ಶಿಕ್ಷಣ ವಂಚಿತ ಬಡವರಿಗೆ ಶಿಕ್ಷಣ, ಉಪಯುಕ್ತವಾದ ಕೌಶಲ್ಯಗಳು ಮತ್ತು ಸಬಲೀಕರಣವು ಕ್ಯಾಪ್ ಸಂಸ್ಥೆಯ ಸಂಸ್ಥಾಪನ ಅಧ್ಯಕ್ಷೆಯಾದ ಡಾ. ನಳಿನಿ ಗಂಗಾಧರನ್ರ ಬೃಹತ್ ಬಡತನ ನಿರ್ಮೂಲನೆ ಉಪಕ್ರಮದ ಮೂರು ಮೂಲಭೂತ ಅಂಶಗಳು. ಮದ್ರಾಸ್ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ನಿಂದ ಸಮಾಜಕಾರ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ನಳಿನಿಯವರಿಗೆ ಸುಮಾರು ಮೂರುವರೆ ವರ್ಷಕ್ಕಿಂತ ಹೆಚ್ಚಿನ ಕಾಲ ಸೇವಾ ಸಮಾಜಮ್ ಬಾಯ್ಸ್ ಹೋಮ್ ನ ನಿರ್ದೇಶಕರಾದ ಲೇ|| ಎಂ.ಎಸ್.ಎಸ್. ನಂಬೂದಿರಿಯವರೊಂದಿಗೆ ಕಾರ್ಯನಿರ್ವಹಿಸುವ ಅವಕಾಶ ಸಿಕ್ಕಿತು, ಮೊದಲು ಸಾಮಾಜಿಕ ಕಾರ್ಯಕರ್ತರಾಗಿ ನಂತರ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು. ನಂಬೂದಿರಿಯವರು ನಿರ್ಗತಿಕ ಮಕ್ಕಳು ಮತ್ತು ಯುವ ಜನರಿಗೆ ನಾವೀನ್ಯ ಶಿಕ್ಷಣದಿಂದ ಮತ್ತು ಕೌಶಲ್ಯಗಳ ಅಭಿವೃದ್ಧಿಯಿಂದ ಅವರು ಬಡತನದಿಂದ ವಿಮುಕ್ತಿ ಪಡೆಯುವಂತೆ ಮಾಡಿದ ಒಬ್ಬ ಮಹಾನ್ ಸಾಧಕ. ನಳಿನಿಯವರು ತಮ್ಮ ಈ ಆರಂಭಿಕ ಅನುಭವಗಳನ್ನು ನಂತರದ ವರ್ಷಗಳಲ್ಲಿ ಭಾರತ ಮತ್ತು ಇತರೆ ದೇಶಗಳಲ್ಲಿ ಬೃಹತ್ ಸಾಮಾಜಿಕ-ಆರ್ಥಿಕ ಚಳುವಳಿಯಾಗಿ ವಿಸ್ತರಿಸಿದರು. ಎಂ.ಎಸ್.ಎಸ್.ಡಬ್ಲ್ಯೂ.ನ ವಿದ್ಯಾರ್ಥಿಯಾಗಿ ನಾನು ನಳಿನಿಯವರಲ್ಲಿ ಜೀವನದ ಸದುದ್ದೇಶವನ್ನು ಹೊಂದಿದ ಆತ್ಮವಿಶ್ವಾಸವುಳ್ಳ ಒಬ್ಬ ವ್ಯಕ್ತಿಯನ್ನು ಕಂಡಿದ್ದೇನೆ. ತಮ್ಮ ಜೀವನದಲ್ಲಿ ನಳಿನಿಯವರು ಅತ್ಯಂತ ಸೂಕ್ತ ಜೀವನ ಸಂಗಾತಿಯನ್ನು ಆರಿಸಿಕೊಂಡಿದ್ದಾರೆ.
ಎಂ.ಎಚ್. ರಮೇಶ
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |