Niruta Publications
  • Home
  • About Us
    • Ramesha's Profile
  • Publication With Us
  • Niruta Prints
    • Our Services
    • Designer Profile
  • Our Services
  • Leaders Talk
  • Social Work Blog
  • HR Blog
    • Blog
  • Media Mentions
    • Photos
  • Join Our Online Groups
  • Contact Us
  • Home
  • About Us
    • Ramesha's Profile
  • Publication With Us
  • Niruta Prints
    • Our Services
    • Designer Profile
  • Our Services
  • Leaders Talk
  • Social Work Blog
  • HR Blog
    • Blog
  • Media Mentions
    • Photos
  • Join Our Online Groups
  • Contact Us
Niruta Publications

ವಲಸೆ ಮತ್ತು ಮಾನವ ಹಕ್ಕುಗಳು

7/16/2017

0 Comments

 
ಮಾನವ ಸಮಾಜಜೀವಿ ಹಾಗೂ ಸಮೂಹ ಜೀವಿ. ಆತ ಒಬ್ಬಂಟಿಗನಾಗಿ ಬದುಕಲಾರ. ಹಾಗೆ ಬದುಕಿದರೂ ಹೊಟ್ಟೆಯ ಆವಶ್ಯಕತೆ ನೀಗಿಸಬೇಕು. ಬಡತನದಲ್ಲಿ ಜೀವನ ಸಾಗಿಸುವುದು ಹೊಟ್ಟೆಗಾದರೆ ತಂದೆ-ತಾಯಿಗಳ ಪಾಲನೆ-ಪೋಷಣೆ ಮಾಡಿಕೊಂಡು ಹಂತ-ಹಂತವಾಗಿ ಅಭಿವೃದ್ಧಿ ಕಾಣಬೇಕೆಂಬ ಆಕಾಂಕ್ಷೆ ಪ್ರತಿಯೊಬ್ಬರಲ್ಲೂ ಇರುತ್ತದೆ. ತನ್ನ ಸ್ವದೇಶದಲ್ಲಿ ಇಂತಹ ತೃಪ್ತಿ ಸಿಗದೆ ಹೋದಾಗ ವಿದೇಶಗಳನ್ನು ಆಶ್ರಯಿಸಿ ಅರೆಹೊಟ್ಟೆ ಅರೆಬಟ್ಟೆಯ ತಾಪತ್ರಯ ನೀಗಿಸಿಕೊಳ್ಳುವುದಕ್ಕಾಗಿ ಹುಟ್ಟೂರಿನಿಂದ ಕಾಲ್ತೆಗೆಯುವುದು ಸಹಜ. ಆದರೆ ಪ್ರಾಚೀನ ನಾಗರಿಕತೆಯಲ್ಲಿ ಮಾನವ ಜೀವನ ಸುಧಾರಣೆಗಾಗಿ ನದಿ ತೀರಗಳನ್ನರಸಿ ವಲಸೆ ಹೋಗುತ್ತಿದ್ದ, ಆದರೆ ಇಂದಿನ ಪರಿಸ್ಥಿತಿಗಳು ಭೋಗವನ್ನರಸಿ ವಲಸೆ ಹೋಗುವ ಸ್ಥಿತಿಗಳು ನಿರ್ಮಾಣಗೊಂಡಿವೆ.
ಎರಡನೆಯ ಮಹಾಯುದ್ಧದ ನಂತರ ಅಭಿವೃದ್ಧಿ ಹೊಂದಿದ ದೇಶಗಳು ಅತ್ಯಂತ ಕಷ್ಟಕರವಾದಂತಹ ದಿನಗಳನ್ನು ಕಳೆಯಬೇಕಾಯಿತು. ಏಕೆಂದರೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಯೋಗ್ಯವಾದ ಮಾನವ ಶಕ್ತಿಯ ಕೊರತೆಯಿಂದಾಗಿ ಬೇರೊಂದು ದೇಶದ ವೃತ್ತಿಪರರ ಮೇಲೆ ಅವಲಂಬಿತವಾಗಬೇಕಾಯಿತು. ಭಾರತದ ಅನೇಕ ವೈದ್ಯರು, ತಂತ್ರಜ್ಞರು 1960ರ ಮಧ್ಯಭಾಗದಲ್ಲಿ ಇಂಗ್ಲೆಂಡಿಗೆ ವಲಸೆ ಹೋಗಿ ನೆಲಸಿದರು. ಇಂಗ್ಲೆಂಡಿನ ಸ್ಥಳೀಯ ಆವಶ್ಯಕತೆಗಳು ಪೂರ್ಣಗೊಂಡ ನಂತರ 1962ರ ಜುಲೈ ತಿಂಗಳಲ್ಲಿ ಇಂಗ್ಲೆಂಡಿನ ಹೊಸ ವಲಸೆ ನೀತಿಯು ಭಾರತೀಯರನ್ನು ಅಮೆರಿಕಾಕ್ಕೆ ವಲಸೆ ಹೋಗುವಂತೆ ಮಾಡಿತು.
 
ರೇಡಿಯೊ ಕಾಲರ್, ಟ್ರೈವ್ಯಾಲಿ ರೇಡಿಯೊ ಕಾಲರ್
ಅಮೆರಿಕಾದಂತಹ ದೇಶಗಳು ಅನೇಕ ರಾಷ್ಟ್ರಗಳ ವಿದ್ಯಾರ್ಥಿಗಳಿಗೆ ಸ್ವರ್ಗ ಭೂಮಿಯಾಗಿದೆ. ಆ ಸ್ವರ್ಗದಲ್ಲಿ ತೇಲಾಡಬೇಕಾದರೆ ವಿದ್ಯಾರ್ಥಿಯಾಗಿಯೋ ಅಥವಾ ಕೂಲಿಯವನಾಗಿಯೋ ಆ ದೇಶಕ್ಕೆ ವಲಸೆ ಹೋಗುವ ಎಲ್ಲಾ ಕಠಿಣ ಮಾರ್ಗಗಳನ್ನು (ವಿಸಾ) ಮುಕ್ತಗೊಳಿಸಿ ಆದಾಯದ ಮೂಲ ಕಂಡುಕೊಂಡು ವಿದ್ಯಾರ್ಥಿಗಳನ್ನು ದೋಚಿದ ನಂತರ ಟ್ರೈವ್ಯಾಲಿಯಂತಹ ವಿಶ್ವವಿದ್ಯಾಲಯಗಳು ಅನಧಿಕೃತ ವಿಶ್ವವಿದ್ಯಾಲಯ ಎಂದು ಘೋಷಿಸುವ ಅಮೆರಿಕಾ  ಸರ್ಕಾರದ ನೀತಿಯನ್ನು ನೋಡಿದರೆ ಅಮೆರಿಕಾ ಭಾರತದ ಜೊತೆಗಿರುವ ಸಂಬಂಧಗಳ ಬಗ್ಗೆ ಅನುಮಾನಕ್ಕೆಡೆಮಾಡಿಕೊಡುತ್ತದೆ. (ತೊಟ್ಟಿಲಲ್ಲಿರುವ ಮಗುವನ್ನು ಚಿವುಟುವುದು, ಅಳುವ ಮಗುವನ್ನು ತೂಗುವುದು) ಅಮೆರಿಕಾದಲ್ಲಿ ಸುಮಾರು 1.8 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಟ್ರೈವ್ಯಾಲಿ ವಿಶ್ವವಿದ್ಯಾಲಯದ ಭಾರತೀಯ ವಿದ್ಯಾರ್ಥಿಗಳ ಕಾಲುಗಳಿಗೆ ರೇಡಿಯೋ ಕಾಲರ್ ತೊಡಿಸಿ (ರೇಡಿಯೋ ಕಾಲರ್ ಕಾಡಿನಲ್ಲಿರುವ ಪ್ರಾಣಿಗಳ ಚಲನ-ವಲನಗಳಿಗೆ ಉಪಯೋಗಿಸುವ ಒಂದು ತಂತ್ರಜ್ಞಾನ) ಅಮಾನವೀಯ ರೀತಿಯಲ್ಲಿ ನಡೆಸಿಕೊಳ್ಳುತ್ತಿರುವುದು. ಇದು ಪ್ರಥಮವೇನಲ್ಲ. ಈಗಾಗಲೇ ಭಾರತೀಯರನ್ನು ಅವಮಾನಿಸುವ ಘಟನೆಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿವೆ. ಅಲ್ಲಿನ ವಿಮಾನ ನಿಲ್ದಾಣಗಳಲ್ಲಿ ಭಾರತೀಯ ರಾಜತಾಂತ್ರಿಕರು ಹಾಗೂ ಗಣ್ಯರನ್ನು ಮೈದಡವಿ ಪರಿಶೀಲಿಸುವುದು ಸೇರಿದಂತೆ ಹಲ್ಲೆಗಳು, ಜನಾಂಗೀಯ ನಿಂದನೆಗಳಿಗೆ ಕೊನೆಯೇ ಇಲ್ಲ. ಆದರೆ ಮಾನವ ಹಕ್ಕುಗಳ ರಕ್ಷಣೆ ವಿಷಯದಲ್ಲಿ ಇಡೀ ವಿಶ್ವಕ್ಕೆ ಮಾದರಿಯಾಗಿದ್ದೇವೆ ಎಂದು ಹೇಳಿಕೊಳ್ಳುವ ಅಮೆರಿಕಾ ಸರ್ಕಾರ ಭಾರತೀಯರನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ. ಬೇರೆ ದೇಶಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾದರೆ ಅಂತಹ ದೇಶಗಳಿಗೆ ಎಚ್ಚರಿಕೆಯನ್ನು ನೀಡುವ ದೊಡ್ಡಣ್ಣನಿಗೆ ಯಾರು ಎಚ್ಚರಿಕೆ ನೀಡಬೇಕು? ಅಮೆರಿಕಾದ ಅಧ್ಯಕ್ಷ ಬರಾಕ ಒಬಾಮ ಒಂದೆಡೆ ಭಾರತೀಯ ವಿದ್ಯಾರ್ಥಿಗಳ ಪ್ರತಿಭೆಯನ್ನು ಕೊಂಡಾಡುತ್ತ ನೀವು ಅವರಂತೆ ಜ್ಞಾನವಂತರಾಗಬೇಕೆಂದು ತಮ್ಮ ದೇಶದ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳುತ್ತಾ ಮತ್ತೊಂದೆಡೆ ಅಮೆರಿಕಾದ ಅಧಿಕಾರಿಗಳಿಗೆ ಭಾರತೀಯ ವಿದ್ಯಾರ್ಥಿಗಳನ್ನು ಪ್ರಾಣಿಗಳಂತೆ ಕಾಣುತ್ತಿರುವ ಪರಿಯನ್ನು ಕಂಡು ಜಾಣ ಕುರುಡುತನ ಪ್ರದರ್ಶಿಸುತ್ತಿರುವುದನ್ನು ನೋಡಿ ಹಿರಿಯಣ್ಣನ ದ್ವಂದ್ವ ನೀತಿಗಳು ಎಂತಹವರಿಗೂ ಮನವರಿಕೆಯಾಗುತ್ತವೆ.

