ಮಕ್ಕಳ ನ್ಯಾಯ ಕಾಯಿದೆ ಈ ಸಮಾಜದ ಪ್ರತಿಯೊಬ್ಬರಿಗೂ ಸಂಬಂಧಿಸಿದ್ದು. ಮಕ್ಕಳೊಡನೆ ನವು ಒಡನಾಡುತ್ತಿದ್ದರೆ ನಿಮಗೆ ಈ ಕಾಯಿದೆಯ ಮೂಲ ಅಂಶಗಳ ಪರಿಚಯವಿರಲೇಬೇಕು. ಮಕ್ಕಳು, ಕುಟುಂಬ, ಮಕ್ಕಳೊಡನೆ ಕೆಲಸ ಮಾಡುವ ಸಂಸ್ಥೆಗಳು, ಸಂಸ್ಥೆಗಳ ದಾಖಲೆ, ಉಸ್ತುವಾರಿ ಮತ್ತು ನಿಯಂತ್ರಣ; ವಿವಿಧ ಹಿನ್ನೆಲೆಯ ಮಕ್ಕಳ ಪೋಷಣೆ, ಆರೈಕೆ, ರಕ್ಷಣೆ, ಅವಶ್ಯಕತೆಗಳ ಪೂರೈಕೆ, ಅನಾಥರು, ಮನೆಯನ್ನು ತೊರೆದವರು, ಓಡಿಸಲ್ಪಟ್ಟವರು, ಹೆತ್ತವರಿಂದ ತೊರೆಯಲ್ಪಟ್ಟವರು, ಕಾನೂನಿನೊಡನೆ ಸಂಘರ್ಷಕ್ಕೆ ಬಿದ್ದ ಮಕ್ಕಳು, ಕಾನೂನಿನ ಸಂಪರ್ಕಕ್ಕೆ ಬಂದ ಮಕ್ಕಳು ಹಾಗೂ ಇತರರಿಂದ ಹಿಂಸೆ, ತೊಂದರೆ, ಶೋಷಣೆ, ಅಪರಾಧಕ್ಕೀಡಾದ ಮಕ್ಕಳು, ಹೀಗೆ ವಿವಿಧ ಪರಿಸ್ಥಿತಿಗಳಿಗೆ ಅನುಗುಣವಾಗಿ 18 ವರ್ಷದೊಳಗಿನ ಮಕ್ಕಳಿಗೆ ಭಾರತ ಸರ್ಕಾರ ನೀಡುವ ಸಾಂವಿಧಾನಿಕ ರಕ್ಷಣೆಯ ಅನಾವರಣ ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯಿದೆ 2015. [ಗಮನಿಸಿ: ಈ ಕಾಯಿದೆಯನ್ನು ಹೊರಡಿಸುವ ಮೂಲಕ ಈ ಹಿಂದೆ ಇದ್ದ ಮಕ್ಕಳ ನ್ಯಾಯ ಕಾಯಿದೆಗಳನ್ನು (1986, 2000) ರದ್ದುಪಡಿಸಲಾಗಿದೆ]. ಈ ಕಾಯಿದೆಯ ಮೂಲ ತತ್ತ್ವಗಳಲ್ಲಿ ಪ್ರಮುಖವಾದುದು, 18 ವರ್ಷದ ತನಕ ಮಕ್ಕಳನ್ನು ಮುಗ್ಧರೆಂದು ಪರಿಗಣಿಸಬೇಕು; ಮಕ್ಕಳ ಘನತೆಗೆ ಗೌರವ, ಮಕ್ಕಳ ಹಿತದೃಷ್ಟಿಯಿಂದ ನಡೆದುಕೊಳ್ಳಬೇಕು; ಮಕ್ಕಳ ಅಭಿಪ್ರಾಯಕ್ಕೆ ಗೌರವ; ಮಕ್ಕಳ ಜವಾಬ್ದಾರಿ ಕುಟುಂಬಗಳದ್ದು; ಮಕ್ಕಳನ್ನು ಸಂರಕ್ಷಿಸುವ ಹೊಣೆ ಎಲ್ಲರದ್ದು; ಮಕ್ಕಳನ್ನು ಆದಷ್ಟು ಬೇಗನೆ ಅವರ ಮೂಲ ತಾಯಿತಂದೆ ಅಥವಾ ಪೋಷಕರೊಡನೆ ಸೇರಿಸುವುದು; ಮಕ್ಕಳಿಗೆ ಕಳಂಕಿತರಹಿತರಾಗಿ ಬಾಳು ಮುಂದುವರೆಸುವ ಹಕ್ಕನ್ನು ಮಾನ್ಯ ಮಾಡುವುದು ಹಾಗೂ ಮಕ್ಕಳನ್ನು ತೀರಾ ಅನಿವಾರ್ಯವಾದಲ್ಲಿ ಮಾತ್ರ ಸಂಸ್ಥೆಗಳಲ್ಲಿ ಇರಿಸುವುದು.
ಮಕ್ಕಳ ನ್ಯಾಯ ಜಾರಿಗಾಗಿ ಪ್ರಮುಖವಾಗಿ ಮೂರು ಇಲಾಖೆಗಳ ಕೆಲಸ (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗೃಹ/ಪೊಲೀಸ್ ಮತ್ತು ನ್ಯಾಯಾಲಯಗಳು) ಗಮನಕ್ಕೆ ಬರುತ್ತದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ನಡೆಸುವುದು ಶಿಶು ಮಂದಿರಗಳು, ಮಕ್ಕಳ ನಿಲಯಗಳು, ಪರಿವೀಕ್ಷಣಾಲಯಗಳು ಹಾಗೂ ಇಲಾಖೆ ಸರ್ಕಾರದೊಡನೆ ಸಂಯೋಜಿಸುವುದು ಜಿಲ್ಲಾ ಮಕ್ಕಳ ನ್ಯಾಯ ಮಂಡಳಿಗಳು ಮತ್ತು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗಳು. ಪೊಲೀಸ್ ಇಲಾಖೆ ಪ್ರತಿ ಪೊಲೀಸ್ ಠಾಣೆಯಲ್ಲಿ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಗಳನ್ನು ಹೊಂದಿದ್ದು, ಪ್ರತಿ ಜಿಲ್ಲೆ/ನಗರದಲ್ಲಿ ಮಕ್ಕಳ ವಿಶೇಷ ಪೊಲೀಸ್ ಘಟಕಗಳನ್ನು ಸ್ಥಾಪಿಸಿದೆ. ವಿಶೇಷ ತರಬೇತಿ ಹೊಂದಿರುವ ಈ ಪೊಲೀಸ್ ಮಕ್ಕಳೊಡನೆ ಸಂಯಮದಿಂದ ಸಂವಹಿಸಿ ಮಕ್ಕಳ ಹಕ್ಕುಗಳ ರಕ್ಷಣೆಗೆ ಗಮನ ಕೊಡುತ್ತಾರೆ. ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದೇಶದಾದ್ಯಂತ ಚೈಲ್ಡ್ಲೈನ್ ಇಂಡಿಯಾ ಫೌಂಡೇಶನ್ ಜೊತೆಯಲ್ಲಿ ಚೈಲ್ಡ್ಲೈನ್ 1098 ಉಚಿತ ದೂರವಾಣಿ ಸಹಾಯವಾಣಿ ನಡೆಸುತ್ತದೆ. ಇದರೊಂದಿಗೆ ದೇಶದಾದ್ಯಂತ ಹರಡಿಕೊಂಡಿರುವ ಅಸಂಖ್ಯಾತ ಸ್ವಯಂಸೇವಾ ಸಂಘಟನೆಗಳು ವಿವಿಧ ಹೆಸರುಗಳಲ್ಲಿ ಮಕ್ಕಳ ರಕ್ಷಣೆ, ಪುನರ್ವಸತಿಗಾಗಿ ನಿಲಯಗಳು, ಅನಾಥಾಲಯಗಳು, ಮಂದಿರಗಳು, ತಂಗುದಾಣ, ತೆರೆದ ಮನೆಗಳು, ಇತ್ಯಾದಿ ಸ್ವಯಂ ಆಗಿ, ಸಕರ್ಾರದ ನೆರವಿನೊಂದಿಗೆ ಇಲ್ಲವೇ ದೇಣಿಗೆಗಳನ್ನು ಪಡೆದು ನಡೆಸುತ್ತಾರೆ. ಮಕ್ಕಳ ಮೇಲಿನ ಅಪರಾಧಗಳ ವಿಚಾರಣೆಗೆ ಈಗ ಮಕ್ಕಳ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ಅನಾಥರಾಗಿದ್ದು ಸೂಕ್ತವೆನಿಸಿದರೆ ಮಕ್ಕಳನ್ನು ದತ್ತು