ಬದುಕು, ಎಂಬ ಪದ ಕೇಳಲು ಎಷ್ಟು ಚೆಂದವೋ ಆ ಬದುಕೆಂಬ ಬಂಡಿಯನ್ನು ನಡೆಸಲು ಅಷ್ಟೇ ಕಷ್ಟದಾಯಕ ಎಂಬುದು ನಮಗೆ ಬದುಕನ್ನು ಬಯಸಿ ಬೆಂಗಳೂರಿಗೆ ವಲಸೆ ಬರುವ ಬಡಕುಟುಂಬಗಳನ್ನು ನೋಡಿದಾಗ ಅರಿವಾಗುತ್ತದೆ, ಹೀಗೆ ಬದುಕನ್ನು ಅರಸಿ ಬೆಂಗಳೂರಿಗೆ ಬರುವ ಕುಟುಂಬಗಳು ಭಾರತದ ನಾನಾ ಪ್ರದೇಶಗಳಿಂದ ಜೀವನವೆಂಬ ಬದುಕಿನ ಜಟಕಾ ಬಂಟಿಯನ್ನು ನಡಸಲು ಹಲವಾರು ಕೆಲಸಗಳನ್ನು ಹುಡುಕಿಕೊಂಡು ಹೊರ ರಾಜ್ಯಗಳಾದ ಆಂಧ್ರ, ತಮಿಳುನಾಡು, ಒರಿಸ್ಸಾ, ಮಹಾರಾಷ್ಟ್ರ, ಕಲ್ಕತ್ತಾ ರಾಜ್ಯಗಳಿಂದ ಬಂದರೆ, ನಮ್ಮದೇ ರಾಜ್ಯದ ಜಿಲ್ಲೆಗಳಾದ ಗುಲ್ಬರ್ಗ, ರಾಯಚೂರು, ಕೊಪ್ಪಳ, ಬಳ್ಳಾರಿ, ಬಿಜಾಪುರ, ಬೀದರ್, ಬಾಗಲಕೋಟೆ ಮುಂತಾದ ಭಾಗಗಳಿಂದ ಬೆಂಗಳೂರಿಗೆ ಬಂದು ಯಾವುದೋ ಒಂದು ಕೊಳಚೆ ಪ್ರದೇಶ ಅಥವಾ ಯಾವುದೋ ಒಂದು ಖಾಲಿ ಜಾಗಗಳಲ್ಲಿ ಮಾಲೀಕರಿಗೆ 100 ರೂಗಳಿಂದ 200 ರೂಗಳವರೆಗೆ ಮಾಸಿಕ ಬಾಡಿಗೆಯನ್ನು ನೀಡಿ ತಮ್ಮ ಗುಡಾರಗಳನ್ನು ನಿರ್ಮಿಸಿಕೊಂಡು ಜೀವನವನ್ನು ಸಾಗಿಸುವ ಜನರೇ ಹೆಚ್ಚು. ಬೆಂಗಳೂರೆಂಬ ಮಹಾ ನಗರದಲ್ಲಿ ಅವರು ಸುಸಜ್ಜಿತ ಮನೆಗಳಲ್ಲಿ ವಾಸಿಸುವುದು ಇವರ ಪಾಲಿಗೆ ಕೇವಲ ಕನಸಷ್ಟೆ , ಕೆಲವರಿಗೆ ತಮ್ಮ ಊರುಗಳಲ್ಲಿ ತಮ್ಮದೇ ಆದ ಸ್ವಂತ ಮನೆಗಳಿದ್ದರೂ, ವ್ಯವಸಾಯದ ಜಮೀನುಗಳಿದ್ದರೂ ವ್ಯವಸಾಯಕ್ಕೆ ಬೇಕಾದ ಸೌಲಭ್ಯಗಳ ಕೊರತೆಯಿಂದಲೋ ಅಥವಾ ಅದರಿಂದ ಸಿಗುವ ಮಿತ ಆದಾಯದಿಂದಲೋ ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲಾಗದೆ ಅದಕ್ಕಿಂತಲೂ ಉತ್ತಮವಾದ ಜೀವನವನ್ನು ನಡೆಸಬಹುದೆಂಬ ಇಚ್ಛೆಯಿಂದ ಬರುವವರು ಒಂದೆಡೆಯಾದರೆ, ಜೀವನ ನಡೆಸಲು ಬೇಕಾದ ಮೂಲ ಅವಶ್ಯಕತೆಗಳ ಕೊರತೆ, ಬಡತನವೆಂಬ ಭೂತದ ಬೆಂಕಿಯ ಬೇಗೆಯನ್ನು ತಾಳಲಾರದೆ ತಮ್ಮ ಹೊಟ್ಟೆಯನ್ನು ತುಂಬಿಕೊಳ್ಳುವ ಉದ್ದೇಶದಿಂದ ವಲಸೆ ಬರುವ ಜನರೇ ಹೆಚ್ಚು. ಹೀಗೆ ಬಂದ ಜನ ಬೆಂಗಳೂರೆಂಬ ಕಾಂಕ್ರೀಟ್ ನಗರವನ್ನು ಮತ್ತಷ್ಟು ಕಾಂಕ್ರೀಟ್‍ಮಯಗೊಳಿಸುವ ಕೆಲಸದಲ್ಲಿ ತೊಡಗುತ್ತಾರೆ. ಅಂದರೆ ಕಟ್ಟಡ ಕಾಮಗಾರಿಯ ಕೆಲಸಗಳಲ್ಲಿ ತೊಡಗುತ್ತಾರೆ, ಮತ್ತೆ ಕೆಲವರು ಪ್ಲಾಸ್ಟಿಕ್ ಮುಂತಾದ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ಮಾರಾಟ ಮಾಡುವ ಕೆಲಸಗಳಲ್ಲಿ ತೊಡಗುತ್ತಾರೆ.
0 Comments
ಮಕ್ಕಳು ಸಮುದಾಯದ 'ಆಸ್ತಿ' ದೇಶದ ಸಂಪತ್ತು ಮುಂತಾದ ಕಲ್ಪನೆಗಳು ಇತ್ತೀಚೆಗೆ ನಮ್ಮ ಸಮಾಜದಲ್ಲಿ ಮೂಡುತ್ತಿರುವುದು ಮಕ್ಕಳ ಅಭಿವೃದ್ಧಿ / ರಕ್ಷಣೆ ವಿಚಾರದಲ್ಲಿ ಧನಾತ್ಮಕ ಬೆಳವಣಿಗೆ ಆಗಿದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಮುದಾಯದ ಪ್ರತಿಯೊಬ್ಬರೂ ಭಾಗಿಯಾಗಬೇಕಿರುವುದು ಇಂದಿನ ದಿನಗಳಲ್ಲಿ ಅನಿವಾರ್ಯವಾಗಿದೆ. ಮಕ್ಕಳ ಹಕ್ಕುಗಳನ್ನು ಪ್ರಚಾರ ಮಾಡಲು ಮಕ್ಕಳ ಸಮಸ್ಯೆಗಳಿಗೆ ಪ್ರತಿಕ್ರಿಯಿಸಲು ವಕೀಲ ನಡೆಸಲು ಸಮಾನ ಚಿಂತಕರು ಒಟ್ಟಾಗಿ ಆಂದೋಲನ, ಸಮೀಕ್ಷೆ, ಸಂಶೋಧನೆ, ವಿಚಾರ ಸಂಕಿರಣ ನಡೆಸಲು ವೇದಿಕೆಗಳನ್ನು ಹುಟ್ಟುಹಾಕಿ, ಪರಸ್ಪರ ಕೈ ಜೋಡಿಸಿ 'ಜಾಲ' ನಿರ್ಮಿಸಿ ಮಕ್ಕಳ ಹಕ್ಕುಗಳನ್ನು ಎತ್ತಿ ಹಿಡಿಯಬೇಕಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ.
ಕೈ ಕಾಲು ಸಣ್ಣ, ಹೊಟ್ಟೆ ಡುಮ್ಮ ಇರುವ ಮಕ್ಕಳನ್ನು, ಸಂಪೂರ್ಣ ದೇಹ ಊದಿಸಿಕೊಂಡು, ಚರ್ಮ ಬಿರುಕು ಬಿಟ್ಟಂತೆ ಕಾಣುವ ಮಕ್ಕಳನ್ನು, ಮೂಳೆಗೆ ಸುಕ್ಕುಗಟ್ಟಿದ ಚರ್ಮವನ್ನು ಹೊದ್ದುಕೊಂಡು ತೊಗಲಿನ ಬೊಂಬೆಗಳಂತೆ ಇರುವ ಮಕ್ಕಳನ್ನು, ಕಣ್ಣಲ್ಲೇ ಜೀವ ಹಿಡಿದುಕೊಂಡು ಕೋತಿ ಮರಿಯಂತೆ ತಾಯಿಯನ್ನು ಬಿಗಿದಪ್ಪಿಕೊಂಡಿರುವ ಮಕ್ಕಳನ್ನು, ಗೂನು ಬೆನ್ನು, ದೃಷ್ಟಿ ಹೀನ ಹಾಗೂ ವಿವಿಧ ಅಂಗವೈಕಲ್ಯತೆಗೆ ಒಳಗಾದ ಮಕ್ಕಳನ್ನು ನೋಡುತ್ತಾ ಬಾಲ್ಯ ಕಳೆದವರು ನಾವು, ಅನೇಕರು. ಆದರೆ, ಈ ಮಕ್ಕಳ ಕರುಣಾಜನಕ ಕಥೆಯ ಹಿಂದೆ ನಮ್ಮ ಸಮಾಜದಲ್ಲಿ ಹಾಸು ಹೊಕ್ಕಾಗಿರುವ ಜಾತಿಪದ್ಧತಿ, ಆರ್ಥಿಕ ಅಸಮಾನತೆ, ಹಸಿವಿನ ಆಕ್ರಂದನ ಮತ್ತು ಸರ್ಕಾರದ ಯೋಜನೆಗಳ ವೈಫಲ್ಯತೆಯೇ ಅಡಗಿ ಕುಳಿತಿವೆ ಎಂದು ಆಗ ತೋಚಿರಲಿಲ್ಲ.
'ಭಾರತದ ಮಕ್ಕಳ ಅಪೌಷ್ಟಿಕತೆ ರಾಷ್ಟ್ರೀಯ ಅಪಮಾನ' ಹೀಗೆ ಉದ್ಗರಿಸಿದವರು ಯಾರೋ ಸಾಮಾನ್ಯರಲ್ಲ. ಭಾರತದ ಪ್ರಧಾನ ಮಂತ್ರಿಗಳಾದ ಮಾನ್ಯ ಮನಮೋಹನ್ ಸಿಂಗ್‍ರವರು (2012). ಈ ರೀತಿಯ ವಿಷಾದಕರ ಹೇಳಿಕೆಗೆ ಕಾರಣವಾದದ್ದು ನಂದಿ ಫೌಂಡೇಶನ್ ನಡೆಸಿದ ಹಸಿವು ಮತ್ತು ಅಪೌಷ್ಟಿಕತೆ ಕುರಿತಾದ ಅಧ್ಯಯನದಿಂದ ಹೊರಹೊಮ್ಮಿದ ಅಂಕಿಅಂಶಗಳು. ಇಲ್ಲಿ ನಿಮಗೊಂದು ಪ್ರಶ್ನೆ ಉದ್ಭವಿಸಬಹುದು, ಹಾಗಾದರೆ ಇಷ್ಟು ಕಾಲ ಮಕ್ಕಳ ಅಪೌಷ್ಟಿಕತೆ ಕುರಿತು ಯಾರಿಗೂ ಅರಿವಿರಲಿಲ್ಲವೇ? ಕೆಲವರಿಗೆ ಇದ್ದಿರಬಹುದು, ಆದರೆ ಯಾವುದೇ ಸಮಸ್ಯೆಯ ವ್ಯಾಪ್ತಿಯ ಬಗ್ಗೆ ನಿಖರವಾಗಿ ತಿಳಿಯುವುದು ಒಂದು ನಿರ್ದಿಷ್ಟವೂ ಮತ್ತು ಕ್ರಮಬದ್ಧವೂ ಆದ ವಿಧಾನದಲ್ಲಿ ಅಂಕಿ ಅಂಶಗಳನ್ನು ಸಂಗ್ರಹಿಸಿ ವಿಶ್ಲೇಷಿಸಿದಾಗ ಮಾತ್ರ.
ಎಚ್.ಐ.ವಿ. ಸೋಂಕಿರುವ ಕುರಿತು 2001 ರಿಂದ 2003 ರವರೆಗೆ ನಡೆಸಿದ ವಿವಿಧ ಸಮೀಕ್ಷೆಗಳ ಪ್ರಕಾರ ಕರ್ನಾಟಕದಲ್ಲಿ ಶೇ 1% ರಷ್ಟು ಸೋಕಿರುವ ಮಕ್ಕಳಿದ್ದಾರೆ. ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಎಚ್.ಐ.ವಿ. ಸೋಂಕಿರುವುದು ಕಂಡು ಬಂದಿರುತ್ತದೆ. ಅದರಲ್ಲೂ ಕೊಪ್ಪಳ, ಬೆಳಗಾಂ, ವಿಜಾಪೂರ ಹಾಗೂ ಬಾಗಲಕೋಟ ಜಿಲ್ಲೆಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ, ಅಂದರೆ ಶೇ 2 ರಿಂದ 3 ರಷ್ಟು ಇರುವುದು ವರದಿಗಳಲ್ಲಿ ಕಂಡುಬರುತ್ತದೆ. ಇತ್ತೀಚೆಗೆ ಐಚಾಪ್ ಹಾಗೂ ಕೆ.ಎಚ್.ಪಿ.ಟಿ (Karnataka Health Promotion Trust) ಯೋಜನೆಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಎಚ್.ಐ.ವಿ. ಸೋಂಕಿರುವ ಮಕ್ಕಳ ಪೋಷಣೆ ಮತ್ತು ರಕ್ಷಣೆಗಾಗಿ ಪ್ರಾಯೋಜಕತ್ವ ಹಾಗೂ ವಿಶೇಷ ಪಾಲನಾ ಯೋಜನೆಗಳು ಅಲ್ಲಲ್ಲಿ ಅನುಷ್ಠಾನಗೊಳ್ಳುತ್ತಿದೆ. ಹೀಗಾಗಿ, ಎಚ್.ಐ.ವಿ. ಸೋಂಕಿರುವ ಅಥವಾ ಬಾಧಿತರಾಗಿರುವ ಮಕ್ಕಳ ಪುನರ್ವಸತಿಯತ್ತ ಹೊಸ ಭರವಸೆ ಮೂಡಿದೆ. ಎಚ್.ಐ.ವಿ. ಹರಡಲು ವಲಸೆ, ಅಸುರಕ್ಷಿತ ಲೈಂಗಿಕ ಸಂಬಂಧಗಳು, ಜನರಲ್ಲಿ ಎಚ್.ಐ.ವಿ. ಅರಿವಿನ ಕೊರತೆ, ಅವ್ಯಾಹತವಾಗಿ ನಡೆಯುತ್ತಿರುವ ಬಾಲ್ಯ ವಿವಾಹಗಳು ಪ್ರಮುಖ ಕಾರಣಗಳಾಗಿವೆ. 2007ರಲ್ಲಿ ಕೆ.ಎಚ್.ಪಿ.ಟಿ. ನಡೆಸಿದ ಸಮೀಕ್ಷೆಯ ಪ್ರಕಾರ ಬಾಗಲಕೋಟ ಜಿಲ್ಲೆಯೊಂದರಲ್ಲೇ 2500 ಹಾಗೂ ವಿಜಾಪೂರ ಜಿಲ್ಲೆಯಲ್ಲಿ 1300 ಎಚ್.ಐ.ವಿ. ಸೋಂಕಿತರು ಹಾಗೂ ಬಾಧಿತ ಮಕ್ಕಳು ಇದ್ದಾರೆ ಎಂದು ಹೇಳಲಾಗುತ್ತಿದೆ.
'ಸುಮಂಗಲಿ ಸೇವಾಶ್ರಮ' ಮತ್ತು 'ಸುಶೀಲಮ್ಮ' ಇವು ಎರಡು ಶಬ್ದಗಳಲ್ಲ, ಒಂದೇ ಧ್ವನಿಯ ಎರಡು ಕಂಪನಗಳು. ಒಂದೇ ಸಂಸ್ಥೆ, ಸ್ಥಾವರ; ಇನ್ನೊಂದು ವ್ಯಕ್ತಿ, ಜಂಗಮ. ಮೊದಲಿನದ್ದು ಸ್ಥಾವರವಾದರೂ ಜಡವಲ್ಲ; ಎರಡನೆಯದು ಚಲನಶೀಲದ್ದಾದರೂ ಅಸ್ಥಿರವಲ್ಲ. ಸುಮಂಗಲಿ ಸೇವಾಶ್ರಮದಲ್ಲಿ ಸುಶೀಲಮ್ಮ ಕೆಲವು ಸಮಯಗಳಲ್ಲಿ ಇರದಿದ್ದಾಗಲೂ ಅಲ್ಲಿನ ವಾಸಿಗಳಿಗೆ ಕಾರ್ಯಕರ್ತರಿಗೆ ಮತ್ತು ಸಂದರ್ಶಕರಿಗೆ ಸುಶೀಲಮ್ಮ ಅಲ್ಲಿ ಓಡಿಯಾಡುತ್ತಿದ್ದಾರೆ, ತಮ್ಮೊಡನೆ ಸಂವಾದಿಸುತ್ತಿದ್ದಾರೆ ಎಂಬ ಭಾವನೆ ಬರುವ ಹಾಗೆ ಆ ಸಂಸ್ಥೆಯು ಕ್ರಿಯಾಶೀಲವಾಗಿರುತ್ತದೆ; ಸುಶೀಲಮ್ಮನವರು ಬೆಂಗಳೂರಿನಲ್ಲೇ ಎಲ್ಲಾದರೂ ಹೋಗುತ್ತಿರುವಾಗ, ಯಾರೊಡನೆಯಾದರೂ ಸಂಭಾಷಿಸುತ್ತಿರುವಾಗ ಅಥವಾ ಬೆಂಗಳೂರಿನ ಹೊರಗಡೆ ಪ್ರಯಾಣದಲ್ಲಿದ್ದಾಗ, ಕೆಲಸದಲ್ಲಿ ನಿರತರಾಗಿದ್ದಾಗ ಅವರು ವ್ಯಕ್ತಿಯಾಗಿ ಕಾಣಿಸದೆ ಅವರು ಹುಟ್ಟಿಹಾಕಿ ಬೆಳೆಸುತ್ತಲಿರುವ ಸಂಸ್ಥೆಯೇ ಜಂಗಮ ರೂಪುದಳೆದಿದೆ ಅನ್ನಿಸುತ್ತದೆ. ಸಂಸ್ಥೆ ಮತ್ತು ಅವರು ಸದ್ದು ಮಾಡದ ಕ್ರಾಂತಿ ಸಂಗತಿಗಳು. ನಮ್ಮ ಕಣ್ಣೆದುರಿಗೆ ಸೇವಾಶ್ರಮ ಬೆಳೆಯತ್ತಿರುವ, ತನ್ನ ಚಟುವಟಿಕೆಗಳನ್ನು ವಿಸ್ತಾರಗೊಳಿಸುತ್ತಲಿರುವ ಪರಿಯನ್ನು ನೋಡಿದರೆ ಸುಶೀಲಮ್ಮನವರ ಕರ್ತೃತ್ವಶಕ್ತಿ ಹೇಗೆ ಕುಡಿಯೊಡೆಯುತ್ತಲಿದೆ, ಅರಳುತ್ತಲಿದೆ ಎಂಬುದು ಸುಸ್ಪಷ್ಟವಾಗುತ್ತದೆ. ಸಮಾಜದಲ್ಲಿ ಆಗುತ್ತಲಿರುವ ವೈವಿಧ್ಯಮಯ ಚಟುವಟಿಕೆಗಳಲ್ಲಿ, ಅದರಲ್ಲೂ ಅನ್ಯಾಯ, ದೌರ್ಜನ್ಯ, ಶೋಷಣೆ, ಮೋಸ, ವಂಚನೆ, ಭ್ರಷ್ಟಾಚಾರ, ಇಂತಹ ಅಸ್ಪಷ್ಟ ಸಂಗತಿಗಳ ನಿವಾರಣೆಗೆ ಅವರು ಹಿಂಜರಿಯದೆ ಮುಂದಾಗುತ್ತಿರುವುದನ್ನು ಗಮನಿಸಿದರೆ ಅವರ ಕಿರುಗಾತ್ರದ, ಸಣಕಲು ದೇಹದಲ್ಲಿ ಅದೆಂತಹ ಚೇತನ ತುಂಬಿ ತುಳುಕುತ್ತಿರಬೇಕು ಎಂಬ ಸೋಜಿಗವಾಗುತ್ತದೆ.
One man demolition army ಇಂಗ್ಲೆಂಡ್ ಕ್ರಿಕೆಟ್ ಅಭಿಮಾನಿಗಳ Barmy Army, ಅದಕ್ಕೆ ಪ್ರತಿಯಾಗಿ ಬ್ರಿಟನ್‍ನಲ್ಲಿ ನೆಲೆಸಿರುವ ಭಾರತ ಸಂಜಾತರು ಆರಂಭಿಸಿದ - Bhrath Army ಗಳನ್ನು ಕೇಳಿದ್ದೇವೆ, ಆದರೆ ಇದ್ಯಾವುದೀ ಹೊಸ ಆರ್ಮಿ ಎನ್ನುತ್ತೀರಾ? ಹಲವಾರು ರಾಜಕೀಯ ವಿಪ್ಲವಗಳನ್ನು ಕಂಡ 1996ರ ದಶಕಕ್ಕೆ ಸಾಕ್ಷಿಭೂತರಾದ ಯಾರೊಬ್ಬರನ್ನೂ ಕೇಳಿದರೂ ಆ ವ್ಯಕ್ತಿ ಯಾರು ಎಂದು ತಟ್ಟನೆ ಉತ್ತರಿಸಿ ಬಿಡುತ್ತಾರೆ. ಖಂಡಿತ ಅವರನ್ನು ಪರಿಚಯ ಮಾಡಿಕೊಡಬೇಕಾದ ಅವಶ್ಯಕತೆಯೂ ಇಲ್ಲ.
ಹೆಸರಿಗೆ ದ್ವೀಪರಾಷ್ಟ್ರ. ಆದರೆ ಬುದ್ಧನ ಹೆಸರಿನಲ್ಲಿ ನಿಜಕ್ಕೂ ಒಂದು ಬೃಹತ್ ರಾಷ್ಟ್ರ. ಸರಳ ಜೀವನ, ಪ್ರಕೃತಿ ಪ್ರೀತಿ, ಕೃಷಿಯ ಅಕ್ಕರೆ, ಶಿಕ್ಷಣಕ್ಕೆ ಆದ್ಯತೆ, ಎಲ್ಲರಿಗೂ ಒಂದೇ ಹಕ್ಕು. ಇವೆಲ್ಲಾ ಸಂಗಮಕ್ಕೆ ಉತ್ತರ ಶೀಲಂಕಾ. ಶೀಲಂಕಾ ಲಂಕಾಧಿಪತಿ ರಾವಣನ ಲಂಕೆ ಎಂಬ ಕಥೆ ಇದೆ. ಆದರೆ ಅದು ಬುದ್ಧ ಹುಣ್ಣಿಮೆಯ ನಾಡು. ಸೌಹಾರ್ದ, ಸಮಾನತೆ, ಭ್ರಾತೃತ್ವ, ಎಲ್ಲಕ್ಕೂ ಇಲ್ಲಿ ಚಿನ್ನದ ಬೆಲೆ.
ಮನುಷ್ಯನ ಜನ್ಮದಲ್ಲಿ ಎರಡು ಪ್ರಕಾರಗಳಿವೆ, ಒಂದು ಪುರುಷ, ಇನ್ನೊಂದು ಮಹಿಳೆ. ಇವೆಡರಲ್ಲಿ ಶಾರೀರಿಕವಾಗಿ ಭಿನ್ನವೇ ಹೊರತು ಬೌದ್ಧಿಕವಾಗಿ ಅಲ್ಲ. ಅದು ಸಮವಾಗಿಯೇ ಇದೆ. ಆಕೆ ಜನ್ಮ ಕೊಟ್ಟ ಮಾತೆ, ಸೋದರಿ, ಮಡದಿಯಾಗಿ ಜೀವನದ ನೋವು-ನಲಿವುಗಳಲ್ಲಿ ಸಮಭಾಗಿಯಾಗಿ, ಪತಿಗೆ ಧೈರ್ಯ ಆತ್ಮವಿಶ್ವಾಸ ತುಂಬಿ ನಿಲ್ಲುವ ಬಂಧುವಾಗಿ, ತಪ್ಪಿದಲ್ಲಿ ತಿದ್ದುವ ಮಾರ್ಗದರ್ಶಿಯಾಗಿ, ಮನೆಬೆಳೆಗುವ ಸೊಸೆಯಾಗಿ-ಹೀಗೆ ಪುರುಷ ಜೀವನದ ಅವಿಭಾಜ್ಯ ಅಂಗವಾಗಿ ನಿಲ್ಲುವ ಹಾಗೂ ಸಮಾಜ ರಾಷ್ಟ್ರಗಳ ನಿರ್ಮಾಣದಲ್ಲಿ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಾಳೆ.
ಮನೋವಿಜ್ಞಾನ ಮಾನವನಷ್ಟೇ ಹಳೆಯದಾದರೂ ಅದು ಒಂದು ಸ್ವತಂತ್ರ ವೈಜ್ಞಾನಿಕ ಪ್ರಕಾರವಾಗಿ ಅಸ್ಥಿತ್ವಕ್ಕೆ ಬಂದದ್ದು ಇತ್ತೀಚೆಗೆ, ಸುಮಾರು 125 ವರ್ಷಗಳ ಹಿಂದೆ. ಪುರಾತನ ಗ್ರೀಕ್ ದಾರ್ಶನಿಕರು ಮನಸ್ಸನ್ನು ಕುರಿತು ಹಲವಾರು ವ್ಯಾಖ್ಯಾನಗಳನ್ನು ಮಾಡಿದ್ದರು. ಅವರು ಕೆಲವು ಮೂಲಭೂತ ಪ್ರಶ್ನೆಗಳನ್ನು ಎತ್ತಿದ್ದರು. ಉದಾಹರಣೆಗೆ, ನಾನಾರು? ಎಲ್ಲಿಂದ ಬಂದೆ? ಎಲ್ಲಿಗೆ ಹೋಗುತ್ತಿದ್ದೇನೆ? ಇಲ್ಲೇನು ಮಾಡುತ್ತಿದ್ದೇನೆ? ಏಕೆ ಮಾಡುತ್ತಿದ್ದೇನೆ? ಇಂತಹ ದಾರ್ಶನಿಕ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿದ್ದರು. ಈ ಪ್ರಶ್ನೆಗಳಿಗೆ ಇಂದು ಕೂಡಾ ಸಮರ್ಪಕವಾಗಿ ಉತ್ತರ ಹೇಳುವುದು ಸಾಧ್ಯವಾಗಿಲ್ಲ; ಅದು ಬೇರೆ ಮಾತು. ಇಂದು ಮನೋವಿಜ್ಞಾನ ವಿಫುಲವಾಗಿ ಬೆಳೆದಿದೆ. ಅಮೆರಿಕಾದಂತಹ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಅದು ಬಹಳ ಪ್ರಗತಿ ಸಾಧಿಸಿದೆ. ಒಂದು ಅಂದಾಜಿನ ಪ್ರಕಾರ ಇಂದು ಜಗತ್ತಿನಲ್ಲಿ ಸುಮಾರು ಆರು ಲಕ್ಷ ಮನೋವಿಜ್ಞಾನಿಗಳಿದ್ದಾರೆ. ಅವರಲ್ಲಿ ನಾಲ್ಕು ಲಕ್ಷ ಅಮೆರಿಕದಲ್ಲಿದ್ದಾರೆ; ಉಳಿದವರು ವಿಶ್ವದ ಇತರೆಡೆಗಳಲ್ಲಿ ಹಂಚಿ ಹೋಗಿದ್ದಾರೆ. ಭಾರತದಲ್ಲೂ ಸಾವಿರಾರು ಮಂದಿ ಅಧ್ಯಾಪನ ಮತ್ತು ಸಂಶೋಧನೆಗಳಲ್ಲಿ ನಿರತರಾಗಿದ್ದಾರೆ; ಮಾನಸಿಕ ಚಿಕಿತ್ಸೆ, ಆಪ್ತ ಸಲಹೆ ಮುಂತಾದ ಪರಿಣತ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಮಾನವ ಸಂಪತ್ತಿನ ಗುಣಮಟ್ಟವನ್ನು ಹೆಚ್ಚಿಸಲು ಇರುವ ಮಾರ್ಗಗಳಲ್ಲಿ ಶಿಕ್ಷಣ ಅತೀ ಮುಖ್ಯವಾದುದು. ಶಿಕ್ಷಣವೇ ಶಕ್ತಿ ಎಂದು ಹೇಳುವಂತೆ ಶಿಕ್ಷಣ ಮಾನವನ ನಿಪುಣತೆ ಮತ್ತು ಸಾಮರ್ಥ್ಯವನ್ನ ಹೆಚ್ಚಿಸುವಲ್ಲಿ ಮಹತ್ವಪೂರ್ಣ ಸ್ಥಾನ ಪಡೆದಿದೆ. ಶೈಕ್ಷಣಿಕ ಪ್ರಗತಿ ಸಾಧಿಸಿರುವ ಯಾವುದೇ ದೇಶವಾದರೂ ಅತಿ ಸುಲಭವಾಗಿ ಮುಂದುವರಿಯುತ್ತದೆ. ಇಂದು ಜಗತ್ತಿನಲ್ಲಿ ನಾವು ನೋಡುತ್ತಿರುವ ಅನೇಕ ಹಿಂದುಳಿದ ರಾಷ್ಟ್ರಗಳು ಶಿಕ್ಷಣದಲ್ಲಿ ಹಿಂದುಳಿದವುಗಳಾಗಿವೆ. ಹಾಗಾಗಿ ಶಿಕ್ಷಣದ ರಕ್ಷಣೆಯಷ್ಟೇ ಮುಖ್ಯ ಎಂದು ಖ್ಯಾತ ಶಿಕ್ಷಣ ತಜ್ಞ ಡಾ|| ಹೆಚ್.ನರಸಿಂಹಯ್ಯರವರು ಹೇಳುತ್ತಿದ್ದರು.
ಶಿಬಿರದ ಹಿನ್ನೆಲೆ, ಉದ್ದೇಶಗಳು
ಸಮಾಜಕಾರ್ಯದಲ್ಲಿ ತರಬೇತಿ ಪಡೆಯುವ ವಿದ್ಯಾರ್ಥಿಗಳು ಸಮಾಜಸೇವಾ ಶಿಬಿರದಲ್ಲಿ ಹತ್ತು ದಿನ ಕಳೆಯಬೇಕೆಂಬುದು ನಿಯಮ. ಯಾವುದಾದರೂ ಒಂದು ಹಳ್ಳಿಯಲ್ಲಿ ಶಿಬಿರವನ್ನು ವಿದ್ಯಾರ್ಥಿಗಳು ತಮ್ಮ ಖರ್ಚಿನಲ್ಲಿಯೇ ನಡೆಸಬೇಕಾಗುತ್ತದೆ. ಅವರ ಮಾರ್ಗದರ್ಶನಕ್ಕಾಗಿ ಹೋಗಿರುವ ಪ್ರಾಧ್ಯಾಪಕ (ನಿರ್ದೇಶಕ)ನ ಹಾಗೂ ಈ ಕಾರ್ಯಗಳಲ್ಲಿ ನೆರವಾಗುವ ವಿಭಾಗದ ಸಿಪಾಯಿಯ ಖರ್ಚನ್ನು, ಶಿಬಿರ ನಡೆಯುವ ಸ್ಥಳವು ಧಾರವಾಡಕ್ಕೆ ಆರು ಮೈಲುಗಳ ಒಳಗಿರದಿದ್ದರೆ, ವಿಶ್ವವಿದ್ಯಾಲಯವೇ ವಹಿಸಿಕೊಳ್ಳುತ್ತದೆ. ಜಗತ್ತನ್ನು ನೋಡಿಸುವ ಕಣ್ಣಿನದೂ ಒಂದು ಗೋಲಾಕಾರ. ಈ ಆಕಾರವನ್ನು ಸ್ಥಿರವಾಗಿ ಕಾಪಾಡಲು ಕಣ್ಣಿನಲ್ಲಿ ಒಂದು ನಿರ್ದಿಷ್ಟವಾದ ಒತ್ತಡವಿರುತ್ತದೆ. ಈ ಒಳ ಒತ್ತಡವು ಕಣ್ಣನ್ನು ವಾತಾವರಣದ ಒತ್ತಡಕ್ಕೆ ಕುಸಿಯದಂತೆ ನೋಡಿಕೊಳ್ಳುತ್ತದೆ. ಬಗೆ ಬಗೆಯ ಕಾರಣಗಳಿಂದ, ಈ ಒತ್ತಡವು ಹೆಚ್ಚಿದಾಗ ಅದರಿಂದ ಕಣ್ಣಿನ ನರಕ್ಕೆ ಮತ್ತು ಇತರ ಅಂಗರಚನೆಗೆ ತೊಂದರೆಯಾಗಿ ದೃಷ್ಟಿಮಾಂದ್ಯತೆ ಹಾಗೂ ಕುರುಡುತನ ಉಂಟಾಗುತ್ತದೆ. ಈ ಕಾಯಿಲೆಗೆ ಗ್ಲಾಕೋಮ ಎಂದು ಹೆಸರು.
ಈ ದೇಶದಲ್ಲಿ ಹಸಿರು ಕ್ರಾಂತಿಯಾಗಬೇಕು ಎಂಬ
ಆಂದೋಲನ ಪ್ರಾರಂಭಿಸಿದಂತೆ ಅಕ್ಷರ ಕ್ರಾಂತಿಯ ಆಂದೋಲನವನ್ನು ಪ್ರಾರಂಭಿಸಬೇಕು. - ಜಯದೇವಿ ತಾಯಿ ಲಿಗಾಡೆ. ಭಾರತಕ್ಕೆ ಸ್ವತಂತ್ರ ಬಂದ ಹೊಸತರಲ್ಲಿ ಈ ದೇಶದ ಜನತೆಯನ್ನು ನೂರಾರು ಸಮಸ್ಯೆಗಳು ಕಾಡಿದವು. ಮೂಲಭೂತ ಅವಶ್ಯಕತೆಗಳಾದ ಅನ್ನ, ಅರಿವೆ, ಆಸರೆ, ಶಿಕ್ಷಣ ಮುಂತಾದವುಗಳನ್ನು ಒದಗಿಸುವುದೇ ದುಸ್ತರವಾಗಿತ್ತು. ಸ್ವತಂತ್ರ ಬಂದ ಆರಂಭದದ ದಶಕದಲ್ಲಿ ಪರಕೀಯರು ಬಿಟ್ಟು ಹೋದ ಪಳಯುಳಿಕೆಗಳೇ ನಮ್ಮನ್ನು ಆಳುತ್ತಿದ್ದವು. ನಮ್ಮದೇ ಆದ ನೆಲೆಯಲ್ಲಿ ನಮಗೆ ಸರಿ ಹೊಂದುವಂತಹ ಸಾಮಾಜಿಕ ಬದುಕನ್ನು ರೂಪಿಸಿಕೊಳ್ಳುವುದು ಅಷ್ಟು ಸುಲಭದ ಸಂಗತಿಯಾಗಿರಲಿಲ್ಲ. ಫ್ರಭುತ್ವ ಮತ್ತು ಸಂಸ್ಕೃತಿ ಒಟ್ಟಿಗೇ ನಡೆಯಲಾರವು. ಪ್ರಭುತ್ವ ಬಲಿಷ್ಟವಾದಂತೆ ಸಂಸ್ಕೃತಿ ಬರಡಾಗುತ್ತದೆ. ಸಂಸ್ಕೃತಿ ಬರಡಾದಂತೆ ಒಂದು ನಾಡಿನ ಭಾಷೆ, ಜರ ಬದುಕು ಸೊರಗುತ್ತದೆ. ಎಂದು ಜರ್ಮನ್ ದಾರ್ಶನಿಕ ನೀಷೆ ಅಭಿಪ್ರಾಯಪಡುತ್ತಾನೆ. ಒಂದು ನಾಡಿನ ಸಂಸ್ಕೃತಿ ಬಲಿಷ್ಟವಾಗಬೇಕಾದರೆ, ಅಲ್ಲಿ ಅಕ್ಷರಾಂದೋಲನ ಆಗಬೇಕು. ಇಂಥದೊಂದು ಆಂದೋಲನದ ಹವಣಿಕೆಯಲ್ಲಿದ್ದ ಸ್ವತಂತ್ರ ಭಾರತದ ನೇತಾರರಿಗೆ, ತಳ ಮಟ್ಟದಿಂದ ಮೌಲ್ಯಾಧಾರಿತವಾದ ಉತ್ತಮ ಶಿಕ್ಷಣ ಬುನಾದಿ ಹಾಕುವುದು ದೊಡ್ಡ ಸವಾಲಾಗಿ ಪರಣಮಿಸಿತು. ಈ ಕಟು ಸತ್ಯವನ್ನು ಅರಿತ ಅಸಂಖ್ಯಾತ ಶಿಕ್ಷಣ ಪ್ರೇಮಿಗಳು ಅಕ್ಷರ ಕ್ರಾಂತಿಯ ಆಂದೋಲನಕ್ಕೆ ಕಂಕಣ ತೊಟ್ಟು ನಿಲ್ಲುತ್ತಾರೆ. ಇದರ ಫಲವಾಗಿಯೇ ಈ ನಾಡಿನ ಮಠಮಾನ್ಯಗಳು, ಶಿಕ್ಷಣ ಪ್ರೇಮಿಗಳು ಸರ್ಕಾರಕ್ಕೆ ಹೆಗಲೆಣೆಯಾಗಿ ನಿಂತು ಅಸಂಖ್ಯಾತ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಅಕ್ಷರ ಬೀಜವನ್ನು ಬಿತ್ತಿ ಉತ್ತಮ ಫಸಲನ್ನು ಈ ನಾಡಿಗೆ ನಿರಂತರವಾಗಿ ಧಾರೆ ಎರೆಯುತ್ತಾ ಬರುತ್ತಿದ್ದಾರೆ. ಡಾ|| ತಿಪ್ಪೇಸ್ವಾಮಿಯವರಿಗೆ ಎಪ್ಪತ್ತು ಸಂವತ್ಸರಗಳು ತುಂಬುತ್ತಿವೆ, ಎಂದು ತಿಳಿದೇ ಅಚ್ಛರಿಯಾಯಿತು. ಅಗಾಧವನ್ನು ಆಗುವುದು ಅಸಾಧ್ಯವೆಂಬುದನ್ನು, ಸಾಧಿಸಿರುವ, ಇನ್ನೂ ಎತ್ತರಕ್ಕೆ ಏರುವ ಹುಮ್ಮಸ್ಸಿನಲ್ಲಿರುವ ಸಾತ್ವಿಕ ತಿಪ್ಪೇಸ್ವಾಮಿ ಅವರಿಗೆ ಸದ್ದಿಲ್ಲದೇ ಎಪ್ಪತ್ತು ಅಗುತ್ತಿದೆ ಎಂದರೆ ನನಗಂತೂ ಅಚ್ಚರಿಯಾಗುತ್ತಿದೆ.
ಆರ್ಥಿಕವಾಗಿ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಜಗಳೂರು ತಾಲ್ಲೂಕಿಗೆ ಹರಿಕಾರರಾಗಿ ಬಂದ ವಿದ್ಯಾರತ್ನ ಡಾ. ಟಿ. ತಿಪ್ಪೇಸ್ವಾಮಿಯವರು ಬಹುಮುಖಿ ವ್ಯಕ್ತ್ತಿತ್ವ, ಸುಸಂಸ್ಕೃತ ಕುಟುಂಬವೆಂದೇ ಹೆಸರು ಪಡೆದ ಮನೆತನದ ಗುರುಭಕ್ತಿ, ಜನಪ್ರೀತಿಗೆ ಹೆಸರಾದ ದಿವಂಗತ ಟಿ. ಕಲ್ಲಪ್ಪ ಮತ್ತು ದಿವಂಗತ ಟಿ. ಶಾರದಮ್ಮ ಇವರ ಪುಣ್ಯಗರ್ಭದಲ್ಲಿ ಶ್ರೀ ಟಿ. ತಿಪ್ಪೇಸ್ವಾಮಿಯವರು ದಿನಾಂಕ: 23-09-1938 ರಂದು ಜನಿಸುತ್ತಾರೆ.
ಹಲವು ಸಿನೆಮಾಗಳಲ್ಲಿ ಕಂಡ ದೃಶ್ಯಗಳು.
ಆಕೆಯೊಬ್ಬಳೇ ವ್ಯವಸ್ಥೆ ಸುಧಾರಣೆಗಾಗಿ ಸಿಡಿದೇಳುತ್ತಾಳೆ. ಈ ಸಾಹಸಕ್ಕಾಗಿ ಮಾಫಿಯಾಗಳನ್ನು, ರೌಡಿಗಳನ್ನು, ರಾಜಕಾರಣಿಗಳನ್ನು ಎದುರು ಹಾಕಿಕೊಳ್ಳುತ್ತಾಳೆ. ಹೀಗೆ ಕಾದಾಡುವಾಗ ಕೆಲವೊಮ್ಮೆ ಅಪಮಾನಿತಳಾಗಿ, ಹತಾಶಳಾಗಿ ಒಂದು ಕ್ಷಣ ಮೌನವಾಗಿದ್ದು, ಮತ್ತೆ ರಣಚಂಡಿಯಂತೆ ಆರ್ಭಟಿಸುತ್ತಾಳೆ. ಇವಳನ್ನು ಜರಿಯುತ್ತಿದ್ದ ಜನರೇ ಕಾಲಾಂತರದಲ್ಲಿ ಬೆಂಬಲಕ್ಕೆ ನಿಂತು ಬೇಕೇ ಬೇಕು ನ್ಯಾಯ ಬೇಕು ಎಂದು ಮುಗಿಲು ಮುಟ್ಟುವಂತೆ ಘೋಷಣೆ ಹಾಕುತ್ತಾರೆ. ಅವಳ ನೇತೃತ್ವದಲ್ಲೇ ಬದಲಾವಣೆಗೆ ಮುನ್ನುಡಿ ಬರೆಯುತ್ತಾರೆ. ಆ ಮೇಲೆ ಹೆಣ್ಣಿನ ಯಶೋಗಾಥೆ ಎಂಬ ಪ್ರಶಂಸೆ, ಪುರಸ್ಕಾರ, ಸನ್ಮಾನಗಳೆಲ್ಲ ಆಗಿ ತೆರೆಯಲ್ಲಿ ಶುಭಂ ಎಂದು ಕಾಣುವಾಗ ಪ್ರೇಕ್ಷಕರು ಆ ಹೆಣ್ಣಿನ ಸಾಹಸದ ಪಾತ್ರದಲ್ಲೇ ಮುಳುಗಿರುತ್ತಾರೆ. ಆದರೂ, ಇಂಥ ಚಿತ್ರಗಳನ್ನು ನೋಡಿ ಬಂದ ಮೇಲೆ ಅದೆಲ್ಲ ಸಿನೆಮಾದಲ್ಲಿ ಮಾತ್ರ ಸಾಧ್ಯ ಬಿಡ್ರಿ. ರೀಲಿಗೂ, ರಿಯಲ್ ಲೈಫಿಗೂ ತುಂಬಾ ವ್ಯತ್ಯಾಸವಿದೆ ಎಂದು ಗೊಣಗಿ ದಿನದ ತಾಪತ್ರಯದಲ್ಲಿ ಮುಳುಗುತ್ತಾರೆ. ಮನುಷ್ಯನ ಪುಕ್ಕಲ ಸ್ವಭಾವವೇ ಹಾಗೇ. ಕಣ್ಣಾರೆ ಬದಲಾವಣೆಯ ಮಾದರಿಗಳನ್ನು ಕಂಡರೂ ಅದು ತನಗಲ್ಲ ಎಂದುಕೊಳ್ಳುತ್ತಾನೆ. ಸ್ಥಾಪನೆಯ ಉದ್ದೇಶ- ಡೀಡ್ (Development through Education) ಶಿಕ್ಷಣ ಮುಖೇನ ಪ್ರಗತಿ ಸ್ವಯಂಸೇವಾ ಸಂಸ್ಥೆಯು 1980 ಸೆಪ್ಟಂಬರ್ 1 ರಂದು ಹುಣಸೂರಿನಲ್ಲಿ ಆದಿವಾಸಿ - ಬುಡಕಟ್ಟು ಜನರ ಕ್ಷೇಮಾಭಿವೃದ್ಧಿಗೆ ಜನ್ಮ ತಾಳಿತು. ಡಾ| ಜರ್ರಿಪೈಸ್ ಹಾಗೂ ಎಸ್ ಶ್ರೀಕಾಂತ್ ಇವರ ಮುಂದಾಳತ್ವದಲ್ಲಿ ಸ್ಥಳೀಯ ಆಸಕ್ತರೊಡಗೂಡಿ ಪ್ರಾರಂಭಿಸಲಾದ ಡೀಡ್ ಅತ್ಯಂತ ಕಟ್ಟಕಡೆಯವರಾದ, ಕಡೆಗಣಿಸಲ್ಪಟ್ಟ ಆದಿವಾಸಿ ಬುಡಕಟ್ಟುಗಳಾದ ಜೇನು ಕುರುಬರು, ಸೋಲಿಗರು ಮುಂತಾದ ಅರಣ್ಯವಾಸಿಗಳ ಬಲವರ್ಧನೆಗೆ, ಅಸ್ತಿತ್ವ, ರಕ್ಷಣೆಗೆ ಕ್ಷೇಮಾಭಿವೃದ್ಧಿಗೆ ಕಾರ್ಯ ಮಾಡಲು ಪ್ರಾರಂಭಿಸಿತು. ಶಿಕ್ಷಣದ ಮೂಲಕ ಕಡೆಗಣಿಸಲ್ಪಟ್ಟವರ ಅಭಿವೃದ್ಧಿ ಸಾಧ್ಯ ಎಂಬ ನಂಬಿಕೆ ಈ ಕಾರ್ಯದ ಉಗಮಕ್ಕೆ ಪ್ರೇರಣೆಯಾಯಿತು.
ವಯಸ್ಸಿಗೆ ಬಂದ ಯುವಜನರು ಕುಟುಂಬ ಜೀವನ ಪ್ರಾರಂಭಿಸಲು ವಂಶಾಭಿವೃದ್ದಿ ಮಾಡಿಕೊಳ್ಳಲು ಗಂಡು ಹೆಣ್ಣು ಪ್ರಕೃತಿ ಸಹಜ ಭಾವನೆಗಳಿಗೆ ಆಸೆಆಕಾಂಕ್ಷೆಗಳಿಗೆ ಸ್ಪಂದಿಸಲು ಕುಟುಂಬದ ಹಿರಿಯರ, ಸಮಾಜದ ಒಪ್ಪಿಗೆ ಪಡೆಯುವ ಪ್ರಕ್ರಿಯೆಯೇ ಮದುವೆ ವಿವಾಹ. ಎರಡು ಮಾನವ ಜೀವಿಗಳು ಪ್ರೀತಿ ವಿಶ್ವಾಸದಿಂದ ಪರಸ್ಪರ ಒಪ್ಪಿ ಗೌರವಯುತ ಬಾಳನ್ನು ಹೊಸ ಕನಸುಗಳೊಂದಿಗೆ ಕಟ್ಟಿಕೊಳ್ಳಲು ಮದುವೆ ಸಹಕಾರಿ. ಇದು ವ್ಯಕ್ತಿ ವ್ಯಕ್ತಿ ನಡುವೆ ನಡೆಯುವ ಒಪ್ಪಂದವಷ್ಟೆ. ವ್ಯವಸ್ಥೆ ವ್ಯವಸ್ಥೆಗಳ ನಡುವಿನ ಒಪ್ಪಂದ ಎಂಬುದೂ ಅಷ್ಟೇಸತ್ಯ. ಮದುವೆ ವೈಯಕ್ತಿಕ ಹಾಗೂ ಕೌಟುಂಬಿಕ ವ್ಯವಹಾರ. ಒಂದೊಂದು ಸಮುದಾಯ ಒಂದೊಂದು ರೀತಿ ಆಚರಿಸುತ್ತದೆ. ಆದರೆ ಇತ್ತೀಚೆಗೆ ಮದುವೆಗಳು ದುಬಾರಿಯಾಗುತ್ತಿವೆ. ವ್ಯಾಪಾರಧಂಧೆಗಳಾಗುತ್ತಿವೆ. ನಗರ ಕೇಂದ್ರೀಕೃತವಾಗುತ್ತಿವೆ.
ಎಸ್. ಶ್ರೀಕಾಂತ್ ಆದ ನಾನು ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಗಂಜಲಗೂಡು ಗ್ರಾಮದಲ್ಲಿ ಶಿವನಂಜೇಗೌಡ ಮತ್ತು ತೋಪಮ್ಮ ದಂಪತಿಗೆ 16.09.1951 ರಂದು ಮಗನಾಗಿ ಜನಿಸಿದೆ. ನನ್ನ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಮುಗಿಸಿ, ನಂತರ ಹೊಳೆನರಸಿಪುರದಲ್ಲಿ ಪ್ರೌಢ ಶಿಕ್ಷಣ, ಹಾಸನದಲ್ಲಿ ವಿಜ್ಞಾನ ಪದವಿ ಹಾಗೂ ಮಂಗಳೂರಿನಲ್ಲಿ ಸಮಾಜಕಾರ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದು (1976) ನನ್ನ ವೃತ್ತಿ ಜೀವನವನ್ನು ಬೆಂಗಳೂರಿನ ಕಾರ್ಖಾನೆಯೊಂದರಲ್ಲಿ ಸಿಬ್ಬಂದಿ ಅಧಿಕಾರಿಯಾಗಿ ಮೂರು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದೆ. ಇದರ ಜೊತೆಯಲ್ಲಿಯೇ ಮಹರ್ಷಿ ಮಹೇಶಯೋಗಿಯವರ ಧ್ಯಾನ ತರಬೇತಿ ಪಡೆದು (ಟಿ.ಎಂ) ನೂರಾರು ಜನರಿಗೆ ಧ್ಯಾನ ಬೋಧನೆಯನ್ನು ಮಾಡಿರುವೆನು. ನಾನು ಕೃಷಿಕ ಕುಟುಂಬದಿಂದ ಬಂದವನಾಗಿದ್ದು, ಮಡದಿ ಮತ್ತು ಇಬ್ಬರು ಮಕ್ಕಳೊಡನೆ ಚಿಕ್ಕ ಹುಣಸೂರಿನಲ್ಲಿ ವಾಸವಿದ್ದೇನೆ. ಮಡದಿ ಸಮಾಜ ವಿಜ್ಞಾನದ ಸ್ನಾತಕೋತ್ತರ ಪದವೀಧರೆ. ಮಕ್ಕಳಿಬ್ಬರು ಇಂಜಿನಿಯರ್ ಆಗಿದ್ದಾರೆ.
ಅಂದು ಹೆಣ್ಣು ಶಾಲೆಗೆ ಹೋಗುವುದನ್ನು ಕಂಡರೆ ಮೈಮೇಲೆ ಸೆಗಣಿ ಎಸೆಯುತ್ತಿದ್ದರಂತೆ. ಅಂಥಾ ಹೊತ್ತಲ್ಲಿ, ಅಂದರೆ 200 ವರ್ಷಗಳ ಹಿಂದೆ ಕುದುರೆಮುಖದ ತಪ್ಪಲಿನ ಗಂಗಾಮೂಲದ ಕಾಡ ನಡುವೆ ಅನಂತ ಶಾಸ್ತ್ರಿಗಳು ಆಶ್ರಮ ಕಟ್ಟಿ 50 ವಿದ್ಯಾರ್ಥಿನಿಯರಿಗೆ ವೇದಾಭ್ಯಾಸ ಮಾಡಿಸುತ್ತಿದ್ದರು! ಮುಂದೆ ಆಶ್ರಮ ನಡೆಸಲಾಗದೆ ದೇಶಾಟನೆ ಹೊರಟಾಗ ಶಾಸ್ತ್ರಿಗಳ ಪತ್ನಿ ಲಕ್ಷ್ಮೀಬಾಯಿಯ ಕಂಕುಳಲ್ಲಿ ಜೋತಾಡುತ್ತಿದ್ದದ್ದು ಇದೇ ಪುಟ್ಟ ಹುಡುಗಿ ರಮೆ.
ಹವಾಮಾನದ ಏರುಪೇರಿನಿಂದ ಉಷ್ಣ ಹೆಚ್ಚುತ್ತಿದೆ. ಮಾನವನ ಅದಮ್ಯ ಆಸೆಯಿಂದ ಪ್ರಕೃತಿಯ ಎಲ್ಲ ಪ್ರಕಾರಗಳೂ ವಿನಾಶದ ಕಡೆ ದಾಪುಗಾಲು ಹಾಕುತ್ತಲಿವೆ. ದುರಾಸೆಯು ಘನಿಗೊಂಡಿರುವುದೇ ಭ್ರಷ್ಟಾಚಾರ. ಇದು ಒಂದು ರೀತಿಯ ಮನೋದೌರ್ಬಲ್ಯ, ಮನೋವಿಕಲತೆ. ಇದು ವ್ಯಾಪಕವಾಗುತ್ತಲಿರುವುದರಿಂದ ಜೀವನದ ಎಲ್ಲ ರಂಗಗಳೂ ಸಹಿಸಲಸಾಧ್ಯವಾದ ತಾಪದಿಂದ ಅಗ್ನಿಕುಂಡಗಳಾಗಿವೆ. ಯಾರಾದರೂ ಒಳಿತನ್ನು ಚಿಂತನೆ ಮಾಡುತ್ತಿದ್ದಾರೆ, ನಿರ್ವ್ಯಾಜ ನೆರವು ನೀಡುತ್ತಿದ್ದಾರೆ, ಪ್ರಾಮಾಣಿಕವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಯಾರಾದರೂ ಹೇಳಿದರೆ ನಾವು ನಂಬುವ ಸ್ಥಿತಿಯಲ್ಲಿ ಇಲ್ಲ. ಒಳಿತಿನ ಹಿಂದೆ ಏನೋ ಹುನ್ನಾರವಿದೆ ಎಂದೇ ಭಾವಿಸುತ್ತೇವೆ. ಆದರೂ, ಚಿಕ್ಕ ಪ್ರಮಾಣದಲ್ಲಾದರೂ ಅಲ್ಲಿ ಇಲ್ಲಿ ನೈತಿಕ ನಡವಳಿಕೆಯ, ಪ್ರಾಮಾಣಿಕ ವರ್ತನೆಯ ಉದಾಹರಣೆಗಳು ನಮ್ಮ ಅನುಭವಕ್ಕೆ ಬರುತ್ತವೆ. ಇವು ನಮ್ಮಲ್ಲಿ ಏನೋ ಒಂದು ಭರವಸೆಯನ್ನು ಮೂಡಿಸುತ್ತವೆ. ಆಗೀಗ ಪತ್ರಿಕೆಗಳಲ್ಲಿ ಆಟೋದವರು ಪ್ರಾಮಾಣಿಕವಾಗಿ ನಡೆದುಕೊಂಡಿದ್ದುದನ್ನು ನಾವು ಓದುತ್ತೇವೆ. ಪರೀಕ್ಷೆಯಲ್ಲಿ ನಕಲು ಮಾಡದೆ ಉತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳ ಬಗ್ಗೆ ಸುದ್ದಿ ಕೇಳುತ್ತೇವೆ. ಯಾವ ಆಮಿಷಕ್ಕೂ ಒಳಗಾಗದೆ, ಯಾವ ಬೆದರಿಕೆಗೂ ಹೆದರದೆ, ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಇರುವುದನ್ನು ಕೇಳುತ್ತೇವೆ. ಮನೆಮನೆಗಳಲ್ಲಿ ಕೆಲಸ ಮಾಡುತ್ತಿರುವ ಆಳುಗಳು ನಿಷ್ಠೆಯಿಂದ ಕಾರ್ಯ ಮಾಡುವುದಲ್ಲದೆ. ಪ್ರಾಮಾಣಿಕತೆಯಿಂದಲೂ ವರ್ತಿಸುತ್ತಾರೆ. ಎಂಬುದನ್ನು ನಾವು ಅನುಭವಿಸುತ್ತಲಿದ್ದೇವೆ.
ಭಾಷೆ ಎನ್ನುವುದು ವ್ಯಕ್ತಿಯ ಅಂತರಂಗದ ಅಭಿವ್ಯಕ್ತಿ ಮಾತ್ರ ಆಗಿರದೇ ಆ ನಾಡಿನ ಆತ್ಮವೇ ಆಗಿರುತ್ತದೆ. ನಾಡಿನ ಭಾಷೆ ನಾಡ ಜನರೆಲ್ಲರನ್ನು ಒಂದುಗೂಡಿಸುವ ಅಪಾರ ಶಕ್ತಿಯನ್ನು ಪಡೆದಿರುವಂತೆಯೇ ನಾಡಿನ ಅಂತಃ ಸತ್ವವೂ ಆಗಿರುತ್ತದೆ. ಭಾಷೆಯ ಹಂಗಿಲ್ಲದೇ ಬದುಕುವವರು ನಾಡಿನ ಹಂಗನ್ನೂ ತೊರೆದವರಾಗಿರುತ್ತಾರೆ.
ತಮ್ಮ ಜೀವನವನ್ನು ತಾವೇ ಕೊನೆಗೊಳಿಸುವಂತಹ ಕಾರ್ಯವನ್ನು ಆತ್ಮಹತ್ಯೆ ಎಂದು ಗುರುತಿಸಲಾಗುವುದು. ಆತ್ಮಹತ್ಯೆ ಎಂಬ ಪದವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಈ ಪದದಲ್ಲಿ ಅಡಗಿರುವಂತಹ ಒಂದು ಕೊರತೆ ಗೋಚರವಾಗುವುದು. ಆತ್ಮಹತ್ಯೆ ಎಂದರೆ ಆತ್ಮವನ್ನು ಕೊಲೆ ಮಾಡುವುದು ಎಂದರ್ಥ. ನಮಗೆಲ್ಲರಿಗೂ ಗೊತ್ತಿರುವಂತಹ ವಿಷಯ ಏನೆಂದರೆ, ಆತ್ಮವನ್ನು ಕೊಲೆ ಮಾಡಲು ಸಾಧ್ಯವಿಲ್ಲ. ಆದರೆ ದೇಹವನ್ನು ಕೊಲೆ ಮಾಡಲು ಸಾಧ್ಯ. ಆದುದರಿಂದ ಆತ್ಮಹತ್ಯೆ ಎನ್ನುವ ಬದಲು, ಆತ್ಮದ ಬಿಡುಗಡೆ ಮತ್ತು ದೇಹದ ಅಂತ್ಯ ಇಲ್ಲವೆ ತನ್ನ ಕೊಲೆ ಎಂದು ಕರೆದರೆ ತಪ್ಪಾಗಲಾರದು.
ಭಾರತದ ಗ್ರಾಮೀಣ ಪ್ರದೇಶಗಳು ವೈವಿಧ್ಯಮಯವಾದ ಸವಾಲುಗಳು, ಸಮಸ್ಯೆಗಳನ್ನು ಬಹಳ ಹಿಂದಿನಿಂದಲೂ ಎದುರಿಸುತ್ತಿವೆ. ಗ್ರಾಮೀಣರ ಸಮಸ್ಯೆ ಎಂದ ಕೂಡಲೇ ಬಹುತೇಕರು ಹೇಳುವುದು ಬಡತನ, ಅನಕ್ಷರತೆ, ಹೆಚ್ಚು ಮಕ್ಕಳಿರುವ ದೊಡ್ಡ ಕುಟುಂಬಗಳು ಮತ್ತು ಆವಶ್ಯಕ ಸೌಲಭ್ಯಗಳಿಲ್ಲದಿರುವುದು.
|
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|