ಐದು ದಶಕಗಳಿಂದಲೂ ಅಮೆರಿಕಾಗೆ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗಿದೆಯೇ ಹೊರತು ಕಡಿಮೆಯಾಗಿಲ್ಲ. ಅದರಲ್ಲಿಯೂ ವಿದ್ಯಾರ್ಥಿಗಳ ಸಂಖ್ಯೆಯಂತು ಮಿತಿಮೀರಿದೆ. 1990-91 ರಲ್ಲಿ ವಿದೇಶಕ್ಕೆ ತೆರಳಿದವರ ಅಂಕಿ-ಅಂಶಗಳ ಪ್ರಕಾರ ಭಾರತದ ಒಟ್ಟು 4861 ವಿದ್ಯಾರ್ಥಿಗಳ ಪೈಕಿ (4063 ಗಂಡಸರು ಮತ್ತು 798 ಮಹಿಳೆಯರು) ಶೇ 88.7 ದಕ್ಷಿಣ ಅಮೆರಿಕಾಕ್ಕೆ ( 4234 ಯುಎಸ್ಎ, 76 ಕೆನಡಾ ) ಶೇ 6.5 ಯೂರೋಪ (227 ಯು.ಕೆ ) ಮತ್ತು ಉಳಿದವರು ಶೇ. 4.8 ಏಷಿಯಾ. ಈ ಮೇಲಿನ ಅಂಕಿ-ಅಂಶಗಳನ್ನು ಪರಿಗಣಿಸಿದಾಗ ಒಟ್ಟು ವಿದ್ಯಾರ್ಥಿಗಳಲ್ಲಿ ಶೇ 50ರಷ್ಟು ಇಂಜಿನಿಯರ್ ಮೂಲದವರಾಗಿದ್ದು ಉಳಿದ ಶೇ 31 ರಷ್ಟು ವಿಜ್ಞಾನ ಪದವೀಧರರು ಎಂಬುದು ಕಂಡುಬರುತ್ತದೆ.
​
ಜಾಗತೀಕರಣದಿಂದಾಗಿ ಭಾರತೀಯ ವಿದ್ಯಾರ್ಥಿಗಳು ತಮ್ಮ ಊರುಗಳನ್ನು ಬಿಟ್ಟು ವಿದ್ಯಾಭ್ಯಾಸಕ್ಕೆಂದು (ದುಡಿಮೆಯನ್ನೊಳಗೊಂಡಂತೆ) ವಿದೇಶಗಳಿಗೆ ವಲಸೆ ಹೋಗುವವರ ಸಂಖ್ಯೆ  ಹೆಚ್ಚಾದಂತೆಲ್ಲ ಆ ದೇಶಗಳಿಗೆ ವಿದೇಶಿ ವಿನಿಮಯ ಹೆಚ್ಚಾಗುತ್ತ ಹೋಗುತ್ತದೆ. ವಿದೇಶಗಳಿಗೆ ಮನುಷ್ಯ ವಲಸೆ ಹೋಗುತ್ತಿದ್ದು ತನ್ನ ಬದುಕನ್ನು ಕಟ್ಟಿಕೊಳ್ಳಲು. ಅದರಲ್ಲೂ ಇಂದಿನ ದಿನಗಳಲ್ಲಿ ಜಾಗತೀಕರಣದ ಅನಿವಾರ್ಯತೆಯಿಂದಾಗಿ ದೇಶ ಬಿಟ್ಟು (ಹಳ್ಳಿ ತೊರೆದು) ವಲಸೆ ಹೋಗುವಂತಹ ಪರಿಸ್ಥಿತಿಗಳು ನಿರ್ಮಾಣಗೊಂಡಿವೆ.
 
ಮರಳಿ ಮಣ್ಣಿಗೆ
ಪರಂಪರಾಗತವಾಗಿ ಬೆಳೆದು ಬಂದಿರುವ ಶಿಕ್ಷಣ ಪದ್ಧತಿಯನ್ನು ಜೀರ್ಣೋದ್ಧಾರ ಮಾಡದೆ ಇರುವಂತಹ ಶಿಕ್ಷಣವನ್ನು ತೊರೆದು ಅಲ್ಪ ಸುಖಕ್ಕಾಗಿ ವಲಸೆ ಹೋಗುವ ಜನರು (ವಿದ್ಯಾರ್ಥಿಗಳು) ಮುಂದೊಂದು ದಿನ ವಿದೇಶಗಳಲ್ಲಿ ತಮ್ಮ ನೆಮ್ಮದಿಯನ್ನು, ಅನನ್ಯತೆಯನ್ನು ಕಳೆದುಕೊಳ್ಳುವ ಪರಿಸ್ಥಿತಿ ಅವರ ಮುಂದಿದೆ. ಅಂದರೆ, ಅವರು ಪುನಃ ಭಾರತಕ್ಕೆ ಹಿಂದಿರುಗಿ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳದಿದ್ದರೆ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳಬೇಕಾಗುತ್ತದೆ, ಎಂಬುದನ್ನು ಈಗಾಗಲೇ ಅರಿತುಕೊಂಡು ತಮ್ಮ ಶಕ್ತಿ ಸಂಪನ್ಮೂಲವನ್ನು ತಮ್ಮ ನಾಡಿನಲ್ಲಿಯೇ ಉಪಯೋಗಿಸಿ ತಮ್ಮ ಹಾಗೂ ತಮ್ಮ ನಾಡಿನ ಉನ್ನತಿಯನ್ನು ಸಾಧಿಸುವುದು ವಿಹಿತ.
 
ಗುಂಡಪ್ಪ ಗುಡದನಾಳ
ಅತಿಥಿ ಉಪನ್ಯಾಸಕರು, ಸಮಾಜಕಾರ್ಯ ವಿಭಾಗ, ಪಿ.ಜಿ. ಸೆಂಟರ್, ಕೋಲಾರ
0 Comments



Leave a Reply.


    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9
    ಸಮಾಜಕಾರ್ಯ
    ಸಮುದಾಯ ಸಂಘಟನೆ


    Picture
    For more details

    Picture
    For more details

    Picture
    For more details

    Picture
    For more details

    Picture
    For more details

    Picture
    For more details

    Niruta Publications

    Social Work Foot Prints

    Leaders Talk

    Ramesha Niratanka


    Picture

    MHR LEARNING ACADEMY

    Get it on Google Play store
    Download App
    Online Courses

    RSS Feed

Niruta Publications Books (Dec 2025)
File Size: 756 kb
File Type: pdf
Download File



SITE MAP


Site

  • HOME
  • ABOUT US
  • BLOG​
  • HR BLOG
  • PUBLICATION WITH US
  • NIRUTA PRINTS​
  • JOIN OUR ONLINE GROUPS
  • VIDEOS​

NIRATHANKA

  • ​CSR
  • TREE PLANTATION PROJECT
  • MIGRANT WORKER RESIDENTIAL FACILITY & WELFARE MANAGEMENT SERVICES

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe


Picture
For More Details
Picture
More Details

Copyright Niruta Publications 2021,    Website Designing & Developed by: www.mhrspl.com