ ಗ್ರಂಥಗಳು, ಶಾಸ್ತ್ರಗ್ರಂಥಗಳು, ಕಾವ್ಯ-ನಾಟಕಗಳು ಹೀಗೆ ಸಂಸ್ಕೃತ ಸಾಹಿತ್ಯ ರಚನೆ ನೂರಾರು ವರ್ಷಗಳು ಅವ್ಯಾಹತವಾಗಿ ನಡೆದು ಬಂದಿದೆ. ಸಂಸ್ಕೃತವು ಭಾರತದ ಹಲವಾರು ಭಾಷೆಗಳ ಉಗಮಕ್ಕೆ ಕಾರಣವಾದುದೇ ಅಲ್ಲದೆ ಕವಿಗಳಿಗೆ ವಿದ್ವಾಂಸರಿಗೆ ಅಗಾಧವಾದ ವಸ್ತುವನ್ನೂ ಸ್ಫೂರ್ತಿಯನ್ನೂ ಒದಗಿಸಿಕೊಟ್ಟಿದೆ. ರಾಮಾಯಣ, ಮಹಾಭಾರತ, ಪುರಾಣಗಳು ಹಾಗೂ ಬೃಹತ್ಕಥೆಯಂತಹ ಗ್ರಂಥಗಳು ಮುಂದಿನ ಕ್ಲಾಸಿಕಲ್ ಎಂದು ಕರೆಸಿಕೊಳ್ಳುವ ಸಂಸ್ಕೃತ ಸಾಹಿತ್ಯಕ್ಕೆ ಮೂಲ ಸಾಮಗ್ರಿಯನ್ನು ಒದಗಿಸಿದೆ.
ಬೇಗ ಊಟ ಮಾಡು. ಇಲ್ಲದಿದ್ದರೆ ಪೊಲೀಸ್ ಬರ್ತಾರೆ ನಮ್ಮ ಸುತ್ತಮುತ್ತಲಲ್ಲಿ ಈಗಲೂ ಈ ಮಾತು ಕೇಳಿ ಬರುತ್ತಿರುವುದು ಪೋಷಕತ್ವದ ವಿಪರ್ಯಾಸ. ಇಂತಹ ಹೆದರಿಕೆಯ ಮಾತಿನ ಮಧ್ಯೆಯೇ ಬೆಳೆದು ಬರುವ ನಮಗೆ ಬೆಳೆದಂತೆ ಪೊಲೀಸರೆಂದರೆ ನಡುಕವುಂಟಾಗುವುದು ಬಹಳ ಸಹಜ. ಪೊಲೀಸರೆಂದರೆ ಯಮ ಸ್ವರೂಪಿಗಳು, ಅವರಿಂದ ಜೋಪಾನವಾಗಿರಿ, ಪೊಲೀಸರ ಕೈಗೆ ಸಿಕ್ಕಿಬಿದ್ದಿರೋ ಮುಗಿಯಿತು ಎಂಬಿವೇ ಎಚ್ಚರಿಕೆಗಳೂ ಇಲ್ಲದಿಲ್ಲ. ಪೊಲೀಸರಿಗೆ ದೊಡ್ಡವರೂ ಒಂದೇ, ಮಕ್ಕಳೂ ಒಂದೇ, ಗಂಡಸರೂ ಹೆಂಗಸರೂ ಎಲ್ಲರನ್ನೂ ಒಂದೇ ತರಹ ಅವರು ನೋಡುವುದು ಎಂದೂ ಹೇಳುವವರು ಇಲ್ಲದಿರಲಿಲ್ಲ.
ದೇಶಕ್ಕೇ ಮಾದರಿಯಾಗುವಂಥ ಸಮರ್ಥ, ದಕ್ಷ ಲೋಕಾಯುಕ್ತ ವ್ಯವಸ್ಥೆ ಹೊಂದಿರುವ ಕರ್ನಾಟಕದಲ್ಲಿ ದಾಳಿ ವೇಳೆ ಭ್ರಷ್ಟರಿಂದ ವಶಪಡಿಸಿಕೊಂಡ ಆಸ್ತಿಯ ವಿಲೇವಾರಿ ಮಾತ್ರ ಸಾಧ್ಯವಾಗುತ್ತಿಲ್ಲ. ಈ ವಿಚಾರದಲ್ಲಿ ಅಧಿಕಾರವಿಲ್ಲದೆ ಕೈಕಟ್ಟಿ ಕುಳಿತಿದೆ ಲೋಕಾಯುಕ್ತ.
