Niruta Publications
  • Home
  • About Us
    • Ramesha's Profile
  • List Your Book for Free
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
  • Home
  • About Us
    • Ramesha's Profile
  • List Your Book for Free
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
Niruta Publications

ಗ್ರಾಮೀಣ ಹೆಣ್ಣು ಮಕ್ಕಳು ಮತ್ತು ಅವರ ಹಕ್ಕುಗಳು

4/14/2018

0 Comments

 
2014ರಲ್ಲಿ ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆ ಎಲ್ಲರನ್ನೂ ಅಚ್ಚರಿಗೊಳಿಸಿತು. ಇನ್ನೂ 17 ವರ್ಷದ ಮಲಾಲಾ ಯೂಸುಫ್‍ಗೆ ಜಗತ್ತಿನ ಅತ್ಯಂತ ಉನ್ನತ ಪ್ರಶಸ್ತಿ. ಆಕೆಗೆ ಪ್ರಶಸ್ತಿ ಕೊಟ್ಟದ್ದು ಒಂದು ವಿಶಿಷ್ಟ ಕಾರಣಕ್ಕೆ. ಹೆಣ್ಣು ಮಕ್ಕಳ ಶಿಕ್ಷಣವನ್ನು ತಡೆಹಿಡಿಯುವುದರ ವಿರುದ್ಧ ಹೋರಾಡಿ ಅವರ ಶಿಕ್ಷಣದ ಹಕ್ಕನ್ನು ಪ್ರತಿಪಾದಿಸಿ ಅವರ ಏಳಿಗೆಗೆ ಶ್ರಮಿಸುತ್ತಿರುವುದಕ್ಕಾಗಿ.  

Read More
0 Comments

ಉತ್ತಮ ಕೈಗಾರಿಕಾ ಬಾಂಧವ್ಯಕ್ಕೆ ಮಾರ್ಗದರ್ಶಕಗಳು ಮತ್ತು ತಂತ್ರಗಳು

4/14/2018

0 Comments

 
ಕಳೆದ ಎರಡು ದಶಕಗಳಲ್ಲಿ ಭಾರತದ ಆರ್ಥಿಕತೆಯಲ್ಲಿ ಜಾಗತೀಕರಣ, ಮುಕ್ತ ಆರ್ಥಿಕ ನೀತಿ, ವಿದೇಶಿ ಬಂಡವಾಳದ ಹರಿವು, ಇತ್ತೀಚಿನ ಸರಕು ಮತ್ತು ಸೇವಾ ತೆರಿಗೆ, ನೋಟು ಅಮಾನ್ಯೀಕರಣ ಇನ್ನು ಹಲವಾರು ಬದಲಾವಣೆಗಳಿಂದಾಗಿ ಸಾಕಷ್ಟು ಬದಲಾವಣೆಗಳನ್ನು ಕಂಡಿದ್ದೇವೆ. ಅಲ್ಲದೆ ಕಾರ್ಮಿಕ ಕಾನೂನುಗಳಲ್ಲಿ ಕೆಲವೊಂದು ಮಹತ್ತರ ಬದಲಾವಣೆಗಳನ್ನು ತರಲಾಗಿದೆ. 

Read More
0 Comments

ಮಾನಸಿಕ ಆರೋಗ್ಯ : ಪರಿಕಲ್ಪನೆ, ಮಾನಸಿಕ ಅಸ್ವಸ್ಥತೆಗಳು: ಗುರುತಿಸುವಿಕೆ, ಚಿಕಿತ್ಸಾ ವಿಧಾನಗಳು ಮತ್ತು ಮನೋವೈದ್ಯ

4/14/2018

0 Comments

 
ಪ್ರಸ್ತಾವನೆ:
ಮಾನಸಿಕ ರೋಗಕ್ಕೆ ಚಿಕಿತ್ಸೆ ಉಂಟು ಎನ್ನುವ ಈ ಲೇಖನದಲ್ಲಿ ಮಾನಸಿಕ ಆರೋಗ್ಯದ ಪರಿಕಲ್ಪನೆ, ಮಾನಸಿಕ ಆರೋಗ್ಯದ ಮುಖ್ಯ ಲಕ್ಷಣಗಳು, ಮಾನಸಿಕ ಅಸ್ವಸ್ಥತೆ, ಮಾನಸಿಕ ಕಾಯಿಲೆಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳ ಬಗ್ಗೆ ಗಮನಹರಿಸಲಾಗಿದೆ. ಹಾಗೂ ಮಾನಸಿಕ ಕಾಯಿಲೆಗೆ ಕಾರಣಗಳು, ಮಾನಸಿಕ ಕಾಯಿಲೆಗಳ ಪ್ರಕಾರಗಳ ಬಗ್ಗೆ ವಿವರಿಸಲಾಗಿದೆ. ಪ್ರಸ್ತುತ ಲಭ್ಯವಿರುವ ಚಿಕಿತ್ಸಾ ಪದ್ಧತಿಗಳು, ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳ ಮತ್ತು ಅವರ ಸಂಬಂಧಿಕರ ಜವಾಬ್ದಾರಿಗಳ ಬಗ್ಗೆ ಒತ್ತುಕೊಡಲಾಗಿದೆ. ಮನೋವೈದ್ಯಕೀಯ ಕ್ಷೇತ್ರದಲ್ಲಿ ಮನೋವೈದ್ಯರು, ಚಿಕಿತ್ಸಕ ಮನಶಾಸ್ತ್ರಜ್ಞರು, ಮನೋವೈದ್ಯಕೀಯ ಸಮಾಜಕಾರ್ಯಕರ್ತರು, ಮನೋವೈದ್ಯಕೀಯ ಶೂಶ್ರುಷಕ ಸಿಬ್ಬಂದಿಗಳ ಮತ್ತು ಇತರ ಮನೋವೈದ್ಯಕೀಯ ತಂಡದ ಪಾತ್ರದ ಬಗ್ಗೆ ವಿವರಿಸಲಾಗಿದೆ. ಮನೋರೋಗಿಗಳ ಸಾಮಾಜಿಕ ಸಮಸ್ಯೆಗಳನ್ನು ಗುರುತಿಸುವಿಕೆ, ಮನೋರೋಗಿಯನ್ನು ಸಮಾಜದ ಮುಖ್ಯವಾಹಿನಿಯಲ್ಲಿ ತರುವಲ್ಲಿ ಮನೋವೈದ್ಯಕೀಯ ಸಮಾಜಕಾರ್ಯಕರ್ತರ ಪಾತ್ರ ಹಾಗೂ ಸವಾಲುಗಳು ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ.  


Read More
0 Comments

ಗ್ರಾಮೀಣ ಸಮುದಾಯಗಳ ಸಮಸ್ಯೆಗಳ ಪಕ್ಷಿನೋಟ

9/5/2017

2 Comments

 
Picture
ಸಮಾಜಕಾರ್ಯಕರ್ತರು ಸಮುದಾಯಗಳ ರಚನೆ, ಕ್ರಿಯಾಶೀಲತೆ, ಸಮುದಾಯದ ವೈಲಕ್ಷಣಗಳು, ಸಮುದಾಯದ ಪ್ರಕಾರಗಳನ್ನು ತಿಳಿದುಕೊಂಡ ನಂತರ ಸಮುದಾಯಗಳಲ್ಲಿರುವ ಸಮಸ್ಯೆಗಳ ಬಗ್ಗೆಯೂ ಸ್ವಲ್ಪಮಟ್ಟಿಗೆ ತಿಳಿಯುವುದು ಒಳಿತು. ಇಲ್ಲಿ ಪಟ್ಟಿ ಮಾಡಿದ ಸಮಸ್ಯೆಗಳು ಎಲ್ಲಾ ಸಮುದಾಯಗಳಲ್ಲಿ ಇರುತ್ತವೆ ಎಂದು ಹೇಳಲಾಗುವುದಿಲ್ಲ. ಆದರೆ ಅಂತಹ ಸಮಸ್ಯೆಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಇದ್ದರೆ, ಸಮಾಜಕಾರ್ಯಕರ್ತರು ತಾವು ಕೆಲಸ ಮಾಡುವ ಸಮುದಾಯಗಳಲ್ಲಿ ಸಮಸ್ಯೆ ಎದುರಾದಾಗ, ವಿಚಲಿತಗೊಳ್ಳದೆ, ತಮ್ಮ ಕಾರ್ಯವೈಖರಿಯನ್ನು ರೂಪಿಸಿಕೊಳ್ಳಲು ಸಹಾಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ, ನಗರ ಮತ್ತು ಬುಡಕಟ್ಟು ಸಮುದಾಯಗಳ ಕೆಲವು ಆಯಾ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಲಾಗಿದೆ.

Read More
2 Comments

ಅರ್ಕಾವತಿ ನದಿ ಪುನಶ್ಚೇತನ ಕನಸು...ಇನ್ನೂ ಜಿನುಗುತ್ತಿದೆ

9/5/2017

0 Comments

 
Picture
ಅರ್ಕಾವತಿ ನದಿ ಪುನಶ್ಚೇತನದ ಕನಸಿಗೆ 14 ವರ್ಷಗಳಾದವು. 2003ರ ಏಪ್ರಿಲ್ 22 ರಂದು ಡಾ.ರಾಜೇಂದ್ರ ಸಿಂಗ್ ಅವರ ಕರ್ನಾಟಕ ಜಲಚೇತನ ಯಾತ್ರೆಯ ಭಾಗವಾಗಿ ದೊಡ್ಡಬಳ್ಳಾಪುರದ ರಾಮಾಂಜನೇಯ ಚತ್ರದಲ್ಲೊಂದು ದೊಡ್ಡ ಸಭೆ ನಡೆಯಿತು. ಆಗಲೇ ಜಲ ಸಂರಕ್ಷಣೆಯಲ್ಲಿ, ಕೈಗಾರಿಕಾ ಮಾಲಿನ್ಯ ತಡೆಯುವ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ದೊಡ್ಡಬಳ್ಳಾಪುರದ ಜನತೆಗೆ ಜಲಸಂರಕ್ಷಣೆಯ ಕಾರ್ಯವು ಇಡೀ ನದಿ ಜಲಾನಯನದಲ್ಲಿ ನಡೆಯಬೇಕು, ಮಳೆ ನೀರನ್ನು ಭೂಮಿಗೆ ಇಂಗಿಸಿ ಜಲಚೇತನ ಮಾಡಬೇಕು ಎಂದು ಸಿಂಗ್ ಅವರು ಕರೆ ಕೊಟ್ಟರು. ಅಂದು ಆರಂಭವಾದ ಪುನಶ್ಚೇತನದ ಪ್ರಯತ್ನಕ್ಕೆ ಮುಂದೆ ಸರಕಾರವೂ ಕೂಡ ಸ್ಪಂದಿಸುವಂತೆ ಆಯಿತು. ಆದರೆ ಒಂದು ಹೆಜ್ಜೆ ಮುಂದಿಟ್ಟ ಸರಕಾರ ಎರಡು ಹೆಜ್ಜೆ ಹಿಂದೆ ಇಟ್ಟಿದೆ. ಆದರೆ ನಾಗರೀಕರು ಸುಮ್ಮನಿರುವಂತಿಲ್ಲ. ನದಿ ಪುನಶ್ಚೇತನ ಸಾಧ್ಯ ಎಂಬುದು ಹಲವರ ನಂಬಿಕೆ. ಹಾಗೆ ನಂಬಲೇಬೇಕು. ಯಾಕೆಂದರೆ ಜೀವನಕ್ಕೆ ನೀರು ಬೇಕೆ ಬೇಕು ಎಂದಾದರೆ ಜಲವನ್ನು, ಜಲ ಮೂಲವನ್ನು ಉಳಿಸಲೇಬೇಕಲ್ಲವೇ!

Read More
0 Comments

ಪುಸ್ತಕ ಪರಿಚಯ - ಸಮಾಜಕಾರ್ಯ

9/5/2017

0 Comments

 
Picture
ಪುಸ್ತಕದ ಹೆಸರು : ಸಮಾಜಕಾರ್ಯ
ಲೇಖಕರು : ಡಾ. ರಮೇಶ ಎಂ. ಸೋನಕಾಂಬಳೆ
ಪ್ರಕಾಶಕರು : ನಿರುತ ಪಬ್ಲಿಕೇಷನ್ಸ್
#326, 1ನೇ ಮಹಡಿ, ಸಿಂಡಿಕೇಟ್ ಬ್ಯಾಂಕ್ ಎದುರು, ಡಾ. ಅಂಬೇಡ್ಕರ್ ಇಂಜಿನಿಯರಿಂಗ್ ಕಾಲೇಜಿನ ಹತ್ತಿರ, ಮಲ್ಲತಹಳ್ಳಿ, ಬೆಂಗಳೂರು-560056
ಫೋನ್ : 080-23213710
ಪುಟಗಳು : 304
ಬೆಲೆ : 250 ರೂ.
ಭಾರತದಲ್ಲಿ ಸಮಾಜಕಾರ್ಯ ಶಿಕ್ಷಣ ಪ್ರಾರಂಭವಾಗಿ ಎಂಟು ದಶಕಗಳೇ ಸಂದವು. 1936 ಮುಂಬಯಿಯ ಟಾಟಾ ಸಂಸ್ಥೆಯಲ್ಲಿ ಪ್ರಾರಂಭವಾದ ಸಮಾಜಕಾರ್ಯ ಶಿಕ್ಷಣ ಇಂದು ದೇಶದ ಎಲ್ಲಾ ರಾಜ್ಯಗಳಿಗೂ ತಲುಪಿದೆ. ಪ್ರಾರಂಭದ ಹಂತದಲ್ಲಿ ಎಲ್ಲವೂ ವಿದೇಶಿಮಯವಾಗಿತ್ತು ಈ ಸಮಾಜಕಾರ್ಯದ ಶಿಕ್ಷಣ ; ಪಠ್ಯಕ್ರಮ, ಪುಸ್ತಕಗಳು, ರಚನೆ ಮತ್ತು ಸ್ವರೂಪ ಹಾಗೂ ಅಧ್ಯಾಪಕರೂ ಕೂಡಾ. ಈ ಕಳೆದ ಎಂಟು ದಶಕಗಳಲ್ಲಿ ಹಲವಾರು ಪ್ರಗತಿಪರ ಬದಲಾವಣೆಗಳು ಸಮಾಜಕಾರ್ಯ ಶಿಕ್ಷಣದಲ್ಲಿ ಕಾಣಸಿಗುತ್ತಿವೆ. ಆದರೂ ಕೂಡ ಹೇಳಿಕೊಳ್ಳುವಂತಹ ಗುಣಾತ್ಮಕ ಪರಿವರ್ತನೆ ತರುವಲ್ಲಿ ನಾವೆಲ್ಲರೂ ವಿಫಲರಾಗಿದ್ದೇವೆ ಎಂದರೆ ಅತಿಶಯೋಕ್ತಿಯಾಗಲಾರದು.

Read More
0 Comments

ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯಿದೆ 2015

7/24/2017

0 Comments

 
Picture
ಮಕ್ಕಳ ನ್ಯಾಯ ಕಾಯಿದೆ ಈ ಸಮಾಜದ ಪ್ರತಿಯೊಬ್ಬರಿಗೂ ಸಂಬಂಧಿಸಿದ್ದು. ಮಕ್ಕಳೊಡನೆ ನವು ಒಡನಾಡುತ್ತಿದ್ದರೆ ನಿಮಗೆ ಈ ಕಾಯಿದೆಯ ಮೂಲ ಅಂಶಗಳ ಪರಿಚಯವಿರಲೇಬೇಕು. ಮಕ್ಕಳು, ಕುಟುಂಬ, ಮಕ್ಕಳೊಡನೆ ಕೆಲಸ ಮಾಡುವ ಸಂಸ್ಥೆಗಳು, ಸಂಸ್ಥೆಗಳ ದಾಖಲೆ, ಉಸ್ತುವಾರಿ ಮತ್ತು ನಿಯಂತ್ರಣ; ವಿವಿಧ ಹಿನ್ನೆಲೆಯ ಮಕ್ಕಳ ಪೋಷಣೆ, ಆರೈಕೆ, ರಕ್ಷಣೆ, ಅವಶ್ಯಕತೆಗಳ ಪೂರೈಕೆ, ಅನಾಥರು, ಮನೆಯನ್ನು ತೊರೆದವರು, ಓಡಿಸಲ್ಪಟ್ಟವರು, ಹೆತ್ತವರಿಂದ ತೊರೆಯಲ್ಪಟ್ಟವರು, ಕಾನೂನಿನೊಡನೆ ಸಂಘರ್ಷಕ್ಕೆ ಬಿದ್ದ ಮಕ್ಕಳು, ಕಾನೂನಿನ ಸಂಪರ್ಕಕ್ಕೆ ಬಂದ ಮಕ್ಕಳು ಹಾಗೂ ಇತರರಿಂದ ಹಿಂಸೆ, ತೊಂದರೆ, ಶೋಷಣೆ, ಅಪರಾಧಕ್ಕೀಡಾದ ಮಕ್ಕಳು, ಹೀಗೆ ವಿವಿಧ ಪರಿಸ್ಥಿತಿಗಳಿಗೆ ಅನುಗುಣವಾಗಿ 18 ವರ್ಷದೊಳಗಿನ ಮಕ್ಕಳಿಗೆ ಭಾರತ ಸರ್ಕಾರ ನೀಡುವ ಸಾಂವಿಧಾನಿಕ ರಕ್ಷಣೆಯ ಅನಾವರಣ ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯಿದೆ 2015. [ಗಮನಿಸಿ: ಈ ಕಾಯಿದೆಯನ್ನು ಹೊರಡಿಸುವ ಮೂಲಕ ಈ ಹಿಂದೆ ಇದ್ದ ಮಕ್ಕಳ ನ್ಯಾಯ ಕಾಯಿದೆಗಳನ್ನು (1986, 2000) ರದ್ದುಪಡಿಸಲಾಗಿದೆ].

Read More
0 Comments

ಪ್ರದೇಶದ ಸಮಗ್ರ ಅಭಿವೃದ್ಧಿ ಮತ್ತು ಯೋಜನೆ: ಸಂಸದರ ಆದರ್ಶ ಗ್ರಾಮ ಯೋಜನೆಗೆ ಆಯ್ಕೆಯಾದ ಹಾರೋಬೆಳವಾಡಿ ಗ್ರಾಮ.....

7/24/2017

0 Comments

 
(Integrated Area Development and Planning: A Geographical Study of Harobelavadi Gram Panchayath, selected for Sansad Adarsh Gram Yojana (SAGY))
Picture
ಡಾ. ಸಿದ್ದಪ್ಪ ಎಸ್. ಮಡಿವಾಳರ, MA, PhD.
Picture
ಪ್ರಕಾಶ್ ಎಂ.
ಪೀಠಿಕೆ:
ಆದರ್ಶ ಗ್ರಾಮದ ಪರಿಕಲ್ಪನೆ ಹೊಸದೇನೂ ಅಲ್ಲ, ಪ್ರಾಚೀನ ಕಾಲದಿಂದಲೂ ಗ್ರಾಮಗಳನ್ನಾಗಲೀ, ರಾಜ್ಯವನ್ನಾಗಲೀ ಆದರ್ಶವಾಗಿಸುವ ಗೀಳು ರಾಜ-ಮಹಾರಾಜರಿಂದ ಸರಪಂಚರವರೆಗೂ ವ್ಯಾಪಿಸಿಕೊಂಡಿದೆ. ಮೌಲ್ಯಾಧಾರಿತ ಸಮಾಜ ಮತ್ತು ವಾತಾವರಣಗಳ ನಿರ್ಮಾಣಕ್ಕಾಗಿ ಮಾನವ ಸಂಪನ್ಮೂಲದ ಬಂಡವಾಳ, ಸಾಮಾಜಿಕ ಬಂಡವಾಳ ಮತ್ತು ಭೌತಿಕ ಬಂಡವಾಳಗಳ ಹೂಡುವಿಕೆ ಅನಿವಾರ್ಯವಾಗುತ್ತದೆ. ಆಯಾ ಕಾಲಮಾನಗಳಲ್ಲಿ ಮಿಂಚಿ ಮಾಯವಾದ ಅನೇಕ ನೇತಾರರು ಈ ಪ್ರಯತ್ನದಲ್ಲಿ ಕೆಲ ಮಟ್ಟಿನ ಸಾಧನೆಗಳನ್ನು ಮಾಡಿ ಹೆಸರುವಾಸಿಯಾದರು, ಇನ್ನು ಕೆಲವರು ಎಲೆಯ ಮರೆಯ ಕಾಯಿಯಂತೆ ತಮ್ಮ ಅಮೋಘ ಕೊಡುಗೆಯನ್ನು ಸಮಾಜಕ್ಕೆ ನೀಡಿದರು. ಕೆಲವರು ಕನಸಿನ ಸೌಧಗಳನ್ನು ಕಟ್ಟಿ ಕಣ್ಮರೆಯಾದರು. ಅಂಥ ನೇತಾರರಲ್ಲಿ ಮಹಾತ್ಮಾ ಗಾಂಧೀಜಿಯೂ ಒಬ್ಬರು. ತಂತ್ರಜ್ಞಾನಗಳ ಆವಿಷ್ಕಾರ ಪ್ರಾರಂಭವಾಗಿದ್ದರೂ ಭಾರತದಲ್ಲಿ ಲಭ್ಯವಿರುವ ಅಗಾಧ ಪ್ರಮಾಣದ ಮಾನವ ಸಂಪನ್ಮೂಲ, ಸಾಂಪ್ರದಾಯಿಕ ವ್ಯವಸಾಯ, ಸಂಪನ್ಮೂಲಗಳಾಧಾರಿತ ಗುಡಿ-ಕೈಗಾರಿಕೆಗಳ ಪ್ರಾಮುಖ್ಯತೆಯನ್ನರಿತೇ ಇರಬೇಕು, ರಾಮ ರಾಜ್ಯದ ಕನಸನ್ನು ಗ್ರಾಮ್ ಸ್ವರಾಜ್ದ ಹೆಸರಿನಲ್ಲಿ ಕಂಡಿದ್ದರು. ಆದರೆ ಅದನ್ನು ನನಸು ಮಾಡಲು ತದನಂತರದ ಎಷ್ಟೋ ರಾಜಕೀಯ ಧುರೀಣರು ಪ್ರಯತ್ನ ಪಟ್ಟು ಅಲ್ಲಲ್ಲಿ ಕೆಲ ಸಣ್ಣ-ಪುಟ್ಟ ಮಾದರಿಗಳನ್ನು ಮೊಳಕೆಯೊಡೆಸಿದರೂ ಪೂರ್ಣ ಪ್ರಮಾಣ ತಲುಪುವಷ್ಟರಲ್ಲಿಯೇ ಪಾಶ್ರ್ವ ಪೀಡಿತವಾಗಿ ಬಿಡುತ್ತವೆ. ಅದಕ್ಕೆ ಕಾರಣ ಹುಡುಕ ಹೋದರೆ ಧುರೀಣರಲ್ಲಿ ಕುಂದಿದ ಆಸಕ್ತಿ, ಸಮುದಾಯದಲ್ಲಿನ ಸಹಕಾರ ಮನೋಭಾವನೆಯ ಕೊರತೆ, ಕಾರ್ಯಾಂಗದ ನಿಷ್ಠೆಯ ಕೊರತೆ, ಆಧುನೀಕರಣದ ತುಡಿತ, ಸಂಪ್ರದಾಯ, ಸಂಸ್ಕೃತಿ, ಸಂಸ್ಕಾರಗಳ ಅನಾದರಣೆ, ಅರ್ಥಕಳೆದುಕೊಂಡಿರುವ ರಾಜಕೀಯದ ಪ್ರವೇಶ ಇತ್ಯಾದಿಗಳು ವೇದ್ಯವಾಗುತ್ತವೆ, ಒಟ್ಟಾರೆ ಮೌಲ್ಯಗಳ ಶಿಥಿಲೀಕರಣವೇ ದೊಡ್ಡ ಸಮಸ್ಯೆಯಾಗಿ ಗೋಚರಿಸುತ್ತದೆ.  

Read More
0 Comments

ರೈತರ ಆತ್ಮಹತ್ಯೆಗಳು: ನಿಯಂತ್ರಣದಲ್ಲಿ ವಿವಿಧ ತಜ್ಞರ ಪಾತ್ರ ಮತ್ತು ಆತ್ಮಹತ್ಯೆ ನಿಯಂತ್ರಣದಲ್ಲಿ ರೈತ ಚೇತನ.....

7/24/2017

0 Comments

 
Picture
ಡಾ. ರವೀಶ್ ಬಿ.ಎನ್
Picture
ಶ್ರೀ ಅಶೋಕ ಎಸ್. ಕೋರಿ
ತಿರುಳು:
ಭಾರತದಲ್ಲಿ ಆಗುತ್ತಿರುವ ರೈತರ ಆತ್ಮಹತ್ಯೆಗಳು, ಪ್ರಮುಖ ಕಾರಣಗಳು, ಚಿಕಿತ್ಸೆ ಮತ್ತು ರೈತರ ಆತ್ಮಹತ್ಯೆಗಳನ್ನು ತಡೆಗಟ್ಟುವಲ್ಲಿ ವಿವಿಧ ತಜ್ಞರ ಪಾತ್ರಗಳ ಬಗ್ಗೆ ಗಮನಹರಿಸುವ ನಿಟ್ಟಿನಲ್ಲಿ ಈ ಲೇಖನ. ಕೃಷಿ ವಿಶ್ವವಿದ್ಯಾಲಯ, ಧಾರವಾಡ ಮತ್ತು ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ಡಿಮ್ಹಾನ್ಸ್), ಧಾರವಾಡ ಸಹಯೋಗದೊಂದಿಗೆ ಪ್ರಾರಂಭಿಸಿದ ರೈತ ಚೇತನ ಯೋಜನೆ ಯನ್ನು ರೈತರ ಆತ್ಮಹತ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ದಿನಾಂಕ 23/07/2015 ರಂದು ಪ್ರಾರಂಭಿಸಲಾಯಿತು. ಕರ್ನಾಟಕದಲ್ಲಿ ಈ ವಿನೂತನ ಯೋಜನೆಯಿಂದ ಅನೇಕ ರೈತರು ಬೆಳೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡರು. ಕೆಲವು ರೈತರ ಆತ್ಮಹತ್ಯೆಗಳನ್ನು ಈ ಯೋಜನೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ತಡೆಗಟ್ಟುವ ನಿಟ್ಟಿನಲ್ಲಿ ಯಶಸ್ವಿಯಾದರು. ಕೆಲವು ರೈತರ ಹಣಕಾಸಿನ ಸಮಸ್ಯೆಗಳಿಗೆ ವಿವಿಧ ಇಲಾಖೆಗಳ ಸಹಕಾರದಿಂದ ಹಣಕಾಸಿನ ನೆರವನ್ನು ನೀಡಲಾಯಿತು. ರೈತರ ಆತ್ಮಹತ್ಯೆಗಳನ್ನು ತಡೆಗಟ್ಟುವಲ್ಲಿ ವಿವಿಧ ತಜ್ಞರ ಪಾತ್ರ ಮುಖ್ಯವಾಗಿರುತ್ತದೆ. ಕೃಷಿ ತಜ್ಞರು, ಮನೋರೋಗ ತಜ್ಞರು, ನೈದಾನಿಕ ಮನಶಾಸ್ತ್ರಜ್ಞರ, ಮನೋವೈದ್ಯಕೀಯ ಸಮಾಜಕಾರ್ಯಕರ್ತರ ಪಾತ್ರ ಮತ್ತು ಕೃಷಿ ಸಂಶೋಧಕರ ಪಾತ್ರ ಬಹುಮುಖ್ಯವಾಗಿರುತ್ತದೆ. ಈ ಎಲ್ಲಾ ತಜ್ಞರ ಸಂಯೋಜನೆಯೊಂದಿಗೆ ರೈತ ಚೇತನ ಯೋಜನೆಯು ಕರ್ನಾಟಕದಲ್ಲಿ ಯಶಸ್ವಿಯಾಗಿ ನಡೆಯುತ್ತಿರುವುದರ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ. ಆತ್ಮಹತ್ಯೆಗಳ ಬಗ್ಗೆ ವರದಿಯನ್ನು ಮಾಡುವಾಗ ಸುದ್ದಿ ಮತ್ತು ದೃಶ್ಯಮಾಧ್ಯಮದವರ ಪಾತ್ರ ಪ್ರಮುಖವಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳಂತೆ ಆತ್ಮಹತ್ಯೆ ಕುರಿತು ವರದಿಯನ್ನು ಮಾಡುವ ಬಗ್ಗೆ ಇರುವ ಮಾರ್ಗಸೂಚಿಗಳ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ. 

Read More
0 Comments

ಅಧ್ಯಾಯ-2,  ಸಮುದಾಯದ ಪ್ರಕಾರಗಳು

7/24/2017

0 Comments

 
Picture
ಸಮುದಾಯ ಎಂದರೆ ಒಂದು ಜನಸಮೂಹ. ಅವರು ಒಂದು ಭೌಗೋಲಿಕ ಪ್ರದೇಶದಲ್ಲಿ ಒಕ್ಕಟ್ಟಾಗಿ ಜೀವಿಸುತ್ತಾರೆ. ಆ ಸಮುದಾಯದ ಎಲ್ಲಾ ಸದಸ್ಯರಿಗೆ ಅನ್ವಯವಾಗುವಂತೆ, ತಮ್ಮದೇ ಆದ ಸಂಸ್ಕೃತಿ ಮತ್ತು ಆಚಾರ-ವಿಚಾರಗಳನ್ನು ಹೊಂದಿದವರಾಗಿರುತ್ತಾರೆ. ಅವುಗಳಿಗೆ ತಕ್ಕಂತೆ ಹಲವಾರು ಪದ್ಧತಿಗಳನ್ನು ಸೃಷ್ಟಿಸಿಕೊಂಡು, ಮೌಲ್ಯಗಳನ್ನು ರೂಢಿಸಿಕೊಂಡು, ಇತರರಿಗಿಂತ ಭಿನ್ನವಾದ ಒಂದು ಜೀವನಪದ್ಧತಿಯನ್ನು ರೂಪಿಸಿಕೊಂಡಿರುತ್ತಾರೆ. ಅವರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಲ್ಲಿ ಒಗ್ಗಟ್ಟನ್ನು ಪ್ರದರ್ಶಿಸುತ್ತಾರೆ. ತಮ್ಮ ಸಾಮೂಹಿಕ ಜೀವನಕ್ಕೆ ಒತ್ತುಕೊಟ್ಟು ಒಂದು ಶಾಶ್ವತತೆ-ಸ್ಥಿರತೆಯನ್ನು ಸ್ಥಾಪಿಸಿಕೊಂಡಿರುತ್ತಾರೆ. ತಮ್ಮ ಜನರ ಮೇಲೆ ಪ್ರತ್ಯಕ್ಷ-ಪರೋಕ್ಷ ನಿಯಂತ್ರಣವನ್ನು ಸಾಧಿಸಿಕೊಂಡಿರುತ್ತಾರೆ. ತಾವೆಲ್ಲಾ ಒಂದೇ ಗುಂಪಿನ, ಒಂದೇ ಜನಾಂಗದ ಸದಸ್ಯರು ಎಂಬ ಭಾವನಾತ್ಮಕ ಸಂಬಂಧವನ್ನು ಅಭಿವೃದ್ಧಿಪಡಿಸಿಕೊಂಡಿರುತ್ತಾರೆ. ಈ ಎಲ್ಲಾ ಅಂಶಗಳನ್ನು ಒಳಗೊಂಡಂತೆ ಒಂದು ರಾಚನಿಕ ವ್ಯವಸ್ಥೆಯನ್ನು ತಮ್ಮದನ್ನಾಗಿಸಿಕೊಂಡಿರುತ್ತಾರೆ. ಇದು ಒಂದು ಸಮುದಾಯದ ಪರಿಕಲ್ಪನೆ.

Read More
0 Comments

    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9
    ಸಮಾಜಕಾರ್ಯ
    ಸಮುದಾಯ ಸಂಘಟನೆ


    Picture

    Social Work Learning Academy

    Join WhatsApp Channel

    Niruta Publications

    Social Work Foot Prints

    Leaders Talk

    Ramesha Niratanka

    Picture
    WhatsApp

    Picture

    MHR LEARNING ACADEMY

    Get it on Google Play store
    Download App
    Online Courses

    Picture
    50,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups


    RSS Feed

Niruta Publications Books List
File Size: 672 kb
File Type: pdf
Download File

Social Work Books
File Size: 116 kb
File Type: pdf
Download File

HR Books
File Size: 87 kb
File Type: pdf
Download File

General Books
File Size: 195 kb
File Type: pdf
Download File



SITE MAP


Site

  • HOME
  • ABOUT US
  • BLOG
  • COLLABORATE WITH NIRUTA PUBLICATIONS
  • HR BLOG
  • PUBLICATION WITH US
  • TRANSLATION & TYPING
  • VIDEOS
  • HR & EMPLOYMENT LAW CLASSES - EVERY FORTNIGHT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

NIRATHANKA

  • ​CSR
  • TREE PLANTATION PROJECT

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe


Picture
More Details

Copyright Niruta Publications 2021,    Website Designing & Developed by: www.mhrspl.com