ಕಾನೂನು ಆಯೋಗದ ಪರಿಶೀಲನೆಗೆ ವಹಿಸಲು ಸುಪ್ರೀಂಕೋರ್ಟ್ ಚಿಂತನ ನವದೆಹಲಿ: ದೇಶದಲ್ಲಿ ಕೆಲಸ ಮಾಡುತ್ತಿರುವ ಅಂದಾಜು 30 ಲಕ್ಷ ಸ್ವಯಂಸೇವಾ ಸಂಘಟನೆಗಳಿಗೆ (ಎನ್‌ಜಿಒ) ಬರುತ್ತಿರುವ ಹಣಕಾಸಿನ ಅನುದಾನದ ಮೇಲೆ ನಿಗಾ ಇಡುವ ಬಗ್ಗೆ ಪರಿಶೀಲನೆ ನಡೆಸುವಂತೆ ಕಾನೂನು ಆಯೋಗವನ್ನು ಕೋರಬಹುದು ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ. ಈ ವಿಚಾರದಲ್ಲಿ ತನಗೆ ಸಹಾಯ ಮಾಡುವಂತೆ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ನೇತೃತ್ವದ ವಿಭಾಗೀಯ ಪೀಠವು, ಹಿರಿಯ ವಕೀಲ ರಾಕೇಶ್ ದ್ವಿವೇದಿ ಅವರನ್ನು ಅಮಿಕಸ್ ಕ್ಯೂರಿ (ನ್ಯಾಯಾಲಯದ ಸಹಾಯಕ) ಆಗಿ ನೇಮಿಸಿದೆ. ‘ಎನ್‌ಜಿಒಗಳನ್ನು ನಿಯಂತ್ರಿಸಲು ಒಂದು ಕಾನೂನು ರೂಪಿಸುವ ಕೆಲಸವನ್ನು ನಾವು ಕಾನೂನು ಆಯೋಗಕ್ಕೆ ವಹಿಸಬಹುದು. ಈ ಸಂಘಟನೆಗಳನ್ನು ಭವಿಷ್ಯದಲ್ಲಾದರೂ ಕಾನೂನು ವ್ಯಾಪ್ತಿಗೆ ಒಳಪಡಿಸಲು ನಮ್ಮಿಂದ ಸಾಧ್ಯವೇ ಎಂಬುದನ್ನು ಪರಿಶೀಲಿಸುತ್ತೇವೆ’ ಎಂದು ಪೀಠ ಹೇಳಿತು. ವಕೀಲ ಎಂ.ಎಲ್. ಶರ್ಮ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆಯನ್ನು ಪೀಠ ನಡೆಸುತ್ತಿದೆ.
ಶೇಕಡ 80ರಷ್ಟು ಎನ್‌ಜಿಒಗಳು ವಿದೇಶಗಳಿಂದ ಬರುವ ಹಣಕಾಸಿನ ಅನುದಾನದಿಂದ ಅಸ್ತಿತ್ವ ಉಳಿಸಿಕೊಂಡಿವೆ. ಕೆಲವು ಎನ್‌ಜಿಒಗಳನ್ನು ರಾಜಕಾರಣಿಗಳು, ನಿವೃತ್ತ ಸರ್ಕಾರಿ ಅಧಿಕಾರಿಗಳು ನಡೆಸುತ್ತಿದ್ದಾರೆ ಎಂದು ಅರ್ಜಿದಾರರು ಹೇಳಿದಾಗ, ‘ಇದೊಂದು ಪ್ರಮುಖ ಸಮಸ್ಯೆ. ಎನ್‌ಜಿಒಗಳು ಪ್ರಪಂಚದ ಎಲ್ಲೆಡೆಯಿಂದ ಹಣ ಪಡೆಯುತ್ತಿವೆ’ ಎಂದು ಪೀಠ ಮೌಖಿಕವಾಗಿ ಹೇಳಿತು. ‘ಯಾರಾದರೂ ಒಂದು ಸಂಸ್ಥೆಯನ್ನು ನೋಂದಾಯಿಸಿದರೆ ಅದು ಎನ್‌ಜಿಒ ಆಗುತ್ತದೆಯೇ? ಇವುಗಳನ್ನು ನಿಯಂತ್ರಿಸಲು ಕೇಂದ್ರದ ಮಟ್ಟದಲ್ಲಿ ಕಾನೂನು ಚಿಂತನೆ ನಡೆದಂತೆ ಕಾಣುತ್ತಿಲ್ಲ. ಒಂದು ವ್ಯವಸ್ಥೆ ರೂಪುಗೊಳ್ಳುವವರೆಗೆ ಏನನ್ನೂ ಮಾಡಲು ಸಾಧ್ಯವಿಲ್ಲ’ ಎಂದೂ ಪೀಠ ಹೇಳಿತು. ದೇಶದಲ್ಲಿರುವ 29,99,623 ಎನ್‌ಜಿಒಗಳ ಪೈಕಿ 2,90,787 ಎನ್‌ಜಿಒಗಳು ಮಾತ್ರ ವಾರ್ಷಿಕ ಲೆಕ್ಕ ನೀಡಿವೆ ಎಂದು ಸಿಬಿಐ ಹೇಳಿದೆ. ಕೆಲವು ರಾಜ್ಯಗಳಲ್ಲಿ ಎನ್‌ಜಿಒಗಳು ತಮ್ಮ ಹಣಕಾಸಿನ ವ್ಯವಹಾರಗಳ ಬಗ್ಗೆ ಪಾರದರ್ಶಕವಾಗಿಲ್ಲ ಎಂದೂ ಸಿಬಿಐ ಹೇಳಿದೆ. ಕೇಂದ್ರಾಡಳಿತ ಪ್ರದೇಶಗಳ ವ್ಯಾಪ್ತಿಯಲ್ಲಿ ಕೆಲಸ ಮಾಡುವ 82,250 ಎನ್‌ಜಿಒಗಳ ಪೈಕಿ 50 ಎನ್‌ಜಿಒಗಳು ಮಾತ್ರ ಹಣಕಾಸಿನ ಲೆಕ್ಕ ನೀಡಿವೆ ಎಂದು ಸಿಬಿಐ ಪೀಠಕ್ಕೆ ತಿಳಿಸಿದೆ. ಕೃಪೆ : ಪ್ರಜಾವಾಣಿ ಗುರುವಾರ, ಸೆಪ್ಟೆಂಬರ್ 15, 2016
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|