ಲಕ್ಷಾಂತರ ಮಂದಿಯ ಜೀವನವನ್ನು ಬದಲಾಯಿಸಿದ ಮಹಿಳಾ ಸಾಮಾಜಿಕ ಕಾರ್ಯಕರ್ತರು ಶಾಂತಿ ರಂಗನಾಥನ್ ಶಾಂತಿ ರಂಗನಾಥನ್‍ರವರು ಸಾಮಾಜಿಕ ಕಾರ್ಯಕರ್ತರು ಮತ್ತು ವಿರಳ ವ್ಯಕ್ತಿ. ಅವರು ತಮ್ಮ ಇಳಿವಯಸ್ಸಿನಲ್ಲೇ ತಮ್ಮ ಗಂಡನನ್ನು ಕಳೆದುಕೊಂಡು ತಮ್ಮ ಖಾಸಗಿ ಜೀವನದಲ್ಲಿ ಬಹಳ ನೋವನ್ನುಂಡವರು. ಅವರು ವಿಶ್ವದರ್ಜೆಯ ಸಂಸ್ಥೆಯನ್ನು ಸ್ಥಾಪಿಸಲು ಇದೂ ಒಂದು ಮುಖ್ಯ ಕಾರಣವಾಯಿತು. ಈ ಸಂಸ್ಥೆಯ ಮೂಲಕ ಸಾವಿರಾರು ವ್ಯಕ್ತಿಗಳಿಗೆ ಮತ್ತು ಕುಟುಂಬಕ್ಕೆ ಪರಿವರ್ತನೆಯನ್ನು ತಂದಿದ್ದಾರೆ. ನಾಲ್ಕು ದಶಕಗಳ ಹಿಂದೆ ಮದ್ರಾಸ್ ಸ್ಕೂಲ್ ಆಫ್ ಸೋಶಿಯಲ್ ವರ್ಕ್‍ನಲ್ಲಿ ಆಕೆಯು ನನ್ನ ಸಹ ವಿದ್ಯಾರ್ಥಿಯಾಗಿದ್ದು ತರುವಾಯ ಟಿ.ಟಿ ರಂಗನಾಥನ್ ಕ್ಲಿನಿಕಲ್ ರಿಸರರ್ಚ್ ಫೌಂಡೇಷನ್ (ಟಿಟಿಆರ್‍ಸಿಆರ್‍ಎಫ್) ನ ಆರಂಭದ ವರ್ಷಗಳಲ್ಲಿನ ನನ್ನ ಅವರ ಒಡನಾಟವು ನನ್ನ ಒಂದು ಅದೃಷ್ಟವೆಂದೇ ಹೇಳಬಹುದು. ಡಾ.ಟಿ.ಕೆ. ನೈಯ್ಯರ್ ಸಮಾಜಕಾರ್ಯದ ಪ್ರೊಫೆಸರ್ ಮತ್ತು ಮಾಜಿ ಪ್ರಿನ್ಸಿಪಾಲರು ಮದ್ರಾಸ್ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ಶಾಂತಿರವರು ಮಾಜಿ ಕೇಂದ್ರ ಹಣಕಾಸು ಸಚಿವರಾದ ಟಿ.ಟಿ. ಕೃಷ್ಣಮಾಚಾರಿರವರ ಮೊಮ್ಮಗನಾದ ಟಿ.ಟಿ. ರಂಗನಾಥನ್‍ರವರನ್ನು ವಿವಾಹವಾಗಿದ್ದರು. ಅವರು ಸ್ವಯಂ ರಕ್ತ ನಿಧಿಯನ್ನು ಪ್ರಾರಂಭಿಸುವಉದ್ದೇಶದಿಂದ ಸಮಾಜಕಾರ್ಯದ ವಿಧಾನ ಮತ್ತು ತಂತ್ರಗಳನ್ನು ಕಲಿಯಲು 1972ರಲ್ಲಿ ಸ್ನಾತಕೋತ್ತರ ಡಿಪ್ಲೊಮೊ ಪದವಿಗಾಗಿ ಮದ್ರಾಸ್ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ಅನ್ನು ಸೇರಿಕೊಂಡರು. 1975ರಲ್ಲಿ ಅವರು ಮದ್ರಾಸ್ ಸ್ವಯಂ ರಕ್ತ ನಿಧಿಯನ್ನು ಸ್ಥಾಪಿಸಿದರು ಮತ್ತು ಸ್ವಯಂ ರಕ್ತದಾನ ಚಳುವಳಿಯನ್ನು ದಕ್ಷಿಣ ಭಾರತಾದ್ಯಂತ ಪ್ರಾರಂಭಿಸಿದರು. 25,000ಕ್ಕೂ ಹೆಚ್ಚಿನ ರಕ್ತದಾನಿಗಳುಪ್ರೇರೇಪಣೆಗೊಂಡು ಈ ರಕ್ತನಿಧಿಗೆ ಕೈಜೋಡಿಸಿದರು. ಇದೇ ಸಂದರ್ಭದಲ್ಲಿ ಅವರ ಪತಿಯವರಾದ ಟಿ.ಟಿ ರಂಗನಾಥನ್‍ರವರು ಯು.ಎಸ್. ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಅವರು ಕುಡಿತದ ಚಟಕ್ಕೆಬಲಿಯಾಗಿದ್ದರು. ಈ ಘಟನೆಯಿಂದ ಅವರು ಬಹಳ ಜರ್ಝರಿತರಾದರು. ಈ ಸಂದರ್ಭದಲ್ಲಿ ಅವರು ಈ ರೀತಿ ಹೇಳಿದ್ದರು. ಆ ಸಮಯದಲ್ಲಿ ನಾವು ಅವರಿಗೆ ಯಾವುದೇ ರೀತಿಯ ಸಹಾಯವನ್ನು ನೀಡಲುಸಾಧ್ಯವಾಗಲಿಲ್ಲ ಏಕೆಂದರೆ ಮದ್ಯವ್ಯಸನಿಗಳ ಚಿಕಿತ್ಸೆಗೆಂದು ಭಾರತದಲ್ಲಿ ಯಾವ ಕೇಂದ್ರವೂ ಇರಲಿಲ್ಲ. ನನ್ನ ಗಂಡನ ಮರಣದ ನಂತರ ಮದ್ಯವ್ಯಸನಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಏನಾದರೂಸಹಾಯ ಮಾಡಬೇಕೆಂಬ ಹೆಬ್ಬಯಕೆಯು ನನ್ನಲ್ಲಿ ಶುರುವಾಯಿತು.
ಶಾಂತಿರವರು ಅವರ ಗಂಡನನ್ನು ಕಳೆದುಕೊಂಡಾಗ ಅವರಿಗಿನ್ನು ಕೇವಲ 30 ವರ್ಷ. ಅವರ ಮಾವ ಟಿ.ಟಿ. ನರಸಿಂಹನ್ ಮತ್ತು ಅತ್ತೆ ಪದ್ಮಾರವರು ಶಾಂತಿರವರಿಗೆ ಬೆಂಬಲವಾಗಿ ನಿಂತರು. ಶಾಂತಿರವರುತಮ್ಮ ನೋವನ್ನು ಮರೆಯಲು ಮತ್ತು ತಮ್ಮ ಗುರಿಯನ್ನು ಸಾಧಿಸಲು ಅವರು ಪ್ರೋತ್ಸಾಹಿಸಿದರು. ಅವರ ಗುರಿ ಸಾಧನೆಯ ಮೊದಲ ಹೆಜ್ಜೆ ಎಂಬಂತೆ ಅವರು ಯು.ಎಸ್ (ಅಮೇರಿಕ) ಗೆ ತೆರಳಿ ಅಲ್ಲಿನಮಿನ್ನೇಪೋಲಿಸ್‍ನ ಹಜೆ಼ಲ್‍ಡಾನ್ ಸಂಸ್ಥೆಯಲ್ಲಿ ಮದ್ಯವ್ಯಸನಕ್ಕೆ ಚಿಕಿತ್ಸೆಯನ್ನು ನೀಡಲು ಸ್ವತಃ ತಾವೇ ಕಲಿತುಕೊಂಡರು. ಅಲ್ಲಿಂದ ಮರಳಿದ ನಂತರ 1980ರಲ್ಲಿ ಅವರು ಟಿ.ಟಿ. ರಂಗನಾಥನ್ ಕ್ಲಿನಿಕಲ್ರಿಸರ್ಚ್ ಅನ್ನು ಸ್ಥಾಪಿಸಿದರು. ನರಸಿಂಹನ್‍ರವರು ತಮ್ಮ ಸಮುದ್ರ ತೀರದ ಮನೆಯನ್ನು ಮದ್ಯವ್ಯಸನಿಗಳ ಮತ್ತು ಮಾದಕ ವ್ಯಸನಿಗಳ ಚಿಕಿತ್ಸೆಗೆಂದು ಡೇ ಕೇರ್ ಸೆಂಟರ್‍ಗಾಗಿ ತಮ್ಮ ಸೊಸೆಗೆ ನೀಡಿದರು. ಟಿಟಿಕೆ ಸಮೂಹವು 11 ದಶಲಕ್ಷ ರೂಪಾಯಿಗಳ ಕೊಡುಗೆಯನ್ನು ನೀಡಿ ಮತ್ತು 1987ರಲ್ಲಿ 70 ಹಾಸಿಗೆ ವಸತಿಯನ್ನು ಹೊಂದಿದ ವ್ಯಸನ ಚಿಕಿತ್ಸಾ ಕೇಂದ್ರವನ್ನು, ಟಿಟಿಕೆ ಆಸ್ಪತ್ರೆಯನ್ನು ಸ್ಥಾಪಿಸಲಾಯಿತು. ಈರೀತಿಯ ಆಸ್ಪತ್ರೆಯು ಭಾರತದಲ್ಲಿಯೇ ಪ್ರಥಮವಾಯಿತು. ನಂತರ ಮಾದಕ ವ್ಯಸನಿಗಳ ಚಿಕಿತ್ಸೆಯನ್ನು ವಿಸ್ತರಿಸಲು 20 ಹಾಸಿಗೆಯನ್ನು ಅದಕ್ಕೆ ಸೇರಿಸಲಾಯಿತು. 2007ರಲ್ಲಿ ಇನ್ನೂ 20 ಗ್ರಾಹಕರಿಗೆ ಮತ್ತುಅವರ ಕುಟುಂಬ ಸದಸ್ಯರಿಗೆ ಅನುಕೂಲತೆಯನ್ನು ಒದಗಿಸುವ ದೃಷ್ಟಿಯಿಂದ ವಿಶೇಷ ವಾರ್ಡನ್ನೂ ಸ್ಥಾಪಿಸಲಾಯಿತು. ಟಿಟಿಕೆ ಆಸ್ಪತ್ರೆಯ ಪ್ರಮುಖ ಚಟುವಟಿಕೆಗಳು ಪ್ರಾಥಮಿಕ ಚಿಕಿತ್ಸಾ ಕಾರ್ಯಕ್ರಮ: 25,000 ಗ್ರಾಹಕರು ಒಂದು ತಿಂಗಳ ಒಳ-ರೋಗಿ ಚಿಕಿತ್ಸಾ ಕಾರ್ಯಕ್ರಮಕ್ಕೆ ಒಳಪಟ್ಟಿದ್ದಾರೆ. ಈ ಕಾರ್ಯಕ್ರಮವು ನಿರ್ವಿಶೀಕರಣ, ನಿರೋಧಕ ಔಷಧ ಚಿಕಿತ್ಸೆ,ಉಪನ್ಯಾಸಗಳು, ಸಮೂಹ ಚಟುವಟಿಕೆಗಳು, ಪ್ರತ್ಯೇಕ ಸಮಾಲೋಚನೆ, ಸಮೂಹ ಚಿಕಿತ್ಸೆ, ವಿಶ್ರಾಂತಿ ಚಿಕಿತ್ಸೆ ಮತ್ತು ಸ್ವ-ಸಹಾಯ ಗುಂಪುಗಳಿಗೆ ಇದರ ಪರಿಚಯ ಇವುಗಳನ್ನು ಒಳಗೊಂಡಿದೆ. ................... ಚಂದಾದಾರ / ಸದಸ್ಯರಾದವರಿಗೆ ಮಾತ್ರ ಸಂಪೂರ್ಣ ಲೇಖನವನ್ನು ಓದುವ ಅವಕಾಶವನ್ನು ಕಲ್ಪಿಸಿದ್ದೇವೆ.
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|