ಅವಸಾನದತ್ತ ಸಮಾಜಕಾರ್ಯ ಶಿಕ್ಷಣ ಲೇಖನಕ್ಕೆ ಸಂಬಂಧಿಸಿದಂತೆ ಸಮಾಜಕಾರ್ಯ ಕ್ಷೇತ್ರದ ಕೆಲವು ಮಿತ್ರರು ಕರೆಮಾಡಿ ಈ ಲೇಖನವನ್ನು ಬರೆದಿದ್ದು ಯಾರು ಎಂದು ಕೇಳಿದರು. ಈಗಾಗಲೇ ಈ ಲೇಖನ ಬರೆದವರಿಗೆ ನಾವು ನಿಮ್ಮ ಹೆಸರನ್ನು ಬೇರೆಯವರಿಗೆ ಹೇಳುವುದಿಲ್ಲ ಎಂಬ ಭರವಸೆಯನ್ನು ನೀಡಿರುವುದರಿಂದ ನಾವು ಈ ಲೇಖಕರ ಹೆಸರನ್ನು ಬಹಿರಂಗ ಪಡಿಸುತ್ತಿಲ್ಲ. ಹಾಗೆಯೇ ಈ ಲೇಖನದ ಬಗ್ಗೆ ಹಲವರು ಮೆಚ್ಚುಗೆಯ ಮಾತುಗಳನ್ನು ದೂರವಾಣಿ ಕರೆಯ ಮೂಲಕ ತಿಳಿಸಿದರು ಹಾಗೂ ಅವರು ಈ ಲೇಖನ ಪ್ರಸ್ತುತ ಸಮಯಕ್ಕೆ ಸೂಕ್ತವಾಗಿದೆ ಎಂದು ಹೇಳಿದರು. ಯಾವುದೇ ಲೇಖನಗಳಾಗಲಿ ಯಾರೊಬ್ಬರನ್ನು ಕುರಿತು, ಯಾರೊಬ್ಬರಿಗೂ ನೋವಾಗಲಿ ಎಂಬ ಉದ್ದೇಶದಿಂದ ಪ್ರಕಟಿಸುವುದಿಲ್ಲ. ಅಕಸ್ಮಾತ್ ಯಾರೊಬ್ಬರಿಗೋ ನೋವಾದರೆ, ನಮ್ಮನ್ನೇ ಕುರಿತು ಬರೆದಿದ್ದಾರೆ ಎಂದುಕೊಂಡ ಊಹೆಗಳಿಗೆ ನಮ್ಮ ಪತ್ರಿಕೆ ಜವಾಬ್ದಾರರಲ್ಲ. ಇಲ್ಲಿ ವ್ಯಕ್ತಿಗಿಂತ ಸಮಾಜಕಾರ್ಯ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತೇವೆ ಎಂಬುದನ್ನು ಸ್ಪಷ್ಟಪಡಿಸಲು ನಮ್ಮ ಪತ್ರಿಕೆ ಬಯಸುತ್ತದೆ. ಕೆಲವೊಮ್ಮೆ ಕೆಲವೊಬ್ಬರು ಕರೆಮಾಡಿ xxxxx ಪ್ರೊಫೆಸರ್ ಒಬ್ಬರು ಸೆಬಾಟಿಕಲ್ 2 ವರ್ಷ ರಜೆ ತೆಗೆದುಕೊಂಡು ಯಾವ ಪುಸ್ತಕವನ್ನೂ ಬರೆಯಲಿಲ್ಲ. ಅವರ ಬಗ್ಗೆ ಬರೆಯಿರಿ ಎನ್ನುತ್ತಾರೆ. ಕೆಲವೊಬ್ಬರು ನಮ್ಮ ಪ್ರೊಫೆಸರ್ ನಮ್ಮ ತರಗತಿಯ ವಿದ್ಯಾರ್ಥಿನಿಯ ಮೇಲೆ ಕಣ್ಣು ಹಾಕಿದ್ದರು ಅವರ ಮೇಲೆ ಬರೆಯಿರಿ ಎನ್ನುತ್ತಾರೆ. ಹೀಗೆ ಹಲವಾರು ವಿಚಾರಗಳು ವೈಯಕ್ತಿಕವಾಗಿ ದೂರವಾಣಿ ಕರೆ ಮೂಲಕ ಹೇಳುತ್ತಾರೆ. ಈ ತರಹದ ವಿಚಾರಗಳನ್ನು ದಯಮಾಡಿ ಬರೆದು ಕಳುಹಿಸಿದಲ್ಲಿ ಮಾತ್ರ ಅಂತಹವರ ಹೆಸರನ್ನು ಪ್ರಕಟಿಸದೆ ಅವರ ಲೇಖನವನ್ನು ಮಾತ್ರ ಪ್ರಕಟಿಸಲಾಗುವುದು. ಇಂತಹ ವಿಚಾರಗಳಲ್ಲಿ ಕೋರ್ಟ್ ಮೆಟ್ಟಿಲೇರಿದಾಗ ಮಾತ್ರ ಲೇಖಕರ ಹೆಸರನ್ನು ಬಹಿರಂಗಪಡಿಸಲಾಗುವುದು. ಲೇಖನಗಳಿಗೆ ಲೇಖಕರೇ ಜವಾಬ್ದಾರರು. ಲೇಖನಗಳನ್ನು ನಮ್ಮ ಸಂಪಾದಕೀಯ ಮಂಡಳಿಯ ತೀರ್ಮಾನದ ಮೇಲೆ ಪ್ರಕಟಿಸುವ ನಿರ್ಧಾರ ಕೈಗೊಳ್ಳಲಾಗುವುದು.
ಈ ನಮ್ಮ ಪತ್ರಿಕೆಯ ವೇದಿಕೆಯಲ್ಲಿ ಅನಿಸಿಕೆ, ಅಭಿಪ್ರಾಯ, ಟೀಕೆ, ಆರೋಗ್ಯಾತ್ಮಕ ಚರ್ಚೆ ಎಲ್ಲದಕ್ಕೂ ಅವಕಾಶ ನೀಡಿದ್ದೇವೆ. ಎಲ್ಲರಿಗೂ ಅವಕಾಶ ಕಲ್ಪಿಸಿದ್ದೇವೆ. ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಸಮಾಜಕಾರ್ಯ ಕ್ಷೇತ್ರದ ಬೆಳವಣಿಗೆಗೆ ಶ್ರಮಿಸುವ ಕಾರ್ಯ ನಮ್ಮೆಲ್ಲರದ್ದಾಗಿರಬೇಕು. ಈ ಮೇಲ್ಕಂಡ ಲೇಖನಕ್ಕೆ ಸಮಾಜಕಾರ್ಯ ಕ್ಷೇತ್ರದ ಪ್ರಾಧ್ಯಾಪಕರು ಮೌನವಾಗಿ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಸಮಾಜಕಾರ್ಯ ಎತ್ತ ಸಾಗುತ್ತಿದೆ ಎಂಬುದರ ಸಂಕೇತ. 5 ವರ್ಷಗಳ ಅವಧಿಯಲ್ಲಿ ನಮ್ಮ ಪತ್ರಿಕೆಗೆ ಸಿಗಬೇಕಾದ ಬೆಂಬಲ, ಪ್ರೋತ್ಸಾಹ ಕರ್ನಾಟಕದ ಮಟ್ಟಿಗೆ ಹಾಗೂ ಸಮಾಜಕಾರ್ಯ ಪ್ರಾಧ್ಯಾಪಕರಿಂದ, ಸಮಾಜಕಾರ್ಯ ವೃತ್ತಿಪರರಿಂದ ಸಿಗದಿದ್ದರೂ ಮುನ್ನಡೆದಿದ್ದೇವೆ. ಈ ನಮ್ಮ ಪ್ರಯತ್ನಕ್ಕೆ ಇನ್ನಾದರೂ ಬೆಂಬಲಿಸಿ, ನಮ್ಮ ಪತ್ರಿಕೆಯ ಚಂದಾದಾರರಾಗಿ ಹಾಗೂ ವಿದ್ಯಾರ್ಥಿಗಳಿಗೂ ಪತ್ರಿಕೆಯನ್ನು ತಲುಪಿಸುವ ಕೆಲಸವಾಗಲಿ ಹಾಗೂ ಸಮಾಜಕಾರ್ಯ ಕ್ಷೇತ್ರದ ಬೆಳವಣಿಗೆಗೆ ಸಹಕರಿಸಿ. ರಮೇಶ ಎಂ.ಎಚ್. ಸಂಪಾದಕರು ಸಮಾಜಕಾರ್ಯದ ಹೆಜ್ಜೆಗಳು
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
![]()
|
![]()
|
![]()
|
![]()
|
SITE MAP
SitePOSH |
NIRATHANKAOUR OTHER WEBSITESSubscribe |
HR and Employment Law Classes - Every Fortnight
Stay updated and informed by joining our WhatsApp group for HR and Employment Law Classes - Every Fortnight.
The Zoom link for the sessions will be shared directly in the group. |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |