Niruta Publications
  • Home
  • About Us
    • Ramesha's Profile
  • List Your Book for Free
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
  • Home
  • About Us
    • Ramesha's Profile
  • List Your Book for Free
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
Niruta Publications

ಸಾಮಾಜಿಕ ಕ್ರಿಯಾಚರಣೆ

1/22/2022

1 Comment

 
Picture
Buy
ಮುನ್ನುಡಿ
“ಸಾಮಾಜಿಕ ಕ್ರಿಯಾಚರಣೆ”-ಒಂದು ಐತಿಹಾಸಿಕ ಮೇರುಕೃತಿ
ಭಾರತದಲ್ಲಿ ವೃತ್ತಿಪರ ಸಮಾಜಕಾರ್ಯ ಶಿಕ್ಷಣ ಪ್ರಾರಂಭವಾಗಿ 85 ವರ್ಷಗಳು ಸಂದವು. ಸಂಖ್ಯಾತ್ಮಕವಾಗಿ ಸಮಾಜಕಾರ್ಯವು ವಿಸ್ತಾರವಾಗಿ ಬೆಳೆದಿದೆ. ವಿಶೇಷವಾಗಿ ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಸಮಾಜಕಾರ್ಯ ವಿದ್ಯಾಲಯಗಳು ವಿಪುಲವಾಗಿ ಬೆಳೆದು ಬಂದಿವೆ. ಗುಣಾತ್ಮಕವಾಗಿ ಅಲ್ಲದಿದ್ದರೂ ಸಂಖ್ಯಾತ್ಮಕವಾಗಿ ಭಾರತದಲ್ಲಿ ಸಮಾಜಕಾರ್ಯ ಶಿಕ್ಷಣ ವಿಪುಲವಾಗಿ ಬೆಳೆದು ನಿಂತಿದ್ದು ನಮ್ಮೆಲ್ಲರಿಗೂ ಗೊತ್ತಿದ್ದ ವಿಷಯ. ವಿಷಾದದ ಸಂಗತಿಯೆಂದರೆ ಈ ಕಳೆದ ಎಂಟು ದಶಕಗಳಲ್ಲಿ ಸಮಾಜಕಾರ್ಯವು ತನ್ನ ಅಸ್ತಿತ್ವಕ್ಕಾಗಿ ಹೆಣಗಾಡುತ್ತಲೇ ಇದೆ.

ಯಾವುದೇ ಒಂದು ವೃತ್ತಿ ಗುಣಾತ್ಮಕವಾಗಿ ಬೆಳೆದು ತನ್ನ ಅಸ್ತಿತ್ವವನ್ನು  ಸ್ಥಾಪಿಸಬೇಕಾದರೆ ಆ ವೃತ್ತಿಗೆ ಸಂಬಂಧಿಸಿದ ವೃತ್ತಿಪರ ಸಂಘಟನೆ ಹಾಗೂ ರಾಷ್ಟ್ರೀಯ ಪರಿಷತ್ತು ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ವಿಷಾದದ ಸಂಗತಿಯೆಂದರೆ ರಾಷ್ಟ್ರಮಟ್ಟದಲ್ಲಿ ಸಮಾಜಕಾರ್ಯಕರ್ತರ ಶಕ್ತಿಶಾಲಿಯಾದ ವೃತ್ತಿಪರ ಸಂಘಟನೆ ಇಲ್ಲದಿರುವುದು ಮತ್ತು ಸಮಾಜಕಾರ್ಯ ಪರಿಷತ್ತಿನ ಸ್ಥಾಪನೆ ಆಗದಿರುವುದು. ಮುಂಬರುವ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಸಮಾಜಕಾರ್ಯ ಪರಿಷತ್ತಿನ ಸ್ಥಾಪನೆಯಾಗಿ, ರಾಷ್ಟ್ರೀಯ ಸಮಾಜಕಾರ್ಯ ಸಂಘಟನೆ ಸ್ಥಾಪನೆಯಾಗಿ, ಸಮಾಜಕಾರ್ಯ ವೃತ್ತಿಗೊಂದು ನ್ಯಾಯ ಒದಗಿಸಿ ಕೊಡುತ್ತವೆ ಎಂದು  ಆಶಿಸೋಣ.
ಸಮಾಜಕಾರ್ಯದ ಗುಣಾತ್ಮಕ ಬೆಳವಣಿಗೆಯಲ್ಲಿ ಕಂಡುಬಂದ ಇನ್ನೊಂದು ಪ್ರಮುಖ ಕೊರತೆಯೆಂದರೆ ಭಾರತೀಯ ಸಮಾಜಕಾರ್ಯ ಶಿಕ್ಷಕರಿಂದ ಅಥವಾ ವೃತ್ತಿಪರ ಸಮಾಜಕಾರ್ಯಕರ್ತರಿಂದ ಭಾರತದ ಸಮುದಾಯಗಳ ಸ್ಥಿತಿ-ಗತಿ ಆಧಾರಿತ ಸಾಹಿತ್ಯಸೃಷ್ಟಿ ಅಪೇಕ್ಷೆಮೇರೆಗೆ ಆಗದೆ ಇರುವುದು. ವಿಶೇಷವಾಗಿ ವಿವಿಧ ರಾಜ್ಯಗಳ ಮಾತೃಭಾಷೆಯಲ್ಲಿ ಸಮಾಜಕಾರ್ಯ ಶಿಕ್ಷಣ ಕುರಿತು ಪುಸ್ತಕಗಳು, ಸಂಶೋಧನೆಗಳು, ಲೇಖನಗಳು ಇತ್ಯಾದಿ ಸಾಹಿತ್ಯ ಬರದೇ ಇರುವುದು. ಈ ನ್ಯೂನ್ಯತೆಯನ್ನು ಹೋಗಲಾಡಿಸುವ ಒಂದು ದಿಟ್ಟ ಪ್ರಯತ್ನವೇ ಡಾ. ಸಿ.ಆರ್. ಗೋಪಾಲ್‌ರವರ ಸಮಾಜಕಾರ್ಯ ಶಿಕ್ಷಣ ಕುರಿತ ಕನ್ನಡದಲ್ಲಿಯ ಲೇಖನಗಳು ಹಾಗೂ ಪುಸ್ತಕಗಳು. ಶ್ರೀಯುತರು ಸಮಾಜಕಾರ್ಯ, ಭಾಷಣಕಲೆ, ಸಂಸ್ಕೃತಿ ಮುಂತಾದ ವಿಷಯಗಳ ಬಗ್ಗೆ ಒಟ್ಟಾರೆಯಾಗಿ ಹನ್ನೊಂದು ಪುಸ್ತಕಗಳನ್ನು ಬರೆದಿದ್ದಾರೆ. ಪ್ರಸ್ತುತ ಪುಸ್ತಕ "ಸಾಮಾಜಿಕ ಕ್ರಿಯಾಚರಣೆ" ಈ ನಿಟ್ಟಿನಲ್ಲಿ ಒಂದು ಐತಿಹಾಸಿಕ ದಾಖಲೆ ಎಂದೇ ಹೇಳಬೇಕು.

ಸಮಾಜಕಾರ್ಯದಲ್ಲಿ ಆರು ವಿಧಾನಗಳಿವೆ, ಮೂರು ಪ್ರಮುಖ ವಿಧಾನಗಳು, ಇನ್ನುಳಿದ ಮೂರು ಪೂರಕ ವಿಧಾನಗಳು. ವ್ಯಕ್ತಿಗತ ಸಮಾಜಕಾರ್ಯ, ವೃಂದಗತ ಸಮಾಜಕಾರ್ಯ, ಸಮುದಾಯ ಸಂಘಟನೆ ಈ ಮೂರು ಪ್ರಮುಖ ವಿಧಾನಗಳಾದರೆ, ಸಾಮಾಜಿಕ ಕ್ರಿಯೆ, ಸಮಾಜ ಕಲ್ಯಾಣ ಆಡಳಿತ ಮತ್ತು ಸಾಮಾಜಿಕ ಸಂಶೋಧನೆ ಈ ಮೂರು ಪೂರಕ ವಿಧಾನಗಳು. ಭಾರತದಲ್ಲಿ ಪೂರಕ ವಿಧಾನಗಳಿಗೆ ಹೆಚ್ಚು ಒತ್ತು ಕೊಡದೆ ಪ್ರಮುಖ ವಿಧಾನಗಳಾದ ವ್ಯಕ್ತಿಗತ ಸಮಾಜಕಾರ್ಯ ಹಾಗೂ ವೃಂದಗತ ಸಮಾಜಕಾರ್ಯ ವಿಧಾನಗಳಿಗೆ ಪ್ರಾಮುಖ್ಯತೆ ಕೊಡಲಾಗಿದೆ. ಸಮುದಾಯ ಸಂಘಟನೆಗಾಗಲಿ ಅಥವಾ ಸಾಮಾಜಿಕ ಕ್ರಿಯೆಗಾಗಲಿ ಸಿಗಬೇಕಾದ ಪ್ರಾಮುಖ್ಯತೆ ಸಿಗುತ್ತಿಲ್ಲ. ಹಾಗೆ ನೋಡಿದರೆ ಭಾರತದಲ್ಲಿ ಪ್ರಮುಖವಾಗಿ ಈ ಎರಡು  ವಿಧಾನಗಳಿಗೆ ಆದ್ಯತೆ ಕೊಡಬೇಕು. ನನ್ನ ಜ್ಞಾನ ಹಾಗೂ ಅನುಭವದ ಆಧಾರದ ಮೇರೆಗೆ ಹೇಳುವುದಾದರೆ ಭಾರತೀಯ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಯ ಹಿನ್ನೆಲೆಯಲ್ಲಿ ಸಮುದಾಯ ಸಂಘಟನೆ ಹಾಗೂ ಸಾಮಾಜಿಕ ಕ್ರಿಯೆ ಈ ಎರಡು ವಿಧಾನಗಳಿಗೆ ಹೆಚ್ಚಿನ ಆದ್ಯತೆ ಕೊಡಬೇಕು. ಇದಕ್ಕೂ ಮುಂದುವರೆದು ಹೇಳುವುದಾದರೆ ವೃಂದಗತ ಸಮಾಜಕಾರ್ಯ, ಸಮುದಾಯ ಸಂಘಟನೆ ಮತ್ತು ಸಾಮಾಜಿಕ ಕ್ರಿಯೆ ಈ ಮೂರು ವಿಧಾನಗಳು ಪ್ರಮುಖ ವಿಧಾನಗಳಾಗಿ ಸ್ವೀಕರಿಸಬೇಕು ಹಾಗೂ ವ್ಯಕ್ತಿಗತ ಸಮಾಜಕಾರ್ಯ, ಸಮಾಜ ಕಲ್ಯಾಣ ಆಡಳಿತ, ಸಾಮಾಜಿಕ ಸಂಶೋಧನೆ (ಸಮಾಜಕಾರ್ಯ ಸಂಶೋಧನೆ) ಇವುಗಳನ್ನು ಪೂರಕ ವಿಧಾನಗಳಾಗಿ ಸ್ವೀಕರಿಸಬೇಕು.

ಸಮಾಜಕಾರ್ಯ ಕ್ಷೇತ್ರಕಾರ್ಯದಲ್ಲಿ ಕೂಡ ವಿದ್ಯಾರ್ಥಿಗಳಿಗೆ ವ್ಯಕ್ತಿಗತ ಸಮಾಜಕಾರ್ಯ ಹಾಗೂ ವೃಂದಗತ ಸಮಾಜಕಾರ್ಯ ಎರಡರ ಮೇಲೆ ಹೆಚ್ಚು ಒತ್ತು ಕೊಡುವಂತೆ ಸಮಾಜಕಾರ್ಯ ಶಿಕ್ಷಣ ಸಂಸ್ಥೆಗಳು ಬೋಧಿಸುತ್ತಿವೆ. ಹಾಗಾಗಿ ಇಲ್ಲಿಯವರೆಗೆ ಸಮಾಜಕಾರ್ಯ ಪ್ರಚೋದನೆ ಮೇಲೆ ಹೆಚ್ಚಿನ ಲೇಖನಗಳಾಗಲಿ ಪುಸ್ತಕಗಳಾಗಲಿ ಪ್ರಕಟವಾಗಿಲ್ಲ. ಮುಂದುವರೆದು ಹೇಳುವುದಾದರೆ ಇದೊಂದು ಪೂರ್ಣತಃ ದುರ್ಲಕ್ಷಿತ ಸಮಾಜಕಾರ್ಯದ ವಿಧಾನವಾಗಿ ಉಳಿದಿದೆ. ಪ್ರಸ್ತುತ ಗ್ರಂಥ "ಸಾಮಾಜಿಕ ಕ್ರಿಯಾಚರಣೆ" ಈ ನಿಟ್ಟಿನಲ್ಲಿ ಇರತಕ್ಕಂತಹ ನ್ಯೂನತೆಯನ್ನು ತುಂಬಿ ಕೊಡುವುದರಲ್ಲಿ ಸಂದೇಹವಿಲ್ಲ.

ಡಾ. ಸಿ.ಆರ್. ಗೋಪಾಲ್ ಅವರ ಪ್ರಸ್ತುತ ಗ್ರಂಥ "ಸಾಮಾಜಿಕ ಕ್ರಿಯಾಚರಣೆ" ಒಂದು ಸಮಗ್ರ ಹೊತ್ತಿಗೆಯಾಗಿ ಹೊರಬಂದಿದೆ. ನಿಜ ಹೇಳುವುದಾದರೆ "ಸಾಮಾಜಿಕ ಕ್ರಿಯ" ಈ ಪೂರಕ ವಿಧಾನದ ಮೇಲೆ ಒಂದು ಪುಸ್ತಕವನ್ನು ಬರೆಯುವಷ್ಟು ವಿಷಯವಸ್ತು ಸಿಗಬಹುದೇ ಎಂಬ ಪ್ರಶ್ನೆಗೆ ಸಿಗುವ ಉತ್ತರವೇ ಪ್ರಸ್ತುತ ಗ್ರಂಥ "ಸಾಮಾಜಿಕ ಕ್ರಿಯಾಚರಣೆ"!

‘ಸೋಶಿಯಲ್ ಆಕ್ಷನ್' ಈ ಪದಕ್ಕೆ ಇಲ್ಲಿಯವರೆಗೆ ‘ಸಾಮಾಜಿಕ ಕ್ರಿಯೆ' ಅಥವಾ ‘ಸಾಮಾಜಿಕ ಪ್ರಚೋದನೆ' ಈ ಪದಗಳನ್ನು ಮಾತ್ರ ಉಪಯೋಗಿಸಲಾಗಿದೆ. ಆದರೆ ಡಾ. ಸಿ.ಆರ್. ಗೋಪಾಲ್ ಅವರು ಸಾಮಾಜಿಕ ಕ್ರಿಯಾಚರಣೆ ಪದಗುಚ್ಛವನ್ನು ಉಪಯೋಗಿಸಿದ್ದಾರೆ. ಇದೊಂದು ಸಮಾಜಕಾರ್ಯ ವಿಧಾನಗಳಿಗೆ ಕೊಟ್ಟ ಕೊಡುಗೆ. ಸಮಾಜಕಾರ್ಯ ಶಿಕ್ಷಕರು ಹಾಗೂ ವೃತ್ತಿಪರ ಸಮಾಜಕಾರ್ಯಕರ್ತರು ಈ ಪದಗುಚ್ಛವನ್ನು ಸ್ವೀಕರಿಸಿ ಆಚರಿಸುವಲ್ಲಿ ಯಾವ ಸಂದೇಹವೂ ಇಲ್ಲ. ಡಾ. ಸಿ.ಆರ್. ಗೋಪಾಲ್ ಅವರು ಸಮಾಜಕಾರ್ಯ ಶಿಕ್ಷಣ ಕುರಿತು ಪುಸ್ತಕಗಳು, ಲೇಖನಗಳು ಕನ್ನಡದಲ್ಲಿ ಬರೆದು ಮಹದುಪಕಾರ ಮಾಡಿದ್ದಾರೆ. ಕರ್ನಾಟಕದ ಸಮಾಜಕಾರ್ಯ ವಿದ್ಯಾಲಯಗಳಲ್ಲಿ ಹಾಗೂ ವಿಶ್ವ ವಿದ್ಯಾಲಯಗಳಲ್ಲಿ ಸುಮಾರು 90% ವಿದ್ಯಾರ್ಥಿಗಳು ಕನ್ನಡದಲ್ಲಿಯೇ ಅಧ್ಯಯನ ಮಾಡುತ್ತಾರೆ. ಈ ನಿಟ್ಟಿನಲ್ಲಿ ಅವರು ಸೃಷ್ಟಿಸಿದ ಕನ್ನಡದಲ್ಲಿಯ ಸಮಾಜಕಾರ್ಯ ಸಾಹಿತ್ಯ ವಿದ್ಯಾರ್ಥಿ ಬಳಗಕ್ಕೆ ಒಂದು ಅದ್ಭುತವಾದ ಕೊಡುಗೆಯಾಗಿದೆ.

ಪ್ರಸ್ತುತ ಗ್ರಂಥದಲ್ಲಿ ಹನ್ನೆರಡು ಅಧ್ಯಾಯಗಳಿವೆ. ಮೊದಲಿನ ಎಂಟು ಅಧ್ಯಾಯಗಳು ಸಾಮಾಜಿಕ ಕ್ರಿಯಾಚರಣೆ ವಿಧಾನ ಕುರಿತು ವಿವಿಧ ಸಂಗತಿಗಳನ್ನು ವಿವರಿಸುತ್ತವೆ. ಮುಂಬರುವ ಅಧ್ಯಾಯಗಳಲ್ಲಿ ಈ ವಿಧಾನಕ್ಕೆ ಸಂಬಂಧಪಟ್ಟ ಕಾರ್ಯಕ್ಷೇತ್ರಗಳ ಬಗ್ಗೆ ಮಾಹಿತಿಯನ್ನು ನೀಡುತ್ತವೆ. ಸಮಾಜಕಾರ್ಯ ಶಿಕ್ಷಣವು ಮೂಲತಃ ಅಂತರಶಾಸ್ತ್ರೀಯ ಪದ್ಧತಿಯನ್ನು ಅಳವಡಿಸಿಕೊಂಡಿರುವುದರಿAದ ಇನ್ನುಳಿದ ಸಂಬಂಧಪಟ್ಟ ಸಮಾಜಶಾಸ್ತ್ರಗಳಿಂದ ಜ್ಞಾನವನ್ನು ಪಡೆದುಕೊಳ್ಳುವುದು ಸೂಕ್ತ ಹಾಗೂ ಅನಿವಾರ್ಯ ಕೂಡ. ಈ ನಿಟ್ಟಿನಲ್ಲಿ ಶ್ರೀ ಸಿ.ಆರ್. ಗೋಪಾಲ್ ಅವರು ವಿವಿಧ ಸಮಾಜಶಾಸ್ತ್ರಗಳ ಜ್ಞಾನವನ್ನು ಉಪಯೋಗಿಸಿ ಈ ವಿಧಾನವನ್ನು ಸಮೃದ್ಧಗೊಳಿಸಿದ್ದಾರೆ. ಸಾಮಾಜಿಕ ಕಾಯ್ದೆಗಳು, ಭಾರತೀಯ ಸಂವಿಧಾನದ ಪ್ರಮುಖ ವಿಷಯಗಳು, ಕಾರ್ಮಿಕ ಕಾನೂನುಗಳು ಈ ವಿಧಾನಕ್ಕೆ ಪೂರಕವಾಗುವಂತೆ ಬಳಸಿಕೊಂಡಿದ್ದಾರೆ.

ಆಂದೋಲನ ಈ ವಿಧಾನದ ಪ್ರಮುಖ ಅಂಶವಾಗಿರುವುದರಿಂದ ಸಾಮಾಜಿಕ ಆಂದೋಲನ, ಅದರ ಸಿದ್ಧಾಂತಗಳು, ಆಂದೋಲನಗಳು, ಅವುಗಳು ಸ್ವರೂಪ ಹಾಗು ಇತರೆ ವಿಷಯಗಳನ್ನು ಸೂಕ್ತವಾಗಿ ಮಂಡಿಸಿದ್ದಾರೆ. ಜೊತೆಗೆ ಭಾರತದಲ್ಲಿ ಸಾಮಾಜಿಕ ಆಂದೋಲನಗಳು, ಧಾರ್ಮಿಕ ಸುಧಾರಣೆ ಆಂದೋಲನಗಳು, ಹಸಿರು ಕ್ರಾಂತಿ ಆಂದೋಲನಗಳನ್ನು ಮಂಡಿಸಿ ಸಮಾಜಕಾರ್ಯದ ಅಧ್ಯಾಪಕರಿಗೆ ಹಾಗು ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತೆ ಮಾಡಿದ್ದಾರೆ. ಈ ಗ್ರಂಥದ ಕೊನೆಯ ಅಧ್ಯಾಯದಲ್ಲಿ ಮಂಡಿಸಿರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳು, ಅವುಗಳ ಲಕ್ಷಣಗಳು, ಸಾರ್ವಜನಿಕ ಮೊಕದ್ದಮೆಗೆ ಸೇರುವ ಸಾರ್ವಜನಿಕ ಹಿತಾಸಕ್ತಿ ವಿಷಯಗಳು ಈ ಪುಸ್ತಕದ ವ್ಯಾಪ್ತಿಯನ್ನು ವಿಸ್ತರಿಸಿವೆ. ಒಟ್ಟಿನಲ್ಲಿ ಹೇಳುವುದಾದರೆ ಲೇಖಕರು ಸಾಮಾಜಿಕ ಕ್ರಿಯಾಚರಣೆ ಒಂದು ಪೂರಕ ವಿಧಾನವಾದರೂ ಕೂಡ ಅದೊಂದು ಸಮಾಜಕಾರ್ಯದ ಪ್ರಮುಖ ಪ್ರಬಲ ವಿಧಾನವೆಂಬಂತೆ ಮಂಡಿಸಿದ್ದಾರೆ. ಅದು ನಿಜ ಕೂಡ.

ಬೇರೆ ಅರ್ಥದಲ್ಲಿ ಹೇಳುವುದಾದರೆ ಡಾ. ಸಿ.ಆರ್. ಗೋಪಾಲ್ ಅವರು ಒಂದು ಹೊಸ ಆಯಾಮವನ್ನು, ಒಂದು ಹೊಸ ಪ್ರಯೋಗವನ್ನು ವ್ಯಾಪಕವಾಗಿ, ತುಂಬಾ ಸೊಗಸಾಗಿ, ಸುಂದರವಾಗಿ, ಸರಳವಾಗಿ, ಅರ್ಥವಾಗುವಂತೆ ಮಂಡಿಸಿದ್ದಾರೆ. ಅವರಿಗೆ ಸಮಾಜಕಾರ್ಯದ ಶಿಕ್ಷಕ ವೃಂದ ಹಾಗೂ ವೃತ್ತಿಪರ ಕಾರ್ಯಕರ್ತರ ಪರವಾಗಿ ತುಂಬು ಹೃದಯದ ಧನ್ಯವಾದಗಳು. ಅವರು ಇಂತಹ ಒಂದು ಅತ್ಯವಶ್ಯಕ ಹೊತ್ತಿಗೆಯನ್ನು ಸಮಾಜಕಾರ್ಯದ ವಿದ್ಯಾರ್ಥಿ, ಶಿಕ್ಷಕ ಹಾಗೂ ಸಮಾಜಕಾರ್ಯಕರ್ತರಿಗೆ ನೀಡುತ್ತಿರುವುದರಿಂದ, ಅವರಿಗೆ ಅಭಿನಂದನೆಗಳನ್ನು ಕೂಡ ಸಲ್ಲಿಸುತ್ತೇನೆ. ಅವರ ಈ ಪ್ರಸ್ತುತ ಗ್ರಂಥ ಸಂಬಂಧಪಟ್ಟವರು ತುಂಬು ಹೃದಯದಿಂದ ಸ್ವೀಕರಿಸುತ್ತಾರೆ ಎನ್ನುವ ಭರವಸೆ ನನಗಿದೆ.

ಈ ಸಂದರ್ಭದಲ್ಲಿ ಶ್ರೀ ಎಂ.ಎಚ್. ರಮೇಶ ಅವರ ಬಗ್ಗೆ ಒಂದೆರಡು ಮಾತು ಹೇಳದಿದ್ದರೆ ನನ್ನ ಮನಸ್ಸಿಗೆ ಸಮಾಧಾನ ಎನಿಸುವುದಿಲ್ಲ. ಶ್ರೀ ಎಂ.ಎಚ್. ರಮೇಶ ಅವರು ನನಗೆ ಸುಮಾರು 15 ವರ್ಷದಿಂದ ಪರಿಚಿತರು. ಅವರು ವೃತ್ತಿಯಿಂದ ಶಿಕ್ಷಕರಾಗಿ ಇಲ್ಲದಿದ್ದರೂ ಸಮಾಜಕಾರ್ಯದ ಸಾಹಿತ್ಯ ಕನ್ನಡದಲ್ಲಿ ಸೃಷ್ಟಿಯಾಗಬೇಕು, ಪ್ರಕಟವಾಗಬೇಕು, ವಿದ್ಯಾರ್ಥಿಗಳಿಗೂ, ಶಿಕ್ಷಕರಿಗೂ ಹಾಗೂ ವೃತ್ತಿಪರ ಸಮಾಜಕಾರ್ಯಕರ್ತರಿಗೂ ತಲುಪುವಂತಾಗಬೇಕು ಎನ್ನುವುದು ಅವರ ಧ್ಯೇಯ. "ಸಮಾಜಕಾರ್ಯದ ಹೆಜ್ಜೆಗಳು" ಈ ದ್ವಿಭಾಷಾ ಜರ್ನಲ್ ಮುಖಾಂತರ ಶ್ರೀ ಎಂ.ಎಚ್. ರಮೇಶ ಅವರು ಕನ್ನಡಿಗರಿಗೆ ಅಷ್ಟೇ ಅಲ್ಲ ಕರ್ನಾಟಕದ ಹೊರಗಿನ ವಿದ್ಯಾರ್ಥಿಗಳಿಗೂ, ಅಧ್ಯಾಪಕರಿಗೂ, ವಿಶ್ವವಿದ್ಯಾಲಯಗಳಿಗೂ ಪರಿಚಿತರಾಗಿದ್ದಾರೆ. ಅವರು ಇಲ್ಲಿಯವರೆಗೂ ಸಮಾಜಕಾರ್ಯಕ್ಕೆ ಸಂಬಂಧಿಸಿದ ಸುಮಾರು 100 ಪುಸ್ತಕಗಳು ಅವರ ನಿರುತ ಪಬ್ಲಿಕೇಷನ್ಸ್ ಮುಖಾಂತರ ಜನರ ಕೈಗಿಟ್ಟಿದ್ದಾರೆ. ಅವರ ಈ ಸೇವೆ ಅಮೋಘ ಹಾಗೂ ಶ್ಲಾಘನೀಯ. ಅವರ ನಿರುತ ಪಬ್ಲಿಕೇಷನ್ಸ್ ನಿಂದ ಇನ್ನೂ ಇಂತಹ ನೂರಾರು ಅಲ್ಲ, ಸಾವಿರಾರು ಪುಸ್ತಕಗಳು ಪ್ರಕಟವಾಗಲೆಂದು ಈ ಸಂದರ್ಭದಲ್ಲಿ ಹಾರೈಸುತ್ತೇನೆ!
 
ಡಾ. ಬಿ.ಟಿ. ಲಾವಣಿ
ಹಿಂದಿನ ನಿರ್ದೇಶಕರು, ಭಾರತೀ ವಿದ್ಯಾಪೀಠ ವಿಶ್ವವಿದ್ಯಾಲಯ, ಪುಣೆ.
ಪ್ರಸ್ತುತ ನಿರ್ದೇಶಕರು, ಸಂಶೋಧನಾ ಕೇಂದ್ರ (ಪುಣೆ ವಿಶ್ವವಿದ್ಯಾಲಯ), ಜನಸೇವಾ ಫೌಂಡೇಶನ್, ಪುಣೆ

1 Comment
ಶೋಭಾ ದೇವಿ, ಪಾಟೀಲ,
3/3/2023 01:52:36 am

I appreciate the effort of Prof. C. R. Gopal, in bringing out a book on Social Action in Kannada. This'll definitely help our students to have an access to scholarly literature on social action as a method of Social Work profession, although historically we can list out a good number of social movements, which have brought out significant changes in the standard of living in the people.
Therefore, first of all congratulate Prof. C. R. Gopal for his publication .

Reply



Leave a Reply.


    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9
    ಸಮಾಜಕಾರ್ಯ
    ಸಮುದಾಯ ಸಂಘಟನೆ


    Picture

    Social Work Learning Academy

    Join WhatsApp Channel

    Niruta Publications

    Social Work Foot Prints

    Leaders Talk

    Ramesha Niratanka

    Picture
    WhatsApp

    Picture

    MHR LEARNING ACADEMY

    Get it on Google Play store
    Download App
    Online Courses

    Picture
    50,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups


    RSS Feed

Niruta Publications Books List
File Size: 672 kb
File Type: pdf
Download File

Social Work Books
File Size: 116 kb
File Type: pdf
Download File

HR Books
File Size: 87 kb
File Type: pdf
Download File

General Books
File Size: 195 kb
File Type: pdf
Download File



SITE MAP


Site

  • HOME
  • ABOUT US
  • BLOG
  • COLLABORATE WITH NIRUTA PUBLICATIONS
  • HR BLOG
  • PUBLICATION WITH US
  • TRANSLATION & TYPING
  • VIDEOS
  • HR & EMPLOYMENT LAW CLASSES - EVERY FORTNIGHT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

NIRATHANKA

  • ​CSR
  • TREE PLANTATION PROJECT

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe


Picture
More Details

Copyright Niruta Publications 2021,    Website Designing & Developed by: www.mhrspl.com