ಇದರ ಮೊದಲನೆಯ ಭಾಗ ಹಿಂದಿನ ಸಂಚಿಕೆಯಲ್ಲಿ ಪ್ರಕಟವಾಗಿದೆ. ಪರಾವಲಂಬನಾ ಭಾವ
ಸಾಮಾನ್ಯವಾಗಿ ದೈನಂದಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ನಡೆಸುವ ಹೋರಾಟವೇ ಜೀವನ. ಪ್ರತಿಯೊಬ್ಬರಿಗೂ ಜೀವಿಸಲು ಆಹಾರ, ಬಟ್ಟೆ, ವಸತಿ, ರಕ್ಷಣೆ, ಶಿಕ್ಷಣ, ಮನರಂಜನೆ ಮುಂತಾದ ಜೀವನಾವಶ್ಯಕತೆಗಳನ್ನು ಪೂರೈಸಿಕೊಳ್ಳಲು ಇನ್ನೊಬ್ಬರನ್ನು ಅವಲಂಬಿಸಬೇಕಾಗುತ್ತದೆ. ಆಹಾರಕ್ಕಾಗಿ ರೈತ, ವ್ಯಾಪಾರಿ, ಸಂಚಾರ ವ್ಯವಸ್ಥೆ ನೋಡಿಕೊಳ್ಳುವವರು, ರಸ್ತೆಗಳನ್ನು ಮಾಡುವವರು, ಇತ್ಯಾದಿ ವೃತ್ತಿನಿರತರನ್ನು ಅವಲಂಬಿಸಬೇಕಾಗುತ್ತದೆ. ಬಟ್ಟೆಗೆ ಪುನಃ ರೈತ, ವ್ಯಾಪಾರಿ, ಬಟ್ಟೆ ಗಿರಣಿ ಮಾಲಿಕ, ಕೆಲಸಗಾರರು, ವಿತರಕ ಇತ್ಯಾದಿ ಕೆಲಸಗಳನ್ನು ಮಾಡುವುದರ ಮೂಲಕ ನಮಗೆ ಸಹಾಯ ಮಾಡುವವರನ್ನು ಅವಲಂಬಿಸಬೇಕಾಗುತ್ತದೆ. ಇದರಂತೆಯೇ ಇತರೆ ಜೀವನಾವಶ್ಯಕತೆಗಳನ್ನು ಪೂರೈಸಿಕೊಳ್ಳಲು ಇನ್ನೊಬ್ಬರನ್ನು ಅವಲಂಬಿಸಬೇಕಾಗುತ್ತದೆ. ಪ್ರತಿಯೊಂದು ಸಮುದಾಯದಲ್ಲಿಯೂ ಸದಸ್ಯರು ತಮ್ಮ ದೈನಂದಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಹೀಗೆ ಸಮುದಾಯದ ಮೇಲೆ ಅವಲಂಬಿತರಾಗಿರುತ್ತಾರೆ. ಹಾಗಾಗಿ ಸದಸ್ಯರು ತಮ್ಮ ಜೀವನದ ಆಗುಹೋಗುಗಳಿಗಾಗಿ ಇನ್ನೊಬ್ಬರಿಂದ ಅವಲಂಬಿತರಾಗಿರುತ್ತಾರೆ. ಸದಸ್ಯರು ತಮ್ಮ ಜೀವನಕ್ಕೆ ಇತರರನ್ನು ಇಷ್ಟು ಪ್ರಮಾಣದಲ್ಲಿ ಅವಲಂಬಿತರಾಗಿರುವುದರಿಂದ, ಅವರು ತಮ್ಮ ಸ್ವಂತ ಅಸ್ತಿತ್ವ ಇಲ್ಲವೇನೋ ಎಂಬಂತೆ ವರ್ತಿಸುತ್ತಾರೆ. (ಆದರೂ ಪ್ರತಿಯೊಬ್ಬರಿಗೂ ಸ್ವತಂತ್ರ ವ್ಯಕ್ತಿತ್ವ ಇದ್ದೇ ಇರುತ್ತದೆ) ಇದು ಪರಾವಲಂಬನಾ ಭಾವ.
1 Comment
1. ನಿಮ್ಮ ಉದ್ಯೋಗ/ವೃತ್ತಿಯನ್ನು ವಿವರಿಸಿ?
ನಾನು ಅರ್ಪಿತ ಅಸೋಸಿಯೇಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಈಎಫ್ಐಎಲ್ ಎಜುಕೇಷನಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕಿಯಾಗಿದ್ದೇನೆ. ನಾನು ಲೇಖಕಿಯಾಗಿ, ಸಂಶೋಧಕಿಯಾಗಿ ಮತ್ತು ಸಾಂಸ್ಥಿಕ ಅಭಿವೃದ್ಧಿಯಲ್ಲಿ ಮಧ್ಯಸ್ಥಿಕೆ ವಹಿಸುವ ವಿಷಯದಲ್ಲಿ ತರಬೇತುದಾರಳಾಗಿ, ಭೋಧಕಿಯಾಗಿ, ವಿನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. 2. ಈ ಉದ್ಯೋಗಕ್ಕೆ ಅವಶ್ಯಕವಿರುವ ವಿದ್ಯಾರ್ಹತೆ ಏನು? ಪ್ರಕ್ರಿಯೆ ತರಬೇತಿ, ಮಾನವ ಸಂಪನ್ಮೂಲ ಕ್ಷೇತ್ರಗಳಲ್ಲಿ ಪ್ರಮಾಣೀಕರಣಗಳೊಂದಿಗೆ ಎಂ.ಎಸ್.ಡಬ್ಲ್ಯೂ ಮತ್ತು ಪಿಎಚ್.ಡಿ ಪದವಿ ಮತ್ತು ತಂತ್ರಜ್ಞಾನ ಮತ್ತು ಜನರ ನಿರ್ವಹಣೆಯಲ್ಲಿ ಹೆಚ್ಚುವರಿ ತರಬೇತಿ ಹೊಂದಿರಬೇಕು. ಗಣಿ ಕಾರ್ಮಿಕರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳು - ಕೆ.ಜಿ.ಎಫ್.ನಲ್ಲಿನ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್7/8/2017 ಪರಿಚಯ
ಗಣಿ ಕಾರ್ಮಿಕರು ಈ ದೇಶದ ಅಭಿವೃದ್ಧಿಗಾಗಿ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಅವಲಂಬಿತರ ಪೋಷಣೆಗಾಗಿ ಅವರ ದೈನಂದಿನ ಬದುಕನ್ನು ಸುತ್ತಲಿನ ಸಮುದಾಯಗಳೊಂದಿಗೆ ಸಮೀಕರಿಸಿಕೊಂಡು, ಈ ದೇಶದ ಒಂದು ಭಾಗವಾಗಿ ಜೀವಿಸುತ್ತಿದ್ದಾರೆ. ಇಂದಿನ ವೈಜ್ಞಾನಿಕತೆ, ತಂತ್ರಜ್ಞಾನ ಮತ್ತು ಆಧುನಿಕತೆಗಳಿಗೆ ಹೊಂದಿಕೊಳ್ಳಲಾಗದೆ ಹಾಗೂ ಜೀವನವನ್ನು ಬಿಟ್ಟುಕೊಡಲಾಗದಂತಹ ಪರಿಸ್ಥಿತಿಗಳಲ್ಲಿ ಜೀವನ ಸಾಗಿಸುತ್ತಿದ್ದಾರೆ. ಗಣಿ ಕಾರ್ಮಿಕರ ಬೌದ್ಧಿಕ ಚಿಂತನೆ, ಆಲೋಚನೆ ಹಾಗೂ ಆಕಾಂಕ್ಷೆಗಳೆಲ್ಲವು ತಮ್ಮ ಸುತ್ತಲಿನ ಪರಿಸರದೊಂದಿಗೆ ಕೇಂದ್ರೀಕೃತಗೊಂಡು, ಜಾಗತೀಕರಣ, ಖಾಸಗೀಕರಣ ಮತ್ತು ಉದಾರೀಕರಣ ವಿಸ್ತ್ರೃತಗೊಂಡಂತೆಲ್ಲಾ ಗಣಿ ಕಾರ್ಮಿಕರ ಬೌದ್ಧಿಕತೆಯು ಸಂಕೀರ್ಣಗೊಳ್ಳುತ್ತಾ ತನ್ನ ಸುತ್ತಲಿನ ಸಮುದಾಯಗಳನ್ನು ಪ್ರಶ್ನಿಸುವ, ಪರೀಕ್ಷಿಸುವ ಹೊಸ ಹೊಸ ನಿರೀಕ್ಷೆಗಳನ್ನು ಅದರ ಮೇಲೆ ಪ್ರಯೋಗಿಸುವ, ಪ್ರಯೋಗ ಶಾಲೆಯನ್ನಾಗಿ ಸಮಾಜವನ್ನು ರೂಪಿಸಿಕೊಂಡವರು. ಆಧುನಿಕತೆ, ತಂತ್ರಜ್ಞಾನ ಮತ್ತು ವೈಜ್ಞಾನಿಕತೆಗಳು ತನ್ನ ಮಹಾತ್ವಾಕಾಂಕ್ಷೆಗಳ ವಿಶ್ಲೇಷಣೆಗೆ ಮುಂದಾದಾಗ ಗಣಿ ಕಾರ್ಮಿಕರು ತಮ್ಮ ಮೂಲವೃತ್ತಿ ಹಾಗೂ ಮೂಲ ನೆಲೆಯು ಸ್ಥಿತ್ಯಂತರಕ್ಕೆ ಒಳಗಾಗಿ ಅನೇಕ ಸಾಮಾಜಿಕ ಮತ್ತು ಆರ್ಥಿಕ ಸಂಕಷ್ಟಗಳಿಗೆ ಗುರಿಯಾಗಬೇಕಾಯಿತು. ಇಂತಹ ಪರಿಸ್ಥಿತಿಯಲ್ಲಿಯು ಸಹ ದೇಶದಲ್ಲಿನ ಅನೇಕ ಗಣಿಗಳು ಮುಚ್ಚಿದ್ದು ಅಂತಹ ಗಣಿ ಕಾರ್ಮಿಕರು ಗಣಿ ಕೈಗಾರಿಕೆಯನ್ನೇ ತಮ್ಮ ಜೀವನಾಧಾರವಾಗಿ ನಂಬಿಕೊಂಡು ಜೀವನ ಮಾಡುತ್ತಿದ್ದ ಅನೇಕ ಗಣಿ ಕಾರ್ಮಿಕರು ಇಂದು ಸಾಮಾಜಿಕ ಮತ್ತು ಆರ್ಥಿಕ ಸಂಕಷ್ಟಗಳಿಗೆ ಗುರಿಯಾಗಿರುವವರು ಈ ದೇಶದಾದ್ಯಂತ ಕಾಣಸಿಗುತ್ತಾರೆ. ಸಾರಾಂಶ
ದೈಹಿಕ ಚಟುವಟಿಕೆ ಎಂಬುದು ಇತ್ತೀಚೆಗೆ ಒಂದು ಪ್ರಮುಖ ಆರೋಗ್ಯ ಸೂಚಕ ಅಂಶಗಳಲ್ಲಿ ಒಂದಾಗಿದೆ. ಯುವ ವಯಸ್ಕರಲ್ಲಿ ಅದರಲ್ಲೂ ಪದವಿ ವಿದ್ಯಾರ್ಥಿನಿಯರಲ್ಲಿ ದೈಹಿಕ ಚಟುವಟಿಕೆಯಲ್ಲಿ ವ್ಯಾಯಾಮ ಚಟುವಟಿಕೆ ಯಾವ ಮಾದರಿಯಲ್ಲಿ ಇದೆ ಎಂದು ಅಧ್ಯಯನ ಮಾಡುವುದು ಈ ಅಧ್ಯಯನದ ಉದ್ದೇಶವಾಗಿದೆ. ಸರಳ ಯಾದೃಚ್ಛಿಕ ಮಾದರಿಯ ಮೂಲಕ ಶಿವಮೊಗ್ಗ ನಗರದ ಪ್ರಥಮ ದರ್ಜೆ ಕಾಲೇಜಿನ ಪದವಿ ವಿದ್ಯಾರ್ಥಿನಿಯರಲ್ಲಿ ಬಿಎ, ಬಿಕಾಂ, ಬಿಎಸ್ಸಿ ತರಗತಿಗಳಿಂದ 19 ರಿಂದ 23 ವಯಸ್ಸಿನ ಅವಧಿಯ ತಲಾ 15 ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಿಕೊಂಡು ಅಧ್ಯಯನದಲ್ಲಿ ತೊಡಗಿಸಿಕೊಳ್ಳಲಾಗಿದೆ. ಒಟ್ಟು 45 ವಿದ್ಯಾರ್ಥಿನಿಯರನ್ನು ಕುರಿತು ಅಧ್ಯಯನ ಕೈಗೊಳ್ಳಲಾಗಿದೆ. ಸಂದರ್ಶನ ಅನುಸೂಚಿ ತಯಾರಿಸುವುದರ ಮೂಲಕ, ಮಾದರಿಗಳನ್ನು ಸಂದರ್ಶನ ಮಾಡುವುದರ ಮೂಲಕ ಮಾಹಿತಿ ಸಂಗ್ರಹಿಸಲಾಗಿದೆ. ದೈಹಿಕ ಚಟುವಟಿಕೆಯಲ್ಲಿ ವಿದ್ಯಾರ್ಥಿನಿಯರು ವ್ಯಾಯಾಮಕ್ಕೆ ಆಯ್ಕೆ ಮಾಡುವ ಸಮಯ, ವ್ಯಾಯಾಮದ ಮಾಹಿತಿಯ ಮೂಲ, ಯಾವ ರೀತಿಯ ವ್ಯಾಯಾಮದ ಆಯ್ಕೆ ಮಾಡುತ್ತಾರೆ, ವ್ಯಾಯಾಮ ಮಾಡದಿದ್ದರೆ ಅದಕ್ಕೆ ಕಾರಣಗಳೇನು ಎಂದೂ ತಿಳಿಯಲಾಗಿದೆ. ಪ್ರಮುಖ ಪದಗಳು : ದೈಹಿಕ ಚಟುವಟಿಕೆ, ವ್ಯಾಯಾಮ, ವಿದ್ಯಾರ್ಥಿನಿಯರು, ಆರೋಗ್ಯ. ಈ ಪುಸ್ತಕವು ಸಮಾಜ ವಿಜ್ಞಾನ ಹಾಗೂ ಮಾನವಿಕ ಪರಿಭಾಷೆಗಳ ಕುರಿತಾದ ಪುಸ್ತಕವಾಗಿದೆ. ಇದು ವಿದ್ಯಾರ್ಥಿಗಳಿಗೆ ಮತ್ತು ಜನಸಾಮಾನ್ಯರಿಗೆ ಬಹಳ ಉಪಯುಕ್ತವಾದ ಪುಸ್ತಕವಾಗಿದೆ. ಸಾಮಾಜಿಕ ಮತ್ತು ಮಾನವಿಕ ಅಧ್ಯಯನ ಶಾಖೆಗಳಲ್ಲಿ ಆಸಕ್ತರಾಗಿರುವ ವಿದ್ಯಾರ್ಥಿಗಳು ಎದುರಿಸುತ್ತಿರುವ ಕೊರತೆಯೊಂದನ್ನು ನೀಗಿಸಲು ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಕೈಗೆತ್ತಿಕೊಂಡ ಯೋಜನೆಯ ಫಲಿತವೇ ಈ ಪುಸ್ತಕ. ಈ ಪುಸ್ತಕದ ಸಂಪಾದಕರು ಈ ಯೋಜನೆಯ ರೂಪುರೇಷೆಗಳನ್ನು ಅವರ ಬರೆಹದಲ್ಲಿ ವಿವರಿಸಿದ್ದಾರೆ. ಸಮಾಜ ಮತ್ತು ಸಂಸ್ಕೃತಿ ಸಂಶೋಧನೆಗಳಲ್ಲಿ ಸಿದ್ಧಾಂತ, ಪರಿಭಾಷೆ ಮತ್ತು ಭಾಷೆಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ. ಅದರಲ್ಲೂ ಪರಿಭಾಷೆಗಳು ಇನ್ನೂ ಹೆಚ್ಚಿನ ಮಹತ್ವವನ್ನು ಹೊಂದಿವೆ. ಏಕೆಂದರೆ ಇವು ಸಿದ್ಧಾಂತಕ್ಕೆ ಜೀವ ತುಂಬುತ್ತವೆ. ಆದುದರಿಂದ ಪರಿಭಾಷೆಗಳನ್ನು ಅರ್ಥಮಾಡಿಕೊಂಡು ಬಳಸಲು ಕಲಿಯುವುದು ಜ್ಞಾನದ ಗಳಿಕೆಗೆ ಹಾಗೂ ಸೃಷ್ಟಿಗೆ ಅನಿವಾರ್ಯ. ಈ ನಿಟ್ಟಿನಲ್ಲಿ ಈ ಪುಸ್ತಕವು ಬಹಳ ಅತ್ಯಮೂಲ್ಯವಾದದ್ದು ಎಂದರೆ ತಪ್ಪಾಗಲಾರದು. ಇಂದಿನ ಸಮಾಜ ವಿಜ್ಞಾನದ ಓದು ಮತ್ತು ಬೋಧನೆಯಲ್ಲಿ ಪರಿಭಾಷೆಗಳನ್ನು ರೂಪಿಸಿಕೊಂಡು ಬಳಸುವುದರ ಮೇಲೆ ಪ್ರತ್ಯೇಕವಾಗಿ ಗಮನ ಹರಿಸುವ ಪರಿಪಾಠ ಕಡಿಮೆ. ಇದು ಜ್ಞಾನ ಸಂಪಾದನೆಗೆ ಬಹುದೊಡ್ಡ ತೊಡಕಾಗಿದೆ. ಈ ತೊಡಕನ್ನು ನಿವಾರಿಸಲು ಈ ಪುಸ್ತಕವು ನೆರವಾಗಲು ಯತ್ನಿಸುತ್ತದೆ. ಈ ಪುಸ್ತಕದಲ್ಲಿ ಈ ಕೆಳಕಂಡ ಪರಿಕಲ್ಪನೆಗಳನ್ನು ವಿವರಿಸಲಾಗಿದೆ.
ಹತ್ತಿರವಿದ್ದರೂ ದೂರ ನಿಲ್ಲುವೆವು,
ನಮ್ಮ ಅಹಮ್ಮಿನ ಕೋಟೆಯಲಿ, ಎಷ್ಟು ಕಷ್ಟವೋ ಹೊಂದಿಕೆಯೆಂಬುದು ನಾಲ್ಕು ದಿನದ ಈ ಬದುಕಿನಲ್ಲಿ - ಜಿ.ಎಸ್. ಶಿವರುದ್ರಪ್ಪ ದೂರವಿದ್ದರೂ ಮುಖ ನೋಡದೆ, ಭೇಟಿಯಾಗದೆ, ನನ್ನನ್ನು ಅವರ ಮಗನಂತೆ ಕಂಡು ಮಾರ್ಗದರ್ಶನ ಮಾಡಿದ ಟಿ.ಕೆ. ನೈಯ್ಯರ್ ರವರ ವ್ಯಕ್ತಿತ್ವಕ್ಕೆ ನಾನು ಮಾರು ಹೋದೆ. ಬೆಳಿಗ್ಗೆಯಿಂದ ರಾತ್ರಿವರೆಗಿನ ಜೊತೆಯಲ್ಲಿರುತ್ತೇವೆ, ಕಾಫಿ ಕುಡಿಯುತ್ತೇವೆ, ಜೊತೆಯಲ್ಲಿ ಊಟ ಮಾಡುತ್ತೇವೆ ಆದರೆ ದೂರ ನಿಲ್ಲುತ್ತೇವೆ, ಮನಸ್ಸಿನಲ್ಲಿ ಮೆಚ್ಚುಗೆಯ ಮಮಕಾರವಿರುವುದಿಲ್ಲ. ನಮ್ಮ ಹಳ್ಳಿಗಳ ಎಷ್ಟೋ ಹೆಣ್ಣುಮಕ್ಕಳು ಧೈರ್ಯವಾಗಿ ಶಾಲಾ ಕಾಲೇಜುಗಳಿಗೆ ಹೋಗಿಬರಲು ಆಗುತ್ತಿಲ್ಲ. ಭಯ ಅಥವಾ ರಕ್ಷಣೆಯ ಕೊರತೆಯಿಂದಾಗಿ ಅವರು ಶಿಕ್ಷಣ ತೊರೆಯುತ್ತಿದ್ದಾರೆ. ಒಂದು ಕಡೆ ಹೆಣ್ಣುಮಕ್ಕಳು ಕಲಿಯಬೇಕು, 18ರೊಳಗೆ ಮದುವೆಯಾಗಬಾರದು ಎಂದು ಸರ್ಕಾರ ಹೇಳುತ್ತಿದೆ. ಆದರೆ, ಅವರು ಕಾಲೇಜು ಬಿಟ್ಟರೆ, ಮನೆಯವರು ಮದುವೆಯಾಗು ಎನ್ನುತ್ತಾರೆ. ಶಾಲೆಗೆ ಕಾಲೇಜಿಗೆ ಒಂಟಿಯಾಗಿ ಬಸ್ನಲ್ಲಿ ಹೋಗಿಬರುವುದಕ್ಕೇ ಅಡ್ಡಿಗಳಿವೆ. ಬೀದಿ ಕಾಮಣ್ಣರು, ಅತ್ಯಾಚಾರಿಗಳು ಕೊಡುವ ಕೊಟಲೆಗಳನ್ನು ದಿನವೂ ನಾವು ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ. ಮನೆಗಳಲ್ಲಿರುವ ಪೋಷಕರೂ ಹೀಗೇ ಯೋಚಿಸುತ್ತಾರೆ. ಶಾಲೆಗೆ ಹೋಗಲೇಬೇಡ ಎನ್ನುತ್ತಾರೆ. ಇವನ್ನು ಬಗೆಹರಿಸುವುದು ಹೇಗೆ? ಮಕ್ಕಳ ಹಕ್ಕುಗಳಿಗಾಗಿ ಶಾಸಕರ ವೇದಿಕೆ ಮತ್ತು ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ ಆಯೋಜಿಸಿದ್ದ ರಾಜ್ಯ ಮಟ್ಟದ ಮಕ್ಕಳ ಸಂಸತ್ ಮತ್ತು ವಿಧಾನಸೌಧದಲ್ಲಿ ರಾಜ್ಯದ ಮುಖ್ಯಮಂತ್ರಿಗಳೊಡನೆ ಮಕ್ಕಳ ಸಮಾಲೋಚನೆಯಲ್ಲಿ ಮಕ್ಕಳ ಪ್ರತಿನಿಧಿಗಳು ಮುಂದಿಟ್ಟಿದ್ದ ವಿಚಾರ (ನವೆಂಬರ್ 17, 2015). ಇದೇ ರೀತಿ ಹಲವು ವಿಚಾರಗಳು ಮುಖ್ಯಮಂತ್ರಿಗಳ ಮುಂದೆ ಮಕ್ಕಳು ಮಂಡಿಸುತ್ತಿದ್ದರು. ಮಕ್ಕಳ ಅಂಗವಿಕಲತೆ ತಡೆ, ಶಿಕ್ಷಣ, ಒಟ್ಟಾರೆಯಾಗಿ ಮಕ್ಕಳ ರಕ್ಷಣೆ, ಪೌಷ್ಟಿಕತೆ, ಆರೋಗ್ಯ, ಹೆಚ್.ಐ.ವಿ. ಏಡ್ಸ್ ಬಾಧಿತ ಮಕ್ಕಳು, ಮಕ್ಕಳ ಸಾಗಣೆ, ಮಕ್ಕಳ ಮೇಲೆ ಆಗುವ ತೊಂದರೆಗಳು, ಇತ್ಯಾದಿ.