ಕಳೆದ 10 ವರ್ಷಗಳಲ್ಲಿ ಭ್ರಷ್ಟ ಅಧಿಕಾರಿಗಳಿಂದ ಕರ್ನಾಟಕ ವಶಪಡಿಸಿಕೊಂಡ 500ಕೋಟಿಗೂ ಅಧಿಕದ ಅಕ್ರಮ ಆಸ್ತಿ ಈಗಲೂ ಮಾಲ್ಖಾನಾದಲ್ಲಿ ಕೊಳೆಯುತ್ತಿದೆ, ಆದರೆ ಬಿಹಾರ ಸರ್ಕಾರದ ಭ್ರಷ್ಟರಿಂದ ಜಫ್ತಿ ಮಾಡಿದ ಆಸ್ತಿಯ ಕ್ಷಿಪ್ರ ವಿಲೇವಾರಿಗೆ ಮಾದರಿ ಎನಿಸುವಂತಹ ಕಾನೂನು ರೂಪಿಸಿದೆ. ಪೀಠಿಕೆ:
ಭಾರತಕ್ಕೆ ಖ್ಯಾತಿ ತಂದಿರುವ ಹಲವಾರು ಹೆಮ್ಮೆಗಳಲ್ಲಿ ಕರ್ನಾಟಕದ ಕೋಲಾರ ಚಿನ್ನದಗಣಿ ಅತ್ಯಂತ ಪ್ರಮುಖವಾದುದು. ಭಾರತದ ಒಟ್ಟಾರೆ ಚಿನ್ನದ ಉತ್ಪಾದನೆಯಲ್ಲಿ ಅತಿ ಹೆಚ್ಚು ಉತ್ಪಾದನೆಯಾಗುತ್ತಿದುದು ಕೋಲಾರದ ಚಿನ್ನದ ಗಣಿಯಿಂದ. ಅಷ್ಟು ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿ ಸಹ ಕೋಲಾರ ಚಿನ್ನದ ಗಣಿ ಅತ್ಯಂತ ಪ್ರಮುಖವಾದುದ್ದು. ಒಂದು ಘಟನೆ. 1940 ರಲ್ಲಿ ಗಾಂಧೀಜಿ ವೈಯುಕ್ತಿಕ ಸತ್ಯಾಗ್ರಹ ಆರಂಭಿಸಿದ್ದರು. ಕಾಂಗ್ರೆಸ್ನ ಕರ್ನಾಟಕ ಶಾಖೆ ಕಾರ್ಯದರ್ಶಿಯಾಗಿದ್ದ ಶಂಕರ ಕುರ್ತಕೋಟಿಯವರು ರಾಜ್ಯದ ಐದು ನೂರು ಸತ್ಯಾಗ್ರಹಿಗಳ ಪಟ್ಟಿಯೊಂದಿಗೆ ಗಾಂಧೀಜಿಯವರ ಅನುಮತಿ ಪಡೆಯಲು ವಾರ್ಧಾ ಆಶ್ರಮಕ್ಕೆ ತೆರಳಿದ್ದರು. ಹಿಂತಿರುಗುವ ಮುನ್ನ ಗಾಂಧೀಜಿಯವರ ಭೇಟಿ ಸಾಧ್ಯವಾಯಿತು.
ಭಾರತದ ಸಂಸ್ಕೃತಿ ಶ್ರೀಮಂತವಾಗಿತ್ತು, ಸನಾತನ ಧರ್ಮವು ಶ್ರೇಷ್ಠತೆಯಿಂದ ಕೂಡಿತ್ತು. ಭವ್ಯ ಪರಂಪರೆಯ ಹಿನ್ನೆಲೆಯನ್ನು ಹೊಂದಿತ್ತು. ಗುಪ್ತರ ಕಾಲ ಸುವರ್ಣಯುಗವಾಗಿತ್ತು. ವಿಜಯನಗರ ಅರಸರ ಕಾಲದಲ್ಲಿ ಚಿನ್ನ ಬೆಳ್ಳಿ, ಮುತ್ತು ರತ್ನಗಳನ್ನು ಬೀದಿಗಳಲ್ಲಿ ರಾಶಿ ರಾಶಿಯಾಗಿಟ್ಟು ಮಾರಾಟ ಮಾಡುತ್ತಿದ್ದರು, ಎಂಬಿತ್ಯಾದಿ ಇತಿಹಾಸದ ನೆನಪುಗಳ ಅರಿವಿದ್ದವರಿಗೆ ದೇಶದ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಅಸಹ್ಯಮೂಡಿಸದೆ ಇರದು. ಇತಿಹಾಸದ 3000 ವರ್ಷದಲ್ಲಿ ಗ್ರೀಕರು, ಟರ್ಕರು, ಪೋರ್ಚುಗೀಸರು, ಫ್ರೆಂಚರು, ಡಚ್ಚರು ಭಾರತದ ಮೇಲೆ ದಾಳಿ ಮಾಡಿ ಸಂಪತ್ತು ಲೂಟಿಮಾಡಿ ನಮ್ಮನ್ನು ಮಾನಸಿಕವಾಗಿ ಅವರ ಸಂಸ್ಕೃತಿ ಪದ್ಧತಿಗಳ ದಾಸರನ್ನಾಗಿಸಿದರು. ಆ ಸಂಸ್ಕೃತಿಯ ಅಂದಾನುಕರಣೆಯಲ್ಲಿ ನಾವುಗಳು ನಮ್ಮ ನಮ್ಮ ಜವಾಬ್ದಾರಿಗಳನ್ನು ಮರೆತು ವರ್ತಿಸುತಿದ್ದೇವೆ.
ಪಾರಕ್ಕ ಹಾಸಿಗೆ ಹಿಡಿದಾಳಂತೆ ಪಾರವ್ವನ ಕೈ ಕಾಲು ಬಾತಾವಂತೆ ಪಾರಿ ಇನ್ನೇನ ಉಳಿಯಾಂಗ ಕಾಣೂದಿಲ್ಲಂತ ಸುದ್ದಿ ಚಿತ್ರ-ವಿಚಿತ್ರ ರೂಪ ತಳೆದು ಮಣ್ಣೂರಿನ ತುಂಬ ಸುಳಿದಾಡಿತು. ಕಣ್ಣಿಂದ ನೋಡಿದವರಿಗಿಂತ ಹೆಚ್ಚಾಗಿ ವರ್ಣರಂಜಿತವಾಗಿ ಬಣ್ಣಿಸಿ ಮಾತನಾಡಿದರು. ಊರಿನ ಗಂಡು-ಹೆಣ್ಣು ಮಕ್ಕಳೆಲ್ಲ, ಮನಿಷ್ಯಾ ಅಂದಮ್ಯಾಲೆ ಜಡ್ಡು ಜಾಪತ್ರಿ ಬರೂವ. ಹುಟ್ಟಿದವರು ಸಾಯೂವವರ. ಆದರ ಪಾರವ್ವಗ ಜಡ್ಡಾತು ಅಂದರ ನಂಬಾಕ ಆಗಾಕಿಲ್ಲ ಎಂದು ಒಳಗೇ ತಳಮಳಿಸಿದರು ಕೆಲವರು. ಈಟ ದಿನಾ ಮೆರದಾಡಿ ಕಡೀಕ ಬಕಬಾರ್ಲೆ ಬಿದ್ಲಲ್ಲ ಎಂದು ಒಳಗೊಳಗೇ ಹಿಗ್ಗಿ ಹಿರೇಕಾಯಾಗಿ ಹಾಲು ಕುಡಿದವರೂ ಹಲವರಿದ್ದರು ಮಣ್ಣೂರಿನಲ್ಲಿ.
ಕಳೆದ ಕೆಲ ದಶಕಗಳಲ್ಲಿ ಕುಟುಂಬವೆಂಬ ಸಂಸ್ಥೆ, ಅದರ ರಚನೆ ಮತ್ತು ಕಾರ್ಯ ವಿಧಾನಗಳಲ್ಲಿ ಮಹತ್ವದ ಬದಲಾವಣೆಗಳನ್ನು ಕಾಣುತ್ತಾ ಇದೆ. ಅದರ ಬಹುತೇಕ ಪಾರಂಪರಿಕ ಕಾರ್ಯಗಳನ್ನು ಮಕ್ಕಳು ಹೆರುವುದು, ಅವುಗಳನ್ನು ಪಾಲನೆ ಮಾಡುವುದು ಬಿಟ್ಟರೆ ಹೊರಗಣ ಸೇವಾ ಸಂಸ್ಥೆಗಳು ವಹಿಸಿಕೊಂಡಿವೆ. ಉದಾಹರಣಾರ್ಥವಾಗಿ, ಶಾಲೆ, ಮಾರುಕಟ್ಟೆ, ಸಮೂಹ ಮಾಧ್ಯಮಗಳು ಇತ್ಯಾದಿ. ನಗರೀಕರಣ, ಔದ್ಯಮೀಕರಣ ಮುಂತಾದ ಆಧುನಿಕ ಪ್ರಕ್ರಿಯೆಗಳು ಕುಟುಂಬದ ಪಾರಂಪರಿಕ ಸಂಘಟನೆ ಹಾಗೂ ಸ್ಥಿರತೆಯನ್ನು ಬಹುಮಟ್ಟಿಗೆ ಅಸ್ಥಿರಗೊಳಿಸಿವೆ. ತತ್ಪರಿಣಾಮವಾಗಿ, ಕುಟುಂಬವು ಹಲವಾರು ಸಾಮಾಜಿಕ, ಮಾನಸಿಕ ಹಾಗೂ ಆರ್ಥಿಕ ವಿವಾದಾತ್ಮಕ ವಿಷಯಗಳನ್ನು ಹುಟ್ಟು ಹಾಕಿದೆ. ಉದಾಹರಣಾರ್ಥವಾಗಿ, (ಇಂದು) ಮಕ್ಕಳಲ್ಲಿ ಹಾಗೂ ಯುವಕರಲ್ಲಿ ಅಪಮಾರ್ಗದ ಕಡೆಗಿನ ಸೆಳೆತವನ್ನು ಹೆಚ್ಚು ಪ್ರಮಾಣದಲ್ಲಿ ಕಾಣುತ್ತೇವೆ. ತಮ್ಮ ಸ್ವಕೀಯತೆಯನ್ನು ಉದ್ಘೋಷಿಸುವ, ಸ್ಥಾಪಿಸಬಯಸುವ ಪ್ರಯತ್ನದಲ್ಲಿ, ತರುಣ ತರುಣಿಯರು ಕೌಟುಂಬಿಕ ರೂಢಿಗಳನ್ನು, ಸಾಂಪ್ರದಾಯಿಕ ಕಟ್ಟಳೆಗಳನ್ನು ಮೀರುತ್ತಿದ್ದಾರೆ. ಮಾದಕ ಪದಾರ್ಥಗಳ ವ್ಯಸನ, ಮದ್ಯಸೇವನೆ, ದಾಂಪತ್ಯ ಜೀವನದಲ್ಲಿ ಬಿರುಕು, ಗಂಡಹೆಂಡಿರು ಬೇರಾಗುವಿಕೆ, ವಿಮುಖರಾಗುವಿಕೆ ಮತ್ತು ವಿವಾಹ-ವಿಚ್ಛೇದನ, ಪ್ರೇಮವಿವಾಹ, ದಿನನಿತ್ಯದ ಸಂಸಾರದಲ್ಲಿ ನೀಡಲ್ಪಡುವ ಹಿಂಸೆ ಮತ್ತು ವಯೋವೃದ್ಧರ ದುರ್ಲಕ್ಷ್ಯ ಇವುಗಳು ಆಧುನಿಕ ಸಮಾಜದಲ್ಲಿ ಕುಟುಂಬದ ಒಡೆದು ಕಾಣುವ ಲಕ್ಷಣಗಳಾಗುತ್ತವೆ.
