ಘನ ಮತ್ತು ದ್ರವ ತ್ಯಾಜ್ಯ ವಸ್ತುಗಳ ನಿರ್ವಹಣೆಯಿಂದ ಪ್ರತಿ ಗ್ರಾಮದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯತೆಯನ್ನು ಕಾಪಾಡುವ ಜವಾಬ್ದಾರಿಜಿಲ್ಲಾ ಪಂಚಾಯತಿಗಳಾದ್ದಾಗಿರುತ್ತದೆ. ಅನೈರ್ಮಲ್ಯ ಪರಿಸರ ಅನಾರೋಗ್ಯದ ಮೂಲ ಎಂಬ ಹಿರಿಯರ ಮಾತು ಸತ್ಯ. ಆರೋಗ್ಯ ಚೆನ್ನಾಗಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಜನರ ಮೂಲ ಸೌಲಭ್ಯಗಳನ್ನು ಪೂರೈಸಲು ಹಾಗೂ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆ ಉತ್ತಮ ನೈರ್ಮಲ್ಯ ಬಹಳ ಅವಶ್ಯಕವಾಗಿದೆ. ನೈರ್ಮಲ್ಯ ಕಾಪಾಡುವ ಮೂಲಕ ಅನೇಕ ಮೂಲಗಳಿಂದ ಬರುವ ಕಾಯಿಲೆಗಳನ್ನು ತಡೆಗಟ್ಟಬಹುದು ಎನ್ನುವ ಧ್ಯೇಯದೊಂದಿಗೆ ಬೆಳಗಾವಿ ಜಿಲ್ಲಾ ಪಂಚಾಯಿತಿಯು ಸಮುದಾಯ ಆಧಾರಿತ ಸಂಪೂರ್ಣ ನೈರ್ಮಲ್ಯ ಎಂಬ ಹೆಸರಿನಲ್ಲಿ ಒಂದು ಬೃಹತ್ ಆಂದೋಲನ ಆರಂಭಿಸಿದೆ. ಸಂಪೂರ್ಣ ಸ್ವಚ್ಛತಾ ಆಂದೋಲನದಡಿ, ಘನ-ದ್ರವ ತ್ಯಾಜ್ಯ ವಸ್ತುಗಳ ಸಂಗ್ರಹಣೆ ಮತ್ತು ವಿಲೇವಾರಿ ನಿರ್ವಹಣೆಯೂ ಒಂದು ಪ್ರಮುಖ ಅಂಗವಾಗಿದೆ. ಘನ ಮತ್ತು ದ್ರವ ತ್ಯಾಜ್ಯ ವಸ್ತುಗಳ ನಿರ್ವಹಣೆಯಿಂದ ಪ್ರತಿ ಗ್ರಾಮದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯತೆಯನ್ನು ಕಾಪಾಡುವ ಜವಾಬ್ದಾರಿ ಜಿಲ್ಲಾ ಪಂಚಾಯಿತಿಗಳದ್ದಾಗಿರುತ್ತದೆ.
ಈ ಜವಾಬ್ದಾರಿಯನ್ನು ಹೊತ್ತಿರುವ ಬೆಳಗಾವಿ ಜಿಲ್ಲಾ ಪಂಚಾಯಿತಿಯು ನಿರ್ಮಲ ಗ್ರಾಮ ಪುರಸ್ಕಾರ ಪಡೆದ ಗ್ರಾಮ ಪಂಚಾಯಿತಿಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯ ವಸ್ತುಗಳ ನಿರ್ವಹಣೆಯಲ್ಲಿ ಮಾದರಿಯಾಗಿದೆ ಎನ್ನಲು ಅತಿಶಯೋಕ್ತಿ ಎನಿಸದು. ಆದರೆ, ಆಂದೋಲನದ ಪೂರ್ವದಲ್ಲಿ ಇಲ್ಲಿಯೂ ಕೂಡ ಘನ ಮತ್ತು ದ್ರವ ತ್ಯಾಜ್ಯ ವಸ್ತುಗಳ ನಿರ್ವಹಣೆ ಸರಿಯಾಗಿ ಆಗುತ್ತಿರಲಿಲ್ಲ. ಎಲ್ಲ ಗ್ರಾಮಗಳಲ್ಲಿಯೂ ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಚೆಲ್ಲುತ್ತಿದ್ದರು. ಸುಶಿಕ್ಷಿತ ಜನರು ಹೆಚ್ಚಾಗಿರುವ ಗ್ರಾಮಗಳಲ್ಲಿಯೂ ಸಹ ಘನ ಮತ್ತು ದ್ರವ ತ್ಯಾಜ್ಯ ವಸ್ತುಗಳ ವಿಲೇವಾರಿ ಮತ್ತು ನಿರ್ವಹಣೆ ಕುರಿತು ತಿಳಿವಳಿಕೆ ಹೊಂದಿದವರಾಗಿರಲಿಲ್ಲ. ಎಲ್ಲ ಚರಂಡಿಗಳು ತುಂಬಿ ಗ್ರಾಮಗಳಲ್ಲಿ ಗಬ್ಬು ವಾಸನೆ ಹರಡುತ್ತಿತ್ತು. ಸಂಪೂರ್ಣ ಸ್ವಚ್ಛತಾ ಆಂದೋಲನದಡಿ ಗ್ರಾಮ ಪಂಚಾಯಿತಿಗಳನ್ನು ನಿರ್ಮಲ ಗ್ರಾಮ ಪುರಸ್ಕಾರಕ್ಕೆ ಅಣಿಗೊಳಿಸುವ ಸಂದರ್ಭದಲ್ಲಿ ಘನ ಮತ್ತು ದ್ರವ್ಯ ತ್ಯಾಜ್ಯ ವಸ್ತುಗಳ ವಿಲೇವಾರಿ ಮತ್ತು ನಿರ್ವಹಣೆ ಕುರಿತು ಜಾಗೃತಿ ಮೂಡಿಸಲು ಪ್ರಾರಂಭಿಸಲಾಯಿತು. ಗ್ರಾಮದ ಸ್ವ-ಸಹಾಯ ಸಂಘದ ಸದಸ್ಯರು ಮತ್ತು ಜನಪ್ರತಿನಿಧಿಗಳನ್ನು ಒಳಗೊಂಡು ಸಭೆಗಳಲ್ಲಿ ಪ್ರಾತ್ಯಕ್ಷಿಕೆ ಮೂಲಕ ಈ ಕೆಳಕಂಡಂತೆ ಜಾಗೃತಿ ಮೂಡಿಸಲು ಪ್ರಾರಂಭಿಸಲಾಯಿತು. ಘನ ತ್ಯಾಜ್ಯ ವಸ್ತುಗಳ ನಿರ್ವಹಣೆ: ಗ್ರಾಮೀಣ ಪ್ರದೇಶಗಳಲ್ಲಿ ಪಶುಪಾಲನೆ ಒಂದು ಅವಿಭಾಜ್ಯ ಅಂಗವಾಗಿದೆ. ಹೈನುಗಾರಿಕೆ ಹಾಗೂ ಕೃಷಿ ಕಾರ್ಯಗಳಿಗೆ ಜನರು ಜಾನುವಾರುಗಳನ್ನು ಸಾಕುತ್ತಾರೆ. ಸಾಮಾನ್ಯವಾಗಿ ಈ ಜಾನುವಾರುಗಳನ್ನು ಸಾಕುವ ಕೊಟ್ಟಿಗೆ ಮನೆ ಮನೆಗೆ ಹೊಂದಿಕೊಂಡಂತೆ ಇರುತ್ತವೆ. ಗೃಹ ಕೆಲಸಗಳಿಂದ ಮತ್ತು ಪಶು ಸಾಕಾಣಿಕೆಯಿಂದ ಉತ್ಪತ್ತಿಯಾಗುವ ಕಸ ಹಾಗೂ ತ್ಯಾಜ್ಯಗಳ ವಿಲೇವಾರಿ ನೈರ್ಮಲ್ಯದ ಮುಖ್ಯ ಅಂಶವಾಗಿದೆ. ಕಸ ಅಥವಾ ತ್ಯಾಜ್ಯ ಪದಾರ್ಥಗಳು ಸಂಗ್ರಹಗೊಂಡ ಸ್ಥಳವು, ಕೀಟಗಳು ಮತ್ತು ಅಪಾಯಕಾರಿ ರೋಗಾಣುಗಳ ಉತ್ಪತ್ತಿಯ ತಾಣವಾಗಿರುತ್ತದೆ. ಕಸದ ತಿಪ್ಪೆಗಳಲ್ಲಿ ಇಲಿ, ಹೆಗ್ಗಣಗಳ ಸಂಖ್ಯೆ ಹೆಚ್ಚಿದಂತೆ ಮರಣಾಂತಿಕ ಪ್ಲೇಗ್ ಹರಡುವ ಸಾಧ್ಯತೆ ಇರುತ್ತದೆ. ಕಸದ ರಾಶಿಗಳಲ್ಲಿ ಹೊರಳಾಡುವ ಹಂದಿ, ನಾಯಿಯಂಥ ಪ್ರಾಣಿಗಳು ರೋಗವಾಹಿನಿಗಳಾಗುವ ಸಾಧ್ಯತೆ ಹೆಚ್ಚು. ಕಸದ ರಾಶಿ ಕೊಳೆತು ಹತ್ತಿರದ ಪ್ರದೇಶದಲ್ಲೆಲ್ಲಾ ದುರ್ವಾಸನೆ ಹರಡುತ್ತದೆ. ಹಾಗೂ ಪಶುಗಳ ಸಗಣಿಯನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡದಿದ್ದಲ್ಲಿ ಧನುರ್ವಾಯುವಿನಂಥ ಮಾರಣಾಂತಿಕ ರೋಗಾಣುಗಳ ಸಂಖ್ಯೆ ಹೆಚ್ಚಾಗುತ್ತದೆ. ಕಸವನ್ನು ಒಣ ಅಥವಾ ಹಸಿ, ಘನ ಅಥವಾ ದ್ರವ ಕಸವೆಂದು ವರ್ಗೀಕರಿಸಬಹುದು. ಘನ ತ್ಯಾಜ್ಯ ಘನ ಕಸವೆಂದರೆ ಮನೆಯನ್ನು ಗುಡಿಸಿದ ನಂತರ ಕಸ, ಧೂಳು, ಗಾಜು, ಕಾಗದ, ಬ್ಯಾಟರಿ ಮುಂತಾದ ವಸ್ತುಗಳು. ಕೊಟ್ಟಿಗೆಯಲ್ಲಿ ದನಗಳು ತಿಂದು ಉಳಿದ ಹುಲ್ಲು, ಹೊಟ್ಟು, ಸಗಣಿ ಹಾಗೂ ಇತರೆ ತ್ಯಾಜ್ಯ ವಸ್ತುಗಳು. ಇವುಗಳಲ್ಲಿ ಒಣ ಕಸಗಳೆಂದು ಹುಲ್ಲು, ಕಾಗದ, ಸಗಣಿ, ಹೊಟ್ಟುಗಳನ್ನು ಹಾಗೂ ಹಳೆಯ ಆಹಾರ ಪದಾರ್ಥಗಳನ್ನು, ಹಾಳಾದ ತರಕಾರಿ, ಹಣ್ಣುಗಳ ಸಿಪ್ಪೆಗಳನ್ನು ಹಸಿ ಕಸವೆಂದು ವಿಂಗಡಿಸಬಹುದು. ಕಸದ ವಿಲೇವಾರಿ ಕಸವನ್ನು ಅವುಗಳ ವರ್ಗೀಕರಣಕ್ಕೆ ಅನುಗುಣವಾಗಿ ವಿಲೇವಾರಿ ಮಾಡಬಹುದು.
ದ್ರವ ತ್ಯಾಜ್ಯ ದ್ರವ ತ್ಯಾಜ್ಯ ಎಂದರೆ ನಾವು ಬಳಕೆ ಮಾಡಿದ ನೀರು. ಸ್ನಾನದ ಮನೆಯಿಂದ, ಅಡುಗೆ ಮನೆಯ ಪಾತ್ರೆಗಳನ್ನು ತೊಳೆದಿದ್ದರಿಂದ ಅಥವಾ ಸಾಕು ಪ್ರಾಣಿಗಳ ಕೊಟ್ಟಿಗೆಯನ್ನು ಸ್ವಚ್ಛಗೊಳಿಸಿದ ನಂತರ ಉತ್ಪನ್ನವಾಗುವ ನೀರು. ತ್ಯಾಜ್ಯ ನೀರು ಒಂದೆಡೆ ನಿಂತು, ಸೂಕ್ಷ್ಮ ಜೀವಿ ಮತ್ತು ಕೀಟಾಣುಗಳ ಸಂಗ್ರಹಣಾ ಕೇಂದ್ರವಾಗದಂತೆ ಸೂಕ್ತವಾಗಿ ನಿರ್ವಹಿಸಬೇಕಾಗುತ್ತದೆ. ದ್ರವ ತ್ಯಾಜ್ಯ ವಸ್ತುಗಳ ನಿರ್ವಹಣೆ
ಈ ರೀತಿ ಜನರಲ್ಲಿ ಜಾಗೃತಿ ಮೂಡಿಸಿ ಅವರ ಜೀವನ ಶೈಲಿ ಸುಧಾರಿಸಲು ಮನೆ ಮನೆಗೆ ಸ್ವ-ಸಹಾಯ ಗುಂಪುಗಳ ಸದಸ್ಯರಿಗೆ, ಅಂಗನವಾಡಿ ಕಾರ್ಯಕರ್ತೆಯರ ಮುಖಾಂತರ ತಿಳಿವಳಿಕೆ ನೀಡಲಾಯಿತು. ಹೀಗೆ ತೊಟ್ಟಿಯಲ್ಲಿನ ಕಸವನ್ನು ಪ್ರತಿ 15 ದಿನಗಳಿಗೊಮ್ಮೆ ಪಂಚಾಯಿತಿ ವತಿಯಿಂದ ಟ್ರ್ಯಾಕ್ಟರ್ ಮುಖಾಂತರ ಊರ ಹೊರಗೆ ನಿರ್ಮಿಸಲಾದ ಘನ ತ್ಯಾಜ್ಯ ವಸ್ತುಗಳ ಸಂಗ್ರಹಣಾ ತೊಟ್ಟಿಯಲ್ಲಿ ಕೊಳೆಯುವ ತ್ಯಾಜ್ಯ ಹಾಗೂ ಕೊಳೆಯದ ತ್ಯಾಜ್ಯಗಳಾಗಿ ಬೇರೆ ಬೇರೆಯಾಗಿ ಎರಡು ತೊಟ್ಟಿಯಲ್ಲಿ ಹಾಕುವಂತೆ ಕ್ರಮ ಜರುಗಿಸಲಾಗಿದೆ. ಈ ದಿನ ಘನ ಮತ್ತು ದ್ರವ ತ್ಯಾಜ್ಯ ವಸ್ತುಗಳ ವ್ಯವಸ್ಥಿತ ವಿಲೇವಾರಿ ಮತ್ತು ನಿರ್ವಹಣೆಯಿಂದಾಗಿ ಗ್ರಾಮೀಣ ಮಟ್ಟದ ಜೀವನ ಸುಧಾರಣೆಯಾಗುತ್ತಿದೆ. ಗ್ರಾಮದಲ್ಲಿ ಸ್ವಚ್ಛ ಪರಿಸರ ಉಂಟಾಗಿ ನಿರ್ಮಲ ಗ್ರಾಮವನ್ನಾಗಿ ಮಾಡಲು ಜನರು ಕಾತರರಾಗುತ್ತಾರೆ. ತ್ಯಾಜ್ಯ ವಸ್ತು ಒಂದು ಬೆಲೆ ಬಾಳುವ ಸಂಪನ್ಮೂಲ ಎಂಬ ಭಾವನೆ ಜನರಲ್ಲಿ ಮೂಡಿದೆ. ಊರ ಹೊರಗಿನ ಸಂಗ್ರಹಣಾ ತೊಟ್ಟಿಯಲ್ಲಿನ ತ್ಯಾಜ್ಯ ಗೊಬ್ಬರವಾಗಿ ಮಾಪರ್ಾಡಾದ ನಂತರ ಮಾರಾಟ ಮಾಡಿ ಬಂದ ಹಣವನ್ನು ಗ್ರಾಮದ ಅಭಿವೃದ್ಧಿಗೆ ಬಳಕೆ ಮಾಡಬೇಕೆಂಬ ಹಂಬಲ ಜನರಲ್ಲಿ ಮೂಡಿದೆ. ಘನ ಮತ್ತು ದ್ರವ ತ್ಯಾಜ್ಯ ವಸ್ತುಗಳ ನಿರ್ವಹಣೆಯಿಂದಾಗಿ ಈ ದಿನ ಬಹಳಷ್ಟು ಗ್ರಾಮಗಳಲ್ಲಿ ಸ್ವಚ್ಛತೆ ಮತ್ತು ವಾತಾವರಣ ನಿರ್ಮಾಣವಾಗಿದೆ. ದಿನದಿಂದ ದಿನಕ್ಕೆ ಪ್ರತಿಯೊಂದು ಗ್ರಾಮದ ಸದಸ್ಯರು ಈ ಸುವ್ಯವಸ್ಥೆಯ ಒಂದು ಭಾಗವಾಗಲು ಮುಂದೆ ಸಾಗುತ್ತಿದ್ದಾರೆ ಎಂದು ಹೇಳಲು ಬೆಳಗಾವಿ ಜಿಲ್ಲಾ ಪಂಚಾಯಿತಿಯು ಮುಂಚೂಣಿಯಲ್ಲಿದೆ. ಪೂರ್ಣಿಮಾ ಕೆ. ಚವ್ಹಾಣ ಎಚ್.ಆರ್.ಡಿ. ಸಮಾಲೋಚಕರು, ಸಂಪೂರ್ಣ ಸ್ವಚ್ಛತಾ ಆಂದೋಲನ, ಜಿ.ಪಂ. ಬೆಳಗಾವಿ.
0 Comments
Leave a Reply. |
Categories
All
MHR LEARNING ACADEMYGet it on Google Play store
30,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGnIRATHANKA cLUB hOUSEJOB |
HR SERVICES
OTHER SERVICES |
NIRATHANKAPOSHOUR OTHER WEBSITESSubscribe |