ಭಾರತದಲ್ಲಿ ಸಮಾಜಕಾರ್ಯ ಶಿಕ್ಷಣ ಪ್ರಾರಂಭವಾಗಿ ಎಂಟು ದಶಕಗಳೇ ಸಂದವು. 1936 ಮುಂಬಯಿಯ ಟಾಟಾ ಸಂಸ್ಥೆಯಲ್ಲಿ ಪ್ರಾರಂಭವಾದ ಸಮಾಜಕಾರ್ಯ ಶಿಕ್ಷಣ ಇಂದು ದೇಶದ ಎಲ್ಲಾ ರಾಜ್ಯಗಳಿಗೂ ತಲುಪಿದೆ. ಪ್ರಾರಂಭದ ಹಂತದಲ್ಲಿ ಎಲ್ಲವೂ ವಿದೇಶಿಮಯವಾಗಿತ್ತು ಈ ಸಮಾಜಕಾರ್ಯದ ಶಿಕ್ಷಣ ; ಪಠ್ಯಕ್ರಮ, ಪುಸ್ತಕಗಳು, ರಚನೆ ಮತ್ತು ಸ್ವರೂಪ ಹಾಗೂ ಅಧ್ಯಾಪಕರೂ ಕೂಡಾ. ಈ ಕಳೆದ ಎಂಟು ದಶಕಗಳಲ್ಲಿ ಹಲವಾರು ಪ್ರಗತಿಪರ ಬದಲಾವಣೆಗಳು ಸಮಾಜಕಾರ್ಯ ಶಿಕ್ಷಣದಲ್ಲಿ ಕಾಣಸಿಗುತ್ತಿವೆ. ಆದರೂ ಕೂಡ ಹೇಳಿಕೊಳ್ಳುವಂತಹ ಗುಣಾತ್ಮಕ ಪರಿವರ್ತನೆ ತರುವಲ್ಲಿ ನಾವೆಲ್ಲರೂ ವಿಫಲರಾಗಿದ್ದೇವೆ ಎಂದರೆ ಅತಿಶಯೋಕ್ತಿಯಾಗಲಾರದು. ಸಮಾಜಕಾರ್ಯ ಶಿಕ್ಷಣದ ಸ್ಥಳೀಯ ಸಾಹಿತ್ಯದ ಲಭ್ಯತೆ (Availability of indigenous Literature in Social Work Education) ಸಮಾಜಕಾರ್ಯ ವೃತ್ತಿಯನ್ನು ಗುಣಾತ್ಮಕವಾಗಿ ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಬಹುವಾಂಶ ಹಿರಿಯ ಸಮಾಜಕಾರ್ಯ ಶಿಕ್ಷಣ ತಜ್ಞರು ಈ ದಿಸೆಯಲ್ಲಿ ಗಮನೀಯವಾದ ಕಾರ್ಯ ಮಾಡಿಲ್ಲ. ಅಪವಾದಾತ್ಮಕವಾಗಿ ಎನ್ನುವಂತೆ ಕೆಲವೇ ಹಿರಿಯ ಶಿಕ್ಷಣ ತಜ್ಞರು ಸ್ಥಳೀಯ ಸಮಾಜಕಾರ್ಯ ಸಾಹಿತ್ಯ ಸೃಷ್ಟಿಸುವಲ್ಲಿ ಯಶಸ್ಸು ಹೊಂದಿದ್ದಾರೆ. ಪ್ರೊ. ಎಚ್.ಎಂ. ಮರುಳಸಿದ್ಧಯ್ಯ, ಡಾ. ಶಂಕರ ಪಾಠಕ, ಡಾ. ಗೋರೆ, ಪ್ರೊ. ಗೌರಿ ರಾಣಿ ಬ್ಯಾನರ್ಜಿಯವರನ್ನು ಉದಾಹರಣೆಗಾಗಿ ನಮೂದಿಸಬಹುದು.
ನಾವು ಕೈಗೊಂಡ ಸಂಶೋಧನೆ, ನಾವು ಅನುಭವಿಸಿದ ಕ್ಷೇತ್ರಾನುಭವ, ನಮ್ಮ ಅಧ್ಯಯನ, ನಮ್ಮ ಚಿಂತನ-ಮನನಗಳೆಲ್ಲ ಪುಸ್ತಕವಾಗಿ ಹೊರಬಂದಾಗ ನಮ್ಮ ಸಮಾಜಕಾರ್ಯ ವೃತ್ತಿ ಶ್ರೀಮಂತವಾಗುತ್ತದೆ. ಡಾ. ರಮೇಶ ಸೋನಕಾಂಬಳೆಯವರು ಈ ದಿಸೆಯಲ್ಲಿ ಹೆಜ್ಜೆ ಹಾಕಿದ್ದಾರೆ. ಅವರು ತಾವು ಕೈಗೊಂಡ ಸಂಶೋಧನೆ ಕ್ಷೇತ್ರದಲ್ಲಿ ಪಡೆದ ಅನುಭವವನ್ನು ಪುಸ್ತಕದ ರೂಪದಲ್ಲಿ ಪ್ರಕಟಿಸಿ ಸಮಾಜಕಾರ್ಯದ ವಿದ್ಯಾರ್ಥಿ ವೃಂದಕ್ಕೂ ಹಾಗೂ ಕ್ಷೇತ್ರದಲ್ಲಿ ಕಾರ್ಯತತ್ಪರರಾಗಿರುವ ವೃತ್ತಿಪರ ಸಮಾಜಕಾರ್ಯಕರ್ತರಿಗೂ ಒಂದು ದಾರಿಯನ್ನು ತೋರಿಸಿದ್ದಾರೆ, ಸಮಾಜಕಾರ್ಯ ಪುಸ್ತಕದ ಮೂಲಕ. ಸ್ಥಳೀಯ ಸಾಹಿತ್ಯವಂತೂ ಬೇಕೇ ಬೇಕು. ಆದರೆ ಅದು ಸ್ಥಳೀಯ ಭಾಷೆಯಲ್ಲಿ ಆದರೆ ಇನ್ನೂ ಉತ್ತಮ. ಡಾ. ರಮೇಶ ಸೋನಕಾಂಬಳೆಯವರ ಸಮಾಜಕಾರ್ಯ ಪುಸ್ತಕವು ಸಮಾಜಕಾರ್ಯ ಶಿಕ್ಷಣ ಹಾಗೂ ಸಮಾಜಕಾರ್ಯ ವೃತ್ತಿಗೆ ಮಹತ್ತರವಾದ ಕೊಡುಗೆಯಾಗಿದೆ. ವಿಶೇಷವಾಗಿ ವಿದ್ಯಾರ್ಥಿ ವೃಂದ ಹಾಗೂ ಯುವ ಶಿಕ್ಷಕ ಸಂಶೋಧಕರಿಗೆ ಮಾರ್ಗದರ್ಶಿಯಾಗಿದೆ. ಸಮಾಜಕಾರ್ಯ ಪುಸ್ತಕವು ರಮೇಶ ಸೋನಕಾಂಬಳೆಯವರ ಎರಡನೇ ಕೃತಿಯಾಗಿದೆ. ಮೊದಲನೆಯದು ಸಮಾಜಕಾರ್ಯ ವೃತ್ತಿ. ಸಮಾಜಕಾರ್ಯ ಪುಸ್ತಕವನ್ನು ಹತ್ತು ಅಧ್ಯಾಯಗಳಲ್ಲಿ ಮಂಡಿಸಲಾಗಿದೆ. ಅಧ್ಯಾಯಗಳು ಈ ಕೆಳಕಂಡವುಗಳನ್ನು ಒಳಗೊಂಡಿದೆ.
ಈ ಪುಸ್ತಕವು ಪ್ರಮುಖವಾಗಿ ಸಮಾಜಕಾರ್ಯದ ಪರಿಕಲ್ಪನೆಗಳು, ವಿಧಾನಗಳು, ಮೌಲಿಕ ಕಾರ್ಯಕ್ಷೇತ್ರಗಳು, ಸಮಾಜಕಾರ್ಯ ಶಿಕ್ಷಣದ ಜಾಗತಿಕ ಇತಿಹಾಸ, ಸಮಾಜಕಾರ್ಯದ ತತ್ವಜ್ಞಾನ ಹಾಗೂ ಉದ್ದೇಶಗಳನ್ನು ಒಳಗೊಂಡಿದೆ. ಒಂಬತ್ತನೇ ಅಧ್ಯಾಯದಲ್ಲಿ ಮಂಡಿಸಿದ ಭಾರತದ ಸಮಾಜಕಾರ್ಯದ ನವರತ್ನಗಳು ಒಂದು ಹೊಸ ಆಯಾಮವೆಂದೇ ಹೇಳಬೇಕು. ಕೊನೆಯ ಅಧ್ಯಾಯದಲ್ಲಿರುವ ಅನುಬಂಧಗಳು ಓದುಗರಿಗೆ ಹೆಚ್ಚಿನ ಜ್ಞಾನವನ್ನು ನೀಡುತ್ತದೆ. ಸಮಾಜಕಾರ್ಯದ ಪ್ರತಿಯೊಂದು ವಿಧಾನದ ಮೇಲೆ ಒಂದೊಂದು ಸ್ವತಂತ್ರ ಪುಸ್ತಕದ ಅವಶ್ಯಕತೆ ಇದೆ. ಅಲ್ಲದೆ ಕ್ಷೇತ್ರಕಾರ್ಯದ ಕುರಿತಾದ ಪುಸ್ತಕದ ಅವಶ್ಯಕತೆ ಇದೆ. ಈ ಅವಶ್ಯಕತೆಯನ್ನು ನೀಗಿಸಲು ಡಾ. ರಮೇಶ ಎಂ. ಸೋನಕಾಂಬಳೆ ರವರ ಸಮಾಜಕಾರ್ಯ ಪುಸ್ತಕವು ಸಹಕಾರಿಯಾಗುತ್ತದೆ. ಈ ಪುಸ್ತಕವು ಸಮಾಜಕಾರ್ಯದ ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ, ಸಂಶೋಧಕರಿಗೆ ಹಾಗೂ ಸಮಾಜಕಾರ್ಯ ವೃತ್ತಿಪರರಿಗೆ ಬಹಳ ಉಪಯುಕ್ತವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಮಹದೇವ್ ಸ್ವಾಮಿ
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |