Niruta Publications
  • Home
  • About Us
    • Ramesha's Profile
  • Publication With Us
    • Niruta's Read & Write Initiative
    • Leaders Talk
    • Inviting Articles
    • Promote Your Books
  • Our Services
  • Collaborate with Niruta Publications
    • Join Our Online Groups
  • Nirathanka Club House
  • HR Blog
    • Editor's Blog
    • Blog
    • English Articles
    • Kannada Articles
  • Online Store
  • Media Mentions
    • Photos
    • Videos
  • Contact Us
  • Home
  • About Us
    • Ramesha's Profile
  • Publication With Us
    • Niruta's Read & Write Initiative
    • Leaders Talk
    • Inviting Articles
    • Promote Your Books
  • Our Services
  • Collaborate with Niruta Publications
    • Join Our Online Groups
  • Nirathanka Club House
  • HR Blog
    • Editor's Blog
    • Blog
    • English Articles
    • Kannada Articles
  • Online Store
  • Media Mentions
    • Photos
    • Videos
  • Contact Us
Niruta Publications

ಸಾಮಾಜಿಕ ಪರಿವರ್ತಕರಾಗಿ ಎಚ್.ಎಸ್. ದೊರೆಸ್ವಾಮಿ

10/16/2017

0 Comments

 
Picture
ಆಡು ಮುಟ್ಟದ ಸೊಪ್ಪಿಲ್ಲ, ಹಾಗೆಯೇ ದೊರೆಸ್ವಾಮಿಗಳು ಹೋರಾಡಲು ಮುನ್ನಡೆಯದಿದ್ದ ರಾಜಕೀಯ, ಸಾಮಾಜಿಕ ಕ್ಷೇತ್ರಗಳಿಲ್ಲ, ಅವರ ನಿಷ್ಠೆ ಅಚಲ, ಸಂಕಲ್ಪದೃಢ, ನಿರ್ಭೀತ ಮನೋನಿಶ್ಚಯ. ತಮ್ಮ ಆದರ್ಶಗಳ ಸಾಧನೆಗಾಗಿ ರಣರಂಗಕ್ಕೆ ಮುನ್ನಗ್ಗಿ ಅವಿರತ ಹೋರಾಟದಲ್ಲಿ ತೊಡಗುವುದು ಅವರ ಜಾಯಮಾನ. ಜಾತೀಯ ಪಿತೂರಿಗಳಿಂದ ಕುಲಷಿತಗೊಂಡಿದ್ದ ಕರ್ನಾಟಕ ಏಕೀಕರಣ ಸಮಸ್ಯೆಯ ಬಗ್ಗೆ ಎಲ್ಲರನ್ನು ಒಂದುಗೂಡಿಸಿ ದಂಡುಕಟ್ಟಿ ದುಡಿದದ್ದೂ, ಸರ್ವೋದಯ ಕಾರ್ಯಗಳಿಗೆ ಟೊಂಕಕಟ್ಟಿ ರಾಜ್ಯದಾದ್ಯಂತ ಅಡ್ಡಾಡಿ ಜಾತೀಯ ದ್ವೇಷಪೂರಿತ ಗುಂಪುಗಳ ನಡುವೆ ಸೌಹಾರ್ದವೇರ್ಪಡಿಸಿದ್ದೂ, ಅವರ ಮಹತ್ವದ ಸಾಧನೆಗಳಲ್ಲಿ ಒಂದು ಹಾಗೂ ಭಾರತ ಸೇವಕ ಸಮಾಜದ ಪ್ರತಿನಿಧಿಯಾಗಿ, ಕೊಳೆಗೇರಿಗಳ ಸುಧಾರಣೆಗೆ ಕಂಕಣ ಕಟ್ಟಿ ದುಡಿದರೂ ಅವರ ಸಾಧನೆಗೆ ಇಟ್ಟ ಮತ್ತೊಂದು ಗರಿ.

Read More
0 Comments

ಆದರ್ಶ-ಅನಾದರ್ಶಗಳ ಸೋಜಿಗ: ಉಮಾ-ಶ್ರೀ

10/16/2017

0 Comments

 
Picture
ಜೋಡಿಹಕ್ಕಿಗಳನ್ನು ಒಂದೇ ಲೇಖನದಲ್ಲಿ ಹಿಡಿದಿಡುವ ಸಾಹಸ ಇಲ್ಲಿನ ಆಶಯ. ಮೂಲ ಕರ್ನಾಟಕವಾದರೂ ಐತಿಹಾಸಿಕ ಘಟನೆಯಿಂದ ಕೇರಳಕ್ಕೆ ವಲಸೆ ಹೋದ ಪೈ ವಂಶದ ಕುಡಿ ಡಾ.ಕೆ.ವಿ. ಶ್ರೀಧರನ್ ಆಂಧ್ರದ ಡಾ. ಉಮಾ ಅವರೊಡನೆ ಶ್ರೀಧರನ್ ನಡುವಯಸ್ಸಿನಲ್ಲಿ ಜೊತೆಗೂಡಿ ಕರ್ನಾಟಕದಲ್ಲಿ ಬದುಕಿ, ಇಲ್ಲಿಯೇ ಕೊನೆಯುಸಿರೆಳೆದರು. ಸಮಾಜಕಾರ್ಯದಲ್ಲಿ ತೊಡಗಿಕೊಂಡ ಅವರ ಬದುಕು ಅಪರೂಪದ್ದು. ಹೀಗಾಗಿ ಕರ್ನಾಟಕವು ಕೇರಳ ಆಂಧ್ರಗಳನ್ನು ಬೆಸೆದ ನಾಡಾಯ್ತು. ನಾನು ಅವರಿಬ್ಬರನ್ನು ಸೇರಿಸಿ ಬಳಸಿರುವ ಉಮಾ-ಶ್ರೀ ಸಂಯುಕ್ತ ಪದವನ್ನು ಅವರು ಬದುಕಿದ್ದಿದ್ದರೆ ಒಪ್ಪುತ್ತಿದ್ದರೊ, ಕಾಣೆ. ಯಾಕೆಂದರೆ, ಡಾ. ಉಮಾ ಅವರನ್ನು ಶ್ರೀಮತಿ ಉಮಾ ಎಂದರೆ ಅವರಿಗೆ ಇಷ್ಟವಾಗುತ್ತಿರಲಿಲ್ಲವಂತೆ; ಉಮಾ ಶ್ರೀಧರನ್ ಅಂದರೆ ಅವರಿಬ್ಬರೂ ಒಪ್ಪುತ್ತಿರಲ್ಲಿಲ್ಲವೇನೊ; ಶ್ರೀಧರನ್ ಯಾವಾಗಲೂ ಇವರು ಉಮಾ ಎಂದು ಪರಿಚಯಿಸುತ್ತಿದ್ದರೇ ಹೊರತು ಇವರು ನನ್ನ ಪತ್ನಿ ಉಮಾ ಎಂದು ಪರಿಚಯಿಸುತ್ತಿರಲಿಲ್ಲ. ಆದರೆ ಭಾರತೀಯ ಪರಂಪರೆಯ ಪ್ರಕಾರ ಪ್ರಕೃತಿ-ಪುರುಷ ಮತ್ತು ಅರ್ಧನಾರೀಶ್ವರ ಶಬ್ದಗಳಲ್ಲಿ ಮೊದಲು ಸ್ತ್ರೀ ಆನಂತರ ಪುರುಷ ಬರುತ್ತಾನೆ ಎಂಬುದನ್ನು ಮನದಂದು ಉಮಾ-ಶ್ರೀ ಸರಿಯಾದ ಪ್ರಯೋಗ ಎಂದು ನಾನು ಅಂದುಕೊಳ್ಳುತ್ತೇನೆ. 

Read More
0 Comments

ಮಂದಬುದ್ಧಿ ಮಕ್ಕಳ ಆಶಾಕಿರಣ: ಡಾ.ವಿ.ಆರ್. ಪಾಂಡುರಂಗಿ

7/17/2017

0 Comments

 
Picture
ಡಾ. ವಾಸುದೇವ ಪಾಂಡುರಂಗಿ ನಡೆದು ಬಂದ ದಾರಿ
ಜನನ               :           ಜನವರಿ 05, 1930
ಸ್ಥಳ                  :           ರಾಣೇಬೆನ್ನೂರು             
ತಂದೆ                :           ರಾಮಾಚಾರ್ಯ
ತಾಯಿ              :           ಸೀತಾಬಾಯಿ
ಸಹೋದರರು    :           ಮೂರು
ಸಹೋದರಿಯರು:          ನಾಲ್ಕು
ವಿದ್ಯಾಭ್ಯಾಸ      :           ಎಂ.ಡಿ. ಪ್ರಸೂತಿಶಾಸ್ತ್ರ- ಸ್ತ್ರೀರೋಗಶಾಸ್ತ್ರ
                                    (Obstetrics & Gynecology)
ಮಕ್ಕಳು           :            ಮೂರು ಮಕ್ಕಳು. ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿ.


ಡಾ. ವಾಸುದೇವ ಪಾಂಡುರಂಗಿಯವರ ಜನನವಾದದ್ದು 05 ನೆಯ ಜನವರಿ 1930 ರಂದು ಆಗಿನ ಧಾರವಾಡ ಜಿಲ್ಲೆಯ ರಾಣೇಬೆನ್ನೂರಿನಲ್ಲಿ. ತಂದೆ ಮೂಲತಃ ಪ್ರಸಿದ್ಧ ಸಂಸ್ಕೃತ ವಿದ್ವಾಂಸರಾಗಿದ್ದ ಕಾರಣ ಬಾಲ್ಯದಲ್ಲಿಯೆ ಸಂಸ್ಕೃತ ಅಭ್ಯಾಸ ನೀಡಲಾಯಿತು. ಇವರ ಪ್ರಾಥಮಿಕ ಶಿಕ್ಷಣ ರಾಣೇಬೆನ್ನೂರಿನಲ್ಲಿ ಮುಗಿಸಿ ಕಾಲೇಜಿಗಾಗಿ ಧಾರವಾಡಕ್ಕೆ ತೆರಳಿದರು. ನಂತರ 1949 ರಲ್ಲಿ ಗ್ರಾಂಟ ಮೆಡಿಕಲ್ ಕಾಲೇಜು ಮುಂಬೈ ಸೇರಿ 1954 ರಲ್ಲಿ ವೈದ್ಯಕೀಯ (MBBS) ಪದವಿ ಗಳಿಸಿದರು. ಅದಾದ ಬಳಿಕ ಅದೇ ಗ್ರಾಂಟ ಮೆಡಿಕಲ್ ಕಾಲೇಜ್ ಮುಂಬೈ ಮುಖಾಂತರ ಪ್ರಸೂತಿಶಾಸ್ತ್ರ- ಸ್ತ್ರೀರೋಗಶಾಸ್ತ್ರಗಳಲ್ಲಿ ಎಂ.ಡಿ ಪದವಿ ಪಡೆದರು.

Read More
0 Comments

ಗ್ರಾಮೀಣ ಭಾರತದ ಕನಸುಗಾರ 'ನಿಜಬಿಂಬ' ಶ್ರೀ ಎಂ.ವಿ. ರಾಜಶೇಖರನ್

7/16/2017

0 Comments

 
Picture
12.09.1928 ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಕನಕಪುರ ತಾಲ್ಲೂಕಿನ ಮರಳವಾಡಿಯಲ್ಲಿ ಜನಿಸಿರುವ ಶ್ರೀ ಎಂ.ವಿ. ರಾಜಶೇಖರನ್ ಅವರು ಕರ್ನಾಟಕದ ಸಜ್ಜನ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದಾರೆ. 1947-48ರ ಮೈಸೂರು ಚಲೋ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಶ್ರೀ ಎಂ.ವಿ. ರಾಜಶೇಖರನ್ ಅವರು, ಅಪ್ಪರ್ ಸೆಕೆಂಡರಿ (ಮಾಧ್ಯಮಿಕ ಶಾಲೆಯಲ್ಲಿ) ವ್ಯಾಸಂಗ ಮಾಡುತ್ತಿದ್ದಾಗಲೇ ಭಾರತದ ಸ್ವಾತಂತ್ರ್ಯ ಹೋರಾಟದ ಮಹಾನ್ ಮೌಲ್ಯಗಳಿಗೆ ತಮ್ಮನ್ನ ತೆತ್ತುಕೊಂಡಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾಗ ಮಿತ್ರಮೇಳ ಎಂಬ ಸಾಂಸ್ಕೃತಿಕ ಸಂಘಟನೆಯಲ್ಲಿ ದುಡಿದು ತಮ್ಮ ಮುಂದಿನ ಬದುಕನ್ನು ರಚನಾತ್ಮಕ ಕೆಲಸಗಳಿಗೆ ಮೀಸಲಾಗಿಟ್ಟಿದ್ದಾರೆ.

Read More
0 Comments

ಸ್ಥಿತಪ್ರಜ್ಞೆಯ ಅಪರಂಜಿ: ಪ್ರೊ.ಎಂ. ವಾಸುದೇವ ಮೂರ್ತಿ (ನನ್ನ ಅನುಭವಕ್ಕೆ ಬಂದಂತೆ)

7/16/2017

0 Comments

 
(ಪ್ರೊ.ಎಂ.ವಿ.ಮೂರ್ತಿ: 1910-2000= ಶ್ರೀಮತಿ ನೀರಜಾ ಮೂರ್ತಿ: 1918-2001)
 
ಪ್ರೊಫೆಸರ್ ಎಂ. ವಾಸುದೇವ ಮೂರ್ತಿಯವರನ್ನು ನೆನೆದಾಗಲೆಲ್ಲಾ ಮಾಧುರ್ಯ ತುಂಬಿದ, ಸ್ನೇಹಮಯ, ನಿರ್ವ್ಯಾಜ ಪ್ರೀತಿಯ, ಸರಳ ಆದರೆ ಉನ್ನತವಾದ ಜ್ಞಾನ ಭಂಡಾರಿ, ಮಾನವೀಯ ಮೌಲ್ಯಗಳ ಮೂರ್ತಿಯಾದ ಒಬ್ಬ ಹಿರಿಯ ಜೀವಿಯೊಂದು ಕಣ್ಣೆದಿರು ನಿಂತ ಅನುಭವವಾಗುತ್ತದೆ.

Read More
0 Comments

ವಾತ್ಸಲ್ಯಮಯಿ ಸಮಾಜ ಸೇವಕಿ: ಶ್ರೀಮತಿ ವತ್ಸಲಾ ಪ್ರಭು

7/16/2017

0 Comments

 
Picture
ಹನ್ನೆರಡು ವರ್ಷದ ಮುದ್ದು ಹುಡುಗಿ, ತನ್ನ ಓರಗೆಯವರನ್ನೆಲ್ಲಾ ಒಂದೆಡೆ ಸೇರಿಸಿಕೊಂಡು ತನಗೆ ತಿಳಿದ ಹೊಸ ವಿಷಯಗಳನ್ನು ಅವರಿಗೆ ತಿಳಿಸುತ್ತಾ ಅವರಿಗೆ ತಿಳಿದಿರುವ ವಿಷಯಗಳನ್ನು ಹಂಚಿಕೊಳ್ಳುವಂತೆ ಪ್ರೇರೇಪಿಸುತ್ತಾ ಅವರಲ್ಲಿರುವ ಪ್ರತಿಭೆಯನ್ನು ಹೊಗಳುತ್ತಾ ಅವರನ್ನು ಇನ್ನು ಹೆಚ್ಚು ವಿಷಯಗಳನ್ನು ತಿಳಿದುಕೊಳ್ಳುವಂತೆ ಪ್ರೇರೇಪಿಸುವುದು ಅವಳಿಗೆ ತುಂಬಾ ಇಷ್ಟದ ಕೆಲಸ. ಬಾಲ್ಯದಿಂದಲೇ ಉತ್ಸಾಹದ ಚಿಲುಮೆಯಾಗಿದ್ದ ಈ ಮುದ್ದು ಮುಖದ ದಿಟ್ಟ ನಿಲುವಿನ ಹುಡುಗಿಯ ಹೆಸರೇ ವತ್ಸಲಾ. ಇಂದು ಈಕೆಗೆ 76ರ ಹರೆಯ ಇಂದಿಗೂ ಅದೇ ಬತ್ತದ ಉತ್ಸಾಹ, ಯಾವುದಾದರು ಸಾಮಾಜಿಕ ಕಾರ್ಯಕ್ರಮಕ್ಕೆ ಆಮಂತ್ರಿಸಿದರೆ ಮಳೆ, ಬಿಸಿಲು ಯಾವುದಕ್ಕು ಹಿಂಜರಿಯದೆ ಸರಿಯಾದ ಸಮಯಕ್ಕೆ ಅಲ್ಲಿ ಹಾಜರ್! ``ಸುಮ್ಮನೆ ಕುಳಿತು ಕೆಲಸಕ್ಕೆ ಬಾರದ ವಿಷಯದ ಬಗ್ಗೆ ಚರ್ಚಿಸುವುದು ಮತ್ತು ಚಿಂತಿಸುವುದು ಚಿಕ್ಕ ಗಾಯವನ್ನು ಸುಮ್ಮನಿರಲು ಬಿಡದೆ ಕೆರೆದು ಹುಣ್ಣಾಗಿಸುವಂತಹ ಮೂರ್ಖತನ. ಅದರ ಬದಲಿಗೆ ಆ ಸಮಯವನ್ನು ಸಮಾಜದ ಏಳಿಗೆಗೆ ಉಪಯೋಗಿಸಿಕೊಳ್ಳುವುದರಲ್ಲಿ ಜೀವನದ ಸಾರ್ಥಕತೆ ಇದೆ'' ಎನ್ನುವುದು ವತ್ಸಲಾರ ಅಭಿಪ್ರಾಯ.

Read More
0 Comments

ಧೀರ ದೊರೆಸ್ವಾಮಿ

7/16/2017

0 Comments

 
ಡಾ.ಎಚ್.ಎಸ್. ದೊರೆಸ್ವಾಮಿಯಂಥವರನ್ನು ನೆನೆದಾಗಲೆಲ್ಲಾ ನನಗೆ ವಿ.ಸೀ. ಅವರ ಕವಿತೆಯೊಂದರ ಈ ಐದು ಸಾಲುಗಳು ನೆನಪಾಗುತ್ತವೆ.

ಮಣಿಯದಿಹ ಮನವೊಂದು
ಸಾಧಿಸುವ ಹಟವೊಂದು
ನಿಜದ ನೇರಕೆ ನಡೆವ ನಿಶ್ಚಲತೆಯೊಂದು
ಅನ್ಯಾಕೆಂದೆಂದು ಬಾಗದೆಚ್ಚರವೊಂದು
ಮರುಕಕ್ಕೆ, ಪ್ರೇಮಕ್ಕೆ ಚಿರ ತೆರೆದ ಎದೆಯೊಂದು
​

ಈ ಸಾಲುಗಳ ಸಾರಸತ್ತ್ವದ ಸಾಕಾರವೆಂದರೆ ದೊರೆಸ್ವಾಮಿಯವರು. ನೀಳವಾದ ದೇಹ, ಆಜಾನು ಬಾಹು, ಗಿಣಿ ಮೂಗಿನಂತೆ ಕೊಂಚ ಬಾಗಿದ ಮೂಗು, ಅಗಲ ಮುಖ, ವಯಸ್ಸನ್ನು ಅಲ್ಲಗಳೆವ ಹೊಳಪಿನ ಕಣ್ಣುಗಳು, ಧೀರ ಹೆಜ್ಜೆ, ಕಂಚಿನ ಕಂಠ, ಸದೃಢವಾದ ನಂಬುಗೆ, ಖಚಿತಪಡಿಸಿಕೊಂಡಾದ ಮೇಲೆ ಆಡುವ ದಿಟ್ಟ ನುಡಿ, ಯಾರಿಗೂ ಯಾವುದಕ್ಕೂ ಅಂಜದ ಧೈರ್ಯ, ಕಿರಿಯರಿರಲಿ-ಹಿರಿಯರಿರಲಿ ಎಲ್ಲರೊಡನೆಯೂ ಸಸ್ನೇಹವಾದ ಸಂವಾದ, ಶೋಷಣೆ-ಅಪಚಾರ- ಅಸತ್ಯದ ನಡತೆಯ ವಿರುದ್ಧ ಸಿಡಿದೇಳುವ, ಮುನ್ನಡೆಯುವ ಛಲ, ಇತ್ಯಾದಿ, ಸಮ್ಮಿಲನಗೊಂಡ ಮೈ-ಮನದ ಮಾನವಾಕೃತಿಯೇ ದೊರೆಸ್ವಾಮಿ. ಇವರಿಗೆ ತೊಂಬತ್ತು ಸಂವತ್ಸರಗಳು ತುಂಬಿ ಮುನ್‍ಚಾಚಿದ ವಯಸ್ಸು ಎಂದು ತಿಳಿದ, ಅವರಿಗಿಂತ ಹದಿಮೂರು ವರ್ಷ ಕಿರಿಯನಾದ, ನನಗೆ ಅಗಾಧವಾದ ಈರ್ಷ್ಯೆ. ಅವರ ಸತ್ತ್ವದಲ್ಲಿ ಒಂದಿನಿತು ನನ್ನಂಥವರಿಗೆ ಇವರು ಕೊಡಬಹುದಿತ್ತಲ್ಲವೆ ಅನ್ನಿಸುತ್ತದೆ. ಇವರನ್ನು ಹೋಗಿ ಕಾಣಲು ನಾನು ಹಿಂದು-ಮುಂದು ನೋಡುತ್ತೇನೆ; ನಾಚುತ್ತೇನೆ. ಅವರ ಕಡೆ ಕೋಲೂರಿಕೊಂಡು ಹೋಗುವುದು ಕನಿಕರದ ಕಷ್ಟವಲ್ಲವೆ?

Read More
0 Comments

ಸಮಾಜಕಾರ್ಯ ಕ್ಷೇತ್ರದಲ್ಲಿ ಉತ್ತುಂಗ ಸಾಧನೆಗೈದ ಅನುಕರಣೀಯ ಮಹಿಳೆ - ಡಾ. ಕಲ್ಪನಾ ಸಂಪತ್

7/16/2017

0 Comments

 
Picture
1.         ನಿಮ್ಮ ಉದ್ಯೋಗ/ವೃತ್ತಿಯನ್ನು ವಿವರಿಸಿ?
ನಾನು ಅರ್ಪಿತ ಅಸೋಸಿಯೇಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಈಎಫ್ಐಎಲ್ ಎಜುಕೇಷನಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕಿಯಾಗಿದ್ದೇನೆ. ನಾನು ಲೇಖಕಿಯಾಗಿ, ಸಂಶೋಧಕಿಯಾಗಿ ಮತ್ತು ಸಾಂಸ್ಥಿಕ ಅಭಿವೃದ್ಧಿಯಲ್ಲಿ ಮಧ್ಯಸ್ಥಿಕೆ ವಹಿಸುವ ವಿಷಯದಲ್ಲಿ ತರಬೇತುದಾರಳಾಗಿ, ಭೋಧಕಿಯಾಗಿ, ವಿನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.
 
2.         ಈ ಉದ್ಯೋಗಕ್ಕೆ ಅವಶ್ಯಕವಿರುವ ವಿದ್ಯಾರ್ಹತೆ ಏನು?
ಪ್ರಕ್ರಿಯೆ ತರಬೇತಿ, ಮಾನವ ಸಂಪನ್ಮೂಲ ಕ್ಷೇತ್ರಗಳಲ್ಲಿ ಪ್ರಮಾಣೀಕರಣಗಳೊಂದಿಗೆ ಎಂ.ಎಸ್.ಡಬ್ಲ್ಯೂ ಮತ್ತು ಪಿಎಚ್.ಡಿ ಪದವಿ ಮತ್ತು ತಂತ್ರಜ್ಞಾನ ಮತ್ತು ಜನರ ನಿರ್ವಹಣೆಯಲ್ಲಿ ಹೆಚ್ಚುವರಿ ತರಬೇತಿ ಹೊಂದಿರಬೇಕು.

Read More
0 Comments

ಸ್ವಾಮಿ ವಿವೇಕಾನಂದ ಎಂಬ ಮನುಷ್ಯ ಹೀಗಿದ್ದರು....

7/6/2017

0 Comments

 
Picture
ಸ್ವಾಮಿ ವಿವೇಕಾನಂದರು ಒಬ್ಬ `ದಡ್ಡ` ವಿದ್ಯಾರ್ಥಿಯಾಗಿದ್ದರು. `ವಿದ್ಯಾರ್ಥಿಗಳಿಗೆ ಬೋಧಿಸಲು ಬರುವುದಿಲ್ಲ` ಎಂಬ ಕಾರಣಕ್ಕೆ ಶಿಕ್ಷಕನ ಉದ್ಯೋಗ ಕಳೆದುಕೊಂಡಿದ್ದರು.

ಹುಟ್ಟಿನಿಂದಲೇ ರೋಗಿಷ್ಠರಾಗಿದ್ದ ಅವರು ಸಾಯುವ ಹೊತ್ತಿಗೆ ಒಂದೆರಡಲ್ಲ, ಮೂವತ್ತೊಂದು ಬಗೆಯ ರೋಗಗಳಿಂದ ಬಳಲಿ ಹೋಗಿದ್ದರು. ಎಲ್ಲ ಬಂಗಾಳಿಗಳಂತೆ ಅವರೊಬ್ಬ ಮಹಾ ತಿಂಡಿಪೋತರಾಗಿದ್ದರು.
​
ಜೀವನದ ಕೊನೆಯ ದಿನದವರೆಗೂ ಅವರು ಮಾಂಸಾಹಾರಿ ಆಗಿದ್ದರು. ಜತೆಗೆ ದೇಶ-ವಿದೇಶದ ಮಾಂಸಾಹಾರಿ ಅಡುಗೆಯನ್ನು ಮಾಡುವ ಪಾಕಪ್ರಾವೀಣ್ಯತೆ ಹೊಂದಿದ್ದರು. ವ್ಯಸನಿಯಂತೆ ಸಿಗರೇಟ್-ಹುಕ್ಕಾ ಸೇದುವ ಧೂಮಪಾನಿಯಾಗಿದ್ದರು. ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್ ಎಲ್ಲರ ಮನೆಯಲ್ಲಿ ಭೇದ ಇಲ್ಲದೆ ಊಟ ಮಾಡುತ್ತಿದ್ದರು.

Read More
0 Comments

ಭಾರತದ ಸಮಾಜಕಾರ್ಯ ಕ್ಷೇತ್ರದ ನವರತ್ನಗಳು

6/21/2017

0 Comments

 
Picture
ಡಾ. ರೂತ್ ಮನೋರಮಾರೊಂದಿಗಿನ ನನ್ನ ಒಡನಾಟವು 1973 ರಿಂದ ಪ್ರಾರಂಭವಾಯಿತು. ನನ್ನ ಹಳೆಯ ವಿದ್ಯಾರ್ಥಿಯಾದ ಆರ್.ಎಸ್. ಅನ್‍ಬರಾಸನ್‍ರವರು ರೂತ್ ಮನೋರಮಾ ಮತ್ತು ಅವರ ಸಹಪಾಠಿಯಾದ ಕರುಣಾ ಡೇವಿಡ್ರನ್ನು ಮದ್ರಾಸ್ ಸ್ಕೂಲ್ ಆಫ್ ಸೋಶಿಯಲ್ ವರ್ಕ್‍ನಲ್ಲಿ ನನಗೆ ಪರಿಚಯಿಸಿದರು. ರೂತ್ ಮತ್ತು ಕರುಣಾರವರು ಸ್ನೇಹಶೀಲ ಗುಣದವರಾದ್ದರಿಂದ ನಮ್ಮಲ್ಲಿ ಒಳ್ಳೆಯ ಗೆಳೆತನ ಬೆಳೆಯಿತು. ರೂತ್ರವರು ವಿದ್ಯಾರ್ಥಿಯಾಗಿದ್ದಾಗಿನಿಂದಲೇ ತಮ್ಮಲ್ಲಿ ಅಪಾರ ಆತ್ಮವಿಶ್ವಾಸವನ್ನು ಬೆಳಸಿಕೊಂಡಿದ್ದರಿಂದ ಮುಂದೊಂದು ದಿನ ಇವರು ಜನ ನಾಯಕರಾಗುತ್ತಾರೆಂದು ನನಗೆ ಯಾವಾಗಲೂ ಅನ್ನಿಸುತ್ತಿತ್ತು. ಅವರು ಎಲ್ಲಾ ಸಾಮಾಜಿಕ ಸಮಸ್ಯೆಗಳ ಮೇಲೆ ನಿರ್ದಿಷ್ಟ ದೃಷ್ಟಿಕೋನಗಳನ್ನು ಹೊಂದಿದ್ದರು ಮತ್ತು ತಮ್ಮ ಅಭಿಪ್ರಾಯಗಳನ್ನು ದೃಢ ಸಂಕಲ್ಪದೊಂದಿಗೆ ಅಭಿವ್ಯಕ್ತಿಗೊಳಿಸಿದರು. ರೂತ್‍ರವರು ಸುಮಾರು ನಾಲ್ಕು ದಶಕಗಳಿಂದ ದಲಿತ ಮಹಿಳೆಯರ ಸಬಲೀಕರಣ ಮತ್ತು ದಲಿತ ಚಳುವಳಿಯ ಕೇಂದ್ರ ಬಿಂದುವಾಗಿದ್ದಾರೆ. ಅವರ ಕಾರ್ಯಕ್ಷೇತ್ರವು ರಾಷ್ಟ್ರೀಯ ಎಲ್ಲೆಯ ಆಚೆಗೂ ವಿಸ್ತರಣೆಗೊಂಡಿದೆ. ಇವರು ಶೋಷಿತರ ವಿಮೋಚನಾ ಕಾರ್ಯಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲೂ ಸಕ್ರಿಯರಾಗಿದ್ದಾರೆ. ದಲಿತರಿಗಾಗಿ ಮತ್ತು ಮಹಿಳೆಯರ ವಿಮೋಚನೆಗಾಗಿ ಇವರು ನಡೆಸಿದ  ಮತ್ತು ನಡೆಸುತ್ತಿರವ ಹೋರಾಟಗಳಿಂದ ಇವರಿಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ದೊರೆತಿದೆ ಮತ್ತು ಇದ್ದಕ್ಕಾಗಿ ಇವರಿಗೆ ಪ್ರತಿಷ್ಠಿತ ರೈಟ್ ಲೈವ್ಲಿವುಡ್ ಪ್ರಶಸ್ತಿಯನ್ನು ನೀಡಲಾಗಿದೆ. ಸದ್ಯದಲ್ಲೇ ಇವರಿಗೆ ಭಾರತ ಸರ್ಕಾರದಿಂದ ಸೂಕ್ತ ಪದ್ಮ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ನಾನು ಖಚಿತವಾಗಿ ಹೇಳುತ್ತೇನೆ. ತನ್ನ ಗುರಿ ಸಾಧನೆಯಲ್ಲಿ ರೂತ್ ಮನೋರಮಾರವರ ಆಶಾವಾದಕ್ಕೆ ಮುಂದೊಂದು ದಿನ ಶಾಂತಿ ನೊಬೆಲ್ ಪ್ರಶಸ್ತಿಯು ಲಭಿಸುವುದರಲ್ಲಿ ಸಂದೇಹವಿಲ್ಲ.
 
ಡಾ. ಟಿ.ಕೆ. ನೈಯ್ಯರ್
ಸಮಾಜಕಾರ್ಯದ ಪ್ರಾಧ್ಯಾಪಕರು ಮತ್ತು
ಮಾಜಿ ಪ್ರಾಂಶುಪಾಲರು, ಮದ್ರಾಸ್ ಸ್ಕೂಲ್ ಆಫ್ ಸೋಶಿಯಲ್ ವರ್ಕ್‍.
0 Comments

ಭಾರತದ ಸಮಾಜಕಾರ್ಯ ಕ್ಷೇತ್ರದ ನವರತ್ನಗಳು : ಲಕ್ಷಾಂತರ ಮಂದಿಯ ಜೀವನವನ್ನು ಬದಲಾಯಿಸಿದ ಮಹಿಳಾ.....

6/21/2017

0 Comments

 
Picture
ಶಿಕ್ಷಣ ವಂಚಿತ ಬಡವರಿಗೆ ಶಿಕ್ಷಣ, ಉಪಯುಕ್ತವಾದ ಕೌಶಲ್ಯಗಳು ಮತ್ತು ಸಬಲೀಕರಣವು ಕ್ಯಾಪ್ ಸಂಸ್ಥೆಯ ಸಂಸ್ಥಾಪನ ಅಧ್ಯಕ್ಷೆಯಾದ ಡಾ. ನಳಿನಿ ಗಂಗಾಧರನ್ರ ಬೃಹತ್ ಬಡತನ ನಿರ್ಮೂಲನೆ ಉಪಕ್ರಮದ ಮೂರು ಮೂಲಭೂತ ಅಂಶಗಳು. ಮದ್ರಾಸ್ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ನಿಂದ ಸಮಾಜಕಾರ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ನಳಿನಿಯವರಿಗೆ ಸುಮಾರು ಮೂರುವರೆ ವರ್ಷಕ್ಕಿಂತ ಹೆಚ್ಚಿನ ಕಾಲ ಸೇವಾ ಸಮಾಜಮ್ ಬಾಯ್ಸ್ ಹೋಮ್ ನ ನಿರ್ದೇಶಕರಾದ ಲೇ|| ಎಂ.ಎಸ್.ಎಸ್. ನಂಬೂದಿರಿಯವರೊಂದಿಗೆ ಕಾರ್ಯನಿರ್ವಹಿಸುವ ಅವಕಾಶ ಸಿಕ್ಕಿತು, ಮೊದಲು ಸಾಮಾಜಿಕ ಕಾರ್ಯಕರ್ತರಾಗಿ ನಂತರ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು. ನಂಬೂದಿರಿಯವರು ನಿರ್ಗತಿಕ ಮಕ್ಕಳು ಮತ್ತು ಯುವ ಜನರಿಗೆ ನಾವೀನ್ಯ ಶಿಕ್ಷಣದಿಂದ ಮತ್ತು ಕೌಶಲ್ಯಗಳ ಅಭಿವೃದ್ಧಿಯಿಂದ ಅವರು ಬಡತನದಿಂದ ವಿಮುಕ್ತಿ ಪಡೆಯುವಂತೆ ಮಾಡಿದ ಒಬ್ಬ ಮಹಾನ್ ಸಾಧಕ. ನಳಿನಿಯವರು ತಮ್ಮ ಈ ಆರಂಭಿಕ ಅನುಭವಗಳನ್ನು ನಂತರದ ವರ್ಷಗಳಲ್ಲಿ ಭಾರತ ಮತ್ತು ಇತರೆ ದೇಶಗಳಲ್ಲಿ ಬೃಹತ್ ಸಾಮಾಜಿಕ-ಆರ್ಥಿಕ ಚಳುವಳಿಯಾಗಿ ವಿಸ್ತರಿಸಿದರು. ಎಂ.ಎಸ್.ಎಸ್.ಡಬ್ಲ್ಯೂ.ನ ವಿದ್ಯಾರ್ಥಿಯಾಗಿ ನಾನು ನಳಿನಿಯವರಲ್ಲಿ ಜೀವನದ ಸದುದ್ದೇಶವನ್ನು ಹೊಂದಿದ ಆತ್ಮವಿಶ್ವಾಸವುಳ್ಳ ಒಬ್ಬ ವ್ಯಕ್ತಿಯನ್ನು ಕಂಡಿದ್ದೇನೆ. ತಮ್ಮ ಜೀವನದಲ್ಲಿ ನಳಿನಿಯವರು ಅತ್ಯಂತ ಸೂಕ್ತ ಜೀವನ ಸಂಗಾತಿಯನ್ನು ಆರಿಸಿಕೊಂಡಿದ್ದಾರೆ.

ಎಂ.ಎಚ್. ರಮೇಶ
0 Comments

ಸಾಮಾಜಿಕ ನ್ಯಾಯಪರ ಹೋರಾಟಗಾರ: ಶ್ರೀ ಎಸ್.ಆರ್. ಹಿರೇಮಠ್

6/20/2017

0 Comments

 
1. ಹುಚ್ಚು ಕನಸು ಹೊತ್ತು ಬಂದ ದಂಪತಿ
ನಮ್ಮ ಹುಡುಗ ಅಮೆರಿಕಾಕ್ಕೆ ಓದಲು ಹೊರಟಿದ್ದಾನೆ; ನಮ್ಮ ಅಳಿಯನಿಗೆ ಅಮೆರಿಕೆಯಲ್ಲಿ ಕೆಲಸ ಸಿಕ್ಕಿದೆ, ನಮ್ಮ ಮಗಳನ್ನು ಕರೆದುಕೊಂಡು ಮುಂದಿನವಾರವೇ ಹೋಗುತ್ತಿದ್ದಾನೆ; ಇತ್ಯಾದಿಯಾಗಿ ಸಂತಸದಿಂದ ಸುದ್ದಿ ಹಂಚಿಕೊಳ್ಳುವುದು ಈಗ ಸಾಮಾನ್ಯವಾಗಿ ಕೇಳಿಬರುವ ಸಂಗತಿ. ನಮ್ಮಹುಡುಗ ಅಮೆರಿಕಾದಿಂದ ಭಾರತದಲ್ಲೇ ಇರಲು ಬರುತಿದ್ದಾನೆ ಎಂದರೆ, ಪ್ರಸ್ತುತ ಇರುವ ಜಾಗತಿಕ ಆರ್ಥಿಕ ಮುಗ್ಗಟ್ಟಿನ ಪರಿಣಾಮವಾಗಿ ಕೆಲಸ ಕಳೆದುಕೊಂಡಿರಬೇಕು, ಪಾಪ ಎಂದು ಅನುಕಂಪದ ಮಾತನಾಡುವವರು ಅನೇಕರು. ಆದರೆ ಇದ್ದ ಉತ್ತಮ ಗಳಿಕೆಯ ಕೆಲಸವನ್ನು ಬಿಟ್ಟು  ಭಾರತರದಲ್ಲಿಯ ಕಡು ಬಡವರ, ಸಾಮಾಜಿಕವಾಗಿ, ಆರ್ಥಿಕವಾಗಿ ಶೋಷಣೆಗೆ ಒಳಗಾಗಿರುವವರ ಬಗೆಗೆ ಕಾಳಜಿ ವಹಿಸಿ, ಅವರನ್ನು ಸಶಕ್ತರನ್ನಾಗಿ ಮಾಡಿ ಸಾಮಾಜಿಕವಾಗಿ-ಆರ್ಥಿಕವಾಗಿ ಅಸಮತೋಲನವನ್ನು ಕಡಿಮೆ ಮಾಡುವ ಕನಸು ಕಟ್ಟಿಕೊಂಡು ಭಾರತಕ್ಕೆ ಬಂದಿದ್ದೇವೆ ಎಂದು ಯಾರಾದರೂ ಹೇಳಿದರೆ, ಅವರಿಗೆ ಹುಚ್ಚು ಹಿಡಿದಿದೆ ಎಂದು ಸಹಜವಾಗಿ ಅನ್ನುವವರು ಸಾಕಷ್ಟು ಜನ ಸಿಕ್ಕುತ್ತಾರೆ. ಇಂತಹ ಹುಚ್ಚುಕನಸುಗಳನ್ನು ಹೊತ್ತುಕೊಂಡು ಅಮೆರಿಕೆಯಿಂದ 1979 ರಲ್ಲಿ ಭಾರತಕ್ಕೆ ಬಂದವರು ಶ್ರೀಮತಿ(ಸುಶ್ರೀ) ಶ್ಯಾಮಲಾ ಹಿರೇಮಠ್ ಹಾಗೂ ಶ್ರೀ ಎಸ್, ಆರ್, ಹಿರೇಮಠ್ ದಂಪತಿ.

Read More
0 Comments

ಭಾರತದಲ್ಲಿನ ಸಮಾಜಕಾರ್ಯ ವೃತ್ತಿಯ ನವರತ್ನಗಳು

6/20/2017

0 Comments

 
Picture
ಲಕ್ಷಾಂತರ ಮಂದಿಯ ಜೀವನವನ್ನು ಬದಲಾಯಿಸಿದ ಮಹಿಳಾ ಸಾಮಾಜಿಕ ಕಾರ್ಯಕರ್ತರು
ಶಾಂತಿ 
ರಂಗನಾಥನ್
ಶಾಂತಿ ರಂಗನಾಥನ್‍ರವರು ಸಾಮಾಜಿಕ ಕಾರ್ಯಕರ್ತರು ಮತ್ತು ವಿರಳ ವ್ಯಕ್ತಿ. ಅವರು ತಮ್ಮ ಇಳಿವಯಸ್ಸಿನಲ್ಲೇ ತಮ್ಮ ಗಂಡನನ್ನು ಕಳೆದುಕೊಂಡು ತಮ್ಮ ಖಾಸಗಿ ಜೀವನದಲ್ಲಿ ಬಹಳ ನೋವನ್ನುಂಡವರು. ಅವರು ವಿಶ್ವದರ್ಜೆಯ ಸಂಸ್ಥೆಯನ್ನು ಸ್ಥಾಪಿಸಲು ಇದೂ ಒಂದು ಮುಖ್ಯ ಕಾರಣವಾಯಿತು. ಈ ಸಂಸ್ಥೆಯ ಮೂಲಕ ಸಾವಿರಾರು ವ್ಯಕ್ತಿಗಳಿಗೆ ಮತ್ತು ಕುಟುಂಬಕ್ಕೆ ಪರಿವರ್ತನೆಯನ್ನು ತಂದಿದ್ದಾರೆ. ನಾಲ್ಕು ದಶಕಗಳ ಹಿಂದೆ ಮದ್ರಾಸ್ ಸ್ಕೂಲ್ ಆಫ್ ಸೋಶಿಯಲ್ ವರ್ಕ್‍ನಲ್ಲಿ ಆಕೆಯು ನನ್ನ ಸಹ ವಿದ್ಯಾರ್ಥಿಯಾಗಿದ್ದು ತರುವಾಯ ಟಿ.ಟಿ ರಂಗನಾಥನ್ ಕ್ಲಿನಿಕಲ್ ರಿಸರರ್ಚ್‍ ಫೌಂಡೇಷನ್ (ಟಿಟಿಆರ್‍ಸಿಆರ್‍ಎಫ್) ನ ಆರಂಭದ ವರ್ಷಗಳಲ್ಲಿನ ನನ್ನ ಅವರ ಒಡನಾಟವು ನನ್ನ ಒಂದು ಅದೃಷ್ಟವೆಂದೇ ಹೇಳಬಹುದು.

ಡಾ.ಟಿ.ಕೆ. ನೈಯ್ಯರ್
ಸಮಾಜಕಾರ್ಯದ ಪ್ರೊಫೆಸರ್ ಮತ್ತು ಮಾಜಿ ಪ್ರಿನ್ಸಿಪಾಲರು
ಮದ್ರಾಸ್ ಸ್ಕೂಲ್ ಆಫ್ ಸೋಶಿಯಲ್ ವರ್ಕ್‍

Read More
0 Comments

ಒಲಿಂಡಾ ಪೆರೇರಾ ಕರ್ನಾಟಕ ಸಮಾಜಕಾರ್ಯ ಕ್ಷೇತ್ರದ ಪೂಜನೀಯರು

6/20/2017

0 Comments

 
Picture
ಒಲಿಂಡಾ ಪೆರೇರರವರು ಮಂಗಳೂರು ಕ್ಯಾಥೊಲಿಕ್ ಕುಟುಂಬದಲ್ಲಿ ಜನಿಸಿದರು. ಮೂವರು ಸಹೋದರಿಯರಲ್ಲಿ ಒಲಿಂಡಾ ಪೆರೇರರವರು ಕಿರಿಯರು. ಕರ್ನಾಟಕದಲ್ಲಿ ಸಮಾಜಕಾರ್ಯ ಶಿಕ್ಷಣ ಕ್ಷೇತ್ರದಪ್ರವರ್ತಕರಲ್ಲಿ ಪ್ರಮುಖರು. ರೋಶನಿ ನಿಲಯ (School of Social Work) ದ ಸ್ಥಾಪಕ ಪ್ರಾಂಶುಪಾಲರಾಗಿ Dr. OlindaPereira ಮಹೋನ್ನತ ಗುರು ಹಾಗೂ ಆದರ್ಶಪ್ರಾಯರಾಗಿ ಸಂಸ್ಥೆಯನ್ನುಕಟ್ಟುವಲ್ಲಿ ಶ್ರಮ ವಹಿಸಿದ್ದಾರೆ. ಇವರು ನಗರ ಸಮುದಾಯ ಅಭಿವೃದ್ಧಿ ಕೇಂದ್ರ ಸ್ಥಾಪಿಸಿದರು (UCDC), ಹೋಂ ಸೈನ್ಸ್ ಇನ್ಸ್ಟಿಟ್ಯೂಟ್, ಅಂಧರ ಶಾಲೆ (Blind School),  ಸೇವಾ ಏಜೆನ್ಸಿ,  ಮಹಿಳೆಯರವಸತಿ  ನಿಲಯ ಸ್ಥಾಪಿಸಿದರು.  ಶಿಕ್ಷಣ, ಮಹಿಳಾ  ಸಬಲೀಕರಣಕ್ಕೆ ಪ್ರಶಸ್ತಿನೀಡಿದರು. ಪ್ರಸ್ತುತ ವಿಶ್ವಾಸ್ ಟ್ರಸ್ಟ್ ನಿರ್ದೇಶಕರಾಗಿ ವೃದ್ಧರಿಗೆ ಸಮಗ್ರ ಸಮುದಾಯ ಆಧಾರಿತ ಕಾಳಜಿ ನೀಡಿ ಪೋಷಿಸುತ್ತಿದ್ದಾರೆ.
​15ನೇ ಆಗಸ್ಟ್ 2015ಕ್ಕೆ 90 ವರುಷಗಳನ್ನು ದಾಟುತ್ತಿರುವ ಡಾ. ಒಲಿಂಡಾ ಪೆರೇರಾ ತನ್ನ ತೊಂಬತ್ತನೇ ವಯಸ್ಸಿನಲ್ಲಿಯೂ ಇನ್ನೂ ಹದಿಹರೆಯದ ಜೀವನೋತ್ಸಾಹವನ್ನು ಇಟ್ಟುಕೊಂಡಿದ್ದಾರೆ. ಡಾ. ಒಲಿಂಡಾಪೆರೇರಾ ಸಮಾಜಕಾರ್ಯ ಶಿಕ್ಷಣ ಕ್ಷೇತ್ರದಲ್ಲಿ ಒಂದು ನಕ್ಷತ್ರ ಎಂದರೆ ಅತಿಶಯೋಕ್ತಿಯಾಗಲಾರದು.  ಇವರ ಸಂದರ್ಶನ ಮಾಡಿದ ಶ್ರೀ ಎಸ್.ಎನ್. ಗೋಪಿನಾಥ್ ಮತ್ತು ಶ್ರೀ ಭೀಮರಾವ್ ಡಾ. ಒಲಿಂಡಾಪೆರೇರಾ ಅವರ ವಿದ್ಯಾರ್ಥಿಗಳು. ಇವರಿಬ್ಬರಿಗೆ ನಾನು ಕೃತಜ್ಞ.
- 
ಸಂಪಾದಕ

Read More
0 Comments

    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9



    Six-Days
    Labour Laws & Labour Codes Certification Program

    Know More

    Picture
    Know More

    Picture
    WhatsApp

    Picture

    MHR LEARNING ACADEMY

    Get it on Google Play store
    Download App
    Online Courses

    Picture
    30,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups


    Social Work Foot Prints


    RSS Feed


SITE MAP


Site

  • HOME
  • ABOUT US
  • BLOG
  • COLLABORATE WITH NIRUTA PUBLICATIONS
  • EDITOR'S BLOG
  • HR BLOG
  • PUBLICATION WITH US
  • TRANSLATION & TYPING
  • VIDEOS

TRAINING

  • CERTIFICATE TRAINING COURSES
  • TRAINING PROGRAMMES

nIRATHANKA cLUB hOUSE

  • NIRATHANKA CLUB HOUSE

JOB

  • CURRENT JOB OPENINGS
  • FIND FREELANCE JOBS​
  • FREELANCE SPOKEN ENGLISH TRAINER
  • FREELANCE TRANSLATOR

HR SERVICES

  • ​COMPLIANCE SUPPORT
  • CONSULTING
  • CONTRACT LABOUR
  • CONTRACT LABOUR LICENCE & CONSULTING
  • DOMESTIC ENQUIRY
  • DRAFTING OF LEGAL DOCUMENTS
  • HR AND COMPLIANCE AUDIT
  • HUMAN RESOURCE PROCESS AND POLICY FORMULATION
  • ISO CERTIFICATION​
  • LEGAL ASSISTANCE
  • ORGANISATIONAL AND JOB DESIGNS
  • PAYROLL
  • RECRUITMENT & STAFFING SERVICES
  • STAFFING - WHITE & BLUE COLLAR
  • ​STANDING ORDERS CERTIFICATION
  • ​TRADEMARK

OTHER SERVICES

  • ​APARTMENT RESIDENTS WELFARE ASSOCIATION REGISTRATION
  • LICENCES AND NOCs FROM FIRE, AGRICULTURE, STATE EXCISE DEPARTMENTS
  • MSME REGISTRATION
  • ​NGO / TRUST / SOCIETY / ASSOCIATION, COOPERATIVE SOCIETY & PVT. LTD. COMPANY REGISTRATION
  • ​SHOPS & ESTABLISHMENT REGISTRATION​

NIRATHANKA

  • ​CSR
  • TREE PLANTATION PROJECT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe



JOIN OUR ONLINE GROUPS


JOIN WHATSAPP BROADCAST


ONLINE STORE


Copyright Niruta Publications 2021,    Website Designing & Developed by: www.mhrspl.com