ಹತ್ತಿರವಿದ್ದರೂ ದೂರ ನಿಲ್ಲುವೆವು, ನಮ್ಮ ಅಹಮ್ಮಿನ ಕೋಟೆಯಲಿ, ಎಷ್ಟು ಕಷ್ಟವೋ ಹೊಂದಿಕೆಯೆಂಬುದು ನಾಲ್ಕು ದಿನದ ಈ ಬದುಕಿನಲ್ಲಿ - ಜಿ.ಎಸ್. ಶಿವರುದ್ರಪ್ಪ ದೂರವಿದ್ದರೂ ಮುಖ ನೋಡದೆ, ಭೇಟಿಯಾಗದೆ, ನನ್ನನ್ನು ಅವರ ಮಗನಂತೆ ಕಂಡು ಮಾರ್ಗದರ್ಶನ ಮಾಡಿದ ಟಿ.ಕೆ. ನೈಯ್ಯರ್ ರವರ ವ್ಯಕ್ತಿತ್ವಕ್ಕೆ ನಾನು ಮಾರು ಹೋದೆ. ಬೆಳಿಗ್ಗೆಯಿಂದ ರಾತ್ರಿವರೆಗಿನ ಜೊತೆಯಲ್ಲಿರುತ್ತೇವೆ, ಕಾಫಿ ಕುಡಿಯುತ್ತೇವೆ, ಜೊತೆಯಲ್ಲಿ ಊಟ ಮಾಡುತ್ತೇವೆ ಆದರೆ ದೂರ ನಿಲ್ಲುತ್ತೇವೆ, ಮನಸ್ಸಿನಲ್ಲಿ ಮೆಚ್ಚುಗೆಯ ಮಮಕಾರವಿರುವುದಿಲ್ಲ. ಆದರೆ ಭೌತಿಕವಾಗಿ ದೂರವಿದ್ದರೂ ನಮ್ಮ ಹೃದಯಕ್ಕೆ ಹತ್ತಿರವಿದ್ದ ಪ್ರೊ. ಟಿ.ಕೆ. ನೈಯ್ಯರ್ ರವರ ನಿಧನದ ಸುದ್ದಿ ವೈಯಕ್ತಿಕವಾಗಿ ನನಗೆ ಮತ್ತು ನಿರಾತಂಕ ತಂಡದ ಪಾಲಿಗೆ ಅತ್ಯಂತ ದುಃಖಕರ. ಸುಮಾರು ನಾಲ್ಕು ವರ್ಷಗಳ ಹಿಂದೆ ಪ್ರೊ. ನೈಯ್ಯರ್ ರವರೊಂದಿಗೆ Facebook ನ ಮೂಲಕ ಪರಿಚಯವಾಯಿತು. ನಮ್ಮ ಸಮಾಜಕಾರ್ಯದ ಹೆಜ್ಜೆಗಳು ಪತ್ರಿಕೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತ ಆತ್ಮೀಯರಾದರು. ಪತ್ರಿಕೆಯ ಸಲಹೆಗಾರರನ್ನಾಗಿ ಆಹ್ವಾನಿಸಲಾಗಿ ಅದನ್ನು ಪ್ರೀತಿಯಿಂದ ಒಪ್ಪಿಕೊಂಡು ಪತ್ರಿಕೆಯ ಪ್ರತಿಯೊಂದು ಕಾರ್ಯದಲ್ಲೂ ತೊಡಗಿಸಿಕೊಂಡರು. ನಮ್ಮ ಪತ್ರಿಕೆಗೆ ಹಲವಾರು ಸಲಹೆಗಳನ್ನು ನೀಡುತ್ತ ಬಂದರು. ಪತ್ರಿಕೆಯ Website ಗೆ ಟಿ.ಕೆ. ನೈಯ್ಯರ್ ರವರೇ ಪ್ರಮುಖ ರೂವಾರಿ. ಹೀಗೆ ಪರಿಚಯವಾಗಿ ಆತ್ಮೀಯತೆ ಬೆಳೆದ ಮೇಲೆ ಒಮ್ಮೆಯಾದರೂ ಪ್ರೊಫೆಸರ್ ರವರನ್ನು ನೋಡಬೇಕೆಂಬ ಬಯಕೆ ವ್ಯಕ್ತಪಡಿಸಿದಾಗ ಅವರು ನಯವಾಗಿ ದೂರದ ಬೆಂಗಳೂರಿನಿಂದ ತಮಿಳುನಾಡಿಗೆ ಬರುವ ತೊಂದರೆಯನ್ನು ತೆಗೆದುಕೊಳ್ಳಬೇಡ ಎಂದರು. ಅವರು ವೈಯಕ್ತಿಕವಾಗಿ ಹಾಗೂ ಸಮಾಜಕಾರ್ಯ ಕ್ಷೇತ್ರಕ್ಕೆ ಸಂಬಂಧಪಟ್ಟ ಎಲ್ಲಾ ವಿಷಯಗಳನ್ನು ಚರ್ಚಿಸುತ್ತಿದ್ದರು. ದಿನಕ್ಕೆ ಹತ್ತು ಹಲವು ಬಾರಿ Email ಮೂಲಕ ಹಾಗೂ ದೂರವಾಣಿ ಮೂಲಕ ನಮ್ಮ ಸಂಪರ್ಕ ಸರಾಗವಾಗಿ ಸಾಗುತ್ತಾ ಬಂದಿತು. ಪತ್ರಿಕೆಯ ಬಗ್ಗೆ ಅಪಾರವಾದ ಕಾಳಜಿ ಹಾಗೂ ತಮ್ಮ ತಂಡವನ್ನು ಇನ್ನೂ ಎತ್ತರಕ್ಕೆ ತೆಗೆದುಕೊಂಡು ಹೋಗಬೇಕೆಂಬ ಹಂಬಲ ಅವರದಾಗಿತ್ತು. ಪ್ರೊಫೆಸರ್ ರವರ ಮೂರು ಪುಸ್ತಕಗಳ (Old Age in an Indifferent Society, Social Work Profession in India : An Uncertain Future, Older People in Rural Tamilnadu) ಪ್ರಕಾಶನವನ್ನು ನಮ್ಮ ಸಂಸ್ಥೆಯಿಂದಲೇ ಮಾಡಲಾಯಿತು. ಹೀಗೆ ಎಂದೂ ವೈಯಕ್ತಿಕವಾಗಿ ಭೇಟಿಯಾಗದೆ ಕೇವಲ Faceebook ನ ಮೂಲಕ ಪರಿಚಿತವಾಗಿ ಅತ್ಯಂತ ಆತ್ಮೀಯತೆ ಬೆಳೆಸಿಕೊಂಡವರಲ್ಲಿ ಇದುವರೆಗೂ ಪ್ರೊಫೆಸರ್ ಒಬ್ಬರು ಮಾತ್ರ ಎಂದರೆ ತಪ್ಪಾಗಲಾರದು. ಪ್ರೊಫೆಸರ್ ಅವರ Gmail Password, Facebook Password ಹೀಗೆ ಹತ್ತು ಹಲವು ಖಾಸಗಿ ವಿಚಾರಗಳನ್ನು ನನ್ನೊಡನೆ ಹಂಚಿಕೊಂಡು ಅವರ ಪರವಾಗಿ Email ಕಳುಹಿಸಲು ಅನುಮತಿ ನೀಡಿದ್ದರು. ಹೀಗೆ ಅತ್ಯಂತ ಆತ್ಮೀಯತೆಯಿಂದಿದ್ದ ಪ್ರೊಫೆಸರ್ ಸುಮಾರು ಆರು ತಿಂಗಳ ಹಿಂದೆ ಅನಾರೋಗ್ಯದ ಕಾರಣ ನೀಡಿ ಇದ್ದಕ್ಕಿದ್ದ ಹಾಗೆ ಸಾಧ್ಯವಾದಲ್ಲಿ ಮುಂದಿನ ಜನ್ಮದಲ್ಲಿ ಭೇಟಿಯಾಗೋಣ ಎಂಬ Email ಕಳುಹಿಸಿದರು. ಇದನ್ನು ತಿಳಿದು ನಿಮಗೆ ಅನಾರೋಗ್ಯದ ತೊಂದರೆಯೇ ಎಂದು ಕೇಳಿದಾಗ ಹಂಚಿಕೊಳ್ಳಲು ಮುಂದಾಗಲಿಲ್ಲ. ಹಾಗೆಯೇ ಪ್ರೊಫೆಸರ್ ಅನಾರೋಗ್ಯ ಕುರಿತು ಯಾರಿಗೂ ಹೇಳಬೇಡ ಎಂಬ ಕಟ್ಟಪ್ಪಣೆ ವಿಧಿಸಿದರು. ಕೇವಲ ಬೆರಳೆಣಿಕೆಯಷ್ಟು ಆತ್ಮೀಯರಿಗೆ ಮಾತ್ರ ಅವರ ಅನಾರೋಗ್ಯದ ಸಂಗತಿ ತಿಳಿದಿತ್ತು. ಅವರ ಅನಾರೋಗ್ಯದ ವಿಷಯ ತಿಳಿದು ನೋಡಲು ಬರುತ್ತೇನೆ ಎಂದರೂ ಸಹ ಬರಬೇಡಿ ಎಂಬ ಕಟ್ಟಪ್ಪಣೆಯನ್ನು ಅವರ ಆತ್ಮೀಯರೆಲ್ಲರಿಗೂ ವಿಧಿಸಿದ್ದರು. ಅವರಿಗೆ ಏನಾಗಿತ್ತೋ ಎಂಬ ನಿಗೂಢತೆಯನ್ನು ಈಗಲೂ ಉಳಿಸಿದ್ದಾರೆ. ಅವರು ತೋರಿಸುತ್ತಿದ್ದ ಪ್ರೀತಿ, ನೀಡುತ್ತಿದ್ದ ಸಲಹೆ, ಕೆಲವು ವಿಷಯಗಳ ಬಗ್ಗೆ ತೆಗೆದುಕೊಳ್ಳುತ್ತಿದ್ದ ತೀರ್ಮಾನಗಳನ್ನು ನಾವೆಲ್ಲರೂ ಕಳೆದುಕೊಳ್ಳುತ್ತಿದ್ದೇವೆ.
ಎಂ.ಎಚ್. ರಮೇಶ ಸಂಪಾದಕರು ಸಮಾಜಕಾರ್ಯದ ಹೆಜ್ಜೆಗಳು
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |