ಲಿಂಕನ್ನ ಹೆಸರನ್ನು ನೀವು ಕೇಳಿರಬೇಕು, ಕೆಲಸವನ್ನು ಕಳೆದುಕೊಂಡ, ವಿಧಾನ ಸಭೆಯ ಚುನಾವಣೆಯಲ್ಲಿ ಸೋತ, ವ್ಯಾಪಾರಪ್ರಾರಂಭಿಸಿ ಅದರಲ್ಲಿ ನಷ್ಟ ಹೊಂದಿದ, ಪತ್ನಿ ಖಾಯಿಲೆ ಬಿದ್ದು ಸತ್ತಳು, ನರಗಳ ದೌರ್ಬಲ್ಯವನ್ನು ಅನುಭವಿಸಿದ, ಸ್ಪೀಕರ್ ಹುದ್ದೆಯಚುನಾವಣೆಗೆ ನಿಂತು ಸೋತ, ಒಂದು ರಾಜಕೀಯ ಪಕ್ಷದ ಮೂಲಕ ಚುನಾವಣೆಗೆ ಸ್ಪರ್ಧಿಸಿ ಸೋತ, ಲ್ಯಾಂಡ್ ಆಫಿಸರ್ ಹುದ್ದೆಗೆ ಅರ್ಜಿಸಲ್ಲಿಸಿ ಸೋತ, `ಸೆನೆಟ್' ಶಾಸನ ಸಭೆಗೆ ಚುನಾವಣೆಯಲ್ಲಿ ಸೋತ, `ಉಪರಾಷ್ಟ್ರಪತಿ' ಪದವಿಗೆ ಸ್ಪರ್ಧಿಸಿ ಸೋತ, ಮತ್ತೆ `ಸೆನೆಟ್'ಗೆಸ್ಪರ್ಧಿಸಿ ಸೋತ. ಆತನೊಬ್ಬ ಚಮ್ಮಾರನ ಮಗ, ಲಿಂಕನ್ ಅಮೆರಿಕದ ರಾಷ್ಟ್ರಾಧ್ಯಕ್ಷನಾದಾಗ ಕೆಲವರಿಗೆ ಸಹಿಸಿಕೊಳ್ಳಲಾಗಲಿಲ್ಲ. ಮೊದಲ ದಿನದ ಸೆನೆಟ್ನಲ್ಲಿ ಆತ ಮಾತನಾಡಲು ಆರಂಭಿಸಿದಾಗ ಸಹಿಸಿಕೊಳ್ಳಲಾಗದವ ಒಬ್ಬ ಎದ್ದುನಿಂತ. ಅಲ್ಲಿದ್ದವರಾರಿಗೂ ಲಿಂಕನ್ ಅಧ್ಯಕ್ಷನಾಗಿರುವುದು ಸಹಿಸಿಕೊಳ್ಳಲಾರದ ವಿಚಾರವೇ ಆಗಿತ್ತು, ಆದರೂ ಶಿಷ್ಟಾಚಾರದಿಂದ ಎಲ್ಲರೂ ಸುಮ್ಮನೆ ಕುಳಿತಿದ್ದರು. ಅವರೊಲ್ಲಬ್ಬನಿಗೆ ಮಾತ್ರ ಸಹಿಸಲಾಗದೆ ಎದ್ದು ನಿಂತು ಹೇಳಿದ. ಅಧ್ಯಕ್ಷರೇ ನೀವು ಹೆಮ್ಮೆಯಿಂದ ಮಾತನಾಡಬೇಡಿ. ನೆನಪಿರಲಿ, ನೀವೊಬ್ಬ ಚಮ್ಮಾರನ ಮಗ ಎಂಬುದು!.
ಆತನ ಮಾತಿಗೆ ಲಿಂಕನ್ ನೀಡಿದ ಉತ್ತರ ಹೀಗಿತ್ತು. ಅವರು ಹೇಳಿದರು, ಮಹಾಶಯರೇ, ನೀವು ಬಲು ಒಳ್ಳೆಯ ಸಂದರ್ಭದಲ್ಲಿ ನನ್ನ ತಂದೆಯವರನ್ನು ನೆನಪಿಗೆ ತಂದಿರಿ. ನನಗೆ ತಿಳಿದ ಮಟ್ಟಿಗೆ ಹೇಳಬೇಕೆಂದರೆ, ನನ್ನ ತಂದೆ ಬಲು ಸುಂದರವಾದ, ಉತ್ತಮವಾದ ಚಪ್ಪಲಿಗಳನ್ನೇ ತಯಾರಿಸುತ್ತಿದ್ದರು. ಅವರೆಂದಿಗೂ ಕಳಪೆ ಚಪ್ಪಲಿಗಳನ್ನು ತಯಾರಿಸಲಿಲ್ಲ. ಆ ಚಪ್ಪಲಿಗಳಲ್ಲಿ ಕಿಂಚಿತ್ತೂ ಕೊರತೆ ಇರುತ್ತಿರಲಿಲ್ಲ, ಅವರು ಅತ್ಯಂತ ಸಂತೋಷದಿಂದ ಅವುಗಳನ್ನು ತಯಾರಿಸುತ್ತಿದ್ದರು. ಅವರಂತಹ ಉತ್ಕೃಷ್ಟ ಚಮ್ಮಾರನನ್ನು ನಾನು ಕಂಡಿಲ್ಲ. ಅವರಿಂದ ಯಾರು ಚಪ್ಪಲಿಗಳನ್ನು ಕೊಳ್ಳುತ್ತಿದ್ದರೋ ಅವರೆಲ್ಲರೂ ಸಂತಸದಿಂದ ಅವುಗಳನ್ನು ತೊಡುತ್ತಿದ್ದರು. ನಿಮಗೂ ಅವರು ಚಪ್ಪಲಿ ತಯಾರಿಸಿ ಕೊಟ್ಟಿರುವುದು ನನ್ನ ನೆನಪಿಗೆ ಬರುತ್ತಿದೆ. ಅದರಲ್ಲಿ ಏನಾದರೂ ಕುಂದು ತೋರಿಸಲು ನಿಮಗಾಗಿತ್ತೇನು? ಅವುಗಳ ಬಾಳಿಕೆ ಹೇಗಿತ್ತು? ಅವರೇನಾದರೂ ಮೋಸ ಮಾಡಿರುವರೇನು? ನನ್ನ ತಂದೆಯವರು ಎಷ್ಟು ಉತ್ಕೃಷ್ಟ ಚಮ್ಮಾರರಾಗಿದ್ದರೋ ಅಷ್ಟು ಉತ್ಕೃಷ್ಟ ಅಧ್ಯಕ್ಷನಾಗುವುದು ಬಲು ಕಷ್ಟದ ವಿಚಾರ ಎಂದು ಹೇಳಲು ನಾನು ಇಚ್ಛಿಸುತ್ತೇನೆ ಎಂದರು. ಅಮೆರಿಕ ಸಂಯುಕ್ತ ಸಂಸ್ಥಾನಗಳ ಅಧ್ಯಕ್ಷನಾಗಿದ್ದ ಅಬ್ರಹಾಂ ಲಿಂಕನ್ ತನ್ನ ಮಗ ಓದುತ್ತಿದ್ದ ಶಾಲೆಯ ಶಿಕ್ಷಕರಿಗೊಂದು ಪತ್ರ ಬರೆದ. ಆ ಪತ್ರ ಹಾಗೂ ಅದರ ಸಾರಾಂಶ ಇಂದಿನ ಶಿಕ್ಷಕ ಸಮುದಾಯಕ್ಕೆ ಮತ್ತು ತಂದೆ-ತಾಯಿಯರಿಗೆ ದಾರಿದೀಪ ಆಗಬಲ್ಲದು. ಲಿಂಕನ್ ಪತ್ರ ಹೀಗೆ ಸಾಗುತ್ತದೆ. ಕಲಿಯಬೇಕು - ಎಲ್ಲರೂ ಸಾಚಾಗಳಲ್ಲ ಒಳ್ಳೆಯವರೂ ಅಲ್ಲ. ಆದರೆ ಒಬ್ಬ ತಲೆಹೋಕ ಇರುವಂತೆ ಇನ್ನೊಬ್ಬ ಹೀರೋ ಕೂಡ ಇರುತ್ತಾನೆ ಎಂಬುದನ್ನು. ಒಬ್ಬ ಸ್ವಾರ್ಥ ರಾಜಕಾರಣಿ ಇರುವಂತೆ ಇನ್ನೊಬ್ಬ ಅರ್ಪಣಾ ಮನೋಭಾವದ ರಾಜಕಾರಣಿಯೂ ಸಹ ಇರುತ್ತಾನೆ ಎಂಬುದನ್ನು. ಪ್ರತಿ ಶತ್ರುವಿಗೂ ಒಬ್ಬ ಸ್ನೇಹಿತ ಇರುತ್ತಾನೆ. ಇವೆಲ್ಲವನ್ನೂ ನನ್ನ ಮಗನಿಗೆ ಕಲಿಸಬೇಕು. ನನಗೆ ಗೊತ್ತು. ಇಂಥ ಸಂಗತಿಗಳನ್ನು ಕಲಿಸಲು ಹೆಚ್ಚು ಸಮಯ ಬೇಕಾಗುತ್ತದೆ. ಆದರೂ ನಾನು ಕಲಿಸುತ್ತೇನೆ. ಸಂಪಾದಿಸಿದ ಒಂದು ಡಾಲರ್, ಸಿಗುವ ಮೂರು ಡಾಲರ್ಗಳಿಗಿಂತ ಬೆಲೆಯುಳ್ಳದ್ದು ಅಂತ. ಸೋಲುವುದು ತಪ್ಪೇನಲ್ಲ, ಆದರೆ ಗೆಲುವನ್ನು ಚಪ್ಪರಿಸಬೇಕು. ಹೊಟ್ಟೆಕಿಚ್ಚು ಒಳ್ಳೆಯದಲ್ಲ, ಮೌನವಾಗಿ ನಗುವುದರ ಸುಖ ಎಂಥದು ಅಂತಲೂ ಅವನಿಗೆ ಸಾಧ್ಯವಾದರೆ ನೀವು ಕಲಿಸಬೇಕು ಎಂಬುದು ನನ್ನ ಬಯಕೆ. ಪುಸ್ತಕದ ಪ್ರಪಂಚ ಎಷ್ಟು ದೊಡ್ಡದು ಎಂಬುದು ಅವನಿಗೆ ಮನವರಿಕೆಯಾಗಬೇಕು. ಜತೆಗೆ ಆಕಾಶದಲ್ಲಿ ಹಾರುವ ಹಕ್ಕಿಗಳನ್ನು ನೋಡಲು, ಸೂರ್ಯನ ಕಿರಣಗಳಿಗೆ ಮೆತ್ತಿಕೊಂಡ ಕೀಟಗಳನ್ನು ಕಾಣಲು, ಹಸಿರು ಬೆಟ್ಟದ ಮೇಲೆ ಅರಳಿದ ಹೂಗಳನ್ನು ಆಸ್ವಾದಿಸಲು ಅವನಿಗೆ ಪುರುಸೊತ್ತು ನೀಡಬೇಕು. ಶಾಲೆಯಲ್ಲಿ ಅವನು ಮೋಸದಿಂದ ಪಾಸಾಗುವುದಕ್ಕಿಂತ ಫೇಲಾಗುವುದೇ ವಾಸಿ ಅನ್ನೋದನ್ನ ಅರಿಯುವಂತಾಗಬೇಕು. ತಪ್ಪಾದರೂ ಪರವಾಗಿಲ್ಲ, ಸ್ವಂತವಾಗಿ ಯೋಚಿಸುವಂತೆ ಮನದಟ್ಟು ಮಾಡಿಸಬೇಕು. `ಮಗು ಒಳ್ಳೆಯವರಿಗೆ ಒಳ್ಳೆಯವನಾಗು ಕೆಟ್ಟವರಿಗೆ ಕೆಟ್ಟವನಾಗು' ಅಂತ ನೀವು ತಿಳಿಹೇಳಬೇಕು. ಗುಂಪಿನಲ್ಲಿ ಎಲ್ಲರೂ ಅನಗತ್ಯವಾಗಿ ಹರಟುವ ಕಡೆ ಹೋಗಿ ನಿಲ್ಲಬೇಡ ಅಂತ ಯಾರಾದರೂ ನನ್ನ ಮಗನಿಗೆ ಬುದ್ಧಿ ಹೇಳಬೇಕು. ಎಲ್ಲರ ಮಾತುಗಳನ್ನು ಕೇಳಿಸಿಕೊಳ್ಳುತ್ತಾ, ಒಳಿತನ್ನು ಮಾತ್ರ ಮನಸ್ಸಿಗೆ ತುಂಬಿಕೊಳ್ಳುವಂತೆ ಸಲಹೆಯನ್ನೂ ನೀಡಬೇಕು. ಅಳುವುದು ಅವಮಾನವಲ್ಲ ಎಂಬುದು ಅವನಿಗೆ ಗೊತ್ತಾಗಲಿ. ದುಃಖದಲ್ಲೂ ನಗುವ ಶಕ್ತಿ ಸಿಗಲಿ. ಅತಿಯಾದ ಸಿಹಿ ಹಾಗೂ ಸಿನಿಕರ ಸಂಘ ಎರಡೂ ಒಳ್ಳೆಯದಲ್ಲ ಮಗು. ನಿನ್ನ ಬುದ್ಧಿ ಹಾಗೂ ಬಲವನ್ನು ಬೇಕಾದರೆ ಮಾರಿಕೋ. ಆದರೆ ಹೃದಯ ಮತ್ತು ಆತ್ಮದ ಮೇಲೆ ಬೆಲೆ ಪಟ್ಟಿಯನ್ನು ಯಾವತ್ತೂ ಅಂಟಿಸಿಕೊಳ್ಳಬೇಡ. ಹೋರಾಡುವ ಶಕ್ತಿ ದಕ್ಕಿಸಿಕೊಳ್ಳುವುದು ಹೀಗೆ... ಇವನ್ನೆಲ್ಲಾ ಅವನಿಗೆ ಮನದಟ್ಟು ಮಾಡಿಸುವವರು ಬೇಕು. ಉಗುರು ತೋರಿಸಿದರೆ ಸಾಕು, ಅವನು ಹಸ್ತ ನುಂಗಬೇಕು. ಬೆಂಕಿ ಸೋಕಿ ಉಕ್ಕು ಗಟ್ಟಿಗೊಳ್ಳುತ್ತದಲ್ಲ ಹಾಗೆ. ಧೈರ್ಯ ಇರಲಿ. ಜಾಣತನದೊಟ್ಟಿಗೆ ಸಹನೆಯೂ ಬೆರೆತಿರಲಿ. ತನ್ನ ಬಗ್ಗೆ ಅವನಿಗೆ ನಂಬಿಕೆ ಇರಲಿ. ಆಗ ಸಹಜವಾಗಿಯೇ ಮನುಷ್ಯಕುಲವನ್ನೇ ಅವನು ನಂಬುತ್ತಾನೆ. ಇದು ದೊಡ್ಡ ಆದೇಶ ಎನ್ನಿಸಬಹುದು. ನೋಡಿ ನಿಮ್ಮ ಕೈಲಿ ಏನೇನು ಕಲಿಸುವುದು ಸಾಧ್ಯ ಅಂತ. ಅವನಿನ್ನೂ ಪುಟ್ಟ ಹುಡುಗ. ಒಳ್ಳೆಯ ಮಗು. ನನ್ನ ಮಗ ತರಗತಿಯಲ್ಲಿ ಚೆನ್ನಾಗಿ ಕಲಿಯಲಿ. ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸದಿದ್ದರೂ ಪರವಾಗಿಲ್ಲ. ಆದರೆ ಕಾಪಿ ಮಾಡಬಾರದು. ಸ್ವಂತ ಆಲೋಚನೆಗಳಿಗೆ, ನಿರ್ಧಾರಗಳಿಗೆ ಬೆಲೆ ಕೊಡಲು ಅವನಿಗೆ ಹೇಳಿ. ಅವನ ಅನಿಸಿಕೆಗಳನ್ನು ಬೇರೆಯವರು ಲೇವಡಿ ಮಾಡಿದರೂ ಲೆಕ್ಕಿಸದಿರಲಿ. ಸೌಮ್ಯ ಸ್ವಭಾವದವರೊಂದಿಗೆ ಮೃದುವಾಗಿಯೂ, ದುಷ್ಟರೊಂದಿಗೆ ದಿಟ್ಟವಾಗಿಯೂ ವರ್ತಿಸಲು ಕಲಿಸಿ. ಗುಂಪಿನಲ್ಲಿ ಒಂದಾಗಿರಲು ಬರಬೇಕು; ಆದರೆ ಸ್ವಂತ ಬುದ್ಧಿಯನ್ನು ಮರೆತಿರಬಾರದು. ಎಲ್ಲ ಹೇಳಿಕೆಯನ್ನೂ ಕೇಳಿಸಿಕೊಳ್ಳಲಿ. ಆದರೆ ಯಾವುದನ್ನು ನಂಬಬೇಕು, ಎಷ್ಟು ಬೆಲೆ ಕೊಡಬೇಕು ಎಂಬುದನ್ನು ಸ್ವಂತ ಬುದ್ಧಿಯಿಂದ ಕಲಿಯಬೇಕು ಎಂಬುದನ್ನು ಒತ್ತಿ ಹೇಳಿ. ದುಃಖ ಎದುರಾದಾಗಲೂ, ಕುಗ್ಗದೆ ನಗುತ್ತಿರುವುದ್ನು ಅಭ್ಯಾಸ ಮಾಡಲು ಹೇಳಿ. ನಯವಂಚಕರನ್ನು ಗುರ್ತಿಸಲಿ, ಮರುಳ ಮಾತಿನವರನ್ನು ದೂರವಿರಿಸಲಿ. ಅನುಕಂಪ ತೋರಿಸಲಿ, ಜಾಣತನವನ್ನು ಪ್ರದರ್ಶಿಸಲಿ; ಆದರೆ ಹಣಕ್ಕಾಗಿ ಭಾವನೆಗಳನ್ನು ಮಾರಿಕೊಳ್ಳದಿರಲಿ. ಗುಂಪಿನ ಗಲಾಟೆಗೆ ಕಿವಿಮುಚ್ಚಿ ತನ್ನ ಹೇಳಿಕೆಯನ್ನು ಗಟ್ಟಿಯಾಗಿ ಕೂಗಿ ಹೇಳುವಂತೆ ಉತ್ತೇಜಿಸಿ. ಎಲ್ಲಾ ಮನುಷ್ಯರೂ ನ್ಯಾಯನಿಷ್ಠರಲ್ಲ ಎಲ್ಲಾ ಮನುಷ್ಯರು ಸತ್ಯಸಂಧರಲ್ಲ. ಆದರೆ ಒಬ್ಬ ಕುತಂತ್ರಿ, ಕಿಡಿಗೇಡಿ ಇದ್ದ ಕಡೆಯಲ್ಲೇ, ಒಬ್ಬ ನಾಯಕ ಇರುತ್ತಾನೆ. ಒಬ್ಬ ಭ್ರಷ್ಠ ರಾಜಕಾರಣಿ ಇದ್ದರೆ. ಅಲ್ಲಿಯೇ ಒಬ್ಬ ಪ್ರಜಾನಾಯಕ ಇರುತ್ತಾನೆ ಎನ್ನುವುದನ್ನು ತಿಳಿಸಿ. ಒಬ್ಬ ಶತ್ರು ಇದ್ದರೆ ಒಬ್ಬ ಮಿತ್ರ ಇರುತ್ತಾನೆ. ಇವೆಲ್ಲವನ್ನೂ ಒಂದೇ ಸಾರಿ ತಿಳಿಸಬೇಕಾಗಿಲ್ಲ, ಆದರೆ ನಿಧಾನವಾಗಿಯಾದರೂ ತಿಳಿಸಿ. ದುಡಿಯದೆ ಬಿಟ್ಟಿ ಸಿಕ್ಕಿದ ಐದು ಡಾಲರ್ಗಳಿಗಿಂತ, ಬೆವರು ಸುರಿಸಿ ದುಡಿದು ಗಳಿಸಿದ ಒಂದು ಡಾಲರ್ಗೆ ಹೆಚ್ಚು ಬೆಲೆ ಎಂದು ತಿಳಿಸಿ. ಗೆದ್ದಾಗ ಸಂತೋಷಪಡಲಿ, ಆದರೆ ಸೋಲನ್ನು ಸಮಾಧಾನವಾಗಿ ತೆಗೆದುಕೊಳ್ಳುವುದನ್ನು ಹೇಳಿಕೊಡಿ. ಹೊಟ್ಟೆಕಿಚ್ಚುಪಡುವವರಿಂದ ದೂರವಿರಲಿ; ಚುಡಾಯಿಸುವವರನ್ನು ಎದುರಿಸುವುದನ್ನು ಹೇಳಿಕೊಡಿ. ಪ್ರಕೃತಿಯ ಸೌಂದರ್ಯಗಳನ್ನು ನೋಡಿ ಅನುಭವಿಸಿ ಕಾಪಾಡುವುದರ ಪ್ರಾಮುಖ್ಯತೆಯನ್ನು ತಿಳಿಸಿ. ಪ್ರತಿಯೊಂದು ಮಗುವೂ ಒಂದು ವಿಶಿಷ್ಟ ವ್ಯಕ್ತಿ. ಎಲ್ಲಾ ಗುಣಗಳೂ ಎಲ್ಲರಲ್ಲೂ ಬೆಳೆಯಲೂ ಸಾಧ್ಯವಿಲ್ಲ. ಶಿಕ್ಷಕರಾದ ನೀವು ಸಹನೆಯಿಂದ ಕಲಿಸಲು ಪ್ರಯತ್ನಿಸಿ. ಅವನು ಅಸಹನೆಯನ್ನು ಪ್ರದರ್ಶಿಸಲು ಬಿಡಿ. ಆಗ ಧೈರ್ಯದಿಂದ ಎದುರಿಸಬೇಕಾದ ಗುಣವನ್ನು ಕಲಿಯಲು ಅವಕಾಶ ಮಾಡಿ. ಇವೆಲ್ಲಾ ನನ್ನ ಆಜ್ಞೆಗಳು ಅಂದುಕೊಳ್ಳಬೇಡಿ. ನನ್ನ ಮಗನು ಬೇರೆಯವರಂತೆಯೇ ಇರದೆ, ಸ್ವಂತಿಕೆಯನ್ನು ತೋರಿಸುವಂತೆ ತಿಳಿಸಿಹೇಳಿ.
1 Comment
ಮಂಜುನಾಥ ಎಂ ವಿ
9/15/2017 10:41:25 am
ತುಂಬಾ ಚೆನ್ನಾಗಿದೆ
Reply
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |