Niruta Publications
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
Niruta Publications

ಪುಸ್ತಕ ಪರಿಚಯ-ಸಾಮಾಜಿಕ ಮತ್ತು ಮಾನವಿಕ ಅಧ್ಯಯನಗಳ ಪರಿಭಾಷಾ ಕೋಶ

7/7/2017

1 Comment

 
Picture
ಸಂಪಾದಕರು: ಡಾ. ಎಂ. ಚಂದ್ರ ಪೂಜಾರಿ, ಡಾ. ಟಿ.ಆರ್. ಚಂದ್ರಶೇಖರ್, ಡಾ. ವಿ.ಎಸ್. ಶ್ರೀಧರ
ಪ್ರಕಾಶಕರು : ಪಿ. ನಾರಾಯಣಸ್ವಾಮಿ, ರಿಜಿಸ್ಟ್ರಾರ್,ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕಲಾಗ್ರಾಮ, ಜ್ಞಾನಭಾರತಿ, ಬೆಂಗಳೂರು ವಿಶ್ವವಿದ್ಯಾಲಯ ಆವರಣದ ಹಿಂಭಾಗ, ಮಲ್ಲತ್ತಹಳ್ಳಿ, ಬೆಂಗಳೂರು-560056
ಪುಟಗಳು : xvi+328
ಬೆಲೆ :    ರೂ. 150-00
ಈ ಪುಸ್ತಕವು ಸಮಾಜ ವಿಜ್ಞಾನ ಹಾಗೂ ಮಾನವಿಕ ಪರಿಭಾಷೆಗಳ ಕುರಿತಾದ ಪುಸ್ತಕವಾಗಿದೆ. ಇದು ವಿದ್ಯಾರ್ಥಿಗಳಿಗೆ ಮತ್ತು ಜನಸಾಮಾನ್ಯರಿಗೆ ಬಹಳ ಉಪಯುಕ್ತವಾದ ಪುಸ್ತಕವಾಗಿದೆ. ಸಾಮಾಜಿಕ ಮತ್ತು ಮಾನವಿಕ ಅಧ್ಯಯನ ಶಾಖೆಗಳಲ್ಲಿ ಆಸಕ್ತರಾಗಿರುವ ವಿದ್ಯಾರ್ಥಿಗಳು ಎದುರಿಸುತ್ತಿರುವ ಕೊರತೆಯೊಂದನ್ನು ನೀಗಿಸಲು ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಕೈಗೆತ್ತಿಕೊಂಡ ಯೋಜನೆಯ ಫಲಿತವೇ ಈ ಪುಸ್ತಕ. ಈ ಪುಸ್ತಕದ ಸಂಪಾದಕರು ಈ ಯೋಜನೆಯ ರೂಪುರೇಷೆಗಳನ್ನು ಅವರ ಬರೆಹದಲ್ಲಿ ವಿವರಿಸಿದ್ದಾರೆ. ಸಮಾಜ ಮತ್ತು ಸಂಸ್ಕೃತಿ ಸಂಶೋಧನೆಗಳಲ್ಲಿ ಸಿದ್ಧಾಂತ, ಪರಿಭಾಷೆ ಮತ್ತು ಭಾಷೆಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ. ಅದರಲ್ಲೂ ಪರಿಭಾಷೆಗಳು ಇನ್ನೂ ಹೆಚ್ಚಿನ ಮಹತ್ವವನ್ನು ಹೊಂದಿವೆ. ಏಕೆಂದರೆ ಇವು ಸಿದ್ಧಾಂತಕ್ಕೆ ಜೀವ ತುಂಬುತ್ತವೆ. ಆದುದರಿಂದ ಪರಿಭಾಷೆಗಳನ್ನು ಅರ್ಥಮಾಡಿಕೊಂಡು ಬಳಸಲು ಕಲಿಯುವುದು ಜ್ಞಾನದ ಗಳಿಕೆಗೆ ಹಾಗೂ ಸೃಷ್ಟಿಗೆ ಅನಿವಾರ್ಯ. ಈ ನಿಟ್ಟಿನಲ್ಲಿ ಈ ಪುಸ್ತಕವು ಬಹಳ ಅತ್ಯಮೂಲ್ಯವಾದದ್ದು ಎಂದರೆ ತಪ್ಪಾಗಲಾರದು. ಇಂದಿನ ಸಮಾಜ ವಿಜ್ಞಾನದ ಓದು ಮತ್ತು ಬೋಧನೆಯಲ್ಲಿ ಪರಿಭಾಷೆಗಳನ್ನು ರೂಪಿಸಿಕೊಂಡು ಬಳಸುವುದರ ಮೇಲೆ ಪ್ರತ್ಯೇಕವಾಗಿ ಗಮನ ಹರಿಸುವ ಪರಿಪಾಠ ಕಡಿಮೆ. ಇದು ಜ್ಞಾನ ಸಂಪಾದನೆಗೆ ಬಹುದೊಡ್ಡ ತೊಡಕಾಗಿದೆ. ಈ ತೊಡಕನ್ನು ನಿವಾರಿಸಲು ಈ ಪುಸ್ತಕವು ನೆರವಾಗಲು ಯತ್ನಿಸುತ್ತದೆ. ಈ ಪುಸ್ತಕದಲ್ಲಿ ಈ ಕೆಳಕಂಡ ಪರಿಕಲ್ಪನೆಗಳನ್ನು ವಿವರಿಸಲಾಗಿದೆ.
  1. ಅಧಿಕಾರ: ಇದರ ಅರ್ಥ ವಿವರಣೆ, ವಿವಿಧ ರೀತಿಯ ಅಧಿಕಾರ ಸಂಬಂಧಗಳು, ಅಧಿಕಾರದ ಪ್ರಭಾವ, ಅಧಿಕಾರದ ಬಗ್ಗೆ `ಘುಕೊನ ಸಂಪೂರ್ಣ ವಿವರಣೆ.
  2. ಅನುಭವಾತ್ಮಕ: ಅನುಭವಾತ್ಮಕತೆಯ ವಿವರಣೆ, ಇತ್ತೀಚೆಗಿನ ದಿನಗಳಲ್ಲಿ ಇದರ ಬಳಕೆ.
  3. ಅಭಿವೃದ್ಧಿ: ಸಂಕ್ಷಿಪ್ತವಾಗಿ ಇದರ ಅರ್ಥ ವಿವರಣೆ, ಅಭಿವೃದ್ಧಿಯ ವಿವಿಧ ಆಯಾಮಗಳು, ಇತ್ಯಾದಿಗಳು.
  4. ಅಸಂಘಟಿತ ವಲಯ: ಅಸಂಘಟಿತ ವಲಯ ಪರಿಕಲ್ಪನೆಯ ಅರ್ಥ ವಿವರಣೆ, ಇದರ ವಿಶಿಷ್ಟ ಲಕ್ಷಣಗಳು.
  5. ಅಸ್ಪೃಶ್ಯತೆ: ಅಸ್ಪೃಶ್ಯ ಪದದ ಅರ್ಥ ವಿವರಣೆ, ಇತಿಹಾಸ ಇತ್ಯಾದಿ.
  6. ಆಧುನಿಕತೆ: ಆಧುನಿಕತೆ ಅರ್ಥ ವಿವರಣೆ, ಇದರ ವಿವಿಧ ದೃಷ್ಟಿಕೋನ.
  7. ಉತ್ಪಾದನೆ: ಉತ್ಪಾದನೆ ಪದದ ಅರ್ಥಶಾಸ್ತ್ರೀಯ ವಿವರಣೆ, ಉತ್ಪಾದನೆಯ ವಿವಿಧ ಆಯಾಮಗಳು.
  8. ಉದಾರವಾದ: ಉದಾರವಾದ ಪದದ ಅರ್ಥವಿವರಣೆ ಇತ್ಯಾದಿ.
  9. ಉದ್ಯಮಶೀಲತೆ: ಉದ್ಯಮಶೀಲತೆ ಪರಿಭಾಷೆಯ ಅರ್ಥ ವಿವರಣೆ, ಉದ್ಯಮಶೀಲತೆಯುಂಟುಮಾಡಬಹುದಾದ ಸಂಕೀರ್ಣ ಅರ್ಥಕೇಂದ್ರಿತ ಚಟುವಟಿಕೆಗಳು ಹಾಗೂ ಅದರಿಂದ ಉಂಟಾಗಬಹುದಾದ ಪರಿಣಾಮಗಳನ್ನು ಚರ್ಚಿಸಲಾಗಿದೆ.
  10. ಉಪಭೋಗತಾವಾದ: ಉಪಭೋಗತಾವಾದದ ಅರ್ಥವಿವರಣೆ, ಇದರ ವಿವಿಧ ವಿಧಗಳು, ಇದರ ಪರಿಣಾಮಗಳು.
  11. ಊಳಿಗಮಾನ್ಯ ವ್ಯವಸ್ಥೆ: ಊಳಿಗಮಾನ್ಯ ಪರಿಕಲ್ಪನೆಯ ಅರ್ಥವಿವರಣೆ, ಇದರ ಇತಿಹಾಸ ಮತ್ತು ಲಕ್ಷಣಗಳು.
  12. ಏಜೆನ್ಸಿ (ಸ್ವಾಯತ್ತತೆ): ಈ ಪರಿಕಲ್ಪನೆಯ ಸಂಕ್ಷಿಪ್ತ ಅರ್ಥವಿವರಣೆ.
  13. ಕೋಮುವಾದ: ಕೋಮುವಾದ ಪರಿಕಲ್ಪನೆಯ ಅರ್ಥವಿವರಣೆ, ಇದರಲ್ಲಿನ ವಿಧಗಳು, ಗುಣಲಕ್ಷಣಗಳು ಇತ್ಯಾದಿ.
  14. ಕ್ರಾಂತಿಕಾರಿ ಪ್ರಜ್ಞೆ: ಮಾರ್ಕ್ಸ್‍ವಾದೀ ಸಿದ್ಧಾಂತದ ಪ್ರಕಾರ ಕ್ರಾಂತಿಕಾರಿ ಪ್ರಜ್ಞೆಯ ಅರ್ಥವಿವರಣೆ.
  15. ಗುರುತು/ಅಸ್ಮಿತೆ: ಈ ಪರಿಕಲ್ಪನೆಯ ಅರ್ಥವಿವರಣೆ, ಇದರ ವಿವಿಧ ಆಯಾಮಗಳು.
  16. ಜಾತಿ: ಜಾತಿ ಪರಿಕಲ್ಪನೆಯ ಅರ್ಥವಿವರಣೆ, ಇತಿಹಾಸ, ಗುಣಲಕ್ಷಣಗಳು ಮತ್ತು ಪರಿಣಾಮಗಳು.
  17. ಡಯಾಸ್ಪೋರಾ: ಡಯಾಸ್ಪೋರಾ ಪರಿಕಲ್ಪನೆಯ ಅರ್ಥವಿವರಣೆ, ವಿವಿಧ ವ್ಯಾಖ್ಯಾನಗಳು, ಲಕ್ಷಣಗಳು.
  18. ದಲಿತ: ದಲಿತ ಎನ್ನುವ ಪರಿಭಾಷೆಯ ಇತಿಹಾಸ, ಬಳಕೆ, ನಂತರದ ಬದಲಾವಣೆಗಳು ಇತ್ಯಾದಿ.
  19. ಪರಂಪರೆ: ಪರಂಪರೆ ಪದದ ಅರ್ಥ, ತತ್ತ್ವಶಾಸ್ತ್ರಜ್ಞರ ವಿವಿಧ ವ್ಯಾಖ್ಯಾನಗಳು, ಇತಿಹಾಸ.
  20. ಪರಕೀಯತೆ: ಪರಕೀಯತೆ ಪರಿಭಾಷೆಯ ಅರ್ಥವಿವರಣೆ, ಇದರ ಬಳಕೆ.
  21. ಪೌರತ್ವ: ಪೌರತ್ವ ಪದದ ಅರ್ಥವಿವರಣೆ, ಇದಕ್ಕೆ ಸಂಬಂಧಿಸಿದಂತೆ ವಿವಿಧ ದೇಶಗಳಲ್ಲಿನ ವಿವಿಧ ದೃಷ್ಟಿಕೋನಗಳು.
  22. ಪ್ರಬಲಜಾತಿ: ಪ್ರಬಲಜಾತಿಯ ಅರ್ಥ ಮತ್ತು ವ್ಯಾಪ್ತಿ, ಲಕ್ಷಣಗಳು, ಈ ಪರಿಕಲ್ಪನೆಯ ಮಹತ್ವ.
  23. ಪ್ರಭುತ್ವ: ಪ್ರಭುತ್ವದ ಕಲ್ಪನೆಯ ಬಗೆಗಿನ ಚರ್ಚೆಗಳು, ವಿವಿಧ ದೃಷ್ಟಿಕೋನದಿಂದ ಇದರ ಅರ್ಥವಿವರಣೆ.
  24. ಬಂಡವಾಳ: ಬಂಡವಾಳ ಪದದ ಅರ್ಥವಿವರಣೆ, ಈ ಪದದ ವಿವಿಧ ರೀತಿಯ ಬಳಕೆ, ಬಂಡವಾಳದ ಸಂಚಯನ, ವಿವಿಧ ರೀತಿಯ ಬಂಡವಾಳಗಳ ವಿವರಣೆ.
  25. ಮಹಿಳಾವಾದಿ ವಿಮರ್ಶೆ: ಮಹಿಳಾವಾದದ ಉಗಮ, ಅದರ ಬೆಳವಣಿಗೆ, ಇತಿಹಾಸ, ಕರ್ನಾಟಕದಲ್ಲಿನ ಮಹಿಳಾವಾದದ ಉಗಮ ಮತ್ತು ಬೆಳವಣಿಗೆ.
  26. ಮಾನವ ಅಭಿವೃದ್ಧಿ: ಮಾನವ ಅಭಿವೃದ್ಧಿ ಪರಿಕಲ್ಪನೆಯ ಅರ್ಥವಿವರಣೆ, ಇದರ ಬಗೆಗಿನ ಚಿಂತನೆಗಳು ಹಾಗೂ ವರಿದಿಗಳು, ವ್ಯಾಖ್ಯಾನಗಳು, ಹಿನ್ನೆಲೆ ಮತ್ತು ಮಾನವ ಅಭಿವೃದ್ಧಿಯ ಸೂಚ್ಯಾಂಕ.
  27. ಮಾರುಕಟ್ಟೆ: ಮಾರುಕಟ್ಟೆ ಪದದ ಇತಿಹಾಸ, ಬಳಕೆ, ನಂತರದ ಬದಲಾವಣೆಗಳು, ವಿವಿಧ ದೇಶಗಳಲ್ಲಿನ ಮಾರುಕಟ್ಟೆ ವ್ಯವಸ್ಥೆಗಳು, ಲಕ್ಷಣಗಳು, ಮಾರುಕಟ್ಟೆ ಬಂಡವಾಳಶಾಹಿ ವ್ಯವಸ್ಥೆಯ ಸಮಸ್ಯೆಗಳು.
  28. ಮಾರ್ಕ್ಸ್‍ವಾದ: ಮಾರ್ಕ್ಸ್‍ವಾದದ ಉಗಮ, ಬೆಳವಣಿಗೆ, ತಾತ್ವಿಕ ಮೂಲಗಳು, ಇದರ ಸಿದ್ಧಾಂತಗಳು.
  29. ಮೌಖಿಕತೆ: ಮೌಖಿಕತೆ ಪದದ ಅರ್ಥವ್ಯಾಪ್ತಿ, ಇದರ ಪರಂಪರೆ ಮತ್ತು ವಿವಿಧ ವಿಷಯಗಳಲ್ಲಿ ಇದರ ಬಳಕೆ.
  30. ರಚನಾವಾದ/ರಾಚನಿಕವಾದ: ರಚನಾವಾದದ ಅರ್ಥವಿವರಣೆ, ರಚನಾವಾದದ ಕೇಂದ್ರದಲ್ಲಿರುವ ಒಳನೋಟ, ರಚನಾವಾದದ ಗುಣಲಕ್ಷಣಗಳು, ಇದರ ಬಗೆಗಿನ ವಿಮರ್ಶೆಗಳು.
  31. ರಾಷ್ಟ್ರೀಯತೆ: ರಾಷ್ಟ್ರೀಯತೆ ಪರಿಕಲ್ಪನೆಯ ಅರ್ಥವಿವರಣೆ, ಇದರ ಇತಿಹಾಸ, ಬೆಳವಣಿಗೆ.
  32. ಲಿಂಗ ಸಮಾನತೆ: ಲಿಂಗ ಸಮಾನತೆಯ ಅರ್ಥವಿವರಣೆ, ವಿವಿಧ ದೇಶಗಳಲ್ಲಿನ ಇದರ ವಿವಿಧ ದೃಷ್ಟಿಕೋನ ಮತ್ತು ಇದರ ಮಹತ್ವ.
  33. ಲೈಂಗಿಕ ದೌರ್ಜನ್ಯ; ಲೈಂಗಿಕ ದೌರ್ಜನ್ಯದ ವಾಖ್ಯೆ ಹಾಗೂ ಸ್ವರೂಪ, ಅಂಕಿ ಅಂಶಗಳು, ದೇಶದ ಕಾನೂನು ವ್ಯವಸ್ಥೆಯಲ್ಲಿನ ಸುಧಾರಣೆಗಳು, ಕಾಯ್ದೆಗಳು.
  34. ವಲಸೆ: ವಲಸೆ ಪದದ ಅರ್ಥವಿವರಣೆ, ಜಗತ್ತಿನಾದ್ಯಂತ ಆದ ವಲಸೆಗಳ ವಿವರಣೆ, ಕಾರಣ, ಪರಿಣಾಮಗಳು ಇತ್ಯಾದಿ.
  35. ವಸಾಹತುಶಾಹಿ: ವಸಾಹತುಶಾಹಿ ಪರಿಕಲ್ಪನೆಯ ಅರ್ಥವಿವರಣೆ, ಇದರ ಜಾಗತಿಕ ಇತಿಹಾಸ.
  36. ವಿಕೇಂದ್ರೀಕರಣ: ಇದರ ಅರ್ಥ ವಿವರಣೆ, ವಿವಿಧ ಬಗೆಯ ವಿಕೇಂದ್ರೀಕರಣಗಳು.
  37. ಶೋಷಣೆ: ಮಾರ್ಕ್ಸ್‍ವಾದದ ಹಿನ್ನೆಲೆಯಲ್ಲಿ ಶೋಷಣೆ ಪರಿಕಲ್ಪನೆಯ ಅರ್ಥವಿವರಣೆ.
  38. ಶ್ರೇಣೀಕರಣ: ಇದರ ಅರ್ಥ ವಿವರಣೆ, ವಿವಿಧ ಬಗೆಯ ಜ್ಞಾನದ ವಿನ್ಯಾಸಗಳನ್ನು ಅರಿಯುವಿಕೆಗೆ ಇದರ ಬಳಕೆ, ಇದರ ಇತಿಹಾಸ.
  39. ಸಂವೇದನೆ: ಸಂವೇದನೆ ಪದದ ಅರ್ಥ ವಿವರಣೆ, ಇದರ ವಿವಿಧ ಬಗೆಗಳು.
  40. ಸಂಸ್ಕೃತಿ: ಸಂಸ್ಕೃತಿ ಪದದ ಅರ್ಥ ವಿವರಣೆ, ಇದರ ಬಗೆಗೆ ವಿವಿಧ ಕ್ಷೇತ್ರದ ಚಿಂತಕರ ವಿಭಿನ್ನ ದೃಷ್ಟಿಕೋನಗಳ ವ್ಯಾಖ್ಯಾನಗಳು, ಕನ್ನಡದ ವಿವಿಧ ನೆಲೆಗಟ್ಟುಗಳಲ್ಲಿ ಸಂಸ್ಕೃತಿಯ ಚಿಂತನೆಗಳು.
  41. ಸಬ್ಜೆಕ್ಟಿವಿಟಿ: ಇದರ ಅರ್ಥ ವಿವರಣೆ, ಕಾರಣ ಮತ್ತು ವ್ಯಾಖ್ಯಾನಗಳ ವ್ಯತ್ಯಾಸ, ಸಬ್ಜೆಕ್ಟ್ನ ಛಿದ್ರತೆ ಇತ್ಯಾದಿ.
  42. ಸಮಾನತೆ: ಸಮಾನತೆಯ ಅರ್ಥ ವಿವರಣೆ, ಇದರ ಆಧುನಿಕ ಪರಿಕಲ್ಪನೆ, ಬೆಳವಣಿಗೆ.
  43. ಸಮಾಜವಾದ: ಸಮಾಜವಾದ ಪರಿಕಲ್ಪನೆಯ ಉಗಮ, ಬೆಳವಣಿಗೆ, ಸಿದ್ಧಾಂತ.
  44. ಸರ್ವೋದಯ: ಸರ್ವೋದಯ ಪರಿಭಾಷೆಯ ಅರ್ಥವಿವರಣೆ, ಗಾಂಧೀಜಿಯವರ ಸರ್ವೋದಯ ಚಿಂತನೆ, ಇದರ ಬಳಕೆ.
  45. ಸಶಕ್ತೀಕರಣ ಪರಿಕಲ್ಪನೆ: ಇದರ ಅರ್ಥ ವಿವರಣೆ, ಬಳಕೆ, ವಿವಿಧ ಆಯಾಮಗಳು, ಗುಣಲಕ್ಷಣಗಳು, ಘಟಕಗಳು.
  46. ಸಾಮಾಜಿಕ ನ್ಯಾಯ: ಸಾಮಾಜಿಕ ನ್ಯಾಯದ ಪರಿಕಲ್ಪನೆ, ಇದರ ಇತಿಹಾಸ, ಈ ಪರಿಕಲ್ಪನೆ ಮಂಡಿಸುವ ವಾದಗಳು.
  47. ಸಾಮಾಜಿಕ ಬಂಡವಾಳ: ಸಾಮಾಜಿಕ ಬಂಡವಾಳದ ಅರ್ಥ ವಿವರಣೆ, ಭೌತಿಕ, ಮಾನವ ಮತ್ತು ಸಾಮಾಜಿಕ ಬಂಡವಾಳದ ನಡುವಿನ ವ್ಯತ್ಯಾಸ.
  48. ಸುಸ್ಥಿರಗತಿ ಅಭಿವೃದ್ಧಿ: ಸುಸ್ಥಿರಗತಿ ಅಭಿವೃದ್ಧಿ ಪರಿಕಲ್ಪನೆ ಅರ್ಥ, ಇದರ ಇತಿಹಾಸ, ವ್ಯಾಖ್ಯಾನಗಳು, ಸಂಕ್ಷಿಪ್ತ ಹಿನ್ನೆಲೆ ಇತ್ಯಾದಿ.
  49. ಸ್ವಾತಂತ್ರ್ಯ: ಈ ಪರಿಕಲ್ಪನೆಯ ಅರ್ಥವಿವರಣೆ, ಸ್ವಾತಂತ್ರ್ಯದ ಹೋರಾಟಗಳು, ಇದರ ಗ್ರಹಿಕೆಯ ಬದಲಾವಣೆಗಳು.
  50. ಹಕ್ಕುಗಳು: ಹಕ್ಕುಗಳ ಅರ್ಥ ವಿವರಣೆ, ವ್ಯಾಖ್ಯಾನಗಳು, ಸಿದ್ಧಾಂತಗಳು, ಚಿಂತನೆಗಳು ಇತ್ಯಾದಿ.

ಈ ಮೇಲಿನ ಪರಿಕಲ್ಪನೆಗಳನ್ನು ಒಳಗೊಂಡಂತೆ ಇನ್ನೂ ಅನೇಕ ಪರಿಕಲ್ಪನೆಗಳನ್ನೂ ಸಹ ಈ ಪುಸ್ತಕ ಒಳಗೊಂಡಿದೆ. ಈ ಪುಸ್ತಕವು ಸಮಾಜವಿಜ್ಞಾನ ವಿದ್ಯಾರ್ಥಿಗಳಿಗೆ ಮತ್ತು ಜನಸಾಮಾನ್ಯರಿಗೆ ಅತ್ಯುಪಯುಕ್ತವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಈ ಪುಸ್ತಕದ ಸಂಪಾದಕರಾದ ಡಾ. ಎಂ. ಚಂದ್ರ ಪೂಜಾರಿ, ಡಾ. ಟಿ.ಆರ್. ಚಂದ್ರಶೇಖರ್, ಡಾ. ವಿ.ಎಸ್. ಶ್ರೀಧರ ರವರಿಗೆ ಮತ್ತು ಈ ಪುಸ್ತಕದ ಪ್ರಕಾಶನ ಮಾಡಿದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದವರಿಗೆ ಸಮಾಜವಿಜ್ಞಾನ ವಿದ್ಯಾರ್ಥಿಗಳ ಮತು ಜನಸಾಮಾನ್ಯರ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇವೆ.
 
ಮಹದೇವ್ ಎಂ
1 Comment
Dr. Hanumanthappa D G
10/18/2018 11:36:26 pm

I want this book, please send details where it's available

Reply



Leave a Reply.


    20,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups

    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9

    Social Work Foot Prints


    RSS Feed


Site
  • Home
  • About Us
  • Editor's Blog
  • Leader's Talk
  • Blog
  • Online Store
  • Videos
  • Join Our Online Groups
Vertical Divider
HR Online Groups
20,000 HR PROFESSIONALS ARE CONNECTED THROUGH OUR NIRATHANKA HR GROUPS.
Join

Vertical Divider
Contact us
080-23213710
+91-8073067542
Mail-nirutapublications@gmail.com
Our Other Websites
www.hrkancon.com 
www.niratanka.org  
www.mhrspl.com
www.nirutapublications.org
Receive email updates on the new books & offers
for the subjects of interest to you.
Copyright Niruta Publications 2021
Website Designing & Developed by: www.mhrspl.com