ಬಿಡಿಎ ಪ್ಲ್ಯಾನ್‍ನಲ್ಲಿ ಆಗಿರುವ ಲೋಪದೋಷಗಳ ಬಗ್ಗೆ ದೂರು ನೀಡಲಾಗಿ ನಗರ ಯೋಜನಾ ವಿಭಾಗದವರು ಬಿಡಿಎ ಪ್ಲ್ಯಾನ್‍ನಲ್ಲಿರುವ ಲೋಪದೋಷಗಳನ್ನು ಒಪ್ಪಿಕೊಂಡು ಸರಿಪಡಿಸಲು ಸರ್ವೆ ಪ್ರಾಧಿಕಾರದ ಭೂಮಾಪಕರಿಗೆ ವಹಿಸಿರುತ್ತಾರೆ. ಸುಮಾರು 3 ತಿಂಗಳು ಕಳೆದರೂ ಈ ಕುರಿತು ಯಾವುದೇ ಕ್ರಮ ಭೂಮಾಪಕರು ತೆಗೆದುಕೊಂಡಿರುವುದಿಲ್ಲ. ಇನ್ನು ಎಷ್ಟು ದಿನ ಕಾಯಬೇಕು ? ಇಲ್ಲಿ ಅಧಿಕಾರಿಗಳ ಮಂದಗತಿಯ ಕೆಲಸ ಸಾರ್ವಜನಿಕರಿಗೆ ಆಗುವ ತೊಂದರೆ ಅರ್ಥೈಸಿಕೊಂಡು ಕೆಲಸ ನಿರ್ವಹಿಸಿದರೆ ಒಳಿತು. ದಿನಾಂಕ : 09-06-2016 ರವರಿಗೆ, ನಗರ ಯೋಜನಾ ಅಧಿಕಾರಿ TPM ಬೆಂಗಳೂರು ಉತ್ತರ ತಾಲ್ಲೂಕು ಬೆಂ.ಅ. ಪ್ರಾಧಿಕಾರ, ಬೆಂಗಳೂರು ಇಂದ, ಹನುಮಯ್ಯ S/o ಲೇ. ನಂಜಪ್ಪ C/o ರಮೇಶ ಎಂ.ಎಚ್. ಸಂಪಾದಕರು, ಸಮಾಜಕಾರ್ಯದ ಹೆಜ್ಜೆಗಳು ನಂ. 326, 1ನೇ ಮಹಡಿ, ಸಿಂಡಿಕೇಟ್ ಬ್ಯಾಂಕ್ ಎದುರು, ಡಾ. ಅಂಬೇಡ್ಕರ್ ಕಾಲೇಜು ಹತ್ತಿರ, ಕೆಂಗುಂಟೆ, ಮಲ್ಲತ್ತಹಳ್ಳಿ, ಬೆಂಗಳೂರು - 560056 ಮೊ : 9980066890, Web : www.socialworkfootprints.org ವಿಷಯ : ಸರ್ವೆ ನಂ. 28/3, ವಿಶ್ವೇಶ್ವರಯ್ಯ ಮುಂದುವರಿದ ಬಡಾವಣೆ, 7ನೇ ಬ್ಲಾಕ್, ಗಿಡದಕೋನೇನಹಳ್ಳಿ ಗ್ರಾಮ, ಬೆಂಗಳೂರು ಉತ್ತರ ತಾಲ್ಲೂಕು, ಯಶವಂತಪುರ ಹೋಬಳಿ, ಬೆಂಗಳೂರು. ಏಕನಿವೇಶನ ಬಡಾವಣೆಯಲ್ಲಿ (ರೆಸಲ್ಯೂಷನ್ ನಂ. 1/2012 Dated. 25-02-2012, Work Order No. BQA/TPM/PRL-25/10-11/245/2012-13 Dated. 16-04-2013) ಆಗಿರುವ ಲೋಪದೋಷಗಳನ್ನು ಸರಿಪಡಿಸಬೇಕಾಗಿ ಹಾಗೂ ಹನುಮಯ್ಯನವರ ಭಾಗಾಂಶಕ್ಕೆ ಸೇರಿದ 0.2.2 ಗುಂಟೆ ಪ್ರದೇಶವನ್ನು ಸರ್ವೆ ನಕ್ಷೆಯಲ್ಲಿ ಗುರುತಿಸಿಕೊಡಬೇಕಾಗಿ ವಿನಂತಿ. ಮಾನ್ಯರೆ, ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಬೆಂಗಳೂರು ಉತ್ತರ ತಾಲ್ಲೂಕು, ಯಶವಂತಪುರ ಹೋಬಳಿ, ಗಿಡದಕೋನೇನಹಳ್ಳಿ ಗ್ರಾಮದ ಸರ್ವೆ ನಂ. 28/2 ವಿಶ್ವೇಶ್ವರಯ್ಯ ಮುಂದುವರಿದ ಬಡಾವಣೆ, 7ನೇ ಬ್ಲಾಕ್ ನಲ್ಲಿ ಒಂದು ಎಕರೆ ಇಪ್ಪತ್ನಾಲ್ಕು ಗುಂಟೆ ಜಮೀನು ಶ್ರೀ ಚಿಕ್ಕಹನುಮಯ್ಯ ಹಾಗೂ ಶ್ರೀ ಹನುಮಯ್ಯ ಆದ ನಮ್ಮ ಪಿತ್ರಾರ್ಜಿತ ಆಸ್ತಿಯಾಗಿರುತ್ತದೆ. ಚಿಕ್ಕಹನುಮಯ್ಯನವರ ಭಾಗಾಂಶಕ್ಕೆ ಸೇರಿದ 1 ಎಕರೆ 21.8 ಹಾಗೂ ಹನುಮಯ್ಯನವರ ಭಾಗಾಂಶಕ್ಕೆ 0.2.2 ಗುಂಟೆ ಜಮೀನು ಪಿತ್ರಾರ್ಜಿತವಾಗಿ ಬಂದಿರುತ್ತದೆ (ಪಂಚಾಯಿತಿ ಪಾರಿಖತ್ ದಿನಾಂಕ : 22-8-1997). ಶ್ರೀ ಚಿಕ್ಕಹನುಮಯ್ಯನವರ ಭಾಗಾಂಶಕ್ಕೆ ಸರ್ವೆ ನಂ. 28/2 ರಲ್ಲಿ 1 ಎಕರೆ 21.8 ಗುಂಟೆ ಪ್ರದೇಶವಿರುತ್ತದೆ. ಶ್ರೀ ಚಿಕ್ಕಹನುಮಯ್ಯನವರು 20 ಗುಂಟೆ ಪ್ರದೇಶವನ್ನು ದಿನಾಂಕ : 24-5-1999 ರಲ್ಲಿ ಕ್ರಯಪತ್ರ ಮಾಡಿ ಮಾರಾಟ ಮಾಡಿರುತ್ತಾರೆ. ಹಾಗೆಯೇ 6 ಗುಂಟೆ ಪ್ರದೇಶವನ್ನು ದಿನಾಂಕ : 12-5-2003 ರಂದು ಕ್ರಯಪತ್ರದ ಮೂಲಕ ಮಾರಾಟ ಮಾಡಿರುತ್ತಾರೆ. ಹಾಗಾಗಿ ಅವರ ಉಳಿಕೆ ಜಮೀನು 0.35.8 ಗುಂಟೆಯಾಗಿರುತ್ತದೆ. ಶ್ರೀಯುತ ಚಿಕ್ಕಹನುಮಯ್ಯನವರು 28/2 ಸರ್ವೆ ನಂ. ಅನ್ನು ಪೋಡಿ ಮಾಡಿಸಿ ತಮ್ಮ ಸರ್ವೆ ನಂ. ಅನ್ನು 28/3 ಎಂದು ಬದಲಾವಣೆ ಮಾಡಿ ಬಿಡಿಎ ಇಂದ ಏಕನಿವೇಶನ ಬಡಾವಣೆಗೆ ಅನುಮೋದನೆ ಪಡೆದುಕೊಂಡಿರುತ್ತಾರೆ. (ರೆಸಲ್ಯೂಷನ್ ನಂ. 1/2012 Dated. 25-02-2012, Work Order No. BQA/TPM/PRL-25/10-11/245/2012-13 Dated. 