ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ನಿರಾತಂಕ ಬಳಗದ ಸಹಯೋಗದೊಂದಿಗೆ ದಿನಾಂಕ 15ನೆಯ ಏಪ್ರಿಲ್ 2012 ಭಾನುವಾರದಂದು ನಡೆದ ಪರಿಷತ್ತಿನ ಗೌರವ ಸದಸ್ಯತ್ವ ಪ್ರದಾನ ಮತ್ತು ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿತ್ತು. ಈ ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಶ್ರೀ. ಗೊ.ರು. ಚನ್ನಬಸಪ್ಪ, ಅಧ್ಯಕ್ಷರು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ವಹಿಸಿದ್ದರು ಮತ್ತು ಪ್ರಸ್ತಾವನೆ ನುಡಿಗಳನ್ನು ಡಾ.ಎಚ್.ಎಂ. ಮರುಳಸಿದ್ಧಯ್ಯ, ಸಮಾಜಕಾರ್ಯ ತಜ್ಞರು, ಅವರು ಮಂಡಿಸಿದರು. (ಈ ಪ್ರಸ್ತಾವನೆ ನುಡಿಗಳನ್ನು ಈ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ.) ಶ್ರೀ ಗೊ.ರು. ಚನ್ನಬಸಪ್ಪನವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಸಮಾಜದಲ್ಲಿನ ವ್ಯಂಗ್ಯಗಳನ್ನು ಅರ್ಥಪೂರ್ಣವಾಗಿ ದಿನಪತ್ರಿಕೆಗಳಲ್ಲಿನ ಶೀರ್ಷಿಕೆಗಳನ್ನು ಉದಾಹರಿಸುತ್ತ ಸಭಿಕರ ಮನಸ್ಸು ಚಿಂತಿಸುವಂತೆ ಮಾಡಿತು. ಓಶೋನ ಒಂದು ದೃಷ್ಠಾಂತವನ್ನು ನೀಡಿದರು. ಚೀನಾದಲ್ಲಿ ಒಬ್ಬ ವ್ಯಕ್ತಿ ಆಕಸ್ಮಿಕವಾಗಿ ಒಂದು ತೆರೆದ ಬಾವಿಯಲ್ಲಿ ಬಿದ್ದನಂತೆ. ಅವನು ತನ್ನ ಪ್ರಾಣ ಉಳಿಸಿಕೊಳ್ಳಲು ವಿಫಲನಾಗಿ ಯಾರಾದರೂ ನನ್ನನ್ನು ಕಾಪಾಡಿ ಎಂದು ಕೂಗುತ್ತಿರುತ್ತಿದ್ದಾನೆ. ಒಬ್ಬ ಧರ್ಮಪ್ರಚಾರಕ ಅಲ್ಲಿಗೆ ಬಂದು ಇಣುಕಿ ನೋಡಿ ಅಯ್ಯಾ ಏನಾಯಿತು? ಎಂದನಂತೆ. ಬಾವಿಗೆ ಬಿದ್ದವ ನನ್ನನ್ನು ರಕ್ಷಿಸಿ ಎಂದನಂತೆ, ನೀನು ಪ್ರಾಕೃತಿಕವಾಗಿ ಬಾವಿಗೆ ಬಿದ್ದಿರುವೆ ಆದುದರಿಂದ ಪ್ರಕೃತಿ ನಿನ್ನನ್ನು ಶಿಕ್ಷೆಗೆ ಗುರಿಪಡಿಸಿದೆ. ನಿನ್ನನ್ನು ರಕ್ಷಿಸುವುದು ಪ್ರಕೃತಿಗೆ ವಿರುದ್ಧವಾದುದ್ದು ನನಗೆ ಪಾಪ ಬರುತ್ತದೆ ಎಂದು ಹೇಳಿ ಹೋರಟುಹೊದನಂತೆ, ಎಂತಹ ಜ್ಞಾನಿ ಆ ಧರ್ಮ ಪ್ರಚಾರಕ. ಮತ್ತೊಬ್ಬ ಧರ್ಮಪ್ರಚಾರಕ ಬಂದು ಇಣುಕಿ ನೋಡಿ ಅಯ್ಯಾ ಏನಾಯಿತು ಎಂದನಂತೆ. ಬಾವಿಯಲ್ಲಿ ಬಿದ್ದವ ನನ್ನ ಪ್ರಾಣ ರಕ್ಷಿಸಿ ಎಂದಾಗ ಧರ್ಮ ಪ್ರಚಾರಕ ನಮ್ಮ ಗುರುಗಳು ಹೇಳಿದ್ದು ಈಗ ನಿಜ ಎನಿಸುತ್ತಿದೆ. ಮನುಷ್ಯ ಎಚ್ಚರ ತಪ್ಪಿದರೆ ಎಂಥ ಪ್ರಪಾತಕ್ಕಾದರೂ ಬೀಳುತ್ತಾನೆ ನೀನು ಮತ್ತೆ ನಿನ್ನ ಜೀವ ಉಳಿಸಿಕೊಳ್ಳುವ ಕಡೆಗೆ ಗಮನ ಹರಿಸದೆ ಮೋಕ್ಷದ ಕಡೆ ಧ್ಯಾನಿಸು ನಿನಗೆ ಮೋಕ್ಷ ಲಭಿಸುತ್ತದೆ ಎಂದನಂತೆ. ಅವನ ನೆರವಿಗೆ ಧಾವಿಸದೆ ಮುಂದೆ ಸರಿದನಂತೆ.
ಸಮಾಜ ಸೇವಕನೊಬ್ಬ ಬಂದನಂತೆ-ನೀನು ಬಾವಿಯಲ್ಲಿ ಬಿದ್ದಿರುವುದು ಈ ಬಾವಿಗೆ ಸುತ್ತಲೂ ಗೊಡೆ ಇಲ್ಲದಿರುವುದರಿಂದ ಆದ್ದರಿಂದ ನಾನು ಈಗಾಗಲೇ ಎಲ್ಲಾ ಕಡೆ ತೆರೆದ ಬಾವಿಯ ಸುತ್ತಲೂ ಗೋಡೆ ಇರಬೇಕು ಇಲ್ಲವಾದರೆ ಎಂಥ ಅನಾಹುತಗಳಾಗುತ್ತವೆ ಎಂಬುದನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಬೇಕು ಎನ್ನುವಾಗ. ಬಾವಿಗೆ ಬಿದ್ದವ ನನ್ನನ್ನು ಮೇಲೆತ್ತಿ ರಕ್ಷಿಸಿ ಸ್ವಾಮಿ ಎಂದಾಗ ನಾನು ಈ ಅನಾಹುತದ ಬಗ್ಗೆ ಹೇಳಿದರೆ ಕೆಲವರು ನಂಬುವುದಿಲ್ಲ ಹಾಗೂ ಇಲ್ಲಿಗೆ ಕರೆತಂದು ಸಾಕ್ಷಿ ತೋರಿಸಲು ನೀನು ಬೇಕು ಹಾಗೆಯೇ ನಾನು ಸರ್ಕಾರಕ್ಕೆ ಪತ್ರ ಬರೆದು ಸರ್ಕಾರದ ಗಮನವನ್ನು ಸೆಳೆಯುತ್ತೇನೆ ಎಂದನಂತೆ. ರಾಜಕಾರಣಿ ಬಂದು ಬಾವಿಗೆ ಬಿದ್ದವನನ್ನು ಕುರಿತು ಈ ಬಗ್ಗೆ ವಿಧಾನಸಭೆಯಲ್ಲಿ ಚರ್ಚಿಸುತ್ತೇನೆ. ಒಪ್ಪದಿದ್ದರೆ ಸಭಾಕಲಾಪವನ್ನು ಬಹಿಷ್ಕರಿಸಿ ಹೊರನಡೆಯುತ್ತೇನೆ ಎಂದನಂತೆ. ಈ ರೀತಿ ಹಲವರು ಬಂದು ಹೋದ ನಂತರ ಒಬ್ಬ ಮಾತುಬಾರದ, ಕಿವಿ ಕೇಳಿಸದ ವ್ಯಕ್ತಿ ಬಂದು ಆತನನ್ನು ನೋಡಿ ಪರಿಸ್ಥಿತಿ ಅರ್ಥೈಸಿಕೊಂಡು ಅತನನ್ನು ಮೇಲೆತ್ತಿದನಂತೆ. ಈ ರೀತಿ ನಮ್ಮ ಸಮಾಜದ ಪರಿಸ್ಥಿತಿ. ದ್ವಂದ್ವ, ವ್ಯಂಗ್ಯದಲ್ಲಿ ಹಾಗೂ ರೋಗಿಷ್ಠ ಸಮಾಜದಲ್ಲಿದ್ದೇವೆ ಎಂದಾಗ ಸಭಿಕರು ಚಿಂತಿಸುವಂತೆ ಆಯಿತು. ನಂತರದಲ್ಲಿ ಗೋಷ್ಠಿಗಳು ಪ್ರಾರಂಭವಾದವು. ಗೋಷ್ಠಿ-1 ರ ಅಧ್ಯಕ್ಷತೆಯನ್ನು ಡಾ.ಎಸ್.ಎಂ. ವೃಷಭೇಂದ್ರ ಸ್ವಾಮಿ, ಧಾರವಾಡ, ಅವರು ವಹಿಸಿದ್ದರು. ಪ್ರಬಂಧಕಾರರರಾದ ಡಾ.ಎಸ್.ಎಫ್. ಪೂಜಾರ, ಧಾರವಾಡ, ಅವರು ಶರಣ ಜೀವನ ದೃಷ್ಟಿ ಮತ್ತು ಸಮಾಜಕಾರ್ಯದ ತಾತ್ತ್ವಿಕ ಸಿದ್ಧಾಂತಗಳು: ತೌಲನಿಕ ಚಿಂತನೆಯ ಬಗ್ಗೆ ಮತ್ತು ಡಾ.ಜೆ.ಶ್ರೀನಿವಾಸ ಮೂರ್ತಿ, ಬೆಂಗಳೂರು ಅವರು ಮಾನವನ ಗುರಿ - ಸಾಧನಗಳಲ್ಲಿರುವ ಸಾಮ್ಯ - ವೈಷಮ್ಯಗಳು ಬಗ್ಗೆ ವಿಷಯಗಳನ್ನು ವಿಸ್ತಾರವಾಗಿ ಮಂಡಿಸಿದರು. ಗೋಷ್ಠಿಯ ನಿರ್ವಹಣೆಯನ್ನು ಶ್ರೀ ಎನ್.ವಿ.ವಾಸುದೇವ ಶರ್ಮ ನಿರ್ವಹಿಸಿದರು. ಗೋಷ್ಠಿ-2 ರ ಅಧ್ಯಕ್ಷತೆಯನ್ನು ಡಾ.ಗುರುಲಿಂಗ ಕಾಪಸೆ, ಧಾರವಾಡ ಅವರು ವಹಿಸಿದ್ದರು. ಪ್ರಬಂಧಕಾರರಾದ ಡಾ. ಜಯಶ್ರೀ ದಂಡೆ, ಕಲ್ಬುರ್ಗಿ ಭಕ್ತಿಯೋಗವು ಲೌಕಿಕ-ಪಾರಲೌಕಿಕಗಳನ್ನು ಬೆಳೆಸಬಲ್ಲುದೆ ಮತ್ತು ಪ್ರೊ.ಎಸ್.ಜಿ. ಸಿದ್ಧರಾಮಯ್ಯ, ಬೆಂಗಳೂರು ಅವರು ಶರಣರ ಮಾರ್ಗವು ಕೇವಲ ಆಧ್ಯಾತ್ಮಿಕವೆ? ಸಮಾಜಕಾರ್ಯದ್ದು ಕೇವಲ ಲೌಕಿಕವೆ? ಎಂಬ ವಿಷಯ ಕುರಿತಾದ ಪ್ರಬಂಧಗಳನ್ನು ಮಂಡಿಸಿದರು. ಗೋಷ್ಠಿಯ ನಿರ್ವಹಣೆಯನ್ನು ಡಾ||ಸಿ.ಆರ್. ಗೋಪಾಲ್ ಅವರು ವಹಿಸಿದ್ದರು. ಎರಡೂ ಗೋಷ್ಠಿಗಳ ಸಂದರ್ಭದಲ್ಲಿ ಚರ್ಚೆ ನಡೆಯಿತು. ಸಂಜೆ, ಪರಿಷತ್ತಿನ ಗೌರವ ಸದಸ್ಯತ್ವ ಸಮಾರಂಭವು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಯವರ ಸಾನಿಧ್ಯದಲ್ಲಿ ನಡೆಯಿತು. ಡಾ.ಎಸ್.ಎಂ. ವೃಷಭೇಂದ್ರ ಸ್ವಾಮಿ, ಧಾರವಾಡ, ಡಾ. ಗುರುಲಿಂಗ ಕಾಪಸೆ, ಧಾರವಾಡ, ಶ್ರೀಮತಿ ಜಿ.ವಿ. ಜಯಾ ರಾಜಶೇಖರ್, ಅವರಿಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ ಪ್ರದಾನ ಮಾಡಲಾಯ್ತು. ಶ್ರೀಯುತ ಚಿಕ್ಕರಿಯಪ್ಪನವರು ಸ್ವಾಗತ ಮತ್ತು ವಂದನಾರ್ಪಣೆಯನ್ನು ಮಾಡಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಶ್ರೀ ವಸಂತಕುಮಾರ್ ಅವರು ವಹಿಸಿದ್ದರು. ರಮೇಶ ಎಂ.ಎಚ್
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|