ದೇಶಕ್ಕೇ ಮಾದರಿಯಾಗುವಂಥ ಸಮರ್ಥ, ದಕ್ಷ ಲೋಕಾಯುಕ್ತ ವ್ಯವಸ್ಥೆ ಹೊಂದಿರುವ ಕರ್ನಾಟಕದಲ್ಲಿ ದಾಳಿ ವೇಳೆ ಭ್ರಷ್ಟರಿಂದ ವಶಪಡಿಸಿಕೊಂಡ ಆಸ್ತಿಯ ವಿಲೇವಾರಿ ಮಾತ್ರ ಸಾಧ್ಯವಾಗುತ್ತಿಲ್ಲ. ಈ ವಿಚಾರದಲ್ಲಿ ಅಧಿಕಾರವಿಲ್ಲದೆ ಕೈಕಟ್ಟಿ ಕುಳಿತಿದೆ ಲೋಕಾಯುಕ್ತ. ಕಳೆದ 10 ವರ್ಷಗಳಲ್ಲಿ ಭ್ರಷ್ಟ ಅಧಿಕಾರಿಗಳಿಂದ ಕರ್ನಾಟಕ ವಶಪಡಿಸಿಕೊಂಡ 500ಕೋಟಿಗೂ ಅಧಿಕದ ಅಕ್ರಮ ಆಸ್ತಿ ಈಗಲೂ ಮಾಲ್ಖಾನಾದಲ್ಲಿ ಕೊಳೆಯುತ್ತಿದೆ, ಆದರೆ ಬಿಹಾರ ಸರ್ಕಾರದ ಭ್ರಷ್ಟರಿಂದ ಜಫ್ತಿ ಮಾಡಿದ ಆಸ್ತಿಯ ಕ್ಷಿಪ್ರ ವಿಲೇವಾರಿಗೆ ಮಾದರಿ ಎನಿಸುವಂತಹ ಕಾನೂನು ರೂಪಿಸಿದೆ. ಬಿಹಾರ ವಿಶೇಷ ಕೋರ್ಟ್ ಕಾಯ್ದೆ-2009 ಈಗ ಅಲ್ಲಿ ಚಾಲ್ತಿಗೆ ಬಂದಿದೆ. ಈ ಕಾನೂನಿನಂತೆ ವಿಚಾರಣೆ ಅವಧಿಯಲ್ಲೇ ಆರೋಪಿಯ ಅಕ್ರಮ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬಹುದಾಗಿದೆ. ಈ ಕಾಯ್ದೆಯಂತೆ ಇದೇ ಮೊದಲ ಬಾರಿಗೆ ಶಿವಶಂಕರ ವರ್ಮ ಎಂಬಾತನ ಮನೆ, ಆಸ್ತಿ ಪಾಸ್ತಿ ವಶಕ್ಕೆ ತೆಗೆದುಕೊಳ್ಳಲಾಗಿದೆ.
ನೀರಾವರಿ ಇಲಾಖೆಯ ಮಾಜಿ ಕಾರ್ಯದರ್ಶಿಯಾಗಿದ್ದ ಈತನ 1.44 ಕೋಟಿ ಬೆಲೆ ಬಾಳುವ ಮನೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇದನ್ನು ಶಾಲೆಯನ್ನಾಗಿ ಬದಲಾಯಿಸಲು ಬಿಹಾರ ಸರ್ಕಾರ ಮುಂದಾಗಿದೆ. ಅಧಿಕಾರಿಗಳಿಗೆ ಪಾಠ: 2009ರಲ್ಲೇ ಈ ಸಂಬಂಧ ಮಸೂದೆ ಮಂಡಿಸಲಾಗಿದ್ದರೂ ಇದಕ್ಕೆ ರಾಷ್ಟ್ರಪತಿಗಳ ಅಂಕಿತ ಸಿಕ್ಕಿರುವುದು ಕಳೆದ ವರ್ಷವಷ್ಟೇ. ಹೀಗಾಗಿ ವರ್ಷದ ಹಿಂದೆ ಜಾರಿಗೆ ಬಂದಿರುವ ಈ ಕಾನೂನಿಗೆ ಮೊದಲ ಬಲಿ ಶಿವಶಂಕರ ವರ್ಮಾನೇ. ವಿಶೇಷ ನ್ಯಾಯಾಲಯದಲ್ಲಿ ಈಗ ವಿಚಾರಣೆ ಆರಂಭವಾಗಿದ್ದು, ಮುಟ್ಟುಗೋಲಿಗೆ ಕೋರ್ಟ್ ಆದೇಶಿಸಿದೆ. ಈ ಆದೇಶವನ್ನು ವರ್ಮಾ ಪಾಟ್ನಾ ಹೈಕೋರ್ಟ್‍ನಲ್ಲಿ ಪ್ರಶ್ನಿಸಿದ್ದ. ಆದರೆ ಆಗಸ್ಟ್ 19 ರಂದು ಹೈಕೋರ್ಟ್ ವರ್ಮಾನ ಅರ್ಜಿ ತಿರಸ್ಕರಿಸಿತ್ತು . ಹೀಗಾಗಿ ಸರ್ಕಾರ ವರ್ಮಾನ ಮನೆ ಜೊತೆಗೆ ಸ್ವಿಸ್ ಬೆಂಚ್ಮಾರ್ಕ್ ಇರುವ 9 ಕೆಜಿ ಚಿನ್ನ, 16.50 ಲಕ್ಷ ನಗದು, 1600 ಡಾಲರ್, 81 ಲಕ್ಷ ಮೌಲ್ಯದ ಚಿನ್ನಾಭರಣ, 20 ಲಕ್ಷ ಮೌಲ್ಯದ ಷೇರು ಪತ್ರಗಳು, ಪಾಟ್ನಾ ದಲ್ಲಿರುವ ಎರಡು ಪ್ಲಾಟ್ಗಳು, ಉತ್ತರ ಪ್ರದೇಶದಲ್ಲಿರುವ ಎರಡು ಮನೆಗಳು ಮತ್ತು ರುಖಾನ್ಪುರದಲ್ಲಿರುವ ಮನೆಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಇದೇ ರೀತಿಯಲ್ಲಿ ಬಿಹಾರದಲ್ಲೇ ಇನ್ನಿಬ್ಬರು ಅಧಿಕಾರಿಗಳ ಆಸ್ತಿ ವಶಪಡಿಸಿಕೊಳ್ಳಲು ಸಿದ್ದತೆ ನಡೆದಿದೆ. ಇಂಥದೇ 16 ಪ್ರಕರಣಗಳು ವಿಶೇಷ ಕೋರ್ಟ್ ಮುಂದಿವೆ. ಹಿಮಾಚಲ, ಮಧ್ಯಪ್ರದೇಶದಲ್ಲೂ..........: ಬಿಹಾರದ್ದು ಅಡಿಪಾಯ. ಇದನ್ನೇ ನೋಡಿಕೊಂಡು ಹಿಮಾಚಲ ಪ್ರದೇಶದಲ್ಲೂ ವಿಶೇಷ ಕೋರ್ಟ್ ಕಾಯ್ದೆ ರಚಿಸಲಾಗಿದೆ. ಕಳೆದ ವರ್ಷವಷ್ಟೇ ಇದಕ್ಕೆ ರಾಷ್ಟ್ರಪತಿಗಳ ಅಂಕಿತ ಸಿಕ್ಕಿದೆ. ಇನ್ನು ಮಧ್ಯಪ್ರದೇಶದಲ್ಲೂ ಇಂಥದ್ದೇ ಮಸೂದೆ ರಚಿಸಲಾಗಿದ್ದು, ಕೇಂದ್ರದ ಅವಗಾಹನೆಗೆ ಕಳುಹಿಸಿಕೊಡಲಾಗಿದೆ. ಆದರೆ ಇದಕ್ಕೆ ಇನ್ನೂ ರಾಷ್ಟ್ರಪತಿಗಳ ಅಂಕಿತ ಸಿಕ್ಕಿಲ್ಲ. ಕರ್ನಾಟಕದಲ್ಲಿ....?: ಕರ್ನಾಟಕದಲ್ಲಿ ಪ್ರಬಲ ಲೋಕಾಯುಕ್ತವೇನೋ ಇದೆ. ಆದರೆ ಮುಟ್ಟುಗೋಲಿನ ಅಧಿಕಾರವಿಲ್ಲ. ಲೋಕಾಯುಕ್ತರು ದಾಳಿ ಸಂಧರ್ಭದಲ್ಲಿ ಆಸ್ತಿ ಪಾಸ್ತಿ ಗುರುತಿಸಬಹುದು. ಚಿನ್ನಾಭರಣ, ನಗದನ್ನಾದರೆ ವಶಕ್ಕೆ ತೆಗೆದುಕೊಂಡು ಬಂದು ಕಾನೂನು ಇಲಾಖೆಯ ಮಾಲ್ಖಾನ ದಲ್ಲಿ ಇಡಬಹುದು. ಆದರೆ ಇದನ್ನು ವಶಪಡಿಸಿಕೊಳ್ಳುವ ಯಾವುದೇ ಅಧಿಕಾರವಿಲ್ಲ. ಒಂದು ವೇಳೆ ಬಿಹಾರದಲ್ಲಂತೆ ವಿಚಾರಣೆ ಅವಧಿಯಲ್ಲೇ ಕರ್ನಾಟಕದಲ್ಲೂ ಭ್ರಷ್ಟರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸಾಧ್ಯವಾದರೆ ಆಗ ಲೋಕಾಯುಕ್ತಕ್ಕೆ ನಿಜವಾದ ಬಲ ಬರುತ್ತೆ. ಪೊನ್ನಸ್ವಾಮಿ ಎನ್. ನಿರಾತಂಕ
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|