ಡಾ. ರೂತ್ ಮನೋರಮಾರೊಂದಿಗಿನ ನನ್ನ ಒಡನಾಟವು 1973 ರಿಂದ ಪ್ರಾರಂಭವಾಯಿತು. ನನ್ನ ಹಳೆಯ ವಿದ್ಯಾರ್ಥಿಯಾದ ಆರ್.ಎಸ್. ಅನ್‍ಬರಾಸನ್‍ರವರು ರೂತ್ ಮನೋರಮಾ ಮತ್ತು ಅವರ ಸಹಪಾಠಿಯಾದ ಕರುಣಾ ಡೇವಿಡ್ರನ್ನು ಮದ್ರಾಸ್ ಸ್ಕೂಲ್ ಆಫ್ ಸೋಶಿಯಲ್ ವರ್ಕ್‍ನಲ್ಲಿ ನನಗೆ ಪರಿಚಯಿಸಿದರು. ರೂತ್ ಮತ್ತು ಕರುಣಾರವರು ಸ್ನೇಹಶೀಲ ಗುಣದವರಾದ್ದರಿಂದ ನಮ್ಮಲ್ಲಿ ಒಳ್ಳೆಯ ಗೆಳೆತನ ಬೆಳೆಯಿತು. ರೂತ್ರವರು ವಿದ್ಯಾರ್ಥಿಯಾಗಿದ್ದಾಗಿನಿಂದಲೇ ತಮ್ಮಲ್ಲಿ ಅಪಾರ ಆತ್ಮವಿಶ್ವಾಸವನ್ನು ಬೆಳಸಿಕೊಂಡಿದ್ದರಿಂದ ಮುಂದೊಂದು ದಿನ ಇವರು ಜನ ನಾಯಕರಾಗುತ್ತಾರೆಂದು ನನಗೆ ಯಾವಾಗಲೂ ಅನ್ನಿಸುತ್ತಿತ್ತು. ಅವರು ಎಲ್ಲಾ ಸಾಮಾಜಿಕ ಸಮಸ್ಯೆಗಳ ಮೇಲೆ ನಿರ್ದಿಷ್ಟ ದೃಷ್ಟಿಕೋನಗಳನ್ನು ಹೊಂದಿದ್ದರು ಮತ್ತು ತಮ್ಮ ಅಭಿಪ್ರಾಯಗಳನ್ನು ದೃಢ ಸಂಕಲ್ಪದೊಂದಿಗೆ ಅಭಿವ್ಯಕ್ತಿಗೊಳಿಸಿದರು. ರೂತ್‍ರವರು ಸುಮಾರು ನಾಲ್ಕು ದಶಕಗಳಿಂದ ದಲಿತ ಮಹಿಳೆಯರ ಸಬಲೀಕರಣ ಮತ್ತು ದಲಿತ ಚಳುವಳಿಯ ಕೇಂದ್ರ ಬಿಂದುವಾಗಿದ್ದಾರೆ. ಅವರ ಕಾರ್ಯಕ್ಷೇತ್ರವು ರಾಷ್ಟ್ರೀಯ ಎಲ್ಲೆಯ ಆಚೆಗೂ ವಿಸ್ತರಣೆಗೊಂಡಿದೆ. ಇವರು ಶೋಷಿತರ ವಿಮೋಚನಾ ಕಾರ್ಯಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲೂ ಸಕ್ರಿಯರಾಗಿದ್ದಾರೆ. ದಲಿತರಿಗಾಗಿ ಮತ್ತು ಮಹಿಳೆಯರ ವಿಮೋಚನೆಗಾಗಿ ಇವರು ನಡೆಸಿದ ಮತ್ತು ನಡೆಸುತ್ತಿರವ ಹೋರಾಟಗಳಿಂದ ಇವರಿಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ದೊರೆತಿದೆ ಮತ್ತು ಇದ್ದಕ್ಕಾಗಿ ಇವರಿಗೆ ಪ್ರತಿಷ್ಠಿತ ರೈಟ್ ಲೈವ್ಲಿವುಡ್ ಪ್ರಶಸ್ತಿಯನ್ನು ನೀಡಲಾಗಿದೆ. ಸದ್ಯದಲ್ಲೇ ಇವರಿಗೆ ಭಾರತ ಸರ್ಕಾರದಿಂದ ಸೂಕ್ತ ಪದ್ಮ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ನಾನು ಖಚಿತವಾಗಿ ಹೇಳುತ್ತೇನೆ. ತನ್ನ ಗುರಿ ಸಾಧನೆಯಲ್ಲಿ ರೂತ್ ಮನೋರಮಾರವರ ಆಶಾವಾದಕ್ಕೆ ಮುಂದೊಂದು ದಿನ ಶಾಂತಿ ನೊಬೆಲ್ ಪ್ರಶಸ್ತಿಯು ಲಭಿಸುವುದರಲ್ಲಿ ಸಂದೇಹವಿಲ್ಲ.
ಡಾ. ಟಿ.ಕೆ. ನೈಯ್ಯರ್ ಸಮಾಜಕಾರ್ಯದ ಪ್ರಾಧ್ಯಾಪಕರು ಮತ್ತು ಮಾಜಿ ಪ್ರಾಂಶುಪಾಲರು, ಮದ್ರಾಸ್ ಸ್ಕೂಲ್ ಆಫ್ ಸೋಶಿಯಲ್ ವರ್ಕ್.
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
30,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGnIRATHANKA CITIZENS CONNECTJOB |
HR SERVICES
OTHER SERVICES |
NIRATHANKAPOSHOUR OTHER WEBSITESSubscribe |
30,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|