ಡಾ. ವಾಸುದೇವ ಪಾಂಡುರಂಗಿ ನಡೆದು ಬಂದ ದಾರಿ ಜನನ : ಜನವರಿ 05, 1930 ಸ್ಥಳ : ರಾಣೇಬೆನ್ನೂರು ತಂದೆ : ರಾಮಾಚಾರ್ಯ ತಾಯಿ : ಸೀತಾಬಾಯಿ ಸಹೋದರರು : ಮೂರು ಸಹೋದರಿಯರು: ನಾಲ್ಕು ವಿದ್ಯಾಭ್ಯಾಸ : ಎಂ.ಡಿ. ಪ್ರಸೂತಿಶಾಸ್ತ್ರ- ಸ್ತ್ರೀರೋಗಶಾಸ್ತ್ರ (Obstetrics & Gynecology) ಮಕ್ಕಳು : ಮೂರು ಮಕ್ಕಳು. ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿ. ಡಾ. ವಾಸುದೇವ ಪಾಂಡುರಂಗಿಯವರ ಜನನವಾದದ್ದು 05 ನೆಯ ಜನವರಿ 1930 ರಂದು ಆಗಿನ ಧಾರವಾಡ ಜಿಲ್ಲೆಯ ರಾಣೇಬೆನ್ನೂರಿನಲ್ಲಿ. ತಂದೆ ಮೂಲತಃ ಪ್ರಸಿದ್ಧ ಸಂಸ್ಕೃತ ವಿದ್ವಾಂಸರಾಗಿದ್ದ ಕಾರಣ ಬಾಲ್ಯದಲ್ಲಿಯೆ ಸಂಸ್ಕೃತ ಅಭ್ಯಾಸ ನೀಡಲಾಯಿತು. ಇವರ ಪ್ರಾಥಮಿಕ ಶಿಕ್ಷಣ ರಾಣೇಬೆನ್ನೂರಿನಲ್ಲಿ ಮುಗಿಸಿ ಕಾಲೇಜಿಗಾಗಿ ಧಾರವಾಡಕ್ಕೆ ತೆರಳಿದರು. ನಂತರ 1949 ರಲ್ಲಿ ಗ್ರಾಂಟ ಮೆಡಿಕಲ್ ಕಾಲೇಜು ಮುಂಬೈ ಸೇರಿ 1954 ರಲ್ಲಿ ವೈದ್ಯಕೀಯ (MBBS) ಪದವಿ ಗಳಿಸಿದರು. ಅದಾದ ಬಳಿಕ ಅದೇ ಗ್ರಾಂಟ ಮೆಡಿಕಲ್ ಕಾಲೇಜ್ ಮುಂಬೈ ಮುಖಾಂತರ ಪ್ರಸೂತಿಶಾಸ್ತ್ರ- ಸ್ತ್ರೀರೋಗಶಾಸ್ತ್ರಗಳಲ್ಲಿ ಎಂ.ಡಿ ಪದವಿ ಪಡೆದರು. ಇವರು ತಮ್ಮ ಪದವಿ ಪೂರ್ಣವಾದ ನಂತರ, 1956 ರಿಂದ 1966ರ ವರೆಗೆ ಮಧ್ಯ ಮುಂಬೈನಿಂದ 30 ಕಿ.ಮೀ ದೂರವಿರುವ ಬಾಸ್ಸೇನ್ ರೋಡ್‍ನಲ್ಲಿ ವೈದ್ಯಕೀಯ ವೃತ್ತಿಯನ್ನ ಪ್ರಾರಂಭಿಸಿದರು. ಇವರು 1966ರಲ್ಲಿ ಬೆಂಗಳೂರಿಗೆ ಬಂದು ರಾಜಾಜಿನಗರದಲ್ಲಿ ನರ್ಸಿಂಗ್ ಹೊಮ್ ಪ್ರಾರಂಭಿಸಿದರು. ಹೆಚ್ಚಿನ ಅನುಭವಕ್ಕಾಗಿ ಆರು ತಿಂಗಳ ಕಾಲ ವೆಲ್ಲೂರ ಮೆಡಿಕಲ್ ಕಾಲೇಜ್‍ನಲ್ಲಿ ಕೆಲಸ ಮಾಡಿದರು. ಪಾಂಡುರಂಗಿಯವರು 1973ರಲ್ಲಿ ಯುನೈಟೆಡ್ ಕಿಂಗ್‍ಡಮ್‍ಗೆ ತೆರಳಿ ಅಲ್ಲಿ ನ್ಯಾಷನಲ್ ಹೆಲ್ತ್ ಸರ್ವೀಸ್‍ನಲ್ಲಿ ಜನವರಿ 1987ರ ವರೆಗೆ ಕಾರ್ಯನಿರ್ವಹಿಸಿದರು. ನಿವೃತ್ತಿಯ ಬಳಿಕ ತಮ್ಮ ಸಂಪೂರ್ಣ ಸಮಯವನ್ನು CAMHADD ಚಟುವಟಿಕೆಗಳಿಗಾಗಿ ಧಾರೆಯೆರೆಯುತ್ತಿದ್ದಾರೆ. ಅವರು ಈ ಕೈಂಕರ್ಯದಲ್ಲಿ ತೊಡಗಿಸಿಕೊಳ್ಳುವುದರ ಹಿನ್ನೆಲೆ : ಪಾಂಡುರಂಗಿಯವರು 1974ರಲ್ಲಿ ಬೆಂಗಳೂರಿಗೆ ಬಂದು ಅವರ ಕುಟುಂಬವನ್ನು, ಅಂದರೆ, ಹೆಂಡತಿ ಮತ್ತು ಕೊನೆಯವನಾದ ಅರವಿಂದ ಸೇರಿದಂತೆ ನಾಲ್ಕು ಮಕ್ಕಳನ್ನ, ಕರೆದುಕೊಂಡು ಹೋಗುವ ನಿರ್ಧಾರ ಮಾಡುತ್ತಾರೆ. ಸಾಕಷ್ಟು ಕುತೂಹಲಕ್ಕೀಡು ಮಾಡುವಂತೆ ಅರವಿಂದ ಹುಟ್ಟಿದ್ದು ಪಾಂಡುರಂಗಿಯವರ ಹೆಂಡತಿ ಮಕ್ಕಳಾಗದಂತೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನಂತರದಲ್ಲಿ. ಅವರು ಕುಟುಂಬ ಸಮೇತರಾಗಿ ತಿರುಪತಿಗೆ ವೆಂಕಟೇಶ್ವರ ಸ್ವಾಮಿಯ ಆಶೀರ್ವಾದ ಪಡೆಯಲು ತೆರಳುತ್ತಾರೆ. ಎಲ್ಲ ಭಕ್ತಿ, ಭಾವಗಳೊಂದಿಗೆ ದೈವ ರಕ್ಷಕನಿಗೆ ಪೂಜೆ ಸಲ್ಲಿಸಿ, ಅವರು ತಮ್ಮ ಮೂರು ಜನ ಮಕ್ಕಳೊಂದಿಗೆ ಅವರ ವೀಸಾ ಪಡೆಯಲು ಮದ್ರಾಸ್‍ಗೆ ಹೊರಡುತ್ತಾರೆ. ಆದರೆ ಅವರ ಹೆಂಡತಿ, ಅರವಿಂದ, ಪಾಂಡುರಂಗಿಯವರ ಸಹೋದರ ಮತ್ತು ಸ್ನೇಹಿತನ ಪತ್ನಿ ಕಾರ್ ಮೂಲಕ ಬೆಂಗಳೂರಿಗೆ ಹೊರಡುತ್ತಾರೆ. ಅವರು ಮಾನಸಿಕ ಅಸ್ವಸ್ಥತೆಯನ್ನು ತಡೆಗಟ್ಟುವದರ ಬಗೆಗಿನ ಆಸಕ್ತಿ ಪ್ರಾರಂಭವಾಗಿದ್ದೆ 1974ರ ಅಂತ್ಯದಲ್ಲಿ. ವೈಯಕ್ತಿಕ ಜೀವನದಲ್ಲಿ ಮಾನಸಿಕ ಅಸ್ವಸ್ಥ ಮಗನನ್ನು ಪಡೆದಿದ್ದ ಪಾಂಡುರಂಗಿಯವರು ದುರದೃಷ್ಟವಶಾತ್ ತಿರುಪತಿಯ ಸನಿಹ 24ರ ಏಪ್ರಿಲ್ 1974ರಲ್ಲಿನ ಕಾರ್ ಅಪಘಾತದಲ್ಲಿ ಅವನನ್ನು ಕಳೆದುಕೊಳ್ಳುತ್ತಾರೆ. ಅವನು ಮಾನಸಿಕ ಅಸ್ವಸ್ಥತೆಗೆ ಬಲಿಯಾದದ್ದೆ ಪೊರ್ಸೆಪ್ಸ್ ಹೆರಿಗೆಯಿಂದಾಗಿ. ಖಂಡಿತ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದರೆ ಈ ದುರಂತವನ್ನ ತಪ್ಪಿಸಬಹುದಾಗಿತ್ತು. ಆಕಸ್ಮಿಕವಾಗಿ ನಡೆದ ಈ ಘಟನೆಯಿಂದಾಗಿ ಆಘಾತಕ್ಕೊಳಗಾದ ಅವರ ಮಕ್ಕಳನ್ನು ಶೆಫಿಲ್ಡ್ಡ್ಗೆ ಕರೆದುಕೊಂಡು ಹೋಗುತ್ತಾರೆ. ಅವರನ್ನು ಮೊದಲಿನ ಸ್ಥಿತಿಗೆ ತರುವಲ್ಲಿ ಶೆಫಿಲ್ಡ್ ಹೆಲ್ತ್ ಅಥಾರಿಟಿಯು ಪಾಂಡುರಂಗಿಯವರಿಗೆ ತುಂಬಾ ಸಹಾಯ ಮಾಡುತ್ತದೆ. ಈ ಕಾರಣಕ್ಕಾಗಿ ಪಾಂಡುರಂಗಿಯವರು ಶೆಫಿಲ್ಡ್ ಹೆಲ್ತ್ ಅಥಾರಿಟಿಯವರನ್ನು ಕೃತಜ್ಞತಾ ಪೂರ್ವಕವಾಗಿ ನೆನೆಯುತ್ತಾರೆ. ಅವರ ಸಹಾಯ, ಬೆಂಬಲ ಮತ್ತು ಪ್ರೋತ್ಸಾಹದಿಂದಾಗಿಯೆ ಪಾಂಡುರಂಗಿಯವರ ಮಕ್ಕಳು ಆಘಾತದಿಂದ ಚೇತರಿಸಿಕೊಳ್ಳುತ್ತಾರೆ. ಹಲವು ಸಂದರ್ಭಗಳು, ಘಟನೆ ಮತ್ತು ಕಾಕತಾಳೀಯವೆಂಬಂತೆ ತಿರುಪತಿಯ ದುರಂತ ಅವರನ್ನು ಶಶಿ ಅರವಿಂದ ಪಾಂಡುರಂಗಿ ಮೆಮೋರಿಯಲ್ ಟ್ರಸ್ಟ ರಚಿಸಲು ಪ್ರೇರೇಪಿಸಿತು. ಮೆಮೋರಿಯಲ್ ಟ್ರಸ್ಟ್ ಸ್ಥಾಪಿಸಬೇಕೆಂಬ ಯಾವುದೇ ಯೋಜನೆ ತಿರುಪತಿಯ ದುರಂತ ನಡೆಯುವುದಕ್ಕಿಂತ ಮೊದಲು ಅವರ ಕನಸಿಗೆ ಕೂಡಾ ಸುಳಿದಿರಲಿಕ್ಕಿಲ್ಲ. ಏಕೆಂದರೆ ಬೆಳಗ್ಗೆ 9.30ಕ್ಕೆ ಬೆಂಗಳೂರಿಗೆ ಮರಳುವ ಮಾರ್ಗ ಮಧ್ಯ ಜರುಗಿದ ಅಪಘಾತದಲ್ಲಿ ಅವರ ನಲ್ಮೆಯ ಮಡದಿ ಶಶಿಕಲಾ (ಸಿಂಧು), ಪ್ರೀತಿಯ ಮಗ ಮತ್ತು ಪಾಂಡುರಂಗಿಯವರ ಸ್ನೇಹಿತನ ಪತ್ನಿ ವಿಮಲಾ ವಿಧಿಯ ಕ್ರೂರ ನೋಟಕ್ಕೆ ಬಲಿಯಾಗಿ ಸ್ಥಳದಲ್ಲಿಯೆ ಕೊನೆಯುಸಿರೆಳೆಯುತ್ತಾರೆ. ಈ ದುರ್ಘಟನೆಗೆ ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಚಾಲಕನ ಹೊಣೆಗೇಡಿತನ ಮತ್ತು ಅಪಾಯಕಾರಿಯಾದ ಚಾಲನೆ. ತಿಳಿದು ಕೂಡಾ ಅತೀ ವೇಗದ ಮತ್ತು ಎಲ್ಲ ರಸ್ತೆ ನಿಯಮಗಳನ್ನ ಗಾಳಿಗೆ ತೂರಿ ಮನುಷ್ಯರ ಜೀವದ ಕಾಳಜಿ ಕಿಂಚಿತ್ತು ಇಲ್ಲದೆ ಚಾಲನೆ ಮಾಡಿದ್ದರ ಫಲವಾಗಿ ಕಾರು ಅಪಘಾತದ ರಭಸಕ್ಕೆ ನುಜ್ಜು ಗುಜ್ಜಾಗಿ ಹೋಗುತ್ತದೆ. ಪಾಂಡುರಂಗಿಯವರ ಪತ್ನಿ ಮತ್ತು ಸಂಗಡಿಗರು ಬೆಂಗಳೂರಿಗೆ ಆಗಮಿಸಿ ಮರುದಿನ ಜರುಗಲಿರುವ ತಮ್ಮ 20ನೆಯ ಮದುವೆ ವಾರ್ಷಿಕೋತ್ಸವದ ತಯಾರಿ ಮಾಡುವ ಸಂಭ್ರಮದಲ್ಲಿದ್ದರು. ಎಂತಹ ವಿಧಿಯಾಟವೆಂದರೆ ಸಡಗರ, ಸಂಭ್ರಮಗಳೇ ತುಂಬ ಬೇಕಿದ್ದ 20ನೆಯ ವಾರ್ಷಿಕೋತ್ಸವದ ಕಾರ್ಯಕ್ರಮ ಶವಸಂಸ್ಕಾರದಂತಹ ಘೋರ ಘಟನೆಯಾಗಿ ರೂಪ ತಾಳಿತ್ತು. ತಾನೊಂದು ಬಗೆದರೆ ದೈವ ಮಗದೊಂದು ಬಗೆದಿತ್ತು ಎಂಬುದು ಇದಕ್ಕೆ ಅಲ್ಲವೇ! ದೇವರ ಆಟವ ಬಲ್ಲವರಾದರು ಯಾರು...! ಒಮ್ಮೊಮ್ಮೆ ಜೀವನದಲ್ಲಿ ಭರವಸೆಯ ಮೇಲೆ ಅತಿಯಾದ ನಂಬಿಕೆ ಬೆಳಸಿಕೊಂಡರೆ ಭರವಸೆ ಎಂಬುದು ಕೇವಲ ನಿರಾಶೆ ಮತ್ತು ಭಯ ಎಂದು ಅರ್ಥೈಸಿಕೊಳ್ಳಬೇಕಾಗುತ್ತದೆ. ನಮಗೆ ಹಣ ಗಳಿಸುತ್ತೇವೆ ಎಂಬ ಭರವಸೆ ಇರುತ್ತದೆ, ಸಡಗರಗಳು ಜರುಗುತ್ತವೆ ಎಂಬ ಭರವಸೆ, ಜೀವನದಲ್ಲಿ ಸಂತೋಷ ತುಂಬಿಕೊಳ್ಳುತ್ತದೆ ಎಂಬ ಭರವಸೆ, ಬದುಕಿನಲ್ಲಿ ಎಲ್ಲ ನೆಮ್ಮದಿ ದೊರಕುತ್ತದೆ ಎಂಬ ಭರವಸೆ ಹೀಗೆ ಭರವಸೆಯ ಜಗತ್ತಿನಲ್ಲಿಯೆ ಜೀವಿಸಲಾರಂಭಿಸುತ್ತೇವೆ. ಆದರೆ ಕೊನೆಗೆ ಭರವಸೆ ಕೇವಲ ಭರವಸೆಯಾಗಿ ಹಾಗೇ ಉಳಿದುಕೊಂಡುಬಿಡುತ್ತದೆ. ಒಂದು ವೇಳೆ ಜೀವನದಲ್ಲಿ ನಿರಾಶೆಯನ್ನ ದೂರವಿಡಬೇಕು ಎಂಬುದಾದರೆ ಬದುಕಿನುದ್ದಕ್ಕೂ ಭರವಸೆಯನ್ನು ಎಷ್ಟು ಸಾಧ್ಯವೋ ಅಷ್ಟು ದೂರವಿಡಬೇಕು ಎಂಬ ಕಾರ್ಯಬದ್ಧತೆಗೆ ಒಳಗಾಗಬೇಕಾಗುತ್ತದೆ. ಈ ಸಿದ್ಧಾಂತದಿಂದ ಸಿದ್ಧಿಗೊಳ್ಳುವ ವಿಷಯವೇನೆಂದರೆ ಒಳ್ಳೆಯದು ನಡೆದರೆ ಸಂತೋಷ ಅದೇ ಕೆಟ್ಟದ್ದು ಜರುಗಿದರೆ ದುರಂತ ಮತ್ತು ದುಃಖ. ಅದಕ್ಕೆ ಈ ವಿಚಾರ ಸರಣಿಯಿಂದ ಬದುಕೆಲ್ಲ ಸಂತೋಷ, ಯಶಸ್ಸು ಮತ್ತು ಪೂರ್ಣ ಆದರ್ಶ ಎಂದೆನಿಸುತ್ತದೆ. ಆದರೆ ಯಾರೊಬ್ಬರ ಜೀವನದಲ್ಲಿ ಯಾವುದೇ ಘಟನೆ ನಡೆದರೂ ಮರುಕ್ಷಣದ ಪ್ರತಿಕ್ರಿಯೆ ಪ್ರಾಮಾಣಿಕ ಮತ್ತು ವಾಸ್ತವಿಕವಾಗಿರುತ್ತದೆ. ಈ ಪ್ರಕಾರ ರೂಢಿಯಲ್ಲಿ ಬದುಕೆಂದರೆ ಬರೀ ಸೋಲು ಮತ್ತು ನಿರಾಶೆ ಎಂದೆನಿಸುತ್ತದೆ. ಆದಕಾರಣ ದೇವರು ಪ್ರತಿಯೊಬ್ಬರ ಅಂತರಂಗದಲ್ಲಿ ನೆಲೆಸಿದ್ದಾನೆ ಎಂದು ಭಾವಿಸುವುದಾದರೆ ಅವನ ಅರಿಯಲಾಗದ ಇಚ್ಛೆ ಏನಿದೆ ಎಂದು ಅರ್ಥೈಸಿಕೊಳ್ಳುವುದು ಅಸಾಧ್ಯದ ಕೆಲಸ. ಅದಕ್ಕೆ ನಾವು ಪ್ರತಿ ಘಟನೆ ಜರುಗಿದಾಗಲೂ ಅದರ ಹಿಂದೆ ದೇವರ ಬಯಕೆ ಹೀಗೆ ಆಗಿತ್ತೇನೋ ಎಂದು ನಂಬುತ್ತೇವೆ. ನಿನ್ನೆ ಯಾರದೋ ಆಗಿದ್ದು ಇಂದು ನಮ್ಮದಾಗಿದೆ. ಸಧ್ಯದ ಖುಷಿ, ಸಂತೋಷ ಮತ್ತು ದುಃಖಗಳು ನಮ್ಮವೆ. ನಾಳೆ ಏನು ನಡೆಬಹುದೆಂದು ನಮಗ್ಯಾರಿಗೂ ಅರಿಯಲಾಗುವುದಿಲ್ಲ. ನಾಳೆಗೆ ಮತ್ತು ನಂತರದಲ್ಲಿ ಬದುಕಿರುತ್ತೇವೆ ಎಂಬುದೆಲ್ಲವು ಅವನ ಕೈಯಲ್ಲಿದೆ. ದೇವರೆಂದರೆ ವಿಧಿ ಅಥವಾ ಹಣೆಬರಹ ಏನೇ ಕರೆದರು ಅದನ್ನು ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ. ಏನೆಲ್ಲ ನಡೆಯಬೇಕೋ ಅದೇ ನಡೆದೇ ತೀರುತ್ತದೆ. ಅದನ್ನು ನಾವೆಲ್ಲ ಸಂದರ್ಭಗಳು ಹೇಗೆ ಬರುತ್ತವೋ ಹಾಗೆ ಸ್ವೀಕರಿಸಬೇಕು ಅಷ್ಟೇ. ಕೊನೆಯಲ್ಲಿ ಮನುಷ್ಯ ವಿಧಿಯ ಅಡಿಯಾಳು ಅದನ್ನು ಜಯಿಸುವ ಸಾಮರ್ಥ್ಯ ನಮಗ್ಯಾರಿಗೂ ಇಲ್ಲ ಎಂಬುದು ಮನದಟ್ಟಾಗುತ್ತದೆ. ಕಹಿ ಅನುಭವಗಳು ಮಾನಸಿಕ ಅಸ್ವಸ್ಥತೆಯನ್ನು ತಡೆಗಟ್ಟುವ ಉದ್ದೇಶದಿಂದ ಹೆಚ್ಚಿನ ಕಲಿಕೆ ಅಗತ್ಯ ಎಂದು ಪಾಂಡುರಂಗಿಯವರು 1975ರಲ್ಲಿ ಡಬ್ಲಿನ್‍ನಲ್ಲಿ ನಡೆದ International League of Society for Mentally Handicapped (ILSMH) ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಹಾಜರಾಗುವ ಮುಖಾಂತರ ತಮ್ಮ ಹೊಸಯಾತ್ರೆಯನ್ನು ಪ್ರಾರಂಭಿಸುತ್ತಾರೆ. ಅವರು ಮಾನಸಿಕ ಅಸ್ವಸ್ಥರನ್ನು ಸರಿಪಡಿಸುವ ಅನೇಕ ನಿಷ್ಣಾತರನ್ನು ಮತ್ತು ಪರಿಶೋಧಕರನ್ನು ಭೇಟಿಯಾಗುತ್ತಾರೆ. ಮಾನಸಿಕ ಅಸ್ವಸ್ಥತೆಯನ್ನು ತಡೆಗಟ್ಟುವ ವಿಷಯದಲ್ಲಿ ILSMH ಗೆ ಯಾವುದೇ ಸ್ಪಷ್ಟ ತಿಳಿವಳಿಕೆ ಇರುವುದಿಲ್ಲ. ಅದರಲ್ಲಿ ಹಲವರು ತಡೆಗಟ್ಟುವುದು ಎಂದರೆ ಗರ್ಭಪಾತ ಎಂದು ತಿಳಿದುಕೊಂಡಿದ್ದರು. ಅಲ್ಲಿನವರಿಗೆ ಇರುವ ತಪ್ಪು ತಿಳಿವಳಿಕೆಯನ್ನು ಆಧಾರ ಸಮೇತ ಬದಲಾಯಿಸಬೇಕು ಎಂಬ ಯೋಚನೆಯು ಪಾಂಡುರಂಗಿಯವರಿಗೆ ಮೂಡಿತು. ಅವರು ಇದನ್ನೊಂದು ದೊಡ್ಡ ಸವಾಲಾಗಿ ಸ್ವೀಕರಿಸುತ್ತಾರೆ. ಡಬ್ಲಿನ್ನ ವಿಚಾರ ಸಂಕಿರಣದಲ್ಲಿ ಪಾಂಡುರಂಗಿಯವರು ಬಾರೊನೆಸ್ ವಿಕ್‍ರ್ಸ ಅವರನ್ನು ಭೇಟಿಯಾಗುತ್ತಾರೆ. ಆಕೆ ಅವರನ್ನು ಪೆಡಿಟ್ರಿಸಿಯನ್ ಕನ್ಸಲ್ಟಟೆಂಟ್ ಆಗಿರುವ ಡಾ.ಹಗ್ ಜಾಲಿ ಅವರಿಗೆ ಪರಿಚಯಿಸಿದಾಗ, ಅವರು ಮಾನಸಿಕ ಅಸ್ವಸ್ಥತೆಯ ತಡೆಗಟ್ಟುವುಕೆಯ ಬಗ್ಗೆ ಆಸಕ್ತಿ ತೋರಿಸಿ ಪಾರ್ಲಿಮೆಂಟ್‍ನಲ್ಲಿ ಒಂದು ಸಭೆಯನ್ನು ಏರ್ಪಡಿಸುತ್ತಾರೆ. ಪಾಂಡುರಂಗಿಯವರು ಅತೀವ ಆಸಕ್ತಿಯಿಂದ ವಾಷಿಂಗ್ಟನ್ ಡಿಸಿ (ಯುಎಸ್ಎ) ನಲ್ಲಿ 1976ರಲ್ಲಿ ನಡೆದ International Association for the Scientific Study of Mental Deficiency (IASSMD) ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳುತ್ತಾರೆ. ಖೇದಕರ ಸಂಗತಿ ಎಂದರೆ ಅವರ ಯಾವುದೇ ಪ್ರಶ್ನೆಗಳಿಗೆ ಅಲ್ಲಿ ಸಮರ್ಪಕ ಉತ್ತರ ಸಿಕ್ಕುವುದೇ ಇಲ್ಲ. ಮಾನಸಿಕ ಅಸ್ವಸ್ಥತೆಯನ್ನು ತಡೆಗಟ್ಟುವಿಕೆ ಕುರಿತಂತೆ (ಪ್ರಾಥಮಿಕ ಮತ್ತು ದ್ವಿತೀಯ) ಆ ಸಂಸ್ಥೆಗಳಲ್ಲಿ ಯಾವುದೇ ಸೂಕ್ತ ಕಾರ್ಯಕ್ರಮಗಳು ಇರಲೇ ಇಲ್ಲ. ನಂತರ ಅವರು ವಾಷಿಂಗ್ಟನ್ ವಿಚಾರ ಸಂಕಿರಣದಲ್ಲಿ ದಿವಂಗತ ಅಲನ್ ರೊಹೆರ್ (ಕೆನಡಾ), ಪ್ರೊ.ಅಲನ್ ಕ್ಲರ್ಕ್ (ಯುಕೆ) ಮತ್ತು ಪ್ರೊ,ಪೀಟರ್ ಮಿಟ್ಲರ್(ಯುಕೆ) ಹಾಗೂ ಡಾ.ಡೇವಿಡ್ ಪ್ರಿಮ್ರೊಸ್ (ಯುಕೆ)- ಗೌರವಾನ್ವಿತ ಕಾರ್ಯದರ್ಶಿಗಳು ಐಎಎಸ್ಎಸ್ಎಂಡಿ, ಇವರನ್ನೆಲ್ಲಾ ಭೇಟಿ ಮಾಡುತ್ತಾರೆ. ಇವರೆಲ್ಲ ಪಾಂಡುರಂಗಿಯವರ ಮೇಲೆ ಪ್ರಭಾವ ಬೀರಿ ಅವರಲ್ಲಿರುವ ಮಾನಸಿಕ ಅಸ್ವಸ್ಥತೆಯನ್ನು ತಡೆಗಟ್ಟುವುದರ ಬಗೆಗಿನ ಆಸಕ್ತಿಗೆ ಮತ್ತಷ್ಟು ಇಂಬು ಕೊಡುತ್ತಾರೆ. ಹೀಗಾಗಿ 1976ರಿಂದ ಇಂದಿನವರೆಗೂ ಡಾ.ಆರ್.ಎಂ.ವರ್ಮಾ (ಬೆಂಗಳೂರು) ಅವರ ಸಹಕಾರದೊಂದಿಗೆ ಮಾನಸಿಕ ಅಸ್ವಸ್ಥತೆಯನ್ನು ತಡೆಗಟ್ಟುವುದರ ಬಗ್ಗೆ ಪ್ರಚಾರ ಕಾರ್ಯ ಕೈಗೊಳ್ಳುತ್ತಲೇ ಸಾಗಿದ್ದಾರೆ. ಅಂತಾರಾಷ್ಟ್ರೀಯ ವಿಕಲಚೇತನರ ವರ್ಷ : 1981 ಒಕ್ಕೂಟ ರಾಷ್ಟ್ರಗಳ ಸಾಮಾನ್ಯ ಸಭೆಯು 16 ಡಿಸೆಂಬರ್, 1976ರಂದು 31/123 ಮತಗಳೊಂದಿಗೆ ಅಂತಾರಾಷ್ಟ್ರೀಯ ವಿಕಲಚೇತನರ ವರ್ಷ (ಐವೈಡಿಪಿ) 1981 ಎಂಬ ನಿರ್ಣಯವನ್ನು ಘೊಷಿಸಲಾಯಿತು. ಹಾಗೂ ಇದನ್ನು ಪೂರ್ಣ ಪಾಲ್ಗೊಳ್ಳುವಿಕೆ ಮತ್ತು ಸಮಾನತೆ ಎಂಬ ವಿಷಯವನ್ನಿಟ್ಟುಕೊಂಡು ವಿಶ್ವದಾದ್ಯಂತ ಆಚರಣೆ ಮಾಡಲಾಯಿತು. ಆ ವರ್ಷ ಎಲ್ಲ ರಾಷ್ಟ್ರಗಳ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಕಲಚೇತನರಿಗೆ ಸೂಕ್ತ ಸಹಾಯ, ತರಬೇತಿ, ಕಾಳಜಿ ಮತ್ತು ಲಭಿಸಬಹುದಾದ ಅವಕಾಶಗಳ ಬಗ್ಗೆ ನಿಯಮಾವಳಿ ರೂಪಿಸಿ ಸಾಧ್ಯವಾಗುವಂತಹ ಕೆಲಸ ಮತ್ತು ಸಮಾಜದಲ್ಲಿ ಅವರನ್ನು ಒಂದೇ ಎಂದು ಪರಿಗಣಿಸುವ ಭರವಸೆ ನೀಡಲು ಎಲ್ಲ ರೀತಿಯ ಪ್ರಯತ್ನ ಮಾಡಬೇಕೆಂಬ ಪ್ರಮುಖ ಉದ್ದೇವನ್ನಿಟ್ಟುಕೊಂಡು ಆ ವರ್ಷದಲ್ಲಿ ಪ್ರಚಾರ ಮಾಡಲಾಯಿತು. ಅಂತಾರಾಷ್ಟ್ರೀಯ ವಿಕಲ ಚೇತನರ ವರ್ಷದಲ್ಲಿ ಪ್ರತಿಬಂಧಕ ಕ್ಷೇತ್ರದಲ್ಲಿನ ಪರಿಶೋಧಕರು (ಐವೈಡಿಪಿ) ಕೆನ್ನೆಥ್ ಥಾಮ್ಸನ್ : ಇವರು ಕಾಮನ್‍ವೆಲ್ತ್ ಸೆಕ್ರೆಟೆರಿಯಟ್‍ಗೆ ಸಲಹೆಗಾರರಾಗಿ ವಿಕಲ ಚೇತನರ ಬಗೆಗೆ ನಿಯಮಾವಳಿಗಳು ಮತ್ತು ಕಾರ್ಯಕ್ರಮಗಳ ವರದಿಯನ್ನು ಕಾಮನ್‍ವೆಲ್ತ್ ಸಮೀಕ್ಷಾ ವರದಿಯ (ಆಗಸ್ಟ್ 1981) ಭಾಗವಾಗಿ ರೂಪಿಸಿ, ಸಲ್ಲಿಸಿದರು. ಕಾಮನ್‍ವೆಲ್ತ್ ಸೆಕ್ರೆಟೆರಿಯಟ್ ಕಮಿಶನ್ಡ್ ದಿವಂಗತ ಮಿ.ಕೆನ್ನೆಥ್ ಥಾಮ್ಸನ್ ಅವರ ಕಾಮನ್ವೆಲ್ತ್‍ನಲ್ಲಿರುವ ವಿಕಲ ಚೇತನರಿಗೆ ನಿಯಮಾವಳಿಗಳು ಮತ್ತು ಕಾರ್ಯಕ್ರಮಗಳು ಒಂದು ಸಮೀಕ್ಷೆ ಎಂದು ಪ್ರಕಟಿಸಿತು. ಅವರು ವರದಿಯಲ್ಲಿ ಅಂಗವೈಕಲ್ಯವನ್ನು ತಡೆಗಟ್ಟುವ ತುರ್ತು, ರೋಗ ಉಂಟು ಮಾಡುವ ಹಾನಿಯ ಬಗ್ಗೆ ಒತ್ತಿ ಹೇಳಿದರು. ಅಶಕ್ತತೆ ಮತ್ತು ಶಾಶ್ವತ ಅಂಗವೈಕಲ್ಯವನ್ನು ಹೆಚ್ಚಿನ ಖರ್ಚಿಲ್ಲದೆ ತಡೆಗಟ್ಟಬಹುದು, ಆದರೆ ವೈದ್ಯ ವೃತ್ತಿಯಲ್ಲಿರುವವರ ಸತತ ಶ್ರಮ ಮತ್ತು ಸಾಮಾಜಿಕ ಸ್ವಯಂ ಸಂಸ್ಥೆಗಳ ಪಾತ್ರ ಬಹು ಮುಖ್ಯ ಎಂದು ಹೇಳಿದರು. ಸರ್ ಜಾನ್ ವಿಲ್ಸನ್: ಲೀಡ್ಸ್ ಕಾಸ್ಲ್ ಸೆಮಿನಾರ್: ನವೆಂಬರ್ 1981 ಬ್ರಿಟಿಷ್ ಸರಕಾರ ನವೆಂಬರ್ 1981ರಲ್ಲಿ ಲೀಡ್ಸ್ ಕಾಸ್‍ಲ್‍ಲ್ಲಿ ರಾಜಕಾರಣಿಗಳ, ವಿಜ್ಞಾನಿಗಳ, ಔಷಧ ತಜ್ಞರ ಮತ್ತು ಆರೋಗ್ಯ ಅಧಿಕಾರಿಗಳ ಜಾಗತಿಕ ವಿಚಾರ ಸಂಕಿರಣವನ್ನು ಆಯೋಜಿಸಿ, ಅದರಲ್ಲಿ ಅಂಗವೈಕಲ್ಯದ ಪ್ರಾಥಮಿಕ ತಡೆಗಟ್ಟುವಿಕೆಯ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲಲಾಯಿತು. ಈ ವಿಚಾರ ಸಂಕಿರಣದಲ್ಲಿ ಕಂಡುಕೊಳ್ಳಲಾದ ಅಂಶಗಳನ್ನು ವರದಿ ಮಾಡಿ ಅದನ್ನು ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯನಿರ್ವಾಹಕ ಮಂಡಳಿಯ ದಿವಂಗತ ಸರ್ ಜಾನ್ ವಿಲ್ಸನ್ (IMPACT Foundation) ಅವರಿಗೆ ಸಲ್ಲಿಸಲಾಗಿ, ಅವರು ಈ ತೆರನ ಸೂಚನೆಗಳನ್ನು ನೀಡಿದರು: ಅಂಗವೈಕಲ್ಯವನ್ನು ಮಾನದಂಡಗಳ ಪರಿಮಿತಿ ಇಲ್ಲದೆ ಸಭ್ಯ ಬೆಲೆ ತೆತ್ತಾದರೂ ತಡೆಗಟ್ಟುವ ನಿಟ್ಟಿನಲ್ಲಿ ಮಾರ್ಗ ಕಂಡುಕೊಳ್ಳಬೇಕಿದೆ. ಅಚ್ಚುಕಟ್ಟಾದ ಹೊಸ ನೇರ ಕಾರ್ಯಕ್ರಮಗಳ ಅಗತ್ಯ ಏನೂ ಇರದಿದ್ದರೂ ಪ್ರಧಾನವಾಗಿ ಬದಲಾಗಬೇಕಾದ್ದೆಂದರೆ ಪ್ರಸ್ತುತ ಇರುವ ಎಲ್ಲ ಆರೋಗ್ಯ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಅಂಗವೈಕಲ್ಯ ತಡೆಗಟ್ಟುವಿಕೆಯನ್ನು ಸೇರಿಸುವುದು. ವೈದ್ಯಕೀಯ ಶಾಲೆಗಳು ಮತ್ತು ಇನ್ನಿತರ ಸಂಸ್ಥೆಗಳಲ್ಲಿ ವೈದ್ಯಕೀಯ ವೃತ್ತಿ ತರಬೇತಿ ಪಡೆಯುವವರ ಪಾತ್ರ ಇದರಲ್ಲಿ ಪ್ರಮುಖವಾಗಿದೆ. ಈ ವಿಚಾರ ಸಂಕಿರಣದ ಒಟ್ಟು ಹೂರಣದ ಫಲವಾಗಿ IMPACT Foudation ನ್ನು ಸ್ಥಾಪಿಸಲಾಯಿತು. ಡಾ.ವಿ.ಆರ್.ಪಾಂಡುರಂಗಿ : ಕಾಮನ್‍ವೆಲ್ತ್ ಅಸೋಸಿಯೇಷನ್ ಸ್ವರೂಪ ಪಡೆದುಕೊಂಡಿದ್ದು ಮೇ 1981ರ ಬೆಂಗಳೂರಿನ ಗೋಷ್ಠಿಯಲ್ಲಿ ಏಷಿಯನ್ ರೀಜನಲ್ ಮತ್ತು ಕಾಮನ್‍ವೆಲ್ತ್ ಕಾನ್ಫರೆನ್ಸ್ ಮೊದಲ ಬಾರಿ ಒಂದಾಗಿ, ಬೇಗ ಪತ್ತೆ ಹಚ್ಚುವುದು ಮತ್ತು ಬೇಗ ಅಡ್ಡಿಪಡಿಸುವದರ ವಿಷಯದ ಕುರಿತು ಇಂಡಿಯನ್ ಅಸೋಸೊಯೇಷನ್ ಫಾರ್ ರಿಸರ್ಚ ಇನ್ ಮೆಂಟಲ್ ಡಿಫಿಸಿಯೆನ್ಸಿ (IARMD), ಇಂಟರ್‍ನ್ಯಾಷನಲ್ ಅಸೋಸಿಯೇಷನ್ ಫಾರ್ ಸೈಂಟಿಫಿಕ್ ಸ್ಟಡಿ ಆಫ್ ಮೆಂಟಲ್ ಡಿಫಿಸಿಯೆನ್ಸಿ (IASSMD), ಮತ್ತು ಇಂಟರ್‍ನ್ಯಾಷನಲ್ ಲೀಗ್ ಆಫ್ ಸೊಸೈಟೀಸ್ ಫಾರ್ ಮೆಂಟಲಿ ಹ್ಯಾಂಡಿಕ್ಯಾಪ್ಡ್ (ILSMH) ಜೊತೆಯಾಗಿ ಮೇ 1981ರಲ್ಲಿ ಬೆಂಗಳೂರಿನಲ್ಲಿ ಗೋಷ್ಠಿ ಏರ್ಪಡಿಸಿದರು. ಇದರ ಫಲಿತಾಂಶವಾಗಿ ಪ್ರಗತಿಶೀಲ ರಾಷ್ಟ್ರಗಳಲ್ಲಿ ಮಾನಸಿಕ ಅಸ್ವಸ್ಥತೆಯನ್ನು ತಡೆಗಟ್ಟುವುದರ (ಪ್ರಾಥಮಿಕ ಮತ್ತು ಮಾಧ್ಯಮಿಕ) ಮೇಲೆ ಬೆಳಕು ಚೆಲ್ಲುವ ಉದ್ದೇಶದಿಂದ ಕಾಮನ್‍ವೆಲ್ತ್ ಅಸೋಸಿಯೇಷನ್ ಫಾರ್ ಮೆಂಟಲಿ ಹ್ಯಾಂಡಿಕ್ಯಾಪ್ಡ್ ಆಂಡ್ ಡೆವಲೆಪ್‍ಮೆಂಟ್ ಡಿಸ್ಎಬಿಲಿಟಿಸ್ (CAMHADD) ಸ್ಥಾಪಿಸಲಾಯಿತು. CAMHADD ಮಾನಸಿಕ ಅಸ್ವಸ್ಥತೆಯನ್ನು ತಡೆಗಟ್ಟುವುದರ IMACT ಕಾರ್ಯಕ್ರಮಗಳಲ್ಲಿ ಇದ್ದಂತಹ ಬಿರುಕುಗಳನ್ನು ನಿವಾರಣೆ ಮಾಡಿತು. ಕಾಕತಾಳಿಯವೆಂಬಂತೆ ಕಾಮನ್‍ವೆಲ್ತ್ ಸೆಕ್ರೆಟೆರಿಯಟ್ ವರದಿಯಲ್ಲಿ ಶಿಫಾರಸ್ಸುಗಳನ್ನು ಸೂಚಿಸಿದ ದಿವಂಗತ ಕೆನ್ನೆಥ್ ಥಾಮ್ಸನ್ ಅವರ ವಿಕಲಚೇತನರಿಗಾಗಿನ ನಿಯಮಾವಳಿಗಳು ಮತ್ತು ಕಾರ್ಯಕ್ರಮಗಳ ಪರಿಣಾಮಕಾರಿಯಾಗಬೇಕಾದರೆ ಮಾನಸಿಕ ಅಸ್ವಸ್ಥತೆಯ ಕ್ಷೇತ್ರದಲ್ಲಿ ನಿಪುಣರಾದವರ ಕಾಮನ್‍ವೆಲ್ತ್ ಪ್ಯಾನೆಲ್ ರಚಿಸುವ ಅಗತ್ಯ ಇದ್ದು, ಅವರು ಪ್ರಾಂತೀಯ ವೃತ್ತಿ ನಿರತ ಸಂಘಗಳನ್ನು ರಚಿಸುವ ಮತ್ತು ಉತ್ಸಾಹ ತುಂಬುವ ಕೆಲಸ ಮಾಡಬೇಕು ಎಂದು ನಿರ್ಧರಿಸಲಾಯಿತು. ದಿವಂಗತ ಕೆನ್ನೆಥ್ ಥಾಮ್ಸನ್ ಅವರು ಪಾಂಡುರಂಗಿಯವರನ್ನು ಸಂಪರ್ಕಿಸಿ ಬೆಂಗಳೂರಿನಲ್ಲಿ ನಡೆದ ಗೋಷ್ಠಿಯ ಯಶಸ್ಸು ಮತ್ತು ಪ್ರಾಥಮಿಕ ಮತ್ತು ಮಾಧ್ಯಮಿಕ ತಡೆಗಟ್ಟುವಿಕೆಯ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತಂತೆ ಚರ್ಚೆ ಮಾಡಿದರು. ಕೆನ್ನೆಥ್ 1985ರ ಆಗಸ್ಟ್ನಲ್ಲಿ ವಿಧಿವಶರಾಗುವವರೆಗೂ ಪಾಂಡುರಂಗಿಯವರಿಗೆ ಸಾಕಷ್ಟು ವಿಷಯಗಳನ್ನು ತಿಳಿಸಿಕೊಟ್ಟರು ಹಾಗೂ ಮಾರ್ಗದರ್ಶನ ಮಾಡಿದರು. ಆಗಸ್ಟ್ 1982ರಲ್ಲಿ ಟೊರೊಂಟೊದಲ್ಲಿ ನಡೆದ ಕಾಂಗ್ರೇಸ್ ಆಫ್ ದಿ ಇಂಟರ್‍ನ್ಯಾಷನಲ್ ಅಸೋಸಿಯೇಷನ್ ಫಾರ್ ಸೈಂಟಿಫಿಕ್ ಸ್ಟಡಿ ಆಫ್ ಮೆಂಟಲ್ ಡಿಫಿಸಿಯೆನ್ಸಿ (IASSMD) ಮತ್ತು ನೈರೋಬಿಯಲ್ಲಿ ಅದೇ ವರ್ಷ ನವೆಂಬರ್ನಲ್ಲಿ ಜರುಗಿದ ಇಂಟರ್‍ನ್ಯಾಷನಲ್ ಲೀಗ್ ಆಫ್ ಸೊಸೈಟೀಸ್ ಫಾರ್ ದಿ ಮೆಂಟಲ್ ಹ್ಯಾಂಡಿಕ್ಯಾಪ್ಡ್ (ILSMH)ನಲ್ಲಿ ಭಾಗವಹಿಸಿದ ಪ್ರತಿನಿಧಿಗಳು ಎರಡೂ ವಿಷಯಗಳನ್ನು ಚರ್ಚಿಸಿ ಒಂದುಗೂಡಿಸಲಾಯ್ತು. ಕಾಮನ್‍ವೆಲ್ತ್ ಸಹಯೋಗದೊಂದಿಗೆ, ಕಾಮನ್‍ವೆಲ್ತ್ ಅಸೋಸಿಯೇಷನ್ ಫಾರ್ ಮೆಂಟಲ್ ಹ್ಯಾಂಡಿಕ್ಯಾಪ್ಡ್ ಆಂಡ್ ಡೆವಲೆಪ್‍ಮೆಂಟಲ್ ಡಿಸ್ಎಬಿಲಿಟೀಸ್‍ನ್ನು ಸ್ಥಾಪಿಸುವ ಜವಾಬ್ದಾರಿಯನ್ನು ಪಾಂಡುರಂಗಿಯವರು ತೆಗೆದುಕೊಂಡರು. ಇದರ ನಿರ್ವಹಣೆಗಾಗಿ ಕಾಮನ್‍ವೆಲ್ತ್ ಫೌಂಡೇಷನ್‍ನ ಹಣಕಾಸು ಸಹಕಾರದಿಂದ ಪಾಂಡುರಂಗಿಯವರು 28ಕ್ಕೂ ಹೆಚ್ಚಿನ ರಾಷ್ಟ್ರಗಳಾದ್ಯಂತ ಸಂಚರಿಸಿದರು. 1.ಜಾಗತಿಕ ಮತ್ತು ರಾಷ್ಟ್ರೀಯ ಕೊಡುಗೆ : ಜಾಗತಿಕ ಕೊಡುಗೆ ಮಾನಸಿಕ ಅಸ್ವಸ್ಥತೆಯನ್ನು ತಡೆಗಟ್ಟುವುದನ್ನು ಮಾನಸಿಕ ಆರೋಗ್ಯದಿಂದ ಜಾಗತಿಕ ಆರೋಗ್ಯ ಸಂಸ್ಥೆಯ (WHO) ತಾಯಿಯ ಮತ್ತು ಶಿಶು ಆರೋಗ್ಯ ಕಾರ್ಯಕ್ರಮದ ಕಡೆ ವರ್ಗಾಯಿಸಲಾಯ್ತು. ಜನನವಾಗುವಾಗ ಉಸಿರುಗಟ್ಟುವಿಕೆಯಿಂದಾಗುವ (ಜನನದ ಮೊದಲು ಅಥವಾ ನಂತರ ಪ್ರಾಣವಾಯು (ಆಕ್ಸಿಜೆನ್) ಕೊರತೆ) ಮೆದುಳಿನ ಹಾನಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾನಸಿಕ, ನರರೋಗ ಮತ್ತು ಇಂದ್ರಿಯ ಸಂಬಂಧದ ಅಂಗವೈಕಲ್ಯವನ್ನು ತಡೆಗಟ್ಟುವ ಮಹತ್ವವನ್ನು ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಜಾಗೃತಗೊಳಿಸಲಾಯಿತು. ಶಿಶು ಆರೋಗ್ಯ ಮತ್ತು ಬೆಳವಣಿಗೆಗೆ ಉತ್ತೇಜನ: ಆಗ ತಾನೇ ಜನಿಸಿದ ಶಿಶುವಿನ ಆರೋಗ್ಯದ ಬಗ್ಗೆ ಪರಿಚಯಿಸಲು WHO ನ ಪ್ರಧಾನ ನಿರ್ದೇಶಕರು ಸಲ್ಲಿಸಿದ ದಾಖಲೆ ಪತ್ರ (EB89/26) ದಂತೆ ಆಗ ತಾನೇ ಜನಿಸಿದ ಶಿಶುವಿಗೆ ತಾಯ್ತನದ ಚಟುವಟಿಕೆಗಳ ಸಮಗ್ರ ಸುರಕ್ಷತೆಗೆ ಕಾಳಜಿ ಅಗತ್ಯ ಎಂಬುದರ ಅರಿವಾಯ್ತು. WHO ಪರಿಕಲ್ಪನೆಯಾದ ಆರೋಗ್ಯ ಮತ್ತು ಸಾಮಾಜಿಕ ಹೊಣೆಗಾರಿಕೆಗೆ ಒಟ್ಟಾಗಿ ಯಶಸ್ಸು ಪಡೆಯಲು ಪಾಲುದಾರಿಕೆಯ ಅಭಿವೃದ್ಧಿ ಬೇಕು ಎಂಬುದನ್ನು ಪ್ರೋತ್ಸಾಹಿಸಲಾಯಿತು. 2. ರಾಷ್ಟ್ರೀಯ ಕೊಡುಗೆ : ಬಿಡದಿಯ ಯೋಜನೆ (1990)ಯಂತೆ ತಾಯ್ತನದ ಸುರಕ್ಷೆ ಮತ್ತು ಶಿಶುವನ್ನು ಉಳಿಸುವಿಕೆ ಕಾರ್ಯಕ್ರಮವನ್ನು ಕೈಗೆತ್ತಿಕೊಂಡು ಎರಡು ವರ್ಷ ಪರಿಚಯ ಮಾಡಿಸಲಾಯಿತು. ವೈದ್ಯಕೀಯ ನಿಪುಣರ ತಂಡವೊಂದು ಬೆಂಗಳೂರ ಹತ್ತಿರದ ಬಿಡದಿಗೆ ಭೇಟಿ ಕೊಟ್ಟು ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡಿತು. ಇದರಿಂದ ಹಲವು ಗರ್ಭಿಣಿಯರು ಮತ್ತು ಮಕ್ಕಳು ಸದುಪಯೋಗ ಪಡೆದುಕೊಂಡರು. ಬೆಂಗಳೂರು ಹೆಲ್ತ್ ಸಿಟಿ ಇನಿಷಿಯೇಟಿವ್ ಮೊಟ್ಟ ಮೊದಲು CAMHADD ಮತ್ತು WHO ಭಾರತದ ಕಚೇರಿಯು, ನಗರದಲ್ಲಿರುವ ಕೆಳ ಮತ್ತು ಮಧ್ಯಮ ಆದಾಯವಿರುವ ಗುಂಪುಗಳಿಗೆ, ನಗರ ಆರೋಗ್ಯ ಉಪಕ್ರಮ ಎಂಬ ಕಾರ್ಯಕ್ರಮವನ್ನು ಅಭಿವೃದ್ಧಿ ಪಡಿಸುವದರಲ್ಲಿ ಅಗ್ರಗಾಮಿಯಾಗಿ ವ್ಯಾಧಿನಿರೋಧಕ ಮತ್ತು ಆರೋಗ್ಯ ಸುರಕ್ಷೆ ಬಗ್ಗೆ ಉತ್ತೇಜನ ನೀಡುವುದನ್ನು ಜಾರಿಗೊಳಿಸಿ ವ್ಯಾಧಿನಿರೋಧಕ ಔಷಧಿಗಳು ಮತ್ತು ಆರೋಗ್ಯ ಪೂರ್ಣ ಜೀವನ ಕ್ರಮದ ಚಿಕಿತ್ಸಾಲಯದಲ್ಲಿ (HLC) ಎಲ್ಲವನ್ನೂ ಒಳಗೊಂಡಿರುವ ವ್ಯಾಧಿನಿರೋಧಕ ಮತ್ತು ಕಾಳಜಿಗೆ ಉತ್ತೇಜನ ನೀಡಲಾಯಿತು ಬೆಂಗಳೂರು ಮಾದರಿಯನ್ನು ಅಭಿವೃದ್ಧಿ ಪಡಿಸಲು ಈ ಮುಂದಿನವುಗಳ ಜೊತೆ ಹಲವು ಸರಣಿ ಸಭೆಯನ್ನು ನಡೆಸಲಾಯಿತು. WHO/HQ ಜಿನೇವಾ ಮತ್ತು WHO ಇಂಡಿಯಾ ಆಫೀಸ್‍ನ ತಾಂತ್ರಿಕ ವಿಭಾಗ, ಇದರ ಪರಿಣಾಮವಾಗಿ ILO/HQ/Geneva ದ ತಾಂತ್ರಿಕ ವಿಭಾಗ ಹಾಗೂ WHO ಟೆಕ್ನಿಕಲ್ ಕೊಲ್ಯಾಬುರೇಷನ್ ಅಭಿವೃದ್ಧಿ ಪಡಿಸುವುದು ಮತ್ತು ಟ್ರೈ ಸೆಕ್ಟರ್ ಪಾರ್ಟನರ್ ಪಾಲ್ಗೊಳ್ಳುವಿಕೆ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಶಾಂತಿನಗರದಲ್ಲಿರುವ ಪ್ರಿವೆಂಟಿವ್ ಕಾರ್ಡಿಯಾಲಜಿ ಸೆಂಟರ್ ಮತ್ತು ಬೆಂಗಳೂರಿನ ಜಯನಗರದಲ್ಲಿರುವ ಕೆಎಸ್ಆರ್‍ಟಿಸಿ ಆಸ್ಪತ್ರೆಯ ಹೆಲ್ತಿ ಲೈಫ್ ಸ್ಟೈಲ್ ಕ್ಲಿನಿಕ್ ಇವೆಲ್ಲವೂ ಆರೋಗ್ಯ ಮಾರ್ಗದೃಷ್ಟಿಯ ಹಕ್ಕು (The right to health approach) ಇದಕ್ಕೆ ಹೆಚ್ಚು ಹೆಚ್ಚು ಉತ್ತೇಜನ ನೀಡತೊಡಗಿದವು. ಈ ಕೆಳಗಿನ ಎರಡು ವ್ಯಾಧಿನಿರೋಧಕ ಮತ್ತು ಆರೋಗ್ಯ ಕೇಂದ್ರಗಳನ್ನು ಉತ್ತೇಜಿಸಲು ಬಿಬಿಎಂಪಿ ಮತ್ತು ಕೆಎಸ್ಆರ್‍ಟಿಸಿ ಸಹಯೋಗಿಗಳಾದವು. 2003 ಡಿಸೆಂಬರ್‍ನಲ್ಲಿ ಬೆಂಗಳೂರು ಮಹಾನಗರ ಪಾಲಿಕೆ (ಬಿಎಂಪಿ) ಶಾಂತಿನಗರದ ಆರೋಗ್ಯ ಕೇಂದ್ರದಲ್ಲಿ WHO ತಾಂತ್ರಿಕ ಬೆಂಬಲದಿಂದ ಮತ್ತು ಶ್ರೀ ಜಯದೇವ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಬೆಂಗಳೂರಿನಲ್ಲಿ WHO ತಾಂತ್ರಿಕ ಬೆಂಬಲದಿಂದ (2003) ಕಾಮನ್‍ವೆಲ್ತ ಸೆಂಟರ್ ಫಾರ್ ಪ್ರಿವೆಂಟಿವ್ ಕಾರ್ಡಿಯಾಲಜಿ ಸ್ಥಾಪಿಸಲಾಯಿತು. ಕರ್ನಾಟಕ ರಸ್ತೆ ಸಾರಿಗೆ ನಿಗಮವು ತನ್ನ ಉದ್ಯೋಗಿಗಳಿಗಾಗಿಯೇ (ಚಾಲಕರು, ನಿರ್ವಾಹಕರು ಮತ್ತು ಮೆಕ್ಯಾನಿಕ್ಸ್) ಜನೆವರಿ 2005ರಲ್ಲಿಯು ಬೆಂಗಳೂರಿನಲ್ಲಿ ವ್ಯಾಧಿನಿರೋಧಕ ಮತ್ತು ಹೆಲ್ತಿ ಲೈಫ್ ಸ್ಟೈಲ್ ಕ್ಲಿನಿಕ್ (HLC) ನ್ನು ಸ್ಥಾಪಿಸಿತು. 500 ಉದ್ಯೋಗಿಗಳ ಸ್ಪೈನಲ್ ಸ್ಕ್ರಿನಿಂಗ್ ಸೇರಿದಂತೆ 7777 ಉದ್ಯೋಗಿಗಳಿಗೆ 2 ವರ್ಷಗಳ ಕಾಲ ತಪಾಸಣೆ ಮಾಡಲಾಯಿತು. ಆರೋಗ್ಯ ರಕ್ಷಣಾ ನಿರೋಧಕಕ್ಕೆ ಜಾಗ್ರತೆಯನ್ನು ಹೆಚ್ಚಿಸುವದರಿಂದ ಸಾಮಾನ್ಯ ಅಪಾಯದ ಸಂದರ್ಭಗಳು, ಆರೋಗ್ಯಯುಕ್ತ ಪಥ್ಯದ ಸಮಾಲೋಚನೆ ಮತ್ತು ದೈಹಿಕ ಚಟುವಟಿಕೆಗಳಲ್ಲಿ ಆರೋಗ್ಯಯುಕ್ತ ಜೀವನ ಶೈಲಿಯ ಸಮಾಲೋಚನೆ ಬಹು ಮುಖ್ಯ ಪಾತ್ರವಹಿಸುತ್ತದೆ. ದಿ ಬೆಂಗಳೂರು ಮಾಡೆಲ್ ಹೆಲ್ತಿ ಸಿಟಿ ಇನೀಷಿಯೇಟಿವ್ WHO ದ ವೈವಿಧ್ಯ ಕ್ರಿಯಾಗುಚ್ಛ ILO, ದ ಲೈಫ್ ಯೂನಿವರ್ಸಿಟಿ, ಸಿಡಿಸಿ (ಕೆನಡಾ), ಕರ್ನಾಟಕ ಸರಕಾರ, ಈ ಎಲ್ಲವೂ ಜಂಟಿಯಾಗಿ ಸಮಗ್ರವಾದ ಕಾರ್ಯಕ್ರಮಗಳನ್ನು ರೂಪಿಸಿದವು. ಮಾಡೆಲ್ ಹೆಲ್ತ್ ಸಿಟಿ ಇನಿಷಿಯೇಟೀವ್‍ನ ಮೂಲ ಕಾರ್ಯವು ನಗರದ ಬಡವರಿಗೆ, ಮಕ್ಕಳಿಗೆ ಮತ್ತು ಕಾರ್ಮಿಕರಿಗೆ ಎಲ್ಲ ರೀತಿಯ ಆರೋಗ್ಯ ಸಂಬಂಧಿ ಕಾರ್ಯಕ್ರಮಗಳನ್ನು ಉತ್ತೇಜಿಸತೊಡಗಿದವು. ಆರೋಗ್ಯ ಪೂರ್ಣ ಸಮಾಜವು ರೋಗಗಳನ್ನು ತಡೆಗಟ್ಟುವುದರ ಕುರಿತಂತೆ ಸುಸಜ್ಜಿತ ವ್ಯವಸ್ಥೆಯನ್ನು ರೂಪಿಸಿಕೊಳ್ಳುವುದು ಅಗತ್ಯವಾಗಿದೆ ಎಂಬ ಈ ಮಾದರಿಯನ್ನು ಬೇರೆ ಕಾಮನ್‍ವೆಲ್ತ್ ರಾಷ್ಟ್ರಗಳಲ್ಲಿ ಕೂಡಾ ಅನುಷ್ಠಾನಗೊಳಿಸಲಾಯಿತು. ಆದರೂ ಪಾಂಡುರಂಗಿಯವರು, ತಮ್ಮ ಅನುಭವದ ಪ್ರಕಾರ ನಗರದಲ್ಲಿರುವ ಲಕ್ಷಗಳಷ್ಟು ಆರ್ಥಿಕವಾಗಿ ಅತೀ ದುರ್ಬಲವಾಗಿರುವ ವರ್ಗಗಳಿಗೆ ಯೋಜನೆ ರೂಪಿಸುವ ಮತ್ತು ಆರೋಗ್ಯ ರಕ್ಷಣೆ ಒದಗಿಸುವದಕ್ಕೆ ರಾಜಕಾರಣಿಗಳು ಮತ್ತು ಅಧಿಕಾರಿಶಾಹಿಗಳಿಗೆ ಕಿಂಚಿತ್ತು ಕಾಳಜಿ ಇಲ್ಲ ಎಂಬ ಅಭಿಪ್ರಾಯಪಡುತ್ತಾರೆ. ಆರೋಗ್ಯದ ಹಕ್ಕನ್ನು ಉತ್ತೇಜಿಸುವುದು: ನಗರದಲ್ಲಿ ವಾಸಿಸುವ ಬಡ, ಕೆಳ ಮತ್ತು ಮಧ್ಯಮ ಆದಾಯವಿರುವ ಗುಂಪುಗಳಿಗೆ ಆರೋಗ್ಯ ಮತ್ತು ಔಷಧಿ ಕಾಳಜಿಯು ಮಾನವನ ಮೂಲಭೂತ ಹಕ್ಕಾಗಿದೆ. ಈ ಎಲ್ಲ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸುವಾಗಿನ ಇಲ್ಲಿಯವರೆಗಿನ ಅನುಭವ ಮತ್ತು ಗುರಿಗಳನ್ನು ತಲುಪುವಾಗ ಕಲಿತ ಪಾಠ ಬೆಂಗಳೂರು ನಗರದಲ್ಲಿನ ಬಡವರು, ಕೆಳ ಮತ್ತು ಮಧ್ಯಮ ವರ್ಗಗಳಿಗೆ ಕನಿಷ್ಠ ಆರೋಗ್ಯ ಕಾಳಜಿ ಪಡೆಯುವದಕ್ಕೆ ಈ ಯೋಜನೆಯನ್ನು ಜಾರಿಗೊಳಿಸುವುದು ಅತಿ ಸೂಕ್ತ ಎಂದುಕೊಂಡ ಪಾಂಡುರಂಗಿಯವರು- ಇಂಟಿಗ್ರೆಟಿಂಗ್ ಹ್ಯೂಮನ್ಸ್ ರೈಟ್ಸ್ ಇನ್ ಹೆಲ್ತ್- ಎ ಹ್ಯೂಮನ್ ಫಂಡಮೆಂಟಲ್ ರೈಟ್ಸ್ ಫಾರ್ ಹೆಲ್ತ್ ಅಂಡ್ ಮೆಡಿಕಲ್ ಕೇರ್ ಯೋಚಿಸಿ ರೂಪಿಸಿದರು. ಇದಕ್ಕಾಗಿ ಜಿನೇವಾ ಮಾನವ ಹಕ್ಕುಗಳ ಒಕ್ಕೂಟ ರಾಷ್ಟ್ರಗಳ ಹೈ ಕಮೀಷನರ್ ಸಿಬ್ಬಂದಿ ಮತ್ತು ಆರೋಗ್ಯ ಮತ್ತು ಮಾನವ ಹಕ್ಕುಗಳ ಕಾರ್ಯಕ್ರಮವು, WHO/HQ ಮತ್ತು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಬೆಂಗಳೂರಿನಲ್ಲಿ ಫೆಬ್ರವರಿ 2010ರಲ್ಲಿ ಗ್ಲೋಬಲ್ ಕನ್ಸಲ್ಟೇಟಿವ್ ಸಭೆಯನ್ನು ನಡೆಸಿದವು. ಈ ಎಲ್ಲ ಪ್ರಯತ್ನಗಳ ಫಲವಾಗಿ, ಕೊನೆಗೆ ಆರೋಗ್ಯದ ಹಕ್ಕು ಪ್ರತಿಯೊಬ್ಬ ಮಾನವನ ಮೂಲಭೂತ ಹಕ್ಕು ಎಂಬ ಕಾರ್ಯಕ್ರಮವನ್ನು ಕರ್ನಾಟಕದ ರಾಜ್ಯಪಾಲರಾದಂತಹ ಗೌರವಾನ್ವಿತ ಶ್ರೀ ಹೆಚ್.ಆರ್.ಭಾರದ್ವಾಜ್ 20ನೇ ಅಕ್ಟೋಬರ್, 2010ರಂದು ಉದ್ಘಾಟಿಸಿದರು. ಉತ್ತೇಜನ ಮತ್ತು ರಕ್ಷಣೆಗಾಗಿ : ಆರೋಗ್ಯ ಮತ್ತು ಮಾನವ ಹಕ್ಕುಗಳು ಒಟ್ಟಿನಲ್ಲಿ ಆರೋಗ್ಯದ ಹಕ್ಕಿಗೆ ಸಾಮೀಪ್ಯವಾಗಿದೆ. ಇದನ್ನು ಬೆಂಗಳೂರು ಹೆಲ್ತಿ ಸಿಟಿ ಇನಿಷಿಯೇಟೀವ್ ಸಂಪೂರ್ಣವಾಗಿ ಬೆಳಕು ಚೆಲ್ಲುವುದು : ತುರ್ತು ಪರಿಸ್ಥಿತಿಯ ವೈದ್ಯಕೀಯ ಚಿಕಿತ್ಸೆ ಮತ್ತು ಅಪಘಾತಗಳಲ್ಲಿ ಯಾರೂ ಹಕ್ಕನ್ನು ನಿರ್ಲಕ್ಷಿಸುವಂತಿಲ್ಲ ಎಂಬುದನ್ನು ಇದು ಎತ್ತಿ ತೋರಿಸುತ್ತದೆ. ರೋಗನಿರೋಧಕ ಮತ್ತು ಆರೋಗ್ಯ ಕಾಳಜಿಯ ಜಾಗ್ರತೆ ಮತ್ತು ಆರೋಗ್ಯ ಪೂರ್ಣ ಶೈಲಿಯು ಗ್ರಾಮೀಣ ಮತ್ತು ನಗರ ಪ್ರದೇಶದ ಕೆಳ ಮತ್ತು ಮಧ್ಯಮ ಆದಾಯ ವರ್ಗದವರನ್ನೆ ಪ್ರತಿನಿಧಿಸುತ್ತದೆ. ಒಂದು ಆರೋಗ್ಯ ಪೂರ್ಣ ಸಮಾಜವು ರೋಗಗಳನ್ನು ತಡೆಗಟ್ಟುವುದರ ಕುರಿತಂತೆ ಸುಸಜ್ಜಿತ ವ್ಯವಸ್ಥೆಯನ್ನು ರೂಪಿಸಿಕೊಳ್ಳುವುದು ಅಗತ್ಯವಾಗಿದೆ ಎಂಬುದು ಡಾ. ಪಾಂಡುರಂಗಿಯವರ ಖಚಿತ ಅಭಿಪ್ರಾಯ.
ಅದಾದ ನಂತರವೂ ಪಾಂಡುರಂಗಿಯವರು ಆರೋಗ್ಯದ ಹಕ್ಕು ಮಾನವನ ಮೂಲಭೂತ ಹಕ್ಕು ಎಂಬುದನ್ನು ಎತ್ತಿ ಹಿಡಿಯುತ್ತಾರೆ. ಇದು ಕೇವಲ ಜಾಗ್ರತೆಯ ಕೆಲಸ ಎಂಬುದು ಅವರ ಅಂಬೋಣ. ಅವರ ಪ್ರಕಾರ ಕಾರ್ಯ ಮತ್ತು ಜಾರಿ ಅತೀ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಈಗಲೂ ಅವರು ಹಲವು ಯೋಜನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದೆಲ್ಲದರ ಫಲವಾಗಿ CAMHADD ನಿರಂತರ ಕ್ರಿಯಾಶಿಲವಾಗಿರುವಲ್ಲಿ ಮತ್ತು WHO ದ ಬೆಲೆಬಾಳುವ ಕ್ರಿಯೆಗಳಿಗೆ ಒತ್ತಾಸೆಯಾಗಿ ಡಾ. ಪಾಂಡುರಂಗಿಯವರ ರಚನಾತ್ಮಕ ಚೇತನವು ಇದ್ದೇ ಇರುತ್ತದೆ. ಈ ಚೇತನಕ್ಕೆ ಬಿಡುವಿಲ್ಲದ ಕೆಲಸ. ಇತ್ತೀಚೆಗೆ (2011) ಶ್ರೀ ಸಿದ್ಧಗಂಗಾ ಕ್ಷೇತ್ರದಲ್ಲಿರುವ ಸಾವಿರಾರು ವಿದ್ಯಾರ್ಥಿಗಳ ಆರೋಗ್ಯ ಸುಧಾರಣೆಯ ನಿಟ್ಟಿನಲ್ಲಿ ಒಂದು ಹೊಸ ಯೋಜನೆಯನ್ನು ಇವರ ನೇತೃತ್ವದಲ್ಲಿ ಕೈಗೊಳ್ಳಲಾಗಿದೆ. ಸ್ಥಳಿಯ ಸಂಘಟನೆಗಳ ಜೊತೆಗೆ ಅಂತಾರಾಷ್ಟ್ರೀಯ ಸಂಸ್ಥೆಗಳ ನೆರವನ್ನು ಈ ಕಾರ್ಯಕ್ಕೆ ಪಡೆಯಲು ಇವರು ಪ್ರಯತ್ನಿಸುತ್ತಿದ್ದಾರೆ. ಪಾಂಡುರಂಗಿಯವರಿಗೆ ಸಂದ ಗೌರವ ಸಮ್ಮಾನಗಳು : 1996: ಆಪ್ತಾಲ್ಮಾಲಜಿಯ ಪ್ರಾದೇಶಿಕ ಸಂಸ್ಥೆ, ಮಿಂಟೋ ಆಪ್ತಾಲ್ಮಿಕ್ ಆಸ್ಪತ್ರೆ ಬೆಂಗಳೂರು ನವೆಂಬರ್ 1998ರ ತನ್ನ ಶತಮಾನೋತ್ಸವ ಸಂದರ್ಭದಲ್ಲಿ ಕಮ್ಯೂನಿಟಿ ಐ ಕೇರ್ ಮತ್ತು ಅಂಧತ್ವದ ನಿರ್ಮೂಲನೆಗಾಗಿ ಅಪ್ರತಿಮ ಸೇವೆ ಸಲ್ಲಿಸಿದ್ದಕ್ಕಾಗಿ ಗೌರವ ಪೂರ್ಣವಾದ ಸನ್ಮಾನ. 1999 : ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಕೇಂದ್ರ ಬೆಂಗಳೂರು ಅವರು ಜೂನ್ 1999ರಲ್ಲಿ ಗೌರವಿಸಿದ್ದು. 2003 : ಬೆಂಗಳೂರು ನಗರದ ಬಡವರಿಗೆ ರೋಗ ನಿರೋಧಕ ಆರೋಗ್ಯ ರಕ್ಷಣೆಗೆ ಮೂರು-ವಿಭಾಗಗಳ ಸಹಯೋಗವನ್ನು ಉತ್ತೇಜಿಸಿದ್ದಕ್ಕೆ ಶ್ರೀಜಯದೇವ ಹೃದ್ರೋಗ ಕೇಂದ್ರ ಬೆಂಗಳೂರು ಇವರಿಂದ ಸನ್ಮಾನ. 2005 : ಇಂಡಿಯಾ ಇಂಟರ್‍ನ್ಯಾಷನಲ್ ಸೊಸೈಟಿ ಫಾರ್ ಗ್ಲೋಬಲ್ ಫ್ರೆಂಡ್‍ಶಿಪ್ ನಿಂದ ಭಾರತ್ ಗೌರವ್ ಪ್ರಶಸ್ತಿ ಪ್ರದಾನ. 2008 : ಲೇಕ್‍ಸೈಡ್ ಎಜುಕೇಷನ್ ಟ್ರಸ್ಟ್‍ನಿಂದ ಜೊತೆಯಾಗಿ ಸತತ ಮೂವತ್ತು ವರ್ಷ ಕಾಜ್ ಫಾರ್ ಚಿಲ್ಡ್ರನ್ ಆಂಡ್ ಸೊಸೈಟಿಗೆ ಅಭೂತಪೂರ್ವ ಸೇವೆ ಸಲ್ಲಿಸಿದ್ದಕ್ಕೆ ಸನ್ಮಾನ. ಡಾ.ಪಾಂಡುರಂಗಿಯವರ ಉವಾಚ ಆರೋಗ್ಯಕ್ಕಾಗಿ ಹಕ್ಕು ಒಂದು ಸಮಗ್ರ ವಸ್ತುವಾಗಿದ್ದು, ಮುನ್ನೆಚ್ಚರಿಕೆ ಮತ್ತು ನಗರಗಳಲ್ಲಿ ವಾಸಿಸುವರ ಆರೋಗ್ಯ ರಕ್ಷಣೆಯನ್ನೂ ಉತ್ತೇಜಿಸುವುದು. ಮುನ್ನೆಚ್ಚರಿಕೆ ದುಬಾರಿಯಲ್ಲದ್ದು ; ಮುನ್ನೆಚ್ಚರಿಕೆ ಜಟಿಲ ರೋಗಗಳನ್ನು ಮತ್ತು ಅಂಗವೈಕಲ್ಯವನ್ನು ತಡೆಗಟ್ಟುತ್ತದೆ. ಮುನ್ನೆಚ್ಚರಿಕೆ ಮತ್ತು ಪ್ರಾರಂಭಿಕ ಹಂತದಲ್ಲಿನ ನಿರ್ವಹಣೆಯು ಬಹು ಸಮಯ ಕಾಳಜಿ ಮತ್ತು ಮೊದಲಿನಂತಾಗಲು ಪರ್ಯಾಯವಾಗಿದೆ. ಮುಂದುವರಿದ ರಾಷ್ಟ್ರಗಳಲ್ಲಿ ಅತಿಯಾದ ಅಂಗವೈಕಲ್ಯವನ್ನು, ಪರಿಣಾಮಕಾರಿ ಮುನ್ನೆಚ್ಚರಿಕೆಯ ಕ್ರಮಗಳಿಂದ ಚಿಕಿತ್ಸಾ ವೆಚ್ಚವನ್ನು ಮತ್ತು ಮನುಷ್ಯ ನೋವು ತಾಳುವುದನ್ನು ಕಡಿಮೆ ಮಾಡುತ್ತದೆ. ಮುನ್ನೆಚ್ಚರಿಕೆಯ ಕ್ರಮಗಳು ಭವಿಷ್ಯದ ಅಂಗವೈಕಲ್ಯವನ್ನು ಕೂಡಾ ತಗ್ಗಿಸುತ್ತದೆ. ಮುನ್ನೆಚ್ಚರಿಕೆ, ಬಡತನವನ್ನು ನಿವಾರಿಸುವುದು ಮತ್ತು ಕುಟುಂಬದ ಸದಸ್ಯರ ಜೀವನದ ಗುಣಮಟ್ಟದ ಸುಧಾರಣೆಯನ್ನು ಹಾಗೆಯೇ ಆರೋಗ್ಯ ಪೂರ್ಣ ಕುಟುಂಬ ನಿರ್ಮಾಣಕ್ಕೆ ಉತ್ತೇಜಿಸುತ್ತದೆ.
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|