ಎನ್.ವಿ. ವಾಸುದೇವ ಶರ್ಮಾ ಕಾರ್ಯಕಾರಿ ನಿರ್ದೇಶಕ, ಚೈಲ್ಡ್ ರೈಟ್ಸ್ ಟ್ರಸ್ಟ್, ಬೆಂಗಳೂರು ಆಧುನಿಕ ಯುಗದಲ್ಲಿ ದಲಿತರು ಎದುರಿಸುತ್ತಿರುವ ಹಲವಾರು ಸವಾಲುಗಳಲ್ಲಿ ಜಾಗತೀಕರಣವೂ ಒಂದಾಗಿದೆ. 20ನೇ ಶತಮಾನದ ಅಮೇರಿಕಾ ನೇತೃತ್ವದ ಜಾಗತೀಕರಣ ಶ್ರೀಮಂತರ ಮತ್ತು ಬಡವರ ನಡುವಿನ ಕಂದಕವನ್ನು ಹೆಚ್ಚಿಸಿದೆ. ಇಡೀ ಮನುಕುಲವನ್ನು ಪ್ರಸ್ತುತ ಸಂದರ್ಭದಲ್ಲಿ ಭ್ರಾತೃತ್ವ, ಸಮಾನತೆ, ಸ್ವಾತಂತ್ರ್ಯ ಮತ್ತು ಸಬಲೀಕರಣದೆಡೆಗೆ ಮುನ್ನಡೆಸುವ ನಿಟ್ಟಿನಲ್ಲಿ ಬುದ್ಧಮಾರ್ಗ ಮತ್ತು ಭೀಮಸಂದೇಶ ಪ್ರಸ್ತುತವಾಗಿದೆ. ಇಂದು ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ಮಹಿಳೆಯರು ಸಾಮಾಜಿಕವಾಗಿ ಹೀನಾಯ ಸ್ಥಿತಿಯಲ್ಲಿದ್ದಾರೆ. ತುಳಿತಕ್ಕೊಳಗಾದ ಈ ವರ್ಗಗಳು ರಾಜಕೀಯವಾಗಿಯೂ ಇಂದು ಮಾರುಕಟ್ಟೆ ಶಕ್ತಿಗಳ ಹುನ್ನಾರದಿಂದಾಗಿ ಅತಂತ್ರರಾಗಿದ್ದಾರೆ.
ಶ್ರೀನಿವಾಸ ಡಿ. ಪ್ರಾಜೆಕ್ಟ್ ಫೆಲೊ, ಯುಜಿಸಿ-ಯುಪಿಇ ಫೋಕಸ್ ಏರಿಯ-, ಸಮಾಜಕಾರ್ಯ ವಿಭಾಗ, ಮೈಸೂರು ವಿಶ್ವವಿದ್ಯಾಲಯ, ಮೈಸೂರು ನಿಂಗರಾಜು ಆರ್. ಅತಿಥಿ ಬೋಧಕರು, ಈವನಿಂಗ್ ಮಹಾರಾಜ ಕಾಲೇಜು, ಸಮಾಜಶಾಸ್ತ್ರ ವಿಭಾಗ, ಮೈಸೂರು ವಿಶ್ವವಿದ್ಯಾಲಯ, ಮೈಸೂರು ಮಹಾದೇವಸ್ವಾಮಿ ಡಿ. ಸಂಶೋಧನಾ ವಿದ್ಯಾರ್ಥಿ, ಇತಿಹಾಸ ವಿಭಾಗ, ಮೈಸೂರು ವಿಶ್ವವಿದ್ಯಾಲಯ, ಮೈಸೂರು ಮಾನವನ ವರ್ತನೆ ವಿಚಿತ್ರ. ಅದು ಹಿತವಾಗಿರುವಷ್ಟೇ ಅಹಿತವಾಗಿಯೂ ಇರುತ್ತದೆ. ಮನುಷ್ಯರಲ್ಲಿ ಒಳ್ಳೆಯದರ ಜತೆಗೆ ಕೆಟ್ಟ ಗುಣಗಳೂ ಇರುತ್ತವೆ. ನಾವು ಇತರರನ್ನು ಪ್ರೀತಿಸುತ್ತೇವೆ, ಪೋಷಿಸುತ್ತೇವೆ, ಕಾಪಾಡುತ್ತೇವೆ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತೇವೆ. ಅಷ್ಟೇ ಸರಾಗವಾಗಿ ಇತರರ ಮೇಲೆ ಕೋಪಿಸಿಕೊಳ್ಳುತ್ತೇವೆ, ಆಕ್ರಮಣ ಮಾಡುತ್ತೇವೆ; ಹೋರಾಡುತ್ತೇವೆ, ಹೊಡೆಯುತ್ತೇವೆ, ಗಾಯಗೊಳಿಸುತ್ತೇವೆ, ನೋವುಂಟು ಮಾಡುತ್ತೇವೆ. ಹಿಂಸಿಸುತ್ತೇವೆ, ಬೈಯುತ್ತೇವೆ, ಮರ್ಯಾದೆ ಕಳೆಯುತ್ತೇವೆ, ಅವಮಾನಗೊಳಿಸುತ್ತೇವೆ. ಅಷ್ಟೇಕೆ, ಯುದ್ಧ ಮಾಡುತ್ತೇವೆ, ಜನರನ್ನು ಕೊಲ್ಲುತ್ತೇವೆ, ಅಪಾರವಾದ ಕಷ್ಟ ನಷ್ಟಗಳಿಗೆ ಕಾರಣಕರ್ತರಾಗುತ್ತೇವೆ. ನಿಮಗೆ ಆಶ್ಚರ್ಯವಾಗಬಹುದು, ಕಳೆದ 5,600 ವರ್ಷಗಳಲ್ಲಿ ಸುಮಾರು 14,600 ಯುದ್ಧಗಳು ನಡೆದಿವೆಯೆಂದು ಹೇಳಲಾಗಿದೆ. ಕೋಟ್ಯಾಂತರ ಜನರ ಕೊಲೆಯಾಗಿದೆ. ಯಾಕೆ ಹೀಗೆ? ವಿಶ್ವದಲ್ಲಿ ಯಾವ ಪ್ರಾಣಿಯೂ ಅನವಶ್ಯಕವಾಗಿ ಕೊಲ್ಲುವುದಿಲ್ಲ, ಮಾನವರನ್ನು ಬಿಟ್ಟು. ಪ್ರಾಣಿಗಳು ಕೊಲ್ಲುವುದು ಊಟಕ್ಕಾಗಿ, ಮಾನವರು ಕೊಲ್ಲುವುದು ಆಟಕ್ಕಾಗಿ; ಕೆಲವರು ವಿನೋದಕ್ಕಾಗಿ ಬೇಟೆಯಾಡುತ್ತಾರೆ; ಪ್ರಾಣಿಗಳನ್ನು ಕೊಲ್ಲುತ್ತಾರೆ. ಇಂದು ವಿಶ್ವದ ಹಲವೆಡೆ ನಡೆಯುತ್ತಿರುವ ನರಮೇಧಗಳನ್ನು ನೋಡಿದರೆ ಮಾನವ ಎಲ್ಲಾ ಪ್ರಾಣಿಗಳಿಗಿಂತಲೂ ಕಟುಕನೆನಿಸುತ್ತದೆ. ಎಲ್ಲೆಡೆ ನಡೆಯುತ್ತಿರುವ ಭಯೋತ್ಪಾದಕರ ಮತ್ತು ಆತ್ಮಹತ್ಯೆ ದಳದವರ ಘೋರ ಕೃತ್ಯಗಳನ್ನು ಗಮನಿಸಿದರೆ ಮಾನವನಿಗಿಂತ ಹಿಂಸ್ರ ಪ್ರಾಣಿ ಇನ್ನೊಂದಿದೆಯೆ ಎನಿಸುತ್ತದೆ. ಮಾನವರಲ್ಲಿ ಹಿಂಸಾಪ್ರವೃತ್ತಿ ಹುಟ್ಟಿನಿಂದಲೇ ಬಂದಿದೆಯೇನೋ ಅನಿಸುತ್ತದೆ.
ಸಮಾಜಕಾರ್ಯದ ಮೌಲ್ಯಗಳಲ್ಲಿ ನಂಬಿಕೆಯಿಟ್ಟು, ಸಮುದಾಯ ಸಂಘಟನೆಯ ತತ್ವಗಳನ್ನು ಸಮುದಾಯದಲ್ಲಿ ಅಳವಡಿಸುವ ಮೂಲಕ ನಿಜ ಸಮಾಜಕಾರ್ಯವನ್ನು ಆಚರಿಸುತ್ತಿರುವ ಸಮಾನಮನಸ್ಕ ಯುವಜನರ ತಂಡವೇ ಉಸಿರಿಗಾಗಿ ಹಸಿರು. ಸದರಿ ತಂಡಕ್ಕೆ ಸೂಕ್ತ ಮಾರ್ಗದರ್ಶನ ನೀಡಿ ಮುನ್ನಡೆಸುತ್ತಿರುವವರೂ ಸಹ ವೃತ್ತಿಪರ ಸಮಾಜಕಾರ್ಯರ್ತರು ಎಂಬುದು ವಿಶೇಷ. ಮೇಲ್ನೋಟಕ್ಕೆ ಪರಿಸರ ಪ್ರೇಮಿಗಳ ಗುಂಪಾಗಿ ಕಂಡರೂ ಒಳಹೊಕ್ಕು ನೋಡಿದಾಗ ಸಮಾಜಕಾರ್ಯದ ನಿಜವಾದ ಆಚರಣೆ ಅನಾವರಣಗೊಳ್ಳುತ್ತದೆ. ಸಮುದಾಯ ಸಂಘಟನೆಯ ಬಹುಪಾಲು ತತ್ವಗಳನ್ನು ಅಳವಡಿಸಿಕೊಂಡು ಯಶಸ್ಸಿನತ್ತ ಸಾಗುತ್ತಿರುವ ತಂಡಕ್ಕೆ ಸಮಾಜಕಾರ್ಯವೇ ಸ್ಪೂರ್ತಿ. ಸುಸ್ಥಿರ ಅಭಿವೃದ್ಧಿಯಿಂದ ಮಾತ್ರ ಮನುಕುಲದ ಉಳಿವು ಸಾಧ್ಯವೆಂದು ನಂಬಿರುವ ಸದಸ್ಯರು, ತಮ್ಮ ಗುರಿ ಸಾಧನೆಗಾಗಿ ತಮ್ಮಲ್ಲಿರುವ ಅಗಾಧ ಇಚ್ಚಾಶಕ್ತಿಯಲ್ಲಿ ನಂಬಿಕೆಯಿಟ್ಟಿದ್ದಾರೆ. ಹೀಗೆ ತಮ್ಮದೇ ವಿಭಿನ್ನ ಕಾರ್ಯವೈಖರಿಯ ಮೂಲಕ ಮನೆಮಾತಾಗಿರುವ ತಂಡದ ಕಾರ್ಯಗಳಲ್ಲಿ ಎದ್ದುಕಾಣುವ ಸಮಾಜಕಾರ್ಯ ಆಚರಣೆಯ ಹೆಗ್ಗುರುತುಗಳನ್ನು ಗುರುತಿಸುವ ಪ್ರಯತ್ನವೇ ಈ ಲೇಖನ.
ದಿ ಬ್ಯಾನ್ಯನ್ ನ ಸಂಸ್ಥಾಪಕರು ಮತ್ತು ವ್ಯವಸ್ಥಾಪಕ ಟ್ರಸ್ಟ ಜಾಗತೀಕರಣದೊಂದಿಗೆ, ಮಾನಸಿಕ ಆರೋಗ್ಯವೂ ಒಂದು ಪ್ರಮುಖ ಕಳಕಳೀಯ ಕ್ಷೇತ್ರವಾಗಿದೆ ಮತ್ತು ಭಾರತದ ಜನಸಂಖ್ಯೆಯ ಶೇಕಡ 10 ರಿಂದ 12ರಷ್ಟು ಜನರಿಗೆ ಇದರ ನೆರವಿನ ಅವಶ್ಯಕತೆಯಿದೆ. ಇದಕ್ಕಾಗಿ, ನಮ್ಮಲ್ಲಿ ಮಾನಸಿಕ ಅಸ್ವಸ್ಥತೆಗೆ ಕೇವಲ ವೈದ್ಯಕೀಯ ವಿಧಾನದ ಹೆಚ್ಚೆಚ್ಚು ಮನೋವೈದ್ಯರಿದ್ದಾರೆ. ಆದರೆ ಮಾನಸಿಕ ಆರೋಗ್ಯವು ವೈದ್ಯಕೀಯ ವಿಷಯಕ್ಕಿಂತಲೂ ಹೆಚ್ಚಿನದು. ಇದು ಸಾಮಾಜಿಕ ಕಲ್ಪನೆಯೂ ಹೌದು. ವಿವಿಧ ಸಾಮಾಜಿಕ-ಆರ್ಥಿಕ, ರಾಜಕೀಯ, ಕೌಟುಂಬಿಕ ಮತ್ತು ಮಾನಸಿಕ ಪ್ರಕ್ರಿಯೆಗಳು ಮಾನಸಿಕ ಅಸ್ವಸ್ಥೆತೆಗೆ ಕಾರಣವಾಗಿರುತ್ತದೆ. ನಿರ್ಗತಿಕ ಮಹಿಳೆಯರ ಅವಶ್ಯಕತೆಗೆ ಸ್ಪಂದಿಸುವುದಕ್ಕಾಗಿ ದಿ ಬ್ಯಾನ್ಯನ್ 1993 ರಲ್ಲಿ ಚೆನ್ನೈನಲ್ಲಿ ಪ್ರಾರಂಭವಾಯಿತು. ಇದು ಲಾಭದ ಉದ್ದೇಶ ಹೊಂದಿರದ ನೊಂದಾಯಿತ ಸಂಸ್ಥೆಯಾಗಿದೆ, ಇದು ಮಾನಸಿಕ ಅಸ್ವಸ್ಥರಿಗೆ, ಸಮುದಾಯಗಳಲ್ಲಿ ನಿರಾಶ್ರಿತರಾಗಿ ಮತ್ತು ಬಡತನದಿಂದ ಜೀವಿಸುತ್ತಿರುವವರಿಗೆ ಸಮಗ್ರ ಮಾನಸಿಕ ಆರೋಗ್ಯ ಪರಿಹಾರಗಳನ್ನು ಒದಗಿಸುತ್ತದೆ.
ಸಾರಾಂಶ
ಕರ್ನಾಟಕದ ಅವಿಭಜಿತ ದಕ್ಷಿಣ ಕನ್ನಡ ಮತ್ತು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಗಳ ವಾಸ್ತವ್ಯವಿರುವ ಕುಲಾಲರ ಯಾನೆ ಮೂಲ್ಯರ ಬಗೆಗಿನ ಒಂದು ಅಧ್ಯಯನವು ಇದಾಗಿದೆ. ಕುಲಾಲ ಸಮುದಾಯದಲ್ಲಿ ಒಳಜಾತಿಗಳಿದ್ದು ಅವು ಅವುಗಳದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಅದರಲ್ಲಿ ಶೋಷಣೆಗೊಳಪಟ್ಟ ಉಪ್ಯಾನ್ ಒಳಜಾತಿಯ ಬಗೆಗೆ ನಡೆಸಿದ ಅಧ್ಯಯನವು ಇದಾಗಿದ್ದು, ಕುಲಾಲ ಸಮಾಜದ ತಪ್ಪು ಕಲ್ಪನೆಯನ್ನು ಹೊಡೆದೋಡಿಸುವಲ್ಲಿ ಈ ಅಧ್ಯಯನದ ಪಾತ್ರ ಪ್ರಮುಖವಾದುದೂ, ಕುಲಾಲ ಸಮುದಾಯದ ಹಿರಿಯರಲ್ಲಿ, ಮುಖಂಡರಲ್ಲಿ ಹಾಗೂ ಕುಲಾಲ ಸಮಾಜದ ಉಪ್ಯಾನ್ ಒಳಜಾತಿಯ ಹೆಣ್ಣು ಮಕ್ಕಳಿಂದ ಅಧ್ಯಯನಕ್ಕೆ ಬೇಕಾದ ಮಾಹಿತಿಯನ್ನು ಸಂದರ್ಶಕ ಸ್ನೇಹಿ ಸಂದರ್ಶನದ ಮೂಲಕ ಸಂಗ್ರಹಿಸಲಾಗಿದೆ. ಈ ಅಧ್ಯಯನವು ಮುಂದಿನ ಅಧ್ಯಯನಕ್ಕೆ ಪೂರಕವಾದ ಪ್ರಶ್ನೆ ಮತ್ತು ವೇದಿಕೆಯನ್ನು ಒದಗಿಸಿರುವುದರಿಂದ ಇದರ ಅಧ್ಯಯನ ವ್ಯಾಪ್ತಿ ವಿಶಾಲವಾದುದಾಗಿದೆ. ಮೂಢನಂಬಿಕೆಯನ್ನು ಮೀರಿದ ಕೆಲವು ಕುಲಾಲ ಕುಟುಂಬಗಳು ಈಗಲೂ ಉತ್ತಮ ಜೀವನವನ್ನು ನಡೆಸುತ್ತಿರುವುದರಿಂದ ಮುಂದೆ ಈ ಮೌಢ್ಯತೆಯು ತೆರೆಮರೆಗೆ ಸರಿಯಬಹುದೆಂದು ಲೇಖಕರ ಅಭಿಪ್ರಾಯದಾಗಿದೆ. ಪ್ರಮುಖ ಪದಗಳು:- ಒಳಜಾತಿ, ಉಪ್ಯಾನ್ ಬರಿ, ಉಪ್ಪು, ಸಾಧುಸ್ವಭಾವ, ತುಳು ಡಾ. ರೂತ್ ಮನೋರಮಾರೊಂದಿಗಿನ ನನ್ನ ಒಡನಾಟವು 1973 ರಿಂದ ಪ್ರಾರಂಭವಾಯಿತು. ನನ್ನ ಹಳೆಯ ವಿದ್ಯಾರ್ಥಿಯಾದ ಆರ್.ಎಸ್. ಅನ್‍ಬರಾಸನ್‍ರವರು ರೂತ್ ಮನೋರಮಾ ಮತ್ತು ಅವರ ಸಹಪಾಠಿಯಾದ ಕರುಣಾ ಡೇವಿಡ್ರನ್ನು ಮದ್ರಾಸ್ ಸ್ಕೂಲ್ ಆಫ್ ಸೋಶಿಯಲ್ ವರ್ಕ್‍ನಲ್ಲಿ ನನಗೆ ಪರಿಚಯಿಸಿದರು. ರೂತ್ ಮತ್ತು ಕರುಣಾರವರು ಸ್ನೇಹಶೀಲ ಗುಣದವರಾದ್ದರಿಂದ ನಮ್ಮಲ್ಲಿ ಒಳ್ಳೆಯ ಗೆಳೆತನ ಬೆಳೆಯಿತು. ರೂತ್ರವರು ವಿದ್ಯಾರ್ಥಿಯಾಗಿದ್ದಾಗಿನಿಂದಲೇ ತಮ್ಮಲ್ಲಿ ಅಪಾರ ಆತ್ಮವಿಶ್ವಾಸವನ್ನು ಬೆಳಸಿಕೊಂಡಿದ್ದರಿಂದ ಮುಂದೊಂದು ದಿನ ಇವರು ಜನ ನಾಯಕರಾಗುತ್ತಾರೆಂದು ನನಗೆ ಯಾವಾಗಲೂ ಅನ್ನಿಸುತ್ತಿತ್ತು. ಅವರು ಎಲ್ಲಾ ಸಾಮಾಜಿಕ ಸಮಸ್ಯೆಗಳ ಮೇಲೆ ನಿರ್ದಿಷ್ಟ ದೃಷ್ಟಿಕೋನಗಳನ್ನು ಹೊಂದಿದ್ದರು ಮತ್ತು ತಮ್ಮ ಅಭಿಪ್ರಾಯಗಳನ್ನು ದೃಢ ಸಂಕಲ್ಪದೊಂದಿಗೆ ಅಭಿವ್ಯಕ್ತಿಗೊಳಿಸಿದರು. ರೂತ್‍ರವರು ಸುಮಾರು ನಾಲ್ಕು ದಶಕಗಳಿಂದ ದಲಿತ ಮಹಿಳೆಯರ ಸಬಲೀಕರಣ ಮತ್ತು ದಲಿತ ಚಳುವಳಿಯ ಕೇಂದ್ರ ಬಿಂದುವಾಗಿದ್ದಾರೆ. ಅವರ ಕಾರ್ಯಕ್ಷೇತ್ರವು ರಾಷ್ಟ್ರೀಯ ಎಲ್ಲೆಯ ಆಚೆಗೂ ವಿಸ್ತರಣೆಗೊಂಡಿದೆ. ಇವರು ಶೋಷಿತರ ವಿಮೋಚನಾ ಕಾರ್ಯಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲೂ ಸಕ್ರಿಯರಾಗಿದ್ದಾರೆ. ದಲಿತರಿಗಾಗಿ ಮತ್ತು ಮಹಿಳೆಯರ ವಿಮೋಚನೆಗಾಗಿ ಇವರು ನಡೆಸಿದ ಮತ್ತು ನಡೆಸುತ್ತಿರವ ಹೋರಾಟಗಳಿಂದ ಇವರಿಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ದೊರೆತಿದೆ ಮತ್ತು ಇದ್ದಕ್ಕಾಗಿ ಇವರಿಗೆ ಪ್ರತಿಷ್ಠಿತ ರೈಟ್ ಲೈವ್ಲಿವುಡ್ ಪ್ರಶಸ್ತಿಯನ್ನು ನೀಡಲಾಗಿದೆ. ಸದ್ಯದಲ್ಲೇ ಇವರಿಗೆ ಭಾರತ ಸರ್ಕಾರದಿಂದ ಸೂಕ್ತ ಪದ್ಮ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ನಾನು ಖಚಿತವಾಗಿ ಹೇಳುತ್ತೇನೆ. ತನ್ನ ಗುರಿ ಸಾಧನೆಯಲ್ಲಿ ರೂತ್ ಮನೋರಮಾರವರ ಆಶಾವಾದಕ್ಕೆ ಮುಂದೊಂದು ದಿನ ಶಾಂತಿ ನೊಬೆಲ್ ಪ್ರಶಸ್ತಿಯು ಲಭಿಸುವುದರಲ್ಲಿ ಸಂದೇಹವಿಲ್ಲ.
ಡಾ. ಟಿ.ಕೆ. ನೈಯ್ಯರ್ ಸಮಾಜಕಾರ್ಯದ ಪ್ರಾಧ್ಯಾಪಕರು ಮತ್ತು ಮಾಜಿ ಪ್ರಾಂಶುಪಾಲರು, ಮದ್ರಾಸ್ ಸ್ಕೂಲ್ ಆಫ್ ಸೋಶಿಯಲ್ ವರ್ಕ್. ಪೀಠಿಕೆ:
ಭಾರತೀಯ ಸಮಾಜವು ಸಾಂಸ್ಕೃತಿಕವಾಗಿ ಬಹುಮುಖಿ ಸಮಾಜವಾಗಿದ್ದು, ತನ್ನದೆ ಆದ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ. ಹಾಗೆಯೇ ಭಾರತದಲ್ಲಿ ವಿಭಿನ್ನ ಧಾರ್ಮಿಕ ಸಮೂಹಗಳು ಅಸ್ತಿತ್ವದಲ್ಲಿದ್ದು, ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿವೆ. ಭಾರತೀಯ ಸಮಾಜವು ಸ್ತರವಿನ್ಯಾಸಯುಕ್ತ ಸಮಾಜವಾಗಿದ್ದು ಏಣಿಶ್ರೇಣಿಗಳಿಂದ, ನಿರ್ಬಂಧಗಳಿಂದ ಮತ್ತು ಅಸಮಾನತೆಯಿಂದ ಕೂಡಿದೆ. ಈ ಅಸಮಾನತೆಯ ಮೂಲ ಜಾತಿ ಸಮೂಹಗಳಲ್ಲಿರುವ ವೈವಿಧ್ಯತೆಗೆ ಕಾರಣವಾಗಿದೆ. ಭಾರತದಲ್ಲಿ ಗ್ರೀಕರು/ಹೂಣರು, ಕುಶಾನರು, ಮಂಗೋಲರು, ತುರುಕರು, ಮೊಘಲರು ಮುಂತಾದ ಜನಾಂಗೀಯ ಮೂಲನಿವಾಸಿ, ಆದಿವಾಸಿ ಬುಡಕಟ್ಟು ಜನಾಂಗದೊಂದಿಗೆ ಸಮ್ಮಿಶ್ರಣಗೊಂಡಿದ್ದಾರೆ. ಭಾರತದ ಮೂಲನಿವಾಸಿಗಳಾಗಿ ಆದಿವಾಸಿ ಬುಡಕಟ್ಟು ಜನಾಂಗದವರನ್ನು ಗುರುತಿಸಲಾಗಿದೆ. ಭಾರತದಲ್ಲಿ 461 ಬುಡಕಟ್ಟು ಸಮುದಾಯಗಳಿವೆ. 2011ರ ಜನಗಣತಿಯಂತೆ 9.50 ಕೋಟಿ ಜನಸಂಖ್ಯೆ ಬುಡಕಟ್ಟು ಸಮುದಾಯದವರಾಗಿದ್ದಾರೆ. ಭಾರತದಲ್ಲಿ ಕೆಲವು ಬುಡಕಟ್ಟಿನ ಜನರು ಗ್ರಾಮ-ನಗರ ಸಂಸ್ಕೃತಿಗೂ ಸೇರಿಕೊಳ್ಳದೆ ತಮ್ಮದೇ ಆದ ವಿಶಿಷ್ಠ ಸಂಸ್ಕೃತಿ ಪರಂಪರೆಯ ವಿಭಿನ್ನತೆಯನ್ನು ಹೊಂದಿದ್ದಾರೆ. ಪ್ರೊ|| ಕೇಶವಮೂರ್ತಿ ಟಿ.ಎನ್. ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಾಗೇಪಲ್ಲಿ ಮಹಾತ್ಮ ಗಾಂಧೀಜಿಯವರು ಸದಾ ಕಾಲ ನಮಗೆ ಒಬ್ಬ ರಾಜಕೀಯ ನಾಯಕನಾಗಿ, ಸ್ವತಂತ್ರ ಹೋರಾಟಗಾರನಾಗಿ, ಸಾಮಾಜಿಕ ಸುಧಾರಣೆಯ ಪ್ರವರ್ತಕನಾಗಿ ಹಾಗೂ ತತ್ವಜ್ಞಾನಿ ಸರಳ ಜೀವಿಯಾಗಿ ಕಂಡುಬರುತ್ತಾರೆ. ಗಾಂಧೀಜಿ ಒಬ್ಬ ಪರಿಸರವಾದಿಯೂ ಹೌದೇ? ಎಂಬ ಪ್ರಶ್ನೆಗೆ ಬಹಳಷ್ಟು ಬಾರಿ ನಮಗೆ ಸಿಗುವ ಉತ್ತರ ನಕಾರಾತ್ಮಕವಾದ್ದು, ಇದಕ್ಕೆ ಕಾರಣವೆಂದರೆ ಗಾಂಧೀಜಿ ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯೂ ಪರಸರವನ್ನು ಕುರಿತ ವಿಚಾರಗಳನ್ನು ನೇರವಾಗಿ ವ್ಯಕ್ತಪಡಿಸಿಲ್ಲ. ಭಾರತದಲ್ಲಿ ಪರಿಸರ ಚಳುವಳಿಯ ಪ್ರಾರಂಭಕ್ಕೆ ಕಾರಣವಾದ ಕೆಲವು ಮೂಲ ಪರಿಕಲ್ಪನೆಗಳನ್ನು ಗಮನಿಸಿದಾಗ ಅವುಗಳಲ್ಲಿ ಗಾಂಧೀಜಿಯವರ ಚಿಂತನೆಯ ಪ್ರಭಾವವು ಗಾಢವಾಗಿರುವುದು ಕಂಡುಬರುತ್ತದೆ. ಆದ್ದರಿಂದ ಗಾಂಧೀಜಿಯವರು ಒಬ್ಬ ಪರಿಸರವಾದಿಯಾಗಿದ್ದರೆಂಬುದು ಸ್ಪಷ್ಟವಾಗಿದೆ. ಪರಿಸರ ಪ್ರಜ್ಞೆಯು ಕೇವಲ ಕಳೆದ ನಾಲ್ಕು ದಶಕಗಳಿಂದ ಮಾತ್ರ ಹೆಚ್ಚು ಮಹತ್ವವನ್ನು ಪಡೆದುಕೊಳ್ಳುತ್ತಿರುವ ವಿಷಯವಾಗಿರುವುದರಿಂದ ಪರಿಸರ ಚಳುವಳಿಯಲ್ಲಿ ಗಾಂಧೀಜಿಯವರ ಸ್ಥಾನಮಾನಗಳು ಇತ್ತೀಚೆಗೆ ಗುರುತಿಸಲ್ಪಟ್ಟಿದೆ. 2003ರಲ್ಲಿ ಜುಲಿಯಾ.ಆರ್.ಮಿಲ್ಲರ್‍ರವರು ಸಂಪಾದಕರಾಗಿರುವ Encyclopedia of Human Ecologyಯಲ್ಲಿ ಪರಿಸರವಾದಿಯಾಗಿ ಗಾಂಧೀಜಿಯವರ ಪಾತ್ರವನ್ನು ಗುರುತಿಸಲಾಗಿದೆ.
ಒಂದು ದೇಶ ಸಮೃದ್ಧವಾಗಿ ಬೆಳೆದು, ಅಲ್ಲಿಯ ಜನಮನದಲ್ಲಿ ಹಚ್ಚಹಸಿರಾಗಿ ನೆಲೆಯೂರಬೇಕಾದರೆ, ಅಲ್ಲಿ ಸತ್ಯ, ನ್ಯಾಯ, ನೀತಿ, ಪ್ರೀತಿಗಳು ತಳಹದಿಯಾಗಿರಬೇಕು. ಅಂಥ ಗೌರವಕ್ಕೆ ಪಾತ್ರವಾದದ್ದು ಆಷ್ಟ್ರೇಲಿಯಾ ದೇಶವೆನ್ನಬಹುದು. ಸತ್ಯವೇ ದೇವರೆಂದು ಬಗೆಯುವ ಉದಾತ್ತ ಭಾವನೆ ಅಲ್ಲಿಯ ಜನತೆಯದು. ಆ ದೇಶದ ಜನಜೀವನಕ್ಕೆ ಸುಖ-ಶಾಂತಿಯೇ ಪ್ರಧಾನವಾಗಿದೆ. ಅದರಂತೆ ಅನ್ಯದೇಶಿಯರೂ ಪ್ರೀತಿ-ಸ್ನೇಹಗಳನ್ನು ಬೆಳೆಸಿಕೊಂಡು ಹೋಗಬೇಕೆಂಬುದೇ ಅವರ ತತ್ವವೂ, ಸಂಕಲ್ಪವೂ ಆಗಿದೆ.
ಸಮಾಜಶಾಸ್ತ್ರದಲ್ಲಿ ಪ್ರಸ್ತಾಪವಾಗುವ ಅನೇಕ ಮೂಲ ಕಲ್ಪನೆಗಳಲ್ಲಿ ಸಮುದಾಯವೂ ಒಂದು. ಸಮಾಜಶಾಸ್ತ್ರಜ್ಞರು, ಮಾನವಶಾಸ್ತ್ರಜ್ಞರು, ಅರ್ಥಶಾಸ್ತ್ರಜ್ಞರು, ಸಮಾಜಕಾರ್ಯಕರ್ತರು, ರಾಜಕಾರಣಿಗಳು, ಯೋಜಕರು, ಯೋಜನೆಗಳ ಅನುಷ್ಟಾನ ನಿಪುಣರು, ಹೀಗೆ ಹಲವು ಹತ್ತು ಜನ ಸಮುದಾಯವೆಂಬ ಶಬ್ದವನ್ನು ಉಪಯೋಗಿಸುತ್ತಾರೆ. ಹಾಗಾಗಿ ಒಂದೊಂದು ಗುಂಪಿನವರೂ ಸಮುದಾಯ ಶಬ್ದಕ್ಕೆ ಒಂದೊಂದು ಅರ್ಥವನ್ನು ಕಲ್ಪಿಸುತ್ತಾರೆ. ನಾವಿಲ್ಲಿ ಸಮುದಾಯ ಸಂಘಟನೆಯ ಹಿನ್ನೆಲೆಯಲ್ಲಿ ಸಮುದಾಯ ಶಬ್ದವನ್ನು ಅರ್ಥಮಾಡಿಕೊಳ್ಳಬೇಕಾಗಿದೆ.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಪ್ರಕಟಿಸಿರುವ ಜನಸಾಮಾನ್ಯರಿಗಾಗಿ ಕಾನೂನು ಮಾಹಿತಿ ಪುಸ್ತಕವು ಹೆಸರೇ ಸೂಚಿಸುವಂತೆ ಇದು ಜನಸಾಮಾನ್ಯರಿಗೆ ಅಂದರೆ ಕಾನೂನಿನ ಸಾಕ್ಷರತೆಯಿಲ್ಲದವರಿಗೆ, ಸಮಾಜದ ಮಧ್ಯಮ ಮತ್ತು ದುರ್ಬಲ ವರ್ಗದವರಿಗೆ, ಶೋಷಿತರಿಗೆ, ನಿರ್ಗತಿಕರಿಗೆ ಅನ್ಯಾಯವಾದಾಗ ಅವರಿಗೆ ಕಾನೂನು ಜ್ಞಾನವನ್ನು ಹೊಂದಲು, ಸಂವಿಧಾನವು ಹಾಗೂ ಇತರ ಶಾಸನಗಳು ಅವರಿಗೆ ಕೊಡಮಾಡಿರುವ ಹಕ್ಕುಗಳು ಮತ್ತು ಬಾಧ್ಯತೆಗಳ ಬಗ್ಗೆ ಮತ್ತು ಉಚಿತ ಕಾನೂನು ಸಲಹೆಗಳ ಬಗ್ಗೆ ತಿಳಿದುಕೊಂಡು ನ್ಯಾಯಕ್ಕಾಗಿ ಹೋರಾಡಲು ಮಾರ್ಗಸೂಚಿಯಾಗಿದೆ. ಪ್ರಸ್ತುತ ಈ ಪುಸಕ್ತದ ಐದು ಆವೃತ್ತಿಗಳು ಹೊರಬಂದಿದ್ದು. ಪರಿಷ್ಕೃತ ಐದನೇ ಆವೃತ್ತಿಯಲ್ಲಿ ಸನ್ಮಾನ್ಯರುಗಳಾದ ನ್ಯಾ. ಹೆಚ್.ಎಲ್. ದತ್ತು (ನ್ಯಾಯಾಧೀಶರು, ಭಾರತದ ಸರ್ವೋಚ್ಚ ನ್ಯಾಯಾಲಯ), ನ್ಯಾ. ವಿ. ಗೋಪಾಲ ಗೌಡ (ನ್ಯಾಯಾಧೀಶರು, ಭಾರತದ ಸರ್ವೋಚ್ಚ ನ್ಯಾಯಾಲಯ) ನ್ಯಾ. ಡಿ.ಎಚ್. ವಾಗೆಲ (ಮುಖ್ಯ ನ್ಯಾಯಾಧೀಶರು, ಕರ್ನಾಟಕದ ಉಚ್ಚ ನ್ಯಾಯಾಲಯ) ಮತ್ತು ನ್ಯಾ. ಎನ್.ಕೆ. ಪಾಟೀಲ್ (ನ್ಯಾಯಾಧೀಶರು, ಕರ್ನಾಟಕದ ಉಚ್ಚ ನ್ಯಾಯಾಲಯ ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷರು, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ) ರವರು ಈ ಅತ್ಯುನ್ನತವಾದ ಪುಸ್ಕಕಕ್ಕೆ ಮುನ್ನುಡಿಯನ್ನು ಬರೆದು ಈ ಪುಸ್ತಕವು ಕಾನೂನಿನ ಸಾಕ್ಷರತೆಯಿಲ್ಲದವರಿಗೆ, ಸಮಾಜದ ಮಧ್ಯಮ ಮತ್ತು ದುರ್ಬಲ ವರ್ಗದವರಿಗೆ, ಶೋಷಿತರಿಗೆ, ನಿರ್ಗತಿಕರಿಗೆ ಅನ್ಯಾಯವಾದಾಗ ಅವರು ಯಾವ ರೀತಿ ಉಚಿತ ಕಾನೂನು ಸಲಹೆಯನ್ನು ಪಡೆದುಕೊಳ್ಳಬಹುದು ಎಂಬುದರ ಸಂಪೂರ್ಣ ಮಾಹಿತಿಯನ್ನು ನೀಡುತ್ತದೆ ಎಂಬುದನ್ನು ತಿಳಿಸಿದ್ದಾರೆ.
|
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|