ಸಮಾಜಕಾರ್ಯ ಶಿಕ್ಷಣವು ಒಂದು ಪ್ರತ್ಯೇಕ ವೃತ್ತಿಪರ ಶಿಕ್ಷಣವಾಗಿ ಗುರುತಿಸಿಕೊಂಡಿದ್ದರೂ ಇಂದಿಗೂ ಸರಿಯಾದ ಮಾನ್ಯತೆ ಸಿಗದೇ ಇರುವುದು ವಿಪರ್ಯಾಸವೇ ಸರಿ. ಇದಕ್ಕೆ ಮೂಲಕಾರಣ ಸಮಾಜಕಾರ್ಯ ಶಿಕ್ಷಣದಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ವಿಧಾನಗಳಿದ್ದಾಗಿಯೂ ಅವುಗಳ ಕ್ಷೇತ್ರಕಾರ್ಯದಲ್ಲಿನ ಆಚರಣೆಯಲ್ಲಿ ವಿಫಲತೆಗೊಂಡಿರುವುದು ಹಾಗೂ ಆಚರಣೆಯಲ್ಲಿ ದೇಶೀಕರಣಕ್ಕೆ ಬದಲಾಗಿ ಪಾಶ್ಚಾತ್ಯ ಪರಿಕಲ್ಪನೆಯನ್ನು ಆಧಾರವಾಗಿರಿಸಿಕೊಂಡಿರುವುದೇ ಆಗಿದೆ. ಆದ್ದರಿಂದ ನನ್ನ ವಾದ ಖಂಡಿತವಾಗಿಯೂ ಪ್ರಸ್ತುತ ಸಮಾಜಕಾರ್ಯ ಕ್ಷೇತ್ರಕಾರ್ಯದಲ್ಲಿ ಬದಲಾವಣೆ ಅನಿವಾರ್ಯ ಹಾಗೂ ಆವಶ್ಯವೆನಿಸುತ್ತದೆ. ಸಮಾಜಕಾರ್ಯದಲ್ಲಿನ ತರಬೇತಿಯು ಸಮಾಜಕಾರ್ಯ ಪ್ರಶಿಕ್ಷಣಾರ್ಥಿಗಳನ್ನು ಉದ್ಯೋಗಸ್ಥರನ್ನಾಗಿಸುವುದರೊಂದಿಗೆ ಅವರಲ್ಲಿ ವೃತ್ತಿಪರ ಆಚರಣೆಯ ಸವಾಲುಗಳು ಹಾಗೂ ಸಂದರ್ಶನಗಳನ್ನು ವಿಶ್ವಾಸದೊಂದಿಗೆ ಎದುರಿಸುವಂತೆ ಮಾಡುತ್ತದೆ. ವ್ಯಕ್ತಿಗಳು, ಗುಂಪುಗಳು ಹಾಗೂ ಸಮುದಾಯಗಳು ತಮ್ಮ ಸತ್ತ್ವಗಳನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳಲು ಮತ್ತು ತಮ್ಮ ಬಲಹೀನತೆಯನ್ನು ಸಂಪನ್ಮೂಲಗಳ ಸದ್ಬಳಕೆಯಿಂದ ಹೋಗಲಾಡಿಸಿಕೊಂಡು, ಜೀವನವನ್ನು ಹೆಚ್ಚು ಸಮರ್ಪಕವಾಗಿ ಹಾಗೂ ಕ್ರಿಯಾತ್ಮಕವಾಗಿಸಿಕೊಳ್ಳಲು ಅವುಗಳೊಂದಿಗೆ ಸರಿಯಾಗಿ ಹೊಂದಾಣಿಕೆ ಮಾಡಿಕೊಳ್ಳ್ಳುವುದೇ ಸಮಾಜಕಾರ್ಯದ ಗುರಿಗಳಾಗಿವೆ.
ಸಮಾಜಕಾರ್ಯವು ಒಂದು ವೃತ್ತಿಪರವಾಗಿ ತರಬೇತಿ ನೀಡಲು 1878 ರಲ್ಲಿ ಅಮೇರಿಕಾದ ಸಿ.ಒ.ಎಸ್. ಪ್ರಶಿಕ್ಷಣ ತರಬೇತಿಯ (Apprentice training) ರೂಪದಲ್ಲಿ ಸಮಾಜಕಾರ್ಯ ಶಿಕ್ಷಣವನ್ನು ಪ್ರಾರಂಭಿಸಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಹೊಸದಾಗಿ ನೇಮಕಗೊಂಡಂತಹ ಕಾರ್ಮಿಕರಿಗೆ ತರಬೇತಿ ಒದಗಿಸುವುದರೊಂದಿಗೆ ಸಮಾಜಕಾರ್ಯ ಶಿಕ್ಷಣವನ್ನು, ಸಿ.ಒ.ಎಸ್. ಪ್ರಾರಂಭಿಸಿತು. ಈ ತರಬೇತಿಯ ಸ್ವರೂಪ ಕೇವಲ ಪ್ರಯೋಗಕ್ಕೆ ಒತ್ತು ನೀಡಲಾಗಿತ್ತೆ ಹೊರತು ಸೈದ್ಧಾಂತಿಕ ಅಂಶಗಳಿಗಲ್ಲ. ಇದು ಕೇವಲ ಹೊಸತಾಗಿ ನೇಮಕಗೊಂಡಂಥ ಸಮಾಜಕಾರ್ಯಕರ್ತರಿಗೆ ಐದು ವಾರಗಳ ತರಬೇತಿಯ ಕಾರ್ಯಕ್ರಮವಾಗಿತ್ತು. ಈ ರೀತಿಯ ತರಬೇತಿ ವಿಧಾನ ಹೊಸದಾಗಿ ನೇಮಕಗೊಂಡಂಥವರು ಹಿರಿಯ ಕಾರ್ಮಿಕರ ಕಾರ್ಯನಿರ್ವಹಣೆಯನ್ನು ಅವಲೋಕಿಸುವ ಮೂಲಕ ಪ್ರಾಯೋಗಿಕವಾಗಿ ಕಲಿಯುವ ಸರಳ ವಿಧಾನವಾಗಿತ್ತು. ಕಾಲಕ್ರಮೇಣ ಈ ವ್ಯವಸ್ಥೆಯನ್ನು ಹಲವಾರು ಶಾಸ್ತ್ರಜ್ಞರು ಪರಿಸ್ಥಿತಿಗೆ ಅನುಗುಣವಾಗಿ ಬದಲಾಯಿಸಿದರು. ಪ್ರಸ್ತುತ ಸಮಾಜಕಾರ್ಯ ಶಿಕ್ಷಣದಲ್ಲಿ ಕ್ಷೇತ್ರಕಾರ್ಯ ತರಬೇತಿ ಮತ್ತು ಶಿಕ್ಷಣ ಎರಡನ್ನೂ ಕಾಣಬಹುದಾಗಿದೆ. ಸಮಾಜಕಾರ್ಯ ಶಾಲೆಗಳಲ್ಲಿ ಸಮಾಜಕಾರ್ಯ ವೃತ್ತಿಯ ಬಗ್ಗೆ ಸೈದ್ಧಾಂತಿಕ ಹಿನ್ನೆಲೆಯನ್ನು ಒದಗಿಸುತ್ತಿದ್ದಾಗಿಯೂ, ಪ್ರಶಿಕ್ಷಣಾರ್ಥಿಗಳಲ್ಲಿ ಇಂದಿಗೂ ಕ್ಷೇತ್ರಕಾರ್ಯದ ತರಬೇತಿ ಬಗೆಗೆ ಗೊಂದಲವಿರುವುದನ್ನು ಕಾಣಬಹುದಾಗಿದೆ. ಇದಕ್ಕೆ ಹಲವಾರು ರೀತಿಯ ಕಾರಣಗಳಿರಬಹುದು. ಒಟ್ಟಿನಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಸಿಗುವಂತಹ ಪ್ರಾಯೋಗಿಕ ಅನುಭವವು ಖಂಡಿತವಾಗಿಯೂ ಅವರಲ್ಲಿ ಸೇವಾರ್ಥಿಗಳ ಸಮಸ್ಯೆಗಳಿಗೆ ಶಾಲೆಗಳಿಂದ ಕಲಿತಂತಹ ವೈಜ್ಞಾನಿಕ ಜ್ಞಾನ, ಕೌಶಲ್ಯಗಳು ಹಾಗೂ ತಂತ್ರಾಂಶಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಸಹಾಯ ಮಾಡುವಂತಹ ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ. ನಮ್ಮೆಲ್ಲರಿಗೂ ತಿಳಿದಿರುವಂತೆ ಕ್ಷೇತ್ರಕಾರ್ಯವು ಕ್ರಿಯಾತ್ಮಕತೆ ಹಾಗೂ ಹೊಸ-ಹೊಸ ಆಲೋಚನೆಗಳನ್ನು ಮೂಡಿಸುವಂತಹ ಒಂದು ಚಲನಾತ್ಮಕ ಪ್ರಕ್ರಿಯೆ. ಕ್ಷೇತ್ರಕಾರ್ಯವನ್ನು ಸರಳವಾಗಿ ವಿವರಿಸುವುದಾದರೆ ಜ್ಞಾನದ ಸದ್ಬಳಕೆಯಿಂದ ಮಾನವರ ಸಮಸ್ಯೆಗಳನ್ನು ನಿರ್ವಹಿಸುವ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸಿಕೊಳ್ಳುವ ಮೂಲಕ ಅನುಭವವನ್ನು ಗಳಿಸುವುದಾಗಿದೆ. ಸಮಾಜಕಾರ್ಯ ಪ್ರಶಿಕ್ಷಣಾರ್ಥಿಗಳು ವೃತ್ತಿಯ ಬಗೆಗೆ ಕಲಿತಂತಹ ಸೈದ್ಧಾಂತಿಕ ವಿಚಾರಗಳನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ಸ್ವಯಂ ಸೇವಾ ಸಂಸ್ಥೆಗಳು/ಕಲ್ಯಾಣ ಸಂಸ್ಥೆಗಳು ಕಾಯರ್ಾಗಾರವಾದರೆ, ಕ್ಷೇತ್ರಕಾರ್ಯ ತರಬೇತಿಯು ಒಂದು ಬಗೆಯ ಪ್ರಾಯೋಗಿಕ ಅನುಭವವಿದ್ದಂತೆ. ಭಾರತದ ಸಮಾಜಕಾರ್ಯ ಶಿಕ್ಷಣದಲ್ಲಿ ವೃತ್ತಿಪರ ತರಬೇತಿಯು ಮೊಟ್ಟ ಮೊದಲು 1936 ರಲ್ಲಿ ``ಸರ್ ದೊರಾಬ್ಜೀ ಟಾಟಾ ಗ್ರಾಜ್ಯೂಯೇಟ್ ಸ್ಕೂಲ್ ಆಫ್ ಸೋಷಿಯಲ್ ವರ್ಕ್'' ಶಾಲೆಯು ಮುಂಬಯಿನಲ್ಲಿ ಪ್ರಾರಂಭವಾಯಿತು. ಡಿವೇ (Dewey)ರವರ ಪ್ರಕಾರ ಕಾರ್ಯನಿರ್ವಹಿಸುವ ಮೂಲಕ ಕಲಿಯುವಿಕೆಯು ಕ್ಷೇತ್ರಕಾರ್ಯದ ಪರಿಕಲ್ಪನೆಯ ಮೇಲೆ ಪ್ರಾಥಮಿಕ ಪ್ರಭಾವವನ್ನು ಬೀರುತ್ತದೆ. ಸರಳಾರ್ಥದಲ್ಲಿ ಹೇಳುವುದಾದರೆ, ಆಚರಣೆಯ ಹೊರತಾದ ಸಿದ್ಧಾಂತ ಖಾಲಿ, ಸಿದ್ಧಾಂತದ ಹೊರತಾದ ಆಚರಣೆ ಅರ್ಥಹೀನ. ಸಮಾಜದಲ್ಲಿನ ಸಮಸ್ಯೆಗಳ ನಿವಾರಣೆಗೆ ಸಮಾಜಕಾರ್ಯ ಎಷ್ಟು ಮುಖ್ಯವೋ, ಸಮಾಜಕಾರ್ಯಕ್ಕೆ ಕ್ಷೇತ್ರಕಾರ್ಯ ಅಷ್ಟೇ ಅನಿವಾರ್ಯ. ಪ್ರಮುಖವಾಗಿ ಕ್ಷೇತ್ರಕಾರ್ಯದಲ್ಲಿ 5 ಘಟಕಾಂಶಗಳನ್ನು ಗುರುತಿಸಬಹುದು ಅವುಗಳೆಂದರೆ: 1. ಪ್ರಶಿಕ್ಷಣ ಸಂಸ್ಥೆ 2. ಸಮಾಜ ಕಲ್ಯಾಣ ಸಂಸ್ಥೆ 3. ಸಮಾಜಕಾರ್ಯ ಪ್ರಶಿಕ್ಷಣಾರ್ಥಿ 4. ಶಿಕ್ಷಕ ಮೇಲ್ವಿಚಾರಕರು 5. ಸಂಸ್ಥೆ ಮೇಲ್ವಿಚಾರಕರು ಈ ಮೇಲಿನ ಘಟಕಾಂಶಗಳನ್ನು ಆಧಾರವಾಗಿರಿಸಿಕೊಂಡೇ ಕ್ಷೇತ್ರಕಾರ್ಯದಲ್ಲಿ ಬದಲಾವಣೆ ಪ್ರಸ್ತುತ ಎಂಬುದನ್ನು ಸಮರ್ಥಿಸಬಹುದಾಗಿದೆ. ಪ್ರಸ್ತುತ ಸಮಾಜಕಾರ್ಯ ಪ್ರಶಿಕ್ಷಣಾರ್ಥಿಗಳ ಕ್ಷೇತ್ರಕಾರ್ಯದ ತರಬೇತಿಯ ಅನುಭವಗಳ ಅಭಿಪ್ರಾಯ ಸಂಗ್ರಹಣೆಯನ್ನು ಆಧಾರವಾಗಿರಿಸಿಕೊಂಡು ಈ ಕೆಳಕಂಡ ಬದಲಾವಣೆಗಳನ್ನು ಸೂಚಿಸಬಹುದಾಗಿದೆ. 1. ನಿರ್ದಿಷ್ಟವಾಗಿ ಸಮಾಜಕಾರ್ಯ ಶಿಕ್ಷಣ ಸಂಸ್ಥೆಗಳಲ್ಲಿ ಕ್ಷೇತ್ರಾಧ್ಯಯನಕ್ಕೆ ಸಂಬಂಧಿಸಿದಂತೆ ಆಗಬೇಕಾದ ಬದಲಾವಣೆಗಳೆಂದರೆ;
2. ನಿರ್ದಿಷ್ಟವಾಗಿ ಕ್ಷೇತ್ರಕಾರ್ಯಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ/ಸ್ವಯಂ ಸೇವಾ ಸಂಸ್ಥೆಗಳಲ್ಲಿ ಆಗಬೇಕಾದಬದಲಾವಣೆಗಳೆಂದರೆ.
3. ನಿರ್ದಿಷ್ಟವಾಗಿ ಕ್ಷೇತ್ರಕಾರ್ಯಕ್ಕೆ ಸಂಬಂಧಿಸಿದಂತೆ ಪ್ರಶಿಕ್ಷಣಾರ್ಥಿಗಳಲ್ಲಿ ಆಗಬೇಕಾದ ಬದಲಾವಣೆಗಳೆಂದರೆ;
4. ಕ್ಷೇತ್ರಕಾರ್ಯಕ್ಕೆ ಸಂಬಂಧಿಸಿದಂತೆ ಮೇಲ್ಚಿಚಾರಕರಲ್ಲಿ ಆಗಬೇಕಾದ ಬದಲಾವಣೆಗಳು;
ಒಟ್ಟಿನಲ್ಲಿ ಮೂಲತಃ ಪಾಶ್ಚಾತ್ಯರಿಂದ ಎರವಲು ಪಡೆದ ವೃತ್ತಿಪರ ಸಮಾಜ ಕಾರ್ಯ ಶಿಕ್ಷಣವನ್ನು ನಾವು ಇಂದಿಗೂ ಅವರದೇ ಧಾಟಿಯಲ್ಲಿ ಆಚರಿಸುತ್ತಿದ್ದೇವೆ, ಭಾರತದಲ್ಲಿ ಇದರ ಪರಿಕಲ್ಪನೆಯನ್ನು ಅಳವಡಿಸಿಕೊಂಡು 75 ವರ್ಷಗಳು ಕಳೆದರೂ ಇಂದಿಗೂ ಆಚರಣೆಯಲ್ಲಿ ದೇಶೀಕರಣವನ್ನು ಕಾಣಲು ಸಾಧ್ಯವಾಗದೇ ಇರುವುದಕ್ಕೆ ನಾವು ಹಲವಾರು ಕಾರಣಗಳನ್ನು ಪಟ್ಟಿಮಾಡಬಹುದು, ಏನೇ ಆದರೂ ಪ್ರಸ್ತುತದಲ್ಲಿ ಕ್ಷೇತ್ರಕಾರ್ಯದ ಪರಿಕಲ್ಪನೆ ಹಾಗೂ ಆಚರಣೆ ಎರಡರಲ್ಲೂ ದೇಶೀಕರಣಕ್ಕೆ ಅನುಗುಣವಾದ ಬದಲಾವಣೆಯನ್ನು ತರುವುದು ಬಹುಮುಖ್ಯವಾಗಿದೆ. ಮೋಹನ್ ವಿ.ಟಿ. ಸಪ್ತಗಿರಿ ನಿಲಯ, ಸರಪಣಿ ಆಶ್ರಮದ ಎದುರು, ಶಾರದಾದೇವಿ ನಗರ, ಬೆಳಗುಂಬ ರಸ್ತೆ, ತುಮಕೂರು- 572103
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|