ಮೊದಲ ಮಾತು:
ನಮ್ಮ ದೇಶದ ಶೇಕಡಾ 654 ಕೃಷಿಕರು ಸಣ್ಣ ಹಿಡುವಳಿದಾರರು. ಕೃಷಿಯನ್ನು ಲಾಭದಾಯಕ ಮಾಡಿಕೊಳ್ಳಬಲ್ಲ ತಂತ್ರಜ್ಞಾನ, ಹಣಕಾಸಿನ ಶಕ್ತಿ ಇವರಿಲ್ಲಿಲ್ಲವಾದುದರಿಂದ ಇವರು ಬಡವರಾಗಿಯೇ ಉಳಿದಿದ್ದಾರೆ. ಹೆಚ್ಚಿನವರು ತಮ್ಮ ಭೂಮಿಯಲ್ಲಿ ವಾರ್ಷಿಕ ಅಲ್ಪಕಾಲದ ಒಂದು ಬೆಳೆಯನ್ನು ಮಾತ್ರ ಬೆಳೆಯುತ್ತಾರೆ ಇಲ್ಲವೇ ಬೀಳು ಬಿಡುತ್ತಾರೆ ಹಾಗೂ ಸ್ವತಃ ಕೂಲಿಕಾರ್ಮಿಕರಾಗಿಯೇ ಉಳಿದಿದ್ದಾರೆ. ಸಣ್ಣ ಹಿಡುವಳಿದಾರರ ಮತ್ತೊಂದು ಪ್ರಮುಖ ಸಮಸ್ಯೆಯೆಂದರೆ ಕೂಲಿಯಾಳುಗಳ ಕೊರತೆ. ಇವರಿಗೆ ತಮ್ಮ ಭೂಮಿಯಿಂದ ಬರುವ ಅತ್ಯಲ್ಪ ಆದಾಯದಲ್ಲಿ ಕಾರ್ಮಿಕರಿಗೆ ವೇತನ ನೀಡಿ ಕೃಷಿ ಕೆಲಸ ಮಾಡಿಸುವ ತಾಕತ್ತು ಇಲ್ಲ. ಇವರ ಬೆಳೆಯು ನಾಲ್ಕಾರು ತಿಂಗಳ ನಂತರ ಇಳುವರಿ ನೀಡುವ ಬೆಳೆಯಾದುದರಿಂದ ಕೂಲಿಯಾಳುಗಳಿಗೆ ವಾರ ವಾರ ವೇತನ ನೀಡಲು ಇವರಲ್ಲಿ ಹಣವಿಲ್ಲ. ಆದುದರಿಂದ ಹೆಚ್ಚಿನ ಸಣ್ಣ ಹಿಡುವಳಿದಾರರ ಕೃಷಿ ಕೌಟುಂಬಿಕ ಸದಸ್ಯರ ಕೂಲಿಯನ್ನೇ ನೆಚ್ಚಿಕೊಂಡಿರುತ್ತದೆ. ಹೀಗಾಗಿ ಇವರಲ್ಲಿ ಪ್ರಯೋಗಶೀಲತೆ ಕಮ್ಮಿ, ನಿರಂತರ ಆದಾಯ ನೀಡುವ ಕೃಷಿಗಳು ಇಲ್ಲ. ಹೆಚ್ಚಿನ ರೈತರ ಭೂಮಿ ದಾಖಲಾತಿಗಳು ಸಮರ್ಪಕವಿಲ್ಲದ್ದರಿಂದ ಇವರಿಗೆ ಬ್ಯಾಂಕ್ ಸಾಲವೂ ದೊರೆಯುವುದಿಲ್ಲ. ಒಂದು ಸಂಶೋಧನೆಯಂತೆ ನಮ್ಮ ದೇಶದ ಶೇಕಡಾ 27 ರೈತರಿಗೆ ಮಾತ್ರ ಬ್ಯಾಂಕುಗಳಿಂದ ಸಾಲ ದೊರೆಯುತ್ತಿದೆ. ಶೇಕಡಾ 23 ರೈತರಿಗೆ ಲೇವಾದೇವಿಗಾರರಿಂದ ಸಾಲ ದೊರೆಯುತ್ತಿದೆ. ಇನ್ನುಳಿದ 51 ಶೇಕಡಾ ರೈತರು ಯಾವುದೇ ಹಣಕಾಸು ಸಹಾಯದಿಂದ ವಂಚಿತರಾಗಿದ್ದಾರೆ (ಎನ್.ಎಸ್.ಎಸ್.ಓ ಸಮೀಕ್ಷೆ 2003). ಸಾಧನೆ ಮಾಡಬೇಕೆಂಬ ಹಂಬಲವುಳ್ಳ ಕೆಲ ಸಣ್ಣ ರೈತರು ಕೈಕಚ್ಚಿಕೊಳ್ಳುತ್ತಾರೆ. ಕಳೆದ ಒಂದು ದಶಕದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ಎರಡು ಲಕ್ಷ ಮೀರಿದೆ. ಸ್ವಾತಂತ್ರ್ಯಾನಂತರದಲ್ಲಿ ನಡೆದ ಎಲ್ಲ ಯುದ್ಧಗಳಲ್ಲಿ ಒಟ್ಟಾಗಿ ವೀರ ಮರಣ ಹೊಂದಿದ ಸೈನಿಕರಿಗಿಂತ ಈ ಸಂಖ್ಯೆ ಜಾಸ್ತಿ!
0 Comments
ಭಾರತ ಹಳ್ಳಿಗಳ ದೇಶ. ವ್ಯವಸಾಯ ಪ್ರಧಾನವಾಗಿರುವ ಈ ದೇಶದಲ್ಲಿ ಅನಕ್ಷರತೆಯ ಪಿಡುಗು, ಕಂದಾಚಾರ ಮತ್ತು ಪರಂಪರೆಯಿಂದ ಬಂದ ಕೃಷಿ ಪದ್ಧತಿಗಳು ಒಂದು ಕಡೆಯಿಂದ ಕಾಡುತ್ತಿದ್ದರೆ, ಸಾಮಾನ್ಯ ಸೌಲಭ್ಯಗಳನ್ನೂ ಪಡೆದುಕೊಳ್ಳಲಾಗದ ಪರಿಸ್ಥಿತಿ. ಕೃಷಿ ಪದ್ಧತಿಯನ್ನು ಅಭಿವೃದ್ಧಿ ಪಡಿಸಲು ಸೌಲಭ್ಯಗಳು ಇದೆಯೇ, ಇದ್ದರೆ ಯಾರನ್ನು ಕೇಳಬೇಕು? ಯಾರು ಸಹಾಯ ಮಾಡುವವರು? ಎಂದೆಲ್ಲಾ ಪ್ರಶ್ನೆಗಳು ಸಾಮಾನ್ಯವಾಗಿ ಉದ್ಭವಿಸುತ್ತವೆ. ಆದರೆ, ಇದಕ್ಕೆ ಸಮಾಧಾನವಿದೆ ಎಂದು ಹೇಳುವವರಿದ್ದರೂ ಅಂಥಹವರನ್ನು ತಪ್ಪಿಸಿ ಈ ಸಮಾಧಾನಗಳಿಗೂ ಬೆಲೆಯನ್ನು ಕಟ್ಟಿ ಬೆಲೆಗೆ ತಕ್ಕಂತೆ, ಉತ್ತರಗಳನ್ನು ಮರೀಚಿಕೆಯಂತೆ ತೋರಿಸಿ ತಮಗೆ ಬೇಕಾದಂತೆ ಈ ಮುಗ್ಧ ಜನರನ್ನು ಉಪಯೋಗಿಸಿಕೊಳ್ಳುವ ಮಧ್ಯವರ್ತಿಗಳು ಮೊದಲಿನಿಂದಲೂ ಇದ್ದಾರೆ.
ಬದುಕು, ಎಂಬ ಪದ ಕೇಳಲು ಎಷ್ಟು ಚೆಂದವೋ ಆ ಬದುಕೆಂಬ ಬಂಡಿಯನ್ನು ನಡೆಸಲು ಅಷ್ಟೇ ಕಷ್ಟದಾಯಕ ಎಂಬುದು ನಮಗೆ ಬದುಕನ್ನು ಬಯಸಿ ಬೆಂಗಳೂರಿಗೆ ವಲಸೆ ಬರುವ ಬಡಕುಟುಂಬಗಳನ್ನು ನೋಡಿದಾಗ ಅರಿವಾಗುತ್ತದೆ, ಹೀಗೆ ಬದುಕನ್ನು ಅರಸಿ ಬೆಂಗಳೂರಿಗೆ ಬರುವ ಕುಟುಂಬಗಳು ಭಾರತದ ನಾನಾ ಪ್ರದೇಶಗಳಿಂದ ಜೀವನವೆಂಬ ಬದುಕಿನ ಜಟಕಾ ಬಂಟಿಯನ್ನು ನಡಸಲು ಹಲವಾರು ಕೆಲಸಗಳನ್ನು ಹುಡುಕಿಕೊಂಡು ಹೊರ ರಾಜ್ಯಗಳಾದ ಆಂಧ್ರ, ತಮಿಳುನಾಡು, ಒರಿಸ್ಸಾ, ಮಹಾರಾಷ್ಟ್ರ, ಕಲ್ಕತ್ತಾ ರಾಜ್ಯಗಳಿಂದ ಬಂದರೆ, ನಮ್ಮದೇ ರಾಜ್ಯದ ಜಿಲ್ಲೆಗಳಾದ ಗುಲ್ಬರ್ಗ, ರಾಯಚೂರು, ಕೊಪ್ಪಳ, ಬಳ್ಳಾರಿ, ಬಿಜಾಪುರ, ಬೀದರ್, ಬಾಗಲಕೋಟೆ ಮುಂತಾದ ಭಾಗಗಳಿಂದ ಬೆಂಗಳೂರಿಗೆ ಬಂದು ಯಾವುದೋ ಒಂದು ಕೊಳಚೆ ಪ್ರದೇಶ ಅಥವಾ ಯಾವುದೋ ಒಂದು ಖಾಲಿ ಜಾಗಗಳಲ್ಲಿ ಮಾಲೀಕರಿಗೆ 100 ರೂಗಳಿಂದ 200 ರೂಗಳವರೆಗೆ ಮಾಸಿಕ ಬಾಡಿಗೆಯನ್ನು ನೀಡಿ ತಮ್ಮ ಗುಡಾರಗಳನ್ನು ನಿರ್ಮಿಸಿಕೊಂಡು ಜೀವನವನ್ನು ಸಾಗಿಸುವ ಜನರೇ ಹೆಚ್ಚು. ಬೆಂಗಳೂರೆಂಬ ಮಹಾ ನಗರದಲ್ಲಿ ಅವರು ಸುಸಜ್ಜಿತ ಮನೆಗಳಲ್ಲಿ ವಾಸಿಸುವುದು ಇವರ ಪಾಲಿಗೆ ಕೇವಲ ಕನಸಷ್ಟೆ , ಕೆಲವರಿಗೆ ತಮ್ಮ ಊರುಗಳಲ್ಲಿ ತಮ್ಮದೇ ಆದ ಸ್ವಂತ ಮನೆಗಳಿದ್ದರೂ, ವ್ಯವಸಾಯದ ಜಮೀನುಗಳಿದ್ದರೂ ವ್ಯವಸಾಯಕ್ಕೆ ಬೇಕಾದ ಸೌಲಭ್ಯಗಳ ಕೊರತೆಯಿಂದಲೋ ಅಥವಾ ಅದರಿಂದ ಸಿಗುವ ಮಿತ ಆದಾಯದಿಂದಲೋ ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲಾಗದೆ ಅದಕ್ಕಿಂತಲೂ ಉತ್ತಮವಾದ ಜೀವನವನ್ನು ನಡೆಸಬಹುದೆಂಬ ಇಚ್ಛೆಯಿಂದ ಬರುವವರು ಒಂದೆಡೆಯಾದರೆ, ಜೀವನ ನಡೆಸಲು ಬೇಕಾದ ಮೂಲ ಅವಶ್ಯಕತೆಗಳ ಕೊರತೆ, ಬಡತನವೆಂಬ ಭೂತದ ಬೆಂಕಿಯ ಬೇಗೆಯನ್ನು ತಾಳಲಾರದೆ ತಮ್ಮ ಹೊಟ್ಟೆಯನ್ನು ತುಂಬಿಕೊಳ್ಳುವ ಉದ್ದೇಶದಿಂದ ವಲಸೆ ಬರುವ ಜನರೇ ಹೆಚ್ಚು. ಹೀಗೆ ಬಂದ ಜನ ಬೆಂಗಳೂರೆಂಬ ಕಾಂಕ್ರೀಟ್ ನಗರವನ್ನು ಮತ್ತಷ್ಟು ಕಾಂಕ್ರೀಟ್‍ಮಯಗೊಳಿಸುವ ಕೆಲಸದಲ್ಲಿ ತೊಡಗುತ್ತಾರೆ. ಅಂದರೆ ಕಟ್ಟಡ ಕಾಮಗಾರಿಯ ಕೆಲಸಗಳಲ್ಲಿ ತೊಡಗುತ್ತಾರೆ, ಮತ್ತೆ ಕೆಲವರು ಪ್ಲಾಸ್ಟಿಕ್ ಮುಂತಾದ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ಮಾರಾಟ ಮಾಡುವ ಕೆಲಸಗಳಲ್ಲಿ ತೊಡಗುತ್ತಾರೆ.
ಮಕ್ಕಳು ಸಮುದಾಯದ 'ಆಸ್ತಿ' ದೇಶದ ಸಂಪತ್ತು ಮುಂತಾದ ಕಲ್ಪನೆಗಳು ಇತ್ತೀಚೆಗೆ ನಮ್ಮ ಸಮಾಜದಲ್ಲಿ ಮೂಡುತ್ತಿರುವುದು ಮಕ್ಕಳ ಅಭಿವೃದ್ಧಿ / ರಕ್ಷಣೆ ವಿಚಾರದಲ್ಲಿ ಧನಾತ್ಮಕ ಬೆಳವಣಿಗೆ ಆಗಿದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಮುದಾಯದ ಪ್ರತಿಯೊಬ್ಬರೂ ಭಾಗಿಯಾಗಬೇಕಿರುವುದು ಇಂದಿನ ದಿನಗಳಲ್ಲಿ ಅನಿವಾರ್ಯವಾಗಿದೆ. ಮಕ್ಕಳ ಹಕ್ಕುಗಳನ್ನು ಪ್ರಚಾರ ಮಾಡಲು ಮಕ್ಕಳ ಸಮಸ್ಯೆಗಳಿಗೆ ಪ್ರತಿಕ್ರಿಯಿಸಲು ವಕೀಲ ನಡೆಸಲು ಸಮಾನ ಚಿಂತಕರು ಒಟ್ಟಾಗಿ ಆಂದೋಲನ, ಸಮೀಕ್ಷೆ, ಸಂಶೋಧನೆ, ವಿಚಾರ ಸಂಕಿರಣ ನಡೆಸಲು ವೇದಿಕೆಗಳನ್ನು ಹುಟ್ಟುಹಾಕಿ, ಪರಸ್ಪರ ಕೈ ಜೋಡಿಸಿ 'ಜಾಲ' ನಿರ್ಮಿಸಿ ಮಕ್ಕಳ ಹಕ್ಕುಗಳನ್ನು ಎತ್ತಿ ಹಿಡಿಯಬೇಕಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ.
ಕೈ ಕಾಲು ಸಣ್ಣ, ಹೊಟ್ಟೆ ಡುಮ್ಮ ಇರುವ ಮಕ್ಕಳನ್ನು, ಸಂಪೂರ್ಣ ದೇಹ ಊದಿಸಿಕೊಂಡು, ಚರ್ಮ ಬಿರುಕು ಬಿಟ್ಟಂತೆ ಕಾಣುವ ಮಕ್ಕಳನ್ನು, ಮೂಳೆಗೆ ಸುಕ್ಕುಗಟ್ಟಿದ ಚರ್ಮವನ್ನು ಹೊದ್ದುಕೊಂಡು ತೊಗಲಿನ ಬೊಂಬೆಗಳಂತೆ ಇರುವ ಮಕ್ಕಳನ್ನು, ಕಣ್ಣಲ್ಲೇ ಜೀವ ಹಿಡಿದುಕೊಂಡು ಕೋತಿ ಮರಿಯಂತೆ ತಾಯಿಯನ್ನು ಬಿಗಿದಪ್ಪಿಕೊಂಡಿರುವ ಮಕ್ಕಳನ್ನು, ಗೂನು ಬೆನ್ನು, ದೃಷ್ಟಿ ಹೀನ ಹಾಗೂ ವಿವಿಧ ಅಂಗವೈಕಲ್ಯತೆಗೆ ಒಳಗಾದ ಮಕ್ಕಳನ್ನು ನೋಡುತ್ತಾ ಬಾಲ್ಯ ಕಳೆದವರು ನಾವು, ಅನೇಕರು. ಆದರೆ, ಈ ಮಕ್ಕಳ ಕರುಣಾಜನಕ ಕಥೆಯ ಹಿಂದೆ ನಮ್ಮ ಸಮಾಜದಲ್ಲಿ ಹಾಸು ಹೊಕ್ಕಾಗಿರುವ ಜಾತಿಪದ್ಧತಿ, ಆರ್ಥಿಕ ಅಸಮಾನತೆ, ಹಸಿವಿನ ಆಕ್ರಂದನ ಮತ್ತು ಸರ್ಕಾರದ ಯೋಜನೆಗಳ ವೈಫಲ್ಯತೆಯೇ ಅಡಗಿ ಕುಳಿತಿವೆ ಎಂದು ಆಗ ತೋಚಿರಲಿಲ್ಲ.
'ಭಾರತದ ಮಕ್ಕಳ ಅಪೌಷ್ಟಿಕತೆ ರಾಷ್ಟ್ರೀಯ ಅಪಮಾನ' ಹೀಗೆ ಉದ್ಗರಿಸಿದವರು ಯಾರೋ ಸಾಮಾನ್ಯರಲ್ಲ. ಭಾರತದ ಪ್ರಧಾನ ಮಂತ್ರಿಗಳಾದ ಮಾನ್ಯ ಮನಮೋಹನ್ ಸಿಂಗ್‍ರವರು (2012). ಈ ರೀತಿಯ ವಿಷಾದಕರ ಹೇಳಿಕೆಗೆ ಕಾರಣವಾದದ್ದು ನಂದಿ ಫೌಂಡೇಶನ್ ನಡೆಸಿದ ಹಸಿವು ಮತ್ತು ಅಪೌಷ್ಟಿಕತೆ ಕುರಿತಾದ ಅಧ್ಯಯನದಿಂದ ಹೊರಹೊಮ್ಮಿದ ಅಂಕಿಅಂಶಗಳು. ಇಲ್ಲಿ ನಿಮಗೊಂದು ಪ್ರಶ್ನೆ ಉದ್ಭವಿಸಬಹುದು, ಹಾಗಾದರೆ ಇಷ್ಟು ಕಾಲ ಮಕ್ಕಳ ಅಪೌಷ್ಟಿಕತೆ ಕುರಿತು ಯಾರಿಗೂ ಅರಿವಿರಲಿಲ್ಲವೇ? ಕೆಲವರಿಗೆ ಇದ್ದಿರಬಹುದು, ಆದರೆ ಯಾವುದೇ ಸಮಸ್ಯೆಯ ವ್ಯಾಪ್ತಿಯ ಬಗ್ಗೆ ನಿಖರವಾಗಿ ತಿಳಿಯುವುದು ಒಂದು ನಿರ್ದಿಷ್ಟವೂ ಮತ್ತು ಕ್ರಮಬದ್ಧವೂ ಆದ ವಿಧಾನದಲ್ಲಿ ಅಂಕಿ ಅಂಶಗಳನ್ನು ಸಂಗ್ರಹಿಸಿ ವಿಶ್ಲೇಷಿಸಿದಾಗ ಮಾತ್ರ.
ಎಚ್.ಐ.ವಿ. ಸೋಂಕಿರುವ ಕುರಿತು 2001 ರಿಂದ 2003 ರವರೆಗೆ ನಡೆಸಿದ ವಿವಿಧ ಸಮೀಕ್ಷೆಗಳ ಪ್ರಕಾರ ಕರ್ನಾಟಕದಲ್ಲಿ ಶೇ 1% ರಷ್ಟು ಸೋಕಿರುವ ಮಕ್ಕಳಿದ್ದಾರೆ. ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಎಚ್.ಐ.ವಿ. ಸೋಂಕಿರುವುದು ಕಂಡು ಬಂದಿರುತ್ತದೆ. ಅದರಲ್ಲೂ ಕೊಪ್ಪಳ, ಬೆಳಗಾಂ, ವಿಜಾಪೂರ ಹಾಗೂ ಬಾಗಲಕೋಟ ಜಿಲ್ಲೆಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ, ಅಂದರೆ ಶೇ 2 ರಿಂದ 3 ರಷ್ಟು ಇರುವುದು ವರದಿಗಳಲ್ಲಿ ಕಂಡುಬರುತ್ತದೆ. ಇತ್ತೀಚೆಗೆ ಐಚಾಪ್ ಹಾಗೂ ಕೆ.ಎಚ್.ಪಿ.ಟಿ (Karnataka Health Promotion Trust) ಯೋಜನೆಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಎಚ್.ಐ.ವಿ. ಸೋಂಕಿರುವ ಮಕ್ಕಳ ಪೋಷಣೆ ಮತ್ತು ರಕ್ಷಣೆಗಾಗಿ ಪ್ರಾಯೋಜಕತ್ವ ಹಾಗೂ ವಿಶೇಷ ಪಾಲನಾ ಯೋಜನೆಗಳು ಅಲ್ಲಲ್ಲಿ ಅನುಷ್ಠಾನಗೊಳ್ಳುತ್ತಿದೆ. ಹೀಗಾಗಿ, ಎಚ್.ಐ.ವಿ. ಸೋಂಕಿರುವ ಅಥವಾ ಬಾಧಿತರಾಗಿರುವ ಮಕ್ಕಳ ಪುನರ್ವಸತಿಯತ್ತ ಹೊಸ ಭರವಸೆ ಮೂಡಿದೆ. ಎಚ್.ಐ.ವಿ. ಹರಡಲು ವಲಸೆ, ಅಸುರಕ್ಷಿತ ಲೈಂಗಿಕ ಸಂಬಂಧಗಳು, ಜನರಲ್ಲಿ ಎಚ್.ಐ.ವಿ. ಅರಿವಿನ ಕೊರತೆ, ಅವ್ಯಾಹತವಾಗಿ ನಡೆಯುತ್ತಿರುವ ಬಾಲ್ಯ ವಿವಾಹಗಳು ಪ್ರಮುಖ ಕಾರಣಗಳಾಗಿವೆ. 2007ರಲ್ಲಿ ಕೆ.ಎಚ್.ಪಿ.ಟಿ. ನಡೆಸಿದ ಸಮೀಕ್ಷೆಯ ಪ್ರಕಾರ ಬಾಗಲಕೋಟ ಜಿಲ್ಲೆಯೊಂದರಲ್ಲೇ 2500 ಹಾಗೂ ವಿಜಾಪೂರ ಜಿಲ್ಲೆಯಲ್ಲಿ 1300 ಎಚ್.ಐ.ವಿ. ಸೋಂಕಿತರು ಹಾಗೂ ಬಾಧಿತ ಮಕ್ಕಳು ಇದ್ದಾರೆ ಎಂದು ಹೇಳಲಾಗುತ್ತಿದೆ.
'ಸುಮಂಗಲಿ ಸೇವಾಶ್ರಮ' ಮತ್ತು 'ಸುಶೀಲಮ್ಮ' ಇವು ಎರಡು ಶಬ್ದಗಳಲ್ಲ, ಒಂದೇ ಧ್ವನಿಯ ಎರಡು ಕಂಪನಗಳು. ಒಂದೇ ಸಂಸ್ಥೆ, ಸ್ಥಾವರ; ಇನ್ನೊಂದು ವ್ಯಕ್ತಿ, ಜಂಗಮ. ಮೊದಲಿನದ್ದು ಸ್ಥಾವರವಾದರೂ ಜಡವಲ್ಲ; ಎರಡನೆಯದು ಚಲನಶೀಲದ್ದಾದರೂ ಅಸ್ಥಿರವಲ್ಲ. ಸುಮಂಗಲಿ ಸೇವಾಶ್ರಮದಲ್ಲಿ ಸುಶೀಲಮ್ಮ ಕೆಲವು ಸಮಯಗಳಲ್ಲಿ ಇರದಿದ್ದಾಗಲೂ ಅಲ್ಲಿನ ವಾಸಿಗಳಿಗೆ ಕಾರ್ಯಕರ್ತರಿಗೆ ಮತ್ತು ಸಂದರ್ಶಕರಿಗೆ ಸುಶೀಲಮ್ಮ ಅಲ್ಲಿ ಓಡಿಯಾಡುತ್ತಿದ್ದಾರೆ, ತಮ್ಮೊಡನೆ ಸಂವಾದಿಸುತ್ತಿದ್ದಾರೆ ಎಂಬ ಭಾವನೆ ಬರುವ ಹಾಗೆ ಆ ಸಂಸ್ಥೆಯು ಕ್ರಿಯಾಶೀಲವಾಗಿರುತ್ತದೆ; ಸುಶೀಲಮ್ಮನವರು ಬೆಂಗಳೂರಿನಲ್ಲೇ ಎಲ್ಲಾದರೂ ಹೋಗುತ್ತಿರುವಾಗ, ಯಾರೊಡನೆಯಾದರೂ ಸಂಭಾಷಿಸುತ್ತಿರುವಾಗ ಅಥವಾ ಬೆಂಗಳೂರಿನ ಹೊರಗಡೆ ಪ್ರಯಾಣದಲ್ಲಿದ್ದಾಗ, ಕೆಲಸದಲ್ಲಿ ನಿರತರಾಗಿದ್ದಾಗ ಅವರು ವ್ಯಕ್ತಿಯಾಗಿ ಕಾಣಿಸದೆ ಅವರು ಹುಟ್ಟಿಹಾಕಿ ಬೆಳೆಸುತ್ತಲಿರುವ ಸಂಸ್ಥೆಯೇ ಜಂಗಮ ರೂಪುದಳೆದಿದೆ ಅನ್ನಿಸುತ್ತದೆ. ಸಂಸ್ಥೆ ಮತ್ತು ಅವರು ಸದ್ದು ಮಾಡದ ಕ್ರಾಂತಿ ಸಂಗತಿಗಳು. ನಮ್ಮ ಕಣ್ಣೆದುರಿಗೆ ಸೇವಾಶ್ರಮ ಬೆಳೆಯತ್ತಿರುವ, ತನ್ನ ಚಟುವಟಿಕೆಗಳನ್ನು ವಿಸ್ತಾರಗೊಳಿಸುತ್ತಲಿರುವ ಪರಿಯನ್ನು ನೋಡಿದರೆ ಸುಶೀಲಮ್ಮನವರ ಕರ್ತೃತ್ವಶಕ್ತಿ ಹೇಗೆ ಕುಡಿಯೊಡೆಯುತ್ತಲಿದೆ, ಅರಳುತ್ತಲಿದೆ ಎಂಬುದು ಸುಸ್ಪಷ್ಟವಾಗುತ್ತದೆ. ಸಮಾಜದಲ್ಲಿ ಆಗುತ್ತಲಿರುವ ವೈವಿಧ್ಯಮಯ ಚಟುವಟಿಕೆಗಳಲ್ಲಿ, ಅದರಲ್ಲೂ ಅನ್ಯಾಯ, ದೌರ್ಜನ್ಯ, ಶೋಷಣೆ, ಮೋಸ, ವಂಚನೆ, ಭ್ರಷ್ಟಾಚಾರ, ಇಂತಹ ಅಸ್ಪಷ್ಟ ಸಂಗತಿಗಳ ನಿವಾರಣೆಗೆ ಅವರು ಹಿಂಜರಿಯದೆ ಮುಂದಾಗುತ್ತಿರುವುದನ್ನು ಗಮನಿಸಿದರೆ ಅವರ ಕಿರುಗಾತ್ರದ, ಸಣಕಲು ದೇಹದಲ್ಲಿ ಅದೆಂತಹ ಚೇತನ ತುಂಬಿ ತುಳುಕುತ್ತಿರಬೇಕು ಎಂಬ ಸೋಜಿಗವಾಗುತ್ತದೆ.
One man demolition army ಇಂಗ್ಲೆಂಡ್ ಕ್ರಿಕೆಟ್ ಅಭಿಮಾನಿಗಳ Barmy Army, ಅದಕ್ಕೆ ಪ್ರತಿಯಾಗಿ ಬ್ರಿಟನ್‍ನಲ್ಲಿ ನೆಲೆಸಿರುವ ಭಾರತ ಸಂಜಾತರು ಆರಂಭಿಸಿದ - Bhrath Army ಗಳನ್ನು ಕೇಳಿದ್ದೇವೆ, ಆದರೆ ಇದ್ಯಾವುದೀ ಹೊಸ ಆರ್ಮಿ ಎನ್ನುತ್ತೀರಾ? ಹಲವಾರು ರಾಜಕೀಯ ವಿಪ್ಲವಗಳನ್ನು ಕಂಡ 1996ರ ದಶಕಕ್ಕೆ ಸಾಕ್ಷಿಭೂತರಾದ ಯಾರೊಬ್ಬರನ್ನೂ ಕೇಳಿದರೂ ಆ ವ್ಯಕ್ತಿ ಯಾರು ಎಂದು ತಟ್ಟನೆ ಉತ್ತರಿಸಿ ಬಿಡುತ್ತಾರೆ. ಖಂಡಿತ ಅವರನ್ನು ಪರಿಚಯ ಮಾಡಿಕೊಡಬೇಕಾದ ಅವಶ್ಯಕತೆಯೂ ಇಲ್ಲ.
ಹೆಸರಿಗೆ ದ್ವೀಪರಾಷ್ಟ್ರ. ಆದರೆ ಬುದ್ಧನ ಹೆಸರಿನಲ್ಲಿ ನಿಜಕ್ಕೂ ಒಂದು ಬೃಹತ್ ರಾಷ್ಟ್ರ. ಸರಳ ಜೀವನ, ಪ್ರಕೃತಿ ಪ್ರೀತಿ, ಕೃಷಿಯ ಅಕ್ಕರೆ, ಶಿಕ್ಷಣಕ್ಕೆ ಆದ್ಯತೆ, ಎಲ್ಲರಿಗೂ ಒಂದೇ ಹಕ್ಕು. ಇವೆಲ್ಲಾ ಸಂಗಮಕ್ಕೆ ಉತ್ತರ ಶೀಲಂಕಾ. ಶೀಲಂಕಾ ಲಂಕಾಧಿಪತಿ ರಾವಣನ ಲಂಕೆ ಎಂಬ ಕಥೆ ಇದೆ. ಆದರೆ ಅದು ಬುದ್ಧ ಹುಣ್ಣಿಮೆಯ ನಾಡು. ಸೌಹಾರ್ದ, ಸಮಾನತೆ, ಭ್ರಾತೃತ್ವ, ಎಲ್ಲಕ್ಕೂ ಇಲ್ಲಿ ಚಿನ್ನದ ಬೆಲೆ.
ಮನುಷ್ಯನ ಜನ್ಮದಲ್ಲಿ ಎರಡು ಪ್ರಕಾರಗಳಿವೆ, ಒಂದು ಪುರುಷ, ಇನ್ನೊಂದು ಮಹಿಳೆ. ಇವೆಡರಲ್ಲಿ ಶಾರೀರಿಕವಾಗಿ ಭಿನ್ನವೇ ಹೊರತು ಬೌದ್ಧಿಕವಾಗಿ ಅಲ್ಲ. ಅದು ಸಮವಾಗಿಯೇ ಇದೆ. ಆಕೆ ಜನ್ಮ ಕೊಟ್ಟ ಮಾತೆ, ಸೋದರಿ, ಮಡದಿಯಾಗಿ ಜೀವನದ ನೋವು-ನಲಿವುಗಳಲ್ಲಿ ಸಮಭಾಗಿಯಾಗಿ, ಪತಿಗೆ ಧೈರ್ಯ ಆತ್ಮವಿಶ್ವಾಸ ತುಂಬಿ ನಿಲ್ಲುವ ಬಂಧುವಾಗಿ, ತಪ್ಪಿದಲ್ಲಿ ತಿದ್ದುವ ಮಾರ್ಗದರ್ಶಿಯಾಗಿ, ಮನೆಬೆಳೆಗುವ ಸೊಸೆಯಾಗಿ-ಹೀಗೆ ಪುರುಷ ಜೀವನದ ಅವಿಭಾಜ್ಯ ಅಂಗವಾಗಿ ನಿಲ್ಲುವ ಹಾಗೂ ಸಮಾಜ ರಾಷ್ಟ್ರಗಳ ನಿರ್ಮಾಣದಲ್ಲಿ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಾಳೆ.
ಮನೋವಿಜ್ಞಾನ ಮಾನವನಷ್ಟೇ ಹಳೆಯದಾದರೂ ಅದು ಒಂದು ಸ್ವತಂತ್ರ ವೈಜ್ಞಾನಿಕ ಪ್ರಕಾರವಾಗಿ ಅಸ್ಥಿತ್ವಕ್ಕೆ ಬಂದದ್ದು ಇತ್ತೀಚೆಗೆ, ಸುಮಾರು 125 ವರ್ಷಗಳ ಹಿಂದೆ. ಪುರಾತನ ಗ್ರೀಕ್ ದಾರ್ಶನಿಕರು ಮನಸ್ಸನ್ನು ಕುರಿತು ಹಲವಾರು ವ್ಯಾಖ್ಯಾನಗಳನ್ನು ಮಾಡಿದ್ದರು. ಅವರು ಕೆಲವು ಮೂಲಭೂತ ಪ್ರಶ್ನೆಗಳನ್ನು ಎತ್ತಿದ್ದರು. ಉದಾಹರಣೆಗೆ, ನಾನಾರು? ಎಲ್ಲಿಂದ ಬಂದೆ? ಎಲ್ಲಿಗೆ ಹೋಗುತ್ತಿದ್ದೇನೆ? ಇಲ್ಲೇನು ಮಾಡುತ್ತಿದ್ದೇನೆ? ಏಕೆ ಮಾಡುತ್ತಿದ್ದೇನೆ? ಇಂತಹ ದಾರ್ಶನಿಕ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿದ್ದರು. ಈ ಪ್ರಶ್ನೆಗಳಿಗೆ ಇಂದು ಕೂಡಾ ಸಮರ್ಪಕವಾಗಿ ಉತ್ತರ ಹೇಳುವುದು ಸಾಧ್ಯವಾಗಿಲ್ಲ; ಅದು ಬೇರೆ ಮಾತು. ಇಂದು ಮನೋವಿಜ್ಞಾನ ವಿಫುಲವಾಗಿ ಬೆಳೆದಿದೆ. ಅಮೆರಿಕಾದಂತಹ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಅದು ಬಹಳ ಪ್ರಗತಿ ಸಾಧಿಸಿದೆ. ಒಂದು ಅಂದಾಜಿನ ಪ್ರಕಾರ ಇಂದು ಜಗತ್ತಿನಲ್ಲಿ ಸುಮಾರು ಆರು ಲಕ್ಷ ಮನೋವಿಜ್ಞಾನಿಗಳಿದ್ದಾರೆ. ಅವರಲ್ಲಿ ನಾಲ್ಕು ಲಕ್ಷ ಅಮೆರಿಕದಲ್ಲಿದ್ದಾರೆ; ಉಳಿದವರು ವಿಶ್ವದ ಇತರೆಡೆಗಳಲ್ಲಿ ಹಂಚಿ ಹೋಗಿದ್ದಾರೆ. ಭಾರತದಲ್ಲೂ ಸಾವಿರಾರು ಮಂದಿ ಅಧ್ಯಾಪನ ಮತ್ತು ಸಂಶೋಧನೆಗಳಲ್ಲಿ ನಿರತರಾಗಿದ್ದಾರೆ; ಮಾನಸಿಕ ಚಿಕಿತ್ಸೆ, ಆಪ್ತ ಸಲಹೆ ಮುಂತಾದ ಪರಿಣತ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
2014ರಲ್ಲಿ ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆ ಎಲ್ಲರನ್ನೂ ಅಚ್ಚರಿಗೊಳಿಸಿತು. ಇನ್ನೂ 17 ವರ್ಷದ ಮಲಾಲಾ ಯೂಸುಫ್‍ಗೆ ಜಗತ್ತಿನ ಅತ್ಯಂತ ಉನ್ನತ ಪ್ರಶಸ್ತಿ. ಆಕೆಗೆ ಪ್ರಶಸ್ತಿ ಕೊಟ್ಟದ್ದು ಒಂದು ವಿಶಿಷ್ಟ ಕಾರಣಕ್ಕೆ. ಹೆಣ್ಣು ಮಕ್ಕಳ ಶಿಕ್ಷಣವನ್ನು ತಡೆಹಿಡಿಯುವುದರ ವಿರುದ್ಧ ಹೋರಾಡಿ ಅವರ ಶಿಕ್ಷಣದ ಹಕ್ಕನ್ನು ಪ್ರತಿಪಾದಿಸಿ ಅವರ ಏಳಿಗೆಗೆ ಶ್ರಮಿಸುತ್ತಿರುವುದಕ್ಕಾಗಿ.
ಕಳೆದ ಎರಡು ದಶಕಗಳಲ್ಲಿ ಭಾರತದ ಆರ್ಥಿಕತೆಯಲ್ಲಿ ಜಾಗತೀಕರಣ, ಮುಕ್ತ ಆರ್ಥಿಕ ನೀತಿ, ವಿದೇಶಿ ಬಂಡವಾಳದ ಹರಿವು, ಇತ್ತೀಚಿನ ಸರಕು ಮತ್ತು ಸೇವಾ ತೆರಿಗೆ, ನೋಟು ಅಮಾನ್ಯೀಕರಣ ಇನ್ನು ಹಲವಾರು ಬದಲಾವಣೆಗಳಿಂದಾಗಿ ಸಾಕಷ್ಟು ಬದಲಾವಣೆಗಳನ್ನು ಕಂಡಿದ್ದೇವೆ. ಅಲ್ಲದೆ ಕಾರ್ಮಿಕ ಕಾನೂನುಗಳಲ್ಲಿ ಕೆಲವೊಂದು ಮಹತ್ತರ ಬದಲಾವಣೆಗಳನ್ನು ತರಲಾಗಿದೆ.
ಮಾನಸಿಕ ಆರೋಗ್ಯ : ಪರಿಕಲ್ಪನೆ, ಮಾನಸಿಕ ಅಸ್ವಸ್ಥತೆಗಳು: ಗುರುತಿಸುವಿಕೆ, ಚಿಕಿತ್ಸಾ ವಿಧಾನಗಳು ಮತ್ತು ಮನೋವೈದ್ಯ4/14/2018 ಪ್ರಸ್ತಾವನೆ:
ಮಾನಸಿಕ ರೋಗಕ್ಕೆ ಚಿಕಿತ್ಸೆ ಉಂಟು ಎನ್ನುವ ಈ ಲೇಖನದಲ್ಲಿ ಮಾನಸಿಕ ಆರೋಗ್ಯದ ಪರಿಕಲ್ಪನೆ, ಮಾನಸಿಕ ಆರೋಗ್ಯದ ಮುಖ್ಯ ಲಕ್ಷಣಗಳು, ಮಾನಸಿಕ ಅಸ್ವಸ್ಥತೆ, ಮಾನಸಿಕ ಕಾಯಿಲೆಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳ ಬಗ್ಗೆ ಗಮನಹರಿಸಲಾಗಿದೆ. ಹಾಗೂ ಮಾನಸಿಕ ಕಾಯಿಲೆಗೆ ಕಾರಣಗಳು, ಮಾನಸಿಕ ಕಾಯಿಲೆಗಳ ಪ್ರಕಾರಗಳ ಬಗ್ಗೆ ವಿವರಿಸಲಾಗಿದೆ. ಪ್ರಸ್ತುತ ಲಭ್ಯವಿರುವ ಚಿಕಿತ್ಸಾ ಪದ್ಧತಿಗಳು, ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳ ಮತ್ತು ಅವರ ಸಂಬಂಧಿಕರ ಜವಾಬ್ದಾರಿಗಳ ಬಗ್ಗೆ ಒತ್ತುಕೊಡಲಾಗಿದೆ. ಮನೋವೈದ್ಯಕೀಯ ಕ್ಷೇತ್ರದಲ್ಲಿ ಮನೋವೈದ್ಯರು, ಚಿಕಿತ್ಸಕ ಮನಶಾಸ್ತ್ರಜ್ಞರು, ಮನೋವೈದ್ಯಕೀಯ ಸಮಾಜಕಾರ್ಯಕರ್ತರು, ಮನೋವೈದ್ಯಕೀಯ ಶೂಶ್ರುಷಕ ಸಿಬ್ಬಂದಿಗಳ ಮತ್ತು ಇತರ ಮನೋವೈದ್ಯಕೀಯ ತಂಡದ ಪಾತ್ರದ ಬಗ್ಗೆ ವಿವರಿಸಲಾಗಿದೆ. ಮನೋರೋಗಿಗಳ ಸಾಮಾಜಿಕ ಸಮಸ್ಯೆಗಳನ್ನು ಗುರುತಿಸುವಿಕೆ, ಮನೋರೋಗಿಯನ್ನು ಸಮಾಜದ ಮುಖ್ಯವಾಹಿನಿಯಲ್ಲಿ ತರುವಲ್ಲಿ ಮನೋವೈದ್ಯಕೀಯ ಸಮಾಜಕಾರ್ಯಕರ್ತರ ಪಾತ್ರ ಹಾಗೂ ಸವಾಲುಗಳು ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ. ಸಮಾಜಕಾರ್ಯದ ವಿದ್ಯಾರ್ಥಿಗಳನ್ನು ಕಂಡಾಗ, ಅವರು ತಮ್ಮ ಪಾಠ-ಪ್ರವಚನಗಳಲ್ಲಿ ಮತ್ತು ಕ್ಷೇತ್ರಕಾರ್ಯದಲ್ಲಿ (Field Work) ನಿರತವಾಗಿರುವುದನ್ನು ಗಮನಿಸಿದಾಗ, ಅವರೊಂದಿಗೆ ಬೆರೆತು ಕೆಲಸದಲ್ಲಿ ತೊಡಗಿದಾಗ ನನಗೆ ಕುಮಾರಿ ಬಾಲಾ ಗುಪ್ತಾಳ ಜ್ಞಾಪಕವಾಗುತ್ತದೆ.
ದಿಲ್ಲಿ ವಿಶ್ವವಿದ್ಯಾಲಯದಲ್ಲಿ ನಾನು ವೃತ್ತ್ಯಾತ್ಮಕ (Professional) ಸಮಾಜಕಾರ್ಯದ ವಿದ್ಯಾರ್ಥಿಯಾಗಿದ್ದುದು 1956-58ರಲ್ಲಿ; ನನ್ನ ಸಹಪಾಠಿ ಕುಮಾರಿ ಬಾಲಾಗುಪ್ತಾ; ಆಕೆಯ ತಂದೆ ದೊಡ್ಡ ವ್ಯಾಪಾರಿ; ಆಕೆ ಸುಕೋಮಲ ವಾತಾವರಣದಲ್ಲಿ ಬೆಳೆದಾಕೆ; ಸಮಾಜಸೇವೆಯ ಹೆಸರಿನಲ್ಲಿ ಅಲ್ಲಿಲ್ಲಿ ಓಡಿಯಾಡುತ್ತಿದ್ದ ಗರಿಗರಿ ಸೀರೆಯ ನೀರೆಯರನ್ನು ಕಂಡ ಲಂಗದ ಹುಡುಗಿ ಗುಪ್ತಾಳಿಗೆ ತಾನೂ ಹಾಗಾಗಬೇಕೆಂಬ ಆಸೆ; ಆದ್ದರಿಂದ ದಿಲ್ಲಿ ವಿಶ್ವವಿದ್ಯಾಲಯದ ಸಮಾಜಕಾರ್ಯ ಸ್ನಾತಕೋತ್ತರ ಶಾಲೆಗೆ ಆಕೆ ಸೇರಿದಳು; ಆ ಶಾಲೆಯು ನಿಗದಿಗೊಳಿಸಿದ ಎಲ್ಲ ಕಾರ್ಯಕ್ರಮಗಳಲ್ಲಿ ತುಂಬಿದ ಆಸಕ್ತಿಯಿಂದ ಆಕೆ ಪಾಲ್ಗೊಳ್ಳತೊಡಗಿದಳು. ಮಾನವ ಸಂಪತ್ತಿನ ಗುಣಮಟ್ಟವನ್ನು ಹೆಚ್ಚಿಸಲು ಇರುವ ಮಾರ್ಗಗಳಲ್ಲಿ ಶಿಕ್ಷಣ ಅತೀ ಮುಖ್ಯವಾದುದು. ಶಿಕ್ಷಣವೇ ಶಕ್ತಿ ಎಂದು ಹೇಳುವಂತೆ ಶಿಕ್ಷಣ ಮಾನವನ ನಿಪುಣತೆ ಮತ್ತು ಸಾಮರ್ಥ್ಯವನ್ನ ಹೆಚ್ಚಿಸುವಲ್ಲಿ ಮಹತ್ವಪೂರ್ಣ ಸ್ಥಾನ ಪಡೆದಿದೆ. ಶೈಕ್ಷಣಿಕ ಪ್ರಗತಿ ಸಾಧಿಸಿರುವ ಯಾವುದೇ ದೇಶವಾದರೂ ಅತಿ ಸುಲಭವಾಗಿ ಮುಂದುವರಿಯುತ್ತದೆ. ಇಂದು ಜಗತ್ತಿನಲ್ಲಿ ನಾವು ನೋಡುತ್ತಿರುವ ಅನೇಕ ಹಿಂದುಳಿದ ರಾಷ್ಟ್ರಗಳು ಶಿಕ್ಷಣದಲ್ಲಿ ಹಿಂದುಳಿದವುಗಳಾಗಿವೆ. ಹಾಗಾಗಿ ಶಿಕ್ಷಣದ ರಕ್ಷಣೆಯಷ್ಟೇ ಮುಖ್ಯ ಎಂದು ಖ್ಯಾತ ಶಿಕ್ಷಣ ತಜ್ಞ ಡಾ|| ಹೆಚ್.ನರಸಿಂಹಯ್ಯರವರು ಹೇಳುತ್ತಿದ್ದರು.
ಸದ್ವಿಚಾರಗಳು ನಮಗೆ ಎಲ್ಲಾ ದಿಕ್ಕಿನಿಂದಲೂ ಸಿಗಲಿ - ಋಗ್ವೇದ
ಹೊಂದಾಣಿಕೆ ಮಾಡಿಕೊಳ್ಳುವುದು ಅನುಕರಣೆ ಅಲ್ಲ, ಅದು ಸಹನಶೀಲತೆ ಮತ್ತು ದೃಢ ಶಕ್ತಿಯ ಸಂಕೇತ - ಮಹಾತ್ಮಾ ಗಾಂಧಿ ಈ ಸಂಚಿಕೆಯಲ್ಲಿ ನಾವು ನಿಮಗೆ ಒಂದು ಅದ್ಭುತವಾದ ಮಹಿಳೆಯ ಬಗ್ಗೆ ಪರಿಚಯ ಮಾಡಿಕೊಡುತ್ತೇವೆ. ಇವರು ತನ್ನ ಇಡೀ ಜೀವನವನ್ನು ವಿಕಲ ಚೇತನರಿಗಾಗಿ ಮುಡುಪಾಗಿಟ್ಟಿದ್ದಾರೆ. ವಿಕಲಚೇತನರ ಕ್ಷೇತ್ರ ಎಂದರೆ ನಮಗೆ ತಕ್ಷಣ ಹೊಳೆಯುವುದೇ ಡಾ.ಇಂದುಮತಿ ರಾವ್. ಇವರು ಬೆಂಗಳೂರಿನ ಸಿ.ಬಿ.ಆರ್. ನೆಟ್‍ವರ್ಕ್ (ಸೌತ್ ಏಷಿಯಾ) ದ ಸಂಸ್ಥಾಪಕರು, ಕ್ಷೇತ್ರೀಯ ಮಾರ್ಗದರ್ಶಿಗಳು ಆಗಿದ್ದಾರೆ. ಸುಮಾರು 40 ಕ್ಕಿಂತ ಹೆಚ್ಚು ವರ್ಷಗಳಿಂದ ಇವರು ವಿಕಲಚೇತನರ ಅಂತಃಸತ್ತ್ವವನ್ನು ಸಮರ್ಥಶಕ್ತಿಯನ್ನಾಗಿ ರೂಪಿಸುವುದರಲ್ಲಿ ಕಾರ್ಯ ನಿರತವಾಗಿದ್ದಾರೆ. ಸಾಮಾನ್ಯವಾಗಿ ನಾವು ವಿಕಲಚೇತನರು ಎಂದರೆ ಸಾಕು, ಅವರು ಕೈಲಾಗದವರು, ಅಯ್ಯೋ ಪಾಪಾ ಎನ್ನುತ್ತೇವೆ. ಆದರೆ ಡಾ. ಇಂದುಮತಿ ರಾವ್ ಅವರ ದೃಷ್ಟಿಯಲ್ಲಿ ವಿಕಲಚೇತನ ಎನ್ನುವುದು ಶಕ್ತಿ. ಅವರನ್ನು ಬೇರೆ ಮಾಡಬಾರದು, ಅವರು ಸಾಮಾನ್ಯ ಜನರಲ್ಲಿ ಸೇರುತ್ತಾರೆ ಎನ್ನುತ್ತಾರೆ. ಎಲ್ಲರಂತೆಯೇ ಸಮಸ್ತ ಶಕ್ತಿಯು ಅವರಲ್ಲಿಯೇ ಇರುತ್ತದೆ. ಅದು ಪ್ರಕಟಗೊಳ್ಳಲು ಪೂರಕ ಪರಿಸರ ಬೇಕು ಎಂಬುದು ಅವರ ವಿಶ್ವಾಸ. ಪ್ರೊಫೆಸರ್ ಶಂಕರ್ ಪಾಠಕ್ ರವರು ಸಮಾಜಕಾರ್ಯದ ಹೆಜ್ಜೆಗಳು ಪತ್ರಿಕೆಯ ಆರಂಭದ ದಿನಗಳಿಂದಲೂ ನಿರಾತಂಕ ಸಂಸ್ಥೆಯೊಂದಿಗೆ ಒಡನಾಟ ಹೊಂದಿದ್ದರು. ಆರಂಭದ ದಿನಗಳಲ್ಲಿ ಪಾಠಕ್‍ರವರ ಕುರಿತು ಪತ್ರಿಕೆಯಲ್ಲಿ ಲೇಖನ ಪ್ರಕಟಿಸಲು ನಿರ್ಧರಿಸಿದಾಗ ಅವರ ಮೊದಲ ಭೇಟಿಯಾಯಿತು. ಪತ್ರಿಕೆಯ 2ನೇ ಸಂಚಿಕೆ ಜನವರಿ 2011 ರಲ್ಲಿ ಇವರ ಕುರಿತು ಮುಖಪುಟ ಲೇಖನ ಪ್ರಕಟಿಸಲಾಗಿತ್ತು. ಈ ಸಂದರ್ಭದಲ್ಲಿ ಪಾಠಕ್‍ರವರ ಜೊತೆಯಲ್ಲಿ ಅತ್ಯಂತ ಆತ್ಮೀಯ ಕ್ಷಣಗಳನ್ನು ಕಳೆಯುವ ಸಂದರ್ಭ ಒದಗಿ ಬಂದಿತ್ತು.
ಹಿನ್ನೆಲೆ :- ಶಂಕರ ಪಾಠಕರ ಹುಟ್ಟೂರು ಬನವಾಸಿ. (ಕದಂಬ ವಂಶ ಸ್ಥಾಪಕ ಮಯೂರವರ್ಮನ ರಾಜಧಾನಿ) ಬನವಾಸಿಯಲ್ಲಿ ಮಧುಕೇಶ್ವರ ದೇವಸ್ಥಾನವಿದೆ. ಊರಿನ ಮೂರು ದಿಕ್ಕಿನಲ್ಲಿ ಹರಿಯುತ್ತಿದೆ ವರದಾ ನದಿ. ವೈಶಾಖ ಮಾಸದಲ್ಲಿ ವಾರ್ಷಿಕ ರಥೋತ್ಸವ - ಜಾತ್ರೆ ಆಗುತ್ತವೆ. ಬನವಾಸಿ ಶಂಕರ ಪಾಠಕರ ಬಾಲ್ಯದಲ್ಲಿ ಆಗಿನ ಬ್ರಿಟಿಷ್ ಆಡಳಿತದ ಮುಂಬಯಿ ಪ್ರಾಂತ್ಯದಲ್ಲಿ ಸೇರಿದ್ದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಒಂದು ದೊಡ್ಡ ಹಳ್ಳಿ. 1941ರಲ್ಲಿ ಜನಸಂಖ್ಯೆ ಸುಮಾರು 1000 ವಿರಬಹುದು. ಕಳೆದ 2001ರ ಜನಗಣತಿಯಲ್ಲಿ ಜನಸಂಖ್ಯೆ 7000. ಈಗ ಸುಮಾರು 9000 ಇರಬಹುದು. ಒಂದು ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ಏಳನೇ ತರಗತಿಯವರೆಗೆ, ಹೆಣ್ಣು ಮಕ್ಕಳ ಶಾಲೆ ನಾಲ್ಕನೇ ತರಗತಿಯವರೆಗೆ, ಒಂದು ಉರ್ದು ಪ್ರಾಥಮಿಕ ಶಾಲೆಗಳಿದ್ದವು. ಒಟ್ಟು (4+2+1) 7 ಜನ ಮಾಸ್ತರರು, ಮಾಸ್ತರಿಣಿಯರು. ಇದಲ್ಲದೆ ಒಂದು ಪೊಲೀಸ್ ಸ್ಟೇಶನ್ - 3 ಪೇದೆಗಳು. ಅಗ್ರಿಕಲ್ಚರಲ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ಅದರ ಅಂಗವಾಗಿ ಒಂದು ಚಿಕ್ಕ ಲೈಬ್ರರಿ. ಒಬ್ಬ ವ್ಯಕ್ತಿಯ ಮನೆಯಲ್ಲಿ ನಡೆಯುವ ಪೋಸ್ಟ್ ಆಫೀಸು, ಪೋಸ್ಟ್ ಮಾಸ್ತರರಿಗೆ ಗೌರವಧನ, ಗ್ರಾಮ ಪಂಚಾಯಿತಿ ಆಫೀಸು. ಬೆಳಿಗ್ಗೆ ಬನವಾಸಿಯಿಂದ ಹೊರಟು ಸಿರ್ಸಿಗೆ ಹೋಗಿ, ವಾಪಸ್ಸು ರಾತ್ರಿ ಮರಳಿ ಬರುವ ಒಂದು ಖಾಸಗಿ ಬಸ್ ಸರ್ವೀಸ್, ಆರೋಗ್ಯ ಸೇವೆ ಊರಿನ ಇಬ್ಬರು ವೈದ್ಯರಿಂದ. ಕಳೆದ 50 ವರ್ಷಗಳಲ್ಲಿ ಆದ ಮುಖ್ಯ ಬದಲಾವಣೆಗಳು ಜಯಂತಿ ಹೈಸ್ಕೂಲು, ರೆಗ್ಯೂಲರ್ ಪೋಸ್ಟ್ ಆಫೀಸು, ಪ್ರಾಥಮಿಕ ಆರೋಗ್ಯ ಕೇಂದ್ರ - ಅಲ್ಲಿ ಒಬ್ಬರು ಎಂ.ಬಿ.ಬಿ.ಎಸ್. ಡಾಕ್ಟರರು, ಒಬ್ಬಳು ನರ್ಸ್, ಸರಕಾರೀ ಬಸ್ ಸ್ಟಾಂಡ್ ಮತ್ತು ಬನವಾಸಿಗೆ ಬಂದು ಹೋಗುವ ಪ್ರವಾಸಿಗರು.
“Education is not passing the exams or getting a job. It is the building of stable real character and humanity”.
-Swami Vivekanand ಪ್ರಸ್ತಾವನೆ: ಸದೃಢ ಮನಸ್ಸಿನ ಆರೋಗ್ಯವಂತ, ಸಂತೋಷದಾಯಕ, ಉಲ್ಲಾಸದ ಯುವಕರು ಭಾರತದ ಆರ್ಥಿಕಾಭಿವೃದ್ಧಿಗೆ ಬೇಕಾಗಿದ್ದಾರೆ ಎಂದು ಗಾಂಧೀಜಿಯವರು ಹೇಳಿದ ಮಾತು ಇಂದು ಎಷ್ಟೊಂದು ಸತ್ಯವೆನಿಸುತ್ತದೆ. ಇಂದಿನ ಆರ್ಥಿಕಾಭಿವೃದ್ಧಿಗೆ ಮಾನವಿಕ ಸಂಪತ್ತು ಬಹಳ ಮುಖ್ಯ. ಲಭ್ಯವಿರುವ ಭೂಸಂಪತ್ತು, ಜಲಸಂಪತ್ತು, ಅರಣ್ಯಸಂಪತ್ತು, ಖನಿಜ ಸಂಪತ್ತು, ಇಂಧನ ತೈಲ ಮುಂತಾದ ಸಂಪನ್ಮೂಲಗಳನ್ನು ದಕ್ಷವಾಗಿ ಮತ್ತು ಮಿತವಾಗಿ ಬಳಸಿಕೊಳ್ಳುವುದರ ಮೂಲಕ ಅವುಗಳ ಅಪವ್ಯಯವಾಗದಂತೆ ಮತ್ತು ದುರ್ಬಳಕೆಯಾಗದಂತೆ ನೋಡಿಕೊಳ್ಳಬೇಕಾಗಿದೆ. ಆದ್ದರಿಂದ ಇಂದು ಶಿಕ್ಷಣದ ರಕ್ಷಣೆ ಮುಖ್ಯವೆನಿಸುತ್ತದೆ. ಭಾರತ ಹಿಂದೆಂದೂ ಕಾಣದಂತಹ ಆರ್ಥಿಕಾಭಿವೃದ್ದಿಯನ್ನು ಸಾಧಿಸಿದ್ದರೂ (8% ರಷ್ಟು ಬೆಳವಣಿಗೆ) ಭವಿಷ್ಯದಲ್ಲಿ ಶಿಕ್ಷಣದ ಸವಾಲುಗಳು ಆರ್ಥಿಕಾಭಿವೃದ್ಧಿಗೆ ತಡೆಯಾಗಬಹುದೇ? ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಇದರಿಂದ ಭಾರತದ ಆರ್ಥಿಕ ವ್ಯವಸ್ಥೆಯನ್ನು ಜಾಗತಿಕ ಪೈಪೋಟಿಯಲ್ಲಿ ಎದುರಿಸಲು ಸಿದ್ದಗೊಳಿಸಬೇಕಾಗಿದೆ. ಆದ್ದರಿಂದ ಇಂದು ಶಿಕ್ಷಣ ಆರ್ಥಿಕಾಭಿವೃದ್ಧಿಯ ಸಂಜೀವಿನಿ ಎಂದು ಹೇಳಬಹುದಾಗಿದೆ. ಪಂಡಿತ ಸುಧಾಕರ ಚತುರ್ವೇದಿ: ಬಾಲ್ಯ ಮತ್ತು ವಿದ್ಯಾಭ್ಯಾಸ
114 ವಸಂತಗಳನ್ನು ಪೂರೈಸಿರುವ, ಅಪ್ಪಟ ಕನ್ನಡಿಗರಾಗಿದ್ದು, ಬಹುಸಂಖ್ಯಾತ ಕನ್ನಡಿಗರಿಗೆ ಅಪರಿಚತರಾಗಿಯೇ ಉಳಿದಿರುವ, ತಮ್ಮ ಜೀವನದ ಬಹುಪಾಲು ದಿನಗಳನ್ನು ಉತ್ತರ ಭಾರತದಲ್ಲಿಯೇ ಸ್ವಾತಂತ್ರ್ಯ ಹೋರಾಟಕ್ಕಾಗಿ ಹೋರಾಡಿದ, ಸದಾ ಹಸನ್ಮುಖಿ, ಸಹೃದಯಿ, ಕರ್ಮಯೋಗಿಗಳಾದ ಪಂಡಿತ ಸುಧಾಕರ ಚತುರ್ವೇದಿಯವರು 1897ನೆಯ ಇಸವಿ ಏಪ್ರಿಲ್ 20ರ ರಾಮನವಮಿಯಂದು ತುಮಕೂರು ಜಿಲ್ಲೆಯ ಕ್ಯಾತಸಂದ್ರ ಗ್ರಾಮದ ದಂಪತಿಗಳಾದ ಶ್ರೀಮತಿ ಲಕ್ಷ್ಮಮ್ಮ ಮತ್ತು ಶ್ರೀ ಶ್ರೀಕೃಷ್ಣರಾಯರವರ ಮಗನಾಗಿ ಒಂದು ಸಾಂಪ್ರದಾಯಿಕ ಕುಟುಂಬದಲ್ಲಿ ಜನ್ಮತಾಳಿದರೂ, ಸಮಾಜದ ಅನಿಷ್ಟ ಕಟ್ಟುಪಾಡುಗಳ ವಿರುದ್ಧ ಹೋರಾಡುತ್ತ ಬೆಳೆದು, ತಮ್ಮದೇ ಆದ ಸ್ವತಂತ್ರ ವ್ಯಕ್ತಿತ್ವವನ್ನು ರೂಪಿಸಿಕೊಂಡ ಮೇರು ಪರ್ವತ ಸಾಧಕರಲ್ಲಿ ಸುಧಾಕರ ಪಂಡಿತರು ಒಬ್ಬರು. ಬಾಲ್ಯದಲ್ಲಿಯೇ ಅತೀ ಕ್ರಿಯಾಶೀಲ, ಚಟುವಟಿಕಗಳ ಗಣಿಯಾಗಿದ್ದ ಪ್ರತಿಭಾವಂತ ಹುಡುಗ ಎಂದು ಕರೆಸಿಕೊಂಡಿದ್ದ ಚತುರ್ವೇದಿಯವರ ಆರೋಗ್ಯ ಮಾತ್ರ ಹೇಳಿಕೊಳ್ಳುವಂತಿರಲಿಲ್ಲ. ಸದಾ ಕಾಯಿಲೆಗೆ ತುತ್ತಾಗುತ್ತಿದ್ದ ಪಂಡಿತ್‍ಜೀಯವರು ತಮ್ಮ ಎಂಟನೆಯ ವಯಸ್ಸಿನಲ್ಲಿಯೇ ತಮ್ಮ ನೆಚ್ಚಿನ ಹಿರಿಯ ಸಹೋದರಿಯಾದ ಪದ್ಮಕ್ಕನ ಮುದ್ದಿನ ತಮ್ಮನಾಗಿ ಅವರಿಂದ ಕನ್ನಡ ಸಾಹಿತ್ಯ, ಸಂಸ್ಕೃತ ಮತ್ತು ಭಾರತ ದರ್ಶನ, ವೇದ ಅಧ್ಯಯನಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಬಾಲ್ಯದಲ್ಲಿಯೇ ವೇದ ಅಧ್ಯಯನಗಳ ಬಗ್ಗೆ ಪ್ರೌಢಿಮೆಯನ್ನು ಮೆರೆದರು. ಇವರ ಪ್ರೌಢಿಮೆಯನ್ನು ಗಮನಿಸಿದ ತಂದೆ ತಾಯಿಯರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಉತ್ತರ ಭಾರತದ ಬಹುದೂರದ ಹರಿದ್ವಾರದ ಪ್ರಸಿದ್ಧ ಕಾಂಗಡಿ ಗುರುಕುಲಕ್ಕೆ ಸೇರಿಸಿದರು. ಈ ಗುರುಕುಲದಲ್ಲಿ ಪಂಡಿತ್ ಜೀಯವರು ನಾಲ್ಕು ವೇದಗಳನ್ನು (ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ) ಅಮೂಲಾಗ್ರವಾಗಿ ಅಧ್ಯಯನ ಮಾಡಿ ನಿಜವಾದ ಅರ್ಥದಲ್ಲಿ ಚತುರ್ವೇದಿ ಎಂಬ ಹೆಸರನ್ನು ಗಳಿಸಿ ಪ್ರಸಿದ್ಧರಾದರು. ಇಷ್ಟವಾದದ್ದೇ ಮುಖ್ಯವೋ ? ಮುಖ್ಯವಾದದ್ದು ಇಷ್ಟವಾಗಲೇಬೇಕೊ ? ಎರಡೂ ಮುಖ್ಯವಾದರೆ ಎರಡೂ ಇಷ್ಟವಾಗಲೇಬೇಕೆ ? ಹಾಗಾದರೆ ಯಾವುದನ್ನು ಆರಿಸಿಕೊಳ್ಳಬೇಕು ? ಇದು ಇಕ್ಕಟ್ಟಿನ ಪ್ರಸಂಗವೇ ಸರಿ. ವ್ಯಕ್ತಿಯು ಮುಖ್ಯವೊ, ಹಳ್ಳಿಗರು ಮುಖ್ಯವೊ ? ವ್ಯಕ್ತಿಗೆ ನೆರವಾಗಿ ಆತನ ಸೇವೆಯಲ್ಲಿ ನಿರತರಾಗಿರುವುದು ಇಷ್ಟವೊ, ಹಳ್ಳಿಗರೊಡನೆ ಇದ್ದು ಅವರ ಜೊತೆ ಕೆಲಸ ಮಾಡುವುದು ಇಷ್ಟವೊ ? ಇದು ಇಕ್ಕಟ್ಟಿನ ಪ್ರಸಂಗ.
ಶಿಬಿರದ ಹಿನ್ನೆಲೆ, ಉದ್ದೇಶಗಳು
ಸಮಾಜಕಾರ್ಯದಲ್ಲಿ ತರಬೇತಿ ಪಡೆಯುವ ವಿದ್ಯಾರ್ಥಿಗಳು ಸಮಾಜಸೇವಾ ಶಿಬಿರದಲ್ಲಿ ಹತ್ತು ದಿನ ಕಳೆಯಬೇಕೆಂಬುದು ನಿಯಮ. ಯಾವುದಾದರೂ ಒಂದು ಹಳ್ಳಿಯಲ್ಲಿ ಶಿಬಿರವನ್ನು ವಿದ್ಯಾರ್ಥಿಗಳು ತಮ್ಮ ಖರ್ಚಿನಲ್ಲಿಯೇ ನಡೆಸಬೇಕಾಗುತ್ತದೆ. ಅವರ ಮಾರ್ಗದರ್ಶನಕ್ಕಾಗಿ ಹೋಗಿರುವ ಪ್ರಾಧ್ಯಾಪಕ (ನಿರ್ದೇಶಕ)ನ ಹಾಗೂ ಈ ಕಾರ್ಯಗಳಲ್ಲಿ ನೆರವಾಗುವ ವಿಭಾಗದ ಸಿಪಾಯಿಯ ಖರ್ಚನ್ನು, ಶಿಬಿರ ನಡೆಯುವ ಸ್ಥಳವು ಧಾರವಾಡಕ್ಕೆ ಆರು ಮೈಲುಗಳ ಒಳಗಿರದಿದ್ದರೆ, ವಿಶ್ವವಿದ್ಯಾಲಯವೇ ವಹಿಸಿಕೊಳ್ಳುತ್ತದೆ. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|