ಪೀಠಿಕೆ:
ಭಾರತೀಯ ಸಮಾಜವು ಸಾಂಸ್ಕೃತಿಕವಾಗಿ ಬಹುಮುಖಿ ಸಮಾಜವಾಗಿದ್ದು, ತನ್ನದೆ ಆದ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ. ಹಾಗೆಯೇ ಭಾರತದಲ್ಲಿ ವಿಭಿನ್ನ ಧಾರ್ಮಿಕ ಸಮೂಹಗಳು ಅಸ್ತಿತ್ವದಲ್ಲಿದ್ದು, ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿವೆ. ಭಾರತೀಯ ಸಮಾಜವು ಸ್ತರವಿನ್ಯಾಸಯುಕ್ತ ಸಮಾಜವಾಗಿದ್ದು ಏಣಿಶ್ರೇಣಿಗಳಿಂದ, ನಿರ್ಬಂಧಗಳಿಂದ ಮತ್ತು ಅಸಮಾನತೆಯಿಂದ ಕೂಡಿದೆ. ಈ ಅಸಮಾನತೆಯ ಮೂಲ ಜಾತಿ ಸಮೂಹಗಳಲ್ಲಿರುವ ವೈವಿಧ್ಯತೆಗೆ ಕಾರಣವಾಗಿದೆ. ಭಾರತದಲ್ಲಿ ಗ್ರೀಕರು/ಹೂಣರು, ಕುಶಾನರು, ಮಂಗೋಲರು, ತುರುಕರು, ಮೊಘಲರು ಮುಂತಾದ ಜನಾಂಗೀಯ ಮೂಲನಿವಾಸಿ, ಆದಿವಾಸಿ ಬುಡಕಟ್ಟು ಜನಾಂಗದೊಂದಿಗೆ ಸಮ್ಮಿಶ್ರಣಗೊಂಡಿದ್ದಾರೆ. ಭಾರತದ ಮೂಲನಿವಾಸಿಗಳಾಗಿ ಆದಿವಾಸಿ ಬುಡಕಟ್ಟು ಜನಾಂಗದವರನ್ನು ಗುರುತಿಸಲಾಗಿದೆ. ಭಾರತದಲ್ಲಿ 461 ಬುಡಕಟ್ಟು ಸಮುದಾಯಗಳಿವೆ. 2011ರ ಜನಗಣತಿಯಂತೆ 9.50 ಕೋಟಿ ಜನಸಂಖ್ಯೆ ಬುಡಕಟ್ಟು ಸಮುದಾಯದವರಾಗಿದ್ದಾರೆ. ಭಾರತದಲ್ಲಿ ಕೆಲವು ಬುಡಕಟ್ಟಿನ ಜನರು ಗ್ರಾಮ-ನಗರ ಸಂಸ್ಕೃತಿಗೂ ಸೇರಿಕೊಳ್ಳದೆ ತಮ್ಮದೇ ಆದ ವಿಶಿಷ್ಠ ಸಂಸ್ಕೃತಿ ಪರಂಪರೆಯ ವಿಭಿನ್ನತೆಯನ್ನು ಹೊಂದಿದ್ದಾರೆ. ಪ್ರೊ|| ಕೇಶವಮೂರ್ತಿ ಟಿ.ಎನ್. ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಾಗೇಪಲ್ಲಿ
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |