After going through your reply, I would like to bring the following for your notice with recent developments of KAPSW association.
You have been President of the organization from last 5 years. Just in few months back only you took the action w.r.t. re-register the Association. With this it is very clear that the association was defunct all these years in your leadership and none of the members were appraised about this. Only, when the questions were asked you become active in this regard. How do you substantiate this delay? Who is responsible for this delay? Is it wrong from members side to raise a voice in this regard?
18 Comments
ಮುನ್ನುಡಿ “ಸಾಮಾಜಿಕ ಕ್ರಿಯಾಚರಣೆ”-ಒಂದು ಐತಿಹಾಸಿಕ ಮೇರುಕೃತಿ ಭಾರತದಲ್ಲಿ ವೃತ್ತಿಪರ ಸಮಾಜಕಾರ್ಯ ಶಿಕ್ಷಣ ಪ್ರಾರಂಭವಾಗಿ 85 ವರ್ಷಗಳು ಸಂದವು. ಸಂಖ್ಯಾತ್ಮಕವಾಗಿ ಸಮಾಜಕಾರ್ಯವು ವಿಸ್ತಾರವಾಗಿ ಬೆಳೆದಿದೆ. ವಿಶೇಷವಾಗಿ ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಸಮಾಜಕಾರ್ಯ ವಿದ್ಯಾಲಯಗಳು ವಿಪುಲವಾಗಿ ಬೆಳೆದು ಬಂದಿವೆ. ಗುಣಾತ್ಮಕವಾಗಿ ಅಲ್ಲದಿದ್ದರೂ ಸಂಖ್ಯಾತ್ಮಕವಾಗಿ ಭಾರತದಲ್ಲಿ ಸಮಾಜಕಾರ್ಯ ಶಿಕ್ಷಣ ವಿಪುಲವಾಗಿ ಬೆಳೆದು ನಿಂತಿದ್ದು ನಮ್ಮೆಲ್ಲರಿಗೂ ಗೊತ್ತಿದ್ದ ವಿಷಯ. ವಿಷಾದದ ಸಂಗತಿಯೆಂದರೆ ಈ ಕಳೆದ ಎಂಟು ದಶಕಗಳಲ್ಲಿ ಸಮಾಜಕಾರ್ಯವು ತನ್ನ ಅಸ್ತಿತ್ವಕ್ಕಾಗಿ ಹೆಣಗಾಡುತ್ತಲೇ ಇದೆ.
ಯಾವುದೇ ಒಂದು ವೃತ್ತಿ ಗುಣಾತ್ಮಕವಾಗಿ ಬೆಳೆದು ತನ್ನ ಅಸ್ತಿತ್ವವನ್ನು ಸ್ಥಾಪಿಸಬೇಕಾದರೆ ಆ ವೃತ್ತಿಗೆ ಸಂಬಂಧಿಸಿದ ವೃತ್ತಿಪರ ಸಂಘಟನೆ ಹಾಗೂ ರಾಷ್ಟ್ರೀಯ ಪರಿಷತ್ತು ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ವಿಷಾದದ ಸಂಗತಿಯೆಂದರೆ ರಾಷ್ಟ್ರಮಟ್ಟದಲ್ಲಿ ಸಮಾಜಕಾರ್ಯಕರ್ತರ ಶಕ್ತಿಶಾಲಿಯಾದ ವೃತ್ತಿಪರ ಸಂಘಟನೆ ಇಲ್ಲದಿರುವುದು ಮತ್ತು ಸಮಾಜಕಾರ್ಯ ಪರಿಷತ್ತಿನ ಸ್ಥಾಪನೆ ಆಗದಿರುವುದು. ಮುಂಬರುವ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಸಮಾಜಕಾರ್ಯ ಪರಿಷತ್ತಿನ ಸ್ಥಾಪನೆಯಾಗಿ, ರಾಷ್ಟ್ರೀಯ ಸಮಾಜಕಾರ್ಯ ಸಂಘಟನೆ ಸ್ಥಾಪನೆಯಾಗಿ, ಸಮಾಜಕಾರ್ಯ ವೃತ್ತಿಗೊಂದು ನ್ಯಾಯ ಒದಗಿಸಿ ಕೊಡುತ್ತವೆ ಎಂದು ಆಶಿಸೋಣ. ಪ್ರೊ. ಆರ್.ಶಿವಪ್ಪ ಕುಲಸಚಿವರು, ಮೈಸೂರು ವಿಶ್ವವಿದ್ಯಾಲಯ, ಮೈಸೂರು ಗಾಂಧೀಜಿ ಎಂಬುದು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ತತ್ವ, ಅವರು ಈ ಯುಗದ ಸತ್ಯ. ಗಾಂಧೀಜಿ ಎಂಬುದು ಬರೀ ಹೆಸರಲ್ಲ, ಬಹು ದೊಡ್ಡ ಮೌಲ್ಯ. ಅವರ ಜೀವನ ಕ್ರಮ ಭಾರತೀಯ ಜೀವನ ಪದ್ದತಿಯ ಯಶಸ್ವೀ ಪ್ರಯೋಗ ಶಾಲೆ. ಈ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಪ್ರಸಾರವಾಗುತ್ತಿರುವ ಸಿದ್ದಾಂತಗಳಲ್ಲಿ ಗಾಂಧಿ ಕುರಿತಾದ ಸಾಹಿತ್ಯ, ಬರವಣಿಗೆ, ಪುಸ್ತಕಗಳೂ ಕೂಡ ಬಹು ಪ್ರಾಮುಖ್ಯತೆಯನ್ನು ಪಡೆದಿವೆ, ಪತ್ರಿಕೋದ್ಯಮಿ, ಸಮಾಜ ವಿಜ್ಞಾನಿ, ಸರ್ವೋದಯ ನೇತಾರ, ಶಿಕ್ಷಣತಜ್ಞ, ಸಾಹಿತ್ಯರತ್ನ, ತತ್ವಜ್ಞಾನಿ, ಹಾಸ್ಯ ಗಂಭೀರ, ಸ್ವದೇಶಿನಿಷ್ಠ, ವಕೀಲ ಎಂದೆಲ್ಲಾ ಹೆಸರಾದ ಗಾಂಧೀಜಿ ಮಾನವೀಯತೆಯ ಮಂಗಳ ರೂಪ, ನಾಳಿಯ ಯುಗ ವಿಜ್ಞಾನ ಮತ್ತು ವೇದಾಂತದ್ದು ಆದರೆ ಆಯುಗದ ಮೊದಲ ದಾರ್ಶನಿಕ ಗಾಂಧೀಜಿ ಎಂಬುದು ವಾಸ್ತವ. ಗಾಂಧೀಜಿಯವರ ವಿಚಾರಗಳು ಯಾವುದೇ ಇರಲಿ ಅವುಗಳು ದ್ವೇಷ, ಅಸೂಯೆ, ಹಿಂಸೆಯಿಂದ ಮುಕ್ತಗೊಳಿಸಿ ಮನುಷ್ಯನನ್ನಾಗಿ ಮಾಡುತ್ತವೆ. ಹೀಗಾಗಿ ಜಗತ್ತಿನ ಯಾವುದೇ ವಿಚಾರಗಳು ಗಾಂಧಿ ತತ್ವಗಳನ್ನು ಹೊರತುಪಡಿಸಿ ಮೌಲಿಕವಾಗಲಾರವು.
ಪೀಠಿಕೆ:
ಇತ್ತೀಚಿನ ದಿನಗಳಲ್ಲಿ ಉದ್ಯಮ 4.0 ಬಗ್ಗೆ ಹೆಚ್ಚಾಗಿ ಮಾತನಾಡುವುದನ್ನು ಸಂಸ್ಥೆಗಳಲ್ಲಿ ಮತ್ತು ಸಮೂಹ ಮಾಧ್ಯಮಗಳಲ್ಲಿ ಕೇಳುತ್ತಿದ್ದೇವೆ. ಮೇಕೆನ್ಸಿ ಎಂಬ ಸಂಸ್ಥೆಯ ಅಧ್ಯಯನದ ಪ್ರಕಾರ 2025 ರ ಒಳಗೆ ಕಾರ್ಖಾನೆಗಳಲ್ಲಿ ವಸ್ತುಗಳ ಅಂತರ್ಜಾಲದ ಬಳಕೆಯಿಂದಾಗಿ, ಸುಮಾರು 84 ಲಕ್ಷ ಕೋಟಿ ರೂಪಾಯಿಯಿಂದ 216 ಲಕ್ಷ ಕೋಟಿ ರೂಪಾಯಿಯಷ್ಟು ಆರ್ಥಿಕತೆಯ ಮೇಲೆ ಪ್ರಭಾವ ಬೀರಲಿದೆ. ಆದ್ದರಿಂದ, ಉದ್ಯಮ 4.0 ಬಗ್ಗೆ ತಿಳಿದುಕೊಳ್ಳುವುದು ಮಾನವ ಸಂಪನ್ಮೂಲ ವೃತ್ತಿನಿರತರು ಸೇರಿದಂತೆ ಎಲ್ಲರಿಗೂ ಅನಿವಾರ್ಯವಾಗಿದೆ. ಉದ್ಯಮ 4.0 ನವಯುಗದ ಕೈಗಾರಿಕಾ ಕ್ರಾಂತಿಯಾಗಿದ್ದರೂ, ಈ ಹಿಂದಿನ ಮೂರು ಕೈಗಾರಿಕಾ ಕ್ರಾಂತಿಗಳ ಮುಂದುವರೆದ ಭಾಗವಾಗಿದೆ. ಹಾಗಾದರೆ, ಕೈಗಾರಿಕಾ ಕ್ರಾಂತಿಯು ಹಿಂದಿನ ಕಾಲದಿಂದ ಇಂದಿನವರೆಗೂ ಹೇಗೆ ವಿಕಸನಗೊಂಡಿದೆ ಎಂಬುದನ್ನು ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ. ಶರಣ ಸಾಹಿತ್ಯ
ಕರ್ನಾಟಕದ ಭಕ್ತಿ ಪಂಥದಲ್ಲಿ ಶರಣ ಸಾಹಿತ್ಯ ಮತ್ತು ದಾಸ ಸಾಹಿತ್ಯ ಎರಡು ಸಮಾನಾಂತರ ಮಾರ್ಗಗಳು. ಅವುಗಳ ಉದ್ದೇಶ, ಸಾಧನಾ ಪಥ, ಒಪ್ಪಿಕೊಂಡ ಮೌಲ್ಯಗಳು ಇತ್ಯಾದಿ ಸ್ವಲ್ಪ ಹೆಚ್ಚು ಕಡಿಮೆ ಒಂದೇ ತರಹ ಕಾಣಿಸುತ್ತವೆ. ಶರಣ ಸಾಹಿತ್ಯದಲ್ಲಿ ಶಿವನ ಪಾರಮ್ಯವನ್ನು ಪ್ರತಿಪಾದಿಸಿದರೆ, ದಾಸಸಾಹಿತ್ಯದಲ್ಲಿ ಹರಿಸರ್ವೋತ್ತಮತ್ವವನ್ನು ನಿರೂಪಣೆ ಮಾಡಿದೆ. ಭಕ್ತಿ ಮಾರ್ಗವನ್ನು ಎರಡೂ ಸಾಹಿತ್ಯ ಪ್ರಕಾರಗಳೂ ಅಳವಡಿಸಿಕೊಂಡಿವೆ. ಹಾಗೇನೆ ಬದುಕಿನ ಮೌಲ್ಯಗಳನ್ನು ವಿವರಿಸುವಾಗ ಭಾವನೆ, ಕಲ್ಪನೆಗಳು ಒಂದೇ ಆಗಿದ್ದು ಶಬ್ದ ಪ್ರಯೋಗಗಳು, ಸಣ್ಣಪುಟ್ಟ ಆಚಾರಗಳು ಬೇರೆ ಬೇರೆ ಆಗಿರುವುದನ್ನು ಕಾಣಬಹುದಾಗಿದೆ. ಪೀಠಿಕೆ
ಭಾಷೆ ಎಂಬುದು ಅನಾದಿ ಕಾಲದಿಂದಲೂ ಸಂವಹನದ ಒಂದು ಮುಖ್ಯ ಭಾಗವಾಗಿ ಮಾನವನ ಎಲ್ಲ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಪೂರಕ ಸಾಧನವಾಗಿ ಕಾರ್ಯನಿರ್ವಹಿಸುತ್ತಿದೆ. ಬಹುಶಃ ಭಾಷೆ ಎಂಬುದೇ ಒಂದು ಸಾಧನವಾಗಿ ಮಾನವ ಮತ್ತು ಮೃಗಗಳನ್ನು ಬೇರ್ಪಡಿಸಿದೆ ಎಂದರೆ ತಪ್ಪಲ್ಲ. ಜಗತ್ತಿನ ಸಾವಿರಾರು ಭಾಷೆಗಳಿಗೆ ಹೇಳಿಕೊಳ್ಳುವಷ್ಟು ಇತಿಹಾಸ ಮತ್ತು ಪರಂಪರೆಯ ಬೆಂಬಲವಿದೆ. ಭಾಷೆ ಕೇವಲ ಶಬ್ದಗಳ ಆಡಂಬರವಾಗದೆ ಜನರ ಜೀವನಾಡಿಯಲ್ಲಿ ಬೆರೆತು ಹೋಗಿರುತ್ತದೆ. ಸಂಸ್ಕೃತಿಯ ಕೈಪಿಡಿಯಾಗಿ, ಆಚಾರ-ವಿಚಾರಗಳ ಬೆನ್ನೆಲುಬಾಗಿ, ವೃತ್ತಿಧರ್ಮಕ್ಕೆ ಆಸರೆಯಾಗಿ, ಸಂವಹನ ಕಲೆಯನ್ನು ಪೋಷಿಸುತ್ತಾ ಊರಿಂದ ಊರಿಗೆ ನಾಲಗೆಯ ಮೇಲೆ ಹರಿದಾಡಿ ತನ್ನ ತುಂಬು ತೋಳುಗಳಿಂದ ಜನರನ್ನು ಸೆಳೆದಪ್ಪಿಕೊಂಡ ಪರಿಯೇ ಅದ್ಭುತವಾದದ್ದು, ಭಾಷೆಯ ಬೆಂಬಲವಿಲ್ಲದೆ ಇದ್ದರೆ ಮಾನವನ ಬಾಯಿಂದ ಹೊರಟ ರೋದನೆಗಳೆಲ್ಲ ಚೀರಾಟಗಳಾಗಿರುತ್ತಿತ್ತು. ಅಕ್ಷರ ಜೋಡಣೆಗಳಿಲ್ಲದೆ ಅನುಭವಗಳು ಅರ್ಥ ಕಳೆದುಕೊಳ್ಳುತ್ತಿದ್ದವು. ಯಹೂದಿಧರ್ಮ (ಹಿಬ್ರೂ ಧರ್ಮ)
ಪಾಶ್ಚಾತ್ಯ ಜಗತ್ತಿನ ಪ್ರಮುಖ ಧರ್ಮಗಳಾದ ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳಿಗಿಂತಲೂ ಹಳೆಯದಾದ ಮತ್ತು ಈ ಎರಡೂ ಧರ್ಮಗಳಿಗೂ ಒಂದು ಹಿನ್ನೆಲೆಯನ್ನು ಒದಗಿಸಿದ ಧರ್ಮವೆಂದರೆ ಯಹೂದಿಧರ್ಮ. ಅದನ್ನು ಹಿಬ್ರೂ ಧರ್ಮವೆಂದೂ ಕರೆಯಲಾಗುತ್ತದೆ. ಇಸ್ರೇಲಿನಲ್ಲಿದ್ದು ಹಾಗೂ ಈ ಧರ್ಮವನ್ನು ಅನುಸರಿಸಿದವರನ್ನು ಜ್ಯೂ (Jew) ಜನಾಂಗವೆಂದು ಕರೆಯುತ್ತಾರೆ. ಇವರ ಮೂಲಪುರುಷ ಅಬ್ರಹಾಮ್. ಜ್ಯೂ ಜನಾಂಗದ ಪ್ರವಾದಿಯಾದ ಮೋಜಿಸ್ (ಮೋಶೆ) ಯಹೂದಿ ಧರ್ಮದ ಪ್ರವರ್ತಕ. ಪವಿತ್ರ ಗ್ರಂಥ ಬೈಬಲ್ಲಿನ ಹಳೆಯ ಒಡಂಬಡಿಕೆಯ ಐದು ಕಾಂಡಗಳ ರಚನೆಕಾರ ಇವನೇ. ವೇದಗಳಂತೆಯೇ ಬೈಬಲ್ ಕೂಡಾ ಒಬ್ಬರಿಂದ ಬರೆಯಲ್ಪಟ್ಟಿಲ್ಲ. ದಾರ್ಶನಿಕರಾದ 40 ಜನ ಗ್ರಂಥಕಾರರು ಬೈಬಲನ್ನು ರಚನೆ ಮಾಡಿದ್ದು, ಅವರ ಚಿಂತನೆಗಳಿಗೆ ಮೂಲಾಧಾರ ಮೋಜಿಸ್ ಬರೆದ ಈ ಐದು ಕಾಂಡಗಳೆಂದು ಹೇಳಲಾಗುತ್ತದೆ. ಕೃತಿ ವಿಮರ್ಶನಾಕಾರರು ಕು.ದೇವಿಂದ್ರಪ್ಪ ಎಂ., ರಶ್ಮೀ ಜಿ.ಎಂ, ಸಂಶೋಧನಾರ್ಥಿಗಳು ಮತ್ತು ಡಾ|| ರವೀಂದ್ರ ಡಿ ಗಡ್ಕರ್, ಪ್ರಾದ್ಯಾಪಕರು ಮತ್ತು ಮಾರ್ಗದರ್ಶಕರು, ಸಮಾಜಕಾರ್ಯ ಅಧ್ಯಯನ ವಿಭಾಗ, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ, ಶಿವಮೊಗ್ಗ. ವೃತ್ತಿ ಸಮಾಜಕಾರ್ಯದ ಆರಂಭವು, ವಿದೇಶದಿಂದ ಪ್ರಾರಂಭವಾಗಿ ನಮ್ಮ ದೇಶಕ್ಕೆ ಬರಲು ಸುಮಾರು 38 ವರ್ಷಗಳೇ ಬೇಕಾಯಿತು. ಪದವಿ ಹಂತದಿಂದ ಆರಂಭಿಸಿದ ಶಿಕ್ಷಣ ಸಂಶೋಧನೆವರೆಗೂ ತಲುಪಿತು. ದಶಕಗಳು ಕಳೆದಂತೆ, ಸಮಾಜಕಾರ್ಯದ ಶಿಕ್ಷಣ ಕೇಂದ್ರಗಳ ವ್ಯಾಪ್ತಿ ವಿಸ್ತರಿಸುತ್ತ ಅದರ ಬೇಡಿಕೆ ಕೂಡ ಹೆಚ್ಚಿಸಿಕೊಂಡಿತು. ಈ ಕೃತಿಯ ಲೇಖಕರು ವ್ಯಕ್ತಿ ಹಾಗೂ ಕುಟುಂಬಗಳೊಡನೆ ಕಾರ್ಯನಿರ್ವಹಿಸುವಾಗ ಸಮಾಜಕಾರ್ಯಕರ್ತರ ಕಾರ್ಯದಕ್ಷತೆಯನ್ನು ಹಾಗೂ ಈ ಕೃತಿಯ ಮುಖ್ಯ ಶೀರ್ಷಿಕೆಯ ಪರಿಕಲ್ಪನೆಗಳನ್ನು ಹಂತ ಹಂತವಾಗಿ ಓದುಗರಿಗೆ ಅರ್ಥೈಸಲು ಹಲವಾರು ಸಮಾಜಕಾರ್ಯ ವಿದ್ವಾಂಸರ ವ್ಯಾಖ್ಯಾನವನ್ನು ಮತ್ತು ವ್ಯಕ್ತಿ ಹಾಗೂ ಕುಟುಂಬಗಳ ಸಮಾಜಕಾರ್ಯ ಸಾಹಿತ್ಯವನ್ನು ಮತ್ತು ವಚನ ಸಾಹಿತ್ಯ, ದಾಸ ಸಾಹಿತ್ಯ, ಜಾನಪದ ಸಾಹಿತ್ಯ ಹಾಗೂ ಕಾವ್ಯಗಳೂಂದಿಗೆ ಅನುಸಂಧಾನಿಸುತ್ತಾ ವ್ಯಕ್ತಿ ಹಾಗೂ ಕುಟುಂಬಗಳೊಡನೆ ಸಮಾಜಕಾರ್ಯ ಎಂಬ ಶೀರ್ಷಿಕೆಯಡಿ ಈ ಕೃತಿ ರಚಿಸಿದ್ದಾರೆ.
ಕಣ್ಣಾರೆ ಕಂಡರೂ ಪ್ರಮಾಣಿಸಿ ನೋಡು ಎಂಬ ನಾಣ್ಣುಡಿ ಸರ್ವಕಾಲಕ್ಕೂ ಪ್ರಸ್ತುತ. ಆದರೆ ನಮ್ಮ ತಿಳಿವಳಿಕೆಯ ಚೌಕಟ್ಟಿನಲ್ಲಿ ಅದೆಷ್ಟೋ ವಿಚಾರಗಳನ್ನು ಗಮನಿಸಿದ ಕೂಡಲೇ ಅದನ್ನೇ ವಾಸ್ತವವೆಂದು ತಿಳಿದು ವಿವೇಚನಾರಹಿತವಾಗಿ ಒಂದು ನಿರ್ದಿಷ್ಟ ತೀರ್ಮಾನಕ್ಕೆ ಬಂದುಬಿಡುತ್ತೇವೆ. ಇದು ತಪ್ಪು ಎಂಬ ಅರಿವು ನಮಗೆ ಇರುವುದೇ ಇಲ್ಲ. ಕಾಲಾನಂತರ ನಮ್ಮ ತೀರ್ಮಾನ ತಪ್ಪು ಎಂದು ಅರಿತಾಗ ಪಶ್ಚಾತ್ತಾಪ ಪಡುತ್ತೇವೆ. ಕಣ್ಮುಂದೆ ಕಾಣುವುದೇ ವಾಸ್ತವ ಹಾಗೂ ನಮಗೆ ತಿಳಿದಿರುವುದೇ ಸತ್ಯ ಎಂಬುದನ್ನು ಬಲವಾಗಿ ನಂಬುವ ಮನುಷ್ಯ ಪೂರ್ವಾಗ್ರಹ ಪೀಡನೆಗೆ ಒಳಗಾಗಿ ಹಲವಾರು ಸೂಕ್ಷ್ಮ ವಿಚಾರಗಳನ್ನು ಕಡೆಗಣಿಸುತ್ತಾನೆ. ನಾಗರಿಕ ಎಂದು ಬಿಂಬಿಸಿಕೊಳ್ಳುವ ಅಕ್ಷರಸ್ಥ ಮಾನವ ತನ್ನನ್ನು ತಾನು ವಿದ್ಯಾವಂತನೆಂದು ಬಿಂಬಿಸಿಕೊಳ್ಳುವ ಭರದಲ್ಲಿ ವಾಸ್ತವಾಂಶಗಳನ್ನು ವಿಶ್ಲೇಷಿಸುವ ಗೋಜಿಗೆ ಹೋಗುತ್ತಿಲ್ಲ. ಇದರ ಪ್ರತಿಫಲವೇ ತಪ್ಪುಗ್ರಹಿಕೆ. ಅಂತಹ ಒಂದು ಸಂದರ್ಭವನ್ನು ನಿಮ್ಮ ಮುಂದಿಡುವ ಸಣ್ಣ ಪ್ರಯತ್ನವೇ ಅಪಾರ್ಥ.
ಚಾಣಕ್ಯನ ನೀತಿಶಾಸ್ತ್ರ - ಅರ್ಥಶಾಸ್ತ್ರ
ಮಾನವನ ಬದುಕಿಗೆ ಉಪಯುಕ್ತವಾಗುವ ನೀತಿಸೂತ್ರಗಳನ್ನು ವಿವರಿಸುವ ಇನ್ನೊಂದು ಗ್ರಂಥವೆಂದರೆ ಚಾಣಕ್ಯನ (ವಿಷ್ಣುಶರ್ಮ, ಕೌಟಿಲ್ಯ) ನೀತಿಶಾಸ್ತ್ರ. ಚಾಣಕ್ಯ ಅದ್ವಿತೀಯ ದೇಶಭಕ್ತ, ಅಪ್ರತಿಮ ಸಂಘಟಕ. ಸುಖ ಲೋಲುಪತೆಯಲ್ಲಿ ತಮ್ಮ ರಾಜಧರ್ಮ (ಕರ್ತವ್ಯ)ವನ್ನು ಮರೆತ ಮಗಧ ಸಾಮ್ರಾಜ್ಯವನ್ನು ಆಳುತ್ತಿದ್ದ ನವನಂದರನ್ನು ನಿಗ್ರಹಿಸಿ, ಅದೇ ವಂಶದ ಕುಡಿಯಾದ ಚಂದ್ರಗುಪ್ತನನ್ನು ಸಾಮ್ರಾಜ್ಯಾಧಿಪತಿಯನ್ನಾಗಿ ಮಾಡಿ, ಧರ್ಮ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿದ ಧೀರ. ವಾಸುದೇವ ಶರ್ಮಾ ಎನ್.ವಿ. 2 ಸೆಪ್ಟೆಂಬರ್ 2018, ಬೆಂಗಳೂರು ತಾಂತ್ರಿಕ ವಿಚಾರಗಳನ್ನು ಕುರಿತು ಯಾವುದೇ ಭಾಷೆಯಲ್ಲಿ ಸರಳವಾಗಿ ಹೇಳುವುದು ಅಷ್ಟು ಸುಲಭವಲ್ಲ. ಅದು ವೈದ್ಯಕೀಯವಿರಬಹುದು, ಇಂಜಿನಿಯರಿಂಗ್, ವಿಜ್ಞಾನ, ಮಾನವಿಕ ಶಾಸ್ತ್ರಗಳು ಅಥವಾ ಪ್ರದರ್ಶನ ಕಲೆಗಳೇ ಆಗಿರಬಹುದು. ಮೂಲತಃ ಅಂತಹ ತಾಂತ್ರಿಕ ವಿಷಯ, ವಿಚಾರಗಳನ್ನು ವಿವರಿಸಲು ಹೊರಟಾಗ, ಅದರಲ್ಲೂ ಸಾಮಾನ್ಯವಾಗಿ ಆಯಾ ಶಾಸ್ತ್ರ, ಅಧ್ಯಯನಗಳನ್ನು ಕುರಿತು ಆಯಾ ನಿರ್ದಿಷ್ಟ ಭಾಷೆಯಲ್ಲಿ, ಪರಿಸರದಲ್ಲಿ ಅಧ್ಯಯನ, ಶಿಕ್ಷಣ ಹೆಚ್ಚು ಆಗದಿದ್ದಾಗ ಎರಡು ರೀತಿಯ ತೊಡಕುಗಳನ್ನು ಎದುರಿಸಬೇಕಾಗುತ್ತದೆ. ಮೊದಲನೆಯದು ಪರಿಕಲ್ಪನೆಗಳನ್ನು ವಿವರಿಸಲು ನಮ್ಮ ಸುತ್ತಮುತ್ತಲಿನ ಪರಿಸರದಿಂದ ಉದಾಹರಣೆ, ಅನುಭವಗಳನ್ನು ಹೇಗೆ ಮತ್ತು ಯಾವುದರಿಂದ ಹೆಕ್ಕುವುದು ಮತ್ತು ಎರಡನೆಯದು, ಅವುಗಳನ್ನು ಅಭಿವ್ಯಕ್ತಿಪಡಿಸಲು ಬೇಕಾದ ಭಾಷೆ ಮತ್ತು ಪದ ಸಂಪತ್ತನ್ನು ಎಲ್ಲಿಂದ ತೆಗೆದುಕೊಳ್ಳುವುದು.
ನವೆಂಬರ್ ಎಂದಾಕ್ಷಣ ನಮಗೆ ಮನಸ್ಸಿಗೆ ಬರುವುದು ಮಕ್ಕಳು ಮತ್ತು ಮಕ್ಕಳ ದಿನಾಚರಣೆ. ಮಕ್ಕಳ ದಿನಾಚರಣೆಯಲ್ಲಿ ಮಕ್ಕಳಿಗೆ ಪುಸ್ತಕವೋ, ಪೆನ್ನೋ, ಸಿಹಿತಿಂಡಿಗಳೋ ಎನೋ ಒಂದು ಕೊಟ್ಟು ಜೊತೆಗೆ ಒಂದಷ್ಟು ಭಾಷಣ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಮಕ್ಕಳನ್ನು ಮನೆಗೆ ಕಳುಹಿಸುವುದು ನಮ್ಮಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ಇದನ್ನೆ ನಾವು ವರ್ಷಪೂರ್ತಿ ಮಕ್ಕಳಿಗಾಗಿ ನಾವು ಹಾಗೆ ಮಾಡಿದೆವು, ಹೀಗೆ ಮಾಡಿದೆವು ಎಂದುಕೊಳ್ಳುವವರು ಕಡಿಮೆಯೇನಲ್ಲ. ನೀವು ಮಕ್ಕಳ ದಿನಾಚರಣೆಗೆ ಹೋಗುವ ಮುಂಚೆ ಇದನ್ನು ಸ್ವಲ್ಪ ತಿಳಿದುಕೊಳ್ಳಿ...
ಪೀಠಿಕೆ :
ಲೋಕಾ: ಸಮಸ್ತಾ: ಸುಖಿನೋ ಭವಂತು ಎಂಬ ವೇದೋಕ್ತಿ ನಮ್ಮ ಋಷಿ ಮುನಿಗಳ ಚಿಂತನೆ ಚರಾಚರ ಪ್ರಕೃತಿಯ ಭವ್ಯ ಕಲ್ಪನೆಗೆ ಅದ್ಬುತ ಸಾಕ್ಷಿ, ಅವರು ಪ್ರಕೃತಿಯೊಡನೆ ಸಾಮರಸ್ಯದಿಂದ ಬದುಕಿ, ಸತ್ಯಾನ್ವೇಷಣದಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಿದ್ದರು. ಪ್ರಕೃತಿಯೆಂದರೆ ಅಸಂಖ್ಯಾತ ವೈವಿಧ್ಯತೆಯ ದೃಷ್ಠಿ; ಗೋಚರ, ಅಗೋಚರ, ಸಸ್ಯ ಮತ್ತು ಪ್ರಾಣಿ ಜೀವರಾಶಿಗಳಿಂದ ಕೂಡಿದ ಕಾಡು, ನದಿ, ಭಾವಿ, ಸರೋವರ, ಸಾಗರಗಳಲ್ಲಿ ಕಾಣುವ ಜೀವಕೋಟಿಯ ಸಂಜೀವಿನಿ, ನೀರು ಹಾಗೂ ಇವುಗಳನ್ನು ಆವರಿಸಿದ ಜೀವನದ ಉಸಿರು ಗಾಳಿ, ಶಕ್ತಿ ಮೂಲ ಸೂರ್ಯನನ್ನೊಳಗೊಂಡ ಭೂಮಿ, ಇಂತಹ ಭೂಮಂಡಲ ಇಂದು ಬರಿದಾಗುತ್ತಿದೆ. ಗ್ರಾಮೀಣ ಭಾಗಗಳು ನಗರಗಳಾಗುತ್ತಿವೆ. ನಗರಗಳು ಬದಲಾವಣೆಯ ಶರವೇದದಲ್ಲಿ ತಮ್ಮ ಮೂಲ ನೆಲೆಯನ್ನು ಕಳೆದುಕೊಳ್ಳುತ್ತಿದೆ, ಅಂತಹ ನಗರಗಳಲ್ಲಿ ಬೆಂಗಳೂರು ಸಹ ಒಂದು. ಭಾರತೀಯ ಸಮುದಾಯ ಸಂಘಟನೆಯ ಉಗಮವನ್ನು ವೇದಪೂರ್ವ ಕಾಲದ ಆರ್ಯರ ಜೀವನಪದ್ಧತಿಯಲ್ಲಿಯೇ ಗುರುತಿಸಬಹುದಾಗಿದೆ. ವೇದಪೂರ್ವದಲ್ಲಿ, ಇಡೀ ಭಾರತದೇಶ (ಅಖಂಡ ಭಾರತ)ದಲ್ಲಿ ಸಾವಿರಾರು ಜನಾಂಗಗಳು, ಬುಡಕಟ್ಟುಗಳು, ಸಮುದಾಯಗಳು, ಪಂಗಡಗಳು, ಕುಲಗಳು ಎಂದು ಕರೆಯಲ್ಪಡುವ ಗುಂಪುಗಳು ಅಸ್ಥಿತ್ವದಲ್ಲಿದ್ದವು ಎಂಬ ಅಂಶವನ್ನು ಚರಿತ್ರೆ ದಾಖಲಿಸಿದೆ. ಜನರು ಇಂತಹ ಚಿಕ್ಕ ಚಿಕ್ಕ ಪ್ರಾಚೀನ ಸಮುದಾಯಗಳಲ್ಲಿ ಸಹಜೀವನ ಮಾಡುತ್ತಿದ್ದರು.1 ವೇದಪೂರ್ವ ಕಾಲದ ಸಮುದಾಯಗಳ ಸಹಜೀವನ ಮತ್ತು ಸಂಘಟನೆಯ ಅಂಶಗಳನ್ನು ವಸ್ತುನಿಷ್ಠವಾಗಿ ಅರ್ಥಮಾಡಿಕೊಳ್ಳಬೇಕೆಂದರೆ, ಅವರ ಯಜ್ಞ, ಸತ್ರ, ಕ್ರತು, ದಾನ ಮುಂತಾದ ಶಬ್ದಗಳ, ಪರಿಕಲ್ಪನೆಗಳ, ಪದ್ಧತಿಗಳ ಹಾಗೂ ಮೌಲ್ಯಗಳ ಬಗ್ಗೆ ತಿಳಿದುಕೊಳ್ಳಬೇಕು.
ಪೀಠಿಕೆ:
ಭಾರತೀಯ ಬುಡಕಟ್ಟು ಸಮುದಾಯಗಳು ಇಂದು ಕವಲುದಾರಿಯಲ್ಲಿವೆ. ಬುಡಕಟ್ಟು ಜನರು ತಮ್ಮ ಸಮಾಜದ ಅರಿವು ಮತ್ತು ಸಾಂಸ್ಕೃತಿಕ ಸಮನ್ವಯದ ನಡುವೆ ಉಭಯ ಸಂಕಟಕ್ಕೊಳಗಾಗಿದ್ದಾರೆ. ತಮ್ಮ ಸಂಸ್ಕೃತಿಯ ಮೇಲೆ ಪರಕೀಯ ಸಂಸ್ಕೃತಿಯ ಒತ್ತಡಗಳಿಂದ ರಕ್ಷಿಸಿಕೊಳ್ಳುವ ಸಮಸ್ಯೆ ಒಂದು ಕಡೆಯಾದರೆ, ಇವರು ತಮ್ಮನ್ನು ತಾವು ಭಾರತೀಯ ಸಮಾಜದ ಮುಖ್ಯವಾಹಿನಿಯಲ್ಲಿ ಒಗ್ಗೂಡುವಿಕೆಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಮತ್ತೊಂದು ಕಡೆಯಾಗಿದೆ. ಬುಡಕಟ್ಟು ಜನರಿಗೆ ರಾಷ್ಟ್ರೀಯ ಮುಖ್ಯವಾಹಿನಿ ಎಂದರೇನು? ಹಿಂದೂ ಮುಖ್ಯವಾಹಿನಿ ಎಂದರೇನು? ಎಂಬ ಬಗ್ಗೆಯೇ ಗೊಂದಲವಿದೆ. ಭಾರತದ ಸಂವಿಧಾನದ ಪ್ರಕಾರ ಧರ್ಮನಿರಪೇಕ್ಷತೆಯು ಮುಖ್ಯವಾಹಿನಿಯಾದರೆ ಬುಡಕಟ್ಟು ಜನರ ಪೌರಜೀವನ ಏನಾಗಬಹುದು? ಬುಡಕಟ್ಟು ಜನರ ಪರಂಪರೆ ಪದ್ಧತಿಗಳು, ನಂಬಿಕೆಗಳು ಅವರದೇ ಆದ ವಿಧಿವಿಧಾನಗಳಿಂದ ಕೂಡಿದ ಜೀವನ ಶೈಲಿಯನ್ನೇ ತ್ಯಜಿಸಿ, ಈ ದೇಶದ ವಿಭಿನ್ನ ಸಂಸ್ಕೃತಿಗಳೊಡನೆ ಏಕೀಕರಣಗೊಂಡರೆ ಇವರು ತಮ್ಮ ಅನನ್ಯತೆಯನ್ನು ತಮ್ಮತನವನ್ನು ಕಳೆದುಕೊಳ್ಳಬೇಕಾಗುತ್ತದೆ. ಇಂತಹ ಪರಿಸ್ಥಿತಿಗಳನ್ನು ಎದುರಿಸುತ್ತಿರುವ ಬುಡಕಟ್ಟು ಜನರಲ್ಲಿ ಹಲವಾರು ಸಂದಿಗ್ಧತೆಗಳು ಜಿಜ್ಞಾಸೆಗಳು ಉಂಟಾಗಿ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಜೊತೆಗೆ ಬದಲಾಗುತ್ತಿರುವ ಆರ್ಥಿಕ ಮತ್ತು ಸಾಮಾಜಿಕ-ರಾಜಕೀಯ ವ್ಯವಸ್ಥೆಯಲ್ಲಿ ಸಾಮಾನ್ಯ ಉತ್ಪಾದನಾ ಸಂಘಟನೆ ಮತ್ತಿತರ ಪ್ರಕ್ರಿಯೆಗಳೊಂದಿಗೆ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಸಾಂವಿಧಾನಿಕವಾಗಿ ಬದಲಾದ ಜಾತ್ಯಾತೀತ ಪ್ರಜಾಪ್ರಭುತ್ವ ವ್ಯವಸ್ಥೆಯ ಚೌಕಟ್ಟಿನಲ್ಲಿಯೂ ಭಾಗವಹಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಬುಡಕಟ್ಟುಗಳ ಸಮಾಜೋ-ಸಾಂಸ್ಕೃತಿಕ ಜೀವನದ ಮೇಲೆ ಅನ್ಯ ಸಂಸ್ಕೃತಿಗಳ ಪ್ರಭಾವ ಮತ್ತು ಪರಿಣಾಮಗಳು ಜಾಗತೀಕರಣ ಪ್ರಕ್ರಿಯೆ ಮೂಲಕ ಹೇಗೆ ಕಾರ್ಯೋನ್ಮುಖವಾಗುತ್ತಿವೆ ಮತ್ತು ಕರ್ನಾಟಕದ ಬುಡಕಟ್ಟು ಸಮುದಾಯಗಳು ಪ್ರಸ್ತುತತೆಯಲ್ಲಿ ಎತ್ತ ಸಾಗುತ್ತಿವೆ? ಇವುಗಳ ಭವಿಷ್ಯದ ದಿಕ್ಕುಗಳಾವುವು? ಎಂಬುದನ್ನು ಕುರಿತಾದ ಸೂಕ್ಷ್ಮ ಮತ್ತು ಸಮಗ್ರ ಅಧ್ಯಯನಗಳ ಅವಶ್ಯಕತೆ ಇರುವುದರಿಂದ ಪ್ರಸ್ತುತ ಅಧ್ಯಯನದಲ್ಲಿ ಇಂತಹ ಒಂದು ಪ್ರಯತ್ನ ಮಾಡಲಾಗಿದೆ. ಹಸಿವು ಜಗತ್ತಿನ ಸಕಲ ಜೀವರಾಶಿಗಳು ಜೀವನ ಪರ್ಯಂತ ನಿರಂತರವಾಗಿ ಅನುಭವಿಸುವ ಒಂದು ಮನೋದೈಹಿಕ ಸಂಸ್ಥಿತಿ. ಹಸಿವು ಆಹಾರ ಬೇಕೆನ್ನುವುದರ ಸೂಚನೆ. ಆಹಾರ ಜೀವನದ ಬಹುಮುಖ್ಯ ಅವಶ್ಯಕತೆ. ಆಹಾರ ಶಕ್ತಿಯ ಮೂಲ. ಜೀವವಿರುವ ಪ್ರಾಣಿಗಳೆಲ್ಲವೂ ಸದಾ ಕಾಲ ಕ್ರಿಯಾನಿರತವಾಗಿರುತ್ತವೆ. ಎಚ್ಚರವಿರಲಿ, ಇಲ್ಲದಿರಲಿ, ಏನಾದರೂ ಮಾಡುತ್ತಲೇ ಇರುತ್ತವೆ. ನೀವು ವಿಶ್ರಾಂತ ಸ್ಥಿತಿಯಲ್ಲಿರುವಾಗಲೂ ಕಾರ್ಯನಿರತರಾಗಿರುತ್ತೀರಿ. ನಿಮ್ಮ ದೇಹದಲ್ಲಿ ಹಲವಾರು ಕ್ರಿಯೆಗಳು ನಡೆಯುತ್ತಿರುತ್ತವೆ. ನೀವು ಉಸಿರಾಡುತ್ತಿರುವಿರಿ; ರಕ್ತ ಪರಿಚಲನೆ ನಡೆಯುತ್ತಿರುತ್ತದೆ; ಆಹಾರ ಜೀರ್ಣವಾಗುತ್ತಿರುತ್ತದೆ. ನೀವು ಮಾನಸಿಕವಾಗಿ ಏನೋ ಆಲೋಚಿಸುತ್ತಿರಬಹುದು. ನಿದ್ರೆ ಮಾಡುವಾಗ ಕನಸು ಕಾಣುತ್ತಿರಬಹುದು. ಇವೆಲ್ಲದರಲ್ಲೂ ಶಕ್ತಿ ವ್ಯಯವಾಗುತ್ತಿರುತ್ತದೆ.
``ಸಂಘಟನೆ ಯಾವುದೇ ಮನುಷ್ಯ ಸಮಾಜದ ಒಂದು ಅವಿಭಾಜ್ಯ ಅಂಗ.1 ಸಂಘಟನೆ ಮನುಷ್ಯ ಸಮಾಜದಷ್ಟೇ ಹಳೆಯದು. ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು (ಸಂಪುಟ-8, ಪುಟ-8211) ಸಂಘಟನೆ ಶಬ್ದಕ್ಕೆ ಹೊಂದಿಸುವಿಕೆ, ಜೋಡಿಸುವಿಕೆ, ಸಂಯೋಜಿಸುವಿಕೆ ಎಂಬ ಅರ್ಥಗಳನ್ನು ಕೊಟ್ಟಿದೆ. ಒಟ್ಟುಗೂಡಿಸುವಿಕೆ, ವ್ಯವಸ್ಥೆಗೊಳಿಸುವಿಕೆ ಮುಂತಾದ ಶಬ್ದಗಳೂ ಇದಕ್ಕೆ ಹತ್ತಿರದ ಅರ್ಥವನ್ನು ಕೊಡುವ ಶಬ್ದಗಳಾಗಿದೆ. ಈ ಹಿನ್ನೆಲೆಯಲ್ಲಿ ಸಾಮಾನ್ಯ ಅರ್ಥದಲ್ಲಿ ಯಾವುದೇ ಸಮುದಾಯದಲ್ಲಿ, ಸಂಬಂಧಪಟ್ಟ ವ್ಯಕ್ತಿಗಳು, ಒಂದು ಅಥವಾ ಅದಕ್ಕಿಂತ ಹೆಚ್ಚು ಉದ್ದೇಶಗಳನ್ನಿಟ್ಟುಕೊಂಡು, ಆ ಉದ್ದೇಶಗಳನ್ನು ಈಡೇರಿಸಿಕೊಳ್ಳುವ ಸಲುವಾಗಿ ಒಂದುಗೂಡಿ ಅವಶ್ಯ ಕ್ರಮಗಳನ್ನು ಕೈಕೊಳ್ಳುವುದಕ್ಕೆ ಸಂಘಟನೆ ಎಂದು ಕರೆಯಬಹುದಾಗಿದೆ. ಚರಿತ್ರೆಯ ಉದ್ದಕ್ಕೂ ಜಗತ್ತಿನಾದ್ಯಂತ, ಸಾವಿರಾರು ಸಮುದಾಯಗಳು, ತಮ್ಮ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಈ ರೀತಿ ಸಂಘಟನೆಯಾಗಿರುವುದನ್ನು ನೋಡುತ್ತೇವೆ.
ಈ ಮೇಲೆ ಗ್ರಾಮೀಣ ಸಮುದಾಯಗಳ ಸಮಸ್ಯೆಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಿದ್ದೇವೆ, ಅವುಗಳಲ್ಲಿ ಲಿಂಗ ತಾರತಮ್ಯ, ನಿರಕ್ಷರತೆ, ಆರೋಗ್ಯ, ವಸತಿ, ಜನಸಂಖ್ಯೆ, ಬಾಲಕಾರ್ಮಿಕರು, ಜೀತದಾಳುಗಳು, ಅಸ್ಪೃಶ್ಯತೆ, ಮದ್ಯಪಾನ, ನಿರುದ್ಯೋಗ, ಮೂಢನಂಬಿಕೆ, ನಾಗರೀಕ ಸೌಲಭ್ಯಗಳ ಕೊರತೆ ಮುಂತಾದ ಸಮಸ್ಯೆಗಳು ನಗರ ಸಮುದಾಯಗಳಿಗೂ ಅನ್ವಯಿಸಬಹುದಾಗಿದೆ. ಕೆಲವು ಸಮಸ್ಯೆಗಳು ಕೇವಲ ಗ್ರಾಮೀಣ ಸಮುದಾಯಗಳನ್ನಷ್ಟೇ ಕಾಡಿದರೆ, ಇನ್ನೂ ಕೆಲವು ಹೆಚ್ಚಾಗಿ ನಗರ ಸಮುದಾಯಗಳನ್ನು ಪೀಡಿಸುತ್ತಿವೆ. ಕೃಷಿ, ಕೃಷಿ ಸಂಬಂಧಿ ವೃತ್ತಿಗಳು, ಗೃಹಕೈಗಾರಿಕಾ ಕ್ಷೇತ್ರಗಳಲ್ಲಿನ ಸಮಸ್ಯೆಗಳು ಹೆಚ್ಚಾಗಿ ಗ್ರಾಮೀಣ ಸಮುದಾಯದ ಸಮಸ್ಯೆಗಳು, ಅದರಂತೆಯೇ ಬೃಹತ್ ಕೈಗಾರಿಕೆ, ಮಧ್ಯಮ ಮತ್ತು ಸಮ ಪ್ರಮಾಣದ ಕೈಗಾರಿಕೆ, ನಿರುದ್ಯೋಗ, ಸೂಕ್ತ ತಾಂತ್ರಿಕ ಶಿಕ್ಷಣ, ವಾಹನ ಸೌಕರ್ಯ, ಕೊಳಗೇರಿಗಳು, ಸಂಚಾರ ಮುಂತಾದ ಸಮಸ್ಯೆಗಳು ಅತೀವವಾಗಿ ನಗರ ಸಮುದಾಯಗಳನ್ನು ಹಿಂಸಿಸುತ್ತಿವೆ. ನಗರ ಸಮುದಾಯಗಳ ಸಮಸ್ಯೆಗಳನ್ನು ನಗರ ಸಮುದಾಯಗಳ ವೈಲಕ್ಷಣಗಳ ಹಿನ್ನೆಲೆಯಲ್ಲಿ ಗ್ರಹಿಸಬೇಕಾಗುತ್ತದೆ.
ಪೀಠಿಕೆ
ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ವಿಶಿಷ್ಟ ಸ್ಥಾನವಿದೆ. ನಿನ್ನ ಶಕ್ತಿಯ ಬಲದಿಂದಲೇ ವ್ಯಕ್ತಿಯಾದೆನು ನಾನು ಈ ಲೋಕದಲ್ಲಿ ಎಂಬ ರಾಷ್ಟ್ರಕವಿ ಡಾ. ಜಿ. ಎಸ್. ಶಿವರುದ್ರಪ್ಪರ ಹೆಣ್ಣಿನ ಮಹತ್ವವನ್ನು ಸಾರುವ ಪದ್ಯವನ್ನು ಉಲ್ಲೇಖಿಸುತ್ತಾ ಸುಶಿಕ್ಷಿತ ಗೃಹಿಣಿ, ಉದ್ಯೋಗಸ್ಥ ಮಹಿಳೆ ದೇಶದ ಆಸ್ತಿ ಮಾತ್ರವಲ್ಲ ಹೆಮ್ಮೆ ಕೂಡ. ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ ಎಂದೂ ಹೆಣ್ಣನ್ನು ಕೊಂಡಾಡಲಾಗಿದೆ. ಇನ್ನೂ ಮುಂದುವರೆದು ಮಾತೆಯಿಂ ಹಿತವರಿಲ್ಲ ಕೋತಿಯಿಂ ಮರುಳಿಲ್ಲ ಜ್ಯೋತಿಯಿಂದಧಿಕ ಬೆಳಕಿಲ್ಲ ದೈವವು ಜಾತನಿಂದಲ್ಲ ಸರ್ವಜ್ಞ ಎಂಬ ಸರ್ವಜ್ಞನ ವಚನದಂತೆ ಹೆಣ್ಣು ಮಗಳಾಗಿ, ಸೋದರಿಯಾಗಿ, ಮಡದಿಯಾಗಿ, ತಾಯಿಯಾಗಿ ಕುಟುಂಬದಲ್ಲಿನ ಅವಿಭಾಜ್ಯ ಅಂಗವಾಗಿದ್ದಾಳೆ. ಧಾರ್ಮಿಕ, ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಹಿತ್ಯ ಕ್ಷೇತ್ರಗಳಲ್ಲಿ ಮಾತ್ರವಲ್ಲದೇ ಸಾಹಸ, ಕಲೆ, ವಿಜ್ಞಾನ, ಕ್ರೀಡೆ, ಸಂಗೀತ.... ಹೀಗೆ ಸರ್ವ ಕ್ಷೇತ್ರಗಳನ್ನೂ ಮಹಿಳೆ ಪ್ರತಿನಿಧಿಸಿದ್ದಾಳೆ. ಇತ್ತೀಚಿನ ದಿನಗಳಲ್ಲಿ ಕೈಗಾರಿಕೋದ್ಯಮದಲ್ಲಿ ಪ್ರಗತಿಯನ್ನು ಸಾಧಿಸಲು ಕೆಲವೊಂದು ಅಂಶಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಯಾವುದೇ ಒಂದು ಸಂಸ್ಥೆ ಮುನ್ನಡೆಯಬೇಕು, ಪ್ರಗತಿಯನ್ನು ಸಾಧಿಸಬೇಕು ಎಂದಾದಲ್ಲಿ ಅದಕ್ಕೆ ಆರು ಅಂಶಗಳು ಅತಿಮುಖ್ಯ ಹಾಗೂ ಅತ್ಯವಶ್ಯಕ. ಅವುಗಳೆಂದರೆ ಮಾನವ ಸಂಪನ್ಮೂಲ, ಆಡಳಿತ ವ್ಯವಸ್ಥೆ, ಬಂಡವಾಳ, ಕಚ್ಚಾ ಪದಾರ್ಥ, ಯಂತ್ರಗಳು ಮತ್ತು ಮಾರುಕಟ್ಟೆ. ಈ ಆರರಲ್ಲಿ ಮಾನವ ಸಂಪನ್ಮೂಲ ಹಾಗೂ ಆಡಳಿತ ವ್ಯವಸ್ಥೆ ಅತಿ ಮುಖ್ಯವಾದ ಅಂಶಗಳು. ಇವರಿಬ್ಬರ ಸಂಬಂಧ ಪತಿ-ಪತ್ನಿಯರ ಬಾಂಧವ್ಯದ ಹಾಗೆ.
10. ಆರೋಗ್ಯ : ಗ್ರಾಮೀಣ ಸಮುದಾಯಗಳಲ್ಲಿರುವ ಪ್ರಚಲಿತ ಪ್ರಮುಖ ಸಮಸ್ಯೆಗಳಲ್ಲಿ ಒಂದು ಅನಾರೋಗ್ಯ. ಮನುಷ್ಯರ ಜೀವನದಲ್ಲಿ ಆರೋಗ್ಯ ಒಂದು ಮಹತ್ವದ ಅಂಶ. ಒಂದು ಸಮುದಾಯ ಪ್ರಗತಿಯನ್ನು ಕಾಣಬೇಕಾದರೆ, ಶಾಂತಿ ಸಮಾಧಾನದಿಂದ ಇರಬೇಕಾದರೆ ಅಂತಹ ಸಮುದಾಯದ ಸದಸ್ಯರು ಆರೋಗ್ಯಪೂರ್ಣವಾಗಿರಬೇಕು. `ಆರೋಗ್ಯ ಶಬ್ದಕ್ಕೆ ಆಯುರ್ವೇದ, ಹೋಮಿಯೋಪತಿ, ಅಲೋಪತಿ, ಯನಾನಿ ಮುಂತಾದ ವೈದ್ಯಪದ್ಧತಿಗಳು ಬೇರೆ ಬೇರೆ ಅರ್ಥಗಳನ್ನು ಕೊಡುತ್ತವೆ. ಆರೋಗ್ಯ ಎಂದರೆ ರೋಗವಿಲ್ಲದಿರುವಿಕೆ ಎಂದು ಸರಳವಾಗಿ ಹೇಳಬಹುದಾದರೂ ಆಯುರ್ವೇದ ವಿಜ್ಞಾನದಲ್ಲಿ ಇದಕ್ಕೆ ಸಮಾನವಾಗಿ `ಸ್ವಾಸ್ಥ್ಯ ಶಬ್ದವನ್ನು ಉಪಯೋಗಿಸುತ್ತಾರೆ. ``ಸ್ವಾಸ್ಥ್ಯವನ್ನು ದೋಷ, ಧಾತು, ಮಲಗಳು ತಮ್ಮ ಪ್ರಾಕೃತಿಕ ಸ್ಥಿತಿಗತಿಗಳಲ್ಲಿ ಹಾಗೂ ಆತ್ಮ, ಮನಸ್ಸು, ಇಂದ್ರಿಯಗಳು ಪ್ರಸನ್ನಸ್ಥಿತಿಯಲ್ಲಿ ಇದ್ದು ತಮ್ಮ ತಮ್ಮ ಕಾರ್ಯಗಳನ್ನು ನಿರ್ವಹಿಸುತ್ತಿರುವ ಸ್ಥಿತಿ ಎಂದು ವ್ಯಾಖ್ಯಾನಿಸಿದ್ದಾರೆ.4 ವಿಶ್ವ ಆರೋಗ್ಯ ಸಂಸ್ಥೆ, ``ಆರೋಗ್ಯವೆಂದರೆ ಮಾನವನು ರೋಗರಹಿತನಾಗಿರುವುದಲ್ಲ, ಸಂಪೂರ್ಣ ದೈಹಿಕ, ಮಾನಸಿಕ ಹಾಗೂ ಸಾಮಾಜಿಕವಾಗಿ ಉತ್ತಮ ಸ್ಥಿತಿಯಲ್ಲಿ ಇರುವುದಾಗಿದೆ5 ಎಂದು ವ್ಯಾಖ್ಯಾನಿಸುತ್ತದೆ. ಆರೋಗ್ಯ ಎಂಬ ಪರಿಕಲ್ಪನೆ ನೈರ್ಮಲ್ಯವನ್ನೂ ಒಳಗೊಂಡಿದೆ. ಹಾಗಾಗಿ ಸಮುದಾಯದ ಪ್ರತಿಯೊಬ್ಬ ಸದಸ್ಯನೂ ತಾನು ದೈಹಿಕ, ಮಾನಸಿಕ ಹಾಗೂ ಸಾಮಾಜಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದು ತನ್ನ ಕುಟುಂಬದ ಹಾಗೂ ತನ್ನ ಸಮುದಾಯದ ಒಳಿತಿಗೆ ಶ್ರಮಿಸುವಂತಾಗಬೇಕು.
ದಲಿತರ ಸಬಲೀಕರಣಕ್ಕೆ ಪ್ರಸ್ತುತ ಮುಖ್ಯವಾಗಿ ಗುಣಮಟ್ಟದ ಶಿಕ್ಷಣ, ಉತ್ತಮ ಆರೋಗ್ಯ, ಆರ್ಥಿಕ ಭದ್ರತೆ, ರಾಜಕೀಯ ಭದ್ರತೆ, ಉದ್ಯೋಗ ಭದ್ರತೆಗಳನ್ನು ಒದಗಿಸುವುದು ಅತ್ಯಂತ ಅಗತ್ಯವಾಗಿದೆ.
ಪೀಠಿಕೆ ಪ್ರಜಾಪ್ರಭುತ್ವದ ಮೂಲ ಬೇರುಗಳಾದ ಪಂಚಾಯತಿರಾಜ್ ಸಂಸ್ಥೆಗಳು ಸ್ಥಳೀಯ ಜನರಿಗೆ ಒಂದು ವ್ಯವಸ್ಥೆಯಾಗಿದ್ದು, ಸ್ಥಳೀಯ ಜನರಿಗೆ ತಮ್ಮದೇ ಆದ ಹೊಣೆಗಾರಿಕೆಯನ್ನು ನಿರ್ವಹಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಇದರಿಂದ ಸ್ಥಳೀಯ ಜನರು ಕೂಡಾ ರಾಷ್ಟ್ರ-ರಾಜ್ಯದ ಆಗು-ಹೋಗುಗಳು, ಆಡಳಿತದ ರೀತಿ-ನೀತಿಗಳು, ಸರ್ಕಾರದ ರೀತಿ-ನೀತಿಗಳು ಹಾಗೂ ರಾಜಕೀಯ ಪ್ರಜ್ಞೆಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿದೆ. ಈ ಪಂಚಾಯತಿರಾಜ್‍ನ ಮುಖ್ಯ ಉದ್ದೇಶವು ಕೇವಲ ಕೆಲವೇ ವ್ಯಕ್ತಿಗಳಿಗೆ ಅಧಿಕಾರ ನೀಡುವುದಲ್ಲ. ಬದಲಿಗೆ ಸಮಾಜದ ಎಲ್ಲಾ ವರ್ಗದವರಿಗೆ ಅಧಿಕಾರವನ್ನು ನೀಡುವುದೇ ಆಗಿದೆ. ಇದರಿಂದ ಸಮಾಜದಲ್ಲಿ ಎಲ್ಲರಿಗೂ ಸಾಮಾಜಿಕ ನ್ಯಾಯವನ್ನು ಒದಗಿಸುವಂತೆ ಆಗುತ್ತದೆ. ಮನೆ, ಮನೆತನ, ಕುಟುಂಬ ಇತ್ಯಾದಿಗಳ ಬಗ್ಗೆ ನಮ್ಮಲ್ಲಿ ಇಂದು ಬಹಳವಾಗಿ ಚರ್ಚೆ, ಸಂವಾದಗಳು ಸಡೆಯುತ್ತಿವೆ. ಕೆಲವೆಡೆ ಚರ್ಚೆ-ಸಂವಾದಗಳು ಶಬ್ದರೂಪಕ್ಕಷ್ಟೇ ಸೀಮಿತವಾಗಿ ' ಇದೆಲ್ಲವೂ ಕಾಲದ ಪರಿಣಾಮ: ಕಾಲಾಯ ತಸ್ಮೈ ನಮಃ, ನಾವು ಏನನ್ನೂ ಮಾಡಲಾರೆವು, ಗಾಳಿ ಬಂದಂತೆ ತೂರಿಕೊ' ಎಂದು ಅಸಹಾಯಕತೆಯನ್ನು ತೋರಿಸಿ, ಎಂದಿನಂತೆ ತಮ್ಮ ಜೀವನ ನಡೆಸುವವರು ಬಹಳಷ್ಟು ಮಂದಿ ಇದ್ದರೆ, ಇನ್ನಷ್ಟು ಮಂದಿ ಇಂತಹ ಚಿಂತನೆಯನ್ನು ನಡೆಸದವರೂ ಇದ್ದಾರೆ. ಮತ್ತಷ್ಟು ಮಂದಿ 'ನಾವು ಯಾವ ಊರಿಗೆ ಹೋಗಬೇಕೆಂದು ನಿರ್ಧಾರವಾಗಿದೆ, ಅದಕ್ಕೆ ಆ ದಾರಿಯಲ್ಲಿ ಹೋಗದೆ, ಬೇರೊಂದು ದಾರಿ ಹಿಡಿದಿರುವುದಾದರೆ ಅದನ್ನು ಬಿಟ್ಟು, ಸರಿಯಾದ ದಾರಿಯನ್ನು ಆಶ್ರಯಿಸಬೇಕು' ಎಂದು ತಿಳಿದು, ಅದರಂತೆ ತಾವು ಕ್ರಮಿಸಿದ ದಾರಿಯಿಂದ ಹಿಂದಕ್ಕೆ ಬಂದು ಸರಿಯಾದ ದಾರಿಯಲ್ಲಿ ಪ್ರಯಾಣಿಸಲು ನಿಶ್ಚಯಿಸಿ, ಅದರಂತೆಯೇ ಮಾಡುತ್ತಾರೆ. ಅಂತಹವರನ್ನೇ ಯುಕ್ತ-ಅಯುಕ್ತ ವಿವೇಚನಶಕ್ತಿಯುಳ್ಳ ವಿವೇಕಿಗಳು ಎಂದು ಕರೆಯಲಾಗುತ್ತದೆ. ಇಂತಹ ವಿವೇಕವು ಪ್ರತಿಯೊಬ್ಬ ಮನುಷ್ಯನಿಗೂ, ಆತನು ಪ್ರವೇಶಿಸುವ ಎಲ್ಲ ಕ್ಷೇತ್ರಗಳಲ್ಲೂ (ಓದು, ಬರಹ, ಶಾಲೆ, ಮನೆಯ ನಿರ್ವಹಣೆ, ಕೃಷಿ, ಕಛೇರಿ, ಕಾರ್ಖಾನೆ, ಸಮಯದ ಸದ್ಬಳಕೆ, ಸಾಮಾಜಿಕ ಸಂಬಂಧ ಇತ್ಯಾದಿ) ಇರಬೇಕು. ಅಂತಹ ವಿವೇಕವಿಲ್ಲದೆ, ಒಟ್ಟಾರೆಯಾಗಿ ಹೇಗೋ ಜೀವನವನ್ನು ಸಾಗಿಸುತ್ತಿದ್ದೇವೆ ಎಂದುಕೊಳ್ಳುವ ಜನರನ್ನು ಕಠೋಪನಿಷತ್ತು 'ಅಂಧೇನೈವ ನೀಯಮಾನಾ ಯಥಾಂಧಾಃ (ಕುರುಡರು ಕುರುಡರಿಗೆ ದಾರಿ ತೋರಿಸಿದರೆ ಹೆಗೋ ಹಾಗೆ ಅವರು ದಾರಿ ತಪ್ಪುತ್ತಾರೆ) ಎಂದು ಎಚ್ಚರಿಸಿದೆ. ಇಂತಹ ವಿವೇಚನೆಯ ತಿಳುವಳಿಕೆಯನ್ನು ಹೊಂದಿದವನೇ ನಿಜವಾದ ಮಾನವ ಅಥವಾ ಮನುಷ್ಯ. 'ಮಾನವ' ಹಾಗೂ 'ಮನುಷ್ಯ' ಎಂಬ ಪದಗಳೇ 'ಮನ್' ಎಂಬ ಧಾತುವಿನಿಂದ ಹುಟ್ಟಿದೆ. ಇದರ ಅರ್ಥ ಜ್ಞಾನ ಅಥವಾ ತಿಳುವಳಿಕೆ. ಮನುಷ್ಯನ ದೇಹ ಇತರ ಚತುಷ್ಪಾದ ಪ್ರಾಣಿಗಳ ದೇಹದಂತೆ ಪಂಚಭೂತಗಳಿಂದಲೇ ಆಗಿದೆಯಾದ್ದರಿಂದ ಹಸಿವೆ, ಬಾಯಾರಿಕೆ, ನಿದ್ದೆ, ಕಾಮತೃಷೆ ಇತ್ಯಾದಿಗಳು ಸಹಜ ಆದರೆ ಇವುಗಳನ್ನು ತಣಿಸಿಕೊಳ್ಳುವಾಗ ಮನುಷ್ಯನು ಚತುಷ್ಪಾದ ಪ್ರಾಣಿಗಳಂತೆ ನಡೆದುಕೊಳ್ಳದೆ ಒಂದು ಸಭ್ಯಮಾರ್ಗವನ್ನು ಅನುಸರಿಸಬೇಕು. ಹಾಗೂ ತನ್ನ ಜೀವನವು ಕೇವಲ ಆಹಾರ, ನಿದ್ದೆ, ಭಯ, ಮೈಥನಗಳಿಗೆ ಸೀಮಿತವಲ್ಲ; ತನ್ನ ದೇಹದ ಅಂಗಗಳ ಪೈಕಿ ತಲೆಯೇ (ಮೆದುಳು, ಮನಸ್ಸು) ಮುಖ್ಯವಾದದ್ದು. ಉದರನಿಮಿತ್ತಂ ಬಹುಕೃತವೇಷಃ ಎಂದು ಆದಿ ಶಂಕರರು ಹೇಳಿದಂತೆ ಹೊಟ್ಟೆಪಾಡಿಗಾಗಿ ಮಾತ್ರ ವಿವಿಧ ವಿದ್ಯೆ, ವೃತ್ತಿ ಒಡೆದೆನೆಂದರೆ ಅದರಿಂದ ಮಾನವನ ನಿಜವಾದ ಗುರಿಯು ಸಾಧಿತವಾಗುವುದಿಲ್ಲ. ಮಾನವನ ಗುರುಯೆಂದರೆ ತನ್ನ ಬಗ್ಗೆ ತಾನು ತಿಳಿದುಕೊಳ್ಳುವುದು. ಇದನ್ನೇ 'ಆತ್ಮಜ್ಞಾನ ಎಂದು ನಮ್ಮ ಹಿರಿಯರು ಹೇಳಿದ್ದಾರೆ.
ಪ್ರಿಯ ಬಂಧುಗಳೇ,
ಹಿರಿಯವರಾದ ಡಾ.ದೊರೆಸ್ವಾಮಿಯವರೇ, ಡಾ. ಪ್ರಭುದೇವ ಅವರೇ, ಸ್ನೇಹಿತರಾದ ಪ್ರೊ. ಭೈರಪ್ಪನವರೇ, ಡಾ.ಬೈರೇಗೌಡರೇ, ಮತ್ತಿತರ ಹಿತವರೆ. ನಾನು ಮಾತನಾಡುವ ಅಗತ್ಯವಿಲ್ಲವೆಂದರೂ ನಾಲ್ಕಾರು ಮಾತು ಆಡಲೇಬೇಕಾಗಿದೆ. ನನ್ನ ಬಗ್ಗೆ ಬರೆದ ಈ ಕೃತಿಯು ತಯಾರಾಗುತ್ತಿದ್ದಂತೆಯೇ ಓದುತ್ತಾ ಹೋದೆ, ಮುಗಿದ ಮೇಲೆಯೂ ಓದಿದೆ. ಒಂದಾದ ಮೇಲೆ ಒಂದು, ಎರಡು ಪ್ರಶ್ನೆಗಳನ್ನು ಲೇಖಕರಿಗೆ ಹಾಕಿದೆ. ಈ ಪುಸ್ತಕದಲ್ಲಿ ಚಿತ್ರಿತವಾದ ವ್ಯಕ್ತಿ ನಾನೇ ಹೌದೇ? ಎಂಬುದು ನನ್ನ ಮೊದಲ ಪ್ರಶ್ನೆ. ಇದಕ್ಕೆ ಅವರ ಉತ್ತರ 'ಹೌದು' ಎಂದು. ಹಾಗಾದರೆ ನಾನು ಇದಕ್ಕೆ ಅರ್ಹನೇ? ಎಂಬುದು ನನ್ನ ಎರಡನೆಯ ಪ್ರಶ್ನೆ. ಇದಕ್ಕೂ ಅವರು ತುಂಬಾ ಔದಾರ್ಯದಿಂದ 'ಹೌದು' ಎಂದರು. ಆದರೆ, ಸಾಮಾನ್ಯವಾಗಿ ಪ್ರತಿಯೊಬ್ಬ ಮನುಷ್ಯನಲ್ಲಿ ಗುಣಗಳು ಇದ್ದಂತೆ ದೌರ್ಬಲ್ಯಗಳೂ ಇರುತ್ತವೆ. ಇಲ್ಲಿ ಚಿತ್ರಿತವಾದ ವ್ಯಕ್ತಿಯಲ್ಲಿ ದೌರ್ಬಲ್ಯಗಳು ಕಾಣಿಸುತ್ತಲೇ ಇಲ್ಲವಲ್ಲ, ಯಾಕೆ? ಆತ್ಮಚರಿತ್ರೆಯಲ್ಲಾಗಲೀ, ಇತರರು ಬರೆದ ವ್ಯಕ್ತಿ ಚರಿತ್ರೆಯಲ್ಲಾಗಲೀ ಗುಣ ದೌರ್ಬಲ್ಯಗಳ ಪ್ರಸ್ತಾಪವಿದ್ದರೂ ಪಾಶ್ಚಾತ್ಯ-ಪ್ರಾಚ್ಯ ಸಮಾಜ ಸಂಸ್ಕೃತಿಯ ಹಿನ್ನೆಲೆಯಲ್ಲಿ ನೋಡಿದಾಗ ಪಾಶ್ಚಾತ್ಯ ಬರಹಗಳಲ್ಲಿ ಹೆಚ್ಚು ವಾಸ್ತವತೆ ಕಂಡಂತೆ ದೌರ್ಬಲ್ಯಗಳನ್ನು ಆದಷ್ಟೂ ಕಾಣಿಸದಂತೆ ನೋಡಿಕೊಳ್ಳಲಾಗುತ್ತದೆ. ಹಾಗೆ ನೋಡಿದರೆ ಗಣ ದೌರ್ಬಲ್ಯಗಳು ನೋಡುಗರ, ಅರ್ಥೈಸಿಕೊಳ್ಳುವವರ, ಮನೋಪರಿಪಾಕವನ್ನು ಅವಂಬಿಸಿರುತ್ತದೆ. ಜೊತೆಗೆ, ಇವೆಲ್ಲವೂ ಸಾಪೇಕ್ಷವಾದ ಅಂಶಗಳೇ ಎಂಬುದು ತಮಗೆ ತಿಳಿದವುಗಳೇ. ಇದು ಬರಿ ಧಾರ್ಮಿಕ ಸ್ಥಳವಲ್ಲ. ಇದರಷ್ಟಕ್ಕೆ ಇದೊಂದು ಸರಕಾರ. ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತಂತೆ ನಾಡಿನ ಜನಪ್ರಿಯ [ಪತ್ರಿಕೆಯೊಂದು ಕೆಲವರ್ಷಗಳ ಹಿಂದೆ ಪ್ರಕಟಿಸಿದ ಲೇಖನಕ್ಕೆ ತಲೆಬರೆಹ ನೀಡಿದ್ದು ಹೀಗೆ. ಬರಹದ ಕುರಿತು ನೀಡುವ ಚಿಕ್ಕ ಬಾಕ್ಸ್ನಲ್ಲಿ ಇದಕ್ಕೊಂದಿಷ್ಟು ಸಮರ್ಥನೆ ಇದೆ. ಇಲ್ಲಿ ಮಂಜುನಾಥ ದೇವಾಲಯವೇ ಪಾರ್ಲಿಮೆಂಟ್, ಹೆಗ್ಗಡೆಯವರೇ ಪ್ರಧಾನಿ. ಅವರ ಉಯಿಲು ಕೇಳುವ ವೇಗವೇ ಸುಪ್ರೀಂಕೋರ್ಟು, ಧರ್ಮವೇ ಇಲ್ಲಿಯ ಸಂವಿಧಾನ, ಭಕ್ತರೇ ಭಕ್ತಿಯಿಂದ ಬರೆದ ಕಾನೂನು. ಒಂದು ದೇಶದ ಸರಕಾರದಲ್ಲಿ ಏನೆಲ್ಲಾ ದಾಖಲೆಗಳಿರುತ್ತವೋ ಎಲ್ಲವೂ ಧರ್ಮಸ್ಥಳದಲ್ಲಿವೆ. ಸರಕಾರದ ಏನೆಲ್ಲಾ ಕೆಲಸಗಳನ್ನು ಮಾಡುತ್ತದೋ ಧರ್ಮಸ್ಥಳ ಅವೆಲ್ಲಾ ಕೆಲಸಗಳನ್ನು ಮಾಡುತ್ತದೆ. ಇದೊಂದು ಮಾದರಿ ಸರಕಾರ, ಪ್ರಧಾನಿ ಕ್ಯಾಬಿನೆಟ್ ಮಂತ್ರಿಗಳು, ರಾಜ್ಯಸಚಿವರು ಎಲ್ಲರೂ ಇಲ್ಲಿ ಒಬ್ಬರೇ, ಅವರೇ ಶ್ರೀ ವೀರೇಂದ್ರ ಹೆಗ್ಗಡೆಯವರು. ಈ ಧರ್ಮಕ್ಷೇತ್ರಕ್ಕೆ ಅವರೇ ಖಾವಂದರು (ಒಡೆಯರು), ಹೀಗೆನ್ನುವುದು ಆತ್ಮೀಯ ಮತ್ತು ಗೌರವದ ಸಂಬೋಧನೆ.
|
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|