16-04-2013) ಈ ರೀತಿ ಅನುಮೋದನೆ ಪಡೆದುಕೊಳ್ಳುವಾಗ ಹನುಮಯ್ಯ ಆದ ನಮ್ಮ ಭಾಗಾಂಶಕ್ಕೆ ಸೇರಿದ 0.2.2 ಗುಂಟೆ ಪ್ರದೇಶವನ್ನು ಚಿಕ್ಕಹನುಮಯ್ಯನವರು ಒತ್ತುವರಿ ಮಾಡಿಕೊಂಡು ಹಾಗೂ ತಮ್ಮ ಏಕನಿವೇಶನ ಬಡಾವಣೆಯನ್ನು ಬಿಡಿಎ ನಿಂದ ತಮ್ಮ ಪ್ರಭಾವ ಬೀರಿ ಅನುಮೋದಿಸಿಕೊಂಡಿರುತ್ತಾರೆ. ಆದುದರಿಂದ ತಾವು ಅನುಮೋದಿಸಿರುವ ಏಕನಿವೇಶನ ಬಡಾವಣೆ ಈ ಕೆಳಕಂಡ ಕಾರಣಗಳಿಂದಾಗಿ ಸರಿಯಾಗಿರುವುದಿಲ್ಲ.
ಚಿಕ್ಕಹನುಮಯ್ಯನವರಿಗೆ 0.36 ಗುಂಟೆ ಎಂದು ಏಕನಿವೇಶನ ಬಡಾವಣೆ ಅನುಮೋದಿಸಿದಾಗ 0.36 ಗುಂಟೆಯನ್ನು ಅಡಿಗಳಿಗೆ ಬದಲಾಯಿಸಿದಾಗ 39,204 ಅಡಿಗಳಾಗಬೇಕು. ಆದರೆ ಚಿಕ್ಕಹನುಮಯ್ಯನವರಿಗೆ ತಾವು 41,766 ಅಡಿಗಳನ್ನು 0.36 ಗುಂಟೆ ಎಂದು ಅಳೆದು ಏಕನಿವೇಶನ ಬಡಾವಣೆ ಅನುಮೋದಿಸಿರುವುದು ಸುಮಾರು 2562 ಅಡಿಗಳು ಹೆಚ್ಚುವರಿಯಾಗಿ ಸೇರಿಸಿರುವುದು ಸಮಂಜಸವೇ? ಚಿಕ್ಕಹನುಮಯ್ಯನವರಿಗೆ ವಾಸ್ತವವಾಗಿ 0.35.8 ಗುಂಟೆ ಇರುತ್ತದೆ. ಇವರು 0.36 ಗುಂಟೆ ಎಂದು ಪಹಣಿಯಲ್ಲಿ ತಪ್ಪಾಗಿ ನಮೂದಿಸಿಕೊಂಡಿರುತ್ತಾರೆ. 0.0.2 ಗುಂಟೆ (216 ಅಡಿಗಳು) ಹೆಚ್ಚುವರಿಯಾಗಿ ಸೇರಿಕೊಂಡಿದೆ. ಅಂದರೆ 2562 ಅಡಿ ಮತ್ತು 216 ಅಡಿ, ಒಟ್ಟಾಗಿ 2778 ಅಡಿಗಳು ಚಿಕ್ಕಹನುಮಯ್ಯನವರು ಒತ್ತುವರಿ ಮಾಡಿಕೊಂಡಿರುತ್ತಾರೆ. ಇದಕ್ಕೆ ಬಿಡಿಎ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸಹಕಾರ ನೀಡಿ ಯಾವುದೇ ದಾಖಲೆಗಳನ್ನು ಪರಿಶೀಲಿಸದೆ ಚಿಕ್ಕಹನುಮಯ್ಯನವರಿಗೆ ಸಹಾಯ ಮಾಡಿರುತ್ತಾರೆ. ಶ್ರೀ ಚಿಕ್ಕಹನುಮಯ್ಯನವರಿಗೆ ಬಿಡಿಎ ಇಂದ ಏಕನಿವೇಶನ ಬಡಾವಣೆ ಅನುಮೋದಿಸಿರುವ (ರೆಸಲ್ಯೂಷನ್ ನಂ. 1/2012 Dated. 25-02-2012, Work Order No. BQA/TPM/PRL-25/10-11/245/2012-13 Dated. 16-04-2013) ಜಾಗವನ್ನು ಮೀಟರ್‍ಗಳಿಂದ ಅಡಿಗಳಿಗೆ ಬದಲಾಯಿಸಿದಾಗ ಈ ಕೆಳಕಂಡಂತೆ ಹೆಚ್ಚುವರಿಯಾಗಿ 2778 ಅಡಿಗಳು ಬರುವುದು ಕಂಡುಬರುತ್ತದೆ. ಬಿಡಿಎ ಏಕನಿವೇಶನ ಬಡಾವಣೆಗೆ ಅನುಮೋದಿಸಿರುವ ಜಮೀನಿನ ಚೆಕ್‍ಬಂದಿ ಈ ಕೆಳಕಂಡಂತಿದೆ. ಒಬ್ಬ ಸಾಮಾನ್ಯ ನಾಗರಿಕನಿಗೆ ತಿಳಿಯುವ ಲೆಕ್ಕ ಬಿಡಿಎ ಅಧಿಕಾರಿಗಳಿಗೆ ಕಾಣದಿರುವುದು ಅತ್ಯಂತ ದುರಂತದ ಸಂಗತಿ.
ಈ ಮೇಲ್ಕಂಡ ಎಲ್ಲಾ ಅಂಶಗಳನ್ನು ಪರಿಗಣಿಸಿ ಸರ್ವೆ ನಂ. 28/2 ರಲ್ಲಿ ಚಿಕ್ಕಹನುಮಯ್ಯ ಹಾಗೂ ನಮಗೆ ಸೇರಿದ 1 ಎಕರೆ 24 ಗುಂಟೆ ಪ್ರದೇಶದಲ್ಲಿ ಹನುಮಯ್ಯ ಆದ ನಮ್ಮ ಭಾಗಾಂಶಕ್ಕೆ ಸೇರಿದ 0.2.2 ಗುಂಟೆಯ ಪ್ರದೇಶದ ಅಳತೆ ಮಾಡಿ ಸ್ಥಳವನ್ನು ಸ್ಪಷ್ಟವಾಗಿ ಸರ್ವೆ ನಕ್ಷೆಯನ್ನು ತಯಾರಿಸಿ ಗುರುತಿಸಿಕೊಡಬೇಕೆಂದು ಹಾಗೂ ಈಗಾಗಲೇ ಅನುಮೋದಿಸಿರುವ ಶ್ರೀ ಚಿಕ್ಕಹನುಮಯ್ಯನವರ ಏಕನಿವೇಶನ ಬಡಾವಣೆಯ ನಕ್ಷೆಯಲ್ಲಿ (ರೆಸಲ್ಯೂಷನ್ ನಂ. 1/2012 Dated. 25-02-2012, Work Order No. BQA/TPM/PRL-25/10-11/245/2012-13 Dated. 16-04-2013) ಸೂಕ್ತ ತಿದ್ದುಪಡಿ ತರಬೇಕೆಂದು ಕೇಳಿಕೊಳ್ಳುತ್ತೇವೆ. ಗೌರವಗಳೊಂದಿಗೆ ಇಂತಿ ತಮ್ಮ ವಿಶ್ವಾಸಿ (ಹನುಮಯ್ಯ) ಅಡಕಗಳು : 1. ಚಿಕ್ಕಹನುಮಯ್ಯನವರಿಗೆ ಅನುಮೋದಿಸಿರುವ ಏಕನಿವೇಶನ ಬಡಾವಣೆಯ ನಕ್ಷೆಯ ನಕಲು 2. ಹನುಮಯ್ಯನವರ ಭಾಗಾಂಶಕ್ಕೆ ಸೇರಿದ 0.2.2 ಗುಂಟೆಯ ಪಹಣಿಯ ನಕಲು ಪ್ರತಿಗಳನ್ನು : 1) ತಹಶೀಲ್ದಾರ್ ಕಂದಾಯ ಭವನ, ಬೆಂಗಳೂರು
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|