Niruta Publications
  • Home
  • About Us
    • Ramesha's Profile
  • List Your Book for Free
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
  • Home
  • About Us
    • Ramesha's Profile
  • List Your Book for Free
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
Niruta Publications

ಪುಸ್ತಕ ಪರಿಚಯ - ಜನಸಾಮಾನ್ಯರಿಗಾಗಿ ಕಾನೂನು ಮಾಹಿತಿ (LEGAL INFORMATION FOR COMMON PEOPLE)

6/20/2017

9 Comments

 
Picture
ಸಂಪಾದಕರು   :    ಸಂಪಾದಕೀಯ ಸಮಿತಿ
ಪ್ರಕಾಶಕರು     :    ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರನ್ಯಾಯ ದೇಗುಲ, 
                          ಮೊದಲನೇ ಮಹಡಿ, ಎಚ್. ಸಿದ್ದಯ್ಯ ರಸ್ತೆ, ಬೆಂಗಳೂರು-560027
ಪುಟಗಳು        :     274
ಬೆಲೆ               :     ರೂ. 20.00 (ಸಬ್ಸಿಡಿ ದರ)
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಪ್ರಕಟಿಸಿರುವ ಜನಸಾಮಾನ್ಯರಿಗಾಗಿ ಕಾನೂನು ಮಾಹಿತಿ ಪುಸ್ತಕವು ಹೆಸರೇ ಸೂಚಿಸುವಂತೆ ಇದು ಜನಸಾಮಾನ್ಯರಿಗೆ ಅಂದರೆ ಕಾನೂನಿನ ಸಾಕ್ಷರತೆಯಿಲ್ಲದವರಿಗೆ, ಸಮಾಜದ ಮಧ್ಯಮ ಮತ್ತು ದುರ್ಬಲ ವರ್ಗದವರಿಗೆ, ಶೋಷಿತರಿಗೆ, ನಿರ್ಗತಿಕರಿಗೆ ಅನ್ಯಾಯವಾದಾಗ ಅವರಿಗೆ ಕಾನೂನು ಜ್ಞಾನವನ್ನು ಹೊಂದಲು, ಸಂವಿಧಾನವು ಹಾಗೂ ಇತರ ಶಾಸನಗಳು ಅವರಿಗೆ ಕೊಡಮಾಡಿರುವ ಹಕ್ಕುಗಳು ಮತ್ತು ಬಾಧ್ಯತೆಗಳ ಬಗ್ಗೆ ಮತ್ತು ಉಚಿತ ಕಾನೂನು ಸಲಹೆಗಳ ಬಗ್ಗೆ ತಿಳಿದುಕೊಂಡು ನ್ಯಾಯಕ್ಕಾಗಿ ಹೋರಾಡಲು ಮಾರ್ಗಸೂಚಿಯಾಗಿದೆ. ಪ್ರಸ್ತುತ ಈ ಪುಸಕ್ತದ ಐದು ಆವೃತ್ತಿಗಳು ಹೊರಬಂದಿದ್ದು. ಪರಿಷ್ಕೃತ ಐದನೇ ಆವೃತ್ತಿಯಲ್ಲಿ ಸನ್ಮಾನ್ಯರುಗಳಾದ ನ್ಯಾ. ಹೆಚ್.ಎಲ್. ದತ್ತು (ನ್ಯಾಯಾಧೀಶರು, ಭಾರತದ ಸರ್ವೋಚ್ಚ ನ್ಯಾಯಾಲಯ), ನ್ಯಾ. ವಿ. ಗೋಪಾಲ ಗೌಡ (ನ್ಯಾಯಾಧೀಶರು, ಭಾರತದ ಸರ್ವೋಚ್ಚ ನ್ಯಾಯಾಲಯ) ನ್ಯಾ. ಡಿ.ಎಚ್. ವಾಗೆಲ (ಮುಖ್ಯ ನ್ಯಾಯಾಧೀಶರು, ಕರ್ನಾಟಕದ ಉಚ್ಚ ನ್ಯಾಯಾಲಯ) ಮತ್ತು ನ್ಯಾ. ಎನ್.ಕೆ. ಪಾಟೀಲ್ (ನ್ಯಾಯಾಧೀಶರು, ಕರ್ನಾಟಕದ ಉಚ್ಚ ನ್ಯಾಯಾಲಯ ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷರು, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ) ರವರು ಈ ಅತ್ಯುನ್ನತವಾದ ಪುಸ್ಕಕಕ್ಕೆ ಮುನ್ನುಡಿಯನ್ನು ಬರೆದು ಈ ಪುಸ್ತಕವು ಕಾನೂನಿನ ಸಾಕ್ಷರತೆಯಿಲ್ಲದವರಿಗೆ, ಸಮಾಜದ ಮಧ್ಯಮ ಮತ್ತು ದುರ್ಬಲ ವರ್ಗದವರಿಗೆ, ಶೋಷಿತರಿಗೆ, ನಿರ್ಗತಿಕರಿಗೆ ಅನ್ಯಾಯವಾದಾಗ ಅವರು ಯಾವ ರೀತಿ ಉಚಿತ ಕಾನೂನು ಸಲಹೆಯನ್ನು ಪಡೆದುಕೊಳ್ಳಬಹುದು ಎಂಬುದರ ಸಂಪೂರ್ಣ ಮಾಹಿತಿಯನ್ನು ನೀಡುತ್ತದೆ ಎಂಬುದನ್ನು ತಿಳಿಸಿದ್ದಾರೆ. 
ಈ ಪುಸ್ತಕವು ಅನೇಕ ಅಧ್ಯಾಯಗಳನ್ನು ಒಳಗೊಂಡಿದ್ದು. ಇವುಗಳಲ್ಲಿ ಈ ಕೆಳಕಂಡ ಪ್ರಮುಖ ವಿಷಯಗಳ ಕುರಿತು ವಿವರಿಸಲಾಗಿದೆ.
  1. ಉಚಿತ ಕಾನೂನು ನೆರವು ಎಂದರೇನು? ಇದನ್ನು ಎಂಥವರಿಗೆ ಕೊಡಲಾಗುತ್ತದೆ? ಇದನ್ನು ಪಡಯಲು ಏನು ಮಾಡಬೇಕು? ಮತ್ತು ಜನತಾ ನ್ಯಾಯಾಲಯ (ಲೋಕ ಅದಾಲತ್) ಎಂದರೇನು? ಇದರ ವೈಶಿಷ್ಟ್ಯತೆಗಳೇನು? ಎಂಥಹ ಪ್ರಕರಣಗಳನ್ನು ಜನತಾ ನ್ಯಾಯಾಲಯಗಳಲ್ಲಿ ಎಂಬುದನ್ನು ವಿವರಿಸಲಾಗಿದೆ ಮತ್ತು ಕಾನೂನು ಸೇವೆಗಳ ಪ್ರಾಧಿಕಾರಗಳ ಅಧಿನಿಯಮ 1987ರ ಬಗ್ಗೆ ಮತ್ತು ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಸಮಿತಿಗಳ ಧ್ಯೇಯೋದ್ದೇಶಗಳ ಬಗ್ಗೆಯೂ ಸಹ ವಿವರಿಸಲಾಗಿದೆ.
  2. ನಮ್ಮ ಸಂವಿಧಾನವು ಪ್ರತಿಯೊಬ್ಬ ನಾಗರೀಕನಿಗೆ 14 ರಿಂದ 32ನೇ ಅನುಚ್ಚೇದಗಳಡಿಯಲ್ಲಿ ಕೊಡಮಾಡಿರುವ ಮೂಲಭೂತ ಹಕ್ಕುಗಳ ಬಗ್ಗೆ ಮತ್ತು ಮೂಲಭೂತ ಕರ್ತವ್ಯಗಳ ಬಗ್ಗೆ ವಿವರಿಸಲಾಗಿದೆ.
  3. ಭಾರತದಲ್ಲಿನ ಮಕ್ಕಳ ಅಪೌಷ್ಟಿಕತೆಯ ಕಾರಣ, ಪರಿಣಾಮ ಮತ್ತು ಅದನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ವಿವರಿಸಲಾಗಿದೆ.
  4. ಹಾಲಿಗೆ ಪರ್ಯಾಯವಾದ ಮಕ್ಕಳ ಆಹಾರ, ಫೀಡಿಂಗ್ ಬಾಟಲುಗಳು ಮತ್ತು ಮಕ್ಕಳ ಆಹಾರಗಳ (ಉತ್ಪಾದನೆ, ಸರಬರಾಜು ಹಾಗೂ ಹಂಚಿಕೆಗಳ ನಿಯಂತ್ರಣ) ತಿದ್ದುಪಡಿ ಅಧಿನಿಯಮ 1992ರ ಬಗ್ಗೆ, ಈ ಕಾಯ್ದೆಯಲ್ಲಿರುವ ಕೆಲವು ನಿರ್ಬಂಧಗಳ ಬಗ್ಗೆ, ಗರ್ಭಿಣಿ ಸ್ತೀಯರು ಅಥವಾ ಹಸುಗೂಸಿನ ತಾಯಂದಿರು ತಿಳಿದಿರಬೇಕಾದ ಮಹತ್ವಪೂರ್ಣ ಮಾಹಿತಿಯ ಬಗ್ಗೆ ವಿವರಿಸಲಾಗಿದೆ.
  5. ಮಹಿಳೆಯರ ಮೇಲಿನ ದೌರ್ಜನ್ಯಗಳಾದ ಅತ್ಯಾಚಾರ ಎಂದರೇನು? ಅತ್ಯಾಚಾರ ಅಪರಾಧಕ್ಕೆ ಶಿಕ್ಷೆ ಏನು? ಎಂಬುದರ ಬಗ್ಗೆ ಮತ್ತು ನ್ಯಾಯಾಲಯದಲ್ಲಿ ಅತ್ಯಾಚಾರ ಪ್ರಕರಣದ ವಿಚಾರಣೆಯ ಬಗ್ಗೆ, ಸ್ತ್ರೀ ಭ್ರೂಣ ಹತ್ಯೆಯ ಬಗ್ಗೆ, ಗರ್ಭಸ್ಥ ಭ್ರೂಣ ಪರೀಕ್ಷೆ ತಂತ್ರಜ್ಞಾನದ ಬಳಕೆಯ ಸಂಬಂಧ ನಿಯಂತ್ರಣಗಳ ಬಗ್ಗೆ, ಈ ಕಾನೂನಿನ ಉಲ್ಲಂಘನೆಗೆ ಶಿಕ್ಷೆ ಏನು ಎಂಬುದರ ಬಗ್ಗೆ, ಮಹಿಳೆಯರ ಮೇಲೆ ಜರುಗುತ್ತಲಿರುವ ಲೈಂಗಿಕ ಕಿರುಕುಳ, ಅದರ ತಡೆಗೆ ತೆಗೆದುಕೊಳ್ಳಬೇಕಾದ ಕ್ರಮಗಳು ಮತ್ತು ಅದರ ದೂರು ಸಮಿತಿಗಳ ಬಗ್ಗೆ ವಿವರಿಸಲಾಗಿದೆ.
  6. ಕರ್ನಾಟಕ ಸಂತ್ರಸ್ತರ ಪರಿಹಾರ ಯೋಜನೆ (ವಿಕ್ಟಿಮ್ ಕಾಂಪನ್ಸೇಶನ್ ಸ್ಕೀಮ್) 2011 ರ ಬಗ್ಗೆ ಮತ್ತು ನಷ್ಟ ಪರಿಹಾರ ಮಂಜೂರು ಮಾಡುವ ಪ್ರಕ್ರಿಯೆ ಬಗ್ಗೆ ವಿವರಿಸಲಾಗಿದೆ.
  7. ದುಡಿಯುವ ಮಹಿಳೆ ಮತ್ತು ಬಾಲಕರ ಮೇಲಿನ ಶೋಷಣೆಯನ್ನು ತಪ್ಪಿಸಲು ಜಾರಿಗೆ ತರಲಾದ ಅಧಿನಿಯಮಗಳ ಬಗ್ಗೆ, ಅವರ ಕನಿಷ್ಠ ಮಜೂರಿಗಳು ಮತ್ತು ಅದನ್ನು ಪಡೆಯಲು ಯಾರು ಅರ್ಹರು ಎಂಬುದರ ಬಗ್ಗೆ, ಕೆಲಸಗಾರರಿಗೆ ಇರುವ ಇತರ ಹಕ್ಕುಗಳ ಬಗ್ಗೆ, ಕಾರ್ಖಾನೆಗಳಲ್ಲಿ ದುಡಿಯುವ ಮಹಿಳೆಯ ವಿಶೇಷ ಹಕ್ಕುಗಳ ಬಗ್ಗೆ ಮತ್ತು 1923ರ ಕೆಲಸಗಾರರ (ಕಾರ್ಮಿಕರ) ನಷ್ಟ ಪರಿಹಾರ ಅಧಿನಿಯಮದ ಬಗ್ಗೆ ವಿವರಿಸಲಾಗಿದೆ.
  8. ಹಿಂದೂ ವಿವಾಹ ಅಧಿನಿಯಮ 1955, ವಿಶೇಷ ವಿವಾಹ ಅಧಿನಿಯಮ 1954, ವಿವಾಹ ನೋಂದಣಿ, ಶೂನ್ಯಕರಣೀಯ ವಿವಾಹ, ನ್ಯಾಯಿಕ ಪ್ರತ್ಯೇಕೀಕರಣ ಮತ್ತು ವಿಚ್ಛೇದನ ಹಾಗೂ ಜೀವನಾಂಶಗಳ ವಿಷಯಗಳನ್ನೊಳಗೊಂಡ ಹಿಂದೂಗಳಲ್ಲಿನ ವಿವಾಹ ಮತ್ತು ವಿಚ್ಛೇದನದ ಬಗ್ಗೆ ವಿವರಿಸಲಾಗಿದೆ.
  9. ಕಾನೂನೂ ಮಾನ್ಯ ಮುಸ್ಲಿಂ ವಿವಾಹಕ್ಕೆ ಷರತ್ತುಗಳು, ವಧು-ವರರ ನಿಷೇಧಿತ ಸಂಬಂಧತ್ವ, ಮೆಹರ್, ಶೂನ್ಯ ವಿವಾಹ, ವಿವಾಹ ವಿಸರ್ಜನೆ, ತಲಾಕ್ ಮತ್ತು ನ್ಯಾಯಿಕ ವಿಚ್ಛೇದನೆಯ ವಿಷಯಗಳನ್ನೊಳಗೊಂಡ ಮುಸ್ಲಿಂರಲ್ಲಿನ ವಿವಾಹ ಮತ್ತು ವಿಚ್ಛೇದನದ ಬಗ್ಗೆ ವಿವರಿಸಲಾಗಿದೆ.
  10. ಭಾರತೀಯ ಕ್ರಿಶ್ಚಿಯನ್ ವಿವಾಹ ಅಧಿನಿಯಮ 1872, ಕಾನೂನು ಸಮ್ಮತ ಕ್ರಿಶ್ಚಿಯನ್ ಮದುವೆಗೆ ಪಾಲಿಸಬೇಕಾದ ಷರತ್ತುಗಳು, ಕ್ರಿಶ್ಚಿಯನ್ ಮದುವೆಯ ಕ್ರಮಗಳು ಮತ್ತು ಅವರಲ್ಲಿನ ವಿಚ್ಛೇದನ, ನ್ಯಾಯಿಕ ಪ್ರತ್ಯೇಕಿಕರಣದ ವಿಷಯಗಳನ್ನೊಳಗೊಂಡ ಕ್ರಿಶ್ಚಿಯನ್ರಲ್ಲಿನ ವಿವಾಹ ಮತ್ತು ವಿಚ್ಛೇದನದ ಬಗ್ಗೆ ವಿವರಿಸಲಾಗಿದೆ.
  11. ವರದಕ್ಷಿಣೆಯೆಂದರೇನು ಎಂಬುದರ ವಿವರಣೆ, ವರದಕ್ಷಿಣೆ ಕೊಡುವುದು ತೆಗೆದುಕೊಳ್ಳುವುದು ಯಾವ ರೀತಿ ಶಿಕ್ಷಾರ್ಹ ಅಪರಾಧ? ವರದಕ್ಷಿಣೆ ಸಾವು ಎಂದರೇನು? ವರದಕ್ಷಿಣೆ ಸಾವಿನ ಅಪರಾಧಕ್ಕೆ ಶಿಕ್ಷೆ ಏನು? ಎಂಬುದರ ವಿಷಯಗಳನ್ನೊಳಗೊಂಡ ವರದಕ್ಷಿಣೆ ನಿಷೇಧ ಅಧಿನಿಯಮ 1961ರ ಬಗ್ಗೆ ವಿವರಿಸಲಾಗಿದೆ.
  12. ಜೀವನಾಂಶ ಎಂದರೇನು? ಇದನ್ನು ಪಡೆಯಲು ಯಾರು ಅರ್ಹರು? ಅರ್ಹರಾದವರು ತಮ್ಮ ಹಕ್ಕನ್ನು ಎಲ್ಲಿ, ಹೇಗೆ ಚಲಾಯಿಸಬೇಕು? ಎಂಬ ಇತ್ಯಾದಿ ವಿಷಯಗಳ ಬಗ್ಗೆ ಹಾಗೂ ಹಿಂದೂ ದತ್ತಕ ಮತ್ತು ಜೀವನಾಂಶ ಅಧಿನಿಯಮ 1956ರ ಬಗ್ಗೆ ವಿವರಿಸಲಾಗಿದೆ.
  13. ಬಾಲಕಾರ್ಮಿಕರೆಂದರೆ ಯಾರು? ಬಾಲಕಾರ್ಮಿಕರು ಯಾವ ಯಾವ ಕ್ಷೇತ್ರಗಳಲ್ಲಿ ಕೆಲಸಕ್ಕೆ ದೂಡಲ್ಪಟ್ಟಿರುತ್ತಾರೆ? ಬಾಲಕಾರ್ಮಿಕರರನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವುದು ಯಾವ ರೀತಿ ಶಿಕ್ಷಾರ್ಹ ಅಪರಾಧವಾಗುತ್ತದೆ? ಎಂಬ ವಿಷಯಗಳ ಬಗ್ಗೆ, ಮಕ್ಕಳ ಪಾಲನೆ ಮತ್ತು ಸಂರಕ್ಷಣೆಗೆ ಸಂಬಂಧಿಸಿದ 2000ರ ಬಾಲ ನ್ಯಾಯ (ಮಕ್ಕಳ ಪಾಲನೆ ಮತ್ತು ಸಂರಕ್ಷಣೆ) ಅಧಿನಿಮಯದ ಬಗ್ಗೆ, ಮಕ್ಕಳ ರಕ್ಷಣೆ ಮತ್ತು ಪಾಲನೆಗಾಗಿ ಇರುವ ಮಕ್ಕಳ ಗೃಹ, ಮಕ್ಕಳ ಕಲ್ಯಾಣ ಸಮಿತಿ, ಪರಿವೀಕ್ಷಣಾ ಗೃಹ, ಬಾಲರ ನ್ಯಾಯಮಂಡಳಿಗಳ ಬಗ್ಗೆ, ಬಾಲ್ಯ ವಿವಾಹಕ್ಕೆ ಸಂಬಂಧಿಸಿದ ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ರ ಬಗ್ಗೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಅಧಿನಿಯಮ ಮತ್ತು ನಿಯಮಗಳು 2012ರ (POCSO ACT & RULES-2012) ಅಡಿಯಲ್ಲಿ ಮಗುವಿನ ಮೇಲಾಗುವ ಲೈಂಗಿಕ ದೌರ್ಜನ್ಯ ಮತ್ತು ಇದಕ್ಕೆ ವಿಧಿಸುವ ಶಿಕ್ಷೆಯ ಬಗ್ಗೆಯೂ ಸಹ ವಿವರಿಸಲಾಗಿದೆ.
  14. ಜನನ-ಮರಣದ ನೋಂದಣಿಯ ಅವಶ್ಯಕತೆ, ಇದನ್ನು ಎಲ್ಲಿ, ಯಾವಾಗ, ಹೇಗೆ ನೋಂದಾಯಿಸಬೇಕೆಂಬುದರ ಮಾಹಿತಿ ಮತ್ತು ಜನನ-ಮರಣಗಳ ನೋಂದಣಿ ಕಾನೂನು 1969ರ ಬಗ್ಗೆ ವಿವರಿಸಲಾಗಿದೆ.
  15. ಮೋಟಾರು ವಾಹನಗಳ ಅಧಿನಿಯಮ 1988 ಗೆ ಸಂಬಂಧಿಸಿದ ವಿಷಯಗಳಾದ ಚಾಲನಾ ಪರವಾನಗಿ, ಇದನ್ನು ಪಡೆಯಲು ಬೇಕಾದ ಅರ್ಹತೆಗಳು, ಮೋಟಾರು ವಾಹನದ ನೋಂದಣಿ ಮತ್ತು ವಿಮೆಯ ಬಗ್ಗೆ ವಿವರಿಸಲಾಗಿದೆ.
  16. ಉಯಿಲು ಎಂದರೇನು? ವಿಶೇಷ ಉಯಿಲು ಮತ್ತು ವಿಶೇಷವಲ್ಲದ ಉಯಿಲಿನ ವಿವರಣೆ, ಇವುಗಳನ್ನು ಯಾರು ಮಾಡಬಹುದು?, ಉಯಿಲನ್ನು ಮಾಡುವಾಗ ಮುಖ್ಯವಾಗಿ ಪಾಲಿಸಬೇಕಾದ ಅಂಶಗಳಾವುವು?, ಯಾವ ವಿಧಧ ಆಸ್ತಿಗಳಿಗೆ ಸಂಬಂಧಿಸಿದಂತೆ ಉಯಿಲನ್ನು ಮಾಡಬಹುದು? ಉಯಿಲನ್ನು ರದ್ದುಗೊಳಿಸುವುದು ಹೇಗೆ? ಎಂಬ ಇತ್ಯಾದಿ ವಿಷಯಗಳ ಬಗ್ಗೆ ವಿವರಿಸಲಾಗಿದೆ.
  17. ದತ್ತಕ ಎಂದರೇನು? ಕಾನೂನು ಸಮ್ಮತ ದತ್ತಕಕ್ಕೆ ಅವಶ್ಯಕವಾಗಿ ಪಾಲಿಸಬೇಕಾದ ಅಂಶಗಳು, ಕಾನೂನು ಸಮ್ಮತ ದತ್ತಕದ ಪರಿಣಾಮಗಳು, ದತ್ತಕ ಸಂಬಂಧ ದಸ್ತಾವೇನು - ನೋಂದಣಿ ವಿಷಯಗಳ ಬಗ್ಗೆ ಮತ್ತು ಹಿಂದೂ ದತ್ತಕ ಮತ್ತು ಜೀವನಾಂಶ ಅಧಿನಿಯಮ 1956 ಬಗ್ಗೆಯೂ ಸಹ ವಿವರಿಸಲಾಗಿದೆ.
  18. 1956ರ ಹಿಂದೂ ವಾರಸಾ ಅಧಿನಿಯಮಕ್ಕೆ ಸಂಬಂಧಿಸಿದಂತೆ ಮೃತ ಹಿಂದೂ ಪುರುಷನ ಆಸ್ತಿಯನ್ನು ಮತ್ತು ಮೃತ ಹಿಂದೂ ಸ್ತ್ರೀ ಆಸ್ತಿಯನ್ನು ಯಾರು, ಹೇಗೆ ಪಡೆಯುತ್ತಾರೆಂಬ ಮಾಹಿತಿ ಮತ್ತು ವಾರಸುದಾರರು ಮೃತರ ಆಸ್ತಿಯಲ್ಲಿ ಪಾಲು ಪಡೆಯುವ ಹಕ್ಕನ್ನು ಯಾವಾಗ ಕಳೆದುಕೊಳ್ಳುತ್ತಾರೆಂಬ ಮಾಹಿತಿಯನ್ನು ಒಳಗೊಂಡಂತೆ 2005ರ ಹಿಂದೂ ವಾರಸಾ (ತಿದ್ದುಪಡಿ) ಅಧಿನಿಯಮದಂತೆ ಮಗಳೂ ಕೊಡಾ ಮಗನಂತೆ ತನ್ನ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಪಾಲು ಪಡೆಯುವ ದಾಯಾದಿತ್ವ (ಕೋಪಾರ್ಸನೆರಿ) ಹಕ್ಕನ್ನು ಪಡೆದುಕೊಂಡಿರುವ ವಿಷಯದ ಬಗ್ಗೆಯೂ ಸಹ ವಿವರಿಸಲಾಗಿದೆ.
  19. ಮುಸ್ಲಿಂ ವಾರಸಾ ಮತ್ತು ಉತ್ತರಾಧಿಕಾರಕ್ಕೆ ಸಂಬಂಧಿಸಿದ ಮುಸ್ಲಿಂ ಕಾನೂನು ಮತ್ತು ನಿಯಮಗಳು ಹಾಗೂ ಮೃತರ ಆಸ್ತಿಯ ಉತ್ತರಾಧಿಕಾರತ್ವ ಮತ್ತು ವಾರಸುದಾರರ ಬಗ್ಗೆ ವಿವರಿಸಲಾಗಿದೆ.
  20. ಕ್ರಿಶ್ಚಿಯನ್ನರ ವಾರಸಾ ಮತ್ತು ಉತ್ತರಾಧಿಕಾರಕ್ಕೆ ಸಂಬಂಧಿಸಿದ ಭಾರತೀಯ ವಾರಸಾ ಅಧಿನಿಯಮ 1925 (Indian Succession Act, 1925) ರ ಬಗ್ಗೆ ಹಾಗೂ ಮೃತ ಕ್ರಿಶ್ಚಿಯನ್ ಪುರುಷನ ಮತ್ತು ಕ್ರಿಶ್ಚಿಯನ್ ಮಹಿಳೆಯ ಆಸ್ತಿಯನ್ನು ಯಾರು, ಎಷ್ಟು, ಹೇಗೆ ಪಡೆಯುತ್ತಾರೆಂಬುದರ ಬಗ್ಗೆ ಉದಾಹರಣೆಗಳೊಂದಿಗೆ ವಿವರಿಸಲಾಗಿದೆ.
  21. ಮಿತಿಮೀರಿದ ಬಡ್ಡಿಯನ್ನು ವಿಧಿಸುವವರಿಗೆ ಕಠಿಣ ಶಿಕ್ಷೆಯನ್ನು ವಿಧಿಸುವ ಉದ್ದೇಶಕ್ಕಾಗಿ ಜಾರಿಗೆ ತರಲಾದ ಮಿತಿಮೀರಿದ ಬಡ್ಡಿ ವಿಧಿಸುವಿಕೆಯನ್ನು ನಿಷೇಧಿಸುವ ಕರ್ನಾಟಕ ಕಾಯ್ದೆ 2004ರ ಬಗ್ಗೆ ಮತ್ತು ಈ ಕಾಯ್ದೆಯು ಮಿತಿಮೀರಿದ ಬಡ್ಡಿ ನೀಡಿ ಶೋಷಿತರಾಗುತ್ತಿರುವವರಿಗೆ ಹೇಗೆ ನ್ಯಾಯವನ್ನು ಒದಗಿಸುತ್ತದೆ ಮತ್ತು ಮಿತಿಮೀರಿದ ಬಡ್ಡಿ ಪಡೆಯುವವರಿಗೆ ಕಾನೂನಿನ ಮೂಲಕ ಹೇಗೆ ಶಿಕ್ಷಿಸಬಹುದು ಎಂಬುದನ್ನು ವಿವರಿಸಲಾಗಿದೆ.
  22. ಸರ್ಕಾರದ ಹಾಗೂ ಸಾರ್ವಜನಿಕ ಪ್ರಾಧಿಕಾರಗಳ ಕಾರ್ಯಾಚರಣೆಯ ಮಾಹಿತಿ ನಾಗರೀಕರಿಗೆ ಕಾಲ ಕಾಲಕ್ಕೆ ಲಭಿಸಿ, ನಾಗರೀಕರಿಗೆ ಇರುವ ಅಭಿಮತ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಪೂರ್ಣ ಅವಕಾಶವನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಜಾರಿಗೊಳಿಸಲಾದ 2005ರ ಮಾಹಿತಿ ಹಕ್ಕು ಅಧಿನಿಯಮಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಯಾವ ಯಾವ ಮಾಹಿತಿಗಳನ್ನು ಪಡೆದುಕೊಳ್ಳಬಹುದು, ಅವುಗಳನ್ನು ಪಡೆದುಕೊಳ್ಳಲು ಇರುವ ಕ್ರಮಗಳು, ಸಾರ್ವಜನಿಕರಿಗೆ ಮಾಹಿತಿಯನ್ನು ನೀಡುವ ಸರ್ಕಾರದ ಹಾಗೂ ಸಾರ್ವಜನಿಕ ಪ್ರಾಧಿಕಾರಗಳ ಹೊಣೆಗಳು, ಮಾಹಿತಿಯನ್ನು ನೀಡಲು ಇರುವ ಗರಿಷ್ಠ ಕಾಲಾವಧಿ, ಸರಿಯಾದ ಮಾಹಿತಿಯು ದೊರಕದೇ ಇದ್ದಲ್ಲಿ  ಕಾಯ್ದೆಯನ್ವಯ ತೆಗೆದುಕೊಳ್ಳಬಹುದಾದ ಮುಂದಿನ ಕ್ರಮ (ಉದಾ; ಮೇಲ್ಮನವಿ, ಮಾಹಿತಿ ಹಕ್ಕು ಆಯೋಗಕ್ಕೆ ದೂರು ಸಲ್ಲಿಸುವುದು). ನಿಗದಿಪಡಿಸಿದ ಕಾಲಾವಧಿಯ ಒಳಗೆ ಮಾಹಿತಿ ನೀಡದೇ ಇದ್ದಲ್ಲಿ ವಿಧಿಸುವ ದಂಡ ಮತ್ತು ಶಿಕ್ಷೆ ಮತ್ತು ಕಾಯ್ದೆಯ ಪ್ರಕಾರ ಯಾವ ಯಾವ ಮಾಹಿತಿಗಳನ್ನು ನೀಡಲು ಸಮ್ಮತವಲ್ಲ ಎಂಬುದರ ವಿಷಯಗಳನ್ನು ವಿವರಿಸಲಾಗಿದೆ.
  23. ಕನಿಷ್ಠ ಕೂಲಿ ಸಿಗುವ ಖಾತರಿ ಉದ್ಯೋಗವನ್ನು ದೊರಕಿಸಿಕೊಡುವ ದೃಷ್ಟಿಯಿಂದ ರಚನೆಯಾದ 2005ರ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಅಧಿನಿಯಮದ ಮುಖ್ಯ ಉದ್ದೇಶಗಳು/ಅಂಶಗಳು, ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಖಾತ್ರಿ ಯೋಜನೆಗಳು ಮತ್ತು ನಿರುದ್ಯೋಗ ಭತ್ಯೆ. ನಿರುದ್ಯೋಗ ಭತ್ಯೆ ಪಾವತಿ ಮತ್ತು ಅದನ್ನು ಪಡೆದುಕೊಳ್ಳಲು ಕೆಲವು ಅನರ್ಹತೆಗಳು ಮತ್ತು ಈ ಯೋಜನೆಗೆ ಸಂಬಂಧಿಸಿದ ಮುಖ್ಯ ಅಂಶಗಳ ಹಾಗೂ ಅನುಸೂಚಿಗಳ ವಿಷಯಗಳನ್ನು ವಿವರಿಸಲಾಗಿದೆ.
  24. ನಗರದಲ್ಲಿ ಸ್ಥಿರಾಸ್ತಿ ಕೆಲವು ಸಲಹೆ ಸೂಚನೆಗಳು ಎಂಬ ಶೀರ್ಷಿಕೆಯಡಿಯಲ್ಲಿ ನಿವೇಶನ/ಮನೆ/ಅಪಾರ್ಟ್‍ಮೆಂಟ್ ಕೊಳ್ಳಬೇಕಾದವರು ವಹಿಸಬೇಕಾದ ಎಚ್ಚರಿಕೆಗಳು, ಪರಿಶೀಲಿಸಬೇಕಾದ ಕೆಲವು ದಾಖಲೆಗಳು (ಆಸ್ತಿಯ ಮೂಲಪತ್ರ, ಸ್ಥಿರಾಸ್ತಿಯ ಹಾಲಿ ಮಾಲೀಕನ ಮಾಲೀಕತ್ವವನ್ನು ದೃಢಪಡಿಸುವ ದಾಖಲೆಗಳು, ಖಾತಾ ಪತ್ರ, ಋಣಭಾರ ರಾಹಿತ್ಯ ಪತ್ರ, ಕನ್ವರ್ಷನ್ ಸರ್ಟಿಫಿಕೇಟ್ ಇತ್ಯಾದಿ) ಹಾಗೂ ಗೃಹೋಪಯೋಗ ಕಟ್ಟಡಗಳನ್ನು ಕಟ್ಟುವಾಗ ಸುತ್ತಲೂ ಎಷ್ಟು ಜಾಗ ಖಾಲಿ ಬಿಡಬೇಕೆಂಬುದರ ಸಂಪೂರ್ಣ ವಿಷಯಗಳನ್ನು ವಿವರಿಸಲಾಗಿದೆ.
  25. ದೇಶದಲ್ಲಿ ಭ್ರಷ್ಟಾಚಾರ ಹೇಗೆ ಉಗಮವಾಯಿತು, ಅದು ಕಾಲಾನಂತರದಲ್ಲಿ ಹೇಗೆ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡು ಸರ್ಕಾರದ ಆಡಳಿತ ವ್ಯವಸ್ಥೆಯಲ್ಲಿ ವಿಷವೃಕ್ಷದಂತೆ ಬೆಳೆದು ಹೆಮ್ಮರವಾಗಿ ನಿಂತ ಬಗೆಯನ್ನು ವಿವರಿಸಲಾಗಿದೆ ಹಾಗೂ ಇದನ್ನು ಹೋಗಲಾಡಿಸಲು 1947ರ ಭ್ರಷ್ಟಾಚಾರ ಪ್ರತಿಬಂಧಕ ಅಧಿನಿಯಮಕ್ಕೆ ಬದಲಿಗೆ ಕ್ರೋಢೀಕರಿಸಿದ ಹಾಗೂ ಪರಿಷ್ಕೃತಗೊಳಿಸಿದ 1988ರ ಭ್ರಷ್ಟಾಚಾರ ಪ್ರತಿಬಂಧಕ ಅಧಿನಿಯಮವನ್ನು ಜಾರಿಗೆ ತರಲಾಯಿತು ಎಂಬುದನ್ನು ವಿವರಿಸಲಾಗಿದೆ. ಈ ಕಾಯ್ದೆಯಡಿಯಲ್ಲಿ ಲಂಚ ಪಡೆಯುವುದು, ನೀಡುವುದು ಶಿಕ್ಷಾರ್ಹ ಅಪರಾಧ, ಇದಕ್ಕಾಗಿ ನೀಡುವ ಶಿಕ್ಷೆ, ದಂಡ ಮತ್ತು ಭ್ರಷ್ಟಾಚಾರ ತಡೆಗಟ್ಟಲು ಈ ಕಾಯ್ದೆಯಡಿಯಲ್ಲಿ ಇರುವ ಕ್ರಮಗಳು, ಲೋಕಾಯುಕ್ತ ಸಂಸ್ಥೆಯ ಸ್ಥಾಪನೆ, ಇದರ ಕಾರ್ಯವ್ಯಾಪ್ತಿ, ಜವಾಬ್ದಾರಿ, ಅಧಿಕಾರ, ಲೋಕಾಯುಕ್ತರ ಮತ್ತು ಉಪಲೋಕಾಯುಕ್ತರ ನೇಮಕ, ಅವರ ಅಧಿಕಾರ ವ್ಯಾಪ್ತಿ, ಈ ಸಂಸ್ಥೆಯ ಇತರೆ ಅಧಿಕಾರಿಗಳು, ಸಾರ್ವಜನಿಕರು ಈ ಸಂಸ್ಥೆಯಲ್ಲಿ ದೂರು ಸಲ್ಲಿಸುವ ಬಗೆ ಮತ್ತು ನಂತರದ ಕಾರ್ಯಪ್ರಕ್ರಿಯೆ ವಿಷಯಗಳ ಬಗ್ಗೆ ವಿವರಿಸಲಾಗಿದೆ.
  26. ಪವರ್ ಆಫ್ ಅಟಾರ್ನಿ ಅಥವಾ ಮುಖ್ತ್ಯಾರ್ನಾಮೆ ಎಂದರೇನು, ಅದರ ವಿಶೇಷತೆಯೇನು, ಅದರಲ್ಲಿನ ವಿಧಗಳಾವುವು, ಅದನ್ನು ಯಾರು, ಏಕೆ, ಯಾವಾಗ, ಹೇಗೆ ಬರೆದುಕೊಡಬಹುದು ಎಂಬುದರ ಸಂಪೂರ್ಣ ವಿಷಯಗಳ ಬಗ್ಗೆ ವಿವರಿಸಲಾಗಿದೆ.
  27. ಈ ಮೇಲೆ ತಿಳಿಸಿದ ವಿಷಯಗಳೊಂದಿಗೆ ವಿದ್ಯಾರ್ಥಿಗಳಿಗೆ ಮತ್ತು ರೈತರಿಗೆ ಅತ್ಯುಪಯುಕ್ತವಾಗುವ ಕೆಲವು ಮಾರ್ಗಸೂಚಿಗಳನ್ನೂ ಸಹ ಈ ಪುಸಕ್ತ ಒಳಗೊಂಡಿದೆ.

​ಈ ಪುಸ್ತಕವು ಓದುಗರನ್ನು ಕಾನೂನಿನ ಜ್ಞಾನದ ಬೆಳಕಿನೆಡೆಗೆ ಕೊಂಡೊಯ್ಯುವುದೆಂದರೆ ಅದು ಅತಿಶಯೋಕ್ತಿಯಾಗಲಾರದು. ವಿಶೇಷವಾಗಿ ಇದು ಜನಸಾಮಾನ್ಯರಿಗೆ ತಮ್ಮ ಕಾನೂನಿನ ಹಕ್ಕು ಮತ್ತು ಬಾಧ್ಯತೆಗಳ ಅರಿವನ್ನು ಮೂಡಿಸುತ್ತದೆ. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಇಂತಹ ಅತ್ಯಮೂಲ್ಯವಾದ ಪುಸ್ತಕವನ್ನು ಪ್ರಕಟಿಸಿ, ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ (ರೂ. 20.00, ಸಬ್ಸಿಡಿ ದರ) ದೊರೆಯುವಂತೆ ಮಾಡಿರುವುದು ಇದರ ಪ್ರಾಮಾಣಿಕ ಸಾಮಾಜಿಕ ಕಳಕಳಿಗೆ ಹಿಡಿದ ಕನ್ನಡಿಯಾಗಿದೆ.
 
ಬೆಂಗಳೂರು ಸಿಟಿಜ಼ನ್ ಕನೆಕ್ಟ್
www.bengalurucitizenconnect.com
 
ಮಹದೇವ್ ಸ್ವಾಮಿ
9 Comments
Nataraja D
7/18/2018 12:13:49 pm

Hi Sir

I need this Book where can i purchase

Reply
ನಾಗರಾಜ ಕೋಟೆಗಾರ್
1/19/2020 10:28:06 pm

ನನಗೆ ಈ ಪುಸ್ತಕ ಬೇಕಾಗಿದೆ ಸರ್

Reply
Kumbaara rudrappa
6/5/2020 09:44:32 am

ಈ ಪುಸ್ತಕದಲ್ಲಿನ ವಿಷಯಗಳು ಬಹಳ ಮಹತ್ವ ಒಂದಿವೆ

Reply
Nagaraj B
12/11/2020 09:19:07 pm

ನನಗೆ ಈ ಪುಸ್ತಕ ಬೇಕಾಗಿದೆ 9902780837

Reply
Basavaraj munjanni
12/27/2020 09:24:14 am

ನನಗೂ ಈ ಪುಸ್ತಕ ಬೇಕಾಗಿದೆ

Reply
Satish link
2/27/2021 09:26:41 am

Plzs

Reply
Satishkumar link
2/27/2021 10:11:35 am

Use

Reply
iranna v mallad link
2/18/2025 08:03:24 am

ನಾನು ಕಾನೂನಿನ ಬಗ್ಗೆ ತಿಳಿಯಲು ಬಯಸುತ್ತೆನೆ ಧನ್ಯವಾದಗಳು ಸರ್

Reply
Kyarekatti Thippeswamy H
4/19/2025 04:02:47 am

I am very proud feel and good feel I would like this is also information I am very thankful of the website thank you

Reply



Leave a Reply.


    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9
    ಸಮಾಜಕಾರ್ಯ
    ಸಮುದಾಯ ಸಂಘಟನೆ


    Picture

    Social Work Learning Academy

    Join WhatsApp Channel

    Niruta Publications

    Social Work Foot Prints

    Leaders Talk

    Ramesha Niratanka

    Picture
    WhatsApp

    Picture

    MHR LEARNING ACADEMY

    Get it on Google Play store
    Download App
    Online Courses

    Picture
    50,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups


    RSS Feed

Niruta Publications Books List
File Size: 672 kb
File Type: pdf
Download File

Social Work Books
File Size: 116 kb
File Type: pdf
Download File

HR Books
File Size: 87 kb
File Type: pdf
Download File

General Books
File Size: 195 kb
File Type: pdf
Download File



SITE MAP


Site

  • HOME
  • ABOUT US
  • BLOG
  • COLLABORATE WITH NIRUTA PUBLICATIONS
  • HR BLOG
  • PUBLICATION WITH US
  • TRANSLATION & TYPING
  • VIDEOS
  • HR & EMPLOYMENT LAW CLASSES - EVERY FORTNIGHT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

NIRATHANKA

  • ​CSR
  • TREE PLANTATION PROJECT

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe


Picture
More Details

Copyright Niruta Publications 2021,    Website Designing & Developed by: www.mhrspl.com