ಲೇಖಕರು:
ಸಿ.ಎಚ್. ಹನುಮಂತರಾಯ ವಕೀಲರು
ನಾನು ಅದು ಹೇಗೆ ಬಿಜೆಪಿ ವಿರೋಧಿಯಾದೆನೋ ತಿಳಿಯದು. ಅದರಲ್ಲೂ ರಾಮಮಂದಿರ ನಿರ್ಮಾಣ, ಇಟ್ಟಿಗೆ ಪೂಜೆ, ಬಾಬ್ರಿ ಮಸೀದಿ ಧ್ವಂಸ ಇವೆಲ್ಲ ಸಂಗತಿಗಳು ಆ ಪಕ್ಷದ ಬಗ್ಗೆ ನನ್ನಲ್ಲಿರುವ ತಿರಸ್ಕಾರವನ್ನು ದ್ವಿಗುಣಗೊಳಿಸಿದವು. ಬಿ.ಜೆ.ಪಿ.ಯ ಟ್ರೇಡ್ ಯೂನಿಯನ್ ವಿರುದ್ಧದ ಅನೇಕ ಕ್ರಿಮಿನಲ್ ಪ್ರಕರಣದಲ್ಲಿ ನಾನು ಶ್ರಮಿಸಿದ್ದೆ. ಅದರ ನಾಯಕರೊಂದಿಗೆ ಒಳ್ಳೆಯ ಸಂಬಂಧವನ್ನೇ ಇಟ್ಟುಕೊಂಡಿದ್ದೆ. ಆದರೆ ಅವರ ಇಟ್ಟಿಗೆ ಪೂಜೆ ಮಾತ್ರ ನನ್ನಲ್ಲಿ ಹೇಸಿಗೆ ಭಾವನೆಯನ್ನು ಹುಟ್ಟಿಸಿತು. ನನ್ನಲ್ಲಿ ಇಂಥ ಭಾವನೆಗಳು ಹುಟ್ಟುವುದಕ್ಕೆ ಲಂಕೇಶರ ಚಿಂತನೆಗಳು ಮಹತ್ವದ ಪಾತ್ರ ವಹಿಸಿವೆಯೆಂದು ಹೇಳಿಕೊಳ್ಳಲು ಹೆಮ್ಮೆಯೆನಿಸುತ್ತೆ.
ನನಗೆ ತೀರಾ ಆಘಾತಕಾರಿಯಾಗಿ ಕಂಡ ವಿಷಯವೆಂದರೆ, ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ವಿಶ್ವ ಹಿಂದೂ ಪರಿಷತ್ ನಡೆಸಿದ ರಾಮಮಂದಿರ ನಿರ್ಮಾಣ ಚಳವಳಿಗೆ ಡಾ. ಶಿವರಾಮ ಕಾರಂತರು ಬೆಂಬಲ ನೀಡಿದ್ದು. ವಿಎಚ್‍ಪಿಯವರು ರಾಮಮಂದಿರ ನಿರ್ಮಾಣದ ಸಂಬಂಧದಲ್ಲಿ ಸಹಿ ಸಂಗ್ರಹ ಮಾಡಿದಾಗ ಕಾರಂತರು ಸಹಿ ಮಾಡಿ ಮಂದಿರ ನಿರ್ಮಾಣವನ್ನು ಬೆಂಬಲಿಸಿದರು.
0 Comments
ಲೇಖಕರು: ಜಿ.ಎಸ್. ಲಕ್ಷ್ಮೀಪ್ರಸಾದ್
ನಮ್ಮ ಯೋಚನಾ ಲಹರಿ, ಜ್ಞಾನ ಸಂಪತ್ತು, ಸಜ್ಜನರ ಸಹವಾಸ, ಇವೆಲ್ಲವೂ ನಮ್ಮನ್ನು ಮಾನಸಿಕವಾಗಿ ಬೆಳೆಸುತ್ತವೆ.
ಆತ್ಮೀಯತೆ, ಸುರಕ್ಷತೆ, ಅನುಕಂಪ, ಪ್ರೀತಿ ವಾತ್ಸಲ್ಯ, ಇಂಥ ಮಾನವ ಸಂವೇದನೆಗಳ ಕೊಂಡಿಗಳೇ ಭಾವನಾತ್ಮಕ ಸಂಬಂಧ ಬೆಳಸಲು ಸಹಕಾರಿಯಾಗುತ್ತವೆ. ಬೌದ್ಧಿಕವಾಗಿ ಬೆಳೆಯಬೇಕಾದರೆ ಸಮತೋಲನ... ಅಂದ್ರೆ ಸಾಂದರ್ಭಿಕ ಸಮತೋಲನ, "ನುಡಿದಂತೆ ನಡೆ" ಇಂಥ ನುಡಿಗಳನ್ನು ನಾವು ಯಥಾವತ್ತಾಗಿ ಪಾಲಿಸಬೇಕಾಗುತ್ತೆ. ಇನ್ನು ಆಧ್ಯಾತ್ಮ. ಪರಮೋಚ್ಛ ಸ್ಥಾಯಿಯಲ್ಲಿ ನಮ್ಮ ತನು, ಮನ, ಆತ್ಮ, ಅಹಂ, ಭಕ್ತಿ, ಬದ್ಧತೆ, ಮೌಲ್ಯಗಳು, ಧ್ಯಾನ, ಇವೆಲ್ಲದರ ಅರಿವು ನಮ್ಮಲ್ಲಿ ಉಂಟಾಗಿ ನಮಗೆ ಬೇಕೆನ್ನಿಸಿದ ದಿಕ್ಕಿನಲ್ಲಿ ಸಕಾರಾತ್ಮಕವಾಗಿ ಬದಲಿಸುವ ಶಕ್ತಿ ದೊರೆಯುತ್ತದೆ. ಇದನ್ನೆಲ್ಲ ಆಧ್ಯಾತ್ಮಿಕವಾಗಿ ಕಲಿಯಬೇಕು, ಬೆಳೆಯಬೇಕು. ಲೇಖಕರು: ಡಾ. ಸುಜಾತ ಎಂ ಮತ್ತು ಡಾ. ಕುಮುದಿನಿ ಅಚ್ಚಿ
ಸಮಾಜಕಾರ್ಯ ಶಿಕ್ಷಣ ಕ್ಷೇತ್ರವು ತನ್ನದೇ ಆದ ರೀತಿಯಲ್ಲಿ ಬೃಹದಾಕಾರವಾಗಿ ಬೆಳೆಯುತ್ತಿದೆ. ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸಂಖ್ಯೆ ಹೇರಳವಾಗಿದ್ದು, ಇವರಿಗೆ ಆಂಗ್ಲ ಭಾಷೆಯನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಹೆಚ್ಚಿರುವುದಿಲ್ಲ. ಇದನ್ನರಿತ ನಾವು ಪ್ರಾಂತೀಯ ಭಾಷೆಗಳಲ್ಲಿ ಪುಸ್ತಕಗಳು ಹೊರಹೊಮ್ಮಿದೆ. ಆದಲ್ಲಿ ಸರಳವಾಗಿ ವಿಷಯವನ್ನು ಅರ್ಥಮಾಡಿಕೊಳ್ಳಲು ಅನುಕೂಲವಾಗುತ್ತದೆ. ಅದರ ಪ್ರತಿಫಲವೇ ಈ “ಸಮಾಜಕಾರ್ಯ ಸಂಶೋಧನೆ” ಎಂಬ ಹೊತ್ತಿಗೆ. ಇದು ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಪ್ರಕಟಣೆಯಾಗಲಿದೆ ಎಂಬುವುದರಲ್ಲಿ ಯಾವುದೇ ಸಂದೇಹವಿಲ್ಲ.
ಲೇಖಕರು : ಎಂ. ಬಸವಣ್ಣ ಪುಟ : XII+56
ವಿಶ್ವದಲ್ಲಿ ದೇವರಿಲ್ಲದ ನಾಡಿಲ್ಲ, ದೇವರನ್ನು ಪೂಜಿಸದ ಜನರು ಅಪರೂಪ. ಭಾರತದಲ್ಲಂತೂ ದೇವರಿಲ್ಲದ ಊರೇ ಇಲ್ಲವೆಂದರೂ ಆಶ್ಚರ್ಯವಿಲ್ಲ. ನಮ್ಮ ದೇಶ ಗುಡಿಗೋಪುರಗಳಿಂದ ತುಂಬಿಹೋಗಿದೆ. ಜಗತ್ತಿನಲ್ಲಿ ದೇವರಲ್ಲಿ ನಂಬಿಕೆ ಇಲ್ಲದವರು ಬಹಳ ಕಡಮೆ. ದೇವರಿದ್ದಾನೆ, ಅವನೇ ನಮ್ಮನ್ನೆಲ್ಲಾ ಸೃಷ್ಟಿಸಿರುವವನು, ಪಾಲಿಸುವವನು ಎಂಬುದು ಆಸ್ತಿಕರೆಲ್ಲರ ನಂಬಿಕೆ. ಆದರೂ, ನಮ್ಮ ದೇವಾಲಯಗಳನ್ನೆಲ್ಲಾ ಕಟ್ಟಿದವರು, ಅವುಗಳಲ್ಲಿರುವ ವಿಗ್ರಹಗಳನ್ನೆಲ್ಲಾ ಕೊರೆದವರು ಮನುಷ್ಯರೆಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ದೇವರು ಮನುಷ್ಯನನ್ನು ಸೃಷ್ಟಿಸಿದನೋ, ಮನುಷ್ಯ ದೇವರನ್ನು ಸೃಷ್ಟಿಸಿದನೋ ಎಂಬುದು ಬಗೆಹರಿಯದ ವಿವಾದ. ಅದರ ವಿಚಾರವಾಗಿ ಬರೆಯುವುದು ಈ ಲೇಖನದ ಉದ್ದೇಶವಲ್ಲ. ಆದರೂ ದೇವಸ್ಥಾನಗಳನ್ನು ನಿರ್ಮಿಸಿ, ಅಲ್ಲಿ ವಿಗ್ರಹಗಳನ್ನು ಸ್ಥಾಪಿಸಿದವರು ಮನುಷ್ಯರೆಂಬುದನ್ನು ಒಪ್ಪಿಕೊಳ್ಳುವುದರಲ್ಲಿ ತಪ್ಪೇನೂ ಇಲ್ಲ.
ಗಂಗಾಧರ ರೆಡ್ಡಿ ಎನ್. ಡಾ. ಲೋಕೇಶ್ ಎಂ.ಯು.
ಲೇಖಕರು: ಡಾ. ಸಿ.ಆರ್. ಗೋಪಾಲ್ ಪುಟಗಳು: 440
ಸಾಮಾಜಿಕ ಕ್ರಿಯಾಚರಣೆ ಸಮಾಜಕಾರ್ಯದ ಒಂದು ವಿಧಾನ. ವ್ಯಕ್ತಿಗತ ಸಮಾಜಕಾರ್ಯ, ವೃಂದಗತ ಸಮಾಜಕಾರ್ಯ ಮತ್ತು ಸಮುದಾಯ ಸಂಘಟನೆ, ಸಮಾಜಕಾರ್ಯದ ಮೂಲವಿಧಾನಗಳೆಂದು ಪರಿಗಣಿಸಿದ್ದರೆ, ಸಾಮಾಜಿಕ ಕ್ರಿಯಾಚರಣೆಯನ್ನು ಸಮಾಜಕಾರ್ಯದ ಒಂದು ಪೂರಕವಿಧಾನ ಎಂದು ಪರಾಮರ್ಶಿಸಲಾಗಿದೆ. ಸಾಮಾಜಿಕ ಕ್ರಿಯಾಚರಣೆ ಸಮಾಜಕಾರ್ಯದ ಪ್ರಮುಖ ವಿಧಾನಗಳಲ್ಲಿ ಒಂದು ಎಂದು ವಿಶ್ಲೇಷಣೆ ಮಾಡುವವರೂ ಇದ್ದಾರೆ.
ವ್ಯಕ್ತಿಗತ ಸಮಾಜಕಾರ್ಯ, ವೃಂದಗತ ಸಮಾಜಕಾರ್ಯ ಮತ್ತು ಸಮುದಾಯ ಸಂಘಟನೆ ಅನುಗಾಲ (ಅವಿರತ) ನಡೆಯುವ ಯೋಜನೆ / ಕಾರ್ಯಕ್ರಮಗಳಾಗಿರುವುದರಿಂದ ಅವುಗಳನ್ನು ಮೂಲವಿಧಾನಗಳೆಂದು ಕರೆಯಲಾಗಿದೆ. ಆದರೆ ಸಾಮಾಜಿಕ ಕ್ರಿಯಾಚರಣೆ ಸಮಯ ಸಂದರ್ಭಕ್ಕೆ ಅನುಗುಣವಾಗಿ ಸಂಘಟನೆಗೊಳ್ಳುತ್ತದಾದ್ದರಿಂದ, ಅವನ್ನು ಪೂರಕವಿಧಾನ ಎಂದು ನಿರ್ಣಯಿಸಿರಬೇಕು. ಸಮಾಜದ ಓರೆ-ಕೋರೆಗಳನ್ನು ತಿದ್ದಲು, ದೌರ್ಜನ್ಯಗಳನ್ನು ತಡೆಯಲು, ಕಾನೂನಾತ್ಮಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಾಮಾಜಿಕ ಕ್ರಿಯಾಚರಣೆ ಪ್ರಸ್ತುತ ಬಳಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಕ್ರಿಯಾಚರಣೆಯೂ ಅತಿ ಅವಶ್ಯಕವಾದ ವಿಧಾನವೇ ಹೌದು. ಲೇಖಕರು: ಡಾ. ಲೋಕೇಶ್ ಎಂ.ಯು. ಮತ್ತು ಪವಿತ್ರ ಎ.ವಿ. ಪುಟಗಳು: 200
20ನೇ ಶತಮಾನದಲ್ಲಿ ಆರಂಭಗೊಂಡ ನೂತನ ಜ್ಞಾನ ಶಾಖೆಯಾದ ಸಮಾಜಕಾರ್ಯ ವೃತ್ತಿಪರರಿಗೆ ವೈವಿಧ್ಯಮಯ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಲು ಅವಕಾಶವನ್ನು ಒದಗಿಸುವ ಬಹುಮುಖ ವೃತ್ತಿಯಾಗಿದೆ. ಪ್ರಸ್ತುತ ಸಮಾಜಕಾರ್ಯ ವೃತ್ತಿಯು ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಪಾತ್ರ ವಹಿಸುತ್ತಿದ್ದು, ಮಾನಸಿಕ ಆರೋಗ್ಯ ರಕ್ಷಣೆಯಲ್ಲೂ ತನ್ನದೇ ಆದ ಮಹತ್ವದ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಆಧುನಿಕ ಸಮಾಜದಲ್ಲಿ ನಾನಾ ಕಾರಣಗಳಿಂದ ಮನೋವ್ಯಾಕುಲಕ್ಕೆ ಒಳಗಾಗುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿರುವುದು ಹಾಗೂ ಅದರಲ್ಲಿರುವ ಸಂಕೀರ್ಣತೆಯ ಸವಾಲುಗಳು ದಿನೇ ದಿನೇ ಅಧಿಕವಾಗುತ್ತಿರುವುದು ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ವೃತ್ತಿಪರ ಸಮಾಜಕಾರ್ಯಕರ್ತರ ಅಗತ್ಯತೆಯನ್ನು ಎತ್ತಿ ತೋರಿಸುತ್ತದೆ.
ಇಂದು ಸಮಾಜಕಾರ್ಯ ತನ್ನ ವ್ಯಾಪ್ತಿಯನ್ನು ವಿವಿಧ ಕ್ಷೇತ್ರಗಳಿಗೆ ವಿಸ್ತರಿಸಿಕೊಂಡಿದೆ. ಈ ಹಿಂದೆ ಸಮಾಜಕಾರ್ಯ ವೃತ್ತಿಪರರ ಸೇವೆಗಳು ಸಮುದಾಯ ಆಧಾರಿತ ಕಾರ್ಯಕ್ರಮಗಳು ತರಬೇತಿ, ಅನುಷ್ಠಾನ, ಆಪ್ತ ಸಮಾಲೋಚನೆ, ಸಮಾಜಕಾರ್ಯದ ವಿವಿಧ ವಿಧಾನಗಳು/ತಂತ್ರಗಳ ಬಳಕೆ ಹಾಗೂ ಸಂಶೋಧನೆಗಳಿಗೆ ಸೀಮಿತವಾಗಿದ್ದವು. ಪ್ರಸ್ತುತ ಇವರ ಸೇವೆಗಳು ಮಾನಸಿಕ ಆರೋಗ್ಯ ಕ್ಷೇತ್ರಕ್ಕೂ ವಿಸ್ತರಿಸಿದ್ದು, ಮನೋ-ರೋಗಿಗಳನ್ನು ಚಿಕಿತ್ಸೆ ಮಾಡುವಲ್ಲಿ ಬಹುಮುಖ್ಯ ಪಾತ್ರವಹಿಸುವ ಬಹುತಜ್ಞರ ಚಿಕಿತ್ಸಾ ತಂಡದಲ್ಲಿ ಮನೋ-ವೈದ್ಯಕೀಯ ಸಮಾಜಕಾರ್ಯಕರ್ತರ ಪಾತ್ರ ನಿರ್ಣಾಯಕವಾದುದಾಗಿದೆ. ಬಹುಮುಖ್ಯವಾಗಿ ಮಾನಸಿಕ ಆರೋಗ್ಯ ಉತ್ತೇಜಕ ಕಾರ್ಯಕ್ರಮಗಳು, ಮಾನಸಿಕ ಆರೋಗ್ಯ ಸಮಸ್ಯೆಗಳ ತಡೆಗಟ್ಟುವಿಕೆ, ಚಿಕಿತ್ಸಕ ಮಧ್ಯಸ್ಥಿಕೆಗಳು, ಪುನರ್ವಸತಿ ಸೇವೆಗಳು ಮತ್ತು ಮಾನಸಿಕ ರೋಗಿಗಳನ್ನು ಕುಟುಂಬಕ್ಕೆ ಮರುಜೋಡಿಸುವಲ್ಲಿ ಹಾಗೂ ಸಮುದಾಯದ ಮುಖ್ಯವಾಹಿನಿಗೆ ತರುವಲ್ಲಿ ವೃತ್ತಿಪರ ಮನೋ-ವೈದ್ಯಕೀಯ ಸಮಾಜಕಾರ್ಯಕರ್ತರ ಕೊಡುಗೆ ಗಣನೀಯವಾದುದು. ಲೇಖಕರು: ಎಚ್.ಎನ್. ಯಾದವಾಡ ಪುಟಗಳು: 144
ಶಿಕ್ಷಣದ ರಥವು ನೀತಿ ಪಥದ ಮೇಲೆ ಚಲಿಸಬೇಕು ಹಾಗೂ ಪಾಲಕರೆ ಮಕ್ಕಳಿಗೆ ದಾರಿದೀಪವಾಗಬೇಕು. ಮಕ್ಕಳು ಕೇವಲ ಶಿಕ್ಷಿತರಾದರೆ ಸಾಲದು, ಸುಶಿಕ್ಷಿತರಾಗಬೇಕು. ಸಭ್ಯ ಸಂಸ್ಕೃತಿಯ ನೀತಿ ಶಿಕ್ಷಣ ಅವರಿಗೆ ಸಿಗಬೇಕು. ಮಕ್ಕಳನ್ನು ಶಾಲೆಗೆ ಕಳುಹಿಸಿದರಾಯಿತು, ಅಲ್ಲಿ ಅವರು ಎಲ್ಲವನ್ನೂ ಕಲಿತುಕೊಂಡು ಬರುತ್ತಾರೆ ಎಂಬ ಭ್ರಮಾ ಲೋಕದಿಂದ ಪಾಲಕರು ಹೊರಗೆ ಬರಬೇಕು. ಮಕ್ಕಳ ಶಾರೀರಿಕ, ಮಾನಸಿಕ, ಬೌದ್ಧಿಕ, ಭಾವನಾತ್ಮಕ, ನೈತಿಕ, ಸಾಮಾಜಿಕ ಹಾಗೂ ಸೌಂದರ್ಯಾತ್ಮಕ, ಒಟ್ಟಾರೆ ಸರ್ವಾಂಗೀಣ ಮೌಲಿಕ ಶಿಕ್ಷಣವನ್ನು ಮಗುವು ಪಡೆದುಕೊಳ್ಳಬೇಕು. ಸಮಾಜದ ಮೂಲ ಘಟಕ ಹಾಗೂ ಮಗುವಿನ ಮೊದಲ ಪಾಠ ಶಾಲೆಯಾದ ಕುಟುಂಬದಿಂದಲೆ ಮಗುವು ಪ್ರೀತಿ, ಪ್ರೇಮ, ಸ್ನೇಹ, ಮಮತೆ, ಮಮಕಾರ ಹಾಗೂ ವಾತ್ಸಲ್ಯಗಳನ್ನು ಪಡೆದುಕೊಳ್ಳುತ್ತ ಬೆಳೆಯುತ್ತದೆ. ಶಿಸ್ತು, ಸಂಯಮ, ಶಾಂತಚಿತ್ತತೆ, ಸಹ ಜೀವನ ಹಾಗೂ ಸಹಕಾರದಂತಹ ಸದ್ಗುಣ ಸಂಪನ್ನತೆಗಳು ಮಕ್ಕಳಲ್ಲಿ ಜಾಗೃತಗೊಳ್ಳಲು ಪೂರಕವಾದ ವಾತಾವರಣ ಮನೆಯಲ್ಲಿರಬೇಕು. ಕುಟುಂಬದಲ್ಲಿ ಕಲಿತ ಮೌಲ್ಯಗಳೇ ಮುಂದೆ ವಿದ್ಯಾಧ್ಯಯನ ಮಾಡುವ ಶಿಕ್ಷಣ ಸಂಸ್ಥೆಗಳಲ್ಲಿ ಇನ್ನಷ್ಟು ದೃಢವಾಗುತ್ತವೆ. ಮೌಲ್ಯಾಧಾರಿತ ಶಿಕ್ಷಣ ಪಡೆದುಕೊಳ್ಳಲು ಪಾಲಕರು ಮಕ್ಕಳನ್ನು ಪ್ರೋತ್ಸಾಹಿಸಬೇಕು. ಅದರಿಂದ ಸುಂದರ ಸಮಾಜ ನಿರ್ಮಾಣವಾಗಲು ವೇದಿಕೆ ಸಿದ್ಧವಾಗುವುದು.
ಲೇಖಕರು : ಡಾ. ಸಿ.ಆರ್. ಗೋಪಾಲ್ ಪುಟಗಳು : 336
ಪರಿವಿಡಿ ಮುನ್ನುಡಿ
ಪ್ರಕಾಶಕರ ಪ್ರಸ್ತಾವನೆ-ಕೃತಜ್ಞತೆ ಲೇಖಕರ ಪರಿಚಯ ಅಧ್ಯಾಯ - ಒಂದು ಪೀಠಿಕೆ:- ಸಮಾಜಕಾರ್ಯದ ಸಂಕ್ಷಿಪ್ತ ಪರಿಚಯ, ಸಮಾಜಕಾರ್ಯದ ಮೂಲ ವಿಧಾನಗಳು, ಪೂರಕ ವಿಧಾನಗಳು. ಅಧ್ಯಾಯ - ಎರಡು ವೃಂದಗಳ ಅರ್ಥಗ್ರಹಿಕೆ:- ವ್ಯಾಖ್ಯೆಗಳು, ಜಮಾವಣೆ, ಸಮಷ್ಟಿತನ ಮತ್ತು ವೃಂದಗಳ ವ್ಯತ್ಯಾಸ, ವೃಂದದ ಅಂಶಗಳು, ವೃಂದದ ಪ್ರಕಾರಗಳು, ಅಧ್ಯಾಯ - ಮೂರು ವೃಂದಗತ ಸಮಾಜಕಾರ್ಯದ ವ್ಯಾಖ್ಯೆಗಳು, ಗ್ರಹಿಕೆಗಳು, ಲಕ್ಷಣಗಳು, ಉದ್ದೇಶಗಳು:- ವ್ಯಾಖ್ಯೆಗಳು, ವಿಸ್ತೃತ ವ್ಯಾಖ್ಯೆ, ಸ್ವಯಂಪ್ರೇರಣೆ ಅಥವಾ ಕಾರ್ಯಕರ್ತನ ಪ್ರೇರಣೆ, ವೃಂದದ ಸದಸ್ಯರ ಸಂಖ್ಯೆ, ಕಾರ್ಯಕರ್ತನ ಮಾರ್ಗದರ್ಶನ, ಅಂತರಕ್ರಿಯೆ-ಪಾರಸ್ಪರಿಕ ಕ್ರಿಯೆ, ಸಂಪರ್ಕ, ಹೊಂದಾಣಿಕೆ, ಗುಂಪಿನ ವಾತಾವರಣ, ಚಟುವಟಿಕೆಗಳು, ಅನುಭವ, ನಿಶ್ಚಿತ ಯೋಜನೆಗಳು, ಕಾರ್ಯಕ್ರಮಗಳು, ಪ್ರಜಾಪ್ರಭುತ್ವದ ಮೌಲ್ಯಗಳು, ವೃಂದಗತ ಸಮಾಜಕಾರ್ಯದ ಗ್ರಹಿಕೆಗಳು, ವೃಂದಗತ ಸಮಾಜಕಾರ್ಯದ ಲಕ್ಷಣಗಳು, ವೃಂದಗತ ಸಮಾಜಕಾರ್ಯದ ಧ್ಯೇಯೋದ್ದೇಶಗಳು, ಉದ್ದೇಶಗಳ ಪ್ರಕಾರಗಳು, ಸೇವಾಸಂಸ್ಥೆಯ ಉದ್ದೇಶಗಳು, ಗುಂಪಿನ ಸಹವಾಸದಿಂದ ಆಗುವ ಅನುಕೂಲಗಳು. ಸಂಪಾದಕರು : ಪ್ರೊ. ಎಚ್.ಎಂ. ಮರುಳಸಿದ್ಧಯ್ಯ ಪುಟ : 104
ಬಹಳ ವರ್ಷಗಳ ಹಿಂದೆ ಆಂಗ್ಲ ಭಾಷೆಯಲ್ಲಿದ್ದ ಸಮಾಜ ವಿಜ್ಞಾನ, ಸಮಾಜಕಾರ್ಯ ಸಾಹಿತ್ಯವನ್ನು ಓದುತ್ತಿದ್ದಾಗ ಕೆಲವು ಶಬ್ದಗಳ ಸರಿಯಾದ ಅರ್ಥ ಆಗಲಿಲ್ಲ. ಅಂಥ ಶಬ್ದಗಳನ್ನು ಪಟ್ಟಿ ಮಾಡುತ್ತಾ ಅವುಗಳಿಗೆ ಸೂಕ್ತವಾದ ಕನ್ನಡ ಶಬ್ದಗಳು ಯಾವುವು ಎಂಬುದನ್ನು ಆಂಗ್ಲ-ಕನ್ನಡ ನಿಘಂಟುಗಳಲ್ಲಿ ದೊರೆಯುವ ಸಮಾನ ಅರ್ಥಗಳ ಪಟ್ಟಿಯನ್ನು ಮಾಡತೊಡಗಿದೆ. ಈ ಕೆಲಸದ ಮೂಲಕ ನನ್ನ ತಿಳಿವಳಿಕೆಯನ್ನು ಹೆಚ್ಚು ಮಾಡಿಕೊಳ್ಳಬೇಕು ಎಂಬುದೇ ಆರಂಭದ ಉದ್ದೇಶವಾಗಿತ್ತು. ಆದರೆ, ಆ ಶಬ್ದಗಳು ಇತರರಿಗೂ, ಅದರಲ್ಲೂ ವಿದ್ಯಾರ್ಥಿಗಳಿಗೆ, ಹೆಚ್ಚಾಗಿ ಬೇಕಾಗುತ್ತವೆ ಎಂದು ಒಂದು ಕಿರು ಶಬ್ದಕೋಶವನ್ನು ಸಿದ್ಧ ಮಾಡತೊಡಗಿದೆ. ಈ ನನ್ನ ಕೆಲಸವನ್ನು ನನ್ನ ಸಹೋದ್ಯೋಗಿಗಳ ಮುಂದಿರಿಸಿ, ಅವರ ಸಹಕಾರವನ್ನೂ ಪಡೆದುಕೊಳ್ಳತೊಡಗಿದೆ. ಇಂಥ ಶಬ್ದಕೋಶವು ಸಮಾಜಕಾರ್ಯದ ವಿದ್ಯಾರ್ಥಿಗಳಿಗೂ, ಶಿಕ್ಷಕರಿಗೂ, ಕಾರ್ಯಕರ್ತರಿಗೂ ತುಂಬಾ ಉಪಯುಕ್ತವಾಗುತ್ತದೆ ಎಂಬ ಅಭಿಪ್ರಾಯವು ಅವರದೂ ಆಗಿತ್ತು. ಅವರು ನನಗೆ ನೆರವಾಗಲು ಮುಂದಾದರು. ಹೀಗೆ ಈ ಪುಸ್ತಿಕೆಯು ಸಿದ್ಧವಾಯಿತು.
ಲೇಖಕರು: ಡಾ. ಸಿ.ಆರ್. ಗೋಪಾಲ್ ಪುಟಗಳು: 245
ಪರಿವಿಡಿ ಮುನ್ನುಡಿ
ಪ್ರಕಾಶಕರ ನುಡಿ ಪ್ರಸ್ತಾವನೆ-ಕೃತಜ್ಞತೆ ಲೇಖಕರ ಪರಿಚಯ 1. ಅಧ್ಯಾಯ ಒಂದು ಪೀಠಿಕೆ, ಭಾಷಣ ಒಂದು ಕಲೆ, ಭಾಷಣದ ವ್ಯಾಖ್ಯೆ-ವಿವರಣೆ, ಭಾಷಣದ ಉದ್ದೇಶ, ಭಾಷಣದ ಅಂಶಗಳು. 2. ಅಧ್ಯಾಯ ಎರಡು ಭಾಷಣದ ವೇದಿಕೆ / ಸ್ಥಳ, ಮಹತ್ವ, ಉಪಯೋಗ . 3. ಅಧ್ಯಾಯ ಮೂರು ಭಾಷಣದ ವೈಶಿಷ್ಟ್ಯಗಳು, ಗುಣಲಕ್ಷಣಗಳು, ಆತ್ಮವಿಶ್ವಾಸ, ಸಕಾರಾತ್ಮಕ-ನಕಾರಾತ್ಮಕ ಭಾವನೆಗಳು. ಲೇಖಕರು: ಪ್ರದೀಪ ಎಂ.ಪಿ. ಪುಟಗಳು: 272
ಪರಿವಿಡಿ ಅಧ್ಯಾಯ ಒಂದು - ಮಾನವನ ಹುಟ್ಟು ಮತ್ತು ವಿಕಾಸ
ಅಧ್ಯಾಯ ಎರಡು - ಮೆದುಳು ಮತ್ತು ನರ ಮಂಡಲ ವ್ಯವಸ್ಥೆ
ಲೇಖಕರು : ಗೋವಿಂದರಾಜು ಎನ್.ಎಸ್. ಪುಟ : 308
ಪರಿವಿಡಿ
ಮಾರ್ಗದರ್ಶಕರ ನುಡಿ ಮೊದಲ ಓದುಗರ ಅನಿಸಿಕೆಗಳು ಲೇಖಕರು : ಡಾ. ಎಸ್.ಬಿ. ಮುನಿರಾಜು ಪುಟ : 310
ಪರಿವಿಡಿ ಮುನ್ನುಡಿ
ನುಡಿನಮನ ಪರಿವಿಡಿ ಪರಿಶಿಷ್ಟಗಳು 1. ಸಮಾಜ ಕಾರ್ಯ ಮತ್ತು ಸಮಾಜ ಕಾರ್ಯದ ವಿಧಾನಗಳು 2. ಸಾಮಾಜಿಕ ಸಂಶೋಧನೆಯ ವಿನ್ಯಾಸ, ವಿಧಾನ, ಉದ್ದೇಶಗಳು ಮತ್ತು ಮಹತ್ವ 3. ಆದಿಮ ಬುಡಕಟ್ಟು ಅಭಿವೃದ್ಧಿಯ ಹಿನ್ನೆಲೆ ಮತ್ತು ವಸ್ತುಸ್ಥಿತಿ 4. ಜೇನುಕುರುಬರು 5. ಕೊರಗರು 6. ಆದಿಮ ಬುಡಕಟ್ಟು ಅಭಿವೃದ್ಧಿಯ ವಿಮರ್ಶೆ 7. ಸಮಾಜಕಾರ್ಯ ನೆಲೆಯಲ್ಲಿ ಆದಿಮ ಬುಡಕಟ್ಟು ಅಭಿವೃದ್ಧಿ ಅನುಬಂಧಗಳು 1. ಅಂಕಿಅಂಶಗಳು 2. ಪರಾಮರ್ಶನ ಗ್ರಂಥಗಳು 3. ಛಾಯಾಚಿತ್ರಗಳು ಲೇಖಕರು : ಡಾ. ಸಿ.ಆರ್. ಗೋಪಾಲ್ ಪುಟ : 490
ಪರಿವಿಡಿ ಮುನ್ನುಡಿ
ಪ್ರಕಾಶಕರ ನುಡಿ ಲೇಖಕರ ಪರಿಚಯ ಪ್ರಸ್ತಾವನೆ - ಕೃತಜ್ಞತೆ 1. ಅಧ್ಯಾಯ-ಒಂದು ಪೀಠಿಕೆ, ಸಮುದಾಯ, ವ್ಯಾಖ್ಯೆಗಳು, ಸಮುದಾಯದ ವೈಲಕ್ಷಣಗಳು, ಸಮುದಾಯದ ಬಗ್ಗೆ ಸ್ವಾಭಿಮಾನ, ಐಕ್ಯಭಾವ, ಪರಾವಲಂಬನಾ ಭಾವ, ಪಾತ್ರ ನಿರ್ವಹಣಾ ಭಾವ, ಬದಲಾಗುತ್ತಿರುವ ಪರಿಸ್ಥಿತಿ, ಸಮುದಾಯ-ಸಮಾಜ, ನೆರೆಹೊರೆ, ಸಂಘ, ಸಂಸ್ಥೆ ಇವುಗಳಲ್ಲಿರುವ ವ್ಯತ್ಯಾಸಗಳು. 2. ಅಧ್ಯಾಯ-ಎರಡು ಸಮುದಾಯದ ಪ್ರಕಾರಗಳು :- ಭೌಗೋಲಿಕ ಮತ್ತು ಕ್ರಿಯಾತ್ಮಕ ಸಮುದಾಯಗಳು, ಗ್ರಾಮ ಸಮುದಾಯ, ಗ್ರಾಮ ಸಮುದಾಯದ ವೈಲಕ್ಷಣಗಳು, ಗ್ರಾಮ ಸಮುದಾಯಗಳ ವೈವಿಧ್ಯತೆ, ನಗರ ಸಮುದಾಯ, ಕೆಲವು ಆಯ್ದ ವ್ಯಾಖ್ಯೆಗಳು, ನಗರ ಸಮುದಾಯದ ವೈಲಕ್ಷಣಗಳು, ಬುಡಕಟ್ಟು ಸಮುದಾಯಗಳು, ಬುಡಕಟ್ಟು ಸಮುದಾಯದ ಪ್ರಮುಖ ಲಕ್ಷಣಗಳು. ಲೇಖಕರು : ಶೇಖರ್ ಗಣಗಲೂರು ಪುಟ : 151
ಪರಿವಿಡಿ
ಲೇಖಕರು : ಡಾ. ರಮೇಶ ಎಂ. ಸೋನಕಾಂಬಳೆ ಪುಟ : 304
ಪರಿವಿಡಿ ಅಧ್ಯಾಯಗಳು
1. ಸಮಾಜಕಾರ್ಯ 1.1 ಪೀಠಿಕೆ 1.2 ಆಧುನಿಕ ಸಮಾಜ 1.3 ಸಮಾಜಕಾರ್ಯ: ಅರ್ಥ ಮತ್ತು ವ್ಯಾಖ್ಯೆ 1.4 ಸಮಾಜಕಾರ್ಯದ ಸ್ವರೂಪ 1.5 ಸಮಾಜಕಾರ್ಯದ ವ್ಯಾಪ್ತಿ 1.6 ಸಮಾಜಕಾರ್ಯದ ಉದ್ದೇಶಗಳು 1.7 ಸಮಾಜಕಾರ್ಯದ ಮೌಲ್ಯಗಳು 1.8 ಸಮಾಜಕಾರ್ಯದ ತತ್ವಗಳು 2. ಸಮಾಜಕಾರ್ಯ ವಿಧಾನಗಳು 2.1 ಪೀಠಿಕೆ 2.2 ವ್ಯಕ್ತಿಗತ ಸಮಾಜಕಾರ್ಯ 2.3 ವೃಂದಗತ ಸಮಾಜಕಾರ್ಯ 2.4 ಸಮುದಾಯ ಸಂಘಟನೆ 2.5 ಸಾಮಾಜಿಕ ಕ್ರಿಯೆ 2.6 ಸಮಾಜಕಾರ್ಯ ಸಂಶೋಧನೆ 2.7 ಸಮಾಜಕಾರ್ಯ ಆಡಳಿತ ಲೇಖಕರು : ಗಂಗಾಧರ ರೆಡ್ಡಿ ಎನ್. ಮತ್ತು ರಮೇಶ ಎಂ.ಎಚ್. ಪುಟ : 174
ಪರಿವಿಡಿ ಅಧ್ಯಾಯ-1 ವ್ಯಕ್ತಿಗತ ಸಮಾಜಕಾರ್ಯ
1.1 ಪೀಠಿಕೆ 1.2 ಪರಿಕಲ್ಪನೆ ಮತ್ತು ವಿಕಾಸ 1.3 ಅರ್ಥ ಮತ್ತು ವ್ಯಾಖ್ಯೆಗಳು 1.4 ಮೂಲಭೂತ ಪರಿಕಲ್ಪನೆಗಳು 1.5 ಉದ್ದೇಶಗಳು ಅಧ್ಯಾಯ-2 ವ್ಯಕ್ತಿಗತ ಸಮಾಜಕಾರ್ಯದ ತತ್ವಗಳು 2.1 ವೈಯಕ್ತೀಕರಣದ ತತ್ವ 2.2 ಭಾವನೆಗಳನ್ನು ಉದ್ದೇಶಪೂರ್ವಕವಾಗಿ ಅಭಿವ್ಯಕ್ತಪಡಿಸಲು ಅವಕಾಶ ಕಲ್ಪಿಸುವ ತತ್ವ 2.3 ಅಂಗೀಕಾರದ/ಸ್ವೀಕಾರ ತತ್ವ 2.4 ನಿಯಂತ್ರಿತ ಭಾವನೆಗಳ ಅಂತರ್ಗತ ತತ್ವ 2.5 ತೀರ್ಪುರಹಿತ ಪ್ರವೃತ್ತಿಯ ತತ್ವ 2.6 ಅರ್ಥಿಯ ಸ್ವ-ನಿರ್ಣಯದ ತತ್ವ 2.7 ಗೌಪ್ಯತೆಯ ತತ್ವ 2.8 ಅರ್ಥಪೂರ್ಣ ಸಂಬಂಧ ತತ್ವ 2.9 ಸಂವಹನ ತತ್ವ 2.10 ಸ್ವ-ಅರಿವಿನ ತತ್ವ 2.11 ಸಾಮಾಜಿಕ ಚಟುವಟಿಕೆಯ ತತ್ವ 2.12 ವರ್ತನೆ ಮಾರ್ಪಡಿಸುವಿಕೆಯ ತತ್ವ 2.13 ಸಾಮಾಜಿಕ ಕಲಿಕೆಯ ತತ್ವ ಲೇಖಕರು : ಡಾ. ಸಿ.ಆರ್. ಗೋಪಾಲ್ ಪುಟ : 408
ಪರಿವಿಡಿ ಮುನ್ನುಡಿ
ಪ್ರಕಾಶಕರ ನುಡಿ ಲೇಖಕರ ಪರಿಚಯ ಪ್ರಸ್ತಾವನೆ - ಕೃತಜ್ಞತೆ 1. ಅಧ್ಯಾಯ - ಒಂದು ಗುಣತ್ರಯಗಳು ಮತ್ತು ಜೀವನ ಪದ್ಧತಿ-ಪೀಠಿಕೆ, ಮನುಷ್ಯನ ಸ್ವಭಾವಗಳು, ಸಾತ್ವಿಕ, ರಾಜಸ, ತಾಮಸ ಗುಣಗಳು, ಗುಣಗಳ ಕಾರಬಾರು, ಗುಣಗಳನ್ನು ಗುರುತಿಸುವ ಬಗೆ, ಸ್ಥಿತಪ್ರಜ್ಞನ ಲಕ್ಷಣಗಳು, ಅರಿಷಡ್ವರ್ಗಗಳು, ಯೋಗ ಮಾರ್ಗಗಳು, ಯೋಗ ಸಮನ್ವಯ. 2. ಅಧ್ಯಾಯ - ಎರಡು, ಭಾಗ - ಒಂದು ಸನಾತನ ಧರ್ಮದಲ್ಲಿ ಶರೀರದ ಪರಿಕಲ್ಪನೆ - ಸನಾತನ ಜೀವನ ಪದ್ಧತಿಯಲ್ಲಿ ಶರೀರ, ಧಾರ್ಮಿಕ ಗ್ರಂಥಗಳಲ್ಲಿ ಶರೀರ, ಭಗವದ್ಗೀತೆ, ಮನುಷ್ಯರ ಸೃಷ್ಟಿ, ನಾಲ್ಕು ಶರೀರಗಳು, ಸ್ಥೂಲ ಶರೀರ, ಸಪ್ತ ಧಾತುಗಳು, ಅನಿರುದ್ಧ ಶರೀರ, ಪಂಚತನ್ಮಾತ್ರ, ಪಂಚ ಜ್ಞಾನೇಂದ್ರಿಯಗಳು, ಪಂಚ ಕರ್ಮೇಂದ್ರಿಯಗಳು, ಪಂಚ ಪ್ರಾಣಗಳು, ಮನೋವೃತ್ತಿಗಳು, ಲಿಂಗಶರೀರ, ಸ್ವರೂಪ ಶರೀರ, ಅನ್ನಮಯಾದಿ ಪಂಚ ಕೋಶಗಳು, (ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ ಮತ್ತು ಆನಂದಮಯ ಕೋಶಗಳು). ಲೇಖಕರು : ಪದ್ಮಾ ಸುಬ್ಬಯ್ಯ ಪುಟ : 194
ಪರಿವಿಡಿ ಮಡಿಲಿಗೊಂದು ಮಗು
ದತ್ತಕಕ್ಕೆ ಮೊದಲ ಸಿದ್ಧತೆ
ದತ್ತಕದ ನಂತರದ ವಾಸ್ತವಾಂಶಗಳು
ದತ್ತಕದ ಬಗ್ಗೆ ಕಾನೂನಿನ ವಿವರಗಳು
ಲೇಖಕರು : ಡಾ. ಮೋಹನ್ ದಾಸ್, ಆರ್. ನಾಗೇಶ್ ಪುಟ : XX+300=320
ಪರಿವಿಡಿ ಮುನ್ನುಡಿ
ಪ್ರಸ್ತಾವನೆ ಕೃತಜ್ಞತೆಗಳು ಭಾಗ-1 ಅಧ್ಯಾಯ 1: ಪೀಠಿಕೆ, ಅರ್ಥ ಮತ್ತು ವೃತ್ತಿಗೆ ಸಂಬಂಧಿಸಿದ ಪದಗಳ ಅರ್ಥವಿವರಣೆ 1.1 ಪೀಠಿಕೆ: 1.2 ವೃತ್ತಿಗೆ ಸಂಬಂಧಿಸಿದ ಕೆಲವು ಪದಗಳ ಅರ್ಥವಿವರಣೆ (Defination of Career related terms) 1.2.1 ಕೆಲಸ/ಉದ್ಯೋಗ/ವೃತ್ತಿಗಳ ವ್ಯಾಖ್ಯೆಗಳು: (Work/Employment/Career) 1.2.2 ವೃತ್ತಿಯ ಅಭಿವೃದ್ಧಿ ಅಥವಾ ಬೆಳವಣಿಗೆ (Career Development) 1.2.3 ವೃತ್ತಿ ನಿರ್ವಹಣೆ (Career Management) 1.2.4 ವೃತ್ತಿಯ ಅಧ್ಯಯನ (Career Education) 1.2.5 ವೃತ್ತಿ ಮಾರ್ಗದರ್ಶನ (Career Guidance) 1.2.6 ವೃತ್ತಿ ನಿರ್ಧಾರ ಮಾಡುವುದು (Career Decision Making) 1.2.7 ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವುದು ಹೇಗೆ? (How to Choose the Career) 1.2.8 ಸರಿಹೊಂದುವಿಕೆ (Suitability) 1.2.9 ವೃತ್ತಿಯ ತಿಳುವಳಿಕೆ (Career Awarness) 1.2.10 ವೃತ್ತಿಯ ಗುರಿ (Career Goal) 1.2.11 ವೃತ್ತಿಯ ಪ್ರೇರಣೆ (Career Motivation) 1.2.12 ವೃತ್ತಿಯ ಸಂತೃಪ್ತಿ (Career Satisfaction) 1.2.13 ವೃತ್ತಿಯ ಪರಿಣಿತಿ (Career Strategy) 1.2.14 ವೃತ್ತಿಯ ಯಶಸ್ಸು (Career Success) 1.2.15 ವೃತ್ತಿಯ ಯೋಜನೆ (Career Planning) 1.2.16 ವೃತ್ತಿ ಪ್ರಾವೀಣ್ಯತೆ (Career Proficience) 1.2.17 ಸಮಸ್ಯೆಗಳ ವಿರುದ್ಧ ದೀರ್ಘ ಪ್ರಯತ್ನ (Persistence) 1.2.18 ಸ್ವತಃ ನಿರ್ದೇಶನ (Self Direction) 1.2.19 ವೃತ್ತಿಯ ಮಾಹಿತಿ (Career Information)
ಮುನ್ನುಡಿ
ಗೆದ್ದೇ ಬಿಡೋಣ... ಸೋತು ಸುಮ್ಮನಿರಲು ನಾವು ಈ ಜಗತ್ತಿನಲ್ಲಿ ಹುಟ್ಟಿಲ್ಲ! ನೆನಪಿರಲಿ, ಗೆಲುವುಗಳು ರಾತ್ರೋರಾತ್ರಿ ನಮ್ಮ ಮನೆ ಬಾಗಿಲು ಬಡಿಯುವುದಿಲ್ಲ. ಗೆಲುವುಗಳು ಅವಿರತ ಪರಿಶ್ರಮ, ಸಮರ್ಪಣೆ ಮತ್ತು ಛಲದ ಪ್ರತಿಫಲಗಳು ಪ್ರತಿಯೊಬ್ಬರೂ ಗೆಲುವುಗಳನ್ನು ಬೆನ್ನಟ್ಟಲು ಪ್ರಯತ್ನಿಸುತ್ತಾರೆ ಆದರೆ ಗೆಲುವುಗಳು ಮಾತ್ರ ಗೆಲ್ಲುವ ಛಲವಿರುವ ವ್ಯಕ್ತಿಗಳನ್ನು ಬಿಡದೆ ಬೆನ್ನಟ್ಟುತ್ತವೆ.
ಪ್ರಶ್ನೆ: ನೀವೇ ಹೇಳಿದಂತೆ ಜನವರಿ 2017 ರಿಂದ ಇ.ಎಸ್.ಐ ವೇತನದ ಮಿತಿಯನ್ನು ಮಾಸಿಕ 21000-00 ರೂಪಾಯಿಗೆ ಹೆಚ್ಚಿಸಿದೆ. ಇಲ್ಲೊಂದು ಉಪ ಪ್ರಶ್ನೆ ನೌಕರನೊಬ್ಬ ಪಡೆಯುತ್ತಿರುವ ವೇತನವು ವೇತನ ವೃದ್ಧಿ, ಬೋನಸ್, ಅಧಿಕ ಕಾರ್ಯ ನಿರ್ವಹಿಸಿದುದಕ್ಕಾಗಿ ಪಡೆದ ಹಣವೂ ಸೇರಿ ತಿಂಗಳ ಒಂದರಲ್ಲಿ 21000-00 ರೂಪಾಯಿಗಿಂತ ಹೆಚ್ಚಾಗಿ ಬಿಟ್ಟರೆ, ಅಂತಹ ಸಂದರ್ಭದಲ್ಲಿ ವಿಮಾದಾರ ನೌಕರರು ಇ.ಎಸ್.ಐ ವ್ಯಾಪ್ತಿಯಿಂದ ಹೊರಗೆ ಉಳಿಯುತ್ತಾರೆಯೆ?
ಉತ್ತರ: ಅಂದರೆ, ವೇತನ ಮಿತಿಯನ್ನು ಮೀರಿದ ತಕ್ಷಣವೇ ನೌಕರ ವಿಮಾದಾರರು ಇ.ಎಸ್.ಐ ವ್ಯಾಪ್ತಿಯಿಂದ ಹೊರಗೆ ಉಳಿಯುತ್ತಾರೆ ಎಂಬುದು ನಿಮ್ಮ ಅನಿಸಿಕೆ. ಅದು ಹಾಗಲ್ಲ. ಇ.ಎಸ್.ಐ ಕಾನೂನಿನಂತೆ ವಂತಿಗೆ ಅವಧಿಯನ್ನು ವರ್ಷವೊಂದರಲ್ಲಿ ಎರಡು ಭಾಗವಾಗಿ ವಿಂಗಡಿಸಲಾಗಿದೆ. ಏಪ್ರಿಲ್‌ನಿಂದ ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ನಿಂದ ಮಾರ್ಚ್. ವಿಷಯ ಹೀಗಿರುವಾಗ ವಂತಿಗೆಯ ಅವಧಿಯ ಮಧ್ಯದಲ್ಲಿ ವೇತನವು ಹೆಚ್ಚಾದರೂ ನೌಕರರು ಇ.ಎಸ್.ಐ ವ್ಯಾಪ್ತಿಯಿಂದ ಹೊರಗೆ ಉಳಿಯಲಾರರು. ವಂತಿಗೆಯ ಅವಧಿಯು ಮುಗಿಯುವವರೆಗೆ ಅವರು ಮುಂದುವರೆಯುತ್ತಾರೆ. ಅಷ್ಟೇ ಏಕೆ, ಹೆಚ್ಚಾದ ಮೊತ್ತಕ್ಕೂ ವಂತಿಗೆಯನ್ನು ಸಲ್ಲಿಸಬೇಕಾಗುತ್ತದೆ. ಉದಾಹರಣೆಗೆ: ವಂತಿಗೆಯ ಅವಧಿ ಏಪ್ರಿಲ್‌ನಿಂದ ಸೆಪ್ಟೆಂಬರ್ ಮಧ್ಯೆ ಜೂನ್ ತಿಂಗಳಿನಲ್ಲಿ ವೇತನ ವೃದ್ಧಿಯ ಪರಿಣಾಮವಾಗಿ ನೌಕರನೊಬ್ಬನ ವೇತನ ರೂಪಾಯಿ. 22000-00 ಆಗಿಬಿಟ್ಟರೆ, ವಂತಿಗೆಯನ್ನು 22000-00 ಕ್ಕೆ ಸಲ್ಲಿಸಬೇಕು. ಅದಕ್ಕಾಗಿ ವೇತನ ಮಿತಿಯಾದ ರೂಪಾಯಿ. 22000-00 ಗೆ ಮಾಡಲಾಗದು ಎನ್ನುವುದನ್ನು ಪ್ರಮುಖವಾಗಿ ಇಲ್ಲಿ ಗಮನಿಸಬೇಕು. ಮುಂದೆ ವಂತಿಗೆಯ ಅವಧಿ ಮುಗಿಯುತ್ತಲೆ ಆಗಲೂ 21000-00 ಕ್ಕೆ ಹೆಚ್ಚಾಗಿದ್ದರೆ, ಅನಾಯಾಸವಾಗಿ ಅಂತಹ ವಿಮಾದಾರರು ವ್ಯಾಪ್ತಿಯಿಂದ ಹೊರಗೆ ಉಳಿಯುತ್ತಾರೆ. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|