ಬಿಡಿಎ ಪ್ಲ್ಯಾನ್‍ನಲ್ಲಿ ಆಗಿರುವ ಲೋಪದೋಷಗಳ ಬಗ್ಗೆ ದೂರು ನೀಡಲಾಗಿ ನಗರ ಯೋಜನಾ ವಿಭಾಗದವರು ಬಿಡಿಎ ಪ್ಲ್ಯಾನ್‍ನಲ್ಲಿರುವ ಲೋಪದೋಷಗಳನ್ನು ಒಪ್ಪಿಕೊಂಡು ಸರಿಪಡಿಸಲು ಸರ್ವೆ ಪ್ರಾಧಿಕಾರದ ಭೂಮಾಪಕರಿಗೆ ವಹಿಸಿರುತ್ತಾರೆ. ಸುಮಾರು 3 ತಿಂಗಳು ಕಳೆದರೂ ಈ ಕುರಿತು ಯಾವುದೇ ಕ್ರಮ ಭೂಮಾಪಕರು ತೆಗೆದುಕೊಂಡಿರುವುದಿಲ್ಲ. ಇನ್ನು ಎಷ್ಟು ದಿನ ಕಾಯಬೇಕು ? ಇಲ್ಲಿ ಅಧಿಕಾರಿಗಳ ಮಂದಗತಿಯ ಕೆಲಸ ಸಾರ್ವಜನಿಕರಿಗೆ ಆಗುವ ತೊಂದರೆ ಅರ್ಥೈಸಿಕೊಂಡು ಕೆಲಸ ನಿರ್ವಹಿಸಿದರೆ ಒಳಿತು.
ಅರ್ಕಾವತಿ ನದಿ ಪುನಶ್ಚೇತನದ ಕನಸಿಗೆ 14 ವರ್ಷಗಳಾದವು. 2003ರ ಏಪ್ರಿಲ್ 22 ರಂದು ಡಾ.ರಾಜೇಂದ್ರ ಸಿಂಗ್ ಅವರ ಕರ್ನಾಟಕ ಜಲಚೇತನ ಯಾತ್ರೆಯ ಭಾಗವಾಗಿ ದೊಡ್ಡಬಳ್ಳಾಪುರದ ರಾಮಾಂಜನೇಯ ಚತ್ರದಲ್ಲೊಂದು ದೊಡ್ಡ ಸಭೆ ನಡೆಯಿತು. ಆಗಲೇ ಜಲ ಸಂರಕ್ಷಣೆಯಲ್ಲಿ, ಕೈಗಾರಿಕಾ ಮಾಲಿನ್ಯ ತಡೆಯುವ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ದೊಡ್ಡಬಳ್ಳಾಪುರದ ಜನತೆಗೆ ಜಲಸಂರಕ್ಷಣೆಯ ಕಾರ್ಯವು ಇಡೀ ನದಿ ಜಲಾನಯನದಲ್ಲಿ ನಡೆಯಬೇಕು, ಮಳೆ ನೀರನ್ನು ಭೂಮಿಗೆ ಇಂಗಿಸಿ ಜಲಚೇತನ ಮಾಡಬೇಕು ಎಂದು ಸಿಂಗ್ ಅವರು ಕರೆ ಕೊಟ್ಟರು. ಅಂದು ಆರಂಭವಾದ ಪುನಶ್ಚೇತನದ ಪ್ರಯತ್ನಕ್ಕೆ ಮುಂದೆ ಸರಕಾರವೂ ಕೂಡ ಸ್ಪಂದಿಸುವಂತೆ ಆಯಿತು. ಆದರೆ ಒಂದು ಹೆಜ್ಜೆ ಮುಂದಿಟ್ಟ ಸರಕಾರ ಎರಡು ಹೆಜ್ಜೆ ಹಿಂದೆ ಇಟ್ಟಿದೆ. ಆದರೆ ನಾಗರೀಕರು ಸುಮ್ಮನಿರುವಂತಿಲ್ಲ. ನದಿ ಪುನಶ್ಚೇತನ ಸಾಧ್ಯ ಎಂಬುದು ಹಲವರ ನಂಬಿಕೆ. ಹಾಗೆ ನಂಬಲೇಬೇಕು. ಯಾಕೆಂದರೆ ಜೀವನಕ್ಕೆ ನೀರು ಬೇಕೆ ಬೇಕು ಎಂದಾದರೆ ಜಲವನ್ನು, ಜಲ ಮೂಲವನ್ನು ಉಳಿಸಲೇಬೇಕಲ್ಲವೇ!
ಭಾರತದಲ್ಲಿ ಸಮಾಜಕಾರ್ಯ ಶಿಕ್ಷಣ ಪ್ರಾರಂಭವಾಗಿ ಎಂಟು ದಶಕಗಳೇ ಸಂದವು. 1936 ಮುಂಬಯಿಯ ಟಾಟಾ ಸಂಸ್ಥೆಯಲ್ಲಿ ಪ್ರಾರಂಭವಾದ ಸಮಾಜಕಾರ್ಯ ಶಿಕ್ಷಣ ಇಂದು ದೇಶದ ಎಲ್ಲಾ ರಾಜ್ಯಗಳಿಗೂ ತಲುಪಿದೆ. ಪ್ರಾರಂಭದ ಹಂತದಲ್ಲಿ ಎಲ್ಲವೂ ವಿದೇಶಿಮಯವಾಗಿತ್ತು ಈ ಸಮಾಜಕಾರ್ಯದ ಶಿಕ್ಷಣ ; ಪಠ್ಯಕ್ರಮ, ಪುಸ್ತಕಗಳು, ರಚನೆ ಮತ್ತು ಸ್ವರೂಪ ಹಾಗೂ ಅಧ್ಯಾಪಕರೂ ಕೂಡಾ. ಈ ಕಳೆದ ಎಂಟು ದಶಕಗಳಲ್ಲಿ ಹಲವಾರು ಪ್ರಗತಿಪರ ಬದಲಾವಣೆಗಳು ಸಮಾಜಕಾರ್ಯ ಶಿಕ್ಷಣದಲ್ಲಿ ಕಾಣಸಿಗುತ್ತಿವೆ. ಆದರೂ ಕೂಡ ಹೇಳಿಕೊಳ್ಳುವಂತಹ ಗುಣಾತ್ಮಕ ಪರಿವರ್ತನೆ ತರುವಲ್ಲಿ ನಾವೆಲ್ಲರೂ ವಿಫಲರಾಗಿದ್ದೇವೆ ಎಂದರೆ ಅತಿಶಯೋಕ್ತಿಯಾಗಲಾರದು.
ಮಕ್ಕಳ ನ್ಯಾಯ ಕಾಯಿದೆ ಈ ಸಮಾಜದ ಪ್ರತಿಯೊಬ್ಬರಿಗೂ ಸಂಬಂಧಿಸಿದ್ದು. ಮಕ್ಕಳೊಡನೆ ನವು ಒಡನಾಡುತ್ತಿದ್ದರೆ ನಿಮಗೆ ಈ ಕಾಯಿದೆಯ ಮೂಲ ಅಂಶಗಳ ಪರಿಚಯವಿರಲೇಬೇಕು. ಮಕ್ಕಳು, ಕುಟುಂಬ, ಮಕ್ಕಳೊಡನೆ ಕೆಲಸ ಮಾಡುವ ಸಂಸ್ಥೆಗಳು, ಸಂಸ್ಥೆಗಳ ದಾಖಲೆ, ಉಸ್ತುವಾರಿ ಮತ್ತು ನಿಯಂತ್ರಣ; ವಿವಿಧ ಹಿನ್ನೆಲೆಯ ಮಕ್ಕಳ ಪೋಷಣೆ, ಆರೈಕೆ, ರಕ್ಷಣೆ, ಅವಶ್ಯಕತೆಗಳ ಪೂರೈಕೆ, ಅನಾಥರು, ಮನೆಯನ್ನು ತೊರೆದವರು, ಓಡಿಸಲ್ಪಟ್ಟವರು, ಹೆತ್ತವರಿಂದ ತೊರೆಯಲ್ಪಟ್ಟವರು, ಕಾನೂನಿನೊಡನೆ ಸಂಘರ್ಷಕ್ಕೆ ಬಿದ್ದ ಮಕ್ಕಳು, ಕಾನೂನಿನ ಸಂಪರ್ಕಕ್ಕೆ ಬಂದ ಮಕ್ಕಳು ಹಾಗೂ ಇತರರಿಂದ ಹಿಂಸೆ, ತೊಂದರೆ, ಶೋಷಣೆ, ಅಪರಾಧಕ್ಕೀಡಾದ ಮಕ್ಕಳು, ಹೀಗೆ ವಿವಿಧ ಪರಿಸ್ಥಿತಿಗಳಿಗೆ ಅನುಗುಣವಾಗಿ 18 ವರ್ಷದೊಳಗಿನ ಮಕ್ಕಳಿಗೆ ಭಾರತ ಸರ್ಕಾರ ನೀಡುವ ಸಾಂವಿಧಾನಿಕ ರಕ್ಷಣೆಯ ಅನಾವರಣ ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯಿದೆ 2015. [ಗಮನಿಸಿ: ಈ ಕಾಯಿದೆಯನ್ನು ಹೊರಡಿಸುವ ಮೂಲಕ ಈ ಹಿಂದೆ ಇದ್ದ ಮಕ್ಕಳ ನ್ಯಾಯ ಕಾಯಿದೆಗಳನ್ನು (1986, 2000) ರದ್ದುಪಡಿಸಲಾಗಿದೆ].
ಪ್ರದೇಶದ ಸಮಗ್ರ ಅಭಿವೃದ್ಧಿ ಮತ್ತು ಯೋಜನೆ: ಸಂಸದರ ಆದರ್ಶ ಗ್ರಾಮ ಯೋಜನೆಗೆ ಆಯ್ಕೆಯಾದ ಹಾರೋಬೆಳವಾಡಿ ಗ್ರಾಮ.....7/24/2017 (Integrated Area Development and Planning: A Geographical Study of Harobelavadi Gram Panchayath, selected for Sansad Adarsh Gram Yojana (SAGY)) ಪೀಠಿಕೆ:
ಆದರ್ಶ ಗ್ರಾಮದ ಪರಿಕಲ್ಪನೆ ಹೊಸದೇನೂ ಅಲ್ಲ, ಪ್ರಾಚೀನ ಕಾಲದಿಂದಲೂ ಗ್ರಾಮಗಳನ್ನಾಗಲೀ, ರಾಜ್ಯವನ್ನಾಗಲೀ ಆದರ್ಶವಾಗಿಸುವ ಗೀಳು ರಾಜ-ಮಹಾರಾಜರಿಂದ ಸರಪಂಚರವರೆಗೂ ವ್ಯಾಪಿಸಿಕೊಂಡಿದೆ. ಮೌಲ್ಯಾಧಾರಿತ ಸಮಾಜ ಮತ್ತು ವಾತಾವರಣಗಳ ನಿರ್ಮಾಣಕ್ಕಾಗಿ ಮಾನವ ಸಂಪನ್ಮೂಲದ ಬಂಡವಾಳ, ಸಾಮಾಜಿಕ ಬಂಡವಾಳ ಮತ್ತು ಭೌತಿಕ ಬಂಡವಾಳಗಳ ಹೂಡುವಿಕೆ ಅನಿವಾರ್ಯವಾಗುತ್ತದೆ. ಆಯಾ ಕಾಲಮಾನಗಳಲ್ಲಿ ಮಿಂಚಿ ಮಾಯವಾದ ಅನೇಕ ನೇತಾರರು ಈ ಪ್ರಯತ್ನದಲ್ಲಿ ಕೆಲ ಮಟ್ಟಿನ ಸಾಧನೆಗಳನ್ನು ಮಾಡಿ ಹೆಸರುವಾಸಿಯಾದರು, ಇನ್ನು ಕೆಲವರು ಎಲೆಯ ಮರೆಯ ಕಾಯಿಯಂತೆ ತಮ್ಮ ಅಮೋಘ ಕೊಡುಗೆಯನ್ನು ಸಮಾಜಕ್ಕೆ ನೀಡಿದರು. ಕೆಲವರು ಕನಸಿನ ಸೌಧಗಳನ್ನು ಕಟ್ಟಿ ಕಣ್ಮರೆಯಾದರು. ಅಂಥ ನೇತಾರರಲ್ಲಿ ಮಹಾತ್ಮಾ ಗಾಂಧೀಜಿಯೂ ಒಬ್ಬರು. ತಂತ್ರಜ್ಞಾನಗಳ ಆವಿಷ್ಕಾರ ಪ್ರಾರಂಭವಾಗಿದ್ದರೂ ಭಾರತದಲ್ಲಿ ಲಭ್ಯವಿರುವ ಅಗಾಧ ಪ್ರಮಾಣದ ಮಾನವ ಸಂಪನ್ಮೂಲ, ಸಾಂಪ್ರದಾಯಿಕ ವ್ಯವಸಾಯ, ಸಂಪನ್ಮೂಲಗಳಾಧಾರಿತ ಗುಡಿ-ಕೈಗಾರಿಕೆಗಳ ಪ್ರಾಮುಖ್ಯತೆಯನ್ನರಿತೇ ಇರಬೇಕು, ರಾಮ ರಾಜ್ಯದ ಕನಸನ್ನು ಗ್ರಾಮ್ ಸ್ವರಾಜ್ದ ಹೆಸರಿನಲ್ಲಿ ಕಂಡಿದ್ದರು. ಆದರೆ ಅದನ್ನು ನನಸು ಮಾಡಲು ತದನಂತರದ ಎಷ್ಟೋ ರಾಜಕೀಯ ಧುರೀಣರು ಪ್ರಯತ್ನ ಪಟ್ಟು ಅಲ್ಲಲ್ಲಿ ಕೆಲ ಸಣ್ಣ-ಪುಟ್ಟ ಮಾದರಿಗಳನ್ನು ಮೊಳಕೆಯೊಡೆಸಿದರೂ ಪೂರ್ಣ ಪ್ರಮಾಣ ತಲುಪುವಷ್ಟರಲ್ಲಿಯೇ ಪಾಶ್ರ್ವ ಪೀಡಿತವಾಗಿ ಬಿಡುತ್ತವೆ. ಅದಕ್ಕೆ ಕಾರಣ ಹುಡುಕ ಹೋದರೆ ಧುರೀಣರಲ್ಲಿ ಕುಂದಿದ ಆಸಕ್ತಿ, ಸಮುದಾಯದಲ್ಲಿನ ಸಹಕಾರ ಮನೋಭಾವನೆಯ ಕೊರತೆ, ಕಾರ್ಯಾಂಗದ ನಿಷ್ಠೆಯ ಕೊರತೆ, ಆಧುನೀಕರಣದ ತುಡಿತ, ಸಂಪ್ರದಾಯ, ಸಂಸ್ಕೃತಿ, ಸಂಸ್ಕಾರಗಳ ಅನಾದರಣೆ, ಅರ್ಥಕಳೆದುಕೊಂಡಿರುವ ರಾಜಕೀಯದ ಪ್ರವೇಶ ಇತ್ಯಾದಿಗಳು ವೇದ್ಯವಾಗುತ್ತವೆ, ಒಟ್ಟಾರೆ ಮೌಲ್ಯಗಳ ಶಿಥಿಲೀಕರಣವೇ ದೊಡ್ಡ ಸಮಸ್ಯೆಯಾಗಿ ಗೋಚರಿಸುತ್ತದೆ. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|