ಮಾನವನನ್ನು ಪ್ರಗತಿಪಥದೆಡೆಗೆ ಕೊಂಡೊಯ್ಯುವ ಪ್ರಮುಖ ಸಾಧನವೇ ಜ್ಞಾನ. ಇಂತಹ ಜ್ಞಾನವನ್ನು ಮಾನವನು ಹುಟ್ಟಿನಿಂದಲೇ ಹಂತ-ಹಂತವಾಗಿ ಕುಟುಂಬದ ಸದಸ್ಯರೊಂದಿಗೆ ನೆರೆಹೊರೆಯವರೊಂದಿಗೆ ಕಲಿತಿರುತ್ತಾನೆ. ಹೀಗೆ ಸಂಪಾದಿಸಿದ ಜ್ಞಾನವನ್ನು ವ್ಯವಸ್ಥಿತ ರೀತಿಯಲ್ಲಿ ಮಾರ್ಪಡಿಸಿ ಅಡಗಿರುವ ಜ್ಞಾನ ಸಂಪತ್ತಿನ ಪ್ರಭೆಯನ್ನು ಹೊರತಂದು ಪ್ರಜ್ವಲಿಸುವಂತೆ ಮಾಡುವದೇ ಶಿಕ್ಷಣವಾಗಿದೆ. ಶಿಕ್ಷಣ ಎಂಬುದು ಇಂದು ನಿನ್ನೆಯದಲ್ಲ, ಮಾನವನ ಉಗಮದೊಂದಿಗೇನೇ ಹುಟ್ಟಿಕೊಂಡ ವ್ಯವಸ್ಥೆಯಾಗಿದೆ. ಔಪಚಾರಿಕ ಶಿಕ್ಷಣದ ವಿಧಾನವೇ ವ್ಯವಸ್ಥಿತ ಕ್ರಮಬದ್ಧವಾದ ಜ್ಞಾನದ ಜೋಡಣೆಯಾಗಿದೆ. ವ್ಯಕ್ತಿಯ ಚಟುವಟಿಕೆ, ವರ್ತನೆ, ನಡವಳಿಕೆ ಹಾಗೂ ಅವನು ಪಡೆದಿರುವ ಜ್ಞಾನವನ್ನು ಪ್ರತಿನಿಧಿಸುವುದಲ್ಲದೆ, ಸಮಾಜದಲ್ಲಿ ಅವನ ಸ್ಥಾನಮಾನ ಮುಂತಾದ ಅವನ ಸಂಪೂರ್ಣ ವ್ಯಕ್ತಿತ್ವದ ಪ್ರತೀಕವಾಗುತ್ತದೆ. ಆದ್ದರಿಂದ ವ್ಯಕ್ತಿಯು ಮೌಲ್ಯಯುತವಾದ ಸ್ಥಾನಮಾನ ಹೊಂದಬೇಕಾದರೆ, ನಯ, ವಿನಯ, ಗುರು ಹಿರಿಯರನ್ನು ಗೌರವಿಸುವುದು ಮುಂತಾದ ಸದ್ಗುಣಗಳು ವ್ಯಕ್ತಿಯಲ್ಲಿ ನೆಲೆಸುವಂತೆ ಮಾಡುವುದೇ ಶಿಕ್ಷಣವಾಗಿದೆ. ಶಿಕ್ಷಣವು ಅಸತ್ಯದಿಂದ-ಸತ್ಯದೆಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವುದಾಗಿದೆ.
ರವೀಂದ್ರನಾಥ ಚಕ್ರವರ್ತಿ. ಎಸ್. ಪಿ.ಎಚ್.ಡಿ. ವಿದ್ಯಾರ್ಥಿ, ಸಮಾಜಶಾಸ್ತ್ರ ಮತ್ತು ಸಂಶೋಧನಾ ವಿಭಾಗ, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ-577451 ಡಾ. ಚಂದ್ರಶೇಖರ್ ಪ್ರಾಧ್ಯಾಪಕರು, ಸಮಾಜಶಾಸ್ತ್ರ ಮತ್ತು ಸಂಶೋಧನಾ ವಿಭಾಗ, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ-577451
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|