Niruta Publications
  • Home
  • About Us
    • Ramesha's Profile
  • Publication With Us
  • Niruta Prints
    • Our Services
    • Designer Profile
  • Our Services
  • Leaders Talk
  • Social Work Blog
  • HR Blog
    • Blog
  • Media Mentions
    • Photos
  • Join Our Online Groups
  • Contact Us
  • Home
  • About Us
    • Ramesha's Profile
  • Publication With Us
  • Niruta Prints
    • Our Services
    • Designer Profile
  • Our Services
  • Leaders Talk
  • Social Work Blog
  • HR Blog
    • Blog
  • Media Mentions
    • Photos
  • Join Our Online Groups
  • Contact Us
Niruta Publications

ನಮ್ಮ ನಡುವೆಯೇ ಇರುವ ಒಂದು ಲೆಜೆಂಡ್!

7/16/2017

0 Comments

 
ನೀರೊಳಗಿದ್ದೂ ನೀರು ಕುಡಿಯದ ಪ್ರಾಣಿಯ ಬಗ್ಗೆ, ಕೆಸರಿನಲ್ಲಿ ಹುಟ್ಟಿ ವಿಕಸನಗೊಂಡ ಗಿಡದ ಎಲೆಯ ಮೇಲೆ ಇದ್ದೂ ಆ ಎಲೆಗೆ ಅಂಟಿಕೊಂಡಿರದ ಜಲಬಿಂದುವಿನ ಬಗ್ಗೆ, ಇಂತಹುದೇ ಹಲವಾರು ಉದಾಹರಣೆಗಳನ್ನು ನೀಡಿ ಮನುಷ್ಯ ಹೀಗಿರಬೇಕು ಎಂದು ಉಪನ್ಯಾಸಕರು ಹೇಳುವುದುಂಟು. ಆದರೆ, ವಾಸ್ತವದಲ್ಲಿ ಹಾಗೆ ಇರಲು ಸಾಧ್ಯವೆ? ಹನ್ನೆರಡನೆಯ ಶತಮಾನದ ಶರಣರು ದಾರಿಯಲ್ಲಿ ಬಿದ್ದಿದ್ದ ನಾಣ್ಯಗಳನ್ನು ತಮ್ಮದಲ್ಲ, ಅದನ್ನು ಎತ್ತಿಕೊಂಡು ಬಳಸುವುದು ಹಾಗಿರಲಿ, ಅವುಗಳನ್ನು ಮುಟ್ಟಲೂ ಕೂಡದು ಎಂಬ ವೀರ ವ್ರತಿಗಳಾಗಿದ್ದರು ಎಂಬುದುಂಟು. ಚಿನ್ನದ ಗಟ್ಟಿಯೊಂದು ಹೊಳೆಯುತ್ತ ನಮ್ಮ ಹಾದಿಯಲ್ಲಿ ಇಂದು ಬಿದ್ದಿದ್ದರೆ ನಾವು ಅದರ ಕಡೆ ಅಸಡ್ಡೆ ತೋರಿ ಹಾಗೆಯೇ ಹೋಗುತ್ತಿದ್ದೆವೆಯೆ? ಇಂಥ ಪ್ರಶ್ನೆಗಳು ಮೂಡಿ ಅವುಗಳಿಗೆ ಇತ್ಯಾತ್ಮಕ ಉತ್ತರ ದೊರೆಯುತ್ತಿರುವುದು ಮಾನ್ಯ ಎಂ.ವಿ.ರಾಜಶೇಖರನ್ ಅವರನ್ನು ನೆನೆದಾಗಲೆಲ್ಲಾ ಮತ್ತು ಅವರನ್ನು ಕಂಡು ಸಂಭಾಷಿಸುತ್ತಿರುವಾಗಲೆಲ್ಲಾ.

Read More
0 Comments

ಗ್ರಾಮೀಣ ಭಾರತದ ಕನಸುಗಾರ 'ನಿಜಬಿಂಬ' ಶ್ರೀ ಎಂ.ವಿ. ರಾಜಶೇಖರನ್

7/16/2017

0 Comments

 
Picture
12.09.1928 ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಕನಕಪುರ ತಾಲ್ಲೂಕಿನ ಮರಳವಾಡಿಯಲ್ಲಿ ಜನಿಸಿರುವ ಶ್ರೀ ಎಂ.ವಿ. ರಾಜಶೇಖರನ್ ಅವರು ಕರ್ನಾಟಕದ ಸಜ್ಜನ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದಾರೆ. 1947-48ರ ಮೈಸೂರು ಚಲೋ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಶ್ರೀ ಎಂ.ವಿ. ರಾಜಶೇಖರನ್ ಅವರು, ಅಪ್ಪರ್ ಸೆಕೆಂಡರಿ (ಮಾಧ್ಯಮಿಕ ಶಾಲೆಯಲ್ಲಿ) ವ್ಯಾಸಂಗ ಮಾಡುತ್ತಿದ್ದಾಗಲೇ ಭಾರತದ ಸ್ವಾತಂತ್ರ್ಯ ಹೋರಾಟದ ಮಹಾನ್ ಮೌಲ್ಯಗಳಿಗೆ ತಮ್ಮನ್ನ ತೆತ್ತುಕೊಂಡಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾಗ ಮಿತ್ರಮೇಳ ಎಂಬ ಸಾಂಸ್ಕೃತಿಕ ಸಂಘಟನೆಯಲ್ಲಿ ದುಡಿದು ತಮ್ಮ ಮುಂದಿನ ಬದುಕನ್ನು ರಚನಾತ್ಮಕ ಕೆಲಸಗಳಿಗೆ ಮೀಸಲಾಗಿಟ್ಟಿದ್ದಾರೆ.

Read More
0 Comments

ಎಂ.ವಿ. ಮೂರ್ತಿ : ಸಮಾಜಕಾರ್ಯದ ದ್ರೋಣಾಚಾರ್ಯ

7/16/2017

0 Comments

 
ಪ್ರೊ.ಎಂ.ವಿ.ಮೂರ್ತಿಯವರು ನೀಳ ಕಾಯದ, ದಿಟ್ಟ ನಿಲುವಿನ ಧೀಮಂತ ವ್ಯಕ್ತಿ. ಮಾತು ಮತ್ತು ನಡತೆ ಎರಡರಲ್ಲೂ ಏಕತೆಯನ್ನು ಹೊಂದಿದಂತಹ ಬಹು ಅಪರೂಪ ಎನಿಸುವಂತಹ ವ್ಯಕ್ತಿತ್ವ. ನಮ್ಮ ನಾಡು, ಸಂಪ್ರದಾಯಗಳಲ್ಲಿ ಅಪಾರ ನಂಬಿಕೆ, ಕಾಳಜಿ ಹೊಂದಿದ್ದಂತಹ ಪ್ರೊ.ಎಂ.ವಿ.ಮೂರ್ತಿರವರು ಹುಟ್ಟಿದ್ದು ಮೇ 10, 1910, ಒಂದು ಸಾಂಪ್ರದಾಯಿಕ ಕುಟುಂಬದಲ್ಲಿ. ತಂದೆ ಮಠಮ್ ನಾರಾಯಣಾಚಾರ್, ವೃತ್ತಿಯಿಂದ ಲಾಯರ್, ತಾಯಿ ಸುಂದರಾಬಾಯಿ. ನಾರಾಯಣಾಚಾರ್ ಮತ್ತು ಸುಂದರಾಬಾಯಿಯವರ 6 ಮಕ್ಕಳಲ್ಲಿ ಎರಡನೆಯವರು ನಮ್ಮ ಎಂ.ವಿ.ಮೂರ್ತಿ. ಬಾಲ್ಯದಿಂದಲೇ ಬಹು ಚಟುವಟಿಕೆಯ ಹುಡುಗನಾಗಿದ್ದ ಎಂ.ವಿ.ಮೂರ್ತಿಯವರು ಬೆಳೆದಂತೆ ತಂದೆ ತಾಯಿಗಳ ಪ್ರಭಾವದಿಂದ ಸಂಪ್ರದಾಯ, ಭಾಷೆಯ ಬಗ್ಗೆ ಅತೀವ ಆಸಕ್ತಿ ಮತ್ತು ಪ್ರೇಮವನ್ನು ಬೆಳೆಸಿಕೊಳ್ಳುತ್ತಾ ಬಂದರು.

Read More
0 Comments

ಮಹಿಳೆ ಮತ್ತು ಶೋಷಣೆ

7/16/2017

0 Comments

 
ಪ್ರಸ್ತಾವನೆ:
ದೇಶದ ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಮಹಿಳೆ ಪುರುಷನಿಗೆ ಸಮಾನವಾಗಿ ನಿಲ್ಲಲು ಪ್ರಯತ್ನಿಸುತ್ತಿದ್ದಾಳೆ. ಸಾಮಾಜಿಕವಾಗಿ, ಧಾರ್ಮಿಕವಾಗಿ, ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಮಹಿಳೆ ಸಬಲಳಾಗುತ್ತಿದ್ದಾಳೆ ಎನ್ನುವುದಕ್ಕೆ ಹಲವಾರು ಉದಾಹರಣೆಗಳು ಸಾಕ್ಷಿಯಾಗಿವೆ. ಹಲವಾರು ಕ್ಷೇತ್ರಗಳಲ್ಲಿ ಮಹಿಳೆ ಪುರುಷನನ್ನೇ ಮೀರಿ ನಿಂತಿದ್ದಾಳೆ. 1991ರ ಆರ್ಥಿಕ ನೀತಿಗಳಲ್ಲಿನ ಬದಲಾವಣೆಯಿಂದಾಗಿ ಮಹಿಳೆ ಮಾಹಿತಿ ತಂತ್ರಜ್ಞಾನ ಉದ್ಯಮದಲ್ಲಿಯೂ ತನ್ನನ್ನು ಕಂಡುಕೊಂಡಿದ್ದಾಳೆ, ಅದು ಕೇವಲ ಉದ್ಯೋಗವನ್ನಷ್ಟೇ ಸೃಷ್ಠಿಸಿಲ್ಲ, ಜೊತೆಗೆ ಮಹಿಳೆ ಪುರುಷನಿಗೆ ಸಮಾನವಾಗಿ ಯಾವುದೇ ಕ್ಷೇತ್ರದಲ್ಲಿ, ಯಾವುದೇ ಸಮಯದಲ್ಲಿ ಕೆಲಸ ಮಾಡಲು ಅರ್ಹಳು ಎಂಬುದನ್ನು ನಿರೂಪಿಸಲಾಗಿದೆ. ಪ್ರಮುಖವಾಗಿ ಸಾಫ್ಟ್‍ವೇರ್ ಉದ್ಯಮಗಳಲ್ಲಿ ಮಹಿಳೆಯರ ಪಾಲು ನೋಡಿದಾಗ ಆಶ್ಚರ್ಯವಾಗಬಹುದು.

Read More
0 Comments

ಸ್ಥಿತಪ್ರಜ್ಞೆಯ ಅಪರಂಜಿ: ಪ್ರೊ.ಎಂ. ವಾಸುದೇವ ಮೂರ್ತಿ (ನನ್ನ ಅನುಭವಕ್ಕೆ ಬಂದಂತೆ)

7/16/2017

0 Comments

 
(ಪ್ರೊ.ಎಂ.ವಿ.ಮೂರ್ತಿ: 1910-2000= ಶ್ರೀಮತಿ ನೀರಜಾ ಮೂರ್ತಿ: 1918-2001)
 
ಪ್ರೊಫೆಸರ್ ಎಂ. ವಾಸುದೇವ ಮೂರ್ತಿಯವರನ್ನು ನೆನೆದಾಗಲೆಲ್ಲಾ ಮಾಧುರ್ಯ ತುಂಬಿದ, ಸ್ನೇಹಮಯ, ನಿರ್ವ್ಯಾಜ ಪ್ರೀತಿಯ, ಸರಳ ಆದರೆ ಉನ್ನತವಾದ ಜ್ಞಾನ ಭಂಡಾರಿ, ಮಾನವೀಯ ಮೌಲ್ಯಗಳ ಮೂರ್ತಿಯಾದ ಒಬ್ಬ ಹಿರಿಯ ಜೀವಿಯೊಂದು ಕಣ್ಣೆದಿರು ನಿಂತ ಅನುಭವವಾಗುತ್ತದೆ.

Read More
0 Comments

ಕರ್ನಾಟಕದಲ್ಲಿ ಸಮಾಜ ಸುಧಾರಣಾ ಚಳವಳಿಗಳು

7/16/2017

3 Comments

 
ಸಮಾಜ ಸುಧಾರಣೆಯೆಂಬ ವಿಚಾರ ಗಮನಕ್ಕೆ ಬರುವಾಗ, ಇಲ್ಲಿ ಎರಡು ಹಂತಗಳನ್ನು ಗಮನಿಸಬೇಕು. ಒಂದು, ಸಮಾಜದಲ್ಲಿನ ದಲಿತರ ಮತ್ತು ಹಿಂದುಳಿದವರ ಪುರೋಗಮನ; ಎರಡು, ಎಲ್ಲ ಜಾತಿಗಳ ಮಹಿಳೆಯರ ಪುರೋಗಮನ, ಕರ್ನಾಟಕದಲ್ಲಿ ನಡೆದ ಇಂಥ ಚಳವಳಿಗಳ ಕೆಲವು ಗಣ್ಯ ಅಂಶಗಳನ್ನು ಇಲ್ಲಿ ಪರಿಶೀಲಿಸಲಾಗಿದೆ.
​
ಅಸ್ಪೃಶ್ಯತಾ ನಿವಾರಣೆ-ಎಂದರೆ ಅಸ್ಪೃಶ್ಯರ ಮೇಲೆ ಹೇರಲಾದ ಸಾಮಾಜಿಕ ದಿಗ್ಬಂಧನಗಳು (ಉಚ್ಚವರ್ಣದವರಿರುವ ಓಣಿಗಳಲ್ಲಿ ಓಡಾಡಬಾರದು, ಮೀಸೆ ಬಿಡಬಾರದು, ಛತ್ರಿ ಹಿಡಿಯಬಾರದು, ಮದುವೆ ಮೆರವಣಿಗೆಯಲ್ಲಿ ವಿಶಿಷ್ಟ ಸರಂಜಾಮುಗಳನ್ನು ಕೆಲವು ವಾದ್ಯಗಳು, ಕುದುರೆ ಇತ್ಯಾದಿ ಬಳಸಬಾರದು, ಸಾರ್ವಜನಿಕ ಬಾವಿಯಿಂದ, ಕೆರೆಯಿಂದ ನೀರು ತುಂಬಬಾರದು, ಮೇಲುವರ್ಗದವರು ಪೂಜಿಸುವ ದೇವಾಲಯಗಳನ್ನು ಪ್ರವೇಶಿಸಬಾರದು), ಶಿಕ್ಷಣಕ್ಕೆ ಅಡಚಣೆ, ಇತ್ಯಾದಿಗಳು ಒಂದು ರೀತಿಯ ಇತಿಮಿತಿಗಳು. ಈ ಹಲವಾರು ದಿಗ್ಬಂಧನಗಳಿಂದ ಅಸ್ಪೃಶ್ಯರು ಉಸಿರು ಕಟ್ಟುವ ವಾತಾವರಣದಲ್ಲಿ ಇದ್ದರು. ಬಹುಪಾಲು ಅಸ್ಪೃಶ್ಯರು ಮೂಲದ ಹೊಲೆಯರಾಗಿ ಕೆಲವು ಭೂಮಾಲಿಕವರ್ಗಗಳ ಗುಲಾಮರಾಗಿ ಯಾವುದೇ ಸ್ವಾತಂತ್ರ್ಯವಿಲ್ಲದೆ ಬಂಧಿತ ಸ್ಥಿತಿಯಲ್ಲಿ ಇದ್ದರು. 

Read More
3 Comments

ಕರ್ನಾಟಕದ ಸೋಲಿಗರ ಆತ್ಮಸ್ಥೈರ್ಯ: ಡಾ.ಎಚ್. ಸುದರ್ಶನ್

7/16/2017

0 Comments

 
ಪ್ರೀತಿ, ತ್ಯಾಗ, ಸೇವೆ-ಇವು ಮಾತ್ರ ಭಾರತದ ಉದ್ಧಾರವನ್ನು ಮಾಡಲು ಶಕ್ತ.
ಸ್ವಾಮಿ ವಿವೇಕಾನಂದರ ಈ ಮಾತನ್ನು ಅಕ್ಷರಶ: ಆಚರಣೆಗೆ ತಂದು ತೋರಿಸಿರುವವರು ಬಿಳಿಗಿರಿರಂಗನ ಬೆಟ್ಟದ ಸೋಲಿಗರ ಆರಾಧ್ಯ ದೈವವೆನಿಸಿಕೊಂಡಿರುವ ಡಾ. ಸುದರ್ಶನ್‍ರವರು.
​
ಡಾ. ಎಚ್. ಸುದರ್ಶನ್‍ರವರು ಬೆಂಗಳೂರು ದಕ್ಷಿಣ ತಾಲ್ಲೂಕಿನ ಯಮಲೂರು ಗ್ರಾಮಕ್ಕೆ ಸೇರಿದ ರೈತ ಕುಟುಂಬವೊಂದರಲ್ಲಿ 1950 ಡಿಸೆಂಬರ್ 30 ರಂದು ಜನ್ಮತಾಳಿದರು. ತಂದೆ ಹನುಮರೆಡ್ಡಿ, ಎಚ್.ಎ.ಎಲ್‍ನಲ್ಲಿ ಉದ್ಯೋಗಿ. ತಾಯಿ ಚಿನ್ನಮ್ಮ. ತನ್ನ 12ನೆಯ ವಯಸ್ಸಿನಲ್ಲಿದ್ದಾಗ ವೈದ್ಯಕೀಯ ಸೌಲಭ್ಯವಿಲ್ಲದೆ ತನ್ನ ಕಣ್ಣ ಮುಂದೆಯೇ ತನ್ನ ತಂದೆಯ ಸಾವಿನ ದೃಶ್ಯವನ್ನು ನೋಡಿದ ಸುದರ್ಶನ್ ಅವರಿಗೆ  ವೈದ್ಯಕೀಯ ಅಧ್ಯಯನದ ಕಡೆ ಆಸಕ್ತಿ ಬೆಳೆಯಿತು. ಸುದರ್ಶನ್ ಅವರು 3ನೆಯ ತರಗತಿಯವರೆಗು ಯಮಲೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ನಂತರ ತನ್ನ ಪೋಷಕರೊಡನೆ ಹಳ್ಳಿಯಿಂದ ಎತ್ತಿನಗಾಡಿಯಲ್ಲಿ ಬಂದು ಬೆಂಗಳೂರಿನ ಜಯನಗರದಲ್ಲಿ ನೆಲೆಸಿದರು. ರಾಣಿ ಸರಳಾದೇವಿ ಶಾಲೆ, ಜಯನಗರ ಮತ್ತು ರಾಷ್ಟ್ರೀಯ ವಿದ್ಯಾಲಯದಲ್ಲಿ ತಮ್ಮ ಪ್ರೌಢಶಿಕ್ಷಣವನ್ನು ಮುಗಿಸಿದರು. ಬಾಲ್ಯದಿಂದಲೂ ತುಂಬಾ ಬುದ್ಧಿವಂತರಾಗಿದ್ದರಿಂದ ತಮ್ಮ ಶಾಲೆಯಲ್ಲಿ ಡಬಲ್ ಪ್ರೊಮೋಷನ್ ಪಡೆದರು. ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಎಂಬಂತೆ ಎಸ್.ಎಸ್.ಎಲ್.ಸಿ ಯಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿದರು. ತಮ್ಮ ಪದವಿ ಪೂರ್ವ ಶಿಕ್ಷಣವನ್ನು ಬೆಂಗಳೂರಿನ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಮುಗಿಸಿದರು. ಮೆಡಿಕಲ್‍ಗೆ ಸೇರಬೇಕಾದಾಗ ಅವರ ವಯಸ್ಸು ನಿಗಧಿಗಿಂತ ಕಡಿಮೆಯಾದ್ದರಿಂದ ಒಂದು ವರ್ಷಗಳ ಕಾಲ ತನ್ನ ತಂದೆಯ ಸ್ನೇಹಿತರೊಬ್ಬರ ಕೃಷ್ಣ ಪ್ಲೋರ್ ಮಿಲ್ನಲ್ಲಿ ಗುಮಾಸ್ತರಾಗಿ ಕೆಲಸ ಮಾಡಿದರು.

Read More
0 Comments

ಅಂತರವಲೋಕನ-ಪ್ರಸ್ತುತ ಸಮಾಜ - ಸಮಾಜಕಾರ್ಯ - ಸಮಾಜಕಾರ್ಯಕರ್ತ

7/16/2017

0 Comments

 
ಆರೋಗ್ಯಕರ ಸಮಾಜದ ಕನಸನ್ನು ಕಾಣುವ ನಾವು, ಈ ವಿಚಾರಕ್ಕೆ ಹೇಗೆ ಸ್ಪಂದಿಸಿದ್ದೇವೆ? ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ,ವ್ಯವಸ್ಥೆಯನ್ನು ಸರಿಪಡಿಸಲು ಅಗತ್ಯವಾದ ಸಾಮಾಜಿಕ ನೀತಿಗಳ ಬಗ್ಗೆ, ಅದರಲ್ಲಿ ಪಾಲ್ಗೊಳ್ಳುವುದರ ಬಗ್ಗೆ ಚಿಂತಿಸಿದ್ದೇವೆಯೇ? ರಾಜಕೀಯ  ದೊಂಬರಾಟದಲ್ಲಿ ತಲ್ಲೀನರಾಗಿರುವ ರಾಜಕಾರಣಿಗಳಿಗೆ ಅಭಿವೃದ್ಧಿಯೆಡೆಗಿನ ದೃಷ್ಟಿಕೋನವನ್ನು ನೀಡಲು ಎಂದಾದರೂಪ್ರಯತ್ನಿಸಿದ್ದೇವೆಯೇ? ಸಮಾಜಕಾರ್ಯವನ್ನು ಅಧ್ಯಯನ ಮಾಡಿಕೊಂಡು, ಉನ್ನತ ಸ್ಥಾನಕ್ಕೆ ಹೋದವರು ವ್ಯವಸ್ಥೆಯಲ್ಲಿಪಾಲುದಾರರಾಗುತ್ತಿರುವುದು ದುರಾದೃಷ್ಟವಲ್ಲವೇ?

Read More
0 Comments

ಹೆಸರಿಗೆ ಕಾಯ್ದೆ ಮಾತ್ರ ಉದ್ಯೋಗ ಖಾತ್ರಿ! ಅನುಷ್ಠಾನಕ್ಕಿಲ್ಲ ಯಾಕ್ರೀ?!

7/16/2017

0 Comments

 
ಜಗತ್ತಿನ ಅತ್ಯಂತ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತಕ್ಕೆ ವಿಶ್ವ ಆರ್ಥಿಕ     ವ್ಯವಸ್ಥೆಯಲ್ಲಿ ಮಹತ್ವದ ಸ್ಥಾನವಿದೆ. ಜೊತೆಗೆ ಭಾರತವು ನೈಸರ್ಗಿಕವಾಗಿ ಒಂದು ಸಂಪತ್ಭರಿತವಾದ ದೇಶವಾಗಿದೆ. ಈಗ ತಾನೇ ಅಭಿವೃದ್ಧಿಯ ಮೆಟ್ಟಿಲುಗಳನ್ನ ಏರತೊಡಗಿರುವ ಭಾರತ ಒಂದು ಅಭಿವೃದ್ಧಿಶೀಲ ದೇಶವೆಂದೆ ಪರಿಗಣಿಸಲ್ಪಟ್ಟಿದೆ. ಹಾಗೆ ಸಮಶೀತೋಷ್ಣ ಹವಮಾನ ಹೊಂದಿರುವ ಭಾರತವು ವಿಪುಲ ನೈಸರ್ಗಿಕ ಮತ್ತು ಮಾನವ ಸಂಪತ್ತಿನೊಂದಿಗೆ  ಬಡಜನರಿಂದ ಕೂಡಿದ ಶ್ರೀಮಂತ ರಾಷ್ಟ್ರ ಎಂದು ಬಣ್ಣಿಸಲ್ಪಟ್ಟಿದೆ.

Read More
0 Comments

ಸಮಾಜಕಾರ್ಯ ಮತ್ತು ಇತರ ಕೆಲವು ಸಮಾಜ ವಿಜ್ಞಾನಗಳು: ಪರಸ್ಪರ ಸಂಬಂಧಗಳು

7/16/2017

0 Comments

 
ಸಮಾಜಕಾರ್ಯವು ಒಂದು ವೃತ್ತಿ ಮಾತ್ರ ಆಗಿರದೆ ವಿಜ್ಞಾನವೂ ಹೌದು. ಮತ್ತು ಒಂದು ಕಲೆಯೂ ಹೌದು ಎಂಬ ಮಾನ್ಯತೆ ಪಡೆದಿದೆ. ಸಮಾಜಕಾರ್ಯವನ್ನು ಒಂದು ಸ್ವತಂತ್ರ ಅಧ್ಯಯನಶಾಸ್ತ್ರವೆಂದು ಪರಿಗಣಿಸುವುದಾದರೂ ಅದು ಪೂರ್ಣನೆಲೆಯಲ್ಲಿ ಸ್ವತಂತ್ರವಾಗಿರಲಾರದು. ಸಮಾಜಕಾರ್ಯವನ್ನು ವಾಸ್ತವಿಕ ನೆಲೆಯಲ್ಲಿ ವಿಶ್ಲೇಷಿಸುವುದಾದರೆ, ಅದು ಮಾನವನ ಜೀವನವನ್ನು ಸಮಗ್ರವಾಗಿ ಕಂಡು ಆತನ ಸಮಸ್ಯೆ, ತೊಂದರೆ ತೊಡಕುಗಳನ್ನು ಪೂರ್ಣವಾಗಿ ಪರೀಕ್ಷಿಸಿ ಅವುಗಳಿಗೆ ಪೂರ್ಣ ರೂಪದ ಪರಿಹಾರಗಳನ್ನು ಕಂಡುಕೊಳ್ಳುವ ಕಾರ್ಯದಲ್ಲಿ ನಿರತವಾಗಿರುವುದರಿಂದ ಮಾನವನ ಸಾಮಾಜಿಕ ಜೀವನದೊಂದಿಗೆ, ಇತರ ಹಲವು ಬಗೆಯ ವಿಜ್ಞಾನಗಳೊಂದಿಗೆ ಹಾಗೂ ಕಲೆಗಳೊಂದಿಗೆ ಸಂಬಂಧ ಹೊಂದಿರುವುದು ಅವಶ್ಯವಾಗಿದೆ. ತನ್ನ ಉದ್ದೇಶ ಸಾಧನೆಗಾಗಿ ಅದು ಇತರ ವಿಜ್ಞಾನ ಕಲೆ, ಹಾಗೂ ವೃತ್ತಿಗಳ ನೆರವನ್ನು ಪಡೆಯಲೇ ಬೇಕಾಗುತ್ತದೆ. ಅಂತೆಯೇ, ಅದು ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಮಾನವಶಾಸ್ತ್ರ, ಸಮಾಜಶಾಸ್ತ್ರ, ನೀತಿಶಾಸ್ತ್ರ, ಮನೋವಿಜ್ಞಾನ, ಧರ್ಮಶಾಸ್ತ್ರ, ಶಿಕ್ಷಣಶಾಸ್ತ್ರ, ಕಾನೂನುಶಾಸ್ತ್ರ, ವೈದ್ಯಕೀಯಶಾಸ್ತ್ರ, ಮಾನವ ಭೂಗೋಳಶಾಸ್ತ್ರ, ಸೃಜನಾತ್ಮಕ ಸಾಹಿತ್ಯ ಮುಂತಾದ ಅಧ್ಯಯನಶಾಸ್ತ್ರಗಳ ಜೊತೆಗೆ ವೈದ್ಯವೃತ್ತಿ, ಮಾನಸೋಪಚಾರ, ನ್ಯಾಯವೃತ್ತಿ, ವಾಸ್ತುಶಿಲ್ಪ, ಶಿಕ್ಷಣ ಇತ್ಯಾದಿ ವೃತ್ತಿಗಳಿಂದ ಕೂಡ ನೆರವನ್ನು ಪಡೆಯಬೇಕಾಗುತ್ತದೆನೀ ಎಲ್ಲಾ ಅಧ್ಯಯನಶಾಸ್ತ್ರಗಳ ಮತ್ತು ವೃತ್ತಿಗಳ ಸಹಾಯದಿಂದ ಹಾಗೂ ಸಹಕಾರದಿಂದ ವಿಶಾಲವಾದ ದೃಷ್ಟಿಯನ್ನು ಸ್ಪಷ್ಟವಾದ ಕಾರ್ಯಕ್ಷೇತ್ರವನ್ನು, ವ್ಯಾವಹಾರಿಕ ಪದ್ಧತಿಯನ್ನೂ, ಪರಿಣಾಮಕರವಾದ ತಂತ್ರೋಪಾಯಗಳನ್ನು, ಮಾನವ ಬಾಂಧವ್ಯದ ಕೌಶಲ ಕಲೆಯನ್ನು ಸಮಾಜಕಾರ್ಯವು ತನ್ನಲ್ಲೇ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ. 

Read More
0 Comments

ಗ್ರಾಮೀಣ ಪ್ರದೇಶಗಳಲ್ಲಿ ತ್ಯಾಜ್ಯ ವಸ್ತುಗಳು-ವಿಲೇವಾರಿ

7/16/2017

0 Comments

 
ಘನ ಮತ್ತು ದ್ರವ ತ್ಯಾಜ್ಯ  ವಸ್ತುಗಳ ನಿರ್ವಹಣೆಯಿಂದ  ಪ್ರತಿ ಗ್ರಾಮದಲ್ಲಿ ಸ್ವಚ್ಛತೆ ಮತ್ತು  ನೈರ್ಮಲ್ಯತೆಯನ್ನು  ಕಾಪಾಡುವ ಜವಾಬ್ದಾರಿಜಿಲ್ಲಾ  ಪಂಚಾಯತಿಗಳಾದ್ದಾಗಿರುತ್ತದೆ.
​  

ಅನೈರ್ಮಲ್ಯ ಪರಿಸರ ಅನಾರೋಗ್ಯದ ಮೂಲ ಎಂಬ ಹಿರಿಯರ ಮಾತು ಸತ್ಯ. ಆರೋಗ್ಯ ಚೆನ್ನಾಗಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಜನರ ಮೂಲ ಸೌಲಭ್ಯಗಳನ್ನು ಪೂರೈಸಲು ಹಾಗೂ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆ ಉತ್ತಮ ನೈರ್ಮಲ್ಯ ಬಹಳ ಅವಶ್ಯಕವಾಗಿದೆ. ನೈರ್ಮಲ್ಯ ಕಾಪಾಡುವ ಮೂಲಕ ಅನೇಕ ಮೂಲಗಳಿಂದ ಬರುವ ಕಾಯಿಲೆಗಳನ್ನು ತಡೆಗಟ್ಟಬಹುದು ಎನ್ನುವ ಧ್ಯೇಯದೊಂದಿಗೆ ಬೆಳಗಾವಿ ಜಿಲ್ಲಾ ಪಂಚಾಯಿತಿಯು ಸಮುದಾಯ ಆಧಾರಿತ ಸಂಪೂರ್ಣ ನೈರ್ಮಲ್ಯ ಎಂಬ ಹೆಸರಿನಲ್ಲಿ ಒಂದು ಬೃಹತ್ ಆಂದೋಲನ ಆರಂಭಿಸಿದೆ.

Read More
0 Comments

ಅಣ್ಣಾ ಹಜಾ಼ರೆ ಆಂದೋಲನ: ಉಳಿದು ಹೋದ ಕೆಲವು ಪ್ರಶ್ನೆಗಳು

7/16/2017

0 Comments

 
Picture
ಅಣ್ಣ್ಣಾಹಜಾರೆ ನೇತೃತ್ವದ ಜನಲೋಕಪಾಲ್ ಮಸೂದೆ ರಚನಾ ಸಮಿತಿ ವಿವಾದಕ್ಕೆ ಸಿಲುಕಿದೆ. ಒಂದು ಕಡೆ ಈ ಸಮಿತಿಯ ಸ್ವರೂಪವೇ ನಮ್ಮ ಸಂವಿಧಾನದ ಭಾವನೆಗೆ ವಿರುದ್ಧವಾಗಿದ್ದು, ಸಂಸದೀಯ ಪ್ರಜಾಸತ್ತಾತ್ಮಕ ವಿಧಿ-ವಿಧಾನಗಳಿಗೇ ಅಪಚಾರವೆಸಗುವಂತಿದೆ ಎಂದು ಕೆಲವರು ವಾದಿಸುತ್ತಿದ್ದರೆ, ಇನ್ನೊಂದು ಕಡೆ, ಸಾರ್ವಜನಿಕ ಜೀವನದಲ್ಲಿನ ಭ್ರಷ್ಟಾಚಾರದ ವಿರುದ್ಧದ ರಾಮಬಾಣವೆಂದೇ ಪರಿಗಣಿಸಲಾಗುತ್ತಿರುವ ಈ ಮಸೂದೆಯನ್ನು ರಚಿಸುತ್ತಿರುವವರೇ ಭ್ರಷ್ಟಾಚಾರಿಗಳಾಗಿದ್ದಾರೆ ಎಂಬ ಆರೋಪಗಳನ್ನು ಮಾಡಲಾಗುತ್ತಿದೆ.

Read More
0 Comments

ವಾತ್ಸಲ್ಯಮಯಿ ಸಮಾಜ ಸೇವಕಿ: ಶ್ರೀಮತಿ ವತ್ಸಲಾ ಪ್ರಭು

7/16/2017

0 Comments

 
Picture
ಹನ್ನೆರಡು ವರ್ಷದ ಮುದ್ದು ಹುಡುಗಿ, ತನ್ನ ಓರಗೆಯವರನ್ನೆಲ್ಲಾ ಒಂದೆಡೆ ಸೇರಿಸಿಕೊಂಡು ತನಗೆ ತಿಳಿದ ಹೊಸ ವಿಷಯಗಳನ್ನು ಅವರಿಗೆ ತಿಳಿಸುತ್ತಾ ಅವರಿಗೆ ತಿಳಿದಿರುವ ವಿಷಯಗಳನ್ನು ಹಂಚಿಕೊಳ್ಳುವಂತೆ ಪ್ರೇರೇಪಿಸುತ್ತಾ ಅವರಲ್ಲಿರುವ ಪ್ರತಿಭೆಯನ್ನು ಹೊಗಳುತ್ತಾ ಅವರನ್ನು ಇನ್ನು ಹೆಚ್ಚು ವಿಷಯಗಳನ್ನು ತಿಳಿದುಕೊಳ್ಳುವಂತೆ ಪ್ರೇರೇಪಿಸುವುದು ಅವಳಿಗೆ ತುಂಬಾ ಇಷ್ಟದ ಕೆಲಸ. ಬಾಲ್ಯದಿಂದಲೇ ಉತ್ಸಾಹದ ಚಿಲುಮೆಯಾಗಿದ್ದ ಈ ಮುದ್ದು ಮುಖದ ದಿಟ್ಟ ನಿಲುವಿನ ಹುಡುಗಿಯ ಹೆಸರೇ ವತ್ಸಲಾ. ಇಂದು ಈಕೆಗೆ 76ರ ಹರೆಯ ಇಂದಿಗೂ ಅದೇ ಬತ್ತದ ಉತ್ಸಾಹ, ಯಾವುದಾದರು ಸಾಮಾಜಿಕ ಕಾರ್ಯಕ್ರಮಕ್ಕೆ ಆಮಂತ್ರಿಸಿದರೆ ಮಳೆ, ಬಿಸಿಲು ಯಾವುದಕ್ಕು ಹಿಂಜರಿಯದೆ ಸರಿಯಾದ ಸಮಯಕ್ಕೆ ಅಲ್ಲಿ ಹಾಜರ್! ``ಸುಮ್ಮನೆ ಕುಳಿತು ಕೆಲಸಕ್ಕೆ ಬಾರದ ವಿಷಯದ ಬಗ್ಗೆ ಚರ್ಚಿಸುವುದು ಮತ್ತು ಚಿಂತಿಸುವುದು ಚಿಕ್ಕ ಗಾಯವನ್ನು ಸುಮ್ಮನಿರಲು ಬಿಡದೆ ಕೆರೆದು ಹುಣ್ಣಾಗಿಸುವಂತಹ ಮೂರ್ಖತನ. ಅದರ ಬದಲಿಗೆ ಆ ಸಮಯವನ್ನು ಸಮಾಜದ ಏಳಿಗೆಗೆ ಉಪಯೋಗಿಸಿಕೊಳ್ಳುವುದರಲ್ಲಿ ಜೀವನದ ಸಾರ್ಥಕತೆ ಇದೆ'' ಎನ್ನುವುದು ವತ್ಸಲಾರ ಅಭಿಪ್ರಾಯ.

Read More
0 Comments

ಸಮುದಾಯ ಸಹಭಾಗಿತ್ವದ ಹಿಂದೆ ಮುಂದೆ...

7/16/2017

0 Comments

 
Picture
ಸಮುದಾಯ ಸಹಭಾಗಿತ್ವ ಎಂಬುದು ಈ ದಿನಗಳಲ್ಲಿ ಬರೀ ಅಭಿವೃದ್ಧಿಯ ಧ್ಯೇಯವಾಕ್ಯವಾಗೇನೂ ಉಳಿದಿಲ್ಲ. ದಶಕಗಳ ಹಿಂದೆ ಅದೇನಿದ್ದರೂ ಬರೀ ಮಾತನಾಡುವ ಮತ್ತು ದೇಣಿಗೆ ನೀಡುವ ಸಂಸ್ಥೆಗಳಿಗೆ ಸಲ್ಲಿಸುವ ಪ್ರಸ್ತಾವದಲ್ಲಿ ಬರೆಯುತ್ತಿದ್ದ ಪದ ಮಾತ್ರ ಆಗಿತ್ತು. ಕಾಲ ಕ್ರಮೇಣ ಅದರ ಪ್ರಭಾವ ಮತ್ತು ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಲಾರಂಭಿಸಿದ ಸರ್ಕಾರೇತರ ಸಂಸ್ಥೆಗಳು ಈ ವ್ಯವಸ್ಥೆಯನ್ನು ತಮ್ಮ ಕಾರ್ಯಕ್ರಮಗಳ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡವು. 

Read More
0 Comments

ಧೀರ ದೊರೆಸ್ವಾಮಿ

7/16/2017

0 Comments

 
ಡಾ.ಎಚ್.ಎಸ್. ದೊರೆಸ್ವಾಮಿಯಂಥವರನ್ನು ನೆನೆದಾಗಲೆಲ್ಲಾ ನನಗೆ ವಿ.ಸೀ. ಅವರ ಕವಿತೆಯೊಂದರ ಈ ಐದು ಸಾಲುಗಳು ನೆನಪಾಗುತ್ತವೆ.

ಮಣಿಯದಿಹ ಮನವೊಂದು
ಸಾಧಿಸುವ ಹಟವೊಂದು
ನಿಜದ ನೇರಕೆ ನಡೆವ ನಿಶ್ಚಲತೆಯೊಂದು
ಅನ್ಯಾಕೆಂದೆಂದು ಬಾಗದೆಚ್ಚರವೊಂದು
ಮರುಕಕ್ಕೆ, ಪ್ರೇಮಕ್ಕೆ ಚಿರ ತೆರೆದ ಎದೆಯೊಂದು
​

ಈ ಸಾಲುಗಳ ಸಾರಸತ್ತ್ವದ ಸಾಕಾರವೆಂದರೆ ದೊರೆಸ್ವಾಮಿಯವರು. ನೀಳವಾದ ದೇಹ, ಆಜಾನು ಬಾಹು, ಗಿಣಿ ಮೂಗಿನಂತೆ ಕೊಂಚ ಬಾಗಿದ ಮೂಗು, ಅಗಲ ಮುಖ, ವಯಸ್ಸನ್ನು ಅಲ್ಲಗಳೆವ ಹೊಳಪಿನ ಕಣ್ಣುಗಳು, ಧೀರ ಹೆಜ್ಜೆ, ಕಂಚಿನ ಕಂಠ, ಸದೃಢವಾದ ನಂಬುಗೆ, ಖಚಿತಪಡಿಸಿಕೊಂಡಾದ ಮೇಲೆ ಆಡುವ ದಿಟ್ಟ ನುಡಿ, ಯಾರಿಗೂ ಯಾವುದಕ್ಕೂ ಅಂಜದ ಧೈರ್ಯ, ಕಿರಿಯರಿರಲಿ-ಹಿರಿಯರಿರಲಿ ಎಲ್ಲರೊಡನೆಯೂ ಸಸ್ನೇಹವಾದ ಸಂವಾದ, ಶೋಷಣೆ-ಅಪಚಾರ- ಅಸತ್ಯದ ನಡತೆಯ ವಿರುದ್ಧ ಸಿಡಿದೇಳುವ, ಮುನ್ನಡೆಯುವ ಛಲ, ಇತ್ಯಾದಿ, ಸಮ್ಮಿಲನಗೊಂಡ ಮೈ-ಮನದ ಮಾನವಾಕೃತಿಯೇ ದೊರೆಸ್ವಾಮಿ. ಇವರಿಗೆ ತೊಂಬತ್ತು ಸಂವತ್ಸರಗಳು ತುಂಬಿ ಮುನ್‍ಚಾಚಿದ ವಯಸ್ಸು ಎಂದು ತಿಳಿದ, ಅವರಿಗಿಂತ ಹದಿಮೂರು ವರ್ಷ ಕಿರಿಯನಾದ, ನನಗೆ ಅಗಾಧವಾದ ಈರ್ಷ್ಯೆ. ಅವರ ಸತ್ತ್ವದಲ್ಲಿ ಒಂದಿನಿತು ನನ್ನಂಥವರಿಗೆ ಇವರು ಕೊಡಬಹುದಿತ್ತಲ್ಲವೆ ಅನ್ನಿಸುತ್ತದೆ. ಇವರನ್ನು ಹೋಗಿ ಕಾಣಲು ನಾನು ಹಿಂದು-ಮುಂದು ನೋಡುತ್ತೇನೆ; ನಾಚುತ್ತೇನೆ. ಅವರ ಕಡೆ ಕೋಲೂರಿಕೊಂಡು ಹೋಗುವುದು ಕನಿಕರದ ಕಷ್ಟವಲ್ಲವೆ?

Read More
0 Comments

ವಲಸೆ ಮತ್ತು ಮಾನವ ಹಕ್ಕುಗಳು

7/16/2017

0 Comments

 
ಮಾನವ ಸಮಾಜಜೀವಿ ಹಾಗೂ ಸಮೂಹ ಜೀವಿ. ಆತ ಒಬ್ಬಂಟಿಗನಾಗಿ ಬದುಕಲಾರ. ಹಾಗೆ ಬದುಕಿದರೂ ಹೊಟ್ಟೆಯ ಆವಶ್ಯಕತೆ ನೀಗಿಸಬೇಕು. ಬಡತನದಲ್ಲಿ ಜೀವನ ಸಾಗಿಸುವುದು ಹೊಟ್ಟೆಗಾದರೆ ತಂದೆ-ತಾಯಿಗಳ ಪಾಲನೆ-ಪೋಷಣೆ ಮಾಡಿಕೊಂಡು ಹಂತ-ಹಂತವಾಗಿ ಅಭಿವೃದ್ಧಿ ಕಾಣಬೇಕೆಂಬ ಆಕಾಂಕ್ಷೆ ಪ್ರತಿಯೊಬ್ಬರಲ್ಲೂ ಇರುತ್ತದೆ. ತನ್ನ ಸ್ವದೇಶದಲ್ಲಿ ಇಂತಹ ತೃಪ್ತಿ ಸಿಗದೆ ಹೋದಾಗ ವಿದೇಶಗಳನ್ನು ಆಶ್ರಯಿಸಿ ಅರೆಹೊಟ್ಟೆ ಅರೆಬಟ್ಟೆಯ ತಾಪತ್ರಯ ನೀಗಿಸಿಕೊಳ್ಳುವುದಕ್ಕಾಗಿ ಹುಟ್ಟೂರಿನಿಂದ ಕಾಲ್ತೆಗೆಯುವುದು ಸಹಜ. ಆದರೆ ಪ್ರಾಚೀನ ನಾಗರಿಕತೆಯಲ್ಲಿ ಮಾನವ ಜೀವನ ಸುಧಾರಣೆಗಾಗಿ ನದಿ ತೀರಗಳನ್ನರಸಿ ವಲಸೆ ಹೋಗುತ್ತಿದ್ದ, ಆದರೆ ಇಂದಿನ ಪರಿಸ್ಥಿತಿಗಳು ಭೋಗವನ್ನರಸಿ ವಲಸೆ ಹೋಗುವ ಸ್ಥಿತಿಗಳು ನಿರ್ಮಾಣಗೊಂಡಿವೆ.

Read More
0 Comments

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಪ್ರಾರಂಭಿಕ ಪರಿಚಯ

7/16/2017

0 Comments

 
ಪೀಠಿಕೆ:- 
ಈ ದೇಶದ ಕಡುಬಡವರು ಹಸಿವಿನ ಯಾತನೆ ಮತ್ತು ನರಳುವಿಕೆಯಿಂದ ಮುಕ್ತರಾದಾಗ ಮಾತ್ರ ಭಾರತ ನಿಜವಾದ ಸ್ವಾತಂತ್ರ್ಯವನ್ನು ಹೊಂದುತ್ತದೆ" ಎಂದು ಗಾಂಧೀಜಿಯವರು ಹೇಳಿದ ಮಾತಿನಂತೆ ಸಾದರಪಡಿಸಿ ನಿರುದ್ಯೋಗದ ಪ್ರಮಾಣವನ್ನು ಕಡಿಮೆ ಮಾಡಬೇಕು. ಅಂದರೆ ದುಡಿಯುವ ಶಕ್ತಿ ಇರುವ ಜನರಿಗೆ ದುಡಿದು ಸಂಪಾದಿಸುವ ಅವಕಾಶಗಳನ್ನು ಕಲ್ಪಿಸಿಕೊಡಬೇಕು.

Read More
0 Comments

ಭಾರತೀಯ ದತ್ತಕ ಪದ್ಧತಿ

7/16/2017

0 Comments

 
ಹೆಣ್ಣಿನ ಸಾರ್ಥಕತೆ ಇರುವುದು ತಾಯಿಯಾಗುವುದರಲ್ಲಿ ಎನ್ನುವ ಮಾತು ಇಂದು ನಿನ್ನೆಯದಲ್ಲ. ಪ್ರತಿಯೊಬ್ಬ ಹೆಣ್ಣಿನ ಬಯಕೆಯೂ ಇದೇ ಆಗಿರುತ್ತದೆ. ಅದಕ್ಕಾಗಿ ಕಾಯುತ್ತಾಳೆ, ಆ ಸಂಭ್ರಮಕ್ಕಾಗಿ ತನ್ನ ಒಡಲಿನ ರಕ್ತವನ್ನೇ ಬಸಿಯುತ್ತಾಳೆ. ಆ ಮುದ್ದು ಮುಖವನ್ನು ನೋಡುತ್ತಾ ತನ್ನೆಲ್ಲ ನೋವನ್ನು ಮರೆಯುತ್ತಾಳೆ. ತಾಯಿಯಾಗುವ ಪ್ರತಿಯೊಬ್ಬ ಹೆಣ್ಣಿನ ಬಯಕೆಯ ಹಿಂದೆ ಕುಟುಂಬ ಹಾಗೂ ಸಮಾಜದ ಕಟ್ಟುಪಾಡುಗಳು ನೆರಳಿನಂತೆ ಹಿಂಬಾಲಿಸುತ್ತವೆ

ಕೆಲವರಿಗೆ ತಾಯಿಯಾಗುವ ಆಸೆ ಕೈಗೂಡುವುದೇ ಇಲ್ಲ. ಅದಕ್ಕಾಗಿ ಅಂತಹವರು ಪರಿತಪಿಸುತ್ತಾ ಕೂಡುವ ಬದಲು ಮಗುವೊಂದನ್ನು ದತ್ತು ತೆಗೆದುಕೊಂಡು ಅದಕ್ಕೊಂದು ಜೀವನಾಧಾರ ಕಲ್ಪಿಸುವುದು ಒಂದು ಒಳ್ಳೆಯ ಧ್ಯೇಯ.

Read More
0 Comments

ದಾಸ್ಯ ಮತ್ತು ಭ್ರಷ್ಟಾಚಾರ ಮುಕ್ತ ರಾಷ್ಟ್ರಕ್ಕಾಗಿ ಹೋರಾಡುವ ಡಾ. ದೊರೆಸ್ವಾಮಿ - ಸಾಮಾಜಿಕಕಾರ್ಯ ಮತ್ತು ನಾನು

7/16/2017

0 Comments

 
Picture
ಕೊಳಚೆ ವಾತಾವರಣದಲ್ಲಿರುವ ಇವರನ್ನು ಊರ ಹೊರಗೆ ಓಡಿಸಿದರೆ, ಇವರು  ಸುಧಾರಿಸುವುದಾದರೂ ಹೇಗೆ? ಸುಧಾರಿಸಿರುವ ಜನರೊಡನೆ ಇದ್ದರೆ ಇವರೂ ಕಾಲಕ್ರಮದಲ್ಲಿ ಬದಲಾವಣೆಯಾಗಬಹುದು ಎಂಬುದು ನನ್ನ  ವಿಚಾರ. ಆದ್ದರಿಂದ ಅವರನ್ನೆಲ್ಲ ಅಲ್ಲಿಉಳಿಸಿಕೊಳ್ಳುವ ವಿಚಾರ ಮಾಡಿದೆ. ಎಚ್.ಎಸ್. ದೊರೆಸ್ವಾಮಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರರು
 
ನಾನು ಹೈಸ್ಕೂಲಿನಲ್ಲಿದ್ದಾಗ ವಿಶ್ವೇಶ್ವರಪುರದಲ್ಲಿ `ಕಿರಿಯ ತರುಣರ ಸಂಘ' ಎಂಬ ಸಂಸ್ಥೆಯನ್ನು ನಾವೆಲ್ಲ ಸೇರಿ ಆರಂಭ ಮಾಡಿದೆವು. ನಮಗಾಗಲೇ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳ ಪರಿಚಯವಾಗಿತ್ತು. ಆದ್ದರಿಂದ ನಾವು ನಮ್ಮ ಸಂಘದ ವತಿಯಿಂದ ಬೆಂಗಳೂರಿನಲ್ಲಿರುವ ಸಾಹಿತಿಗಳನ್ನು ನಮ್ಮ ಸಂಘಕ್ಕೆ ಕರೆತಂದು, ಅವರ ಪರಿಚಯ ಮಾಡಿಕೊಡುವುದರ ಜೊತೆಗೆ ಅವರ ಅನೇಕ ಉಪನ್ಯಾಸಗಳನ್ನು ಏರ್ಪಡಿಸುತ್ತಿದ್ದೆವು. ಬೇಸಿಗೆಯ ರಜೆಯಲ್ಲಿ ಓದುವ ಹವ್ಯಾಸವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಲು ಹಾಗೂ ಕ್ರೀಡೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡಲು ಪ್ರಯೋಗಗಳನ್ನು ಮಾಡಿದೆವು.

Read More
0 Comments

ಬೆಟ್ಟದ ನೆಲ್ಲಿಕಾಯಿ ಮತ್ತು ಸಮುದ್ರದ ಉಪ್ಪು...

7/7/2017

0 Comments

 
ನಾವು ಬದುಕಿ ಮಣ್ಣಾಗುವ ಈ ನಾಲ್ಕಾರು ವರ್ಷಗಳ ಜೀವನದಲ್ಲಿ ಯಾವುದು ಮುಖ್ಯ? ಇದಲ್ಲ, ಇದಲ್ಲ ಎಂದು ಹಣ, ಆಸ್ತಿ-ಪಾಸ್ತಿಗಳನ್ನು ಅಂತಸ್ತು ಅಧಿಕಾರಗಳನ್ನು ಹೊಡೆದು ಪಟ್ಟಿಯಿಂದ ತೆಗೆದು ಬಿಡಬಹುದು. ಹಾಗಾದರೆ ಕಡೆಯಲ್ಲಿ ಉಳಿಯುವುದಾದರೂ ಯಾವುದು? ಈ ಹುಡುಗಿ ಹೇಳಿದಳು `ಮನುಷ್ಯ ಸಂಬಂಧಗಳು' ಈಕೆ ಹೀಗೆ ಹೇಳಲು ಕಾರಣವಿತ್ತು. ಮೂವತ್ತು ವರ್ಷಗಳ ಹಿಂದೆ ತನ್ನ ಹೆತ್ತವರ ಹೆಸರನ್ನೂ ಸಹ ನೆನಪಿಟ್ಟುಕೊಳ್ಳಲಾರದಷ್ಟು ಚಿಕ್ಕವಳಾಗಿದ್ದಾಗ ನಿಂತಿದ್ದ ರೈಲನ್ನು ಹತ್ತಿದಳು. ರೈಲು ಹೊರಟೇ ಬಿಟ್ಟಿತು. ದೂರದ ಊರು ಸೇರಿತು. ಆನಂತರ ಅನಾಥಾಶ್ರಮಗಳ ವಾಸ, ಬುದ್ದಿ ತಿಳಿದಾಗ ಮನುಷ್ಯ ಸಂಬಂಧಗಳ ಹುಡುಕಾಟ. ಹೀಗೆ ಬದುಕು ಸಾಗಿತು. ತನ್ನ ಜೊತೆ ಬೆಳೆದ ಸ್ನೇಹಿತರು ಅಕಸ್ಮಾತ್ತಾಗಿ ಸಿಕ್ಕಿದರಂತೂ ಈಕೆಯ ಮನಸ್ಸಿನಲ್ಲಿ ಭಾವದ ಹೊಳೆಯೇ ಹರಿದುಬಿಡುತ್ತಿತ್ತು. ಹಳೆಯ ದುಗುಡ ದುಮ್ಮಾನಗಳ ನಡುವೆ ಒಂದೋ ಎರಡೋ ಮಧುರ ನೆನಪುಗಳಿಗೆ ಸಾಕ್ಷಿಯಾಗಿ ಎದುರಾಗುತ್ತಿದ್ದರು ಈ ಸ್ನೇಹಿತರು. ಒಟ್ಟಿನಲ್ಲಿ ಒಬ್ಬರು ಮತ್ತೊಬ್ಬರಿಗೆ ಆಸರೆಯಾಗಿ ನಿಂತದ್ದು ಅಥವಾ ಸಂತೋಷದಲ್ಲಿ ಭಾಗಿಯಾಗಿದ್ದು - ಈ ನೆನಪುಗಳನ್ನು ಬಿಟ್ಟರೆ ಇನ್ನೇನು ತಾನೆ ಉಳಿದೀತು? ಇದೇ ಮುಖ್ಯವಲ್ಲ ಎಂದು ಹೊಡೆದುಹಾಕಲು ಸಾಧ್ಯವೇ? ಹಾಗಾಗಿ ಅವಳು ಸರಿಯಾಗಿಯೇ ಗುರುತಿಸಿದ್ದಳು `ಬದುಕಿನಲ್ಲಿ ಬಹು ಮುಖ್ಯವಾದದ್ದು ಸಂಬಂಧಗಳು.'

Read More
0 Comments

ಮಾತು-ಮುತ್ತು

7/7/2017

1 Comment

 
Picture
ಲಿಂಕನ್ನ ಹೆಸರನ್ನು ನೀವು ಕೇಳಿರಬೇಕು, ಕೆಲಸವನ್ನು ಕಳೆದುಕೊಂಡ, ವಿಧಾನ ಸಭೆಯ ಚುನಾವಣೆಯಲ್ಲಿ ಸೋತ, ವ್ಯಾಪಾರಪ್ರಾರಂಭಿಸಿ ಅದರಲ್ಲಿ ನಷ್ಟ ಹೊಂದಿದ, ಪತ್ನಿ ಖಾಯಿಲೆ ಬಿದ್ದು ಸತ್ತಳು, ನರಗಳ ದೌರ್ಬಲ್ಯವನ್ನು ಅನುಭವಿಸಿದ, ಸ್ಪೀಕರ್ ಹುದ್ದೆಯಚುನಾವಣೆಗೆ ನಿಂತು ಸೋತ, ಒಂದು ರಾಜಕೀಯ ಪಕ್ಷದ ಮೂಲಕ ಚುನಾವಣೆಗೆ ಸ್ಪರ್ಧಿಸಿ ಸೋತ, ಲ್ಯಾಂಡ್ ಆಫಿಸರ್ ಹುದ್ದೆಗೆ ಅರ್ಜಿಸಲ್ಲಿಸಿ ಸೋತ, `ಸೆನೆಟ್' ಶಾಸನ ಸಭೆಗೆ ಚುನಾವಣೆಯಲ್ಲಿ ಸೋತ, `ಉಪರಾಷ್ಟ್ರಪತಿ' ಪದವಿಗೆ ಸ್ಪರ್ಧಿಸಿ ಸೋತ,  ಮತ್ತೆ `ಸೆನೆಟ್'ಗೆಸ್ಪರ್ಧಿಸಿ ಸೋತ.

Read More
1 Comment

ಬೆಳಗೆರೆ ಕೃಷ್ಣಶಾಸ್ತ್ರಿ: ಶಿಕ್ಷಕ, ಸಂತ, ಪರಿವರ್ತಕ,  ಸಾತ್ವಿಕ ಶಕ್ತಿಯ ಸಂಕೇತ

7/7/2017

0 Comments

 
Picture
`ಚಿನ್ಮಯ' ಕೃಷ್ಣಶಾಸ್ತ್ರಿಗಳ ಅಭಿಮಾನಿಗಳು ಅವರಿಗೆ 1979 ರಲ್ಲಿ ಅರ್ಪಿಸಿದ ಸಂಭಾವನಾಗ್ರಂಥ. ಪ್ರೊ.ಎಂ.ವಿ. ಶ್ರೀನಿವಾಸ್ ಮತ್ತು ಡಾ.ಕೃಷ್ಣಮೂರ್ತಿ ಹಾನೂರು ಈ ಗ್ರಂಥದ ಸಂಪಾದಕರು. ಪುಸ್ತಕವನ್ನು ಕುರಿತ ಪತ್ರಿಕೆಗಳು ತಮ್ಮ ಪ್ರಶಂಸೆಯನ್ನು ವ್ಯಕ್ತಪಡಿಸಿವೆ.ಡಾ.ಹಾಮಾನಾಯಕರು `ಕಾಡು ಬೆಳದಿಂಗಳು' ಎಂಬ ಸೊಗಸಾದ ಲೇಖನವನ್ನು ಬರೆದು ಬೆಳಗೆರೆ ಕೃಷ್ಣಶಾಸ್ತ್ರಿಗಳ ಸೇವೆಯನ್ನುಶ್ಲಾಘಿಸಿದ್ದಾರೆ.

ಬೆಳಗೆರೆ ಕೃಷ್ಣಶಾಸ್ತ್ರಿಗಳು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಬೆಳಗೆರೆ ಗ್ರಾಮದಲ್ಲಿ 1916ರಲ್ಲಿ ಜನಿಸಿದರು, ಅವರ ತಂದೆ ಚಂದ್ರಶೇಖರ ಶಾಸ್ತ್ರಿಗಳು ಪ್ರಸಿದ್ದ ಆಶುಕವಿಗಳು, ದಾರ್ಶನಿಕರೂ ಆಗಿದ್ದರು, ಅವರ ಸರಳತೆ, ಸಾಹಿತ್ಯಾಸಕ್ತಿ ಮುಗ್ಧ ಮನೋಭಾವ ಹೊಂದಲು ಅವಕಾಶಮಾಡಿಕೊಟ್ಟಿದ್ದಿತು. ಕೃಷ್ಣಶಾಸ್ತ್ರಿಗಳ ತಾತ ಅಪ್ಪಣ್ಣ ಭಟ್ಟರು ಪ್ರಸಿದ್ಧ ಸಂಸ್ಕೃತ ವಿದ್ವಾಂಸರಾಗಿ ವಿದ್ವತ್ ಸಭೆಗಳಲ್ಲಿ ಸನ್ಮಾನವನ್ನು ಗಳಿಸಿಕೊಂಡಿದ್ದರು.

