ಮನುಷ್ಯರ ವರ್ತನೆ ವಿಚಿತ್ರ, ವೈವಿಧ್ಯಮಯ. ಹಾಗಾಗಲು ಕಾರಣಗಳು ಹಲವಾರು. ಸಮಾಜವಿಜ್ಞಾನಿಗಳು, ಮನೋವಿಜ್ಞಾನಿಗಳು, ಈ ವೈವಿಧ್ಯಮಯ ವರ್ತನೆಗಳಿಗೆ ಕಾರಣಗಳನ್ನು ಕಂಡುಹಿಡಿಯಲು ಎಂದಿನಿಂದಲೂ ಪ್ರಯತ್ನಿಸುತ್ತಿದ್ದಾರೆ. ಕೆಲವರು ದೈಹಿಕ ಕಾರಣಗಳನ್ನು ಎತ್ತಿ ತೋರಿಸಿದರೆ, ಬೇರೆಯವರು ಸಾಮಾಜಿಕ ಕಾರಣಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತಾರೆ. ಇನ್ನು ಕೆಲವರು ವೈಯಕ್ತಿಕ (ಮಾನಸಿಕ) ಕಾರಣಗಳನ್ನು ಉದಹರಿಸುತ್ತಾರೆ. ವಾಸ್ತವವಾಗಿ ನೋಡಿದರೆ ವರ್ತನೆಯನ್ನು ನಿರ್ಧರಿಸುವಲ್ಲಿ ಇವೆಲ್ಲದರ ಪಾತ್ರವೂ ಇದೆ. ಸಾಮಾಜಿಕ ಪರಿಸರ, ಸಂದರ್ಭ, ಸನ್ನಿವೇಶ, ಸುತ್ತಣ ಜನರ ಒತ್ತಾಯ, ವರ್ತನೆಯಲ್ಲಿ ಹೇಗೆ ಮಾರ್ಪಾಡು ತರುತ್ತದೆ ಎನ್ನುವುದು ಈ ಲೇಖನದ ವಿಷಯ. ಇಲ್ಲಿ ಮನುಷ್ಯರು ಕೆಟ್ಟದಾಗಿ ವರ್ತಿಸಲು ಸಾಮಾಜಿಕ ಪರಿಸರ ಎಷ್ಟರಮಟ್ಟಿಗೆ ಕಾರಣ ಎಂಬುದನ್ನು ಹೇಳಲು ಪ್ರಯತ್ನಿಸಿದೆ. ಮೂಲತಃ ಎಲ್ಲರೂ ಒಳ್ಳೆಯವರೆ, ಆದರೆ ಸಂದರ್ಭ, ಸನ್ನಿವೇಶಗಳು ಜನರನ್ನು ಕೆಟ್ಟವರನ್ನಾಗಿ ಮಾಡುತ್ತದೆ ಎನ್ನುವುದು ಹಳೆಯ ಮಾತು. ಅದನ್ನು ಪ್ರಯೋಗದ ಮೂಲಕ ತೋರಿಸಲು ಜಿ಼ಂಬಾರ್ಡೊ ಎಂಬ ಸಮಾಜಮನೋವಿಜ್ಞಾನಿ ಯತ್ನಿಸಿದ್ದಾರೆ. ಅದರ ವಿವರಣೆ ಇಲ್ಲಿದೆ. ಅವರು ನಡೆಸಿದ ಪ್ರಯೋಗಕ್ಕೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು, ಚಿತ್ರಗಳನ್ನು, ವಿಡಿಯೊಗಳನ್ನು ನೀವು ಇಂಟರ್ನೆಟ್‍ನಲ್ಲಿ ನೋಡಬಹುದು. ಮನುಷ್ಯ ಹಾಳಾಗಲು ಪರಿಸರದ ಒತ್ತಡ ಒಂದೇ ಕಾರಣವಲ್ಲ. ಬೇರೆಯವು ಇರುತ್ತವೆ. ಏನೇ ಒತ್ತಡವಿದ್ದರೂ ಕೆಲವರು ಬದಲಾಗುವುದಿಲ್ಲ ಎಂಬುದನ್ನು ನಾವು ಮರೆಯಬಾರದು. ಹಾಗೆಂದ ಮಾತ್ರಕ್ಕೆ ಪರಿಸರದ ಪ್ರಭಾವವನ್ನು ಕಡೆಗಣಿಸುವಂತಿಲ್ಲ. ಈ ವಿಷಯವನ್ನು ಮನದಟ್ಟು ಮಾಡುವಲ್ಲಿ ಜಿ಼ಂಬಾರ್ಡೊ ಮಾಡಿದ ಪ್ರಯೋಗ ಮನೋವಿಜ್ಞಾನದಲ್ಲಿ ಒಂದು ಮೈಲಿಗಲ್ಲಾಗಿದೆ; ಅಷ್ಟೆ ವಿವಾದಾತ್ಮಕವಾಗಿದೆ ಕೂಡ.
