ಪೀಠಿಕೆ:
ಇತ್ತೀಚಿನ ದಿನಗಳಲ್ಲಿ ಉದ್ಯಮ 4.0 ಬಗ್ಗೆ ಹೆಚ್ಚಾಗಿ ಮಾತನಾಡುವುದನ್ನು ಸಂಸ್ಥೆಗಳಲ್ಲಿ ಮತ್ತು ಸಮೂಹ ಮಾಧ್ಯಮಗಳಲ್ಲಿ ಕೇಳುತ್ತಿದ್ದೇವೆ. ಮೇಕೆನ್ಸಿ ಎಂಬ ಸಂಸ್ಥೆಯ ಅಧ್ಯಯನದ ಪ್ರಕಾರ 2025 ರ ಒಳಗೆ ಕಾರ್ಖಾನೆಗಳಲ್ಲಿ ವಸ್ತುಗಳ ಅಂತರ್ಜಾಲದ ಬಳಕೆಯಿಂದಾಗಿ, ಸುಮಾರು 84 ಲಕ್ಷ ಕೋಟಿ ರೂಪಾಯಿಯಿಂದ 216 ಲಕ್ಷ ಕೋಟಿ ರೂಪಾಯಿಯಷ್ಟು ಆರ್ಥಿಕತೆಯ ಮೇಲೆ ಪ್ರಭಾವ ಬೀರಲಿದೆ. ಆದ್ದರಿಂದ, ಉದ್ಯಮ 4.0 ಬಗ್ಗೆ ತಿಳಿದುಕೊಳ್ಳುವುದು ಮಾನವ ಸಂಪನ್ಮೂಲ ವೃತ್ತಿನಿರತರು ಸೇರಿದಂತೆ ಎಲ್ಲರಿಗೂ ಅನಿವಾರ್ಯವಾಗಿದೆ. ಉದ್ಯಮ 4.0 ನವಯುಗದ ಕೈಗಾರಿಕಾ ಕ್ರಾಂತಿಯಾಗಿದ್ದರೂ, ಈ ಹಿಂದಿನ ಮೂರು ಕೈಗಾರಿಕಾ ಕ್ರಾಂತಿಗಳ ಮುಂದುವರೆದ ಭಾಗವಾಗಿದೆ. ಹಾಗಾದರೆ, ಕೈಗಾರಿಕಾ ಕ್ರಾಂತಿಯು ಹಿಂದಿನ ಕಾಲದಿಂದ ಇಂದಿನವರೆಗೂ ಹೇಗೆ ವಿಕಸನಗೊಂಡಿದೆ ಎಂಬುದನ್ನು ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ.
0 Comments
ಶರಣ ಸಾಹಿತ್ಯ
ಕರ್ನಾಟಕದ ಭಕ್ತಿ ಪಂಥದಲ್ಲಿ ಶರಣ ಸಾಹಿತ್ಯ ಮತ್ತು ದಾಸ ಸಾಹಿತ್ಯ ಎರಡು ಸಮಾನಾಂತರ ಮಾರ್ಗಗಳು. ಅವುಗಳ ಉದ್ದೇಶ, ಸಾಧನಾ ಪಥ, ಒಪ್ಪಿಕೊಂಡ ಮೌಲ್ಯಗಳು ಇತ್ಯಾದಿ ಸ್ವಲ್ಪ ಹೆಚ್ಚು ಕಡಿಮೆ ಒಂದೇ ತರಹ ಕಾಣಿಸುತ್ತವೆ. ಶರಣ ಸಾಹಿತ್ಯದಲ್ಲಿ ಶಿವನ ಪಾರಮ್ಯವನ್ನು ಪ್ರತಿಪಾದಿಸಿದರೆ, ದಾಸಸಾಹಿತ್ಯದಲ್ಲಿ ಹರಿಸರ್ವೋತ್ತಮತ್ವವನ್ನು ನಿರೂಪಣೆ ಮಾಡಿದೆ. ಭಕ್ತಿ ಮಾರ್ಗವನ್ನು ಎರಡೂ ಸಾಹಿತ್ಯ ಪ್ರಕಾರಗಳೂ ಅಳವಡಿಸಿಕೊಂಡಿವೆ. ಹಾಗೇನೆ ಬದುಕಿನ ಮೌಲ್ಯಗಳನ್ನು ವಿವರಿಸುವಾಗ ಭಾವನೆ, ಕಲ್ಪನೆಗಳು ಒಂದೇ ಆಗಿದ್ದು ಶಬ್ದ ಪ್ರಯೋಗಗಳು, ಸಣ್ಣಪುಟ್ಟ ಆಚಾರಗಳು ಬೇರೆ ಬೇರೆ ಆಗಿರುವುದನ್ನು ಕಾಣಬಹುದಾಗಿದೆ. ಪೀಠಿಕೆ
ಭಾಷೆ ಎಂಬುದು ಅನಾದಿ ಕಾಲದಿಂದಲೂ ಸಂವಹನದ ಒಂದು ಮುಖ್ಯ ಭಾಗವಾಗಿ ಮಾನವನ ಎಲ್ಲ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಪೂರಕ ಸಾಧನವಾಗಿ ಕಾರ್ಯನಿರ್ವಹಿಸುತ್ತಿದೆ. ಬಹುಶಃ ಭಾಷೆ ಎಂಬುದೇ ಒಂದು ಸಾಧನವಾಗಿ ಮಾನವ ಮತ್ತು ಮೃಗಗಳನ್ನು ಬೇರ್ಪಡಿಸಿದೆ ಎಂದರೆ ತಪ್ಪಲ್ಲ. ಜಗತ್ತಿನ ಸಾವಿರಾರು ಭಾಷೆಗಳಿಗೆ ಹೇಳಿಕೊಳ್ಳುವಷ್ಟು ಇತಿಹಾಸ ಮತ್ತು ಪರಂಪರೆಯ ಬೆಂಬಲವಿದೆ. ಭಾಷೆ ಕೇವಲ ಶಬ್ದಗಳ ಆಡಂಬರವಾಗದೆ ಜನರ ಜೀವನಾಡಿಯಲ್ಲಿ ಬೆರೆತು ಹೋಗಿರುತ್ತದೆ. ಸಂಸ್ಕೃತಿಯ ಕೈಪಿಡಿಯಾಗಿ, ಆಚಾರ-ವಿಚಾರಗಳ ಬೆನ್ನೆಲುಬಾಗಿ, ವೃತ್ತಿಧರ್ಮಕ್ಕೆ ಆಸರೆಯಾಗಿ, ಸಂವಹನ ಕಲೆಯನ್ನು ಪೋಷಿಸುತ್ತಾ ಊರಿಂದ ಊರಿಗೆ ನಾಲಗೆಯ ಮೇಲೆ ಹರಿದಾಡಿ ತನ್ನ ತುಂಬು ತೋಳುಗಳಿಂದ ಜನರನ್ನು ಸೆಳೆದಪ್ಪಿಕೊಂಡ ಪರಿಯೇ ಅದ್ಭುತವಾದದ್ದು, ಭಾಷೆಯ ಬೆಂಬಲವಿಲ್ಲದೆ ಇದ್ದರೆ ಮಾನವನ ಬಾಯಿಂದ ಹೊರಟ ರೋದನೆಗಳೆಲ್ಲ ಚೀರಾಟಗಳಾಗಿರುತ್ತಿತ್ತು. ಅಕ್ಷರ ಜೋಡಣೆಗಳಿಲ್ಲದೆ ಅನುಭವಗಳು ಅರ್ಥ ಕಳೆದುಕೊಳ್ಳುತ್ತಿದ್ದವು. ಯಹೂದಿಧರ್ಮ (ಹಿಬ್ರೂ ಧರ್ಮ)
ಪಾಶ್ಚಾತ್ಯ ಜಗತ್ತಿನ ಪ್ರಮುಖ ಧರ್ಮಗಳಾದ ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳಿಗಿಂತಲೂ ಹಳೆಯದಾದ ಮತ್ತು ಈ ಎರಡೂ ಧರ್ಮಗಳಿಗೂ ಒಂದು ಹಿನ್ನೆಲೆಯನ್ನು ಒದಗಿಸಿದ ಧರ್ಮವೆಂದರೆ ಯಹೂದಿಧರ್ಮ. ಅದನ್ನು ಹಿಬ್ರೂ ಧರ್ಮವೆಂದೂ ಕರೆಯಲಾಗುತ್ತದೆ. ಇಸ್ರೇಲಿನಲ್ಲಿದ್ದು ಹಾಗೂ ಈ ಧರ್ಮವನ್ನು ಅನುಸರಿಸಿದವರನ್ನು ಜ್ಯೂ (Jew) ಜನಾಂಗವೆಂದು ಕರೆಯುತ್ತಾರೆ. ಇವರ ಮೂಲಪುರುಷ ಅಬ್ರಹಾಮ್. ಜ್ಯೂ ಜನಾಂಗದ ಪ್ರವಾದಿಯಾದ ಮೋಜಿಸ್ (ಮೋಶೆ) ಯಹೂದಿ ಧರ್ಮದ ಪ್ರವರ್ತಕ. ಪವಿತ್ರ ಗ್ರಂಥ ಬೈಬಲ್ಲಿನ ಹಳೆಯ ಒಡಂಬಡಿಕೆಯ ಐದು ಕಾಂಡಗಳ ರಚನೆಕಾರ ಇವನೇ. ವೇದಗಳಂತೆಯೇ ಬೈಬಲ್ ಕೂಡಾ ಒಬ್ಬರಿಂದ ಬರೆಯಲ್ಪಟ್ಟಿಲ್ಲ. ದಾರ್ಶನಿಕರಾದ 40 ಜನ ಗ್ರಂಥಕಾರರು ಬೈಬಲನ್ನು ರಚನೆ ಮಾಡಿದ್ದು, ಅವರ ಚಿಂತನೆಗಳಿಗೆ ಮೂಲಾಧಾರ ಮೋಜಿಸ್ ಬರೆದ ಈ ಐದು ಕಾಂಡಗಳೆಂದು ಹೇಳಲಾಗುತ್ತದೆ. ಕೃತಿ ವಿಮರ್ಶನಾಕಾರರು ಕು.ದೇವಿಂದ್ರಪ್ಪ ಎಂ., ರಶ್ಮೀ ಜಿ.ಎಂ, ಸಂಶೋಧನಾರ್ಥಿಗಳು ಮತ್ತು ಡಾ|| ರವೀಂದ್ರ ಡಿ ಗಡ್ಕರ್, ಪ್ರಾದ್ಯಾಪಕರು ಮತ್ತು ಮಾರ್ಗದರ್ಶಕರು, ಸಮಾಜಕಾರ್ಯ ಅಧ್ಯಯನ ವಿಭಾಗ, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ, ಶಿವಮೊಗ್ಗ. ವೃತ್ತಿ ಸಮಾಜಕಾರ್ಯದ ಆರಂಭವು, ವಿದೇಶದಿಂದ ಪ್ರಾರಂಭವಾಗಿ ನಮ್ಮ ದೇಶಕ್ಕೆ ಬರಲು ಸುಮಾರು 38 ವರ್ಷಗಳೇ ಬೇಕಾಯಿತು. ಪದವಿ ಹಂತದಿಂದ ಆರಂಭಿಸಿದ ಶಿಕ್ಷಣ ಸಂಶೋಧನೆವರೆಗೂ ತಲುಪಿತು. ದಶಕಗಳು ಕಳೆದಂತೆ, ಸಮಾಜಕಾರ್ಯದ ಶಿಕ್ಷಣ ಕೇಂದ್ರಗಳ ವ್ಯಾಪ್ತಿ ವಿಸ್ತರಿಸುತ್ತ ಅದರ ಬೇಡಿಕೆ ಕೂಡ ಹೆಚ್ಚಿಸಿಕೊಂಡಿತು. ಈ ಕೃತಿಯ ಲೇಖಕರು ವ್ಯಕ್ತಿ ಹಾಗೂ ಕುಟುಂಬಗಳೊಡನೆ ಕಾರ್ಯನಿರ್ವಹಿಸುವಾಗ ಸಮಾಜಕಾರ್ಯಕರ್ತರ ಕಾರ್ಯದಕ್ಷತೆಯನ್ನು ಹಾಗೂ ಈ ಕೃತಿಯ ಮುಖ್ಯ ಶೀರ್ಷಿಕೆಯ ಪರಿಕಲ್ಪನೆಗಳನ್ನು ಹಂತ ಹಂತವಾಗಿ ಓದುಗರಿಗೆ ಅರ್ಥೈಸಲು ಹಲವಾರು ಸಮಾಜಕಾರ್ಯ ವಿದ್ವಾಂಸರ ವ್ಯಾಖ್ಯಾನವನ್ನು ಮತ್ತು ವ್ಯಕ್ತಿ ಹಾಗೂ ಕುಟುಂಬಗಳ ಸಮಾಜಕಾರ್ಯ ಸಾಹಿತ್ಯವನ್ನು ಮತ್ತು ವಚನ ಸಾಹಿತ್ಯ, ದಾಸ ಸಾಹಿತ್ಯ, ಜಾನಪದ ಸಾಹಿತ್ಯ ಹಾಗೂ ಕಾವ್ಯಗಳೂಂದಿಗೆ ಅನುಸಂಧಾನಿಸುತ್ತಾ ವ್ಯಕ್ತಿ ಹಾಗೂ ಕುಟುಂಬಗಳೊಡನೆ ಸಮಾಜಕಾರ್ಯ ಎಂಬ ಶೀರ್ಷಿಕೆಯಡಿ ಈ ಕೃತಿ ರಚಿಸಿದ್ದಾರೆ.
ಕಣ್ಣಾರೆ ಕಂಡರೂ ಪ್ರಮಾಣಿಸಿ ನೋಡು ಎಂಬ ನಾಣ್ಣುಡಿ ಸರ್ವಕಾಲಕ್ಕೂ ಪ್ರಸ್ತುತ. ಆದರೆ ನಮ್ಮ ತಿಳಿವಳಿಕೆಯ ಚೌಕಟ್ಟಿನಲ್ಲಿ ಅದೆಷ್ಟೋ ವಿಚಾರಗಳನ್ನು ಗಮನಿಸಿದ ಕೂಡಲೇ ಅದನ್ನೇ ವಾಸ್ತವವೆಂದು ತಿಳಿದು ವಿವೇಚನಾರಹಿತವಾಗಿ ಒಂದು ನಿರ್ದಿಷ್ಟ ತೀರ್ಮಾನಕ್ಕೆ ಬಂದುಬಿಡುತ್ತೇವೆ. ಇದು ತಪ್ಪು ಎಂಬ ಅರಿವು ನಮಗೆ ಇರುವುದೇ ಇಲ್ಲ. ಕಾಲಾನಂತರ ನಮ್ಮ ತೀರ್ಮಾನ ತಪ್ಪು ಎಂದು ಅರಿತಾಗ ಪಶ್ಚಾತ್ತಾಪ ಪಡುತ್ತೇವೆ. ಕಣ್ಮುಂದೆ ಕಾಣುವುದೇ ವಾಸ್ತವ ಹಾಗೂ ನಮಗೆ ತಿಳಿದಿರುವುದೇ ಸತ್ಯ ಎಂಬುದನ್ನು ಬಲವಾಗಿ ನಂಬುವ ಮನುಷ್ಯ ಪೂರ್ವಾಗ್ರಹ ಪೀಡನೆಗೆ ಒಳಗಾಗಿ ಹಲವಾರು ಸೂಕ್ಷ್ಮ ವಿಚಾರಗಳನ್ನು ಕಡೆಗಣಿಸುತ್ತಾನೆ. ನಾಗರಿಕ ಎಂದು ಬಿಂಬಿಸಿಕೊಳ್ಳುವ ಅಕ್ಷರಸ್ಥ ಮಾನವ ತನ್ನನ್ನು ತಾನು ವಿದ್ಯಾವಂತನೆಂದು ಬಿಂಬಿಸಿಕೊಳ್ಳುವ ಭರದಲ್ಲಿ ವಾಸ್ತವಾಂಶಗಳನ್ನು ವಿಶ್ಲೇಷಿಸುವ ಗೋಜಿಗೆ ಹೋಗುತ್ತಿಲ್ಲ. ಇದರ ಪ್ರತಿಫಲವೇ ತಪ್ಪುಗ್ರಹಿಕೆ. ಅಂತಹ ಒಂದು ಸಂದರ್ಭವನ್ನು ನಿಮ್ಮ ಮುಂದಿಡುವ ಸಣ್ಣ ಪ್ರಯತ್ನವೇ ಅಪಾರ್ಥ.
ಚಾಣಕ್ಯನ ನೀತಿಶಾಸ್ತ್ರ - ಅರ್ಥಶಾಸ್ತ್ರ
ಮಾನವನ ಬದುಕಿಗೆ ಉಪಯುಕ್ತವಾಗುವ ನೀತಿಸೂತ್ರಗಳನ್ನು ವಿವರಿಸುವ ಇನ್ನೊಂದು ಗ್ರಂಥವೆಂದರೆ ಚಾಣಕ್ಯನ (ವಿಷ್ಣುಶರ್ಮ, ಕೌಟಿಲ್ಯ) ನೀತಿಶಾಸ್ತ್ರ. ಚಾಣಕ್ಯ ಅದ್ವಿತೀಯ ದೇಶಭಕ್ತ, ಅಪ್ರತಿಮ ಸಂಘಟಕ. ಸುಖ ಲೋಲುಪತೆಯಲ್ಲಿ ತಮ್ಮ ರಾಜಧರ್ಮ (ಕರ್ತವ್ಯ)ವನ್ನು ಮರೆತ ಮಗಧ ಸಾಮ್ರಾಜ್ಯವನ್ನು ಆಳುತ್ತಿದ್ದ ನವನಂದರನ್ನು ನಿಗ್ರಹಿಸಿ, ಅದೇ ವಂಶದ ಕುಡಿಯಾದ ಚಂದ್ರಗುಪ್ತನನ್ನು ಸಾಮ್ರಾಜ್ಯಾಧಿಪತಿಯನ್ನಾಗಿ ಮಾಡಿ, ಧರ್ಮ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿದ ಧೀರ. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |