ಪ್ರೊಫೆಸರ್ ಶಂಕರ್ ಪಾಠಕ್ ರವರು ಸಮಾಜಕಾರ್ಯದ ಹೆಜ್ಜೆಗಳು ಪತ್ರಿಕೆಯ ಆರಂಭದ ದಿನಗಳಿಂದಲೂ ನಿರಾತಂಕ ಸಂಸ್ಥೆಯೊಂದಿಗೆ ಒಡನಾಟ ಹೊಂದಿದ್ದರು. ಆರಂಭದ ದಿನಗಳಲ್ಲಿ ಪಾಠಕ್‍ರವರ ಕುರಿತು ಪತ್ರಿಕೆಯಲ್ಲಿ ಲೇಖನ ಪ್ರಕಟಿಸಲು ನಿರ್ಧರಿಸಿದಾಗ ಅವರ ಮೊದಲ ಭೇಟಿಯಾಯಿತು. ಪತ್ರಿಕೆಯ 2ನೇ ಸಂಚಿಕೆ ಜನವರಿ 2011 ರಲ್ಲಿ ಇವರ ಕುರಿತು ಮುಖಪುಟ ಲೇಖನ ಪ್ರಕಟಿಸಲಾಗಿತ್ತು. ಈ ಸಂದರ್ಭದಲ್ಲಿ ಪಾಠಕ್‍ರವರ ಜೊತೆಯಲ್ಲಿ ಅತ್ಯಂತ ಆತ್ಮೀಯ ಕ್ಷಣಗಳನ್ನು ಕಳೆಯುವ ಸಂದರ್ಭ ಒದಗಿ ಬಂದಿತ್ತು. ಪಾಠಕ್‍ರವರು ಅವರ ಖಾಸಗಿ ಜೀವನ, ವೃತ್ತಿ ಜೀವನದ ಬಗ್ಗೆ ಹಲವಾರು ವಿಷಯಗಳನ್ನು ಆ ಸಂದರ್ಭದಲ್ಲಿ ಹಂಚಿಕೊಂಡಿದ್ದರು. ಪಾಠಕ್‍ರವರು ಹಾಗೂ ದಿವಂಗತ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಒಂದೇ ತರಗತಿಯಲ್ಲಿ ಸಹಪಾಠಿಗಳಾಗಿದ್ದರಂತೆ. ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದಾಗ ಹತ್ತು ಹಲವು ಸಲಹೆಗಳನ್ನು ಪಾಠಕ್‍ರವರಿಂದ ಪಡೆಯುತ್ತಿದ್ದರಂತೆ. ಹಾಗೆಯೇ ಒಮ್ಮೆ ಸ್ನೇಹಿತರೆಲ್ಲ ಸೇರಿದ್ದಾಗ ಎಲ್ಲಾ ಸ್ನೇಹಿತರ ಸಮ್ಮುಖದಲ್ಲಿ ಪಾಠಕ್‍ರವರಿಗೆ ನೀನು ಏನಾದರೂ ನನ್ನಿಂದ ಸಹಾಯ ಬೇಕಿದ್ದರೆ ಕೇಳು ಎಂದರಂತೆ. ಇದನ್ನು ಪಾಠಕ್‍ರವರು ನಯವಾಗಿ ಮುಗುಳ್ನಕ್ಕು ಸುಮ್ಮನಾದರಂತೆ. ಆ ಸಂದರ್ಭದಲ್ಲಿ ಶ್ರೀಯುತ ರಾಮಕೃಷ್ಣ ಹೆಗಡೆಯವರು ನನ್ನ ಬಾಲ್ಯ ಸ್ನೇಹಿತರಲ್ಲಿ ಇದುವರೆಗೂ ಯಾವುದೇ ಸಹಾಯ ತೆಗೆದುಕೊಳ್ಳದೆ ಇರುವ ಏಕೈಕ ವ್ಯಕ್ತಿ ನೀನು ಎಂದು ಹೇಳಿದರಂತೆ. ಪಾಠಕ್‍ರವರು ಯಾರಿಂದಲೂ ಸಹಾಯದ ಹಸ್ತ ಚಾಚದೆ ತಮ್ಮ ವೃತ್ತಿ ಜೀವನದಲ್ಲಿ ಹಾಗೂ ವೈಯಕ್ತಿಕ ಜೀವನದಲ್ಲಿ ಬೆಳೆದುಬಂದವರು.
ಸಮಾಜಕಾರ್ಯದ ಹೆಜ್ಜೆಗಳು ಪತ್ರಿಕೆಗೆ ಹಲವು ಸಲಹೆಗಳನ್ನು ನೀಡುತ್ತಾ ಹಾಗೆಯೇ ಪತ್ರಿಕೆಯ ಗುಣಮಟ್ಟದ ಬಗ್ಗೆ ಅತ್ಯಂತ ವಿಮರ್ಶಾತ್ಮಕವಾಗಿ ಚರ್ಚೆ ನಡೆಸುತ್ತಿದ್ದರು. ಪತ್ರಿಕೆಯ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿ ಪತ್ರಿಕೆಗೆ ಶುಭ ಕೋರಿದ್ದರು. ಪತ್ರಿಕೆಗೆ 5 ವರ್ಷ ತುಂಬಿದ ಸಂದರ್ಭದಲ್ಲಿ ಈ ಪತ್ರಿಕೆ ಇದುವರೆಗೂ ನಡೆದು ಬಂದ ದಾರಿಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದರು. ಪಾಠಕ್‍ರವರ 3 ಪುಸ್ತಕಗಳನ್ನು ನಮ್ಮ ನಿರುತ ಪ್ರಕಾಶನ ಸಂಸ್ಥೆಯಿಂದ ಹೊರತಂದಿದ್ದೇವೆ. ಮೊದಲ ಪುಸ್ತಕ ಹೊರತರುವ ಸಂದರ್ಭದಲ್ಲಿ ಆದ ಅನುಭವ ಪಾಠಕ್‍ರವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ. ಪಾಠಕ್‍ರವರ ಪುಸ್ತಕ "Social Work and Social Welfare" ನಮಗೆ ಪ್ರಕಟಿಸಲು ಅನುಮತಿ ನೀಡಿದ ಮೇಲೆ ಪ್ರಖ್ಯಾತ ಅಂತರರಾಷ್ಟ್ರೀಯ ಮಟ್ಟದ ಪ್ರಕಾಶನ ಸಂಸ್ಥೆಯೊಂದು ಪಾಠಕ್‍ರವರನ್ನು ಸಂಪರ್ಕಿಸಿ ಅವರ ಪುಸ್ತಕವನ್ನು ಪ್ರಕಟಿಸಲು ಕೋರಿಕೊಂಡಿದ್ದರು. ಆದರೆ ಪಾಠಕ್‍ರವರು ಮೊದಲೇ ನಮಗೆ ಮೌಖಿಕವಾಗಿ ಸಮ್ಮತಿ ನೀಡಿದ್ದರಿಂದ ಅಂತರರಾಷ್ಟ್ರೀಯ ಮಟ್ಟದ ಪ್ರಕಾಶನ ಸಂಸ್ಥೆಗೆ ಅವರ ಪುಸ್ತಕ ಪ್ರಕಟಿಸಲು ಅನುಮತಿ ನೀಡಲಿಲ್ಲ. ಬೇರೆ ಯಾರಾದರೂ ಪಾಠಕ್‍ರವರ ಸ್ಥಾನದಲ್ಲಿದ್ದಿದ್ದರೆ ಅವರ ಪುಸ್ತಕವನ್ನು ಅಂತರರಾಷ್ಟ್ರೀಯ ಮಟ್ಟದ ಪ್ರಕಾಶನ ಸಂಸ್ಥೆಯಿಂದಲೇ ಪ್ರಕಟಿಸಲು ಇಚ್ಛಿಸುತ್ತಿದ್ದರು. ಒಮ್ಮೆ ಪಾಠಕ್‍ರವರು ಮಾತು ಕೊಟ್ಟಲ್ಲಿ ಅದನ್ನು ಹಿಂತೆಗೆದುಕೊಳ್ಳುವ ಸಂದರ್ಭ ಮಾಡುತ್ತಿರಲಿಲ್ಲ. ಎಷ್ಟೋ ಸಂದರ್ಭಗಳಲ್ಲಿ ಈ ರೀತಿಯ ಅನುಭವಗಳನ್ನು ಅವರು ಹಂಚಿಕೊಂಡಿದ್ದಾರೆ. ಮುಂದುವರೆಯುವುದು..................... ರಮೇಶ ಎಂ.ಎಚ್. ಸಂಪಾದಕರು – ಸಮಾಜಕಾರ್ಯದ ಹೆಜ್ಜೆಗಳು
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
![]()
|
![]()
|
![]()
|
![]()
|
SITE MAP
SitePOSH |
NIRATHANKAOUR OTHER WEBSITESSubscribe |
HR and Employment Law Classes - Every Fortnight
50,000 HR PROFESSIONALS ARE CONNECTED THROUGH OUR HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
Are you looking to enhance your knowledge of HR and labor laws? Join Nirathanka's HR and Employment Law Classes-Every Fortnight—a one-of-a-kind opportunity to learn from experienced professionals and industry experts.