Niruta Publications
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
Niruta Publications

ಭಾರತೀಯ ದತ್ತಕ ಪದ್ಧತಿ

7/16/2017

0 Comments

 
ಹೆಣ್ಣಿನ ಸಾರ್ಥಕತೆ ಇರುವುದು ತಾಯಿಯಾಗುವುದರಲ್ಲಿ ಎನ್ನುವ ಮಾತು ಇಂದು ನಿನ್ನೆಯದಲ್ಲ. ಪ್ರತಿಯೊಬ್ಬ ಹೆಣ್ಣಿನ ಬಯಕೆಯೂ ಇದೇ ಆಗಿರುತ್ತದೆ. ಅದಕ್ಕಾಗಿ ಕಾಯುತ್ತಾಳೆ, ಆ ಸಂಭ್ರಮಕ್ಕಾಗಿ ತನ್ನ ಒಡಲಿನ ರಕ್ತವನ್ನೇ ಬಸಿಯುತ್ತಾಳೆ. ಆ ಮುದ್ದು ಮುಖವನ್ನು ನೋಡುತ್ತಾ ತನ್ನೆಲ್ಲ ನೋವನ್ನು ಮರೆಯುತ್ತಾಳೆ. ತಾಯಿಯಾಗುವ ಪ್ರತಿಯೊಬ್ಬ ಹೆಣ್ಣಿನ ಬಯಕೆಯ ಹಿಂದೆ ಕುಟುಂಬ ಹಾಗೂ ಸಮಾಜದ ಕಟ್ಟುಪಾಡುಗಳು ನೆರಳಿನಂತೆ ಹಿಂಬಾಲಿಸುತ್ತವೆ

ಕೆಲವರಿಗೆ ತಾಯಿಯಾಗುವ ಆಸೆ ಕೈಗೂಡುವುದೇ ಇಲ್ಲ. ಅದಕ್ಕಾಗಿ ಅಂತಹವರು ಪರಿತಪಿಸುತ್ತಾ ಕೂಡುವ ಬದಲು ಮಗುವೊಂದನ್ನು ದತ್ತು ತೆಗೆದುಕೊಂಡು ಅದಕ್ಕೊಂದು ಜೀವನಾಧಾರ ಕಲ್ಪಿಸುವುದು ಒಂದು ಒಳ್ಳೆಯ ಧ್ಯೇಯ.
ಭಾರತೀಯ ದತ್ತಕ ಪದ್ಧತಿ
ದತ್ತಕಕ್ಕೆ ಅನುಸರಿಬೇಕಾದ ವಿಧಾನಗಳು:

  • ದತ್ತು ತೆಗೆದುಕೊಳ್ಳಬಯಸುವವರು ಸಂಸ್ಥೆಗೆ ಬಂದು ತಮ್ಮ ಹೆಸರು ನಮೂದಿಸಿಕೊಳ್ಳಬೇಕು.
  • ಅರ್ಜಿ ಪಡೆದು ಸಂಬಂಧಿತ ಪತ್ರಗಳನ್ನು ಲಗತ್ತಿಸಿ ಸಂಸ್ಥೆಗೆ ಕೊಡಬೇಕು.
  • ಎಲ್ಲಾ ನಿಯಮಗಳಿಗೆ ಬದ್ಧರಾಗಿ ಆಸಕ್ತಿಯುಳ್ಳವರನ್ನು ಸಂದರ್ಶನಕ್ಕೆ ಕರೆಯಲಾಗುವುದು.
  • ಸಾಮಾನ್ಯವಾಗಿ ಸಂಸ್ಥೆಗಳು 3 ಸಂದರ್ಶನಗಳನ್ನು ನಡೆಸುತ್ತದೆ. ಒಂದು ಸಂಸ್ಥೆಯ ಮ್ಯಾನೇಜರ್‍ನೊಂದಿಗೆ, ಇನ್ನೆರಡು ಸಮಾಜ ಕಾರ್ಯಕರ್ತ ಮತ್ತು ಆಪ್ತ ಸಮಾಲೋಚಕರೊಂದಿಗೆ. ಇದರಿಂದ ಅವರ ಮನೋಭಾವ ಮತ್ತು ಆಸಕ್ತಿ ಹೇಗಿದೆ ಮತ್ತು ಪರರ ಮಗುವನ್ನು ತಮ್ಮದೆಂದು ಸ್ವೀಕರಿಸಲು ಸಿದ್ಧರಿದ್ದಾರೆಯೆ ಎಂದು ತಿಳಿಯುತ್ತದೆ.
  • ಸಮಾಜಕಾರ್ಯಕರ್ತರು ಅವರ ಮನೆಯ ಕೂಲಂಕಷ ಅಧ್ಯಯನ ನಡೆಸುತ್ತಾರೆ. ಇದರಿಂದ ಅವರ ಸಾಂಸಾರಿಕ ಹಿನ್ನಲೆ; ಸಾಮಾಜಿಕ, ಆರ್ಥಿಕ ಸ್ಥಿತಿಗತಿ; ಸಾಮಾನ್ಯ ವಿಷಯಗಳು ಮತ್ತು ದತ್ತಕಕ್ಕೆ ಬೇಕಾದ ಸಿದ್ಧತೆ-ಹೀಗೆ ಪ್ರತಿಯೊಂದನ್ನೂ ದಾಖಲಿಸಲಾಗುತ್ತದೆ.
  • ವ್ಯಕ್ತಿಗಳು ಬೇರೆ ಊರಿನವರಾಗಿದ್ದರೆ ಸಂದರ್ಶನವನ್ನು ಆ ಊರಿಗೆ ಹೋಗಿ ನಡೆಸುತ್ತಾರೆ. ಇಲ್ಲವೆ ಪರಿಚಿತರ ಸಂಸ್ಥೆಯಲ್ಲೇ ನಡೆಸುತ್ತಾರೆ.
  • ಗೃಹ ಅಧ್ಯಯನ ವರದಿ ತಯಾರಾದ ನಂತರ ಅವರಿಗೆ ಹೊಂದಾಣಿಕೆಯಾಗುವ ಮಗುವನ್ನು ಅದೇ ಸಂಸ್ಥೆ ಅಥವಾ ಬೇರೆ ಸಂಸ್ಥೆಯಲ್ಲಿ ತೋರಿಸಲಾಗುತ್ತದೆ.
  • ಮಗುವನ್ನು ಪಾಲಕರು ಒಪ್ಪಿಕೊಂಡ ನಂತರ ಫಾಸ್ಟರ್ ಕೇರ್‍ನಲ್ಲಿ ನೀಡಲಾಗುತ್ತದೆ. ಈ ಅಗ್ರಿಮೆಂಟ್ ಅನ್ನು ರೂ. 10ರ ಸ್ಟಾಂಪ್ ಪೇಪರ್ ಮೇಲೆ ಪಾಲಕರು ಸಂಸ್ಥೆಗೆ ಕೊಡುತ್ತಾರೆ.
  • ನಂತರ ಸಂಸ್ಥೆ ಕೌಟುಂಬಿಕ ನ್ಯಾಯಾಲಯದಲ್ಲಿ ದತ್ತಕವನ್ನು ಕಾನೂನು ಬದ್ಧವಾಗಿ ಮಾಡಲು ಕ್ರಮ ಕೈಗೊಳ್ಳುತ್ತದೆ. ಕೋರ್ಟ್‍ನಿಂದ ಆದೇಶ ಬಂದ ನಂತರ ಉಪ ನೋಂದಣಿ ಕಚೇರಿಯಲ್ಲಿ ರಿಜಿಸ್ಟರ್ ಮಾಡಿಸಬೇಕು.
  • ಇದರೊಂದಿಗೆ ದತ್ತಕದ ವಿಧಿ ನಿಯಮಗಳು ಸಂಪೂರ್ಣವಾದಂತೆ.
 
ದತ್ತು ಪಡೆಯಲು ಇಚ್ಛಿಸುವವರು ನೀಡಬೇಕಾದ ದಾಖಲೆ ಪತ್ರಗಳು

  • ಜನನ ಪ್ರಮಾಣ ಪತ್ರ (ನಕಲು) ಪ್ರತಿ.
  • ಮದುವೆ ದಾಖಲೆ ಪತ್ರ (ನಕಲು) ಲಗ್ನ ಪತ್ರಿಕೆ.
  • ಆರೋಗ್ಯ ದೃಢೀಕರಣ ಪತ್ರ
  • ಸ್ತ್ರೀರೋಗತಜ್ಞರ ತಪಾಸಣಾ ವರದಿ.
  • 8 ಪಾಸ್‍ಪೋರ್ಟ್‍ ಸೈಜಿನ ಫೋಟೊಗಳು (ಪ್ರತಿ ವ್ಯಕ್ತಿಯ ಪ್ರತ್ಯೇಕ ಫೋಟೊ).
  • ಪರಿಚಿತ ವ್ಯಕ್ತಿಗಳಿಂದ ಪತ್ರಗಳು.
  • ಆಸ್ತಿಯ ವಿವರ ಹಾಗೂ ದಾಖಲೆಗಳು.
  • ಉದ್ಯೋಗದ ಮಾಹಿತಿ.
  • ಗೃಹ ಅಧ್ಯಯನ ವರದಿ (ಹೋಮ್ ಸ್ಟಡೀ ರಿಪೋರ್ಟ್‍).
  • ಮನೆಯ ಹೊರಗಿನ ಮತ್ತು ಒಳಾಂಗಣದ ಭಾವಚಿತ್ರಗಳು. ಇವು ಮನೆಯವರ ಜೀವನಶೈಲಿಯನ್ನು (ಅಚ್ಚುಕಟ್ಟುತನ) ಪ್ರತಿಬಿಂಬಿಸುತ್ತವೆ.
 
ಹೆಚ್ಚುವರಿ ಮಾಹಿತಿ

  • ದತ್ತು ತೆಗೆದುಕೊಳ್ಳಬಯಸುವವರಿಗೆ ಸ್ವಂತ ಮಕ್ಕಳಿದ್ದರೆ, ಅವರ ಪ್ರಕ್ರಿಯೆಗಳ ಬಗ್ಗೆ ಲಿಖಿತ ದಾಖಲೆ ಪಡೆಯಬೇಕು.
  • ಈ ಮೊದಲೇ ಒಂದು ಮಗುವನ್ನು ದತ್ತು ತೆಗೆದುಕೊಂಡಿದ್ದರೆ ಅದರ ಡಿಕ್ರಿ.
  • ವಿಚ್ಛೇದನವಾಗಿದ್ದರೆ ವಿಚ್ಛೇದನ ಪತ್ರ.
  • ತಂದೆ ತಾಯಿಗಳು 45 ವರ್ಷಕ್ಕೆ ಮೇಲ್ಪಟ್ಟವರಾಗಿದ್ದರೆ ಅವರ ಕುಟುಂಬದ ಕಿರಿಯ ಸದಸ್ಯರೊಬ್ಬರಿಂದ ಅಗತ್ಯ ಬಿದ್ದಾಗ ಮಗುವನ್ನು ನೋಡಿಕೊಳ್ಳುವ ಇಚ್ಛಾಪತ್ರವನ್ನು ಬರೆಸಿಕೊಳ್ಳಬೇಕು.
 
ಇತರ ರಾಜ್ಯಗಳಲ್ಲಿ ಸಲ್ಲಿಸಿರುವ ಭಾರತೀಯ ದಂಪತಿಗಳ ಅರ್ಜಿ
ಸಂಸ್ಥೆಯ ಪರಿಧಿಯ ಹೊರಗೆ ನೆಲೆಸಿರುವ ದಂಪತಿಗಳು ದತ್ತಕ ಸಂಸ್ಥೆ, ಸಾಮಾಜಿಕ ಕಾರ್ಯ ಕಛೇರಿ ಅಥವಾ ಪ್ರೊಬೆಷನರಿ ಇಲಾಖೆಯನ್ನು ಸಂಪರ್ಕಿಸಬಹುದು. ಯಾವುದೂ ಆಗದಿದ್ದರೆ ದಂಪತಿಗಳು ಸಮಾಜ ಕಾರ್ಯಕರ್ತರು, ವೈದ್ಯರು, ಶಿಕ್ಷಕರು ಅಥವಾ ಸಮಾಜದಲ್ಲಿ ಗೌರವ ಸ್ಥಾನ ಪಡೆದವರ ನೆರವು ಪಡೆಯಬಹುದು. ಸಾಧ್ಯವಾದರೆ ಸಂಸ್ಥೆಯಿಂದ ಮಗುವನ್ನು ದತ್ತು ಪಡೆದ ಮೇಲೆ ಮೇಲ್ವಿಚಾರಣೆಗೆ ಒಂದು ಪ್ರಮಾಣ ಪತ್ರವನ್ನು ಕೊಡಬೇಕಾಗುವುದು.
​
ಸಂಸ್ಥೆಗಳಿಗೆ ಗೃಹ ಅಧ್ಯಯನ ಸಂಬಂಧಿತವಾದ ಎಲ್ಲಾ ವಿಧಿ ನಿಯಮಗಳನ್ನು ಕಳಿಸಬೇಕು. ಇಷ್ಟೆಲ್ಲಾ ಇದ್ದರೂ ಕೆಲವು ಸಲ ಎಲ್ಲಾ ವಿವರಗಳು ಸಿಗುವುದಿಲ್ಲ ಮತ್ತು ಮುಖ್ಯವಾದ ಅಂಶಗಳನ್ನು ನಮೂದಿಸಿರುವುದಿಲ್ಲ. ಆದರೂ ಮುಖ್ಯವಾದುವು ಸರಿಯಾಗಿದ್ದರೆ ಸಂಸ್ಥೆಯು ದತ್ತಕಕ್ಕೆ ಬರುವ ದಂಪತಿಗಳು ಅರ್ಜಿಯನ್ನು ಪರಿಗಣಿಸಹುದು. ಸಂದರ್ಶನದ ನಂತರ ಒಂದು ಸಪ್ಲಿಮೆಂಟರಿ ಗೃಹ ಅಧ್ಯಯನ ನಡೆಸಿ ಬಿಟ್ಟು ಹೋಗಿರುವ ವಿವರಗಳನ್ನು ನಮೂದಿಸಬಹುದು. ದತ್ತಕದ ಮಿಕ್ಕ ಎಲ್ಲಾ ನಿಯಮಗಳು ಹಿಂದಿನಂತೆಯೇ ಇರುತ್ತವೆ.
 
ಇದರಲ್ಲಿ ಗಮನಿಸಬೇಕಾದ ಅಂಶಗಳೆಂದರೆ
ಬೇರೆ ಸಂಸ್ಥೆಯ ನೆರವು ಪಡೆಯಬೇಕಾದ ನಿಯಮವು ಅನ್ವಯಿಸುವುದು ಭಾರತದಲ್ಲಿ ನೆಲೆಸಿರುವ ದಂಪತಿಗಳಿಗೆ ಮಾತ್ರ.
ಈ ಮಧ್ಯೆ ಏನಾದರೂ ಸಮಸ್ಯೆ ತಲದೋರಿದಲ್ಲಿ ದತ್ತಕಕ್ಕೆ ನೆರವಾದ ಸಂಸ್ಥೆಯು ಅದರದೇ ಆದ ಸಮಾಜಕಾರ್ಯಕರ್ತರಿಂದ ಅದನ್ನು ನಿಭಾಯಿಸುವುದೇ ಅದರ ಅಂತಿಮ ಜವಾಬ್ದಾರಿಯಾಗಿದೆ. ಮುಂಬೈ ಸಿಟಿ ಸಿವಿಲ್ ಕೋರ್ಟ್ ನೀಡಿದ ತೀರ್ಪಿನ ಪ್ರಕಾರ ಯಾವುದಾದರೂ ಸಂಸ್ಥೆಯು ಅವಶ್ಯಕವಾದ ಎಲ್ಲಾ ವರದಿಗಳನ್ನು ನೀಡಬಹುದಾದರೆ ಅವನ್ನು ದತ್ತು ತೆಗೆದುಕೊಳ್ಳುವ ದಂಪತಿಗಳಿಂದಲೇ ನೇರವಾಗಿ ಪಡೆಯಬಹುದು. ಆದರೆ ಒಂದು ವರದಿಯಾದರೂ ಜವಾಬ್ದಾರಿಯುತ ವ್ಯಕ್ತಿಯಿಂದ (ಅಂದರೆ ವೈದ್ಯರು ಅಥವಾ ಶಿಕ್ಷಕರು) ಬಂದಿರಬೇಕು.
 
ಶ್ರೀಮತಿ ಪದ್ಮಾ ಸುಬ್ಬಯ್ಯ
ಟ್ರಸ್ಟೀ, ಸಂಕಲ್ಪ
ನಂ.608, 10ನೇ ಅಡ್ಡರಸ್ತೆ, 7ನೇ ವಿಭಾಗ, ಜಯನಗರ ಪಶ್ಚಿಮ, ಬೆಂಗಳೂರು-70
0 Comments



Leave a Reply.


    20,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups

    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9

    Social Work Foot Prints


    RSS Feed


Site
  • Home
  • About Us
  • Editor's Blog
  • Leader's Talk
  • Blog
  • Online Store
  • Videos
  • Join Our Online Groups
Vertical Divider
HR Online Groups
20,000 HR PROFESSIONALS ARE CONNECTED THROUGH OUR NIRATHANKA HR GROUPS.
Join

Vertical Divider
Contact us
080-23213710
+91-8073067542
Mail-nirutapublications@gmail.com
Our Other Websites
www.hrkancon.com 
www.niratanka.org  
www.mhrspl.com
www.nirutapublications.org
Receive email updates on the new books & offers
for the subjects of interest to you.
Copyright Niruta Publications 2021
Website Designing & Developed by: www.mhrspl.com