ಬದಲಾವಣೆ ಜಗದ ನಿಯಮ, ಸೂಕ್ತವಾದ ಸಮಯದದಲ್ಲಿ ಎಲ್ಲವೂ ಮಾರ್ಪಾಡಾಗಬೇಕಾಗುತ್ತದೆ. ವ್ಯವಸ್ಥೆಯೂ ಇದಕ್ಕೆ ಹೊರತಲ್ಲ. ಇತ್ತೀಚೆಗೆ ಹಲವು ನಿರಾಶ್ರಿತರ ಸಾವಿನೊಂದಿಗೆ ಸುದ್ದಿಯಲ್ಲಿದ್ದ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಈಗ ಬದಲಾವಣೆಯ ಗಾಳಿ ಬೀಸುತ್ತಿದೆ. ನಿರಾಶ್ರಿತರಿಗೆ ಆರೋಗ್ಯಪೂರ್ಣ ಉತ್ತಮ ಪರಿಸರ ನಿರ್ಮಾಣವಾಗುತ್ತಿದೆ. ಬದಲಾವಣೆಯ ಗತಿಯನ್ನು ಹೆಚ್ಚಿಸಲು ಸಮಾಜಕಾರ್ಯ ಪ್ರಶಿಕ್ಷಣಾರ್ಥಿಗಳ ದಂಡೇ ಸಿದ್ಧವಾಗುತ್ತಿದೆ. ಬೆಂಗಳೂರು ವಿಶ್ವವಿದ್ಯಾಲಯ ಮತ್ತು 13 ಅನುಮೋದಿತ ಸಮಾಜಕಾರ್ಯ ಶಾಲೆಗಳಿಂದ 35 ಜನ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ. ಆದರೆ ಇವರಿಗೆ ಸೂಕ್ತ ಮಾರ್ಗದರ್ಶನ, ತಿಳಿವಳಿಕೆ ನೀಡಬೇಕಾದದ್ದು ಅತ್ಯಗತ್ಯ. ಬಹಳಷ್ಟು ವಿದ್ಯಾರ್ಥಿಗಳು ಈಗತಾನೆ ಸಮಾಜಕಾರ್ಯ ಹೊಸ್ತಿಲನ್ನು ಪ್ರವೇಶಿಸುತ್ತಿರುವುದರಿಂದ ಇದು ಅನಿವಾರ್ಯವು ಕೂಡ. ಈ ನಿಟ್ಟಿನಲ್ಲಿ, ನಿರಾಶ್ರಿತರ ಪರಿಹಾರ ಕೇಂದ್ರವು, ನಿಮ್ಹಾನ್ಸ್ ಬೆಂಗಳೂರು ಇವರ ಸಹಯೋಗದಲ್ಲಿ ಸಮಾಜಕಾರ್ಯ ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ನಿರಾಶ್ರಿತರ ಪರಿಹಾರ ಕೇಂದ್ರದ ಸಿಬ್ಬಂದಿಯವರು ಒಂದು ದಿನದ ಕಾರ್ಯಾಗಾರವನ್ನು ದಿನಾಂಕ 14.1.2011ರ ಶುಕ್ರವಾರ ಹಮ್ಮಿಕೊಂಡಿದ್ದರು. ಇದರ ಮುಖ್ಯ ಕೇಂದ್ರಬಿಂದು ನಿಮ್ಹಾನ್ಸ್ನ ಹಿರಿಯ ಮಾನಸಿಕ ವೈದ್ಯರಾದ ಡಾ.ಕಿಶೋರ್ ಕುಮಾರ್‍ರವರು. ಕಳೆದ 11 ವರ್ಷದಿಂದ ನಿರಾಶ್ರಿತರ ಮಾನಸಿಕ ಆರೋಗ್ಯ ಮಟ್ಟ ಸುಧಾರಿಸಲು ಶ್ರಮಿಸುತ್ತಿರುವ ಡಾ. ಕಿಶೋರ್, ಸಮಾಜಕಾರ್ಯ ವಿದ್ಯಾರ್ಥಿಗಳನ್ನು ಈ ನಿಟ್ಟಿನಲ್ಲಿ ತಯಾರಿಗೊಳಿಸಲು ಈ ಪ್ರಯತ್ನ ಕೈಗೊಂಡಿದ್ದಾರೆ. ಡಾ.ಮೋಹನ್, ಡಾ.ರಾಜೇಂದ್ರಕುಮಾರ್ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದ ಮೊದಲ ಹಂತದಲ್ಲಿ ನಿರಾಶ್ರಿತರು ``ಮಾನಸಿಕ ಆರೋಗ್ಯ ಮತ್ತು ಚಿಕಿತ್ಸೆ'' ಈ ವಿಚಾರದ ಬಗ್ಗೆ ನಿಮ್ಹಾನ್ಸ್‍ನ ಸ್ನಾತಕೋತ್ತರ ವಿದ್ಯಾರ್ಥಿಗಳು ವಿವರಿಸಿದರು. ಪ್ರಪಂಚದ ವಿವಿಧ ಮೂಲೆಗಳಲ್ಲಿ ನಡೆದ ಸಮೀಕ್ಷೆ, ಸಂಶೋಧನೆಗಳನ್ನು ಪ್ರಸ್ತಾಪಿಸುತ್ತ ಭಾರತದ ನಿರಾಶ್ರಿತರ ಪರಿಸ್ಥಿತಿ, ಇವರು ಅವರಿಗೆ ಸಾಮಾನ್ಯವಾಗಿ ಬಂದೊದಗುವ ಖಾಯಿಲೆಗಳು ಈ ಹಂತದಲ್ಲಿ ಚಿಕಿತ್ಸೆಯ ಪಾತ್ರ, ತದನಂತರದ ಅನುಸರಣೆ ಮತ್ತು ಕುಟುಂಬದ ಪಾಲನೆ, ಪೋಷಣೆಗಳಿಗೆ ಒತ್ತು ಕೊಟ್ಟರು. ಈ ಪ್ರಸ್ತಾವನೆಯಲ್ಲಿ ವ್ಯಕ್ತವಾದ ಮುಖ್ಯವಾದ ಅಂಶಗಳು :
ಈ ಸಮಯದಲ್ಲಿ ಡಾ. ಕಿಶೋರ್‍ರವರು ಮಾತನಾಡಿ, ನಮ್ಮ ಸಮಾಜದಲ್ಲಿ ನಿರಾಶ್ರಿತರ ಬಗ್ಗೆ ತಾತ್ಸಾರ ಮನೋಭಾವನೆ ಇದೆ, ಅವರು ಕಟ್ಟಕಡೆಯ ನಾಗರಿಕರೆಂಬ ನಿರ್ಧಾರಕ್ಕೆ ಬಂದು ವಿದ್ಯಾವಂತರೂ ಕೂಡ ಅವರ ಬಗ್ಗೆ ಕಾಳಜಿ ಹೊಂದಿಲ್ಲ, ಆದ್ದರಿಂದ ಭಾರತದಲ್ಲಿ ನಿರಾಶ್ರಿತರ ಪರವಾಗಿ ಬಹಳಷ್ಟು ಚರ್ಚೆ ಮತ್ತು ಸಂಶೋಧನೆ ನಡೆದಿಲ್ಲ. ಮುಖ್ಯವಾಗಿ ಸುಪ್ರೀಂ ಕೋರ್ಟ್ ಪ್ರತೀ ರಾಜ್ಯವೂ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಬೇಕೆಂದು ತಾಕೀತು ಮಾಡಿದ್ದರೂ, ಬಹಳಷ್ಟು ರಾಜ್ಯಗಳು ಈ ಆಜ್ಞೆಯನ್ನು ಪಾಲಿಸಿಲ್ಲ. ಈ ಮೂಲಕ ಅವರನ್ನು ವ್ಯವಸ್ಥಿತವಾಗಿ ಮುಖ್ಯ ವಾಹಿನಿಯಿಂದ ದೂರವಿಡುವ ಕೆಲಸ ಸರ್ಕಾರಗಳಿಂದಲೇ ನಡೆಯುತ್ತಿದೆ ಎಂಬುದು ವಿಷಾದಕರ ಸಂಗತಿ ಎಂದು ತಿಳಿಸಿದರು. ನಂತರ ನಿಮ್ಹಾನ್ಸ್‍ನ ಸಮಾಜಕಾರ್ಯ ವಿಭಾಗದ ಚಿಕಿತ್ಸಕರು ಮಾನಸಿಕ ರೋಗಿಗಳಿಗೆ ಸಲಹಾಲೋಚನೆಯ ಪ್ರಾಮುಖ್ಯತೆ, ಸಮಾಜಕಾರ್ಯಕರ್ತರು ಅನುಸರಿಸಬೇಕಾದ ಅಗತ್ಯ ಕ್ರಮಗಳು, ತಂತ್ರ ವಿಧಾನ ಪ್ರಕ್ರಿಯೆಗಳ ಬಗ್ಗೆ ಸ್ಥೂಲವಾಗಿ ವಿವರಣೆ ನೀಡಿದರು. ಜೊತೆಗೆ ನಿರಾಶ್ರಿತರ ಕೇಂದ್ರದಲ್ಲಿ ನಡೆಸಿದ ವ್ಯಕ್ತಿಗತಕಾರ್ಯದಲ್ಲಿ ಆಯ್ದ ಪ್ರಕರಣಗಳನ್ನು ಪ್ರಶಿಕ್ಷಣಾರ್ಥಿಗಳ ವೃಂದಗಳನ್ನಾಗಿ ಮಾಡಿ ಚರ್ಚಿಸಿ, ಮಂಡಿಸಲು ಸೂಚಿಸಲಾಯಿತು. ಕ್ಷೇತ್ರಕಾರ್ಯದಲ್ಲಿ ನಿರತರಾಗಿದ್ದ ವಿದ್ಯಾರ್ಥಿಗಳು ಅವರ ಜ್ಞಾನ ಮತ್ತು ಅನುಭವದ ಆಧಾರದ ಮೇಲೆ ಆಪ್ತ ಸಲಹಾಲೋಚನೆಯನ್ನು ಮಾಡಿದರು. ತಜ್ಞರು ತಪ್ಪುಗಳನ್ನು ತಿದ್ದಿ ಸರಿಯಾದ ಮಾರ್ಗವನ್ನು ತೋರಿಸಿದರು. ಪ್ರಶಿಕ್ಷಣಾಧಿಕಾರಿಗಳು ತಾವು ಕ್ಷೇತ್ರ ಕಾರ್ಯದಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಚರ್ಚೆಯಲ್ಲಿ ಪಾಲ್ಗೊಂಡು ಪರಿಹಾರ ಕಂಡುಕೊಂಡರು. ಸಮಾರೋಪ ಸಮಾರಂಭದಲ್ಲಿ ನಿರಾಶ್ರಿತ ಕೇಂದ್ರದ ಅಧೀಕ್ಷಕರಾದ ಶ್ರೀಯುತ ದಿವಾಕರ್ ಅವರು ಮಾತನಾಡಿ, `ನಿರಾಶ್ರಿತರನ್ನು ಸಮಾಜ ಅತ್ಯಂತ ಕೀಳಾಗಿ ಕಾಣುತ್ತಿದೆ, ಇವರು ಎಲ್ಲೂ ಸಲ್ಲದವರಾಗಿದ್ದಾರೆ, ಇವರನ್ನು ಮುಖ್ಯವಾಹಿನಿಗೆ ತರುವ ಅಗತ್ಯವನ್ನು ಒತ್ತಿ ಹೇಳುತ್ತಾ, ಈ ಸವಾಲಿನ ಕೆಲಸದಲ್ಲಿ ವೃತ್ತಿಪರ ಸಮಾಜಕಾರ್ಯ ವಿದ್ಯಾರ್ಥಿಗಳ ಪಾತ್ರವನ್ನು ತಿಳಿಸುತ್ತಾ ನಿರಾಶ್ರಿತರ ಪರಿಹಾರ ಕೇಂದ್ರದ ವತಿಯಿಂದ ಅಗತ್ಯ ರೀತಿಯ ಸಹಕಾರವನ್ನು ಕೊಡುವ ಭರವಸೆಯನ್ನು ನೀಡಿದರು.' ನಂತರ ಮಾತನಾಡಿದ ಬೆಂಗಳೂರು ವಿಶ್ವವಿದ್ಯಾಲಯದ, ಸಮಾಜಕಾರ್ಯ ವಿಭಾಗದ ಹಿರಿಯ ಉಪನ್ಯಾಸಕರಾದ ಡಾ. ರಾಜೇಂದ್ರಕುಮಾರ್ ಅವರು , `ನಾವು ನಿರಾಶ್ರಿತ ಕೇಂದ್ರದ ಶೇ. 30 ರಷ್ಟು ಮಾನಸಿಕ ರೋಗಿಗಳ ಬಗ್ಗೆ ಮಾತ್ರ ಇಂದು ಚರ್ಚೆ ಮಾಡಿದ್ದೇವೆ, ಆದರೆ ಉಳಿದ ಶೇ. 70 ರಷ್ಟು ನಿರಾಶ್ರಿತರ ಬಗ್ಗೆಯೂ ಗಮನ ಹರಿಸಬೇಕಾಗಿದೆ ಎಂದು ಎಚ್ಚರಿಸಿದರು. 20 ವರ್ಷಗಳ ಹಿಂದೆ 30-40 ಎಕರೆಗಳಲ್ಲಿ ಎನ್.ಪಿ.ಕೆ.ಯ ಕೃಷಿ ಕಾರ್ಯಗಳಲ್ಲಿ ತೊಡಗಿಕೊಂಡು ಸ್ವಾವಲಂಬನೆಯನ್ನು ಸಾಧಿಸುತ್ತಾ, ಹೈನುಗಾರಿಕೆ ಮಾಡುತ್ತಿದ್ದುದನ್ನು ನೆನಪಿಸಿಕೊಳ್ಳುತ್ತಾ, ಇತ್ತೀಚಿನ ಸರ್ಕಾರದ ನೀತಿಗಳಿಂದ ಎನ್.ಪಿ.ಕೆ. 308 ಎಕರೆ ಜಮೀನಿನಲ್ಲಿ 123 ಎಕರೆ ಜಮೀನನ್ನು ವಾಣಿಜ್ಯ ಸಂಕೀರ್ಣಗಳಿಗೆ ಬಳಸಿಕೊಳ್ಳಲು ಸರ್ಕಾರ ಭೂಮಿಯನ್ನು ಕಿತ್ತುಕೊಳ್ಳುತ್ತಿರುವುದನ್ನು ವಿರೋಧಿಸುವಲ್ಲಿ ಎಲ್ಲಾ ಸಮಾಜಕಾರ್ಯಕರ್ತರು ಒಟ್ಟಾಗಿ ಹೋರಾಡುವ ಅಗತ್ಯತೆ ಇದೆ ಎಂದು ತಿಳಿಸಿದರು. ಒಟ್ಟಾರೆಯಾಗಿ ಕಾರ್ಯಕ್ರಮ ಸಮಾಜಕಾರ್ಯದ ಪ್ರಾಶಿಕ್ಷಕರ ಮತ್ತು ಶಿಕ್ಷಾಣಾರ್ಥಿಗಳ ಕಣ್ತೆರೆಸುವಂತಿತ್ತು. ಇತರೇ ಸರ್ಕಾರೇತರ ಸಂಸ್ಥೆಗಳು ಈ ರೀತಿಯ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಂಡು ಸಮಾಜಕಾರ್ಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಡನೆ ಚರ್ಚಿಸಿ ವಾಸ್ತವಿಕವಾದ ಯೋಜನೆಗಳನ್ನು ರೂಪಿಸಿ ಸಕಾರಗೊಳಿಸಲು ಪ್ರಯತ್ನಿಸಿದರೆ, ಕ್ಷೇತ್ರ ಕಾರ್ಯವೆಂಬುದು ವಿದ್ಯಾರ್ಥಿಗಳಿಗೆ ಮರೆಯಲಾಗದ ಅನುಭವವಾಗಿ, ಮುಂದಿನ ಸಮಾಜ ನಿರ್ಮಾಣದಲ್ಲಿ ಗಮನಾರ್ಹ ಬದಲಾವಣೆ ತಂದು ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸುವಲ್ಲಿ ಸಹಕಾರಿಯಾಗುತ್ತದೆ. ಆನಂದ್ ಉಪನ್ಯಾಸಕರು, ಸಿ.ಎಂ.ಆರ್ ಕಾಲೇಜು, ಬೆಂಗಳೂರು ವೆಂಕಟೇಶ್ ಕೆ. ಉಪನ್ಯಾಸಕರು, ಅನುಪಮ ಕಾಲೇಜು, ಬೆಂಗಳೂರು
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|