ನೀಡುವ, ಫಾಸ್ಟರ್ ಕೇರ್ನಲ್ಲಿ ಇರಿಸುವ ಮತ್ತು ತೊಂದರೆಯಲ್ಲಿರುವ ಮಕ್ಕಳಿಗೆ ಸಾಂಸ್ಥಿಕ ರಕ್ಷಣೆ ನೀಡುವುದು ಇಲ್ಲವೇ ಹಣಕಾಸನ್ನಿತ್ತು ಪ್ರಾಯೋಜನ ಕಾರ್ಯಕ್ರಮವನ್ನು ಸಕರ್ಾರ ನಡೆಸುತ್ತದೆ. ಈ ಎಲ್ಲವನ್ನೂ ಸಂಯೋಜಿಸುವ ಕೆಲಸವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ನೀಡಲಾಗಿದೆ. ಸಮಗ್ರ ಮಕ್ಕಳ ರಕ್ಷಣಾ ಯೋಜನೆ ಅಡಿಯಲ್ಲಿ ರಾಜ್ಯ ಮಟ್ಟದ ಅಧಿಕಾರಿಗಳ ಉಸ್ತುವಾರಿಯಡಿಯಲ್ಲಿ ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳು ಕೆಲಸ ಮಾಡುತ್ತಿವೆ. ಈ ಎಲ್ಲ ಕೆಲಸಗಳನ್ನು ನಿರ್ದೇಶಿಸುವ, ನಿಯಂತ್ರಿಸುವ ಮತ್ತು ಅತ್ಯುತ್ತಮ ವಿಧಾನಗಳನ್ನು ಸೂಚಿಸುವ ಕಾಯಿದೆಯೇ ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯಿದೆ 2015. ಮಕ್ಕಳ ನ್ಯಾಯ ಈಗ ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿದೆ. ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ, ಭಾರತ ಸಂವಿಧಾನ, ರಾಷ್ಟ್ರೀಯ ಮಕ್ಕಳ ನೀತಿ 2013, ಮಕ್ಕಳನ್ನೇ ಉದ್ದೇಶಿಸಿ ಹೊರಡಿಸಲಾಗಿರುವ ವಿವಿಧ ಕಾಯಿದೆಗಳು, ಕಾರ್ಯಕ್ರಮಗಳು, ಯೋಜನೆಗಳು, ಇತ್ಯಾದಿಗಳ ಹಿನ್ನೆಲೆಯಲ್ಲಿ ನೀವು ಮಕ್ಕಳೊಡನೆ ಕೆಲಸ ಮಾಡುತ್ತೀರಿ, ಮಕ್ಕಳನ್ನು ಕುರಿತು ಚಿಂತಿಸುತ್ತೀರಿ, ಮಕ್ಕಳೊಡನೆ ಒಡನಾಡುತ್ತೀರಿ, ಮಕ್ಕಳನ್ನು ಕುರಿತು ಮತ್ತು ಮಕ್ಕಳಿಗಾಗಿ ಬರೆಯುತ್ತೀರಿ, ಮಕ್ಕಳ ಪರ ವಕೀಲಿ ಮಾಡುತ್ತೀರಿ ಎಂದರೆ ನಿಮಗೆ ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯಿದೆ 2015 ಪರಿಚಯ ಆಗಿರಲೇಬೇಕು. ವಿಶೇಷವಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗಳು (ಸಿ.ಡಬ್ಲ್ಯು.ಸಿ) ಹಾಗೂ ಜಿಲ್ಲಾ ಮಕ್ಕಳ ನ್ಯಾಯ ಮಂಡಳಿ (ಜೆ.ಜೆ.ಬಿ)ಗಳಲ್ಲಿ ಸದಸ್ಯರಾಗಿರುವವರು, ಚೈಲ್ಡ್ಲೈನ್ 1098ನಲ್ಲಿ ತೊಡಗಿರುವವರು, ಮಕ್ಕಳ ನಿಲಯಗಳು, ವಸತಿ ನಿಲಯಗಳೇ ಮೊದಲಾದವುಗಳಿಗೆ ನಿಯಮಿತವಾಗಿ ಭೇಟಿ ಕೊಡುವ ಸಮಿತಿಯ ಸದಸ್ಯರುಗಳಿಗೆ ಈ ಕಾಯಿದೆಯ ಆಮೂಲಾಗ್ರ ಪರಿಚಯ ಅತ್ಯಾವಶ್ಯಕ. ಸಮಾಜಕಾರ್ಯ, ಸಮಾಜವಿಜ್ಞಾನ, ಸಮಾಜಕಲ್ಯಾಣ, ಗ್ರಾಮೀಣಾಭಿವೃದ್ಧಿ, ಮನಃಶ್ಶಾಸ್ತ್ರ, ಪತ್ರಿಕೋದ್ಯಮ, ಇತ್ಯಾದಿ ಮಾನವಿಕ ಅಧ್ಯಯನ ಮಾಡುವ ವಿದ್ಯಾರ್ಥಿಗಳು, ಸಂಶೋಧಕರು, ಬೋಧಕರಿಗೆ ಮಕ್ಕಳ ನ್ಯಾಯ ಕಾಯಿದೆ ಅರಿವು ಅತ್ಯಾವಶ್ಯಕ. ವಿವಿಧ ರಂಗದಲ್ಲಿರುವವರೆಲ್ಲರಿಗೂ ಈ ಕಾಯಿದೆ ಅನಿವಾರ್ಯವಾಗಿರುವುದರಿಂದ ಕಾಯಿದೆಯ ಕನ್ನಡದ ಅನುವಾದವನ್ನು ಮುದ್ರಿಸಿ ನಿಮ್ಮ ಬಳಕೆಗಾಗಿ ನೀಡಲಾಗಿದೆ. ಕಾಯಿದೆಯನ್ನು ಕನ್ನಡಕ್ಕೆ ಅನುವಾದಿಸಿರುವವರು ಎನ್.ವಿ.ವಾಸುದೇವ ಶರ್ಮಾ ಮತ್ತು ಸತೀಶ್ ಜಿ.ಸಿ. ಪುಸ್ತಕದ ಬೆಲೆ ರೂ. 100/- ಪ್ರತಿಗಳಿಗಾಗಿ ಸಂಪರ್ಕಿಸಿ ಚೈಲ್ಡ್ ರೈಟ್ಸ್ ಟ್ರಸ್ಟ್, 4606, 6ನೇ ಮಹಡಿ, ಹೈಪಾಯಿಂಟ್ 4, ಅರಮನೆ ರಸ್ತೆ, ಬೆಂಗಳೂರು 560001 ದೂ. 080 22201098 email:[email protected] - ಚೈಲ್ಡ್ ರೈಟ್ಸ್ ಟ್ರಸ್ಟ್ ಮತ್ತು ಬಾಲ್ಯ
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
![]()
|
![]()
|
![]()
|
![]()
|
SITE MAP
SitePOSH |
NIRATHANKAOUR OTHER WEBSITESSubscribe |
HR and Employment Law Classes - Every Fortnight
Stay updated and informed by joining our WhatsApp group for HR and Employment Law Classes - Every Fortnight.
The Zoom link for the sessions will be shared directly in the group. |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |