Niruta Publications
  • Home
  • About Us
    • Ramesha's Profile
  • List Your Book for Free
  • Publication With Us
  • Niruta Prints
    • Our Services
    • Designer Profile
  • Our Services
  • Leaders Talk
  • Social Work Blog
  • HR Blog
    • Blog
  • Books / Online Store
  • Media Mentions
    • Photos
  • Join Our Online Groups
  • Contact Us
  • Home
  • About Us
    • Ramesha's Profile
  • List Your Book for Free
  • Publication With Us
  • Niruta Prints
    • Our Services
    • Designer Profile
  • Our Services
  • Leaders Talk
  • Social Work Blog
  • HR Blog
    • Blog
  • Books / Online Store
  • Media Mentions
    • Photos
  • Join Our Online Groups
  • Contact Us
Niruta Publications

ಜೀವ ವೈವಿಧ್ಯ ನಾಶದಿಂದ ಕಮರುತ್ತಿರುವ ಮಲೆನಾಡ ಬದುಕುಗಳು

10/20/2017

0 Comments

 
ಜೀವ ಸಂಕುಲದಲ್ಲಿ ಗಿಡ, ಮರ, ಪ್ರಾಣಿ, ಪಕ್ಷಿ, ಕ್ರಿಮಿ, ಕೀಟಾದಿಗಳಲ್ಲಿನ ಪ್ರಭೇದ, ವಿಭೇದಾದಿಗಳಲ್ಲಿನ ವಿವಿಧತೆ ಮಾತ್ರವಲ್ಲ ಈ ವಿವಿಧತೆ ಸದಾ ಏರಿಳಿತಗೊಳ್ಳುವ ವ್ಯವಸ್ಥೆಗೆ ಜೀವ ವೈವಿಧ್ಯವೆಂದು ಸರಳವಾಗಿ ವ್ಯಾಖ್ಯಾನಿಸಲಾಗುತ್ತದೆ.

ಹುಟ್ಟು, ಬದುಕು, ಸಾವು ಈ ಜೀವಯಾತ್ರೆ ಎಲ್ಲೆಡೆ ಇದ್ದಿದ್ದೆ. ಈ ಯಾತ್ರೆಯ ಅತ್ಯಂತ ಪ್ರಮುಖ ಘಟ್ಟವಾದ ಬದುಕೆಂಬುದು ನೈಜವಾಗಿ ಅರಳುವುದಾದರೂ ಕೌಟುಂಬಿಕ ಪರಿಸ್ಥಿತಿಗೂ ಮಿಗಿಲಾಗಿ ಅದರ ಸುತ್ತಲಿನ ಸಾಮಾಜಿಕ, ಸಾಂಸ್ಕೃತಿಕ, ಭೌಗೋಳಿಕ ಪರಿಸರಗಳ ಪ್ರಭಾವದಿಂದ. ಮಲೆನಾಡೆಂಬುದು ಪಶ್ಚಿಮಘಟ್ಟ, ನಿತ್ಯ ಹರಿದ್ವರ್ಣ ಕಾಡು, ಬೆಟ್ಟ ಗುಡ್ಡ, ಕೆರೆ, ಝರಿ, ಹಳ್ಳ ಕೊಳ್ಳಗಳಿಂದ ಕೂಡಿದ್ದು ದೇಶದಲ್ಲೇ ವಿಶಿಷ್ಟ ಪರಿಸರ ವ್ಯವಸ್ಥೆಯಾಗಿದೆ. ಇದು ಇಲ್ಲಿನ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತದೆ. ಇಲ್ಲಿನ ವಿಶಿಷ್ಟ ಪರಿಸರ ವ್ಯವಸ್ಥೆಯ ಅತ್ಯಂತ ಮೂರ್ತಸ್ವರೂಪವೇ `ಜೀವ ವೈವಿಧ್ಯ' (Biological Diversity) ವಾಗಿದೆ. ಈ ಪಶ್ಚಿಮಘಟ್ಟ ಪ್ರದೇಶ ಜಗತ್ತಿನ ಹತ್ತು ದಟ್ಟ ಜೀವ ವೈವಿಧ್ಯ ತಾಣಗಳಲ್ಲೊಂದು ಎಂಬ ಖ್ಯಾತಿ ಪಡೆದಿದೆ. ಇದಕ್ಕೆ ಹೊಂದಿಕೊಂಡೇ ಮಲೆನಾಡ ಹಿತ್ತಲು, ತೋಟ, ಹೊಲಗಳಲ್ಲೂ ನಾಟಿ ತಳಿಗಳು, ಹಣ್ಣು ತರಕಾರಿ, ಸಸ್ಯ, ಗಿಡ, ಮರಗಳ ಜೀವ ವೈವಿಧ್ಯ ಕೂಡ ಅಷ್ಟೇ ದಟ್ಟವಾಗಿರುತ್ತದೆ. ಅಂದಮೇಲೆ, ಮಲೆನಾಡ ಬದುಕುಗಳು ಅರಳುವುದಾದರೂ ಈ ದಟ್ಟ ಜೀವ ವೈವಿಧ್ಯದೊಳಗೇ ಎಂದಾಯ್ತು. ಹೀಗೆ, ಬದುಕನ್ನರಳಿಸಿಕೊಳ್ಳುವ ಅನನ್ಯ ಅವಕಾಶವನ್ನು ಬಾಲ್ಯದಲ್ಲಿ ಪಡೆಯುವಂತಾಗಿ ಈಗ ಬೆಂಗಳೂರಿನಂತಹ ಕಾಂಕ್ರಿಟ್ ಜಂಗಲ್ಗಳಲ್ಲಿ ಸಿಕ್ಕಿ ತೊಳಲಾಡುತ್ತಿರುವ ನನ್ನಂತಹವರಿಗೆ ಆ ಅದ್ಭುತ ಅವಕಾಶದ ಮರುನೆನಪೇ ಅಪಾರ ಸಂತಸ ತರುವಂತಾಗಿದೆ. ಆದರೆ, ಈ ಜನಸಂಖ್ಯೆ ಹೆಚ್ಚಳ, ಅರಣ್ಯನಾಶ, ಪರಿಸರ ವಿನಾಶಗಳಿಂದಾಗಿ ಅಲ್ಲಿನ ಆ ಜೀವ ವೈವಿಧ್ಯ ಕೂಡ ಕ್ಷೀಣಿಸುವಂತಾಗಿದ್ದು, ಇಲ್ಲಿನ ಬದುಕೇ ಈಗ ಕಮರುವಂತಾಗಿದೆ. ಮಿಗಿಲಾಗಿ, ಮುಂಬರುವ ತಲೆಮಾರುಗಳು ಇಂತಹ ಅವಕಾಶದಿಂದ ಪೂರ್ತಿ ವಂಚಿತವಾಗುವ ಅಪಾಯ ಕೂಡ ನಮ್ಮ ಮುಂದಿದೆ. ಈ ಎಲ್ಲಾ ವಿಚಾರಗಳತ್ತ ಕಣ್ಣು ಹಾಯಿಸುವುದು ಈ ಒಂದು ಪುಟ್ಟ ಲೇಖನದ ಪ್ರಯತ್ನವಾಗಿದೆ.


Read More
0 Comments

ವಿದೇಶಿ ದುಡ್ಡಲ್ಲಿ ಎನ್‍ಜಿಒ ಗಳ ಜಾತ್ರೆ!

10/20/2017

0 Comments

 
Picture
ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳ ನಿಧಿ ಬಳಕೆ ಮಾಡಿಕೊಂಡು ಎನ್‍ಜಿಒ (ಸರ್ಕಾರೇತರ ಸಂಸ್ಥೆಗಳು) ಕಾರ್ಯಾಚರಿಸುತ್ತಿವೆ. ಆ ಮೂಲಕ ಆ ದೇಶದ ನೀತಿ ನಿಯಮಗಳ ಮೇಲೆ ಪ್ರಭಾವ ಬೀರುವುದು ಒಂದೆಡೆಯಾದರೆ ಇನ್ನೊಂದೆಡೆ ಅಲ್ಲಿನ ಮೂಲ ಸಂಸ್ಥೆಗಳನ್ನು ನಾಶಪಡಿಸುವ ಕೆಲಸ ಕೂಡಾ ನಡೆಯುತ್ತಿದೆ.
​

ಎನ್‍ಜಿಒ ಎಂದರೆ ಆಯಾ ದೇಶದಲ್ಲಿ, ಪ್ರಾದೇಶಿಕವಾಗಿ ಮಾನವೀಯ ಸೇವೆಗಳನ್ನು ಒದಗಿಸುವ ಸಂಸ್ಥೆ ಎಂಬ ಭಾವನೆ ಪಾಶ್ಚಿಮಾತ್ಯ ದೇಶಗಳನ್ನು ಹೊರತುಪಡಿಸಿ ಉಳಿದ ದೇಶಗಳಲ್ಲಿ ಇದೆ. ಯಾಕೆಂದರೆ, ಪೊಲೀಸ್ ದೌರ್ಜನ್ಯ ಅಥವಾ ಅಧಿಕಾರಿಗಳ ದೌರ್ಜನ್ಯದ ವಿರುದ್ಧ ಹೋರಾಟ, ಬಡತನದ ವಿರುದ್ಧ ಹೋರಾಟ, ಪರಿಸರ ಸ್ನೇಹಿ ಚಟುವಟಿಕೆಗಳು ಮೊದಲಾದವುಗಳು ಎನ್‍ಜಿಒ ಗಳ ಕಾರ್ಯವ್ಯಾಪ್ತಿ. ಈ ಎಲ್ಲ ಚಟುವಟಿಕೆಗಳಿಗೆ ಹಣ ಒದಗಿಸುವುದು ವಿದೇಶಿ ಮೂಲ. ಈ ವಿದೇಶಿ ಮೂಲಗಳಿಗೆ ತಮ್ಮ ಕಾರ್ಯಸೂಚಿಯನ್ನು ಆಯಾ ದೇಶಗಳಲ್ಲಿ ಸ್ಥಾಪಿಸಬೇಕಾಗಿರುತ್ತದೆ. ಹಾಗಾಗಿ, ವಿದೇಶಿ ಮೂಲಗಳು ತಮ್ಮ ರಾಜತಾಂತ್ರಿಕ ತಂತ್ರದ ಮೂಲಕ ಅದನ್ನು ಸಾಧಿಸಲು ಪ್ರಯತ್ನಿಸುತ್ತವೆ. ಇದೊಂದು ರೀತಿಯಲ್ಲಿ ಪರೋಕ್ಷ ಯುದ್ಧವೇ ಸರಿ.

