Niruta Publications
  • Home
  • About Us
    • Ramesha's Profile
  • List Your Book for Free
  • Publication With Us
  • Niruta Prints
    • Our Services
    • Designer Profile
  • Our Services
  • Leaders Talk
  • Social Work Blog
  • HR Blog
    • Blog
  • Books / Online Store
  • Media Mentions
    • Photos
  • Join Our Online Groups
  • Contact Us
  • Home
  • About Us
    • Ramesha's Profile
  • List Your Book for Free
  • Publication With Us
  • Niruta Prints
    • Our Services
    • Designer Profile
  • Our Services
  • Leaders Talk
  • Social Work Blog
  • HR Blog
    • Blog
  • Books / Online Store
  • Media Mentions
    • Photos
  • Join Our Online Groups
  • Contact Us
Niruta Publications

ಹೆಸರಿಗೆ ಕಾಯ್ದೆ ಮಾತ್ರ ಉದ್ಯೋಗ ಖಾತ್ರಿ! ಅನುಷ್ಠಾನಕ್ಕಿಲ್ಲ ಯಾಕ್ರೀ?!

7/16/2017

0 Comments

 
ಜಗತ್ತಿನ ಅತ್ಯಂತ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತಕ್ಕೆ ವಿಶ್ವ ಆರ್ಥಿಕ     ವ್ಯವಸ್ಥೆಯಲ್ಲಿ ಮಹತ್ವದ ಸ್ಥಾನವಿದೆ. ಜೊತೆಗೆ ಭಾರತವು ನೈಸರ್ಗಿಕವಾಗಿ ಒಂದು ಸಂಪತ್ಭರಿತವಾದ ದೇಶವಾಗಿದೆ. ಈಗ ತಾನೇ ಅಭಿವೃದ್ಧಿಯ ಮೆಟ್ಟಿಲುಗಳನ್ನ ಏರತೊಡಗಿರುವ ಭಾರತ ಒಂದು ಅಭಿವೃದ್ಧಿಶೀಲ ದೇಶವೆಂದೆ ಪರಿಗಣಿಸಲ್ಪಟ್ಟಿದೆ. ಹಾಗೆ ಸಮಶೀತೋಷ್ಣ ಹವಮಾನ ಹೊಂದಿರುವ ಭಾರತವು ವಿಪುಲ ನೈಸರ್ಗಿಕ ಮತ್ತು ಮಾನವ ಸಂಪತ್ತಿನೊಂದಿಗೆ  ಬಡಜನರಿಂದ ಕೂಡಿದ ಶ್ರೀಮಂತ ರಾಷ್ಟ್ರ ಎಂದು ಬಣ್ಣಿಸಲ್ಪಟ್ಟಿದೆ.
ಭಾರತದಲ್ಲಿ ಬಡತನ ಎಂಬುದು ಒಂದು ಜ್ವಲಂತ ಸಮಸ್ಯೆಯಾಗಿದ್ದು ಅದು ಇತರೆ ಹಿಂದುಳಿದ ರಾಷ್ಟ್ರಗಳಂತೆ ಭಾರತವನ್ನು ಹತಾಶೆಯ ಪರಿಸ್ಥಿತಿಗೆ ತಳ್ಳಿದೆ. ಅನಕ್ಷರತೆ, ಹಸಿವು, ನೋವು, ನರಳುವಿಕೆ, ಪೌಷ್ಟಿಕಾಂಶದ ಕೊರೆತೆ ಇವೆ ಮುಂತಾದ ಪರಿಸ್ಥಿತಿಗಳು ಭಾರತದಲ್ಲಿ ಸರ್ವೇಸಾಮಾನ್ಯವಾದ ಸಂಗತಿಗಳಾಗಿವೆ. ಹೊಟ್ಟೆ ಬಿರಿಯುವಷ್ಟು ತಿಂದು ಕೊಬ್ಬಿರುವ ಅಲ್ಪಸಂಖ್ಯೆಯ ಜನರು ಒಂದು ಕಡೆಯಾದರೆ, ದಿನದ ಒಂದು ಹೊತ್ತಿನ ತುತ್ತಿಗೂ ಗತಿ ಇಲ್ಲದ ಅದೆಷ್ಟೋ ಕೋಟಿ ಕೋಟಿ ಜನರಿಂದ ಕೂಡಿದ ದ್ವಂದ್ವ ಆರ್ಥಿಕ ವ್ಯವಸ್ಥೆ ಭಾರತದ್ದಾಗಿದೆ. 

ಸ್ವಾತಂತ್ರ್ಯ ಬಂದು 5 ದಶಕಗಳು ಪೂರ್ಣಗೊಂಡಿದ್ದರೂ ಬಡತನ ಇಷ್ಟೊಂದು ಅಘಾಧ ಪ್ರಮಾಣದಲ್ಲಿರುವುದು ಆತಂಕಕಾರಿ ಪರಿಸ್ಥಿತಿಯೇ ಸರಿ. ಭವ್ಯ ಭಾರತದ ಭವಿಷ್ಯವಿರುವುದು ಗ್ರಾಮೀಣಾಭಿವೃದ್ಧಿಯಲ್ಲಿ ಅಂದರೆ ಹಳ್ಳಿಗಳ ಅಭಿವೃದ್ಧಿಯಾಗದ ಹೊರತು ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಎಂಬ ಗಾಂಧೀಜಿಯವರ ಚಿಂತನಗೆ ಪೂರಕವೆಂಬಂತೆ ವಿವಿಧ ಕಾಲ ಘಟ್ಟಗಳಲ್ಲಿ ಆಡಳಿತ ನಡೆಸಿದ ವಿವಿಧ ಸರ್ಕಾರಗಳು ರಾಜಕೀಯ ಪಕ್ಷಗಳು ಪಂಚವಾರ್ಷಿಕ ಯೋಜನೆಗಳುದ್ದಕ್ಕೂ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರುತ್ತಿವೆ ಎಂಬ ವಿಚಾರ ವಾಸ್ತವಿಕ. ಪ್ರಸ್ತುತ ಕೇಂದ್ರದ ಗೌರವಾನ್ವಿತ ಪ್ರಧಾನಿಗಳಾದ ಡಾ|| ಮನಮೋಹನ್ ಸಿಂಗ್ ಹಾಗೂ ಯು.ಪಿ.ಎ. ಅಧ್ಯೆಕ್ಷಿಣಿಯವರಾದ ಶ್ರೀಮತಿ ಸೋನಿಯಾ ಗಾಂಧಿಯವರ ನೇತೃತ್ವದ ಯು.ಪಿ.ಎ. ಸರ್ಕಾರವು ಗ್ರಾಮೀಣ ಬಡತನ ನಿರ್ಮೂಲನೆ ಹಾಗೂ ನಿರುದ್ಯೋಗ ನಿವಾರಣೆಗಾಗಿ  ಮತ್ತು ಗ್ರಾಮೀಣ ಬಡಜನರು ಉದ್ಯೋಗವನ್ನರಸಿ ನಗರ ಪ್ರದೇಶಗಳಿಗೆ ವಲಸೆ ಹೊಗುವುದನ್ನ ತಡೆದು ತಾವು ಇರುವಲ್ಲಿಯೇ ಉದ್ಯೋಗ ಕಲ್ಪಿಸಿ ಆಹಾರ ಭದ್ರತೆಯೊಂದಿಗೆ ದೀರ್ಘಕಾಲ ಬಾಲಿಕೆ ಬರುವ ಸಂಪನ್ಮೂಲಗಳನ್ನು ಸೃಜಿಸಿ ಜೀವನೋಪಾಯ ಮಾರ್ಗಗಳನ್ನ ಕಲ್ಪಿಸಿಕೊಡುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಮಾಡಿದ ಮಹತ್ವಕಾಂಕ್ಷೆಯ ಸಂಕಲ್ಪದ ಫಲವೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿಯೋಜನೆ 2005 ಈ ಮಹತ್ವಪೂರ್ಣ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಯೋಜನೆಯನ್ನು ಶಾಸನಾತ್ಮಕವಾಗಿ ಕಾಯ್ದೆ ರೂಪದಲ್ಲಿ ಜಾರಿಗೊಳಿಸಿದೆ.

ವಿಶೇಷವೇನೆಂದರೆ ಗ್ರಾಮಗಳ ಅಭಿವೃದ್ಧಿಯಲ್ಲಿ ದೇಶದ ಅಭಿವೃದ್ಧಿ ಕಲ್ಪನೆಯನ್ನು ಕಂಡುಕೊಂಡಿದ್ದ ರಾಷ್ಟ್ರಪಿತರ ನಾಮಾಂಕಿತವನ್ನು ಅವರ 140ನೇ ಜನ್ಮದಿನದ ಸ್ಮರಣಾರ್ಥವಾಗಿ ಕೇಂದ್ರದ ಸಂಸತ್ತಿನ ಸಮ್ಮತಿಯೊಂದಿಗೆ  ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಎಂಬುದಾಗಿ ಮರುನಾಮಕರಣ ಮಾಡಿದ್ದು ನಿಜಕ್ಕೂ ಶ್ಲಾಘನೀಯವೇ ಸರಿ.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ದೇಶದ ವಿವಿಧ ರಾಜ್ಯಗಳು ಅನುಷ್ಠಾನಗೊಳಿಸುತ್ತಿದ್ದು ಪ್ರಾದೇಶಿಕ ಭಿನ್ನತೆ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅಧಿನಿಯಮಕ್ಕೆ ಪೂರಕವಾಗಿ ನಿಯಮಗಳನ್ನು ರೂಪಿಸಿಕೊಂಡಿವೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯವು ಕೂಡ  ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕರ್ನಾಟಕ ಎಂಬ ಹೆಸರಿನಲ್ಲಿ ದಿನಾಂಕ 08/02/2007 ರ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿದೆ. ಅಂದಿನಿಂದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕರ್ನಾಟಕದಲ್ಲಿ ಅನುಷ್ಟಾನಗೊಂಡಿರುವುದು ಸ್ವಾಗತಾರ್ಹ ವಿಷಯ.

ಮೊದಲ ಹಂತದಲ್ಲಿ ರಾಜ್ಯದ ಐದು ಜಿಲ್ಲೆಗಳ ಮೂವತ್ತೆರೆಡು ತಾಲ್ಲೂಕುಗಳನ್ನು ಡಾ|| ನಂಜುಂಡಪ್ಪ ವರದಿಯ ಸೂಚ್ಯಾಂಕದ ಆಧಾರದಂತೆ ಆಯ್ಕೆ ಮಾಡಲಾಗಿದೆ. ಅವುಗಳಲ್ಲಿ ಪ್ರಮುಖವಾಗಿ ರಾಜ್ಯದ ಬೀದರ್, ಗುಲ್ಬರ್ಗ, ರಾಯಚೂರು, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ 2006-07 ನೇ ಸಾಲಿನಿಂದ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಮುಂದುವರೆದು 2007-08 ರ ಆರ್ಥಿಕ ವರ್ಷದಿಂದ 2ನೇಯ ಹಂತದಲ್ಲಿ ಹಾಸನ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿ, ಹಾಗೂ ಬಳ್ಳಾರಿ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಒಟ್ಟಾರೆ ರಾಜ್ಯದ 11 ಜಿಲ್ಲೆಗಳಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಅನುಷ್ಠಾನಗೊಳಿಸಿ ಈಗ ಮತ್ತೆ ಉಳಿದ 18 ಜಿಲ್ಲೆಗಳಲ್ಲಿ ಈ ಯೋಜನೆ ದಿನಾಂಕ 01-04-2008 ರಿಂದ ಜಾರಿಗೆ ಬಂದಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ವಿಲ್ ಫ್ರೆಡ್ ಡಿಸೋಜ ರವರು ತಮ್ಮ ಲೇಖನದಲ್ಲಿ ಇಡೀ ರಾಜ್ಯಕ್ಕೆ ಬಂದ ಉದ್ಯೋಗ ಖಾತರಿ ಯೋಜನೆಯಿಂದ ಯಾರಿಗೆ ಲಾಭ? ಎಂಬ ಶೀರ್ಷಿಕೆ ಅಡಿಯಲ್ಲಿ ಎನ್.ಆರ್.ಇ.ಜಿ. ಯೋಜನೆಯ ಅನುಷ್ಠಾನ ಕುರಿತು ಚರ್ಚಿಸುತ್ತಾ ಕೇಂದ್ರ ಸರ್ಕಾರದ ಮಹತ್ವದ ಕನಸಾದ ಈ ಯೋಜನೆಗೆ ರಾಜ್ಯ ಸರ್ಕಾರವು ಮಹತ್ವವನ್ನು ನೀಡುತ್ತಿಲ್ಲ. ಈ ಯೋಜನೆಗೆ ಸಂಬಂಧಿಸಿದಂತೆ 2ನೇ ಹಂತದಲ್ಲಿ ಕರ್ನಾಟಕದ ಹಿಂದುಳಿದ ಜಿಲ್ಲೆಗಳಾದ ಬಿಜಾಪುರ, ಬಾಗಲಕೋಟೆ, ಕೊಪ್ಪಳ ಚಾಮರಾಜನಗರ, ಕೋಲಾರ ಮುಂತಾದ ಜಿಲ್ಲೆಗಳನ್ನು ಹೊರತುಪಡಿಸಿ ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಮತ್ತು ಬೆಳಗಾವಿ ಮುಂತಾದ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡಿರುವುದರಿಂದ ರಾಜ್ಯ ಸರ್ಕಾರ ಈ ಯೋಜನೆಗೆ ಎಷ್ಟು ಮಹತ್ವ ಕೊಟ್ಟಿದೆ ಎಂದು ತಿಳಿದು ಬರುತ್ತದೆ. ಪ್ರಮುಖವಾಗಿ 2ನೇ ಹಂತದಲ್ಲಿ ಆಯ್ಕೆಯಾಗಿರುವ ಜಿಲ್ಲೆಗಳಿಗೆ ಕೂಲಿಕಾರರನ್ನು ಆಮದು ಮಾಡಿಕೊಂಡು ಕಾಮಗಾರಿಗಳನ್ನು ಆರಂಭಿಸುವ ಅಗತ್ಯ ಇತ್ತಾ? ಅಲ್ಲದೆ ಕರ್ನಾಟಕದ ಡೆಪ್ಯೂಟಿ ಅಕೊಂಟ್ಸ್ ಜನರಲ್ ವಿ.ಜಿ. ಜಯರಾಮನ್ ರವರು 04-12-2007 ರ ತಮ್ಮ ವರದಿಯಲ್ಲಿ ಈ ಯೋಜನೆಗೆ ಮೀಸಲಿದ್ದ ಹಣವನ್ನು ಬೇರೆ ಬೇರೆ ಉದ್ದೇಶಗಳಿಗೆ ಬಳಸಲಾಗಿದೆ ಎಂಬ ಅಂಶವನ್ನು ಗುರುತಿಸಿದ್ದಾರೆ. ಈ ಆಧಾರದ ಮೇಲೆ ಕರ್ನಾಟಕ ಸರ್ಕಾರವು ಈ ಯೋಜನೆಗೆ ಯಾವುದೇ ಮಹತ್ವವನ್ನು ಕೊಟ್ಟಂತೆ ಕಾಣುತ್ತಿಲ್ಲ ಎಂಬುದು ಡಿಸೋಜ ರವರ ಅಭಿಪ್ರಾಯ.
 
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿನ ವೈಫಲ್ಯಗಳು ಮತ್ತು ಸವಾಲುಗಳು
ಸಂಧಾನ ಮಾಡಲು ಬಾರದ ವಿಷಯಗಳು:- ಒಂದು ಆರ್ಥಿಕ ವರ್ಷದಲ್ಲಿ ಉದ್ಯೋಗ ಬಯಸುವ ಪ್ರತಿ ನೋಂದಾಯಿತ ಕುಟುಂಬಕ್ಕೆ ನೂರು ದಿನಗಳಿಗೆ ಕಡಿಮೆ ಇಲ್ಲದಂತೆ ಅಕುಶಲ ಕೆಲಸವನ್ನು ಒದಗಿಸಬೇಕು. ಕನಿಷ್ಟ 15 ದಿನಗಳಿಗೊಮ್ಮೆ ಕೂಲಿಯನ್ನು ಪಾವತಿಸತಕ್ಕದ್ದು. ಮಹಿಳೆಯರಿಗೆ ಮತ್ತು ಪುರುಷರಿಗೆ ಸಮಾನ ಕೂಲಿಯನ್ನು ಪಾವತಿಸಬೇಕು. ಪಂಚಾಯಿತಿ ಅನುಮೋದಿಸುವ ಕಾಮಗಾರಿಗಳನ್ನು ಮಾತ್ರ ತೆಗೆದುಕೊಳ್ಳಬೇಕು ಈ ಅಂಶಗಳನ್ನು ಗಮನಿಸಿದಾಗ ವಾಸ್ತವಿಕವಾಗಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿನ ವೈಫಲ್ಯಗಳನ್ನು ಮತ್ತು ಯೋಜನೆಗೆ ಇರುವ ಪ್ರಮುಖ ಸವಾಲುಗಳನ್ನು ಗಮನಿಸಬಹುದು.

ಕಾಮಗಾರಿ ನಡೆಯುವ ಸ್ಥಳದಲ್ಲಿ ಅನುಸರಿಸಬೇಕಾದ ಕ್ರಮಗಳು:- ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕಾಯಿದೆಯ ಷೆಡ್ಯೊಲ್ 2 ಸೆಕ್ಷನ್ (27-28) ರ ಪ್ರಕಾರ ಕೆಲಸ ನಡೆಯುವ ಸ್ಥಳದಲ್ಲಿ ಈ ಕೆಳಕಂಡ ಸೌಲಭ್ಯಗಳನ್ನು ಒದಗಿಸಬೇಕಾಗಿದೆ.  ಕಾಮಗಾರಿ ಸ್ಥಳದಲ್ಲಿ ಕುಡಿಯಲು ಶುದ್ಧವಾದ ನೀರು ಮತ್ತು ನೆರಳು.- ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು (ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ).- ಕಾಮಗಾರಿ ಸ್ಥಳದಲ್ಲಿ 6 ವರ್ಷಕ್ಕಿಂತ ಕೆಳಗಿನ 5 ಕ್ಕೂ ಹೆಚ್ಚು ಮಕ್ಕಳಿದ್ದರೆ ಅವರನ್ನು ನೋಡಿಕೊಳ್ಳಲು ಒಬ್ಬ ಮಹಿಳೆಯನ್ನು ನೇಮಿಸಬೇಕು.  ಕಾಮಗಾರಿ ಸ್ಥಳದಲ್ಲಿ ಪ್ರಥಮ ಚಿಕಿತ್ಸಾ ಸೌಲಭ್ಯವನ್ನು ಒದಗಿಸಬೇಕು. ಈ ಸೌಲಭ್ಯಗಳಿಗಾಗಿ ಖರ್ಚು ಮಾಡಿದ ಹಣವನ್ನು ಪ್ರತ್ಯೇಕ ದಾಖಲೆಗಳಲ್ಲಿ ನಿರ್ವಹಿಸಬೇಕು ಎಂಬ ಮಾಹಿತಿ ಕಾಯಿದೆಯಲ್ಲಿದೆ. ಆದರೆ ವಾಸ್ತವದಲ್ಲಿ ಈ ಸೌಲಭ್ಯಗಳು ಉದ್ಯೋಗ ಖಾತರಿ ಫಲಾನುಭವಿಗಳಿಗೆ ಎಳ್ಳಷ್ಟು ಸಿಗುತ್ತಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಸುಧಾನಾರಾಯಣ್ ರವರು 'women and childcare' ಎಂಬ ಶೀರ್ಷಿಕೆಯಲ್ಲಿ ಎನ್.ಆರ್.ಇ. ಜಿ. ಯೋಜನೆಯಡಿಯಲ್ಲಿ ನಡೆಯುವ ಕಾಮಗಾರಿಗಳಲ್ಲಿ ಮಹಿಳೆಯರು ಭಾಗವಹಿಸುವಿಕೆ ಮತ್ತು ಕಾಮಗಾರಿ ಸ್ಥಳಗಳಲ್ಲಿನ ಸೌಲಭ್ಯಗಳನ್ನು ಕುರಿತು ಚರ್ಚಿಸಿದ್ದಾರೆ. ಇವರು ತಮಿಳುನಾಡಿನಲ್ಲಿ ಅಧ್ಯಯನ ಕೈಗೊಂಡಾಗ ಅಲ್ಲಿನ  ಯುವ   ತಾಯಂದಿರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಚಿಕ್ಕ ಮಕ್ಕಳ ಪಾಲನೆಗೆ ಸಂಬಂಧಿಸಿದಂತೆ ಯಾವುದೇ ಸೌಲಭ್ಯಗಳು ಇಲ್ಲದಿರುವುದು ಬಹುತೇಕ ಮಹಿಳೆಯರಿಗಿರುವ ಬಹು ದೊಡ್ಡ ಸಮಸ್ಯೆಯಾಗಿದೆ. ಇದರಿಂದಾಗಿ ಮಹಿಳೆಯರು ಈ ಯೋಜನೆಯಿಂದ ಹೊರ ಉಳಿದಿದ್ದಾರೆ ಎಂದು ತಿಳಿಸಿದ್ದಾರೆ. ಇದೇ ರೀತಿ ಕರ್ನಾಟಕದಲ್ಲೂ ಸಹ ಅನೇಕ ಜಿಲ್ಲೆಗಳಲ್ಲಿ ಈ ಸಮಸ್ಯೆ ಮಹಿಳೆಯನ್ನ ಕಾಡತೊಡಗಿದೆ.

ನಿರುದ್ಯೋಗ ಭತ್ಯೆ:- ಕಾಯಿದೆಯ ಯೋಜನೆಯಡಿಯಲ್ಲಿ ನೋಂದಾಯಿತ ಕೆಲಸಗಾರರಿಗೆ ಉದ್ಯೋಗ ನೀಡಿಲ್ಲದ ಪಕ್ಷದಲ್ಲಿ 15 ದಿನಗಳ ಒಳಗಾಗಿ ಅಥವಾ ಮುಖಂಡ ಅರ್ಜಿಯಲ್ಲಿ ಸೂಚಿಸಿದ ದಿನಾಂಕ ಇವುಗಳಲ್ಲಿ ಯಾವುದು ನಂತರವೋ ಅದರ ಒಳಗಾಗಿ ಕೂಲಿ ಪಾವತಿಸದಿದ್ದಲ್ಲಿ ನೋಂದಾಯಿತ ಕೆಲಸಗಾರರು ಕೂಲಿ ಪಾವತಿ ಅಧಿನಿಯಮ 1936 (4/1936) ರ ಅನ್ವಯ ಪರಿಹಾರ ಪಡೆಯುವ ಹಕ್ಕು ಹೊಂದಿರುತ್ತಾರೆ. ಇದರ ಅನ್ವಯ ನಿರುದ್ಯೋಗ ಭತ್ಯೆಗಾಗಿ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಬೇಕು. ಈ ಅರ್ಜಿಯನ್ನು ಪರಿಶೀಲಿಸಿ ಅಗತ್ಯ ವಿವರಗಳೊಂದಿಗೆ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿಯು ಕಾರ್ಯಕ್ರಮ ಅಧಿಕಾರಿಗಳಿಗೆ ಸಲ್ಲಿಸತಕ್ಕದ್ದು ಇವರು ಇವುಗಳನ್ನು ಪರಿಶೀಲಿಸಿ ಅರ್ಹರಿದ್ದಲ್ಲಿ ನಿರುದ್ಯೋಗ ಭತ್ಯೆ ಮಂಜೂರು ಮಾಡಬೇಕು ಅಥವಾ ಅರ್ಹರಿಲ್ಲದಿದ್ದಲ್ಲಿ ಅರ್ಜಿಯನ್ನು ತಿರಸ್ಕರಿಸಿ ಹಿಂಬರಹ ನೀಡಬೇಕು ಆದರೆ ಇಂತಹ ಕಾರ್ಯ ಪ್ರವೃತ್ತಿಗಳು ಕರ್ನಾಟಕದ ಯಾವೊಂದು ಜಿಲ್ಲೆಗಳಲ್ಲೂ ಸಹಾ ಇಂತಹದೊಂದು ಪ್ರಕರಣಗಳು ಬೆರಳೆಣಿಕೆಯಷ್ಟು ಗೋಚರಿಸದಿರುವುದು ಯೋಜನೆಯ ಫಲಾನುಭವಿಗಳ ಅಜ್ಞಾನವೇ ಮೂಲ ಕಾರಣ.

ಕಾಮಗಾರಿಗಳಿಗೆ ಆದ್ಯತೆ:- ಯೋಜನೆಯನ್ವಯ ಗ್ರಾಮೀಣ ಬಡಜನರ ಆಹಾರ ಭದ್ರತೆಯೊಂದಿಗೆ ದೀರ್ಘಕಾಲ ಬಾಳಿಕೆ ಬರುವ ಸಂಪನ್ಮೂಲಗಳನ್ನು ಸೃಜಿಸಿ ಜೀವನೋಪಾಯ ಮಾರ್ಗ ಬಲಪಡಿಸುವ ಯೋಜನೆಗಳಿಗೆ ಆದ್ಯತೆ ನೀಡಬೇಕಾಗಿದ್ದು ಅವುಗಳಲ್ಲಿ ನೀರಿನ ಸಂಗ್ರಹಣೆ, ಅಂತರ್ಜಲ ಅಭಿವೃದ್ದಿ ಪಡಿಸುವುದು, ಮಳೆ ನೀರು ಕೊಯ್ಲು, ಬರತಡೆಗಟ್ಟುವುದು, ಅರಣ್ಯೀಕರಣ, ಸಸಿ ನೆಡುವುದು, ಕಿರು ಮತ್ತು ಸಣ್ಣ ಕಾಮಗಾರಿಗಳು ಸೇರಿದಂತೆ ಕೆರೆಗಳ ಹೂಳು ತೆಗೆಯುವುದು, ನೀರು ನಿಂತ ಪ್ರದೇಶದಲ್ಲಿ ಚರಂಡಿಯು ಸೇರಿದಂತೆ ಪ್ರವಾಹ ನಿಯಂತ್ರಣ ಮತ್ತು ಸಂರಕ್ಷಣೆಯ ಕಾಮಗಾರಿಗಳು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಜಮೀನುಗಳ ಅಭಿವೃದ್ದಿ ಇವೇ ಮೊದಲಾದುವುಗಳಾಗಿವೆ. ಹಾಗೂ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಒಂದು ವರ್ಷದಲ್ಲಿ ತೆಗೆದುಕೊಳ್ಳುವ ಎಲ್ಲಾ ಕಾಮಗಾರಿಗೆ ಯೋಜಿಸುವ ಮೊತ್ತದ ಕನಿಷ್ಟ ವೆಚ್ಚದ ಶೇಕಡ 20 ರಷ್ಟನ್ನು ಗಿಡ ನೆಡುವ ಕಾರ್ಯಕ್ರಮಕ್ಕಾಗಿ ವಿನಿಯೋಗಿಸಬೇಕು ಹಾಗೆ ರಸ್ತೆಯ ಅಭಿವೃದ್ದಿಯನ್ನು ಕೊನೆಯ ಆದ್ಯತೆಯಾಗಿ ಒಟ್ಟು ಮೊತ್ತದ ಶೇ 10 ರಷ್ಟಕ್ಕಿಂತ ಕಡಿಮೆ ಮೊತ್ತದಲ್ಲಿ ತೆಗೆದುಕೊಳ್ಳಬೇಕು ಆದರೆ ವಿಪರ್ಯಾಸವೆಂಬಂತೆ ದೀರ್ಘಕಾಲ ಬಾಳಿಕೆ ಬರುವ ಕಾಮಗಾರಿಗಳ ಕಡೆ ಹೆಚ್ಚು ಗಮನ ಹರಿಸದೆ ಕೇವಲ ಜನರಿಗೆ ಉದ್ಯೋಗ ನೀಡುವ ದೃಷ್ಟಿಯಿಂದ ಅವತ್ತಿನ ಕೂಳಿಗೆ ಮಾತ್ರ ರೂಪು-ರೇಷೆಗಳನ್ನು ಹಾಕುತ್ತಿರುವುದು ದುಃಖಕರ ಸಂಗತಿಯಾಗಿದೆ.

ಬಹುಶಃ ಇಂತಹ ಪ್ರಕರಣಗಳು ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಎದುರಾಗುತ್ತಿರುವುದು ಉದ್ಯೋಗ ಖಾತರಿ ಫಲಾನುಭವಿಗಳನ್ನು ಸಂಕಷ್ಟದ ಪರಿಸ್ಥಿತಿಗೆ ತಳ್ಳುತ್ತಿವೆ, ಹಾಗೆಯೇ ಕರ್ನಾಟಕದಲ್ಲಿ ಈ ಯೋಜನೆಯ ಅನುಷ್ಠಾನದ ಹಂತಗಳು ಮತ್ತು ಮಾರ್ಗಸೂಚಿ ವಿಧಾನಗಳ ಸ್ವರೂಪವನ್ನು ಗಮನಿಸಿದಾಗ ಜನರಿಗೆ ಈ ಯೋಜನೆಯ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿರುವುದು ಎದ್ದು ಕಾಣುತ್ತದೆ. ಹಾಗೂ ಅನುಷ್ಠಾನದ ಹಂತಗಳಲ್ಲಿ ಅಧಿಕಾರಿಗಳ ಬೇಜವಾಬ್ದಾರಿ, ನಿರ್ಲಕ್ಷ್ಯ ಮನೋಭಾವದ ಧೋರಣೆ ಪ್ರಜ್ಞಾವಂತ ನಾಗರೀಕರ ನಿರ್ಲಕ್ಷ್ಯಯೇ ಈ ಯೋಜನೆಯು ವೈಫಲ್ಯತೆಯ ಹಾದಿಯಲ್ಲಿ ಸಾಗುವಂತೆ ಆಗಿದೆ. ಹಾಗಾಗಿ ಇನ್ನೂ ಮುಂದಾದರು ಸಮಾಜದ ಅಕ್ಷರಸ್ಥರು ಮೊದಲು ಪ್ರಜ್ಞಾವಂತರಾಗಿ ಅನಕ್ಷರಸ್ಥರನ್ನ ಎಚ್ಚರಗೊಳಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಇದಕ್ಕಾಗಿ ಪ್ರತಿಯೊಬ್ಬ ನಾಗರೀಕ ಈ ಯೋಜನೆಯ ಬಗ್ಗೆ ತಿಳುವಳಿಕೆ ಪಡೆದು ಇತರರು ಜಾಗೃತರಾಗುವಂತೆ ಮಾಡಬೇಕಾದದ್ದು ಸ್ವಸ್ಥ ಮನಸ್ಸಿನ ನಾಗರೀಕ ಸಮುದಾಯದ ಹೊಣೆಗಾರಿಕೆಯಾಗಿದೆ. ಇಂತಹದೊಂದು ಬಹುದೊಡ್ಡ ಮಹತ್ವ ಪೂರ್ಣ ಯೋಜನೆಯನ್ನು ಸಕಾರಗೊಳಿಸಲು ಸಾಮಾಜಿಕ ಲೆಕ್ಕ ಪರಿಶೋಧನೆ ಹಾಗೂ ಮಾಹಿತಿ ಕಾಯ್ದೆ ಬೆಂಬಲವಾಗಿ ನಿಂತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಇದರ ಜೊತೆ ಜೊತೆಗೆ ಸರ್ಕಾರೇತರ ಸ್ವಯಂ ಸಂಸ್ಥೆಗಳು, ಮಹಿಳಾ ಸಂಘಗಳು, ಪ್ರಜ್ಞಾವಂತ ಯುವ ನಾಗರೀಕರು, ಸರ್ಕಾರ, ಸಮಾಜ ಕಾರ್ಯಕರ್ತರು ಈ ಯೋಜನೆಯು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಮಾಡುವುದರಿಂದ ಸಮುದಾಯದ ದಿಕ್ಕೆ ಅಭಿವೃದ್ಧಿಯ ಪಥದತ್ತ ಸಾಗುತ್ತ ತನ್ನ ಮೂಲ ಉದ್ದೇಶವನ್ನ ಈಡೇರಿಸಿಕೊಂಡು ಸಮೃದ್ದ ಭಾರತವನ್ನಾಗಿಸಬೇಕೆಂಬುದೇ ನಮ್ಮೆಲ್ಲರ ಆಶಯ.
 
ಡಾ. ರಮೇಶ್. ಬಿ
ಸಹಾಯಕ ಪ್ರಾಧ್ಯಾಪಕರು, ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಕುವೆಂಪು ವಿಶ್ವ ವಿದ್ಯಾನಿಲಯ, ಶಂಕರಘಟ್ಟ, ಶಿವಮೊಗ್ಗ.
 
ರಾಜಶೇಖರ್ ಸಿ. (ಕೋಟಿ)
ಶೆಟ್ಟಹಳ್ಳಿ ಗ್ರಾಮ, ಮಳವಳ್ಳಿ ತಾಲ್ಲೂಕು, ಮಂಡ್ಯ ಜಿಲ್ಲೆ
0 Comments



Leave a Reply.


    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9
    ಸಮಾಜಕಾರ್ಯ
    ಸಮುದಾಯ ಸಂಘಟನೆ


    Picture
    For Registration

    Picture
    For more details

    Picture
    For more details

    Picture
    For more details

    Picture
    For more details

    Picture
    For more details

    Picture
    For more details

    Social Work Books


    HR Books


    Niruta Publications

    Social Work Foot Prints

    Leaders Talk

    Ramesha Niratanka


    Picture

    MHR LEARNING ACADEMY

    Get it on Google Play store
    Download App
    Online Courses


    RSS Feed

Niruta Publications Books
File Size: 741 kb
File Type: pdf
Download File

Social Work Books
File Size: 116 kb
File Type: pdf
Download File

HR Books
File Size: 87 kb
File Type: pdf
Download File

General Books
File Size: 195 kb
File Type: pdf
Download File



SITE MAP


Site

  • HOME
  • ABOUT US
  • BLOG​
  • HR BLOG
  • PUBLICATION WITH US
  • NIRUTA PRINTS
  • ONLINE STORE
  • JOIN OUR ONLINE GROUPS
  • VIDEOS​

NIRATHANKA

  • ​CSR
  • TREE PLANTATION PROJECT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe


Picture
For More Details
Picture
More Details

Copyright Niruta Publications 2021,    Website Designing & Developed by: www.mhrspl.com