ಯಾವಾಗಲಾದರೂ ನಾನು ಅಧಿಕೃತ ಅರ್ಜಿಯನ್ನು ತುಂಬುವಾಗ, ನನ್ನ ಉದ್ಯೋಗವನ್ನು ಅದರಲ್ಲಿ ನಮೂದಿಸುವಾಗ, ನಾನು 'ಸಮಾಜಕಾರ್ಯಕರ್ತ' ಎಂಬ ಶಬ್ದವನ್ನು ಉಪಯೋಗಿಸುತ್ತೇನೆ. ಇಷ್ಟೇ ನನಗಿರುವ ಅಧಿಕಾರ ನಿಮ್ಮ ಮಧ್ಯೆ ನಾನಿರುವುದಕ್ಕೆ. ನಾನು ಸಮಾಜವಿಜ್ಞಾನಿಗಳ ಈ ಶಾಖೆಯ ವಿದ್ಯಾರ್ಥಿಯೂ ಅಲ್ಲ, 'ಸಮಾಜಕಾರ್ಯಕರ್ತ' ಎಂಬ ಶಬ್ದವನ್ನು ನೀವೆಲ್ಲರೂ ಅರ್ಥಮಾಡಿಕೊಂಡಿರುವ ಪ್ರಕಾರ ನಾನು ತಾಂತ್ರಿಕವಾಗಿ ಸಾಮಾಜಕಾರ್ಯಕರ್ತನೂ ಅಲ್ಲ. ಹೆಚ್ಚು ಸೂಕ್ತವಾಗಿ ಹೇಳುವುದಾದರೆ ನನ್ನನ್ನು ನಾನು ರಚನಾತ್ಮಕ ಕಾರ್ಯಕರ್ತನೆಂದು ಕರೆದುಕೊಳ್ಳಬೇಕು. ಗಾಂಧೀಯುಗದಿಂದಲೂ ಸುಪರಿಚಿತವಾದದ್ದು ಈ ಶಬ್ದ; ಆ ಯುಗದ ಅನೇಕ ಶಬ್ದಗಳಂತೆ ಈ ಶಬ್ದವೂ ಅನುಪಯೋಗಿಯಾಗುತ್ತಿದೆಯೆನ್ನಿ
0 Comments
ಸಮಾಜಸೇವೆ ಎನ್ನುವ ಶಬ್ದ ಬಹಳ ಕಾಲದಿಂದ ನಮ್ಮ ದೇಶದಲ್ಲಿ ಪ್ರಚಾರದಲ್ಲಿತ್ತು. ಈಗಲೂ ಇದೆ. ಅದು ಪರಂಪರಾಗತವಾಗಿ ಬಂದ ಒಂದು ಕಲ್ಪನೆ. ಅತಿ ಪ್ರಾಚೀನ ಕಾಲದಲ್ಲಿ, ಸುಮಾರು ನಾಲ್ಕುಸಾವಿರ ವರ್ಷಗಳಿಗಿಂತಲೂ ಹಿಂದೆ, ಅಲೆಮಾರಿ ಜೀವನ ಕ್ರಮೇಣ ಹೈನುಗಾರಿಕೆ, ಕೃಷಿ ಆಧಾರಿತ ಜೀವನಕ್ರಮವಾಗಿ ಬದಲಾವಣೆಗೊಂಡು, ಜನಸಮುದಾಯ ಒಂದು ಕಡೆಗೆ ನಿಲ್ಲುವಂತಾಯಿತು. ಜನಪದಗಳು ಅಸ್ತಿತ್ವಕ್ಕೆ ಬಂದವು, ಈ ಸಂದರ್ಭದಲ್ಲಿ ಸಂಕಟದಲ್ಲಿರುವವರಿಗೆ ಸಹಾಯ ಮಾಡಲು ವೈಯಕ್ತಿಕ ದಾನ, ಕ್ರಮೇಣ ದಾನಧರ್ಮ, ದಾನ ಸಂಹಿತೆಗಳು ನಿರ್ಮಾಣವಾದವು. ಕಾಲಕ್ರಮದಲ್ಲಿ ಆಧುನಿಕಯುಗ ಪ್ರಾರಂಭವಾದಾಗ, ಸಾರ್ವಜನಿಕ ಕಾರ್ಯಕ್ಷೇತ್ರದಲ್ಲಿ ಕೆಲವು ಗಣ್ಯ ವ್ಯಕ್ತಿಗಳಿಂದ ಆಗ ಪ್ರಚಾರದಲ್ಲಿದ್ದ ಧರ್ಮಪ್ರೇರಿತವೆಂದು ನಂಬಲಾಗಿದ್ದ ಸಾಮಾಜಿಕ ದುಷ್ಟಾಚಾರಗಳನ್ನು, ಪದ್ಧತಿಗಳನ್ನು ನಿವಾರಿಸಿ ಸಂಕಷ್ಟಗೀಡಾಗಿದ್ದ ಜನರನ್ನು, ಮುಖ್ಯವಾಗಿ ಮೇಲ್ಜಾತಿ, ಮೇಲ್ವರ್ಗದ ವಿಧವೆಯರನ್ನು ರಕ್ಷಿಸಲು ಸಮಾಜಸುಧಾರಣಾ ಕಾರ್ಯವನ್ನು ಪ್ರಾರಂಭಿಸಿದರು. ಇವರಲ್ಲಿ ಪ್ರಮುಖರೆಂದರೆ ರಾಮ ಮೋಹನ್‍ರಾಯ, ಈಶ್ವರಚಂದ್ರ ವಿದ್ಯಾಸಾಗರ, ಶಶಿಪಾದ ಬ್ಯಾನರ್ಜಿ ಬಂಗಾಳದಲ್ಲಿ, ಎಂ.ಜಿ. ರಾನಡೆ, ರಾ.ಕೃ. ಭಂಡಾರಕರ, ಜಸ್ಟೀಸ್ ಚಂದಾವರಕರ, ಜ್ಯೋತಿರಾವ್‍ಫುಲೆ, ಪಂಡಿತಾ ರಮಾಬಾಯಿ ಮುಂಬಯಿ ಪ್ರಾಂತದಲ್ಲಿ, ಇದೇ ಸಮಯದಲ್ಲಿ ರಾಷ್ಟ್ರೀಯತಾ ಭಾವನೆ ದೇಶದಲ್ಲಿ ಹರಡತೊಡಗಿತ್ತು. ಸಮಾಜಸುಧಾರಣೆಯಿಂದ ಜನರಲ್ಲಿ ಭಿನ್ನಾಭಿಪ್ರಾಯ, ಒಡಕು ಆಗುವುದರಿಂದ, ರಾಷ್ಟ್ರೀಯತೆಗೆ ಅತ್ಯವಶ್ಯವಾದ ಜನರೆಲ್ಲರ ಒಗ್ಗಟ್ಟಿಗೆ, ಐಕ್ಯತೆಗೆ ಹೆಚ್ಚು ಪ್ರಾಶಸ್ತ್ಯ ನೀಡಬೇಕು. ಸ್ವಾತಂತ್ರ ಬಂದ ನಂತರ ಸಮಾಜಸುಧಾರಣಕಾರ್ಯ ಪ್ರಾರಂಭಿಸಬೇಕು ಎಂದು ಕೆಲವರ ವಾದ. ಈ ಗುಂಪಿನಲ್ಲಿ ಪ್ರಮುಖರೆಂದರೆ ಬಾಲಗಂಗಾಧರ ತಿಲಕ.
ಕನ್ನಡ ಭಾಷೆಯಲ್ಲಿ ಸಮಾಜಕಾರ್ಯಕ್ಕೆ ಸಂಬಂಧಿಸಿದ ಸಾಹಿತ್ಯ ಸೃಷ್ಟಿಯಾಗುತ್ತಿಲ್ಲವೆಂಬ ಕೂಗು ಬಹಳ ಹಿಂದಿನಿಂದಲೂ ಕೇಳಿ ಬರುತ್ತಿದೆ. ಆದರೆ ಇತ್ತೀಚೆಗೆ ಹೆಚ್ಚಾಗಿ ಮಾರ್ಧ್ವನಿಸುತ್ತಿದೆ ಅಷ್ಟೇ. ಸಮಾಜಕಾರ್ಯವನ್ನು ಅಧ್ಯಯನ ವಿಷಯವನ್ನಾಗಿ ಆರಿಸಿಕೊಂಡ ಪ್ರತಿಯೊಬ್ಬ ವಿದ್ಯಾರ್ಥಿಗೂ ಹೊಸದೆನಿಸುವ ಸಮಾಜಕಾರ್ಯ ಪರಿಕಲ್ಪನೆಗಳನ್ನು ಆಂಗ್ಲ ಭಾಷೆಯಲ್ಲಿ ಅರ್ಥಮಾಡಿಕೊಳ್ಳುವುದು ಕೊಂಚ ಕಷ್ಟದ ಸಂಗತಿ ಎಂದರೆ ತಪ್ಪಾಗುವುದಿಲ್ಲ. ಇಲ್ಲಿ ಸಮಸ್ಯೆಯಿರುವುದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮಾತ್ರವೆಂಬುದು ಬಹುಪಾಲು ಸಮಾಜಕಾರ್ಯಕರ್ತರ ಧೋರಣೆ. ಆದರೆ ಅವರ ಧೋರಣೆ ಸತ್ಯಕ್ಕೆ ಸಮೀಪವಾದುದ್ದಲ್ಲ. ನಗರ ಭಾಗದಿಂದ ಬಂದಂತಹ ಬಹುಪಾಲು ವಿದ್ಯಾರ್ಥಿಗಳಿಗೂ ಸಹ ಸಮಾಜಕಾರ್ಯ ಹೊಸ ವಿಷಯವೇ ಆಗಿದ್ದು, ಇಲ್ಲಿನ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳುವುದು ಸುಲಭವಲ್ಲ. ಬಹುಶಃ ನಗರ ಭಾಗಗಳಿಂದ ಬಂದ ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿರಬಹುದು ಮತ್ತು ಅದೇ ಭಾಷೆಯಲ್ಲಿ ವ್ಯವಹರಿಸಲು ತಿಳಿದಿರಲೂಬಹುದು. ಆದರೆ ಅವರ ಮಾತೃಭಾಷೆ ಇಂಗ್ಲೀಷ್ ಅಲ್ಲವಲ್ಲ. ಆಂಗ್ಲ ಅಥವಾ ಕನ್ನಡ ಹೀಗೇ ಯಾವುದೇ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಪೂರೈಸಿದ್ದರೂ ಸಮಾಜಕಾರ್ಯದ ಪರಿಕಲ್ಪನೆಗಳು ಹೊಸ ವಿಚಾರಗಳೇ ಆಗಿದ್ದು, ಅವುಗಳನ್ನು ತಮ್ಮ ಮಾತೃಭಾಷೆಯಲ್ಲಿ ಕಲಿತಷ್ಟು ವೇಗವಾಗಿ ಇತರೆ ಭಾಷೆಗಳಲ್ಲಿ ಕಲಿಯುವುದು ಕಷ್ಟಸಾಧ್ಯವೆಂಬ ವಿಚಾರ ಬುದ್ದಿವಂತರೆನ್ನಿಸಿಕೊಂಡ ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ.
ಎಸ್.ಎ. ಶ್ರೀನಿವಾಸಮೂರ್ತಿ ಸಮಾಜ ಸೇವೆಯಲ್ಲಿ ನನ್ನ ಅನುಭವಗಳ ಬಗ್ಗೆ ಒಂದು ಲೇಖನ ಬೇಕೆಂದು ಕೇಳಿ ಶ್ರೀಮತಿ ಅನಿತ ಅವರು ದೂರವಾಣಿಯಲ್ಲಿ ಕರೆ ಮಾಡುವುದಕ್ಕೆ ಕೆಲವು ನಿಮಿಷಗಳ ಮೊದಲು ನನ್ನ ಮೊಬೈಲ್ ಫೋನ್‍ನಲ್ಲಿ ಒಂದು ಕರೆ ಬಂದಿತ್ತು. ಹೆಣ್ಣು ಧ್ವನಿಯೊಂದು ಕೇಳಿತ್ತು "ನೀವು ಒಂಟಿತನದಿಂದ ಬಳಲುತ್ತಿದ್ದೀರಾ?", ಎಂದು. ತಕ್ಷಣ "ಇಲ್ಲ" ಎಂದು ಹೇಳಿ ಅವಳ ಕರೆಯನ್ನು ಮುಗಿಸಿದ್ದೆ.
ಪ್ರೀತಿ ವಿಶ್ವಾಸದಿಂದ ಬದುಕಿನ ಏರುಪೇರುಗಳಲ್ಲಿ ಬೆಂಬಲವಾಗಿರುವ ನನ್ನ ಕುಟುಂಬ ಮತ್ತು ಬಂಧು ಮಿತ್ರರೊಡನೆ ಇರುತ್ತಿರಲಿಲ್ಲವಾದರೆ, ನನ್ನ ಉತ್ತರ "ಹೌದು" ಎಂದಾಗುತ್ತಿತ್ತೊ ಏನೊ. ಹಣ ಕೊಟ್ಟು ಸ್ನೇಹಜಾಲಗಳ ಸದಸ್ಯನಾಗಿ ಗೆಳೆತನವನ್ನು ಕೊಂಡುಕೊಳ್ಳುತ್ತಿದ್ದೆನೇನೊ. ನಮ್ಮ ಮನೆಯ ಎದುರಿನಲ್ಲಿದ್ದ ಆಟದ ಮೈದಾನದಲ್ಲಿ, ಬೆಂಗಳೂರು ಮಹಾನಗರ ಪಾಲಿಕೆಯು, ಕೆಳ ಸೇತುವೆ ನಿರ್ಮಿಸುವಾಗ ಉಂಟಾದ ಕಲ್ಲು ಮಣ್ಣುಗಳ ತ್ಯಾಜ್ಯವನ್ನು ಸುರಿದಿದ್ದರು. ಅದನ್ನು ನೋಡಿ ಖಾಸಗಿ ಕಟ್ಟಡಗಳ ಅವಶೇಷಗಳೂ ಅಲ್ಲಿ ಹಾಕಲ್ಪಟ್ಟಿದ್ದವು. ಜೊತೆಗೆ ಕೆಲವರು ಕಸದ ರಾಶಿಯನ್ನೂ ಅಲ್ಲಿ ಹಾಕಿ, ಸೊಳ್ಳೆಗಳ ಕಾಟ ಮತ್ತು ದುರ್ಗಂಧದಿಂದ ಸುತ್ತುಮುತ್ತಲಿನ ಜನ ಕಂಗಾಲಾಗಿದ್ದರು. ಅವರುಗಳ ದೂರು ಅಧಿಕಾರಿಗಳ ಮೇಲೆ ಯಾವ ಪ್ರಭಾವವನ್ನೂ ಬೀರಲಿಲ್ಲ. ಸತತ ಎರಡು ವರ್ಷಗಳ ಕಾಲ, ಪತ್ರಗಳ ಮೂಲಕ, ಪತ್ರಿಕೆಗಳಲ್ಲಿ ಲೇಖನ ಬರೆದು, ಚಿತ್ರಗಳನ್ನು ಪ್ರಕಟಿಸಿ, ಅಧಿಕಾರಿಗಳನ್ನು ಭೇಟಿ ಮಾಡಿ, ಕಡೆಗೆ ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಸಹಾಯದಿಂದ, ನಗರ ಪಾಲಿಕೆಯಿಂದ, ಮೈದಾನವನ್ನು ಸ್ವಚ್ಛಗೊಳಿಸಿ ಅಲ್ಲಿ ಉದ್ಯಾನವನ್ನು ಮಾಡಿಸುವಲ್ಲಿ ಫಲಪ್ರದನಾದೆ. ಇದನ್ನು ನೋಡಿ ನೆರೆಹೊರೆಯ ನಿವಾಸಿಗಳು, ಈ ಕ್ಷೇತ್ರದ ಅಭಿವೃದ್ಧಿಗೆ ಒಂದು ಸಂಘವನ್ನು ನೋಂದಾಯಿಸಿಕೊಂಡರು. ಈಗ ಇಲ್ಲಿನ ಹಿರಿಯ ನಾಗರಿಕರಿಗೆ, ಅದರಲ್ಲೂ ಸ್ತ್ರೀಯರಿಗೆ, ಬೆಳಿಗ್ಗೆ, ಸಂಜೆ ವಾಯುವಿಹಾರದ ತಾಣವಾಗಿದೆ-ಈ ಉದ್ಯಾನವನ. ವಿಶ್ವದಲ್ಲಿ ಪ್ರಚಲಿತವಾಗಿ ಅನೇಕ ಸಿದ್ಧಾಂತಗಳಿವೆ. ಅವೆಂದರೆ, ಬಂಡವಾಳಶಾಹಿ ಪದ್ಧತಿ ಬಹುಜನರ ಹಿತಕಾಯುವ ಪದ್ಧತಿ, ಸರ್ವಾಧಿಕಾರಿ ಪದ್ಧತಿ, ರೈತ, ಕಾರ್ಮಿಕರ ಹಿತಾಸಕ್ತಿಯ ಪದ್ಧತಿ ಮುಂತಾದವು. ಇವುಗಳೆಲ್ಲ ಈಗ Out of Date ಆಗಿರುವ ಪದ್ಧತಿಗಳು. 'ಸರ್ವರಿಗೂ ಸಮಪಾಲು' ಎನ್ನುವ ಸರ್ವೋದಯ ಪದ್ಧತಿ ಜಾರಿಗೆ ತರುವುದು ಗಾಂಧೀಜಿಯ ಗುರಿಯಾಗಿತ್ತು. ಸರ್ವೋದಯ, ಅಂತ್ಯೋದಯದಿಂದ ಆರಂಭವಾಗಬೇಕು. ಕಟ್ಟಕಡೆಯ ಮನುಷ್ಯನ ಅಭ್ಯುದಯಕ್ಕೇ ಆದ್ಯತೆ ಇರಬೇಕು. ಇದು ಸರ್ವೋದಯ ತತ್ತ್ವ.
ಸರ್ವೋದಯ ಸಮಾಜ ರಚನೆ ನಮ್ಮ ಗುರಿಯಾಗಬೇಕು. ಸರ್ವೋದಯ ಸಮಾಜ ರಚನೆಯ ಸೂತ್ರ ಇದಾಗಿದೆ-ಶಾಸನಮುಕ್ತ, ಶೋಷಣ ರಹಿತ, ದಂಡನಿರಪೇಕ್ಷ, ಅಹಿಂಸಕ ಸಮಾಜ ರಚನೆ. Government is the best that governs the least ಇದು ಶಾಸನಮುಕ್ತ ಸರ್ವೋದಯ ಸಮಾಜದ ಗುರಿ. ಸುಮ್ಮನೆ ಈ ವೆಬ್‍ಸೈಟ್‍ಗೆ ಭೇಟಿ ನೀಡಿ : www.socialworker.com
ಒಮ್ಮೆ ಕಣ್ಣಾಡಿಸಿ. ಬಿಎಸ್‍ಡಬ್ಲ್ಯೂ / ಎಂಎಸ್‍ಡಬ್ಲ್ಯೂ ಓದುತ್ತಿರುವ ವಿದ್ಯಾರ್ಥಿಗಳ ಅತ್ಯಂತ ಅರ್ಥಪೂರ್ಣವಾದ ಲೇಖನಗಳು ಸಿಗುತ್ತವೆ. ಆದರೆ ಇವೆಲ್ಲಾ ವಿದೇಶೀ ನೆಲಕ್ಕೆ ಸಂಬಂಧಿಸಿದಂತವು. ಇದೆಲ್ಲಾ ನೋಡಿದ ಮೇಲೆ ನಮ್ಮ ವಿದ್ಯಾರ್ಥಿಗಳು ಏಕೆ ಈ ರೀತಿ ಕ್ರಿಯಾತ್ಮಕವಾಗಿ ಲೇಖನ ಬರೆಯುವುದಿಲ್ಲ ಎನಿಸುತ್ತದೆ. ಇದಕ್ಕೆ ಈ ಪರಿಸ್ಥಿತಿಗೆ ಕಾರಣಕರ್ತರಾರು ? ವಿದ್ಯಾರ್ಥಿಗಳೋ /ವ್ಯವಸ್ಥೆಯೋ ಅಥವಾ ಪ್ರಾಧ್ಯಾಪಕರೋ ? ನಮ್ಮ ಕರ್ನಾಟಕದ ಮಟ್ಟಿಗೆ ನೋಡುವುದಾದರೆ ನೂರಾರು ಬಿಎಸ್‍ಡಬ್ಲ್ಯೂ / ಎಂಎಸ್‍ಡಬ್ಲ್ಯೂ ಕಾಲೇಜುಗಳಿವೆ. ಭಾರತದಾದ್ಯಂತ ಲೆಕ್ಕಕ್ಕೆ ಸಿಗದಷ್ಟು ಬಿಎಸ್‍ಡಬ್ಲ್ಯೂ / ಎಂಎಸ್‍ಡಬ್ಲ್ಯೂ ಕಾಲೇಜುಗಳಿವೆ. ಲಕ್ಷಾಂತರ ವಿದ್ಯಾರ್ಥಿಗಳು ಪದವಿ ಪಡೆದು ವಿಶ್ವವಿದ್ಯಾನಿಲಯಗಳಿಂದ ಹೊರಬಂದಿದ್ದಾರೆ. ಆದರೆ ನಮ್ಮಲ್ಲೇಕೆ ಬರಹಗಾರರು ಕಡಿಮೆ. ಸ್ನೇಹಿತರೇ,
ಭಾನುವಾರದಂದು ಆಯೋಜಿಸಿದ ಸಭೆಯ ಸಂಪೂರ್ಣ ಆಡಿಯೋವನ್ನು ನೀವು ಕೇಳಬಹುದು. ಈ ಆಡಿಯೋದಲ್ಲಿ ಸಭೆಯಲ್ಲಿ ಚರ್ಚಿತವಾದ ಎಲ್ಲ ವಿಷಯಗಳು ಒಳಗೊಂಡಿದೆ. ಹೀಗೆಯೇ ಮುಂದಿನ ದಿನಗಳಲ್ಲಿ ಸಮಾಜಕಾರ್ಯ ಕ್ಷೇತ್ರದ ಹತ್ತು ಹಲವು ವಿಷಯಗಳ ಕುರಿತು ಸಮಾಲೋಚನೆ ಸಭೆಗಳನ್ನು ಹಮ್ಮಿಕೊಳ್ಳಲಾಗುವುದು. ನಿಮಗೆ ಆಸಕ್ತಿ ಇದ್ದಲ್ಲಿ ಭಾಗವಹಿಸಬಹುದು. ಸಭೆಯಲ್ಲಿ ಚರ್ಚೆಯಾದ ಪ್ರಮುಖ ಅಂಶಗಳು:
https://soundcloud.com/ramesha-niratanka/social-workers-meeting-niratanka?utm_source=soundcloud&utm_campaign=share&utm_medium=facebook https://soundcloud.com/ramesha-niratanka/social-workers-meeting?utm_source=soundcloud&utm_campaign=share&utm_medium=facebook ಸ್ನೇಹಿತರೇ
ವೃತ್ತಿನಿರತ ಸಮಾಜಕಾರ್ಯ ಕ್ಷೇತ್ರದ ಬಂಧುಗಳೇ, ಕಾವೇರಿ ಹೋರಾಟದ ಈ ಸಂದರ್ಭದಲ್ಲಿ ಪ್ರತಿಯೊಬ್ಬ ಸಮಾಜಕಾರ್ಯ ವೃತ್ತಿನಿರತನು ತನ್ನ ಆತ್ಮಸಾಕ್ಷಿಯನ್ನು ಹಾಗೂ ತನ್ನ ವೃತ್ತಿಪರತೆಯನ್ನು ಪ್ರಶ್ನಿಸಿಕೊಂಡು ನಾವು ಈ ಸಂದರ್ಭದಲ್ಲಿ ನಮ್ಮ ಕರ್ತವ್ಯವೇನು ? ಎಂಬುದನ್ನು ಪ್ರಶ್ನಿಸಿಕೊಳ್ಳಬೇಕು. ಸಮಾಜಕಾರ್ಯದ ಶಿಕ್ಷಣ, ಕೌಶಲ್ಯ, ವೃತ್ತಿಪರತೆ ಯಾವ ರೀತಿ ಈ ಸಂದರ್ಭದಲ್ಲಿ ಸದುಪಯೋಗ ಪಡಿಸಿಕೊಂಡು ಸಮಸ್ಯೆಯ ಭಾಗವಾಗಬೇಕು ಎಂಬ ಕನಿಷ್ಟ ಸೌಜನ್ಯ ನಾವು ತೋರಲಿಲ್ಲವೆಂದರೆ ತಪ್ಪಾಗುವುದಿಲ್ಲ. ಸಮಾಜಕಾರ್ಯ ಸಂಘಟನೆಗಳ ಮೂಲಕ ಈ ಸಂದರ್ಭದಲ್ಲಿ ವೃತ್ತಿಪರ ಸಮಾಜಕಾರ್ಯಕರ್ತರಾದ ನಾವು ರೈತರ ಪರವಾಗಿ ಒಕ್ಕೊರಲಿನಿಂದ ಬೆಂಬಲಿಸಬೇಕಾಗಿದ್ದು ಕರ್ನಾಟಕದ ಯಾವೊಂದು ವೃತ್ತಿಪರ ಸಮಾಜಕಾರ್ಯ ಸಂಘಟನೆಯು ಈ ವಿಷಯದಲ್ಲಿ ಮೌನ ತಳೆದಿರುವುದು ಬೇಸರದ ಸಂಗತಿ. ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗಕ್ಕೆ ಬಿಓಇ/ಬಿಓಎಸ್ ಗೆ ಅರ್ಹತೆಯುಳ್ಳ ಹಲವಾರು ಅಭ್ಯರ್ಥಿಗಳು ಬೆಂಗಳೂರಿನಲ್ಲಿದ್ದರೂ ನಮಗೆ ಮಾನ್ಯತೆ ನೀಡದೆ ಹೊರಗಡೆಯವರಿಗೆ ಮಾನ್ಯತೆ ನೀಡುವ ಉದ್ದೇಶವೇನು ? ಬೆಂಗಳೂರಿನಲ್ಲಿರುವ ನಮಗೆ ಮಾನ್ಯತೆ ನೀಡದೆ ಇರುವುದಕ್ಕೆ ಯಾವುದಾದರೂ ತಾಂತ್ರಿಕ ಅಡಚಣೆಗಳಿದೆಯೇ ಸ್ವಾಮಿ ?
ಈ ವರ್ಷದ ಸಮಾಜಕಾರ್ಯ ವಿಭಾಗದ Affiliated ಕಾಲೇಜುಗಳ Admission ಅನ್ನು ಗಮನಿಸಿದರೆ ಕೆಲವೊಂದು ಕಾಲೇಜುಗಳಿಗೆ ಕೇವಲ ಒಬ್ಬರು, ಇಬ್ಬರು ವಿದ್ಯಾರ್ಥಿಗಳು ಮಾತ್ರ ಕಾಲೇಜಿಗೆ ಸೇರಿಕೊಂಡಿದ್ದಾರೆ. ಈ ಪರಿಸ್ಥಿತಿಯ ನಿರ್ಮಾಣಕ್ಕೆ ಕಾರಣಕರ್ತರಾರು ? ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದ ಬಹುಪಾಲು ಪ್ರಾಧ್ಯಾಪಕರು ತರಗತಿಗೆ ಹೋಗದೆ ಸಂಬಳ ಎಣಿಸುತ್ತಿದ್ದಾರೆ. ಹೀಗಾದರೆ ಸಮಾಜಕಾರ್ಯ ವಿದ್ಯಾರ್ಥಿಗಳ ಪಾಡೇನು ? ರೋಶನಿ ಸಂಸ್ಥೆಯ ಸಮಾಜಕಾರ್ಯ ವಿದ್ಯಾರ್ಥಿಗಳ ಸಂಘವು ಬೆಂಗಳೂರು ನಗರದ Century Club ನಲ್ಲಿ ದಿನಾಂಕ: 18-10-2013ರಂದು ಸಮಾರಂಭವನ್ನು ಏರ್ಪಡಿಸಿತ್ತು. ಸುಮಾರು 400 ರೋಶನಿ ವಿದ್ಯಾಸಂಸ್ಥೆಯ ಸಮಾಜಕಾರ್ಯದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ರೋಶನಿ ವಿದ್ಯಾಸಂಸ್ಥೆಯ ಸಮಾಜಕಾರ್ಯ ವಿದ್ಯಾರ್ಥಿ ಹಾಗೂ ಕರ್ನಾಟಕ ಸರ್ಕಾರದ ಮಾನ್ಯ ನಗರಾಭಿವೃದ್ಧಿ ಸಚಿವರಾದ ವಿನಯಕುಮಾರ್ ಸೊರಕಿಯವರು ಮಾತನಾಡುತ್ತಾ, ರೋಶನಿ ಸಂಸ್ಥೆಯ ಸಮಾಜಕಾರ್ಯ ವಿದ್ಯಾರ್ಥಿ ಸಂಘವು ಬೆಂಗಳೂರಿನಲ್ಲಿ ಈ ಮಟ್ಟದಲ್ಲಿ ಬೆಳೆದಿದೆ. ಈ ರೀತಿಯಲ್ಲಿ ನಮ್ಮ ಸಂಘ ದೊಡ್ಡ ಮಟ್ಟದಲ್ಲಿ ಬೆಳೆದಿದೆ ಎಂಬುದನ್ನು ನಾನು ಊಹಿಸಿಕೊಂಡಿರಲಿಲ್ಲ ಎಂದರು.
ಪ್ರೊ|| ಡಾ. ಎಚ್. ಎಂ. ಮರುಳಸಿದ್ಧಯ್ಯನವರಿಗೆ ಈ ವರ್ಷ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವುದರ ಮೂಲಕ ಸಮಾಜಕಾ7/6/2017 ಮಾನ್ಯ ಮುಖ್ಯಮಂತ್ರಿಗಳು
ಕರ್ನಾಟಕ ಸರ್ಕಾರ ಮಾನ್ಯರೆ, ನಮಸ್ಕಾರ. ವಿಷಯ: ಕರ್ನಾಟಕದಲ್ಲಿ ಸಮಾಜಕಾರ್ಯ ಶಿಕ್ಷಣ ಮತ್ತು ಪ್ರಯೋಗಗಳನ್ನು ಆರಂಭಿಸಿದ ಪ್ರೊ|| ಡಾ. ಎಚ್. ಎಂ.ಮರುಳಸಿದ್ಧಯ್ಯನವರಿಗೆ ಈ ವರ್ಷ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವುದರ ಮೂಲಕ ಸಮಾಜಕಾರ್ಯ ಕ್ಷೇತ್ರಕ್ಕೆ ಮನ್ನಣೆನೀಡಬೇಕೆಂದು ಕೋರಿಕೆ 'ವೃತ್ತಿಶೀಲ ಸಮಾಜಕಾರ್ಯ' ಕ್ಷೇತ್ರಕ್ಕೆ ಭಾರತೀಯ ಸಂಸ್ಕೃತಿಯ ಭಾಷ್ಯ ಬರೆದು, ಅದಕ್ಕೆ ಸಮರ್ಥವಾದ ಕ್ಷೇತ್ರಕಾರ್ಯ, ಚಿಂತನೆ, ಸಾಹಿತ್ಯ ಸೃಷ್ಟಿ ಮಾಡಿ ದೇಶದಾದ್ಯಂತ 'ಹುಲ್ಲುಬೇರುಗಳ ನಡುವೆ' ಸಮುದಾಯ ಸಂಘಟನೆಗಾಗಿ ಮತ್ತು ಸಮಾಜಕಾರ್ಯ ತತ್ತ್ವದ ಉನ್ನತಿಗಾಗಿ ಸಾಧಕರನ್ನು ಸೃಷ್ಟಿ ಮಾಡಿದ ಧೀಮಂತರು ಪ್ರೊ. ಎಚ್. ಎಂ. ಮರುಳಸಿದ್ಧಯ್ಯನವರು. ನಮ್ಮ ಸಮಾಜ ಇಂದು ಬಹಳ ದುಸ್ಥಿತಿಯಲ್ಲಿದೆ ಎನ್ನುವ ಮಾತು ಎಲ್ಲೆಡೆ ಕೇಳಿಬರುತ್ತಿದೆ. ನಮ್ಮ ಸುದ್ದಿ ಮತ್ತು ದೃಶ್ಯ ಮಾಧ್ಯಮಗಳು ಬಿತ್ತರಿಸುತ್ತಿರುವ ಸಮಾಚಾರಗಳನ್ನು ಅವಲೋಕಿಸಿದರೆ ಅದು ಬಹಳ ಮಟ್ಟಿಗೆ ನಿಜವೆನಿಸುತ್ತದೆ. ಪ್ರತಿ ದಿನ ಪತ್ರಿಕೆಗಳ ಮೂರನೆಯ ಪುಟದಲ್ಲಿ ಅಚ್ಚಾಗುತ್ತಿರುವ ಹಾಗು ದೂರದರ್ಶನ ಚಾನಲ್ಗಳು ಬಿತ್ತರಿಸುತ್ತಿರುವ ವಿಷಯಗಳನ್ನು ಗಮನಿಸಿ. ಕಳ್ಳತನ, ಕೊಲೆ, ಸುಲಿಗೆ, ಭ್ರಷ್ಟಾಚಾರ, ಆತ್ಮಹತ್ಯೆ, ಸ್ತ್ರೀಯರ ಮೇಲಣ ಅತ್ಯಾಚಾರ (ಇತ್ತೀಚೆಗೆ ಇದು ಗಂಡಸರ ಮೇಲೂ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ), ಮುಂತಾದವೇ ಅಲ್ಲಿ ತುಂಬಿರುತ್ತವೆ.
ಪೀಠಿಕೆ:
ವ್ಯಕ್ತಿ ಮತ್ತು ಸಮಾಜದ ನಡುವೆ ಬಿಡಿಸಲಾಗದ ಬಾಂಧವ್ಯ ಇದೆ. ಅವು ಒಂದೇ ನಾಣ್ಯದ ಎರಡು ಮುಖಗಳು. ವ್ಯಕ್ತಿಗಳಿಲ್ಲದೆ ಸಮಾಜವಿಲ್ಲ, ಸಮಾಜವಿಲ್ಲದ ಬದುಕು ಊಹಿಸಲು ಸಾಧ್ಯವಿಲ್ಲ. ಸಮಾಜವೆಂದರೆ, ಮಾನವನ ಸಾಮಾಜಿಕ ಸಂಬಂಧಗಳ ಬಲೆ ಎಂದು ಅರ್ಥೈಸಲಾಗಿದೆ. ಸಮಾಜದ ಅಸ್ತಿತ್ವ, ಉಗಮ ಹಾಗೂ ರಚನೆಯ ಕುರಿತು ಅನೇಕ ವಾದ-ವಿವಾದಗಳಿವೆ. ಆದರೆ ಒಂದು ಮಾತ್ರ ನಿಜ. ಮಾನವ ಸಮಾಜದ ರಚನೆ ಅತ್ಯಂತ ಪುರಾತನವಾದದು. ಕೋಟಿ ಕೋಟಿ ವರ್ಷಗಳ ಹಿಂದೆ ನಿಸರ್ಗ, ಚರಾತರ ವಸ್ತುಗಳು ಪಶು, ಪ್ರಾಣಿ, ಪಕ್ಷಿ, ಜೀವ ರಾಶಿಗಳ ಜೊತೆಗೆ ಮನುಷ್ಯನೂ ಹುಟ್ಟಿದ. ಪ್ರಾಣಿಗಳ ಜೊತೆಗೆ ಅವುಗಳ ಹಾಗೆ ಬದುಕಿದ. ಮಂಗನಿಂದ ಮಾನವ ಎಂದು ನಾವು ಯಾವಾಗಲೂ ಹೇಳುತ್ತೇವೆ. ಮಾನವನ ವರ್ತನೆ ವಿಚಿತ್ರ. ಅದು ಹಿತವಾಗಿರುವಷ್ಟೇ ಅಹಿತವಾಗಿಯೂ ಇರುತ್ತದೆ. ಮನುಷ್ಯರಲ್ಲಿ ಒಳ್ಳೆಯದರ ಜತೆಗೆ ಕೆಟ್ಟ ಗುಣಗಳೂ ಇರುತ್ತವೆ. ನಾವು ಇತರರನ್ನು ಪ್ರೀತಿಸುತ್ತೇವೆ, ಪೋಷಿಸುತ್ತೇವೆ, ಕಾಪಾಡುತ್ತೇವೆ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತೇವೆ. ಅಷ್ಟೇ ಸರಾಗವಾಗಿ ಇತರರ ಮೇಲೆ ಕೋಪಿಸಿಕೊಳ್ಳುತ್ತೇವೆ, ಆಕ್ರಮಣ ಮಾಡುತ್ತೇವೆ; ಹೋರಾಡುತ್ತೇವೆ, ಹೊಡೆಯುತ್ತೇವೆ, ಗಾಯಗೊಳಿಸುತ್ತೇವೆ, ನೋವುಂಟು ಮಾಡುತ್ತೇವೆ. ಹಿಂಸಿಸುತ್ತೇವೆ, ಬೈಯುತ್ತೇವೆ, ಮರ್ಯಾದೆ ಕಳೆಯುತ್ತೇವೆ, ಅವಮಾನಗೊಳಿಸುತ್ತೇವೆ. ಅಷ್ಟೇಕೆ, ಯುದ್ಧ ಮಾಡುತ್ತೇವೆ, ಜನರನ್ನು ಕೊಲ್ಲುತ್ತೇವೆ, ಅಪಾರವಾದ ಕಷ್ಟ ನಷ್ಟಗಳಿಗೆ ಕಾರಣಕರ್ತರಾಗುತ್ತೇವೆ. ನಿಮಗೆ ಆಶ್ಚರ್ಯವಾಗಬಹುದು, ಕಳೆದ 5,600 ವರ್ಷಗಳಲ್ಲಿ ಸುಮಾರು 14,600 ಯುದ್ಧಗಳು ನಡೆದಿವೆಯೆಂದು ಹೇಳಲಾಗಿದೆ. ಕೋಟ್ಯಾಂತರ ಜನರ ಕೊಲೆಯಾಗಿದೆ. ಯಾಕೆ ಹೀಗೆ? ವಿಶ್ವದಲ್ಲಿ ಯಾವ ಪ್ರಾಣಿಯೂ ಅನವಶ್ಯಕವಾಗಿ ಕೊಲ್ಲುವುದಿಲ್ಲ, ಮಾನವರನ್ನು ಬಿಟ್ಟು. ಪ್ರಾಣಿಗಳು ಕೊಲ್ಲುವುದು ಊಟಕ್ಕಾಗಿ, ಮಾನವರು ಕೊಲ್ಲುವುದು ಆಟಕ್ಕಾಗಿ; ಕೆಲವರು ವಿನೋದಕ್ಕಾಗಿ ಬೇಟೆಯಾಡುತ್ತಾರೆ; ಪ್ರಾಣಿಗಳನ್ನು ಕೊಲ್ಲುತ್ತಾರೆ. ಇಂದು ವಿಶ್ವದ ಹಲವೆಡೆ ನಡೆಯುತ್ತಿರುವ ನರಮೇಧಗಳನ್ನು ನೋಡಿದರೆ ಮಾನವ ಎಲ್ಲಾ ಪ್ರಾಣಿಗಳಿಗಿಂತಲೂ ಕಟುಕನೆನಿಸುತ್ತದೆ. ಎಲ್ಲೆಡೆ ನಡೆಯುತ್ತಿರುವ ಭಯೋತ್ಪಾದಕರ ಮತ್ತು ಆತ್ಮಹತ್ಯೆ ದಳದವರ ಘೋರ ಕೃತ್ಯಗಳನ್ನು ಗಮನಿಸಿದರೆ ಮಾನವನಿಗಿಂತ ಹಿಂಸ್ರ ಪ್ರಾಣಿ ಇನ್ನೊಂದಿದೆಯೆ ಎನಿಸುತ್ತದೆ. ಮಾನವರಲ್ಲಿ ಹಿಂಸಾಪ್ರವೃತ್ತಿ ಹುಟ್ಟಿನಿಂದಲೇ ಬಂದಿದೆಯೇನೋ ಅನಿಸುತ್ತದೆ.
ಸಮಾಜಕಾರ್ಯದ ಮೌಲ್ಯಗಳಲ್ಲಿ ನಂಬಿಕೆಯಿಟ್ಟು, ಸಮುದಾಯ ಸಂಘಟನೆಯ ತತ್ವಗಳನ್ನು ಸಮುದಾಯದಲ್ಲಿ ಅಳವಡಿಸುವ ಮೂಲಕ ನಿಜ ಸಮಾಜಕಾರ್ಯವನ್ನು ಆಚರಿಸುತ್ತಿರುವ ಸಮಾನಮನಸ್ಕ ಯುವಜನರ ತಂಡವೇ ಉಸಿರಿಗಾಗಿ ಹಸಿರು. ಸದರಿ ತಂಡಕ್ಕೆ ಸೂಕ್ತ ಮಾರ್ಗದರ್ಶನ ನೀಡಿ ಮುನ್ನಡೆಸುತ್ತಿರುವವರೂ ಸಹ ವೃತ್ತಿಪರ ಸಮಾಜಕಾರ್ಯರ್ತರು ಎಂಬುದು ವಿಶೇಷ. ಮೇಲ್ನೋಟಕ್ಕೆ ಪರಿಸರ ಪ್ರೇಮಿಗಳ ಗುಂಪಾಗಿ ಕಂಡರೂ ಒಳಹೊಕ್ಕು ನೋಡಿದಾಗ ಸಮಾಜಕಾರ್ಯದ ನಿಜವಾದ ಆಚರಣೆ ಅನಾವರಣಗೊಳ್ಳುತ್ತದೆ. ಸಮುದಾಯ ಸಂಘಟನೆಯ ಬಹುಪಾಲು ತತ್ವಗಳನ್ನು ಅಳವಡಿಸಿಕೊಂಡು ಯಶಸ್ಸಿನತ್ತ ಸಾಗುತ್ತಿರುವ ತಂಡಕ್ಕೆ ಸಮಾಜಕಾರ್ಯವೇ ಸ್ಪೂರ್ತಿ. ಸುಸ್ಥಿರ ಅಭಿವೃದ್ಧಿಯಿಂದ ಮಾತ್ರ ಮನುಕುಲದ ಉಳಿವು ಸಾಧ್ಯವೆಂದು ನಂಬಿರುವ ಸದಸ್ಯರು, ತಮ್ಮ ಗುರಿ ಸಾಧನೆಗಾಗಿ ತಮ್ಮಲ್ಲಿರುವ ಅಗಾಧ ಇಚ್ಚಾಶಕ್ತಿಯಲ್ಲಿ ನಂಬಿಕೆಯಿಟ್ಟಿದ್ದಾರೆ. ಹೀಗೆ ತಮ್ಮದೇ ವಿಭಿನ್ನ ಕಾರ್ಯವೈಖರಿಯ ಮೂಲಕ ಮನೆಮಾತಾಗಿರುವ ತಂಡದ ಕಾರ್ಯಗಳಲ್ಲಿ ಎದ್ದುಕಾಣುವ ಸಮಾಜಕಾರ್ಯ ಆಚರಣೆಯ ಹೆಗ್ಗುರುತುಗಳನ್ನು ಗುರುತಿಸುವ ಪ್ರಯತ್ನವೇ ಈ ಲೇಖನ.
ದಿ ಬ್ಯಾನ್ಯನ್ ನ ಸಂಸ್ಥಾಪಕರು ಮತ್ತು ವ್ಯವಸ್ಥಾಪಕ ಟ್ರಸ್ಟ ಜಾಗತೀಕರಣದೊಂದಿಗೆ, ಮಾನಸಿಕ ಆರೋಗ್ಯವೂ ಒಂದು ಪ್ರಮುಖ ಕಳಕಳೀಯ ಕ್ಷೇತ್ರವಾಗಿದೆ ಮತ್ತು ಭಾರತದ ಜನಸಂಖ್ಯೆಯ ಶೇಕಡ 10 ರಿಂದ 12ರಷ್ಟು ಜನರಿಗೆ ಇದರ ನೆರವಿನ ಅವಶ್ಯಕತೆಯಿದೆ. ಇದಕ್ಕಾಗಿ, ನಮ್ಮಲ್ಲಿ ಮಾನಸಿಕ ಅಸ್ವಸ್ಥತೆಗೆ ಕೇವಲ ವೈದ್ಯಕೀಯ ವಿಧಾನದ ಹೆಚ್ಚೆಚ್ಚು ಮನೋವೈದ್ಯರಿದ್ದಾರೆ. ಆದರೆ ಮಾನಸಿಕ ಆರೋಗ್ಯವು ವೈದ್ಯಕೀಯ ವಿಷಯಕ್ಕಿಂತಲೂ ಹೆಚ್ಚಿನದು. ಇದು ಸಾಮಾಜಿಕ ಕಲ್ಪನೆಯೂ ಹೌದು. ವಿವಿಧ ಸಾಮಾಜಿಕ-ಆರ್ಥಿಕ, ರಾಜಕೀಯ, ಕೌಟುಂಬಿಕ ಮತ್ತು ಮಾನಸಿಕ ಪ್ರಕ್ರಿಯೆಗಳು ಮಾನಸಿಕ ಅಸ್ವಸ್ಥೆತೆಗೆ ಕಾರಣವಾಗಿರುತ್ತದೆ. ನಿರ್ಗತಿಕ ಮಹಿಳೆಯರ ಅವಶ್ಯಕತೆಗೆ ಸ್ಪಂದಿಸುವುದಕ್ಕಾಗಿ ದಿ ಬ್ಯಾನ್ಯನ್ 1993 ರಲ್ಲಿ ಚೆನ್ನೈನಲ್ಲಿ ಪ್ರಾರಂಭವಾಯಿತು. ಇದು ಲಾಭದ ಉದ್ದೇಶ ಹೊಂದಿರದ ನೊಂದಾಯಿತ ಸಂಸ್ಥೆಯಾಗಿದೆ, ಇದು ಮಾನಸಿಕ ಅಸ್ವಸ್ಥರಿಗೆ, ಸಮುದಾಯಗಳಲ್ಲಿ ನಿರಾಶ್ರಿತರಾಗಿ ಮತ್ತು ಬಡತನದಿಂದ ಜೀವಿಸುತ್ತಿರುವವರಿಗೆ ಸಮಗ್ರ ಮಾನಸಿಕ ಆರೋಗ್ಯ ಪರಿಹಾರಗಳನ್ನು ಒದಗಿಸುತ್ತದೆ.
ತಿರುಳು
ಸಮಾಜಕಾರ್ಯ ಸ್ನಾತಕೋತ್ತರ ಪದವಿ ಮತ್ತು ಸಂಶೋಧನೆಯ ಹಿನ್ನೆಲೆ ಇರುವ ಡಾ.ಸಿ.ಆರ್.ಗೋಪಾಲ ಸಮಾಜಕಾರ್ಯದ ತಾತ್ತ್ವಿಕ ಸಿದ್ಧಾಂತ-ಶರಣರ ಮತ್ತು ದಾಸರ ಜೀವನ ದೃಷ್ಟಿ ಎಂಬ ಸಂಶೋಧನಾತ್ಮಕ ಕೃತಿಯನ್ನು ರಚಿಸಿದ್ದಾರೆ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಮೈಸೂರು ಪ್ರಕಟಿಸಿರುವ ಈ ಕೃತಿಗೆ ಡಾ. ಎಚ್.ಎಂ. ಮರುಳಸಿದ್ಧಯ್ಯನವರು ಸಮಾಜಕಾರ್ಯದ ತಾತ್ತ್ವಿಕ ಸಿದ್ಧಾಂತಕ್ಕೊಂದು ತಿದ್ದುಪಡಿ ಎಂಬ ತಲೆಬರಹದಡಿ ಮುನ್ನುಡಿಯನ್ನು ನೀಡಿದ್ದಾರೆ. ಆಧುನಿಕ ಸಮಾಜಕಾರ್ಯವನ್ನು ಒಂದು ವೃತ್ತಿ ಎಂದು ಭಾವಿಸಲಾಗುತ್ತದೆ. ವೃತ್ತಿಗೆ ಇರಬೇಕಾದ ಕೆಲವು ಅತೀ ಮುಖ್ಯವಾದ, ಅನಿವಾರ್ಯವಾದ ಹಾಗೆಯೇ ವಿಶಿಷ್ಟವಾದ ವೈಲಕ್ಷಣ್ಯಗಳು ಇರಬೇಕು. ಬೋಧನೆ, ಅನುಸಂಧಾನ, ಪ್ರಯೋಗ, ವಿಧಾನ-ತಂತ್ರಗಳ, ಮೌಲ್ಯ ಸೂತ್ರಗಳ, ತತ್ತ್ವಾದರ್ಶ-ಸಿದ್ಧಾಂತಗಳ ರೂಪಣಿಕೆ, ಅನುಷ್ಠಾನ ಕ್ಷೇತ್ರಗಳ ನಿರ್ಧಾರ, ಸಮಾಜಕಾರ್ಯದಲ್ಲಿ ತೊಡಗಿರುವವರು-ಪ್ರಶಿಕ್ಷಣಾರ್ಥಿಗಳು, ಪ್ರಶಿಕ್ಷಕರು, ಕಾರ್ಯಕರ್ತರು ಮುಂತಾದವರೆಲ್ಲರೂ ಹೊಂದಿರಲೇಬೇಕಾದ ಸೂಕ್ತ ವ್ಯಕ್ತಿತ್ವ, ಇತ್ಯಾದಿಗಳೆಲ್ಲವುಗಳ ಜೊತೆಗೆ, ಸಮಾಜಕಾರ್ಯದಲ್ಲಿ ನಿರತರಾಗಿರುವವರು ತುಂಬಿದ ಆಸಕ್ತಿಯಿಂದ, ಬದ್ಧನಿಷ್ಠೆಯಿಂದ ನಿರಂತರವಾಗಿ ಭಾಗವಹಿಸಲು ಸೂಕ್ತವಾದ ಪ್ರಯೋಗಶಾಲೆಯು ಅತ್ಯಗತ್ಯ. ಹೋಲಿಕೆ ಅಷ್ಟು ಸರಿಯಲ್ಲ ಎಂಬ ಅಭಿಪ್ರಾಯ ಇದ್ದರೂ ವೈದ್ಯಶಾಸ್ತ್ರದ ಶಾಲೆಗೆ ಹೇಗೆ ಒಂದು ಆಸ್ಪತ್ರೆ ಬೇಕೊ, ಇಂಜಿನಿಯರಿಂಗ್ ಶಾಲೆಗೆ ಹೇಗೆ ಒಂದು ಕಾರ್ಯಾಗಾರ (Workshop) ಬೇಕೊ, ಸಮಾಜಕಾರ್ಯ ಶಾಲೆಗೂ ಒಂದು ಪ್ರಯೋಗಾಲಯ ಬೇಕೇಬೇಕಾಗುತ್ತದೆ.
ಗಾಂಧೀಜಿಯ ದೃಷ್ಟಿಯಲ್ಲಿ ಸಮಾಜಕಾರ್ಯ ಎಂದರೆ ಸಮಾಜ ಪರಿವರ್ತನೆಯ ಕಾರ್ಯ. ಸಮಾಜದ ಪರಿವರ್ತನೆಯ ಕಾರ್ಯ ಎಂದರೆ ಹೊಸ ಮೌಲ್ಯಗಳ ಸ್ಥಾಪನೆ. ಹಳೆಯ ಕಂದಾಚಾರದ, ಸವಕಲು ಮೌಲ್ಯಗಳನ್ನು ಕಿತ್ತೊಗೆಯುವುದು.
ಮಹಿಳೆಯರನ್ನು ಸಮಾಜ ನಿಕೃಷ್ಟವಾಗಿ ಕಾಣುತ್ತಿತ್ತು. ಆಕೆಯ ಸ್ಥಾನ ಮನೆಯಲ್ಲೇ ಹೊರತು ಸಮಾಜದ ಆಗು ಹೋಗುಗಳಲ್ಲಲ್ಲ ಎಂದು ಅಂದಿನ ಸಮಾಜ ಭಾವಿಸಿತ್ತು. ಮಕ್ಕಳನ್ನು ಪೋಷಿಸುವುದಕ್ಕೆ, ಮನೆಯ ಒಳಗಿನ ವ್ಯವಹಾರಗಳನ್ನು ನೋಡಿಕೊಳ್ಳುವುದಕ್ಕೆ ಮಾತ್ರ ಆಕೆಯನ್ನು ಬಳಸಲಾಗುತ್ತಿತ್ತು. ಆಕೆಗೆ ಮತ ನೀಡುವ ಹಕ್ಕಿರಲಿಲ್ಲ. ಸಾರ್ವಜನಿಕ ಜೀವನದಲ್ಲಿ ಗಂಡನಿಗೆ ಹೊಯಿಕೈಯಾಗಿ ಬೆರೆಯುವುದಕ್ಕೆ ಅವಕಾಶ ಇರಲಿಲ್ಲ. ಸ್ತ್ರೀಯರಿಗೆ ವಿದ್ಯಾಭ್ಯಾಸ ಮಾಡುವ ಅವಕಾಶವಿರಲಿಲ್ಲ. ಬಾಲವಿಧವೆಯರಿಗೆ ತಮ್ಮ ಕಾಲ ಮೇಲೆ ನಿಲ್ಲುವ ಸ್ವಾತಂತ್ರ್ಯವಾಗಲಿ ಅದಕ್ಕೆ ಬೇಕಾದ ಶಿಕ್ಷಣವಾಗಲಿ ದೊರಕುತ್ತಿರಲಿಲ್ಲ. ಬಾಲ್ಯದಲ್ಲಿ ಸ್ತ್ರೀಯರು ತಾಯಿ ತಂದೆಗಳ ಆಶ್ರಯದಲ್ಲಿ, ಮದುವೆಯಾದ ಮೇಲೆ ಗಂಡನ ಆಶ್ರಯದಲ್ಲಿ, ಗಂಡ ಸತ್ತ ಮೇಲೆ ಮಕ್ಕಳ ಆಶ್ರಯದಲ್ಲಿ ಪಂಗುವಿನಂತೆ ಬದುಕಬೇಕು ಎಂಬ ಕಟ್ಟಳೆ ಇತ್ತು. ಈ ಕಟ್ಟಳೆಯನ್ನು ಇತ್ತೀಚಿನವರೆಗೂ ಉಳಿಸಿಕೊಂಡು ಬರಲಾಗುತ್ತಿತ್ತು. ಈಶ್ವರಚಂದ್ರ ವಿದ್ಯಾಸಾಗರರು ವಿಧವಾ ವಿವಾಹವನ್ನು ಜಾರಿಗೆ ತಂದರು. ರಾಜಾರಾಂ ಮೋಹನರಾಯರು ಸತೀ ಪದ್ಧತಿಯನ್ನು ಕಾನೂನಿನ ಮೂಲಕ ನಿಷೇಧಿಸಲು ನೆರವಾದರು. ಫುಲೆ ಮಹಾಶಯರು ಸ್ತ್ರೀಯರಿಗೆ ವಿದ್ಯಾಶಾಲೆಗಳನ್ನ ತೆರೆದು ಉಪಕಾರಮಾಡಿದರು. ಗಾಂಧೀಜಿ, ಮನೆಯಲ್ಲಿ ಬಂಧಿಗಳಾಗಿದ್ದ ಹೆಣ್ಣು ಮಕ್ಕಳನ್ನು ಮಕ್ಕಳ ಶಿಕ್ಷಣ ಕಾರ್ಯಕ್ಕೆ,ಅನಾರೋಗ್ಯದಿಂದ ನರಳುವ ಗ್ರಾಮೀಣ ಜನರಿಗೆ ಆರೋಗ್ಯ, ನೈರ್ಮಲ್ಯ ಇವುಗಳ ಬಗೆಗೆ ಶಿಕ್ಷಣ ನೀಡುವ ಕೆಲಸಕ್ಕೆ, ಗ್ರಾಮೀಣ ರೋಗಿಗಳಿಗೆ ಅವರವರ ಮನೆಗೇ ಹೋಗಿ ಔಷಧೋಪಚಾರ ಮಾಡುವುದಕ್ಕೆ ಬೇಕಾದ ತರಬೇತಿಯನ್ನು ನೀಡಿದರು. ಹೆಣ್ಣು ಮಕ್ಕಳನ್ನು ಪರ ಊರುಗಳಲ್ಲಿ ವೈದ್ಯಕೀಯ ಸೇವೆ ನೀಡಲು ಕರೆತಂದರು. ಮೊದಲು ಗಾಂಧೀಜಿ ತಮ್ಮ ಹೆಂಡತಿ ಕಸ್ತೂರಿ ಬಾ ಅವರಿಗೆ ತರಬೇತಿ ನೀಡಿ ಅವರ ನೇತೃತ್ವದಲ್ಲಿ ಹೆಣ್ಣುಮಕ್ಕಳ ಪಡೆ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯಕ್ಕೆ ಸಂಬಂಧಪಟ್ಟ ಕೆಲಸಗಳನ್ನು ಮಾಡಲು ಅನುಗೊಳಿಸಿದರು. `ಸಮಾಜಸೇವೆ ಎಂಬ ಪದವನ್ನು ನಾವು ಅನಾದಿಕಾಲದಿಂದಲೂ ಕೇಳುತ್ತ ಬಂದಿದ್ದೇವೆ. ಜನಸೇವೆಯೇ ಜನಾರ್ದನ ಸೇವೆ ಎಂಬಂತೆ ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ರೀತಿಯಲ್ಲಿ ಸಮಾಜಸೇವೆಯನ್ನುಜನರಿಗೋಸ್ಕರ ಮಾಡುತ್ತ ಬಂದಿದ್ದಾನೆ. ಸಮಾಜ ಸೇವಾ ಕಾರ್ಯಕ್ರಮಗಳು ಪ್ರಸ್ತುತಿಯಲ್ಲಿರುವುದನ್ನು ನಾವು ಇಂದಿಗೂ ಕೂಡ ಕಾಣಬಹುದು. ಸಮಾಜ ಸೇವೆಯನ್ನು ನಿಸ್ವಾರ್ಥ ಸೇವೆ ಎಂದರೂ ತಪ್ಪಾಗಲಾರದು.
ಡಾ. ಎಂ. ಚಿದಾನಂದಮೂರ್ತಿ (ಖ್ಯಾತ ಸಂಶೋಧಕರು)
ರಾಷ್ಟ್ರಮಟ್ಟದ ಸಮಾಜವಿಜ್ಞಾನಿ ಸಮಾಜಕಾರ್ಯಕರ್ತ ನನ್ನ ನೆಚ್ಚಿನ ಸ್ನೇಹಿತ ಡಾ. ಎಚ್.ಎಂ. ಮರುಳಸಿದ್ಧಯ್ಯನವರ ಬಗ್ಗೆ ಬರೆದಿರುವ ಪುಸ್ತಕ ಸರಳವಾಗಿ, ಚಿಂತನಾಪರವಾಗಿ ಮೂಡಿ ಬಂದಿರುವುದುಸಂತೋಷದ ವಿಚಾರ. ಪ್ರತಿದಿನ ನಾನು ಅವರೊಂದಿಗೆ ದೂರವಾಣಿಯ ಮೂಲಕ ಸಂಪರ್ಕದಲ್ಲಿದ್ದೇನೆ. ನನ್ನ ಸಂದೇಹ, ಚಿಂತನೆಗಳನ್ನು ಅವರೊಂದಿಗೆ ಹಂಚಿಕೊಳ್ಳುತ್ತಲೇ ಇರುತ್ತೇನೆ. ನಾನು ಒಬ್ಬ ಕನ್ನಡಪ್ರಾಧ್ಯಾಪಕನಾಗಿದ್ದರೂ, ಎಷ್ಟೋ ಸಂದರ್ಭಗಳಲ್ಲಿ ನನಗಿಂತ (ಕನ್ನಡದಲ್ಲಿ ಹೆಚ್ಚು ತಿಳಿದವರಂತೆ) ಗೋಚರಿಸುತ್ತಾರೆ. ಪೀಠಿಕೆ:
ವ್ಯಕ್ತಿ ಮತ್ತು ಸಮಾಜದ ನಡುವೆ ಬಿಡಿಸಲಾಗದ ಬಾಂಧವ್ಯ ಇದೆ. ಅವು ಒಂದೇ ನಾಣ್ಯದ ಎರಡು ಮುಖಗಳು. ವ್ಯಕ್ತಿಗಳಿಲ್ಲದೆ ಸಮಾಜವಿಲ್ಲ, ಸಮಾಜವಿಲ್ಲದ ಬದುಕು ಊಹಿಸಲು ಸಾಧ್ಯವಿಲ್ಲ. ಸಮಾಜವೆಂದರೆ, ಮಾನವನ ಸಾಮಾಜಿಕ ಸಂಬಂಧಗಳ ಬಲೆ ಎಂದು ಅರ್ಥೈಸಲಾಗಿದೆ. ಸಮಾಜದ ಅಸ್ತಿತ್ವ, ಉಗಮ ಹಾಗೂ ರಚನೆಯ ಕುರಿತು ಅನೇಕ ವಾದ-ವಿವಾದಗಳಿವೆ. ಆದರೆ ಒಂದು ಮಾತ್ರ ನಿಜ. ಮಾನವ ಸಮಾಜದ ರಚನೆ ಅತ್ಯಂತ ಪುರಾತನವಾದದು. ಕೋಟಿ ಕೋಟಿ ವರ್ಷಗಳ ಹಿಂದೆ ನಿಸರ್ಗ, ಚರಾತರ ವಸ್ತುಗಳು ಪಶು, ಪ್ರಾಣಿ, ಪಕ್ಷಿ, ಜೀವ ರಾಶಿಗಳ ಜೊತೆಗೆ ಮನುಷ್ಯನೂ ಹುಟ್ಟಿದ. ಪ್ರಾಣಿಗಳ ಜೊತೆಗೆ ಅವುಗಳ ಹಾಗೆ ಬದುಕಿದ. ಮಂಗನಿಂದ ಮಾನವ ಎಂದು ನಾವು ಯಾವಾಗಲೂ ಹೇಳುತ್ತೇವೆ. ಮಾನವನ ವಿಕಸನ ಹಂತ ಹಂತವಾಗಿ ನಡೆಯಿತು. ಪ್ರಾಣಿಗಳಿಲ್ಲವೂ ಮಾನವ ಅತ್ಯಂತ ಶ್ರೇಷ್ಠ ಪ್ರಾಣಿ, ನಗುವ, ಭಾವಿಸುವ ಹಾಗೂ ವೈಚಾರಿಕ ಶಕ್ತಿಯಿಂದಾಗಿ ಮನುಷ್ಯನು ಶ್ರೇಷ್ಠನಾದ. ಮೂಲತಃ ಪ್ರಾಣಿಗಳ ಅಗತ್ಯತೆಗಳನ್ನು ಹೊಂದಿರುವ ಮಾನವ ತನ್ನ ಭಿನ್ನತೆಯಿಂದಾಗಿ, ಶ್ರೇಷ್ಠತೆಯಿಂದಾಗಿ ಮಾನವ ಅಗತ್ಯತೆಗಳನ್ನು ಕಂಡುಕೊಂಡ. ಅದರಲ್ಲಿ ಸಮಾಜ, ಸಾಮಾಜಿಕ ಬದುಕು ಅತ್ಯಂತ ಅಗತ್ಯ ಹಾಗೂ ಅನಿವಾರ್ಯವಾಗಿ ಮಾಡಿಕೊಂಡ. ಸಾಮಾಜಿಕ ಜೀವಿಯಾದ ಮಾನವ ತನ್ನ ಬದುಕನ್ನು ಹಸನಾಗಿಸಿಕೊಳ್ಳಲು ಸಹಜೀವನ, ಸಂಘ ಜೀವನವನ್ನು ಆರಂಭಿಸಿದ. ಅನೇಕ ಗುಂಪು, ಸಂಘ ಸಂಸ್ಥೆಗಳನ್ನು ಕಟ್ಟಿಕೊಂಡ. ಜಾತಿ, ಸಮುದಾಯ ಹಾಗು ಧರ್ಮಗಳು, ಮಾನವನ ಬದುಕನ್ನು ರೂಪಿಸುವ ಮೂಲಕ ಒಂದು ವ್ಯವಸ್ಥೆಗೆ ಒಳಪಡಿಸಿದವು. ಇಂದಿಗೂ ಅವು ತಮ್ಮ ಪ್ರಭಾವ ಹಾಗು ನಿಯಂತ್ರಣವನ್ನು ಹೊಂದಿವೆ. ನಮ್ಮ ಸಮಾಜ ಇಂದು ಬಹಳ ದುಸ್ಥಿತಿಯಲ್ಲಿದೆ ಎನ್ನುವ ಮಾತು ಎಲ್ಲೆಡೆ ಕೇಳಿಬರುತ್ತಿದೆ. ನಮ್ಮ ಸುದ್ದಿ ಮತ್ತು ದೃಶ್ಯ ಮಾಧ್ಯಮಗಳು ಬಿತ್ತರಿಸುತ್ತಿರುವ ಸಮಾಚಾರಗಳನ್ನು ಅವಲೋಕಿಸಿದರೆ ಅದು ಬಹಳ ಮಟ್ಟಿಗೆ ನಿಜವೆನಿಸುತ್ತದೆ. ಪ್ರತಿ ದಿನ ಪತ್ರಿಕೆಗಳ ಮೂರನೆಯ ಪುಟದಲ್ಲಿ ಅಚ್ಚಾಗುತ್ತಿರುವ ಹಾಗು ದೂರದರ್ಶನ ಚಾನಲ್ಗಳು ಬಿತ್ತರಿಸುತ್ತಿರುವ ವಿಷಯಗಳನ್ನು ಗಮನಿಸಿ. ಕಳ್ಳತನ, ಕೊಲೆ, ಸುಲಿಗೆ, ಭ್ರಷ್ಟಾಚಾರ, ಆತ್ಮಹತ್ಯೆ, ಸ್ತ್ರೀಯರ ಮೇಲಣ ಅತ್ಯಾಚಾರ (ಇತ್ತೀಚೆಗೆ ಇದು ಗಂಡಸರ ಮೇಲೂ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ), ಮುಂತಾದವೇ ಅಲ್ಲಿ ತುಂಬಿರುತ್ತವೆ. ಇದನ್ನೆಲ್ಲಾ ಗಮನಿಸಿದಾಗ ನಮ್ಮದು ರೋಗಿಷ್ಠ ಸಮಾಜ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಈ ಅಭಿಪ್ರಾಯದಲ್ಲಿ ಕೊಂಚ ಉತ್ಪ್ರೇಕ್ಷೆ ಇರಬಹುದು. ಮೇಲೆ ಹೇಳಿದ್ದೆಲ್ಲಾ ಸಂಪೂರ್ಣ ನಿಜವಾಗಿದ್ದರೆ, ನಾನು ಇದನ್ನು ಬರೆಯಲು ಬದುಕಿರುತ್ತಿರಲಿಲ್ಲ; ಓದಲು ನೀವೂ ಇರುತ್ತಿರಲಿಲ್ಲ. ಯುದ್ಧ, ಕೊಲೆ, ಸುಲಿಗೆ, ಕಳ್ಳತನ, ಅತ್ಯಾಚಾರಗಳು ನಡೆಯುತ್ತಿವೆ. ನಿಜ. ಅವು ಎಲ್ಲಾ ಕಾಲದಲ್ಲೂ ಇದ್ದವೆ. ಸುಮಾರು ಕಳೆದ 5,600 ವರ್ಷಗಳಲ್ಲಿ 14,600 ಯುದ್ಧಗಳು ನಡೆದಿರುವುದಾಗಿ ಇತಿಹಾಸ ಹೇಳುತ್ತದೆ. ಕ್ರೌರ್ಯ, ಆಕ್ರಮಣ ಎಲ್ಲಾ ಜೀವಿಗಳಲ್ಲೂ ಕಂಡುಬರುವ ಒಂದು ಹುಟ್ಟುಗುಣ. ಆದರೆ, ಒಟ್ಟಾರೆಯಾಗಿ ನೋಡಿದರೆ ಅವುಗಳ ಸಂಭವನೀಯತೆಯ ಸಂಖ್ಯೆ ಬಹಳ ಕಡಮೆ. ಅಂಥ ದುಷ್ಕೃತ್ಯಗಳಲ್ಲಿ ತೊಡಗುವ ಜನಗಳ ಸಂಖ್ಯೆ ಅಷ್ಟೇನು ಹೆಚ್ಚಾಗಿರಲಿಕ್ಕಿಲ್ಲ; ಅವರ ಸಂಖ್ಯೆ ಇಡೀ ಸಮಾಜದಲ್ಲಿ ಸುಮಾರು ಶೇಕಡ ಎರಡರಿಂದ ಐದರವರೆಗೆ ಇರಬಹುದು.
ಐ.ಎ.ಎಸ್. ಅಧಿಕಾರ ಮತ್ತು ಸಾಮಾಜಿಕ ಸ್ಥಾನಮಾನ, ಎದುರಲ್ಲಿ ಕಂಡರೆ ಸಾಕು ಎದ್ದು ನಿಂತು ಕೈ ಮುಗಿವ ಜನ,ಅಬ್ಬಾ! ನೆನೆಸಿಕೊಂಡರೆ ಏನೋ ಒಂದು ತರಹದ ಸಂತೋಷ. ಇಂತಹ ಅಧಿಕಾರ, ಗೌರವ, ಮನ್ನಣೆಗಳನ್ನು ಬೇಡವೆನ್ನುವುದು ಯಾರಿಗಾದರು ಸಾಧ್ಯವೇ? ಇಲ್ಲಪ್ಪ ಎನ್ನುವುದು ಸಾಮಾನ್ಯವಾಗಿ ಎಲ್ಲರ ಬಾಯಿಯಿಂದ ಕೇಳಿಬರುವ ಉತ್ತರ. ಆ ರೀತಿಯ ತೀರ್ಮಾನತೆಗೆದುಕೊಳ್ಳುವ ದಿಟ್ಟತನ ಕೇವಲ ಅಪರೂಪ ಮತ್ತು ಅಸಾಧ್ಯರು ಎನಿಸುವಂತಹ ಕೆಲವೇ ಕೆಲವು ವ್ಯಕ್ತಿಗಳಿಗೆ ಮಾತ್ರ ಸಾಧ್ಯ. ಅಂತಹ ಅಸಮಾನ್ಯರ ಸಾಲಿನಲ್ಲಿ ಸೇರಿಸಬಹುದಾದಂತ ಹೆಸರೇ ಅರುಣಾರಾಯ್. ಇವರನ್ನು ಸಮಾಜ ಕಾರ್ಯದಅರುಣೋದಯ ಎಂದರೆ ತಪ್ಪಾಗಲಾರದು. ಇವರು ತಮ್ಮ ಜಾಣ್ಮೆ, ಬುದ್ದಿಶಕ್ತಿಗೆ ದೊರೆತ ಐ.ಎ.ಎಸ್. ಅಧಿಕಾರ ತೊರೆದು ಸಾಮಾಜಿಕಕಾರ್ಯಕರ್ತೆಯಾಗಿ ಸಲ್ಲಿಸಿದ ಸೇವೆ, ಕೊಡುಗೆ ಅಪಾರ.
ಸಾಮಾಜಿಕ ಸಮಸ್ಯೆಯಾಗುತ್ತಿರುವ ಲೈಂಗಿಕಾಪರಾಧ ಮತ್ತು ಏಡ್ಸ್ ರೋಗವನ್ನು ತಡೆಯುವ ಹಿನ್ನೆಲೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಲೈಂಗಿಕ ಶಿಕ್ಷಣದ ಅವಶ್ಯಕತೆ ತಿರುಳು
ಲೈಂಗಿಕಾಪರಾಧ ಮತ್ತು ಏಡ್ಸ್ ರೋಗ ಸಮಾಜವನ್ನು ಆವರಿಸುತ್ತಿದೆ. ಈ ಪಿಡುಗನ್ನು ನಿವಾರಿಸಲು ಸರಕಾರವು ಪೂರ್ಣ ಸಫಲತೆಯನ್ನು ಕಾಣುತ್ತಿಲ್ಲ. ಆ ಹಿನ್ನೆಲೆಯಲ್ಲಿ ಈ ಸಮಸ್ಯೆಯನ್ನು ನಿವಾರಿಸುವ ಶಿಕ್ಷಣದ ಪದ್ಧತಿಯನ್ನು ಪ್ರಾಚೀನ ಶಾಸ್ತ್ರಗಳು ಕೊಟ್ಟಿವೆ. ಈ ವಿಚಾರಧಾರೆಯನ್ನು ಸಂಶೋಧನಾತ್ಮಕವಾಗಿ ಸರಕಾರಕ್ಕೆ ಮತ್ತು ಶಿಕ್ಷಣತಜ್ಞರಿಗೆ ತಿಳಿಸಿ, ಇಂದಿನ ಶಿಕ್ಷಣದಲ್ಲಿ ಈ ಶಿಕ್ಷಣವನ್ನು ಕೂಡ ಅಳವಡಿಸಿ, ಸಮಾಜದ ಯುವಜನರಿಗೆ ತಿಳಿಸುವ ಯೋಗ್ಯ ಯೋಜನೆ ಕೈಗೊಳ್ಳುವ ಮೂಲಕ ಸಾಮಾಜಿಕ ಸಮಸ್ಯೆಯನ್ನು ಪರಿಹರಿಸಲು ಪೂರಕವಾದ ವಿಶೇಷ ಸಂಶೋಧನಾತ್ಮಕವಾದ ಲೇಖನ. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|