Read More
0 Comments

ಸಾಮಾಜಿಕ ಪರಿವರ್ತಕರಾಗಿ ಎಚ್.ಎಸ್. ದೊರೆಸ್ವಾಮಿ

10/16/2017

0 Comments

 
Picture
ಆಡು ಮುಟ್ಟದ ಸೊಪ್ಪಿಲ್ಲ, ಹಾಗೆಯೇ ದೊರೆಸ್ವಾಮಿಗಳು ಹೋರಾಡಲು ಮುನ್ನಡೆಯದಿದ್ದ ರಾಜಕೀಯ, ಸಾಮಾಜಿಕ ಕ್ಷೇತ್ರಗಳಿಲ್ಲ, ಅವರ ನಿಷ್ಠೆ ಅಚಲ, ಸಂಕಲ್ಪದೃಢ, ನಿರ್ಭೀತ ಮನೋನಿಶ್ಚಯ. ತಮ್ಮ ಆದರ್ಶಗಳ ಸಾಧನೆಗಾಗಿ ರಣರಂಗಕ್ಕೆ ಮುನ್ನಗ್ಗಿ ಅವಿರತ ಹೋರಾಟದಲ್ಲಿ ತೊಡಗುವುದು ಅವರ ಜಾಯಮಾನ. ಜಾತೀಯ ಪಿತೂರಿಗಳಿಂದ ಕುಲಷಿತಗೊಂಡಿದ್ದ ಕರ್ನಾಟಕ ಏಕೀಕರಣ ಸಮಸ್ಯೆಯ ಬಗ್ಗೆ ಎಲ್ಲರನ್ನು ಒಂದುಗೂಡಿಸಿ ದಂಡುಕಟ್ಟಿ ದುಡಿದದ್ದೂ, ಸರ್ವೋದಯ ಕಾರ್ಯಗಳಿಗೆ ಟೊಂಕಕಟ್ಟಿ ರಾಜ್ಯದಾದ್ಯಂತ ಅಡ್ಡಾಡಿ ಜಾತೀಯ ದ್ವೇಷಪೂರಿತ ಗುಂಪುಗಳ ನಡುವೆ ಸೌಹಾರ್ದವೇರ್ಪಡಿಸಿದ್ದೂ, ಅವರ ಮಹತ್ವದ ಸಾಧನೆಗಳಲ್ಲಿ ಒಂದು ಹಾಗೂ ಭಾರತ ಸೇವಕ ಸಮಾಜದ ಪ್ರತಿನಿಧಿಯಾಗಿ, ಕೊಳೆಗೇರಿಗಳ ಸುಧಾರಣೆಗೆ ಕಂಕಣ ಕಟ್ಟಿ ದುಡಿದರೂ ಅವರ ಸಾಧನೆಗೆ ಇಟ್ಟ ಮತ್ತೊಂದು ಗರಿ.

Read More
0 Comments

ರಾಜ್ಯಮಟ್ಟದ ವಿಚಾರ ಸಂಕಿರಣ ಮತ್ತು ಗೌರವ ಸದಸ್ಯತ್ವ ಪ್ರದಾನ

10/16/2017

0 Comments

 
Picture
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ನಿರಾತಂಕ ಬಳಗದ ಸಹಯೋಗದೊಂದಿಗೆ ದಿನಾಂಕ 15ನೆಯ ಏಪ್ರಿಲ್ 2012 ಭಾನುವಾರದಂದು ನಡೆದ ಪರಿಷತ್ತಿನ ಗೌರವ ಸದಸ್ಯತ್ವ ಪ್ರದಾನ ಮತ್ತು ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿತ್ತು. ಈ ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಶ್ರೀ. ಗೊ.ರು. ಚನ್ನಬಸಪ್ಪ, ಅಧ್ಯಕ್ಷರು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ವಹಿಸಿದ್ದರು ಮತ್ತು ಪ್ರಸ್ತಾವನೆ ನುಡಿಗಳನ್ನು ಡಾ.ಎಚ್.ಎಂ. ಮರುಳಸಿದ್ಧಯ್ಯ, ಸಮಾಜಕಾರ್ಯ ತಜ್ಞರು, ಅವರು ಮಂಡಿಸಿದರು. (ಈ ಪ್ರಸ್ತಾವನೆ ನುಡಿಗಳನ್ನು ಈ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ.) ಶ್ರೀ ಗೊ.ರು. ಚನ್ನಬಸಪ್ಪನವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಸಮಾಜದಲ್ಲಿನ ವ್ಯಂಗ್ಯಗಳನ್ನು ಅರ್ಥಪೂರ್ಣವಾಗಿ ದಿನಪತ್ರಿಕೆಗಳಲ್ಲಿನ ಶೀರ್ಷಿಕೆಗಳನ್ನು ಉದಾಹರಿಸುತ್ತ ಸಭಿಕರ ಮನಸ್ಸು ಚಿಂತಿಸುವಂತೆ ಮಾಡಿತು. ಓಶೋನ ಒಂದು ದೃಷ್ಠಾಂತವನ್ನು ನೀಡಿದರು. ಚೀನಾದಲ್ಲಿ ಒಬ್ಬ ವ್ಯಕ್ತಿ ಆಕಸ್ಮಿಕವಾಗಿ ಒಂದು ತೆರೆದ ಬಾವಿಯಲ್ಲಿ ಬಿದ್ದನಂತೆ. ಅವನು ತನ್ನ ಪ್ರಾಣ ಉಳಿಸಿಕೊಳ್ಳಲು ವಿಫಲನಾಗಿ ಯಾರಾದರೂ ನನ್ನನ್ನು ಕಾಪಾಡಿ ಎಂದು ಕೂಗುತ್ತಿರುತ್ತಿದ್ದಾನೆ. ಒಬ್ಬ ಧರ್ಮಪ್ರಚಾರಕ ಅಲ್ಲಿಗೆ ಬಂದು ಇಣುಕಿ ನೋಡಿ ಅಯ್ಯಾ ಏನಾಯಿತು? ಎಂದನಂತೆ. ಬಾವಿಗೆ ಬಿದ್ದವ ನನ್ನನ್ನು ರಕ್ಷಿಸಿ ಎಂದನಂತೆ, ನೀನು ಪ್ರಾಕೃತಿಕವಾಗಿ ಬಾವಿಗೆ ಬಿದ್ದಿರುವೆ ಆದುದರಿಂದ ಪ್ರಕೃತಿ ನಿನ್ನನ್ನು ಶಿಕ್ಷೆಗೆ ಗುರಿಪಡಿಸಿದೆ. ನಿನ್ನನ್ನು ರಕ್ಷಿಸುವುದು ಪ್ರಕೃತಿಗೆ ವಿರುದ್ಧವಾದುದ್ದು ನನಗೆ ಪಾಪ ಬರುತ್ತದೆ ಎಂದು ಹೇಳಿ ಹೋರಟುಹೊದನಂತೆ, ಎಂತಹ ಜ್ಞಾನಿ ಆ ಧರ್ಮ ಪ್ರಚಾರಕ. 

Read More
0 Comments

ಯೋಜನಾಬದ್ಧವಾಗಿ ಬದುಕಲು ಕಲಿಯದೆ ಜಾಹೀರಾತು ಒತ್ತಡದಲ್ಲಿ ಸಿಲುಕಿ ನರಳುತ್ತಿರುವ ಅಕ್ಕಸಾಲಿಗ

10/16/2017

0 Comments

 
ಪ್ರಪಂಚದ ವೃತ್ತಿಗಳಲ್ಲಿ ಅಕ್ಕಸಾಲಿಗ ವೃತ್ತಿಯು ಅತ್ಯಂತ ಪ್ರಾಚೀನವಾದ ವೃತ್ತಿ. ಅದರಲ್ಲೂ ಭಾರತದ ಅಕ್ಕಸಾಲಿಗ ವೈವಿಧ್ಯಮಯವಾದ ಸೃಜನಾತ್ಮಕ ಕುಶಲ ಕಲೆಯಿಂದ ಬಂಗಾರದಲ್ಲಿ ಹಸ್ತಶಿಲ್ಪವನ್ನು ಸೃಷ್ಟಿಸಿ ಸಂಸ್ಕೃತಿಯ ವಿಕಾಸಕ್ಕೆ, ಭವ್ಯತೆಗೆ ತನ್ನದೇ ಆದ ಕೊಡುಗೆಯನ್ನು ನೀಡಿದ್ದಾನೆ. ಅದರಲ್ಲೂ ಕರ್ನಾಟಕ ಶೈಲಿಯ ಆಭರಣ ತಯಾರಿಕೆ ತನ್ನದೇ ಆದ ವಿಶಿಷ್ಟ ಸ್ಥಾನಮಾನವನ್ನು ಆಭರಣ ಕ್ಷೇತ್ರದಲ್ಲಿ ಉಳಿಸಿಕೊಂಡು ಬಂದಿದೆ. ಒಂದು ಕಾಲಕ್ಕೆ ನಮ್ಮ ಸಮಾಜದಲ್ಲಿ ಬಹಳ ಶ್ರೇಷ್ಠ ಮನ್ನಣೆಯನ್ನೂ, ಆಧಾರವನ್ನೂ ಅಕ್ಕಸಾಲಿಗ ಪಡೆಯುತ್ತಿದ್ದ. ತನ್ನ ನಂಬಿಕೆ, ಪ್ರಾಮಾಣಿಕತೆ ಮತ್ತು ಕುಶಲತೆಯಿಂದ ಕರ್ನಾಟಕದ ಅಕ್ಕಸಾಲಿಗನನ್ನು ರಾಜಾಶ್ರಯ ಪಡೆಯುವಂತೆ ಮಾಡಿದ್ದು ಇತಿಹಾಸ. 

Read More
0 Comments

ಭೂಸ್ವಾದೀನ, ಪುನರ್ವಸತಿ ಮತ್ತು ಪುನರ್ನೆಲೆ ಮಸೂದೆ-2011: ಒಂದು ಅವಲೋಕನ

10/16/2017

0 Comments

 
Picture
ಈ ಜೀವ ತುಂಬಿದ ಚೇತನವಿಲ್ಲದ ಜಡ ಪ್ರಪಂಚವನ್ನು ಯಾವುದೋ ಒಂದು ಶಕ್ತಿ ಆವರಿಸಿಕೊಂಡು ಇರುವಂತೆ ಭಾವಕ್ಕೆ ಒಳಪಡದಂತೆ, ಅಳತೆಗೆ ವಶವಾಗದಂತೆ ಇರುವ ಆ ವಿಶೇಷಕ್ಕೆ ನಮಸ್ಕರಿಸುವೆ. ಆ ವಿಶೇಷವೆ ನೆಲ, ಜಲ, ಗಾಳಿ ಎನ್ನುವ ಡಿವಿಜಿಯವರ ಮಂಕುತಿಮ್ಮನ ಕಗ್ಗದ ತಾತ್ಪರ್ಯ ವಿಶೇಷವಾದದ್ದು. ಆಕಾಶದಲ್ಲಿ ತಾರೆಗಳು ನೂರಿದ್ದರೇನು. ಕತ್ತಲೆಯಲ್ಲಿ ನಡೆಯುವ ದಾರಿಗನಿಗೆ ಬೇಕಿರುವುದು ಬೆಳಕ ಕರುಣಿಸುವ ಒಂದು ಚಿಕ್ಕ ಹಣತೆಯೆ ಹೊರತು, ತಾರಾಮಂಡಲದ ತಾರೆಗಳಲ್ಲ. ಕತ್ತಲಲ್ಲಿ ದಾರಿಕಾಣದೆ ನಡೆಯುತ್ತಿರುವ ಮನುಷ್ಯನಿಗೆ ಜೊತೆಗಾರನಾಗಿ ಬೇಕಾಗಿರುವುದು ಮಾನವೀಯ ಮುಖದ ಮನುಷ್ಯನೇ ಹೊರತು ದೂರದ ದೇವರುಗಳಲ್ಲ. ಈ ಪ್ರಪಂಚದಲ್ಲಿ ಮನುಷ್ಯನ ಅಸ್ತಿತ್ವಕ್ಕೆ ಕಾರಣವಾಗಿರುವ ಈ ನೆಲ, ಜಲ, ಮನುಷ್ಯನ ಹಾರಾಟಕ್ಕೆ, ರಂಪಾಟಕ್ಕೆ, ಸಾಧನೆಗೆ, ಏಳಿಗೆಗೆ, ಕಾರಣವಾಗಿದೆ. ಈ ನೆಲ, ಜಲಗಳನ್ನು ಅನುಭವಿಸುವ ಹಕ್ಕು ಪ್ರತಿಯೊಂದು ಜೀವ ಜಂತುಗಳಿಗೂ ಇದೆ. ಅನುಭವಿಸುವಂತೆ ಮಾಡಬೇಕಾದುದ್ದು ನಮ್ಮ ಕರ್ತವ್ಯ ಕೂಡ. ಒಂದು ವಸ್ತುವನ್ನು ಸೃಷ್ಟಿಸುವ ಶಕ್ತಿ ನಮಗಿಲ್ಲ ಎಂದಾದರೆ ಒಂದು ವಸ್ತುವನ್ನು ನಾಶಪಡಿಸುವ ಹಕ್ಕು ನಮಗಿಲ್ಲ.

Read More
0 Comments

ಕರ್ನಾಟಕ ನಾಗರಿಕ ಸೇವಾ ಖಾತರಿ ಯೋಜನೆ 2011 ಅಥವಾ ಸಕಾಲ ಯೋಜನೆ

10/16/2017

0 Comments

 
ಕರ್ನಾಟಕ ನಾಗರಿಕ ಸೇವಾ ಖಾತರಿ ಯೋಜನೆ ಅಧಿನಿಯಮ 2011 ಅಥವಾ ಸಕಾಲ ಯೋಜನೆಯು ಏಪ್ರಿಲ್ 2, 2012ರಿಂದ ಕರ್ನಾಟಕದಾದ್ಯಂತ ಜಾರಿಗೆ ಬಂದಿದೆ. ನಾಗರಿಕರಿಗೆ ವಿಳಂಬವಿಲ್ಲದೆ ಸರ್ಕಾರಿ ಸೇವೆಗಳನ್ನು ಒದಗಿಸುವ ದೃಷ್ಟಿಯಿಂದ ಜಾರಿಗೆ ತಂದಂತಹ ಕರ್ನಾಟಕ ಸರ್ಕಾರದ ಮಹತ್ತರ ಯೋಜನೆ ಇದಾಗಿದೆ. ಹೊಸದೊಂದು ವೃತ್ತಿ ಸಂಸ್ಕೃತಿ ರೂಪಿಸಬೇಕೆಂಬುದೇ  ಈ ಯೋಜನೆಯ  ಉದ್ದೇಶವಾಗಿದೆ. 

Read More
0 Comments

ಆದರ್ಶ-ಅನಾದರ್ಶಗಳ ಸೋಜಿಗ: ಉಮಾ-ಶ್ರೀ

10/16/2017

0 Comments

 
Picture
ಜೋಡಿಹಕ್ಕಿಗಳನ್ನು ಒಂದೇ ಲೇಖನದಲ್ಲಿ ಹಿಡಿದಿಡುವ ಸಾಹಸ ಇಲ್ಲಿನ ಆಶಯ. ಮೂಲ ಕರ್ನಾಟಕವಾದರೂ ಐತಿಹಾಸಿಕ ಘಟನೆಯಿಂದ ಕೇರಳಕ್ಕೆ ವಲಸೆ ಹೋದ ಪೈ ವಂಶದ ಕುಡಿ ಡಾ.ಕೆ.ವಿ. ಶ್ರೀಧರನ್ ಆಂಧ್ರದ ಡಾ. ಉಮಾ ಅವರೊಡನೆ ಶ್ರೀಧರನ್ ನಡುವಯಸ್ಸಿನಲ್ಲಿ ಜೊತೆಗೂಡಿ ಕರ್ನಾಟಕದಲ್ಲಿ ಬದುಕಿ, ಇಲ್ಲಿಯೇ ಕೊನೆಯುಸಿರೆಳೆದರು. ಸಮಾಜಕಾರ್ಯದಲ್ಲಿ ತೊಡಗಿಕೊಂಡ ಅವರ ಬದುಕು ಅಪರೂಪದ್ದು. ಹೀಗಾಗಿ ಕರ್ನಾಟಕವು ಕೇರಳ ಆಂಧ್ರಗಳನ್ನು ಬೆಸೆದ ನಾಡಾಯ್ತು. ನಾನು ಅವರಿಬ್ಬರನ್ನು ಸೇರಿಸಿ ಬಳಸಿರುವ ಉಮಾ-ಶ್ರೀ ಸಂಯುಕ್ತ ಪದವನ್ನು ಅವರು ಬದುಕಿದ್ದಿದ್ದರೆ ಒಪ್ಪುತ್ತಿದ್ದರೊ, ಕಾಣೆ. ಯಾಕೆಂದರೆ, ಡಾ. ಉಮಾ ಅವರನ್ನು ಶ್ರೀಮತಿ ಉಮಾ ಎಂದರೆ ಅವರಿಗೆ ಇಷ್ಟವಾಗುತ್ತಿರಲಿಲ್ಲವಂತೆ; ಉಮಾ ಶ್ರೀಧರನ್ ಅಂದರೆ ಅವರಿಬ್ಬರೂ ಒಪ್ಪುತ್ತಿರಲ್ಲಿಲ್ಲವೇನೊ; ಶ್ರೀಧರನ್ ಯಾವಾಗಲೂ ಇವರು ಉಮಾ ಎಂದು ಪರಿಚಯಿಸುತ್ತಿದ್ದರೇ ಹೊರತು ಇವರು ನನ್ನ ಪತ್ನಿ ಉಮಾ ಎಂದು ಪರಿಚಯಿಸುತ್ತಿರಲಿಲ್ಲ. ಆದರೆ ಭಾರತೀಯ ಪರಂಪರೆಯ ಪ್ರಕಾರ ಪ್ರಕೃತಿ-ಪುರುಷ ಮತ್ತು ಅರ್ಧನಾರೀಶ್ವರ ಶಬ್ದಗಳಲ್ಲಿ ಮೊದಲು ಸ್ತ್ರೀ ಆನಂತರ ಪುರುಷ ಬರುತ್ತಾನೆ ಎಂಬುದನ್ನು ಮನದಂದು ಉಮಾ-ಶ್ರೀ ಸರಿಯಾದ ಪ್ರಯೋಗ ಎಂದು ನಾನು ಅಂದುಕೊಳ್ಳುತ್ತೇನೆ. 

Read More
0 Comments

ಸಮಸ್ಯೆಗಳನ್ನು ಸಮಾಧಾನದಿಂದಲೇ ಸಹಿಸುತ್ತಿರುವ ಸಮಾಜಕಾರ್ಯಕರ್ತರು

10/16/2017

0 Comments

 
ಸಮಾಜದಲ್ಲಿ ಮಾನವ ಜನಾಂಗದಷ್ಟೆ ಪುರಾತನವಾಗಿರುವ ಅನೇಕ ಸಮಸ್ಯೆಗಳ ಸುಳಿಯಿಂದ ಸಂಕಷ್ಟದಲ್ಲಿರುವ ಪರಿಸ್ಥಿತಿ ಸುಧಾರಿಸುವ ಮಹದಾಸೆಯೊಂದಿಗೆ ಸುಮಾರು ಶತಮಾನದ ಹಿಂದೆ ಅಮೆರಿಕಾದಿಂದ  ಆಮದಾಗಿದೆ. ವೃತ್ತಿಪರ ಸಮಾಜಕಾರ್ಯ ನಮ್ಮ ದೇಶದ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಸಾಂಪ್ರದಾಯಿಕ ನಿಲುವುಗಳಿಂದಾಗಿ ನಮ್ಮಲ್ಲಿನ್ನು ಈ ವೃತ್ತಿಪರ ಸಮಾಜಕಾರ್ಯದ ಪರಿಕಲ್ಪನೆ ನೆನೆಗುದಿಗೆ ಬಿದ್ದಿದೆ. ಅಸ್ಪಷ್ಟ ಕಲ್ಪನೆಯಿಂದ ವೃತ್ತಿಯಾಗಿ ಸಂಪೂರ್ಣ ಬೇರು ಬಿಡಲು ನಾವಿನ್ನು ಅನಿವಾರ್ಯವಾಗಿ ಕಾಯಬೇಕಿದೆ.

Read More
0 Comments

ಪರಿಪೂರ್ಣ ವೃತ್ತಿಪರ ಸಮಾಜಕಾರ್ಯಕರ್ತರಾಗಿ: ಬಿ.ಎಲ್ ಪಾಟೀಲ

10/16/2017

0 Comments

 
Picture
ಈಗ್ಗೆ ಹದಿಮೂರು ವರ್ಷಗಳ ಹಿಂದೆ ಕರ್ನಾಟಕ ವಿಶ್ವವಿದ್ಯಾಲಯದ ಅಂತಿಮ ವರ್ಷದ ಸಮಾಜಕಾರ್ಯದ ಸ್ನಾತಕೋತ್ತರ ವಿದ್ಯಾರ್ಥಿನಿ ನಾನು. ವಿಶ್ವವಿದ್ಯಾಲಯದ ಅಣತಿಯಂತೆ ಅಥಣಿಯ ವಿಮೋಚನಾ ಸಂಸ್ಥೆಗೆ Block Placement ಗಾಗಿ ಬಂದಿದ್ದು ನನ್ನ ಅದೃಷ್ಟವೇ ಎನ್ನಬೇಕು. ವರ್ಷದಲ್ಲಿ ನಾಲ್ಕಾರು ಕಡೆ ನೌಕರಿ ಬದಲಿಸುವ ಸಮಾಜಕಾರ್ಯಕರ್ತರನ್ನ ಕಂಡಿದ್ದೇನೆ. ಅದಕ್ಕೆ ಕಾರಣಗಳೇನು ಕಡಿಮೆ ಇಲ್ಲ. ಆದರೆ ವಿದ್ಯಾರ್ಥಿನಿಯಾಗಿ ಬಂದ ನನಗೆ Result ಬರುವ ಮೊದಲೇ ನೌಕರಿಗಾಗಿ ಆಫರ್ ನೀಡಿದ್ದು ವಿಮೋಚನಾ ಸಂಸ್ಥೆ. 2 ವರ್ಷಗಳಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಸಮಾಜಕಾರ್ಯ ವಿಭಾಗದ ಡಾ.ಜಿ.ಎಸ್. ಬಿದರಿಕೊಪ್ಪ, ಡಾ. ಶೇಖರ ಪೂಜಾರ್, ಡಾ.ಜಿ.ಎನ್. ಗನಿಹಾರ, ಡಾ. ವಿನೀತಾ ಪೈ, ಡಾ. ಶೋಭಾದೇವಿ ಮತ್ತು ಡಾ. ಸ್ವಾದಿ ಗುರುವೃಂದದ ಪರಿಣಿತ ಮತ್ತು ಗಟ್ಟಿತನದ ಸಮಾಜಕಾರ್ಯದ ಪ್ರಾಯೋಗಿಕ ಜ್ಞಾನ, ಕೌಶಲ್ಯ, ತಂತ್ರಗಾರಿಕೆ ಕಲಿತು ನನ್ನದೇ ಆದ ವೃತ್ತಿ ಪರತೆಯನ್ನು ಕಟ್ಟಿಕೊಂಡವಳು ನಾನು Block Placement ಅವಧಿಯಲ್ಲಿ ವಿಮೋಚನಾದ ಅಧ್ಯಕ್ಷರಾದ ಶ್ರೀ.ಬಿ.ಎಲ್. ಪಾಟೀಲ ಅವರಿಂದ ಸಹಕಾರ್ಯದರ್ಶಿಗಳಾದ ಶ್ರೀ.ವ್ಹಿ.ಎಸ್. ಮನವಾಡೆಯವರಿಂದ ಗುರುತಿಸಿಕೊಂಡಿದ್ದೆ. ಅಂತೆಯೇ ಅವರು ನೀಡಿದ ಆಫರ್ ಬಗ್ಗೆ ಡಾ. ವಿನೀತಾ ಪೈ ಮ್ಯಾಡಂ ಅವರ ಹತ್ತಿರ ಚರ್ಚಿಸಿದಾಗ, ಒಂದೆರಡು ವರ್ಷ ಕೆಲಸ ಮಾಡುವ Field ನ ಅನುಭವವಾಗುತ್ತದೆ, ನಂತರ ಮುಂದಿನ ವಿದ್ಯಾಭ್ಯಾಸಕ್ಕೆ ತೊಡಗು ಎಂದು ಮಾರ್ಗದರ್ಶನ ನೀಡಿದರು. ಅಂತೆಯೇ ಇಂದೂ ಅಂದರೆ 1999ರ ಅಕ್ಟೋಬರ್ 10 ರಿಂದ ನಿರಂತರವಾಗಿ ವಿಮೋಚನಾ ಬಳಗದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಸಾರ್ಥಕ ಬದುಕು ನನ್ನದು.

Read More
0 Comments

ಶಾಲಾ ಜೋಡಣೆ ಯೋಜನೆಯ ಪರಿಣಾಮಗಳು, ಸವಾಲುಗಳು ಮತ್ತು ಪರಿಹಾರಗಳು

10/12/2017

0 Comments

 
Picture
56ನೆಯ ಕನ್ನಡ ರಾಜ್ಯೋತ್ಸವವನ್ನು ಬಹಳ ವಿಜೃಂಭಣೆಯಿಂದ ಕರ್ನಾಟಕದ ಜನತೆ ಆಚರಣೆ ಮಾಡಿಕೊಂಡಿದ್ದರೆ ಇದರ ಜೊತೆಗೆ ಕನ್ನಡಕ್ಕೆ ಎಂಟನೇ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟ ಕಂಬಾರರಿಗೆ ಸನ್ಮಾನ ಸಮಾರಂಭಗಳು ಆಚರಿಸುತ್ತಿರುವ ಸಂತೋಷದ ಸಮಯದಲ್ಲಿ, ಕರ್ನಾಟಕ ಸರ್ಕಾರವು ಬಹಳ ಮಹತ್ತರವಾದ ಬಹುಮಾನವನ್ನು ಕನ್ನಡ ಜನತೆಗೆ ನೀಡಿದೆ. ಅದೇನೆಂದರೆ 2012ರ ವರ್ಷಾಂತ್ಯಕ್ಕೆ 3178 ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚಲು ಆದೇಶ ಮಾಡಿದೆ. ಇದಕ್ಕೆ ವಿರೋಧವಾಗಿ 56ನೆಯ ಕನ್ನಡ ರಾಜ್ಯೋತ್ಸವದ ಸಮಾರಂಭಗಳಲ್ಲಿ ಸಾಮಾಜಿಕ ಚಿಂತಕರು, ಶಿಕ್ಷಣತಜ್ಞರು, ಕನ್ನಡ ಪರ ಹೋರಾಟಗಾರರು, ಸಮಾಜಕಾರ್ಯಕರ್ತರು ಮುಚ್ಚಲಿರುವ ಶಾಲೆಗಳ ಬಗ್ಗೆ ವಿರೋದ ವ್ಯಕ್ತಪಡಿಸಿದರೆ ವಿನಃ ಏಕೆ ಮುಚ್ಚುತ್ತಿದ್ದಾರೆ? ಅದರ ಪರಿಣಾಮಗಳೇನು? ಯಾರ ಮೇಲೆ ಹೊರೆ ಬೀಳುತ್ತದೆ? ಇದರ ಹಿಂದಿನ ಹುನ್ನಾರವೇನು? ಮಕ್ಕಳ ಹಾಗೂ ಕುಟುಂಬಗಳ ಮೇಲೆ ಆಗುವ ಮನೋ-ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳೇನು? ಎಂಬ ಹಲವಾರು ಪ್ರಶ್ನೆಗಳಿಗೆ ಯಾರೂ ಉತ್ತರ ನೀಡದಿದ್ದುದು ವಿಪರ್ಯಾಸವೇ ಸರಿ.

Read More
0 Comments

ಇರಾಣ ದೇಶದ ಜನಪರ ಸೂಫೀ ಕವಿ ಶೇಖ್ ಸಾದಿ

10/12/2017

0 Comments

 
Picture
ಮೂಲ ಸ್ವಭಾವದ ಮಾನವ ಕುಲವೊಂದೆ
ಆತನ ಜೀವನ ಅರಳುವ ನೆಲವೊಂದೆ ;
ಪೆಟ್ಟು ತಿಂದಿತೋ ಯಾವುದೆ ಅವಯವವು
ಉಳಿದೆಲ್ಲವು ತಕ್ಷಣ ಎಚ್ಚರಗೊಳ್ಳುವವು;
ಯಾರ ನೋವಿಗೂ ಸ್ಪಂದಸದಿರುವವರು
ಮನುಜನ ಹೆಸರಿಗೇ ಕಳಂಕ ತರುವವರು !
      
ಇದು ಇರಾಣ ದೇಶದ 12ನೆಯ ಶತಮಾನದ ಜನಪರ ಸೂಫೀ ಕವಿ ಶೇಖ್ ಸಾದಿಯವರ ಗುಲಿಸ್ತಾನ್ (ಹೂದೋಟ) ಎಂಬ ಕಾವ್ಯಸಂಕಲನದಲ್ಲಿಯ ಒಂದು ಮಾರ್ಮಿಕ ಮಾದರಿ. ಕವಿಗೆ ವಿಶ್ವವಿಖ್ಯಾತಿಯನ್ನು ತಂದಿತ್ತ ಸರಳ ಕವಿತೆ. ಮಾನವಕುಲದಲ್ಲಿರುವ ಸಮಾನತೆ ಮತ್ತು ಏಕತೆಯನ್ನೇ ಲೋಕಕ್ಕೆ ನೆನಪಿಸಿಕೊಟ್ಟ ಈ ಸುಧಾರಕ ಮನೋವೃತ್ತಿಯ ಸೂಫಿ ಕವಿ ಭೌಗೋಲಿಕವಾಗಿ ದೂರವಿದ್ದರೂ ನಮ್ಮ ಕರ್ನಾಟಕದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ವಚನ ಸಾಹಿತ್ಯಾಂದೋಲನದ ಸಮಕಾಲೀನನಾಗಿದ್ದನೆನ್ನುವುದು ಒಂದು ಆಕಸ್ಮಿಕ. ಹಾಗೆ ಯೋಚಿಸಿದರೆ ಎತ್ತಣ ಮಾಮರ ಎತ್ತಣ ಕೋಗಿಲೆ, ಎತ್ತಣಿಂದೆತ್ತ ಸಂಬಂಧವಯ್ಯಾ! ಎಂಬ ಅಲ್ಲಮವಾಣಿಯನ್ನೇ ನೆನಪಿಸುವ ಹೋಲಿಕೆಯಿದು. ಎತ್ತಣ ಕರ್ನಾಟಕ ಎತ್ತಣ ಇರಾಣ! ಎತ್ತಣ ಕಲ್ಯಾಣ ಎತ್ತಣ ಶಿರಾಜ್ ಪಟ್ಟಣ! ಶಿರಾಜ್ ಇರಾಣ ದೇಶದಲ್ಲಿ 6ನೆಯ ದೊಡ್ಡ ಪಟ್ಟಣ. ಕವಿಗಳು, ಮದಿರೆ ಮತ್ತು ತರತರದ ಹೂವುಗಳಿಗೆ ಹೆಸರಾದ ಪಟ್ಟಣ. ಪಟ್ಟಣದ ತುಂಬೆಲ್ಲ ಹಸಿರು ಮುರಿಯುವ ತೋಟಗಳು, ಕಣ್ಣು ಕೋರೈಸುವ ರಸಭರಿತ ಹಣ್ಣುಗಳು. ಇಂಥ ಸುಂದರವಾದ ಪಟ್ಟಣದಲ್ಲಿ 1184 ರಲ್ಲಿ ಜನ್ಮವೆತ್ತ್ತಿ ಬದುಕಿನ ಏರು-ಪೇರುಗಳನ್ನೆಲ್ಲ ದಾಟಿ ಸಾವು-ನೋವುಗಳನ್ನೆಲ್ಲ ಮೀಟಿ ಮುಸ್ಲಹುದ್ದೀನ್ (ಧರ್ಮಸುಧಾರಕ) ಎನಿಸಿಕೊಂಡ ಈ ಮಹಾಚಿಂತಕ ಕವಿ ಶೇಖ್ ಸಾದಿಯವರೂ ಸರಿಸುಮಾರು ನಮ್ಮ ನಾಡಿನ ಶರಣರಾಂದೋಲನದ ಕಾಲದಲ್ಲಿಯೇ ಹೆಚ್ಚು-ಕಡಿಮೆ ಅವರಂಥದೇ ಸಂದೇಶವನ್ನು ತಮ್ಮ ಸರಳ ಶೈಲಿಯ ಕಾವ್ಯಮಾಧ್ಯಮದ ಮೂಲಕ ಸಾರಿದ್ದೊಂದು ಯೋಗಾಯೋಗವೆನ್ನಬೇಕು. ವೈಚಾರಿಕ ಹಾಗೂ ಸಾಂಸ್ಕೃತಿಕ ಜಾಗತೀಕರಣಕ್ಕೆ ಯಾವ ದೇಶವೇನು! ಯಾವ ಕಾಲವೇನು! ವೈಚಾರಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ನಡುವೆಯೂ ಸಾಮ್ಯದ ರಸಸ್ಥಾನಗಳು ಬೆಳೆದು ನಿಂತೇ ಇರುತ್ತವೆ ! ಕೂತಲ್ಲೇ ಕೂತು ವೈಚಾರಿಕ ಸ್ವರೂಪದ ವಿಶ್ವವ್ಯಾಪಕ ಪರ್ಯಟನ ಮಾಡುವವರಿಗೆ ಇವೆಲ್ಲ ಕುತೂಹಲದ ಸಂಗತಿಗಳೇ. ಶೇಖ್ ಸಾದಿ ಕನ್ನಾಡಿನ ವಚನಸಾಹಿತ್ಯದ ಗಾಳಿಯುಂಡವರಂತೆ ಹಾಡಿದರೂ, ಅವರು ಬದುಕಿದ್ದು ಹಿಂಡನಗಲಿದ ಗಜವಾಗಿ ಊರೂರಿಗೆ ಅಲೆದ ನಮ್ಮ ಸರ್ವಜ್ಞ ಕವಿಯಂತೆ. ಅವರು ಸದಾ ಸಂಚಾರಿ; ವಿಶ್ವವಿರಾಗಿ! ಫಕೀರ ವ್ರತವನ್ನು ಸ್ವೀಕರಿಸಿ, ಊರೂರು ಸುತ್ತುತ್ತ, ಅವರು ರಚಿಸಿ ಹಾಡಿದ ಪದ್ಯಗಳಲ್ಲಿ ಒಂದು ಮಾದರಿ ಇಲ್ಲಿದೆ:

Read More
0 Comments

ಅನಿವಾರ್ಯತೆಯಿಂದ ಅಕ್ಕಸಾಲಿಗರಾದ ಮಹಿಳಾ ಉದ್ದಿಮೆದಾರರು: ಮಹಿಳಾ ಸಬಲೀಕರಣಕ್ಕೆ ಒಂದು ಮಾದರಿ

10/12/2017

0 Comments

 
Picture
ಪ್ರಪಂಚದ ಎಲ್ಲಾ ಪಿತೃಪ್ರಧಾನ ವ್ಯವಸ್ಥೆಗಳಲ್ಲಿ ಪುರುಷನ ಮೇಲೆ ಸ್ತ್ರೀಯ ಅವಲಂಬನೆಯು ಅನಿವಾರ್ಯವಾಗಿರುತ್ತದೆ. ಗಂಡನಿಲ್ಲದಿದ್ದರೆ ಜೀವನವೇ ಇಲ್ಲವೆಂದು ಸತಿ-ಸಹಗಮನ ಪದ್ಧತಿ ರೂಢಿಗೆ ಬಂದಂತಹ ನಮ್ಮದೇ ದೇಶದಲ್ಲಿ ಈ ಅನಿವಾರ್ಯತೆಯ ಸ್ವರೂಪ ಇನ್ನಷ್ಟು ಗಂಭೀರವಾಗಿದೆ. ಪ್ರತೀ ಕುಟುಂಬದಲ್ಲೂ ಸ್ತ್ರೀಯರ ಪಾತ್ರ ಎಷ್ಟೇ ಪ್ರಾಮುಖ್ಯವಾಗಿದ್ದರೂ ಅವಳ ಅಂತಸ್ತು ಮಾತ್ರ ಪುರುಷನ ಅಂತಸ್ತಿಗಿಂತಲೂ ಕಡಿಮೆಯೇ ಇರುತ್ತದೆ. ಪತಿಯನ್ನು ಕಳೆದುಕೊಂಡ ಜೀವನ ಸಾಮಾಜಿಕವಾಗಿ ಅವಹೇಳನಕಾರಿಯಲ್ಲದೆ ಆರ್ಥಿಕವಾಗಿ ದುಸ್ತರವೂ ಆಗಿರುವುದರಿಂದ ಸ್ತ್ರೀಯರು ಸಾಮಾನ್ಯವಾಗಿ ಮುತ್ತೈದೆಯ ಸಾವನ್ನು ಬೇಡುತ್ತಾರೆ. ಹೀಗಿದ್ದಾಗಲೂ ಆಕಸ್ಮಿಕವಾಗಿ ಪತಿಯೇ ಮರಣಹೊಂದಿದಾಗ, ಮರುಮದುವೆಗೆ ಅವಕಾಶವಿಲ್ಲದಿದ್ದಾಗ ಎರಡು ಹೊತ್ತು ಊಟಕ್ಕಾದರೂ ತನ್ನ ಕಾಲಮೇಲೆ ತಾನು ನಿಲ್ಲುವ ಅನಿವಾರ್ಯತೆ ಸ್ತ್ರೀಗೆ ಬರುತ್ತದೆ. ಕೆಲವು ಸಲ ಮಕ್ಕಳ ಹಾಗೂ ಇಡೀ ಕುಟುಂಬದ ಭಾರವನ್ನು ಅವರು ಹೊರಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಸಾಮಾನ್ಯವಾಗಿ ಸ್ತ್ರೀಯರು ಮೊರೆಹೋಗುವ ಉದ್ಯೋಗವೆಂದರೆ ತಮ್ಮ ಗಂಡಂದಿರು ಮಾಡುತ್ತಿದ್ದ ಉದ್ಯೋಗ. ಉದಾಹರಣೆಗೆ, ಒಕ್ಕಲುತನ ಮಾಡುತ್ತಿದ್ದವನ ವಿಧವೆ ಒಕ್ಕಲುತನವನ್ನೇ ಮಾಡುತ್ತಾಳೆ. ನೇಕಾರಿಕೆಯನ್ನು ಮಾಡುತ್ತಿದ್ದವನ ವಿಧವೆ ನೇಕಾರಿಕೆಯನ್ನೆ ಮಾಡುತ್ತಾಳೆ. ಈ ಬಗೆಯ ಪರಿಸ್ಥಿತಿ ಕುಶಲಕರ್ಮಿಗಳಿಗೂ ಅನ್ವಯಿಸುತ್ತದೆ. ಇಂತಹ ಕುಶಲಕರ್ಮಿಗಳಲ್ಲಿ ಒಂದು ಅಕ್ಕಸಾಲಿಗ ವೃತ್ತಿ. ಪ್ರಸ್ತುತ ಲೇಖನದಲ್ಲಿ ಅನಿವಾರ್ಯ ಕಾರಣಗಳಿಂದಾಗಿ ಅಕ್ಕಸಾಲಿಗ ಮಹಿಳೆಯರು ಅಕ್ಕಸಾಲಿಗ ವೃತ್ತಿಯನ್ನು ಅವಲಂಬಿಸಿ, ಉದ್ಯಮಶೀಲತೆಯನ್ನು ಬೆಳೆಸಿಕೊಳ್ಳುವ ಸಾಧ್ಯತೆಯನ್ನು ಸಮಾಜಶಾಸ್ತ್ರೀಯ ದೃಷ್ಟಿಕೋನದಿಂದ ವಿಶ್ಲೇಷಿಸಲಾಗಿದೆ. 

Read More
0 Comments

ಸಂಸ್ಕೃತ ಸಾಹಿತ್ಯದತ್ತ ಒಂದು ಸ್ತ್ರೀ ಕೇಂದ್ರಿತ ನೋಟ

10/11/2017

0 Comments

 
ಭಾರತದ ಅತ್ಯಂತ ಪ್ರಾಚೀನ ಭಾಷೆಗಳಲ್ಲೊಂದಾದ ಸಂಸ್ಕೃತದಲ್ಲಿ ಬಹಳ ಉತ್ತಮವಾದ ಸಾಹಿತ್ಯ ರಚನೆಯಾಗಿದೆ. ವೇದ ಸಾಹಿತ್ಯದಿಂದ ಆರಂಭವಾಗಿ, ಇತಿಹಾಸ-ಪುರಾಣಗಳು, ಸೂತ್ರಗಳು, ಕೋಶಗಳು, ಸ್ಮೃತಿ ಗ್ರಂಥಗಳು, ಶಾಸ್ತ್ರಗ್ರಂಥಗಳು, ಕಾವ್ಯ-ನಾಟಕಗಳು ಹೀಗೆ ಸಂಸ್ಕೃತ ಸಾಹಿತ್ಯ ರಚನೆ ನೂರಾರು ವರ್ಷಗಳು ಅವ್ಯಾಹತವಾಗಿ ನಡೆದು ಬಂದಿದೆ. ಸಂಸ್ಕೃತವು ಭಾರತದ ಹಲವಾರು ಭಾಷೆಗಳ ಉಗಮಕ್ಕೆ ಕಾರಣವಾದುದೇ ಅಲ್ಲದೆ ಕವಿಗಳಿಗೆ ವಿದ್ವಾಂಸರಿಗೆ ಅಗಾಧವಾದ ವಸ್ತುವನ್ನೂ ಸ್ಫೂರ್ತಿಯನ್ನೂ ಒದಗಿಸಿಕೊಟ್ಟಿದೆ. ರಾಮಾಯಣ, ಮಹಾಭಾರತ, ಪುರಾಣಗಳು ಹಾಗೂ ಬೃಹತ್ಕಥೆಯಂತಹ ಗ್ರಂಥಗಳು ಮುಂದಿನ ಕ್ಲಾಸಿಕಲ್ ಎಂದು ಕರೆಸಿಕೊಳ್ಳುವ ಸಂಸ್ಕೃತ ಸಾಹಿತ್ಯಕ್ಕೆ ಮೂಲ ಸಾಮಗ್ರಿಯನ್ನು ಒದಗಿಸಿದೆ.

Read More
0 Comments

ರಾಯಚೂರು ಜಿಲ್ಲೆಯಲ್ಲಿ ತುಂಗಭದ್ರ ನೀರಾವರಿ ಸೌಲಭ್ಯದ ಬಳಕೆ ಮತ್ತು ಸಮಸ್ಯೆ

10/11/2017

1 Comment

 
ನಾಡಿಗೆ ಬೆಳಕು ನೀಡುವ ಬೆಳಕಿನ ಕೇಂದ್ರ, ಅನ್ನದ ನಾಡು, ಚಿನ್ನದ ಬೀಡು, ಬಿಳಿ ಬಂಗಾರ ಬೆಳೆಯುವ ಜಿಲ್ಲೆಯೆಂದು ಪ್ರಸಿದ್ಧವಾಗಿರುವ ರಾಯಚೂರು ತನ್ನ ಉತ್ತರಕ್ಕೆ ಕೃಷ್ಣೆ ಮತ್ತು ದಕ್ಷಿಣಕ್ಕೆ ತುಂಗಭದ್ರೆ ನದಿಗಳನ್ನೊಳಗೊಂಡ `ದೋಆಬ್ ಪ್ರದೇಶ' ಸಮೃದ್ಧವಾದ ಸಂಪತ್ಭರಿತ ನಗರವಾಗಿದ್ದರೂ,`ಬೆಳಕು ನೀಡುವ ದೀಪದ ಸುತ್ತಲೂ ಕತ್ತಲೂ ಎನ್ನುವಂತೆ ಸಕಲ ಮೂಲ ಸೌಕರ್ಯಗಳಿಂದ ವಂಚಿತವಾಗಿರುವ ಕತ್ತಲಮಯವಾದ ರಾಯಚೂರಿಗೆ ಜೀವತುಂಬುವ ಜೀವನಾಡಿಯಾಗಿರುವ ತುಂಗಭದ್ರೆಯು ಈ ಭಾಗದ ಜನರ ನೀರಿನ ದಾಹವನ್ನು  ನೀಗಿಸುವುದಷ್ಟೇ ಅಲ್ಲದೆ, ನೀರಾವರಿ ಅಭಿವೃದ್ಧಿಯಾಗಲೂ ಸಹಾಯಕವಾಗಿದೆ. ಆದರೆ ಜಿಲ್ಲೆಯ ಹಿರಿಯ ನಾಯಕರ, ರಾಜಕೀಯ ಮುಖಂಡರ, ಹಿರಿಯ ಅಧಿಕಾರಿಗಳ ಹಾಗೂ ಮುತ್ಸದ್ಧಿಗರ, ಹೋರಾಟಗಾರರ ನಿರ್ಲಕ್ಷ್ಯದಿಂದ ಈ ಜಿಲ್ಲೆಯ ಜನತೆಯು (ರೈತರು) ತುಂಗಭದ್ರ ಎಡದಂಡೆ ಕಾಲುವೆಯ ನೀರಿನ ಸಂಪೂರ್ಣ ಸೌಲಭ್ಯವನ್ನು ಉಪಯೋಗಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಹೈದ್ರಾಬಾದ್ ಕರ್ನಾಟಕ (ಈಗ ಕಲ್ಯಾಣಕರ್ನಾಟಕ ಎಂದು ಕರೆಯಲ್ಪಡುತ್ತಿರುವ) ಪ್ರಾಂತ್ಯದಲ್ಲಿ ಪದೇ ಪದೇ ಪ್ರವಾಹ, ನಿರುದ್ಯೋಗ, ಆಹಾರ ಸಮಸ್ಯೆ, ಬರಗಾಲದಂಥ ಆರ್ಥಿಕ ಸಮಸ್ಯೆಯ ಸುಳಿಗೆ ಸಿಲುಕುವಂತಾಗಿದೆ.

Read More
1 Comment

ಮಕ್ಕಳ ವಿಶೇಷ ಪೊಲೀಸ್ ಘಟಕ

10/11/2017

0 Comments

 
ಬೇಗ ಊಟ ಮಾಡು. ಇಲ್ಲದಿದ್ದರೆ ಪೊಲೀಸ್ ಬರ್ತಾರೆ ನಮ್ಮ ಸುತ್ತಮುತ್ತಲಲ್ಲಿ ಈಗಲೂ ಈ ಮಾತು ಕೇಳಿ ಬರುತ್ತಿರುವುದು ಪೋಷಕತ್ವದ ವಿಪರ್ಯಾಸ. ಇಂತಹ ಹೆದರಿಕೆಯ ಮಾತಿನ ಮಧ್ಯೆಯೇ ಬೆಳೆದು ಬರುವ ನಮಗೆ ಬೆಳೆದಂತೆ ಪೊಲೀಸರೆಂದರೆ ನಡುಕವುಂಟಾಗುವುದು ಬಹಳ ಸಹಜ. ಪೊಲೀಸರೆಂದರೆ ಯಮ ಸ್ವರೂಪಿಗಳು, ಅವರಿಂದ ಜೋಪಾನವಾಗಿರಿ, ಪೊಲೀಸರ ಕೈಗೆ ಸಿಕ್ಕಿಬಿದ್ದಿರೋ ಮುಗಿಯಿತು ಎಂಬಿವೇ ಎಚ್ಚರಿಕೆಗಳೂ ಇಲ್ಲದಿಲ್ಲ. ಪೊಲೀಸರಿಗೆ ದೊಡ್ಡವರೂ ಒಂದೇ, ಮಕ್ಕಳೂ ಒಂದೇ, ಗಂಡಸರೂ ಹೆಂಗಸರೂ ಎಲ್ಲರನ್ನೂ ಒಂದೇ ತರಹ ಅವರು ನೋಡುವುದು ಎಂದೂ ಹೇಳುವವರು ಇಲ್ಲದಿರಲಿಲ್ಲ. 

Read More
0 Comments

ಭ್ರಷ್ಟಾಚಾರ ಆರೋಪಿಯ ಆಸ್ತಿ ಮುಟ್ಟುಗೋಲಿಗೆ ನೂತನ ಕಾಯಿದೆ

10/11/2017

0 Comments

 
Picture
ದೇಶಕ್ಕೇ ಮಾದರಿಯಾಗುವಂಥ ಸಮರ್ಥ, ದಕ್ಷ ಲೋಕಾಯುಕ್ತ ವ್ಯವಸ್ಥೆ ಹೊಂದಿರುವ ಕರ್ನಾಟಕದಲ್ಲಿ ದಾಳಿ ವೇಳೆ ಭ್ರಷ್ಟರಿಂದ ವಶಪಡಿಸಿಕೊಂಡ ಆಸ್ತಿಯ ವಿಲೇವಾರಿ ಮಾತ್ರ ಸಾಧ್ಯವಾಗುತ್ತಿಲ್ಲ. ಈ ವಿಚಾರದಲ್ಲಿ ಅಧಿಕಾರವಿಲ್ಲದೆ ಕೈಕಟ್ಟಿ ಕುಳಿತಿದೆ ಲೋಕಾಯುಕ್ತ.
  
​ಕಳೆದ 10 ವರ್ಷಗಳಲ್ಲಿ ಭ್ರಷ್ಟ ಅಧಿಕಾರಿಗಳಿಂದ ಕರ್ನಾಟಕ ವಶಪಡಿಸಿಕೊಂಡ 500ಕೋಟಿಗೂ ಅಧಿಕದ ಅಕ್ರಮ ಆಸ್ತಿ ಈಗಲೂ ಮಾಲ್ಖಾನಾದಲ್ಲಿ ಕೊಳೆಯುತ್ತಿದೆ, ಆದರೆ ಬಿಹಾರ ಸರ್ಕಾರದ ಭ್ರಷ್ಟರಿಂದ ಜಫ್ತಿ ಮಾಡಿದ ಆಸ್ತಿಯ ಕ್ಷಿಪ್ರ ವಿಲೇವಾರಿಗೆ ಮಾದರಿ ಎನಿಸುವಂತಹ ಕಾನೂನು ರೂಪಿಸಿದೆ.

Read More
0 Comments

ಗಾಂಧೀಯ ಮಾರ್ಗ ಮತ್ತು ಆಧುನಿಕ ಸಮಾಜಕಾರ್ಯ* (ತೌಲನಿಕ ಚಿಂತನೆ)

10/11/2017

0 Comments

 
ಮಾನ್ಯ ಬಂಧುಗಳೆ,
ನನ್ನ ಕೆಲವು ತೌಲನಿಕ ಚಿಂತನೆಗಳನ್ನು ಮಂಡಿಸಲು ಅವಕಾಶವನ್ನು ಕಲ್ಪಿಸಿದ ವ್ಯವಸ್ಥಾಪಕರಿಗೆ ಮತ್ತು ನನ್ನೀ ಚಿಂತನೆಗಳನ್ನು ಆಲಿಸುತ್ತಿರುವ ನಿಮಗೆ ನನ್ನ ಕೃತಜ್ಞತೆಗಳು. ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಆಶ್ರಯದಲ್ಲಿ ನನ್ನೀ ಉಪನ್ಯಾಸವು ನಡೆಯುತ್ತಿದೆ. ಸಮಾಜದಲ್ಲಿನ ಊನಶಕ್ತರಿಗೆ ನೆರವನ್ನು ಉದಾರವಾಗಿ ನೀಡುವ ಧಾರ್ಮಿಕ ಭಾವನೆಯು ಪರಂಪರೆಯಿಂದ ಬಂದಿದ್ದರೂ ವೈಚಾರಿಕ ಮತ್ತು ಲೌಕಿಕ ತಳಹದಿಯ ಮೇಲೆ ಸೇವೆಯನ್ನು ಕೈಗೊಳ್ಳಬೇಕೆಂಬ ಇರಾದೆಯನ್ನು ಹೊಂದಿದ್ದ ಶ್ರೀ ಗೋಪಾಲಕೃಷ್ಣ ಗೋಖಲೆಯವರು 1905ರಲ್ಲಿಯೇ ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯನ್ನು ಆರಂಭಿಸಿದ್ದನ್ನು ನಾವು ನೆನೆಯಲೇಬೇಕಾಗಿದೆ. ಯಾಕೆಂದರೆ, ಸಮಾಜಕಾರ್ಯಕ್ಕೆ ಅದು ಸಮರ್ಥ ನೆಲೆಯನ್ನು ಕಲ್ಪಿಸಿತು. ಅಂಥ ಮಹನೀಯರ ಹೆಸರಿನಲ್ಲಿರುವ ಈ ಸಾರ್ವಜನಿಕ ವಿಚಾರ ಸಂಸ್ಥೆಯನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಮಹಾ ಮೇಧಾವಿ, ರಾಷ್ಟ್ರ ಚಿಂತಕ, ಸಾರ್ವಜನಿಕ ಹಿತ ಪ್ರತಿಪಾದಕ ಡಾ.ಡಿ.ವಿ. ಗುಂಡಪ್ಪನವರನ್ನು ನಾನು ಪ್ರಪ್ರಥಮವಾಗಿ ನೆನೆಯುತ್ತೇನೆ. ನನ್ನೀ ಉಪನ್ಯಾಸವು ನ್ಯಾಯಮೂರ್ತಿ ಮತ್ತು ಮಹಾ ಸಾತ್ತ್ವಿಕ ಶ್ರೀ ನಿಟ್ಟೂರು ಶ್ರೀನಿವಾಸ ರಾವ್ ಇವರ ಜ್ಞಾಪಕದಲ್ಲಿ ನಡೆಯುತ್ತಿದೆ. ಆ ದೊಡ್ಡವರನ್ನು ನಾನು ಗೌರವಪೂರ್ವಕವಾಗಿ ನೆನೆಯುತ್ತೇನೆ. ಡಾ. ಗುಂಡಪ್ಪನವರಿಗೂ, ನ್ಯಾಯಮೂರ್ತಿ ನಿಟ್ಟೂರು ಅವರಿಗೂ ಗೋಖಲೆಯವರು ಮತ್ತು ಗಾಂಧಿಯುವರು ಪ್ರಿಯರಾದವರು. ಜೊತೆಗೆ ಆ ಇಬ್ಬರಿಗೂ ಸಮಾಜಕಾರ್ಯದಲ್ಲಿ ಆಸಕ್ತಿ ಇದ್ದದ್ದು ನಮ್ಮೆಲ್ಲರಿಗೂ ಪರಿಚಿತವೇ. ಈ ಸಂರ್ದದಲ್ಲಿ ಈ ನಾಲ್ವರನ್ನು ನಾನು ಹೃತ್ಪೂರ್ವಕ ನೆನೆಯುತ್ತೇನೆ. 


Read More
0 Comments

ಕೋಲಾರದ ಚಿನ್ನದಗಣಿ ಮತ್ತು ಅಲ್ಲಿನ ಕಾರ್ಮಿಕರು

10/11/2017

0 Comments

 
Picture
ಪೀಠಿಕೆ:
ಭಾರತಕ್ಕೆ ಖ್ಯಾತಿ ತಂದಿರುವ ಹಲವಾರು ಹೆಮ್ಮೆಗಳಲ್ಲಿ ಕರ್ನಾಟಕದ ಕೋಲಾರ ಚಿನ್ನದಗಣಿ ಅತ್ಯಂತ ಪ್ರಮುಖವಾದುದು. ಭಾರತದ ಒಟ್ಟಾರೆ ಚಿನ್ನದ ಉತ್ಪಾದನೆಯಲ್ಲಿ ಅತಿ ಹೆಚ್ಚು ಉತ್ಪಾದನೆಯಾಗುತ್ತಿದುದು ಕೋಲಾರದ ಚಿನ್ನದ ಗಣಿಯಿಂದ. ಅಷ್ಟು ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿ ಸಹ ಕೋಲಾರ ಚಿನ್ನದ ಗಣಿ ಅತ್ಯಂತ ಪ್ರಮುಖವಾದುದ್ದು.


Read More
0 Comments

ಅಣ್ಣಾ, ಗಾಂಧಿ ಮತ್ತು ಭಾರತೀಯ ಮನಸ್ಸು

10/11/2017

0 Comments

 
ಒಂದು ಘಟನೆ. 1940 ರಲ್ಲಿ ಗಾಂಧೀಜಿ ವೈಯುಕ್ತಿಕ ಸತ್ಯಾಗ್ರಹ ಆರಂಭಿಸಿದ್ದರು. ಕಾಂಗ್ರೆಸ್ನ ಕರ್ನಾಟಕ ಶಾಖೆ ಕಾರ್ಯದರ್ಶಿಯಾಗಿದ್ದ ಶಂಕರ ಕುರ್ತಕೋಟಿಯವರು ರಾಜ್ಯದ ಐದು ನೂರು ಸತ್ಯಾಗ್ರಹಿಗಳ ಪಟ್ಟಿಯೊಂದಿಗೆ ಗಾಂಧೀಜಿಯವರ ಅನುಮತಿ ಪಡೆಯಲು ವಾರ್ಧಾ ಆಶ್ರಮಕ್ಕೆ ತೆರಳಿದ್ದರು. ಹಿಂತಿರುಗುವ ಮುನ್ನ ಗಾಂಧೀಜಿಯವರ ಭೇಟಿ ಸಾಧ್ಯವಾಯಿತು. 

Read More
0 Comments

ವ್ಯವಸ್ಥೆಯೊಂದೇ ಬದಲಾದರೆ ಸಾಕೇ...?

9/21/2017

0 Comments

 
Picture
ಭಾರತದ ಸಂಸ್ಕೃತಿ ಶ್ರೀಮಂತವಾಗಿತ್ತು, ಸನಾತನ ಧರ್ಮವು ಶ್ರೇಷ್ಠತೆಯಿಂದ ಕೂಡಿತ್ತು. ಭವ್ಯ ಪರಂಪರೆಯ ಹಿನ್ನೆಲೆಯನ್ನು ಹೊಂದಿತ್ತು. ಗುಪ್ತರ ಕಾಲ ಸುವರ್ಣಯುಗವಾಗಿತ್ತು. ವಿಜಯನಗರ ಅರಸರ ಕಾಲದಲ್ಲಿ ಚಿನ್ನ ಬೆಳ್ಳಿ, ಮುತ್ತು ರತ್ನಗಳನ್ನು ಬೀದಿಗಳಲ್ಲಿ ರಾಶಿ ರಾಶಿಯಾಗಿಟ್ಟು ಮಾರಾಟ ಮಾಡುತ್ತಿದ್ದರು, ಎಂಬಿತ್ಯಾದಿ ಇತಿಹಾಸದ ನೆನಪುಗಳ ಅರಿವಿದ್ದವರಿಗೆ ದೇಶದ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಅಸಹ್ಯಮೂಡಿಸದೆ ಇರದು. ಇತಿಹಾಸದ 3000 ವರ್ಷದಲ್ಲಿ ಗ್ರೀಕರು, ಟರ್ಕರು, ಪೋರ್ಚುಗೀಸರು, ಫ್ರೆಂಚರು, ಡಚ್ಚರು ಭಾರತದ ಮೇಲೆ ದಾಳಿ ಮಾಡಿ ಸಂಪತ್ತು ಲೂಟಿಮಾಡಿ ನಮ್ಮನ್ನು ಮಾನಸಿಕವಾಗಿ ಅವರ ಸಂಸ್ಕೃತಿ ಪದ್ಧತಿಗಳ ದಾಸರನ್ನಾಗಿಸಿದರು. ಆ ಸಂಸ್ಕೃತಿಯ ಅಂದಾನುಕರಣೆಯಲ್ಲಿ ನಾವುಗಳು ನಮ್ಮ ನಮ್ಮ ಜವಾಬ್ದಾರಿಗಳನ್ನು ಮರೆತು ವರ್ತಿಸುತಿದ್ದೇವೆ.

Read More
0 Comments

ದೇವಿ

9/21/2017

0 Comments

 
ಪಾರಕ್ಕ ಹಾಸಿಗೆ ಹಿಡಿದಾಳಂತೆ ಪಾರವ್ವನ ಕೈ ಕಾಲು ಬಾತಾವಂತೆ ಪಾರಿ ಇನ್ನೇನ ಉಳಿಯಾಂಗ ಕಾಣೂದಿಲ್ಲಂತ ಸುದ್ದಿ ಚಿತ್ರ-ವಿಚಿತ್ರ ರೂಪ ತಳೆದು ಮಣ್ಣೂರಿನ ತುಂಬ ಸುಳಿದಾಡಿತು. ಕಣ್ಣಿಂದ ನೋಡಿದವರಿಗಿಂತ ಹೆಚ್ಚಾಗಿ ವರ್ಣರಂಜಿತವಾಗಿ ಬಣ್ಣಿಸಿ ಮಾತನಾಡಿದರು. ಊರಿನ ಗಂಡು-ಹೆಣ್ಣು ಮಕ್ಕಳೆಲ್ಲ, ಮನಿಷ್ಯಾ ಅಂದಮ್ಯಾಲೆ ಜಡ್ಡು ಜಾಪತ್ರಿ ಬರೂವ. ಹುಟ್ಟಿದವರು ಸಾಯೂವವರ. ಆದರ ಪಾರವ್ವಗ ಜಡ್ಡಾತು ಅಂದರ ನಂಬಾಕ ಆಗಾಕಿಲ್ಲ ಎಂದು ಒಳಗೇ ತಳಮಳಿಸಿದರು ಕೆಲವರು.  ಈಟ ದಿನಾ ಮೆರದಾಡಿ ಕಡೀಕ ಬಕಬಾರ್ಲೆ ಬಿದ್ಲಲ್ಲ ಎಂದು ಒಳಗೊಳಗೇ ಹಿಗ್ಗಿ ಹಿರೇಕಾಯಾಗಿ ಹಾಲು ಕುಡಿದವರೂ ಹಲವರಿದ್ದರು ಮಣ್ಣೂರಿನಲ್ಲಿ. 

Read More
0 Comments

ಕೌಟುಂಬಿಕ ವಿಘಟನೆ ಹಾಗೂ ವಯೋವೃದ್ಧರ ದುರ್ಲಕ್ಷ್ಯ

9/21/2017

0 Comments

 
ಕಳೆದ ಕೆಲ ದಶಕಗಳಲ್ಲಿ ಕುಟುಂಬವೆಂಬ ಸಂಸ್ಥೆ, ಅದರ ರಚನೆ ಮತ್ತು ಕಾರ್ಯ ವಿಧಾನಗಳಲ್ಲಿ ಮಹತ್ವದ ಬದಲಾವಣೆಗಳನ್ನು ಕಾಣುತ್ತಾ ಇದೆ. ಅದರ ಬಹುತೇಕ ಪಾರಂಪರಿಕ ಕಾರ್ಯಗಳನ್ನು ಮಕ್ಕಳು ಹೆರುವುದು, ಅವುಗಳನ್ನು ಪಾಲನೆ ಮಾಡುವುದು ಬಿಟ್ಟರೆ ಹೊರಗಣ ಸೇವಾ ಸಂಸ್ಥೆಗಳು ವಹಿಸಿಕೊಂಡಿವೆ. ಉದಾಹರಣಾರ್ಥವಾಗಿ, ಶಾಲೆ, ಮಾರುಕಟ್ಟೆ, ಸಮೂಹ ಮಾಧ್ಯಮಗಳು ಇತ್ಯಾದಿ. ನಗರೀಕರಣ, ಔದ್ಯಮೀಕರಣ ಮುಂತಾದ ಆಧುನಿಕ ಪ್ರಕ್ರಿಯೆಗಳು ಕುಟುಂಬದ ಪಾರಂಪರಿಕ ಸಂಘಟನೆ ಹಾಗೂ ಸ್ಥಿರತೆಯನ್ನು ಬಹುಮಟ್ಟಿಗೆ ಅಸ್ಥಿರಗೊಳಿಸಿವೆ. ತತ್ಪರಿಣಾಮವಾಗಿ, ಕುಟುಂಬವು ಹಲವಾರು ಸಾಮಾಜಿಕ, ಮಾನಸಿಕ ಹಾಗೂ ಆರ್ಥಿಕ ವಿವಾದಾತ್ಮಕ ವಿಷಯಗಳನ್ನು ಹುಟ್ಟು ಹಾಕಿದೆ. ಉದಾಹರಣಾರ್ಥವಾಗಿ, (ಇಂದು) ಮಕ್ಕಳಲ್ಲಿ ಹಾಗೂ ಯುವಕರಲ್ಲಿ ಅಪಮಾರ್ಗದ ಕಡೆಗಿನ ಸೆಳೆತವನ್ನು ಹೆಚ್ಚು ಪ್ರಮಾಣದಲ್ಲಿ ಕಾಣುತ್ತೇವೆ. ತಮ್ಮ ಸ್ವಕೀಯತೆಯನ್ನು ಉದ್ಘೋಷಿಸುವ, ಸ್ಥಾಪಿಸಬಯಸುವ ಪ್ರಯತ್ನದಲ್ಲಿ, ತರುಣ ತರುಣಿಯರು ಕೌಟುಂಬಿಕ ರೂಢಿಗಳನ್ನು, ಸಾಂಪ್ರದಾಯಿಕ ಕಟ್ಟಳೆಗಳನ್ನು ಮೀರುತ್ತಿದ್ದಾರೆ. ಮಾದಕ ಪದಾರ್ಥಗಳ ವ್ಯಸನ, ಮದ್ಯಸೇವನೆ, ದಾಂಪತ್ಯ ಜೀವನದಲ್ಲಿ ಬಿರುಕು, ಗಂಡಹೆಂಡಿರು ಬೇರಾಗುವಿಕೆ,  ವಿಮುಖರಾಗುವಿಕೆ ಮತ್ತು ವಿವಾಹ-ವಿಚ್ಛೇದನ, ಪ್ರೇಮವಿವಾಹ, ದಿನನಿತ್ಯದ ಸಂಸಾರದಲ್ಲಿ ನೀಡಲ್ಪಡುವ ಹಿಂಸೆ ಮತ್ತು ವಯೋವೃದ್ಧರ ದುರ್ಲಕ್ಷ್ಯ ಇವುಗಳು ಆಧುನಿಕ ಸಮಾಜದಲ್ಲಿ ಕುಟುಂಬದ ಒಡೆದು ಕಾಣುವ ಲಕ್ಷಣಗಳಾಗುತ್ತವೆ.

Read More
0 Comments

ಜವಾಬ್ದಾರಿ ಸರ್ಕಾರಕ್ಕಾಗಿ ಹೋರಾಟ: ಮೈಸೂರು ಚಲೋ ಚಳುವಳಿಯಲ್ಲಿ ಡಾ|| ಹೆಚ್. ನರಸಿಂಹಯ್ಯನವರ ಪಾತ್ರ

7/18/2017

0 Comments

 
ಡಾ.ಹೆಚ್. ನರಸಿಂಹಯ್ಯನವರು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದರು; ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲರಾಗಿದ್ದರು; ಕರ್ನಾಟಕದ ವಿಧಾನ ಪರಿಷತ್ ಸದಸ್ಯರಾಗಿದ್ದರು; ಕನ್ನಡ ಅಭಿವೃದ್ಧಿ  ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ಬಹು ಮುಖ್ಯವಾಗಿ ವೈಜ್ಞಾನಿಕ ಮನೋಭಾವವನ್ನು ಹೊಂದಿದ್ದ ಇವರು ರಾಷ್ಟ್ರೀಯ ಸೇವಾಯೋಜನೆಯ ಚೇತನರಾಗಿದ್ದರು ಮತ್ತು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಮಾಜಕಾರ್ಯ ವಿಭಾಗದ ಸ್ಥಾಪನೆ ಹಾಗೂ ಬೆಳವಣಿಗೆಗೆ ಶ್ರಮಿಸಿದರು. 

Read More
0 Comments

ಡಾ.ನಾರಾಯಣರೆಡ್ಡಿ: ಸಾವಯವ ಕೃಷಿಯ ಚೇತನ

6/26/2017

1 Comment

 
Picture
ಭುಕ್ತಿ ನಿನಗೆಲ್ಲಿಯದು ? ಭತ್ತ ತಾನೆಲ್ಲಿಯದೋ!
ಎತ್ತಲಿನಗೊಬ್ಬರವೋ ! ಎತ್ತಲಿನ ನೀರೋ!
ಭಾಕ್ತಾವಾರಾರ ದುಡಿತದಿನೊ ನಿನಗಾಗಿಹುದು! 
ಗುಪ್ತಗಾಮಿನಿಯೊ ಋಣ  ಮಂಕುತಿಮ್ಮ
 
ನಮ್ಮೆಲ್ಲರ ಪ್ರಾಣ ಪಕ್ಷಿಗೆ ಪ್ರಾಣವಾಗಿರುವ ಅನ್ನದ, ಅದನ್ನು ತನ್ನ ಬೆವರಿನ ಶ್ರಮದಿಂದ ಬೆಳೆದು ಕೊಡುವ ರೈತನ ಮೇಲೆ ನಮಗಿರುವ ಋಣವನ್ನು ಜಾಗೃತಗೊಳಿಸುವ ಕಗ್ಗದ ಈ ಸಾಲುಗಳು ನಮ್ಮೆಲ್ಲರನ್ನೂ ಸದಾ ಕೃಷಿ, ರೈತಸ್ನೇಹಿಗಳನ್ನಾಗಿಸುತ್ತವೆ.

Read More
1 Comment
<<Previous
Forward>>

    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9
    ಸಮಾಜಕಾರ್ಯ
    ಸಮುದಾಯ ಸಂಘಟನೆ


    Picture
    For more details

    Picture
    For more details

    Picture
    For more details

    Picture
    For more details

    Picture
    For more details

    Picture
    For more details

    Social Work Books


    HR Books


    Niruta Publications

    Social Work Foot Prints

    Leaders Talk

    Ramesha Niratanka


    Picture

    MHR LEARNING ACADEMY

    Get it on Google Play store
    Download App
    Online Courses


    RSS Feed

Niruta Publications Books (Dec 2025)
File Size: 756 kb
File Type: pdf
Download File

Social Work Books
File Size: 116 kb
File Type: pdf
Download File

HR Books
File Size: 87 kb
File Type: pdf
Download File

General Books
File Size: 195 kb
File Type: pdf
Download File



SITE MAP


Site

  • HOME
  • ABOUT US
  • BLOG​
  • HR BLOG
  • PUBLICATION WITH US
  • NIRUTA PRINTS
  • ONLINE STORE
  • JOIN OUR ONLINE GROUPS
  • VIDEOS​

NIRATHANKA

  • ​CSR
  • TREE PLANTATION PROJECT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe


Picture
For More Details
Picture
More Details

Copyright Niruta Publications 2021,    Website Designing & Developed by: www.mhrspl.com