1. ನಿಮ್ಮ ಉದ್ಯೋಗ/ವೃತ್ತಿಯನ್ನು ವಿವರಿಸಿ? ನಾನು ಅರ್ಪಿತ ಅಸೋಸಿಯೇಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಈಎಫ್ಐಎಲ್ ಎಜುಕೇಷನಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕಿಯಾಗಿದ್ದೇನೆ. ನಾನು ಲೇಖಕಿಯಾಗಿ, ಸಂಶೋಧಕಿಯಾಗಿ ಮತ್ತು ಸಾಂಸ್ಥಿಕ ಅಭಿವೃದ್ಧಿಯಲ್ಲಿ ಮಧ್ಯಸ್ಥಿಕೆ ವಹಿಸುವ ವಿಷಯದಲ್ಲಿ ತರಬೇತುದಾರಳಾಗಿ, ಭೋಧಕಿಯಾಗಿ, ವಿನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. 2. ಈ ಉದ್ಯೋಗಕ್ಕೆ ಅವಶ್ಯಕವಿರುವ ವಿದ್ಯಾರ್ಹತೆ ಏನು? ಪ್ರಕ್ರಿಯೆ ತರಬೇತಿ, ಮಾನವ ಸಂಪನ್ಮೂಲ ಕ್ಷೇತ್ರಗಳಲ್ಲಿ ಪ್ರಮಾಣೀಕರಣಗಳೊಂದಿಗೆ ಎಂ.ಎಸ್.ಡಬ್ಲ್ಯೂ ಮತ್ತು ಪಿಎಚ್.ಡಿ ಪದವಿ ಮತ್ತು ತಂತ್ರಜ್ಞಾನ ಮತ್ತು ಜನರ ನಿರ್ವಹಣೆಯಲ್ಲಿ ಹೆಚ್ಚುವರಿ ತರಬೇತಿ ಹೊಂದಿರಬೇಕು. 3. ಈ ಉದ್ಯೋಗಕ್ಕೆ ಅಗತ್ಯವಿರುವ ವೈಯಕ್ತಿಕ ಗುಣಗಳು/ಕೌಶಲ್ಯಗಳೇನು?
ನಾಯಕತ್ವ, ಧೈರ್ಯ, ಆಡಳಿತ ನಡೆಸುವ ಸಾಮರ್ಥ್ಯ, ವಾಕ್ಚಾತುರ್ಯ, ಮಾಹಿತಿಯನ್ನು ಸಂಗ್ರಹಿಸುವ ಮತ್ತು ಅನುರೂಪತೆಗೊಳಿಸುವ ಸಾಮರ್ಥ್ಯ, ಅಂಕಿಅಂಶಗಳ ಮತ್ತು ಸಂಖ್ಯಾತ್ಮಕ ಪರಿಣತಿ, ಸವಾಲುಗಳನ್ನು ಎದುರಿಸಲು ಸಿದ್ಧವಾದ ಮನಸ್ಥಿತಿ. 4. ಈ ಉದ್ಯೋಗದ ಉತ್ತಮ ಅಂಶಗಳಾವುವು?
5. ಈ ಉದ್ಯೋಗದ ಸವಾಲಿನ ಅಂಶಗಳು?
6. ನಿಮ್ಮ ಸಾಧನೆಗಳನ್ನು ತಿಳಿಸಿ?
7. ನಿಮ್ಮ ವೃತ್ತಿಯಲ್ಲಿನ ಯಶಸ್ಸಿನ ಗುಟ್ಟೇನು?
8. ನಿಮ್ಮ ಶೈಕ್ಷಣಿಕ ದಿನಗಳು ಕೆಲವು ಕುತೂಹಲಕಾರಿ ವಿಷಯಗಳನ್ನು ತಿಳಿಸಿ.
9. ನಿಮ್ಮ ವೃತ್ತಿಯನ್ನು ನೀವು ಹೇಗೆ ಯೋಜಿಸಿದ್ದಿರಿ? ನಾನು ಅತ್ಯಂತ ಯೋಜಿತಳು ಮತ್ತು ಕ್ರಮ ಆಧಾರಿತಳು. ನಾನು ಶಾಲಾ ಶಿಕ್ಷಣವನ್ನು ಮುಗಿಸಿದ ನಂತರ ಡಾಕ್ಟರೇಟ್ ಪದವಿಯನ್ನು ಪಡೆಯಬೇಕು ಅಥವಾ ವೈದ್ಯೆಯಾಗಬೇಕೆಂದುಕೊಂಡಿದ್ದೆ. ನಾನು ಇದಕ್ಕಾಗಿ ಬಹಳ ಪರಿಶ್ರಮಿಸಿದೆ. ಪದವಿಯಲ್ಲಿ ನಾನು ಮನಃಶಾಸ್ತ್ರ, ಸಮಾಜಶಾಸ್ತ್ರ ಮತ್ತು ಅರ್ಥಶಾಸ್ತ್ರವನ್ನು ಆರಿಸಿಕೊಂಡೆ. ನಾನು ಎಚ್ಆರ್ ಆಗಲು ಎಂ.ಎಸ್.ಡಬ್ಲ್ಯೂ ಅನ್ನು ಆರಿಸಿಕೊಂಡೆ. ಆಗಲೇ ನಾನು ಜಾನಪದ ನೃತ್ಯ, ನಾಟ್ಯ ಶಾಸ್ತ್ರಗಳಲ್ಲಿ ತರಬೇತಿಯನ್ನು ಪಡೆಯುತ್ತಿದ್ದೆ. ಆದುದರಿಂದ ಎಚ್ಆರ್ ನಲ್ಲಿ ಜನರೊಂದಿಗೆ ಕಾರ್ಯನಿರ್ವಹಿಸುವುದನ್ನು ಆರಿಸಿಕೊಂಡೆ. ನಾನು ನನ್ನ 30 ವಯಸ್ಸಿನೊಳಗೆ ನನ್ನ ಪಿಎಚ್.ಡಿ ಮತ್ತು ಸಂಶೋಧನೆಯನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಿದ್ದೆ. ಜೆ.ಎಂ. ಸಂಪತ್ ರವರು ನನ್ನ ಬಾಳಲ್ಲಿ ಬಂದ ಮೇಲೆ ನಾನು ನನ್ನ ವೃತ್ತಿಯಲ್ಲಿ ವೇಗವನ್ನು ಕಂಡೆ. 10. ನಿಮ್ಮ ಮೊದಲ ಉದ್ಯೋಗದ ಮೊದಲ ದಿನದ ಅನುಭವವನ್ನು ವಿವರಿಸಿ? ನಾನು ಮೊದಲು ಟೈಟಾನ್ ಕಂಪನಿಯಲ್ಲಿ ಕೆಲಸವನ್ನು ಆರಂಭಿಸಿದೆ ಅಲ್ಲಿ ಹೊಸಬರಿಗೆ ಹೆಚ್ಚು ಪ್ರೋತ್ಸಾಹ ದೊರೆಯುತ್ತಿತ್ತು. ನಾನು ಅಲ್ಲಿಗೆ ಬ್ಲಾಕ್ ಪ್ಲೇಸ್ಮೆಂಟ್ಗಾಗಿ ತೆರಳಿದೆ ಮತ್ತು ಹೆಚ್ಚುವರಿಯಾಗಿ 6 ತಿಂಗಳುಗಳ ಕಾಲ ಅಲ್ಲೇ ಉಳಿದುಕೊಂಡೆ. ಅಲ್ಲಿ ನನಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಲು ಮತ್ತು ಪ್ರತಿಭೆಯ ಅನಾವರಣದ ವೇದಿಕೆಯನ್ನು ಅಭಿವೃದ್ಧಿಪಡಿಸಲು ಅವಕಾಶವನ್ನು ನೀಡಿದರು. ಇದು ನನ್ನ ನೆಚ್ಚಿನ ಕ್ಷೇತ್ರವಾಗಿದ್ದರಿಂದ ನಾನು ಇದರಲ್ಲಿ ಸಂತೋಷದಿಂದ ಪಾಲ್ಗೊಂಡೆ ಮತ್ತು ಕೇವಲ ಒಂದು ತಿಂಗಳ ಅವಧಿಯಲ್ಲಿ 70 ಭಾಗದಷ್ಟು ನೌಕರರ ಹೆಸರು ಮತ್ತು ಹುದ್ದೆಯನ್ನು ತಿಳಿದುಕೊಂಡೆ. 11. ನಿಮ್ಮ ಪ್ರಮುಖ ಸಾಧನೆಗಳು ಮತ್ತು ಯಾವ ಅವಕಾಶಗಳು ನಿಮ್ಮನ್ನು ಈ ಹಾದಿಯಲ್ಲಿ ಮುನ್ನಡೆಸಿದೆ? ನಿರ್ದಿಷ್ಟವಾಗಿ ಅವಕಾಶವನ್ನು ಹೇಳುವುದು ಕಷ್ಟ. ಅನೇಕ ಅಂಶಗಳು ಮತ್ತು ಅನೇಕ ಉತ್ತಮ ಗುರುಗಳು, ಹಿರಿಯ ವೃತ್ತಿಪರರು ನನ್ನನ್ನು ಬೆಂಬಲಿಸಿದ್ದಾರೆ ಮತ್ತು ಮೌಲ್ಯಗಳ ಮತ್ತು ಸಂಸ್ಥೆಯ ಬೆಳವಣಿಗೆಯ ಕ್ಷೇತ್ರದಲ್ಲಿ ನನ್ನ ಸಾಮರ್ಥ್ಯದಲ್ಲಿ ನಂಬಿಕೆ ಇಟ್ಟಿದ್ದಾರೆ. 12. ನಾಯಕಿ/ಸಾಮಾಜಿಕ ಕಾರ್ಯಕರ್ತೆಯಾಗಿ ನೀವು ಬೇರೆ ನಾಯಕರು/ಸಾಮಾಜಿಕ ಕಾರ್ಯಕರ್ತರಿಂದ ನಿಮ್ಮನ್ನು ಹೇಗೆ ಪ್ರತ್ಯೇಕಿಸಬಹುದು?
13. ನಾಯಕಳಾಗಿ/ಸಾಮಾಜಿಕ ಕಾರ್ಯಕರ್ತಳಾಗಿ ನೀವು ಇಂದು ಹೇಗೆ ಬೆಳೆಯುತ್ತಿರುವಿರಿ? ನಾನು ನಿರಂತರವಾಗಿ ಓದುತ್ತಿದ್ದೇನೆ, ಕಲಿಯುತ್ತಿದ್ದೇನೆ ಮತ್ತು ನಾನು ಭೇಟಿ ಮಾಡುವ ಜನರೊಂದಿಗೆ ಚಚರ್ಿಸುತ್ತೇನೆ, ಯುವಜನರೊಂದಿಗೆ ಬೆರೆಯುತ್ತೇನೆ ಮತ್ತು ಅವರ ಯೋಚನಾ ಲಹರಿಗೆ ಇಳಿದು ಅವರಲ್ಲಿ ನಾನೂ ಒಬ್ಬಳಾಗುತ್ತೇನೆ; ಅನೇಕ ಆಧ್ಯಾತ್ಮಿಕ ಪ್ರಯಾಣ, ಪಠಣ, ಧ್ಯಾನ, ಯೋಗ, ನೃತ್ಯ, ನಾಟಕ ಮತ್ತು ಚಲನಚಿತ್ರಗಳು ಸಾರ್ವಜನಿಕರಿಗೆ ಸಾಮಾಜಿಕ ಆಯಾಮಗಳನ್ನು ತೆರೆದಿಡುತ್ತದೆ. 14. ಯಾವುದು ನಿಮ್ಮನ್ನು ಸಮಾಜಕಾರ್ಯದಲ್ಲಿ ಕಾರ್ಯನಿರ್ವಹಿಸಲು ಸದಾ ಉತ್ಸಾಹಿಯನ್ನಾಗಿ ಮಾಡಿರುವುದು? ಸಮಾಜಕಾರ್ಯ ಎಂದರೆ ವೈಯಕ್ತಿಕ ವಿಕಾಸ ಮತ್ತು ಇದು ಒಂದು ದೂರದೃಷ್ಟಿ ಮತ್ತು ಜೀವನದ ಒಂದು ಮಾರ್ಗವಾಗಿದೆ. ನಾವು ಯಾವಾಗಲೂ ವಿಕಾಸ ಹೊಂದುವ ಅವಕಾಶಗಳಿಗಾಗಿ ಎದುರು ನೋಡುತ್ತಿರುತ್ತೇವೆ. ಈ ವಿಕಸನದ ಪ್ರಕ್ರಿಯೆಯಲ್ಲಿ ನಮ್ಮ ಇರುವಿಕೆ, ಕ್ರಿಯೆ ಮತ್ತು ಕೊಡುಗೆಯು ಧನಾತ್ಮಕವಾಗುತ್ತದೆ. ಈ ಧನಾತ್ಮಕತೆಯು ಇತರರಿಂದ ನಮ್ಮನ್ನು ಪ್ರತ್ಯೇಕಿಸುತ್ತದೆ. ಸಮಾಜಕಾರ್ಯವು ಕೇವಲ ಒಂದು ವೃತ್ತಿಯಲ್ಲ ಅದು ಒಂದು ಜೀವನ ವಿಧಾನ. 15. ನಿಮ್ಮ ಮುಂದಿನ ಹಂತದ ಜೀವನ/ವೃತ್ತಿಗೆ ನಿಮ್ಮ ಪ್ರಸ್ತುತ ಮಹತ್ವಾಕಾಂಕ್ಷೆಗಳೇನು? ನಾನು ಮಾಡಬೇಕಾಗಿರುವುದು ಸಾಕಷ್ಟಿದೆ.
16. ನಿಮ್ಮ ಓದು ನಿಮ್ಮ ವೈಯಕ್ತಿಕ ಮತ್ತು ವೃತ್ತಿ ಬದುಕಿನಲ್ಲಿ ಹೇಗೆ ಸಹಾಯ ಮಾಡುತ್ತದೆ? ಓದುವುದರಿಂದ ನಾನು ಸದಾ ಅಪ್ಡೇಟ್ ಆಗಿರುತ್ತೇನೆ ಮತ್ತು ಪ್ರತಿನಿತ್ಯ ನಾನು ಹೊಸತನ್ನು ಕಲಿಯುತ್ತಿರುತ್ತೇನೆ. ಇದು ನನಗೆ ತಿಳಿಯದಿರುವುದೇನೆಂದು ತಿಳಿಸುತ್ತದೆ ಮತ್ತು ತಿಳಿದುಕೊಳ್ಳಬೇಕಾದ್ದು ಎಷ್ಟಿದೆ ಎಂದು ತಿಳಿಸುತ್ತದೆ. 17. ನಿಮ್ಮ ಆಸಕ್ತಿ/ಹವ್ಯಾಸಗಳಾವುವು? ನೃತ್ಯ, ನೃತ್ಯ ನಿರ್ದೇಶನ, ಅಡುಗೆ, ಕಾರ್ಯಕ್ರಮ ಆಯೋಜನೆ, ಮಹಿಳಾ ಗುಂಪುಗಳೊಂದಿಗೆ ಕೆಲಸ, ಆಯುರ್ವೇದದ ಉತ್ತೇಜನ, ದೇವಸ್ಥಾನ ಕಾರ್ಯ ಚಟುವಟಿಕೆಗಳ ನಿರ್ವಹಣೆ, ನಡಿಗೆ, ಯೋಗ, ಧ್ಯಾನ ಮತ್ತು ಆಧ್ಯಾತ್ಮಿಕ ಪಯಣಗಳು. 18. ನಿಮ್ಮ ಕುಟುಂಬದ ಬಾಂಧವ್ಯದ ಅನುಭವ............? ನಮ್ಮದು ಉತ್ತಮ ಬಾಂಧವ್ಯ ತುಂಬಿದ ಕುಟುಂಬ. ನನಗೆ ಇಬ್ಬರು ಮಕ್ಕಳಿದ್ದಾರೆ ಅವರು ಯುಎಸ್ಎಯಲ್ಲಿ ಓದುತ್ತಿದ್ದಾರೆ. ಅವರು ನಮ್ಮ ಎಲ್ಲಾ ಕೆಲಸದಲ್ಲಿ ಮತ್ತು ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ. ಪ್ರತಿ ಭಾನುವಾರದ ಸ್ಕೈಪ್ ಕಾಲ್, ವರ್ಷದಲ್ಲಿನ ಎರಡು ಬಾರಿಯ ರಜೆ ಕಾಲ, ಪ್ರಮುಖವಾದ ಕಾರ್ಯಕ್ರಮಗಳು ಮತ್ತು ಹಬ್ಬಗಳು ನಮ್ಮ ಸಂತಸದ ಬಾಂಧವ್ಯದ ಕ್ಷಣಗಳು. ನಮ್ಮ ಇಡೀ ಕಛೇರಿಯ ಸಹೋದ್ಯೋಗಿಗಳು ನಮ್ಮ ಕುಟುಂಬವಿದ್ದಂತೆ, ಇದರಿಂದ ಪ್ರತಿದಿನವೂ ಒಂದು ಬಾಂಧವ್ಯದ ಅನುಭವವೇ ಆಗಿದೆ. ಪ್ರತಿ ವಿಮರ್ಶಾ ಸಭೆಯು ಒಂದು ಅತ್ಯುತ್ತಮ ಬಾಂಧವ್ಯದ ಅನುಭವವೇ ಆಗಿದೆ. 19. ಮಹತ್ವಾಕಾಂಕ್ಷಿ ವೃತ್ತಿಪರ ಸಾಮಾಜಿಕ ಕಾರ್ಯಕರ್ತರಿಗೆ ನಿಮ್ಮ ಸಲಹೆಗಳು?
20. ನಿಮ್ಮ ವೃತ್ತಿಯಲ್ಲಿ ನಿಮಗಾದ ಕಹಿ ಅನುಭವ ಯಾವುದು? ಕಹಿ ಅನುಭವಗಳ ಬಗ್ಗೆ ಹೇಳುವುದು ಸ್ವಲ್ಪ ಕಷ್ಟವಾಗುತ್ತದೆ. ನಾನು ಇಲ್ಲಿಯವರೆಗೂ ಕಹಿಯ ಅನುಭವಗಳನ್ನು ಕಲಿಕೆಯ ಅವಕಾಶಗಳೆಂದು ಭಾವಿಸಿದ್ದೇನೆ. ಸಾಮಾನ್ಯವಾಗಿ ಜನರು ಯಾವಾಗ ತಮ್ಮ ಕೆಲಸದಲ್ಲಿ ಬದ್ಧತೆಯಿಂದಿರುವುದಿಲ್ಲವೋ; ಪರಿಸ್ಥಿತಿಯನ್ನು ನಿಭಾಯಿಸಲು ಸುಳ್ಳನ್ನು ಹೇಳಿದಾಗ; ಕಪಟತನವಿದ್ದಾಗ; ತಮ್ಮ ತಪ್ಪನ್ನು ಮರೆಮಾಚಲೆತ್ನಿಸಿದಾಗ ಕಹಿಯ ಅನುಭವಗಳು ಆಗುತ್ತದೆ; ಅದೃಷ್ಟವಶಾತ್ ನಾವು ನೇರ ನುಡಿಯ ಸ್ವಭಾವದವರಾದ್ದರಿಂದ ಇಂಥಹ ಅನುಭವಗಳು ತುಂಬಾ ಸಾಮಾನ್ಯವಾಗಿಲ್ಲ. ಆದಾಗ್ಯೂ ನಮ್ಮ ಬದ್ಧತೆಗಳಿಗೆ ತೊಂದರೆಯಾದಲ್ಲಿ ನಾವು ಪರ್ಯಾಯವನ್ನು ಏರ್ಪಾಟು ಮಾಡಿಕೊಂಡಿರುತ್ತೇವೆ. ಇಂತಹ ಅನುಭವಗಳು ನಮಗಾಗಿದೆ, ಕೆಲವೊಮ್ಮೆ ಇದರಿಂದ ಹಣ ಮತ್ತು ಸಮಯ ಎರಡೂ ಪೋಲಾಗಿದೆ. ಆದರೆ ಇದರಿಂದ ನಮ್ಮ ಉತ್ಸಾಹ ಮತ್ತು ಕಲಿಕೆಗೆ ಯಾವತ್ತೂ ಭಂಗ ಬಂದಿಲ್ಲ. 21. ಇತರ ವೃತ್ತಿಗಳೊಂದಿಗೆ ಮತ್ತು ವೃತ್ತಿಪರರೊಂದಿಗಿನ ನಿಮ್ಮ ಸಂಬಂಧದ ತಿಳಿಸಿ? ನಾವು ಸಮಾಲೋಚನಾ ವೃತ್ತಿಯಲ್ಲಿರುವುದರಿಂದ ಪರಸ್ಪರ ಸಂವಹನದ ಕ್ರಿಯೆಯು ಅನಿವಾರ್ಯ. ಆದರೆ ಕಳೆದು ಒಂದು ವರ್ಷದಿಂದ ನಾನು ಹೆಚ್ಚಾಗಿ ಶಿಕ್ಷಣ ಮತ್ತು ಬರವಣಿಗೆಯಲ್ಲಿ ತೊಡಗಿಕೊಂಡಿರುವುದರಿಂದ ಇತರ ವೃತ್ತಿಪರರೊಂದಿಗೆ ಹೆಚ್ಚು ಬೆರೆಯಲಾಗಲಿಲ್ಲ. 22. ಸಾಮಾಜಿಕ ಕಾರ್ಯಕರ್ತರ ಸಂಘಟನೆಯ ಅವಶ್ಯಕತೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು? ಸಂಘಟನೆಯು ಪ್ರಭಾವ ಬೀರಲು ಮತ್ತು ಮಾರ್ಗದರ್ಶನ ನೀಡಲು ಶಕ್ತಿಶಾಲಿ ವೇದಿಕೆ ಮತ್ತು ಆಡಳಿತಕ್ಕೆ ಬೆಂಬಲ ನೀಡುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಸಂಘಟನೆಯು ಕಾರ್ಯನಿರ್ವಹಿಸಲು ಸ್ವಷ್ಟವಾದ ಗುರಿ ಮತ್ತು ಕೆಲವು ಸ್ಪಷ್ಟವಾದ ತತ್ತ್ವಗಳ ಅವಶ್ಯಕತೆಯಿದೆ. ನಾವು ತಂತ್ರಜ್ಞಾನ ಬಳಸಿಕೊಂಡ ಅಭಿವೃದ್ಧಿಯತ್ತ ದಾಪುಗಾಲನ್ನು ಇಡಬೇಕಾಗುತ್ತದೆ. ಹಿರಿಯ ಸದಸ್ಯರು ತೊಡಗಿಗೊಂಡಾಗ ನಮಗೆ ಪಾತ್ರಗಳ ಸ್ಪಷ್ಟತೆಯಿರಬೇಕಾಗುತ್ತದೆ, ದೊಡ್ಡ ಪ್ರಮಾಣದ ಪ್ರಭಾವ ಬೀರುವಿಕೆಯು ಆಗಬೇಕಾಗುತ್ತದೆ. ಸಂಘಟನೆಯು ವ್ಯಕ್ತಿಗಳನ್ನು ಮೀರಿ ಬೆಳೆಯಬೇಕು ಮತ್ತು ವ್ಯಕ್ತಿ ಕೇಂದ್ರಿತಕ್ಕಿಂತ ಹೆಚ್ಚು ಪ್ರಕ್ರಿಯೆ ಕೇಂದ್ರಿತವಾಗಬೇಕಾಗುತ್ತದೆ. 23. ಎಲ್ಲಾ ಸಾಮಾಜಿಕ ಕಾರ್ಯಕರ್ತರು ತಮ್ಮ ವೃತ್ತಿಯಲ್ಲಿನ ಅನುಭವಗಳನ್ನು ದಾಖಲಿಸುತ್ತಿಲ್ಲ, ಇದರ ಬಗ್ಗೆ ತಿಳಿಸಿ? ಸಂವಹನ ಸಾಮರ್ಥ್ಯ, ಬರೆಯುವ ಮತ್ತು ಕ್ಷೇತ್ರ ಅಧ್ಯಯನದ ದಾಖಲಿಕೆಯು ಕಾಲೇಜಿನ ಮೊದಲ ವರ್ಷದಿಂದ ಕಡ್ಡಾಯವಾಗಬೇಕು. ಇದು ತಮ್ಮ ವೃತ್ತಿಯ ಭಾಗವೆಂದು ಅವರು ಮನಗಾಣಬೇಕು, ವೈದ್ಯರು ವೈದ್ಯಕೀಯ ದಾಖಲೆಗಳನ್ನು ನಿರ್ವಹಣೆ ಮಾಡುವ ಹಾಗೆ ಇಲ್ಲೂ ಆಗಬೇಕು. ವಿದ್ಯಾರ್ಥಿಗಳಿಗೆ ಸಾಕ್ಷ್ಯ ಸಂಕಲನ ಮತ್ತು ವಿಷಯಗಳ ದಾಖಲಿಕೆಯಂತಹ ವಿಧಾನಶಾಸ್ತ್ರವನ್ನು ಬೋಧಿಸುವ ಸರಿಯಾದ ಶಿಕ್ಷಣವು ನಮ್ಮಲ್ಲಿಲ್ಲ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಾಂತ್ರಿಕ ತಿಳುವಳಿಕೆಯನ್ನು ಪಡೆದುಕೊಳ್ಳಬೇಕು. ಇದನ್ನು ನಾವು ನಮ್ಮ ಪ್ರಾಥಮಿಕ ಶಾಲೆಯಿಂದಲೇ ಕಲಿತುಕೊಳ್ಳಬೇಕು. 24. ನಿಮ್ಮ ಉದ್ಯೋಗ/ವೃತ್ತಿಯ ಅತಿ ಸವಾಲಿನ ಅಂಶಗಳಾವುವು? ಸೂಕ್ಷ್ಮವಾಗಿ ಬದಲಾಗುವುದು, ಉತ್ಸಾಹಿ ವಿದ್ಯಾರ್ಥಿಯಾಗಿರುವುದು, ಯಾವಾಗಲೂ, ಎಲ್ಲಾ ಸಮಯದಲ್ಲೂ ಹೊಂದಿಕೊಳ್ಳುವಂತಿರುವುದು, ಪ್ರತಿಕ್ರಿಯಾಶೀಲರಾಗಿರುವುದು ಮತ್ತು ಪ್ರಸಕ್ತವಾಗಿರುವುದು. 25. ವೃತ್ತಿ ಮತ್ತು ನಿಮ್ಮ ಜೀವನದ ಇತರೇ ಅಂಶಗಳನ್ನು ಸಮತೋಲನದಿಂದ ನೀವು ಹೇಗೆ ಸಂಬಾಳಿಸಿದ್ದೀರಿ? ಜನರು ನಮಗೆ ವೈಯಕ್ತಿಕ ಜೀವನ, ವೃತ್ತಿ ಜೀವನ, ಸಾಮಾಜಿಕ ಜೀವನದಂತಹ ವಿವಿಧ ಜೀವನಗಳಿರುತ್ತದೆ ಎಂದು ಭಾವಿಸಿದ್ದಾರೆ! ಇದನ್ನು ನಾನು ಎಂದಿಗೂ ಒಪ್ಪುವುದಿಲ್ಲ. ನನ್ನ ಪ್ರಕಾರ ನಮಗೆ ಒಂದೇ ಜೀವನವಿರುತ್ತದೆ - ಅದರಲ್ಲಿ ನಮಗೆ ವೈಯಕ್ತಿಕ ಸಮಯ, ವೃತ್ತಿ ಸಮಯ, ಸಾಮಾಜಿಕ ಸಮಯ ಮತ್ತು ಸಮುದಾಯ ಸಮಯ ಹೀಗೆ ಹಲವಾರು ಸಮಯವಿರುತ್ತದೆ. ಆದುದರಿಂದ ನಾನು ಒಂದು ವೇಳಾಪಟ್ಟಿಯನ್ನು ನಿಗದಿಪಡಿಸಿಕೊಂಡಿದ್ದೇನೆ. ಅದರಲ್ಲಿ ನಾನು ನನ್ನ ಮನೆಯಲ್ಲಿ, ಕಛೇರಿಯಲ್ಲಿ, ಕುಟುಂಬದಲ್ಲಿ, ಸಮುದಾಯದಲ್ಲಿ, ಸ್ನೇಹಿತರಲ್ಲಿ, ಕಳೆಯುವ ಸಮಯವು ನಿಗದಿಯಾಗಿರುತ್ತದೆ. ಇದು ನನ್ನನ್ನು ಶಾಲಾ ದಿನಗಳಿಂದಲೂ ಶಿಸ್ತುಬದ್ಧವಾಗಿರುವಂತೆ ಮಾಡಿದೆ ಮತ್ತು ಯಾವ ಸಮಯದಲ್ಲಿ ಯಾವುದಕ್ಕೆ ಒತ್ತು ನೀಡಬೇಕೆಂದು ಪೂರ್ವಭಾವಿಯಾಗಿ ನಿರ್ಧರಿಸಿರುತ್ತೇನೆ. 26. ಸಮಾಜಕಾರ್ಯದಲ್ಲಿ ವೃತ್ತಿಯನ್ನು ಪ್ರಾರಂಭಿಸಬೇಕೆಂದಿರುವವರಿಗೆ ನಿಮ್ಮ ಸಲಹೆಗಳೇನು? ದೀರ್ಘಾವಧಿಯ ಗುರಿಯನ್ನು ಹೊಂದಿರಬೇಕು ಮತ್ತು ಸ್ಪಷ್ಟವಾದ ಅರಿವಿರಬೇಕು ಮತ್ತು ನಿಮ್ಮ ಗುರಿಯ ಮಾರ್ಗದ ಮೇಲೆ ಕೇಂದ್ರೀಕೃತವಾಗಿರಬೇಕು. ಇದನ್ನು ನಿಮ್ಮ ಜೀವನದ ಧ್ಯೇಯ ಎಂದು ಭಾವಿಸಿ ಮತ್ತು ನಿಮ್ಮನ್ನು ನಿಮ್ಮ ಗುರಿ ಸಾಧನೆಗೆ ಅರ್ಪಿಸಿಕೊಳ್ಳಿ. ನೀವು ನಿಮ್ಮ ಗುರಿಯೆಡೆಗೆ ದೃಢವಾದ ಹೆಜ್ಜೆಯನ್ನಿಡುತ್ತಿರುವುದನ್ನು ಜಗತ್ತು ಒಮ್ಮೆ ಮನಗಂಡರೆ ಎಲ್ಲಾ ಅವಕಾಶಗಳನ್ನು ಮತ್ತು ಸಾಧ್ಯತೆಗಳನ್ನು ನಿಮಗೆ ನೀಡುತ್ತದೆ. ನಿಮ್ಮ ವೃತ್ತಿಯನ್ನು ಪ್ರೀತಿಸಿ ಮತ್ತು ಪ್ರಾಮಾಣಿಕರಾಗಿರಿ. 27. ನಿಮ್ಮ ವೃತ್ತಿಯಿಂದ ನಿಮಗೆ ಸಿಕ್ಕಿದ್ದು ಏನೇನು? ಪ್ರೀತಿ, ವಾತ್ಸಲ್ಯ, ಉತ್ತಮ ನಾಯಕತ್ವ ಗುಣ, ಸಂತೃಪ್ತಿ, ಉತ್ತಮ ಕಲಿಕೆ ಮತ್ತು ನಿರಂತರ ವಿಕಾಸದ ಪ್ರಕ್ರಿಯೆಗಳು - 49 ವರ್ಷ ವಯಸ್ಸಿನ ದೇಹದಲ್ಲಿ 20 ವರ್ಷ ವಯಸ್ಸಿನ ಶಕ್ತಿ; ಇದಿಷ್ಟು ಸಾಕಲ್ಲವೇ. 28. ಈ ವೃತ್ತಿಗೆ ನೀವು ಬರಲು ಆಸಕ್ತಿ ಮೊದಲು ಹೇಗೆ ಬಂದಿತು? ನಿಜವಾಗಿ ನನಗೆ ಅದು ತಿಳಿಯದು. ನನಗೆ ಮೊದಲು ಕೇವಲ ಸಮಾಜಕಾರ್ಯ ಪದದ ಅರ್ಥ ಒಂದೇ ತಿಳಿದಿದ್ದು, ಅದಕ್ಕಿಂತ ಹೆಚ್ಚು ನನಗೇನು ತಿಳಿದಿರಲಿಲ್ಲ. ಆದರೆ ಸಮಾಜಕಾರ್ಯ ಬೇರೆ ವಿಷಯಕ್ಕಿಂತ ಹೆಚ್ಚು ಮಾನವೀಯ ವಿಷಯವೆಂದು ನಂತರ ನನಗೆ ತಿಳಿಯಿತು. ನನಗೆ ಹೆಚ್ಆರ್ ಆಗಬೇಕೆಂದು ಮತ್ತು ಪಿ.ಎಚ್‍ಡಿ ಮಾಡಬೇಕೆಂಬ ಗುರಿಯಿತ್ತು.
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|