Niruta Publications
  • Home
  • About Us
  • Publication With Us
  • Editor's Blog
  • Niruta's Read & Write Initiative
  • Our Services
    • Translation & Typing
    • Publications >
      • Our Books
    • Human Resource
    • PoSH
    • NGO & CSR
    • Certificate Training Courses
  • Leaders Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
  • Home
  • About Us
  • Publication With Us
  • Editor's Blog
  • Niruta's Read & Write Initiative
  • Our Services
    • Translation & Typing
    • Publications >
      • Our Books
    • Human Resource
    • PoSH
    • NGO & CSR
    • Certificate Training Courses
  • Leaders Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
Niruta Publications

ಬುದ್ಧಮಯ

5/6/2018

0 Comments

 
ಹೆಸರಿಗೆ ದ್ವೀಪರಾಷ್ಟ್ರ. ಆದರೆ ಬುದ್ಧನ ಹೆಸರಿನಲ್ಲಿ ನಿಜಕ್ಕೂ ಒಂದು ಬೃಹತ್ ರಾಷ್ಟ್ರ. ಸರಳ ಜೀವನ, ಪ್ರಕೃತಿ ಪ್ರೀತಿ, ಕೃಷಿಯ ಅಕ್ಕರೆ, ಶಿಕ್ಷಣಕ್ಕೆ ಆದ್ಯತೆ, ಎಲ್ಲರಿಗೂ ಒಂದೇ ಹಕ್ಕು. ಇವೆಲ್ಲಾ ಸಂಗಮಕ್ಕೆ ಉತ್ತರ ಶೀಲಂಕಾ. ಶೀಲಂಕಾ ಲಂಕಾಧಿಪತಿ ರಾವಣನ ಲಂಕೆ ಎಂಬ ಕಥೆ ಇದೆ. ಆದರೆ ಅದು ಬುದ್ಧ ಹುಣ್ಣಿಮೆಯ ನಾಡು. ಸೌಹಾರ್ದ, ಸಮಾನತೆ, ಭ್ರಾತೃತ್ವ, ಎಲ್ಲಕ್ಕೂ ಇಲ್ಲಿ ಚಿನ್ನದ ಬೆಲೆ. 
ಬುದ್ಧ ಮೂಲತಃ ಸಮತಾವಾದಕ್ಕೆ ಬೆಲೆ ಕೊಟ್ಟವನು. ಒಳ್ಳೆಯ ಸಮಾಜ ಕಟ್ಟುವುದು ಆತನ ದೊಡ್ಡ ಕನಸು. ಮಹಿಳೆಯರು ಮತ್ತು ಮಕ್ಕಳಿಗೆ ಗೌರವ ಕೊಡುವುದರೊಂದಿಗೆ ಬಾಯಿಂದ ಬಾಯಿಗೆ ಬೆಳೆದ ಧರ್ಮ ಬೌದ್ಧ ಧರ್ಮವಾಗಿದೆ. ಅಶೋಕ ಚಕ್ರವರ್ತಿಯ ಅಪ್ಪುಗೆಯಲ್ಲಿ ಬೌದ್ಧಧರ್ಮ ಬೆಳೆದ ರೀತಿ ಈಗಂತೂ ಬೃಹದಾಕಾರವಾಗಿದೆ. ಇಂತಹ ಬುದ್ಧನ ಪ್ರೀತಿಪಾತ್ರ ನೆಲೆಯಾದ ಶೀಲಂಕಾವನ್ನು ಕಣ್ಣು ತುಂಬಿಕೊಳ್ಳುವುದೂ ಸಹ ಒಂದು ಭಾಗ್ಯವೇ ಸರಿ.

ಭಾರತದ ದಕ್ಷಿಣಕ್ಕಿರುವ ದ್ವೀಪರಾಷ್ಟ್ರ ಶ್ರೀಲಂಕಾ. ಇದು ಭೌಗೋಳಿಕವಾಗಿ 9 ಪ್ರಾಂತ್ಯವುಳ್ಳ ಪುಟ್ಟ ರಾಷ್ಟ್ರ. ಸುಮಾರು 25 ಸಾವಿರ ಚದುರ ಮೈಲಿ ವಿಸ್ತೀರ್ಣ ಹೊಂದಿದೆ. ಇಲ್ಲಿನ ಜನಸಂಖ್ಯೆ ಸುಮಾರು 2 ಕೋಟಿ 9 ಲಕ್ಷವಿದೆ. ಇಲ್ಲಿನ ಶೇ 70 ರಷ್ಟು ಜನರು ಭೌದ್ಧ ಧರ್ಮೀಯರು ಉಳಿದಂತೆ ಶೇ 8 ಮುಸ್ಲಿಮರು, ಶೇ 7 ಹಿಂದೂಗಳು, ಶೇ 6 ಕ್ರಿಶ್ಚಿಯನ್ನರಿದ್ದಾರೆ. ಒಟ್ಟಾರೆ ಶ್ರೀಲಂಕಾ ಬುದ್ಧಮಯ ನಾಡಾಗಿದೆ. ವಾಸ್ತವವಾಗಿ ಶ್ರೀಲಂಕಾ ಪ್ರಕೃತಿ ಪ್ರೀತಿಯ ರಾಷ್ಟ್ರ. ಇಲ್ಲಿ ಎಲ್ಲೆಲ್ಲೂ ಮರಗಳೇ ತುಂಬಿವೇ. ಹಸಿರು ವನದೇವತೆ ಆ ನಾಡನ್ನು ಅಪ್ಪಿ ಮುದ್ದಾಡಿದ್ದಾಳೆ. ಆ ಹಿನ್ನೆಲೆಯಲ್ಲಿ ಈ ದ್ವೀಪರಾಷ್ಟ್ರ ಪ್ರಾಕೃತಿಕ ಶ್ರೀಮಂತ ರಾಷ್ಟ್ರವಾಗಿದೆ. ಮೊದಲೇ ಹೇಳಿದಂತೆ ಜನ ಜೀವನ ಸರಳ, ಸಜ್ಜನಿಕೆ ಹೆಸರಾಗಿದೆ. ಸರಳ ಉಡುಗೆ ತೊಡುಗೆ, ಸಾಧಾರಣ ಬದುಕು, ಕೃಷಿ ಸಂಭ್ರಮ, ಇಲ್ಲಿನ ಒಟ್ಟಾರೆ ಒಕ್ಕಲುತನ. ನಗರದಲ್ಲಿ ಬೃಹದಾಕಾರದ ಕಟ್ಟಡಗಳನ್ನು ಬಿಟ್ಟರೆ ಹಳ್ಳಿಗಳಲ್ಲಿ ಸಾಧಾರಣವಾದ ಹೆಂಚಿನ ಅಥವಾ ಶೀಟಿನ ಮನೆಗಳೇ ಇಲ್ಲಿ ಕಾಣಸಿಗುತ್ತವೆ. ಕಾನೂನು ಎಂಬುದು ಇಲ್ಲಿ ಕಟ್ಟುನಿಟ್ಟು. ಮುಖ್ಯವಾಗಿ ಶ್ರೀಲಂಕಾ ಐದು ಪ್ರಮುಖ ನದಿಗಳ ನೆಲೆಬೀಡು. 'ಗಂಗಾ' ಹೆಸರಿನ ನದಿ ಭಾರತದ ಗಂಗಾನದಿಯಷ್ಟೇ ಇಲ್ಲಿ ಪ್ರಮುಖಳು, ನದಿಗಳ ಒಟ್ಟೊಟ್ಟಿಗೆ ಇಲ್ಲಿ ಆನೆ ಕಾಡುಗಳು ಹೇರಳವಾಗಿವೆ. ಪ್ರಾಣಿ ಪಕ್ಷಿಗಳು ಆಗರ್ಭ ಶ್ರೀಮಂತವಾಗಿವೆ. ತೆಂಗು, ಬಾಳೆ, ಹಲಸು, ಮಾವು, ಕಾಫಿ, ಟೀ, ರಬ್ಬರ್ ಇಲ್ಲಿ ಪ್ರಮುಖ ಬೆಳೆಗಳು. ಹೈನುಗಾರಿಕೆಯೂ ಹಿಂದೆ ಬಿದ್ದಿಲ್ಲ. ಮತ್ಸ್ಯ ಉದ್ಯಮ ಇಲ್ಲಿ ತಾರಾ ಮೌಲ್ಯ ಹೊಂದಿದೆ. ಅಧ್ಯಕ್ಷೀಯ ಮಾದರಿಯ ಇಲ್ಲಿನ ರಾಜಕೀಯ ವ್ಯವಸ್ಥೆ ಎಲ್ಲಾ ಧರ್ಮ ಸಮಾಜಗಳನ್ನು ಗೌರವವಾಗಿ ಕಂಡಿದೆ. ಎಲ್ಟಿಟಿ ಕದನದ ನಂತರ ಬೆರಳೆಣಿಕೆಯ ವರ್ಷಗಳಲ್ಲಿ ಶ್ರೀಲಂಕಾ ಅಚ್ಚರಿಯ ಬೆಳವಣಿಗೆಯನ್ನು ಕಂಡಿದೆ. ಭಾರತ ಶ್ರೀಲಂಕಾ ಬಾಂಧವ್ಯ ಮತ್ತಷ್ಟು ಕುದುರಿಕೊಂಡಿದೆ. ವಿಶೇಷವಾಗಿ ಶ್ರೀಲಂಕಾ ಬುದ್ಧನ ಹಿನ್ನೆಲೆಯಲ್ಲಿ ಪವಿತ್ರ ಸ್ಥಳ. ಜೊತೆಗೆ ದ್ವೀಪರಾಷ್ಟ್ರದ ಕೌತುಕತೆಯಲ್ಲಿ ಪ್ರೇಕ್ಷಣೀಯ ಸ್ಥಳ ಕೂಡ. ಈ ಎರಡೂ ದೃಷ್ಟಿಯಲ್ಲಿಯೂ ಶ್ರೀಲಂಕಾ ಪ್ರವಾಸಿಗರ ಗಮನ ಸೆಳೆಯತ್ತಿದೆ. ಭಾರತದಿಂದ ಬುದ್ಧ ಚಿಂತನೆಯಲ್ಲಿ ತೆರಳಿದ್ದ ನಮ್ಮ ಇಪ್ಪತ್ತು ಜನರ ತಂಡಕ್ಕೆ 'ಬುದ್ಧಮಯ' ಹೃದಯ ತುಂಬಿಕೊಂಡಿದ್ದಂತೂ ಸತ್ಯ. ಶ್ರೀಲಂಕಾ ಪ್ರಕೃತಿ ಸಂತೋಷ ಹಾಗೂ ಸಮೃದ್ಧಿಯುತ ರಾಷ್ಟ್ರವಾಗಿದೆ. ಇದರ ಹಿಂದೆ ಅನೇಕ ಕಥೆಗಳಿವೆ. ಧರ್ಮದೃಷ್ಟಿಯಿಂದ ಬೌದ್ಧಧರ್ಮ ಇಲ್ಲಿ ದೊಡ್ಡದು. ಸಮೃದ್ಧಿ ದೃಷ್ಟಿಯಿಂದ ರಾಜ ಪರಾಕ್ರಮ ಬಾಬು ಹೆಸರೂ ಚಿರಸ್ಥಾಯಿಯಾಗಿದೆ. ಬೌದ್ಧಧರ್ಮ ಇಷ್ಟೊಂದು ಬಗೆಯಲ್ಲಿ ಬೆಳೆಯಲು ಅಶೋಕ ಸಾಮ್ರಾಟ ಕಾರಣವಾಗಿರುವ ಕಥೆಯೂ ಇಲ್ಲಿ ಧಾರಾಳವಾಗಿಯೇ ಕಾಣಬರುತ್ತದೆ. ಅಷ್ಟರ ಮಟ್ಟಿಗೆ ಇಲ್ಲಿ ಬುದ್ಧ ಚರಿತ್ರೆ ತೆರೆದುಕೊಂಡಿದೆ. ಮುಖ್ಯವಾಗಿ ಶ್ರೀಲಂಕಾದಲ್ಲಿ ಪೋಲನೋರ್ವ ಪ್ರಾಂತ್ಯ ಹಾಗೂ ಅನುರಾಧಪುರ ಪ್ರಾಂತ್ಯಗಳು ವಿಶೇಷ ಗಮನ ಸೆಳೆಯುತ್ತಿವೆ. ಇವೆರಡರ ಜಾಡು ಹಿಡಿದು ನಡೆದರೆ ಗತ ಇತಿಹಾಸಗಳು ನಮಗೆ ದಕ್ಕುತ್ತವೆ. ಪೋಲನೋರ್ವ ಪ್ರಾಂತ್ಯದಲ್ಲಿ ರಾಜ ಮೊದಲನೆಯ ಪರಾಕ್ರಮ ಬಾಬುಗೆ ವಿಶೇಷ ಹೆಸರಿದೆ. ಇಲ್ಲಿ ಅನೇಕ ರಾಜರು ರಾಜ್ಯಭಾರ ಮಾಡಿದ್ದಾರೆ. ಅಶೋಕನ ಸಾಮ್ರಾಜ್ಯದ ಒಂದು ಭಾಗವಾಗಿ ಶ್ರೀಲಂಕಾ ಇದ್ದದ್ದು ಸುಳ್ಳಲ್ಲ. ಆದರೂ ಪರಾಕ್ರಮ ಬಾಬು ಚರಿತ್ರೆ ಪುಟಗಳಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಇದಕ್ಕೆ ಕಾರಣ ಆತನು ಕೈಗೊಂಡ ಕೆಲಸ ಕಾರ್ಯಗಳೇ ಸಾಕ್ಷಿಯಾಗಿವೆ. ಅದು 11 ಹಾಗೂ 12ನೆಯ ಶತಮಾನದ ಕಾಲ. ಶ್ರೀಲಂಕಾದ ಸಿರಿತನದ ವೈಭವದ ಕಾಲವೆಂದೇ ಹೇಳಬಹುದು. ಕೃಷ್ಣದೇವರಾಯನ ಕಾಲದಲ್ಲಿ ವಿಜಯನಗರ ಸಾಮ್ರಾಜ್ಯ ಹೇಗೆ ಚಿನ್ನದ ಕಾಲವೆಂದು ಹೇಳಲಾಗಿತ್ತೋ ಹಾಗೆಯೇ ಪರಾಕ್ರಮ ಬಾಬು ರಾಜ್ಯವಾಳಿದ್ದ. 10 ಅಂತಸ್ತಿನ ಅರಮನೆ, ಚಿನ್ನ, ಬಣ್ಣ, ವಜ್ರ ವೈಢೂರ್ಯ ಸಿರಿಸಂಪತ್ತೆಲ್ಲವನ್ನೂ ಹೊಂದಿದ್ದ ರಾಜ ಅವನು. ಆದರೆ ಅವು ಯಾವು ಈಗ ಉಳಿದಿಲ್ಲ. ಆದರೆ ಆತ ಮಾಡಿದ ಶತಶತಮಾನಗಳ ಕೆಲಸವೆಂದರೆ ಸಾಲು ಬೆಟ್ಟದ ನೀರು ಸಂಗ್ರಹಿಸಲು ಅಣೆಕಟ್ಟೆ ಕಟ್ಟಿದ್ದು. ಈಗ 14 ಕಿ.ಮೀ. ಉದ್ದದ ಆ ಅಣೆಕಟ್ಟೆಗೆ ಸುಮಾರು 800 ವರ್ಷಗಳಾಗಿರಬಹುದು. ಈಗಲೂ ಅದು ವ್ಯವಸಾಯಕ್ಕೆ ನೀರು ಒದಗಿಸುವ ತಾಯಿ ಮನೆಯಾಗಿದೆ. ಪೋಲನೋರ್ವ ಪ್ರಾಂತ್ಯ ಇಂಥದೊಂದ್ದು ಕಥೆಗೆ ಭಾಜನವಾಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಇನ್ನು ಅನುರಾಧ ಪುರವೂ ಸಹ ದೊಡ್ಡ ಸಂಗತಿ ಹೊತ್ತಿರುವ ಅಕ್ಕರೆಯ ಪ್ರಾಂತ್ಯವಾಗಿದೆ. ಇದು ಬುದ್ಧನ ಜಾತಕ ಕಥೆಗಳ ತೊಟ್ಟಿಲು. ಇಲ್ಲಿ ಬುದ್ಧನ ಚಿನ್ನದ ವಿಗ್ರಹವಿದೆ. ಅರಳೀ ಎಲೆ ಆಕಾರದ ಸ್ತೂಪಗಳು ಇಲ್ಲಿ ವಿಶೇಷ . ಅಶೋಕ ಚಕ್ರವರ್ತಿಯ ಮಗ ಮಹೀಂದ್ರ ಬುದ್ಧನ 300 ವರ್ಷಗಳ  ನಂತರ ಇಲ್ಲಿ ಬೌದ್ಧ ಧರ್ಮ ಪ್ರಚಾರಕ್ಕೆ ನಿಂತಿದ್ದು ದೊಡ್ಡ ಸಂಗತಿ. ಈ ಅನುರಾಧಪುರದ ಕಥೆ ಹೇಳುವಾಗ 'ಮಹಿಂತಲೆ' ಪ್ರಾಂತ್ಯದ ಸಂಗೀತಗಳು ಸಾಕಷ್ಟು ಬಿಚ್ಚಿಕೊಳ್ಳುತ್ತವೆ. ಈ ಸ್ಥಳಕ್ಕೆ ಸ್ವತಃ ಬುದ್ಧ 3 ಬಾರಿ ಭೇಟಿ ಕೊಟ್ಟು ಧರ್ಮ ಪ್ರಚಾರ ಮಾಡಿದ್ದರೆಂಬ ಇತಿಹಾಸ ಸಿಕ್ಕುತ್ತದೆ. ಇಲ್ಲಿ ಬುದ್ಧನ ಹಲ್ಲಿನ ಸ್ತೂಪ ಗಮನ ಸೆಳೆಯುತ್ತದೆ. ಪ್ರಾಚೀನ ಬುದ್ಧನ ಶೇಷಗಳ ಕೇಂದ್ರ ಇಲ್ಲಿ ಆದ್ಯತೆ ಪಡೆದುಕೊಂಡಿದೆ. ಅಶೋಕ ಚಕ್ರವರ್ತಿ ಕಾಲಕ್ಕೆ ಬುದ್ಧ ಧರ್ಮವು ಚೈನಾ, ಇಂಡೋನೇಷಿಯಾ, ಶ್ರೀಲಂಕಾ, ಕಾಂಬೋಡಿಯಾ, ಫಿಲಿಫೈನ್ ಸೇರಿದಂತೆ ದಕ್ಷಿಣಪೂರ್ವ ಏಷ್ಯಾರಾಷ್ಟ್ರಗಳಲ್ಲಿ ದಿವ್ಯವಾಗಿ ಹರಡಿಕೊಂಡಿದ್ದು ಕೂಡ ಹೆಚ್ಚುಗಾರಿಕೆಯಾಗಿದೆ. ಆ ಎಲ್ಲಾ ಕಥೆಗಳ ತೊಟ್ಟಿಲು ಮಹಿಂತಲೆಯಾಗಿದೆ. ಬುದ್ಧರು ಪರಿನಿರ್ವಾಣ ಹೊಂದಿದ 100 ದಿನದಲ್ಲಿ, ಆನಂತರ 100 ವರ್ಷ, 300 ವರ್ಷ ಹೀಗೆ ನಿರಂತರವಾಗಿ ಸಭೆಗಳು ನಡೆದು ಬುದ್ಧ ಸಂಗತಿ ಹೆಚ್ಚು ಬೆಳಕು ಕಂಡಿದೆ. ಅಶೋಕನ ಕಾಲ ಹಾಗೂ ಆನಂತರ ಸಾಹಿತ್ಯ ಬರವಣಿಗೆಯ ಮೂಲಕ ಬೌದ್ಧಧರ್ಮ ಉಚ್ಛ್ರಾಯ ಸ್ಥಿತಿ ತಲುಪಿದ್ದು ಸುಳ್ಳಲ್ಲ. ವಿಶೇಷ ಎಂದರೆ ಎಲ್ಲೆಡೆಯೂ ಬುದ್ಧನ ವಿಗ್ರಹಗಳಿಗೆ ಇಲ್ಲಿ ಚಿನ್ನದ ಲೇಪನವಿದೆ. ಅಶೋಕ ಸಾಲುಮರಗಳನ್ನು ನೆಡಿಸುವ ಮೂಲಕ ಬುದ್ಧ ಧರ್ಮಕ್ಕೆ ಹೆಚ್ಚು ಕ್ರಿಯಾಶೀಲತೆ ತಂದ ಸಂಗತಿಯೂ ಇದೆ. ಹೀಗೆ ಬುದ್ಧನ ಕಥೆಗಳಿಗೆ ಅನೇಕ ಸಾಕ್ಷ್ಯಗಳು ಶೀಲಂಕಾದಲ್ಲಿ ಹಾಸು ಹೊಕ್ಕಾಗಿದೆ. ಊಟೋಪಚಾರ, ಉಡುಗೆ ತೊಡುಗೆಯಿಂದ ಹಿಡಿದು ಇಲ್ಲಿ ಎಲ್ಲವೂ ಬುದ್ಧಮಯ. ಶಾಲಾ ಮಕ್ಕಳಿಗೆ ಒಂದೇ ಸಮವಸ್ತ್ರವಾಗಿದೆ. ದೊಡ್ಡವರು ಶರ್ಟ್, ಲಂಗ ಮಾದರಿ ಉಡುಪು ತೊಡುತ್ತಾರೆ. 809 ಜನ ಒಂದು ಚದುರ ವ್ಯಾಪ್ತಿ ಮೈಲಿಯಲ್ಲಿ ವಾಸಿಸುತ್ತಿದ್ದ ಶ್ರೀಲಂಕಾ ಧಾರ್ಮಿಕವಾಗಿಯೂ ಪ್ರವರ್ಧಮಾನಗೊಂಡಿದೆ. ಬೌದ್ಧ ಬಿಕ್ಕು ಪ್ರಕಾಶ್ ಭಂತೇಜಿ ನೇತೃತ್ವದಲ್ಲಿ ಶ್ರೀಲಂಕಾ ಬುದ್ಧ ಪ್ರವಾಸಕ್ಕೆ ತೆರಳಿದ್ದ ತಂಡದಲ್ಲಿದ್ದ ಹರಿಹರ ಆನಂದಸ್ವಾಮಿ,  ಡಾ.ಶೇಷಣ್ಣ, ವೆಂಕಟಾಚಲಯ್ಯ, ಆರ್. ಮಹಾದೇವಪ್ಪ, ಪುರುಷೋತ್ತಮ್, ಸೋಮಯ್ಯ ಮಲೆನೂರು, ಮಲ್ಲೇಶ್ ಚುಂಚನಹಳ್ಳಿ, ಡಾ.ಕೆ.ಪಿ.ಮಹಲಿಂಗು ಕಲ್ಕುಂದ, ನಾಗರಾಜು, ಮಹಾತ್ಮಸ್ವಾಮಿ, ಈಶ್ವರಿ ಚಕ್ಕಡಿ, ರಾಜೇಂದ್ರ, ಶ್ರೀನಿವಾಸ, ರವಿಚಂದ್ರ, ಎಸ್.ಶೀಕಾಂತ್ ಎಲ್ಲರಿಗೂ ವಿಶೇಷ ಅನುಭವ ನೀಡಿತು. ಒಟ್ಟಾರೆ ಭಾರತ ಹಾಗೂ ಶ್ರೀಲಂಕಾದ ನಡುವಣ ಸ್ನೇಹ ಸಂಕೇತವಾಗಿ 'ಕ್ಯಾಂಡಿ' ಪ್ರದೇಶದಲ್ಲಿ ಬುದ್ಧ ಪ್ರತಿಮೆ ಸ್ಥಾಪಿಸಲಾಗಿದೆ. 24 ಚಿನ್ನದ ನಕ್ಷತ್ರ ಹೊಂದಿರುವ ಇಲ್ಲಿನ ಚಿನ್ನದ ಮೂರ್ತಿ ಹೊಳೆಯುತ್ತಿದ್ದು ಭಾರತದ ಶಕ್ತಿ ಬುದ್ಧನ ಪ್ರತೀಕವೂ ಆಗಿ ಉಳಿದಿದೆ.
 
ಎಸ್.ಶ್ರೀಕಾಂತ್
ನಿರ್ದೇಶಕರು, ಡೀಡ್ ಸಂಸ್ಥೆ ಹುಣಸೂರು, ಮೈಸೂರು ಜಿಲ್ಲೆ-571105

0 Comments



Leave a Reply.


    20,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups

    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9

    Social Work Foot Prints


    RSS Feed


SITE MAP


Site

  • HOME
  • ABOUT US
  • EDITOR'S BLOG
  • BLOG
  • ONLINE STORE
  • VIDEOS
  • TRANSLATION & TYPING

TRAINING

  • TRAINING PROGRAMMES
  • CERTIFICATE TRAINING COURSES

NGO & CSR

  • POSH
  • CSR

Human Resource

  • MHR LEARNING ACADEMY
  • RECRUITMENT SERVICES
  • DOMESTIC ENQUIRY
  • TRADEMARK
  • CONSULTING

JOB

  • FIND FREELANCE JOBS
  • CURRENT JOB OPENINGS

OUR OTHER WEBSITES

  • WWW.MHRSPL.COM
  • WWW.NIRATANKA.ORG
  • WWW.HRKANCON.COM

Subscribe


Subscribe to Newsletter


JOIN OUR ONLINE GROUPS


JOIN WHATSAPP BROADCAST


ONLINE STORE


Copyright Niruta Publications 2021,    Website Designing & Developed by: www.mhrspl.com