0 Comments
14 ವರ್ಷದ ಆ ಬಾಲೆ ತನ್ನ ಟ್ಯೂಷನ್ ಮುಗಿಸಿ ಸಂಜೆಯ ಮಬ್ಬುಗತ್ತಲಿನಲ್ಲಿ ಮನೆಗೆ ಮರಳುತ್ತಿರುವಾಗ, ಹೆಂಗಸೊಬ್ಬಳು ಹತ್ತಿರ ಬಂದು ಯಾವುದೋ ಚೀಟಿ ತೋರಿಸಿ, ವಿಳಾಸ ಕೇಳುವಂತೆ ನಟಿಸಿದ್ದೊಂದೇ ಗೊತ್ತು. ಮತ್ತೆ ಮೈಮೇಲೆ ಎಚ್ಚರವೇ ಇಲ್ಲ. ಅರೆ ಮಂಪರಿನ ಎಚ್ಚರಾದಾಗ ರೈಲಿನಲ್ಲಿ ಎಲ್ಲಿಗೋ ಪ್ರಯಾಣಿಸುತ್ತಿರುವುದು, ಮಧ್ಯರಾತ್ರಿ ಮೀರಿ ಹೋಗಿರುವುದು ತಾನು ಸೀಟಿನ ಕೆಳಗಡೆ ಮಲಗಿಸಲ್ಪಟ್ಟಿರುವುದು ಅವಳ ಗಮನಕ್ಕೆ ಬಂದಿದೆ. ನಿಧಾನಕ್ಕೆ ಎಚ್ಚೆತ್ತು ಸಹಪ್ರಯಾಣಿಕರ ಗಮನ ಸೆಳೆದು ಅವರು ಈ ಹುಡುಗಿಯನ್ನು ವಿಚಾರಿಸುತ್ತಿರುವಾಗಲೇ ಇವಳನ್ನು ಕದ್ದು ತಂದಿದ್ದ ಹೆಂಗಸು ರೈಲು ನಿಂತ ಮುಂದಿನ ಸ್ಟೇಷನ್ನಲ್ಲಿ ಇಳಿದು ಹೋಗಿದ್ದಾಳೆ. ಅಂತೂ ಹೇಗೋ ಈ ಹುಡುಗಿ ಮನೆ ಸೇರಿದಳಾದರೂ ಪೊಲೀಸ್‍ಗೆ ದೂರು ನೀಡಿದ್ದರೆ ಆ ಹೆಂಗಸು ಸಿಕ್ಕಿ ಹಾಕಿಕೊಳ್ಳಬಹುದಾದ, ಅವಳ ಹಿಂದೆ ಇರಬಹುದಾದ ಜಾಲವನ್ನು ಪತ್ತೆ ಹಚ್ಚುವ ಎಲ್ಲ ಸಾಧ್ಯತೆಗಳಿದ್ದೂ ಬಾಲ ನ್ಯಾಯಮಂಡಳಿಗೆ ದೂರು ನಡಿ, ಅವರು ಅದನ್ನು ಗಂಭೀರವಾಗಿ ಪರಿಗಣಿಸದೇ ಕೆಲದಿನಗಳಲ್ಲೇ ಕೇಸನ್ನು ಮುಚ್ಚಿಹಾಕಿದರು. ಹಾಗಿದ್ದರೆ ನ್ಯಾಯ ಎಲ್ಲಿದೆ?
ತೀರಾ ಇತ್ತೀಚೆಗೆ ಬೆಂಗಳೂರನ್ನೂ ಒಳಗೊಂಡಂತೆ ರಾಜ್ಯದ ಇತರ ಭಾಗಗಳಲ್ಲಿ ನಡೆದ ಸರಣಿ ಅತ್ಯಾಚಾರಗಳು ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿವೆ. ಹಸುಗೂಸುಗಳ ಮೇಲೆ ನಡೆದಂತಹ ಅತ್ಯಾಚಾರಗಳಂತೂ ಸಮಾಜದ ವಿವಿಧ ಸ್ತರಗಳ ಜನರನ್ನು ವ್ಯವಸ್ಥೆಯ ವಿರುದ್ಧ ತಿರುಗಿ ಬೀಳುವಂತೆ ಮಾಡಿವೆ. ಶಾಂತಿ ಸಹಬಾಳ್ವೆಗೆ ಹೆಸರಾದ ಕನ್ನಡ ನಾಡಿನಲ್ಲಿ ನಡೆದ ಅತ್ಯಾಚಾರ ಸರಣಿಗಳು ನಾಗರಿಕನ (ಮನುಷ್ಯನ) ಅನಾಗರಿಕ ವರ್ತನೆಗೆ ಹಿಡಿದಗನ್ನಡಿ. ಈ ರೀತಿ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಹಿಂದೆಯೂ ಸಹ ಈ ರೀತಿಯ ಘಟನೆಗಳು ನಡೆದ ನಿದರ್ಶನಗಳಿವೆ. ಪ್ರಮುಖವಾಗಿ ಮಕ್ಕಳ ಮೇಲೆ ನಡೆದಂತಹ ಅತ್ಯಾಚಾರಗಳನ್ನು ಖಂಡಿಸಿ ಮಾನವ ಹಕ್ಕು, ಮಹಿಳಾ ಮತ್ತು ಮಕ್ಕಳ ಹಕ್ಕುಗಳ ಹೋರಾಟಗಾರರು ಹಾಗು ಸಂಘಟಣೆಗಳು ರಸ್ತೆಗಿಳಿದು ಪ್ರತಿಭಟಿಸಿದ ಉದಾಹರಣೆಗಳು ನಮ್ಮಲ್ಲಿ ಹೇರಳವಾಗಿ ದೊರಕುತ್ತವೆ. ಆದರೆ ಇದೇ ಮೊದಲು ಬೆಂಗಳೂರಿನ ಹೆಸರಾಂತ ಅಂತರಾಷ್ಟ್ರೀಯ ಶಾಲೆಯ ಆರು ವಯಸ್ಸಿನ ಬಾಲೆಯ ಮೇಲೆ ಅಲ್ಲಿನ ಸಿಬ್ಬಂದಿ (ಶಿಕ್ಷಕ / ಮಾರ್ಗದರ್ಶಕ) ನಡೆಸಿದ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಪೋಷಕರು, ಸಮಾಜದ ವಿವಿಧ ಸ್ತರದ ಜನರು ಹೋರಾಟಗಾರರು, ವಿದ್ಯಾರ್ಥಿಗಳನ್ನೊಳಗೊಂಡಂತೆ ಎಲ್ಲ ರೀತಿಯ ಸಂಘಟಣೆಗಳು ಮತ್ತು ಸಂಘಸಂಸ್ಥೆಗಳು ಬೀದಿಗಿಳಿದು ಪ್ರತಿಭಟಿಸಿವೆ. ಇದು ಉತ್ತಮ ನಡೆಯಾದರೂ, ಕೆಲವೇ ದಿನಗಳಲ್ಲಿ ಪೋಷಕರ ಈ ಆಕ್ರೋಶ ತಣ್ಣಗಾಗಿ ಮತ್ತದೇ ಶಾಲೆಗೆ ತಮ್ಮ ಮಕ್ಕಳನ್ನು ಎಂದಿನಂತೆ ಕಳುಹಿಸುತ್ತಿದ್ದಾರೆ. ಸರ್ಕಾರವೂ ಸಹ ಜನರ ಕಣ್ಣೊರೆಸುವ ಪ್ರಯತ್ನ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ. ಇದರ ಜೊತೆಗೆ ಎಲ್ಲ ಸರ್ಕಾರೇತರ ಶಾಲೆಗಳಿಗೆ (ಖಾಸಗಿ) ಕೆಲ ಮಾರ್ಗಸೂಚಿಗಳನ್ನು ನೀಡಿದ ಸರ್ಕಾರ ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕೆಂದು ತಾಕೀತು ಮಾಡಿದೆ. ಇದರ ನಡುವೆ ಬೆಂಗಳೂರಿನ ಶಾಂತಿ ಸುವ್ಯವಸ್ಥೆಯ ಹೊಣೆ ಹೊತ್ತ ಅಧಿಕಾರಿಯನ್ನು ಪದಚ್ಯುತಗೊಳಿಸಿ ಅದೇ ಸ್ಥಾನದಲ್ಲಿ ಬೇರೊಬ್ಬ ಅಧಿಕಾರಿಯನ್ನು ಸರ್ಕಾರ ನೇಮಿಸಿದೆ. ಇಷ್ಟಕ್ಕೆ ಸಮಸ್ಯೆ ತಣ್ಣಗಾಗಿದೆ. ಮಕ್ಕಳು ಎಂದಿನಂತೆ ಶಾಲೆಗೆ ತೆರಳುತ್ತಿದ್ದಾರೆ. ಪೋಷಕರು ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿದ್ದಾರೆ. ಆದರೆ ಈ ಬಗ್ಗೆ ಅಂತರ್ಜಾಲದ ಸಾಮಾಜಿಕ ತಾಣಗಳಲ್ಲಿ ಬಿಸಿಬಿಸಿ ಚರ್ಚೆಗಳು ಇನ್ನೂ ನಡೆಯುತ್ತಿವೆ. ಕೇವಲ ಕೆಲವೇ ಬೆರಳೆಣಿಕೆಯ ದಿನಪತ್ರಿಕೆಗಳು ಈ ವಿಷಯವಾಗಿ ಅನುಪಾಲನೆ ನಡೆಸಿ ವರದಿಗಳನ್ನು ಬಿತ್ತರಿಸುತ್ತಿವೆ.
ನನ್ನ ಸ್ನೇಹಿತ ದಿನೇಶ ನಾಲ್ಕು ವರ್ಷಗಳಿಂದ ಉದ್ಯೋಗನಿಮಿತ್ತವಾಗಿ ಪಂಜಾಬ್‍ನ ರೂಪಾರ್ (ರೂಪನಗರ್) ಎಂಬಲ್ಲಿ ನೆಲೆಸಿದ್ದಾನೆ. ಅಂದಿನಿಂದಲೇ ಅವನು, ನೀವೊಮ್ಮೆ ಇಲ್ಲಿಗೆ ಬನ್ನಿ. ಕಾಶ್ಮೀರ,ಪಂಜಾಬ್ ಎಲ್ಲಾ ನೋಡಿಕೊಂಡು ಹೋಗಬಹುದು ಎಂದು ಆಹ್ವಾನಿಸುತ್ತಲೇ ಇದ್ದ. ದೂರದ ಪ್ರಯಾಣ, ದುಬಾರಿ ಖರ್ಚುಗಳ ಕಾರಣದಿಂದಾಗಿ ನಾನು ಮುಂದೂಡುತ್ತಲೇ ಇದ್ದೆ. 2011ರಲ್ಲಿ ಒಂದೇ ವಾರದಅಂತರದಲ್ಲಿ ನಾವಿಬ್ಬರೂ ಒಂದೇ ತೆರನಾದ ಕಾರುಗಳನ್ನು ಖರೀದಿಸಿದ್ದೆವು. ಅದಾಗಿ ಆರೇಳು ತಿಂಗಳ ನಂತರ, ದಿನೇಶ ಒಂದು ದಿನ ಪೋನ್ ಮಾಡಿ, ಈಗಲಾದರೂ ಬಂದರೆ, ನನ್ನ ಕಾರಿನಲ್ಲೇ ಕಾಶ್ಮೀರಎಲ್ಲಾ ಸುತ್ತಬಹುದು. ಮುಂದೆ ನನಗೆ ಟ್ರಾನ್ಸ್‍ಫರ್ ಆದರೆ, ಇಲ್ಲೆಲ್ಲಾ ಸ್ವಂತ ಕಾರಿನಲ್ಲಿ ಸುತ್ತಲು ಆಗುವುದಿಲ್ಲ ಎಂದಿದ್ದ. ಕಾಶ್ಮೀರದ ಕಣಿವೆಗಳಲ್ಲಿ ಕಾರು ಡ್ರೈವ್ ಮಾಡುವ ಮೋಹದಿಂದ ನಾನುತಪ್ಪಿಸಿಕೊಳ್ಳಲಾಗಲಿಲ್ಲ. ಮುಂದಿನ ಎರಡೇ ತಿಂಗಳಲ್ಲಿ ಕಾಶ್ಮೀರ ಪ್ರವಾಸ ನಿರ್ಧಾರವಾಗಿಬಿಟ್ಟಿತ್ತು.
ಪ್ರೀತಿ ಎಂದರೇನು, ಅದು ಎಲ್ಲಿ ಹುಟ್ಟುತ್ತದೆ, ಹೇಗೆ ಹುಟ್ಟುತ್ತದೆ, ಹೇಗೆ ಬೆಳೆಯುತ್ತದೆ ಎನ್ನುವ ಪ್ರಶ್ನೆಗಳಿಗೆ ವೈಜ್ಞಾನಿಕವಾಗಿ ಉತ್ತರಿಸುವುದು ಸುಲಭವಲ್ಲ. ಅದು ಕಲಾವಿದರ, ಕವಿಗಳ, ಕಾದಂಬರಿಕಾರರ ಕೆಲಸ. ಆದರೂ ಪ್ರೀತಿ ಒಂದು ಮಾನಸಿಕ ಸಂಸ್ಥಿತಿಯಾದ್ದರಿಂದ ಹಾಗು ವ್ಯಕ್ತಿಗಳ ನಡುವೆ ಏರ್ಪಡುವ ಅಪೂರ್ವ ಸಂಬಂಧವಾದರಿಂದ, ಮನೋವಿಜ್ಞಾನಿಗಳಿಗೆ ಅದರ ವಿಚಾರವಾಗಿ ಕುತೂಹಲವಿರುವುದು ಸಹಜ. ಸುಮಾರು 1950ರವರೆಗೆ ಪ್ರೀತಿಯಂಥ ವ್ಯಕ್ತಿನಿಷ್ಠ ಅನುಭವವನ್ನು ಪ್ರಯೋಗಾಲಯದಲ್ಲಿ ಅಧ್ಯಯನ ಮಾಡುವ ಸಾಧ್ಯತೆಯನ್ನು ಯಾವ ಮನೋವಿಜ್ಞಾನಿಯೂ ಯೋಚಿಸಿರಲಿಲ್ಲ. ಅಂಥ ಒಂದು ಹುಚ್ಚು ಸಾಹಸಕ್ಕೆ ಕೈ ಹಾಕಿದವರು ವಿಸ್ಕಾನ್ಸಿನ್ ವಿಶ್ವವಿದ್ಯಾಲಯದಲ್ಲಿ ಮನೋವಿಜ್ಞಾನದ ಪ್ರಾಧ್ಯಾಪಕರಾಗಿದ್ದ ಹ್ಯಾರಿ ಹಾರ್ಲೊ (Harry Frederick Harlow, 1905-1981) ಎಂಬುವವರು. ಪ್ರೀತಿಯಂಥ ವ್ಯಕ್ತಿನಿಷ್ಠ (subjective) ಅನುಭವವನ್ನು ವಸ್ತುನಿಷ್ಠವಾಗಿ (objective) ಲೆಬಾರಟರಿಯಲ್ಲಿ ಅಧ್ಯಯನ ಮಾಡಿದ ಹಾರ್ಲೊ ಅವರ ಪ್ರಯತ್ನ ಮೆಚ್ಚತಕ್ಕದ್ದೆ. ಹಾರ್ಲೊ ನಡೆಸಿದ ಪ್ರಯೋಗಗಳು ಮನೋವಿಜ್ಞಾನದ ಇತಿಹಾಸದಲ್ಲಿ ಪ್ರಸಿದ್ಧವಾಗಿರುವುದಷ್ಟೇ ಅಲ್ಲ; ಬಹಳಷ್ಟು ವಿವಾದಗಳನ್ನೂ ಹುಟ್ಟುಹಾಕಿವೆ; ಅದು ಬೇರೆ ವಿಚಾರ.
`ಸಮಾಜಸೇವೆ ಎಂಬ ಪದವನ್ನು ನಾವು ಅನಾದಿಕಾಲದಿಂದಲೂ ಕೇಳುತ್ತ ಬಂದಿದ್ದೇವೆ. ಜನಸೇವೆಯೇ ಜನಾರ್ದನ ಸೇವೆ ಎಂಬಂತೆ ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ರೀತಿಯಲ್ಲಿ ಸಮಾಜಸೇವೆಯನ್ನುಜನರಿಗೋಸ್ಕರ ಮಾಡುತ್ತ ಬಂದಿದ್ದಾನೆ. ಸಮಾಜ ಸೇವಾ ಕಾರ್ಯಕ್ರಮಗಳು ಪ್ರಸ್ತುತಿಯಲ್ಲಿರುವುದನ್ನು ನಾವು ಇಂದಿಗೂ ಕೂಡ ಕಾಣಬಹುದು. ಸಮಾಜ ಸೇವೆಯನ್ನು ನಿಸ್ವಾರ್ಥ ಸೇವೆ ಎಂದರೂ ತಪ್ಪಾಗಲಾರದು.
ಡಾ. ಎಂ. ಚಿದಾನಂದಮೂರ್ತಿ (ಖ್ಯಾತ ಸಂಶೋಧಕರು)
ರಾಷ್ಟ್ರಮಟ್ಟದ ಸಮಾಜವಿಜ್ಞಾನಿ ಸಮಾಜಕಾರ್ಯಕರ್ತ ನನ್ನ ನೆಚ್ಚಿನ ಸ್ನೇಹಿತ ಡಾ. ಎಚ್.ಎಂ. ಮರುಳಸಿದ್ಧಯ್ಯನವರ ಬಗ್ಗೆ ಬರೆದಿರುವ ಪುಸ್ತಕ ಸರಳವಾಗಿ, ಚಿಂತನಾಪರವಾಗಿ ಮೂಡಿ ಬಂದಿರುವುದುಸಂತೋಷದ ವಿಚಾರ. ಪ್ರತಿದಿನ ನಾನು ಅವರೊಂದಿಗೆ ದೂರವಾಣಿಯ ಮೂಲಕ ಸಂಪರ್ಕದಲ್ಲಿದ್ದೇನೆ. ನನ್ನ ಸಂದೇಹ, ಚಿಂತನೆಗಳನ್ನು ಅವರೊಂದಿಗೆ ಹಂಚಿಕೊಳ್ಳುತ್ತಲೇ ಇರುತ್ತೇನೆ. ನಾನು ಒಬ್ಬ ಕನ್ನಡಪ್ರಾಧ್ಯಾಪಕನಾಗಿದ್ದರೂ, ಎಷ್ಟೋ ಸಂದರ್ಭಗಳಲ್ಲಿ ನನಗಿಂತ (ಕನ್ನಡದಲ್ಲಿ ಹೆಚ್ಚು ತಿಳಿದವರಂತೆ) ಗೋಚರಿಸುತ್ತಾರೆ. ಪೀಠಿಕೆ:
ವ್ಯಕ್ತಿ ಮತ್ತು ಸಮಾಜದ ನಡುವೆ ಬಿಡಿಸಲಾಗದ ಬಾಂಧವ್ಯ ಇದೆ. ಅವು ಒಂದೇ ನಾಣ್ಯದ ಎರಡು ಮುಖಗಳು. ವ್ಯಕ್ತಿಗಳಿಲ್ಲದೆ ಸಮಾಜವಿಲ್ಲ, ಸಮಾಜವಿಲ್ಲದ ಬದುಕು ಊಹಿಸಲು ಸಾಧ್ಯವಿಲ್ಲ. ಸಮಾಜವೆಂದರೆ, ಮಾನವನ ಸಾಮಾಜಿಕ ಸಂಬಂಧಗಳ ಬಲೆ ಎಂದು ಅರ್ಥೈಸಲಾಗಿದೆ. ಸಮಾಜದ ಅಸ್ತಿತ್ವ, ಉಗಮ ಹಾಗೂ ರಚನೆಯ ಕುರಿತು ಅನೇಕ ವಾದ-ವಿವಾದಗಳಿವೆ. ಆದರೆ ಒಂದು ಮಾತ್ರ ನಿಜ. ಮಾನವ ಸಮಾಜದ ರಚನೆ ಅತ್ಯಂತ ಪುರಾತನವಾದದು. ಕೋಟಿ ಕೋಟಿ ವರ್ಷಗಳ ಹಿಂದೆ ನಿಸರ್ಗ, ಚರಾತರ ವಸ್ತುಗಳು ಪಶು, ಪ್ರಾಣಿ, ಪಕ್ಷಿ, ಜೀವ ರಾಶಿಗಳ ಜೊತೆಗೆ ಮನುಷ್ಯನೂ ಹುಟ್ಟಿದ. ಪ್ರಾಣಿಗಳ ಜೊತೆಗೆ ಅವುಗಳ ಹಾಗೆ ಬದುಕಿದ. ಮಂಗನಿಂದ ಮಾನವ ಎಂದು ನಾವು ಯಾವಾಗಲೂ ಹೇಳುತ್ತೇವೆ. ಮಾನವನ ವಿಕಸನ ಹಂತ ಹಂತವಾಗಿ ನಡೆಯಿತು. ಪ್ರಾಣಿಗಳಿಲ್ಲವೂ ಮಾನವ ಅತ್ಯಂತ ಶ್ರೇಷ್ಠ ಪ್ರಾಣಿ, ನಗುವ, ಭಾವಿಸುವ ಹಾಗೂ ವೈಚಾರಿಕ ಶಕ್ತಿಯಿಂದಾಗಿ ಮನುಷ್ಯನು ಶ್ರೇಷ್ಠನಾದ. ಮೂಲತಃ ಪ್ರಾಣಿಗಳ ಅಗತ್ಯತೆಗಳನ್ನು ಹೊಂದಿರುವ ಮಾನವ ತನ್ನ ಭಿನ್ನತೆಯಿಂದಾಗಿ, ಶ್ರೇಷ್ಠತೆಯಿಂದಾಗಿ ಮಾನವ ಅಗತ್ಯತೆಗಳನ್ನು ಕಂಡುಕೊಂಡ. ಅದರಲ್ಲಿ ಸಮಾಜ, ಸಾಮಾಜಿಕ ಬದುಕು ಅತ್ಯಂತ ಅಗತ್ಯ ಹಾಗೂ ಅನಿವಾರ್ಯವಾಗಿ ಮಾಡಿಕೊಂಡ. ಸಾಮಾಜಿಕ ಜೀವಿಯಾದ ಮಾನವ ತನ್ನ ಬದುಕನ್ನು ಹಸನಾಗಿಸಿಕೊಳ್ಳಲು ಸಹಜೀವನ, ಸಂಘ ಜೀವನವನ್ನು ಆರಂಭಿಸಿದ. ಅನೇಕ ಗುಂಪು, ಸಂಘ ಸಂಸ್ಥೆಗಳನ್ನು ಕಟ್ಟಿಕೊಂಡ. ಜಾತಿ, ಸಮುದಾಯ ಹಾಗು ಧರ್ಮಗಳು, ಮಾನವನ ಬದುಕನ್ನು ರೂಪಿಸುವ ಮೂಲಕ ಒಂದು ವ್ಯವಸ್ಥೆಗೆ ಒಳಪಡಿಸಿದವು. ಇಂದಿಗೂ ಅವು ತಮ್ಮ ಪ್ರಭಾವ ಹಾಗು ನಿಯಂತ್ರಣವನ್ನು ಹೊಂದಿವೆ. ನಮ್ಮ ಸಮಾಜ ಇಂದು ಬಹಳ ದುಸ್ಥಿತಿಯಲ್ಲಿದೆ ಎನ್ನುವ ಮಾತು ಎಲ್ಲೆಡೆ ಕೇಳಿಬರುತ್ತಿದೆ. ನಮ್ಮ ಸುದ್ದಿ ಮತ್ತು ದೃಶ್ಯ ಮಾಧ್ಯಮಗಳು ಬಿತ್ತರಿಸುತ್ತಿರುವ ಸಮಾಚಾರಗಳನ್ನು ಅವಲೋಕಿಸಿದರೆ ಅದು ಬಹಳ ಮಟ್ಟಿಗೆ ನಿಜವೆನಿಸುತ್ತದೆ. ಪ್ರತಿ ದಿನ ಪತ್ರಿಕೆಗಳ ಮೂರನೆಯ ಪುಟದಲ್ಲಿ ಅಚ್ಚಾಗುತ್ತಿರುವ ಹಾಗು ದೂರದರ್ಶನ ಚಾನಲ್ಗಳು ಬಿತ್ತರಿಸುತ್ತಿರುವ ವಿಷಯಗಳನ್ನು ಗಮನಿಸಿ. ಕಳ್ಳತನ, ಕೊಲೆ, ಸುಲಿಗೆ, ಭ್ರಷ್ಟಾಚಾರ, ಆತ್ಮಹತ್ಯೆ, ಸ್ತ್ರೀಯರ ಮೇಲಣ ಅತ್ಯಾಚಾರ (ಇತ್ತೀಚೆಗೆ ಇದು ಗಂಡಸರ ಮೇಲೂ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ), ಮುಂತಾದವೇ ಅಲ್ಲಿ ತುಂಬಿರುತ್ತವೆ. ಇದನ್ನೆಲ್ಲಾ ಗಮನಿಸಿದಾಗ ನಮ್ಮದು ರೋಗಿಷ್ಠ ಸಮಾಜ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಈ ಅಭಿಪ್ರಾಯದಲ್ಲಿ ಕೊಂಚ ಉತ್ಪ್ರೇಕ್ಷೆ ಇರಬಹುದು. ಮೇಲೆ ಹೇಳಿದ್ದೆಲ್ಲಾ ಸಂಪೂರ್ಣ ನಿಜವಾಗಿದ್ದರೆ, ನಾನು ಇದನ್ನು ಬರೆಯಲು ಬದುಕಿರುತ್ತಿರಲಿಲ್ಲ; ಓದಲು ನೀವೂ ಇರುತ್ತಿರಲಿಲ್ಲ. ಯುದ್ಧ, ಕೊಲೆ, ಸುಲಿಗೆ, ಕಳ್ಳತನ, ಅತ್ಯಾಚಾರಗಳು ನಡೆಯುತ್ತಿವೆ. ನಿಜ. ಅವು ಎಲ್ಲಾ ಕಾಲದಲ್ಲೂ ಇದ್ದವೆ. ಸುಮಾರು ಕಳೆದ 5,600 ವರ್ಷಗಳಲ್ಲಿ 14,600 ಯುದ್ಧಗಳು ನಡೆದಿರುವುದಾಗಿ ಇತಿಹಾಸ ಹೇಳುತ್ತದೆ. ಕ್ರೌರ್ಯ, ಆಕ್ರಮಣ ಎಲ್ಲಾ ಜೀವಿಗಳಲ್ಲೂ ಕಂಡುಬರುವ ಒಂದು ಹುಟ್ಟುಗುಣ. ಆದರೆ, ಒಟ್ಟಾರೆಯಾಗಿ ನೋಡಿದರೆ ಅವುಗಳ ಸಂಭವನೀಯತೆಯ ಸಂಖ್ಯೆ ಬಹಳ ಕಡಮೆ. ಅಂಥ ದುಷ್ಕೃತ್ಯಗಳಲ್ಲಿ ತೊಡಗುವ ಜನಗಳ ಸಂಖ್ಯೆ ಅಷ್ಟೇನು ಹೆಚ್ಚಾಗಿರಲಿಕ್ಕಿಲ್ಲ; ಅವರ ಸಂಖ್ಯೆ ಇಡೀ ಸಮಾಜದಲ್ಲಿ ಸುಮಾರು ಶೇಕಡ ಎರಡರಿಂದ ಐದರವರೆಗೆ ಇರಬಹುದು.
ಸಂಕ್ಷಿಪ್ತ ವಿವರ: ಸಮಾಜಕಾರ್ಯದ ಕಲ್ಪನೆ ಮನೆಯಲ್ಲಿ ಆರಂಭವಾಗಿ, ಶಾಲೆಯಲ್ಲಿ ಅದರ ಕಲಿಕೆ ಮುಂದುವರೆಯುತ್ತದೆ ಮತ್ತು ಬದುಕು ಸಾಗಿದಂತೆ ಅದು ವಿಸ್ತಾರವಾಗುತ್ತಾ ಹೋಗುತ್ತದೆ. ಆದರೆ ತಮ್ಮ ಮತ್ತು ಸಮಾಜದ ಕುರಿತು ಜವಾಬ್ದಾರಿಯಿಂದ ವರ್ತಿಸಬಲ್ಲಂತಹ ಮೌಲ್ಯಗಳು ಮತ್ತು ಸ್ಪಷ್ಟತೆಯುಳ್ಳ ಸಧೃಡ ವ್ಯಕ್ತಿಗಳನ್ನ ನಿರ್ಮಾಣ ಮಾಡುವುದರ ಕುರಿತು ಇಂದಿನ ಶಿಕ್ಷಣ ರಾಜಿ ಮಾಡಿಕೊಂಡಿದೆ. ಆದುದರಿಂದಲೇ ಕೇವಲ ಜೀವನ ಕೌಶಲವಲ್ಲದೇ ಪ್ರಸ್ತುತ ಸಮಯಕ್ಕೆ ಅತ್ಯವಶ್ಯಕವಾದುದು ಜೀವನ್ಮುಖಿ ಶಿಕ್ಷಣ. ಬೆಂಗಳೂರು ನಗರದ 10-16 ವರ್ಷದ ಮಕ್ಕಳ ಜೊತೆ ನಡೆಸಲಾದ ಪ್ರಾಯೋಗಿಕವಾದ ಮತ್ತು ಸ್ವಾನುಭವದ ಸಂಶೋಧನೆಯ ಆಧಾರದ ಮೇಲೆ ರಚಿತವಾದ ಮತ್ತು ಮಕ್ಕಳನ್ನ ಸಬಲೀಕರಣಗೊಳಿಸಿ ವಿಕಸಿತಗೊಳಿಸುವ ಮತ್ತು ಉತ್ಕೃಷ್ಠತೆಯನ್ನು ಸಾಧಿಸಲು ಸಹಕರಿಸುವ ವಿಚಾರ ಮತ್ತು ಸಾಧನದ ಕುರಿತು ಈ ಲೇಖನ ಬೆಳಕು ಚೆಲ್ಲುತ್ತದೆ. ಇಲ್ಲಿ ವಿವರಿಸಲಾಗಿರುವ ಮಾಡ್ಯೂಲ್ ಕಲಿಯುವಿಕೆ, ಕ್ರಿಯಾಶೀಲತೆ ಮತ್ತು ಇವರೆಡನ್ನ ಸಮಗ್ರವಾಗಿ ಸಮಾಜದ ಒಳಿತಿಗೆ ಬಳಸುವ ಬಗೆಗೆ ಕೇಂದ್ರೀಕೃತವಾಗಿದೆ. ಇದಕ್ಕಾಗಿ ಮಕ್ಕಳಿಗೆ ಆಳವಾದ ಸಮಾಲೋಚನೆ ಮಾಡುವ ಪ್ರಕ್ರಿಯೆಯನ್ನ ತಿಳಿಸಿಕೊಡಲಾಗುವುದು. ಇದರ ಅತೀ ಮುಖ್ಯ ಅಂಶವು ಮಕ್ಕಳು ತಮ್ಮ 10ನೇ ತರಗತಿಯ ಭಾಗವಾಗಿ ಪೂರ್ಣಗೊಳಿಸುವ SAP (Social Action Projects) ಸೋಷಿಯಲ್ ಆಕ್ಷನ್ ಪ್ರಾಜೆಕ್ಟ್ಸ್.
ಅವರು ದೇವಜೀಭಾಯಿ ಗೋವಿಂದಭಾಯಿ ಫತೇಪಾರ. ಲೋಕಸಭೆಯಲ್ಲಿ ಗುಜರಾತಿನ ಸುರೇಂದ್ರ ನಗರವನ್ನು ಪ್ರತಿನಿಧಿಸುತ್ತಾರೆ. ಮೊದಲ ಸಲ ಆರಿಸಿ ಬಂದವರು.
ಇತ್ತೀಚೆಗೆ ಲೋಕಸಭೆಯಲ್ಲಿ ಅವರೊಂದು ಪ್ರಶ್ನೆ ಕೇಳಿದ್ದರು. ತಾವು ಕೇಳುತ್ತಿರುವ ಪ್ರಶ್ನೆಯ ಹಿಂದೆ ತಮಗೇ ತಿಳಿಯದ ರಾಜಕಾರಣ ಅಡಗಿದೆ ಎಂಬುದು ಅವರಿಗೆ ಗೊತ್ತಿರಲಿಲ್ಲ. ಈ ರಾಜಕಾರಣ ತಮ್ಮದೇ ಗುಜರಾತಿನ ಸರ್ಕಾರವನ್ನು ಮತ್ತು ಇತ್ತೀಚಿನ ತನಕ ಆ ಸರ್ಕಾರದ ಮುಖ್ಯಮಂತ್ರಿಯಾಗಿದ್ದು ಇದೀಗ ಪ್ರಧಾನಿ ಆಗಿರುವ ಪ್ರಚಂಡ ನಾಯಕನನ್ನು ಅಪರಾಧಿಯ ಕಟಕಟೆಯಲ್ಲಿ ನಿಲ್ಲಿಸುತ್ತದೆ ಎಂಬುದನ್ನು ಅರಿಯದಷ್ಟು ಅಮಾಯಕರು ಅವರು. ವಿಶ್ವ ಸಂಸ್ಥೆಯ ಮಾಜಿ ಅಧ್ಯಕ್ಷ ಕೋಫಿ ಅನ್ನಾನ್ 21ನೇ ಶತಮಾನವನ್ನು ಎನ್‍ಜಿಒಗಳ ಯುಗ ಎಂದು ಬಣ್ಣಿಸಿದ್ದಾರೆ.
ಎನ್‍ಜಿಒ ಎಂದರೆ ಸರ್ಕಾರೇತರ ಸಂಸ್ಥೆ. ವಿಶ್ವಬ್ಯಾಂಕ್ ಪ್ರಕಾರ ಎನ್‍ಜಿಒಗಳು ಖಾಸಗಿ ಸಂಸ್ಥೆಗಳು. ಸಂಕಷ್ಟದಲ್ಲಿರುವವರಿಗೆ ಪರಿಹಾರ ದೊರಕಿಸುವ ಚಟುವಟಿಕೆಯಲ್ಲಿ ತೊಡಗಿರುತ್ತವೆ. ಅಲ್ಲದೆ, ಬಡವರ ಹಿತರಕ್ಷಣೆ, ಪರಿಸರ ಕಾಳಜಿ, ಪ್ರಾಥಮಿಕ ಸಾಮಾಜಿಕ ಸೇವೆಗಳನ್ನು ಒದಗಿಸುವುದು, ಇಲ್ಲವೆ ಸಮುದಾಯದ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳುವುದು. ವಾಸ್ತವವಾಗಿ, ಎನ್‍ಜಿಒಗಳು ಕಾನೂನು ಬದ್ಧವಾಗಿ ಸ್ಥಾಪಿತಗೊಂಡ ಸಂಸ್ಥೆಗಳು. ಸರ್ಕಾರದಿಂದ ಪ್ರತ್ಯೇಕಗೊಂಡು ಸ್ವತಂತ್ರವಾಗಿ ಕಾರ್ಯನಿರ್ವಹಿಸುವುವು ಮತ್ತು ಸರಳ ಅರ್ಥದಲ್ಲಿ ಹೇಳುವುದಾದರೆ ಸರ್ಕಾರೇತರ, ಲಾಭರಹಿತ, ಬದ್ಧತೆ ಇರುವ ಸಮೂಹ. ಸಾರ್ವಜನಿಕರ ಹಿತರಕ್ಷಣೆಯೇ ಈ ಸಮೂಹಗಳ ಉದ್ದೇಶ. ಮಾನವ ಹಕ್ಕುಗಳು, ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಡುವುದೇ ಇವುಗಳ ಮೂಲ ಉದ್ದೇಶವಾಗಿದೆ. ಸಾಮಾನ್ಯವಾಗಿ ಎನ್‍ಜಿಒಗಳು ಸರ್ಕಾರದಿಂದ ಪೂರ್ಣ ಪ್ರಮಾಣದಲ್ಲಿ ಅನುದಾನ ಪಡೆದುಕೊಳ್ಳುತ್ತವೆ. ಕೆಲವು ಸಂದರ್ಭಗಳಲ್ಲಿ ಭಾಗಶಃ ದೇಣಿಗೆಯನ್ನು ಪಡೆಯುತ್ತವೆ. ಸರ್ಕಾರೇತರ ಸಂಸ್ಥೆ ಎನ್ನಿಸಿಕೊಳ್ಳಲು ಸರ್ಕಾರಿ ಪ್ರತಿನಿಧಿಗಳನ್ನು ತನ್ನ ಸಂಸ್ಥೆಯ ಪ್ರತಿನಿಧಿತ್ವದಿಂದ ಅಥವಾ ಸದಸ್ಯತ್ವದಿಂದ ಹೊರಗಿರಿಸುತ್ತದೆ. ಹಾಗೆಯೇ ಎನ್‍ಜಿಒಗಳು ಎಂದಾಗ ಅವುಗಳು ಯಾವುದೇ ರಾಷ್ಟ್ರ ಇಲ್ಲವೇ ಅಂತಾರಾಷ್ಟ್ರೀಯ ಕಾನೂನುಗಳಿಗೆ ಅನುಗುಣವಾಗಿ ಕಾನೂನು ಪರಿಹಾರ ದೊರಕಿಸಿಕೊಡುವ ಸಂಸ್ಥೆಗಳಲ್ಲ ಎನ್ನುವುದು ಗಮನದಲ್ಲಿರಬೇಕು. ವಿಶ್ವ ಬ್ಯಾಂಕ್ ಪ್ರಧಾನವಾಗಿ ಎರಡು ರೀತಿಯಲ್ಲಿ ಎನ್‍ಜಿಒಗಳನ್ನು ಗುರುತಿಸಿದೆ. ಕಾರ್ಯಾತ್ಮಕ ಎನ್‍ಜಿಒಗಳು, ಸಲಹಾತ್ಮಕ ಎನ್‍ಜಿಒಗಳೆಂದು ಸ್ಥೂಲವಾಗಿ ಅವುಗಳನ್ನು ವಿಂಗಡಿಸಲಾಗಿದೆ. ಇವೆರಡರ ಪ್ರಮುಖ ಉದ್ದೇಶಗಳು ಅಭಿವೃದ್ಧಿ ಆಧಾರಿತ ಯೋಜನೆಗಳನ್ನು ವಿನ್ಯಾಸಗೊಳಿಸಿ ಅವುಗಳ ಅನುಷ್ಠಾನಗೊಳಿಸುವುದು ಎನ್‍ಜಿಒಗಳ ಪ್ರಮುಖ ಉದ್ದೇಶವಾಗಿದೆ. ಕಾರ್ಯಾತ್ಮಕ ಎನ್‍ಜಿಒಗಳನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮತ್ತು ಸಮುದಾಯ ಆಧಾರಿತ ಸಂಘಟನೆಗಳೆಂದು ವರ್ಗೀಕರಿಸಬಹುದು. ಇನ್ನೊಂದೆಡೆ ಸಲಹಾತ್ಮಕ ಎನ್‍ಜಿಒಗಳನ್ನು ಅಂತರಾಷ್ಟ್ರೀಯ ಸಂಘಟನೆಗಳೆಂದು ವಿಂಗಡಿಸಲಾಗುತ್ತದೆ. ಅವುಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯ ನಿರ್ವಹಿಸುವುದರ ಜೊತೆಗೆ ನೀತಿ ನಿರೂಪಣೆಗಳನ್ನು ರೂಪಿಸುವಲ್ಲಿ ಪ್ರಧಾನ ಪಾತ್ರವಹಿಸುತ್ತವೆ. ಕೃಪೆ : ಯೋಜನಾ, ನವೆಂಬರ್ 2011 ಜೋಮನ್ ಮ್ಯಾಥ್ಯು, ಜೊಬೈ ವರ್ಗೀಸ್ ಕನ್ನಡಕ್ಕೆ : ರಶ್ಮಿ ಎಸ್. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |