Niruta Publications
  • Home
  • About Us
    • Ramesha's Profile
  • Publication With Us
    • Niruta's Read & Write Initiative
    • Leaders Talk
    • Inviting Articles
    • Promote Your Books
  • Our Services
  • Collaborate with Niruta Publications
    • Join Our Online Groups
  • Nirathanka Club House
  • HR Blog
    • Editor's Blog
    • Blog
    • English Articles
    • Kannada Articles
  • Online Store
  • Media Mentions
    • Photos
    • Videos
  • Contact Us
  • Home
  • About Us
    • Ramesha's Profile
  • Publication With Us
    • Niruta's Read & Write Initiative
    • Leaders Talk
    • Inviting Articles
    • Promote Your Books
  • Our Services
  • Collaborate with Niruta Publications
    • Join Our Online Groups
  • Nirathanka Club House
  • HR Blog
    • Editor's Blog
    • Blog
    • English Articles
    • Kannada Articles
  • Online Store
  • Media Mentions
    • Photos
    • Videos
  • Contact Us
Niruta Publications

ಸಾಮಾಜಿಕ ಕ್ರಿಯಾಚರಣೆ

1/22/2022

1 Comment

 
Picture
Buy
ಮುನ್ನುಡಿ
“ಸಾಮಾಜಿಕ ಕ್ರಿಯಾಚರಣೆ”-ಒಂದು ಐತಿಹಾಸಿಕ ಮೇರುಕೃತಿ
ಭಾರತದಲ್ಲಿ ವೃತ್ತಿಪರ ಸಮಾಜಕಾರ್ಯ ಶಿಕ್ಷಣ ಪ್ರಾರಂಭವಾಗಿ 85 ವರ್ಷಗಳು ಸಂದವು. ಸಂಖ್ಯಾತ್ಮಕವಾಗಿ ಸಮಾಜಕಾರ್ಯವು ವಿಸ್ತಾರವಾಗಿ ಬೆಳೆದಿದೆ. ವಿಶೇಷವಾಗಿ ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಸಮಾಜಕಾರ್ಯ ವಿದ್ಯಾಲಯಗಳು ವಿಪುಲವಾಗಿ ಬೆಳೆದು ಬಂದಿವೆ. ಗುಣಾತ್ಮಕವಾಗಿ ಅಲ್ಲದಿದ್ದರೂ ಸಂಖ್ಯಾತ್ಮಕವಾಗಿ ಭಾರತದಲ್ಲಿ ಸಮಾಜಕಾರ್ಯ ಶಿಕ್ಷಣ ವಿಪುಲವಾಗಿ ಬೆಳೆದು ನಿಂತಿದ್ದು ನಮ್ಮೆಲ್ಲರಿಗೂ ಗೊತ್ತಿದ್ದ ವಿಷಯ. ವಿಷಾದದ ಸಂಗತಿಯೆಂದರೆ ಈ ಕಳೆದ ಎಂಟು ದಶಕಗಳಲ್ಲಿ ಸಮಾಜಕಾರ್ಯವು ತನ್ನ ಅಸ್ತಿತ್ವಕ್ಕಾಗಿ ಹೆಣಗಾಡುತ್ತಲೇ ಇದೆ.

ಯಾವುದೇ ಒಂದು ವೃತ್ತಿ ಗುಣಾತ್ಮಕವಾಗಿ ಬೆಳೆದು ತನ್ನ ಅಸ್ತಿತ್ವವನ್ನು  ಸ್ಥಾಪಿಸಬೇಕಾದರೆ ಆ ವೃತ್ತಿಗೆ ಸಂಬಂಧಿಸಿದ ವೃತ್ತಿಪರ ಸಂಘಟನೆ ಹಾಗೂ ರಾಷ್ಟ್ರೀಯ ಪರಿಷತ್ತು ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ವಿಷಾದದ ಸಂಗತಿಯೆಂದರೆ ರಾಷ್ಟ್ರಮಟ್ಟದಲ್ಲಿ ಸಮಾಜಕಾರ್ಯಕರ್ತರ ಶಕ್ತಿಶಾಲಿಯಾದ ವೃತ್ತಿಪರ ಸಂಘಟನೆ ಇಲ್ಲದಿರುವುದು ಮತ್ತು ಸಮಾಜಕಾರ್ಯ ಪರಿಷತ್ತಿನ ಸ್ಥಾಪನೆ ಆಗದಿರುವುದು. ಮುಂಬರುವ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಸಮಾಜಕಾರ್ಯ ಪರಿಷತ್ತಿನ ಸ್ಥಾಪನೆಯಾಗಿ, ರಾಷ್ಟ್ರೀಯ ಸಮಾಜಕಾರ್ಯ ಸಂಘಟನೆ ಸ್ಥಾಪನೆಯಾಗಿ, ಸಮಾಜಕಾರ್ಯ ವೃತ್ತಿಗೊಂದು ನ್ಯಾಯ ಒದಗಿಸಿ ಕೊಡುತ್ತವೆ ಎಂದು  ಆಶಿಸೋಣ.

Read More
1 Comment

ಮಾಧ್ಯಮ :- ಪ್ರಜಾಸತ್ತೆ

5/22/2020

0 Comments

 
Picture
ಪ್ರೊ. ಆರ್.ಶಿವಪ್ಪ
ಕುಲಸಚಿವರು,  ಮೈಸೂರು ವಿಶ್ವವಿದ್ಯಾಲಯ, ಮೈಸೂರು

ಗಾಂಧೀಜಿ ಎಂಬುದು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ತತ್ವ, ಅವರು ಈ ಯುಗದ ಸತ್ಯ. ಗಾಂಧೀಜಿ ಎಂಬುದು ಬರೀ ಹೆಸರಲ್ಲ, ಬಹು ದೊಡ್ಡ ಮೌಲ್ಯ. ಅವರ ಜೀವನ ಕ್ರಮ ಭಾರತೀಯ ಜೀವನ ಪದ್ದತಿಯ ಯಶಸ್ವೀ ಪ್ರಯೋಗ ಶಾಲೆ. ಈ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಪ್ರಸಾರವಾಗುತ್ತಿರುವ ಸಿದ್ದಾಂತಗಳಲ್ಲಿ ಗಾಂಧಿ ಕುರಿತಾದ ಸಾಹಿತ್ಯ, ಬರವಣಿಗೆ, ಪುಸ್ತಕಗಳೂ ಕೂಡ ಬಹು ಪ್ರಾಮುಖ್ಯತೆಯನ್ನು ಪಡೆದಿವೆ, ಪತ್ರಿಕೋದ್ಯಮಿ, ಸಮಾಜ ವಿಜ್ಞಾನಿ, ಸರ್ವೋದಯ ನೇತಾರ, ಶಿಕ್ಷಣತಜ್ಞ, ಸಾಹಿತ್ಯರತ್ನ, ತತ್ವಜ್ಞಾನಿ, ಹಾಸ್ಯ ಗಂಭೀರ, ಸ್ವದೇಶಿನಿಷ್ಠ, ವಕೀಲ ಎಂದೆಲ್ಲಾ ಹೆಸರಾದ ಗಾಂಧೀಜಿ ಮಾನವೀಯತೆಯ ಮಂಗಳ ರೂಪ, ನಾಳಿಯ ಯುಗ ವಿಜ್ಞಾನ ಮತ್ತು ವೇದಾಂತದ್ದು ಆದರೆ ಆಯುಗದ ಮೊದಲ ದಾರ್ಶನಿಕ ಗಾಂಧೀಜಿ ಎಂಬುದು ವಾಸ್ತವ. ಗಾಂಧೀಜಿಯವರ ವಿಚಾರಗಳು ಯಾವುದೇ ಇರಲಿ ಅವುಗಳು ದ್ವೇಷ, ಅಸೂಯೆ, ಹಿಂಸೆಯಿಂದ ಮುಕ್ತಗೊಳಿಸಿ ಮನುಷ್ಯನನ್ನಾಗಿ ಮಾಡುತ್ತವೆ. ಹೀಗಾಗಿ ಜಗತ್ತಿನ ಯಾವುದೇ ವಿಚಾರಗಳು ಗಾಂಧಿ ತತ್ವಗಳನ್ನು ಹೊರತುಪಡಿಸಿ ಮೌಲಿಕವಾಗಲಾರವು. 

Read More
0 Comments

ಶಂಕರ ಎಚ್. ಪಾಠಕ - ಬಹುಮುಖ ಪ್ರತಿಭೆಯ ಸಮಾಜಕಾರ್ಯ ಪ್ರಾಧ್ಯಾಪಕರು

12/19/2017

0 Comments

 
Picture
ಹಿನ್ನೆಲೆ :- ಶಂಕರ ಪಾಠಕರ ಹುಟ್ಟೂರು ಬನವಾಸಿ. (ಕದಂಬ ವಂಶ ಸ್ಥಾಪಕ ಮಯೂರವರ್ಮನ ರಾಜಧಾನಿ) ಬನವಾಸಿಯಲ್ಲಿ ಮಧುಕೇಶ್ವರ ದೇವಸ್ಥಾನವಿದೆ. ಊರಿನ ಮೂರು ದಿಕ್ಕಿನಲ್ಲಿ ಹರಿಯುತ್ತಿದೆ ವರದಾ ನದಿ. ವೈಶಾಖ ಮಾಸದಲ್ಲಿ ವಾರ್ಷಿಕ ರಥೋತ್ಸವ - ಜಾತ್ರೆ ಆಗುತ್ತವೆ. ಬನವಾಸಿ ಶಂಕರ ಪಾಠಕರ ಬಾಲ್ಯದಲ್ಲಿ ಆಗಿನ ಬ್ರಿಟಿಷ್ ಆಡಳಿತದ ಮುಂಬಯಿ ಪ್ರಾಂತ್ಯದಲ್ಲಿ ಸೇರಿದ್ದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಒಂದು ದೊಡ್ಡ ಹಳ್ಳಿ. 1941ರಲ್ಲಿ ಜನಸಂಖ್ಯೆ ಸುಮಾರು 1000 ವಿರಬಹುದು. ಕಳೆದ 2001ರ ಜನಗಣತಿಯಲ್ಲಿ ಜನಸಂಖ್ಯೆ 7000. ಈಗ ಸುಮಾರು 9000 ಇರಬಹುದು. ಒಂದು ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ಏಳನೇ ತರಗತಿಯವರೆಗೆ, ಹೆಣ್ಣು ಮಕ್ಕಳ ಶಾಲೆ ನಾಲ್ಕನೇ ತರಗತಿಯವರೆಗೆ, ಒಂದು ಉರ್ದು ಪ್ರಾಥಮಿಕ ಶಾಲೆಗಳಿದ್ದವು. ಒಟ್ಟು (4+2+1) 7 ಜನ ಮಾಸ್ತರರು, ಮಾಸ್ತರಿಣಿಯರು. ಇದಲ್ಲದೆ ಒಂದು ಪೊಲೀಸ್ ಸ್ಟೇಶನ್ - 3 ಪೇದೆಗಳು. ಅಗ್ರಿಕಲ್ಚರಲ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ಅದರ ಅಂಗವಾಗಿ ಒಂದು ಚಿಕ್ಕ ಲೈಬ್ರರಿ. ಒಬ್ಬ ವ್ಯಕ್ತಿಯ ಮನೆಯಲ್ಲಿ ನಡೆಯುವ ಪೋಸ್ಟ್ ಆಫೀಸು, ಪೋಸ್ಟ್ ಮಾಸ್ತರರಿಗೆ ಗೌರವಧನ, ಗ್ರಾಮ ಪಂಚಾಯಿತಿ ಆಫೀಸು. ಬೆಳಿಗ್ಗೆ ಬನವಾಸಿಯಿಂದ ಹೊರಟು ಸಿರ್ಸಿಗೆ ಹೋಗಿ, ವಾಪಸ್ಸು ರಾತ್ರಿ ಮರಳಿ ಬರುವ ಒಂದು ಖಾಸಗಿ ಬಸ್ ಸರ್ವೀಸ್, ಆರೋಗ್ಯ ಸೇವೆ ಊರಿನ ಇಬ್ಬರು ವೈದ್ಯರಿಂದ. ಕಳೆದ 50 ವರ್ಷಗಳಲ್ಲಿ ಆದ ಮುಖ್ಯ ಬದಲಾವಣೆಗಳು ಜಯಂತಿ ಹೈಸ್ಕೂಲು, ರೆಗ್ಯೂಲರ್ ಪೋಸ್ಟ್ ಆಫೀಸು, ಪ್ರಾಥಮಿಕ ಆರೋಗ್ಯ ಕೇಂದ್ರ - ಅಲ್ಲಿ ಒಬ್ಬರು ಎಂ.ಬಿ.ಬಿ.ಎಸ್. ಡಾಕ್ಟರರು, ಒಬ್ಬಳು ನರ್ಸ್, ಸರಕಾರೀ ಬಸ್ ಸ್ಟಾಂಡ್ ಮತ್ತು ಬನವಾಸಿಗೆ ಬಂದು ಹೋಗುವ ಪ್ರವಾಸಿಗರು.

Read More
0 Comments

ಸಾಮಾಜಿಕ ಪರಿವರ್ತಕರಾಗಿ ಎಚ್.ಎಸ್. ದೊರೆಸ್ವಾಮಿ

10/16/2017

0 Comments

 
Picture
ಆಡು ಮುಟ್ಟದ ಸೊಪ್ಪಿಲ್ಲ, ಹಾಗೆಯೇ ದೊರೆಸ್ವಾಮಿಗಳು ಹೋರಾಡಲು ಮುನ್ನಡೆಯದಿದ್ದ ರಾಜಕೀಯ, ಸಾಮಾಜಿಕ ಕ್ಷೇತ್ರಗಳಿಲ್ಲ, ಅವರ ನಿಷ್ಠೆ ಅಚಲ, ಸಂಕಲ್ಪದೃಢ, ನಿರ್ಭೀತ ಮನೋನಿಶ್ಚಯ. ತಮ್ಮ ಆದರ್ಶಗಳ ಸಾಧನೆಗಾಗಿ ರಣರಂಗಕ್ಕೆ ಮುನ್ನಗ್ಗಿ ಅವಿರತ ಹೋರಾಟದಲ್ಲಿ ತೊಡಗುವುದು ಅವರ ಜಾಯಮಾನ. ಜಾತೀಯ ಪಿತೂರಿಗಳಿಂದ ಕುಲಷಿತಗೊಂಡಿದ್ದ ಕರ್ನಾಟಕ ಏಕೀಕರಣ ಸಮಸ್ಯೆಯ ಬಗ್ಗೆ ಎಲ್ಲರನ್ನು ಒಂದುಗೂಡಿಸಿ ದಂಡುಕಟ್ಟಿ ದುಡಿದದ್ದೂ, ಸರ್ವೋದಯ ಕಾರ್ಯಗಳಿಗೆ ಟೊಂಕಕಟ್ಟಿ ರಾಜ್ಯದಾದ್ಯಂತ ಅಡ್ಡಾಡಿ ಜಾತೀಯ ದ್ವೇಷಪೂರಿತ ಗುಂಪುಗಳ ನಡುವೆ ಸೌಹಾರ್ದವೇರ್ಪಡಿಸಿದ್ದೂ, ಅವರ ಮಹತ್ವದ ಸಾಧನೆಗಳಲ್ಲಿ ಒಂದು ಹಾಗೂ ಭಾರತ ಸೇವಕ ಸಮಾಜದ ಪ್ರತಿನಿಧಿಯಾಗಿ, ಕೊಳೆಗೇರಿಗಳ ಸುಧಾರಣೆಗೆ ಕಂಕಣ ಕಟ್ಟಿ ದುಡಿದರೂ ಅವರ ಸಾಧನೆಗೆ ಇಟ್ಟ ಮತ್ತೊಂದು ಗರಿ.

Read More
0 Comments

ಸಮಸ್ಯೆಗಳನ್ನು ಸಮಾಧಾನದಿಂದಲೇ ಸಹಿಸುತ್ತಿರುವ ಸಮಾಜಕಾರ್ಯಕರ್ತರು

10/16/2017

0 Comments

 
ಸಮಾಜದಲ್ಲಿ ಮಾನವ ಜನಾಂಗದಷ್ಟೆ ಪುರಾತನವಾಗಿರುವ ಅನೇಕ ಸಮಸ್ಯೆಗಳ ಸುಳಿಯಿಂದ ಸಂಕಷ್ಟದಲ್ಲಿರುವ ಪರಿಸ್ಥಿತಿ ಸುಧಾರಿಸುವ ಮಹದಾಸೆಯೊಂದಿಗೆ ಸುಮಾರು ಶತಮಾನದ ಹಿಂದೆ ಅಮೆರಿಕಾದಿಂದ  ಆಮದಾಗಿದೆ. ವೃತ್ತಿಪರ ಸಮಾಜಕಾರ್ಯ ನಮ್ಮ ದೇಶದ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಸಾಂಪ್ರದಾಯಿಕ ನಿಲುವುಗಳಿಂದಾಗಿ ನಮ್ಮಲ್ಲಿನ್ನು ಈ ವೃತ್ತಿಪರ ಸಮಾಜಕಾರ್ಯದ ಪರಿಕಲ್ಪನೆ ನೆನೆಗುದಿಗೆ ಬಿದ್ದಿದೆ. ಅಸ್ಪಷ್ಟ ಕಲ್ಪನೆಯಿಂದ ವೃತ್ತಿಯಾಗಿ ಸಂಪೂರ್ಣ ಬೇರು ಬಿಡಲು ನಾವಿನ್ನು ಅನಿವಾರ್ಯವಾಗಿ ಕಾಯಬೇಕಿದೆ.

Read More
0 Comments

ಪರಿಪೂರ್ಣ ವೃತ್ತಿಪರ ಸಮಾಜಕಾರ್ಯಕರ್ತರಾಗಿ: ಬಿ.ಎಲ್ ಪಾಟೀಲ

10/16/2017

0 Comments

 
Picture
ಈಗ್ಗೆ ಹದಿಮೂರು ವರ್ಷಗಳ ಹಿಂದೆ ಕರ್ನಾಟಕ ವಿಶ್ವವಿದ್ಯಾಲಯದ ಅಂತಿಮ ವರ್ಷದ ಸಮಾಜಕಾರ್ಯದ ಸ್ನಾತಕೋತ್ತರ ವಿದ್ಯಾರ್ಥಿನಿ ನಾನು. ವಿಶ್ವವಿದ್ಯಾಲಯದ ಅಣತಿಯಂತೆ ಅಥಣಿಯ ವಿಮೋಚನಾ ಸಂಸ್ಥೆಗೆ Block Placement ಗಾಗಿ ಬಂದಿದ್ದು ನನ್ನ ಅದೃಷ್ಟವೇ ಎನ್ನಬೇಕು. ವರ್ಷದಲ್ಲಿ ನಾಲ್ಕಾರು ಕಡೆ ನೌಕರಿ ಬದಲಿಸುವ ಸಮಾಜಕಾರ್ಯಕರ್ತರನ್ನ ಕಂಡಿದ್ದೇನೆ. ಅದಕ್ಕೆ ಕಾರಣಗಳೇನು ಕಡಿಮೆ ಇಲ್ಲ. ಆದರೆ ವಿದ್ಯಾರ್ಥಿನಿಯಾಗಿ ಬಂದ ನನಗೆ Result ಬರುವ ಮೊದಲೇ ನೌಕರಿಗಾಗಿ ಆಫರ್ ನೀಡಿದ್ದು ವಿಮೋಚನಾ ಸಂಸ್ಥೆ. 2 ವರ್ಷಗಳಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಸಮಾಜಕಾರ್ಯ ವಿಭಾಗದ ಡಾ.ಜಿ.ಎಸ್. ಬಿದರಿಕೊಪ್ಪ, ಡಾ. ಶೇಖರ ಪೂಜಾರ್, ಡಾ.ಜಿ.ಎನ್. ಗನಿಹಾರ, ಡಾ. ವಿನೀತಾ ಪೈ, ಡಾ. ಶೋಭಾದೇವಿ ಮತ್ತು ಡಾ. ಸ್ವಾದಿ ಗುರುವೃಂದದ ಪರಿಣಿತ ಮತ್ತು ಗಟ್ಟಿತನದ ಸಮಾಜಕಾರ್ಯದ ಪ್ರಾಯೋಗಿಕ ಜ್ಞಾನ, ಕೌಶಲ್ಯ, ತಂತ್ರಗಾರಿಕೆ ಕಲಿತು ನನ್ನದೇ ಆದ ವೃತ್ತಿ ಪರತೆಯನ್ನು ಕಟ್ಟಿಕೊಂಡವಳು ನಾನು Block Placement ಅವಧಿಯಲ್ಲಿ ವಿಮೋಚನಾದ ಅಧ್ಯಕ್ಷರಾದ ಶ್ರೀ.ಬಿ.ಎಲ್. ಪಾಟೀಲ ಅವರಿಂದ ಸಹಕಾರ್ಯದರ್ಶಿಗಳಾದ ಶ್ರೀ.ವ್ಹಿ.ಎಸ್. ಮನವಾಡೆಯವರಿಂದ ಗುರುತಿಸಿಕೊಂಡಿದ್ದೆ. ಅಂತೆಯೇ ಅವರು ನೀಡಿದ ಆಫರ್ ಬಗ್ಗೆ ಡಾ. ವಿನೀತಾ ಪೈ ಮ್ಯಾಡಂ ಅವರ ಹತ್ತಿರ ಚರ್ಚಿಸಿದಾಗ, ಒಂದೆರಡು ವರ್ಷ ಕೆಲಸ ಮಾಡುವ Field ನ ಅನುಭವವಾಗುತ್ತದೆ, ನಂತರ ಮುಂದಿನ ವಿದ್ಯಾಭ್ಯಾಸಕ್ಕೆ ತೊಡಗು ಎಂದು ಮಾರ್ಗದರ್ಶನ ನೀಡಿದರು. ಅಂತೆಯೇ ಇಂದೂ ಅಂದರೆ 1999ರ ಅಕ್ಟೋಬರ್ 10 ರಿಂದ ನಿರಂತರವಾಗಿ ವಿಮೋಚನಾ ಬಳಗದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಸಾರ್ಥಕ ಬದುಕು ನನ್ನದು.

Read More
0 Comments

ಗಾಂಧೀಯ ಮಾರ್ಗ ಮತ್ತು ಆಧುನಿಕ ಸಮಾಜಕಾರ್ಯ* (ತೌಲನಿಕ ಚಿಂತನೆ)

10/11/2017

0 Comments

 
ಮಾನ್ಯ ಬಂಧುಗಳೆ,
ನನ್ನ ಕೆಲವು ತೌಲನಿಕ ಚಿಂತನೆಗಳನ್ನು ಮಂಡಿಸಲು ಅವಕಾಶವನ್ನು ಕಲ್ಪಿಸಿದ ವ್ಯವಸ್ಥಾಪಕರಿಗೆ ಮತ್ತು ನನ್ನೀ ಚಿಂತನೆಗಳನ್ನು ಆಲಿಸುತ್ತಿರುವ ನಿಮಗೆ ನನ್ನ ಕೃತಜ್ಞತೆಗಳು. ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಆಶ್ರಯದಲ್ಲಿ ನನ್ನೀ ಉಪನ್ಯಾಸವು ನಡೆಯುತ್ತಿದೆ. ಸಮಾಜದಲ್ಲಿನ ಊನಶಕ್ತರಿಗೆ ನೆರವನ್ನು ಉದಾರವಾಗಿ ನೀಡುವ ಧಾರ್ಮಿಕ ಭಾವನೆಯು ಪರಂಪರೆಯಿಂದ ಬಂದಿದ್ದರೂ ವೈಚಾರಿಕ ಮತ್ತು ಲೌಕಿಕ ತಳಹದಿಯ ಮೇಲೆ ಸೇವೆಯನ್ನು ಕೈಗೊಳ್ಳಬೇಕೆಂಬ ಇರಾದೆಯನ್ನು ಹೊಂದಿದ್ದ ಶ್ರೀ ಗೋಪಾಲಕೃಷ್ಣ ಗೋಖಲೆಯವರು 1905ರಲ್ಲಿಯೇ ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯನ್ನು ಆರಂಭಿಸಿದ್ದನ್ನು ನಾವು ನೆನೆಯಲೇಬೇಕಾಗಿದೆ. ಯಾಕೆಂದರೆ, ಸಮಾಜಕಾರ್ಯಕ್ಕೆ ಅದು ಸಮರ್ಥ ನೆಲೆಯನ್ನು ಕಲ್ಪಿಸಿತು. ಅಂಥ ಮಹನೀಯರ ಹೆಸರಿನಲ್ಲಿರುವ ಈ ಸಾರ್ವಜನಿಕ ವಿಚಾರ ಸಂಸ್ಥೆಯನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಮಹಾ ಮೇಧಾವಿ, ರಾಷ್ಟ್ರ ಚಿಂತಕ, ಸಾರ್ವಜನಿಕ ಹಿತ ಪ್ರತಿಪಾದಕ ಡಾ.ಡಿ.ವಿ. ಗುಂಡಪ್ಪನವರನ್ನು ನಾನು ಪ್ರಪ್ರಥಮವಾಗಿ ನೆನೆಯುತ್ತೇನೆ. ನನ್ನೀ ಉಪನ್ಯಾಸವು ನ್ಯಾಯಮೂರ್ತಿ ಮತ್ತು ಮಹಾ ಸಾತ್ತ್ವಿಕ ಶ್ರೀ ನಿಟ್ಟೂರು ಶ್ರೀನಿವಾಸ ರಾವ್ ಇವರ ಜ್ಞಾಪಕದಲ್ಲಿ ನಡೆಯುತ್ತಿದೆ. ಆ ದೊಡ್ಡವರನ್ನು ನಾನು ಗೌರವಪೂರ್ವಕವಾಗಿ ನೆನೆಯುತ್ತೇನೆ. ಡಾ. ಗುಂಡಪ್ಪನವರಿಗೂ, ನ್ಯಾಯಮೂರ್ತಿ ನಿಟ್ಟೂರು ಅವರಿಗೂ ಗೋಖಲೆಯವರು ಮತ್ತು ಗಾಂಧಿಯುವರು ಪ್ರಿಯರಾದವರು. ಜೊತೆಗೆ ಆ ಇಬ್ಬರಿಗೂ ಸಮಾಜಕಾರ್ಯದಲ್ಲಿ ಆಸಕ್ತಿ ಇದ್ದದ್ದು ನಮ್ಮೆಲ್ಲರಿಗೂ ಪರಿಚಿತವೇ. ಈ ಸಂರ್ದದಲ್ಲಿ ಈ ನಾಲ್ವರನ್ನು ನಾನು ಹೃತ್ಪೂರ್ವಕ ನೆನೆಯುತ್ತೇನೆ. 


Read More
0 Comments

ಅವತಾರವೆಂಬೆ ಅಧಃಪಾತವನ್ನೇ! ನವ ನಿರ್ಮಾಣಕ್ಕೆ ಒಂದು ಮುನ್ನುಡಿ

7/18/2017

0 Comments

 
Picture
ಬಳ್ಳಾರಿ ಜಿಲ್ಲೆಯ ಇಂದಿನ ಸ್ಥಿತಿಯನ್ನು ಗಮನಿಸಿದಾಗ (ಈ ಜಿಲ್ಲೆಗೆ ಚಿತ್ರದುರ್ಗ, ತುಮಕೂರು ಜಿಲ್ಲೆಗಳನ್ನೂ ಸೇರಿಸಬಹುದು) ವರಕವಿ ಬೇಂದ್ರೆ ಅವರ ಗಂಗಾವತರಣ ಪದ್ಯದ ಈ ಅಭಿವ್ಯಕ್ತಿಯ ನೆನಪಾಗುತ್ತದೆ: ಅವತಾರವೆಂಬೆ ಅಧಃಪಾತವನ್ನೆ! ಸ್ವರ್ಗದ ಗಂಗೆಯು ತಪ್ಪು ಮಾಡಿ, ಶಾಪಗ್ರಸ್ತಳಾಗಿ ಭೂಮಿಗೆ ಕುಸಿದು ಬೀಳುತ್ತಾಳೆ. ಇದು ಆಕೆಗೆ ಆದ ಅಧಃಪಾತ. ಆದರೆ, ಗಂಗೆಯು ಭೂಮಿಗೆ ಇಳಿದು ಬಂದದ್ದು ಭೂಮಿಗೆ ಒಂದು ವರದಾನ ಒಂದು ಅವತಾರ. ಭಗೀರತನ ಪ್ರಯತ್ನವೂ ಇದರಲ್ಲಿ ಇದೆ ಎಂದು ಪೌರಾಣಿಕ ನಂಬುಗೆ. ತುಂಗಭದ್ರಾ ನದಿಯು ಹಂಪಿಯ ಹೊಳೆಯಾಗಿ ಹರಿಯುತ್ತಿದ್ದಾಳೆ. ಅನೇಕ ಚಿಕ್ಕ ದೊಡ್ಡ ಹಳ್ಳಗಳೂ ಹರಿಯುತ್ತವೆ. ಮಳೆಯು ಯಥೇಚ್ಛವಾಗಿಲ್ಲದಿದ್ದರೂ, ಭೂಮಿಯು ಫಲವತ್ತಾಗಿರುವುದರಿಂದ, ಸುರಿದ ನೀರನ್ನು ಜಾಣ್ಮೆಯಿಂದ ಬಳಸಿಕೊಂಡರೆ ಸಮೃದ್ಧ ಬೆಳೆ ತೆಗೆಯಬಹುದು. ಸೊಂಡೂರು-ಕೂಡ್ಲಿಗಿ ತಾಲ್ಲೂಕುಗಳಲ್ಲಿ ಅರಣ್ಯ ವಿಶಾಲವಾಗಿ ಹರಡಿಕೊಂಡಿದೆ. ಮೇಲ್ಭಾಗದ ಮಣ್ಣು ಫಲವತ್ತಾಗಿದ್ದರೆ, ಭೂಮಿಯ ಆಳದಲ್ಲಿ ಕಬ್ಬಿಣದಂಥ ಖನಿಜ ಸಂಪತ್ತು ಹೇರಳವಾಗಿದೆ. ಇತಿಹಾಸ ಪೂರ್ವದಲ್ಲಿಯೇ ಜನವಸತಿಗೆ ಹೆಸರಾಗಿದ್ದ ಈ ಭೂಪ್ರದೇಶದಲ್ಲಿ ವಿಜಯನಗರದಂಥ ಮಹಾಸಾಮ್ರಜ್ಯವು ಸ್ಥಾಪನೆಯಾಗಿ ಜಗತ್ತಿಗೇ ಪ್ರಸಿದ್ಧವಾಯ್ತು. ಹಂಪಿ, ಬಾಗಳಿ, ಕೋಗಳಿ ಮುಂತಾದ ಕಡೆ ವಾಸ್ತುಶಿಲ್ಪ, ನವುರು ಕೆತ್ತನೆಗಳ ಸುಪ್ರಸಿದ್ಧ ದರ್ಶನೀಯ ಸ್ಥಳಗಳು ವಿಜೃಂಭಿಸಿದವು. ವಿರೂಪಾಕ್ಷ ದೇವನಂತೂ ಜಗತ್ತಿನ ಬೆಳಕೇ ಆಗಿದೆ. ಹರಿಹರ ರಾಘವಾಂಕರಂಥ ಮೇರು ಕವಿಗಳ, ನೂರೊಂದು ವಿರಕ್ತರ ಬೀಡು ಈ ಪ್ರದೇಶವಾಗಿತ್ತು.

Read More
0 Comments

ಜವಾಬ್ದಾರಿ ಸರ್ಕಾರಕ್ಕಾಗಿ ಹೋರಾಟ: ಮೈಸೂರು ಚಲೋ ಚಳುವಳಿಯಲ್ಲಿ ಡಾ|| ಹೆಚ್. ನರಸಿಂಹಯ್ಯನವರ ಪಾತ್ರ

7/18/2017

0 Comments

 
ಡಾ.ಹೆಚ್. ನರಸಿಂಹಯ್ಯನವರು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದರು; ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲರಾಗಿದ್ದರು; ಕರ್ನಾಟಕದ ವಿಧಾನ ಪರಿಷತ್ ಸದಸ್ಯರಾಗಿದ್ದರು; ಕನ್ನಡ ಅಭಿವೃದ್ಧಿ  ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ಬಹು ಮುಖ್ಯವಾಗಿ ವೈಜ್ಞಾನಿಕ ಮನೋಭಾವವನ್ನು ಹೊಂದಿದ್ದ ಇವರು ರಾಷ್ಟ್ರೀಯ ಸೇವಾಯೋಜನೆಯ ಚೇತನರಾಗಿದ್ದರು ಮತ್ತು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಮಾಜಕಾರ್ಯ ವಿಭಾಗದ ಸ್ಥಾಪನೆ ಹಾಗೂ ಬೆಳವಣಿಗೆಗೆ ಶ್ರಮಿಸಿದರು. 

Read More
0 Comments

ಸಮಾಜದ ಬದಲಾವಣೆಯಲ್ಲಿ ಸಮಾಜಕಾರ್ಯ ಶಿಕ್ಷಣ

7/17/2017

0 Comments

 
ಸಮಾಜದಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ಮೂಲ ಮಂತ್ರ ಶಿಕ್ಷಣ ಎಂದರೆ ತಪ್ಪಾಗಲಾರದು. ಸಮಸ್ಯೆಗಳ ಆಗರವೇ ಆಗಿರುವಂತಹ ಸಮಾಜವನ್ನು ತಿದ್ದಿ ತೀಡಿ ಅಲ್ಲಿ ಬದಲಾವಣೆಯನ್ನು ಕಾಣಬೇಕೆಂಬುದು ಎಲ್ಲರ ಆಶಯ. ಸಮಾಜದಲ್ಲಿನ ಪ್ರತಿಯೊಂದು ಸ್ತರದ ಅಭಿವೃದ್ಧಿ ದೇಶದ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂಬುದನ್ನು ನಾವು ಮೊದಲಿನಿಂದಲೂ ಅರಿತಿದ್ದೇವೆ. ಈ ಅಭಿವೃದ್ಧಿಯನ್ನು ಸಾಧಿಸಬೇಕಾದಲ್ಲಿ ಶಿಕ್ಷಣದ ಪಾತ್ರ ಅತಿಮುಖ್ಯ ಎಂಬುದರಲ್ಲಿ ಎರಡು ಮಾತಿಲ್ಲ.  ಅದರಲ್ಲೂ ಸಮಾಜಕಾರ್ಯ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಅರಿಯಬೇಕಿದೆ.

Read More
0 Comments

ಡಾ.ಎಚ್.ಎಂ. ಮರುಳಸಿದ್ಧಯ್ಯ ಅವರನ್ನು ಕುರಿತ ಸಮಾಜಕಾರ್ಯದ ಕಣಸುಗಾರ ಕೃತಿಯ ಬಿಡುಗಡೆ ಸಮಾರಂಭ

7/17/2017

0 Comments

 
ಈ ವಿಶಿಷ್ಟ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿರುವ ತಮ್ಮ ವೃತ್ತಿಪರತೆಯನ್ನು ಮಾದರಿ ಹಿನ್ನೆಲೆಯುಳ್ಳವರಾಗಿರುವ ಬೆಂಗಳೂರು ವಿಶ್ವವಿದ್ಯಾಲಯದ ದಕ್ಷ ಹಾಗೂ ಕ್ರಿಯಾಶೀಲ ಕುಲಸಚಿವ ಡಾ.ರಂಗನಾಥ್ ಅವರೆ, ಡಾ.ಎಚ್.ಎಂ. ಮರುಳಸಿದ್ಧಯ್ಯ ಅವರನ್ನು ಕುರಿತಾದ 'ಸಮಾಜಕಾರ್ಯದ ಕಣಸುಗಾರ' ಕೃತಿಯನ್ನು ಬಿಡುಗಡೆ ಮಾಡಿ, ಈಗಾಗಲೇ ಮೌಲ್ಯಯುತ ಮಾತುಗಳನ್ನಾಡಿದ ಗಾಂಧೀವಾದಿಗಳು, ಗಾಂಧಿ ವಿಚಾರಗಳು, ಮೌಲ್ಯಗಳು ಹಾಗೂ ಆಚರಣೆಗೆ ಬದ್ಧರಾಗಿರುವ ಹಿರಿಯ ಸರ್ವೋದಯ ನಾಯಕರೂ, ಸ್ವಾತಂತ್ರ್ಯ ಹೋರಾಟಗಾರರೂ ಆಗಿರುವ ಸನ್ಮಾನ್ಯ ಎಚ್.ಎಸ್. ದೊರೆಸ್ವಾಮಿ ಅವರೇ, ಈ ಸಮಾರಂಭದ ಪ್ರಮುಖ ಕೇಂದ್ರ ಬಿಂದುವಾಗಿರುವ, ಯೋಗ ಕೂಡಿಬಂದಿದ್ದರೆ ಯಾವುದಾದರೂ ಒಂದು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸೇವೆಸಲ್ಲಿಸುವ ಎಲ್ಲ ಅರ್ಹತೆ, ಸಾಮರ್ಥ್ಯ ಹಾಗೂ ಯೋಗ್ಯತೆವುಳ್ಳರಾಗಿರುವ ನಾಡಿನ ಹೆಸರಾಂತ ಸಮಾಜಶಾಸ್ತ್ರಜ್ಞರೂ ಸಮಾಜಕಾರ್ಯ ಜೀವಂತ ದಂತಕತೆಯೂ ಆಗಿರುವ ಸನ್ಮಾನ್ಯ ಡಾ.ಎಚ್.ಎಂ.ಮರುಳಸಿದ್ಧಯ್ಯನವರೇ, ಪ್ರತಿಯೊಬ್ಬ ಯಶಸ್ವೀ ಪುರುಷನ ಹಿಂದೆ ಒಬ್ಬಳು ಮಹಿಳೆ ಇರುತ್ತಾಳೆ ಎಂಬುದರ ದ್ಯೋತಕವಾಗಿ ಎಚ್.ಎಂ.ಎಂ.ಅವರ ಬೆನ್ನೆಲುಬಾಗಿರುವ ಹಿರಿಯ ಸಹೋದರಿ ಶ್ರೀಮತಿ ಶಾಂತವೀರಮ್ಮನವರೇ. 

Read More
0 Comments

ಮಂಕುತಿಮ್ಮನ ಕಗ್ಗದಲ್ಲಿ ಸಮಾಜಕಾರ್ಯ

7/16/2017

1 Comment

 
ಕನ್ನಡದ ಮೇರುಕೃತಿ, ಡಿ.ವಿ.ಗುಂಡಪ್ಪನವರ ಮಂಕುತಿಮ್ಮನ ಕಗ್ಗವು ಜೀವನಾನುಭವದ ಸಾರವಾಗಿದ್ದು ಸಕಲರಿಗೂ ಒಳಿತನ್ನು ಬಯಸುವ ಕೃತಿಯಾಗಿದೆ. ಎಲ್ಲಾ ವೇದಗಳ ಸಾರಕ್ಕೆ, ಜೀವನಾನುಭವಗಳನ್ನು ಬೆರೆಸಿ ಮಾಡಿದ ಅಮೃತವೇ ಮಂಕುತಿಮ್ಮನ ಕಗ್ಗ. ಇಲ್ಲಿನ ಹಿತನುಡಿಗಳನ್ನು ಅರ್ಥೈಸಿಕೊಂಡು, ಜೀವನದಲ್ಲಿ ಅಳವಡಿಸಿಕೊಂಡರೆ, ಜೀವನದಲ್ಲಿನ ಬಹುತೇಕ ಕಷ್ಟಕಾರ್ಪಣ್ಯಗಳಿಗೆ ಪರಿಹಾರ ಕಂಡುಕೊಳ್ಳಬಹುದು.

Read More
1 Comment

ಎಂ.ವಿ. ಮೂರ್ತಿ : ಸಮಾಜಕಾರ್ಯದ ದ್ರೋಣಾಚಾರ್ಯ

7/16/2017

0 Comments

 
ಪ್ರೊ.ಎಂ.ವಿ.ಮೂರ್ತಿಯವರು ನೀಳ ಕಾಯದ, ದಿಟ್ಟ ನಿಲುವಿನ ಧೀಮಂತ ವ್ಯಕ್ತಿ. ಮಾತು ಮತ್ತು ನಡತೆ ಎರಡರಲ್ಲೂ ಏಕತೆಯನ್ನು ಹೊಂದಿದಂತಹ ಬಹು ಅಪರೂಪ ಎನಿಸುವಂತಹ ವ್ಯಕ್ತಿತ್ವ. ನಮ್ಮ ನಾಡು, ಸಂಪ್ರದಾಯಗಳಲ್ಲಿ ಅಪಾರ ನಂಬಿಕೆ, ಕಾಳಜಿ ಹೊಂದಿದ್ದಂತಹ ಪ್ರೊ.ಎಂ.ವಿ.ಮೂರ್ತಿರವರು ಹುಟ್ಟಿದ್ದು ಮೇ 10, 1910, ಒಂದು ಸಾಂಪ್ರದಾಯಿಕ ಕುಟುಂಬದಲ್ಲಿ. ತಂದೆ ಮಠಮ್ ನಾರಾಯಣಾಚಾರ್, ವೃತ್ತಿಯಿಂದ ಲಾಯರ್, ತಾಯಿ ಸುಂದರಾಬಾಯಿ. ನಾರಾಯಣಾಚಾರ್ ಮತ್ತು ಸುಂದರಾಬಾಯಿಯವರ 6 ಮಕ್ಕಳಲ್ಲಿ ಎರಡನೆಯವರು ನಮ್ಮ ಎಂ.ವಿ.ಮೂರ್ತಿ. ಬಾಲ್ಯದಿಂದಲೇ ಬಹು ಚಟುವಟಿಕೆಯ ಹುಡುಗನಾಗಿದ್ದ ಎಂ.ವಿ.ಮೂರ್ತಿಯವರು ಬೆಳೆದಂತೆ ತಂದೆ ತಾಯಿಗಳ ಪ್ರಭಾವದಿಂದ ಸಂಪ್ರದಾಯ, ಭಾಷೆಯ ಬಗ್ಗೆ ಅತೀವ ಆಸಕ್ತಿ ಮತ್ತು ಪ್ರೇಮವನ್ನು ಬೆಳೆಸಿಕೊಳ್ಳುತ್ತಾ ಬಂದರು.

Read More
0 Comments

ಕರ್ನಾಟಕದಲ್ಲಿ ಸಮಾಜ ಸುಧಾರಣಾ ಚಳವಳಿಗಳು

7/16/2017

1 Comment

 
ಸಮಾಜ ಸುಧಾರಣೆಯೆಂಬ ವಿಚಾರ ಗಮನಕ್ಕೆ ಬರುವಾಗ, ಇಲ್ಲಿ ಎರಡು ಹಂತಗಳನ್ನು ಗಮನಿಸಬೇಕು. ಒಂದು, ಸಮಾಜದಲ್ಲಿನ ದಲಿತರ ಮತ್ತು ಹಿಂದುಳಿದವರ ಪುರೋಗಮನ; ಎರಡು, ಎಲ್ಲ ಜಾತಿಗಳ ಮಹಿಳೆಯರ ಪುರೋಗಮನ, ಕರ್ನಾಟಕದಲ್ಲಿ ನಡೆದ ಇಂಥ ಚಳವಳಿಗಳ ಕೆಲವು ಗಣ್ಯ ಅಂಶಗಳನ್ನು ಇಲ್ಲಿ ಪರಿಶೀಲಿಸಲಾಗಿದೆ.
​
ಅಸ್ಪೃಶ್ಯತಾ ನಿವಾರಣೆ-ಎಂದರೆ ಅಸ್ಪೃಶ್ಯರ ಮೇಲೆ ಹೇರಲಾದ ಸಾಮಾಜಿಕ ದಿಗ್ಬಂಧನಗಳು (ಉಚ್ಚವರ್ಣದವರಿರುವ ಓಣಿಗಳಲ್ಲಿ ಓಡಾಡಬಾರದು, ಮೀಸೆ ಬಿಡಬಾರದು, ಛತ್ರಿ ಹಿಡಿಯಬಾರದು, ಮದುವೆ ಮೆರವಣಿಗೆಯಲ್ಲಿ ವಿಶಿಷ್ಟ ಸರಂಜಾಮುಗಳನ್ನು ಕೆಲವು ವಾದ್ಯಗಳು, ಕುದುರೆ ಇತ್ಯಾದಿ ಬಳಸಬಾರದು, ಸಾರ್ವಜನಿಕ ಬಾವಿಯಿಂದ, ಕೆರೆಯಿಂದ ನೀರು ತುಂಬಬಾರದು, ಮೇಲುವರ್ಗದವರು ಪೂಜಿಸುವ ದೇವಾಲಯಗಳನ್ನು ಪ್ರವೇಶಿಸಬಾರದು), ಶಿಕ್ಷಣಕ್ಕೆ ಅಡಚಣೆ, ಇತ್ಯಾದಿಗಳು ಒಂದು ರೀತಿಯ ಇತಿಮಿತಿಗಳು. ಈ ಹಲವಾರು ದಿಗ್ಬಂಧನಗಳಿಂದ ಅಸ್ಪೃಶ್ಯರು ಉಸಿರು ಕಟ್ಟುವ ವಾತಾವರಣದಲ್ಲಿ ಇದ್ದರು. ಬಹುಪಾಲು ಅಸ್ಪೃಶ್ಯರು ಮೂಲದ ಹೊಲೆಯರಾಗಿ ಕೆಲವು ಭೂಮಾಲಿಕವರ್ಗಗಳ ಗುಲಾಮರಾಗಿ ಯಾವುದೇ ಸ್ವಾತಂತ್ರ್ಯವಿಲ್ಲದೆ ಬಂಧಿತ ಸ್ಥಿತಿಯಲ್ಲಿ ಇದ್ದರು. 

Read More
1 Comment

ಕರ್ನಾಟಕದ ಸೋಲಿಗರ ಆತ್ಮಸ್ಥೈರ್ಯ: ಡಾ.ಎಚ್. ಸುದರ್ಶನ್

7/16/2017

0 Comments

 
ಪ್ರೀತಿ, ತ್ಯಾಗ, ಸೇವೆ-ಇವು ಮಾತ್ರ ಭಾರತದ ಉದ್ಧಾರವನ್ನು ಮಾಡಲು ಶಕ್ತ.
ಸ್ವಾಮಿ ವಿವೇಕಾನಂದರ ಈ ಮಾತನ್ನು ಅಕ್ಷರಶ: ಆಚರಣೆಗೆ ತಂದು ತೋರಿಸಿರುವವರು ಬಿಳಿಗಿರಿರಂಗನ ಬೆಟ್ಟದ ಸೋಲಿಗರ ಆರಾಧ್ಯ ದೈವವೆನಿಸಿಕೊಂಡಿರುವ ಡಾ. ಸುದರ್ಶನ್‍ರವರು.
​
ಡಾ. ಎಚ್. ಸುದರ್ಶನ್‍ರವರು ಬೆಂಗಳೂರು ದಕ್ಷಿಣ ತಾಲ್ಲೂಕಿನ ಯಮಲೂರು ಗ್ರಾಮಕ್ಕೆ ಸೇರಿದ ರೈತ ಕುಟುಂಬವೊಂದರಲ್ಲಿ 1950 ಡಿಸೆಂಬರ್ 30 ರಂದು ಜನ್ಮತಾಳಿದರು. ತಂದೆ ಹನುಮರೆಡ್ಡಿ, ಎಚ್.ಎ.ಎಲ್‍ನಲ್ಲಿ ಉದ್ಯೋಗಿ. ತಾಯಿ ಚಿನ್ನಮ್ಮ. ತನ್ನ 12ನೆಯ ವಯಸ್ಸಿನಲ್ಲಿದ್ದಾಗ ವೈದ್ಯಕೀಯ ಸೌಲಭ್ಯವಿಲ್ಲದೆ ತನ್ನ ಕಣ್ಣ ಮುಂದೆಯೇ ತನ್ನ ತಂದೆಯ ಸಾವಿನ ದೃಶ್ಯವನ್ನು ನೋಡಿದ ಸುದರ್ಶನ್ ಅವರಿಗೆ  ವೈದ್ಯಕೀಯ ಅಧ್ಯಯನದ ಕಡೆ ಆಸಕ್ತಿ ಬೆಳೆಯಿತು. ಸುದರ್ಶನ್ ಅವರು 3ನೆಯ ತರಗತಿಯವರೆಗು ಯಮಲೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ನಂತರ ತನ್ನ ಪೋಷಕರೊಡನೆ ಹಳ್ಳಿಯಿಂದ ಎತ್ತಿನಗಾಡಿಯಲ್ಲಿ ಬಂದು ಬೆಂಗಳೂರಿನ ಜಯನಗರದಲ್ಲಿ ನೆಲೆಸಿದರು. ರಾಣಿ ಸರಳಾದೇವಿ ಶಾಲೆ, ಜಯನಗರ ಮತ್ತು ರಾಷ್ಟ್ರೀಯ ವಿದ್ಯಾಲಯದಲ್ಲಿ ತಮ್ಮ ಪ್ರೌಢಶಿಕ್ಷಣವನ್ನು ಮುಗಿಸಿದರು. ಬಾಲ್ಯದಿಂದಲೂ ತುಂಬಾ ಬುದ್ಧಿವಂತರಾಗಿದ್ದರಿಂದ ತಮ್ಮ ಶಾಲೆಯಲ್ಲಿ ಡಬಲ್ ಪ್ರೊಮೋಷನ್ ಪಡೆದರು. ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಎಂಬಂತೆ ಎಸ್.ಎಸ್.ಎಲ್.ಸಿ ಯಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿದರು. ತಮ್ಮ ಪದವಿ ಪೂರ್ವ ಶಿಕ್ಷಣವನ್ನು ಬೆಂಗಳೂರಿನ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಮುಗಿಸಿದರು. ಮೆಡಿಕಲ್‍ಗೆ ಸೇರಬೇಕಾದಾಗ ಅವರ ವಯಸ್ಸು ನಿಗಧಿಗಿಂತ ಕಡಿಮೆಯಾದ್ದರಿಂದ ಒಂದು ವರ್ಷಗಳ ಕಾಲ ತನ್ನ ತಂದೆಯ ಸ್ನೇಹಿತರೊಬ್ಬರ ಕೃಷ್ಣ ಪ್ಲೋರ್ ಮಿಲ್ನಲ್ಲಿ ಗುಮಾಸ್ತರಾಗಿ ಕೆಲಸ ಮಾಡಿದರು.

Read More
0 Comments

ಅಂತರವಲೋಕನ-ಪ್ರಸ್ತುತ ಸಮಾಜ - ಸಮಾಜಕಾರ್ಯ - ಸಮಾಜಕಾರ್ಯಕರ್ತ

7/16/2017

0 Comments

 
ಆರೋಗ್ಯಕರ ಸಮಾಜದ ಕನಸನ್ನು ಕಾಣುವ ನಾವು, ಈ ವಿಚಾರಕ್ಕೆ ಹೇಗೆ ಸ್ಪಂದಿಸಿದ್ದೇವೆ? ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ,ವ್ಯವಸ್ಥೆಯನ್ನು ಸರಿಪಡಿಸಲು ಅಗತ್ಯವಾದ ಸಾಮಾಜಿಕ ನೀತಿಗಳ ಬಗ್ಗೆ, ಅದರಲ್ಲಿ ಪಾಲ್ಗೊಳ್ಳುವುದರ ಬಗ್ಗೆ ಚಿಂತಿಸಿದ್ದೇವೆಯೇ? ರಾಜಕೀಯ  ದೊಂಬರಾಟದಲ್ಲಿ ತಲ್ಲೀನರಾಗಿರುವ ರಾಜಕಾರಣಿಗಳಿಗೆ ಅಭಿವೃದ್ಧಿಯೆಡೆಗಿನ ದೃಷ್ಟಿಕೋನವನ್ನು ನೀಡಲು ಎಂದಾದರೂಪ್ರಯತ್ನಿಸಿದ್ದೇವೆಯೇ? ಸಮಾಜಕಾರ್ಯವನ್ನು ಅಧ್ಯಯನ ಮಾಡಿಕೊಂಡು, ಉನ್ನತ ಸ್ಥಾನಕ್ಕೆ ಹೋದವರು ವ್ಯವಸ್ಥೆಯಲ್ಲಿಪಾಲುದಾರರಾಗುತ್ತಿರುವುದು ದುರಾದೃಷ್ಟವಲ್ಲವೇ?

Read More
0 Comments

ಸಮಾಜಕಾರ್ಯ ಮತ್ತು ಇತರ ಕೆಲವು ಸಮಾಜ ವಿಜ್ಞಾನಗಳು: ಪರಸ್ಪರ ಸಂಬಂಧಗಳು

7/16/2017

0 Comments

 
ಸಮಾಜಕಾರ್ಯವು ಒಂದು ವೃತ್ತಿ ಮಾತ್ರ ಆಗಿರದೆ ವಿಜ್ಞಾನವೂ ಹೌದು. ಮತ್ತು ಒಂದು ಕಲೆಯೂ ಹೌದು ಎಂಬ ಮಾನ್ಯತೆ ಪಡೆದಿದೆ. ಸಮಾಜಕಾರ್ಯವನ್ನು ಒಂದು ಸ್ವತಂತ್ರ ಅಧ್ಯಯನಶಾಸ್ತ್ರವೆಂದು ಪರಿಗಣಿಸುವುದಾದರೂ ಅದು ಪೂರ್ಣನೆಲೆಯಲ್ಲಿ ಸ್ವತಂತ್ರವಾಗಿರಲಾರದು. ಸಮಾಜಕಾರ್ಯವನ್ನು ವಾಸ್ತವಿಕ ನೆಲೆಯಲ್ಲಿ ವಿಶ್ಲೇಷಿಸುವುದಾದರೆ, ಅದು ಮಾನವನ ಜೀವನವನ್ನು ಸಮಗ್ರವಾಗಿ ಕಂಡು ಆತನ ಸಮಸ್ಯೆ, ತೊಂದರೆ ತೊಡಕುಗಳನ್ನು ಪೂರ್ಣವಾಗಿ ಪರೀಕ್ಷಿಸಿ ಅವುಗಳಿಗೆ ಪೂರ್ಣ ರೂಪದ ಪರಿಹಾರಗಳನ್ನು ಕಂಡುಕೊಳ್ಳುವ ಕಾರ್ಯದಲ್ಲಿ ನಿರತವಾಗಿರುವುದರಿಂದ ಮಾನವನ ಸಾಮಾಜಿಕ ಜೀವನದೊಂದಿಗೆ, ಇತರ ಹಲವು ಬಗೆಯ ವಿಜ್ಞಾನಗಳೊಂದಿಗೆ ಹಾಗೂ ಕಲೆಗಳೊಂದಿಗೆ ಸಂಬಂಧ ಹೊಂದಿರುವುದು ಅವಶ್ಯವಾಗಿದೆ. ತನ್ನ ಉದ್ದೇಶ ಸಾಧನೆಗಾಗಿ ಅದು ಇತರ ವಿಜ್ಞಾನ ಕಲೆ, ಹಾಗೂ ವೃತ್ತಿಗಳ ನೆರವನ್ನು ಪಡೆಯಲೇ ಬೇಕಾಗುತ್ತದೆ. ಅಂತೆಯೇ, ಅದು ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಮಾನವಶಾಸ್ತ್ರ, ಸಮಾಜಶಾಸ್ತ್ರ, ನೀತಿಶಾಸ್ತ್ರ, ಮನೋವಿಜ್ಞಾನ, ಧರ್ಮಶಾಸ್ತ್ರ, ಶಿಕ್ಷಣಶಾಸ್ತ್ರ, ಕಾನೂನುಶಾಸ್ತ್ರ, ವೈದ್ಯಕೀಯಶಾಸ್ತ್ರ, ಮಾನವ ಭೂಗೋಳಶಾಸ್ತ್ರ, ಸೃಜನಾತ್ಮಕ ಸಾಹಿತ್ಯ ಮುಂತಾದ ಅಧ್ಯಯನಶಾಸ್ತ್ರಗಳ ಜೊತೆಗೆ ವೈದ್ಯವೃತ್ತಿ, ಮಾನಸೋಪಚಾರ, ನ್ಯಾಯವೃತ್ತಿ, ವಾಸ್ತುಶಿಲ್ಪ, ಶಿಕ್ಷಣ ಇತ್ಯಾದಿ ವೃತ್ತಿಗಳಿಂದ ಕೂಡ ನೆರವನ್ನು ಪಡೆಯಬೇಕಾಗುತ್ತದೆನೀ ಎಲ್ಲಾ ಅಧ್ಯಯನಶಾಸ್ತ್ರಗಳ ಮತ್ತು ವೃತ್ತಿಗಳ ಸಹಾಯದಿಂದ ಹಾಗೂ ಸಹಕಾರದಿಂದ ವಿಶಾಲವಾದ ದೃಷ್ಟಿಯನ್ನು ಸ್ಪಷ್ಟವಾದ ಕಾರ್ಯಕ್ಷೇತ್ರವನ್ನು, ವ್ಯಾವಹಾರಿಕ ಪದ್ಧತಿಯನ್ನೂ, ಪರಿಣಾಮಕರವಾದ ತಂತ್ರೋಪಾಯಗಳನ್ನು, ಮಾನವ ಬಾಂಧವ್ಯದ ಕೌಶಲ ಕಲೆಯನ್ನು ಸಮಾಜಕಾರ್ಯವು ತನ್ನಲ್ಲೇ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ. 

Read More
0 Comments

ಅಣ್ಣಾ ಹಜಾ಼ರೆ ಆಂದೋಲನ: ಉಳಿದು ಹೋದ ಕೆಲವು ಪ್ರಶ್ನೆಗಳು

7/16/2017

0 Comments

 
Picture
ಅಣ್ಣ್ಣಾಹಜಾರೆ ನೇತೃತ್ವದ ಜನಲೋಕಪಾಲ್ ಮಸೂದೆ ರಚನಾ ಸಮಿತಿ ವಿವಾದಕ್ಕೆ ಸಿಲುಕಿದೆ. ಒಂದು ಕಡೆ ಈ ಸಮಿತಿಯ ಸ್ವರೂಪವೇ ನಮ್ಮ ಸಂವಿಧಾನದ ಭಾವನೆಗೆ ವಿರುದ್ಧವಾಗಿದ್ದು, ಸಂಸದೀಯ ಪ್ರಜಾಸತ್ತಾತ್ಮಕ ವಿಧಿ-ವಿಧಾನಗಳಿಗೇ ಅಪಚಾರವೆಸಗುವಂತಿದೆ ಎಂದು ಕೆಲವರು ವಾದಿಸುತ್ತಿದ್ದರೆ, ಇನ್ನೊಂದು ಕಡೆ, ಸಾರ್ವಜನಿಕ ಜೀವನದಲ್ಲಿನ ಭ್ರಷ್ಟಾಚಾರದ ವಿರುದ್ಧದ ರಾಮಬಾಣವೆಂದೇ ಪರಿಗಣಿಸಲಾಗುತ್ತಿರುವ ಈ ಮಸೂದೆಯನ್ನು ರಚಿಸುತ್ತಿರುವವರೇ ಭ್ರಷ್ಟಾಚಾರಿಗಳಾಗಿದ್ದಾರೆ ಎಂಬ ಆರೋಪಗಳನ್ನು ಮಾಡಲಾಗುತ್ತಿದೆ.

Read More
0 Comments

ದಾಸ್ಯ ಮತ್ತು ಭ್ರಷ್ಟಾಚಾರ ಮುಕ್ತ ರಾಷ್ಟ್ರಕ್ಕಾಗಿ ಹೋರಾಡುವ ಡಾ. ದೊರೆಸ್ವಾಮಿ - ಸಾಮಾಜಿಕಕಾರ್ಯ ಮತ್ತು ನಾನು

7/16/2017

0 Comments

 
Picture
ಕೊಳಚೆ ವಾತಾವರಣದಲ್ಲಿರುವ ಇವರನ್ನು ಊರ ಹೊರಗೆ ಓಡಿಸಿದರೆ, ಇವರು  ಸುಧಾರಿಸುವುದಾದರೂ ಹೇಗೆ? ಸುಧಾರಿಸಿರುವ ಜನರೊಡನೆ ಇದ್ದರೆ ಇವರೂ ಕಾಲಕ್ರಮದಲ್ಲಿ ಬದಲಾವಣೆಯಾಗಬಹುದು ಎಂಬುದು ನನ್ನ  ವಿಚಾರ. ಆದ್ದರಿಂದ ಅವರನ್ನೆಲ್ಲ ಅಲ್ಲಿಉಳಿಸಿಕೊಳ್ಳುವ ವಿಚಾರ ಮಾಡಿದೆ. ಎಚ್.ಎಸ್. ದೊರೆಸ್ವಾಮಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರರು
 
ನಾನು ಹೈಸ್ಕೂಲಿನಲ್ಲಿದ್ದಾಗ ವಿಶ್ವೇಶ್ವರಪುರದಲ್ಲಿ `ಕಿರಿಯ ತರುಣರ ಸಂಘ' ಎಂಬ ಸಂಸ್ಥೆಯನ್ನು ನಾವೆಲ್ಲ ಸೇರಿ ಆರಂಭ ಮಾಡಿದೆವು. ನಮಗಾಗಲೇ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳ ಪರಿಚಯವಾಗಿತ್ತು. ಆದ್ದರಿಂದ ನಾವು ನಮ್ಮ ಸಂಘದ ವತಿಯಿಂದ ಬೆಂಗಳೂರಿನಲ್ಲಿರುವ ಸಾಹಿತಿಗಳನ್ನು ನಮ್ಮ ಸಂಘಕ್ಕೆ ಕರೆತಂದು, ಅವರ ಪರಿಚಯ ಮಾಡಿಕೊಡುವುದರ ಜೊತೆಗೆ ಅವರ ಅನೇಕ ಉಪನ್ಯಾಸಗಳನ್ನು ಏರ್ಪಡಿಸುತ್ತಿದ್ದೆವು. ಬೇಸಿಗೆಯ ರಜೆಯಲ್ಲಿ ಓದುವ ಹವ್ಯಾಸವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಲು ಹಾಗೂ ಕ್ರೀಡೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡಲು ಪ್ರಯೋಗಗಳನ್ನು ಮಾಡಿದೆವು.

Read More
0 Comments

``ಪ್ರಸ್ತುತ ಸಮಾಜಕಾರ್ಯ ಶಿಕ್ಷಣದ ಕ್ಷೇತ್ರಕಾರ್ಯದಲ್ಲಿ ಬದಲಾವಣೆ ಆವಶ್ಯಕವೇ''

7/6/2017

0 Comments

 
ಸಮಾಜಕಾರ್ಯ ಶಿಕ್ಷಣವು ಒಂದು ಪ್ರತ್ಯೇಕ ವೃತ್ತಿಪರ ಶಿಕ್ಷಣವಾಗಿ  ಗುರುತಿಸಿಕೊಂಡಿದ್ದರೂ ಇಂದಿಗೂ ಸರಿಯಾದ ಮಾನ್ಯತೆ ಸಿಗದೇ ಇರುವುದು ವಿಪರ್ಯಾಸವೇ ಸರಿ. ಇದಕ್ಕೆ ಮೂಲಕಾರಣ  ಸಮಾಜಕಾರ್ಯ ಶಿಕ್ಷಣದಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ವಿಧಾನಗಳಿದ್ದಾಗಿಯೂ ಅವುಗಳ ಕ್ಷೇತ್ರಕಾರ್ಯದಲ್ಲಿನ ಆಚರಣೆಯಲ್ಲಿ ವಿಫಲತೆಗೊಂಡಿರುವುದು ಹಾಗೂ ಆಚರಣೆಯಲ್ಲಿ ದೇಶೀಕರಣಕ್ಕೆ ಬದಲಾಗಿ ಪಾಶ್ಚಾತ್ಯ ಪರಿಕಲ್ಪನೆಯನ್ನು ಆಧಾರವಾಗಿರಿಸಿಕೊಂಡಿರುವುದೇ ಆಗಿದೆ. ಆದ್ದರಿಂದ ನನ್ನ ವಾದ ಖಂಡಿತವಾಗಿಯೂ ಪ್ರಸ್ತುತ ಸಮಾಜಕಾರ್ಯ  ಕ್ಷೇತ್ರಕಾರ್ಯದಲ್ಲಿ ಬದಲಾವಣೆ ಅನಿವಾರ್ಯ ಹಾಗೂ ಆವಶ್ಯವೆನಿಸುತ್ತದೆ.

Read More
0 Comments

ಸಮಾಜಕಾರ್ಯ ವಿದ್ಯಾರ್ಥಿಗಳಿಗೊಂದು ಕೈದೀವಟಿಗೆ ದಿಗ್ಬ್ರಾಂತ ಸಮಾಜಕ್ಕೆ ಬೆಳಕಿನ ದಾರಿ: ಸಮಾಜಕಾರ್ಯ

7/6/2017

0 Comments

 
ಕನ್ನಡದಲ್ಲಿ ಸಮಾಜಕಾರ್ಯ ಸಾಹಿತ್ಯ ಎಂದ ಕೂಡಲೇ ನೆನಪಾಗುವುದು ಪ್ರೊ.ಎಚ್.ಎಂ.ಮರುಳಸಿದ್ಧಯ್ಯನವರು. `ಸಮಾಜಕಾರ್ಯ' ಎಂಬ ಪದವನ್ನು ಟಂಕಿಸಿ ಪ್ರಯೋಗಕ್ಕೆ ತಂದು ಅದು ಜನಸಾಮಾನ್ಯರ ಆಡು ಭಾಷೆಗೆ ಬರುವಂತೆ ಮಾಡಿದವರು ಪ್ರೊ.ಎಚ್.ಎಂ.ಎಂ. ಇಂದು ಸಮಾಜಕಾರ್ಯ ಕ್ಷೇತ್ರದಲ್ಲಿರುವ ಸಾವಿರಾರು ಕ್ರಿಯಾಶೀಲರ ಪ್ರೀತಿಯ ಮೇಷ್ಟ್ರು ನಮ್ಮ ಎಚ್.ಎಂ.ಮರುಳಸಿದ್ಧಯ್ಯನವರು.  ಈ ಮೇಷ್ಟ್ರು ಬರಿದೆ ಪಾಠ ಮಾಡಲಿಲ್ಲ, ವಿದ್ಯಾರ್ಥಿಗಳನ್ನು ಕ್ಷೇತ್ರ ಕಾರ್ಯಕ್ಕೆ ಒಡ್ಡಿದರು, ವಿದ್ಯಾರ್ಥಿಗಳೊಡನೆ ತಾವೂ ಕ್ಷೇತ್ರ ಕಾರ್ಯದಲ್ಲಿ ಸುತ್ತಾಡಿದರು, ಚಿಂತಕರೊಡನೆ ಕುಳಿತು ಚರ್ಚೆ ಮಾಡಿದರು, ಸಮುದಾಯಗಳೊಡನೆ ಸಂವಾದ ಮಾಡಿದರು ಅಷ್ಟೇ ಅಲ್ಲ ಇವೆಲ್ಲವನ್ನೂ ಅರ್ಥವಾಗುವ ರೀತಿಯಲ್ಲಿ ಸೊಗಸಾದ ಶೈಲಿಯಲ್ಲಿ ದಾಖಲಿಸಿದರು. ಹೀಗಾಗಿ ಸಮಾಜಕಾರ್ಯ ವಿದ್ಯಾರ್ಥಿಗಳಿಗೆ ಮತ್ತು ಸಮಾಜಕಾರ್ಯದ ಕ್ಷೇತ್ರದಲ್ಲಿರುವವರಿಗೆ ಪ್ರೊ.ಎಚ್.ಎಂ.ಮರುಳಸಿದ್ಧಯ್ಯನವರ ಕೃತಿಗಳು ಕೈದೀವಟಿಗೆಗಳಾಗಿವೆ.

Read More
0 Comments

ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಸಮಾಜಕಾರ್ಯ

7/6/2017

0 Comments

 
ಬದಲಾವಣೆ ಜಗದ ನಿಯಮ, ಸೂಕ್ತವಾದ ಸಮಯದದಲ್ಲಿ ಎಲ್ಲವೂ ಮಾರ್ಪಾಡಾಗಬೇಕಾಗುತ್ತದೆ. ವ್ಯವಸ್ಥೆಯೂ ಇದಕ್ಕೆ ಹೊರತಲ್ಲ. ಇತ್ತೀಚೆಗೆ ಹಲವು ನಿರಾಶ್ರಿತರ ಸಾವಿನೊಂದಿಗೆ ಸುದ್ದಿಯಲ್ಲಿದ್ದ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಈಗ ಬದಲಾವಣೆಯ ಗಾಳಿ ಬೀಸುತ್ತಿದೆ. ನಿರಾಶ್ರಿತರಿಗೆ ಆರೋಗ್ಯಪೂರ್ಣ ಉತ್ತಮ ಪರಿಸರ ನಿರ್ಮಾಣವಾಗುತ್ತಿದೆ. 

ಬದಲಾವಣೆಯ ಗತಿಯನ್ನು ಹೆಚ್ಚಿಸಲು ಸಮಾಜಕಾರ್ಯ ಪ್ರಶಿಕ್ಷಣಾರ್ಥಿಗಳ ದಂಡೇ ಸಿದ್ಧವಾಗುತ್ತಿದೆ.  ಬೆಂಗಳೂರು ವಿಶ್ವವಿದ್ಯಾಲಯ ಮತ್ತು 13 ಅನುಮೋದಿತ ಸಮಾಜಕಾರ್ಯ ಶಾಲೆಗಳಿಂದ 35 ಜನ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ. ಆದರೆ ಇವರಿಗೆ ಸೂಕ್ತ ಮಾರ್ಗದರ್ಶನ, ತಿಳಿವಳಿಕೆ ನೀಡಬೇಕಾದದ್ದು ಅತ್ಯಗತ್ಯ. ಬಹಳಷ್ಟು ವಿದ್ಯಾರ್ಥಿಗಳು ಈಗತಾನೆ ಸಮಾಜಕಾರ್ಯ ಹೊಸ್ತಿಲನ್ನು ಪ್ರವೇಶಿಸುತ್ತಿರುವುದರಿಂದ ಇದು ಅನಿವಾರ್ಯವು ಕೂಡ.

Read More
0 Comments

ಕುವೆಂಪು ವಿಶ್ವವಿದ್ಯಾಲಯದಲ್ಲಿ ಸಮಾಜಕಾರ್ಯ ಕಾರ್ಯಾಗಾರ

7/6/2017

0 Comments

 
ಸಮಾಜಕಾರ್ಯ ಶಿಕ್ಷಣ, ಪ್ರಮೇಯದ ಪ್ರಸ್ತುತ ಸ್ಥಿತಿ ಹಾಗೂ ಭವಿಷ್ಯದ ರೂಪುರೇಷೆಗಳು
 
ದಿನಾಂಕ:10-02-2011 ರಂದು  ಕುವೆಂಪು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗ ಆಯೋಜಿಸಿದ್ದ ಎರಡು ದಿನದ ಕಾರ್ಯಾಗಾರ.
ಸಮಾಜದಲ್ಲಿನ ಸಾಮಾಜಿಕ ಸಮಸ್ಯೆಗಳ ನಿವಾರಣೆಗೆ ಸಮಾಜಕಾರ್ಯ ಸಂಶೋಧನೆ ದಾರಿದೀಪವಾಗಬೇಕು ಮತ್ತು ಸಮಾಜಕಾರ್ಯದಂತಹ ಶಿಕ್ಷಣದಲ್ಲಿ ರಚನಾತ್ಮಕ ಬದಲಾವಣೆಗಳನ್ನು ತಂದು ಗುಣಾತ್ಮಕ ಸಂಶೋಧನೆಗಳು ನಡೆಯಬೇಕು ಎಂದು ಪ್ರೊಫೆಸರ್ ಎಸ್.ಎ.ಭಾರಿ, ಉಪಕುಲಪತಿಗಳು, ಕುವೆಂಪು ವಿಶ್ವವಿದ್ಯಾಲಯ ಇವರು ಸಮಾಜಕಾರ್ಯ ಶಿಕ್ಷಣ, ಪ್ರಮೇಯದ ಪ್ರಸ್ತುತ ಸ್ಥಿತಿ ಹಾಗೂ ಭವಿಷ್ಯದ ರೂಪುರೇಷೆಗಳು ಕುರಿತು ಎರಡು ದಿನದ ಕಾರ್ಯಾಗಾರದ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಪ್ರೊಫೆಸರ್ ಐ.ಎ.ಶರೀಫ್, ನಿವೃತ್ತ ಪ್ರೊಫೆಸರ್ ನಿಮ್ಹಾನ್ಸ್, ಬೆಂಗಳೂರು, ಇವರು ಸಮಾಜಕಾರ್ಯ ಶಿಕ್ಷಣದಲ್ಲಿನ ಬದಲಾವಣೆ ಮತ್ತು ಪ್ರಚಲಿತ ಸ್ಥಿತಿಗತಿಗಳ ಬಗ್ಗೆ ಗಮನಹರಿಸಬೇಕು ಮತ್ತು ಪ್ರಚಲಿತ ಸಮಸ್ಯೆಗಳನ್ನು ಬಗೆಹರಿಸುವ ವೈಜ್ಞಾನಿಕ ವಿಧಾನವಾಗಿ ಇನ್ನೂ ಸಮಾಜಕಾರ್ಯದ ಅಭಿವೃದ್ಧಿ ಆಗಬೇಕು ಎಂದರು. ಇನ್ನೋರ್ವ ಮುಖ್ಯ ಅತಿಥಿ ಪ್ರೊಫೆಸರ್ ಜಿ.ಎಸ್.ಬಿದರಕೊಪ್ಪ, ನಿವೃತ್ತ ಪ್ರೊಫೆಸರ್, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ. ಇವರು ಪ್ರಸ್ತುತ ಜಾಗತೀಕರಣದಲ್ಲಿ ಸಮಾಜಕಾರ್ಯದ ಶಿಕ್ಷಣದಲ್ಲಿ ವೈಜ್ಞಾನಿಕ ಪಠ್ಯಕ್ರಮ, ಬೋಧನಾ ವಿಧಾನ ಮತ್ತು ಕ್ಷೇತ್ರಕಾರ್ಯದಲ್ಲಿ ಅಮೂಲಾಗ್ರ ಬದಲಾವಣೆಯಾಗಬೇಕು ಮತ್ತು ಸಂಶೋಧನೆಗಳು ನಡೆದು ಹೆಚ್ಚು ಕ್ಷೇತ್ರಗಳಲ್ಲಿ ವಿಸ್ತಾರವಾಗಬೇಕು ಎಂದು ಕರೆ ನೀಡಿದರು. 

Read More
0 Comments

ಅವಸಾನದತ್ತ ಸಮಾಜಕಾರ್ಯ (ಶಿಕ್ಷಣ)...

7/6/2017

7 Comments

 
ಸಮಾಜಕಾರ್ಯ ಎಂದರೇನೇ ವಿಚಿತ್ರವಾಗಿ ಕಾಣುತ್ತಿದ್ದ ಕಾಲ ಮರೆಯಾಗಿ ತನ್ನ ವಿಶಿಷ್ಟತೆಯಿಂದ ಸಮಾಜದಲ್ಲಿ ಗೌರವ ಗಳಿಸುತ್ತಿರುವ ಕಾಲದಲ್ಲಿ ಸಮಾಜಕಾರ್ಯ ಅವಸಾನದ ಹಾದಿ ಹಿಡಿದಿರುವುದು ನಿಜಕ್ಕೂ ದುರ್ದೈವದ ಸಂಗತಿ. ಭಾರತದ ಇತಿಹಾಸದ ಪುಟಗಳನ್ನು ತಿರುವಿಹಾಕಿದಾಗ ಸಮಾಜಕಾರ್ಯವು ಸಮಾಜಸೇವೆಯ ಹೆಸರಿನಲ್ಲಿ ಪುರಾತನ ಕಾಲದಿಂದಲೂ ಆಚರಣೆಯಲ್ಲಿದ್ದಿತ್ತು. ಸೇವೆಯೇ ಸಮಾಜಕಾರ್ಯದ ಜೀವಾಳ. ಆದರೆ ಅದನ್ನು ವ್ಯವಸ್ಥಿತವಾಗಿ, ವೈಜ್ಙಾನಿಕ ಜ್ಞಾನದಡಿ ಕ್ರಮಬದ್ಧವಾಗಿ ಆಚರಣೆಗೆ ತಂದಿದ್ದು ಮಾತ್ರ 1936 ರ ತರುವಾಯ. ನಂತರದ ದಿನಗಳಲ್ಲಿ ಸಮಾಜಕಾರ್ಯವನ್ನು ಒಂದು ವಿಶಿಷ್ಟ ವಿಷಯವಾಗಿ ಪರಿಗಣಿಸಲ್ಪಟ್ಟು ಪದವಿ, ಸ್ತಾಯಕೋತ್ತರ ಮತ್ತು ಸ್ನಾತಕ ಹಂತಗಳಲ್ಲಿ ಬೋಧಿಸಲು ದೇಶದ ಬಹುತೇಕ ವಿಶ್ವವಿದ್ಯಾಲಯಗಳು ಮತ್ತು ಸಂಯೋಜಿತ ಕಾಲೇಜುಗಳೂ ಹಾಗೂ ಪರಿಗಣಿಸಲ್ಪಟ್ಟ ಖಾಸಗಿ ವಿಶ್ವವಿದ್ಯಾಲಯಗಳು (ಡೀಮ್ಡ್ ಯೂನಿವರ್ಸಿಟಿ) ಮುಂದಾದವು. ಇದರ ಫಲವಾಗಿ ಇಂದು ಸಮಾಜಕಾರ್ಯ ಮನೆಮಾತಾಗಿದೆ ಹಾಗೂ ಸಮಾಜಕಾರ್ಯವನ್ನು ಅಭ್ಯಸಿಸುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಿದೆ. ಸಮಾಜಕಾರ್ಯ ಶಿಕ್ಷಣವನ್ನು ಪಡೆದ ಬಹುಪಾಲು ಜನರು ಸಮಾಜದ ವಿವಿಧ ವಲಯಗಳಲ್ಲಿ, ವಿವಿಧ ಸ್ಥರಗಳಲ್ಲಿ ಹಾಗೂ ವಿವಿಧ ಬಗೆಯ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ವಿಶಿಷ್ಟ ಛಾಪನ್ನು ಮೂಡಿಸಿದ್ದಾರೆ / ಮೂಡಿಸುತ್ತಿದ್ದಾರೆ. ಸರ್ಕಾರಿ, ಅರೆ ಸರ್ಕಾರಿ ಮತ್ತು ಖಾಸಗಿ ರಂಗಗಳಲ್ಲಿ ಅಷ್ಟೇ ಅಲ್ಲದೇ ಸ್ವಯಂಸೇವಾ ವಲಯ ಹಾಗೂ ಸಾಮಾಜಿಕ ಕ್ರಿಯೆಗೆ ಸಂಬಂಧಿಸಿದಂತಹ ವಿಭಿನ್ನ ವಲಯಗಳಲ್ಲಿ ಸಮಾಜಕಾರ್ಯಕರ್ತರು ಕೈಗೊಂಡ ಕಾರ್ಯ ಅವಿಸ್ಮರಣೀಯ. ಹೀಗೆ ಸಮಾಜದ ವಿವಿಧ ರಂಗ ಹಾಗೂ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿ ಸಮಾಜದಿಂದ ಮನ್ನಣೆ ಮತ್ತು ಗೌರವಗಳನ್ನು ಸಂಪಾದಿಸಿಕೊಳ್ಳುತ್ತಿರುವ ಬಹುಪಾಲು ಸಮಾಜಕಾರ್ಯಕರ್ತರು, ತಮ್ಮ ವೃತ್ತಿಯ ಆಶೋತ್ತರಗಳನ್ನು, ಮೌಲ್ಯಗಳನ್ನು, ತತ್ವಗಳನ್ನು ಮತ್ತು ವೃತ್ತಿ ಧರ್ಮವನ್ನು ಸಂಪೂರ್ಣವಾಗಿ ಮರೆತಂತಿದೆ. ಇದರ ಫಲವಾಗಿ ಇಂದು ಸಮಾಜಕಾರ್ಯ ಅವಸಾನದತ್ತ ಸಾಗುತ್ತಿದೆ. ಪ್ರಸ್ತುತ ಈ ಹೇಳಿಕೆಯನ್ನು ಯಾವ ವೃತ್ತಿಪರ ಸಮಾಜಕಾರ್ಯಕರ್ತನೂ ಒಪ್ಪುವುದಿಲ್ಲ ಕಾರಣ ಸಮಾಜಕಾರ್ಯ ಶಿಕ್ಷಣದಲ್ಲಿ ಆಗುತ್ತಿರುವ ಬದಲಾವಣೆಗಳ ಸೂಕ್ಷ್ಮತೆಯನ್ನು ಅರಿಯುವಲ್ಲಿ ಬಹುತೇಕರು ವಿಫಲರಾಗಿದ್ದಾರೆ. 

Read More
7 Comments

ಅವಸಾನದತ್ತ ಸಮಾಜಕಾರ್ಯ ಶಿಕ್ಷಣ ಲೇಖನಕ್ಕೆ ಪ್ರತಿಕ್ರಿಯೆ

7/6/2017

0 Comments

 
ಅವಸಾನದತ್ತ ಸಮಾಜಕಾರ್ಯ ಶಿಕ್ಷಣ ಲೇಖನಕ್ಕೆ ಸಂಬಂಧಿಸಿದಂತೆ ​ಸಮಾಜಕಾರ್ಯ ಕ್ಷೇತ್ರದ ಕೆಲವು ಮಿತ್ರರು ಕರೆಮಾಡಿ ಈ ಲೇಖನವನ್ನು ಬರೆದಿದ್ದು ಯಾರು ಎಂದು ಕೇಳಿದರು. ಈಗಾಗಲೇ ಈ ಲೇಖನ ಬರೆದವರಿಗೆ ನಾವು ನಿಮ್ಮ ಹೆಸರನ್ನು ಬೇರೆಯವರಿಗೆ ಹೇಳುವುದಿಲ್ಲ ಎಂಬ ಭರವಸೆಯನ್ನು ನೀಡಿರುವುದರಿಂದ ನಾವು ಈ ಲೇಖಕರ ಹೆಸರನ್ನು ಬಹಿರಂಗ ಪಡಿಸುತ್ತಿಲ್ಲ. ಹಾಗೆಯೇ ಈ ಲೇಖನದ ಬಗ್ಗೆ ಹಲವರು ಮೆಚ್ಚುಗೆಯ ಮಾತುಗಳನ್ನು ದೂರವಾಣಿ ಕರೆಯ ಮೂಲಕ ತಿಳಿಸಿದರು ಹಾಗೂ ಅವರು ಈ ಲೇಖನ ಪ್ರಸ್ತುತ ಸಮಯಕ್ಕೆ ಸೂಕ್ತವಾಗಿದೆ ಎಂದು ಹೇಳಿದರು.
​

ಯಾವುದೇ ಲೇಖನಗಳಾಗಲಿ ಯಾರೊಬ್ಬರನ್ನು ಕುರಿತು, ಯಾರೊಬ್ಬರಿಗೂ ನೋವಾಗಲಿ ಎಂಬ ಉದ್ದೇಶದಿಂದ ಪ್ರಕಟಿಸುವುದಿಲ್ಲ. ಅಕಸ್ಮಾತ್‍ ಯಾರೊಬ್ಬರಿಗೋ ನೋವಾದರೆ, ನಮ್ಮನ್ನೇ ಕುರಿತು ಬರೆದಿದ್ದಾರೆ ಎಂದುಕೊಂಡ ಊಹೆಗಳಿಗೆ ನಮ್ಮ ಪತ್ರಿಕೆ ಜವಾಬ್ದಾರರಲ್ಲ. ಇಲ್ಲಿ ವ್ಯಕ್ತಿಗಿಂತ ಸಮಾಜಕಾರ್ಯ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತೇವೆ ಎಂಬುದನ್ನು ಸ್ಪಷ್ಟಪಡಿಸಲು ನಮ್ಮ ಪತ್ರಿಕೆ ಬಯಸುತ್ತದೆ.

Read More
0 Comments
<<Previous

    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9


    Picture
    Know More

    Picture
    WhatsApp

    Picture

    MHR LEARNING ACADEMY

    Get it on Google Play store
    Download App
    Online Courses

    Picture
    30,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups


    Social Work Foot Prints


    RSS Feed


SITE MAP


Site

  • HOME
  • ABOUT US
  • BLOG
  • COLLABORATE WITH NIRUTA PUBLICATIONS
  • EDITOR'S BLOG
  • HR BLOG
  • PUBLICATION WITH US
  • TRANSLATION & TYPING
  • VIDEOS

TRAINING

  • CERTIFICATE TRAINING COURSES
  • TRAINING PROGRAMMES

nIRATHANKA cLUB hOUSE

  • NIRATHANKA CLUB HOUSE

JOB

  • CURRENT JOB OPENINGS
  • FIND FREELANCE JOBS​
  • FREELANCE SPOKEN ENGLISH TRAINER
  • FREELANCE TRANSLATOR

HR SERVICES

  • ​COMPLIANCE SUPPORT
  • CONSULTING
  • CONTRACT LABOUR
  • CONTRACT LABOUR LICENCE & CONSULTING
  • DOMESTIC ENQUIRY
  • DRAFTING OF LEGAL DOCUMENTS
  • HR AND COMPLIANCE AUDIT
  • HUMAN RESOURCE PROCESS AND POLICY FORMULATION
  • ISO CERTIFICATION​
  • LEGAL ASSISTANCE
  • ORGANISATIONAL AND JOB DESIGNS
  • PAYROLL
  • RECRUITMENT & STAFFING SERVICES
  • STAFFING - WHITE & BLUE COLLAR
  • ​STANDING ORDERS CERTIFICATION
  • ​TRADEMARK

OTHER SERVICES

  • ​APARTMENT RESIDENTS WELFARE ASSOCIATION REGISTRATION
  • LICENCES AND NOCs FROM FIRE, AGRICULTURE, STATE EXCISE DEPARTMENTS
  • MSME REGISTRATION
  • ​NGO / TRUST / SOCIETY / ASSOCIATION, COOPERATIVE SOCIETY & PVT. LTD. COMPANY REGISTRATION
  • ​SHOPS & ESTABLISHMENT REGISTRATION​

NIRATHANKA

  • ​CSR
  • TREE PLANTATION PROJECT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe



JOIN OUR ONLINE GROUPS


JOIN WHATSAPP BROADCAST


ONLINE STORE


Copyright Niruta Publications 2021,    Website Designing & Developed by: www.mhrspl.com