ಒಲಿಂಡಾ ಪೆರೇರರವರು ಮಂಗಳೂರು ಕ್ಯಾಥೊಲಿಕ್ ಕುಟುಂಬದಲ್ಲಿ ಜನಿಸಿದರು. ಮೂವರು ಸಹೋದರಿಯರಲ್ಲಿ ಒಲಿಂಡಾ ಪೆರೇರರವರು ಕಿರಿಯರು. ಕರ್ನಾಟಕದಲ್ಲಿ ಸಮಾಜಕಾರ್ಯ ಶಿಕ್ಷಣ ಕ್ಷೇತ್ರದಪ್ರವರ್ತಕರಲ್ಲಿ ಪ್ರಮುಖರು. ರೋಶನಿ ನಿಲಯ (School of Social Work) ದ ಸ್ಥಾಪಕ ಪ್ರಾಂಶುಪಾಲರಾಗಿ Dr. OlindaPereira ಮಹೋನ್ನತ ಗುರು ಹಾಗೂ ಆದರ್ಶಪ್ರಾಯರಾಗಿ ಸಂಸ್ಥೆಯನ್ನುಕಟ್ಟುವಲ್ಲಿ ಶ್ರಮ ವಹಿಸಿದ್ದಾರೆ. ಇವರು ನಗರ ಸಮುದಾಯ ಅಭಿವೃದ್ಧಿ ಕೇಂದ್ರ ಸ್ಥಾಪಿಸಿದರು (UCDC), ಹೋಂ ಸೈನ್ಸ್ ಇನ್ಸ್ಟಿಟ್ಯೂಟ್, ಅಂಧರ ಶಾಲೆ (Blind School), ಸೇವಾ ಏಜೆನ್ಸಿ, ಮಹಿಳೆಯರವಸತಿ ನಿಲಯ ಸ್ಥಾಪಿಸಿದರು. ಶಿಕ್ಷಣ, ಮಹಿಳಾ ಸಬಲೀಕರಣಕ್ಕೆ ಪ್ರಶಸ್ತಿನೀಡಿದರು. ಪ್ರಸ್ತುತ ವಿಶ್ವಾಸ್ ಟ್ರಸ್ಟ್ ನಿರ್ದೇಶಕರಾಗಿ ವೃದ್ಧರಿಗೆ ಸಮಗ್ರ ಸಮುದಾಯ ಆಧಾರಿತ ಕಾಳಜಿ ನೀಡಿ ಪೋಷಿಸುತ್ತಿದ್ದಾರೆ. 15ನೇ ಆಗಸ್ಟ್ 2015ಕ್ಕೆ 90 ವರುಷಗಳನ್ನು ದಾಟುತ್ತಿರುವ ಡಾ. ಒಲಿಂಡಾ ಪೆರೇರಾ ತನ್ನ ತೊಂಬತ್ತನೇ ವಯಸ್ಸಿನಲ್ಲಿಯೂ ಇನ್ನೂ ಹದಿಹರೆಯದ ಜೀವನೋತ್ಸಾಹವನ್ನು ಇಟ್ಟುಕೊಂಡಿದ್ದಾರೆ. ಡಾ. ಒಲಿಂಡಾಪೆರೇರಾ ಸಮಾಜಕಾರ್ಯ ಶಿಕ್ಷಣ ಕ್ಷೇತ್ರದಲ್ಲಿ ಒಂದು ನಕ್ಷತ್ರ ಎಂದರೆ ಅತಿಶಯೋಕ್ತಿಯಾಗಲಾರದು. ಇವರ ಸಂದರ್ಶನ ಮಾಡಿದ ಶ್ರೀ ಎಸ್.ಎನ್. ಗೋಪಿನಾಥ್ ಮತ್ತು ಶ್ರೀ ಭೀಮರಾವ್ ಡಾ. ಒಲಿಂಡಾಪೆರೇರಾ ಅವರ ವಿದ್ಯಾರ್ಥಿಗಳು. ಇವರಿಬ್ಬರಿಗೆ ನಾನು ಕೃತಜ್ಞ. - ಸಂಪಾದಕ ಸಮಾಜಕಾರ್ಯ ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮ ಆಗಮನ ಹಾಗೂ ಪ್ರಾರಂಭ ಹೇಗಾಯಿತು?
ಒ.ಪೆ : ನಾನು 1946 ರಲ್ಲಿ Mathematics ನಲ್ಲಿ B.A. ಪದವಿ ನಂತರ 1947-48ರಲ್ಲಿ B.Ed. ಪದವಿಯನ್ನು ಪಡೆದು St. Marys ನಲ್ಲಿ ಅಧ್ಯಾಪಕಿಯಾಗಿದ್ದೆ. 1958ರಲ್ಲಿ Bombay University ಯಿಂದಮನಶಾಸ್ತ್ರದಲ್ಲಿ MA ಪದವಿಯನ್ನು ಪಡೆದು, 1960ರಲ್ಲಿ ಬಾಂಬೆಯ ನಿರ್ಮಲಾ ನಿಕೇತನದಲ್ಲಿ Diploma in Social Work ಪದವಿಯನ್ನು ಸಂಪಾದಿಸಿದೆ. 1960ರಲ್ಲಿ ಆಗ ತಾನೇ ಮಂಗಳೂರಿನ St. Agnes College ಸಮಾಜಕಾರ್ಯದಲ್ಲಿನ ತಮ್ಮ Course ನ್ನು ನಿಲ್ಲಿಸಿತ್ತು. ಆಗ ನಿರ್ಮಲಾ ನಿಕೇತನ ಬೊಂಬಾಯಿನ ನೇತೃತ್ವದಲ್ಲಿ 1960ರಲ್ಲಿ ಸಮಾಜಕಾರ್ಯದಲ್ಲಿ Certificate Courseನ ಪ್ರಾರಂಭದೊಂದಿಗೆರೋಶನಿ ನಿಲಯ ಸ್ಥಾಪನೆಯಾಯಿತು. ನಿರ್ಮಲಾ ನಿಕೇತನ್‍ನ Dorothy Baker ಮತ್ತು USA ಯ ARLINE A-hearrne ಇವರ ನೇತೃತ್ವದಲ್ಲಿ 10 Months Course ನ ಪ್ರಾರಂಭವಾಯಿತು. ನಂತರ ನಾನು ಮೈಸೂರುವಿಶ್ವವಿದ್ಯಾಲಯದ ಸಹಯೋಗದೊಂದಿಗೆ 1964ರಲ್ಲಿ DSW ಪದವಿಯನ್ನು ಪ್ರಾರಂಭಿಸಿದೆ. ಅದಾದ ನಂತರ 1967ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಶ್ರೀ ಶೀಮಾಲಿ ಮತ್ತು ರಿಜಿಸ್ಟ್ರಾರ್ ಶ್ರೀ ಕೆ.ಸಿ. ರಾಮಚಂದ್ರನ್, ಶ್ರೀ ಕೆಎಸ್ಎನ್ ಅಡಿಗ, ಸಿಂಡಿಕೇಟ್ ಸದಸ್ಯ ಇವರನೆರವಿನೊಂದಿಗೆ MC ಗೆ affiliate ಆಗಿ 1969ರಲ್ಲಿ MSWನ ಮೊದಲನೇ Batch ನ್ನು ಹೊರ ತಂದೆ. 1970-72ರ ಸಾಲಿನ MSW ಗೆ Specialization ಗಳನ್ನು ಅಳವಡಿಸಿದೆ. ನಂತರ 1974-75ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಪ್ರೊ. ಕೃಷ್ಣನ್ ಮಾರ್ಗದರ್ಶನದಲ್ಲಿ Clinical Psychology ಯಲ್ಲಿ Ph.D. ಯನ್ನು ಪಡೆದೆ. ಅಲ್ಲಿಂದ ಸಮಾಜಕಾರ್ಯ ಶಿಕ್ಷಣ ಕ್ಷೇತ್ರದಲ್ಲಿ ನಾನು ಹಂತಹಂತವಾಗಿ ಬೆಳೆದೆ ಎಂದರೆ ತಪ್ಪಾಗಲಾರದು. ರೋಶನಿ ನಿಲಯದ ಈ ಸುಂದರವಾದ ಕ್ಯಾಂಪಸ್ಗೆ ಸ್ಫೂರ್ತಿ ಯಾರು ? ಒ.ಪೆ : ಪ್ರಾರಂಭದಲ್ಲಿ 1965ರಲ್ಲಿ ನಿರ್ಮಲಾ ನಿಕೇತನ್, ಬೊಂಬಾಯಿ ಇವರ ರೂ. 5 ಲಕ್ಷದಕೊಡುಗೆಯೊಂದಿಗೆ ಕಂಕನಾಡಿಯಲ್ಲಿ 6 ಎಕರೆ ಜಾಗವನ್ನು ತೆಗೆದುಕೊಂಡು ಅದರಲ್ಲಿ Family Service Agency ಯ ಸ್ಥಾಪನೆಯಾಗಿತ್ತು. ಅದರೊಂದಿಗೆ ಜೆಪ್ಪುನಲ್ಲಿ ಜನತಾ ಕೇಂದ್ರ ಮತ್ತು ನವಜೀವನ್ ಮಾರ್ಗ ಇವುಗಳ ಸ್ಥಾಪನೆಯೊಂದಿಗೆ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಹಲವು ಹತ್ತುಕಾರ್ಯಕ್ರಮಗಳನ್ನು ರೂಪಿಸಿದೆವು. ರೋಶನಿ ನಿಲಯದ ಸ್ಥಾಪನೆ ಈ ಸುಂದರವಾದ ಪರಿಸರ 6 ಎಕರೆ ಆಯಿತು. ಶ್ರೀ ರಬೀಂದ್ರನಾಥ ಟಾಗೂರ್ ಅವರ ಸ್ಫೂರ್ತಿ Love is made fruitful in serviceನಮ್ಮ ಧ್ಯೇಯವಾಯಿತು. ಅಂದಿನಿಂದ ಇಂದಿನವರೆಗೆ ಇದನ್ನು ಅವಿರತವಾಗಿ ಚಾಚೂ ತಪ್ಪದೆ ಪಾಲಿಸಿಕೊಂಡು ಬರಲಾಗಿದೆ. ಚಂದಾದಾರ / ಸದಸ್ಯರಾದವರಿಗೆ ಮಾತ್ರ ಸಂಪೂರ್ಣ ಲೇಖನವನ್ನು ಓದುವ ಅವಕಾಶವನ್ನು ಕಲ್ಪಿಸಿದ್ದೇವೆ.
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|