Niruta Publications
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
Niruta Publications

ವ್ಯವಸ್ಥೆಯೊಂದೇ ಬದಲಾದರೆ ಸಾಕೇ...?

9/21/2017

0 Comments

 
Picture
ಭಾರತದ ಸಂಸ್ಕೃತಿ ಶ್ರೀಮಂತವಾಗಿತ್ತು, ಸನಾತನ ಧರ್ಮವು ಶ್ರೇಷ್ಠತೆಯಿಂದ ಕೂಡಿತ್ತು. ಭವ್ಯ ಪರಂಪರೆಯ ಹಿನ್ನೆಲೆಯನ್ನು ಹೊಂದಿತ್ತು. ಗುಪ್ತರ ಕಾಲ ಸುವರ್ಣಯುಗವಾಗಿತ್ತು. ವಿಜಯನಗರ ಅರಸರ ಕಾಲದಲ್ಲಿ ಚಿನ್ನ ಬೆಳ್ಳಿ, ಮುತ್ತು ರತ್ನಗಳನ್ನು ಬೀದಿಗಳಲ್ಲಿ ರಾಶಿ ರಾಶಿಯಾಗಿಟ್ಟು ಮಾರಾಟ ಮಾಡುತ್ತಿದ್ದರು, ಎಂಬಿತ್ಯಾದಿ ಇತಿಹಾಸದ ನೆನಪುಗಳ ಅರಿವಿದ್ದವರಿಗೆ ದೇಶದ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಅಸಹ್ಯಮೂಡಿಸದೆ ಇರದು. ಇತಿಹಾಸದ 3000 ವರ್ಷದಲ್ಲಿ ಗ್ರೀಕರು, ಟರ್ಕರು, ಪೋರ್ಚುಗೀಸರು, ಫ್ರೆಂಚರು, ಡಚ್ಚರು ಭಾರತದ ಮೇಲೆ ದಾಳಿ ಮಾಡಿ ಸಂಪತ್ತು ಲೂಟಿಮಾಡಿ ನಮ್ಮನ್ನು ಮಾನಸಿಕವಾಗಿ ಅವರ ಸಂಸ್ಕೃತಿ ಪದ್ಧತಿಗಳ ದಾಸರನ್ನಾಗಿಸಿದರು. ಆ ಸಂಸ್ಕೃತಿಯ ಅಂದಾನುಕರಣೆಯಲ್ಲಿ ನಾವುಗಳು ನಮ್ಮ ನಮ್ಮ ಜವಾಬ್ದಾರಿಗಳನ್ನು ಮರೆತು ವರ್ತಿಸುತಿದ್ದೇವೆ.
ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶ ಎಂದು ನಾವು ಚಿಕ್ಕವರಿಂದ್ದಾಗಿನಿಂದಲೂ ಕೇಳುತ್ತಾ ಬರುತ್ತಿದ್ದೇವೆ. ಭಾರತ ಮುಂದುವರಿದ ದೇಶವಾಗುವುದು ಯಾವಾಗ? ನಮ್ಮ ಸಾಧನೆಗಳು ವಿಶ್ವ ಮಟ್ಟದಲ್ಲಿ ಗುರುತಿಸಲ್ಪಡುತ್ತಿದ್ದರೂ ಭಾರತ ಅಭಿವೃದ್ಧಿ ಹೊಂದುತ್ತಿರುವ ಬಗ್ಗೆ ಇರಬೇಕಾದ ಆತ್ಮವಿಶ್ವಾಸ ನಮ್ಮಲಿಲ್ಲ. ನಾವುಗಳು ಸ್ವಾವಲಂಬಿಗಳು, ಸ್ವ-ಸಮರ್ಥರು ಎಂಬ ಭಾವನೆ ನಮ್ಮಲ್ಲಿ ಮೂಡುತ್ತಿಲ್ಲ. ಕಾರಣ ವ್ಯವಸ್ಥೆ ಬದಲಾದರೆ ಸಾಲದು, ವ್ಯವಸ್ಥೆಯೊಂದಿಗೆ ಮನಸ್ಸುಗಳೂ ಬದಲಾಗಬೇಕು. ನಮ್ಮಲ್ಲಿ ಮನಸ್ಸುಗಳು ಇನ್ನೂ ಬದಲಾಗಿಲ್ಲ.ಬದಲಾಗದಿದ್ದರ ಪರಿಣಾಮ: ಭ್ರಷ್ಟಾಚಾರ, ಸುಲಿಗೆ, ಅತ್ಯಾಚಾರ, ನಿರುದ್ಯೋಗ, ಅನಕ್ಷರತೆ, ಕೊಳೆಗೇರಿ, ಅನೈರ್ಮಲೀಕರಣ, ಪರಿಸರನಾಶ, ಇತ್ಯಾದಿಗಳು.
  
ನಾವುಗಳು ಈ ಸರಕಾರ ಅಸಮರ್ಥ, ನಮ್ಮ ಕಾನೂನುಗಳು ಓಬಿರಾಯನ ಕಾಲದವು ಎಂದು ಹೇಳುತ್ತೇವೆ. ಓಬಿರಾಯನ ಕಾಲದಲ್ಲಿನ ಕಾನೂನುಗಳಲ್ಲಿನ ಒಳ್ಳೆಯದನ್ನು ನಾವೆಷ್ಟು ಜನ ಪಾಲಿಸುತ್ತಿದ್ದೇವೆ? ಟ್ರಾಫಿಕ್ ಸಿಗ್ನಲ್ಗಳ ನೀತಿನಿಯಮಗಳನ್ನು ನಾವೆಷ್ಟು ಪಾಲಿಸುತ್ತಿದ್ದೇವೆ? ಲಂಚ ಕೊಡಬಾರದೆಂದು ಕಾನೂನುಗಳಿದ್ದರೂ ಬೇಗ ಕೆಲಸ ಆಗಲಿ ಎಂದು ಲಂಚಕೊಟ್ಟು ರುಚಿ ತೋರಿಸಿ ನಾವು ಭ್ರಷ್ಟಾಚಾರಕ್ಕೆ ಕಾರಣಕರ್ತರಾಗಿದ್ದೇವೆ. ಮಹಾನಗರಪಾಲಿಕೆಗಳು ನಗರ-ಪಟ್ಟಣಗಳನ್ನು ಸ್ವಚ್ಛವಾಗಿಡುವುದಿಲ್ಲ, ನಮ್ಮ ಫೋನ್ ಕೆಲಸ ಮಾಡುವುದಿಲ್ಲ ಎನ್ನುತ್ತೀವಿ. ರೈಲುಗಳ ಬಗ್ಗೆ ತಮಾಷೆ ಳಗಳಿಗೆ ತಲುಪುವುದಿಲ್ಲ, ನಮ್ಮ ದೇಶದ ರಾಜಕಾರಣ ಹಾಳಾಗಿದೆ. ನಗರ ವ್ಯವಸ್ಥೆ ಹಾಳಾಗಿ ಬಿದ್ದಿದೆ. ಈ ತರಹದ ನೂರು ಲೋಪದೋಷಗಳನ್ನು ಹೇಳುತ್ತಲೇ ಇರುತ್ತೀವಿ. ಇದರ ಪರಿಹಾರಕ್ಕೆ ನಾವೇನಾದರೂ ಪ್ರಯತ್ನಿಸುತ್ತಿದ್ದೇವೆಯೇ ಎಂದು ಆತ್ಮಾವಲೋಕನ ಮಾಡಿಕೊಂಡರೆ ಶೂನ್ಯ ಸಂಪಾದನೆ ಮಾಡುತ್ತಾ ನಮ್ಮ ವಾಯುಯಾನ ಪ್ರಪಂಚದಲ್ಲೇ ವರ್ಸ್ಟ್ ಎನ್ನುತ್ತೀವಿ, ಅಂಚೆ ಪತ್ರಗಳು ಅವುಗಳ ಸ್ಥಳಗಳಿಗೆ ತಲುಪುವುದಿಲ್ಲ, ನಮ್ಮ ದೇಶದ ರಾಜಕಾರಣ ಹಾಳಾಗಿದೆ. ನಗರ ವ್ಯವಸ್ಥೆ ಹಾಳಾಗಿ ಬಿದ್ದಿದೆ. ಈ ತರಹದ ನೂರು ಲೋಪದೋಷಗಳನ್ನು ಹೇಳುತ್ತಲೇ ಇರುತ್ತೀವಿ. ಇದರ ಪರಿಹಾರಕ್ಕೆ ನಾವೇನಾದರೂ ಪ್ರಯತ್ನಿಸುತ್ತಿದ್ದೇವೆಯೇ ಎಂದು ಆತ್ಮಾವಲೋಕನ ಮಾಡಿಕೊಂಡರೆ ಶೂನ್ಯ ಸಂಪಾದನೆ.
  
ಮನೆಯ ಕಸವನ್ನು ಗುಡಿಸಿ ರಸ್ತೆಗೆ ಎಸೆಯುವ ನಮ್ಮಂಥವರಿಗೆಲ್ಲಿಂದ ಬರಬೇಕು ಸ್ವಚ್ಛತೆಯ ಅರಿವು, ಪ್ರತಿಯೊಬ್ಬರ ಮನೆಯ ಕಿಟಕಿಯ ಬದಿಯಲ್ಲಿ ಒಮ್ಮೆ ಕಣ್ಣಾಡಿಸಿ ನೋಡಿ ಗೊತ್ತಾಗುತ್ತದೆ, ನಾವೆಷ್ಟು ಪರಿಸರ ಪ್ರಿಯರೆಂದು, ಹಳಸಿದ ಆಹಾರ, ತರಕಾರಿ, ಪಾಸ್ಟಿಕ್, ಕಾಗದ ಚೂರುಗಳನ್ನು ಪ್ರಜ್ಞಾಹೀನರಾಗಿ ಎಸೆದಿರುತ್ತೇವೆ. ಮಹಾನಗರಪಾಲಿಕೆ ನಮ್ಮ ದೂರುಗಳನ್ನು ಆಲಿಸಿ ಒಂದು ವ್ಯವಸ್ಥೆಯನ್ನು ಕಲ್ಪಿಸಿದ್ದರೂ (ಕಸ ಸಂಗ್ರಹಣೆ ಡಬ್ಬಗಳು) ಕಸವನ್ನು ಡಬ್ಬಕ್ಕೆ ಎಸೆಯುವ ವ್ಯವಧಾನವೂ ನಮ್ಮಲಿಲ್ಲ. ಒಂದು ವೇಳೆ ನಾವು ಸಿಂಗಾಪುರಕ್ಕೋ, ಫ್ರಾನ್ಸ್ಗೋ ಹೋಗಿದ್ದಾದರೆ ನಮ್ಮ ವರ್ತನೆ, ಸಭ್ಯತೆ, ಸ್ವಚ್ಛತೆ ವು ಅಲ್ಲಿ ಸಿಗರೇಟು ತುಂಡು ಎಸೆಯುವುದಾಗಲೀ, ತಿಂಡಿ ತಿಂದ ಕವರ್ಗಳನ್ನು ಬಿಸಾಡುವುದಾಗಲೀ ಮಾಡುವುದಿಲ್ಲ. ಅವರ ಅಂಡರ್ಗ್ರೌಂಡ್, ರಿಂಗ್ ರಸ್ತೆಗಳು, ಶಾಪಿಂಗ್ ಮಾಲ್ಗಳನ್ನು ಮೆಚ್ಚಿ ಮಾತನಾಡುತ್ತೀವಿ. ಅಲ್ಲಿ ನಾವುಗಳು ನಿಗದಿತ ಸ್ಥಳಗಳಲ್ಲಿ ನಿಗದಿತ ಸಮಯಕ್ಕಿಂತ ಹೆಚ್ಚು ಕಳೆದರೆ ಸುಮ್ಮನೆ ದಂಡಕಟ್ಟಬೇಕಾಗುತ್ತದೆ. ಅದೇ ನಮ್ಮಲಾದರೆ ದಂಡತೆತ್ತರೂ ಪರವಾಗಿಲ್ಲ ಕಾನೂನನ್ನು ಉಲ್ಲಂಘಿಸಿ ದಂಡ ತೆರುವುದು ಪ್ರತಿಷ್ಠೆಯ ಪ್ರಶ್ನೆಯಾಗಿ ಬಿಡುತ್ತದೆ. ಲಂಚಕೊಟ್ಟು ಟಿಲಿಫೋನ್ ನೌಕರರನ್ನು ಬುಕ್ ಮಾಡಿಕೊಂಡು ನಮ್ಮ ಟೆಲಿಫೋನ್ ಬಿಲ್ ಇನ್ನಾರದಕ್ಕೋ ಸೇರಿಸುವ, ಅತೀವೇಗದಲ್ಲಿ ವಾಹನ ಓಡಿಸಿ ಸಂಚಾರಿ ಪೊಲೀಸರಿಗೆ ನಿನಗೆ ನಾನಾರೆಂದು ಗೊತ್ತೋ ಎಂದು ಬೆದರಿಸಿ, ಲಂಚ ತೆಗೆದುಕೊಂಡು ತೊಲಗು ಎನ್ನುವ ನಾವುಗಳು ಇತರೆ ದೇಶಗಳಿಗೆ ಹೋದಾಗ ಸಭ್ಯರಂತೆ ವರ್ತಿಸಿ ಅಲ್ಲಿನ ವ್ಯವಸ್ಥೆಗಳನ್ನು ಪಾಲಿಸುತ್ತೇವೆ. ನಾವೇಕೆ ನಮ್ಮಲ್ಲಿರುವ ಅನೇಕ ಕಾನೂನುಗಳನ್ನು ಗಾಳಿಗೆ ತೂರುತ್ತಿದ್ದೇವೆ ಎಂಬುದು ನಾಚಿಕೆಯ ಸಂಗತಿಯಾಗಿದೆ. ಬೇರೆ ದೇಶದ ಪ್ರಜೆಗಳನ್ನು ಮೆಚ್ಚುವ ನಾವು ನಾವ್ಯಾಕೆ ಅವರಂತೆ ನಡೆದುಕೊಳ್ಳುವುದಿಲ್ಲ.

ಕಾಪಾಡುವಿಕೆ, ಇತ್ಯಾದಿಗಳು ಅಂತಾರಾಷ್ಟ್ರೀಯ ಮಟ್ಟದಾಗಿರುತ್ತದೆ. ನಾವು ಅಲ್ಲಿ ಸಿಗರೇಟು ತುಂಡು ಎಸೆಯುವುದಾಗಲೀ, ತಿಂಡಿ ತಿಂದ ಕವರ್ಗಳನ್ನು ಬಿಸಾಡುವುದಾಗಲೀ ಮಾಡುವುದಿಲ್ಲ. ಅವರ ಅಂಡರ್ಗ್ರೌಂಡ್, ರಿಂಗ್ ರಸ್ತೆಗಳು, ಶಾಪಿಂಗ್ ಮಾಲ್ಗಳನ್ನು ಮೆಚ್ಚಿ ಮಾತನಾಡುತ್ತೀವಿ. ಅಲ್ಲಿ ನಾವುಗಳು ನಿಗದಿತ ಸ್ಥಳಗಳಲ್ಲಿ ನಿಗದಿತ ಸಮಯಕ್ಕಿಂತ ಹೆಚ್ಚು ಕಳೆದರೆ ಸುಮ್ಮನೆ ದಂಡಕಟ್ಟಬೇಕಾಗುತ್ತದೆ. ಅದೇ ನಮ್ಮಲ್ಲಾದರೆ ದಂಡತೆತ್ತರೂ ಪರವಾಗಿಲ್ಲ ಕಾನೂನನ್ನು ಉಲ್ಲಂಘಿಸಿ ದಂಡ ತೆರುವುದು ಪ್ರತಿಷ್ಠೆಯ ಪ್ರಶ್ನೆಯಾಗಿ ಬಿಡುತ್ತದೆ. ಲಂಚಕೊಟ್ಟು ಟಿಲಿಫೋನ್ ನೌಕರರನ್ನು ಬುಕ್ ಮಾಡಿಕೊಂಡು ನಮ್ಮ ಟೆಲಿಫೋನ್ ಬಿಲ್ ಇನ್ನಾರದಕ್ಕೋ ಸೇರಿಸುವ, ಅತೀವೇಗದಲ್ಲಿ ವಾಹನ ಓಡಿಸಿ ಸಂಚಾರಿ ಪೊಲೀಸರಿಗೆ ನಿನಗೆ ನಾನಾರೆಂದು ಗೊತ್ತೋ ಎಂದು ಬೆದರಿಸಿ, ಲಂಚ ತೆಗೆದುಕೊಂಡು ತೊಲಗು ಎನ್ನುವ ನಾವುಗಳು ಇತರೆ ದೇಶಗಳಿಗೆ ಹೋದಾಗ ಸಭ್ಯರಂತೆ ವರ್ತಿಸಿ ಅಲ್ಲಿನ ವ್ಯವಸ್ಥೆಗಳನ್ನು ಪಾಲಿಸುತ್ತೇವೆ. ನಾವೇಕೆ ನಮ್ಮಲ್ಲಿರುವ ಅನೇಕ ಕಾನೂನುಗಳನ್ನು ಗಾಳಿಗೆ ತೂರುತ್ತಿದ್ದೇವೆ ಎಂಬುದು ನಾಚಿಕೆಯ ಸಂಗತಿಯಾಗಿದೆ. ಬೇರೆ ದೇಶದ ಪ್ರಜೆಗಳನ್ನು ಮೆಚ್ಚುವ ನಾವು ನಾವ್ಯಾಕೆ ಅವರಂತೆ ನಡೆದುಕೊಳ್ಳುವುದಿಲ್ಲ?
  
ಮಾರ್ಕೆಟ್, ಮೆಜೆಸ್ಟಿಕ್, ಇತ್ಯಾದಿ ಪ್ರದೇಶಗಳಲ್ಲಿ ಸುತ್ತಾಡುವಾಗ ಆ ಪ್ರದೇಶಗಳು ನಮ್ಮವಲ್ಲವೆನೋ ಎಂಬ ನಿರಾಳಾ ಭಾವದಿಂದ ಪಾನ್ ಮಸಾಲಗಳನ್ನು ಜಗಿದು ಉಗುಳುಬಿಡುತ್ತೇವೆ. ಸಿನೆಮಾ ಥಿಯೇಟರ್ಗಳಲ್ಲಿ ಕೊಂಡ ತಿನಿಸುಗಳನ್ನು ತಿಂದ ನಂತರ ಉಳಿಕೆ ಮತ್ತು ಪ್ಲಾಸ್ಟಿಕ್ ಚೀಲಗಳನ್ನು ಅಲ್ಲೇ ಎಸೆದು ಬಿಡುತ್ತೇವೆ. ಮಾಲೀಕರು ಅದನ್ನು ಮತ್ತೆ ಬೀದಿಗಳಲ್ಲಿ ಚೆಲ್ಲುತ್ತಾರೆ ಮನೆಯನ್ನು ಪ್ರೀತಿಸುವ ನಾವುಗಳು ಸಾರ್ವಜನಿಕ ಸ್ಥಳಗಳಲ್ಲನ್ನು ಮನೆಯಂತೆ ಪ್ರೀತಿಸಬೇಕಲ್ಲವೆ? ಇದನ್ನೇಕೆ ನಾವ್ಯಾರೂ ಮಾಡುತ್ತಿಲ್ಲ? ಚುನಾವಣೆಗಳಲ್ಲಿ ನಾವು ಸರ್ಕಾರವನ್ನು ಚುನಾಯಿಸಿ ಎಲ್ಲಾ ಜವಾಬ್ದಾರಿಯನ್ನು ಸರ್ಕಾರಕ್ಕೆ ಒಟ್ಟುಬಿಡುತ್ತೇವೆ. ನಮ್ಮನ್ನು ಸರ್ಕಾರ ಸದಾ ಓಲೈಸಬೇಕು. ನಮ್ಮ ಕೊಳಕನ್ನೆಲ್ಲಾ ಅವರೇ ತೆಗೆಯಬೇಕೆಂದು ಕಸದ ತೊಟ್ಟಿಗೆ ಕಸ ಹಾಕದೆ ರಸ್ತೆಯಲ್ಲೋ, ಖಾಲಿ ಸೈಟಿನಲ್ಲೋ ಎಸೆಯುತ್ತೇವೆ. ರೈಲುಗಳು, ವಿಮಾನಗಳಲ್ಲಿ ಒಳ್ಳೆಯ ಆಹಾರ, ಟಾಯ್ಲೆಟ್ನ ಸುವ್ಯವಸ್ಥೆ ಕಾಪಾಡಬೇಕೆಂದು ಬಯಸುತ್ತೇವೆಯಾದರೂ ಅದನ್ನು ಸರಿಯಾಗಿ ಉಪಯೋಗಿಸದೆ, ಎಲ್ಲೆಂದರಲ್ಲಿ ಆಹಾರ ಪದಾರ್ಥಗಳನ್ನ ಚೆಲ್ಲಿ ಹೊಲಸು ಮಾಡುತ್ತೇವೆ.
  
ನಮ್ಮ ಸರ್ಕಾರಿ ನೌಕರರೂ ತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸದೆ ಸಾರ್ವಜನಿಕರಿಗೆ ಸೂಕ್ತ ಸೇವೆ ಸಲ್ಲಿಸುವುದಿಲ್ಲ. ಪ್ರಚಲಿತ ಸಾಮಾಜಿಕ ಸಮಸ್ಯೆಗಳಾದ ವರದಕ್ಷಿಣೆ, ಹೆಣ್ಣು ಶಿಶುವಿನ ಹತ್ಯೆ, ಭ್ರಷ್ಟಾಚಾರ ಇತ್ಯಾದಿಗಳಲ್ಲಿ ಸಾರ್ವಜನಿಕ ವೇದಿಕೆಗಳಲ್ಲಿ ಪ್ರತಿಭಟಿಸಿ, ಖಾಸಗಿಯಾಗಿ ನಾವೇ ಅವುಗಳನ್ನು ಮಾಡುತ್ತೇವೆ. ಇದಕ್ಕೆ ನಾವು ಹೇಳುವ ನೆಪ ನಾನೊಬ್ಬಳೇ ಬದಲಾಗಲು ಸಾಧ್ಯವೇ? ಇಡೀ ವ್ಯವಸ್ಥೆ ಬದಲಾಗಬೇಕಲ್ಲವೆ? ನಾನು ನನ್ನ ಮಗನಿಗೆ  ಬರಬೇಕಾದ ವರದಕ್ಷಿಣೆ ಹಕ್ಕನ್ನು ಬಿಡಲಾಗುತ್ತದೆಯೇ? ಈ ವ್ಯವಸ್ಥೆ ಬದಲಿಸುವವರು ಯಾರು? ಈ ವ್ಯವಸ್ಥೆಯಲ್ಲಿ ಯಾರೆಲ್ಲ ಇದ್ದೇವೆ? ಇದರಲ್ಲಿ ನನ್ನೊಬ್ಬಳನ್ನು ಬಿಟ್ಟು ಪಕ್ಕದ ಮನೆಯವರು, ಬೇರೆ ಮನೆಗಳವರು, ಬೇರೆ ಪಟ್ಟಣದವರು, ಬೇರೆ ಜನಾಂಗ ಹಾಗೂ ಸರ್ಕಾರ ಇದೆ. ಇದನ್ನು ಅವರೂ ಸರಿಪಡಿಸಬೇಕು; ನಾನಲ್ಲ ಈ ಮನೋಭಾವನೆ ನಮಗೆಷ್ಟು ಸರಿ!
  
ನಮ್ಮಲ್ಲಿ ಮಾಧ್ಯಮ ಅದೇಕೆ ಇಷ್ಟೊಂದು ನಕಾರತ್ಮಕವಾಗಿ ಇದೆ? ನಾವೇಕೆ ಭಾರತದ ನಮ್ಮದೇ ಆದ ಶಕ್ತಿಗಳು ಸಾಧನೆಗಳನ್ನು ಗುರುತಿಸಲು ಮುಜುಗರ ಪಡುತ್ತೇವೆ? ನಮ್ಮಲ್ಲಿ ಎಂತೆಂಥ ಆಶ್ಚರ್ಯ ಪಡುವಂತಹ ಯಶೋಗಾಥೆಗಳಿಲ್ಲ. ಅವನ್ನೆಲ್ಲ ನಾವೇಕೆ ಒಪ್ಪಿಕೊಳ್ಳುವುದಿಲ್ಲ? ನಾವು ಹಾಲಿನ ಉತ್ಪಾದನೆಯಲ್ಲಿ ವಿಶ್ವದಲ್ಲೇ ಮುಂದಿದ್ದು ಕ್ಷೀರಕ್ರಾಂತಿ ಮಾಡಿದ್ದೇವೆ. ನಾವು ಗೋಧಿ ಹಾಗೂ ಭತ್ತದ ಉತ್ಪಾದನೆಯಲ್ಲಿ 2ನೇ ಸ್ಥಾನದಲ್ಲಿದ್ದೇವೆ. ಅಮೆರಿಕಾದ ಸರ್ಕಾರ ನಮ್ಮಲ್ಲಿನ ಉದ್ಯೋಗಖಾತ್ರಿ ಯೋಜನೆಯನ್ನು ಅಧ್ಯಯನ ಮಾಡಲು ಅಲ್ಲಿನ ಅಧಿಕಾರಿಗಳನ್ನು ಭಾರತಕ್ಕೆ ಕಳುಹಿಸಿ ಕೊಡುತ್ತಿದೆ. ಅತಿವೇಗವಾಗಿ ಕಾರ್ಯನಿರ್ವಹಿಸುವ ಪರಮ್-10,000 ಕಂಪ್ಯೂಟರ್ಗಳನ್ನು ಕಂಡುಹಿಡಿದಿದ್ದೇವೆ (ಹಿಂದೆ) ಆಘ್ಟನ್ ಸೈನ್ಯಕ್ಕೆ ತರಬೇತಿ ನೀಡುತ್ತಿದ್ದೇವೆ. ಅನೇಕ ಸಾಧಕರು ವಿಶ್ವಮಟ್ಟದಲ್ಲಿ ಗಮನ ಸೆಳೆಯುತ್ತಿದ್ದಾರೆ. ಇನ್ನೂ ಮುಂತಾದ ಸಾಧನೆಗಳು ನಮ್ಮಲ್ಲಿದ್ದರೂ ನಮ್ಮ ಮಾಧ್ಯಮಗಳು ಮಾತ್ರ ಕೆಟ್ಟಸುದ್ದಿಗಳನ್ನು, ದುರಂತಗಳನ್ನು ಬ್ರೇಕಿಂಗ್ ನ್ಯೂಸ್ಗಳಲ್ಲಿ ಪ್ರಚಾರಮಾಡಿ ಒಳ್ಳೆಯ ವಿಚಾರಗಳನ್ನು ಕೊನೆಯ ಯಾವುದೋ ಪುಟಗಳಲ್ಲಿ ಪ್ರಕಟಿಸುತ್ತಿವೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಇದಕ್ಕೆ ವಿರುದ್ಧವಾಗಿರುತ್ತದೆ.
  
ಇಂಥ ವ್ಯವಸ್ಥೆಗೆ ಸಕಾರತ್ಮಕವಾಗಿ ಸ್ಪಂದಿಸುವ ಸಂದರ್ಭ ಬಂದರೆ ನಮ್ಮನ್ನು ನಾವು ಸುರಕ್ಷಿತವಾಗಿರಿಸಿಕೊಂಡು ವ್ಯವಸ್ಥೆಯನ್ನು ದೂಷಿಸಿ. ಬೇರೆಯವರು ಬಂದು ಇದನ್ನೆಲ್ಲ ಸರಿಪಡಿಸಲಿ ಎಂದು ಬಯಸುತ್ತೇವೆ ಅಥವಾ ದೇಶಬಿಟ್ಟು ಓಡಿ ಹೋಗುತ್ತೇವೆ. ನಮ್ಮ ಭಯಗಳಿಂದ ಬೆದರಿ, ಸೋಮಾರಿ ಹೇಡಿಗಳಂತೆ ವಿದೇಶಗಳಿಗೆ ಓಡಿ, ಅವರ ವೈಭವದ ಜೀವನ ಶೈಲಿಯಲ್ಲಿ ಬಿಸಿಲು ಕಾಯಿಸಿಕೊಂಡು ಅವರ ವ್ಯವಸ್ಥೆಯನ್ನು ಹೊಗಳುತ್ತೇವೆ. ನ್ಯೂಯಾರ್ಕ್‍ನಲ್ಲಿ ಅಭದ್ರತೆ ಕಾಡಿದರೆ ಇಂಗ್ಲೆಂಡ್ಗೆ ಓಡುತ್ತೇವೆ. ಅಲ್ಲಿ ನಿರುದ್ಯೋಗ ಸಮಸ್ಯೆ ಉಂಟಾದರೆ ಕೊಲ್ಲಿ ರಾಷ್ಟ್ರಗಳಿಗೆ ವಿಮಾನ ಹಿಡಿಯುತ್ತೇವೆ. ಕೊಲ್ಲಿ ರಾಷ್ಟ್ರಗಳಲ್ಲಿ ಯುದ್ಧ ಸಂಭವಿಸಿದರೆ ಭಾರತ ಸರ್ಕಾರ ರಕ್ಷಿಸಬೇಕು. ಭಾರತಕ್ಕೆ ವಾಪಸ್ ಬರಲು ಸಹಾಯ ಮಾಡಬೇಕು ಎನ್ನುತ್ತೇವೆ. ಎಲ್ಲರೂ ದೇಶದ ವ್ಯವಸ್ಥೆಯನ್ನು ಬೈಯುವುದಾದರೆ ಈ ದೇಶದ ವ್ಯವಸ್ಥೆಯನ್ನು ಸರಿಪಡಿಸವವರಾರು? ವ್ಯವಸ್ಥೆಗೆ ಹೊಂದಿಕೊಳ್ಳದೆ ಓಡಿ ಹೋದವರಿಗೆ ನೆಲೆ ಬೇಕು ಎನ್ನುವುದು ಎéಷ್ಟು ಸಮಂಜಸ?
​
ಹೈದರಬಾದ್ನ ಶಾಲೆಯೊಂದರಲ್ಲಿ ಒಬ್ಬ 14 ವರ್ಷದ ಹುಡುಗಿಗೆ ನಿನ್ನ ಜೀವನದ ಗುರಿ ಏನು? ಎಂದು ಡಾ|| ಅಬ್ದುಲ್ ಕಲಾಂರವರು ಕೇಳಿದಾಗ ಆ ಹುಡುಗಿ ನೀಡಿದ ಉತ್ತರವೇನು ಗೊತೇ? ನಾನು ಅಭಿವೃದ್ಧಿ ಹೊಂದಿದ ಭಾರತದಲ್ಲಿ ಬಾಳಬೇಕೆಂದು ಬಯಸುತ್ತೇನೆ ಎಂದು ತಿಳಿಸಿದಳು. ಅವಳಿಗಾಗಿ ನಾವು-ನೀವೆಲ್ಲರೂ ಅಭಿವೃದ್ಧಿ ಹೊಂದಿದ ಭಾರತ ಕಟ್ಟಬೇಕಲ್ಲವೇ ಎಂಬುದು ಕಲಾಂ ರವರ ಆಶಯ, ಆದ್ದರಿಂದ ವ್ಯವಸ್ಥೆಯನ್ನು ದೂಷಿಸದೆ ನಮ್ಮ ಮನ ಪರಿವರ್ತನೆ ಹೊಂದಿ, ನಾವುಗಳು ಬದಲಾಗಬೇಕಾಗಿದೆ. ಕಲಾಂರವರ ಭವ್ಯ ಭಾರತದ ಕನಸನ್ನು ನನಸಾಗಿಸಬೇಕಾಗಿದೆ. ಇದಕ್ಕೆ ನಾವು ಎಲ್ಲಿ ಕೆಲಸ ನಿರತರಾಗಿದ್ದೇವೋ ಅಲ್ಲಿಯೇ ಪ್ರಾಮಾಣಿಕತೆಯಿಂದ, ಶ್ರದ್ಧೆಯಿಂದ ದುಡಿಯಬೇಕು. ಕಾಯಕ ತತ್ತ್ವ ನಮಗೆ ದಿಕ್ಕು ತೋರಿಸುತ್ತದೆ. 
 
ವೈಶಾಲಿ ಆರ್.ಟಿ.
ಅಸಿಸ್ಟೆಂಟ್ ಮ್ಯಾನೇಜರ್, ವೆಲ್ಫೇರ್, ಬಾಂಬೆ ರೇಯನ್ ಫ್ಯಾಶನ್ ಲಿಮಿಟೆಡ್, ಸಮೂಹ ಸಂಸ್ಥೆಗಳು, ಬೆಂಗಳೂರು. 
0 Comments



Leave a Reply.


    20,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups

    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9

    Social Work Foot Prints


    RSS Feed


Site
  • Home
  • About Us
  • Editor's Blog
  • Leader's Talk
  • Blog
  • Online Store
  • Videos
  • Join Our Online Groups
Vertical Divider
HR Online Groups
20,000 HR PROFESSIONALS ARE CONNECTED THROUGH OUR NIRATHANKA HR GROUPS.
Join

Vertical Divider
Contact us
080-23213710
+91-8073067542
Mail-nirutapublications@gmail.com
Our Other Websites
www.hrkancon.com 
www.niratanka.org  
www.mhrspl.com
www.nirutapublications.org
Receive email updates on the new books & offers
for the subjects of interest to you.
Copyright Niruta Publications 2021
Website Designing & Developed by: www.mhrspl.com