Read More
0 Comments

``ಪ್ರಸ್ತುತ ಸಮಾಜಕಾರ್ಯ ಶಿಕ್ಷಣದ ಕ್ಷೇತ್ರಕಾರ್ಯದಲ್ಲಿ ಬದಲಾವಣೆ ಆವಶ್ಯಕವೇ''

7/6/2017

0 Comments

 
ಸಮಾಜಕಾರ್ಯ ಶಿಕ್ಷಣವು ಒಂದು ಪ್ರತ್ಯೇಕ ವೃತ್ತಿಪರ ಶಿಕ್ಷಣವಾಗಿ  ಗುರುತಿಸಿಕೊಂಡಿದ್ದರೂ ಇಂದಿಗೂ ಸರಿಯಾದ ಮಾನ್ಯತೆ ಸಿಗದೇ ಇರುವುದು ವಿಪರ್ಯಾಸವೇ ಸರಿ. ಇದಕ್ಕೆ ಮೂಲಕಾರಣ  ಸಮಾಜಕಾರ್ಯ ಶಿಕ್ಷಣದಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ವಿಧಾನಗಳಿದ್ದಾಗಿಯೂ ಅವುಗಳ ಕ್ಷೇತ್ರಕಾರ್ಯದಲ್ಲಿನ ಆಚರಣೆಯಲ್ಲಿ ವಿಫಲತೆಗೊಂಡಿರುವುದು ಹಾಗೂ ಆಚರಣೆಯಲ್ಲಿ ದೇಶೀಕರಣಕ್ಕೆ ಬದಲಾಗಿ ಪಾಶ್ಚಾತ್ಯ ಪರಿಕಲ್ಪನೆಯನ್ನು ಆಧಾರವಾಗಿರಿಸಿಕೊಂಡಿರುವುದೇ ಆಗಿದೆ. ಆದ್ದರಿಂದ ನನ್ನ ವಾದ ಖಂಡಿತವಾಗಿಯೂ ಪ್ರಸ್ತುತ ಸಮಾಜಕಾರ್ಯ  ಕ್ಷೇತ್ರಕಾರ್ಯದಲ್ಲಿ ಬದಲಾವಣೆ ಅನಿವಾರ್ಯ ಹಾಗೂ ಆವಶ್ಯವೆನಿಸುತ್ತದೆ.

Read More
0 Comments

ಸಮಾಜಕಾರ್ಯ ವಿದ್ಯಾರ್ಥಿಗಳಿಗೊಂದು ಕೈದೀವಟಿಗೆ ದಿಗ್ಬ್ರಾಂತ ಸಮಾಜಕ್ಕೆ ಬೆಳಕಿನ ದಾರಿ: ಸಮಾಜಕಾರ್ಯ

7/6/2017

0 Comments

 
ಕನ್ನಡದಲ್ಲಿ ಸಮಾಜಕಾರ್ಯ ಸಾಹಿತ್ಯ ಎಂದ ಕೂಡಲೇ ನೆನಪಾಗುವುದು ಪ್ರೊ.ಎಚ್.ಎಂ.ಮರುಳಸಿದ್ಧಯ್ಯನವರು. `ಸಮಾಜಕಾರ್ಯ' ಎಂಬ ಪದವನ್ನು ಟಂಕಿಸಿ ಪ್ರಯೋಗಕ್ಕೆ ತಂದು ಅದು ಜನಸಾಮಾನ್ಯರ ಆಡು ಭಾಷೆಗೆ ಬರುವಂತೆ ಮಾಡಿದವರು ಪ್ರೊ.ಎಚ್.ಎಂ.ಎಂ. ಇಂದು ಸಮಾಜಕಾರ್ಯ ಕ್ಷೇತ್ರದಲ್ಲಿರುವ ಸಾವಿರಾರು ಕ್ರಿಯಾಶೀಲರ ಪ್ರೀತಿಯ ಮೇಷ್ಟ್ರು ನಮ್ಮ ಎಚ್.ಎಂ.ಮರುಳಸಿದ್ಧಯ್ಯನವರು.  ಈ ಮೇಷ್ಟ್ರು ಬರಿದೆ ಪಾಠ ಮಾಡಲಿಲ್ಲ, ವಿದ್ಯಾರ್ಥಿಗಳನ್ನು ಕ್ಷೇತ್ರ ಕಾರ್ಯಕ್ಕೆ ಒಡ್ಡಿದರು, ವಿದ್ಯಾರ್ಥಿಗಳೊಡನೆ ತಾವೂ ಕ್ಷೇತ್ರ ಕಾರ್ಯದಲ್ಲಿ ಸುತ್ತಾಡಿದರು, ಚಿಂತಕರೊಡನೆ ಕುಳಿತು ಚರ್ಚೆ ಮಾಡಿದರು, ಸಮುದಾಯಗಳೊಡನೆ ಸಂವಾದ ಮಾಡಿದರು ಅಷ್ಟೇ ಅಲ್ಲ ಇವೆಲ್ಲವನ್ನೂ ಅರ್ಥವಾಗುವ ರೀತಿಯಲ್ಲಿ ಸೊಗಸಾದ ಶೈಲಿಯಲ್ಲಿ ದಾಖಲಿಸಿದರು. ಹೀಗಾಗಿ ಸಮಾಜಕಾರ್ಯ ವಿದ್ಯಾರ್ಥಿಗಳಿಗೆ ಮತ್ತು ಸಮಾಜಕಾರ್ಯದ ಕ್ಷೇತ್ರದಲ್ಲಿರುವವರಿಗೆ ಪ್ರೊ.ಎಚ್.ಎಂ.ಮರುಳಸಿದ್ಧಯ್ಯನವರ ಕೃತಿಗಳು ಕೈದೀವಟಿಗೆಗಳಾಗಿವೆ.

Read More
0 Comments

ಸ್ವಚ್ಛ, ಹಸುರುಗುವ ಮಾದರಿ ಗ್ರಾಮ - ಮಾಲಿನಾಂಗ್

7/6/2017

0 Comments

 
Picture
ಗತೀಕರಣ, ನಗರೀಕರಣಗಳು ವ್ಯಕ್ತಿ-ಪ್ರತಿಷ್ಟೆ ಸಮಾಜವನ್ನು ಅಲ್ಲೋಲಕಲ್ಲೋಲ ಮಾಡುತ್ತಿವೆ. `ಅಭಿವೃದ್ಧಿಯ' ಬೆನ್ನಹತ್ತಿರುವ ಮನುಷ್ಯನಿಗೆ ಬೇರೇನೂ ಕಾಣದಾಗಿದೆ. ಇನ್ನು ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಅವ್ಯವಸ್ಥೆಗಳಿಗಂತೂ ಲೆಕ್ಕವೇ ಇಲ್ಲ. ಈ ಅಭಿವೃದ್ಧಿಯ ಪ್ರತಿಫಲಗಳು ಜನರಿಗೆ ಎಷ್ಟು, ಹೇಗೆ ತಲುಪುತ್ತಿವೆಯೋ ಗೊತ್ತಿಲ್ಲ. ಆದರೆ, ಪರಿಸರದ ಮೇಲೆ ಅತ್ಯಾಚಾರವೆಸಗುತ್ತಿರುವುದಂತೂ ನಿಜ. `ಅಭಿವೃದ್ಧಿ'ಯೆಂಬ ಮಾಯೆಯಿಂದ ಹೊರಸೂಸುವ ಮಾಲಿನ್ಯದಿಂದ ಇಂದು ಜೀವಿಗಳು ಜೀವಿಸಲೂ ಕೂಡ ತತ್ಪಾರವೇರ್ಪಟ್ಟಿದೆ.

Read More
0 Comments
<<Previous
Forward>>

    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9
    ಸಮಾಜಕಾರ್ಯ
    ಸಮುದಾಯ ಸಂಘಟನೆ


    Picture
    For more details

    Picture
    For more details

    Picture
    For more details

    Picture
    For more details

    Picture
    For more details

    Picture
    For more details

    Niruta Publications

    Social Work Foot Prints

    Leaders Talk

    Ramesha Niratanka


    Picture

    MHR LEARNING ACADEMY

    Get it on Google Play store
    Download App
    Online Courses

    RSS Feed

Niruta Publications Books (Dec 2025)
File Size: 756 kb
File Type: pdf
Download File



SITE MAP


Site

  • HOME
  • ABOUT US
  • BLOG​
  • HR BLOG
  • PUBLICATION WITH US
  • NIRUTA PRINTS​
  • JOIN OUR ONLINE GROUPS
  • VIDEOS​

NIRATHANKA

  • ​CSR
  • TREE PLANTATION PROJECT
  • MIGRANT WORKER RESIDENTIAL FACILITY & WELFARE MANAGEMENT SERVICES

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe


Picture
For More Details
Picture
More Details

Copyright Niruta Publications 2021,    Website Designing & Developed by: www.mhrspl.com