After going through your reply, I would like to bring the following for your notice with recent developments of KAPSW association. You have been President of the organization from last 5 years. Just in few months back only you took the action w.r.t. re-register the Association. With this it is very clear that the association was defunct all these years in your leadership and none of the members were appraised about this. Only, when the questions were asked you become active in this regard. How do you substantiate this delay? Who is responsible for this delay? Is it wrong from members side to raise a voice in this regard? Good and we appreciate you have took the initiate to prepare new bylaws for the association. But, majority of the members of the association were not aware about the same. Also, the new bylaws were not circulated to members before the GBM. Hence, it can’t be considered as APPROVED and registration of that kind of documents will not hold GOOD and VALID. To redraft/amend/prepare the bylaws of the association, it is necessary to bring to the notice of the members as democratic approach and form a team of “Bylaws Committee” with experts. Later, the draft should be circulated to the members and present in the GBM and get approved. Then only it can be registered. Such bylaws shall be considered as VALID. You have represented KAPSW in INPSWA during recent past. But you have agreed that KAPSW is defunct itself. If so… a) How can you represent a defunct Association in a National Body? b) How can you function as a member of an executive committee? It is really surprising and raising a lot of confusions among the members! I also, would like to state the following: 1. When you took the President role of the association, we were in the positive spirit that the remarkable changes would happen in KAPSW! 2. We were expecting that the association will function, “transparently and in a democratic” manner! 3. We were in the belief that the membership of the association shall go high! 4. We were in the hope that the association will emerge as a great body to support professional social workers in Karnataka! 5. We were in the understanding that the association will be conducting many sessions for the young professional social work students to equip them to get better jobs! 6. We were in the assumption that the association will be bringing all social workers into a single network to strengthen social work education in the state! 7. We were in the anticipation that the association will be working closely with Professional Social Work colleges to strengthen the education system of social work! 8. We were in the eagerness that the association will be highlighting the problems of Professional Social Work with the government and finding long-term solutions! But, today, I am/We are really don’t know realistic answers for the above. All these things seem to be daydreams. Instead of working none of the above, today, we are fighting for the issues connected with the administration of the association. As a president of the association, you are responsible and accountable to answer all the questions of the members and clarify the points transparently. You have mentioned that the issues that “we as EC identified and tabled before the members are discussed at length and are explained with historical references to the questions and situations.” If so, why can’t you prepare the minutes of the meeting with respect to the same and circulate them to all the members of the association? That may provide answers for many members. Instead of that, stating that “we discussed, we clarified, we resolved, we are working, etc.” statements will not help any members and further create doubts about the functioning of the association. For your kind information, the GBM has not approved anything as we understood. If it is approved, why members are raising the questions again and again? Please note, people will go back to the issues, when they are unable to get realistic and objective answers. Your vogue and closed circle communications or answers shall not help anyone. Today, it is the time for the OBs of the association to realize that things went wrong, things going wrong before the situation becomes worst. This is the responsibility of the association body to respect and answer all questions with the right spirit. Until the OBs are not coming forward with transparent inputs, these questions shall continue and you will be accountable to answer. Association must send AGM notice to all its members without fail. In the last AGM many members complained that they did not get any AGM notice. Why this, when the meeting was so important and critical? I glanced at the association members updated list recently circulated by the association, many members email id and phone numbers are missing, many members address are wrong, which itself a valid proof that you have not communicated to all members. When the AGM meeting notice not reached to all members of the association the AGM conducted by the association is not valid. From past three years, many senior members and myself are raising our voices but the association is ignoring us and continuing as an undemocratic body. On behalf of the members, as professional social worker, I humbly request you to organize a Special AGM at the earliest. Let us have detailed deliberation on all the points and decide and go forward, Your's sincerely MH. Ramesha, MSW, PGDELT Managing Director :M&HR Solutions Pvt. Ltd Founder Secretary: Nirathanka Trust (NGO) Publisher: Niruta Publications Editor : Social Work Foot Prints No. 326, 2nd Floor, Opp. Syndicate Bank, Near Dr. AIT College, Kengunte, Mallathahalli, Bangalore -560 056 www.mhrspl.com /www.niratanka.org/ www.hrkancon.com/ www.nirutapublications.org PH: +91-9980066890/+91-8310241136/080-23213710 ![]()
![]()
![]()
![]()
![]()
RECENT DEVELOPMENTS IN KAPSWBrief history: KAPSW was registered as a charitable society in the 1990s. Since then most eminent people from social work background were handpicked as it's Chairman and Secretary. Most of these eminent people did not get audit of annual accounts, approval of accounts in AGM and annual submission of returns to the Registrar. As a result the statutory irregularities occured in the running of this Association. Recent developments: The present set of office bearers are in the helm of affairs for more than five years without holding elections at two years interval. Instead of setting right the irregularities in KAPSW, they have closed it down illegally, and registered a new Association. In the recent SGM they have resolved to transfer the members and assets of old association to new association in gross violation of norms. Just look at the flaws. 1) How can they transfer the members from old association to new association, without the individual consent of old members. 2) Old association as of today has legal infirmities due to serius statutory irregularities. Without setting them right, how can it transfer the assets to new association, without the consent of registrar of societies. 3) Even with eminent people at its helm of affairs, the membership has not crossed 300 with just Rs. 1000 life membership fees during the past 25 years. With the five fold increase in membership fees how will they increase membership. 4) Whether it is Rs.1000 or 5000, the members have not got any value add by becoming members. The association is not taking up the problems of social work profession or its members. It is only helping the handful of elite members to get international affiliations and recognition on the false claims of KAPSW. 5) As a life member of KAPSW, I don't want to join the new Association. Hence I hereby request the refund of my membership fees. With warm regards Dr. G P Naik Life member, KAPSW. ಸಂಘಟನೆಯ ಎಲ್ಲಾ ಸಹೋದ್ಯೋಗಿ ಮಿತ್ರರಿಗೆ ನಮಸ್ಕಾರ.. ಪ್ರಸ್ತುತ ಕೋವಿದ್ ೧೯ ಸಂಕಷ್ಟದ ಪರಿಸ್ಥಿತಿಯಲ್ಲೂ ಹಲವಾರು ಸಮಾಜಕಾರ್ಯಕರ್ತರು ತಮ್ಮದೇ ಆದ ರೀತಿಯಲ್ಲಿ ಅಂದರೆ ವಯಕ್ತಿಕವಾಗಿ ಹಾಗೂ ಸಂಘಟನೆಯ ಮೂಲಕ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವುದು ಸಂತೋಷಕರ. ನಾವು ಸಂಘಟನಾತ್ಮಕವಾಗಿ ಮತ್ತಷ್ಟು ಬಲಯುತವಾಗಿದ್ದಿದ್ದರೆ ಬಹುಶಃ ಈ ಕೋವಿದ್ ೧೯ ಪರಿಸ್ಥಿತಿಯಲ್ಲಿ ಸಮಾಜಕಾರ್ಯದ ವಾಸ್ತವತೆಯನ್ನು ಸಮಾಜಕ್ಕೆ ಅನಾವರಣ ಮಾಡಬಹುದಿತ್ತು. ಈಗಲೂ ಸಹ ಈ ನಿಟ್ಟಿನಲ್ಲಿ ಹಲವರು ವ್ಯಕ್ತಿಗತವಾಗಿ ಇಲ್ಲವೇ ಸಂಘ-ಸಂಸ್ಥೆಗಳ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಆದರೆ ಅಂತಹವರನ್ನು ಗುರುತಿಸುವಲ್ಲಿ ಸಮಾಜಕಾರ್ಯಕರ್ತರು ವಿಫಲರಾಗಿರುವುದು ದುರದೃಷ್ಟ. ಹೀಗೆ ಹತ್ತು ಹಲವು ಸಮಸ್ಯೆಗಳು ನಮ್ಮಲ್ಲಿಯೇ ಇವೆ ಮತ್ತು ಇದಕ್ಕೆ ನಮ್ಮಲ್ಲಿರುವ ಬಹುಪಾಲು ವೃತ್ತಿಪರ ಸಮಾಜಕಾರ್ಯ ಸಂಘಟನೆಗಳು ಸೀಮಿತವಾಗಿರುವುದು ಒಂದು ಬಲಿಷ್ಠ ಕಾರಣ. ಇತ್ತೀಚೆಗೆ ವಾಲ್ಮೀಕಿ ನಿಗಮ ಮಂಡಳಿಯಲ್ಲಿ ಕೆ.ಪಿ.ಎಸ್ಸಿ ಮೂಲಕ ನಡೆಸಲಿರುವ ನೇರ ನೇಮಕಾತಿಯ ಹುದ್ದೆಗಳಿಗೆ ಸಮಾಜಕಾರ್ಯಕರ್ತರನ್ನು ನಿರ್ಲಿಕ್ಷಿಸಿರುವುದರ ಬಗ್ಗೆ ಚರ್ಚೆಗಳು ಜರುಗುತ್ತಿವೆ. ಆದರೆ ಯಾರೊಬ್ಬರೂ ನೇರವಾಗಿ ಅದನ್ನು ಮುಕ್ತವಾಗಿ ಚರ್ಚಿಸುತ್ತಿಲ್ಲ ಇದಕ್ಕೆ ಅವರು ವೃತ್ತಿಪರ ಸಂಘಟನೆಗಳನ್ನು ದೂಷಿಸಬಹುದು. ಹಾಗಿದ್ದರೂ ಹೀಗೆ ದೂಷಿಸುವವರಲ್ಲಿ ಎಷ್ಟು ಜನ ಇಂತಹ ಸಂಘಟನೆಗಳ ಸದಸ್ಯತ್ವವನ್ನು ಪಡೆದಿದ್ದಾರೆ. ಬರೀ ಸಂಘಟನೆಗಳನ್ನು ದೂಷಿಸುವ ಬದಲಿಗೆ ಅವರೂ ಸಹ ಸಂಘಟನೆಗಳ ಸದಸ್ಯತ್ವ ಪಡೆದ ಅವುಗಳನ್ನು ಬಲಗೊಳಿಸಲು ಶ್ರಮವಹಿಸಬಹುದಲ್ಲವೇ..? ಸಮಾಜಕಾರ್ಯದ ಹಿನ್ನೆಲೆಯನ್ನು ಹೊಂದಿರುವ ಎಷ್ಟು ಮಂದಿ ವೃತ್ತಿಪರ ಸಂಘಟನೆಗಳ ಸದಸ್ಯತ್ವ ಪಡೆದಿದ್ದಾರೆ..? ಇದಕ್ಕೆ ಪೂರಕವಾಗಿ ವೃತ್ತಿಪರ ಸಂಘಟನೆಗಳು ಕಾರ್ಯಪ್ರವೃತ್ತರಾಗಲೇಬೇಕಿದೆ. ಸಮಾಜಕಾರ್ಯ ವೃತ್ತಿ ಬೆಳೆಯಲು ಸಂಘಟನೆಗಳು ಅನಿವಾರ್ಯ ಮತ್ತು ಅವುಗಳನ್ನು ಬಲಗೊಳಿಸಬೇಕಾದ ಅವಶ್ಯಕತೆ ನಮ್ಮೆಲ್ಲರದ್ದೂ ಇದೆ. ಸಮಾಜಕಾರ್ಯ ಶಿಕ್ಷಣದಲ್ಲಿ ರಚನಾತ್ಮಕ ಬದಲಾವಣೆಗಳಾಗಲೇಬೇಕಿದೆ ಎಂಬ ಕೂಗು ಕೇಳಿಬರುತ್ತಿದೆ ಆದರೆ ಅದನ್ನು ಗಟ್ಟಿಯಾಗಿ ಕೇಳಲು ಯಾರೂ ಧೈರ್ಯ ಮಾಡುತ್ತಿಲ್ಲ. ಕಾರಣ ಇಲ್ಲಿಯೂ ಸಹ ಬಲಯುತ ಸಂಘಟನೆಗಳು ಪ್ರಶ್ನಿಸುತ್ತಿಲ್ಲ ಎಂದು ಸಿದ್ಧ ಉತ್ತರ ನೀಡುವವರ ಸಂಖ್ಯೆ ಅಧಿಕವೇ.. ಅಂತಿಮವಾಗಿ ನಾನು ಗಮನಿಸಿದಂತೆ ಕಳೆದ ಒಂದು ವರ್ಷಕ್ಕೂ ಅಧಿಕ ಸಮಯದಿಂದ ಸಂಘಟನೆಯ ಚುನಾವಣೆಯ ಬಗ್ಗೆ ಇದೇ ಗುಂಪಿನಲ್ಲಿ ಚರ್ಚೆಗಳಾಗುತ್ತಲೇ ಇವೆ. ಆದರೆ ಸಂಬಂಧಪಟ್ಟವರು ಏಕೆ ಅದರ ಬಗ್ಗೆ ಪ್ರತಿಕ್ರಿಯಿಸುತ್ತಿಲ್ಲ. ಹಲವು ವರ್ಷಗಳಿಂದ ಸಂಘಟನೆ ಅಸ್ತಿತ್ವದಲ್ಲಿದ್ದರೂ ಏಕೆ ಸಂಘಟನೆಯ ಸದಸ್ಯರ ಸಂಖ್ಯೆ ನೂರರ ಗಡಿ ದಾಟಿಲ್ಲ. ಚುನಾವಣೆ ನಡೆಸಲು ಏನಾದರೂ ಪೂರ್ವಸಿದ್ಧತೆಗಳಾಗಿವೆಯೇ..? ಸಂಬಂಧಿಸಿದವರು ದಯಮಾಡಿ ಪ್ರತಿಕ್ರಿಯಿಸಿರಿ. ಕನಿಷ್ಟಪಕ್ಷ ಸಮಾಜಕಾರ್ಯಕರ್ತರಿಗೆ ಸಿಗಬೇಕಿರುವ ಅವಕಾಶಗಳನ್ನು ಅವರಿಗೆ ಮಾತ್ರ ಮುಡುಪಾಗಿಡಲು ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನಗಳಾದರೂ ಸಂಘಟನೆಯ ಮೂಲಕ ನಡೆಯಲಿ ಎಂಬುದು ನನ್ನ ಆಶಯ. ಒಗ್ಗಟ್ಟಲ್ಲಿ ಫಲವಿದೆ, ದಯಮಾಡಿ ಹಾದಿ ತೋರಿಸಿ.. ಗಂಗಾಧರ ರೆಡ್ಡಿ ಎನ್. ಉಸಿರಿಗಾಗಿ ಹಸಿರು 20-2-2020 ವೃತ್ಯಾತ್ಮಕ ಸಂಘಟನೆಯ ಆತ್ಮೀಯ ಸಹೋದ್ಯೋಗಿ ಮಿತ್ರರೇ, ಎಲ್ಲರಿಗೂ ನಮಸ್ಕಾರ. ಸಮಾಜಕಾರ್ಯ ಉಳಿವಿಗೆ ಒಂದು ವೃತ್ಯಾತ್ಮಕ ಸಂಘಟನೆ ಅನಿವಾರ್ಯ ಎಂಬುದನ್ನು ನನ್ನ ಆತ್ಮೀಯ ಗುರುಗಳಾದ ದಿ. ಪ್ರೊ.ಎಚ್.ಎಂ.ಎಂ. ರವರು ಅಂದಿನ ದಿನಗಳಲ್ಲೇ ಮನವರಿಕೆ ಮಾಡಿಕೊಟ್ಟಿದ್ದರು. ಜೊತೆಗೆ ಸಮಾಜಕಾರ್ಯದ ಆಶಯಗಳಿಗೆ ತಕ್ಕಂತೆ ವೃತ್ತಿಪರ ಸಂಘಟನೆಗಳು ಕೆಲಸ ಮಾಡುವುದರ ಮೂಲಕ ಸಮಾಜಕಾರ್ಯ ವೃತ್ತಿಯ ಕ್ಷೇತ್ರಗಳನ್ನು ಮತ್ತಷ್ಟು ವಿಸ್ತರಿಸಬೇಕೆಂಬುದು ಅವರ ಸಲಹೆಯಾಗಿತ್ತು. ಸಾಮಾಜಿಕ ನ್ಯಾಯ, ಮಾನವ ಹಕ್ಕುಗಳು ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ತಳಹದಿಯ ಮೇಲೆ ಎಲ್ಲಾ ಸಂಘಟನೆಗಳು ಕಾರ್ಯನಿರ್ವಹಿಸಬೇಕು ಎಂಬುದನ್ನು ಅವರು ಪದೇ ಪದೇ ಹೇಳಿದ ನೆನಪು.
ಆದರೆ ಇತ್ತೀಚಿನ ದಿನಗಳಲ್ಲಿ ಕರ್ನಾಟಕ ವೃತ್ತಪರ ಸಮಾಜಕಾರ್ಯಕರ್ತರ ಸಂಘಟನೆಯ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಜರುಗುತ್ತಿರುವ ಚರ್ಚೆಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿರುವೆ. ವೈಯಕ್ತಿಕ ಕಾರಣಗಳಿಂದ ನಾನು ಪ್ರತಿಕ್ರಿಯಿಸಲಾಗಲಿಲ್ಲ. ಇಲ್ಲಿ ಚರ್ಚೆಯಾಗುತ್ತಿರುವ ವಿಷಯಗಳಿಗೆ ಸಂಬಂಧಿಸಿದಂತೆ ಈಗಲೂ ಪ್ರತಿಕ್ರಿಸಲಿಲ್ಲವಾದರೆ ಬಹುಶಃ ನಾನು ಸಮಾಜಕಾರ್ಯಕರ್ತ ಎಂದು ಸಂಬೋಧಿಸಿಕೊಳ್ಳಲು ನನ್ನ ಆತ್ಮಸಾಕ್ಷಿ ಒಪ್ಪುವುದಿಲ್ಲ. ಈ ಸಂದೇಶದಲ್ಲಿ ನನಗೆ ಅರ್ಥವಾದ ಹಾಗೂ ಪ್ರತಿಕ್ರಿಸಲೇಬೇಕಾದ ಕೆಲವೇ ವಿಚಾರಗಳ ಬಗ್ಗೆ ಪ್ರತಿಕ್ರಿಯಿಸಲು ಇಷ್ಟಪಡುತ್ತೇನೆ. 1. ಇದಾಗಲೇ ಈ ಹಿಂದೆ ನೋಂದಣಿಯಾಗಿದ್ದಂತಹ ಸಂಸ್ಥೆಯ ನೋಂದಣಿಗೆ ಸಂಬಂಧಿಸಿದ ಸೂಕ್ತ ಹಾಗೂ ಮೂಲ ದಾಖಲೆಗಳಿಲ್ಲದ ಕಾರಣ ಅದಕ್ಕೆ ಪೂರಕವಾಗಿ ಹೊಸ ಸಂಸ್ಥೆಯ ನೋಂದಣೆ ಮಾಡುವುದರ ಬಗ್ಗೆ 2020 ರಲ್ಲಿ ಜರುಗಿದ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗಿತ್ತು ಅದರಂತೆ ಪರ್ಯಾಯ ಸಂಸ್ಥೆಯನ್ನು ಹುಟ್ಟುಹಾಕಲಾಗಿದೆ. ಆದರೆ ಇಲ್ಲಿ ಜರುಗುತ್ತಿರುವ ಚರ್ಚೆಗಳು ಪ್ರಮುಖವಾಗಿ ಪದಾಧಿಕಾರಿಗಳ ಆಯ್ಕೆಗೆ ಸಂಬಂಧಿಸಿದ್ದಾಗಿದ್ದು, ಆಯ್ಕೆಗೂ ಮುನ್ನ ಸಂಘಟನೆಯ ಸದಸ್ಯರ ಬಳಿ ಚರ್ಚಿಸಿ ತೀರ್ಮಾನಿಸಲಾಗಿಲ್ಲ ಎಂಬುದು. ನಿಜ, ಈ ವಾದದಲ್ಲಿ ಅರ್ಥವೂ ಇದೆ. ಕಾರಣ ಕಳೆದ ಕೆಲವು ವರ್ಷಗಳ ಹಿಂದಿನಿಂದಲೂ ಸಂಸ್ಥೆಯ ಅಜೀವ ಸದಸ್ಯರಾಗಿರುವವ ಅಭಿಪ್ರಾಯವನ್ನು ಪಡೆದು ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದರೆ ಬಹುಶಃ ಇಂದು ಈ ವಿಚಾರಕ್ಕೆ ಸಂಬಂಧಿಸಿದ ಚರ್ಚೆ ಮುನ್ನೆಲೆಗೆ ಬರುತ್ತಲೇ ಇರಲಿಲ್ಲ. ಈಗ ಅದೇ ವಿಚಾರವನ್ಬು ಪ್ರಸ್ತಾಪಿಸಿ ಕೇಳುತ್ತಿರುವ ಪುಂಖಾನುಪುಂಕ ಪ್ರಶ್ನೆಗಳಿಗೆ ಸಂಬಂಧಪಟ್ಟವರು ಉತ್ತರಿಸಬೇಕಿದೆ. ಇದು ಸದ್ಯದ ಅನಿವಾರ್ಯ ಅಗತ್ಯವೂ ಆಗಿದ್ದು, ಸದಸ್ಯರ ಒಪ್ಪಿಗೆಯಿಲ್ಲದೇ ಪದಾಧಿಕಾರಿಗಳ ಆಯ್ಕೆ ಮಾಡಿದ್ದಕ್ಕೆ ಕಾರಣಗಳನ್ನೂ ಪ್ರಸ್ತಾಪಿಸಬೇಕಿದೆ. ಬಹುಪಾಲು ಮಂದಿ ಅಸಮ್ಮತಿಸಿದರೆ ಬದಲಿ ಪದಾಧಿಕಾರಿಗಳನ್ನು ನೇಮಿಸಬಹುದು. 2. ಪ್ರಜಾಪ್ರಭುತ್ವದ ಮೌಲ್ಯಗಳ ಅಡಿಯಲ್ಲಿ ರೂಪಿತವಾದ ಸಂಘಟನೆಯಲ್ಲಿ ಪ್ರತಿಯೋರ್ವ ಸದಸ್ಯನಿಗೂ ಪ್ರಶ್ನಿಸುವ ಹಾಗೂ ಉತ್ತರ ಪಡೆಯುವ ಹಕ್ಕಿದೆ. ಇಲ್ಲಿ ಎಲ್ಲರ ಭಾವನೆ ಹಾಗೂ ಅಭಿಪ್ರಾಯಗಳಿಗೆ ಬೆಲೆ ಇದೆ ಎಂದು ನಾನು ಭಾವಿಸುತ್ತೇನೆ. ಯಾರೋ ಕೆಲವೇ ಮಂದಿ ಪ್ರಶ್ನಿಸುತ್ತಿದ್ದಾರೆ ಉಳಿದವರು ಸುಮ್ಮನಿದ್ದಾರೆ ಎಂಬ ಕಾರಣಕ್ಕೆ ಕೆಲವರು ಮಾತ್ರ ಕೇಳಿದ ಪ್ರಶ್ನೆಗಳಿಗೆ ಉತ್ತರಿಸದಿರುವುದು ಅಥವಾ ನಿರ್ಲಕ್ಷಿಸುವುದು ಉತ್ತಮ ನಡೆಯಲ್ಲ ಎಂಬುದು ನನ್ನ ಅಭಿಪ್ರಾಯ. 3. ಇಲ್ಲಿ ನಡೆಯುವ ಚರ್ಚೆಗಳು ಸಂಘಟನೆಗೆ ಸೀಮಿತವಾಗಿರಬೇಕೇ ಹೊರತು ವಯಕ್ತಿಕ ವಿಷಯಗಳಿಗೆ ಸಂಬಂಧಿಸಿರಬಾರದು. ಸೈದ್ದಾಂತಿಕ ವಿಚಾರಗಳಿಗೆ ಸಂಬಂಧಿಸಿದ ಆರೋಗ್ಯಕರ ಚರ್ಚೆಯಾಗಲಿ ಎಂಬುದು ನನ್ನ ಭಾವನೆ. 4. ಕಳೆದ ಕೆಲವು ವರ್ಷಗಳಿಂದ KAPSW ರಾಜ್ಯದೆಲ್ಲೆಡೆ ಸದ್ದು ಮಾಡಲು ಆರಂಭಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಅದರ ಮೂಲದ ಬಗ್ಗೆಯೇ ಸ್ಪಷ್ಟತೆಯಿಲ್ಲವಾದರೆ ವೃತ್ಯಾತ್ಮಕ ಸಂಘಟನೆಗಳು ಬೆಳೆಯುವುದಾದರೂ ಹೇಗೆ? ಸದಸ್ಯರು ಎತ್ತಿದಂತೆ ಇನ್ನೂ ಸ್ಪಷ್ಟತೆ ನೀಡಬೇಕಿದೆ ಅನ್ನಿಸುತ್ತೆ. 5. ನನಗೆ ಅರಿವಿರುವ ಹಾಗೆ ಕಳೆದ ಕೆಲವು ವರ್ಷಗಳಿಂದ ಕೆಲವರು ಪ್ರಮುಖವಾಗಿ ಮಧುಕುಮಾರ್ ಸರ್ಕಾರದ ವಿವಿಧ ನಿಗಮ ಮಂಡಳಿ, ಹಾಲಿನ ಡೇರಿ ಹಾಗೂ ಇನ್ನಿತರೆಡೆ ಸಮಾಜಕಾರ್ಯಕರ್ತರಿಗಿದ್ದ ಅವಕಾಶಗಳು ಇತರರ ಪಾಲಾಗುತ್ತಿವೆ ಎಂಬ ವಿಚಾರದ ಬಗ್ಗೆ ಧ್ವನಿಯೆತ್ತಿದ್ದರು. ಇದಕ್ಕೆ ಸಂಬಂಧಿಸಿದಂತೆ ಪದಾಧಿಕಾರಿಗಳೊಂದಿಗೆ ಚರ್ಚಿಸಿದರೂ ಸಹ ಯಾರೂ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸದಿದ್ದಾಗ ಸಂಘಟನೆಗಳ ಅಗತ್ಯವೇಕೆ? ಪ್ರಥಮದರ್ಜೆ ಕಾಲೇಜುಗಳಲ್ಲಿ ಸಮಾಜಕಾರ್ಯ ವಿಭಾಗಗಳಲ್ಲಿ ಖಾಲಿಯಿರುವ ಹುದ್ದೆಗಳ ಬಗ್ಗೆ ಧ್ವನಿಯೆತ್ತಲೂ ಸಾಧ್ಯವಾಗದಿದ್ದರೆ ಮತ್ತೇಕೆ ಬೇಕಿದೆ ವೃತ್ಯಾತ್ಮಕ ಸಂಘಟನೆಗಳು..? ಸದ್ಯ ನಾನು ಪ್ರಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದು, ತರಗತಿಗಳಲ್ಲಿ ವೃತ್ಯಾತ್ಮಕ ಸಂಘಟನೆಗಳ ಬಗ್ಗೆ ಚರ್ಚಿಸುವಾಗ KAPSW ಬಗ್ಗೆ ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದೆ. ಆದರೆ ಈ ಎಲ್ಲಾ ಚರ್ಚೆಗಳನ್ನು ಗಮನಿಸಿದ ಮೇಲೆ ಪ್ರಜಾಪ್ರಭುತ್ವ ಮೌಲ್ಯಗಳ ಆಧಾರದ ಮೇಲೆ ಸಂಘಟನೆಗಳು ಸ್ಥಾಪಿಸಬೇಕು ಎಂಬುದನ್ನು ಹೇಗೆ ಹೇಳಲಿ...? ಮೂಲತಃ ನಾನು ಸಿದ್ಧಾಂತಗಳ ಜೊತೆಗೆ ನನ್ನ ವ್ಯಕ್ತಿಗತ ಅನುಭವಗಳನ್ನು ತರಗತಿಯಲ್ಲಿ ಚರ್ಚಿಸುವುದು ಅಧಿಕ ಮತ್ತು ಅದರ ಪ್ರತಿಫಲ ಇಂದು ನನ್ನ ಹಲವಾರು ವಿದ್ಯಾರ್ಥಿಗಳು ತಮಗೆ ಸರಿ ಕಾಣದ್ದನ್ಬು ಪ್ರಶ್ನಿಸುವರು ಹಾಗೂ ಓರೆಹಚ್ಚಿ ನೋಡಲು ಪ್ರಯತ್ನಿಸುವರು. ಸಾಮಾಜಿಕ ಕ್ರಿಯೆ ಆರಂಭವಾಗುವುದೇ ಪ್ರಶ್ನಿಸುವ ಮನೋಭಾವವನ್ನು ಬೆಳೆಸಿದಾಗ ಎಂದು ನಾನು ನಂಬಿರುವೆ. ಒಂದು ವೇಳೆ ಅವರು ತಪ್ಪು ತಪ್ಪಾದ ಪ್ರಶ್ನೆಗಳನ್ನು ಪುನರುಚ್ಛರಿಸುತ್ತಿದ್ದರೂ ಅವುಗಳನ್ನು ಗಣನೆಗೆ ತೆಗೆದುಕೊಂಡು ಸರಿಯಾದ ರೀತಿಯಲ್ಲಿ ಅರ್ಥಮಾಡಿಸುವ ಹೊಣೆ ಸಂಘಟನೆಗಿದೆ ಎಂದು ನಾನು ಭಾವಿಸುತ್ತೇನೆ. ಆ ಕೆಲಸ ಸಾಧ್ಯವಾಗುವುದಾದರೆ ಬಹುಶಃ ಸಂಘಟನೆ ಉನ್ನತ ಮಟ್ಟಕ್ಕೆ ಬೆಳೆಯುವುದು. ಅಂತಿಮವಾಗಿ ಇಲ್ಲಿ ಯಾರೂ ಸಹ ಸಂಘಟನೆಯ ಪೂರ್ಣಕಾಲಿಕ ಉದ್ಯೋಗಿಗಳಲ್ಲ. ಬದಲಿಗೆ ಪ್ರತಿಯೊಬ್ಬರೂ ಇದನ್ನು ಒಂದು ವೃತ್ಯಾತ್ಮಕ ಜವಾಬ್ದಾರಿಯನ್ನಾಗಿಸಿಕೊಂಡು ಮುನ್ನಡೆಸುತ್ತಿದ್ದಾರೆ. ಜವಾಬ್ದಾರಿಯನ್ನು ಒಬ್ಬರ ಹೆಗಲಿಗೆ ಹೊರಿಸುವುದು ಮೂರ್ಖತನ ಹಾಗೂ ಎಲ್ಲರೂ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕಿದೆ. ಇದಕ್ಕೆ ಪದಾಧಿಕಾರಿಗಳು ಹಾಗೂ ಸಂಬಂಧಿಸಿದವರು ಸೂಕ್ತ ಅವಕಾಶಗಳನ್ನು ಕಲ್ಪಿಸಿಕೊಡಬೇಕಿದೆ. ಇವು ನನ್ನ ಅನಿಸಿಕೆ ಅಭಿಪ್ರಾಯಗಳು ಮಾತ್ರ. ಸಂಸ್ಥೆಯ ಬಲವರ್ಧನೆಯ ಹಿತದೃಷ್ಠಿಯಿಂದ ನಾನು ಮೇಲ್ಕಂಡ ಅನಿಸಿಕೆಗಳನ್ನು ಹಂಚಿಕೊಂಡಿದ್ದೇನೆ. ಅಕ್ಷರ ಹಾಗೂ ವ್ಯಾಕರಣ ದೋಷಗಳು ಕಂಡಬಂದಲ್ಲಿ ಕ್ಷಮಿಸಿ. ಧನ್ಯವಾದಗಳೊಂದಿಗೆ ಗಂಗಾಧರ ರೆಡ್ಡಿ ಎನ್. 04-03-2022
18 Comments
ಡಾ. ಬಿ. ಟಿ. ಲಾವಣಿ ಹಿಂದಿನ ನಿರ್ದೇಶಕರು, ಭಾರತೀ ವಿದ್ಯಾಪೀಠ ವಿಶ್ವವಿದ್ಯಾಲಯ, ಪುಣೆ. ಪ್ರಸ್ತುತ ನಿರ್ದೇಶಕರು, ಸಂಶೋಧನಾ ಕೇಂದ್ರ (ಪುಣೆ ವಿಶ್ವವಿದ್ಯಾಲಯ), ಜನಸೇವಾ ಫೌಂಡೇಶನ್, ಪುಣೆ ಮುನ್ನುಡಿ “ಸಾಮಾಜಿಕ ಕ್ರಿಯಾಚರಣೆ”-ಒಂದು ಐತಿಹಾಸಿಕ ಮೇರುಕೃತಿ ಭಾರತದಲ್ಲಿ ವೃತ್ತಿಪರ ಸಮಾಜಕಾರ್ಯ ಶಿಕ್ಷಣ ಪ್ರಾರಂಭವಾಗಿ 85 ವರ್ಷಗಳು ಸಂದವು. ಸಂಖ್ಯಾತ್ಮಕವಾಗಿ ಸಮಾಜಕಾರ್ಯವು ವಿಸ್ತಾರವಾಗಿ ಬೆಳೆದಿದೆ. ವಿಶೇಷವಾಗಿ ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಸಮಾಜಕಾರ್ಯ ವಿದ್ಯಾಲಯಗಳು ವಿಪುಲವಾಗಿ ಬೆಳೆದು ಬಂದಿವೆ. ಗುಣಾತ್ಮಕವಾಗಿ ಅಲ್ಲದಿದ್ದರೂ ಸಂಖ್ಯಾತ್ಮಕವಾಗಿ ಭಾರತದಲ್ಲಿ ಸಮಾಜಕಾರ್ಯ ಶಿಕ್ಷಣ ವಿಪುಲವಾಗಿ ಬೆಳೆದು ನಿಂತಿದ್ದು ನಮ್ಮೆಲ್ಲರಿಗೂ ಗೊತ್ತಿದ್ದ ವಿಷಯ. ವಿಷಾದದ ಸಂಗತಿಯೆಂದರೆ ಈ ಕಳೆದ ಎಂಟು ದಶಕಗಳಲ್ಲಿ ಸಮಾಜಕಾರ್ಯವು ತನ್ನ ಅಸ್ತಿತ್ವಕ್ಕಾಗಿ ಹೆಣಗಾಡುತ್ತಲೇ ಇದೆ. ಯಾವುದೇ ಒಂದು ವೃತ್ತಿ ಗುಣಾತ್ಮಕವಾಗಿ ಬೆಳೆದು ತನ್ನ ಅಸ್ತಿತ್ವವನ್ನು ಸ್ಥಾಪಿಸಬೇಕಾದರೆ ಆ ವೃತ್ತಿಗೆ ಸಂಬಂಧಿಸಿದ ವೃತ್ತಿಪರ ಸಂಘಟನೆ ಹಾಗೂ ರಾಷ್ಟ್ರೀಯ ಪರಿಷತ್ತು ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ವಿಷಾದದ ಸಂಗತಿಯೆಂದರೆ ರಾಷ್ಟ್ರಮಟ್ಟದಲ್ಲಿ ಸಮಾಜಕಾರ್ಯಕರ್ತರ ಶಕ್ತಿಶಾಲಿಯಾದ ವೃತ್ತಿಪರ ಸಂಘಟನೆ ಇಲ್ಲದಿರುವುದು ಮತ್ತು ಸಮಾಜಕಾರ್ಯ ಪರಿಷತ್ತಿನ ಸ್ಥಾಪನೆ ಆಗದಿರುವುದು. ಮುಂಬರುವ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಸಮಾಜಕಾರ್ಯ ಪರಿಷತ್ತಿನ ಸ್ಥಾಪನೆಯಾಗಿ, ರಾಷ್ಟ್ರೀಯ ಸಮಾಜಕಾರ್ಯ ಸಂಘಟನೆ ಸ್ಥಾಪನೆಯಾಗಿ, ಸಮಾಜಕಾರ್ಯ ವೃತ್ತಿಗೊಂದು ನ್ಯಾಯ ಒದಗಿಸಿ ಕೊಡುತ್ತವೆ ಎಂದು ಆಶಿಸೋಣ. ಸಮಾಜಕಾರ್ಯದ ಗುಣಾತ್ಮಕ ಬೆಳವಣಿಗೆಯಲ್ಲಿ ಕಂಡುಬಂದ ಇನ್ನೊಂದು ಪ್ರಮುಖ ಕೊರತೆಯೆಂದರೆ ಭಾರತೀಯ ಸಮಾಜಕಾರ್ಯ ಶಿಕ್ಷಕರಿಂದ ಅಥವಾ ವೃತ್ತಿಪರ ಸಮಾಜಕಾರ್ಯಕರ್ತರಿಂದ ಭಾರತದ ಸಮುದಾಯಗಳ ಸ್ಥಿತಿ-ಗತಿ ಆಧಾರಿತ ಸಾಹಿತ್ಯಸೃಷ್ಟಿ ಅಪೇಕ್ಷೆಮೇರೆಗೆ ಆಗದೆ ಇರುವುದು. ವಿಶೇಷವಾಗಿ ವಿವಿಧ ರಾಜ್ಯಗಳ ಮಾತೃಭಾಷೆಯಲ್ಲಿ ಸಮಾಜಕಾರ್ಯ ಶಿಕ್ಷಣ ಕುರಿತು ಪುಸ್ತಕಗಳು, ಸಂಶೋಧನೆಗಳು, ಲೇಖನಗಳು ಇತ್ಯಾದಿ ಸಾಹಿತ್ಯ ಬರದೇ ಇರುವುದು. ಈ ನ್ಯೂನ್ಯತೆಯನ್ನು ಹೋಗಲಾಡಿಸುವ ಒಂದು ದಿಟ್ಟ ಪ್ರಯತ್ನವೇ ಡಾ. ಸಿ.ಆರ್. ಗೋಪಾಲ್‌ರವರ ಸಮಾಜಕಾರ್ಯ ಶಿಕ್ಷಣ ಕುರಿತ ಕನ್ನಡದಲ್ಲಿಯ ಲೇಖನಗಳು ಹಾಗೂ ಪುಸ್ತಕಗಳು. ಶ್ರೀಯುತರು ಸಮಾಜಕಾರ್ಯ, ಭಾಷಣಕಲೆ, ಸಂಸ್ಕೃತಿ ಮುಂತಾದ ವಿಷಯಗಳ ಬಗ್ಗೆ ಒಟ್ಟಾರೆಯಾಗಿ ಹನ್ನೊಂದು ಪುಸ್ತಕಗಳನ್ನು ಬರೆದಿದ್ದಾರೆ. ಪ್ರಸ್ತುತ ಪುಸ್ತಕ "ಸಾಮಾಜಿಕ ಕ್ರಿಯಾಚರಣೆ" ಈ ನಿಟ್ಟಿನಲ್ಲಿ ಒಂದು ಐತಿಹಾಸಿಕ ದಾಖಲೆ ಎಂದೇ ಹೇಳಬೇಕು. ಸಮಾಜಕಾರ್ಯದಲ್ಲಿ ಆರು ವಿಧಾನಗಳಿವೆ, ಮೂರು ಪ್ರಮುಖ ವಿಧಾನಗಳು, ಇನ್ನುಳಿದ ಮೂರು ಪೂರಕ ವಿಧಾನಗಳು. ವ್ಯಕ್ತಿಗತ ಸಮಾಜಕಾರ್ಯ, ವೃಂದಗತ ಸಮಾಜಕಾರ್ಯ, ಸಮುದಾಯ ಸಂಘಟನೆ ಈ ಮೂರು ಪ್ರಮುಖ ವಿಧಾನಗಳಾದರೆ, ಸಾಮಾಜಿಕ ಕ್ರಿಯೆ, ಸಮಾಜ ಕಲ್ಯಾಣ ಆಡಳಿತ ಮತ್ತು ಸಾಮಾಜಿಕ ಸಂಶೋಧನೆ ಈ ಮೂರು ಪೂರಕ ವಿಧಾನಗಳು. ಭಾರತದಲ್ಲಿ ಪೂರಕ ವಿಧಾನಗಳಿಗೆ ಹೆಚ್ಚು ಒತ್ತು ಕೊಡದೆ ಪ್ರಮುಖ ವಿಧಾನಗಳಾದ ವ್ಯಕ್ತಿಗತ ಸಮಾಜಕಾರ್ಯ ಹಾಗೂ ವೃಂದಗತ ಸಮಾಜಕಾರ್ಯ ವಿಧಾನಗಳಿಗೆ ಪ್ರಾಮುಖ್ಯತೆ ಕೊಡಲಾಗಿದೆ. ಸಮುದಾಯ ಸಂಘಟನೆಗಾಗಲಿ ಅಥವಾ ಸಾಮಾಜಿಕ ಕ್ರಿಯೆಗಾಗಲಿ ಸಿಗಬೇಕಾದ ಪ್ರಾಮುಖ್ಯತೆ ಸಿಗುತ್ತಿಲ್ಲ. ಹಾಗೆ ನೋಡಿದರೆ ಭಾರತದಲ್ಲಿ ಪ್ರಮುಖವಾಗಿ ಈ ಎರಡು ವಿಧಾನಗಳಿಗೆ ಆದ್ಯತೆ ಕೊಡಬೇಕು. ನನ್ನ ಜ್ಞಾನ ಹಾಗೂ ಅನುಭವದ ಆಧಾರದ ಮೇರೆಗೆ ಹೇಳುವುದಾದರೆ ಭಾರತೀಯ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಯ ಹಿನ್ನೆಲೆಯಲ್ಲಿ ಸಮುದಾಯ ಸಂಘಟನೆ ಹಾಗೂ ಸಾಮಾಜಿಕ ಕ್ರಿಯೆ ಈ ಎರಡು ವಿಧಾನಗಳಿಗೆ ಹೆಚ್ಚಿನ ಆದ್ಯತೆ ಕೊಡಬೇಕು. ಇದಕ್ಕೂ ಮುಂದುವರೆದು ಹೇಳುವುದಾದರೆ ವೃಂದಗತ ಸಮಾಜಕಾರ್ಯ, ಸಮುದಾಯ ಸಂಘಟನೆ ಮತ್ತು ಸಾಮಾಜಿಕ ಕ್ರಿಯೆ ಈ ಮೂರು ವಿಧಾನಗಳು ಪ್ರಮುಖ ವಿಧಾನಗಳಾಗಿ ಸ್ವೀಕರಿಸಬೇಕು ಹಾಗೂ ವ್ಯಕ್ತಿಗತ ಸಮಾಜಕಾರ್ಯ, ಸಮಾಜ ಕಲ್ಯಾಣ ಆಡಳಿತ, ಸಾಮಾಜಿಕ ಸಂಶೋಧನೆ (ಸಮಾಜಕಾರ್ಯ ಸಂಶೋಧನೆ) ಇವುಗಳನ್ನು ಪೂರಕ ವಿಧಾನಗಳಾಗಿ ಸ್ವೀಕರಿಸಬೇಕು. ಸಮಾಜಕಾರ್ಯ ಕ್ಷೇತ್ರಕಾರ್ಯದಲ್ಲಿ ಕೂಡ ವಿದ್ಯಾರ್ಥಿಗಳಿಗೆ ವ್ಯಕ್ತಿಗತ ಸಮಾಜಕಾರ್ಯ ಹಾಗೂ ವೃಂದಗತ ಸಮಾಜಕಾರ್ಯ ಎರಡರ ಮೇಲೆ ಹೆಚ್ಚು ಒತ್ತು ಕೊಡುವಂತೆ ಸಮಾಜಕಾರ್ಯ ಶಿಕ್ಷಣ ಸಂಸ್ಥೆಗಳು ಬೋಧಿಸುತ್ತಿವೆ. ಹಾಗಾಗಿ ಇಲ್ಲಿಯವರೆಗೆ ಸಮಾಜಕಾರ್ಯ ಪ್ರಚೋದನೆ ಮೇಲೆ ಹೆಚ್ಚಿನ ಲೇಖನಗಳಾಗಲಿ ಪುಸ್ತಕಗಳಾಗಲಿ ಪ್ರಕಟವಾಗಿಲ್ಲ. ಮುಂದುವರೆದು ಹೇಳುವುದಾದರೆ ಇದೊಂದು ಪೂರ್ಣತಃ ದುರ್ಲಕ್ಷಿತ ಸಮಾಜಕಾರ್ಯದ ವಿಧಾನವಾಗಿ ಉಳಿದಿದೆ. ಪ್ರಸ್ತುತ ಗ್ರಂಥ "ಸಾಮಾಜಿಕ ಕ್ರಿಯಾಚರಣೆ" ಈ ನಿಟ್ಟಿನಲ್ಲಿ ಇರತಕ್ಕಂತಹ ನ್ಯೂನತೆಯನ್ನು ತುಂಬಿ ಕೊಡುವುದರಲ್ಲಿ ಸಂದೇಹವಿಲ್ಲ. ಡಾ. ಸಿ.ಆರ್. ಗೋಪಾಲ್ ಅವರ ಪ್ರಸ್ತುತ ಗ್ರಂಥ "ಸಾಮಾಜಿಕ ಕ್ರಿಯಾಚರಣೆ" ಒಂದು ಸಮಗ್ರ ಹೊತ್ತಿಗೆಯಾಗಿ ಹೊರಬಂದಿದೆ. ನಿಜ ಹೇಳುವುದಾದರೆ "ಸಾಮಾಜಿಕ ಕ್ರಿಯ" ಈ ಪೂರಕ ವಿಧಾನದ ಮೇಲೆ ಒಂದು ಪುಸ್ತಕವನ್ನು ಬರೆಯುವಷ್ಟು ವಿಷಯವಸ್ತು ಸಿಗಬಹುದೇ ಎಂಬ ಪ್ರಶ್ನೆಗೆ ಸಿಗುವ ಉತ್ತರವೇ ಪ್ರಸ್ತುತ ಗ್ರಂಥ "ಸಾಮಾಜಿಕ ಕ್ರಿಯಾಚರಣೆ"! ‘ಸೋಶಿಯಲ್ ಆಕ್ಷನ್' ಈ ಪದಕ್ಕೆ ಇಲ್ಲಿಯವರೆಗೆ ‘ಸಾಮಾಜಿಕ ಕ್ರಿಯೆ' ಅಥವಾ ‘ಸಾಮಾಜಿಕ ಪ್ರಚೋದನೆ' ಈ ಪದಗಳನ್ನು ಮಾತ್ರ ಉಪಯೋಗಿಸಲಾಗಿದೆ. ಆದರೆ ಡಾ. ಸಿ.ಆರ್. ಗೋಪಾಲ್ ಅವರು ಸಾಮಾಜಿಕ ಕ್ರಿಯಾಚರಣೆ ಪದಗುಚ್ಛವನ್ನು ಉಪಯೋಗಿಸಿದ್ದಾರೆ. ಇದೊಂದು ಸಮಾಜಕಾರ್ಯ ವಿಧಾನಗಳಿಗೆ ಕೊಟ್ಟ ಕೊಡುಗೆ. ಸಮಾಜಕಾರ್ಯ ಶಿಕ್ಷಕರು ಹಾಗೂ ವೃತ್ತಿಪರ ಸಮಾಜಕಾರ್ಯಕರ್ತರು ಈ ಪದಗುಚ್ಛವನ್ನು ಸ್ವೀಕರಿಸಿ ಆಚರಿಸುವಲ್ಲಿ ಯಾವ ಸಂದೇಹವೂ ಇಲ್ಲ. ಡಾ. ಸಿ.ಆರ್. ಗೋಪಾಲ್ ಅವರು ಸಮಾಜಕಾರ್ಯ ಶಿಕ್ಷಣ ಕುರಿತು ಪುಸ್ತಕಗಳು, ಲೇಖನಗಳು ಕನ್ನಡದಲ್ಲಿ ಬರೆದು ಮಹದುಪಕಾರ ಮಾಡಿದ್ದಾರೆ. ಕರ್ನಾಟಕದ ಸಮಾಜಕಾರ್ಯ ವಿದ್ಯಾಲಯಗಳಲ್ಲಿ ಹಾಗೂ ವಿಶ್ವ ವಿದ್ಯಾಲಯಗಳಲ್ಲಿ ಸುಮಾರು 90% ವಿದ್ಯಾರ್ಥಿಗಳು ಕನ್ನಡದಲ್ಲಿಯೇ ಅಧ್ಯಯನ ಮಾಡುತ್ತಾರೆ. ಈ ನಿಟ್ಟಿನಲ್ಲಿ ಅವರು ಸೃಷ್ಟಿಸಿದ ಕನ್ನಡದಲ್ಲಿಯ ಸಮಾಜಕಾರ್ಯ ಸಾಹಿತ್ಯ ವಿದ್ಯಾರ್ಥಿ ಬಳಗಕ್ಕೆ ಒಂದು ಅದ್ಭುತವಾದ ಕೊಡುಗೆಯಾಗಿದೆ. ಪ್ರಸ್ತುತ ಗ್ರಂಥದಲ್ಲಿ ಹನ್ನೆರಡು ಅಧ್ಯಾಯಗಳಿವೆ. ಮೊದಲಿನ ಎಂಟು ಅಧ್ಯಾಯಗಳು ಸಾಮಾಜಿಕ ಕ್ರಿಯಾಚರಣೆ ವಿಧಾನ ಕುರಿತು ವಿವಿಧ ಸಂಗತಿಗಳನ್ನು ವಿವರಿಸುತ್ತವೆ. ಮುಂಬರುವ ಅಧ್ಯಾಯಗಳಲ್ಲಿ ಈ ವಿಧಾನಕ್ಕೆ ಸಂಬಂಧಪಟ್ಟ ಕಾರ್ಯಕ್ಷೇತ್ರಗಳ ಬಗ್ಗೆ ಮಾಹಿತಿಯನ್ನು ನೀಡುತ್ತವೆ. ಸಮಾಜಕಾರ್ಯ ಶಿಕ್ಷಣವು ಮೂಲತಃ ಅಂತರಶಾಸ್ತ್ರೀಯ ಪದ್ಧತಿಯನ್ನು ಅಳವಡಿಸಿಕೊಂಡಿರುವುದರಿAದ ಇನ್ನುಳಿದ ಸಂಬಂಧಪಟ್ಟ ಸಮಾಜಶಾಸ್ತ್ರಗಳಿಂದ ಜ್ಞಾನವನ್ನು ಪಡೆದುಕೊಳ್ಳುವುದು ಸೂಕ್ತ ಹಾಗೂ ಅನಿವಾರ್ಯ ಕೂಡ. ಈ ನಿಟ್ಟಿನಲ್ಲಿ ಶ್ರೀ ಸಿ.ಆರ್. ಗೋಪಾಲ್ ಅವರು ವಿವಿಧ ಸಮಾಜಶಾಸ್ತ್ರಗಳ ಜ್ಞಾನವನ್ನು ಉಪಯೋಗಿಸಿ ಈ ವಿಧಾನವನ್ನು ಸಮೃದ್ಧಗೊಳಿಸಿದ್ದಾರೆ. ಸಾಮಾಜಿಕ ಕಾಯ್ದೆಗಳು, ಭಾರತೀಯ ಸಂವಿಧಾನದ ಪ್ರಮುಖ ವಿಷಯಗಳು, ಕಾರ್ಮಿಕ ಕಾನೂನುಗಳು ಈ ವಿಧಾನಕ್ಕೆ ಪೂರಕವಾಗುವಂತೆ ಬಳಸಿಕೊಂಡಿದ್ದಾರೆ. ಆಂದೋಲನ ಈ ವಿಧಾನದ ಪ್ರಮುಖ ಅಂಶವಾಗಿರುವುದರಿಂದ ಸಾಮಾಜಿಕ ಆಂದೋಲನ, ಅದರ ಸಿದ್ಧಾಂತಗಳು, ಆಂದೋಲನಗಳು, ಅವುಗಳು ಸ್ವರೂಪ ಹಾಗು ಇತರೆ ವಿಷಯಗಳನ್ನು ಸೂಕ್ತವಾಗಿ ಮಂಡಿಸಿದ್ದಾರೆ. ಜೊತೆಗೆ ಭಾರತದಲ್ಲಿ ಸಾಮಾಜಿಕ ಆಂದೋಲನಗಳು, ಧಾರ್ಮಿಕ ಸುಧಾರಣೆ ಆಂದೋಲನಗಳು, ಹಸಿರು ಕ್ರಾಂತಿ ಆಂದೋಲನಗಳನ್ನು ಮಂಡಿಸಿ ಸಮಾಜಕಾರ್ಯದ ಅಧ್ಯಾಪಕರಿಗೆ ಹಾಗು ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತೆ ಮಾಡಿದ್ದಾರೆ. ಈ ಗ್ರಂಥದ ಕೊನೆಯ ಅಧ್ಯಾಯದಲ್ಲಿ ಮಂಡಿಸಿರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳು, ಅವುಗಳ ಲಕ್ಷಣಗಳು, ಸಾರ್ವಜನಿಕ ಮೊಕದ್ದಮೆಗೆ ಸೇರುವ ಸಾರ್ವಜನಿಕ ಹಿತಾಸಕ್ತಿ ವಿಷಯಗಳು ಈ ಪುಸ್ತಕದ ವ್ಯಾಪ್ತಿಯನ್ನು ವಿಸ್ತರಿಸಿವೆ. ಒಟ್ಟಿನಲ್ಲಿ ಹೇಳುವುದಾದರೆ ಲೇಖಕರು ಸಾಮಾಜಿಕ ಕ್ರಿಯಾಚರಣೆ ಒಂದು ಪೂರಕ ವಿಧಾನವಾದರೂ ಕೂಡ ಅದೊಂದು ಸಮಾಜಕಾರ್ಯದ ಪ್ರಮುಖ ಪ್ರಬಲ ವಿಧಾನವೆಂಬಂತೆ ಮಂಡಿಸಿದ್ದಾರೆ. ಅದು ನಿಜ ಕೂಡ. ಬೇರೆ ಅರ್ಥದಲ್ಲಿ ಹೇಳುವುದಾದರೆ ಡಾ. ಸಿ.ಆರ್. ಗೋಪಾಲ್ ಅವರು ಒಂದು ಹೊಸ ಆಯಾಮವನ್ನು, ಒಂದು ಹೊಸ ಪ್ರಯೋಗವನ್ನು ವ್ಯಾಪಕವಾಗಿ, ತುಂಬಾ ಸೊಗಸಾಗಿ, ಸುಂದರವಾಗಿ, ಸರಳವಾಗಿ, ಅರ್ಥವಾಗುವಂತೆ ಮಂಡಿಸಿದ್ದಾರೆ. ಅವರಿಗೆ ಸಮಾಜಕಾರ್ಯದ ಶಿಕ್ಷಕ ವೃಂದ ಹಾಗೂ ವೃತ್ತಿಪರ ಕಾರ್ಯಕರ್ತರ ಪರವಾಗಿ ತುಂಬು ಹೃದಯದ ಧನ್ಯವಾದಗಳು. ಅವರು ಇಂತಹ ಒಂದು ಅತ್ಯವಶ್ಯಕ ಹೊತ್ತಿಗೆಯನ್ನು ಸಮಾಜಕಾರ್ಯದ ವಿದ್ಯಾರ್ಥಿ, ಶಿಕ್ಷಕ ಹಾಗೂ ಸಮಾಜಕಾರ್ಯಕರ್ತರಿಗೆ ನೀಡುತ್ತಿರುವುದರಿಂದ, ಅವರಿಗೆ ಅಭಿನಂದನೆಗಳನ್ನು ಕೂಡ ಸಲ್ಲಿಸುತ್ತೇನೆ. ಅವರ ಈ ಪ್ರಸ್ತುತ ಗ್ರಂಥ ಸಂಬಂಧಪಟ್ಟವರು ತುಂಬು ಹೃದಯದಿಂದ ಸ್ವೀಕರಿಸುತ್ತಾರೆ ಎನ್ನುವ ಭರವಸೆ ನನಗಿದೆ. ಈ ಸಂದರ್ಭದಲ್ಲಿ ಶ್ರೀ ಎಂ.ಎಚ್. ರಮೇಶ ಅವರ ಬಗ್ಗೆ ಒಂದೆರಡು ಮಾತು ಹೇಳದಿದ್ದರೆ ನನ್ನ ಮನಸ್ಸಿಗೆ ಸಮಾಧಾನ ಎನಿಸುವುದಿಲ್ಲ. ಶ್ರೀ ಎಂ.ಎಚ್. ರಮೇಶ ಅವರು ನನಗೆ ಸುಮಾರು 15 ವರ್ಷದಿಂದ ಪರಿಚಿತರು. ಅವರು ವೃತ್ತಿಯಿಂದ ಶಿಕ್ಷಕರಾಗಿ ಇಲ್ಲದಿದ್ದರೂ ಸಮಾಜಕಾರ್ಯದ ಸಾಹಿತ್ಯ ಕನ್ನಡದಲ್ಲಿ ಸೃಷ್ಟಿಯಾಗಬೇಕು, ಪ್ರಕಟವಾಗಬೇಕು, ವಿದ್ಯಾರ್ಥಿಗಳಿಗೂ, ಶಿಕ್ಷಕರಿಗೂ ಹಾಗೂ ವೃತ್ತಿಪರ ಸಮಾಜಕಾರ್ಯಕರ್ತರಿಗೂ ತಲುಪುವಂತಾಗಬೇಕು ಎನ್ನುವುದು ಅವರ ಧ್ಯೇಯ. "ಸಮಾಜಕಾರ್ಯದ ಹೆಜ್ಜೆಗಳು" ಈ ದ್ವಿಭಾಷಾ ಜರ್ನಲ್ ಮುಖಾಂತರ ಶ್ರೀ ಎಂ.ಎಚ್. ರಮೇಶ ಅವರು ಕನ್ನಡಿಗರಿಗೆ ಅಷ್ಟೇ ಅಲ್ಲ ಕರ್ನಾಟಕದ ಹೊರಗಿನ ವಿದ್ಯಾರ್ಥಿಗಳಿಗೂ, ಅಧ್ಯಾಪಕರಿಗೂ, ವಿಶ್ವವಿದ್ಯಾಲಯಗಳಿಗೂ ಪರಿಚಿತರಾಗಿದ್ದಾರೆ. ಅವರು ಇಲ್ಲಿಯವರೆಗೂ ಸಮಾಜಕಾರ್ಯಕ್ಕೆ ಸಂಬಂಧಿಸಿದ ಸುಮಾರು 100 ಪುಸ್ತಕಗಳು ಅವರ ನಿರುತ ಪಬ್ಲಿಕೇಷನ್ಸ್ ಮುಖಾಂತರ ಜನರ ಕೈಗಿಟ್ಟಿದ್ದಾರೆ. ಅವರ ಈ ಸೇವೆ ಅಮೋಘ ಹಾಗೂ ಶ್ಲಾಘನೀಯ. ಅವರ ನಿರುತ ಪಬ್ಲಿಕೇಷನ್ಸ್ ನಿಂದ ಇನ್ನೂ ಇಂತಹ ನೂರಾರು ಅಲ್ಲ, ಸಾವಿರಾರು ಪುಸ್ತಕಗಳು ಪ್ರಕಟವಾಗಲೆಂದು ಈ ಸಂದರ್ಭದಲ್ಲಿ ಹಾರೈಸುತ್ತೇನೆ! ಡಾ. ಬಿ.ಟಿ. ಲಾವಣಿ ಹಿಂದಿನ ನಿರ್ದೇಶಕರು, ಭಾರತೀ ವಿದ್ಯಾಪೀಠ ವಿಶ್ವವಿದ್ಯಾಲಯ, ಪುಣೆ. ಪ್ರಸ್ತುತ ನಿರ್ದೇಶಕರು, ಸಂಶೋಧನಾ ಕೇಂದ್ರ (ಪುಣೆ ವಿಶ್ವವಿದ್ಯಾಲಯ), ಜನಸೇವಾ ಫೌಂಡೇಶನ್, ಪುಣೆ ಪ್ರೊ. ಆರ್.ಶಿವಪ್ಪ ಕುಲಸಚಿವರು, ಮೈಸೂರು ವಿಶ್ವವಿದ್ಯಾಲಯ, ಮೈಸೂರು ಗಾಂಧೀಜಿ ಎಂಬುದು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ತತ್ವ, ಅವರು ಈ ಯುಗದ ಸತ್ಯ. ಗಾಂಧೀಜಿ ಎಂಬುದು ಬರೀ ಹೆಸರಲ್ಲ, ಬಹು ದೊಡ್ಡ ಮೌಲ್ಯ. ಅವರ ಜೀವನ ಕ್ರಮ ಭಾರತೀಯ ಜೀವನ ಪದ್ದತಿಯ ಯಶಸ್ವೀ ಪ್ರಯೋಗ ಶಾಲೆ. ಈ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಪ್ರಸಾರವಾಗುತ್ತಿರುವ ಸಿದ್ದಾಂತಗಳಲ್ಲಿ ಗಾಂಧಿ ಕುರಿತಾದ ಸಾಹಿತ್ಯ, ಬರವಣಿಗೆ, ಪುಸ್ತಕಗಳೂ ಕೂಡ ಬಹು ಪ್ರಾಮುಖ್ಯತೆಯನ್ನು ಪಡೆದಿವೆ, ಪತ್ರಿಕೋದ್ಯಮಿ, ಸಮಾಜ ವಿಜ್ಞಾನಿ, ಸರ್ವೋದಯ ನೇತಾರ, ಶಿಕ್ಷಣತಜ್ಞ, ಸಾಹಿತ್ಯರತ್ನ, ತತ್ವಜ್ಞಾನಿ, ಹಾಸ್ಯ ಗಂಭೀರ, ಸ್ವದೇಶಿನಿಷ್ಠ, ವಕೀಲ ಎಂದೆಲ್ಲಾ ಹೆಸರಾದ ಗಾಂಧೀಜಿ ಮಾನವೀಯತೆಯ ಮಂಗಳ ರೂಪ, ನಾಳಿಯ ಯುಗ ವಿಜ್ಞಾನ ಮತ್ತು ವೇದಾಂತದ್ದು ಆದರೆ ಆಯುಗದ ಮೊದಲ ದಾರ್ಶನಿಕ ಗಾಂಧೀಜಿ ಎಂಬುದು ವಾಸ್ತವ. ಗಾಂಧೀಜಿಯವರ ವಿಚಾರಗಳು ಯಾವುದೇ ಇರಲಿ ಅವುಗಳು ದ್ವೇಷ, ಅಸೂಯೆ, ಹಿಂಸೆಯಿಂದ ಮುಕ್ತಗೊಳಿಸಿ ಮನುಷ್ಯನನ್ನಾಗಿ ಮಾಡುತ್ತವೆ. ಹೀಗಾಗಿ ಜಗತ್ತಿನ ಯಾವುದೇ ವಿಚಾರಗಳು ಗಾಂಧಿ ತತ್ವಗಳನ್ನು ಹೊರತುಪಡಿಸಿ ಮೌಲಿಕವಾಗಲಾರವು.
ಪೀಠಿಕೆ:
ಇತ್ತೀಚಿನ ದಿನಗಳಲ್ಲಿ ಉದ್ಯಮ 4.0 ಬಗ್ಗೆ ಹೆಚ್ಚಾಗಿ ಮಾತನಾಡುವುದನ್ನು ಸಂಸ್ಥೆಗಳಲ್ಲಿ ಮತ್ತು ಸಮೂಹ ಮಾಧ್ಯಮಗಳಲ್ಲಿ ಕೇಳುತ್ತಿದ್ದೇವೆ. ಮೇಕೆನ್ಸಿ ಎಂಬ ಸಂಸ್ಥೆಯ ಅಧ್ಯಯನದ ಪ್ರಕಾರ 2025 ರ ಒಳಗೆ ಕಾರ್ಖಾನೆಗಳಲ್ಲಿ ವಸ್ತುಗಳ ಅಂತರ್ಜಾಲದ ಬಳಕೆಯಿಂದಾಗಿ, ಸುಮಾರು 84 ಲಕ್ಷ ಕೋಟಿ ರೂಪಾಯಿಯಿಂದ 216 ಲಕ್ಷ ಕೋಟಿ ರೂಪಾಯಿಯಷ್ಟು ಆರ್ಥಿಕತೆಯ ಮೇಲೆ ಪ್ರಭಾವ ಬೀರಲಿದೆ. ಆದ್ದರಿಂದ, ಉದ್ಯಮ 4.0 ಬಗ್ಗೆ ತಿಳಿದುಕೊಳ್ಳುವುದು ಮಾನವ ಸಂಪನ್ಮೂಲ ವೃತ್ತಿನಿರತರು ಸೇರಿದಂತೆ ಎಲ್ಲರಿಗೂ ಅನಿವಾರ್ಯವಾಗಿದೆ. ಉದ್ಯಮ 4.0 ನವಯುಗದ ಕೈಗಾರಿಕಾ ಕ್ರಾಂತಿಯಾಗಿದ್ದರೂ, ಈ ಹಿಂದಿನ ಮೂರು ಕೈಗಾರಿಕಾ ಕ್ರಾಂತಿಗಳ ಮುಂದುವರೆದ ಭಾಗವಾಗಿದೆ. ಹಾಗಾದರೆ, ಕೈಗಾರಿಕಾ ಕ್ರಾಂತಿಯು ಹಿಂದಿನ ಕಾಲದಿಂದ ಇಂದಿನವರೆಗೂ ಹೇಗೆ ವಿಕಸನಗೊಂಡಿದೆ ಎಂಬುದನ್ನು ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ. ಶರಣ ಸಾಹಿತ್ಯ
ಕರ್ನಾಟಕದ ಭಕ್ತಿ ಪಂಥದಲ್ಲಿ ಶರಣ ಸಾಹಿತ್ಯ ಮತ್ತು ದಾಸ ಸಾಹಿತ್ಯ ಎರಡು ಸಮಾನಾಂತರ ಮಾರ್ಗಗಳು. ಅವುಗಳ ಉದ್ದೇಶ, ಸಾಧನಾ ಪಥ, ಒಪ್ಪಿಕೊಂಡ ಮೌಲ್ಯಗಳು ಇತ್ಯಾದಿ ಸ್ವಲ್ಪ ಹೆಚ್ಚು ಕಡಿಮೆ ಒಂದೇ ತರಹ ಕಾಣಿಸುತ್ತವೆ. ಶರಣ ಸಾಹಿತ್ಯದಲ್ಲಿ ಶಿವನ ಪಾರಮ್ಯವನ್ನು ಪ್ರತಿಪಾದಿಸಿದರೆ, ದಾಸಸಾಹಿತ್ಯದಲ್ಲಿ ಹರಿಸರ್ವೋತ್ತಮತ್ವವನ್ನು ನಿರೂಪಣೆ ಮಾಡಿದೆ. ಭಕ್ತಿ ಮಾರ್ಗವನ್ನು ಎರಡೂ ಸಾಹಿತ್ಯ ಪ್ರಕಾರಗಳೂ ಅಳವಡಿಸಿಕೊಂಡಿವೆ. ಹಾಗೇನೆ ಬದುಕಿನ ಮೌಲ್ಯಗಳನ್ನು ವಿವರಿಸುವಾಗ ಭಾವನೆ, ಕಲ್ಪನೆಗಳು ಒಂದೇ ಆಗಿದ್ದು ಶಬ್ದ ಪ್ರಯೋಗಗಳು, ಸಣ್ಣಪುಟ್ಟ ಆಚಾರಗಳು ಬೇರೆ ಬೇರೆ ಆಗಿರುವುದನ್ನು ಕಾಣಬಹುದಾಗಿದೆ. ಪೀಠಿಕೆ
ಭಾಷೆ ಎಂಬುದು ಅನಾದಿ ಕಾಲದಿಂದಲೂ ಸಂವಹನದ ಒಂದು ಮುಖ್ಯ ಭಾಗವಾಗಿ ಮಾನವನ ಎಲ್ಲ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಪೂರಕ ಸಾಧನವಾಗಿ ಕಾರ್ಯನಿರ್ವಹಿಸುತ್ತಿದೆ. ಬಹುಶಃ ಭಾಷೆ ಎಂಬುದೇ ಒಂದು ಸಾಧನವಾಗಿ ಮಾನವ ಮತ್ತು ಮೃಗಗಳನ್ನು ಬೇರ್ಪಡಿಸಿದೆ ಎಂದರೆ ತಪ್ಪಲ್ಲ. ಜಗತ್ತಿನ ಸಾವಿರಾರು ಭಾಷೆಗಳಿಗೆ ಹೇಳಿಕೊಳ್ಳುವಷ್ಟು ಇತಿಹಾಸ ಮತ್ತು ಪರಂಪರೆಯ ಬೆಂಬಲವಿದೆ. ಭಾಷೆ ಕೇವಲ ಶಬ್ದಗಳ ಆಡಂಬರವಾಗದೆ ಜನರ ಜೀವನಾಡಿಯಲ್ಲಿ ಬೆರೆತು ಹೋಗಿರುತ್ತದೆ. ಸಂಸ್ಕೃತಿಯ ಕೈಪಿಡಿಯಾಗಿ, ಆಚಾರ-ವಿಚಾರಗಳ ಬೆನ್ನೆಲುಬಾಗಿ, ವೃತ್ತಿಧರ್ಮಕ್ಕೆ ಆಸರೆಯಾಗಿ, ಸಂವಹನ ಕಲೆಯನ್ನು ಪೋಷಿಸುತ್ತಾ ಊರಿಂದ ಊರಿಗೆ ನಾಲಗೆಯ ಮೇಲೆ ಹರಿದಾಡಿ ತನ್ನ ತುಂಬು ತೋಳುಗಳಿಂದ ಜನರನ್ನು ಸೆಳೆದಪ್ಪಿಕೊಂಡ ಪರಿಯೇ ಅದ್ಭುತವಾದದ್ದು, ಭಾಷೆಯ ಬೆಂಬಲವಿಲ್ಲದೆ ಇದ್ದರೆ ಮಾನವನ ಬಾಯಿಂದ ಹೊರಟ ರೋದನೆಗಳೆಲ್ಲ ಚೀರಾಟಗಳಾಗಿರುತ್ತಿತ್ತು. ಅಕ್ಷರ ಜೋಡಣೆಗಳಿಲ್ಲದೆ ಅನುಭವಗಳು ಅರ್ಥ ಕಳೆದುಕೊಳ್ಳುತ್ತಿದ್ದವು. ಯಹೂದಿಧರ್ಮ (ಹಿಬ್ರೂ ಧರ್ಮ)
ಪಾಶ್ಚಾತ್ಯ ಜಗತ್ತಿನ ಪ್ರಮುಖ ಧರ್ಮಗಳಾದ ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳಿಗಿಂತಲೂ ಹಳೆಯದಾದ ಮತ್ತು ಈ ಎರಡೂ ಧರ್ಮಗಳಿಗೂ ಒಂದು ಹಿನ್ನೆಲೆಯನ್ನು ಒದಗಿಸಿದ ಧರ್ಮವೆಂದರೆ ಯಹೂದಿಧರ್ಮ. ಅದನ್ನು ಹಿಬ್ರೂ ಧರ್ಮವೆಂದೂ ಕರೆಯಲಾಗುತ್ತದೆ. ಇಸ್ರೇಲಿನಲ್ಲಿದ್ದು ಹಾಗೂ ಈ ಧರ್ಮವನ್ನು ಅನುಸರಿಸಿದವರನ್ನು ಜ್ಯೂ (Jew) ಜನಾಂಗವೆಂದು ಕರೆಯುತ್ತಾರೆ. ಇವರ ಮೂಲಪುರುಷ ಅಬ್ರಹಾಮ್. ಜ್ಯೂ ಜನಾಂಗದ ಪ್ರವಾದಿಯಾದ ಮೋಜಿಸ್ (ಮೋಶೆ) ಯಹೂದಿ ಧರ್ಮದ ಪ್ರವರ್ತಕ. ಪವಿತ್ರ ಗ್ರಂಥ ಬೈಬಲ್ಲಿನ ಹಳೆಯ ಒಡಂಬಡಿಕೆಯ ಐದು ಕಾಂಡಗಳ ರಚನೆಕಾರ ಇವನೇ. ವೇದಗಳಂತೆಯೇ ಬೈಬಲ್ ಕೂಡಾ ಒಬ್ಬರಿಂದ ಬರೆಯಲ್ಪಟ್ಟಿಲ್ಲ. ದಾರ್ಶನಿಕರಾದ 40 ಜನ ಗ್ರಂಥಕಾರರು ಬೈಬಲನ್ನು ರಚನೆ ಮಾಡಿದ್ದು, ಅವರ ಚಿಂತನೆಗಳಿಗೆ ಮೂಲಾಧಾರ ಮೋಜಿಸ್ ಬರೆದ ಈ ಐದು ಕಾಂಡಗಳೆಂದು ಹೇಳಲಾಗುತ್ತದೆ. ಕೃತಿ ವಿಮರ್ಶನಾಕಾರರು ಕು.ದೇವಿಂದ್ರಪ್ಪ ಎಂ., ರಶ್ಮೀ ಜಿ.ಎಂ, ಸಂಶೋಧನಾರ್ಥಿಗಳು ಮತ್ತು ಡಾ|| ರವೀಂದ್ರ ಡಿ ಗಡ್ಕರ್, ಪ್ರಾದ್ಯಾಪಕರು ಮತ್ತು ಮಾರ್ಗದರ್ಶಕರು, ಸಮಾಜಕಾರ್ಯ ಅಧ್ಯಯನ ವಿಭಾಗ, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ, ಶಿವಮೊಗ್ಗ. ವೃತ್ತಿ ಸಮಾಜಕಾರ್ಯದ ಆರಂಭವು, ವಿದೇಶದಿಂದ ಪ್ರಾರಂಭವಾಗಿ ನಮ್ಮ ದೇಶಕ್ಕೆ ಬರಲು ಸುಮಾರು 38 ವರ್ಷಗಳೇ ಬೇಕಾಯಿತು. ಪದವಿ ಹಂತದಿಂದ ಆರಂಭಿಸಿದ ಶಿಕ್ಷಣ ಸಂಶೋಧನೆವರೆಗೂ ತಲುಪಿತು. ದಶಕಗಳು ಕಳೆದಂತೆ, ಸಮಾಜಕಾರ್ಯದ ಶಿಕ್ಷಣ ಕೇಂದ್ರಗಳ ವ್ಯಾಪ್ತಿ ವಿಸ್ತರಿಸುತ್ತ ಅದರ ಬೇಡಿಕೆ ಕೂಡ ಹೆಚ್ಚಿಸಿಕೊಂಡಿತು. ಈ ಕೃತಿಯ ಲೇಖಕರು ವ್ಯಕ್ತಿ ಹಾಗೂ ಕುಟುಂಬಗಳೊಡನೆ ಕಾರ್ಯನಿರ್ವಹಿಸುವಾಗ ಸಮಾಜಕಾರ್ಯಕರ್ತರ ಕಾರ್ಯದಕ್ಷತೆಯನ್ನು ಹಾಗೂ ಈ ಕೃತಿಯ ಮುಖ್ಯ ಶೀರ್ಷಿಕೆಯ ಪರಿಕಲ್ಪನೆಗಳನ್ನು ಹಂತ ಹಂತವಾಗಿ ಓದುಗರಿಗೆ ಅರ್ಥೈಸಲು ಹಲವಾರು ಸಮಾಜಕಾರ್ಯ ವಿದ್ವಾಂಸರ ವ್ಯಾಖ್ಯಾನವನ್ನು ಮತ್ತು ವ್ಯಕ್ತಿ ಹಾಗೂ ಕುಟುಂಬಗಳ ಸಮಾಜಕಾರ್ಯ ಸಾಹಿತ್ಯವನ್ನು ಮತ್ತು ವಚನ ಸಾಹಿತ್ಯ, ದಾಸ ಸಾಹಿತ್ಯ, ಜಾನಪದ ಸಾಹಿತ್ಯ ಹಾಗೂ ಕಾವ್ಯಗಳೂಂದಿಗೆ ಅನುಸಂಧಾನಿಸುತ್ತಾ ವ್ಯಕ್ತಿ ಹಾಗೂ ಕುಟುಂಬಗಳೊಡನೆ ಸಮಾಜಕಾರ್ಯ ಎಂಬ ಶೀರ್ಷಿಕೆಯಡಿ ಈ ಕೃತಿ ರಚಿಸಿದ್ದಾರೆ.
ಕಣ್ಣಾರೆ ಕಂಡರೂ ಪ್ರಮಾಣಿಸಿ ನೋಡು ಎಂಬ ನಾಣ್ಣುಡಿ ಸರ್ವಕಾಲಕ್ಕೂ ಪ್ರಸ್ತುತ. ಆದರೆ ನಮ್ಮ ತಿಳಿವಳಿಕೆಯ ಚೌಕಟ್ಟಿನಲ್ಲಿ ಅದೆಷ್ಟೋ ವಿಚಾರಗಳನ್ನು ಗಮನಿಸಿದ ಕೂಡಲೇ ಅದನ್ನೇ ವಾಸ್ತವವೆಂದು ತಿಳಿದು ವಿವೇಚನಾರಹಿತವಾಗಿ ಒಂದು ನಿರ್ದಿಷ್ಟ ತೀರ್ಮಾನಕ್ಕೆ ಬಂದುಬಿಡುತ್ತೇವೆ. ಇದು ತಪ್ಪು ಎಂಬ ಅರಿವು ನಮಗೆ ಇರುವುದೇ ಇಲ್ಲ. ಕಾಲಾನಂತರ ನಮ್ಮ ತೀರ್ಮಾನ ತಪ್ಪು ಎಂದು ಅರಿತಾಗ ಪಶ್ಚಾತ್ತಾಪ ಪಡುತ್ತೇವೆ. ಕಣ್ಮುಂದೆ ಕಾಣುವುದೇ ವಾಸ್ತವ ಹಾಗೂ ನಮಗೆ ತಿಳಿದಿರುವುದೇ ಸತ್ಯ ಎಂಬುದನ್ನು ಬಲವಾಗಿ ನಂಬುವ ಮನುಷ್ಯ ಪೂರ್ವಾಗ್ರಹ ಪೀಡನೆಗೆ ಒಳಗಾಗಿ ಹಲವಾರು ಸೂಕ್ಷ್ಮ ವಿಚಾರಗಳನ್ನು ಕಡೆಗಣಿಸುತ್ತಾನೆ. ನಾಗರಿಕ ಎಂದು ಬಿಂಬಿಸಿಕೊಳ್ಳುವ ಅಕ್ಷರಸ್ಥ ಮಾನವ ತನ್ನನ್ನು ತಾನು ವಿದ್ಯಾವಂತನೆಂದು ಬಿಂಬಿಸಿಕೊಳ್ಳುವ ಭರದಲ್ಲಿ ವಾಸ್ತವಾಂಶಗಳನ್ನು ವಿಶ್ಲೇಷಿಸುವ ಗೋಜಿಗೆ ಹೋಗುತ್ತಿಲ್ಲ. ಇದರ ಪ್ರತಿಫಲವೇ ತಪ್ಪುಗ್ರಹಿಕೆ. ಅಂತಹ ಒಂದು ಸಂದರ್ಭವನ್ನು ನಿಮ್ಮ ಮುಂದಿಡುವ ಸಣ್ಣ ಪ್ರಯತ್ನವೇ ಅಪಾರ್ಥ.
ಚಾಣಕ್ಯನ ನೀತಿಶಾಸ್ತ್ರ - ಅರ್ಥಶಾಸ್ತ್ರ
ಮಾನವನ ಬದುಕಿಗೆ ಉಪಯುಕ್ತವಾಗುವ ನೀತಿಸೂತ್ರಗಳನ್ನು ವಿವರಿಸುವ ಇನ್ನೊಂದು ಗ್ರಂಥವೆಂದರೆ ಚಾಣಕ್ಯನ (ವಿಷ್ಣುಶರ್ಮ, ಕೌಟಿಲ್ಯ) ನೀತಿಶಾಸ್ತ್ರ. ಚಾಣಕ್ಯ ಅದ್ವಿತೀಯ ದೇಶಭಕ್ತ, ಅಪ್ರತಿಮ ಸಂಘಟಕ. ಸುಖ ಲೋಲುಪತೆಯಲ್ಲಿ ತಮ್ಮ ರಾಜಧರ್ಮ (ಕರ್ತವ್ಯ)ವನ್ನು ಮರೆತ ಮಗಧ ಸಾಮ್ರಾಜ್ಯವನ್ನು ಆಳುತ್ತಿದ್ದ ನವನಂದರನ್ನು ನಿಗ್ರಹಿಸಿ, ಅದೇ ವಂಶದ ಕುಡಿಯಾದ ಚಂದ್ರಗುಪ್ತನನ್ನು ಸಾಮ್ರಾಜ್ಯಾಧಿಪತಿಯನ್ನಾಗಿ ಮಾಡಿ, ಧರ್ಮ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿದ ಧೀರ. ವಾಸುದೇವ ಶರ್ಮಾ ಎನ್.ವಿ. 2 ಸೆಪ್ಟೆಂಬರ್ 2018, ಬೆಂಗಳೂರು ತಾಂತ್ರಿಕ ವಿಚಾರಗಳನ್ನು ಕುರಿತು ಯಾವುದೇ ಭಾಷೆಯಲ್ಲಿ ಸರಳವಾಗಿ ಹೇಳುವುದು ಅಷ್ಟು ಸುಲಭವಲ್ಲ. ಅದು ವೈದ್ಯಕೀಯವಿರಬಹುದು, ಇಂಜಿನಿಯರಿಂಗ್, ವಿಜ್ಞಾನ, ಮಾನವಿಕ ಶಾಸ್ತ್ರಗಳು ಅಥವಾ ಪ್ರದರ್ಶನ ಕಲೆಗಳೇ ಆಗಿರಬಹುದು. ಮೂಲತಃ ಅಂತಹ ತಾಂತ್ರಿಕ ವಿಷಯ, ವಿಚಾರಗಳನ್ನು ವಿವರಿಸಲು ಹೊರಟಾಗ, ಅದರಲ್ಲೂ ಸಾಮಾನ್ಯವಾಗಿ ಆಯಾ ಶಾಸ್ತ್ರ, ಅಧ್ಯಯನಗಳನ್ನು ಕುರಿತು ಆಯಾ ನಿರ್ದಿಷ್ಟ ಭಾಷೆಯಲ್ಲಿ, ಪರಿಸರದಲ್ಲಿ ಅಧ್ಯಯನ, ಶಿಕ್ಷಣ ಹೆಚ್ಚು ಆಗದಿದ್ದಾಗ ಎರಡು ರೀತಿಯ ತೊಡಕುಗಳನ್ನು ಎದುರಿಸಬೇಕಾಗುತ್ತದೆ. ಮೊದಲನೆಯದು ಪರಿಕಲ್ಪನೆಗಳನ್ನು ವಿವರಿಸಲು ನಮ್ಮ ಸುತ್ತಮುತ್ತಲಿನ ಪರಿಸರದಿಂದ ಉದಾಹರಣೆ, ಅನುಭವಗಳನ್ನು ಹೇಗೆ ಮತ್ತು ಯಾವುದರಿಂದ ಹೆಕ್ಕುವುದು ಮತ್ತು ಎರಡನೆಯದು, ಅವುಗಳನ್ನು ಅಭಿವ್ಯಕ್ತಿಪಡಿಸಲು ಬೇಕಾದ ಭಾಷೆ ಮತ್ತು ಪದ ಸಂಪತ್ತನ್ನು ಎಲ್ಲಿಂದ ತೆಗೆದುಕೊಳ್ಳುವುದು.
ನವೆಂಬರ್ ಎಂದಾಕ್ಷಣ ನಮಗೆ ಮನಸ್ಸಿಗೆ ಬರುವುದು ಮಕ್ಕಳು ಮತ್ತು ಮಕ್ಕಳ ದಿನಾಚರಣೆ. ಮಕ್ಕಳ ದಿನಾಚರಣೆಯಲ್ಲಿ ಮಕ್ಕಳಿಗೆ ಪುಸ್ತಕವೋ, ಪೆನ್ನೋ, ಸಿಹಿತಿಂಡಿಗಳೋ ಎನೋ ಒಂದು ಕೊಟ್ಟು ಜೊತೆಗೆ ಒಂದಷ್ಟು ಭಾಷಣ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಮಕ್ಕಳನ್ನು ಮನೆಗೆ ಕಳುಹಿಸುವುದು ನಮ್ಮಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ಇದನ್ನೆ ನಾವು ವರ್ಷಪೂರ್ತಿ ಮಕ್ಕಳಿಗಾಗಿ ನಾವು ಹಾಗೆ ಮಾಡಿದೆವು, ಹೀಗೆ ಮಾಡಿದೆವು ಎಂದುಕೊಳ್ಳುವವರು ಕಡಿಮೆಯೇನಲ್ಲ. ನೀವು ಮಕ್ಕಳ ದಿನಾಚರಣೆಗೆ ಹೋಗುವ ಮುಂಚೆ ಇದನ್ನು ಸ್ವಲ್ಪ ತಿಳಿದುಕೊಳ್ಳಿ...
ಪೀಠಿಕೆ :
ಲೋಕಾ: ಸಮಸ್ತಾ: ಸುಖಿನೋ ಭವಂತು ಎಂಬ ವೇದೋಕ್ತಿ ನಮ್ಮ ಋಷಿ ಮುನಿಗಳ ಚಿಂತನೆ ಚರಾಚರ ಪ್ರಕೃತಿಯ ಭವ್ಯ ಕಲ್ಪನೆಗೆ ಅದ್ಬುತ ಸಾಕ್ಷಿ, ಅವರು ಪ್ರಕೃತಿಯೊಡನೆ ಸಾಮರಸ್ಯದಿಂದ ಬದುಕಿ, ಸತ್ಯಾನ್ವೇಷಣದಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಿದ್ದರು. ಪ್ರಕೃತಿಯೆಂದರೆ ಅಸಂಖ್ಯಾತ ವೈವಿಧ್ಯತೆಯ ದೃಷ್ಠಿ; ಗೋಚರ, ಅಗೋಚರ, ಸಸ್ಯ ಮತ್ತು ಪ್ರಾಣಿ ಜೀವರಾಶಿಗಳಿಂದ ಕೂಡಿದ ಕಾಡು, ನದಿ, ಭಾವಿ, ಸರೋವರ, ಸಾಗರಗಳಲ್ಲಿ ಕಾಣುವ ಜೀವಕೋಟಿಯ ಸಂಜೀವಿನಿ, ನೀರು ಹಾಗೂ ಇವುಗಳನ್ನು ಆವರಿಸಿದ ಜೀವನದ ಉಸಿರು ಗಾಳಿ, ಶಕ್ತಿ ಮೂಲ ಸೂರ್ಯನನ್ನೊಳಗೊಂಡ ಭೂಮಿ, ಇಂತಹ ಭೂಮಂಡಲ ಇಂದು ಬರಿದಾಗುತ್ತಿದೆ. ಗ್ರಾಮೀಣ ಭಾಗಗಳು ನಗರಗಳಾಗುತ್ತಿವೆ. ನಗರಗಳು ಬದಲಾವಣೆಯ ಶರವೇದದಲ್ಲಿ ತಮ್ಮ ಮೂಲ ನೆಲೆಯನ್ನು ಕಳೆದುಕೊಳ್ಳುತ್ತಿದೆ, ಅಂತಹ ನಗರಗಳಲ್ಲಿ ಬೆಂಗಳೂರು ಸಹ ಒಂದು. ಭಾರತೀಯ ಸಮುದಾಯ ಸಂಘಟನೆಯ ಉಗಮವನ್ನು ವೇದಪೂರ್ವ ಕಾಲದ ಆರ್ಯರ ಜೀವನಪದ್ಧತಿಯಲ್ಲಿಯೇ ಗುರುತಿಸಬಹುದಾಗಿದೆ. ವೇದಪೂರ್ವದಲ್ಲಿ, ಇಡೀ ಭಾರತದೇಶ (ಅಖಂಡ ಭಾರತ)ದಲ್ಲಿ ಸಾವಿರಾರು ಜನಾಂಗಗಳು, ಬುಡಕಟ್ಟುಗಳು, ಸಮುದಾಯಗಳು, ಪಂಗಡಗಳು, ಕುಲಗಳು ಎಂದು ಕರೆಯಲ್ಪಡುವ ಗುಂಪುಗಳು ಅಸ್ಥಿತ್ವದಲ್ಲಿದ್ದವು ಎಂಬ ಅಂಶವನ್ನು ಚರಿತ್ರೆ ದಾಖಲಿಸಿದೆ. ಜನರು ಇಂತಹ ಚಿಕ್ಕ ಚಿಕ್ಕ ಪ್ರಾಚೀನ ಸಮುದಾಯಗಳಲ್ಲಿ ಸಹಜೀವನ ಮಾಡುತ್ತಿದ್ದರು.1 ವೇದಪೂರ್ವ ಕಾಲದ ಸಮುದಾಯಗಳ ಸಹಜೀವನ ಮತ್ತು ಸಂಘಟನೆಯ ಅಂಶಗಳನ್ನು ವಸ್ತುನಿಷ್ಠವಾಗಿ ಅರ್ಥಮಾಡಿಕೊಳ್ಳಬೇಕೆಂದರೆ, ಅವರ ಯಜ್ಞ, ಸತ್ರ, ಕ್ರತು, ದಾನ ಮುಂತಾದ ಶಬ್ದಗಳ, ಪರಿಕಲ್ಪನೆಗಳ, ಪದ್ಧತಿಗಳ ಹಾಗೂ ಮೌಲ್ಯಗಳ ಬಗ್ಗೆ ತಿಳಿದುಕೊಳ್ಳಬೇಕು.
ಪೀಠಿಕೆ:
ಭಾರತೀಯ ಬುಡಕಟ್ಟು ಸಮುದಾಯಗಳು ಇಂದು ಕವಲುದಾರಿಯಲ್ಲಿವೆ. ಬುಡಕಟ್ಟು ಜನರು ತಮ್ಮ ಸಮಾಜದ ಅರಿವು ಮತ್ತು ಸಾಂಸ್ಕೃತಿಕ ಸಮನ್ವಯದ ನಡುವೆ ಉಭಯ ಸಂಕಟಕ್ಕೊಳಗಾಗಿದ್ದಾರೆ. ತಮ್ಮ ಸಂಸ್ಕೃತಿಯ ಮೇಲೆ ಪರಕೀಯ ಸಂಸ್ಕೃತಿಯ ಒತ್ತಡಗಳಿಂದ ರಕ್ಷಿಸಿಕೊಳ್ಳುವ ಸಮಸ್ಯೆ ಒಂದು ಕಡೆಯಾದರೆ, ಇವರು ತಮ್ಮನ್ನು ತಾವು ಭಾರತೀಯ ಸಮಾಜದ ಮುಖ್ಯವಾಹಿನಿಯಲ್ಲಿ ಒಗ್ಗೂಡುವಿಕೆಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಮತ್ತೊಂದು ಕಡೆಯಾಗಿದೆ. ಬುಡಕಟ್ಟು ಜನರಿಗೆ ರಾಷ್ಟ್ರೀಯ ಮುಖ್ಯವಾಹಿನಿ ಎಂದರೇನು? ಹಿಂದೂ ಮುಖ್ಯವಾಹಿನಿ ಎಂದರೇನು? ಎಂಬ ಬಗ್ಗೆಯೇ ಗೊಂದಲವಿದೆ. ಭಾರತದ ಸಂವಿಧಾನದ ಪ್ರಕಾರ ಧರ್ಮನಿರಪೇಕ್ಷತೆಯು ಮುಖ್ಯವಾಹಿನಿಯಾದರೆ ಬುಡಕಟ್ಟು ಜನರ ಪೌರಜೀವನ ಏನಾಗಬಹುದು? ಬುಡಕಟ್ಟು ಜನರ ಪರಂಪರೆ ಪದ್ಧತಿಗಳು, ನಂಬಿಕೆಗಳು ಅವರದೇ ಆದ ವಿಧಿವಿಧಾನಗಳಿಂದ ಕೂಡಿದ ಜೀವನ ಶೈಲಿಯನ್ನೇ ತ್ಯಜಿಸಿ, ಈ ದೇಶದ ವಿಭಿನ್ನ ಸಂಸ್ಕೃತಿಗಳೊಡನೆ ಏಕೀಕರಣಗೊಂಡರೆ ಇವರು ತಮ್ಮ ಅನನ್ಯತೆಯನ್ನು ತಮ್ಮತನವನ್ನು ಕಳೆದುಕೊಳ್ಳಬೇಕಾಗುತ್ತದೆ. ಇಂತಹ ಪರಿಸ್ಥಿತಿಗಳನ್ನು ಎದುರಿಸುತ್ತಿರುವ ಬುಡಕಟ್ಟು ಜನರಲ್ಲಿ ಹಲವಾರು ಸಂದಿಗ್ಧತೆಗಳು ಜಿಜ್ಞಾಸೆಗಳು ಉಂಟಾಗಿ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಜೊತೆಗೆ ಬದಲಾಗುತ್ತಿರುವ ಆರ್ಥಿಕ ಮತ್ತು ಸಾಮಾಜಿಕ-ರಾಜಕೀಯ ವ್ಯವಸ್ಥೆಯಲ್ಲಿ ಸಾಮಾನ್ಯ ಉತ್ಪಾದನಾ ಸಂಘಟನೆ ಮತ್ತಿತರ ಪ್ರಕ್ರಿಯೆಗಳೊಂದಿಗೆ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಸಾಂವಿಧಾನಿಕವಾಗಿ ಬದಲಾದ ಜಾತ್ಯಾತೀತ ಪ್ರಜಾಪ್ರಭುತ್ವ ವ್ಯವಸ್ಥೆಯ ಚೌಕಟ್ಟಿನಲ್ಲಿಯೂ ಭಾಗವಹಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಬುಡಕಟ್ಟುಗಳ ಸಮಾಜೋ-ಸಾಂಸ್ಕೃತಿಕ ಜೀವನದ ಮೇಲೆ ಅನ್ಯ ಸಂಸ್ಕೃತಿಗಳ ಪ್ರಭಾವ ಮತ್ತು ಪರಿಣಾಮಗಳು ಜಾಗತೀಕರಣ ಪ್ರಕ್ರಿಯೆ ಮೂಲಕ ಹೇಗೆ ಕಾರ್ಯೋನ್ಮುಖವಾಗುತ್ತಿವೆ ಮತ್ತು ಕರ್ನಾಟಕದ ಬುಡಕಟ್ಟು ಸಮುದಾಯಗಳು ಪ್ರಸ್ತುತತೆಯಲ್ಲಿ ಎತ್ತ ಸಾಗುತ್ತಿವೆ? ಇವುಗಳ ಭವಿಷ್ಯದ ದಿಕ್ಕುಗಳಾವುವು? ಎಂಬುದನ್ನು ಕುರಿತಾದ ಸೂಕ್ಷ್ಮ ಮತ್ತು ಸಮಗ್ರ ಅಧ್ಯಯನಗಳ ಅವಶ್ಯಕತೆ ಇರುವುದರಿಂದ ಪ್ರಸ್ತುತ ಅಧ್ಯಯನದಲ್ಲಿ ಇಂತಹ ಒಂದು ಪ್ರಯತ್ನ ಮಾಡಲಾಗಿದೆ. ಹಸಿವು ಜಗತ್ತಿನ ಸಕಲ ಜೀವರಾಶಿಗಳು ಜೀವನ ಪರ್ಯಂತ ನಿರಂತರವಾಗಿ ಅನುಭವಿಸುವ ಒಂದು ಮನೋದೈಹಿಕ ಸಂಸ್ಥಿತಿ. ಹಸಿವು ಆಹಾರ ಬೇಕೆನ್ನುವುದರ ಸೂಚನೆ. ಆಹಾರ ಜೀವನದ ಬಹುಮುಖ್ಯ ಅವಶ್ಯಕತೆ. ಆಹಾರ ಶಕ್ತಿಯ ಮೂಲ. ಜೀವವಿರುವ ಪ್ರಾಣಿಗಳೆಲ್ಲವೂ ಸದಾ ಕಾಲ ಕ್ರಿಯಾನಿರತವಾಗಿರುತ್ತವೆ. ಎಚ್ಚರವಿರಲಿ, ಇಲ್ಲದಿರಲಿ, ಏನಾದರೂ ಮಾಡುತ್ತಲೇ ಇರುತ್ತವೆ. ನೀವು ವಿಶ್ರಾಂತ ಸ್ಥಿತಿಯಲ್ಲಿರುವಾಗಲೂ ಕಾರ್ಯನಿರತರಾಗಿರುತ್ತೀರಿ. ನಿಮ್ಮ ದೇಹದಲ್ಲಿ ಹಲವಾರು ಕ್ರಿಯೆಗಳು ನಡೆಯುತ್ತಿರುತ್ತವೆ. ನೀವು ಉಸಿರಾಡುತ್ತಿರುವಿರಿ; ರಕ್ತ ಪರಿಚಲನೆ ನಡೆಯುತ್ತಿರುತ್ತದೆ; ಆಹಾರ ಜೀರ್ಣವಾಗುತ್ತಿರುತ್ತದೆ. ನೀವು ಮಾನಸಿಕವಾಗಿ ಏನೋ ಆಲೋಚಿಸುತ್ತಿರಬಹುದು. ನಿದ್ರೆ ಮಾಡುವಾಗ ಕನಸು ಕಾಣುತ್ತಿರಬಹುದು. ಇವೆಲ್ಲದರಲ್ಲೂ ಶಕ್ತಿ ವ್ಯಯವಾಗುತ್ತಿರುತ್ತದೆ.
``ಸಂಘಟನೆ ಯಾವುದೇ ಮನುಷ್ಯ ಸಮಾಜದ ಒಂದು ಅವಿಭಾಜ್ಯ ಅಂಗ.1 ಸಂಘಟನೆ ಮನುಷ್ಯ ಸಮಾಜದಷ್ಟೇ ಹಳೆಯದು. ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು (ಸಂಪುಟ-8, ಪುಟ-8211) ಸಂಘಟನೆ ಶಬ್ದಕ್ಕೆ ಹೊಂದಿಸುವಿಕೆ, ಜೋಡಿಸುವಿಕೆ, ಸಂಯೋಜಿಸುವಿಕೆ ಎಂಬ ಅರ್ಥಗಳನ್ನು ಕೊಟ್ಟಿದೆ. ಒಟ್ಟುಗೂಡಿಸುವಿಕೆ, ವ್ಯವಸ್ಥೆಗೊಳಿಸುವಿಕೆ ಮುಂತಾದ ಶಬ್ದಗಳೂ ಇದಕ್ಕೆ ಹತ್ತಿರದ ಅರ್ಥವನ್ನು ಕೊಡುವ ಶಬ್ದಗಳಾಗಿದೆ. ಈ ಹಿನ್ನೆಲೆಯಲ್ಲಿ ಸಾಮಾನ್ಯ ಅರ್ಥದಲ್ಲಿ ಯಾವುದೇ ಸಮುದಾಯದಲ್ಲಿ, ಸಂಬಂಧಪಟ್ಟ ವ್ಯಕ್ತಿಗಳು, ಒಂದು ಅಥವಾ ಅದಕ್ಕಿಂತ ಹೆಚ್ಚು ಉದ್ದೇಶಗಳನ್ನಿಟ್ಟುಕೊಂಡು, ಆ ಉದ್ದೇಶಗಳನ್ನು ಈಡೇರಿಸಿಕೊಳ್ಳುವ ಸಲುವಾಗಿ ಒಂದುಗೂಡಿ ಅವಶ್ಯ ಕ್ರಮಗಳನ್ನು ಕೈಕೊಳ್ಳುವುದಕ್ಕೆ ಸಂಘಟನೆ ಎಂದು ಕರೆಯಬಹುದಾಗಿದೆ. ಚರಿತ್ರೆಯ ಉದ್ದಕ್ಕೂ ಜಗತ್ತಿನಾದ್ಯಂತ, ಸಾವಿರಾರು ಸಮುದಾಯಗಳು, ತಮ್ಮ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಈ ರೀತಿ ಸಂಘಟನೆಯಾಗಿರುವುದನ್ನು ನೋಡುತ್ತೇವೆ.
ಈ ಮೇಲೆ ಗ್ರಾಮೀಣ ಸಮುದಾಯಗಳ ಸಮಸ್ಯೆಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಿದ್ದೇವೆ, ಅವುಗಳಲ್ಲಿ ಲಿಂಗ ತಾರತಮ್ಯ, ನಿರಕ್ಷರತೆ, ಆರೋಗ್ಯ, ವಸತಿ, ಜನಸಂಖ್ಯೆ, ಬಾಲಕಾರ್ಮಿಕರು, ಜೀತದಾಳುಗಳು, ಅಸ್ಪೃಶ್ಯತೆ, ಮದ್ಯಪಾನ, ನಿರುದ್ಯೋಗ, ಮೂಢನಂಬಿಕೆ, ನಾಗರೀಕ ಸೌಲಭ್ಯಗಳ ಕೊರತೆ ಮುಂತಾದ ಸಮಸ್ಯೆಗಳು ನಗರ ಸಮುದಾಯಗಳಿಗೂ ಅನ್ವಯಿಸಬಹುದಾಗಿದೆ. ಕೆಲವು ಸಮಸ್ಯೆಗಳು ಕೇವಲ ಗ್ರಾಮೀಣ ಸಮುದಾಯಗಳನ್ನಷ್ಟೇ ಕಾಡಿದರೆ, ಇನ್ನೂ ಕೆಲವು ಹೆಚ್ಚಾಗಿ ನಗರ ಸಮುದಾಯಗಳನ್ನು ಪೀಡಿಸುತ್ತಿವೆ. ಕೃಷಿ, ಕೃಷಿ ಸಂಬಂಧಿ ವೃತ್ತಿಗಳು, ಗೃಹಕೈಗಾರಿಕಾ ಕ್ಷೇತ್ರಗಳಲ್ಲಿನ ಸಮಸ್ಯೆಗಳು ಹೆಚ್ಚಾಗಿ ಗ್ರಾಮೀಣ ಸಮುದಾಯದ ಸಮಸ್ಯೆಗಳು, ಅದರಂತೆಯೇ ಬೃಹತ್ ಕೈಗಾರಿಕೆ, ಮಧ್ಯಮ ಮತ್ತು ಸಮ ಪ್ರಮಾಣದ ಕೈಗಾರಿಕೆ, ನಿರುದ್ಯೋಗ, ಸೂಕ್ತ ತಾಂತ್ರಿಕ ಶಿಕ್ಷಣ, ವಾಹನ ಸೌಕರ್ಯ, ಕೊಳಗೇರಿಗಳು, ಸಂಚಾರ ಮುಂತಾದ ಸಮಸ್ಯೆಗಳು ಅತೀವವಾಗಿ ನಗರ ಸಮುದಾಯಗಳನ್ನು ಹಿಂಸಿಸುತ್ತಿವೆ. ನಗರ ಸಮುದಾಯಗಳ ಸಮಸ್ಯೆಗಳನ್ನು ನಗರ ಸಮುದಾಯಗಳ ವೈಲಕ್ಷಣಗಳ ಹಿನ್ನೆಲೆಯಲ್ಲಿ ಗ್ರಹಿಸಬೇಕಾಗುತ್ತದೆ.
ಪೀಠಿಕೆ
ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ವಿಶಿಷ್ಟ ಸ್ಥಾನವಿದೆ. ನಿನ್ನ ಶಕ್ತಿಯ ಬಲದಿಂದಲೇ ವ್ಯಕ್ತಿಯಾದೆನು ನಾನು ಈ ಲೋಕದಲ್ಲಿ ಎಂಬ ರಾಷ್ಟ್ರಕವಿ ಡಾ. ಜಿ. ಎಸ್. ಶಿವರುದ್ರಪ್ಪರ ಹೆಣ್ಣಿನ ಮಹತ್ವವನ್ನು ಸಾರುವ ಪದ್ಯವನ್ನು ಉಲ್ಲೇಖಿಸುತ್ತಾ ಸುಶಿಕ್ಷಿತ ಗೃಹಿಣಿ, ಉದ್ಯೋಗಸ್ಥ ಮಹಿಳೆ ದೇಶದ ಆಸ್ತಿ ಮಾತ್ರವಲ್ಲ ಹೆಮ್ಮೆ ಕೂಡ. ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ ಎಂದೂ ಹೆಣ್ಣನ್ನು ಕೊಂಡಾಡಲಾಗಿದೆ. ಇನ್ನೂ ಮುಂದುವರೆದು ಮಾತೆಯಿಂ ಹಿತವರಿಲ್ಲ ಕೋತಿಯಿಂ ಮರುಳಿಲ್ಲ ಜ್ಯೋತಿಯಿಂದಧಿಕ ಬೆಳಕಿಲ್ಲ ದೈವವು ಜಾತನಿಂದಲ್ಲ ಸರ್ವಜ್ಞ ಎಂಬ ಸರ್ವಜ್ಞನ ವಚನದಂತೆ ಹೆಣ್ಣು ಮಗಳಾಗಿ, ಸೋದರಿಯಾಗಿ, ಮಡದಿಯಾಗಿ, ತಾಯಿಯಾಗಿ ಕುಟುಂಬದಲ್ಲಿನ ಅವಿಭಾಜ್ಯ ಅಂಗವಾಗಿದ್ದಾಳೆ. ಧಾರ್ಮಿಕ, ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಹಿತ್ಯ ಕ್ಷೇತ್ರಗಳಲ್ಲಿ ಮಾತ್ರವಲ್ಲದೇ ಸಾಹಸ, ಕಲೆ, ವಿಜ್ಞಾನ, ಕ್ರೀಡೆ, ಸಂಗೀತ.... ಹೀಗೆ ಸರ್ವ ಕ್ಷೇತ್ರಗಳನ್ನೂ ಮಹಿಳೆ ಪ್ರತಿನಿಧಿಸಿದ್ದಾಳೆ. ಇತ್ತೀಚಿನ ದಿನಗಳಲ್ಲಿ ಕೈಗಾರಿಕೋದ್ಯಮದಲ್ಲಿ ಪ್ರಗತಿಯನ್ನು ಸಾಧಿಸಲು ಕೆಲವೊಂದು ಅಂಶಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಯಾವುದೇ ಒಂದು ಸಂಸ್ಥೆ ಮುನ್ನಡೆಯಬೇಕು, ಪ್ರಗತಿಯನ್ನು ಸಾಧಿಸಬೇಕು ಎಂದಾದಲ್ಲಿ ಅದಕ್ಕೆ ಆರು ಅಂಶಗಳು ಅತಿಮುಖ್ಯ ಹಾಗೂ ಅತ್ಯವಶ್ಯಕ. ಅವುಗಳೆಂದರೆ ಮಾನವ ಸಂಪನ್ಮೂಲ, ಆಡಳಿತ ವ್ಯವಸ್ಥೆ, ಬಂಡವಾಳ, ಕಚ್ಚಾ ಪದಾರ್ಥ, ಯಂತ್ರಗಳು ಮತ್ತು ಮಾರುಕಟ್ಟೆ. ಈ ಆರರಲ್ಲಿ ಮಾನವ ಸಂಪನ್ಮೂಲ ಹಾಗೂ ಆಡಳಿತ ವ್ಯವಸ್ಥೆ ಅತಿ ಮುಖ್ಯವಾದ ಅಂಶಗಳು. ಇವರಿಬ್ಬರ ಸಂಬಂಧ ಪತಿ-ಪತ್ನಿಯರ ಬಾಂಧವ್ಯದ ಹಾಗೆ.
10. ಆರೋಗ್ಯ : ಗ್ರಾಮೀಣ ಸಮುದಾಯಗಳಲ್ಲಿರುವ ಪ್ರಚಲಿತ ಪ್ರಮುಖ ಸಮಸ್ಯೆಗಳಲ್ಲಿ ಒಂದು ಅನಾರೋಗ್ಯ. ಮನುಷ್ಯರ ಜೀವನದಲ್ಲಿ ಆರೋಗ್ಯ ಒಂದು ಮಹತ್ವದ ಅಂಶ. ಒಂದು ಸಮುದಾಯ ಪ್ರಗತಿಯನ್ನು ಕಾಣಬೇಕಾದರೆ, ಶಾಂತಿ ಸಮಾಧಾನದಿಂದ ಇರಬೇಕಾದರೆ ಅಂತಹ ಸಮುದಾಯದ ಸದಸ್ಯರು ಆರೋಗ್ಯಪೂರ್ಣವಾಗಿರಬೇಕು. `ಆರೋಗ್ಯ ಶಬ್ದಕ್ಕೆ ಆಯುರ್ವೇದ, ಹೋಮಿಯೋಪತಿ, ಅಲೋಪತಿ, ಯನಾನಿ ಮುಂತಾದ ವೈದ್ಯಪದ್ಧತಿಗಳು ಬೇರೆ ಬೇರೆ ಅರ್ಥಗಳನ್ನು ಕೊಡುತ್ತವೆ. ಆರೋಗ್ಯ ಎಂದರೆ ರೋಗವಿಲ್ಲದಿರುವಿಕೆ ಎಂದು ಸರಳವಾಗಿ ಹೇಳಬಹುದಾದರೂ ಆಯುರ್ವೇದ ವಿಜ್ಞಾನದಲ್ಲಿ ಇದಕ್ಕೆ ಸಮಾನವಾಗಿ `ಸ್ವಾಸ್ಥ್ಯ ಶಬ್ದವನ್ನು ಉಪಯೋಗಿಸುತ್ತಾರೆ. ``ಸ್ವಾಸ್ಥ್ಯವನ್ನು ದೋಷ, ಧಾತು, ಮಲಗಳು ತಮ್ಮ ಪ್ರಾಕೃತಿಕ ಸ್ಥಿತಿಗತಿಗಳಲ್ಲಿ ಹಾಗೂ ಆತ್ಮ, ಮನಸ್ಸು, ಇಂದ್ರಿಯಗಳು ಪ್ರಸನ್ನಸ್ಥಿತಿಯಲ್ಲಿ ಇದ್ದು ತಮ್ಮ ತಮ್ಮ ಕಾರ್ಯಗಳನ್ನು ನಿರ್ವಹಿಸುತ್ತಿರುವ ಸ್ಥಿತಿ ಎಂದು ವ್ಯಾಖ್ಯಾನಿಸಿದ್ದಾರೆ.4 ವಿಶ್ವ ಆರೋಗ್ಯ ಸಂಸ್ಥೆ, ``ಆರೋಗ್ಯವೆಂದರೆ ಮಾನವನು ರೋಗರಹಿತನಾಗಿರುವುದಲ್ಲ, ಸಂಪೂರ್ಣ ದೈಹಿಕ, ಮಾನಸಿಕ ಹಾಗೂ ಸಾಮಾಜಿಕವಾಗಿ ಉತ್ತಮ ಸ್ಥಿತಿಯಲ್ಲಿ ಇರುವುದಾಗಿದೆ5 ಎಂದು ವ್ಯಾಖ್ಯಾನಿಸುತ್ತದೆ. ಆರೋಗ್ಯ ಎಂಬ ಪರಿಕಲ್ಪನೆ ನೈರ್ಮಲ್ಯವನ್ನೂ ಒಳಗೊಂಡಿದೆ. ಹಾಗಾಗಿ ಸಮುದಾಯದ ಪ್ರತಿಯೊಬ್ಬ ಸದಸ್ಯನೂ ತಾನು ದೈಹಿಕ, ಮಾನಸಿಕ ಹಾಗೂ ಸಾಮಾಜಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದು ತನ್ನ ಕುಟುಂಬದ ಹಾಗೂ ತನ್ನ ಸಮುದಾಯದ ಒಳಿತಿಗೆ ಶ್ರಮಿಸುವಂತಾಗಬೇಕು.
ದಲಿತರ ಸಬಲೀಕರಣಕ್ಕೆ ಪ್ರಸ್ತುತ ಮುಖ್ಯವಾಗಿ ಗುಣಮಟ್ಟದ ಶಿಕ್ಷಣ, ಉತ್ತಮ ಆರೋಗ್ಯ, ಆರ್ಥಿಕ ಭದ್ರತೆ, ರಾಜಕೀಯ ಭದ್ರತೆ, ಉದ್ಯೋಗ ಭದ್ರತೆಗಳನ್ನು ಒದಗಿಸುವುದು ಅತ್ಯಂತ ಅಗತ್ಯವಾಗಿದೆ.
ಪೀಠಿಕೆ ಪ್ರಜಾಪ್ರಭುತ್ವದ ಮೂಲ ಬೇರುಗಳಾದ ಪಂಚಾಯತಿರಾಜ್ ಸಂಸ್ಥೆಗಳು ಸ್ಥಳೀಯ ಜನರಿಗೆ ಒಂದು ವ್ಯವಸ್ಥೆಯಾಗಿದ್ದು, ಸ್ಥಳೀಯ ಜನರಿಗೆ ತಮ್ಮದೇ ಆದ ಹೊಣೆಗಾರಿಕೆಯನ್ನು ನಿರ್ವಹಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಇದರಿಂದ ಸ್ಥಳೀಯ ಜನರು ಕೂಡಾ ರಾಷ್ಟ್ರ-ರಾಜ್ಯದ ಆಗು-ಹೋಗುಗಳು, ಆಡಳಿತದ ರೀತಿ-ನೀತಿಗಳು, ಸರ್ಕಾರದ ರೀತಿ-ನೀತಿಗಳು ಹಾಗೂ ರಾಜಕೀಯ ಪ್ರಜ್ಞೆಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿದೆ. ಈ ಪಂಚಾಯತಿರಾಜ್‍ನ ಮುಖ್ಯ ಉದ್ದೇಶವು ಕೇವಲ ಕೆಲವೇ ವ್ಯಕ್ತಿಗಳಿಗೆ ಅಧಿಕಾರ ನೀಡುವುದಲ್ಲ. ಬದಲಿಗೆ ಸಮಾಜದ ಎಲ್ಲಾ ವರ್ಗದವರಿಗೆ ಅಧಿಕಾರವನ್ನು ನೀಡುವುದೇ ಆಗಿದೆ. ಇದರಿಂದ ಸಮಾಜದಲ್ಲಿ ಎಲ್ಲರಿಗೂ ಸಾಮಾಜಿಕ ನ್ಯಾಯವನ್ನು ಒದಗಿಸುವಂತೆ ಆಗುತ್ತದೆ. ಮನೆ, ಮನೆತನ, ಕುಟುಂಬ ಇತ್ಯಾದಿಗಳ ಬಗ್ಗೆ ನಮ್ಮಲ್ಲಿ ಇಂದು ಬಹಳವಾಗಿ ಚರ್ಚೆ, ಸಂವಾದಗಳು ಸಡೆಯುತ್ತಿವೆ. ಕೆಲವೆಡೆ ಚರ್ಚೆ-ಸಂವಾದಗಳು ಶಬ್ದರೂಪಕ್ಕಷ್ಟೇ ಸೀಮಿತವಾಗಿ ' ಇದೆಲ್ಲವೂ ಕಾಲದ ಪರಿಣಾಮ: ಕಾಲಾಯ ತಸ್ಮೈ ನಮಃ, ನಾವು ಏನನ್ನೂ ಮಾಡಲಾರೆವು, ಗಾಳಿ ಬಂದಂತೆ ತೂರಿಕೊ' ಎಂದು ಅಸಹಾಯಕತೆಯನ್ನು ತೋರಿಸಿ, ಎಂದಿನಂತೆ ತಮ್ಮ ಜೀವನ ನಡೆಸುವವರು ಬಹಳಷ್ಟು ಮಂದಿ ಇದ್ದರೆ, ಇನ್ನಷ್ಟು ಮಂದಿ ಇಂತಹ ಚಿಂತನೆಯನ್ನು ನಡೆಸದವರೂ ಇದ್ದಾರೆ. ಮತ್ತಷ್ಟು ಮಂದಿ 'ನಾವು ಯಾವ ಊರಿಗೆ ಹೋಗಬೇಕೆಂದು ನಿರ್ಧಾರವಾಗಿದೆ, ಅದಕ್ಕೆ ಆ ದಾರಿಯಲ್ಲಿ ಹೋಗದೆ, ಬೇರೊಂದು ದಾರಿ ಹಿಡಿದಿರುವುದಾದರೆ ಅದನ್ನು ಬಿಟ್ಟು, ಸರಿಯಾದ ದಾರಿಯನ್ನು ಆಶ್ರಯಿಸಬೇಕು' ಎಂದು ತಿಳಿದು, ಅದರಂತೆ ತಾವು ಕ್ರಮಿಸಿದ ದಾರಿಯಿಂದ ಹಿಂದಕ್ಕೆ ಬಂದು ಸರಿಯಾದ ದಾರಿಯಲ್ಲಿ ಪ್ರಯಾಣಿಸಲು ನಿಶ್ಚಯಿಸಿ, ಅದರಂತೆಯೇ ಮಾಡುತ್ತಾರೆ. ಅಂತಹವರನ್ನೇ ಯುಕ್ತ-ಅಯುಕ್ತ ವಿವೇಚನಶಕ್ತಿಯುಳ್ಳ ವಿವೇಕಿಗಳು ಎಂದು ಕರೆಯಲಾಗುತ್ತದೆ. ಇಂತಹ ವಿವೇಕವು ಪ್ರತಿಯೊಬ್ಬ ಮನುಷ್ಯನಿಗೂ, ಆತನು ಪ್ರವೇಶಿಸುವ ಎಲ್ಲ ಕ್ಷೇತ್ರಗಳಲ್ಲೂ (ಓದು, ಬರಹ, ಶಾಲೆ, ಮನೆಯ ನಿರ್ವಹಣೆ, ಕೃಷಿ, ಕಛೇರಿ, ಕಾರ್ಖಾನೆ, ಸಮಯದ ಸದ್ಬಳಕೆ, ಸಾಮಾಜಿಕ ಸಂಬಂಧ ಇತ್ಯಾದಿ) ಇರಬೇಕು. ಅಂತಹ ವಿವೇಕವಿಲ್ಲದೆ, ಒಟ್ಟಾರೆಯಾಗಿ ಹೇಗೋ ಜೀವನವನ್ನು ಸಾಗಿಸುತ್ತಿದ್ದೇವೆ ಎಂದುಕೊಳ್ಳುವ ಜನರನ್ನು ಕಠೋಪನಿಷತ್ತು 'ಅಂಧೇನೈವ ನೀಯಮಾನಾ ಯಥಾಂಧಾಃ (ಕುರುಡರು ಕುರುಡರಿಗೆ ದಾರಿ ತೋರಿಸಿದರೆ ಹೆಗೋ ಹಾಗೆ ಅವರು ದಾರಿ ತಪ್ಪುತ್ತಾರೆ) ಎಂದು ಎಚ್ಚರಿಸಿದೆ. ಇಂತಹ ವಿವೇಚನೆಯ ತಿಳುವಳಿಕೆಯನ್ನು ಹೊಂದಿದವನೇ ನಿಜವಾದ ಮಾನವ ಅಥವಾ ಮನುಷ್ಯ. 'ಮಾನವ' ಹಾಗೂ 'ಮನುಷ್ಯ' ಎಂಬ ಪದಗಳೇ 'ಮನ್' ಎಂಬ ಧಾತುವಿನಿಂದ ಹುಟ್ಟಿದೆ. ಇದರ ಅರ್ಥ ಜ್ಞಾನ ಅಥವಾ ತಿಳುವಳಿಕೆ. ಮನುಷ್ಯನ ದೇಹ ಇತರ ಚತುಷ್ಪಾದ ಪ್ರಾಣಿಗಳ ದೇಹದಂತೆ ಪಂಚಭೂತಗಳಿಂದಲೇ ಆಗಿದೆಯಾದ್ದರಿಂದ ಹಸಿವೆ, ಬಾಯಾರಿಕೆ, ನಿದ್ದೆ, ಕಾಮತೃಷೆ ಇತ್ಯಾದಿಗಳು ಸಹಜ ಆದರೆ ಇವುಗಳನ್ನು ತಣಿಸಿಕೊಳ್ಳುವಾಗ ಮನುಷ್ಯನು ಚತುಷ್ಪಾದ ಪ್ರಾಣಿಗಳಂತೆ ನಡೆದುಕೊಳ್ಳದೆ ಒಂದು ಸಭ್ಯಮಾರ್ಗವನ್ನು ಅನುಸರಿಸಬೇಕು. ಹಾಗೂ ತನ್ನ ಜೀವನವು ಕೇವಲ ಆಹಾರ, ನಿದ್ದೆ, ಭಯ, ಮೈಥನಗಳಿಗೆ ಸೀಮಿತವಲ್ಲ; ತನ್ನ ದೇಹದ ಅಂಗಗಳ ಪೈಕಿ ತಲೆಯೇ (ಮೆದುಳು, ಮನಸ್ಸು) ಮುಖ್ಯವಾದದ್ದು. ಉದರನಿಮಿತ್ತಂ ಬಹುಕೃತವೇಷಃ ಎಂದು ಆದಿ ಶಂಕರರು ಹೇಳಿದಂತೆ ಹೊಟ್ಟೆಪಾಡಿಗಾಗಿ ಮಾತ್ರ ವಿವಿಧ ವಿದ್ಯೆ, ವೃತ್ತಿ ಒಡೆದೆನೆಂದರೆ ಅದರಿಂದ ಮಾನವನ ನಿಜವಾದ ಗುರಿಯು ಸಾಧಿತವಾಗುವುದಿಲ್ಲ. ಮಾನವನ ಗುರುಯೆಂದರೆ ತನ್ನ ಬಗ್ಗೆ ತಾನು ತಿಳಿದುಕೊಳ್ಳುವುದು. ಇದನ್ನೇ 'ಆತ್ಮಜ್ಞಾನ ಎಂದು ನಮ್ಮ ಹಿರಿಯರು ಹೇಳಿದ್ದಾರೆ.
ಪ್ರಿಯ ಬಂಧುಗಳೇ,
ಹಿರಿಯವರಾದ ಡಾ.ದೊರೆಸ್ವಾಮಿಯವರೇ, ಡಾ. ಪ್ರಭುದೇವ ಅವರೇ, ಸ್ನೇಹಿತರಾದ ಪ್ರೊ. ಭೈರಪ್ಪನವರೇ, ಡಾ.ಬೈರೇಗೌಡರೇ, ಮತ್ತಿತರ ಹಿತವರೆ. ನಾನು ಮಾತನಾಡುವ ಅಗತ್ಯವಿಲ್ಲವೆಂದರೂ ನಾಲ್ಕಾರು ಮಾತು ಆಡಲೇಬೇಕಾಗಿದೆ. ನನ್ನ ಬಗ್ಗೆ ಬರೆದ ಈ ಕೃತಿಯು ತಯಾರಾಗುತ್ತಿದ್ದಂತೆಯೇ ಓದುತ್ತಾ ಹೋದೆ, ಮುಗಿದ ಮೇಲೆಯೂ ಓದಿದೆ. ಒಂದಾದ ಮೇಲೆ ಒಂದು, ಎರಡು ಪ್ರಶ್ನೆಗಳನ್ನು ಲೇಖಕರಿಗೆ ಹಾಕಿದೆ. ಈ ಪುಸ್ತಕದಲ್ಲಿ ಚಿತ್ರಿತವಾದ ವ್ಯಕ್ತಿ ನಾನೇ ಹೌದೇ? ಎಂಬುದು ನನ್ನ ಮೊದಲ ಪ್ರಶ್ನೆ. ಇದಕ್ಕೆ ಅವರ ಉತ್ತರ 'ಹೌದು' ಎಂದು. ಹಾಗಾದರೆ ನಾನು ಇದಕ್ಕೆ ಅರ್ಹನೇ? ಎಂಬುದು ನನ್ನ ಎರಡನೆಯ ಪ್ರಶ್ನೆ. ಇದಕ್ಕೂ ಅವರು ತುಂಬಾ ಔದಾರ್ಯದಿಂದ 'ಹೌದು' ಎಂದರು. ಆದರೆ, ಸಾಮಾನ್ಯವಾಗಿ ಪ್ರತಿಯೊಬ್ಬ ಮನುಷ್ಯನಲ್ಲಿ ಗುಣಗಳು ಇದ್ದಂತೆ ದೌರ್ಬಲ್ಯಗಳೂ ಇರುತ್ತವೆ. ಇಲ್ಲಿ ಚಿತ್ರಿತವಾದ ವ್ಯಕ್ತಿಯಲ್ಲಿ ದೌರ್ಬಲ್ಯಗಳು ಕಾಣಿಸುತ್ತಲೇ ಇಲ್ಲವಲ್ಲ, ಯಾಕೆ? ಆತ್ಮಚರಿತ್ರೆಯಲ್ಲಾಗಲೀ, ಇತರರು ಬರೆದ ವ್ಯಕ್ತಿ ಚರಿತ್ರೆಯಲ್ಲಾಗಲೀ ಗುಣ ದೌರ್ಬಲ್ಯಗಳ ಪ್ರಸ್ತಾಪವಿದ್ದರೂ ಪಾಶ್ಚಾತ್ಯ-ಪ್ರಾಚ್ಯ ಸಮಾಜ ಸಂಸ್ಕೃತಿಯ ಹಿನ್ನೆಲೆಯಲ್ಲಿ ನೋಡಿದಾಗ ಪಾಶ್ಚಾತ್ಯ ಬರಹಗಳಲ್ಲಿ ಹೆಚ್ಚು ವಾಸ್ತವತೆ ಕಂಡಂತೆ ದೌರ್ಬಲ್ಯಗಳನ್ನು ಆದಷ್ಟೂ ಕಾಣಿಸದಂತೆ ನೋಡಿಕೊಳ್ಳಲಾಗುತ್ತದೆ. ಹಾಗೆ ನೋಡಿದರೆ ಗಣ ದೌರ್ಬಲ್ಯಗಳು ನೋಡುಗರ, ಅರ್ಥೈಸಿಕೊಳ್ಳುವವರ, ಮನೋಪರಿಪಾಕವನ್ನು ಅವಂಬಿಸಿರುತ್ತದೆ. ಜೊತೆಗೆ, ಇವೆಲ್ಲವೂ ಸಾಪೇಕ್ಷವಾದ ಅಂಶಗಳೇ ಎಂಬುದು ತಮಗೆ ತಿಳಿದವುಗಳೇ. ಇದು ಬರಿ ಧಾರ್ಮಿಕ ಸ್ಥಳವಲ್ಲ. ಇದರಷ್ಟಕ್ಕೆ ಇದೊಂದು ಸರಕಾರ. ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತಂತೆ ನಾಡಿನ ಜನಪ್ರಿಯ [ಪತ್ರಿಕೆಯೊಂದು ಕೆಲವರ್ಷಗಳ ಹಿಂದೆ ಪ್ರಕಟಿಸಿದ ಲೇಖನಕ್ಕೆ ತಲೆಬರೆಹ ನೀಡಿದ್ದು ಹೀಗೆ. ಬರಹದ ಕುರಿತು ನೀಡುವ ಚಿಕ್ಕ ಬಾಕ್ಸ್ನಲ್ಲಿ ಇದಕ್ಕೊಂದಿಷ್ಟು ಸಮರ್ಥನೆ ಇದೆ. ಇಲ್ಲಿ ಮಂಜುನಾಥ ದೇವಾಲಯವೇ ಪಾರ್ಲಿಮೆಂಟ್, ಹೆಗ್ಗಡೆಯವರೇ ಪ್ರಧಾನಿ. ಅವರ ಉಯಿಲು ಕೇಳುವ ವೇಗವೇ ಸುಪ್ರೀಂಕೋರ್ಟು, ಧರ್ಮವೇ ಇಲ್ಲಿಯ ಸಂವಿಧಾನ, ಭಕ್ತರೇ ಭಕ್ತಿಯಿಂದ ಬರೆದ ಕಾನೂನು. ಒಂದು ದೇಶದ ಸರಕಾರದಲ್ಲಿ ಏನೆಲ್ಲಾ ದಾಖಲೆಗಳಿರುತ್ತವೋ ಎಲ್ಲವೂ ಧರ್ಮಸ್ಥಳದಲ್ಲಿವೆ. ಸರಕಾರದ ಏನೆಲ್ಲಾ ಕೆಲಸಗಳನ್ನು ಮಾಡುತ್ತದೋ ಧರ್ಮಸ್ಥಳ ಅವೆಲ್ಲಾ ಕೆಲಸಗಳನ್ನು ಮಾಡುತ್ತದೆ. ಇದೊಂದು ಮಾದರಿ ಸರಕಾರ, ಪ್ರಧಾನಿ ಕ್ಯಾಬಿನೆಟ್ ಮಂತ್ರಿಗಳು, ರಾಜ್ಯಸಚಿವರು ಎಲ್ಲರೂ ಇಲ್ಲಿ ಒಬ್ಬರೇ, ಅವರೇ ಶ್ರೀ ವೀರೇಂದ್ರ ಹೆಗ್ಗಡೆಯವರು. ಈ ಧರ್ಮಕ್ಷೇತ್ರಕ್ಕೆ ಅವರೇ ಖಾವಂದರು (ಒಡೆಯರು), ಹೀಗೆನ್ನುವುದು ಆತ್ಮೀಯ ಮತ್ತು ಗೌರವದ ಸಂಬೋಧನೆ.
|
|